Headlines

nagaraj11081993

IND vs NZ: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ಟಿ20 ವಿಶ್ವಕಪ್ ಫೈನಲ್

2026 ರ ಟಿ20 ವಿಶ್ವಕಪ್‌ನ ಫೈನಲ್ ಪಂದ್ಯವು ಮಾರ್ಚ್ 8 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿದೆ. ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮೊದಲ ಬಾರಿಗೆ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಪರಸ್ಪರ ಮುಖಾಮುಖಿಯಾಗುತ್ತಿರುವುದು ಈ ಫೈನಲ್ ಪಂದ್ಯದ ಮತ್ತೊಂದು ವಿಶೇಷ ಕ್ಷಣವಾಗಿದೆ. ಹಾಲಿ ಚಾಂಪಿಯನ್ ಆಗಿರುವ ಭಾರತ ತಂಡ ಸತತ ಎರಡನೇ ಪ್ರಶಸ್ತಿಯತ್ತ ಗುರಿ ಇಟ್ಟಿದೆ. ಇತ್ತ ನ್ಯೂಜಿಲೆಂಡ್ ತನ್ನ ಮೊದಲ ಟಿ20 ವಿಶ್ವಕಪ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ. ಇನ್ನೊಂದು…

Read More

ಮನೆಯ ಮುಂದಿದ್ದ ಮುದ್ದಾದ ನಾಯಿಮರಿಗಳನ್ನು ಎತ್ತಿ ಗೋಡೆಗೆ ಬಡಿದ ಯುವತಿ; ಶಾಕಿಂಗ್ ವಿಡಿಯೋ ನೋಡಿ

ಚೆನ್ನೈ, ಮಾರ್ಚ್ 6: ತಮಿಳುನಾಡಿನಲ್ಲಿ ಪ್ರಾಣಿ ಪ್ರಿಯರನ್ನು ಆಘಾತಕ್ಕೀಡು ಮಾಡಿರುವ ಭಯಾನಕ ಘಟನೆ ಬೆಳಕಿಗೆ ಬಂದಿದೆ. ಯುವತಿಯೊಬ್ಬಳು ನಾಯಿಗಳ (Dog Video) ಮೇಲೆ ತನ್ನ ಕೋಪವನ್ನು ಹೊರಹಾಕುವ ಭರದಲ್ಲಿ ಅವುಗಳ ಜೀವದ ಜೊತೆ ಆಟವಾಡಿದ್ದಾಳೆ. ತನ್ನ ಮನೆಯ ಮುಂದೆ ನಿಂತಿದ್ದ ಆಟೋದ ಕೆಳಗೆ ಹೋಗಿದ್ದ ಪುಟ್ಟ ನಾಯಿಮರಿಗಳನ್ನು ಎತ್ತಿ ಆಕೆ ಕಾಂಪೌಂಡ್​ ಗೋಡೆಗೆ ಬಡಿದಿದ್ದಾಳೆ. ಇದರಿಂದ ಚೀರಾಡುತ್ತಾ ಆ ನಾಯಿಮರಿಗಳು ಕೆಳಗೆ ಬಿದ್ದಿವೆ. ಇನ್ನೆರಡು ನಾಯಿಗಳನ್ನು ಕುತ್ತಿಗೆಗೆ ಹಗ್ಗ ಹಾಕಿ ನೇತು ಹಾಕಿದ್ದಾಳೆ. ಅವುಗಳಲ್ಲಿ ಎರಡು ಮರಿಗಳು…

Read More

‘ಟಾಕ್ಸಿಕ್’ ಚಿತ್ರಕ್ಕೆ ಮಾತ್ರ ಯುದ್ಧದ ಬಿಸಿ: ‘ಧುರಂಧರ್ 2’ ಸಿನಿಮಾಗೆ ಚಿಂತೆ ಇಲ್ಲ ಯಾಕೆ?

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧದ ಭೀತಿ ಭಾರತೀಯ ಚಿತ್ರರಂಗದ ಮೇಲೆ ದೊಡ್ಡ ಪರಿಣಾಮ ಬೀರಿದೆ. ಈ ಕಾರಣದಿಂದಾಗಿ ಕನ್ನಡದ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡಲಾಯಿತು. ಮಾರ್ಚ್ 19ರಂದು ಈ ಸಿನಿಮಾ ರಿಲೀಸ್ ಆಗಬೇಕಿತ್ತು. ಅದೇ ದಿನ ರಿಲೀಸ್ ಆಗಲು ಸಜ್ಜಾಗಿರುವ ಬಾಲಿವುಡ್‌ನ ‘ಧುರಂಧರ್ 2’ ಮಾತ್ರ ಬಿಡುಗಡೆ ದಿನಾಂಕ ಬದಲಾಯಿಸಿಕೊಂಡಿಲ್ಲ. ಯಾಕೆಂದರೆ, ‘ಧುರಂಧರ್ 2’ (Dhurandhar 2) ಚಿತ್ರಕ್ಕೆ ಮಧ್ಯಪ್ರಾಚ್ಯ ರಾಷ್ಟ್ರಗಳ ಯುದ್ಧದ ಬಿಸಿ ತಟ್ಟುವುದಿಲ್ಲ. ಬಿಡುಗಡೆಗೆ ಕೇವಲ ಎರಡು ವಾರ ಬಾಕಿ…

Read More

IND vs ENG: ದೇಶಕ್ಕಿಂತ ಆರ್​ಸಿಬಿ ತಂಡ ಮುಖ್ಯವೇ? ಆರ್​ಸಿಬಿ ಫ್ಯಾನ್ಸ್ ವಿರುದ್ಧ ಗಂಭೀರ ಆರೋಪ

2026 ರ ಟಿ20 ವಿಶ್ವಕಪ್‌ (T20 World Cup 2026) ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಕೇವಲ 7 ರನ್‌ಗಳಿಂದ ಸೋಲಿಸಿದ ಟೀಂ ಇಂಡಿಯಾ (India vs England) ಫೈನಲ್​ಗೇರಿತು. ರನ್​ಗಳ ಮಳೆಯೇ ಹರಿದ ಈ ಪಂದ್ಯದಲ್ಲಿ ಬೌಲರ್​ಗಳು ಹೈರಾಣಾದರೆ ಬ್ಯಾಟ್ಸ್​ಮನ್​ಗಳು ಬೌಂಡರಿ ಹಾಗೂ ಸಿಕ್ಸರ್​ಗಳ ಮಳೆಗರೆದರು. ಅದರಲ್ಲೂ ಕ್ರೀಡಾಂಗಣದಲ್ಲಿ ಭಾರತದ ಅಭಿಮಾನಿಗಳು ಹೆಚ್ಚಿದ್ದ ಕಾರಣ, ಟೀಂ ಇಂಡಿಯಾದ ಬ್ಯಾಟಿಂಗ್‌ ವೇಳೆ ಇಡೀ ಕ್ರೀಡಾಂಗಣವೇ ಜೈಕಾರಗಳಿಂದ ತುಂಬಿ ತುಳುಕಿತ್ತು. ಇತ್ತ ಇಂಗ್ಲೆಂಡ್ ಬ್ಯಾಟಿಂಗ್‌ ವೇಳೆ ಆಂಗ್ಲ…

Read More

ರಾಯಚೂರು: ಬೆಂಕಿ ಅವಘಡಕ್ಕೆ 700 ಕುರಿಗಳ ಸಮೇತ ಶೆಡ್ ಸುಟ್ಟು ಭಸ್ಮ; ಗರ್ಭದಲ್ಲೇ ಮರಿಗಳ ಮಾರಣ ಹೋಮ

ರಾಯಚೂರು, ಮಾರ್ಚ್​ 06: ಅದು ರಣಭೀಕರ ಅಗ್ನಿ (fire) ಅವಘಡ. ರಾತ್ರೋರಾತ್ರಿ ಕುರಿಗಳ ಶೆಡ್​ಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿತ್ತು. ಇಡೀ ಕುರಿ (sheep) ಶೆಡ್ ಬೆಂಕಿಗಾಹುತಿಯಾಗಿದ್ದು, ಸುಮಾರು 700 ಕುರಿಗಳು ಸುಟ್ಟು ಕರಕಲಾಗಿವೆ‌‌. ಇನ್ನೇನು ಕೆಲವೇ ದಿನಗಳಲ್ಲಿ ಮರಿ ಹಾಕಬೇಕಿದ್ದ ಕುರಿಗಳು ಗರ್ಭದಲ್ಲಿರುವ ಮರಿ ಸಮೇತ ಸುಟ್ಟುಹೋಗಿವೆ. ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಮುಕ್ಕುಂದ ಗ್ರಾಮದ ಹೊರ ಭಾಗದಲ್ಲಿ ಘಟನೆ ನಡೆದಿದೆ. 1 ಕೋಟಿ ರೂ ವೆಚ್ಚದ ಕುರಿ ಶೆಡ್ ಬೆಂಕಿಗಾಹುತಿ ಹೇಮಲತಾ ಮಧುಸೂದನ್ ಎನ್ನುವವರು ಸುಮಾರು 1…

Read More

ಅಯೋಧ್ಯೆಯಲ್ಲಿ ಮತ್ತಷ್ಟು ಆಸ್ತಿ ಖರೀದಿಸಿದ ಅಮಿತಾಬ್ ಬಚ್ಚನ್: ಬೆಲೆ ಎಷ್ಟು?

ಅಮಿತಾಬ್ ಬಚ್ಚನ್ (Amitabh Bachchan) ಭಾರತದ ಲಿಜೆಂಡರಿ ನಟ, ಅವರು ಅದ್ಭುತ ನಟ ಆಗಿರುವ ಜೊತೆಗೆ ಒಳ್ಳೆಯ ಹೂಡಿಕೆದಾರ ಸಹ ಹೌದು. ಅದರಲ್ಲೂ ರಿಯಲ್ ಎಸ್ಟೇಟ್, ಅಮಿತಾಬ್ ಬಚ್ಚನ್ ಅವರ ಬಹಳ ಮೆಚ್ಚಿನ ಹೂಡಿಕೆ. ಅಮಿತಾಬ್ ಬಚ್ಚನ್ ಅವರು ಮುಂಬೈ, ಪುಣೆ, ಅಹಮದಾಬಾದ್ ಸೇರಿದಂತೆ ಭಾರತದ ಹಲವು ಪ್ರಮುಖ ನಗರಗಳಲ್ಲಿ ಹೂಡಿಕೆ ಮಾಡಿರುವ ಜೊತೆಗೆ ತಮ್ಮ ಮಕ್ಕಳಿಗೂ ಹೂಡಿಕೆಯ ಪಾಠ ಹೇಳಿಕೊಟ್ಟಿದ್ದಾರೆ. ಈಗಲೂ ಸಹ ವರ್ಷಕ್ಕೆ ಒಂದು ಅಥವಾ ಎರಡು ರಿಯಲ್ ಎಸ್ಟೇಟ್ ಪ್ರಾಪರ್ಟಿಗಳ ಮೇಲೆ ಬಚ್ಚನ್…

Read More

ಕಲಬರ್ಗಿಯ ಫಿಸಿಯೋಥೆರಪಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿಮೌಲ್ಯ, ಮಾನವೀಯ ಮೌಲ್ಯ ಬೋಧಿಸಿದ ಮುನಾವರ್ ಜಮಾ

ಅಂತರರಾಷ್ಟ್ರೀಯ ಖ್ಯಾತಿಯ ಮೋಟಿವೇಶನಲ್ ಸ್ಪೀಕರ್ ಹಾಗೂ ಶಿಕ್ಷಣತಜ್ಞರಾದ ಮುನಾವರ್ ಜಮಾ (Munawar Zama) ಅವರು ಕಲಬುರಗಿಯ ಯುನೈಟೆಡ್ ಕಾಲೇಜ್ ಆಫ್ ಫಿಸಿಯೊಥೆರಪಿ ಮಹತ್ವದ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರನ್ನು ಉದ್ದೇಶಿಸಿ ಮೌಲ್ಯಾಧಾರಿತ ಮತ್ತು ಜೀವನೋನ್ನತಿ ಸಂದೇಶಗಳನ್ನು ನೀಡಿದರು. ಈ ಶಿಕ್ಷಣ ಸಂಸ್ಥೆಯು ಡಾ. ವಿಕ್ರಂ ಸಿದ್ದರೆಡ್ಡಿ (Dr Vikram Sidda Reddy) ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಶೈಕ್ಷಣಿಕ ಗುಣಮಟ್ಟ ಹಾಗೂ ನೈತಿಕ ಆರೋಗ್ಯ ಸೇವಾ ಶಿಕ್ಷಣಕ್ಕಾಗಿ ಹೆಸರುವಾಸಿಯಾಗಿದೆ. ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದವರು…

Read More

ನೇಪಾಳ ಚುನಾವಣೆಯಲ್ಲಿ ಭರ್ಜರಿ ಗೆಲುವಿನತ್ತ ಬಾಲೆನ್ ಶಾ ನೇತೃತ್ವದ ಆರ್​ಎಸ್​ಪಿ

ನವದೆಹಲಿ, ಮಾರ್ಚ್ 6: ಮಾಜಿ ರ‍್ಯಾಪರ್ ಬಾಲೇಂದ್ರ ಶಾ (Balen Shah) ನೇತೃತ್ವದ ಹೊಸ ಪಕ್ಷವಾದ ರಾಷ್ಟ್ರೀಯ ಸ್ವತಂತ್ರ ಪಕ್ಷ (ಆರ್‌ಎಸ್‌ಪಿ) ನೇಪಾಳದ ಸಂಸತ್ತಿನ ಚುನಾವಣೆಯಲ್ಲಿ ಭಾರೀ ಮುನ್ನಡೆ ಸಾಧಿಸಿದೆ. ಆರಂಭಿಕ ಮತ ಎಣಿಕೆಯಲ್ಲಿ ನೇಪಾಳ ದೇಶಾದ್ಯಂತ 94 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ದೇಶಾದ್ಯಂತ ಒಟ್ಟು 67 ರಾಜಕೀಯ ಪಕ್ಷಗಳು 165 ಸ್ಥಾನಗಳಿಗೆ ಸ್ಪರ್ಧಿಸುತ್ತಿವೆ. ಮತ ಎಣಿಕೆ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ. ದಿ ಹಿಮಾಲಯನ್ ಟೈಮ್ಸ್ ಪ್ರಕಾರ, ಬಾಲೆನ್ ಶಾ ನೇತೃತ್ವದ ಆರ್‌ಎಸ್‌ಪಿ ಕಠ್ಮಂಡು ಕಣಿವೆಯ ಕ್ಷೇತ್ರಗಳ…

Read More

‘ಧುರಂಧರ್ 2’ ಟ್ರೇಲರ್ ಬಿಡುಗಡೆ ಬೆನ್ನಲ್ಲೇ ಶುರು ಆಗಲಿದೆ ಅಡ್ವಾನ್ಸ್ ಬುಕಿಂಗ್

ಭಾರಿ ನಿರೀಕ್ಷೆ ಮೂಡಿಸಿರುವ ‘ಧುರಂಧರ್ 2: ದಿ ರಿವೇಂಜ್’ (Dhurandhar 2: The Revenge) ಸಿನಿಮಾದ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ರಣವೀರ್ ಸಿಂಗ್ ನಟನೆಯ ಈ ಸಿನಿಮಾ ಯುಗಾದಿ ಮತ್ತು ಈದ್ ಹಬ್ಬದ ಪ್ರಯುಕ್ತ ಮಾರ್ಚ್ 19ರಂದು ರಿಲೀಸ್ ಆಗಲಿದೆ. ಈ ಚಿತ್ರದ ಅಡ್ವಾನ್ಸ್ ಬುಕಿಂಗ್ ಕುರಿತು ಇದೀಗ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ವರದಿಗಳ ಪ್ರಕಾರ, ಭಾರತದಲ್ಲಿ ‘ಧುರಂಧರ್ 2’ ಚಿತ್ರದ ಅಡ್ವಾನ್ಸ್ ಬುಕಿಂಗ್ (Dhurandhar 2 Advance Booking) ಮಾರ್ಚ್ 7ರಂದು ಆರಂಭವಾಗಲಿದೆ. ಇದೇ ದಿನ…

Read More

ದಕ್ಷಿಣದ ನಿರ್ದೇಶಕನ ಜೊತೆಗೆ ಹೃತಿಕ್ ರೋಷನ್ ಸಿನಿಮಾ

ಬಾಲಿವುಡ್ (Bollywood) ನಟರಿಗೆ ದಕ್ಷಿಣದ ಸಿನಿಮಾ ನಿರ್ದೇಶಕರುಗಳ ಮೇಲೆ ವಿಶೇಷ ಪ್ರೀತಿ ಬಂದಿದೆ. ಶಾರುಖ್ ಖಾನ್, ಸಲ್ಮಾನ್ ಖಾನ್, ಆಮಿರ್ ಖಾನ್, ಟೈಗರ್ ಶ್ರಾಫ್ ಇನ್ನೂ ಹಲವರು ದಕ್ಷಿಣದ ನಿರ್ದೇಶಕರುಗಳನ್ನೇ ಬಯಸಿ ಅವರೊಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ. ಶಾರುಖ್ ಖಾನ್ ಅಂತೂ ದೊಡ್ಡ ಯಶಸ್ಸನ್ನೂ ಗಳಿಸಿದ್ದಾರೆ. ಆದರೆ ಸಲ್ಲು ಭಾಯ್ ಸೋತಿದ್ದಾರೆ. ಆಮಿರ್ ಖಾನ್ ಇನ್ನಷ್ಟೆ ಸಿನಿಮಾ ಶುರು ಮಾಡಬೇಕಿದೆ. ಈ ನಡುವೆ ಹೃತಿಕ್ ರೋಷನ್ ಸಹ ಈ ಪಟ್ಟಿಗೆ ಸೇರ್ಪಡೆ ಆಗಿದ್ದು, ದಕ್ಷಿಣದ ನಿರ್ದೇಶಕರ ಜೊತೆ ಕೆಲಸ…

Read More