Headlines

nagaraj11081993

ಈ ಭಾಗದ ಜನರಿಗೆ ಬಿಗ್​​​ ಅಲರ್ಟ್​​​ ನೀಡಿದ ಹವಾಮಾನ ಇಲಾಖೆ: ಮಧ್ಯಾಹ್ನ ಹೊರಗೆ ಹೋಗುವ ಮುನ್ನ ಎಚ್ಚರ!

ಬೆಂಗಳೂರು, ಮಾ.14: ರಾಜ್ಯಾದ್ಯಂತ ತೀವ್ರವಾದ ಶಾಖದ ಅಲೆ (Heat Wave) ಎದುರಾಗಿದ್ದು, ಬಿಸಿಲಿನಿಂದ ಜನ ತತ್ತರಿಸಿದ್ದಾರೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ತಾಪಮಾನವು ದಾಖಲೆ ಮಟ್ಟಕ್ಕೆ ಏರಿಕೆಯಾಗುತ್ತಿದ್ದು, ಹವಾಮಾನ ಇಲಾಖೆಯು ಮುನ್ನೆಚ್ಚರಿಕೆ ನೀಡಿದೆ. ರಾಜ್ಯಾದ್ಯಂತ ಹವಾಮಾನವು ಸಂಪೂರ್ಣ ಶುಷ್ಕವಾಗಿದ್ದು, ಬಿಸಿಲಿನ ಝಳ ತೀವ್ರವಾಗಿದೆ. ಕನಿಷ್ಠ ತೇವಾಂಶದ ಕಾರಣದಿಂದಾಗಿ ಸೆಖೆಯ ಅನುಭವ ಹೆಚ್ಚಾಗಿದೆ.ಬೆಂಗಳೂರಿನಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿದ್ದು, ಗರಿಷ್ಠ ಮಟ್ಟವನ್ನು ತಲುಪುವ ಸಾಧ್ಯತೆಯಿದೆ. ನಗರದಲ್ಲಿ ‘ತೀವ್ರ ತಾಪಮಾನದ ಎಚ್ಚರಿಕೆ’ ನೀಡಲಾಗಿದೆ. ಬೆಂಗಳೂರು ಮತ್ತು ಕರ್ನಾಟಕದ ಒಳನಾಡಿನಲ್ಲಿ…

Read More

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 14ರ ದಿನಭವಿಷ್ಯ

ಈ ದಿನ ಶಮಿ ವೃಕ್ಷದ ಆರಾಧನೆಯನ್ನು ಮಾಡಿ. ಸಂಜೆ ಸಮಯದಲ್ಲಿ ಶಮಿ (ಬನ್ನಿ) ಮರದ ಬುಡದಲ್ಲಿ ದೀಪ ಹಚ್ಚುವುದು ವೃತ್ತಿಜೀವನದ ಅಡೆತಡೆಗಳನ್ನು ನಿವಾರಿಸುತ್ತದೆ. ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7): ಭೂಮಿ ಅಥವಾ ಮನೆಗೆ ಸಂಬಂಧಿಸಿದ ದಾಖಲೆ- ಕಾಗದ- ಪತ್ರಗಳನ್ನು ಹೊಂದಿಸಿಕೊಳ್ಳುತ್ತಾ ಇರುವವರಿಗೆ ಇಷ್ಟು ಸಮಯ ಕಾಡುತ್ತಿದ್ದ ಹಿನ್ನಡೆ ಅಥವಾ ವಿಳಂಬ ಗತಿ ಇದ್ದಲ್ಲಿ ಅದು ನಿವಾರಣೆ ಆಗುವಂಥ ಯೋಗ ಇದೆ. ಅಯ್ಯೋ, ಬೇರೆಯವರಿಂದ ಸಹಾಯ ಕೇಳಬೇಕಾದ ಸನ್ನಿವೇಶ…

Read More

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 14ರ ದಿನಭವಿಷ್ಯ

ಈ ದಿನ ಧರ್ಮ ಗ್ರಂಥಗಳನ್ನು ಓದಿ. ರಾಮಾಯಣ ಅಥವಾ ಭಗವದ್ಗೀತೆಯ ಯಾವುದಾದರೂ ಒಂದು ಅಧ್ಯಾಯವನ್ನು ಓದುವುದು ಮನಸ್ಸಿಗೆ ಸ್ಥಿರತೆ ನೀಡುತ್ತದೆ. ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4): ಹಪ್ಪಳ, ಸಂಡಿಗೆ, ಚಟ್ನಿಪುಡಿ, ಹುಳಿಪುಡಿ- ಸಾರಿನಪುಡಿ ಇಂಥದ್ದನ್ನು ಮಾರಾಟ ಮಾಡುವಂಥವರಿಗೆ ಆದಾಯದಲ್ಲಿ ಹಾಗೂ ಲಾಭದಲ್ಲಿ ದೊಡ್ಡ ಏರಿಕೆ ಆಗುವಂಥ ಯೋಗ ಇದೆ. ನಿಮ್ಮಲ್ಲಿ ಕೆಲವರಿಗೆ ದೊಡ್ಡ ಮಟ್ಟದ ಆರ್ಡರ್ ದೊರೆಯಲಿದೆ. ರಾಜಕಾರಣದಲ್ಲಿ ಇರುವಂಥವರಿಗೆ ಪದೋನ್ನತಿ ದೊರೆಯಲಿದೆ. ಅದರ ಬಗ್ಗೆ…

Read More

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 14ರ ದಿನಭವಿಷ್ಯ

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1): ಪ್ರೀತಿ- ಪ್ರೇಮದಲ್ಲಿ ಇರುವಂಥವರಿಗೆ ಬಹಳ ಉತ್ತಮವಾದ ದಿನ ಇದಾಗಿರುತ್ತದೆ. ಮನೆಯಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪ ಮಾಡಬೇಕು ಎಂದುಕೊಂಡಿರುವವರಿಗೆ ಅದಕ್ಕೆ ಪೂರಕವಾದ ವಾತಾವರಣ ದೊರೆಯಬಹುದು. ವಸ್ತ್ರಾಭರಣಗಳ ಖರೀದಿಗಾಗಿ ಹಣ ಖರ್ಚು ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರು ಆಂಟಿಕ್ ಆಭರಣಗಳನ್ನು ಖರೀದಿಸುವುದಕ್ಕೆ ಹೆಚ್ಚಿನ ಹಣವನ್ನು ಖರ್ಚು ಮಾಡಲಿದ್ದೀರಿ. ಇದೇ ಕಾರಣಕ್ಕೆ ಕ್ರೆಡಿಟ್ ಕಾರ್ಡ್ ಬಳಸುವಂಥ ಸಾಧ್ಯತೆಗಳಿವೆ. ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2,…

Read More

ದಿನ ಭವಿಷ್ಯ: ಇಂದು ಈ ರಾಶಿಯವರ ವರ್ತನೆ ವಿಭಿನ್ನ ಹಾಗೂ ಅತಿರೇಕವೂ ಆಗಿರಲಿದೆ..

ಮೇಷ ರಾಶಿ: ಇಂದಿನ ಪ್ರಯಾಣದಲ್ಲಿ ಅಡೆತಡೆಗಳಿದ್ದರೂ ಅದನ್ನು ಲೆಕ್ಕಿಸದೇ ಮುನ್ನಡೆಯುವಿರಿ. ಹೊಂದಾಣಿಕೆ ಕಷ್ಟವಾದರೂ ಅನಿವಾರ್ಯವಾಗಬಹುದು. ಶರೀರದಲ್ಲಿ ಅಸಮತೋಲನವು ಇರಲಿದೆ. ಇಂದು ಉಪಾಯದಿಂದ ಕೆಲಸವನ್ನು ಮಾಡುವುದು ಉತ್ತಮ. ಸ್ನೇಹಿತರ ವಿವಾಹ ಸಮಾರಂಭದಲ್ಲಿ ಖುದ್ದಾಗಿ ಭಾಗಿಯಾಗುವಿರಿ. ವ್ಯಾಪಾರವು ಮಧ್ಯಮಗತಿಯಲ್ಲಿ ಇರುವುದು. ನಿಮ್ಮದಾದ ನಿಯಮವನ್ನು ಬಿಡಲು ನೀವು ತಯಾರಿರುವುದಿಲ್ಲ. ಕೆಲವರ‌ ಮನೋಗತವನ್ನು ಅರಿತುಕೊಳ್ಳುವಿರಿ. ಹಿರಿಯರ ಜೊತೆ ವರ್ತನೆಗಳು ಬಿಗುಮಾನದಿಂದ ಇರಲಿದೆ. ವೃಷಭ ರಾಶಿ: ದಾಂಪತ್ಯದಲ್ಲಿ ಮನಸ್ತಾಪವನ್ನು ಶಾಂತಗೊಳಿಸಿಕೊಳ್ಳುವುದು ಒಳ್ಳೆಯದು. ಜವಾಬ್ದಾರಿಯನ್ನು ಒಪ್ಪಿಕೊಳ್ಳುವುದಿಲ್ಲ. ಸಂಗಾತಿಯ ಕಾರಣದಿಂದ ನಿಮಗೆ ಬೇಸರವಾಗುವುದು. ಸಕಾಲಕ್ಕೆ ಭೋಜನವನ್ನು ಸ್ವೀಕರಿಸುವುದು…

Read More

ಅಸ್ಸಾಂನ ಬುಡಕಟ್ಟು ಮಹಿಳೆಯ ಪಾದ ಮುಟ್ಟಿ ನಮಸ್ಕರಿಸಿದ ಪ್ರಧಾನಿ ಮೋದಿ!

ಗುವಾಹಟಿ, ಮಾರ್ಚ್ 13: ವಿಧಾನಸಭಾ ಚುನಾವಣೆಗೆ ಸಿದ್ಧವಾಗಿರುವ ಅಸ್ಸಾಂಗೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಾರೆ. ಈ ವೇಳೆ ಅವರು 19,480 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಅಸ್ಸಾಂನಲ್ಲಿ ಹಲವು ದಶಕಗಳಿಂದ ಚಹಾ ಬುಡಕಟ್ಟು ಸಮುದಾಯವು ಭೂಮಿಯ ಮೇಲೆ ಯಾವುದೇ ಹಕ್ಕುಗಳಿಲ್ಲದೆ ಬದುಕುತ್ತಿದೆ. ಇದಾಗಿ ತಲೆಮಾರುಗಳೇ ಕಳೆದಿವೆ. ಅವರು ಸರ್ಕಾರಿ ಯೋಜನೆಗಳು ಮತ್ತು ಅವಕಾಶಗಳಿಂದ ವಂಚಿತರಾಗಿದ್ದಾರೆ. ಹೀಗಾಗಿ, ಅಸ್ಸಾಂನಲ್ಲಿ ಪ್ರಧಾನಿ ಮೋದಿ (PM Modi) ಅವರು 800 ಚಹಾ ತೋಟಗಳಲ್ಲಿರುವ 3.5 ಲಕ್ಷ…

Read More

ಕಾಂಗ್ರೆಸ್ “ಬಣವಿ ಸುಟ್ಟು ಅರಳು ಮುಕ್ಕುವ” ಕೆಲಸ ಮಾಡುತ್ತಿದೆ: ಕೇಂದ್ರ ಸಚಿವ ಜೋಶಿ ಕಿಡಿ

ಬೆಂಗಳೂರು, (ಮಾರ್ಚ್ 13): ಮಧ್ಯಪ್ರಾಚ್ಯದ ಯುದ್ಧ (War) ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶದಲ್ಲಿ ಎಲ್ಲೂ ಗ್ಯಾಸ್ (LPG Gas) ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಕೊರತೆಯಿಲ್ಲ. ಆದರೆ, ಕಾಂಗ್ರೆಸ್ (Congress)  ಪಕ್ಷ “ಬಣವಿ ಸುಟ್ಟು ಅರಳು ಮುಕ್ಕುವ” ಕೆಲಸ ಮಾಡುತ್ತಿದೆ. ದೇಶದಲ್ಲಿ ಈ ಹಿಂದೆಲ್ಲಾ ಕ್ರೈಸಿಸ್ ಉಂಟಾದಾಗ ವಿಪಕ್ಷ ಸ್ಥಾನದಲ್ಲಿದ್ದ ಬಿಜೆಪಿ ಅತ್ಯಂತ ಜವಾಬ್ದಾರಿಯಿಂದ ನಡೆದುಕೊಂಡಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ವಿಪಕ್ಷ ಕಾಂಗ್ರೆಸ್ ತೀರಾ ತೀರಾ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ…

Read More

ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

ಗುವಾಹಟಿ, ಮಾರ್ಚ್ 13: ಪ್ರಧಾನಿ ನರೇಂದ್ರ ಮೋದಿ ಅಸ್ಸಾಂನಲ್ಲಿ ಇಂದು ಸುಮಾರು 19,480 ಕೋಟಿ ರೂ. ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ರಾಷ್ಟ್ರಕ್ಕೆ ಅರ್ಪಿಸಿದರು. ದೇಶಾದ್ಯಂತ 9.3 ಕೋಟಿಗೂ ಹೆಚ್ಚು ರೈತರಿಗೆ ಪ್ರಧಾನ ಮಂತ್ರಿ-ಕಿಸಾನ್ ಯೋಜನೆಯ 22ನೇ ಕಂತನ್ನು ಕೂಡ ಪ್ರಧಾನಿ ನರೇಂದ್ರ ಮೋದಿ (PM Narendra Modi) ಬಿಡುಗಡೆ ಮಾಡಿದರು. ಇದೇ ವೇಳೆ ಇನ್ನೂ ಕೆಲವು ಯೋಜನೆಗಳಿಗೂ ಮೋದಿ ಶಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ತಪ್ಪು ಮಾಹಿತಿ…

Read More

IPL 2026: ಐಪಿಎಲ್​ನಿಂದ ಹರ್ಷಿತ್ ರಾಣಾ ಔಟ್; ಕೆಕೆಆರ್‌ಗೆ ಹೆಚ್ಚಿದ ಸಂಕಷ್ಟ

2026 ರ ಐಪಿಎಲ್ ಆರಂಭಕ್ಕೂ ಮುನ್ನ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಆಘಾತ ಎದುರಾಗಿದೆ. ತಂಡಕ್ಕೆ ಪ್ರಮುಖ ವೇಗದ ಬೌಲರ್ ಹರ್ಷಿತ್ ರಾಣಾ ಅವರನ್ನು 19 ನೇ ಸೀಸನ್ ಐಪಿಎಲ್​ನಿಂದ ಹೊರಗಿಡಲಾಗಿದೆ. ಇಂಜುರಿಯಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ರಾಣಾರನ್ನು ಐಪಿಎಲ್​ನಿಂದ ಹೊರಗಿಡುವ ತೀರ್ಮಾನಕ್ಕೆ ಬರಲಾಗಿದೆ. ವಾಸ್ತವವಾಗಿ 2026 ರ ಟಿ20 ವಿಶ್ವಕಪ್‌ ಆರಂಭಕ್ಕೂ ಮುನ್ನ ನಡೆದ ಅಭ್ಯಾಸ ಪಂದ್ಯಗಳ ಸಮಯದಲ್ಲಿ ಹರ್ಷಿತ್ ರಾಣಾ ಗಾಯಗೊಂಡಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ರಾಣಾಗೆ ಗಾಯವಾಗಿತ್ತು….

Read More

ಮತ್ತೆ ಕೇಳಿಬಂತು ಅನುಷ್ಕಾ ಶೆಟ್ಟಿ ಮದುವೆ ವಿಷಯ: ಈ ಬಾರಿ ಪ್ರಭಾಸ್ ಹೆಸರಿಲ್ಲ

ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಅನುಷ್ಕಾ ಶೆಟ್ಟಿ (Anushka Shetty) ಅವರು ಬಣ್ಣದ ಲೋಕದಲ್ಲಿ ಸೂಪರ್ ಸಕ್ಸಸ್ ಕಂಡಿದ್ದಾರೆ. ಅನೇಕ ಸ್ಟಾರ್ ನಟರಿಗೆ ಜೋಡಿಯಾಗಿ ಮಿಂಚಿದ್ದಾರೆ. ಆದರೆ ನಿಜ ಜೀವನದಲ್ಲಿ ಅವರು ಸಿಂಗಲ್ ಆಗಿಯೇ ಉಳಿದುಕೊಂಡಿದ್ದಾರೆ. ಅವರ ಮದುವೆ (Anushka Shetty Marriage) ಬಗ್ಗೆ ಆಗಾಗ ಗಾಸಿಪ್ ಕೇಳಿಬರುತ್ತಿದೆ. ಈಗ ಮತ್ತೊಮ್ಮೆ ಅವರ ಮದುವೆಯ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಕಳೆದ ಹಲವು ವರ್ಷಗಳಿಂದ ಅನುಷ್ಕಾ ಶೆಟ್ಟಿ ಅವರ ಹೆಸರು ನಟ ಪ್ರಭಾಸ್…

Read More