ತೆಲಂಗಾಣ ಆಸ್ಪತ್ರೆಯ ಶವಾಗಾರದಲ್ಲಿ ವ್ಯಕ್ತಿಯ ಶವವನ್ನು ಕಚ್ಚಿ ವಿರೂಪಗೊಳಿಸಿದ ಬೀದಿ ನಾಯಿ – Kannada News | Telangana Mortuary Dog Attack, Body Mutilated, Security Lapses Lead to Suspensions
ನಾಯಿ-ಸಾಂದರ್ಭಿಕ ಚಿತ್ರImage Credit source: Free Press Journal ತೆಲಂಗಾಣ, ಮಾರ್ಚ್ 04: ತೆಲಂಗಾಣದ ಮೆಹಬೂಬ್‌ನಗರದಲ್ಲಿರುವ ಸರ್ಕಾರಿ ಆಸ್ಪತ್ರೆ(Hospital)ಯ ಶವಾಗಾರದೊಳಗೆ ಬೀದಿ ನಾಯಿಯೊಂದು ವ್ಯಕ್ತಿಯೊಬ್ಬರ ಶವವನ್ನು ಕಚ್ಚಿ ವಿರೂಪಗೊಳಿಸಿರುವ ಘಟನೆ ನಡೆದಿದೆ. ಜಡ್ಚೆರ್ಲಾ ಪಟ್ಟಣದ ಏರಿಯಾ ಆಸ್ಪತ್ರೆಯಲ್ಲಿ ವರದಿಯಾದ ಈ ಘಟನೆಯು ಸಾರ್ವಜನಿಕ ಆರೋಗ್ಯ ಸೌಲಭ್ಯಗಳಲ್ಲಿನ ಭದ್ರತಾ ಲೋಪಗಳು ಮತ್ತು ಮೂಲಸೌಕರ್ಯ ಕೊರತೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ. ಮೃತರನ್ನು ಜಡ್ಚೆರ್ಲಾ ಪಟ್ಟಣದ ನಿವಾಸಿ 32 ವರ್ಷದ ಪೋಲ್ ಭೀಮೇಶ್ವರ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಅವರು…