Retail Inflation: ಏಪ್ರಿಲ್‌ನಲ್ಲಿ ರೀಟೇಲ್ ಹಣದುಬ್ಬರ ಶೇ. 3.48ಕ್ಕೆ ಏರಿಕೆ; ಮಾರ್ಚ್ಗಿಂತ ತುಸು ಹೆಚ್ಚಳ – Kannada News | Retail Inflation in 2026 April rises to 3.48pc from 3.40pc in March
ನವದೆಹಲಿ, ಮೇ 13: ಭಾರತದ ಚಿಲ್ಲರೆ ಹಣದುಬ್ಬರ (Retail Inflation) 2026ರ ಏಪ್ರಿಲ್‌ನಲ್ಲಿ ಏರಿಕೆಯಾಗಿದ್ದು, ಜನಸಾಮಾನ್ಯರ ಜೇಬಿಗೆ ಸ್ವಲ್ಪ ಹೆಚ್ಚಿನ ಹೊರೆಯಾಗಿದೆ. ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ (Ministry of Statistics and Programme Implementation) ಸಚಿವಾಲಯ ನಿನ್ನೆ ಮಂಗಳವಾರ (ಮೇ 12) ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಮಾರ್ಚ್‌ನಲ್ಲಿ ಶೇ. 3.40 ರಷ್ಟಿದ್ದ ಹಣದುಬ್ಬರವು ಏಪ್ರಿಲ್‌ನಲ್ಲಿ ಶೇ. 3.48 ಕ್ಕೆ ತಲುಪಿದೆ. ಆಹಾರ ಪದಾರ್ಥಗಳ ಬೆಲೆ ಏರಿಕೆ ದರವು ಶೇ. 3.87 ರಿಂದ ಶೇ….