All posts by nagaraj11081993

IPL 2026: ಪ್ಲೇಆಫ್‌ ಸುತ್ತಿಗೆ ಮೀಸಲು ದಿನವಿಲ್ಲ; ಹೀಗಾಗಿ ಪಂದ್ಯ ರದ್ದಾದರೆ ಫಲಿತಾಂಶ ನಿರ್ಧರಿಸುವುದು ಹೇಗೆ? – Kannada News | IPL 2026 Playoffs: Rain Threat? How Points Table Decides Q1, Eliminator Winners

ಐಪಿಎಲ್ 2026 (IPL 2026) ರ ಗುಂಪು ಹಂತದ ಪಂದ್ಯಗಳು ಮೇ 24 ರಂದು ಕೊನೆಗೊಳ್ಳಲಿವೆ. ಅದಾದ ನಂತರ, ಪ್ಲೇಆಫ್ ಸುತ್ತು ಆರಂಭವಾಗಲಿದೆ. ಈ ಸುತ್ತಿನಲ್ಲಿ 4 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿದ್ದು, ಪ್ಲೇಆಫ್ ಪಂದ್ಯಗಳು ಮೇ 26 ರಿಂದ ಪ್ರಾರಂಭವಾಗಲಿದ್ದು, ಮೇ 31 ರಂದು ನಡೆಯಲಿರುವ ಫೈನಲ್ ಪಂದ್ಯದೊಂದಿಗೆ ಕೊನೆಗೊಳ್ಳಲಿದೆ. ಪ್ಲೇಆಫ್ ಪಂದ್ಯಗಳು ಮೂರು ವಿಭಿನ್ನ ಮೈದಾನಗಳಲ್ಲಿ ನಡೆಯಲಿವೆ. ಮೊದಲ ಕ್ವಾಲಿಫೈಯರ್ ಪಂದ್ಯ ಧರ್ಮಶಾಲಾದಲ್ಲಿ, ಎಲಿಮಿನೇಟರ್ ಮತ್ತು ಎರಡನೇ ಕ್ವಾಲಿಫೈಯರ್ ಪಂದ್ಯ ನ್ಯೂ ಚಂಡೀಗಢದಲ್ಲಿ ನಡೆಯಲಿದೆ. ಫೈನಲ್ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದರೆ ಈ ಪಂದ್ಯದಲ್ಲಿ ಮಳೆ ಬಂದರೆ, ಫಲಿತಾಂಶವನ್ನು ಹೇಗೆ ನಿರ್ಧರಿಸಲಾಗುತ್ತದೆ ಎಂಬುದು ಹಲವರ ಪ್ರಶ್ನೆಯಾಗಿದೆ. ಅದಕ್ಕೆಲ್ಲ ಉತ್ತರ ಇಲ್ಲಿದೆ.

ಪ್ಲೇಆಫ್ ಸುತ್ತಿಗೆ ಮೀಸಲು ದಿನವಿಲ್ಲ

ಗುಂಪು ಹಂತದಲ್ಲಿ ಮಳೆಯಿಂದಾಗಿ ಪಂದ್ಯ ರದ್ದಾದರೆ, ಪ್ರತಿ ತಂಡಕ್ಕೆ ತಲಾ ಒಂದು ಅಂಕವನ್ನು ನೀಡಲಾಗುತ್ತಿತ್ತು. ಅಂದರೆ ಲೀಗ್ ಹಂತದಲ್ಲಿ ಯಾವುದೇ ಪಂದ್ಯಕ್ಕೆ ಮೀಸಲು ದಿನವಿರಲಿಲ್ಲ. ವಾಸ್ತವವಾಗಿ ಐಸಿಸಿ ಪಂದ್ಯಾವಳಿಗಳಲ್ಲಿ, ನಾಕೌಟ್ ಪಂದ್ಯಗಳಿಗೆ ಮೀಸಲು ದಿನವನ್ನು ನಿಗದಿ ಮಾಡಲಾಗಿರುತ್ತದೆ. ಆದರೆ ಐಪಿಎಲ್ ಪ್ಲೇಆಫ್‌ಗಳಿಗೆ ನಿಯಮಗಳು ಸ್ವಲ್ಪ ಭಿನ್ನವಾಗಿವೆ. ಮೊದಲ ಕ್ವಾಲಿಫೈಯರ್, ಎಲಿಮಿನೇಟರ್ ಮತ್ತು ಎರಡನೇ ಕ್ವಾಲಿಫೈಯರ್‌ಗೆ ಮೀಸಲು ದಿನವನ್ನು ಇರಿಸಲಾಗಿಲ್ಲ. ಫೈನಲ್ ಪಂದ್ಯಕ್ಕೆ ಮಾತ್ರ ಮೀಸಲು ದಿನವನ್ನು ನಿಗದಿ ಪಡಿಸಲಾಗಿದೆ. ಹಾಗಾದರೆ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯಗಳ ಸಮಯದಲ್ಲಿ ಮಳೆ ಬಂದರೆ, ವಿಜೇತರನ್ನು ಹೇಗೆ ಘೋಷಿಸಲಾಗುತ್ತದೆ?.

ಪಂದ್ಯ ರದ್ದಾದರೆ ಫಲಿತಾಂಶ ನಿರ್ಧಾರ ಹೇಗೆ?

ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯಗಳಲ್ಲಿ ಮಳೆ ಬಂದರೆ, ಅದೇ ದಿನ ಪಂದ್ಯವನ್ನು ಮುಗಿಸಲು ಪ್ರಯತ್ನಿಸಲಾಗುತ್ತದೆ. ಪಂದ್ಯದ ಆರಂಭ ವಿಳಂಬವಾದರೆ, ಕನಿಷ್ಠ ಐದು ಓವರ್‌ಗಳ ಪಂದ್ಯವನ್ನು ಆಡಿಸಲು ಪ್ರಯತ್ನಿಸಲಾಗುತ್ತದೆ. ಇದಕ್ಕಾಗಿ, 120 ನಿಮಿಷಗಳ ಹೆಚ್ಚುವರಿ ಸಮಯವನ್ನು ನೀಡಲಾಗಿದೆ. ಆದರೆ ಹೆಚ್ಚುವರಿ ಸಮಯದ 120 ನಿಮಿಷಗಳಲ್ಲೂ ಪಂದ್ಯ ಮುಗಿಯದಿದ್ದರೆ, ಆಗ ಪಾಯಿಂಟ್‌ ಪಟ್ಟಿ ಪ್ರಮುಖ ಪಾತ್ರವಹಿಸುತ್ತದೆ. ಅಂದರೆ ಪಾಯಿಂಟ್ ಪಟ್ಟಿಯಲ್ಲಿ ಯಾವ ತಂಡ ಮೇಲುಗೈ ಸಾಧಿಸಿರುತ್ತದೋ ಆ ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತದೆ.

CSK vs SRH IPL 2026 Live Score: ಸಿಎಸ್​ಕೆ 3ನೇ ವಿಕೆಟ್ ಪತನ

ಉದಾಹರಣೆಗೆ, ತಂಡ ಎ ಮತ್ತು ತಂಡ ಬಿ ಕ್ವಾಲಿಫೈಯರ್ ಪಂದ್ಯವನ್ನು ಆಡುತ್ತಿವೆ. ತಂಡ ಎ ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ತಂಡ ಬಿ ಎರಡನೇ ಸ್ಥಾನದಲ್ಲಿದೆ. ಮಳೆಯಿಂದಾಗಿ ಪಂದ್ಯ ನಡೆಯದಿದ್ದರೆ, ಎ ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತದೆ. ಎಲಿಮಿನೇಟರ್ ಮತ್ತು ಕ್ವಾಲಿಫೈಯರ್ 2 ಕ್ಕೂ ಈ ನಿಯಮ ಅನ್ವಯಿಸುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯೂರಿಕ್ ಆಸಿಡ್ ಸಮಸ್ಯೆ ಇದ್ಯಾ? ಇದನ್ನು ವೇಗವಾಗಿ ಕಡಿಮೆ ಮಾಡಲು ವೈದ್ಯರು ಸೂಚಿಸಿರುವ ಈ ಆಹಾರ ಕ್ರಮ ಅನುಸರಿಸಿ – Kannada News | Uric Acid Diet Plan: Best Foods To Eat And Avoid For Gout Control

ಇತ್ತೀಚಿನ ದಿನಗಳಲ್ಲಿ ಹೈ ಯೂರಿಕ್ ಆಸಿಡ್ (Uric Acid) ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ನಿಮಗೆ ತಿಳಿದಿರುವಂತೆ, ಯೂರಿಕ್ ಆಸಿಡ್ ಎನ್ನುವುದು ದೇಹದಲ್ಲಿ ಪ್ಯೂರಿನ್ ಎಂಬ ಅಂಶ ಒಡೆಯುವಾಗ ಉತ್ಪತ್ತಿಯಾಗುವ ತ್ಯಾಜ್ಯ ಪದಾರ್ಥವಾಗಿದೆ. ಸಾಮಾನ್ಯವಾಗಿ ಇದು ಮೂತ್ರಪಿಂಡಗಳ ಮೂಲಕ ದೇಹದಿಂದ ಹೊರಹೋಗುತ್ತದೆ. ಆದರೆ ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚು ಉತ್ಪತ್ತಿಯಾದರೆ ಅಥವಾ ಕಿಡ್ನಿಗಳು ಅದನ್ನು ಸರಿಯಾಗಿ ಹೊರಹಾಕಲು ಸಾಧ್ಯವಾಗದಿದ್ದರೆ ಅದರ ಪ್ರಮಾಣ ಹೆಚ್ಚಾಗಬಹುದು. ತಜ್ಞರ ಪ್ರಕಾರ, ಪ್ಯೂರಿನ್ ಅಧಿಕವಾಗಿರುವ ಆಹಾರ, ಕಡಿಮೆ ನೀರು ಕುಡಿಯುವುದು, ಅತಿಯಾದ ತೂಕ, ಮದ್ಯಪಾನ, ಕೆಲವು ಔಷಧಿಗಳ ಬಳಕೆ ಮತ್ತು ಕಿಡ್ನಿ ಸಮಸ್ಯೆಗಳು ಯೂರಿಕ್ ಆಸಿಡ್ ಹೆಚ್ಚಾಗಲು ಪ್ರಮುಖ ಕಾರಣಗಳಾಗಿವೆ. ಇದು ದೀರ್ಘಕಾಲ ಹೆಚ್ಚಿದರೆ ಸಂಧಿ ನೋವು, ಊತದಂತಹ ಸಮಸ್ಯೆ ಉಂಟಾಗಬಹುದು. ಕೆಲವರಲ್ಲಿ ಕಿಡ್ನಿಯಲ್ಲಿ ಕಲ್ಲು ಅಥವಾ ಮೂತ್ರಪಿಂಡ ಹಾನಿಯ ಅಪಾಯವೂ ಹೆಚ್ಚಾಗಬಹುದು. ಹಾಗಾದರೆ ಈ ಸಮಸ್ಯೆಯನ್ನು ನಿಯಂತ್ರಿಸಲು ಏನು ಮಾಡಬಹುದು, ಯಾವ ರೀತಿಯ ಆಹಾರ ಸೇವನೆ ಮಾಡುವುದು ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ.

ಯೂರಿಕ್ ಆಸಿಡ್ ಎಷ್ಟಿದ್ದರೆ ಹೆಚ್ಚಾಗಿದೆ ಎಂದು ಪರಿಗಣಿಸಲಾಗುತ್ತದೆ?

ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕ ಪ್ರೊಫೆಸರ್ ಡಾ. ಸುಭಾಷ್ ಗಿರಿ ಅವರು ಹೇಳುವ ಪ್ರಕಾರ, ಸಾಮಾನ್ಯವಾಗಿ ಪುರುಷರಲ್ಲಿ 7 mg/dL ಕ್ಕಿಂತ ಹೆಚ್ಚು ಮತ್ತು ಮಹಿಳೆಯರಲ್ಲಿ 6 mg/dL ಕ್ಕಿಂತ ಹೆಚ್ಚು ಯೂರಿಕ್ ಆಸಿಡ್ ಮಟ್ಟ ಕಂಡುಬಂದರೆ ಅದನ್ನು ಹೆಚ್ಚಾಗಿದೆ ಎಂದು ಪರಿಗಣಿಸಲಾಗುತ್ತದೆ. ಆದರೆ ಲ್ಯಾಬ್ ಹಾಗೂ ವ್ಯಕ್ತಿಯ ಆರೋಗ್ಯ ಸ್ಥಿತಿಯ ಪ್ರಕಾರ ಈ ಪ್ರಮಾಣದಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬರಬಹುದು. ಯೂರಿಕ್ ಆಸಿಡ್ ನಿರಂತರವಾಗಿ ಹೆಚ್ಚಿದ್ದರೆ ಕಾಲಿನ ಬೆರಳು, ಮಣಿಕಟ್ಟು ಹಾಗೂ ಮೊಣಕಾಲುಗಳಲ್ಲಿ ತೀವ್ರ ನೋವು ಮತ್ತು ಊತ ಕಾಣಿಸಬಹುದು. ಆದ್ದರಿಂದ ನಿಯಮಿತ ಆರೋಗ್ಯ ತಪಾಸಣೆ ಅಗತ್ಯವಾಗಿದೆ.

ಇದನ್ನೂ ಓದಿ: ಯೂರಿಕ್ ಆಮ್ಲ ಹೆಚ್ಚಾಗದಂತೆ ತಡೆಯಲು ಈ ಆಹಾರಗಳ ಸೇವನೆಯನ್ನು ಕಡಿಮೆ ಮಾಡಿ

ಯೂರಿಕ್ ಆಸಿಡ್ ನಿಯಂತ್ರಣಕ್ಕೆ ಯಾವ ರೀತಿಯ ಆಹಾರ ಸೇವಿಸಬೇಕು?

ಹೆಚ್ಚು ನೀರು ಕುಡಿಯುವುದು ಯೂರಿಕ್ ಆಸಿಡ್ ನಿಯಂತ್ರಣಕ್ಕೆ ಬಹಳ ಮುಖ್ಯವಾಗಿದೆ. ತಾಜಾ ಹಣ್ಣು, ಹಸಿರು ತರಕಾರಿ, ಧಾನ್ಯಗಳು, ಕಡಿಮೆ ಕೊಬ್ಬಿನಾಂಶವಿರುವ ಹಾಲು ಮತ್ತು ಮೊಸರು ಸೇವಿಸುವುದು ಉಪಯುಕ್ತವಾಗಿದೆ. ವಿಟಮಿನ್ ಸಿ ಇರುವ ಕಿತ್ತಳೆ, ನೆಲ್ಲಿಕಾಯಿ ಮುಂತಾದ ಹಣ್ಣುಗಳು ಸಹ ಸಹಾಯಕವಾಗಬಹುದು. ಚೆರಿ, ಸೌತೆಕಾಯಿ, ಸೋರೆಕಾಯಿ ಮುಂತಾದ ಹಗುರ ಆಹಾರ ಪದಾರ್ಥಗಳು ಕೂಡ ಉತ್ತಮವೆಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಯಾವ ಅಭ್ಯಾಸಗಳು ಸಹಾಯಕ?

ತೂಕ ನಿಯಂತ್ರಣದಲ್ಲಿ ಇಡುವುದು, ನಿಯಮಿತ ವ್ಯಾಯಾಮ ಮಾಡುವುದು ಹಾಗೂ ದಿನಪೂರ್ತಿ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಬಹಳ ಮುಖ್ಯ. ಮದ್ಯಪಾನ, ಸಿಹಿ ಪಾನೀಯಗಳು ಮತ್ತು ಪ್ಯೂರಿನ್ ಅಧಿಕವಾಗಿರುವ ಆಹಾರಗಳನ್ನು ಕಡಿಮೆ ಮಾಡಬೇಕು. ವೈದ್ಯರು ನೀಡಿದ ಔಷಧಿಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಡಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

33ನೇ ವಯಸ್ಸಿಗೆ ದುರಂತ ಅಂತ್ಯ ಕಂಡ ಟ್ವಿಶಾ ಶರ್ಮಾ ಜೀವನ; ಸಾವಿಗೆ ಕಾರಣ ಏನು? – Kannada News | Former Miss Pune Twisha Sharma Death Case Husband Family details

ನಟಿ, ಮಾಡೆಲ್ ಟ್ವಿಶಾ ಶರ್ಮಾ (Twisha Sharma) ಅವರ ನಿಧನದ ಸುದ್ದಿ ಭಾರಿ ಸಂಚಲನ ಮೂಡಿಸಿದೆ. 2012ರಲ್ಲಿ ಮಿಸ್ ಪುಣೆ ಆಗಿದ್ದ ಟ್ವಿಶಾ ಅವರು ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು. ಮಾಡೆಲ್ ಆಗಿ ಅವರು ಗುರುತಿಸಿಕೊಂಡಿದ್ದರು. ಕೆಲವೇ ತಿಂಗಳ ಹಿಂದೆ ಹೈಪ್ರೊಫೈಲ್ ಕುಟುಂಬಕ್ಕೆ ಸೊಸೆಯಾಗಿ ಹೋಗಿದ್ದರು. ಆದರೆ ಮದುವೆ ಬಳಿಕ ಅವರ ಜೀವನ ನರಕ ಆಯಿತು. ಗಂಡನ ಜೊತೆ ಜಗಳ ಮಾಡಿಕೊಂಡ ಬಳಿಕ ಅವರ ಸಾವಿನ ಸುದ್ದಿ ಬಂದಿದೆ. ಸಾಯುವುದಕ್ಕೂ ಮುನ್ನ ಪೋಷಕರಿಗೆ ಕರೆ ಮಾಡಿ ತಮ್ಮ ನೋವನ್ನು ಅವರು ತೋಡಿಕೊಂಡಿದ್ದರು. ಟ್ವಿಶಾ ಶರ್ಮಾ ಸಾವಿನ (Twisha Sharma Death) ಸುತ್ತ ಹಲವು ಅನುಮಾನದ ಪ್ರಶ್ನೆಗಳು ಹುಟ್ಟಿಕೊಂಡಿವೆ. ಅವರ ಪತಿ ಸಮರ್ಥ್ ಸಿಂಗ್ ಓರ್ವ ಕ್ರಿಮಿನಲ್ ಲಾಯರ್. ಟ್ವಿಶಾ ಸಾವಿನ ನಂತರ ಸಮರ್ಥ್ ತಲೆ ಮರೆಸಿಕೊಂಡಿದ್ದಾರೆ. ಸಮರ್ಥ್ ತಾಯಿ ಗಿರಿಬಾಲಾ ಸಿಂಗ್ ಅವರು ಜಡ್ಜ್ ಆಗಿದ್ದರು. ಇಂಥ ಹೈಪ್ರೋಫೈಲ್ ಕುಟುಂಬಕ್ಕೆ ಸೊಸೆಯಾಗಿ ಹೋದ ಟ್ವಿಶಾ ಶರ್ಮಾ ಮಸಣ ಸೇರುವಂತಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇಂಡಿಗೋ ವಿಮಾನದೊಳಗೆ 25 ನಿಮಿಷ ಎಸಿ, ಕರೆಂಟ್ ಇಲ್ಲದೆ ಕತ್ತಲಲ್ಲಿ ಒದ್ದಾಡಿದ ಪ್ರಯಾಣಿಕರು

ನವದೆಹಲಿ, ಮೇ 18: ಇಂಡಿಗೋ ವಿಮಾನದಲ್ಲಿ (IndiGo Flight) ಎಸಿ ಮತ್ತು ಕ್ಯಾಬಿನ್ ಲೈಟ್ ಸುಮಾರು 25 ನಿಮಿಷಗಳ ಕಾಲ ಆಫ್ ಆಗಿದ್ದರಿಂದ ವಿಮಾನದ ಪ್ರಯಾಣಿಕರು ಪರದಾಡುವಂತಾಯಿತು. ಇದರಿಂದ ವಿಮಾನದೊಳಗೆ ಪ್ರಯಾಣಿಕರಲ್ಲಿ ಭಾರಿ ಗದ್ದಲ ಉಂಟಾಯಿತು. ಸುಮಾರು 25 ನಿಮಿಷಗಳ ಕಾಲ ಕ್ಯಾಬಿನ್ ದೀಪಗಳು ಸ್ಥಗಿತಗೊಂಡಿದ್ದರಿಂದ, ವಿಮಾನವು ಸಂಪೂರ್ಣ ಕತ್ತಲೆಯಲ್ಲಿತ್ತು. ವಿಮಾನದೊಳಗಿನ ಬಿಸಿಗೆ ಪ್ರಯಾಣಿಕರಿಗೆ ಉಸಿರುಗಟ್ಟಿಸುವಂತಹ ಪರಿಸ್ಥಿತಿ ಉಂಟಾಯಿತು. ವಿಮಾನದೊಳಗಿದ್ದ ಪ್ರಯಾಣಿಕರೊಬ್ಬರು ಈ ದೃಶ್ಯವನ್ನು ಮೊಬೈಲ್​ನಲ್ಲಿ ರೆಕಾರ್ಡ್ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಐಪಿಎಲ್‌ನಲ್ಲಿ ಸಾರ್ವಕಾಲಿಕ ಶ್ರೇಷ್ಠ ದಾಖಲೆ ಮುರಿಯುವ ಸನಿಹದಲ್ಲಿ ಭುವನೇಶ್ವರ್ ಕುಮಾರ್

Source link

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಾತುಕತೆಗೆ ಪಟ್ಟು: ಸಾರಿಗೆ ನೌಕರರ ಸಂಧಾನ ವಿಫಲ – Kannada News | Karnataka Transport Strike Looms: Talks Fail, Workers Demand Meeting with CM Siddaramaiah

ಬೆಂಗಳೂರು, ಮೇ 18: ಮೇ 20ರಂದು ಸಾರಿಗೆ ನೌಕರರ ಮುಷ್ಕರ ವಿಚಾರ ಸಂಬಂಧ ಬೆಂಗಳೂರಿನ (Bengaluru) ಬನ್ನೇರುಘಟ್ಟದ ಕಾರ್ಮಿಕ ಭವನದಲ್ಲಿ ನಡೆದ ಸಂಧಾನ ಸಭೆ ವಿಫಲವಾಗಿದೆ. ಎಷ್ಟೇ ಮನವೊಲಿಕೆಗೆ ಯತ್ನಿಸಿದರೂ ಸಾರಿಗೆ ನೌಕರರು ಪಟ್ಟು ಬಿಟ್ಟಿಲ್ಲ. ನಿಗಮಗಳ ಅಧಿಕಾರಿಗಳ ಮನವಿಗೆ ಜಂಟಿ ಕ್ರಿಯಾ ಸಮಿತಿ ಕೊನೆಗೂ ಒಪ್ಪಿಗೆ ಸೂಚಿಸಿಲ್ಲ. ಮತ್ತೆ ಮೇ 25ಕ್ಕೆ ಸಭೆಗೆ ಬರಲು ಅಧಿಕಾರಿಗಳು ಆಹ್ವಾನ ನೀಡಿದರೂ ನಿಗಮದ ಅಧಿಕಾರಿಗಳ ಮನವಿಗೆ ಒಪ್ಪದ ಸಾರಿಗೆ ಮುಖಂಡರು, ಸಿಎಂ ಜೊತೆಗೆ ಸಭೆಗೆ ಪಟ್ಟು ಹಿಡಿದಿದ್ದಾರೆ. ಸಾರಿಗೆ ಸಚಿವರ ನೇತೃತ್ವದಲ್ಲಿ ನಾಳೆಯೇ ಸಭೆಗೆ ಆಗ್ರಹಿಸಿದ್ದಾರೆ.

‘ಸಭೆ ಮಾಡಿಲ್ಲ ಅಂದ್ರೆ ಮುಷ್ಕರ ಫಿಕ್ಸ್ ‘

ಕಾರ್ಮಿಕ ಇಲಾಖೆ ಆಯುಕ್ತರ ನೇತೃತ್ವದಲ್ಲಿ ಗಂಟೆಗಟ್ಟಲೆ ಮಾತುಕತೆ ನಡೆಸಿದರೂ ಸಭೆ ಯಶಸ್ವಿಯಾಗಿಲ್ಲ. ಯಾವುದೇ ಮನವೊಲಿಕೆಗೂ ಬಗ್ಗದ ನೌಕರರು, ನಾಳೆ ಮಧ್ಯಾಹ್ನದ ಒಳಗಾಗಿ ಸಭೆ ಕರೆದು ಬೇಡಿಕೆ ಈಡೇರಿಕೆ ಸಂಬಂಧ ಮಾತನಾಡುವಂತೆ ಆಗ್ರಹಿಸಿದ್ದಾರೆ. ಈ ವೇಳೆ ಸರ್ಕಾರ ಸದ್ಯದ ಪರಿಸ್ಥಿತಿ ಬಗ್ಗೆ ಸಭೆಯಲ್ಲಿ ಅಧಿಕಾರಿಗಳು ವಿವರಿಸಿದರೂ, ಸಿಎಂ ಜೊತೆ ಸಭೆಗೆ ಸಾರಿಗೆ ನೌಕರರ ಸಂಘಟನೆ ಆಗ್ರಹಿಸಿದೆ. ಅಲ್ಲದೆ ಸಭೆ ಮಾಡಿಲ್ಲ ಅಂದ್ರೆ ಮುಷ್ಕರ ಫಿಕ್ಸ್ ಎಂದು ವಾರ್ನಿಂಗ್ ಕೂಡ ನೀಡಿದೆ.

ಇದನ್ನೂ ಓದಿ: ಮೇ 20ರಂದು ಸಾರಿಗೆ ನೌಕರರ ಮುಷ್ಕರ, ಸಿಬ್ಬಂದಿಗೆ ಖಡಕ್​​ ಎಚ್ಚರಿಕೆ ಕೊಟ್ಟ KSRTC

2012ರಲ್ಲಿ ತಡರಾತ್ರಿ 2 ಗಂಟೆವರೆಗೂ ಮೀಟಿಂಗ್​ ನಡೆದಿದೆ. ಸಾರಿಗೆ ಸಚಿವರ ಅಧ್ಯಕ್ಷತೆಯ ಸಭೆಗೆ ನಾವು ಸಿದ್ಧರಾಗಿದ್ದೇವೆ. ಮುಖ್ಯಮಂತ್ರಿ ಸಭೆ ನಡೆಸಿದ್ರೂ ನಾವು ಸಭೆಗೆ ಬರುತ್ತೇವೆ. ಸರ್ಕಾರದ ಸೂಚನೆಗಾಗಿ ಜಂಟಿ ಕ್ರಿಯಾ ಸಮಿತಿ ಕಾಯುತ್ತಿದೆ. ಕೋರ್ಟ್​​ ಹೇಳಿದರೂ ನಾವು ಅದರ ಬಗ್ಗೆ ಚರ್ಚೆ ಮಾಡ್ತೇವೆ. ಈ ಬಾರಿ ಸರ್ಕಾರ ಏನೇ ಬೆದರಿಕೆ ಹಾಕಿದ್ರೂ ನಾವು ಬಗ್ಗಲ್ಲ. ಎಲ್ಲ ಸಾರಿಗೆ ಮುಖಂಡರು ಒಗ್ಗಟ್ಟಿನಿಂದ ಭಾಗವಹಿಸಬೇಕಿದ್ದು, ಸರ್ಕಾರಕ್ಕೆ ನಾವು ಯಾವುದೇ ಡೆಡ್​ಲೈನ್​ ಕೊಡುವುದಿಲ್ಲ ಎಂದು ಮುಖಂಡರು ತಿಳಿಸಿದ್ದಾರೆ.

ನಾಳೆ ಸುದ್ದಿಗೋಷ್ಠಿ

ಈ ನಡುವೆ ನಾಳೆ (ಮೇ 19) ಬೆಳಿಗ್ಗೆ 11.30ಕ್ಕೆ ಸಂಪಂಗಿರಾಮನಗರದ ಕಚೇರಿಯಲ್ಲಿ ಜಂಟಿ ಕ್ರಿಯಾ ಸಮಿತಿಯ CITU ರಾಜ್ಯ ಸಮಿತಿ ಬಣದಿಂದ ಸುದ್ದಿಗೋಷ್ಠಿ ಕೂಡ ಕರೆಯಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 7:17 pm, Mon, 18 May 26

Source link

ಶಿಕ್ಷಣ ಇಲಾಖೆಯಲ್ಲಿ ಸರ್ಜರಿ: 5 ವರ್ಷ ಮೇಲ್ಪಟ್ಟ ನೌಕರರಿಗೆ ಕಡ್ಡಾಯ ವರ್ಗಾವಣೆ; ಡೆಡ್‌ಲೈನ್ ಸಹ ಫಿಕ್ಸ್! – Kannada News | Major Reshuffle in Karnataka Education Department: Mandatory Transfer for Employees Serving Over 5 Years, Deadline Fixed

ಪ್ರಾತಿನಿಧಿಕ ಚಿತ್ರ (ಎಐ ಚಿತ್ರ)Image Credit source: tv9 kannada

ಧಾರವಾಡ, ಮೇ 18: ರಾಜ್ಯದಲ್ಲಿನ (Karnataka) ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮುಖ್ಯಸ್ಥರುಗಳ ಕಚೇರಿಯಲ್ಲಿ ಬೀಡುಬಿಟ್ಟಿರುವ ನೌಕರರನ್ನು ಬದಲಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ. 5 ವರ್ಷಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದವರ ಪಟ್ಟಿ ಸಿದ್ಧಪಡಿಸಿ ಮೇ 28ರೊಳಗಾಗಿ ಕಡ್ಡಾಯ ವರ್ಗಾವಣೆಗೆ (transfer) ಸೂಚಿಸುವ ಮೂಲಕ ಶಿಕ್ಷಣ ಇಲಾಖೆ ದಿಟ್ಟ ಹೆಜ್ಜೆ ಇಟ್ಟಿದೆ. ಹೀಗಾಗಿ ಧಾರವಾಡ ಆಯುಕ್ತಾಲಯ ವ್ಯಾಪ್ತಿಯ ಬರೋಬ್ಬರಿ 1,026 ಬೋಧಕೇತರ ನೌಕರರಿಗೆ ಈಗ ದೊಡ್ಡ ಶಾಕ್ ಎದುರಾಗಿದೆ.

ಮುಖ್ಯಾಂಶಗಳು

  • ಶಿಕ್ಷಣ ಇಲಾಖೆಯ ಇತಿಹಾಸದಲ್ಲೇ ದಿಟ್ಟ ಹೆಜ್ಜೆ
  • ಧಾರವಾಡ ಆಯುಕ್ತಾಲಯವೊಂದರಲ್ಲೇ 1,026 ನೌಕರರ ವರ್ಗಾವಣೆ ಫಿಕ್ಸ್​​
  • ಸರಕಾರದ ನಿರ್ಧಾರಕ್ಕೆ ವ್ಯಾಪಕ ಪ್ರಶಂಸೆ

ಡಿಡಿಪಿಐ, ಅಪರ ಆಯುಕ್ತರ ಕಚೇರಿ ಸೇರಿದಂತೆ ಇಲಾಖೆ ಮುಖ್ಯಸ್ಥರುಗಳ ಕಚೇರಿಯಲ್ಲಿ 15ಕ್ಕೂ ಹೆಚ್ಚು ವರ್ಷಗಳಿಂದ ಸೂಪರಡೆಂಟ್, ಎಫ್‌ಡಿಎ, ಎಸ್‌ಡಿಎ, ಪ್ಯೂನ್ ಸೇರಿದಂತೆ ಎ,ಬಿ,ಸಿ,ಡಿ ವರ್ಗದ ನೌಕರರು ಸೇವೆ ಸಲ್ಲಿಸುತ್ತಿದ್ದರು. ಇದರಿಂದ ಪಾರದರ್ಶಕ ಆಡಳಿತ, ತ್ವರಿತ ಕೆಲಸಗಳಿಗೆ ಅಡ್ಡಿ ಆಗಿತ್ತು. ಕೆಲವೆಡೆ ಭ್ರಷ್ಟಾಚಾರದ ಆರೋಪಗಳೂ ಕೇಳಿ ಬಂದಿದ್ದವು. ಹೀಗಾಗಿ ಸರಕಾರ ಅಂಥವರನ್ನು ಗುರುತಿಸಿ ಕಡ್ಡಾಯ ವರ್ಗಾವಣೆಗೆ ಅಸ್ತು ಎಂದಿದೆ. ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ವಿ. ರಶ್ಮಿ ಮಹೇಶ್ ಈ ಕುರಿತಂತೆ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಸರ್ಕಾರಿ ನೌಕರರ 2026-27ನೇ ಸಾಲಿನ ವರ್ಗಾವಣೆ ಮಾರ್ಗಸೂಚಿ ಪ್ರಕಟ

ಮುಖ್ಯಸ್ಥರ ಕಚೇರಿಗಳಲ್ಲಿ 5 ವರ್ಷ ಪೂರ್ಣಗೊಳಿಸಿದ ಸಿ.ಡಿ ವೃಂದದ ನೌಕರರನ್ನು 2026-27ರ ಶೈಕ್ಷಣಿಕ ವರ್ಷದ ಆರಂಭದೊಳಗಡೆ ಕೌನ್ಸಿಲಿಂಗ್ ಮೂಲಕ ವರ್ಗಾಯಿಸಬೇಕು. ಈ ಪ್ರಕ್ರಿಯೆ ಇಲಾಖಾ ಮುಖ್ಯಸ್ಥರ ಹಂತದಲ್ಲಿಯೇ ಮಾಡಿ ವರ್ಗಾವಣೆ ಆದೇಶಗಳನ್ನು ಇಲಾಖಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಇನ್ನು 5 ವರ್ಷ ಸೇವೆ ಪೂರ್ಣಗೊಂಡು, ವರ್ಗಾವಣೆಗೊಳಿಸಿದ್ದರೂ ಪುನಃ ಕೇಂದ್ರ ಕಚೇರಿಗೆ ಹಿಂದಿರುಗಿರುವ ಮತ್ತು ಪ್ರಸ್ತುತ 5 ವರ್ಷಗಳ ಸೇವೆ ಪೂರ್ಣಗೊಳಿಸಿದವರ ಕಡ್ಡಾಯ ವರ್ಗಾವಣೆಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರಿಗೆ ಸೂಚಿಸಿದ್ದಾರೆ. ಅದರಂತೆ ಎಲ್ಲ ಮುಖ್ಯಸ್ಥರ ಕಚೇರಿಯಲ್ಲಿ ವರ್ಗಾವಣೆ ಪಟ್ಟಿ ಸಜ್ಜುಗೊಳ್ಳುತ್ತಿದೆ. ರಾಜ್ಯಾದ್ಯಂತ ಸಾವಿರಾರು ನೌಕರರು ಈ ರೀತಿ ದಶಕಗಳಿಂದ ಒಂದೇ ಕಡೆ ಸೇವೆ ಸಲ್ಲಿಸುತ್ತಿರುವ ಅಂದಾಜಿದೆ.

ಧಾರವಾಡ ವಿಭಾಗದಲ್ಲೇ 1,026 ನೌಕರರ ಪತ್ತೆ

ಶಾಲಾ ಶಿಕ್ಷಣ ಇಲಾಖೆ ಧಾರವಾಡ ಅಪರ ಆಯುಕ್ತರ ಕಚೇರಿಯಲ್ಲಿ 1,026 ಬೋಧಕೇತರ ನೌಕರರು 7-15 ವರ್ಷಗಳಿಂದ ಒಂದೆ ಕಡೆ ಕರ್ತವ್ಯ ನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಆಯುಕ್ತಾಲಯ ಪಟ್ಟಿ ಸಿದ್ಧಪಡಿಸಿತ್ತಾದರೂ ಹಲವರು ಅದೇ ಸ್ಥಳದಲ್ಲಿ ಮುಂದುವರಿಯಲು ಪ್ರಭಾವ ಬಳಸುತ್ತಿದ್ದರು. ಆದರೆ ಈ ನೌಕರರು ಸಾರ್ವಜನಿಕರು ಮತ್ತು ಶಿಕ್ಷಕರಿಗೆ ಸ್ಪಂದಿಸುತ್ತಿಲ್ಲ. ಕಡತ ವಿಲೇವಾರಿ ವಿಳಂಬ ಆಗುತ್ತಿದೆ. ಭ್ರಷ್ಟಾಚಾರಗಳೂ ನಡೆಯುತ್ತಿವೆ ಎಂಬ ದೂರುಗಳು ಬಂದಿದ್ದರಿಂದ 2025 ಜುಲೈನಲ್ಲಿ ಸ್ವತಃ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಪರ ಆಯುಕ್ತರಿಗೆ ಪತ್ರ ಬರೆದಿದ್ದರು. ಇಷ್ಟಾದರೂ ಕೆಲವರು ಅಲ್ಲಿಯೇ ಉಳಿದುಕೊಂಡಿದ್ದರು.

ಜನಸಾಮಾನ್ಯರಿಂದ ವ್ಯಾಪಕ ಪ್ರಶಂಸೆ

ಇದೀಗ ಸರಕಾರವೇ ರಾಜ್ಯದ ಎಲ್ಲ ಮುಖ್ಯಸ್ಥರ ಕಚೇರಿಗಳಲ್ಲಿ 5 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದವರ ವರ್ಗಾವಣೆಯನ್ನು ಕಡ್ಡಾಯಗೊಳಿಸಿದೆ. ಸರಕಾರದ ಈ ನಿರ್ಧಾರಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಒಂದೇ ಕಡೆ ಹಲವಾರು ವರ್ಷಗಳ ಕಾಲ ಕೆಲಸ ಮಾಡುವ ಸಿಬ್ಬಂದಿ, ಸಾಕಷ್ಟು ಭ್ರಷ್ಟಾಚಾರ ಮಾಡುತ್ತಾರೆ ಅನ್ನೋದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಹೀಗಾಗಿ ಸರಕಾರದ ನಿರ್ಧಾರವನ್ನು ನಾಗರಿಕರು ಸ್ವಾಗತಿಸಿದ್ಧಾರೆ.

ಇದನ್ನೂ ಓದಿ: ಖಾಲಿ ಹುದ್ದೆಗಳ ಭರ್ತಿಗೆ ಹೋರಾಟಕ್ಕಿಳಿದವರ ಬಂಧನ: ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗೆ ಬಿತ್ತು ಬ್ರೇಕ್

ಇಲಾಖೆ ಮುಖ್ಯಸ್ಥರ ಕಚೇರಿಗಳಲ್ಲಿ 5 ವರ್ಷಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದ ನೌಕರರನ್ನು ಕಡ್ಡಾಯವಾಗಿ ವರ್ಗಾವಣೆಗೊಳಿಸಲು ಸರಕಾರ ಸೂಚನೆ ನೀಡಿದೆ. ಧಾರವಾಡ ಆಯುಕ್ತಾಲಯ ವ್ಯಾಪ್ತಿಯಲ್ಲಿ ಅಂಥವರ ಪಟ್ಟಿಯನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಈಗ ಸರಕಾರದ ನಿರ್ದೇಶನದ ಅನ್ವಯ 20 ದಿನಗಳ ಒಳಗಾಗಿ ವರ್ಗಾವಣೆಗೆ ಕ್ರಮ ಜರುಗಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಒಟ್ಟಿನಲ್ಲಿ ಹಲವಾರು ವರ್ಷಗಳಿಂದ ಒಂದೇ ಸ್ಥಳದಲ್ಲಿ ಕೂತಿದ್ದ ಅನೇಕ ನೌಕರರು ಇದೀಗ ಬೇರೆ ಬೇರೆ ಕಡೆಗೆ ವರ್ಗಾವಣೆಯಾಗುವುದು ಪಕ್ಕಾ ಆಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On – 8:11 pm, Mon, 18 May 26

Source link

ನಾರ್ವೆಯಲ್ಲಿ ಭಾರತೀಯ ವಲಸಿಗರಿಂದ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ – Kannada News | PM Modi reaches Norway Receives Grand Welcome from Indian Community in Oslo

ನವದೆಹಲಿ, ಮೇ 18: ಪ್ರಧಾನಿ ನರೇಂದ್ರ ಮೋದಿ (PM Modi) ಇಂದು ಸ್ವೀಡನ್ ಪ್ರವಾಸ ಮುಗಿಸಿ ನಾರ್ವೆಗೆ ಪ್ರಯಾಣ ಬೆಳೆಸಿದ್ದಾರೆ. ಓಸ್ಲೋದಲ್ಲಿ ಭಾರತೀಯ ಸಮುದಾಯ ಪ್ರಧಾನಿ ಮೋದಿಗೆ ಶಾಸ್ತ್ರೀಯ ನೃತ್ಯ, ಸಂಗೀತದ ಮೂಲಕ ಸ್ವಾಗತ ನೀಡಿತು. ಸತ್ರಿಯಾದಿಂದ ಭರತನಾಟ್ಯದವರೆಗೆ, ಕೂಚಿಪುಡಿಯಿಂದ ಒಡಿಸ್ಸಿಯವರೆಗೆ, ಕಥಕ್‌ನಿಂದ ಮೋಹಿನಿಯಾಟ್ಟಂವರೆಗೆ, ಪ್ರತಿಯೊಂದು ನೃತ್ಯ ಪ್ರಕಾರವನ್ನೂ ನಾರ್ವೆಯಲ್ಲಿ ಪ್ರದರ್ಶಿಸಲಾಯಿತು.

ತಮ್ಮ ಯುರೋಪ್ ರಾಜತಾಂತ್ರಿಕ ಪ್ರವಾಸದ ಭಾಗವಾಗಿ ನರೇಂದ್ರ ಮೋದಿ ಅವರು ಓಸ್ಲೋ ತಲುಪಿದ್ದು, ನಾರ್ವೆಯಲ್ಲಿರುವ ಭಾರತೀಯ ಸಮುದಾಯದಿಂದ ಭವ್ಯ ಸಾಂಸ್ಕೃತಿಕ ಸ್ವಾಗತವನ್ನು ಪಡೆದರು. ಸಾಂಪ್ರದಾಯಿಕ ಭಾರತೀಯ ಉಡುಪುಗಳನ್ನು ಧರಿಸಿದ್ದ ಮಕ್ಕಳು ಸಾಂಸ್ಕೃತಿಕ ನೃತ್ಯಗಳನ್ನು ಪ್ರದರ್ಶಿಸಿ, ಹೂಗುಚ್ಛಗಳನ್ನು ನೀಡಿ ಹಾಗೂ ದೇಶಭಕ್ತಿಯ ಉತ್ಸಾಹದೊಂದಿಗೆ ಪ್ರಧಾನಮಂತ್ರಿಯವರನ್ನು ಬರಮಾಡಿಕೊಂಡರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

TV9 Kannada News Live: ಕರ್ನಾಟಕದಲ್ಲಿ ಮಳೆ, ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು; ಸಾಕಾನೆಗಳ ಕಾದಾಟದಲ್ಲಿ ಮಹಿಳೆ ಸಾವು – Kannada News | TV9 Kannada News Live: Karnataka Rain, Bengaluru Mumbai Vande Bharat Sleeper, Elephant Attack Tragedy

ಸುದ್ದಿ ಸುರಳಿ (ಎಐ ಚಿತ್ರ)Image Credit source: tv9 kannada

ಬೆಂಗಳೂರು, ಮೇ 18: ಕರ್ನಾಟಕದಾದ್ಯಂತ ಮುಂದಿನ ಕೆಲವು ದಿನಗಳ ಕಾಲ ಭಾರೀ ಮಳೆ (Rain) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗುಡುಗು-ಮಿಂಚು ಹಾಗೂ ಬಿರುಗಾಳಿ ಸಹಿತ ವಾತಾವರಣ ಮುಂದುವರಿಯಲಿದೆ. ಹೀಗಾಗಿ ಮೇ 19ರಂದು ರಾಜ್ಯದ (Karnataka) ಕೊಪ್ಪಳ, ಧಾರವಾಡ, ಗದಗ, ವಿಜಯನಗರ, ಹಾವೇರಿ, ದಾವಣಗೆರೆ ಮತ್ತು ಶಿವಮೊಗ್ಗ ಸೇರಿದಂತೆ ಒಟ್ಟು 7 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಮುಖ್ಯಾಂಶಗಳು

  • ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​​
  • ಶೀಘ್ರದಲ್ಲೇ ಬರಲಿದೆ ಬೆಂಗಳೂರು-ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲು
  • ದುಬಾರೆ ಆನೆ ಶಿಬಿರದಲ್ಲಿ ದುರಂತ: ಮಹಿಳಾ ಪ್ರವಾಸಿ ಸಾವು

ಬೀದರ್ ಮತ್ತು ಕಲಬುರಗಿ ಹೊರತುಪಡಿಸಿ ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಬಹುತೇಕ ಜಿಲ್ಲೆಗಳಲ್ಲೂ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನಲ್ಲಿ ಮೇ 21ರವರೆಗೆ ಮಳೆಯ ಅಬ್ಬರ ಇರಲಿದ್ದು, ದಕ್ಷಿಣ ಒಳನಾಡಿನಲ್ಲೂ ಭಾರೀ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ. ಬೆಂಗಳೂರಿನಲ್ಲಿ ಸಂಜೆ ವೇಳೆ ಮಳೆಯಾಗಲಿದ್ದು, ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ.

ಬೆಂಗಳೂರು-ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲು

ಬೆಂಗಳೂರು ಮತ್ತು ಮುಂಬೈ ನಡುವೆ ಶೀಘ್ರದಲ್ಲೇ ಅತ್ಯಾಧುನಿಕ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ ಆರಂಭವಾಗಲಿದೆ. ಪ್ರಸ್ತುತ ಇರುವ ಚೇರ್ ಕಾರ್ ರೈಲುಗಳಿಗಿಂತ ಭಿನ್ನವಾಗಿದ್ದು, ದೂರದ ಊರುಗಳಿಗೆ ಆರಾಮದಾಯಕವಾಗಿ ರಾತ್ರಿ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಗಂಟೆಗೆ 160 ಕಿ.ಮೀ ವೇಗದಲ್ಲಿ ಚಲಿಸುವ ಈ ರೈಲು ಉಭಯ ನಗರಗಳ ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ಉಳಿಸಲಿದೆ.

ಇದನ್ನೂ ಓದಿ: ಬೆಂಗಳೂರು-ಮುಂಬೈ ನಡುವೆ ಶೀಘ್ರದಲ್ಲೇ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ; ಏನಿದರ ವಿಶೇಷತೆ?

ಇದಕ್ಕಾಗಿ ಬೆಂಗಳೂರಿನ ಥಣಿಸಂದ್ರದಲ್ಲಿ 270 ಕೋಟಿ ರೂ. ವೆಚ್ಚದ ವಿಶೇಷ ನಿರ್ವಹಣಾ ಡಿಪೋ ಸಿದ್ಧವಾಗುತ್ತಿದೆ. ಐಷಾರಾಮಿ ಬರ್ತ್‌ಗಳು, ಸೆನ್ಸಾರ್ ಲೈಟಿಂಗ್, ಶಬ್ದ ನಿಯಂತ್ರಣ ತಂತ್ರಜ್ಞಾನ ಹಾಗೂ ಆಧುನಿಕ ಶೌಚಾಲಯಗಳನ್ನು ಹೊಂದಿರುವ ಈ ರೈಲು, ಆರ್ಥಿಕ ಮತ್ತು ಐಟಿ ರಾಜಧಾನಿಗಳ ನಡುವೆ ಸಂಚರಿಸುವ ಉದ್ಯಮಿಗಳು ಹಾಗೂ ಉದ್ಯೋಗಿಗಳಿಗೆ ವರದಾನವಾಗಲಿದೆ.

ದುಬಾರೆ ಆನೆ ಶಿಬಿರದಲ್ಲೇ ಘೋರ ದುರಂತ: ಮದಗಜಗಳ ಕಾದಾಟಕ್ಕೆ ಮಹಿಳೆ ಸಾವು

ಕೊಡಗು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ದುಬಾರೆ ಆನೆ ಶಿಬಿರದಲ್ಲಿ ಸಾಕಾನೆಗಳ ಕಾದಾಟದಲ್ಲಿ ಮಹಿಳಾ ಪ್ರವಾಸಿಯೊಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಶಿಬಿರದಲ್ಲಿದ್ದ ಸಾಕಾನೆಗಳಾದ ಕಂಜನ್​​ ಮತ್ತು ಮಾರ್ತಾಂಡ ಕಾದಾಟ ಮಾಡಿವೆ. ಈ ವೇಳೆ ಆನೆಗಳು ಪ್ರವಾಸಿಗರು ನಿಂತಿದ್ದ ಜಾಗದತ್ತ ನುಗ್ಗಿ ಬಂದಿವೆ. ಇದರಿಂದ ಗಾಬರಿಗೊಂಡ ಪ್ರವಾಸಿಗರು ಪ್ರಾಣಭಯದಿಂದ ಓಡಲು ಯತ್ನಿಸಿದ್ದಾರೆ. ಆದರೆ ದುರದೃಷ್ಟವಶಾತ್​​ ಮಹಿಳೆ ಮೇಲೆ ಮಾರ್ತಾಂಡ ಆನೆ ಬಿದ್ದಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: ದುಬಾರೆ ಶಿಬಿರದಲ್ಲಿ ಸಾಕಾನೆಗಳ ಕಾದಾಟದ ವೇಳೆ ಅವುಗಳ ನಡುವೆ ಸಿಲುಕಿ ಮಹಿಳೆ ಸಾವು

ಘಟನೆಯಲ್ಲಿ ಮತ್ತಷ್ಟು ಜನರಿಗೆ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದುರಂತದಿಂದಾಗಿ ದುಬಾರೆ ಆನೆ ಶಿಬಿರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 7:21 pm, Mon, 18 May 26

Source link

CSK vs SRH: ತವರಿನ ಕೊನೆಯ ಪಂದ್ಯದಲ್ಲೂ ಕಣಕ್ಕಿಳಿಯದ ಧೋನಿ; ನಾಯಕ ರುತುರಾಜ್ ಹೇಳಿದ್ದೇನು? – Kannada News | IPL 2026: MS Dhoni Misses CSK vs SRH; Gaikwad Confirms Injury, Hopes for Return

ಐಪಿಎಲ್ 2026 ರ 63 ನೇ ಪಂದ್ಯದಲ್ಲಿ ಸಿಎಸ್​ಕೆ ಹಾಗೂ ಸನ್​ರೈಸರ್ಸ್​ ಹೈದರಾಬಾದ್ ತಂಡಗಳು ಪರಸ್ಪರ ಮುಖಾಮುಖಿಯಾಗಿವೆ. ಈ ಪಂದ್ಯ ಸಿಎಸ್​ಕೆಯ ತವರು ಮೈದಾನವಾದ ಎಂಎ ಚಿದಂಬರಂ ಮೈದಾನದಲ್ಲಿ ನಡೆಯುತ್ತಿದೆ. ಇದು ತವರಿನಲ್ಲಿ ಸಿಎಸ್​ಕೆ ತಂಡದ ಕೊನೆಯ ಪಂದ್ಯವಾಗಿದೆ. ಈ ಪಂದ್ಯದ ಬಳಿಕ ಈ ಆವೃತ್ತಿಯಲ್ಲಿ ಸಿಎಸ್​ಕೆ ಈ ಮೈದಾನದಲ್ಲಿ ಯಾವುದೇ ಪಂದ್ಯವನ್ನು ಆಡುವುದಿಲ್ಲ. ಹೀಗಾಗಿ ಸಿಎಸ್​ಕೆ ತಂಡದ ಜೀವಾಳ ಎನಿಸಿಕೊಂಡಿರುವ ಮಾಜಿ ನಾಯಕ ಎಂಎಸ್ ಧೋನಿ ಈ ಪಂದ್ಯದಲ್ಲಾದರೂ ಆಡುತ್ತಾರಾ ಎಂದು ಕಾದು ಕುಳಿತಿದ್ದರು. ಆದರೆ ಈ ಪಂದ್ಯದಲ್ಲೂ ಅಭಿಮಾನಿಗಳಿಗೆ ನಿರಾಶೆ ಎದುರಾಗಿದೆ. ಧೋನಿ ತಂಡದೊಂದಿಗೆ ಕ್ರೀಡಾಂಗಣಕ್ಕೆ ಬಂದಿದ್ದರೂ, ಈ ಪಂದ್ಯವನ್ನು ಆಡುತ್ತಿಲ್ಲ.

ವಾಸ್ತವವಾಗಿ ಧೋನಿಗೆ ಇದು ಕೊನೆಯ ಐಪಿಎಲ್ ಸೀಸನ್ ಎಂಬ ಮಾತು ಸೀಸನ್ ಆರಂಭದಿಂದಲೂ ಕೇಳಿಬರುತ್ತಿದೆ. ಹೀಗಾಗಿ ಧೋನಿಗೆ ಅದ್ಧೂರಿ ವಿದಾಯ ಹೇಳಲು ಅಭಿಮಾನಿಗಳು ಎದುರು ನೋಡುತ್ತಿದ್ದರು. ಆದರೆ ಸೀಸನ್ ಆರಂಭಕ್ಕೂ ಮುನ್ನವೇ ಗಾಯಕ್ಕೆ ತುತ್ತಾದ ಧೋನಿ ಇದುವರೆಗೂ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಹೀಗಾಗಿ ಸಿಎಸ್​ಕೆ ತನ್ನ ತವರಿನಲ್ಲಿ ಕೊನೆಯ ಲೀಗ್ ಪಂದ್ಯವನ್ನು ಇಂದು ಆಡುತ್ತಿದ್ದು, ಈ ಪಂದ್ಯದಲ್ಲಿ ಧೋನಿ ಆಡಬಹುದು ಎಂಬ ನಿರೀಕ್ಷೆಗಳಿದ್ದವು. ಆದರೆ ಆ ನಿರೀಕ್ಷೆಗಳೆಲ್ಲ ಹುಸಿಯಾಗಿವೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಬಳಿಕ ಮಾತನಾಡಿದ ಸಿಎಸ್​ಕೆ ನಾಯಕ ರುತುರಾಜ್ ಗಾಯಕ್ವಾಡ್, ಧೋನಿ ತಂಡದೊಂದಿಗೆ ಕ್ರೀಡಾಂಗಣಕ್ಕೆ ಬಂದಿದ್ದಾರೆ. ಆದರೆ ಅವರು ಪ್ಲೇಯಿಂಗ್ 11ನಲ್ಲಿ ಇಲ್ಲ. ಧೋನಿ ಗಾಯದಿಂದ ಇನ್ನು ಚೇತರಿಸಿಕೊಂಡಿಲ್ಲ. ಹೀಗಾಗಿ ಅವರು ಈ ಪಂದ್ಯವನ್ನು ಆಡುತ್ತಿಲ್ಲ. ಆದಾಗ್ಯೂ ಅವರು ಈ ಆವೃತ್ತಿಯ ಕೊನೆಯ ಲೀಗ್ ಪಂದ್ಯದಲ್ಲಿ ಆಡುತ್ತಾರೆ. ನಾವು ಈ ಪಂದ್ಯವನ್ನು ಗೆಲ್ಲುತ್ತೇವೆ ಮತ್ತು ಧೋನಿ ಅಂತಿಮ ಪಂದ್ಯದಲ್ಲಿ ಆಡುತ್ತಾರೆ ಎಂದು ಆಶಿಸುತ್ತೇವೆ ಎಂದಿದ್ದಾರೆ.

ಉಭಯ ತಂಡಗಳು

ಸಿಎಸ್​ಕೆ ತಂಡ: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್ (ನಾಯಕ), ಉರ್ವಿಲ್ ಪಟೇಲ್, ಕಾರ್ತಿಕ್ ಶರ್ಮಾ, ಡೆವಾಲ್ಡ್ ಬ್ರೆವಿಸ್, ಶಿವಂ ದುಬೆ, ಪ್ರಶಾಂತ್ ವೀರ್, ಅಕೇಲ್ ಹೊಸೈನ್, ನೂರ್ ಅಹ್ಮದ್, ಅನ್ಶುಲ್ ಕಾಂಬೋಜ್, ಸ್ಪೆನ್ಸರ್ ಜಾನ್ಸನ್.

ಸನ್​ರೈಸರ್ಸ್ ಹೈದರಾಬಾದ್ ತಂಡ:​ ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಹೆನ್ರಿಚ್ ಕ್ಲಾಸೆನ್, ಸಲೀಲ್ ಅರೋರಾ, ಸ್ಮರಣ್ ರವಿಚಂದ್ರನ್, ನಿತೀಶ್ ಕುಮಾರ್ ರೆಡ್ಡಿ, ಪ್ಯಾಟ್ ಕಮಿನ್ಸ್ (ನಾಯಕ), ಶಿವಂಗ್ ಕುಮಾರ್, ಇಶಾನ್ ಮಾಲಿಂಗ, ಸಾಕಿಬ್ ಹುಸೇನ್, ಪ್ರಫುಲ್ ಹಿಂಗೆ.

Source link