ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 5ರ ದಿನಭವಿಷ್ಯ
ಈ ದಿನ ಹಣೆಯ ಮಧ್ಯಭಾಗದಲ್ಲಿ (ಆಜ್ಞಾ ಚಕ್ರ) ಕುಂಕುಮ, ಶ್ರೀಗಂಧ ಅಥವಾ ವಿಭೂತಿಯನ್ನು ಇಟ್ಟುಕೊಳ್ಳಿ. ಇದು ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1): ಮೀನುಗಾರಿಕೆ- ಮೀನು ಸಾಕಣೆ ಮಾಡುತ್ತಾ ಇರುವವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ. ದ್ವಿಚಕ್ರ ವಾಹನ ಖರೀದಿ ಮಾಡುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದೀರಿ. ನೀವೇನಾದರೂ ವ್ಯಾಪಾರ- ವ್ಯವಹಾರ ಮಾಡುವಂಥವರಾದರೆ ಅದಕ್ಕೆ ಅಗತ್ಯ ಇರುವಂಥ ಟ್ರಕ್, ಲಾರಿ, ಲಗೇಜ್ ಆಟೋ ಇಂಥವುಗಳನ್ನು…