Headlines

nagaraj11081993

ಈ ರಾಶಿಯವರಿಗೆ ವಿದೇಶದಲ್ಲಿ ಉದ್ಯೋಗ ಸಿಗುವ ಭಾಗ್ಯ: ಹೊಸ ಜವಾಬ್ದಾರಿ ಖಂಡಿತ

ಮಾರ್ಚ್ 15ರಿಂದ 21ರವರೆಗೆ ಮೂರನೇ ವಾರ. ಉದ್ಯೋಗಸ್ಥರಿಗೆ ವಿದೇಶ ಪ್ರವಾಸ ಆಸೆ ಅಧಿಕ, ಕಿರಿಕಿರಿ ಕೆಲವರಿಗೆ, ಒತ್ತಡದ ಸುಧಾರಣೆಗೆ ಪ್ರಯತ್ನ ಇವೆಲ್ಲ ಬೇಕಾಗುವುದು. ಅಂತರಿಕ ಕಲಹ ಶಮನವಾಗಲಿದೆ. ​ ಮೇಷ: ಉದ್ಯೋಗದಲ್ಲಿ ಸ್ಥಿರತೆ ಇರಲಿದೆ. ಹೊಸ ಜವಾಬ್ದಾರಿಗಳು ಉನ್ನತ ಸ್ಥಾನಕ್ಕೆ ದಾರಿಯಾಗಲಿವೆ. ಉದ್ಯಮ ಸ್ಥಾಪನೆಗೆ ಇದು ಸಕಾಲ. ವೃತ್ತಿ ನಿಮಿತ್ತ ಕಿರು ಪ್ರಯಾಣ ಸಂಭವಿಸುವುದು. ಹಿರಿಯ ಅಧಿಕಾರಿಗಳ ಬೆಂಬಲ ಸಿಗಲಿದೆ. ​ವೃಷಭ: ವೃತ್ತಿ ಬದಲಾವಣೆಗೆ ಪ್ರಯತ್ನಿಸುತ್ತಿದ್ದರೆ ಯಶಸ್ಸು ಸಿಗಲಿದೆ. ವಿದೇಶಿ ಕಂಪನಿಗಳಲ್ಲಿ ಉದ್ಯೋಗಾವಕಾಶ ಅಥವಾ ಉದ್ಯೋಗದ ಕಾರಣ…

Read More

ದುಬೈನಿಂದ ಬರುತ್ತಿದ್ದಂತೆ ಕಾರು ಖರೀದಿಸಿದ ಅಜಿತ್; ನೀವಂದುಕೊಂಡಷ್ಟು ದುಬಾರಿ ಅಲ್ಲ

ಕಾಲಿವುಡ್ ನಟ ಅಜಿತ್ ಕುಮಾರ್ ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅವರು ರೇಸ್​​ಗಾಗಿ ದುಬೈನಲ್ಲಿ ಇದ್ದರು. ಆದ್ರೆ, ಅಮೆರಿಕ-ಇಸ್ರೇಲ್ ಹಾಗೂ ಇರಾನ್ ಮಧ್ಯೆ ನಡೆಯುತ್ತಿರುವ ಯುದ್ಧ ರೀತಿಯ ಪರಿಸ್ಥಿತಿಯಿಂದ ವಿಮಾನಗಳ ಹಾರಾಟಕ್ಕೆ ಅಡಚಣೆ ಉಂಟಾಗಿತ್ತು. ಈ ಕಾರಣದಿಂದ ಅಜಿತ್ ಅವರು ದುಬೈನಲ್ಲೇ ಉಳಿದುಕೊಳ್ಳಬೇಕಾದ ಪರಿಸ್ಥಿತಿ ಬಂದಿತ್ತು. ಈಗ ಅವರು ಚೆನ್ನೈಗೆ ಮರಳಿದ್ದಾರೆ. ಇಲ್ಲಿಗೆ ಆಗಮಿಸುತ್ತಿದ್ದಂತೆ ಅವರು 24 ಲಕ್ಷ ರೂಪಾಯಿ ಕಾರು ಖರೀದಿ ಮಾಡಿದ್ದಾರೆ. ಅಜಿತ್ ಅವರು ಚೆನ್ನೈಗೆ ಮರಳಿದ ಬಳಿಕ ಸಾಯಿ ಬಾಬ ದೇವಸ್ಥಾನಕ್ಕೆ ಭೇಟಿ…

Read More

ಅಶ್ಲೀಲ ವಿಡಿಯೋ ಪೋಸ್ಟ್ ಮಾಟಿ ನಟಿಗೆ ಕಿರುಕುಳ: ಇಬ್ಬರ ಬಂಧನ

ನಟಿಯರಿಗೆ ಆನ್​ಲೈನ್ (Onlie) ಕಿರುಕುಳ ಎಂಬುದು ಪಿಡುಗಾಗಿ ಪರಿಣಮಿಸಿದೆ. ಹಲವಾರು ನಟಿಯರು ಆನ್​​ಲೈನ್ ಕಿರುಕುಳದಿಂದ ತೀವ್ರ ಸಮಸ್ಯೆ, ಮಾನಸಿಕ ಹಿಂಸೆ ಅನುಭವಿಸುತ್ತಲೇ ಇದ್ದಾರೆ. ಅಶ್ಲೀಲ ಕಮೆಂಟುಗಳು, ಎಐ ಜನರೇಟೆಡ್ ಅಶ್ಲೀಲ ವಿಡಿಯೋಗಳು, ತಿರುಚಿದ ಚಿತ್ರಗಳು ಹೀಗೆ ನಟಿಯರನ್ನು ಹಲವು ರೀತಿಯಲ್ಲಿ ದುರುಳರು ಕಾಡುತ್ತಲೇ ಬಂದಿದ್ದಾರೆ. ಆದರೆ ಕೆಲವು ನಟಿಯರು ಮಾತ್ರ ಇಂಥಹವರ ವಿರುದ್ಧ ಹೋರಾಡುವ ಧೈರ್ಯ ತೋರುತ್ತಾರೆ. ಇತ್ತೀಚೆಗೆ ಸೈಬರ್ ಪೊಲೀಸರು ಸಹ ಇಂಥಹಾ ಟ್ರೋಲ್​​ಗಳ ವಿರುದ್ಧ ಗಂಭೀರವಾಗಿದ್ದು, ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ. ಇದೀಗ ತೆಲುಗಿನ ಗ್ಲಾಮರಸ್…

Read More

ಯಾವ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳಬೇಡಿ : ಈ ರಾಶಿಯವರಿಗೆ ಮಾ. 21ರವರೆಗೆ ಪ್ರೇಮದಲ್ಲಿ ಭಗ್ನತೆ

ಮಾರ್ಚ್ 15ರಿಂದ ಮಾರ್ಚ್ 21ರವರೆಗೆ ಪ್ರೇಮದಲ್ಲಿ ಭಗ್ನತೆ, ಹಳೆಯ ಪ್ರೇಮದ ಹೊಸ ಹುಟ್ಟು ಕಾಣಿಸುವುದು. ಮರು ವಿವಾಹಕ್ಕೆ ಪ್ರಯತ್ನ ಸಾಗಲಿದೆ. ಪ್ರೇಮಕ್ಕೆ ಆಕರ್ಷಣೆಯ ಲೇಪವನ್ನು ಹಚ್ಚುವಿರಿ. ಎಲ್ಲವೂ ಕ್ಷಣಿಕವೆಂದು ಅರಿವಾದಾಗ ಕಾಲ ಕಳೆಯುತ್ತದೆ. ಹೆಜ್ಜೆ ಇಟ್ಟು ದೃಷ್ಟಿ ಹರಿಸುವ ಬದಲು, ದೃಷ್ಟಿ ಇಟ್ಟು ಹೆಜ್ಜೆ ಹಾಕಿ. ಮೇಷ ಈ ವಾರ ಸಂಗಾತಿಯೊಂದಿಗೆ ಸಣ್ಣಪುಟ್ಟ ವಾಗ್ವಾದಗಳಾಗಬಹುದು, ತಾಳ್ಮೆ ಅಗತ್ಯ. ಪ್ರೇಮಿಗಳಿಗೆ ಮನೆಯವರಿಂದ ಹಸಿರು ನಿಶಾನೆ ಸಿಗುವ ಸಾಧ್ಯತೆ ಇದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರುವ ಸುಸಮಯವಿದು. ವೃಷಭ ಹಳೆಯ…

Read More

ಬೆಂಗಳೂರಿನ ಪ್ರತಿಷ್ಠಿತ ಶಾಲೆಯೊಂದರ ಅಮಾನವೀಯ ವರ್ತನೆ: 2 ನಿಮಿಷ ತಡವಾಗಿ ಬಂದ ಬಾಲಕನಿಗೆ 2 ಗಂಟೆ ಬಿಸಿಲಲ್ಲಿ ನಿಲ್ಲಿಸಿ ಶಿಕ್ಷೆ!

ಬೆಂಗಳೂರು, ಮಾ.14: ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಶಾಲೆಯೊಂದರ ಅಮಾನವೀಯ ವರ್ತನೆ ಈಗ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಕೇವಲ ಎರಡು ನಿಮಿಷ ತಡವಾಗಿ ಶಾಲೆಗೆ ಬಂದಿದ್ದಕ್ಕಾಗಿ ಆರನೇ ವರ್ಷದ ಪುಟ್ಟ ಮಗುವನ್ನು ಸುಮಾರು ಎರಡು ಗಂಟೆಗಳ ಕಾಲ ಸುಡುವ ಬಿಸಿಲಿನಲ್ಲಿ ನಿಲ್ಲಿಸುವ ಮೂಲಕ ಶಾಲಾ ಮಂಡಳಿ ತನ್ನ ಕ್ರೌರ್ಯ ಮೆರೆದಿದೆ. ನಗರದ ಸಂಚಾರ ದಟ್ಟಣೆಯಿಂದಾಗಿ ಮಗು ಶಾಲೆಗೆ ಕೇವಲ 2 ನಿಮಿಷ ತಡವಾಗಿ ತಲುಪಿದೆ. ಇದನ್ನೇ ದೊಡ್ಡ ಅಪರಾಧ ಎಂಬಂತೆ ಬಿಂಬಿಸಿದ ಶಾಲಾ ಸಿಬ್ಬಂದಿ, ಮೊದಲನೇ ತರಗತಿಯ ಮಗುವನ್ನು…

Read More

IPLಗೆ ಎಂಟ್ರಿ ಬೆನ್ನಲ್ಲೇ PSL​ನಿಂದ ಬ್ಯಾನ್!

ಝಿಂಬಾಬ್ವೆ ತಂಡದ ವೇಗದ ಬೌಲರ್ ಬ್ಲೆಸ್ಸಿಂಗ್ ಮುಝರಬಾನಿ (Blessing Muzarabani) ಅವರು ಪಾಕಿಸ್ತಾನ್ ಸೂಪರ್ ಲೀಗ್ (PSL) ಒಪ್ಪಂದವನ್ನು ಉಲ್ಲಂಘಿಸಿರುವ ಕಾರಣ, ಪಾಕ್ ಕ್ರಿಕೆಟ್ ಮಂಡಳಿ (PCB) ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ. ಮುಝರಬಾನಿ ಮುಂಬರುವ PSL 2026 ಸೀಸನ್‌ಗಾಗಿ ಇಸ್ಲಾಮಾಬಾದ್ ಯುನೈಟೆಡ್ ತಂಡದೊಂದಿಗೆ ಸುಮಾರು 1.1 ಕೋಟಿ ರೂಪಾಯಿ (PKR) ಮೊತ್ತಕ್ಕೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಇತ್ತ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಚಾನ್ಸ್ ಸಿಗುತ್ತಿದ್ದಂತೆ ಮುಝರಬಾನಿ ಪಾಕಿಸ್ತಾನ್ ಸೂಪರ್ ಲೀಗ್​ಗೆ ಕೈ ಕೊಟ್ಟಿದ್ದಾರೆ. ಕೊಲ್ಕತ್ತಾ…

Read More

ಕೊನೆಗೂ ಹೊಸಕೊಪ್ಪಲು ರೈತನಿಗೆ 66 ಪೈಸೆ ಪಾವತಿಸಿದ ಬ್ಯಾಂಕ್: ಹೇಗೆ ಗೊತ್ತಾ?

ಹಾಸನ, (ಮಾರ್ಚ್ 14): ಜಿಲ್ಲೆಯ ಸಕಲೇಶಪುರ ತಾಲೂಕಿನ ಹೊಸಕೊಪ್ಪಲು ರೈತನಿಗೆ ಕೆನರಾ ಬ್ಯಾಂಕ್ (Sakleshpura canara bank) ನೀಡಬೇಕಿದ್ದ 66 ಪೈಸೆ ಹಣವನ್ನು ಕೊನೆಗೂ ಮರುಪಾವತಿಸಿದೆ. ಕೆಲವು ವರ್ಷಗಳ ಹಿಂದೆ ಹೊಸಕೊಪ್ಪಲು ಗ್ರಾಮದ ರೈತ ಚೊಕ್ಕಣ್ಣಗೌಡ 50 ಸಾವಿರ ರೂ. ಸಾಲವನ್ನು (Loan)  ಕೆನರಾ ಬ್ಯಾಂಕ್‌ನಲ್ಲಿ ಪಡೆದಿದ್ದರು. ಸಕಾಲಕ್ಕೆ ಸಾಲ ತೀರುವಳಿ ಮಾಡಿದ್ದ ರೈತನಿಗೆ ಕೆಲವು ದಿನಗಳ ನಂತರ ಇನ್ನೂ 9.34 ಪೈಸೆ ಸಾಲ ಬಾಕಿ ಇದ್ದು ತಕ್ಷಣವೇ ಮರುಪಾವತಿಸುವಂತೆ ನೋಟಿಸ್‌ ನೀಡಿದ್ದಲ್ಲದೆ ಪದೇಪದೆ ಕರೆ ಮಾಡುತ್ತಿದ್ದರು….

Read More

ಉತ್ತರ ಕರ್ನಾಟಕದ ಮೊಟ್ಟೆ ಉದ್ಯಮಕ್ಕೂ ತಟ್ಟಿದ ಯುದ್ಧದ ಬಿಸಿ; ಲಕ್ಷಾಂತರ ರೂ. ಮೌಲ್ಯದ ಮೊಟ್ಟೆಗಳು ಮಣ್ಣುಪಾಲು!

ಬೆಂಗಳೂರು, ಮಾರ್ಚ್​ 14: ಇರಾನ್–ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಹಿನ್ನೆಲೆ ಸಿಲಿಂಡರ್ (LPG Gas Cylinder)ಕೊರತೆ ಜೊತೆಗೆ ಉತ್ತರ ಕರ್ನಾಟಕದ ಮೊಟ್ಟೆ ಉದ್ಯಮದ ಮೇಲೂ ಗಂಭೀರ ಪರಿಣಾಮ ಉಂಟಾಗಿದೆ. ಯಾದಗಿರಿ, ಹಾವೇರಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಗಲ್ಫ್ ರಾಷ್ಟ್ರಗಳಿಗೆ ರಫ್ತು ಆಗುತ್ತಿದ್ದ ಮೊಟ್ಟೆಗಳ ವ್ಯಾಪಾರ ಬಹುತೇಕ ಸ್ಥಗಿತಗೊಂಡಿದ್ದು, ಇದರಿಂದ ಕೋಳಿ ಫಾರ್ಮ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾವೇರಿಯ ಮೊಟ್ಟೆ ವ್ಯಾಪಾರದಲ್ಲಿ ಭಾರೀ ನಷ್ಟ ಹಾವೇರಿಯಲ್ಲಿ ಪ್ರತಿದಿನ ಭಾರತದಿಂದ ಸುಮಾರು 80 ಲಕ್ಷ ಮೊಟ್ಟೆಗಳು ವಿದೇಶಗಳಿಗೆ ರಫ್ತು ಆಗುತ್ತಿದ್ದವು….

Read More

ಪ್ರಧಾನಿ ಮೋದಿ ನಿರಂತರ ಪ್ರಯತ್ನದ ಬಳಿಕ ಅಂತೂ ಹಾರ್ಮುಜ್ ಜಲಸಂಧಿ ದಾಟಿದ ಭಾರತದ ಎರಡು ಹಡಗುಗಳು

ನವದೆಹಲಿ, ಮಾರ್ಚ್​ 14: ಭಾರತದ ಧ್ವಜ ಹೊತ್ತ ಎರಡು ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (SCI) LPG ಟ್ಯಾಂಕರ್‌ಗಳು ಇಂದು ಹಾರ್ಮುಜ್(Hormuz) ಜಲಸಂಧಿಯನ್ನು ದಾಟಿ ಭಾರತದ ಕಡೆಗೆ ಸಾಗುತ್ತಿವೆ. ಹಡಗುಗಳ ಹೆಸರುಗಳು ಶಿವಾಲಿಕ್ ಮತ್ತು ನಂದಾ ದೇವಿ. ಇರಾನ್ ಮತ್ತು ಆ ಪ್ರದೇಶದ ಇತರ ಎಲ್ಲಾ ದೇಶಗಳ ಸಹಕಾರದೊಂದಿಗೆ ಇದು ಬಹಳ ಎಚ್ಚರಿಕೆಯಿಂದ ನಡೆಸಲಾದ ಕಾರ್ಯಾಚರಣೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ಕೆಲವು ದಿನಗಳಿಂದ ಭಾರತ ಮತ್ತು ಇರಾನಿನ ನಾಯಕತ್ವಗಳ ನಡುವಿನ ಸರಣಿ ಮಾತುಕತೆ ನಂತರ ಈ…

Read More

‘ಯಶ್ ಖಿನ್ನತೆಗೆ ಒಳಗಾಗಿದ್ದಾನೆ’; ವಿವಾದಿತ ಹೇಳಿಕೆ ನೀಡಿದ ಜ್ಯೋತಿಷಿ ವೇಣು ಸ್ವಾಮಿ

ಜ್ಯೋತಿಷಿ ವೇಣು ಸ್ವಾಮಿ ಸದಾ ಒಂದಿಲ್ಲೊಂದು ವಿಷಯಕ್ಕೆ ವಿವಾದ ಮಾಡಿಕೊಳ್ಳುತ್ತಲೇ ಇರುತ್ತಾರೆ. ಈಗ ಅವರ ಕಣ್ಣು ಯಶ್ ಮೇಲೆ ಬಿದ್ದಿದೆ. ಯಶ್ ಅವರನ್ನು ಏಕವಚನದಲ್ಲಿ ಕರೆದಿದ್ದು ಅಲ್ಲದೆ, ಅವರು ಖಿನ್ನೆತಗೆ ಒಳಗಾಗಿದ್ದಾರೆ ಎಂದಿದ್ದಾರೆ. ಇದು ಎರಡು ತಿಂಗಳ ಹಿಂದೆ ನೀಡಿದ ಸಂದರ್ಶನ ಆಗಿದ್ದು, ಈಗ ವೈರಲ್ ಆಗಿದೆ. ಯಶ್ ಬಗ್ಗೆ ಈ ರೀತಿ ಮಾತನಾಡಿದ ವೇಣು ಸ್ವಾಮಿ ವಿರದ್ಧ ಯಶ್ ಫ್ಯಾನ್ಸ್ ತಿರುಗಿ ಬಿದ್ದಿದ್ದಾರೆ. ವೇಣು ಸ್ವಾಮಿ ಅವರು ಸದಾ ವಿವಾದಾತ್ಮಕ ಹೇಳಿಕೆ ನೀಡುತ್ತಾ ಸುದ್ದಿ ಆಗುತ್ತಾರೆ….

Read More