All posts by nagaraj11081993

6 ತಿಂಗಳ ಸ್ಕೆಚ್​​, ಪಕ್ಕಾ ಪ್ಲ್ಯಾನ್​​ ಮಾಡಿ ಕಳ್ಳತನ: 1.8 ಕೆಜಿ ಬಂಗಾರ, ಡೈಮಂಡ್​​ ಕದ್ದವ ಅರೆಸ್ಟ್​

6 ತಿಂಗಳ ಸ್ಕೆಚ್​​, ಪಕ್ಕಾ ಪ್ಲ್ಯಾನ್​​ ಮಾಡಿ ಕಳ್ಳತನ: 1.8 ಕೆಜಿ  ಬಂಗಾರ, ಡೈಮಂಡ್​​ ಕದ್ದವ ಅರೆಸ್ಟ್​

ಬೆಂಗಳೂರು, ಮಾರ್ಚ್​ 10: ಖತರ್ನಾಕ್​​ ಪ್ಲ್ಯಾನ್​​ ಮಾಡಿ ಮನೆಯೊಂದರಿಂದ ಬರೋಬ್ಬರಿ ಮೂರು ಕೋಟಿ ಬೆಲೆ ಬಾಳುವ ಚಿನ್ನಾಭರಣ ದೋಚಿದ್ದ ಆರೋಪಿಯನ್ನು ಬೆಂಗಳೂರಿನ ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ವೇಲಾರಾಮ್  ಆರೋಪಿಯಾಗಿದ್ದು, ಈತ ನಿರ್ಮಾಣ ಹಂತದ ಕಟ್ಟಡಗಳಲ್ಲಿ ಟೈಲ್ಸ್ ಕಾಮಗಾರಿ ಮಡುತ್ತಿದ್ದ ಎನ್ನಲಾಗಿದೆ. ಬರೋಬ್ಬರಿ 6 ತಿಂಗಳು ಸ್ಕೆಚ್​​ ಹಾಕಿ ಆರೋಪಿ ಮನೆ ದೋಚಿರುವ ವಿಚಾರವೂ ತನಿಖೆ ವೇಳೆ ಬಯಲಾಗಿದೆ.

ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ಜ್ಯುಡಿಷಿಯಲ್ ಲೇಔಟ್​​​ನಲ್ಲಿನ ಮನೆ ಮಾಲೀಕರು ಅಮೆರಿಕಾದಲ್ಲಿ ಸೆಟಲ್ ಆಗಿದ್ದರು. ಆರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಮಾತ್ರ ಬೆಂಗಳೂರಿನಲ್ಲಿರುವ ಈ ಮನೆಗೆ ದಂಪತಿ ಬಂದು ಹೋಗ್ತಿದ್ದರು. ಈ ನಡುವೆ ನಿರ್ಮಾಣ ಹಂತದ ಕಟ್ಟಡದಲ್ಲಿ ಟೈಲ್ಸ್ ಕೆಲಸ ಮಾಡುತ್ತಿದ್ದ ವೇಲಾರಾಮ್ ಕಣ್ಣು ಈ ಮನೆಯ ಮೇಲೆ ಬಿದ್ದಿದೆ. ಸುಮಾರು ಇಪ್ಪತ್ತು ಮಂದಿ ರಾಜಸ್ಥಾನ ಮೂಲದ ಯುವಕರಿಂದ ಗ್ರಾನೈಟ್, ಟೈಲ್ಸ್ ಅಳವಡಿಕೆ ಕೆಲಸ ನಡೆಯುತ್ತಿದ್ದರೂ ಇವರ್ಯಾರಿಗೂ ಅನುಮಾನ ಬಾರದಂತೆ ಪಕ್ಕದ ಮನೆಯಲ್ಲಿ ಯಾರೂ ಇಲ್ಲ ಎಂಬುದನ್ನು ಆರೋಪಿ ಗಮನಿಸಿದ್ದ. ಮೂರು ಬಾರಿ ಮನೆಯ ಬಳಿ ಹೋಗಿ ಸ್ಲೈಡ್ ಡೋರ್ ಓಪನ್ ಮಾಡಿ ಹೇಗೆ ಕನ್ನ ಹಾಕಬಹುದು ಎಂಬ ಪ್ಲ್ಯಾನ್​​ ಮಾಡಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಹೇಳಿದ್ದು ಗಿಳಿಶಾಸ್ತ್ರ, ಇಕ್ಕಿದ್ದು ದುಡ್ಡು, ಚಿನ್ನಾಭರಣಕ್ಕೆ ಗಾಳ! ಐಟಿ ಅಧಿಕಾರಿಗೆ ಲಕ್ಷಾಂತರ ರೂ. ಪಂಗನಾಮ

ತನ್ನ ಯೋಜನೆಯಂತೆ ಜೊತೆಯಲ್ಲಿರುವ ಸ್ನೇಹಿತರಿಗೂ ಹೇಳದೆ ಮನೆಯ ಸ್ಲೈಡ್ ಡೋರ್ ಮೂಲಕ ಒಳಗೆ ಎಂಟ್ರಿ ಕೊಟ್ಟಿದ್ದ ವೇಲಾರಾಮ್, ಲಾಕರ್ ಓಪನ್ ಮಾಡಿ ಮೂರು ಕೋಟಿ ಬೆಲೆ ಬಾಳುವ 1 ಕೆಜಿ 800 ಗ್ರಾಂ ಚಿನ್ನಾವಭರಣ, ಡೈಮಂಡ್ ಹಾಗೂ ನಗದು ಕಳ್ಳತನ ಮಾಡಿದ್ದ. ನಿರೀಕ್ಷೆಗಿಂತ ಹೆಚ್ಚು ಪ್ರಮಾಣದಲ್ಲಿ ಚಿನ್ನಾಭರಣ ಸಿಕ್ಕ ಖುಷಿಗೆ ಯಾರಿಗೂ ಹೇಳದೆ ಸೀದಾ ರಾಜಸ್ಥಾನಕ್ಕೆ ತೆರಳಿ ಮನೆಯಲ್ಲಿ ಚಿನ್ನಾಭರಣ ಬಚ್ಚಿಟ್ಟಿದ್ದ. ಈ ನಡುವೆ ಮನೆಯ ಸಿಸಿಟಿವಿಯನ್ನ ಅಮೆರಿಕಾದಲ್ಲಿದ ದಂಪತಿ ಮೊಬೈಲ್ ಮೂಲಕ ಪರಿಶೀಲನೆ ನಡೆಸಿದಾಗ ಕಳ್ಳತನ ನಡೆದಿರೋ ವಿಷಯ ಗೊತ್ತಾಗಿದೆ. ಘಟನೆ ಸಂಬಂಧ ಸಂಬಂಧಿಕರ ಮೂಲಕ ಪೊಲೀಸರಿಗೆ ದೂರು ನೀಡಿದ್ದು, ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಆರೋಪಿ ವೇಲಾರಾಮ್​​ನ ಪೊಲೀಸರೀಗ ಬಂಧಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಸುದೀಪ್​​ ಸರ್ ಬಗ್ಗೆ ಯೋಚಿಸೋದಾದ್ರೂ ಈ ಯಮ ಕಿಂಕರರ ದಾಟಬೇಕು’; ರಜತ್-ವಿನಯ್

ಬಿಗ್ ಬಾಸ್ ಮಾಜಿ ಸ್ಪರ್ಧಿ ಸತೀಶ್ (Satish) ಅವರು ನಟ ಸುದೀಪ್ ಮೇಲೆ ನಿರಂತರವಾಗಿ ಟೀಕೆಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಈ ಪ್ರಕರಣದಲ್ಲಿ ಸುದೀಪ್ ಪರವಾಗಿ ವಿನಯ್ ಹಾಗೂ ರಜತ್ ಮಾತನಾಡುತ್ತಿದ್ದಾರೆ. ಇವರ ವಿರುದ್ಧ ಸತೀಶ್ ದೂರು ದಾಖಲು ಮಾಡಿದ್ದಾರೆ. ಹೀಗಿರುವಾಗಲೇ ರಜತ್ ಅವರು ಪೋಸ್ಟ್ ಒಂದನ್ನು ಹಾಕಿದ್ದಾರೆ. ಈ ಪೋಸ್ಟ್​​ನಲ್ಲಿ ತಾವು ಯಾವಾಗಲೂ ಸುದೀಪ್ ಪರ ನಿಲ್ಲೋದಾಗಿ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ಜೊತೆಗೆ ಒಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

ಸತೀಶ್ ಅವರು ಮೂತ್ರ ಮಾಡುವ ವಿಡಿಯೋ ಹಾಕಿದ್ದಲ್ಲದೆ, ‘ದಾದಾ ಯಾರ್ ಗೊತ್ತಾ’ ಹಾಡನ್ನು ಪೋಸ್ಟ್ ಮಾಡಿದ್ದರು. ಇದು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು. ಆ ಬಳಿಕ ಸತೀಶ್ ಅವರನ್ನು ರಜತ್ ಪ್ರಶ್ನೆ ಮಾಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಎಚ್ಚರಿಕೆಯನ್ನು ಸಹ ನೀಡಿದ್ದರು. ಅಲ್ಲದೆ, ವಿನಯ್ ಕೂಡ ರಜತ್ ಬೆಂಬಲಕ್ಕೆ ನಿಂತು, ಸತೀಶ್​​ಗೆ ಎಚ್ಚರಿಕೆ ನೀಡಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಸತೀಶ್ ರಜತ್ ಹಾಗೂ ವಿನಯ್ ಮೇಲೆ ಕೇಸ್ ಹಾಕಿದ್ದಾರೆ.

ಈ ಬೆನ್ನಲ್ಲೇ ಪೋಸ್ಟ್ ಮಾಡಿರೋ ರಜತ್ ಅವರು, ‘ನಮ್ಮ ಬಾದ್​​ಶಾ ಕಿಚ್ಚ ಸರ್ ಬಗ್ಗೆ ಮಾತಾಡೋದು ಅಲ್ಲ, ಕೆಟ್ಟದಾಗಿ ಯೋಚನೆ ಮಾಡ್ಬೇಕು ಅಂದರೂನೂ ಈ ಯಮ ಕಿಂಕರರನ ಮೊದಲು ದಾಟಬೇಕು. ವಿ ಲವ್​ ಯೂ ಸರ್’ ಎಂದು ಸುದೀಪ್ ಜೊತೆ ಇರೋ ಫೋಟೋನ ವಿನಯ್ ಹಾಗೂ ರಜತ್ ಕೊಲ್ಯಾಬರೇಷನ್ ಅಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ‘ಕೇಸ್ ಆದ್ಮೇಲೆ ರಾಜಿಗೆ ಬಂದ ವಿನಯ್ ಗೌಡ’: ಖಡಕ್ ತಿರುಗೇಟು ಕೊಟ್ಟ ಡಾಗ್ ಸತೀಶ್

ರಜತ್ ಅವರು ಸುದೀಪ್ ಅಭಿಮಾನಿ. ಬಿಗ್ ಬಾಸ್​​​​ಗೆ ಬಂದ ಬಳಿಕ ಸುದೀಪ್ ಅವರ ಜೊತೆ ಒಳ್ಳೆಯ ನಂಟು ಬೆಳೆಯಿತು. ವಿನಯ್ ಹಾಗೂ ರಜತ್ ಮಚ್ಚಿನ ಕೇಸ್​ ಅಲ್ಲಿ ಒಳಕ್ಕೆ ಹೋದಾಗ, ಅವರನ್ನು ಬಿಡಿಸಿ ಕರೆದುಕೊಂಡು ಬಂದಿದ್ದು ಸುದೀಪ್ ಎನ್ನಲಾಗಿದೆ. ಈ ವಿಷಯವನ್ನು ರಜತ್ ಅವರು ಅನೇಕ ಬಾರಿ ಹೇಳಿದ್ದರು. ಈ ಕಾರಣದಿಂದ ಸುದೀಪ್​​​ ಬಗ್ಗೆ ಯಾರೋ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಎಂದಾಗ ಅದನ್ನು ಇವರು ವಿರೋಧಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಧುರಂಧರ್ 2’ ಟಿಕೆಟ್ ಬೆಲೆ, ಯಾವ ನಗರದಲ್ಲಿ ಹೆಚ್ಚು? ಎಲ್ಲಿ ಕಡಿಮೆ?

ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್ 2’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ‘ಟಾಕ್ಸಿಕ್’ ಸಿನಿಮಾ ರೇಸಿನಿಂದ ಹಿಂದೆ ಸರಿದಿರುವ ಕಾರಣ ‘ಧುರಂಧರ್ 2’ ಸಿನಿಮಾಕ್ಕೆ ಎದುರಾಳಿಗಳೇ ಇಲ್ಲದಾಗಿದೆ. ಸಿನಿಮಾದ ಪ್ರೀಮಿಯರ್ ಶೋನ ಟಿಕೆಟ್​​ಗಳ ಅಡ್ವಾನ್ಸ್ ಬುಕಿಂಗ್ ಆರಂಭವಾಗಿದ್ದು, ಭಾರತದ ಹಲವು ಪ್ರಮುಖ ನಗರಗಳಲ್ಲಿ ಮಾರ್ಚ್ 18ರ ಸಂಜೆಯೇ ಸಿನಿಮಾದ ಪ್ರೀಮಿಯರ್ ಶೋಗಳ ಪ್ರದರ್ಶನ ಆಗಲಿದೆ. ಭಾರಿ ದುಬಾರಿ ಬೆಲೆಯಲ್ಲಿ ‘ಧುರಂಧರ್ 2’ ಸಿನಿಮಾ ಪ್ರೀಮಿಯರ್ ಶೋ ಟಿಕೆಟ್​​ಗಳಿಗೆ ನಿಗದಿಪಡಿಸಲಾಗಿದೆ. ಅಷ್ಟಕ್ಕೂ ಯಾವ ನಗರದಲ್ಲಿ ‘ಧುರಂಧರ್ 2’ ಸಿನಿಮಾದ ಟಿಕೆಟ್ ಬೆಲೆ ಎಷ್ಟಿದೆ? ಎಲ್ಲಿ ದುಬಾರಿ? ಎಲ್ಲಿ ಕಡಿಮೆ?

‘ಧುರಂಧರ್ 2’ ಸಿನಿಮಾದ ಪ್ರೀಮಿಯರ್ ಶೋಗಳು, ದೆಹಲಿ, ಬೆಂಗಳೂರು, ಮುಂಬೈ, ಹೈದರಾಬಾದ್, ಚೆನ್ನೈ, ಕೊಚ್ಚಿ, ಪುಣೆ ಇನ್ನೂ ಹಲವಾರು ಪ್ರಮುಖ ನಗರಗಳಲ್ಲಿ ಆಯೋಜಿಸಲಾಗಿದೆ. ಇಷ್ಟರಲ್ಲಿ ಅತಿ ಹೆಚ್ಚು ಬೆಲೆ ದಾಖಲಾಗಿರುವುದು ಮುಂಬೈನಲ್ಲಿ. ಮುಂಬೈನ ಒಂದು ಮಲ್ಟಿಪ್ಲೆಕ್ಸ್​​ನಲ್ಲಿ ಒಂದು ಟಿಕೆಟ್ 3200 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಇತರೆ ನಗರಗಳಲ್ಲಿಯೂ ಸಹ ಟಿಕೆಟ್ ಬೆಲೆ ಕಡಿಮೆ ಇಲ್ಲ. ಬೆಂಗಳೂರಿನ ರೆಕ್ಸ್​​ನಲ್ಲಿ ಟಿಕೆಟ್ ಬೆಲೆ 2000 ರೂಪಾಯಿಗಳಿದ್ದು, ಈಗಾಗಲೇ ಎಲ್ಲ ಸೋಲ್ಡ್ ಔಟ್ ಆಗಿವೆ.

ಇನ್ನು ದೆಹಲಿಯಲ್ಲೂ ಸಹ ದೊಡ್ಡ ಮೊತ್ತಕ್ಕೆ ಟಿಕೆಟ್​​ಗಳು ಮಾರಾಟವಾಗುತ್ತಿದೆ. ದೆಹಲಿಯ ಒಂದು ಮಲ್ಟಿಪ್ಲೆಕ್ಸ್​​ನಲ್ಲಿ 2200 ರೂಪಾಯಿಗೆ ಟಿಕೆಟ್ ಮಾರಾಟ ಆಗುತ್ತಿದೆ. ಅತ್ಯಂತ ಕಡಿಮೆ ಬೆಲೆಯಲ್ಲಿ ಸಿನಿಮಾ ನೋಡಬಹುದೆಂದರೆ ಅದು ಚೆನ್ನೈನಲ್ಲಿ. ‘ಧುರಂಧರ್ 2’ ಸಿನಿಮಾದ ಪ್ರೀಮಿಯರ್ ಶೋ ನ ಟಿಕೆಟ್ ಚೆನ್ನೈನಲ್ಲಿ ಗರಿಷ್ಟ 190 ರೂಪಾಯಿಗಳು ಕನಿಷ್ಟ ಕೇವಲ 54 ರೂಪಾಯಿಗಳಿವೆ. ಹೈದರಾಬಾದ್​​ನಲ್ಲಿಯೂ ಸಹ ಟಿಕೆಟ್ ಬೆಲೆ ಕಡಿಮೆಯೇ ಇದೆ. ಅಲ್ಲಿನ ಗರಿಷ್ಟ ಬೆಲೆ 350 ಆಗಿದ್ದು, ಕನಿಷ್ಟ ಬೆಲೆ 150 ರೂಪಾಯಿಗಳಾಗಿವೆ.

ಇದನ್ನೂ ಓದಿ:ಮತ್ತೆ ಬಂತು ಬೆದರಿಕೆ: ರಣ್ವೀರ್ ಸಿಂಗ್-ದೀಪಿಕಾಗೆ ಭದ್ರತೆ ಹೆಚ್ಚಳ

ಕೇರಳದ ಕೊಚ್ಚಿಯಲ್ಲಿ ಭಿನ್ನ-ಭಿನ್ನ ಬೆಲೆಗಳನ್ನು ನಿಗದಿಪಡಿಸಲಾಗಿದೆ. ಲಕ್ಷುರಿ ಮಲ್ಟಿಪ್ಲೆಕ್ಸ್​​ಗಳಲ್ಲಿ 1200 ರೂಪಾಯಿಗಳಿದ್ದರೆ ಸಾಮಾನ್ಯ ಚಿತ್ರಮಂದಿರಗಳಲ್ಲಿ ಕೇವಲ 150 ರೂಪಾಯಿಗಳಿವೆ. ಒಟ್ಟಾರೆಯಾಗಿ ನೋಡುವುದಾದರೆ ‘ಧುರಂಧರ್ 2’ ಸಿನಿಮಾದ ಪ್ರೀಮಿಯರ್ ಶೋ ಟಿಕೆಟ್ ಬೆಲೆಗಳು ಅತಿ ಹೆಚ್ಚಿರುವುದು ಮುಂಬೈ, ದೆಹಲಿ ಮತ್ತು ಬೆಂಗಳೂರಿನಲ್ಲಿಯೇ ಹೆಚ್ಚು. ಈ ನಗರಗಳಲ್ಲಿ 500ಕ್ಕೆ ಕಡಿಮೆ ಟಿಕೆಟ್ಗಳೇ ಇಲ್ಲ ಎನ್ನಬಹುದು. ಇದ್ದರೂ ಕೇವಲ ಒಂದೆರಡು ಚಿತ್ರಮಂದಿರಗಳಲ್ಲಿ ಮಾತ್ರ.

‘ಧುರಂಧರ್ 2’ ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಂಈಯರ್ ಶೋ ಮಾರ್ಚ್ 18ರಂದು ಸಂಜೆಯಿಂದ ಪ್ರದರ್ಶನಗೊಳ್ಳಲಿದೆ. ಸಿನಿಮಾನಲ್ಲಿ ರಣ್ವೀರ್ ಸಿಂಗ್, ಸಂಜಯ್ ದತ್, ಅಕ್ಷಯ್ ಖನ್ನಾ, ಆರ್ ಮಾಧವನ್ ಅವರುಗಳು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ಆದಿತ್ಯ ಧರ್ ನಿರ್ದೇಶನ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವಿಶ್ವಕಪ್ ಟ್ರೋಫಿಯನ್ನು ದೇವಸ್ಥಾನಕ್ಕೆ ಕೊಂಡೊಯ್ದಿದಕ್ಕೆ ಮಾಜಿ ಕ್ರಿಕೆಟಿಗ ಆಕ್ರೋಶ!

ಟೀಮ್ ಇಂಡಿಯಾ ಮೂರನೇ ಬಾರಿಗೆ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡವನ್ನು 96 ರನ್​ಗಳಿಂದ ಸೋಲಿಸಿ ಭಾರತ ತಂಡ ವಿಶ್ವಕಪ್ ಅನ್ನು ಎತ್ತಿ ಹಿಡಿದಿದ್ದರು. ಇದರ ಬೆನ್ನಲ್ಲೇ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಕೋಚ್ ಗೌತಮ್ ಗಂಭೀರ್ ಹಾಗೂ ಐಸಿಸಿ ಅಧ್ಯಕ್ಷ ಜಯ್​ ಶಾ ಟ್ರೋಫಿಯೊಂದಿಗೆ ಅಹಮದಾಬಾದ್‌ನ ಹನುಮಾನ್ ಟೆಕ್ರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಟೀಮ್ ಇಂಡಿಯಾದ ಈ ನಡೆಗೆ ಭಾರತ ತಂಡದ ಮಾಜಿ ಆಟಗಾರ ಕೀರ್ತಿ ಆಝಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟೀಮ್ ಇಂಡಿಯಾ ನಾಚಿಕೆಗೇಡು…  1983 ರಲ್ಲಿ ಕಪಿಲ್ ದೇವ್ ನೇತೃತ್ವದಲ್ಲಿ ನಾವು ವಿಶ್ವಕಪ್ ಗೆದ್ದಾಗ, ನಮ್ಮ ತಂಡದಲ್ಲಿ ಹಿಂದೂ, ಮುಸ್ಲಿಂ, ಸಿಖ್ ಮತ್ತು ಕ್ರಿಶ್ಚಿಯನ್ ಆಟಗಾರರು ಇದ್ದರು. ನಾವು ಟ್ರೋಫಿಯನ್ನು ನಮ್ಮ ಧಾರ್ಮಿಕ ಜನ್ಮಸ್ಥಳವಾದ ನಮ್ಮ ಮಾತೃಭೂಮಿ ಭಾರತ ಅಥವಾ ಹಿಂದೂಸ್ತಾನ್‌ಗೆ ತಂದಿದ್ದೆವು.

ಇದೀಗ ಏಕೆ ಟ್ರೋಫಿಯನ್ನು ದೇವಸ್ಥಾನಕ್ಕೆ ಎತ್ತಕೊಂಡು ಹೋಗಿದ್ದಾರೆ? ಅದೇ ಯಾಕೆ ಮಸೀದಿಗೆ ಅಥವಾ ಚರ್ಚ್​ ಇಲ್ಲಾ ಗುರುದ್ವಾರಗೆ ತೆಗೆದುಕೊಂಡು ಹೋಗಿಲ್ಲ. ಈ ತಂಡ ಭಾರತವನ್ನು ಪ್ರತಿನಿಧಿಸುತ್ತದೆ. ಇದರ ಬದಲಾಗಿ ಸೂರ್ಯ ಕುಮಾರ್ ಯಾದವ್ ಅಥವಾ ಜಯ್ ಶಾ ಅವರ ಕುಟುಂಬವಲ್ಲ!

ಇದೇ ವಿಶ್ವಕಪ್ ತಂಡದಲ್ಲಿದ್ದ ಮೊಹಮ್ಮದ್ ಸಿರಾಜ್ ಟ್ರೋಫಿಯನ್ನು ಮಸೀದಿಗೆ ಎತ್ತುಕೊಂಡು ಹೋಗಿಲ್ಲ. ಅದರಲ್ಲೂ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ, ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಪಡೆದ ಸಂಜು ಸ್ಯಾಮ್ಸನ್​​ ಚರ್ಚ್​ಗೆ ತೆಗೆದುಕೊಂಡು ಹೋಗಲಿಲ್ಲ.

ಈ ಟ್ರೋಫಿಯು 1.4 ಬಿಲಿಯನ್ ಭಾರತೀಯರಿಗೆ ಸೇರಿದೆ. ಇದು ಒಂದು ಧರ್ಮದ ವಿಜಯೋತ್ಸವವಲ್ಲ! ಎಂದು ಕೀರ್ತಿ ಆಝಾದ್ ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಕೀರ್ತಿ ಆಝಾದ್ ಅವರ ಈ ಅಭಿಪ್ರಾಯಕ್ಕೆ ಪರ-ವಿರೋಧ ವ್ಯಕ್ತವಾಗಿದೆ. ಅದರಲ್ಲೂ ಹೆಚ್ಚಿನವರು ಆಝಾದ್ ಅವರ ಅಭಿಪ್ರಾಯಕ್ಕೆ ಸಹಮತಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕ್ರೀಡೆಗೂ ಧರ್ಮಲೇಪನ ಮಾಡಲು ಹೊರಟ್ಟಿದ್ದಾರೆ ಎಂದು ಕೆಲವರು ಟೀಕಿಸಿದ್ದಾರೆ.

ಒಟ್ಟಿನಲ್ಲಿ ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಐಸಿಸಿ ಅಧ್ಯಕ್ಷ ಜಯ್ ಶಾ ನೇತೃತ್ವದಲ್ಲಿ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಹಾಗೂ ನಾಯಕ ಸೂರ್ಯಕುಮಾರ್ ಯಾದವ್ ಟ್ರೋಫಿಯೊಂದಿಗೆ ದೇವಸ್ಥಾನಕ್ಕೆ ತೆರಳಿರುವುದು ಹೊಸ ಚರ್ಚೆಗೆ ಕಾರಣವಾಗಿದೆ. ಈ ಚರ್ಚೆಯ ನಡವೆ ಕೀರ್ತಿ ಆಝಾದ್ ಮುಂದಿಟ್ಟಿರುವ ಪ್ರಶ್ನೆ ಮುನ್ನಲೆಗೆ ಬಂದಿದೆ.

ಇದನ್ನೂ ಓದಿ: ಅಬ್ಬಾ ಇಷ್ಟೊಂದಾ! ಟೀಮ್ ಇಂಡಿಯಾಗೆ ಬಹುಮಾನ ಘೋಷಣೆ

ಅಂದಹಾಗೆ ಕೀರ್ತಿ ಆಝಾದ್​ 1983 ರಲ್ಲಿ ಏಕದಿನ ವಿಶ್ವಕಪ್​ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು. ಅಲ್ಲದೆ ಟೀಮ್ ಇಂಡಿಯಾ ಪರ 25 ಏಕದಿನ ಹಾಗೂ 7 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಇದೀಗ ಟೀಮ್ ಇಂಡಿಯಾ ನಡೆಯನ್ನು ಪ್ರಶ್ನಿಸುವ ಮೂಲಕ ಕೀರ್ತಿ ಆಝಾದ್​ ಹೊಸ ಚರ್ಚೆಗೆ ನಾಂದಿಯಾಡಿದ್ದಾರೆ.

 

Source link

ಬೆಂಗಳೂರಿನ ಏರ್​ಪೋರ್ಟ್​ಗೆ ಬಂತು ಬೆತ್ತಲೆ ಫೋಟೋಗಳ ಪಾರ್ಸೆಲ್! ವಾಮಾಚಾರದ ಬಾಕ್ಸ್​ ನೋಡಿ ಸಿಬ್ಬಂದಿ ಶಾಕ್

ದೇವನಹಳ್ಳಿ, ಮಾರ್ಚ್​ 10: ಇತರರ ಮೇಲಿನ ದ್ವೇಷಕ್ಕೆ ಮನೆಯಲ್ಲಿ ಅಷ್ಟೇ ಅಲ್ಲದೆ ರಸ್ತೆಗಳಲ್ಲಿ, ಹೋಟೆಲ್​ಗಳಲ್ಲಿ ಸಹ ವಾಮಾಚಾರ ಮಾಡಿದ ಸಾಕ್ಷಿಗಳು ಸಿಗುತ್ತಿದ್ದವು. ಆದರೆ ಲಕ್ಷಾಂತರ ಜನರು ಓಡಾಡುವ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ (Airport) ಇಂತಹ ಘಟನೆ ನಡೆದಿರುವುದು ಆತಂಕ ಸೃಷ್ಟಿಸಿದೆ. ವಿಮಾನ ನಿಲ್ದಾಣದ ಅಂಚೆ ಕಚೇರಿಗೆ ವಾಮಾಚಾರದ ಪಾರ್ಸೆಲ್ ಒಂದು ಬಂದಿದ್ದು, ಅದರಲ್ಲಿದ್ದ ವಸ್ತುಗಳು ಸಿಬ್ಬಂದಿಯನ್ನು ಬೆಚ್ಚಿ ಬೀಳಿಸಿವೆ.

ಬಾಕ್ಸ್​ನಲ್ಲಿ ಸಿಕ್ಕಿದ್ದೇನೇನು ಗೊತ್ತಾ?

ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಮಾಚಾರ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ಪಾರ್ಸೆಲ್ ಒಂದು ಬಂದಿರುವ ಘಟನೆ ಬೆಳಕಿಗೆ ಬಂದಿದೆ. ಆರೋಪಿಯು ಜನವರಿ 6ರಿಂದ 22ರ ನಡುವೆ ವಿಮಾನ ನಿಲ್ದಾಣದ ವಿವಿಧೆಡೆ ಓಡಾಡಿ, ಆಡಳಿತ ಮಂಡಳಿ ಕಚೇರಿ ವಿಳಾಸಕ್ಕೆ ಅಂಚೆ ಮೂಲಕ ಬಂದ ಪಾರ್ಸೆಲ್ ಕಳುಹಿಸಿದ್ದಾನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕಚೇರಿಗೆ ಬಂದ ಬಾಕ್ಸ್ ತೆರೆಯುತ್ತಿದ್ದಂತೆ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ಪಾರ್ಸೆಲ್ ಒಳಗೆ ಮಹಿಳೆ ಮತ್ತು ಪುರುಷನ ಬೆತ್ತಲೆ ಫೋಟೋಗಳನ್ನು ಇಟ್ಟು, ಅದರ ಸುತ್ತಲೂ ಕೊಳೆತ ಟೊಮ್ಯಾಟೋ ಹಾಗೂ ಹೂವಿನ ಹಾರವನ್ನು ಹಾಕಲಾಗಿತ್ತು. ಅಲ್ಲದೆ ಹಾರದ ಮೇಲೆ ಕಬ್ಬಿಣದ ತುಂಡು ಹಾಗೂ ಟೂತ್‌ಪೇಸ್ಟ್ ಇಟ್ಟು ಪೂಜೆ ಮಾಡಿದ ರೀತಿಯಲ್ಲಿ ವಸ್ತುಗಳನ್ನು ಜೋಡಿಸಿ ಪಾರ್ಸೆಲ್ ಮಾಡಿರುವುದು ಕಂಡುಬಂದಿದೆ.

ಇದನ್ನೂ ಓದಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಭದ್ರತಾ ಲೋಪ: ರನ್‌ವೇಗೆ ನುಗ್ಗಿದ ಬೀದಿ ನಾಯಿಗಳು, ತಪ್ಪಿದ ಭಾರೀ ಅನಾಹುತ

ಕೆಲಸಕ್ಕೆ ಬರಲೂ ಹೆದರುತ್ತಿರುವ ಸಿಬ್ಬಂದಿ

ಇದನ್ನು ನೋಡಿ ವಿಮಾನ ನಿಲ್ದಾಣದ ಸಿಬ್ಬಂದಿ ಆತಂಕಕ್ಕೊಳಗಾಗಿದ್ದು, ಕೆಲವರ ಮಾನಸಿಕ ಸ್ಥಿತಿಯ ಮೇಲೂ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿದೆ. ಈ ವಿಚಿತ್ರ ಪಾರ್ಸೆಲ್ ಘಟನೆ ಹಿನ್ನೆಲೆ ಕೆಲ ಸಿಬ್ಬಂದಿ ಕೆಲಸಕ್ಕೆ ಬರಲೂ ಹಿಂಜರಿಯುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಕೆಐಎಬಿ ಸಿಬ್ಬಂದಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರು ಆಧಾರಿಸಿ ಕೆಂಪೇಗಡ ಏರ್​ಪೋರ್ಟ್​ ಪೊಲೀಸ್ ಸ್ಟೇಷನ್​ನಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪಾರ್ಸೆಲ್ ಕಳುಹಿಸಿದವರ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ವಿಮಾನ ನಿಲ್ದಾಣದ ಭದ್ರತೆ ದೃಷ್ಟಿಯಿಂದಲೂ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬೆಂಗಳೂರಲ್ಲಿ LPG ಕೊರತೆ: 3 ಸ್ಟಾರ್ ಹೋಟೆಲ್​​ನಲ್ಲಿ ಅಡುಗೆ ಮಾಡಲು ಸೌದೆ ತಂದ ಸಿಬ್ಬಂದಿ

ಬೆಂಗಳೂರು, ಮಾರ್ಚ್​​ 10: ರಾಜಧಾನಿ ಬೆಂಗಳೂರಿನಲ್ಲಿ ಹೋಟೆಲ್‌ಗಳು ತೀವ್ರ LPG ಸಿಲಿಂಡರ್ ಕೊರತೆ ಎದುರಿಸುತ್ತಿವೆ. ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಗಗನಕ್ಕೇರಿರುವ ಜೊತೆಗೆ, ಅವುಗಳ ಲಭ್ಯತೆ ಸಂಪೂರ್ಣವಾಗಿ ಕುಸಿದಿದೆ. ಇದರ ಪರಿಣಾಮವಾಗಿ, ಪ್ರತಿಷ್ಠಿತ ತ್ರೀ ಸ್ಟಾರ್ ಹೋಟೆಲ್‌ಗಳು ಅಡುಗೆ ಮಾಡಲು ಸಾಂಪ್ರದಾಯಿಕ ಸೌದೆಯನ್ನು ಆಶ್ರಯಿಸುವಂತಾಗಿದೆ. ಬೆಂಗಳೂರಿನ ಸಾವಿರಾರು ಹೋಟೆಲ್‌ಗಳಿಗೆ ಪ್ರತಿದಿನ ಐದರಿಂದ ಹತ್ತು ವಾಣಿಜ್ಯ ಸಿಲಿಂಡರ್‌ಗಳು ಬೇಕಾಗುತ್ತವೆ. ಆದರೆ, ಪೂರೈಕೆ ಇಲ್ಲದಿರುವುದರಿಂದ, ಹಲವು ಹೋಟೆಲ್‌ಗಳು ಈಗಾಗಲೇ ಸಂಗ್ರಹಿಸಿದ್ದ ಸಿಲಿಂಡರ್‌ಗಳನ್ನು ಬಳಸಿಕೊಂಡಿವೆ. ಮುಂದಿನ ದಿನಗಳಲ್ಲಿ ಸಿಲಿಂಡರ್ ಲಭ್ಯವಾಗದಿದ್ದರೆ ಹೋಟೆಲ್‌ಗಳನ್ನು ಮುಚ್ಚಬೇಕಾಗಬಹುದು ಎಂದು ಹೋಟೆಲ್ ಮಾಲೀಕರು ಅಳಲು ತೋಡಿಕೊಂಡಿದ್ದಾರೆ. ಅತಿಥಿಗಳಿಗೆ ಸೇವೆ ಒದಗಿಸಲು ಅನಿವಾರ್ಯವಾಗಿ ಸೌದೆ ಒಲೆಗಳನ್ನು ಬಳಸಲಾಗುತ್ತಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

NEET UG 2026: ನೀಟ್ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್; ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

2026-27ನೇ ಸಾಲಿನ ವೈದ್ಯಕೀಯ ಮತ್ತು ಆಯುಷ್ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಗೆ (NEET-UG 2026) ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮಹತ್ವದ ಅವಕಾಶವೊಂದನ್ನು ನೀಡಿದೆ. ಈ ಹಿಂದೆ ಮಾರ್ಚ್ 8ಕ್ಕೆ ಮುಕ್ತಾಯವಾಗಿದ್ದ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಇದೀಗ ಮಾರ್ಚ್ 11 ರ ರಾತ್ರಿ 9 ಗಂಟೆಯವರೆಗೆ ವಿಸ್ತರಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿ ಶುಲ್ಕವನ್ನು ಮಾರ್ಚ್ 11ರ ರಾತ್ರಿ 11:59 ರವರೆಗೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ (ಅಥವಾ ಜೈವಿಕ ತಂತ್ರಜ್ಞಾನ) ವಿಷಯಗಳೊಂದಿಗೆ ವಿಜ್ಞಾನ ವಿಭಾಗದಲ್ಲಿ ಇಂಟರ್ಮೀಡಿಯೇಟ್ ಅಥವಾ ಪಿಯುಸಿ ಉತ್ತೀರ್ಣರಾದ ಹಾಗೂ ಕನಿಷ್ಠ 17 ವರ್ಷ ವಯೋಮಿತಿ ಹೊಂದಿರುವ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ. 1700, ಇಡಬ್ಲ್ಯೂಎಸ್/ಒಬಿಸಿ-ಎನ್‌ಸಿಎಲ್ ವರ್ಗದವರಿಗೆ ರೂ. 1600 ಹಾಗೂ ಎಸ್‌ಸಿ/ಎಸ್‌ಟಿ/ದಿವ್ಯಾಂಗ ಮತ್ತು ತೃತೀಯ ಲಿಂಗದ ಅಭ್ಯರ್ಥಿಗಳಿಗೆ ರೂ. 1000 ನೋಂದಣಿ ಶುಲ್ಕವನ್ನು ನಿಗದಿಪಡಿಸಲಾಗಿದೆ.

ಇದನ್ನೂ ಓದಿ: ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವವರಿಗೆ ಸುವರ್ಣಾವಕಾಶ: 10th ಪಾಸಾಗಿದ್ರೆ ಸಾಕು!

ಮೇ 3 ರಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ದೇಶಾದ್ಯಂತ ಪೆನ್ ಮತ್ತು ಪೇಪರ್ (ಆಫ್‌ಲೈನ್) ಮಾದರಿಯಲ್ಲಿ ಪರೀಕ್ಷೆ ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು 011-40759000/69227700 ಸಂಖ್ಯೆಗಳನ್ನು ಅಥವಾ neetug2026@nta.ac.in ಇ-ಮೇಲ್ ಅನ್ನು ಸಂಪರ್ಕಿಸಬಹುದಾಗಿದೆ. ಸರ್ವರ್ ಡೌನ್​ ಸಮಸ್ಯೆ ತಪ್ಪಿಸಲು ಕೊನೆಯ ಕ್ಷಣದವರೆಗೆ ಕಾಯದೆ ಕೂಡಲೇ ಅರ್ಜಿ ಸಲ್ಲಿಸುವುದು ಉತ್ತಮ ಎಂದು NTA ಸೂಚಿಸಿದೆ.

NEET UG ಆನ್‌ಲೈನ್ ಅರ್ಜಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೂಡಿಕೆಗೆ ಯಾವ ರೀತಿಯ ಮ್ಯೂಚುವಲ್ ಫಂಡ್​ಗಳನ್ನು ಆಯ್ದುಕೊಳ್ಳಬೇಕು? ಗಮನಿಸಬೇಕಾದ ಅಂಶಗಳಿವು

ಸದ್ಯ ಲಭ್ಯ ಇರುವ ಬಹಳ ಸುಲಭ ಹೂಡಿಕೆ ಯಂತ್ರಗಳಲ್ಲಿ ಮ್ಯೂಚುವಲ್ ಫಂಡ್ (Mutual Fund) ಪ್ರಮುಖವಾದುದು. ಇದು ಬಹಳ ಸುಲಭ ಮತ್ತು ಸರಳ ಹೂಡಿಕೆ ವಿಧಾನ. ಷೇರುಗಳಲ್ಲಿ ನೇರವಾಗಿ ಹೂಡಿಕೆ ಮಾಡಲು ತಾಂತ್ರಿಕ ತಿಳಿವಳಿಕೆ ಮತ್ತು ಮಾರುಕಟ್ಟೆ ಅರಿವು ಬೇಕಾಗುತ್ತದೆ. ಆದರೆ, ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡಲು ಒಂದಷ್ಟು ಸಾಮಾನ್ಯ ಜ್ಞಾನ ಇದ್ದರೆ ಸಾಕು. ಗ್ರೋ, ಪೇಟಿಎಂ ಮನಿ ಇತ್ಯಾದಿ ಬ್ರೋಕರೇಜ್ ಪ್ಲಾಟ್​ಫಾರ್ಮ್​ಗಳಲ್ಲಿ, ಅಥವಾ ನೇರ ಮ್ಯೂಚುವಲ್ ಫಂಡ್ ಹೌಸ್​ಗಳಲ್ಲಿ ನೀವು ಹೂಡಿಕೆ ಮಾಡಬಹುದು. ಯಾವ ರೀತಿಯ ಮ್ಯೂಚುವಲ್ ಫಂಡ್​ಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಒಂದಷ್ಟು ಟಿಪ್ಸ್ ಇಲ್ಲಿದೆ:

ದೀರ್ಘಾವಧಿಯಲ್ಲಿ ಫಂಡ್ ರಿಟರ್ನ್ಸ್ ಎಷ್ಟಿದೆ ನೋಡಿ

ನೀವು ಬ್ರೋಕರೇಜ್ ಆ್ಯಪ್​ನಲ್ಲಿ ಮ್ಯೂಚುವಲ್ ಫಂಡ್​ಗಳ ಪಟ್ಟಿ ನೋಡುವಾಗ ನಿಮಗೆ 1 ವರ್ಷದ ರಿಟರ್ನ್ಸ್, 3 ವರ್ಷದ ರಿಟರ್ನ್ಸ್ ಹೀಗೆ ನೀಡುವ ಆಯ್ಕೆಗಳಿರುತ್ತವೆ. ಹೆಚ್ಚಿನ ಜನರು 1 ವರ್ಷದ ರಿಟರ್ನ್ ಮಾತ್ರವೇ ಗಮನಿಸುವುದುಂಟು. ಯಾವುದೇ ಫಂಡ್ ಸಾಧನೆಯನ್ನು ಒಂದು ವರ್ಷದ ರಿಟರ್ನ್ಸ್​ನಲ್ಲಿ ಅಳೆಯಲು ಆಗುವುದಿಲ್ಲ. ಕನಿಷ್ಠ 5 ವರ್ಷದ ದೀರ್ಘಾವಧಿಯಲ್ಲಿ ಬಂದಿರುವ ರಿಟರ್ನ್ಸ್ ಅನ್ನು ಗಮನಿಸಬೇಕು.

ಇದನ್ನೂ ಓದಿ: ಮಾರ್ಕೆಟ್ ಟ್ರೆಂಡ್, ಎಕ್ಸ್​ಪೆನ್ಸ್ ರೇಶಿಯೋ, ಎಮರ್ಜೆನ್ ಫಂಡ್ ಇತ್ಯಾದಿ.. ಜನಸಾಮಾನ್ಯರು ಮಾಡುವ ಹೂಡಿಕೆ ತಪ್ಪುಗಳಿವು

ರೋಲಿಂಗ್ ರಿಟರ್ನ್ಸ್ ಗಮನಿಸಿ

ಮ್ಯೂಚುವಲ್ ಫಂಡ್​ನಲ್ಲಿ ನೀವು ಅದರ ರೋಲಿಂಗ್ ರಿಟರ್ನ್ಸ್ ಸಾಧನೆ ಹೇಗಿದೆ ಎಂದು ಗಮನಿಸುವುದು ಉತ್ತಮ. 2020ರ ಜನವರಿಯಿಂದ 2025ರ ಜನವರಿವರೆಗೆ ಐದು ವರ್ಷದಲ್ಲಿ ಫಂಡ್​ನ ರಿಟರ್ನ್ಸ್ ಹೇಗಿದೆ ಎನ್ನುವುದು ಪಾಯಿಂಟ್ ಟು ಪಾಯಿಂಟ್ ರಿಟರ್ನ್ಸ್ ಎನಿಸುತ್ತದೆ. ರೋಲಿಂಗ್ ರಿಟರ್ನ್ಸ್​ನಲ್ಲಿ ನೀವು 2020ರ ಜನವರಿಯಿಂದ 2025ರ ಜನವರಿವರೆಗೆ ಎಷ್ಟಿತ್ತು ಎನ್ನುವುದರ ಜೊತೆಗೆ 2019ರ ಡಿಸೆಂಬರ್​ನಿಂದ 2024ರ ಡಿಸೆಂಬರ್; 2019ರ ನವೆಂಬರ್​ನಿಂದ 2024ರ ನವೆಂಬರ್; ಹೀಗೆ ಐದು ವರ್ಷದ ಪರಿಧಿಯಲ್ಲೇ ವಿವಿಧ ಅವಧಿಗಳಲ್ಲಿ ಫಂಡ್ ಸಾಧನೆ ಹೇಗಿತ್ತು ಎಂದು ತಿಳಿಯುವುದು ಉತ್ತಮ ಎನ್ನುತ್ತಾರೆ ತಜ್ಞರು.

ಮ್ಯೂಚುವಲ್ ಫಂಡ್​ನ ಎಕ್ಸ್​ಪೆನ್ಸ್ ರೇಶಿಯೋ

ಮ್ಯೂಚುವಲ್ ಫಂಡ್ ಆಯ್ಕೆ ಮಾಡುವಾಗ ಬಹಳ ಜನರು ಎಕ್ಸ್​ಪೆನ್ಸ್ ರೇಶಿಯೋವನ್ನು ನಿರ್ಲಕ್ಷಿಸಿಬಿಡುತ್ತಾರೆ. ಇದು ತಪ್ಪು. ಅದರಲ್ಲೂ ದೀರ್ಘಾವಧಿ ಹೂಡಿಕೆ ಮಾಡುವಾಗ ಇದು ಮುಖ್ಯ. ಎಕ್ಸ್​ಪೆನ್ಸ್ ರೇಶಿಯೋ ಎಂದರೆ ಫಂಡ್ ನಿರ್ವಹಣೆಗೆ ಪಡೆಯಲಾಗುವ ಸೇವಾ ಶುಲ್ಕ. ಇದು ವಾರ್ಷಿಕ ದರ. ಉದಾಹರಣೆಗೆ, ಎಕ್ಸ್​ಪೆನ್ಸ್ ರೇಶಿಯೋ ಶೇ. 2 ಇದೆ ಎಂದಿಟ್ಟುಕೊಳ್ಳೋಣ. ನೀವು 1,00,000 ರೂ ಹೂಡಿಕೆ ಮಾಡಿದ್ದೀರಿ. ಇದಕ್ಕೆ 2,000 ರೂ ಎಕ್ಸ್​ಪೆನ್ಸ್ ರೇಶಿಯೋ ಆಗುತ್ತದೆ. ವರ್ಷದಲ್ಲಿ ನಿಮ್ಮ ಹೂಡಿಕೆಯು 98,000 ರೂ ಆಗುತ್ತದೆ. ಮ್ಯೂಚುವಲ್ ಫಂಡ್ ಶೇ. 12 ರಿಟರ್ನ್ ಕೊಟ್ಟರೂ ಎಕ್ಸ್​ಪೆನ್ಸ್ ರೇಶಿಯೋದಿಂದ ಅದರ ವಾಸ್ತವಿಕ ರಿಟರ್ನ್ ಶೇ. 10 ಆಗಬಹುದು.

ಇದನ್ನೂ ಓದಿ: ಬದುಕು ನಿರ್ವಹಿಸುವಷ್ಟು ಮಾಸಿಕ ಆದಾಯ ಸೃಷ್ಟಿಸುವುದು ಹೇಗೆ? ಬೆಲೆ ಏರಿಕೆ ಇತ್ಯಾದಿ ಅಂಶಗಳನ್ನೂ ಮರೆಯದಿರಿ; ಇಲ್ಲಿದೆ ಟಿಪ್ಸ್

ಹೂಡಿಕೆ ವೈವಿಧ್ಯತೆಯ ಮ್ಯೂಚುವಲ್ ಫಂಡ್​ಗಳು

ಕೇವಲ ಲಾರ್ಜ್ ಕ್ಯಾಪ್ ಫಂಡ್ ಅನ್ನೋ, ಮಿಡ್ ಕ್ಯಾಪ್ ಅಥವಾ ಸ್ಮಾಲ್ ಕ್ಯಾಪ್ ಫಂಡ್​ಗೆ ಮಾತ್ರ ಸೀಮಿತವಾಗುವ ಬದಲು, ಮಲ್ಟಿ ಕ್ಯಾಪ್ ಫಂಡ್, ಮಲ್ಟಿ ಅಸೆಟ್ ಫಂಡ್, ಫ್ಲೆಕ್ಸಿ ಕ್ಯಾಪ್ ಫಂಡ್ ಇತ್ಯಾದಿ ಹೂಡಿಕೆ ವೈವಿಧ್ಯತೆ ಇರುವ ಮ್ಯೂಚುವಲ್ ಫಂಡ್ ಆಯ್ಕೆ ಮಾಡಿಕೊಳ್ಳುವುದು ಉತ್ತಮ.

ಇಂಡೆಕ್ಸ್ ಫಂಡ್​ಗಳು ಸುರಕ್ಷಿತ

ನಿಮಗೆ ಈ ಅಂಶಗಳನ್ನು ಗಮನಿಸುವುದು ಗೋಜಲು ಅಥವಾ ಗೊಂದಲ ಎನಿಸಿದಲ್ಲಿ, ಇಂಡೆಕ್ಸ್ ಫಂಡ್​ಗಳನ್ನು ಆಯ್ದುಕೊಳ್ಳುವುದು ಸುರಕ್ಷಿತ ಕ್ರಮ. ನಿಫ್ಟಿ50 ಇಂಡೆಕ್ಸ್ ಫಂಡ್ ಇದಕ್ಕೆ ಒಂದು ಉದಾಹರಣೆ. ಇಂಥ ಇಂಡೆಕ್ಸ್ ಫಂಡ್​ಗಳಲ್ಲಿ ಎಕ್ಸ್​ಪೆನ್ಸ್ ರೇಶಿಯೋ ಕಡಿಮೆ ಇರುತ್ತದೆ. ಒಟ್ಟಾರೆ ಷೇರು ಮಾರುಕಟ್ಟೆಯ ಗತಿ ಪ್ರಕಾರ ಇದು ರಿಟರ್ನ್ಸ್ ಕೊಡುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ತುಪ್ಪದ ಟ್ಯಾಂಕರ್ ಪಲ್ಟಿ, ತಿರುಪತಿ ಲಡ್ಡು ತಯಾರಿಕೆಗೆ ಅಡಚಣೆಯಾಗುತ್ತಾ? ಆಡಳಿತ ಹೇಳಿದ್ದೇನು?

ತಿರುಮಲ, ಮಾರ್ಚ್​ 10: ಕಡಪ ಜಿಲ್ಲೆಯಲ್ಲಿ ತಿರುಮಲ ತಿರುಪತಿ(Tirupati) ದೇವಸ್ಥಾನಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿಯಾಗಿತ್ತು. ಇದರಿಂದಾಗಿ ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ಲಡ್ಡು ತಯಾರಿಕೆಗೆ ಅಡಣೆಯುಂಟಾಗಿದೆ ಎನ್ನುವ ಸುದ್ದಿ ಹರಡಿತ್ತು. ಇದೀಗ ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ. ಸುಳ್ಳು ಸುದ್ದಿಯನ್ನು ನಂಬಬೇಡಿ, ಶ್ರೀವಾರಿ ಲಡ್ಡು ಪ್ರಸಾದ ತಯಾರಿಸಲು ಹಸುವಿನ ತುಪ್ಪದ ಕೊರತೆ ಇಲ್ಲ ಎಂದು ಹೇಳಿದೆ.

ಟ್ಯಾಂಕರ್ ದೇವಾಲಯಕ್ಕೆ ಮೀಸಲಾದ ತುಪ್ಪವನ್ನು ಸಾಗಿಸುತ್ತಿತ್ತು ಮತ್ತು ಅದರ ಸೋರಿಕೆಯಿಂದಾಗಿ ಪ್ರಸಿದ್ಧ ಪ್ರಸಾದ ತಯಾರಿಕೆಯ ಮೇಲೆ ಪರಿಣಾಮ ಬೀರಿದೆ ಎಂದು ಹೇಳುವ ಪೋಸ್ಟ್‌ಗಳ ನಂತರ ಈ ಸ್ಪಷ್ಟೀಕರಣ ಬಂದಿದೆ. ಲಡ್ಡು ತಯಾರಿಕೆ ಮತ್ತು ವಿತರಣೆಯನ್ನು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಸಲು ಸಾಕಷ್ಟು ಹಸುವಿನ ತುಪ್ಪದ ದಾಸ್ತಾನು ಲಭ್ಯವಿದೆ ಎಂದು ಹೇಳಿದೆ.

ಶ್ರೀವಾರಿ ಲಡ್ಡು ಪ್ರಸಾದವನ್ನು ತಯಾರಿಸಲು ಅಗತ್ಯವಿರುವ ತುಪ್ಪವನ್ನು ಮೂರು ಹಂತದ ಖರೀದಿ ವ್ಯವಸ್ಥೆಯ ಮೂಲಕ ಸುರಕ್ಷಿತಗೊಳಿಸಲಾಗುತ್ತದೆ, ಇದರ ಅಡಿಯಲ್ಲಿ ಮೂರು ಪ್ರತ್ಯೇಕ ಸಂಸ್ಥೆಗಳಿಂದ ಸರಬರಾಜುಗಳನ್ನು ಪಡೆಯಲಾಗುತ್ತದೆ ಎಂದು ಟಿಟಿಡಿ ತಿಳಿಸಿದೆ.

ಮತ್ತಷ್ಟು ಓದಿ: ತಿರುಪತಿಗೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ, ತುಂಬಿಸಿಕೊಳ್ಳಲು ಮುಗಿಬಿದ್ದ ಜನ

ಅನಿರೀಕ್ಷಿತ ಅಡಚಣೆಯು ಒಬ್ಬ ಪೂರೈಕೆದಾರರ ಮೇಲೆ ಪರಿಣಾಮ ಬೀರಿದರೂ ಪೂರೈಕೆ ಸರಪಳಿ ಸ್ಥಿರವಾಗಿರುವುದನ್ನು ಈ ವ್ಯವಸ್ಥೆಯು ಖಚಿತಪಡಿಸುತ್ತದೆ ಎಂದು ಟ್ರಸ್ಟ್ ಹೇಳಿದೆ. ಜನರು ಟಿನ್, ಬಕೆಟ್, ಬಾಟಲಿ ಮತ್ತು ಡ್ರಮ್‌ಗಳನ್ನು ಬಳಸಿ ತುಂಬಿಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ.ಸರಿಸುಮಾರು 21,000 ಲೀಟರ್ ತುಪ್ಪದಲ್ಲಿ ಕೇವಲ 500 ಲೀಟರ್ ಮಾತ್ರ ಉಳಿದಿತ್ತು.

ಪೊಲೀಸರು ಬರುವ ಮೊದಲೇ ಹೆಚ್ಚಿನ ಪ್ರಮಾಣದ ತುಪ್ಪವನ್ನು ತೆಗೆದುಕೊಂಡು ಹೋಗಲಾಗಿತ್ತು.ಕಡಪ ಜಿಲ್ಲೆಯ ಜಮ್ಮಲಮಡುಗು ಕ್ಷೇತ್ರದ ಕೊಂಡಾಪುರಂ ಮಂಡಲದ ಚಿತ್ರಾವತಿ ಸೇತುವೆಯ ಬಳಿ ತಿರುಮಲ ತಿರುಪತಿ ದೇವಸ್ಥಾನಕ್ಕೆ ಹೋಗುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ತೆಲುಗು ರಾಜ್ಯಗಳಲ್ಲಿ ಪವನ್ ಕಲ್ಯಾಣ್ ಚಿತ್ರಕ್ಕೆ ಹೊಡೆತ ಕೊಟ್ಟ ‘ಧುರಂಧರ್ 2’

‘ಟಾಕ್ಸಿಕ್’ vs ‘ಧುರಂಧರ್ 2’ ಎಂಬ ಟಾಕ್ ಜೋರಾಗಿತ್ತು. ಆದರೆ, ಯಶ್ ಅವರು ತಮ್ಮ ಚಿತ್ರವನ್ನು ಮುಂದಕ್ಕೆ ಹಾಕಿಕೊಳ್ಳುವ ಮೂಲಕ ಕ್ಲ್ಯಾಶ್ ತಪ್ಪಿಸಿದರು. ಹೀಗಾಗಿ, ‘ಧುರಂಧರ್ 2’ ಸೋಲೋ ರಿಲೀಸ್ ಕಾಣಲಿದೆ ಎನ್ನುವಾಗಲೇ ಪವನ್ ಕಲ್ಯಾಣ್ ಅವರ ‘ಉಸ್ತಾದ ಭಗತ್ ಸಿಂಗ್’ ಸಿನಿಮಾ ರಿಲೀಸ್ ಆಗುತ್ತಿದೆ. ಆದರೆ, ಈ ಚಿತ್ರಕ್ಕೆ ತೆಲುಗು ಭಾಗದಲ್ಲೇ ‘ಧುರಂಧರ್ 2’ ಸಿನಿಮಾ ಹೊಡೆತ ಕೊಡೋ ಸಾಧ್ಯತೆ ಇದೆ ಎಂದು ವರದಿ ಆಗಿದೆ.

‘ಧುರಂಧರ್ 2’ ಚಿತ್ರದ ದೊಡ್ಡ ಬಲ ಎಂದರೆ, ‘ಧುರಂಧರ್’ ಚಿತ್ರಕ್ಕೆ ಸಿಕ್ಕ ಪ್​ರತಿಕ್ರಿಯೆ ಮೊದಲ ಭಾಗ ಹಿಂದಿಯಲ್ಲಿ ಮಾತ್ರ ರಿಲೀಸ್ ಆಗಿತ್ತು. ಆದರೆ, ಸೀಕ್ವೆಲ್ ಹಿಂದಿ ಜೊತೆ ಕನ್ನಡ, ತೆಲುಗು ಮೊದಲಾದ ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಇದು ‘ಉಸ್ತಾದ್ ಭಗತ್ ಸಿಂಗ್​​’ ಚಿತ್ರಕ್ಕೆ ಸಾಕಷ್ಟು ಹೊಡೆತ ಕೊಡೋ ಸಾಧ್ಯತೆ ಇದೆ. ಈ ಸಿನಿಮಾ ರಿಮೇಕ್. ಅಲ್ಲದೆ, ಹೆಚ್ಚು ಹೈಪ್ ಇಲ್ಲ. ಇದು ಚಿತ್ರಕ್ಕೆ ಹಿನ್ನಡೆ ಆಗುವ ಸಾಧ್ಯತೆ ಇದೆ.

‘ಧುರಂಧರ್ 2’ ತೆಲುಗು ರಾಜ್ಯಗಳ ಅಡ್ವಾನ್ಸ್ ಬುಕಿಂಗ್​​ನಲ್ಲಿ ಮುಂದಿದೆ. ಸದ್ಯ ಪೇಯ್ಡ್ ಶೋಗಳನ್ನು ಮಾರ್ಚ್ 18ಕ್ಕೆ ಹಲವು ಶೋಗಳನ್ನು ಆಯೋಜನೆ ಮಾಡಲಾಗಿದ್ದು, ಇದರಲ್ಲಿ ಬಹುತೇಕವು ಫಿಲ್ಲಿಂಗ್ ಫಾಸ್ಟ್ ಹಂತದಲ್ಲಿ ಇದೆ. ಆದರೆ, ‘ಉಸ್ತಾದ್ ಭಗತ್ ಸಿಂಗ್’ ಆ ರೀತಿ ಅಲ್ಲ. ಇದು ತಮಳಿನ ದಳಪತಿ ವಿಜಯ್ ಅವರ ‘ತೇರಿ’ ಚಿತ್ರದ ರಿಮೇಕ್.

ಇದನ್ನೂ ಓದಿ: ‘ಧುರಂಧರ್ 2’ ಟಿಕೆಟ್ ಬೆಲೆ, ಯಾವ ನಗರದಲ್ಲಿ ಹೆಚ್ಚು? ಎಲ್ಲಿ ಕಡಿಮೆ?

‘ಉಸ್ತಾದ್ ಭಗತ್ ಸಿಂಗ್’ ರಿಮೇಕ್ ಮತ್ತು ಈ ಸಿನಿಮಾ ಪೂರ್ಣಗೊಳ್ಳಲು ಸಾಕಷ್ಟು ಸಮಯ ಹಿಡಿದಿದೆ. ಈ ಕಾರಣದಿಂದ ಚಿತ್ರಕ್ಕೆ ತೊಂದರೆ ಆಗುತ್ತಿದೆ. ಅಲ್ಲದೆ, ಈ ಮೊದಲು ರಿಲೀಸ್ ಆದ ಪವನ್ ಕಲ್ಯಾಣ್ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಗಮನ ಸೆಳೆಯಲು ವಿಫಲವಾಗಿವೆ. ಈ ಕಾರಣದಿಂದಲೂ ಚಿತ್ರಕ್ಕೆ ಹೆಚ್ಚಿನ ಹೈಪ್ ಸಿಗುತ್ತಿಲ್ಲ. ಆದರೆ, ‘ಧುರಂಧರ್ 2’ ಹಾಗಲ್ಲ. ದಕ್ಷಿಣದಲ್ಲೂ ಈ ಸಿನಿಮಾ ಪಾರುಪತ್ಯ ಸಾಧಿಸಿದೆ. ‘ಧುರಂಧರ್ 2’ ಚಿತ್ರದಲ್ಲಿ ರಣವೀರ್ ಸಿಂಗ್ ನಟಿಸಿದ್ದಾರೆ. ಈ ಚಿತ್ರಕ್ಕೆ, ರಣವೀರ್ ಸಿಂಗ್ ನಾಯಕ. ಆದಿತ್ಯ ಧಾರ್ ಅವರ ನಿರ್ದೇಶನ ಚಿತ್ರಕ್ಕೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link