All posts by nagaraj11081993

BCCI Awards: ಕನ್ನಡಿಗ ರಾಹುಲ್ ದ್ರಾವಿಡ್​ಗೆ ಜೀವಮಾನ ಸಾಧನೆ ಪ್ರಶಸ್ತಿ

BCCI Awards: ಕನ್ನಡಿಗ ರಾಹುಲ್ ದ್ರಾವಿಡ್​ಗೆ ಜೀವಮಾನ ಸಾಧನೆ ಪ್ರಶಸ್ತಿ

ಟೀಂ ಇಂಡಿಯಾದ ಮಾಜಿ ನಾಯಕ, ಕೋಚ್ ಹಾಗೂ ಕನ್ನಡಿಗ ರಾಹುಲ್ ದ್ರಾವಿಡ್ ಕರ್ನಲ್ ಸಿ.ಕೆ. ನಾಯುಡು ಜೀವಮಾನ ಸಾಧನೆ ಪ್ರಶಸ್ತಿ ಲಭಿಸಿದೆ. ಆಟಗಾರನಾಗಿ ಆ ಬಳಿಕ ತಂಡದ ನಾಯಕನಾಗಿ ತಂಡವನ್ನು ಅನೇಕ ಸ್ಮರಣೀಯ ಗೆಲುವುಗಳತ್ತ ಮುನ್ನಡೆಸಿದ್ದ ರಾಹುಲ್ ದ್ರಾವಿಡ್, ನಿವೃತ್ತಿಯ ಬಳಿಕ ತಂಡದ ಮುಖ್ಯ ಕೋಚ್ ಆಗಿಯೂ ಸೇವೆ ಸಲ್ಲಿಸಿದ್ದರು. ದ್ರಾವಿಡ್ ಅವರ ಕೋಚಿಂಗ್​ನಡಿಯಲ್ಲಿ ಟೀಂ ಇಂಡಿಯಾ 2024 ರ ಟಿ20 ವಿಶ್ವಕಪ್ ಗೆದ್ದಿತ್ತು. ಹಾಗೆಯೇ ಅವರ ಕೋಚಿಂಗ್​ನಲ್ಲಿ ಸಾಕಷ್ಟು ಪ್ರತಿಭಾವಂತ ಆಟಗಾರರು ಟೀಂ ಇಂಡಿಯಾಕ್ಕೆ ಎಂಟ್ರಿಕೊಟ್ಟಿದ್ದು, ಪ್ರಸ್ತುತ ಕ್ರಿಕೆಟ್ ಲೋಕವನ್ನು ಆಳುತ್ತಿದ್ದಾರೆ. ಹೀಗೆ ತನ್ನ ನಿಸ್ವಾರ್ಥ ಸೇವೆಯಿಂದ ಕ್ರಿಕೆಟ್ ಲೋಕದಲ್ಲಿ ಹೆಸರುವಾಸಿಯಾಗಿರುವ ದ್ರಾವಿಡ್​ಗೆ ಮಾರ್ಚ್ 15 ರಂದು ದೆಹಲಿಯಲ್ಲಿ ನಡೆಯಲಿರುವ ಬಿಸಿಸಿಐ ವಾರ್ಷಿಕ ನಮನ್ ಪ್ರಶಸ್ತಿಗಳ ಸಮಾರಂಭದಲ್ಲಿ ಈ ಗೌರವಕ್ಕೆ ಭಾಜನರಾಗಲಿದ್ದಾರೆ.

ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿ ಮಾಡಿರುವಂತೆ ರಾಹುಲ್ ದ್ರಾವಿಡ್ ಅವರಿಗೆ ಸಿಕೆ ನಾಯುಡು ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗುವುದು. ಟೀಂ ಇಂಡಿಯಾದ ‘ಬಿಗ್ ಫೋರ್’ ಬ್ಯಾಟಿಂಗ್ ಲೈನ್ ಅಪ್​ನ ಭಾಗವಾಗಿದ್ದ ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್​ತಂತಹ ದಿಗ್ಗಜರ ಪಟ್ಟಿಯಲ್ಲಿ ಒಬ್ಬರಾಗಿದ್ದರು. ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್​ನಲ್ಲಿ ಭಾರತ ತಂಡಕ್ಕೆ ದ್ರಾವಿಡ್ ನೀಡಿರುವ ಕೊಡುಗೆ ಅಪಾರ. ಅದರಲ್ಲೂ ಟೆಸ್ಟ್​ ಕ್ರಿಕೆಟ್​ನಲ್ಲಿ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿದ್ದ ದ್ರಾವಿಡ್​ಗೆ ‘ದಿ ವಾಲ್’ ಎಂಬ ಅಡ್ಡಹೆಸರನ್ನು ತಂದುಕೊಟ್ಟಿದೆ.

ಏಕದಿನ ಮಾದರಿಯಲ್ಲಿ 10,000 ಕ್ಕೂ ಹೆಚ್ಚು ರನ್ ಗಳಿಸಿರುವ ದ್ರಾವಿಡ್, ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಪರ ಅತಿ ಹೆಚ್ಚು ರನ್ (13,288) ಗಳಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. 2012 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತರಾದ ದ್ರಾವಿಡ್, ಆ ಬಳಿಕ ವೀಕ್ಷಕ ವಿವರಣೆಗಾರನಾಗಿ ಕಾಣಿಸಿಕೊಂಡರು. ನಂತರ ತರಬೇತುದಾರರಾಗಿ ಎರಡನೇ ಇನ್ನಿಂಗ್ಸ್ ಆರಂಭಿಸಿದ ದ್ರಾವಿಡ್, ತಮ್ಮ ತರಬೇತಿಯಡಿಯಲ್ಲಿ, ಭಾರತ 19 ವರ್ಷದೊಳಗಿನವರ ತಂಡವನ್ನು 2018 ರ ವಿಶ್ವಕಪ್​ನಲ್ಲಿ ಚಾಂಪಿಯನ್ ಮಾಡಿದರು. ಆ ನಂತರ 2021 ರಲ್ಲಿ ರವಿಶಾಸ್ತ್ರಿ ಬದಲಿಗೆ ಭಾರತದ ಹಿರಿಯ ತಂಡದ ಕೋಚ್ ಆಗಿ ನೇಮಕಗೊಂಡಿದ್ದ ದ್ರಾವಿಡ್, ತಮ್ಮ ಕೋಚಿಂಗ್​ನಲ್ಲಿ ತಂಡವನ್ನು 2023 ರ ಏಕದಿನ ವಿಶ್ವಕಪ್ ಫೈನಲ್​ಗೇರಿಸಿದ್ದರು. ಬಳಿಕ 2024 ರಲ್ಲಿ ನಡೆದ ಟಿ20 ವಿಶ್ವಕಪ್​ನಲ್ಲಿ ತಂಡವನ್ನು ಚಾಂಪಿಯನ್ ಕೂಡ ಮಾಡಿದ್ದರು.

Source link

ಹಾರ್ಮುಜ್ ಜಲಸಂಧಿ ದಾಟಿ ಮುಂಬೈ ಬಂದರು ತಲುಪಿದ ಭಾರತದ ಮೊದಲ ತೈಲ ಟ್ಯಾಂಕರ್

ಮುಂಬೈ, ಮಾರ್ಚ್ 12: ಸೌದಿ ಅರೇಬಿಯಾದಿಂದ ಇಂಧನವನ್ನು ಸಾಗಿಸುತ್ತಿದ್ದ ಕಚ್ಚಾ ತೈಲ ಟ್ಯಾಂಕರ್ ಇಂದು ಹಾರ್ಮುಜ್ ಜಲಸಂಧಿಯ (Strait Of Hormuz) ಮೂಲಕ ಸಾಗಿ ಸುರಕ್ಷಿತವಾಗಿ ಮುಂಬೈ ಬಂದರಿಗೆ ಆಗಮಿಸಿದೆ. ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಲೇ ಇರುವುದರಿಂದ ತೈಲ ಟ್ಯಾಂಕರ್ ಸಾಗಣೆಗೆ ಭಾರತ ಇರಾನ್​ನ ಅನುಮತಿ ಕೋರಿತ್ತು. ಶೆನ್ಲಾಂಗ್ ಸೂಯೆಜ್‌ಮ್ಯಾಕ್ಸ್ ಎಂಬ ಈ ಹಡಗನ್ನು ಭಾರತೀಯರೊಬ್ಬರು ಮುನ್ನಡೆಸಿದ್ದಾರೆ. ಸೌದಿ ಅರೇಬಿಯಾದ ಪ್ರಮುಖ ತೈಲ ರಫ್ತು ಟರ್ಮಿನಲ್‌ಗಳಲ್ಲಿ ಒಂದಾದ ರಾಸ್ ತನುರಾದಿಂದ ಲೋಡ್ ಮಾಡಲಾದ ಕಚ್ಚಾ ತೈಲವನ್ನು ಅವರು ಸಾಗಿಸುತ್ತಿದ್ದರು.

ಮುಂಬೈ ಬಂದರಿನ ವಿಡಿಯೋಗಳು ತೈಲ ಟ್ಯಾಂಕರ್ ಬಂದರನ್ನು ಸಮೀಪಿಸುತ್ತಿರುವುದನ್ನು ಮತ್ತು ಡಾಕಿಂಗ್ ಮಾಡುತ್ತಿರುವುದನ್ನು ತೋರಿಸಿವೆ. ಈ ಟ್ಯಾಂಕರ್ ಮಾರ್ಚ್ 1ರಂದು ರಾಸ್ ತನುರಾದಿಂದ ಹೊರಟು ಮುಂಬೈ ತಲುಪುವ ಮೊದಲು ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿತ್ತು. ಈ ಹಡಗು ಕಿರಿದಾದ ಕಡಲ ಕಾರಿಡಾರ್ ಮೂಲಕ ಹಾದುಹೋಗಲು ಇರಾನ್‌ನಿಂದ ಅನುಮತಿ ಪಡೆದಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ಮೂಲಕ ಭಾರತೀಯ ತೈಲ ಸಾಗಣೆಗೆ ಇರಾನ್ ಒಪ್ಪಿಗೆ

ಇರಾನ್ ಇತ್ತೀಚೆಗೆ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳ ಮೇಲೆ ನಿರ್ಬಂಧಗಳನ್ನು ಬಿಗಿಗೊಳಿಸಿದೆ. ಈ ಮಾರ್ಗದಲ್ಲಿ ಸಾಗುವ ಹಡಗುಗಳು ಜಲಮಾರ್ಗವನ್ನು ಪ್ರವೇಶಿಸುವ ಮೊದಲು ಟೆಹ್ರಾನ್‌ನಿಂದ ಪೂರ್ವಾನುಮತಿ ಪಡೆಯಬೇಕಾಗುತ್ತದೆ.

ಹಾರ್ಮುಜ್ ಜಲಸಂಧಿಯು ವಿಶ್ವದ ಅತ್ಯಂತ ನಿರ್ಣಾಯಕ ಇಂಧನ ಹಡಗು ಮಾರ್ಗಗಳಲ್ಲಿ ಒಂದಾಗಿದೆ. ಇದು ಪರ್ಷಿಯನ್ ಕೊಲ್ಲಿಯನ್ನು ಜಾಗತಿಕ ಮಾರುಕಟ್ಟೆಗಳೊಂದಿಗೆ ಸಂಪರ್ಕಿಸುತ್ತದೆ. ಪ್ರತಿದಿನ 20 ಮಿಲಿಯನ್ ಬ್ಯಾರೆಲ್‌ಗಳಿಗೂ ಹೆಚ್ಚು ಕಚ್ಚಾ ತೈಲವು ಈ ಚಾನಲ್ ಮೂಲಕ ಹಾದುಹೋಗುತ್ತದೆ.

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ಇರಾನಿನ ಸಚಿವ ಅಬ್ಬಾಸ್ ಅರಗ್ಚಿ ನಡುವಿನ ಮಾತುಕತೆಯ ನಂತರ ಇರಾನ್ ಭಾರತೀಯ ತೈಲ ಟ್ಯಾಂಕರ್‌ಗಳು ಹಾರ್ಮುಜ್ ಜಲಸಂಧಿಯನ್ನು ಸಾಗಿಸಲು ಅನುಮತಿ ಸಿಕ್ಕಿತ್ತು. ಇದಾದ ನಂತರ ಈ ಹಡಗು ಮುಂಬೈಗೆ ಆಗಮಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IOCL Recruitment 2026: ಇಂಡಿಯನ್ ಆಯಿಲ್ ಕಾರ್ಪೊರೇಷನ್​ನಲ್ಲಿ 405 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಯುವಜನರಿಗೆ ಮಹತ್ವದ ಅವಕಾಶವನ್ನು ತೆರೆದಿದೆ. ಕಂಪನಿಯು ತನ್ನ ಮಾರ್ಕೆಟಿಂಗ್ ವಿಭಾಗದ ಪಶ್ಚಿಮ ಪ್ರದೇಶದಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಡ್ರೈವ್ ಮೂಲಕ ಒಟ್ಟು 405 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಪ್ರತಿಷ್ಠಿತ ಸರ್ಕಾರಿ ಕಂಪನಿಯಲ್ಲಿ ಸೇರುವ ಮೂಲಕ ತರಬೇತಿ ಪಡೆಯಲು ಮತ್ತು ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಬಯಸುವ ಯುವಕರಿಗೆ ಇದು ಒಂದು ಸುವರ್ಣಾವಕಾಶವಾಗಿದೆ.

ಯಾವ ಹುದ್ದೆಗಳಿಗೆ ತರಬೇತಿ ಲಭ್ಯವಿರುತ್ತದೆ?

ಈ ನೇಮಕಾತಿ ಡ್ರೈವ್ ಮೂರು ವಿಭಾಗಗಳಲ್ಲಿ ಹುದ್ದೆಗಳನ್ನು ನೀಡುತ್ತದೆ. ತಂತ್ರಜ್ಞ ಅಪ್ರೆಂಟಿಸ್‌ಶಿಪ್‌ಗಳು ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಇನ್ಸ್ಟ್ರುಮೆಂಟೇಶನ್, ಸಿವಿಲ್ ಮತ್ತು ಎಲೆಕ್ಟ್ರಾನಿಕ್ಸ್‌ನಂತಹ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ತರಬೇತಿಯನ್ನು ನೀಡುತ್ತವೆ. ಟ್ರೇಡ್ ಅಪ್ರೆಂಟಿಸ್‌ಶಿಪ್‌ಗಳಲ್ಲಿ ಫಿಟ್ಟರ್, ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಇನ್ಸ್ಟ್ರುಮೆಂಟ್ ಮೆಕ್ಯಾನಿಕ್ ಮತ್ತು ಮೆಷಿನಿಸ್ಟ್ ಸೇರಿದ್ದಾರೆ.

ಹೆಚ್ಚುವರಿಯಾಗಿ, ಗ್ರಾಜುಯೇಟ್ ಅಪ್ರೆಂಟಿಸ್ ಮತ್ತು ಡೇಟಾ ಎಂಟ್ರಿ ಆಪರೇಟರ್ (DEO) ಹುದ್ದೆಗಳನ್ನು ಘೋಷಿಸಲಾಗಿದ್ದು, ತಾಂತ್ರಿಕೇತರ ಹಿನ್ನೆಲೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ನೇಮಕಾತಿಗಳು ಪ್ರಾಥಮಿಕವಾಗಿ ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಛತ್ತೀಸ್‌ಗಢ, ಗೋವಾ ಮತ್ತು ದಾದ್ರಾ ಮತ್ತು ನಗರ ಹವೇಲಿಯಂತಹ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿವೆ.

ಶೈಕ್ಷಣಿಕ ಅರ್ಹತೆ:

ಈ ಹುದ್ದೆಗಳಿಗೆ ವಿಭಿನ್ನ ಶೈಕ್ಷಣಿಕ ಅರ್ಹತೆಗಳನ್ನು ನಿಗದಿಪಡಿಸಲಾಗಿದೆ. ಟ್ರೇಡ್ ಅಪ್ರೆಂಟಿಸ್‌ಗಳಿಗೆ, ಅಭ್ಯರ್ಥಿಗಳು ಸಂಬಂಧಿತ ಟ್ರೇಡ್‌ನಲ್ಲಿ ಎರಡು ವರ್ಷಗಳ ನಿಯಮಿತ ಐಟಿಐ ಪ್ರಮಾಣಪತ್ರವನ್ನು ಹೊಂದಿರಬೇಕು. ಟೆಕ್ನಿಷಿಯನ್ ಅಪ್ರೆಂಟಿಸ್‌ಗಳಿಗೆ, ಸಂಬಂಧಿತ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಮೂರು ವರ್ಷಗಳ ಡಿಪ್ಲೊಮಾ ಅಗತ್ಯವಿದೆ.

ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗೆ, ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ 50 ಪ್ರತಿಶತ ಅಂಕಗಳೊಂದಿಗೆ (ಮೀಸಲಾತಿ ವಿಭಾಗಗಳಿಗೆ 45 ಪ್ರತಿಶತ) ಪದವಿ ಪಡೆದಿರುವುದು ಕಡ್ಡಾಯವಾಗಿದೆ. ಡೇಟಾ ಎಂಟ್ರಿ ಆಪರೇಟರ್ ಹುದ್ದೆಗೆ, ಅಭ್ಯರ್ಥಿಗಳು 12 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ವಯೋಮಿತಿಗೆ ಸಂಬಂಧಿಸಿದಂತೆ, ಕನಿಷ್ಠ ವಯಸ್ಸು 18 ವರ್ಷಗಳು ಮತ್ತು ಗರಿಷ್ಠ ವಯಸ್ಸು 24 ವರ್ಷಗಳು.

ಅರ್ಜಿ ಸಲ್ಲಿಸುವ ದಿನಾಂಕ:

ಈ ನೇಮಕಾತಿಗಾಗಿ ಆನ್‌ಲೈನ್ ಅರ್ಜಿ ಪ್ರಕ್ರಿಯೆಯು ಮಾರ್ಚ್ 11ರಂದು ಪ್ರಾರಂಭವಾಗಿದೆ. ಆಸಕ್ತ ಅಭ್ಯರ್ಥಿಗಳು ಮಾರ್ಚ್ 26 ರ ಸಂಜೆ 5:00 ಗಂಟೆಯವರೆಗೆ ಅರ್ಜಿ ಸಲ್ಲಿಸಬಹುದು. ಆಯ್ಕೆ ಪ್ರಕ್ರಿಯೆಯು ಸಂಪೂರ್ಣವಾಗಿ ಮೆರಿಟ್ ಆಧಾರಿತವಾಗಿರುತ್ತದೆ.

ಇದನ್ನೂ ಓದಿ: ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವವರಿಗೆ ಸುವರ್ಣಾವಕಾಶ: 10th ಪಾಸಾಗಿದ್ರೆ ಸಾಕು!

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳು ತಮ್ಮ ಐಟಿಐ, ಡಿಪ್ಲೊಮಾ ಅಥವಾ ಪದವಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗೆ ಕರೆಯಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಅಭ್ಯರ್ಥಿಗಳು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್‌ನ ಅಧಿಕೃತ ವೆಬ್‌ಸೈಟ್‌ನ ವೃತ್ತಿ ವಿಭಾಗಕ್ಕೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮೊದಲು, ಅಭ್ಯರ್ಥಿಗಳು ಭಾರತ ಸರ್ಕಾರದ ಅಪ್ರೆಂಟಿಸ್‌ಶಿಪ್ ಪೋರ್ಟಲ್, ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ತರಬೇತಿ ಯೋಜನೆ (NATS) ಅಥವಾ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಪ್ರಚಾರ ಯೋಜನೆ (NAPS) ನಲ್ಲಿ ನೋಂದಾಯಿಸಿಕೊಳ್ಳಬೇಕು. ಆಗ ಮಾತ್ರ ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹರಾಜಿಗೂ ಮುನ್ನ ಶಾಹೀನ್ ಅಫ್ರಿದಿ ಔಟ್: ಆದ್ರೂ ಸಿಗಲಿದೆ 17 ಲಕ್ಷ ರೂ.

ಪಾಕಿಸ್ತಾನದ ಏಕದಿನ ಕ್ರಿಕೆಟ್ ತಂಡದ ನಾಯಕ ಶಾಹೀನ್ ಶಾ ಅಫ್ರಿದಿ, ದಿ ಹಂಡ್ರೆಡ್ (The Hundred) 2026 ಟೂರ್ನಿಯ ಆಟಗಾರರ ಹರಾಜಿನಿಂದ ಹಿಂದೆ ಸರಿದಿದ್ದಾರೆ. ಲಂಡನ್‌ನಲ್ಲಿ ಹರಾಜು ಪ್ರಕ್ರಿಯೆ ಆರಂಭವಾಗಲು ಕೆಲವೇ ಗಂಟೆಗಳ ಮೊದಲು ಅವರು ತಮ್ಮ ಹೆಸರನ್ನು ಹಿಂಪಡೆದಿದ್ದಾರೆ.

ಪಾಕಿಸ್ತಾನ ತಂಡದ ಮುಂಬರುವ ಅಂತಾರಾಷ್ಟ್ರೀಯ ಪಂದ್ಯಗಳಿಗೆ (ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ) ಆದ್ಯತೆ ನೀಡಲು ಅಥವಾ ಗ್ಲೋಬಲ್ ಟಿ20 ಲೀಗ್‌ನಲ್ಲಿ ಭಾಗವಹಿಸಲು ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.

ಇನ್ನು ಶಾಹೀನ್ ಅಫ್ರಿದಿ ಅವರ ಬದಲಿಗೆ ನ್ಯೂಝಿಲೆಂಡ್‌ನ ವೇಗದ ಬೌಲರ್ ಮ್ಯಾಟ್ ಹೆನ್ರಿ ಅವರನ್ನು ‘ವೆಲ್ಷ್ ಫೈರ್’ ತಂಡವು ಆಯ್ಕೆ ಮಾಡಿಕೊಂಡಿದೆ. ಇತ್ತ ಹರಾಜಿನಿಂದ ಹಿಂದೆ ಸರಿದರೂ ಶಾಹೀನ್​ಗೆ ಇಮೇಜ್ ರೈಟ್ಸ್ ರೂಪದಲ್ಲಿ 17 ಲಕ್ಷ ರೂ. (PKR) ಸಿಗಲಿದೆ.

ಏನಿದು ಇಮೇಜ್ ರೈಟ್ಸ್​?

ಇಮೇಜ್ ರೈಟ್ಸ್  ಎಂದರೆ ಒಬ್ಬ ಆಟಗಾರನ ಹೆಸರು, ಫೋಟೋ, ಸಹಿ ಅಥವಾ ಧ್ವನಿಯನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಿಕೊಳ್ಳುವ ಹಕ್ಕು.

ಲೀಗ್ ಅಥವಾ ತಂಡವು ಪಂದ್ಯದ ಪ್ರಚಾರಕ್ಕಾಗಿ, ಜಾಹೀರಾತುಗಳಲ್ಲಿ ಅಥವಾ ಟಿ-ಶರ್ಟ್‌ನಂತಹ ವಸ್ತುಗಳ ಮೇಲೆ ಆಟಗಾರನ ಚಿತ್ರವನ್ನು ಬಳಸುತ್ತದೆ. ಹೀಗೆ ಬಳಸಿದ್ದಕ್ಕಾಗಿ ಆಟಗಾರನಿಗೆ ಪ್ರತ್ಯೇಕವಾಗಿ ಹಣವನ್ನು ನೀಡಲಾಗುತ್ತದೆ.

ಆಟಗಾರನು ಪಂದ್ಯವಾಡಲು ಪಡೆಯುವ ಸಂಭಾವನೆ ಬೇರೆ, ಮತ್ತು ಅವರ ಫೋಟೋ ಅಥವಾ ಹೆಸರನ್ನು ಪ್ರಚಾರಕ್ಕೆ ಬಳಸಿದ್ದಕ್ಕಾಗಿ ನೀಡುವ ಇಮೇಜ್ ರೈಟ್ಸ್ ಹಣವೇ ಬೇರೆ.

ಶಾಹೀನ್ ಶಾ ಅಫ್ರಿದಿ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದರೂ, ಅವರ ಚಿತ್ರವನ್ನು ಈಗಾಗಲೇ ದಿ ಹಂಡ್ರೆಡ್​ ಲೀಗ್‌ನ ಪ್ರಚಾರಕ್ಕಾಗಿ ಅಥವಾ ಮಾರ್ಕೆಟಿಂಗ್‌ಗಾಗಿ ಬಳಸಲಾಗಿದೆ.

ಈ ಕಾರಣಕ್ಕಾಗಿ ಅವರಿಗೆ ಸುಮಾರು £5,000 ಇಮೇಜ್ ರೈಟ್ಸ್ ರೂಪದಲ್ಲಿ ಸಿಗಲಿದೆ ಎಂದು ವರದಿಯಾಗಿದೆ. ಅಂದರೆ ಪಾಕಿಸ್ತಾನ್ ರೂಪಾಯಿ 17 ಲಕ್ಷ ಪಡೆಯಲಿದ್ದಾರೆ.

ಏನಿದು ಹಂಡ್ರೆಡ್ ಲೀಗ್?

ದಿ ಹಂಡ್ರೆಡ್ ಲೀಗ್ ಎಂಬುದು ಟಿ20 ಮಾದರಿಯಲ್ಲೇ ಆಯೋಜಿಸಲಾಗುವ ಚುಟುಕು ಟೂರ್ನಿ. ಆದರೆ ಇಲ್ಲಿ 20 ಓವರ್​ಗಳಿರುವುದಿಲ್ಲ ಎಂಬುದಷ್ಟೇ ವ್ಯತ್ಯಾಸ. ಬದಲಾಗಿ 100 ಎಸೆತಗಳ ಪಂದ್ಯವಾಗಿರಲಿದೆ. ಹೀಗಾಗಿಯೇ ಈ ಟೂರ್ನಿಗೆ ದಿ ಹಂಡ್ರೆಡ್ ಎಂದು ಹೆಸರಿಡಲಾಗಿದೆ.

ಇದನ್ನೂ ಓದಿ: ICC T20I Rankings: ಐಸಿಸಿ ಟಿ20 ಬ್ಯಾಟರ್​ಗಳ ರ‍್ಯಾಂಕಿಂಗ್‌ ಪ್ರಕಟ

ದಿ ಹಂಡ್ರೆಡ್ ಲೀಗ್​ನ ತಂಡಗಳು:

  • ಎಂಐ ಲಂಡನ್ (ಮುಂಬೈ ಇಂಡಿಯನ್ಸ್)
  • ಸನ್​ರೈಸರ್ಸ್ ಲೀಡ್ಸ್ (ಸನ್​ರೈಸರ್ಸ್ ಹೈದರಾಬಾದ್)
  • ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ (ಲಕ್ನೋ ಸೂಪರ್ ಜೈಂಟ್ಸ್​)
  • ಸದರ್ನ್ ಬ್ರೇವ್ (ಡೆಲ್ಲಿ ಕ್ಯಾಪಿಟಲ್ಸ್​)
  • ಬರ್ಮಿಂಗ್​ಹ್ಯಾಮ್ ಫೀನಿಕ್ಸ್
  • ಲಂಡನ್ ಸ್ಪಿರಿಟ್
  • ಟ್ರೆಂಟ್ ರಾಕೆಟ್ಸ್
  • ವೆಲ್ಷ್ ಫೈರ್

 

Source link

ಕಾಡಾನೆ ದಾಳಿಗೆ ಕೊಡಗಲ್ಲಿ ಮತ್ತೊಂದು ಬಲಿ: ದಾರುಣವಾಗಿ ಮೃತಪಟ್ಟ ಕಾಫಿ ಬೆಳೆಗಾರ

ಮಡಿಕೇರಿ, ಮಾರ್ಚ್​​ 12: ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ಅಟ್ಟಹಾಸ ಮುಂದುವರಿದಿದ್ದು, ನಂಜರಾಯಪಟ್ಟಣ ಗ್ರಾಮ ಪಂಚಾಯತ್​​ ಮಾಜಿ ಸದಸ್ಯೆಯ ಸಾವು ಮಾಸುವ ಮುನ್ನವೇ ಮತ್ತೊಂದು ಬಲಿಯಾಗಿದೆ. ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪ ಹೈಸ್ಕೂಲ್ ಪೈಸಾರಿಯಲ್ಲಿ ಕಾಫಿ ತೋಟಕ್ಕೆ ತೆರಳಿದ್ದ ಬೆಳೆಗಾರನ ಮೇಲೆ ಸಲಗ ಅಟ್ಯಾಕ್​​ ಮಾಡಿದ ಪರಿಣಾಮ ಗಣಪತಿ (49) ಮೃತಪಟ್ಟಿದ್ದಾರೆ. ಹಾಡಹಗಲೇ ಕಾಫಿ ತೋಟದಲ್ಲಿ ಕಾಡಾನೆ ಕಾಣಿಸಿಕೊಂಡ ಪರಿಣಾಮ ಸ್ಥಳಕ್ಕೆ ಪೊಲೀಸರು, ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಾಲು ಸಾಲು ಸಾವು

ಕಾಡಾನೆ ದಾಳಿಗೆ ಕೊಡಗು ಜಿಲ್ಲೆಯಲ್ಲಿ ಮೇಲಿಂದ ಮೇಲೆ ಸಾವುಗಳಾಗ್ತಿರೋದು ಜನರ ನಿದ್ದೆಗೆಡಿಸಿದೆ. ಕಾಫಿ ತೋಟ, ರಸ್ತೆ ಬದಿ ಎಲ್ಲೆಂದರಲ್ಲಿ ಇವುಗಳು ಜನರ ಪ್ರಾಣ ಬಲಿ ಪಡೆಯುತ್ತಿರುವ ಕಾರಣ ಜನರು ಮನೆಯಿಂದ ಹೊರ ಬರಲೂ ಹೆದರಬೇಕಾದ ಪರಿಸ್ಥಿತಿ ಬಂದೊದಗಿದೆ. ಕೆಲ ದಿನಗಳ ಹಿಂದಷ್ಟೇ ಮಡಿಕೇರಿ ತಾಲೂಕಿನ ಗುಡ್ಡಗಾಡು ಗ್ರಾಮ ಬೆಟ್ಟತ್ತೂರಿನಲ್ಲಿ ಕಾಡಾನೆ ದಾಳಿಗೆ ಪಿಯುಸಿ ವಿದ್ಯಾರ್ಥಿನಿ ಪೂಜ್ಯ ಎಂಬಾಕೆ ದಾರುಣವಾಗಿ ಬಲಿಯಾಗಿದ್ದಳು. ಸಂಜೆ ತನ್ನ ತಂದೆ-ತಾಯಿ ಜೊತೆ ಬೈಕ್​ನಲ್ಲಿ ಬಂದ ಪೂಜ್ಯ, ಬೈಕ್​ನಿಂದ ಇಳಿದ ಕೆಲವೇ ಸೆಕೆಂಡುಗಳಲ್ಲಿ ಕತ್ತಲಿನಲ್ಲಿ ಹಿಂಬದಿಯಿಂದ ಬಂದ ಆನೆ ಭೀಕರ ದಾಳಿ ನಡೆಸಿತ್ತು. ಸಲಗದ ಕಾಲಡಿ ಸಿಲುಕಿದ್ದ ಪೂಜ್ಯ ಪ್ರಾಣ ಬಿಟ್ಟಿದ್ದರು.

ಇದನ್ನೂ ಓದಿ: 10 ದಿನಗಳ ಅವಧಿಯಲ್ಲಿ ಕಾಡಾನೆ ದಾಳಿಗೆ ಎರಡನೇ ಬಲಿ; ಗ್ರಾ.ಪಂ. ಮಾಜಿ ಸದಸ್ಯೆ ದಾರುಣ ಸಾವು

ಅದಾಗಿ 10 ದಿನಗಳು ಕಳೆಯುವುದರ ಒಳಗೆಯೇ ಕುಶಾಲನಗರ ತಾಲೂಕಿನ ವಾಲ್ನೂರಿನಲ್ಲಿ ನಂಜರಾಯಪಟ್ಟಣ ಗ್ರಾಮ ಪಂಚಾಯತ್​​ ಮಾಜಿ ಸದಸ್ಯೆ ಜಲಜಾಕ್ಷಿ ಎಂಬವರು ಆನೆ ದಾಳಿಯಿಂದ ಮೃತಪಟ್ಟಿದ್ದರು. ಜಲಜಾಕ್ಷಿ ಅವರ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದ ಪರಿಣಾಮ ಗಂಭೀರ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.  ಸಾಲು ಸಾಲು ಸಾವುಗಳ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಕಾಡಾನೆಗಳ ದಾಳಿ ನಿಯಂತ್ರಣಕ್ಕೆ ಆಗ್ರಹ ಕೇಳಿಬಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Gold Rates: ಚಿನ್ನ, ಬೆಳ್ಳಿ ಬೆಲೆಗಳೆರಡೂ ಇಳಿಕೆ; ಇಲ್ಲಿದೆ ದರಪಟ್ಟಿ

ಬೆಂಗಳೂರು, ಮಾರ್ಚ್ 12: ಸತತ ಎರಡು ದಿನ ಏರಿಕೆಯಾಗಿದ್ದ ಚಿನ್ನದ ಬೆಲೆ (Gold Rates) ಇವತ್ತು ಗುರುವಾಗ ಕಡಿಮೆಗೊಂಡಿದೆ. ಗ್ರಾಮ್​ಗೆ 100 ರೂನಷ್ಟು ಬೆಲೆ ಇಳಿಕೆ ಆಗಿದೆ. ಮೊನ್ನೆ 65 ರೂ ಹೆಚ್ಚಿದ್ದ ಇದರ ಬೆಲೆ ನಿನ್ನೆ 95 ರೂ ಹಿಗ್ಗಿತ್ತು. ಇವತ್ತು ಭಾರತದಲ್ಲಿ ಮಾತ್ರವಲ್ಲ, ಹೆಚ್ಚಿನ ದೇಶಗಳಲ್ಲೂ ಚಿನ್ನದ ಬೆಲೆ ತಗ್ಗಿದೆ. ಬೆಳ್ಳಿ ಬೆಲೆ ಒಂದೇ ದಿನ ಗ್ರಾಮ್​​ಗೆ 10 ರೂ ಕಡಿಮೆಗೊಂಡಿದೆ. ಮೊನ್ನೆ ಇದರ ಬೆಲೆ 10 ರೂ ಹೆಚ್ಚಿತ್ತು. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,48,700 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,62,220 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 28,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,48,700 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 28,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 29,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮಾರ್ಚ್ 12ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,222 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,870 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,167 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 280 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,222 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,870 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 280 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,870 ರೂ
  • ಚೆನ್ನೈ: 14,970 ರೂ
  • ಮುಂಬೈ: 14,870 ರೂ
  • ದೆಹಲಿ: 14,885 ರೂ
  • ಕೋಲ್ಕತಾ: 14,870 ರೂ
  • ಕೇರಳ: 14,870 ರೂ
  • ಅಹ್ಮದಾಬಾದ್: 14,875 ರೂ
  • ಜೈಪುರ್: 14,885 ರೂ
  • ಲಕ್ನೋ: 14,885 ರೂ
  • ಭುವನೇಶ್ವರ್: 14,870 ರೂ

ಇದನ್ನೂ ಓದಿ: ಗಡಿರಾಷ್ಟ್ರಗಳಿಗೆ ಇದ್ದ ಎಫ್​ಡಿಐ ಬಿಗಿನಿಯಮ ಸಡಿಲಿಸಿದ ಭಾರತ; ಇನ್ಮುಂದೆ ಚೀನೀ ಹೂಡಿಕೆ ಒಳಹರಿವು ಸರಾಗ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 620 ರಿಂಗಿಟ್ (14,568 ರುಪಾಯಿ)
  • ದುಬೈ: 574 ಡಿರಾಮ್ (14,432 ರುಪಾಯಿ)
  • ಅಮೆರಿಕ: 161.50 ಡಾಲರ್ (14,914 ರುಪಾಯಿ)
  • ಸಿಂಗಾಪುರ: 204.90 ಸಿಂಗಾಪುರ್ ಡಾಲರ್ (14,835 ರುಪಾಯಿ)
  • ಕತಾರ್: 573 ಕತಾರಿ ರಿಯಾಲ್ (14,514 ರೂ)
  • ಸೌದಿ ಅರೇಬಿಯಾ: 586 ಸೌದಿ ರಿಯಾಲ್ (14,422 ರುಪಾಯಿ)
  • ಓಮನ್: 60.90 ಒಮಾನಿ ರಿಯಾಲ್ (14,609 ರುಪಾಯಿ)
  • ಕುವೇತ್: 47.05 ಕುವೇತಿ ದಿನಾರ್ (14,193 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 280 ರೂ
  • ಚೆನ್ನೈ: 290 ರೂ
  • ಮುಂಬೈ: 280 ರೂ
  • ದೆಹಲಿ: 280 ರೂ
  • ಕೋಲ್ಕತಾ: 280 ರೂ
  • ಕೇರಳ: 290 ರೂ
  • ಅಹ್ಮದಾಬಾದ್: 280 ರೂ
  • ಜೈಪುರ್: 280 ರೂ
  • ಲಕ್ನೋ: 280 ರೂ
  • ಭುವನೇಶ್ವರ್: 290 ರೂ
  • ಪುಣೆ: 280

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬಾಲಿವುಡ್ ಅನ್ನು ಕೊಳಕಿಗೆ ಹೋಲಿಸಿದ ಪ್ರಿಯಾಂಕಾ ಚೋಪ್ರಾ: ಹೇಳಿದ್ದೇನು?

ಪ್ರಿಯಾಂಕಾ ಚೋಪ್ರಾ (Priyanka Chopra) ಈಗ ಹಾಲಿವುಡ್ ನಟಿ. ಬಾಲಿವುಡ್​​ನಲ್ಲಿ ಹಲವು ವರ್ಷ ಸ್ಟಾರ್ ನಟಿಯಾಗಿ ಮೆರೆದ ಬಳಿಕ 2015 ರ ಸುಮಾರಿಗೆ ಅವರು ಹಾಲಿವುಡ್​​ಗೆ ಎಂಟ್ರಿ ನೀಡಿದರು. ಆಗಿನಿಂದ ಅವರು ಬಾಲಿವುಡ್ ಜೊತೆಗೆ ಸಂಪರ್ಕನ್ನೇ ಕಡಿದುಕೊಂಡರು. 2019 ರಲ್ಲಿ ಒಂದು ಹಿಂದಿ ಸಿನಿಮಾನಲ್ಲಿ ನಟಿಸಿದ್ದು ಬಿಟ್ಟರೆ ಅದಾದ ಬಳಿಕ ಅವರು ಯಾವೊಂದು ಹಿಂದಿ ಸಿನಿಮಾನಲ್ಲಿಯೂ ನಟಿಸಿಲ್ಲ. ಇದೀಗ ಅವರು ತೆಲುಗಿನ ‘ವಾರಣಾಸಿ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಅವರ ನಟನೆಯ ‘ದಿ ಬ್ಲಫ್’ ಹೆಸರಿನ ಸಿನಿಮಾ ಬಿಡುಗಡೆ ಆಯ್ತು. ಸಿನಿಮಾ ಒಳ್ಳೆಯ ಪ್ರತಿಕ್ರಿಯೆ ಗಳಿಸಿಕೊಂಡಿದೆ. ಸಿನಿಮಾ ಪ್ರಚಾರಕ್ಕಾಗಿ ಸಂದರ್ಶನಗಳನ್ನು ನೀಡುತ್ತಿರುವ ನಟಿ ಪ್ರಿಯಾಂಕಾ, ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಬಾಲಿವುಡ್ ಅನ್ನು ಹೊಲಸಿಗೆ ಹೋಲಿಸಿದ್ದಾರೆ.

ಖ್ಯಾತ ಪಾಡ್​​ಕಾಸ್ಟರ್ ಜೋ ರೋಗನ್ ಅವರ ಪಾಡ್​​ಕಾಸ್ಟ್​​ನಲ್ಲಿ ಭಾಗಿ ಆಗಿದ್ದ ಪ್ರಿಯಾಂಕಾ ಚೋಪ್ರಾ ಪಾಡ್​​ಕಾಸ್ಟ್​​ನಲ್ಲಿ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ, ತಮ್ಮ ಕುಟುಂಬ, ಭಾರತದ ಇತಿಹಾಸ ಇನ್ನೂ ಹಲವು ವಿಷಯಗಳ ಬಗ್ಗೆ ಪ್ರಿಯಾಂಕಾ ಮಾತನಾಡಿದ್ದು, ಇದೇ ಸಂದರ್ಶನದಲ್ಲಿ ಅವರು ಬಾಲಿವುಡ್ ಬಗ್ಗೆಯೂ ಮಾತನಾಡಿದ್ದು, ಬಾಲಿವುಡ್​ನಿಂದ ತಾವು ಹೊರಗೆ ಬಂದಿದ್ದೇಕೆ ಎಂಬ ಬಗ್ಗೆಯೂ ಹೇಳಿದ್ದಾರೆ. ಈ ಸಂದರ್ಭದಲ್ಲಿ ಅವರು ಬಾಲಿವುಡ್ ಅನ್ನು ಕೊಳಕಿಗೆ ಹೋಲಿಸಿದ್ದಾರೆ.

ಬಾಲಿವುಡ್​​ನಲ್ಲಿ ತಮ್ಮನ್ನು ಕಾರ್ನರ್ ಮಾಡಲಾಗಿತ್ತು ಎಂದಿರುವ ಪ್ರಿಯಾಂಕಾ ಚೋಪ್ರಾ, ‘ತಾವು “ಕೆಟ್ಟ ಪರಿಸ್ಥಿತಿಯಲ್ಲಿ ಅಥವಾ ಕೊಳಕಿನಲ್ಲಿ ಉಳಿಯಲು ಇಷ್ಟಪಡುವುದಿಲ್ಲ, ಅಲ್ಲಿಯೇ ಉಳಿದರೆ ಆ ಕೆಟ್ಟ ವಾಸನೆ ನಿಮಗೆ ಅಭ್ಯಾಸ ಆಗಿಬಿಡುತ್ತದೆ, ಹಾಗಾಗಿ ನಾನು ಅಲ್ಲಿಂದ ಹೊರಗೆ ಬಂದೆ, ಹೊಸ ಅವಕಾಶಗಳನ್ನು ಹುಡುಕಿಕೊಂಡೆ’ ಎಂದು ಪ್ರಿಯಾಂಕಾ ಹೇಳಿದ್ದಾರೆ.

ಇದನ್ನೂ ಓದಿ:ಪತ್ನಿ ಪ್ರಿಯಾಂಕಾ ಚೋಪ್ರಾಗಾಗಿ ಡ್ರಿಂಕ್ಸ್ ಮಾಡಿಕೊಟ್ಟ ನಿಕ್ ಜೋನಸ್: ವಿಡಿಯೋ

‘ಭಾರತದಲ್ಲಿ ಕೆಲಸ ಮಾಡುವಾಗ ತಮಗೆ ಮಿತಿಗಳಿರುವಂತೆ ಭಾಸವಾಯಿತು. ಮಿಂಡಿ ಕಾಲಿಂಗ್ ಮತ್ತು ಐಶ್ವರ್ಯಾ ರೈ ಅವರನ್ನು ಹೊರತುಪಡಿಸಿ ಹಾಲಿವುಡ್‌ನಲ್ಲಿ ಭಾರತೀಯ ನಟರ ಪ್ರಾತಿನಿಧ್ಯ ಕಡಿಮೆ ಇರುವುದನ್ನು ಗಮನಿಸಿ, ಅಲ್ಲಿ ಪ್ರಯತ್ನಿಸಲು ನಿರ್ಧರಿಸಿದೆ. ಬಾಲಿವುಡ್​​ನಲ್ಲಿ ಯಾವುದೂ ಸುಲಭವಲ್ಲ. ನಾವೆಲ್ಲರೂ ಎದುರಿಸಬೇಕಾದ ಹೋರಾಟಗಳಿರುತ್ತವೆ. ನಾನು ಕೆಟ್ಟ ಪರಿಸ್ಥಿತಿಯಲ್ಲೇ ಇರಲು ಬಯಸುವವಳಲ್ಲ, ಏಕೆಂದರೆ ಆಗ ನಮಗೆ ಆ ಕೆಟ್ಟ ವಾಸನೆಯೇ ಅಭ್ಯಾಸವಾಗಿಬಿಡುತ್ತದೆ. ಜೀವನ ಕಠಿಣವಾದಾಗ ನಾವು ಚೇತರಿಸಿಕೊಳ್ಳುವ ಶಕ್ತಿ ಹೊಂದಿರಬೇಕು’ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

‘ಹಾಲಿವುಡ್​ಗೆ ಬಂದಾಗ ತಮಗೆ ಯಾವುದೇ ಯೋಜನೆ ಅಥವಾ ಸ್ಪಷ್ಟ ಹಾದಿ ಇರಲಿಲ್ಲ. ಆದರೆ ತಮ್ಮ ಕಠಿಣ ಪರಿಶ್ರಮ ಮತ್ತು ವೃತ್ತಿಪರತೆಯ ಮೇಲೆ ತಮಗೆ ನಂಬಿಕೆ ಇತ್ತು ಎಂದು ಅವರು ಹೇಳಿದ್ದಾರೆ. 2015 ರಲ್ಲಿ ‘ಕ್ವಾಂಟಿಕೊ’ ಟಿವಿ ಸೀರೀಸ್​​ನಲ್ಲಿ ಪ್ರಿಯಾಂಕಾ ನಟಿಸಿದರು. ಆರಂಭದಲ್ಲಿ ಟಿವಿ ಸರಣಿ, ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದ ಪ್ರಿಯಾಂಕಾ, ಈಗ ಹಾಲಿವುಡ್​ನ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ‘ಬೇವಾಚ್’, ‘ಮ್ಯಾಟ್ರಿಕ್ಸ್: ರೆಸಲ್ಯೂಶನ್ಸ್’, ‘ಸಿಟಾಡೆಲ್’ ನಂತಹ ದೊಡ್ಡ ಯೋಜನೆಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಅವರ ‘ದಿ ಬ್ಲಫ್’ ಆಕ್ಷನ್ ಸಿನಿಮಾ ಸಹ ಬಿಡುಗಡೆ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸಿಲಿಂಡರ್ ಶಾರ್ಟೇಜ್; ರಾಜ್​​ಕುಮಾರ್ ನೆಚ್ಚಿನ ಹೋಟೆಲ್​​ಗೆ ಬೀಗ

ರಾಜ್​​ಕುಮಾರ್ ಅವರು ಆಹಾರ ಪ್ರಿಯರು. ಅದರಲ್ಲೂ ನಾನ್ ವೆಜ್ ಪ್ರಿಯರು. ವಿಶೇಷ ಸ್ಥಗಳಿಗೆ ತೆರಳಿ ಅವರು ಊಟ ಮಾಡುತ್ತಿದ್ದರು. ಅದರಲ್ಲಿ ಮೈಸೂರಿನ ಲಕ್ಷ್ಮಣ್ ಮೆಸ್ ಕೂಡ ಒಂದು. ಈ ಹೋಟೆಲ್​ ನಾನ್ ವೆಜ್​​​ಗೆ ಫೇಮಸ್ ಆದ ಸ್ಥಳ. ಈಗ ಕಮರ್ಷಿಯಲ್ ಗ್ಯಾಸ್ ಶಾರ್ಟೇಜ್ ಕಾರಣಕ್ಕೆ ಮೈಸೂರಿನ ಈ ಹೋಟೆಲ್​​ಗೆ ಬೀಗ ಬಿದ್ದಿದೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಧ್ಯಪ್ರಾಚ್ಯ ಯುದ್ಧದಿಂದ ಯಾದಗಿರಿಯ ಅಕ್ಕಿ ಉದ್ಯಮಕ್ಕೂ ಹೊಡೆತ!

ಯಾದಗಿರಿ, ಮಾರ್ಚ್​ 12: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದ ಯಾದಗಿರಿ ಜಿಲ್ಲೆಯ ಅಕ್ಕಿ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಗಲ್ಫ್ ರಾಷ್ಟ್ರಗಳಿಗೆ ಯಾದಗಿರಿಯಿಂದ ರಫ್ತಾಗುತ್ತಿದ್ದ ಅಕ್ಕಿ ಸಂಪೂರ್ಣ ಸ್ಥಗಿತಗೊಂಡಿದ್ದು, ಜಿಲ್ಲೆಯ ಅನೇಕ ರೈಸ್ ಮಿಲ್‌ಗಳು ಬಂದ್ ಆಗಿವೆ.ಯಾದಗಿರಿಯ ಸೋನಾ ಮಸೂರಿ ಅಕ್ಕಿಗೆ ಸೌದಿ, ದುಬೈ, ಕುವೈತ್, ಕತಾರ್ ಸೇರಿದಂತೆ ಅನೇಕ ಗಲ್ಫ್ ರಾಷ್ಟ್ರಗಳಲ್ಲಿ ಭಾರಿ ಬೇಡಿಕೆಯಿತ್ತು. ನಿತ್ಯ 3 ಸಾವಿರಕ್ಕೂ ಹೆಚ್ಚು ಕ್ವಿಂಟಾಲ್ ಅಕ್ಕಿ ಇಲ್ಲಿಂದ ರಫ್ತಾಗುತ್ತಿತ್ತು. ಆದರೆ ಇರಾನ್ ಮತ್ತು ಇಸ್ರೇಲ್ ನಡುವಿನ ಭೀಕರ ಯುದ್ಧದಿಂದಾಗಿ ಗಲ್ಫ್ ರಾಷ್ಟ್ರಗಳ ಮೇಲೂ ಪ್ರಭಾವ ಬೀರಿದೆ. ಇದರಿಂದ ಅಕ್ಕಿ ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಲಕ್ಷ್ಮಿ ರೈಸ್ ಮಿಲ್ ಮಾಲೀಕ ವಿಜಯ್ ಹೇಳಿದ್ದಾರೆ. ಅವರ ಪ್ರಕಾರ, ಕಳೆದ ಎರಡು ವಾರಗಳಿಂದ ಅಕ್ಕಿ ರಫ್ತು ಸ್ಥಗಿತಗೊಂಡಿದೆ. ಮುಂಬೈ, ಬೆಂಗಳೂರು, ಹೈದರಾಬಾದ್ ಮಹಾನಗರಗಳಲ್ಲೂ ಬೇಡಿಕೆ ಕಡಿಮೆಯಾಗಿದ್ದು, ಮಿಲ್ ಮಾಲೀಕರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಗೆ ಉಸಿರುಕೊಟ್ಟ ರಸ್ತೆಗುಂಡಿ

ಲಕ್ನೋ, ಮಾರ್ಚ್​ 12:ರಸ್ತೆಗುಂಡಿ(Pothole)ಗಳು ಜೀವವನ್ನು ತೆಗೆದಿರುವ ನಿದರ್ಶನಗಳೇ ಹೆಚ್ಚು, ಆದರೆ ಇಲ್ಲಾಗಿದ್ದೇ ಬೇರೆ ಹೋದ ಜೀವ ರಸ್ತೆಗುಂಡಿಯಿಂದ ಮತ್ತೆ ಬಂದಿದೆ. ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ ರಸ್ತೆಗುಂಡಿಯಿಂದಾಗಿ ಮತ್ತೆ ಉಸಿರಾಡಿದ್ದಾರೆ. ಈ ಘಟನೆ ಬರೇಲಿ-ಹರಿದ್ವಾರ ರಾಷ್ಟ್ರೀಯ ಹೆದ್ದಾರಿ-74ರಲ್ಲಿ ನಡೆದಿದೆ. ಫೆಬ್ರವರಿ 22ರಂದು ಮನೆಯಲ್ಲಿ ಏನೋ ಕೆಲಸ ಮಾಡುತ್ತಿದ್ದಾಗ ವಿನೀತಾ ಶುಕ್ಲಾ ಎಂಬುವವರು ಹಠಾತ್ತನೆ ಮೂರ್ಛೆ ಹೋಗಿದ್ದರು.

ಅವರ ಮೆದುಳು ನಿಷ್​ಕ್ರಿಯಗೊಂಡಿದೆ ಬದುಕುಳಿಯುವ ಯಾವುದೇ ಭರವಸೆ ಇಲ್ಲ ಎಂದು ಆಸ್ಪತ್ರೆ ವೈದ್ಯರು ಹೇಳಿದ ಬಳಿಕ ಫೆಬ್ರವರಿ 24ರಂದು ಆಕೆಯ ಅಂತ್ಯಕ್ರಿಯೆಗಾಗಿ ಅವರನ್ನು ಮನೆಗೆ ಕರೆತರಲಾಗುತ್ತಿತ್ತು. ಅವರು ಉಸಿರಾಡುತ್ತಿರಲಿಲ್ಲ, ಹೃದಯಬಡಿತವೂ ಕಡಿಮೆಯಾಗುತ್ತಿತ್ತು. ವಿನೀತಾ ಕುಟುಂಬವು ಅವರ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುತ್ತಿತ್ತು ಎಂದು ಅವರ ಪತಿ ಹೇಳಿದ್ದಾರೆ.

ಆಘಾತ ಮತ್ತು ಹತಾಶೆಯ ನಡುವೆ, ವಿನೀತಾಳನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಡಿಕ್ಕಿ ಹೊಡೆದಾಗ ಭರವಸೆಯ ಅಲೆಯೊಂದು ಹೊರಹೊಮ್ಮಿತ್ತು. ಏಕೆಂದರೆ ಗುಂಡಿಯಿಂದ ಉಂಟಾದ ದೊಡ್ಡ ಆಘಾತದ ನಂತರ ಅವರು ಉಸಿರಾಟ ಸಾಮಾನ್ಯ ಸ್ಥಿತಿಗೆ ಬಂದಿತ್ತು.

ಮತ್ತಷ್ಟು ಓದಿ: ವೈಜ್ಞಾನಿಕವಾಗಿ ರಸ್ತೆಗುಂಡಿ ಮುಚ್ಚಬೇಕು, ಇಲ್ಲದಿದ್ರೆ ಕಠಿಣ ಕ್ರಮವೆಂದ ಸಿಎಂ ಸಿದ್ದರಾಮಯ್ಯ

ವೈದ್ಯರು ಆರಂಭದಲ್ಲಿ ರೋಗಿಯನ್ನು ದಾಖಲಿಸಲು ಹಿಂಜರಿದರು, ಆದರೆ ಕುಟುಂಬದವರು ಒತ್ತಾಯಿಸಿದ ನಂತರ ಅಂತಿಮವಾಗಿ ಅವರನ್ನು ಪರೀಕ್ಷಿಸಿದ್ದರು. ಆಂಬ್ಯುಲೆನ್ಸ್ ಹಫೀಜ್‌ಗಂಜ್ ತಲುಪುತ್ತಿದ್ದಂತೆ, ಅದು ದೊಡ್ಡ ಗುಂಡಿಗೆ ಡಿಕ್ಕಿ ಹೊಡೆದು ಅಡ್ಡಾದಿಡ್ಡಿಯಾಗಿ ಚಲಿಸಲಾರಂಭಿಸಿತ್ತು. ಮೊದಲು ಹೃದಯ ಬಡಿತ ಕಡಿಮೆಯಾಗುತ್ತಿತ್ತು, ಆದರೆ ಈ ಘಟನೆ ನಂತರ ಅವರು ಸಾಮಾನ್ಯವಾಗಿ ಉಸಿರಾಡಲು ಪ್ರಾರಂಭಿಸಿದರು ಎಂದು ವಿವರಿಸಿದ್ದಾರೆ.

ಅವರು ತಮ್ಮ ಕುಟುಂಬಕ್ಕೆ ಅಂತ್ಯಕ್ರಿಯೆಯ ಎಲ್ಲಾ ಸಿದ್ಧತೆಗಳನ್ನು ನಿಲ್ಲಿಸುವಂತೆ ಕೇಳಿಕೊಂಡರು, ವಿನೀತಾಳನ್ನು ಪಿಲಿಭಿಟ್‌ನ ನ್ಯೂರೋಸಿಟಿ ಆಸ್ಪತ್ರೆಗೆ ಕರೆದೊಯ್ದರು ಮತ್ತು ಒಂದು ದಿನದ ನಂತರ ಅವರು ಮನೆಗೆ ಮರಳಿದ್ದಾರೆ. ಸುಮಾರು 13 ದಿನಗಳ ಚಿಕಿತ್ಸೆಯ ನಂತರ, ವಿನಿತಾ ಸಂಪೂರ್ಣವಾಗಿ ಚೇತರಿಸಿಕೊಂಡರು ಮತ್ತು ಈಗ ಸಾಮಾನ್ಯ ಜೀವನವನ್ನು ನಡೆಸುತ್ತಿದ್ದಾರೆ.

ಕುಟುಂಬವು ಈ ಘಟನೆಯನ್ನು ಒಂದು ಪವಾಡವೆಂದು ಪರಿಗಣಿಸಿದರೂ, ವೈದ್ಯಕೀಯ ತಂಡದ ಪ್ರಯತ್ನಗಳು ಮತ್ತು ರೋಗನಿರ್ಣಯವು ನಗರದಾದ್ಯಂತ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದೆ.

ಆಕೆಗೆ ಚಿಕಿತ್ಸೆ ನೀಡಿದ ನರಶಸ್ತ್ರಚಿಕಿತ್ಸಕ ಡಾ. ರಾಕೇಶ್ ಸಿಂಗ್ ಮಾತನಾಡಿ, ರೋಗಿಗೆ ಹಾವು ಕಡಿದಿರಬಹುದು ಎನ್ನುವ ಅನುಮಾನ ಮೂಡಿತ್ತು ಆ ಸಾಧ್ಯತೆಯ ಆಧಾರದ ಮೇಲೆ, ವೈದ್ಯರು ಇತರ ಅಗತ್ಯ ಚಿಕಿತ್ಸೆಗಳೊಂದಿಗೆ ವಿಷ ನಿರೋಧಕ ಚುಚ್ಚುಮದ್ದನ್ನು ನೀಡಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗ

Source link