Headlines

nagaraj11081993

ಕಲ್ಲಿದ್ದಲು ಅನಿಲೀಕರಣ ಯೋಜನೆಗೆ ಸಂಪುಟದಿಂದ 37,500 ರೂ ಅನುಮೋದನೆ; ಏನಿದರ ಉಪಯೋಗ? – Kannada News | Modi Cabinet’s Mega Push: Rs 37,500 Cr Coal Gasification to Cut Imports, Create 50K Jobs

ಕಲ್ಲಿದ್ದಲು ಅನಿಲೀಕರಣ ಪ್ರಕ್ರಿಯೆ ವಿವರಿಸಿದ ಸಚಿವ ಎ ವೈಷ್ಣವ್Image Credit source: PTI ನವದೆಹಲಿ, ಮೇ 13: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ (Union Cabinet) ಸಭೆಯು ‘ಮೇಲ್ಮೈ ಕಲ್ಲಿದ್ದಲು/ಲಿಗ್ನೈಟ್ ಅನಿಲೀಕರಣ’ (Surface Coal/Lignite Gasification) ಯೋಜನೆಗಳನ್ನು ಉತ್ತೇಜಿಸಲು 37,500 ಕೋಟಿ ರೂಪಾಯಿಗಳ ಬೃಹತ್ ಆರ್ಥಿಕ ನೆರವನ್ನು ಘೋಷಿಸಿದೆ. ಈ ಯೋಜನೆಯು ಭಾರತದ ಇಂಧನ ಭದ್ರತೆಯನ್ನು ಬಲಪಡಿಸುವ ಮತ್ತು ಆಮದು ಅವಲಂಬನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಒಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ….

Read More

ಅವಮಾನಕರ ಸೋಲಿನ ಆಘಾತದಲ್ಲಿರುವ ಪ್ಯಾಟ್ ಕಮ್ಮಿನ್ಸ್‌ಗೆ ಮತ್ತೊಂದು ಶಾಕ್ ನೀಡಿದ ಬಿಸಿಸಿಐ – Kannada News | IPL 2026 Pat Cummins Fined ₹12 Lakh for SRH Slow Over Rate vs gt

ಗುಜರಾತ್ ಟೈಟಾನ್ಸ್ (GT) ವಿರುದ್ಧ ಎರಡಂಕಿ ಮೊತ್ತಕ್ಕೆ ಅಂದರೆ ಕೇವಲ 86 ರನ್​ಗಳಿಗೆ ಆಲೌಟ್ ಆಗಿ ಹೀನಾಯ ಸೋಲಿನ ಅವಮಾನಕ್ಕೊಳಗಾಗಿರುವ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್‌ಗೆ (pat cummins) ಇದೀಗ ಬಿಸಿಸಿಐ (BCCI) ಕೂಡ ಬಿಗ್ ಶಾಕ್ ನೀಡಿದೆ. ಗುಜರಾತ್ ವಿರುದ್ಧದ ಪಂದ್ಯದಲ್ಲಿ ನಿಗಧಿತ ಸಮಯಕ್ಕೆ ಓವರ್ ಮುಗಿಸದ ಸನ್​ರೈಸಸ್ ತಂಡದ ನಾಯಕ​ ಪ್ಯಾಟ್ ಕಮ್ಮಿನ್ಸ್‌ಗೆ ಪಂದ್ಯ ಶುಲ್ಕವನ್ನು ದಂಡವಾಗಿ ವಿಧಿಸಲಾಗಿದೆ. ಅಂದರೆ ಕಮ್ಮಿನ್ಸ್ 12 ಲಕ್ಷ ರೂ ದಂಡ ಕಟ್ಟಬೇಕಾಗಿದೆ. ಆದಾಗ್ಯೂ,…

Read More

ಕುಕ್ಕೆ ಸುಬ್ರಹ್ಮಣ್ಯ ದರ್ಶನಕ್ಕೆ ತೆರಳುವ ಭಕ್ತರಿಗೆ ಸಿಹಿಸುದ್ದಿ: ದೇವಸ್ಥಾನದ ಹೊಸ ರೂಲ್ಸ್ ತಿಳಿದುಕೊಳ್ಳಿ – Kannada News | Mangaluru Kukke Subrahmanya darshan timings extended by one hour here Is Details

ದಕ್ಷಿಣ ಕನ್ನಡ, (ಮೇ 13): ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ (Kukke Subrahmanya  Temple) ದೇವರ ದರ್ಶನ (Kukke Subrahmanya darshan) ಸಮಯದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಭಕ್ತರಿಗೆ (devotees) ಇದೀಗ ಹೆಚ್ಚುವರಿ ಒಂದು ಗಂಟೆಯ ದರ್ಶನ ಅವಕಾಶ ಲಭ್ಯವಾಗಿದೆ. ಈ ಮೊದಲು ಪ್ರತಿ ನಿತ್ಯ ಮಧ್ಯಾಹ್ನ 1.30ರಿಂದ 3.30ರ ವರೆಗೆ ದೇವರ ದರ್ಶನವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತಿತ್ತು. ಆದರೆ ಭಕ್ತರ ಅನುಕೂಲಕ್ಕಾಗಿ ಇದೀಗ ಮಧ್ಯಾಹ್ನ 2ರಿಂದ 3ರ ವರೆಗೆ ಮಾತ್ರ ದರ್ಶನವನ್ನು ತಾತ್ಕಾಲಿಕವಾಗಿ ಬಂದ್ ಮಾಡುವಂತೆ ನಿರ್ಧರಿಸಲಾಗಿದೆ….

Read More

Tv9 Kannada News Live: ಹೇಳಿದಂತೆ ಗುಡ್​​ನ್ಯೂಸ್​​ ಕೊಟ್ಟ ಡಿಕೆಶಿ, ಕೇರಳದಲ್ಲಿ ಕಾಂಗ್ರೆಸ್​​ಗೆ ಕಸಿವಿಸಿ; ಈ ಹೊತ್ತಿನ ಟಾಪ್​​ 5 ಸುದ್ದಿಗಳು ಇಲ್ಲಿವೆ – Kannada News | Tv9 Kannada News Live: Karnataka DyCM DK Shivakumar Gives Good News For Bengalurians; Delay in Electing New Kerala CM Sparks Outrage

ಬೆಂಗಳೂರು, ಮೇ 13: ರಾಜಧಾನಿ ಬೆಂಗಳೂರು ನಿವಾಸಿಗರಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಿಗ್​​ ನ್ಯೂಸ್​​ ಒಂದನ್ನು ನೀಡಿದ್ದು, ಬಿ ಖಾತೆಯಿಂದ ಎ ಖಾತೆ ಮಾಡಿಕೊಳ್ಳಲು ಅಭಿಯಾನ (Property Ownership Drive) ಮಾಡುವುದಾಗಿ ಘೋಷಿಸಿದ್ದಾರೆ. ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ ಮೇ 16ರಂದು ನಡೆಯುವ ನನ್ನ ಖಾತಾ ನನ್ನ ಹಕ್ಕು ಅಭಿಯಾನ ಘೋಷಿಸಿದ್ದು, ಓಸಿ ಇಲ್ಲದೇ ವಿದ್ಯುತ್ ಸಂಪರ್ಕ, ನೀರಿನ ಸಂಪರ್ಕ ಸಿಗದೇ ಪರದಾಡುತ್ತಾ ಇದ್ದವರಿಗೆ ಅನುಕೂಲವಾಗಲಿದೆ. ನಗರದಲ್ಲಿ ಕೆಲವರು ಪ್ಲ್ಯಾನ್​ ಇಲ್ಲದೆ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಅಂತವರ…

Read More

ಅಲ್ಲು ಅರ್ಜುನ್ ‘ಆಸ್ತಿ’ ಎಂದವನಿಗೆ ಸರಿಯಾಗಿ ಝಾಡಿಸಿದ ನಟಿ – Kannada News | Seerat Kapoor slams troll who call her Allu Arjun’s property

ಸಿನಿಮಾರಂಗ (Cinema) ಪುರುಷ ಪ್ರಧಾನವಾದುದು, ಇಲ್ಲಿ ಮಹಿಳೆಯರು ವಿಶೇಷವಾಗಿ ನಾಯಕಿಯರು ತೀವ್ರ ಟೀಕೆ, ವಿಮರ್ಶೆ, ನಿಂದನೆ, ದೌರ್ಜನ್ಯಕ್ಕೆ ಒಳಗಾಗುತ್ತಾರೆ. ನಟಿಯರನ್ನು ಕೀಳಾಗಿ ನಡೆಸಿಕೊಂಡಿರುವ ಸಾಕಷ್ಟು ಉದಾಹರಣೆಗಳು ಚಿತ್ರರಂಗದಲ್ಲಿ ಇವೆ. ಈ ಸಾಮಾಜಿಕ ಜಾಲತಾಣ ಬಂದ ಬಳಿಕವಂತೂ ನಟಿಯರ ಬಗ್ಗೆ ನಿಂದನೆ, ಕೀಳು ಹೇಳಿಕೆ ಇನ್ನಷ್ಟು ಹೆಚ್ಚಾಗಿದೆ. ಈ ಆನ್​​ಲೈನ್ ಕಿರುಕುಳದಿಂದ ಯಾವ ನಟಿಯರೂ ತಪ್ಪಿಸಿಕೊಳ್ಳಲಾಗಿಲ್ಲ. ಎಷ್ಟೋ ಮಂದಿ ನಟಿಯರು, ‘ಇದು ಸಾಮಾನ್ಯ’ ಎಂದು ಕೈತೊಳೆದು ಸುಮ್ಮನಾಗಿಬಿಟ್ಟಿದ್ದಾರೆ. ಆದರೆ ಕೆಲವರು ಮಾತ್ರ ಆನ್​​ಲೈನ್ ಕಿರುಕುಳದ ವಿರುದ್ಧ ಗಟ್ಟಿ ದನಿ…

Read More

IPL 2026: ಧೋನಿ ಅಭಿಮಾನಿಗಳಿಗೆ ಕೊನೆಗೂ ಸಿಕ್ತು ಸಿಹಿ ಸುದ್ದಿ – Kannada News | Dhoni Injury Status: Will Thala Play Next CSK Match or His Last IPL 2026 Game?

ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಐಪಿಎಲ್ 2026 (IPL 2026) ರಲ್ಲಿ ಇದುವರೆಗೆ 11 ಪಂದ್ಯಗಳನ್ನು ಆಡಿದೆ. ಅಂದರೆ ಲೀಗ್ ಹಂತದಲ್ಲಿ ಎಲ್ಲೋ ಆರ್ಮಿಗೆ ಇನ್ನು ಉಳಿದಿರುವುದು ಕೇವಲ ಮೂರೇ ಮೂರು ಪಂದ್ಯಗಳು. ಈ ಮೂರು ಪಂದ್ಯಗಳನ್ನು ಗೆದ್ದರೂ ಸಿಎಸ್​ಕೆ ಪ್ಲೇಆಫ್​ಗೇರಬೇಕೆಂದರೆ ಉಳಿದ ತಂಡಗಳ ಫಲಿತಾಂಶವನ್ನು ಅವಲಂಭಿಸಬೇಕಾಗಿದೆ. ಇದೆಲ್ಲದರ ನಡುವೆ ಕೋಟ್ಯಾಂತರ ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆ ಎಂದರೆ, ಧೋನಿ (MS Dhoni) ಯಾವಾಗ ಆಡುತ್ತಾರೆ? ಎಂಬುದು. ಪ್ರಸ್ತುತ ಧೋನಿ, ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ. ಹೀಗಾಗಿ ಧೋನಿ…

Read More

ನಾಪತ್ತೆಯಾಗಿದ್ದ ಬಾಲಕ ನಾಲ್ಕು ವರ್ಷಗಳ ಬಳಿಕ ಪತ್ತೆ: ಸುಳಿವು ನೀಡಿದ್ದು ಆತನಿಗಿದ್ದ ಕಬಡ್ಡಿ ಕ್ರೇಜ್​​! – Kannada News | Kabaddi Craze Reunites Missing Mandya Boy With Family After 4 Years

ಕುಟುಂಬಸ್ಥರ ಜೊತೆ ಪತ್ತೆಯಾಗಿರುವ ಬಾಲಕImage Credit source: Tv9 Kannada ಮಂಡ್ಯ, ಮೇ 13: ನಿಗೂಢವಾಗಿ ನಾಪತ್ತೆಯಾಗಿದ್ದ ಬಾಲಕ ನಾಲ್ಕು ವರ್ಷದ ಬಳಿಕ ಸುರಕ್ಷಿತವಾಗಿ ಪತ್ತೆಯಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಶಾಲೆಯ ಆವರಣದಿಂದ ನಾಪತ್ತೆಯಾಗಿದ್ದ ಮಗನಿಗಾಗಿ ಹುಡುಕಾಟ ನಡೆಸುತ್ತಿದ್ದ ತಂದೆ ಕೊನೆಗೂ ನಿಟ್ಟುಸಿರು ಬಿಟ್ಟಿದ್ದು, ಪೊಲೀಸರೂ ಈತನಿಗಾಗಿ ಶೋಧ ನಡೆಸುತ್ತಿದ್ದರು. ಅಂತಿಮವಾಗಿ ಆತನನ್ನು ಪತ್ತೆ ಮಾಡಲಾಗಿದ್ದು, ಹಿರೇಮರಳಿ ಗ್ರಾಮದ ಕಿಶೋರ್ ಎಂಬಾತನನ್ನು ಮರಳಿ ಕುಟುಂಬಸ್ಥರ ಮಡಿಲಿಗೆ ಸೇರಿಸಲಾಗಿದೆ. ವಿಶೇಷ ಅಂದರೆ ಬಾಲಕನಿಗಿದ್ದ ಕಬಡ್ಡಿ ಕ್ರೇಜೇ ಆತನ ಪತ್ತೆ…

Read More

ಹಾಸ್ಟೆಲ್ ಮಾಲೀಕರಿಗೆ ಮಗ ಕಳುಹಿಸಿದ ಪೇಪರ್​ನಿಂದ ಬೆಳಕಿಗೆ ಬಂದಿತ್ತು ನೀಟ್ ಪೇಪರ್ ಸೋರಿಕೆ ಪ್ರಕರಣ – Kannada News | NEET Exam Paper Leak 2026, know how a guess paper helped this case to be uncovered

ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳುImage Credit source: PTI ನವದೆಹಲಿ, ಮೇ 12: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ (Neet paper leak case) ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ಸರ್ಕಾರವು ಮರುಪರೀಕ್ಷೆಗೆ ಆದೇಶಿಸಿದೆ. ಕಷ್ಟಪಟ್ಟು ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ಮತ್ತೊಮ್ಮೆ ಬರೆಯುವ ತಲೆನೋವು ಪಡೆದಿದ್ದಾರೆ. ಇದೇ ವೇಳೆ, ಗಂಭೀರವೆನಿಸಿರುವ ಈ ಪ್ರಕರಣ ಹೇಗೆ ಬೆಳಕಿಗೆ ಬಂತು ಎನ್ನುವ ವಿಚಾರ ಬಹಳ ಕುತೂಹಲ ಮೂಡಿಸಿದೆ. ಹಾಸ್ಟೆಲ್ ಮಾಲೀಕರಿಗೆ ಆತನ ಮಗ ಕಳುಹಿಸಿದ ಪೇಪರ್​ವೊಂದು ಈ ಪ್ರಕರಣ ಬೆಳಕಿಗೆ ಬರಲು…

Read More

Mangaluru Job Fair: ನಿರುದ್ಯೋಗಿಗಳಿಗೆ ಉದ್ಯೋಗ ಪಡೆಯಲು ಇಲ್ಲಿದೆ ಸುವರ್ಣಾವಕಾಶ; ಮಂಗಳೂರಿನಲ್ಲಿ ನೇರ ಸಂದರ್ಶನ – Kannada News | Mangaluru Job Fair 2026: Direct Interviews for Expert College and Mandovi Motors

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ನಿರುದ್ಯೋಗಿಗಳಿಗೆ ಸುವರ್ಣಾವಕಾಶವೊಂದು ಇಲ್ಲಿದೆ. ಕರ್ನಾಟಕ ಸರ್ಕಾರದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯು ಪ್ರತಿಷ್ಠಿತ ಸಂಸ್ಥೆಗಳಾದ ಎಕ್ಸ್‌ಪರ್ಟ್ ಕಾಲೇಜು ಮತ್ತು ಮಾಂಡೋವಿ ಮೋಟಾರ್ಸ್ ಸಹಯೋಗದೊಂದಿಗೆ “ನೇರ ಸಂದರ್ಶನ” ಕಾರ್ಯಕ್ರಮವನ್ನು ಆಯೋಜಿಸಿದೆ. ಈ ನೇಮಕಾತಿ ಪ್ರಕ್ರಿಯೆಯು ಸಂಪೂರ್ಣವಾಗಿ ಉಚಿತವಾಗಿದ್ದು, ಅರ್ಹ ಅಭ್ಯರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ. ಲಭ್ಯವಿರುವ ಹುದ್ದೆಗಳು ಮತ್ತು ಅರ್ಹತೆ: ಈ ಸಂದರ್ಶನದಲ್ಲಿ ಪ್ರಮುಖವಾಗಿ ಎರಡು ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಎಕ್ಸ್‌ಪರ್ಟ್…

Read More

ಭವಾನಿಪುರ ಕ್ಷೇತ್ರ ಉಳಿಸಿಕೊಂಡು ನಂದಿಗ್ರಾಮದ ಶಾಸಕ ಸ್ಥಾನಕ್ಕೆ ಬಂಗಾಳದ ಸಿಎಂ ಸುವೇಂದು ಅಧಿಕಾರಿ ರಾಜೀನಾಮೆ – Kannada News | West Bengal CM Suvendu Adhikari to retain Bhabanipur seat announces resignation For Nandigram

ಕೊಲ್ಕತ್ತಾ, ಮೇ 13: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari) ಭವಾನಿಪುರ ವಿಧಾನಸಭಾ ಸ್ಥಾನದ ಶಾಸಕನಾಗಿ ಉಳಿಯುವುದಾಗಿ ಘೋಷಿಸಿದ್ದಾರೆ. ಅವರು ನಂದಿಗ್ರಾಮದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ಬಂಗಾಳದ 9ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವು ದಿನಗಳ ನಂತರ ಅವರ ಈ ನಿರ್ಧಾರ ಹೊರಬಿದ್ದಿದೆ. ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ಭವಾನಿಪುರ ಮತ್ತು ನಂದಿಗ್ರಾಮ ಎರಡೂ ಸ್ಥಾನಗಳನ್ನು ಗೆದ್ದ ಅವರು ಇಂದು ಭವಾನಿಪುರದಿಂದ ಶಾಸಕರಾಗಿ ರಾಜ್ಯ ವಿಧಾನಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರು. “ಉಪಚುನಾವಣೆಯಲ್ಲಿ ನಂದಿಗ್ರಾಮದಿಂದ…

Read More