ಐಪಿಎಲ್ ಆಟಗಾರರಿಗೆ ಬಿಸಿಸಿಐ ವಾರ್ನಿಂಗ್: ಜಾರಿಯಾಯ್ತು ಕಟು ನಿಯಮ! – Kannada News | BCCI Enforces Strict Rules for IPL 2026
IPL 2026: ಐಪಿಎಲ್ 2026ರ ಟೂರ್ನಿಯಲ್ಲಿ ಆಟಗಾರರು ಮತ್ತು ಫ್ರಾಂಚೈಸಿಗಳ ನಡವಳಿಕೆಯಲ್ಲಿ ಶಿಸ್ತು ಉಲ್ಲಂಘನೆಯಾಗಿರುವ ಹಿನ್ನೆಲೆಯಲ್ಲಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. “ಈ ಬಾರಿಯ ಐಪಿಎಲ್ನಲ್ಲಿ ಸಾಕಷ್ಟು ಅಶಿಸ್ತು ಕಂಡುಬಂದಿದ್ದು, ಮಂಡಳಿಗೆ ಮುಜುಗರ ತರುವಂತಹ ಹಲವು ಘಟನೆಗಳು ನಡೆದಿವೆ. ಹೀಗಾಗಿ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಲು ನಾವು ನಿರ್ಬಂಧಿತರಾಗಿದ್ದೇವೆ” ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಹೊಸ ನಿಯಮ ಜಾರಿಗೆ ಕಾರಣಗಳೇನು? ಅನಧಿಕೃತ ವ್ಯಕ್ತಿಗಳ ಪ್ರವೇಶ: ಆಟಗಾರರ ಹೋಟೆಲ್ ಕೊಠಡಿಗಳು, ತಂಡದ ಬಸ್ಗಳು…