Headlines

nagaraj11081993

Spiritual Benefits: ದುಷ್ಟಶಕ್ತಿ ಮತ್ತು ಮಾಟಮಂತ್ರದಿಂದ ನಿಮ್ಮನ್ನು ರಕ್ಷಿಸಲು ಈ ಒಂದು ವಸ್ತು ಮನೆಯಲ್ಲಿಡಿ

ಇಂದಿನ ಧಾವಂತದ ಬದುಕಿನಲ್ಲಿ ಮಾನಸಿಕ ನೆಮ್ಮದಿಯ ಕೊರತೆ ಮತ್ತು ಕಾರಣವಿಲ್ಲದ ಭಯ ಹಲವರನ್ನು ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ಮನೆಯ ದೇವರ ಕೋಣೆಯಲ್ಲಿ ರುದ್ರಾಕ್ಷಿಯನ್ನು ಸ್ಥಾಪಿಸುವುದು ಕೇವಲ ಒಂದು ಸಂಪ್ರದಾಯವಲ್ಲ, ಅದು ಜೀವನದ ಸಕಲ ಸಂಕಷ್ಟಗಳಿಗೆ ಒಂದು ಆಧ್ಯಾತ್ಮಿಕ ಪರಿಹಾರವೂ ಹೌದು. ರುದ್ರಾಕ್ಷಿಯು ಶಿವನ ಕಣ್ಣೀರಿನಿಂದ ಉದ್ಭವಿಸಿದ ದಿವ್ಯ ಶಕ್ತಿಯಾಗಿದ್ದು, ಮನೆಯ ಸುತ್ತಲೂ ಒಂದು ಅಜೇಯ ರಕ್ಷಣಾತ್ಮಕ ಗುರಾಣಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು ದೃಷ್ಟಿ ದೋಷ, ಮಾಟ-ಮಂತ್ರದಂತಹ ನಕಾರಾತ್ಮಕ ಪ್ರಭಾವಗಳನ್ನು ತಡೆದು, ಮನೆಯ ಮುಖ್ಯ ದ್ವಾರ ಅಥವಾ ದೇವರ ಕೋಣೆಯಲ್ಲಿ…

Read More

ತಮಿಳುನಾಡು: ಗೂಡ್ಸ್ ರೈಲು ಕಾಲೇಜು ಬಸ್​​ಗೆ ಡಿಕ್ಕಿ, 20ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಗಂಭೀರ ಗಾಯ

ಚೆನ್ನೈ, ಮಾರ್ಚ್​ 15: ಗೂಡ್ಸ್​ ರೈಲು(Train) ಎಂಜಿನಿಯರಿಂಗ್ ಕಾಲೇಜು ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ 20ಕ್ಕೂ ಅಧಿಕ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಗೊಂಡ ವಿದ್ಯಾರ್ಥಿಗಳನ್ನು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನಾಯಕ ಸೆಂಥಿಲ್ ಬಾಲಾಜಿ ಭೇಟಿ ನೀಡಿದ್ದಾರೆ. ಮಾತನಾಡಿದ ಅವರು, ಶನಿವಾರ ಸಂಜೆ ಈ ಪ್ರದೇಶದ ವೀರರಕ್ಕಿಯಂ ಮತ್ತು ಪಾಲಯಂ ನಡುವಿನ ಮಾನವರಹಿತ ರೈಲ್ವೆ ಕ್ರಾಸಿಂಗ್ ಮೂಲಕ ಬಸ್ ಚಲಿಸುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಹೇಳಿದರು….

Read More

ಮಂಡ್ಯದಲ್ಲಿ ಮುಂದುವರಿದ ಜೆಡಿಎಸ್-ಬಿಜೆಪಿ ಮೈತ್ರಿ ಮುನಿಸು; ಜೆಡಿಎಸ್ ಫ್ಲೆಕ್ಸ್​ಗಳಲ್ಲಿ ಬಿಜೆಪಿ ನಾಯಕರ ಫೋಟೋಗೆ ಇಲ್ಲ ಸ್ಥಾನ!

ಮಂಡ್ಯ, ಮಾರ್ಚ್​ 15: ಮಂಡ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವಿನ ಮೈತ್ರಿ ಮುನಿಸು ಮುಂದುವರಿದಿದೆ. ಇತ್ತೀಚೆಗೆ ನಡೆದ ‘ಖೇಲೋ ಇಂಡಿಯಾ ವೈಬ್ರೆಂಟ್ ಮಂಡ್ಯ’ ಕಾರ್ಯಕ್ರಮವು ಮೈತ್ರಿ ಪಕ್ಷಗಳ ನಡುವಿನ ಬಿರುಕನ್ನು ಮತ್ತಷ್ಟು ಎತ್ತಿ ತೋರಿಸಿದೆ. ಮಂಡ್ಯದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಾಕಲಾಗಿದ್ದ ಜೆಡಿಎಸ್ ಫ್ಲೆಕ್ಸ್​ಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಫೋಟೋ ಹೊರತುಪಡಿಸಿ ರಾಜ್ಯ ಬಿಜೆಪಿ ನಾಯಕರ ಯಾವುದೇ ಫೋಟೋಗಳನ್ನು ಹಾಕಿರಲಿಲ್ಲ. ಈ ನಡೆ ಸ್ಥಳೀಯ ಬಿಜೆಪಿ ನಾಯಕರಲ್ಲಿ ತೀವ್ರ ಅಸಮಾಧಾನಕ್ಕೆ…

Read More

Video: 6.5 ಕಿ.ಮೀ ಕ್ರಮಿಸಲು ಒಂದು ಗಂಟೆಗೂ ಹೆಚ್ಚು ಸಮಯ ತೆಗೆದುಕೊಂಡೆ; ಟ್ರಾಫಿಕ್ ಸಮಸ್ಯೆ ವಿವರಿಸಿದ ಬೆಂಗಳೂರಿಗ

ಬೆಂಗಳೂರು, ಮಾರ್ಚ್ 15:ಮುಂಬೈ, ಚೆನ್ನೈ ಹಾಗೂ ಬೆಂಗಳೂರಿನಂತಹ (Bengaluru) ದೊಡ್ಡ ದೊಡ್ಡ ನಗರಗಳಲ್ಲಿ ಟ್ರಾಫಿಕ್ ಸಮಸ್ಯೆ ಸರ್ವೇ ಸಾಮಾನ್ಯ. ಅದರಲ್ಲೂ ಈ ಬೆಂಗಳೂರಿನಲ್ಲಿ ಬೆಳಗ್ಗೆ ಸಂಜೆಯಾದರಂತೂ ಟ್ರಾಫಿಕ್‌ನಿಂದ ರಸ್ತೆಗಳು ಬ್ಲಾಕ್ ಆಗುತ್ತದೆ. ಪೀಕ್‌ ಟೈಮ್‌ಗಳಲ್ಲಿ ಟ್ರಾಫಿಕ್ ಜಾಮ್ ಹೆಚ್ಚಿರುತ್ತದೆ. ಬೆಂಗಳೂರಿನ ವ್ಯಕ್ತಿಯೊಬ್ಬರು ಆಫೀಸಿಗೆ ಹೋಗುವ ವೇಳೆ ಟ್ರಾಫಿಕ್‌ನಲ್ಲಿ ಸಿಲುಕಿದ್ದಾರೆ. ಈ ವ್ಯಕ್ತಿ 6.5 ಕಿ.ಮೀ ಕ್ರಮಿಸಲು ಒಂದು ಗಂಟೆಗೂ ಹೆಚ್ಚು ಸಮಯ ತೆಗೆದುಕೊಂಡೆ ಎಂದು ನಗರದ ವಾಸ್ತವ ಸ್ಥಿತಿಯನ್ನು ವಿವರಿಸಿದ್ದಾರೆ. ನಗರದಲ್ಲಿನ ದೈನಂದಿನ ಸಂಚಾರ ತೊಂದರೆಗಳನ್ನು ಈ…

Read More

ತಂದೆ ಜೀವ ಉಳಿಸಲು ಲಿವರ್ ದಾನ ಮಾಡಿದ ಪುತ್ರಿ; ಆಸ್ಪತ್ರೆ ಬಿಲ್ ಭರಿಸಲಾಗದೆ ಸಂಕಷ್ಟದಲ್ಲಿ ತಂದೆ-ಮಗಳು!

ದಾವಣಗೆರೆ, ಮಾರ್ಚ್​ 15: ಜಿಲ್ಲೆಯ ಆಹಾರ ಇಲಾಖೆಯ ಶಿರಸ್ತೆದಾರ ಅಜ್ಜಪ್ಪ ಅವರ ಕುಟುಂಬ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ತಂದೆಯ ಜೀವ ಉಳಿಸಲು ಪುತ್ರಿಯೊಬ್ಬಳು ಲಿವರ್ ದಾನ (Organ Donation) ಮಾಡಿದರೂ, ಚಿಕಿತ್ಸಾ ವೆಚ್ಚ ಹೆಚ್ಚಾಗಿ ಕುಟುಂಬ ಆತಂಕದಲ್ಲಿದೆ. ಅಜ್ಜಪ್ಪ ಅವರು ಅಂಗಾಂಗ ವೈಫಲ್ಯದಿಂದ ಗಂಭೀರವಾಗಿ ಅಸ್ವಸ್ಥರಾಗಿದ್ದ ಹಿನ್ನೆಲೆಯಲ್ಲಿ, ಅವರ ಪುತ್ರಿ ಚಂದನಾ ತಮ್ಮ ಲಿವರ್‌ನ ಒಂದು ಭಾಗವನ್ನು ದಾನ ಮಾಡಿದ್ದರು. ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿರುವ ಚಂದನಾ ತಂದೆಯ ಜೀವ ಉಳಿಸಲು ಈ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. ಕೈಕೊಟ್ಟ ಸಂಜೀವಿನಿ…

Read More

ಫಾರ್ಮುಲಾ-1 ರೇಸ್​ಗೂ ತಟ್ಟಿದ ಯುದ್ಧದ ಬಿಸಿ!

ಬಹ್ರೇನ್ ಮತ್ತು ಸೌದಿ ಅರೇಬಿಯಾ ಗ್ರ್ಯಾಂಡ್ ಪ್ರಿಕ್ಸ್ ರೇಸ್‌ಗಳು ಏಪ್ರಿಲ್‌ ತಿಂಗಳಲ್ಲಿ ನಡೆಯುವುದಿಲ್ಲ ಎಂದು ಫಾರ್ಮುಲಾ ಒನ್ ಮ್ಯಾನೇಜ್ಮೆಂಟ್ (FOM) ಮತ್ತು ಇಂಟರ್ನ್ಯಾಷನಲ್ ಆಟೋಮೊಬೈಲ್ ಫೆಡರೇಶನ್ (FIA) ಅಧಿಕೃತವಾಗಿ ಘೋಷಿಸಿವೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಕ್ಷಿಪಣಿ ದಾಳಿಗಳ ಭೀತಿಯಿಂದಾಗಿ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಫ್​ಐಎ ತಿಳಿಸಿದೆ. ಇತ್ತ ಎರಡು ರೇಸ್​ಗಳು ಕ್ಯಾನ್ಸಲ್ ಆದರೂ ಬದಲಿಗೆ ಈ ಸೀಸನ್​ನಲ್ಲಿ ಯಾವುದೇ ಹೊಸ ರೇಸ್‌ಗಳನ್ನು ಸೇರಿಸಲಾಗುತ್ತಿಲ್ಲ ಎಂಬುದನ್ನು ಸಹ ಸ್ಪಷ್ಟಪಡಿಸಲಾಗಿದೆ. ಇದರಿಂದಾಗಿ 2026ರ ಸೀಸನ್ 24…

Read More

‘ಸತ್ಯ’, ‘ಕಂಪನಿ’ ಸಿನಿಮಾ ಸೇರಿಸಿ ‘ಧುರಂಧರ್’ ಮಾಡಿದ ಆದಿತ್ಯ ಧಾರ್: ವಿಷಯ ಬಯಲು

‘ಧುರಂಧರ್’ (Dhurandhar) ಚಿತ್ರದ ದೃಶ್ಯಗಳು ರಾಮ್ ಗೋಪಾಲ್ ವರ್ಮಾ ನಿರ್ದೇಶನದ ‘ಸತ್ಯ’ ಚಿತ್ರವನ್ನು ಹೋಲುತ್ತವೆ ಎಂಬ ವಿಡಿಯೋವೊಂದು ಇತ್ತೀಚೆಗೆ ವೈರಲ್ ಆಗಿತ್ತು. ‘ಧುರಂಧರ್’ ನಿರ್ದೇಶಕ ಆದಿತ್ಯ ಧಾರ್ (Aditya Dhar) ಅವರು ಆರ್​ಜಿವಿ ಶೈಲಿಯನ್ನು ನಕಲು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಾಮ್ ಗೋಪಾಲ್ ವರ್ಮಾ (Ram Gopal Varma) ಮಾತನಾಡಿದ್ದಾರೆ. ಸಿನಿಮಾ ರಂಗದಲ್ಲಿ ಒಬ್ಬರ ಕೆಲಸದಿಂದ ಇನ್ನೊಬ್ಬರು ಪ್ರಭಾವಿತರಾಗುವುದು ಸಾಮಾನ್ಯ ಎಂದು ವರ್ಮಾ ಅಭಿಪ್ರಾಯಪಟ್ಟಿದ್ದಾರೆ. ‘ಆದಿತ್ಯ ಧಾರ್ ಪ್ರಜ್ಞಾಪೂರ್ವಕವಾಗಿ…

Read More

ಮೈಸೂರು ಚಾಮುಂಡೇಶ್ವರಿ ದೇವಿ ಲಡ್ಡು ಪ್ರಸಾದಕ್ಕೂ ಗ್ಯಾಸ್ ಕೊರತೆ ಬಿಸಿ: ಲಡ್ಡು ತಯಾರಿಸಲು ನಿರ್ಮಾಣವಾಗ್ತಿದೆ ವಿಶೇಷ ಸೌದೆ ಒಲೆ!

ಮೈಸೂರು, ಮಾರ್ಚ್​ 15: ಕರ್ನಾಟಕದಾದ್ಯಂತ (Karnataka) ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆ ತೀವ್ರವಾಗುತ್ತಿರುವ ಹಿನ್ನೆಲೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲೂ ಅದರ ಪರಿಣಾಮ ಕಾಣಿಸಿಕೊಳ್ಳುತ್ತಿದೆ. ಪ್ರಸಿದ್ಧ ಚಾಮುಂಡೇಶ್ವರಿ ದೇವಿ ದೇವಸ್ಥಾನದ ಲಡ್ಡು ಪ್ರಸಾದ ತಯಾರಿಕೆಗೆ ಗ್ಯಾಸ್ ಕೊರತೆ ತಲೆದೋರಿರುವುದರಿಂದ ಇದೀಗ ಸೌದೆ ಒಲೆ ಬಳಸಿ ಲಡ್ಡು ತಯಾರಿಸಲು ದೇವಸ್ಥಾನ ಪ್ರಾಧಿಕಾರ ಮುಂದಾಗಿದೆ. ಅದಕ್ಕಾಗಿ ವಿಶೇಷ ರೀತಿಯ ಸೌದೆ ಒಲೆಯನ್ನೂ ಸಿದ್ಧಪಡಿಸಲಾಗುತ್ತಿದೆ. ಸಾಮಾನ್ಯವಾಗಿ ಲಡ್ಡು ಪ್ರಸಾದವನ್ನು ಗ್ಯಾಸ್ ಒಲೆಯಲ್ಲಿ ತಯಾರಿಸಲಾಗುತ್ತದೆ. ಆದರೆ ಸದ್ಯ ಕಮರ್ಷಿಯಲ್ ಸಿಲಿಂಡರ್‌ಗಳು ಸಮರ್ಪಕವಾಗಿ ದೊರೆಯದ ಕಾರಣ…

Read More

ಮೊಜ್ತಬಾ ಖಮೇನಿ ಜೀವಂತವಿಲ್ಲ, ಇರಾನ್ ಕದನ ವಿರಾಮಕ್ಕೆ ಸಿದ್ಧವಾಗಿದೆ, ಆದರೆ ನಮಗೆ ಮನಸ್ಸಿಲ್ಲ ಎಂದ ಟ್ರಂಪ್

ವಾಷಿಂಗ್ಟನ್, ಮಾರ್ಚ್​ 15: ಇರಾನ್​ನ ನೂತನ ಸರ್ವೋಚ್ಚ ನಾಯಕನಾಗಿ ನೇಮಕಗೊಂಡಿರುವ ಮೊಜ್ತಬಾ ಖಮೇನಿ(Mojtaba Khamenei) ಬದುಕಿಲ್ಲ, ಇರಾನ್ ಕದನ ವಿರಾಮಕ್ಕೆ ಸಿದ್ಧವಾಗಿದೆ ಆದರೆ ನಮಗೆ ಮನಸ್ಸಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಹೇಳಿದ್ದಾರೆ.  ಎನ್‌ಬಿಸಿ ನ್ಯೂಸ್ ಮತ್ತು ಫಾಕ್ಸ್ ನ್ಯೂಸ್ ರೇಡಿಯೊಗೆ ನೀಡಿದ ಸಂದರ್ಶನದಲ್ಲಿ, ಫೆಬ್ರವರಿ 28 ರಂದು ಯುಎಸ್-ಇಸ್ರೇಲಿ ದಾಳಿಯ ಸಮಯದಲ್ಲಿ ಅವರ ತಂದೆ ಅಲಿ ಖಮೇನಿ ನಿಧನರಾದ ನಂತರ ನೇಮಕಗೊಂಡ ನಂತರ ಮೊಜ್ತಬಾ ಖಮೇನಿ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.ಅವರು ಜೀವಂತವಾಗಿದ್ದಾರೆಯೇ ಎಂದು ನನಗೆ ತಿಳಿದಿಲ್ಲ….

Read More

Daily Devotional: ಮನೆಯಿಂದ ಹೊರಡುವಾಗ ಹೊಸ್ತಿಲಿಗೆ ನಮಸ್ಕರಿಸಬೇಕು ಎನ್ನುವುದೇಕೆ? ಜ್ಯೋತಿಷ್ಯ ಸಲಹೆ ಇಲ್ಲಿದೆ

ಮನೆಯ ಹೊಸ್ತಿಲಿನಲ್ಲಿ ಮಹಾಲಕ್ಷ್ಮಿಯ ಕೃಪೆ ಮತ್ತು ಅನುಗ್ರಹ ಸದಾ ನೆಲೆಸಿರುತ್ತದೆ ಎಂದು ಹೇಳಲಾಗುತ್ತದೆ. ಇವತ್ತಿನ ದಿನ ಹೊಸ್ತಿಲಿನ ಮಹತ್ವ ಮತ್ತು ವಿಶೇಷತೆಗಳನ್ನು ತಿಳಿಯೋಣ. ಮನೆಯಿಂದ ಹೊರಗೆ ಹೋಗುವಾಗ ಅಥವಾ ಒಳಗೆ ಬರುವಾಗ ಹೊಸ್ತಿಲಿನ ದರ್ಶನ ಮತ್ತು ಸ್ಪರ್ಶವು ನಮ್ಮ ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಏಕೆಂದರೆ ಮಹಾಲಕ್ಷ್ಮಿಯ ಅನುಗ್ರಹ ಈ ಹೊಸ್ತಿಲಿನಲ್ಲಿಯೇ ಇರುತ್ತದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ…

Read More