ವೆಣ್ಣಪ್ಪುವಾ (ಶ್ರೀಲಂಕಾ): ವೆಣ್ಣಪ್ಪುವಾದ ತಂಬರವಿಲ ಪ್ರದೇಶದಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಯುವತಿಯನ್ನು ತಡೆದು, ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ ಘಟನೆಯೊಂದು ವರದಿಯಾಗಿದೆ. ಘಟನೆಗೆ ಸಂಬಂಧಿಸಿದ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದೆ.
ಯುವತಿಯ ಹಿಂದಿನಿಂದಲೇ ಮತ್ತೊಂದು ಬೈಕ್‌ನಲ್ಲಿ ಬಂದ ದುಷ್ಕರ್ಮಿ ಆಕೆಯ ಸರವನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದಾನೆ. ಈ ವೇಳೆ ಯುವತಿಯ ಬೈಕ್ ನಿಯಂತ್ರಣ ತಪ್ಪಿ ಬಿದ್ದಿದೆ. ಬಿದ್ದ ಅವಕಾಶವನ್ನು ಬಳಸಿಕೊಂಡ ಆರೋಪಿಯು ಯುವತಿಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಬಲವಂತವಾಗಿ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ, ಈ ವೇಳೆ ಆತನ ಬೈಕ್ ಸ್ಟಾರ್ಟ್ ಕಾರಣ, ಸ್ಥಳದಲ್ಲಿದ್ದವರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮದುವೆ (Weeding), ಗೃಹಪ್ರವೇಶ ಸೇರಿದಂತೆ ವಿವಿಧ ಶುಭ ಸಮಾರಂಭಗಳಿಗೆ ಸಾಮಾನ್ಯವಾಗಿ ಸಂಬಂಧಿಕರು, ಸ್ನೇಹಿತರು ಮತ್ತು ಪರಿಚಿತರನ್ನು ಆಹ್ವಾನಿಸುವುದು ಸಂಪ್ರದಾಯ. ಆದರೆ ಕೆಲವರು ಆಹ್ವಾನವಿಲ್ಲದೆ ಇಂತಹ ಕಾರ್ಯಕ್ರಮಗಳಿಗೆ ಹೋಗಿ ಊಟ ಮಾಡುವುದು ಕೂಡ ಇರುತ್ತದೆ. ವಿಶೇಷವಾಗಿ ನಗರಗಳಲ್ಲಿ ಇಂಥ ‘(Gatecrashing) ಗೇಟ್ ಕ್ರ್ಯಾಶಿಂಗ್ (ಆಹ್ವಾನವಿಲ್ಲದೆ ಖಾಸಗಿ ಸಮಾರಂಭಗಳಿಗೆ ಹೋಗಿ ಊಟ ಮಾಡುವುದು)’ ನಡೆಯತ್ತದೆ. ‘ಅತಿಥಿ ದೇವೋ ಭವ (ಅತಿಥಿಗಳನ್ನೇ ದೇವರು ಎಂದು ಪರಿಗಣಿಸುವ)’ ಎಂಬ ದೇಶ ನಮ್ಮದಾಗಿರುವ ಕಾರಣ ಇದು ದೊಡ್ಡದಲ್ಲ ಬಿಡಿ. ಸಮಾರಂಭಕ್ಕೆ ಬಂದವರಿಗೆ ಉಪಚಾರ ಮಾಡಿ ಕಳುಹಿಸಲಾಗುತ್ತದೆ.
ಆದರೆ, ಈಗ ಕಾಲ ಬದಲಾಗುತ್ತಿದೆ. ಈ ದುಬಾರಿ ದುನಿಯಾದಲ್ಲಿ ಕರೆಯದೇ ಬಂದವರನ್ನು ಸ್ವಾಗತಿಸಿ ಊಟ ಹಾಕಲೇಬೇಕೆಂದೇನಿಲ್ಲವಲ್ಲ! ಅದು ಹಾಗಿರಲಿ. ಆಹ್ವಾನವಿಲ್ಲದೆ ಮದುವೆ ಅಥವಾ ಇತರ ಖಾಸಗಿ ಸಮಾರಂಭಗಳಿಗೆ ಹೋಗಿ ಊಟ ಮಾಡುವುದು ಕಾನೂನುಬಾಹಿರ ಆಗಬಹುದು ಎಂಬ ಕಲ್ಪನೆಯೂ ಅನೇಕರಿಗೆ ಇರಲಿಕ್ಕಿಲ್ಲ. ಇತ್ತೀಚಿನ ದಿನಗಳಲ್ಲಿ ಕೆಲ ಕಾರ್ಯಕ್ರಮಗಳ ಆಯೋಜಕರು ಆಹ್ವಾನಿಸದೇ ಊಟಕ್ಕೆ ಬರುವವರನ್ನು ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ‘ತೆಲುಗು’ ಬೋರ್ಡ್ ಒಂದು ಇದೀಗ ವೈರಲ್ ಆಗುತ್ತಿದೆ.
ಸಮಾರಂಭವೊಂದರ ಹಾಲ್ನ ಹೊರಭಾಗದಲ್ಲಿ ಹಾಕಲಾಗಿರುವ ಬೋರ್ಡ್ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
ವೈರಲ್ ಆಗುತ್ತಿರುವ ತೆಲುಗು ಬೋರ್ಡ್ ಇಲ್ಲಿ ನೋಡಿ
ಬೋರ್ಡ್‌ನಲ್ಲಿ ಬರೆದಿರುವುದು ಏನು?
ಸಮಾರಂಭಕ್ಕೆ ಸಂಬಂಧಿಸದವರು ಒಳಗೆ ಬಂದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅಂಥವರಿಗೆ ಸೆಕ್ಷನ್ 441 ರ ಅಡಿಯಲ್ಲಿ 3 ತಿಂಗಳು ಜೈಲು ಶಿಕ್ಷೆ ಮತ್ತು 5,000 ರೂ. ದಂಡ ವಿಧಿಸಲಾಗುತ್ತದೆ ಎಂದು ಎಂದು ಆ ಬೋರ್ಡ್‌ನಲ್ಲಿ ಎಚ್ಚರಿಕೆ ಸಂದೇಶ ಪ್ರಕಟಿಸಲಾಗಿದೆ.
ಸೆಕ್ಷನ್ 441 ಎಂದರೇನು?
ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 441 (ಈಗ ಭಾರತೀಯ ನ್ಯಾಯ ಸಂಹಿತಾ ಅಥವಾ BNS ಎಂದು ಬದಲಾಗಿದ್ದು, ಸೆಕ್ಷನ್ 329 ಆಗಿದೆ) ಕ್ರಿಮಿನಲ್ ಅತಿಕ್ರಮಣಕ್ಕೆ ಸಂಬಂಧಿಸಿದೆ. ಅಂದರೆ, ಯಾರಾದರೂ ವ್ಯಕ್ತಿಯ ಖಾಸಗಿ ಆಸ್ತಿ ಅಥವಾ ಅವರು ಕಾರ್ಯಕ್ರಮ ನಡೆಸುತ್ತಿರುವ ಸ್ಥಳಕ್ಕೆ ಅವರ ಅನುಮತಿಯಿಲ್ಲದೆ ಪ್ರವೇಶಿಸಿದರೆ ಅದು ಅಪರಾಧವಾಗುತ್ತದೆ.
ಈ ನಿಯಮದ ಅಡಿಯಲ್ಲಿ ತಪ್ಪಿತಸ್ಥರೆಂದು ಕಂಡುಬಂದರೆ ಮೂರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡೂ ವಿಧಿಸಬಹುದಾಗಿದೆ ಎಂದು ಕಾನೂನು ಹೇಳುತ್ತದೆ. ಕೆಲ ಸಂದರ್ಭಗಳಲ್ಲಿ ಆಯೋಜಕರು ದಂಡ ವಿಧಿಸುವ ಬಗ್ಗೆ ಕೂಡಾ ಎಚ್ಚರಿಕೆ ನೀಡಲಾಗಿದೆ.
ಹೀಗಾಗಿ, ಆಹ್ವಾನಿಸದ ಮದುವೆ ಅಥವಾ ಸಮಾರಂಭಗಳಿಗೆ ಹೋಗಿ ಊಟ ಮಾಡುವ ಮುನ್ನ ಅದರ ಕಾನೂನು ಪರಿಣಾಮಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ ಎಂಬ ಚರ್ಚೆ ಈಗ ಶುರುವಾಗಿದೆ. ಒಟ್ಟಿನಲ್ಲಿ, ಮೋಜಿಗಾಗಿ ಅಥವಾ ಉಚಿತ ಊಟಕ್ಕಾಗಿ ‘ಗೇಟ್ ಕ್ರ್ಯಾಶಿಂಗ್’ ಮಾಡುವವರು ಇಂತಹ ಕಾನೂನು ನಿಯಮಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಉತ್ತಮ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮಾರ್ಚ್ 10: ಸರ್ಕಾರಿ ಸ್ವಾಮ್ಯದ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ (KSIC) ತಯಾರಿಸುವ ಪ್ರಸಿದ್ಧ ಮೈಸೂರು ಸಿಲ್ಕ್ ಸೀರೆಗಳಿಗೆ (Mysore Silk Sarees) ಇತ್ತೀಚಿನ ದಿನಗಳಲ್ಲಿ ಭಾರೀ ಬೇಡಿಕೆ ವ್ಯಕ್ತವಾಗುತ್ತಿದೆ. ಇದರಿಂದಾಗಿ ಪೂರೈಕೆಯೇ ಸವಾಲಾಗಿ ಪರಿಣಮಿಸಿದ್ದು, ಸೀರೆಗಳ ಆನ್‌ಲೈನ್ ಮಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿಗಮ ಚಿಂತನೆ ನಡೆಸಿದೆ. ಕೆಎಸ್‌ಐಸಿ ಸೀರೆ ಮಳಿಗೆಗಳ ಹೊರಗೆ ಜನರು ಉದ್ದನೆಯ ಸಾಲಿನಲ್ಲಿ ನಿಂತಿದ್ದ ದೃಶ್ಯಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಈ ಕುರಿತು ರೇಷ್ಮೆ ಸಚಿವ ಕೆ. ವೆಂಕಟೇಶ್ ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದು, ಕೆಎಸ್‌ಐಸಿ ಪ್ರತಿದಿನ ಸರಾಸರಿ 350 ರಿಂದ 400 ಸೀರೆಗಳನ್ನು ತಯಾರಿಸುತ್ತಿದೆ ಎಂದು ತಿಳಿಸಿದ್ದಾರೆ. ಆನ್‌ಲೈನ್ ಮಾರಾಟ ಆರಂಭವಾದ ನಂತರ ದೇಶದ ವಿವಿಧ ಭಾಗಗಳ ಗ್ರಾಹಕರು ಸುಲಭವಾಗಿ ಮೈಸೂರು ಸಿಲ್ಕ್ ಸೀರೆಗಳನ್ನು ಖರೀದಿಸುವುದು ಸಾಧ್ಯವಾಯಿತು. ಆದರೆ ಈಗ ರಾಜ್ಯದ ಜನರು, ವಿಶೇಷವಾಗಿ ಸ್ಥಳೀಯ ಗ್ರಾಹಕರು, ಹೆಚ್ಚಿನ ಸಂಖ್ಯೆಯಲ್ಲಿ ಅಂಗಡಿಗಳಿಗೆ ಭೇಟಿ ನೀಡುತ್ತಿರುವುದರಿಂದ ಪೂರೈಕೆಯನ್ನು ಸಮರ್ಪಕವಾಗಿ ನಿರ್ವಹಿಸುವುದು ಸವಾಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ ಕಾರಣದಿಂದಾಗಿ, ಕೆಲವು ಸಮಯದವರೆಗೆ ಆನ್‌ಲೈನ್ ಆರ್ಡರ್‌ಗಳನ್ನು ಸ್ಥಗಿತಗೊಳಿಸುವುದು ಅಥವಾ ಮಿತಿಗೊಳಿಸಲು ಚಿಂತನೆ ನಡೆಸಲಾಗುತ್ತಿದೆ. ನೇರವಾಗಿ ಮಳಿಗೆಗಳಿಗೆ ಬರುವ ಗ್ರಾಹಕರಿಗೆ ಆದ್ಯತೆ ನೀಡುವುದಕ್ಕಾಗಿ ಈ ಕ್ರಮದ ಬಗ್ಗೆ ಕೆಎಸ್‌ಐಸಿ ಚಿಂತನೆ ನಡೆಸುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ರೇಷ್ಮೆ ಸೀರೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!
ಕಳೆದ ಮೂರು ಹಣಕಾಸು ವರ್ಷಗಳಲ್ಲಿ ಕೆಎಸ್‌ಐಸಿ ಉತ್ತಮ ವ್ಯವಹಾರ ಸಾಧನೆ ಮಾಡಿದೆ. ಈ ಅವಧಿಯಲ್ಲಿ 3.1 ಲಕ್ಷಕ್ಕೂ ಹೆಚ್ಚು ಸೀರೆಗಳನ್ನು ತಯಾರಿಸಿದ್ದು, ಅವುಗಳಲ್ಲಿ ಸುಮಾರು 3.09 ಲಕ್ಷ ಸೀರೆಗಳನ್ನು ಮಾರಾಟ ಮಾಡಲಾಗಿದೆ.
ರೇಷ್ಮೆ ಸೀರೆ ಉತ್ಪಾದನೆ ಹೆಚ್ಚಳಕ್ಕೆ ಕ್ರಮ
ರೇಷ್ಮೆ ಸೀರೆ ಉತ್ಪಾದನೆ ಹೆಚ್ಚಿಸಲು ಕೆಎಸ್‌ಐಸಿ ಈಗಾಗಲೇ 30 ಹೊಸ ಎಲೆಕ್ಟ್ರಾನಿಕ್ ಜಾಕ್ವಾರ್ಡ್ ಲೂಮ್‌ಗಳನ್ನು ಸೇರಿಸಿದ್ದು, ಇದರಿಂದ ಸೀರೆಗಳ ಉತ್ಪಾದನೆ ಸ್ವಲ್ಪ ಮಟ್ಟಿಗೆ ಹೆಚ್ಚುವ ನಿರೀಕ್ಷೆಯಿದೆ.
ಮೈಸೂರು ರೇಷ್ಮೆ ಸೀರೆಗಳನ್ನು ಖರೀದಿಸಲು ಗ್ರಾಹಕರು ಮುಂಜಾನೆಯೇ ಕೆಎಸ್‌ಐಸಿ ಅಂಗಡಿಗಳ ಮುಂದೆ ಸರದಿ ಸಾಲಿನಲ್ಲಿ ನಿಲ್ಲುತ್ತಿರುವ ಬಗ್ಗೆ ಇತ್ತೀಚೆಗೆ ವರದಿಯಾಗಿತ್ತು. ಅದಕ್ಕೆ ಸಂಬಂಧಿಸಿದ ವಿಡಿಯೋಗಳೂ ವೈರಲ್ ಆಗಿದ್ದವು.
ಒಟ್ಟಾರೆಯಾಗಿ, ಮೈಸೂರು ಸಿಲ್ಕ್ ಸೀರೆಗಳಿಗೆ ಹೆಚ್ಚುತ್ತಿರುವ ಬೇಡಿಕೆಯ ನಡುವೆಯೇ ಪೂರೈಕೆಯನ್ನು ಸಮತೋಲನಗೊಳಿಸಲು ಕೆಎಸ್‌ಐಸಿ ಹೊಸ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಬೆಂಗಳೂರು, ಮಾರ್ಚ್ 10: ತೆರಿಗೆ ವಸೂಲಿ ವಿಚಾರದಲ್ಲಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ನಡೆಯೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಡ್ರೋನ್ ಸರ್ವೆ ಮೂಲಕ ಹೆಚ್ಚುವರಿ ತೆರಿಗೆ ವಸೂಲಿಗೆ ಜಿಬಿಎ ಮುಂದಾಗಿದ್ದು, ಕಟ್ಟಡದ ಬಾಲ್ಕನಿ, ಕಿಟಿಕಿ ಮೇಲಿನ ಸಜ್ಜೆ, ವಾಟರ್ ಟ್ಯಾಂಕ್ ಸ್ಟ್ಯಾಂಡ್, ಕಾರ್ ಪಾರ್ಕಿಂಗ್, ಪೋರ್ಟಿಕೋ, ಮನೆ ಮುಂದಿನ ತಾತ್ಕಾಲಿಕ ಗಜಿಬೋ ಸೇರಿ ಮನೆಯ ಪೂರಕ ಕಟ್ಟಡಕ್ಕೂ ತೆರಿಗೆ ವಿಧಿಸಲಾಗಿದೆ. ಇದುವರೆಗೂ ಅಂದಾಜು 46 ಸಾವಿರ ಮನೆ ಮಾಲಿಕರಿಂದ ಟ್ಯಾಕ್ಸ್ ಸಂಗ್ರಹಕ್ಕೆ ಜಿಬಿಎ ಮುಂದಾಗಿದ್ದು, 5 ಲಕ್ಷದಿಂದ 18 ಲಕ್ಷದವರೆಗೂ ಹೆಚ್ಚವರಿ ತೆರಿಗೆ ವಸೂಲಿಗೆ ಮೆಸೇಜ್ ಮೂಲಕ ನೋಟಿಸ್ ನೀಡಿದೆ.
ಮೆಸೇಜ್ ಓಪನ್ ಮಾಡಿದ್ರೆ ನೋಟಿಸ್ ಸ್ವೀಕರಿಸಲಾಗಿದೆ ಎಂದೇ ಭಾವಿಸಿ ಕ್ರಮಕ್ಕೆ ಮುಂದಾಗಲಿರುವ ಜಿಬಿಎ ಹೆಚ್ಚುವರಿ ತೆರಿಗೆ ಪ್ರಶ್ನೆ ಮಾಡಿದವರ ಮನೆಯನ್ನೇ ಹರಾಜಿಗೆ ಮುಂದಾಗಿದೆ. 17 ಮನೆಗಳ ಹರಾಜು ಪ್ರಕ್ರಿಯೆಗೆ ಅಂತಿಮ ನೋಟಿಸ್ ನೀಡಲಾಗಿದ್ದು, ಐದು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 46 ಸಾವಿರ ಜನರಿಗೆ ನೋಟಿಸ್ ನೀಡಲಾಗಿರುವ ಜಿಬಿಎ ಕ್ರಮವನ್ನು ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಪ್ರಶ್ನೆ ಮಾಡಿದ್ದಾರೆ.
ಡ್ರೋನ್ ಸರ್ವೆ ನಡೆಸಿ ಬೆಂಗಳೂರಿನಲ್ಲಿ ಮನೆಗಳಿಗೆ ಬಾಕಿ ಹೆಚ್ಚುವರಿ ತೆರಿಗೆ, ದಂಡ ವಿಧಿಸಲಾಗುತ್ತಿದೆ. ಒಂದು ಮನೆಗೆ 7-8 ಲಕ್ಷ, 30 ಲಕ್ಷದವರೆಗೆ ತೆರಿಗೆ, ದಂಡ ಹಾಕ್ತಿದ್ದಾರೆ ಎಂದು ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ಪ್ರಸ್ತಾಪಿಸಿದ್ದಾರೆ. ರಾಮಮೂರ್ತಿ ಹೇಳಿಕೆಗೆ ಧ್ವನಿಗೂಡಿಸಿದ ಶಾಸಕರ ಸುರೇಶ್ ಕುಮಾರ್, ಇದು ಆಸ್ತಿ ತೆರಿಗೆ ಭಯೋತ್ಪಾದನೆ. ಇದನ್ನ ಹಿಂಪಡೆಯಿರಿ ಎಂದು ಆಗ್ರಹಿಸಿದ್ದಾರೆ. ಬಿಜೆಪಿ ಶಾಸಕರ ಹೇಳಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಉತ್ತರಿಸಿದ್ದು, ನಾವು ಡ್ರೋನ್ ಸರ್ವೇ ನಡೆಸಿ ಯಾವುದೇ ನೋಟಿಸ್ ಕೊಡ್ತಿಲ್ಲ. ಆದ್ರೆ ಡ್ರೋನ್ ಮೂಲಕ ಮನೆಗಳ ಸರ್ವೆ ಕಾರ್ಯ ನಡೆಯುತ್ತಿದೆ. ಮೊದಲು ಸೆಲ್ಫ್ ಅಸೆಸ್‌ಮೆಂಟ್ ಸ್ಕೀಂ ತಂದವನು ನಾನು. ಒನ್ ಟೈಮ್ ಸೆಟ್ಲ್ಮೆಂಟ್ ಸ್ಕೀಂ ಕೂಡಾ ಕೊಡುತ್ತಿದ್ದೇವೆ. ಈ ಬಗ್ಗೆ ಯಾರಿಗಾದ್ರೂ ಸಮಸ್ಯೆ ಇದ್ರೆ ಅರ್ಜಿ ಕೊಡಲಿ. ಸಮಸ್ಯೆ ಇದ್ದವರಿಗೆ ಸರಿಪಡಿಸ್ತೇವೆಂದು ತಿಳಿಸಿದ್ದಾರೆ.
ತೆಲಂಗಾಣ, ಮಾರ್ಚ್ 10: ತೆಲಂಗಾಣದ ಭದ್ರಾದ್ರಿ ಕೊಥಗುಡೆಮ್ ಜಿಲ್ಲೆಯಲ್ಲಿ ಅಪರೂಪದ ಘಟನೆ ನಡೆದಿದೆ. ತೇಕುಲಪಲ್ಲಿ ಮಂಡಲದ ರೋಲ್ಲಪಾಡು ಗ್ರಾಮದ ಕೊಳದಲ್ಲಿ ಮೀನುಗಾರಿಕೆಗೆ ಇಟ್ಟಿದ್ದ ಬಲೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವೊಂದು ಸಿಲುಕಿ ಸಾವನ್ನಪ್ಪಿದೆ.ಪ್ರತಿದಿನದಂತೆ, ಸ್ಥಳೀಯ ಮೀನುಗಾರರು ಮೀನು ಹಿಡಿಯಲು ಕೊಳದಲ್ಲಿ ಬಲೆ ಬೀಸಿದ್ದರು. ಮರುದಿನ ಬೆಳಿಗ್ಗೆ, ಕೊಳಕ್ಕೆ ಹೋಗಿ ಬಲೆ ಎಳೆಯುತ್ತಿದ್ದಾಗ, ಒಂದು ದೊಡ್ಡ ಭಾರವಾದ ವಸ್ತು ಸಿಕ್ಕಿಹಾಕಿಕೊಂಡಿದೆ ಎಂದು ಭಾವಿಸಿದ್ದರು. ಇದು ಮೀನುಗಾರರನ್ನು ಆಶ್ಚರ್ಯಗೊಳಿಸಿತು. ಏನಾಯಿತು ಎಂದು ನೋಡಲು ಅವರು ಬಲೆಯನ್ನು ದಡಕ್ಕೆ ಎಳೆದಾಗ, ಸುಮಾರು 12 ಅಡಿ ಉದ್ದ ಮತ್ತು ಸುಮಾರು 50 ಕೆಜಿ ತೂಕದ ಹೆಬ್ಬಾವು ಅದರಲ್ಲಿ ಸಿಲುಕಿಕೊಂಡಿರುವುದು ಕಂಡುಬಂದಿದೆ.
ಆದರೆ, ಹೆಬ್ಬಾವು ಈಗಾಗಲೇ ಸತ್ತಿದ್ದರಿಂದ, ಮೀನುಗಾರರು ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ತಲುಪಿದ ಅರಣ್ಯ ಅಧಿಕಾರಿಗಳು ಅದರ ಸಾವಿನ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಹೆಬ್ಬಾವು ಕೊಳದಲ್ಲಿ ಮೀನು ತಿನ್ನುವಾಗ ಬಲೆಗೆ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿರಬಹುದು ಎಂದು ಗ್ರಾಮಸ್ಥರು ಹೇಳಿದ್ದಾರೆ.
ಬೆಂಗಳೂರು: ಭಾರತೀಯ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ (IDBI) ದೇಶಾದ್ಯಂತ ಇರುವ ತನ್ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವ 1300 ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ (ಗ್ರೇಡ್ ‘O’) ಮತ್ತು ಅಸಿಸ್ಟೆಂಟ್ ಮ್ಯಾನೇಜರ್ (ಗ್ರೇಡ್ ‘A’) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಪೈಕಿ 1100 ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಹಾಗೂ 200 ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳು ಖಾಲಿ ಇವೆ. ದೇಶದ ಪ್ರಮುಖ ನಗರಗಳಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ 75 ಹುದ್ದೆಗಳು ಲಭ್ಯವಿವೆ. ಆಸಕ್ತ ಅಭ್ಯರ್ಥಿಗಳು ಮಾರ್ಚ್ 19 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸತಕ್ಕದ್ದು.
ಆಯ್ಕೆ ಪ್ರಕ್ರಿಯೆಯು ಆನ್‌ಲೈನ್ ಲಿಖಿತ ಪರೀಕ್ಷೆ, ವೈಯಕ್ತಿಕ ಸಂದರ್ಶನ ಮತ್ತು ದಾಖಲೆಗಳ ಪರಿಶೀಲನೆಯನ್ನು ಒಳಗೊಂಡಿರುತ್ತದೆ. ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಕನಿಷ್ಠ ಶೇ. 60 ಅಂಕಗಳೊಂದಿಗೆ (SC/ST/ದಿವ್ಯಾಂಗರಿಗೆ 55%) ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಇನ್ನು ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಪದವಿಯೊಂದಿಗೆ ಬ್ಯಾಂಕಿಂಗ್ ವಲಯದಲ್ಲಿ ಕನಿಷ್ಠ ಎರಡು ವರ್ಷಗಳ ಕೆಲಸದ ಅನುಭವ ಕಡ್ಡಾಯವಾಗಿದೆ.
ಮಾರ್ಚ್ 1, 2026 ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗಳು 20 ರಿಂದ 25 ವರ್ಷ ವಯಸ್ಸಿನವರಾಗಿರಬೇಕು (ಮೀಸಲಾತಿ ಅನ್ವಯ ವಯೋಮಿತಿ ಸಡಿಲಿಕೆ ಇದೆ). ಆಯ್ಕೆಯಾದವರಿಗೆ ವಾರ್ಷಿಕ ರೂ. 6.14 ಲಕ್ಷದಿಂದ ರೂ. 6.50 ಲಕ್ಷದವರೆಗೆ ವೇತನ ಸಿಗಲಿದೆ. ಸಾಮಾನ್ಯ ಅಭ್ಯರ್ಥಿಗಳಿಗೆ ರೂ. 1050 ಮತ್ತು ಮೀಸಲು ಅಭ್ಯರ್ಥಿಗಳಿಗೆ ರೂ. 250 ಅರ್ಜಿ ಶುಲ್ಕ ನಿಗದಿಪಡಿಸಲಾಗಿದ್ದು, ಏಪ್ರಿಲ್ 12 ರಂದು ಆನ್‌ಲೈನ್ ಪರೀಕ್ಷೆಗಳು ನಡೆಯಲಿವೆ. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಕೆಲಸ ಮಾಡಲು ಅವಕಾಶವಿದ್ದು, ಉದ್ಯೋಗಾಕಾಂಕ್ಷಿಗಳು ಬ್ಯಾಂಕಿನ ಅಧಿಕೃತ ವೆಬ್‌ಸೈಟ್ ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.
ನವದೆಹಲಿ, ಮಾರ್ಚ್ 10: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ (PM Kisan scheme) 9-10 ಕೋಟಿ ರೈತರು ಸರ್ಕಾರದಿಂದ ವರ್ಷಕ್ಕೆ 6,000 ರೂ ಸಹಾಯಧನ ಪಡೆಯುತ್ತಿದ್ದಾರೆ. ವರ್ಷಕ್ಕೆ ಮೂರು ಕಂತುಗಳಲ್ಲಿ ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಾಕಲಾಗುತ್ತದೆ. 2018-19ರಲ್ಲಿ ಆರಂಭವಾದ ಪಿಎಂ ಕಿಸಾನ್ ಯೋಜನೆಯಲ್ಲಿ ಈವರೆಗೂ 21 ಕಂತುಗಳನ್ನು ರೈತರಿಗೆ ನೀಡಲಾಗಿದೆ. ಈಗ 22ನೇ ಕಂತಿನ ನಿರೀಕ್ಷೆಯಲ್ಲಿ ರೈತರಿದ್ದಾರೆ.
ಕೆಲ ವರದಿಗಳ ಪ್ರಕಾರ ಹೋಳಿ ಹಬ್ಬಕ್ಕೆ (ಮಾ. 4) ಮುನ್ನವೇ ರೈತರ ಖಾತೆಗಳಿಗೆ ಒಂದು ಕಂತಿನ ಹಣವಾದ 2,000 ರೂ ಹಾಕುವ ನಿರೀಕ್ಷೆ ಇತ್ತು. ಆದರೆ, ಬಿಡುಗಡೆಯಾಗಿಲ್ಲ. ಕೆಲ ವರದಿಗಳು ಯುಗಾದಿ ಹಬ್ಬದ ಒಳಗೆ ಹಣ ಬಿಡುಗಡೆಯಾಗಬಹುದು ಎನ್ನುತ್ತಿವೆ. ಮತ್ತೂ ಕೆಲ ವರದಿಗಳು ಈ ವಾರವೇ ಕಂತಿನ ಹಣ ಸಿಗಬಹುದು ಎನ್ನುತ್ತಿವೆ.
ಮಾರ್ಚ್ 13, ಶುಕ್ರವಾರದಂದು ಪ್ರಧಾನಿ ನರೇಂದ್ರ ಮೋದಿ ಅವರು ಅಸ್ಸಾಮ್ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಆಗಲೇ ಅವರು ಪಿಎಂ ಕಿಸಾನ್ 22ನೇ ಕಂತಿನ ಬಿಡುಗಡೆ ಪ್ರಕಟಿಸುವ ನಿರೀಕ್ಷೆ ಇದೆ.
ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ವರ್ಷಕ್ಕೆ 6,000 ರೂ ಅನ್ನು ಸರ್ಕಾರ ಸಹಾಯಧನವಾಗಿ ನೀಡುತ್ತದೆ. ವರ್ಷದಲ್ಲಿ ಮೂರು ಕಂತುಗಳಲ್ಲಿ ಈ ಹಣವನ್ನು ಬ್ಯಾಂಕ್ ಖಾತೆಗೆ ನೇರವಾಗಿ ಹಾಕಲಾಗುತ್ತದೆ. ಪ್ರತೀ ಕಂತಿನಲ್ಲಿ 2,000 ರೂ ಸಿಗುತ್ತದೆ.
ಈ ಯೋಜನೆಗೆ ನೊಂದಾಯಿಸುವವರು ರೈತರಾಗಿರಬೇಕು, ಕೃಷಿ ಜಮೀನು ಹೊಂದಿರಬೇಕು. ಗ್ರಾಮದ ಸಮೀಪ ಇರುವ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಜಮೀನಿನ ಪಹಣಿ ದಾಖಲೆ, ಆಧಾರ್, ಬ್ಯಾಂಕ್ ಅಕೌಂಟ್ ದಾಖಲೆಗಳನ್ನು ಕೊಟ್ಟು ಯೋಜನೆಗೆ ನೊಂದಾಯಿಸಬಹುದು. ಆನ್ಲೈನ್ನಲ್ಲಿ ಪಿಎಂ ಕಿಸಾನ್ ವೆಬ್ಸೈಟ್ಗೆ ಹೋಗಿ ಅಲ್ಲಿಯೂ ನೊಂದಾಯಿಸಬಹುದು. ಬ್ಯಾಂಕ್ ಖಾತೆಯು ಆಧಾರ್ಗೆ ಜೋಡಿತವಾಗಿರಬೇಕು.
ಈ ರೈತರು ಯೋಜನೆಗೆ ಅರ್ಹರಿರುವುದಿಲ್ಲ…
ಕೃಷಿ ಭೂಮಿ ಹೊಂದಿದ್ದರೂ ಕೆಲ ರೈತರು ಈ ಯೋಜನೆಗೆ ಅರ್ಹರಿರುವುದಿಲ್ಲ. ಆದಾಯ ತೆರಿಗೆ ಪಾವತಿಸುತ್ತಿರುವವರು, ಅಥವಾ ಕುಟುಂಬದ ಬೇರೊಬ್ಬ ಸದಸ್ಯರು ಆದಾಯ ತೆರಿಗೆ ಪಾವತಿದಾರರಾಗಿದ್ದಾಗ್ಯೂ ಯೋಜನೆಗೆ ಅರ್ಹರಾಗಿರುವುದಿಲ್ಲ.
ಹಾಗೆಯೇ, ಕುಟುಂಬದಲ್ಲಿ ಯಾರಾದರೂ ಸದಸ್ಯರು ಶಾಸಕ, ಸಂಸದ, ಜಿಪಂ ಸದಸ್ಯ ಇತ್ಯಾದಿ ಆಗಿರಕೂಡದು. ವೈದ್ಯ, ವಕೀಲ, ಎಂಜಿನಿಯರ್ ಇತ್ಯಾದಿ ವೃತ್ತಿಪರರಾಗಿರಕೂಡದು. ಸರ್ಕಾರಿ ನೌಕರರು ಆಗಿರಕೂಡದು. ತಿಂಗಳಿಗೆ 10,000 ರೂಗಿಂತ ಹೆಚ್ಚು ಸರ್ಕಾರಿ ಪಿಂಚಣಿ ಪಡೆಯುವವರು ಇರಕೂಡದು.
ಗಮನಿಸಬೇಕಾದ ಇನ್ನೂ ಕೆಲ ಸಂಗತಿಗಳೆಂದರೆ, ಒಂದೇ ಕುಟುಂಬದ ಇಬ್ಬರು ಸದಸ್ಯರು ಯೋಜನೆಯ ಫಲ ಪಡೆಯುವಂತಿಲ್ಲ. ಕುಟುಂಬದಲ್ಲಿ ಒಬ್ಬರಿಗೆ ಮಾತ್ರವೇ ಇದು ಸಿಗುವುದು. ಮತ್ತೊಂದು ಸಂಗತಿ ಎಂದರೆ, 2019ರ ನಂತರ ಅಪ್ಪ ಬದುಕಿರುವಾಗಲೇ ಅವರ ಜಮೀನನ್ನು ತಮ್ಮ ಹೆಸರಿಗೆ ಮಗ ಬರೆಸಿಕೊಂಡಿದ್ದರೆ ಆಗಲೂ ಪಿಎಂ ಕಿಸಾನ್ ಯೋಜನೆಗೆ ಅರ್ಹರಾಗಿರುವುದಿಲ್ಲ.
ಹೆಚ್ಚಿನ ವಿವರಗಳಿಗೆ ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ: pmkisan.gov.in/
ಈಗಿನ ಕಾಲದ ಮಕ್ಕಳು (children) ದೊಡ್ಡವರನ್ನು ಕೂಡ ಯಾಮಾರಿಸಿ ಬಿಡುತ್ತಾರೆ. ಶಾಲೆಗೆ ಹೋಗೋದು, ಹೋಮ್ ವರ್ಕ್ (home work) ಮಾಡುವ ವಿಷ್ಯದಲ್ಲಿ ನೆಪ ಹೇಳಿ ತಪ್ಪಿಸಿಕೊಳ್ತಾರೆ. ಇದಕ್ಕೆ ಉದಾಹರಣೆಯಂತಿದೆ ಈ ವಿಡಿಯೋ. ಶಾಲೆಯಲ್ಲಿ ಟೀಚರ್ ಜನವರಿ ಫೆಬ್ರವರಿ ಹೇಳು ಎನ್ನುತ್ತಿದ್ದಂತೆ ಪುಟ್ಟ ಹುಡುಗಿಯೂ ಹೊಟ್ಟೆ ನೋವಾಗ್ತಿದೆ ಎಂದು ಹೇಳಿ ನೆಪ ಹೇಳಿದ್ದು, ಈ ವಿಡಿಯೋ ಸದ್ಯ ವೈರಲ್ ಆಗಿದೆ. ಈ ಪುಟಾಣಿಯ ನಟನೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.
Royal Ranga ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಪುಟ್ಟ ಹುಡುಗಿ ಹಾಗೂ ಶಿಕ್ಷಕಿಯ ನಡುವಿನ ಸಂಭಾಷಣೆಯನ್ನು ಕಾಣಬಹುದು. ಈ ವಿಡಿಯೋದಲ್ಲಿ ಶಿಕ್ಷಕಿಯೂ, ಪುಟ್ಟ ಹುಡುಗಿಗೆ ಜನವರಿ, ಫೆಬ್ರವರಿ ಸೇರಿದಂತೆ ಹನ್ನೆರಡು ತಿಂಗಳ ಹೆಸರನ್ನು ಹೇಳು ಎನ್ನುವುದನ್ನು ನೋಡಬಹುದು. ಆದರೆ ಈ ಪುಟಾಣಿಯೂ ಹೊಟ್ಟೆ ನೋವಾಗ್ತಾ ಇದೆ ಎನ್ನುತ್ತಾ ಮುಖ ಸಣ್ಣ ಮಾಡಿದೆ. ಶಿಕ್ಷಕಿಯೂ ನಾನು ಪ್ರಶ್ನೆ ಕೇಳಿದ್ದಕ್ಕೆ ಹೊಟ್ಟೆ ನೋವಾಗ್ತಾ ಇದೆಯೇ ಎಂದು ಕೇಳುತ್ತಿದ್ದಂತೆ ಪುಟಾಣಿಯೂ ಹೌದು ಎಂದು ತಲೆ ಅಲ್ಲಾಡಿಸಿದೆ. ಆ ಬಳಿಕ ಅಲ್ಲೇ ಇದ್ದವರ ಬಳಿ ಇವಳಿಗೆ ಒಂದು ಮಾತ್ರೆ ಕೊಡಿ ಎಂದಿದ್ದಾರೆ. ಈ ಪುಟ್ಟ ಬಾಲಕಿಯೂ ಜನವರಿ, ಫೆಬ್ರವರಿ ಹೇಳಲು ಶುರು ಮಾಡಿದೆ.
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಒಬ್ಬ ಬಳಕೆದಾರ ಕಳ್ಳಿ ಇವಳು ಎಂದರೆ, ಮತ್ತೊಬ್ಬರು ಮುಗ್ಧ ಮನಸ್ಸು ಎಂದಿದ್ದಾರೆ. ಇನ್ನೊಬ್ಬರು, ಈಗಿನ ಪುಟಾಣಿಗಳು ನಾಟಕ ಮಾಡೋದ್ರಲ್ಲಿ ಜಾಣರು ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ದೊಡ್ಡವರೇ ಹಾವನ್ನು ನೋಡಿ ಭಯಪಡುತ್ತಾರೆ. ಆದರೆ ಪುಟ್ಟ ಬಾಲಕ ಆಟಿಕೆಯಂತೆ ಅದರೊಂದಿಗೆ ಆಟವಾಡಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿರುವ ಮಗು ತನ್ನ ಬರಿ ಕೈಗಳಿಂದಲೇ ಹಾವನ್ನು ಹಿಡಿಯುತ್ತದೆ, ಆದರೆ ಯಾವುದೇ ಭಯ ಇಲ್ಲ, ದೊಡ್ಡವರೂ ಅಕ್ಕಪಕ್ಕ ಇಲ್ಲ. ಕೆಲವರು ಮಗುವಿನ ಧೈರ್ಯವನ್ನು ಹೊಗಳುತ್ತಿದ್ದರೆ, ಇನ್ನೊಂದೆಡೆ ನೆಟ್ಟಿಗೆರು ಅದು ಅಪಾಯಕಾರಿ ಎಂದು ತಿಳಿದಿದ್ದರೂ ಹಾವಿನ ಪಕ್ಕ ಮಗುವನ್ನು ಬಿಟ್ಟ ಪೋಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಹಾವುಗಳು ಹೆಚ್ಚಿನ ಜನರು ದೂರವಿರಲು ಇಷ್ಟಪಡುವ ಜೀವಿ. ಅನೇಕ ಪ್ರಭೇದಗಳು ವಿಷಕಾರಿಯಾಗಿರುತ್ತವೆ, ಆದ್ದರಿಂದ ತಜ್ಞರು ಸರಿಯಾದ ಜ್ಞಾನ ಮತ್ತು ರಕ್ಷಣೆಯಿಲ್ಲದೆ ಹಾವಿನ ಬಳಿಗೆ ಹೋಗದಂತೆ ಸಲಹೆ ನೀಡುತ್ತಾರೆ. ಆದಾಗ್ಯೂ, ಈ ವೀಡಿಯೊದಲ್ಲಿ, ಮಗು ಹಾವಿನ ಪಕ್ಕದಲ್ಲಿ ತುಂಬಾ ಸುಲಭವಾಗಿ ಹಾವಿನ ಎದುರು ಕುಳಿತುಕೊಳ್ಳುತ್ತದೆ. ನಿಧಾನವಾಗಿ ಅದರೊಂದಿಗೆ ಆಟವಾಡಲು ಪ್ರಾರಂಭಿಸುತ್ತಾನೆ, ಮತ್ತು ನಂತರ ಇದ್ದಕ್ಕಿದ್ದಂತೆ, ತನ್ನ ಕೈಯಿಂದ ಹಾವಿನ ಮುಖವನ್ನು ಮುಟ್ಟಿ ಅದನ್ನು ಕೈಯಲ್ಲಿ ಹಿಡಿದುಕೊಳ್ಳುತ್ತಾನೆ.
ಬೆಂಗಳೂರು, ಮಾರ್ಚ್ 10:ಜಕ್ಕೂರು ವಿಲ್ಲಾದಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಅಮೃತಹಳ್ಳಿ ಪೊಲೀಸರು ಹಲವು ಸ್ಫೋಟಕ ಮಾಹಿತಿಗಳನ್ನು ಬಯಲು ಮಾಡಿದ್ದಾರೆ. ಆರೋಪಿಗಳಾದ ಡಿಕ್ಸನ್ ಮತ್ತು ನಿಖಿಲ್ ಕಾಲೇಜು ಯುವತಿಯರನ್ನೇ ತಮ್ಮ ಗುರಿಯಾಗಿಸಿಕೊಂಡಿದ್ದರು. ಐಷಾರಾಮಿ ಹೋಟೆಲ್‌ಗಳಲ್ಲಿ ಸಭೆ ನಡೆಸಿ, ಯುವತಿಯರನ್ನು ಬಲೆಗೆ ಬೀಳಿಸಲು ಸಂಚು ರೂಪಿಸಿದ್ದರು. ಯುವತಿಯರನ್ನು ವಿಲ್ಲಾಗೆ ಕರೆತಂದು ಡ್ರಗ್ಸ್ ಪಾರ್ಟಿ ಆಯೋಜಿಸುತ್ತಿದ್ದರು. ಗೋವಾದಿಂದ ಎಕ್ಸ್‌ಟೆಸಿ ಮಾತ್ರೆಗಳನ್ನು ತರಿಸಿಕೊಂಡು, ಅವುಗಳನ್ನು ಯುವತಿಯರಿಗೆ ನೀಡಿ ಮತ್ತು ಬರುವಂತೆ ಮಾಡುತ್ತಿದ್ದರು. ಅರೆ ಪ್ರಜ್ಞಾ ಸ್ಥಿತಿಯಲ್ಲಿದ್ದ ಯುವತಿಯರ ಮೇಲೆ ಈ ಗ್ಯಾಂಗ್ ಅತ್ಯಾಚಾರ ಎಸಗುತ್ತಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ನಿಖಿಲ್ ಈ ಗ್ಯಾಂಗ್‌ನ ಮಾಸ್ಟರ್ ಮೈಂಡ್ ಆಗಿದ್ದು, ಈ ಜಾಲದ ಹಿಂದೆ ಇನ್ನಷ್ಟು ವ್ಯಕ್ತಿಗಳಿರುವ ಶಂಕೆ ವ್ಯಕ್ತವಾಗಿದೆ. ಡ್ರಗ್ಸ್ ಪೂರೈಕೆದಾರರ ಪತ್ತೆಗಾಗಿ ಪೊಲೀಸರ ತಂಡ ಗೋವಾಕ್ಕೆ ತೆರಳಿದೆ.