ಹೆಣ್ಮಕ್ಕಳಿಗೆ ಕೋರಮಂಗಲ ರಾತ್ರಿ ಸಂಚಾರಕ್ಕೆ ಡೇಂಜರ್: ಗಂಡನ ಜೊತೆಗಿದ್ದರೂ ಬರ್ತೀಯಾ ಎಂದು ಕೇಳ್ತಾರೆ
ಬೆಂಗಳೂರು, ಮೇ,14: ಸಿಲಿಕಾನ್ ಸಿಟಿಯ ಅತ್ಯಂತ ಜನಪ್ರಿಯ ಹ್ಯಾಂಗ್‌ಔಟ್ ತಾಣಗಳಲ್ಲಿ ಒಂದಾದ ಕೋರಮಂಗಲವು ಈಗ ರಾತ್ರಿ ವೇಳೆ ಮಹಿಳೆಯರ ಸುರಕ್ಷತೆಯ ವಿಚಾರವಾಗಿ ಸುದ್ದಿಯಲ್ಲಿದೆ. ಸ್ನೇಹಿತರೊಂದಿಗೆ ಸಮಯ ಕಳೆಯಲು ಬರುವವರ ಸಂಖ್ಯೆ ಹೆಚ್ಚಿದ್ದರೂ, ಇತ್ತೀಚಿನ ದಿನಗಳಲ್ಲಿ ಮಹಿಳೆಯರನ್ನು ಕೆಣಕುವುದು ಮತ್ತು ಅಸಭ್ಯವಾಗಿ ವರ್ತಿಸುವ ಘಟನೆಗಳು ವರದಿಯಾಗುತ್ತಿವೆ.ರಾತ್ರಿ 1 ಗಂಟೆಯ ನಂತರ ರಸ್ತೆಗಳಲ್ಲಿ ಮಹಿಳೆಯರನ್ನು ಉದ್ದೇಶಿಸಿ ಕೂಗುವುದು ಅಥವಾ ಕಿರುಕುಳ ನೀಡುವುದರಿಂದಾಗಿ ಅನೇಕರು ಹೊರಬರಲು ಭಯಪಡುತ್ತಿದ್ದಾರೆ. ಬೆಂಗಳೂರಿನಂತಹ ಸುರಕ್ಷಿತ ನಗರದಲ್ಲಿ ಇಂತಹ ಪ್ರವೃತ್ತಿ ಬೆಳೆಯುತ್ತಿರುವುದು ವಿಷಾದನೀಯ. “ನಗರವು ಎಲ್ಲರಿಗೂ ಸೇರಿದ್ದು,…