ಇರಾನ್ ನಟಿಗೆ ಮೆಸೇಜ್ ಮಾಡಿದ್ದಕ್ಕೆ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ಗೆ ಹೆಂಡತಿಯಿಂದ ಕಪಾಳಮೋಕ್ಷ! ಹಳೆಯ ವಿಡಿಯೋ ವೈರಲ್ – Kannada News | French president Macrons Wife Slapped him Over Flirty message With Iranian Actor Old Video Viral
ಪ್ಯಾರಿಸ್, ಮೇ 14: ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಕಳೆದ ವರ್ಷ ಹೆಂಡತಿಯ ಜೊತೆಗಿನ ವಿದೇಶ ಪ್ರವಾಸದ ಸಮಯದಲ್ಲಿ ಮುಜುಗರಕ್ಕೀಡಾಗಿದ್ದರು. ವಿಮಾನದಿಂದ ಇಳಿಯುವಾಗಲೇ ಮ್ಯಾಕ್ರನ್ (Emmanuel Macron) ಅವರ ಪತ್ನಿ ಬ್ರಿಗಿಟ್ಟೆ ಮ್ಯಾಕ್ರನ್ ತನ್ನ ಗಂಡನಿಗೆ ಕಪಾಳಮೋಕ್ಷ ಮಾಡಿದ್ದರು. ಅದಕ್ಕೆ ಕಾರಣವೇನೆಂಬುದು ಬಯಲಾಗಿದೆ. ಬಿಡುಗಡೆಯಾಗಿರುವ ಹೊಸ ಪುಸ್ತಕದ ಪ್ರಕಾರ, ಫ್ರೆಂಚ್ ಅಧ್ಯಕ್ಷ ಮತ್ತು ಇರಾನ್ ಮೂಲದ ನಟಿ ಗೋಲ್‌ಶಿಫ್ಟೆಹ್ ಫರಹಾನಿ ನಡುವೆ ನಡೆದ ಚಾಟ್ ಅನ್ನು ನೋಡಿದ್ದ ಫ್ರೆಂಚ್ ಪ್ರಥಮ ಮಹಿಳೆ ಬ್ರಿಗಿಟ್ಟೆ ಮ್ಯಾಕ್ರನ್ ಕಳೆದ ವರ್ಷ ವಿದೇಶಿ…