All posts by nagaraj11081993

ವಿಜಯ್ ಸಿಎಂ ಆಗುವ ಕನಸು ಇಂದು, ನಿನ್ನೆಯದಲ್ಲ; 15 ವರ್ಷಗಳ ಹಿಂದೆಯೇ ಸೂಚನೆ ಕೊಟ್ಟಿದ್ದ ನಟ – Kannada News | Thalapathy Vijay’s 15 Year Old Viral Video Predicts His CM Journey: Hints of TVK Entry Uncovered!

ತಮಿಳು ಚಿತ್ರರಂಗದ ಅನೇಕರು ರಾಜಕೀಯಕ್ಕೆ ಎಂಟ್ರಿ ಕೊಟ್ಟು ಯಶಸ್ಸು ಕಂಡಿದ್ದಾರೆ. ಈ ಸಾಲಿನಲ್ಲಿ ದಳಪತಿ ವಿಜಯ್ ಕೂಡ ಸೇರಿದ್ದಾರೆ. ಅವರದ್ದು ಅಂತಿಂಥ ಗೆಲುವಲ್ಲ. ಕೆಲವೇ ವರ್ಷಗಳ ಹಿಂದೆ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವನ್ನು ಸ್ಥಾಪಿಸಿ ಅಧಿಕೃತವಾಗಿ ರಾಜಕೀಯಕ್ಕೆ ಪ್ರವೇಶಿಸಿದ್ದಾರೆ. 2026ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಅವರು ಗೆದ್ದಿದ್ದಾರೆ. ಆದರೆ, ಅವರ ಈ ರಾಜಕೀಯ ಪಯಣದ ಸುಳಿವು 2011ರಲ್ಲೇ ಸಿಕ್ಕಿತ್ತು ಎಂಬುದು ಈಗ ವೈರಲ್ ಆಗುತ್ತಿರುವ ವಿಡಿಯೋದಿಂದ ಸ್ಪಷ್ಟವಾಗುತ್ತಿದೆ.

ಅಂದು ವಿಜಯ್ ಹೇಳಿದ್ದೇನು?

ವಿಜಯ್ ಆಗಿನ್ನೂ ಸಿನಿಮಾದಲ್ಲಿ ಸ್ಟಾರ್ ಆಗಿ ಬೆಳೆದಿದ್ದರು. ಅಂದಿನ ದಿನಗಳ ಸಂದರ್ಶನವೊಂದರಲ್ಲಿ ರಾಜಕೀಯ ಪ್ರವೇಶದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದ ವಿಜಯ್, ‘ಸದ್ಯಕ್ಕೆ ನನ್ನ ಗಮನ ಸಿನಿಮಾದ ಮೇಲಿದೆ. ಆದರೆ, ತಮಿಳುನಾಡಿನ ಜನರಿಗಾಗಿ ಏನಾದರೂ ಮಾಡಬೇಕು ಎಂಬ ಆಸೆಯಿದೆ. ಸೂಕ್ತ ಸಮಯ, ಸಂದರ್ಭ ಬಂದಾಗ ಕಾಲವೇ ನನ್ನನ್ನು ಆ ಜಾಗದಲ್ಲಿ ತಂದು ಕೂರಿಸುತ್ತದೆ. ಅದಕ್ಕಾಗಿ ಅಡಿಪಾಯವನ್ನು ಗಟ್ಟಿಗೊಳಿಸುತ್ತಿದ್ದೇನೆ’ ಎಂದು ಹೇಳಿದ್ದರು.

ಅಂದು ನುಡಿದಂತೆ ಇಂದು ನಡೆದಿದೆ:

ವಿಜಯ್ ಅವರು ಅಂದು ಹೇಳಿದಂತೆ, ಹಂತ ಹಂತವಾಗಿ ತಮ್ಮ ಅಭಿಮಾನಿ ಬಳಗವನ್ನು ಸಂಘಟಿಸಿ, ಇಂದು ಅಡಿಪಾಯವನ್ನು ಗಟ್ಟಿಮಾಡಿಕೊಂಡು ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. ತಮಿಳುನಾಡಿನ ಮುಂದಿನ ರಾಜಕೀಯ ಚಿತ್ರಣದಲ್ಲಿ ವಿಜಯ್ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂಬ ಚರ್ಚೆಗಳು ಈಗ ಜೋರಾಗಿವೆ.

ಇದನ್ನೂ ಓದಿ: ವಿಜಯ್ ಫಿಟ್​​ನೆಸ್​​ ಗುಟ್ಟೇನು? ಖಾಸಗಿ ಟ್ರೈನರ್ ಹಂಚಿಕೊಂಡ ಕುತೂಹಲಕಾರಿ ಮಾಹಿತಿ

ವಿಜಯ್ ಪ್ಲ್ಯಾನ್:

ವಿಜಯ್ ಅವರು ಪಕ್ಷ ಕಟ್ಟಿದ್ದು ಕೆಲ ವರ್ಷಗಳ ಹಿಂದೇ ಆಗಿದ್ದರೂ ಅವರು ಇದಕ್ಕಾಗಿ ಸಾಕಷ್ಟು ಪ್ಲ್ಯಾನ್ ಮಾಡಿದ್ದರು. ಅಭಿಮಾನಿಗಳನ್ನು ಸಂಘಟಿಸಿ, ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಈ ಮೂಲಕ ಜನರಿಗೆ ಹತ್ತಿರವಾದರು. ಈಗ ಅವರು ಗೆದ್ದು ಸಿಎಂ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೊಟ್ಟ ಮಾತು ಉಳಿಸಿಕೊಳ್ತೇವೆ: ವಿಧಾನಸಭೆಯಲ್ಲಿ ವಿಜಯ್ ಮೊದಲ ಭಾಷಣ – Kannada News | Thalapathy Vijay first speech at Tamil Nadu assembly

ದಳಪತಿ ವಿಜಯ್ (Thalapathy Vijay) ಸಿಎಂ ಆಗಿ ಇತ್ತೀಚೆಗಷ್ಟೆ ಪ್ರಮಾಣ ವಚನ ಸ್ವೀಕಾರ ಮಾಡಿದ್ದು ಇಂದು (ಮೇ 15) ಮೊದಲ ವಿಧಾನಸಭೆ ಅಧಿವೇಶದಲ್ಲಿ ಪಾಲ್ಗೊಂಡಿದ್ದಾರೆ. ಎಲ್ಲ ಶಾಸಕರು ಇಂದು ಸ್ಪೀಕರ್ ಎದುರು ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ವಿಜಯ್ ಅವರು ಸದನವನ್ನು ಉದ್ದೇಶಿಸಿ ಇದೇ ಮೊದಲ ಬಾರಿಗೆ ಭಾಷಣ ಮಾಡಿದ್ದಾರೆ. ತಮ್ಮ ಭಾಷಣದಲ್ಲಿ ಅವರು ತಾವು ಚುನಾವಣೆಗೆ ಮುಂಚೆ ಕೊಟ್ಟಿದ್ದ ಮಾತುಗಳನ್ನು ಉಳಿಸಿಕೊಳ್ಳಲಿದ್ದೇವೆ ಎಂದು ಸಹ ಹೇಳಿದ್ದಾರೆ. ವಿಡಿಯೋ ನೋಡಿ..

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಇಂಧನ ಬಿಕ್ಕಟ್ಟು; ವರ್ಕ್ ಫ್ರಂ ಹೋಂ, ಪೆಟ್ರೋಲ್ ಖರೀದಿಮಿತಿ ಇತ್ಯಾದಿ ಕ್ರಮ ಜಾರಿಯಲ್ಲಿರುವ ದೇಶಗಳು – Kannada News | Global Energy Crisis: Nations Combat Rising Oil Prices & Fuel Shortages

ನವದೆಹಲಿ, ಮೇ 12: ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಾಗತಿಕವಾಗಿ ಇಂಧನ ಬಿಕ್ಕಟ್ಟು ಎದುರಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂಧನ ಮತ್ತು ಆಮದು ವಸ್ತುಗಳ ಬಳಕೆ ಕಡಿಮೆ ಮಾಡಲು ವಿವಿಧ ಮಾರ್ಗೋಪಾಯಗಳನ್ನು ತಿಳಿಸಿ, ಅದನ್ನು ಪಾಲಿಸುವಂತೆ ಜನತೆ ಹಾಗೂ ಕಾರ್ಪೊರೇಟ್ ಸಂಸ್ಥೆಗಳಿಗೆ ಮನವಿ ಮಾಡಿದ್ದು ಹೌದು. ಈ ರೀತಿ, ತೈಲ ಬೆಲೆ ಏರಿಕೆ ಮತ್ತು ಪೂರೈಕೆಯಲ್ಲಿನ ವ್ಯತ್ಯಯವನ್ನು ನಿಭಾಯಿಸಲು ವಿಶ್ವದ ಅನೇಕ ದೇಶಗಳು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿವೆ.

4 ದಿನಗಳ ಕೆಲಸದ ಅವಧಿ (4-Day Work Week): ಇಂಧನ ಉಳಿತಾಯಕ್ಕಾಗಿ ಶ್ರೀಲಂಕಾ ಮತ್ತು ಫಿಲಿಪೈನ್ಸ್‌ನಂತಹ ದೇಶಗಳು ಸರ್ಕಾರಿ ಕಚೇರಿಗಳಲ್ಲಿ ವಾರಕ್ಕೆ ಕೇವಲ 4 ದಿನಗಳ ಕೆಲಸದ ಅವಧಿಯನ್ನು ಘೋಷಿಸಿವೆ. ಇದು ಸಾರಿಗೆಗಾಗಿ ಬಳಕೆಯಾಗುವ ಇಂಧನವನ್ನು ಗಣನೀಯವಾಗಿ ಕಡಿಮೆ ಮಾಡುವ ಉದ್ದೇಶ ಹೊಂದಿದೆ.

ಇದನ್ನೂ ಓದಿ: ಭಾರತದ ಆರ್ಥಿಕ ಬೆಳವಣಿಗೆಯ ದರ ಶೇ. 6ಕ್ಕೆ ಇಳಿಕೆ? ಎಚ್‌ಎಸ್‌ಬಿಸಿ (HSBC) ಭವಿಷ್ಯವಾಣಿ ಮತ್ತು ಆರ್‌ಬಿಐ ಬಡ್ಡಿ ದರ ಏರಿಕೆ ಸಾಧ್ಯತೆ

ಇಂಧನ ಖರೀದಿ ಮಿತಿ (Fuel Rationing): ಪೆಟ್ರೋಲ್ ಮತ್ತು ಡೀಸೆಲ್ ವ್ಯರ್ಥವಾಗುವುದನ್ನು ತಡೆಯಲು ಅನೇಕ ದೇಶಗಳಲ್ಲಿ ಫುಯೆಲ್ ರೇಷನಿಂಗ್ ಅಥವಾ ಖರೀದಿ ಮಿತಿಯನ್ನು ಜಾರಿಗೆ ತರಲಾಗಿದೆ. ವಾಹನ ಸವಾರರು ನಿಗದಿತ ಪ್ರಮಾಣದ ಇಂಧನವನ್ನು ಮಾತ್ರ ಖರೀದಿಸಲು ಅವಕಾಶ ನೀಡಲಾಗುತ್ತಿದೆ.

ಮನೆಯಿಂದಲೇ ಕೆಲಸ (Work From Home): ಹಲವು ದೇಶಗಳು ಇಂಧನ ಬಳಕೆಯನ್ನು ತಗ್ಗಿಸಲು ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಿಗೆ ಸಾಧ್ಯವಿರುವ ಕಡೆಗಳಲ್ಲಿ ‘ವರ್ಕ್ ಫ್ರಮ್ ಹೋಮ್’ ನೀಡುವಂತೆ ಸೂಚಿಸಿವೆ.

ಶಾಲಾ-ಕಾಲೇಜುಗಳ ಮೇಲೆ ಪರಿಣಾಮ: ಬಾಂಗ್ಲಾದೇಶ ಮತ್ತು ಲಾವೋಸ್‌ನಂತಹ ದೇಶಗಳಲ್ಲಿ ವಿದ್ಯುತ್ ಮತ್ತು ಇಂಧನ ಉಳಿಸಲು ಶಾಲಾ-ಕಾಲೇಜುಗಳ ರಜೆಯನ್ನು ಹೆಚ್ಚಿಸಲಾಗಿದೆ ಅಥವಾ ತರಗತಿಗಳ ಅವಧಿಯನ್ನು ಕಡಿತಗೊಳಿಸಲಾಗಿದೆ.

ವಿದ್ಯುತ್ ಉಳಿತಾಯ ಕ್ರಮಗಳು: ಸರ್ಕಾರಿ ಕಚೇರಿಗಳಲ್ಲಿ ಎಸಿ (AC) ಬಳಕೆಯನ್ನು ಸೀಮಿತಗೊಳಿಸುವುದು, ರಾತ್ರಿ ವೇಳೆ ಅನಗತ್ಯ ದೀಪಗಳನ್ನು ಆರಿಸುವುದು ಮತ್ತು ಸಾರ್ವಜನಿಕ ಸಾರಿಗೆಯನ್ನು ಬಳಸಲು ಜನರನ್ನು ಪ್ರೇರೇಪಿಸುವಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಇದನ್ನೂ ಓದಿ: ಎಐನಿಂದ ಉದ್ಯೋಗಗಳು ಹೋಗೋದು ಸುಳ್ಳಾ? ಕೆಲಸ ಸೇರುವ ಸಮಯ ಇದು ಎನ್ನುತ್ತಾರೆ ಜೆನ್ಸೆನ್ ಹುವಾಂಗ್

ವಿಶ್ವದ ಪ್ರಮುಖ ತೈಲ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ (Strait of Hormuz) ಮೇಲೆ ಇರಾನ್ ಯುದ್ಧದ ಪರಿಣಾಮ ಬೀರಿದೆ. ಇದರಿಂದಾಗಿ ಕಚ್ಚಾ ತೈಲ ಪೂರೈಕೆ ಸ್ಥಗಿತಗೊಳ್ಳುವ ಭೀತಿ ಎದುರಾಗಿದ್ದು, ಬೆಲೆಗಳು ದಾಖಲೆ ಮಟ್ಟಕ್ಕೆ ಏರುತ್ತಿವೆ.

ಒಟ್ಟಾರೆಯಾಗಿ, ಯುದ್ಧದ ಕಾರಣದಿಂದ ಉಂಟಾಗಿರುವ ಆರ್ಥಿಕ ಹೊಡೆತವನ್ನು ತಗ್ಗಿಸಲು ವಿಶ್ವದ ಹಲವು ದೇಶಗಳು ತಮ್ಮದೇ ರೀತಿಯಲ್ಲಿ ಪ್ರಯತ್ನಗಳನ್ನು ಮಾಡುತ್ತಿವೆ. ಭಾರತ ಸರ್ಕಾರ ಕೂಡ ಈ ನಿಟ್ಟಿನಲ್ಲಿ ಆಲೋಚನೆಗಳನ್ನು ಮಾಡಿ, ಪ್ರಯತ್ನ ಶುರುವಿಟ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಇದುವೇ ನನ್ನ ಏಕೈಕ ಗುರಿ: ಮನದಿಂಗಿತ ಬಿಟ್ಟಿಟ್ಟ ಕೃನಾಲ್ ಪಾಂಡ್ಯ – Kannada News | Krunal Pandya Sets Sights on 2027 ODI World Cup Comeback

ಐಪಿಎಲ್ 2026ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಮ್ಯಾಚ್-ವಿನ್ನರ್ ಆಗಿ ಹೊರಹೊಮ್ಮುತ್ತಿರುವ ಕೃನಾಲ್ ಪಾಂಡ್ಯ, ರಾಷ್ಟ್ರೀಯ ತಂಡಕ್ಕೆ ಮರಳುವ ಇಚ್ಛೆಯನ್ನು ಬಹಿರಂಗಪಡಿಸಿದ್ದಾರೆ. 2027ರಲ್ಲಿ ಆಫ್ರಿಕಾ ಮಣ್ಣಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವುದೇ ನನ್ನ ಪರಮ ಗುರಿ ಎಂದು ಘೋಷಿಸಿರುವ ಅವರ ಈ ಹೇಳಿಕೆ ಈಗ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಈ ಬಗ್ಗೆ ಮಾತನಾಡಿದ ಕೃನಾಲ್ ಪಾಂಡ್ಯ, ನನಗೆ 6-7 ವಯಸ್ಸಿದ್ದಾಗಿನಿಂದಲೂ ದೇಶಕ್ಕಾಗಿ ಆಡುವ ಕನಸು ಕಂಡಿದ್ದೆ. ಆ ಕನಸು ಇಂದಿಗೂ ಬದಲಾಗಿಲ್ಲ. ದೇಶಕ್ಕಾಗಿ ಆಡುವುದು ನನ್ನ ಏಕೈಕ ಗುರಿ. ಅದರಂತೆ 2027ರ ಏಕದಿನ ವಿಶ್ವಕಪ್ ತಂಡದಲ್ಲಿ ಚಾನ್ಸ್ ಸಿಗುವ ವಿಶ್ವಾಸವಿದೆ ಎಂದಿದ್ದಾರೆ.

ಕೃನಾಲ್ ಪಾಂಡ್ಯ 2021ರ ಜುಲೈನಲ್ಲಿ ಕೊನೆಯ ಬಾರಿಗೆ ಭಾರತ ತಂಡದ ಪರ ಆಡಿದ್ದರೂ, ರಾಷ್ಟ್ರೀಯ ತಂಡಕ್ಕೆ ಮರಳುವ ಹಂಬಲ ಅವರಲ್ಲಿ ಇನ್ನೂ ಬಲವಾಗಿದೆ. ಈ ಹಂಬಲಕ್ಕೆ ಬೆಂಬಲವಾಗಿ ಅವರ ಐಪಿಎಲ್ ಪ್ರದರ್ಶನ ನಿಂತಿದೆ.

ಕೃನಾಲ್ ಭರ್ಜರಿ ಪ್ರದರ್ಶನ:

ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2026ರಲ್ಲಿ ಕೃಣಾಲ್ ಪಾಂಡ್ಯ ಆರ್‌ಸಿಬಿ ಪರ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಈ ಫಾರ್ಮ್​​ನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

  • ಬ್ಯಾಟಿಂಗ್: ಮುಂಬೈ ಇಂಡಿಯನ್ಸ್ ವಿರುದ್ಧದ ಕಠಿಣ ಪರಿಸ್ಥಿತಿಯಲ್ಲಿ ಕೇವಲ 46 ಎಸೆತಗಳಲ್ಲಿ 73 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದರು. ಈ ಮೂಲಕ ಆರ್​ಸಿಬಿ ತಂಡಕ್ಕೆ ರೋಚಕ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
  • ಬೌಲಿಂಗ್: ಈ ಸೀಸನ್​ನಲ್ಲಿ 10 ವಿಕೆಟ್‌ಗಳನ್ನು ಕಬಳಿಸಿರುವ ಕೃನಾಲ್, ಸ್ಪಿನ್ ವಿಭಾಗದಲ್ಲಿ ಆರ್‌ಸಿಬಿಗೆ ಸಮತೋಲನ ನೀಡುತ್ತಿದ್ದಾರೆ.
  •  ದಾಖಲೆ: ಐಪಿಎಲ್ ಇತಿಹಾಸದಲ್ಲಿ ಎರಡು ಬಾರಿ ಫೈನಲ್‌ನಲ್ಲಿ ‘ಪಂದ್ಯ ಶ್ರೇಷ್ಠ’ ಪ್ರಶಸ್ತಿ ಪಡೆದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಯನ್ನೂ ಅವರು ಹೊಂದಿದ್ದಾರೆ (2017 ಮತ್ತು 2025).

ಇದನ್ನೂ ಓದಿ: ಕೃನಾಲ್ ಪಾಂಡ್ಯ ಅಲ್ಲೇ ಸಾಯಬೇಕಿತ್ತು… ಇದೆಂತಹ ನೀಚತನ..!

ಸವಾಲುಗಳು ಮತ್ತು ಸಾಧ್ಯತೆಗಳು:

2027ರ ವಿಶ್ವಕಪ್ ವೇಳೆಗೆ ಕೃನಾಲ್ ಪಾಂಡ್ಯ ಅವರಿಗೆ 36-37 ವರ್ಷ ವಯಸ್ಸಾಗಲಿದ್ದು, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಅವರಂತಹ ಅನುಭವಿಗಳ ಜೊತೆ ಸ್ಪರ್ಧಿಸಬೇಕಾಗುತ್ತದೆ. ಆದಾಗ್ಯೂ, ಆರ್‌ಸಿಬಿ 2025ರಲ್ಲಿ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ ಕೃನಾಲ್, ಒತ್ತಡದ ಸಮಯದಲ್ಲಿ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದಾರೆ.

“ಮುಂದಿನ ವರ್ಷ ವಿಶ್ವಕಪ್ ಬರುತ್ತಿದೆ. ನಾನು ಉತ್ತಮ ಪ್ರದರ್ಶನ ಮುಂದುವರಿಸುತ್ತೇನೆ ಎಂದು ನಂಬಿದ್ದೇನೆ. ಅವಕಾಶ ಸಿಕ್ಕರೆ ಅದು ನನಗೆ ಮತ್ತು ನನ್ನ ಕುಟುಂಬಕ್ಕೆ ವಿಶೇಷ ಕ್ಷಣವಾಗಿರಲಿದೆ” ಎಂದು ಕೃನಾಲ್ ಪಾಂಡ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Source link

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್: ಸಿಬಿಐನಿಂದ ಮಹತ್ವದ ಸಾಕ್ಷಿ ಪತ್ತೆ – Kannada News | NEET UG Scam: CBI Raids Nashik, Major Breakthrough in Paper Leak Investigation

ದೆಹಲಿ, ಮೇ.12: ದೇಶಾದ್ಯಂತ ಸಂಚಲನ ಮೂಡಿಸಿರುವ ನೀಟ್ (NEET-UG) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಈಗ ಮಹಾರಾಷ್ಟ್ರದ ನಾಸಿಕ್ ನಗರದ ಲಿಂಕ್ ಇರುವುದು ಪತ್ತೆಯಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ (CBI) ಅಧಿಕಾರಿಗಳು ನಾಸಿಕ್‌ನಲ್ಲಿ ಕಾರ್ಯಾಚರಣೆ ನಡೆಸಿ ಓರ್ವ ಪ್ರಮುಖ ಶಂಕಿತನನ್ನು ವಶಕ್ಕೆ ಪಡೆದಿದ್ದಾರೆ.

ರಾಜಸ್ಥಾನ ಮತ್ತು ಬಿಹಾರದಲ್ಲಿ ಈ ಹಿಂದೆ ನಡೆದಿದ್ದ ಬಂಧನಗಳ ಬೆನ್ನಲ್ಲೇ, ತನಿಖಾ ಸಂಸ್ಥೆಗಳಿಗೆ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಈ ದಂಧೆಯ ಕೊಂಡಿಗಳು ಇರುವುದು ಸಾಬೀತಾಗಿದೆ. ವಶಕ್ಕೆ ಪಡೆದ ಶಂಕಿತ ವ್ಯಕ್ತಿಯು ಪರೀಕ್ಷೆಗೂ ಮುನ್ನವೇ ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ತಲುಪಿಸುವಲ್ಲಿ ಅಥವಾ ಹಣಕಾಸಿನ ವ್ಯವಹಾರ ಕುದುರಿಸುವಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ಮೇ 3 ರಂದು ನಡೆದಿದ್ದ NEET ಪರೀಕ್ಷೆ ರದ್ದು!

ನಾಸಿಕ್‌ನಲ್ಲಿ ವಶಕ್ಕೆ ಪಡೆದ ವ್ಯಕ್ತಿಯನ್ನು ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದ್ದು, ಈತನ ಹಿಂದೆ ದೊಡ್ಡ ಶಿಕ್ಷಣ ಮಾಫಿಯಾ ಇರುವ ಶಂಕೆ ವ್ಯಕ್ತವಾಗಿದೆ. ಮೇ 3ರಂದು ನಡೆದಿದ್ದ ಪರೀಕ್ಷೆಯ ಪತ್ರಿಕೆಯು ಕೇವಲ ಒಂದು ರಾಜ್ಯಕ್ಕೆ ಸೀಮಿತವಾಗದೆ, ನಾಸಿಕ್ ಸೇರಿದಂತೆ ದೇಶದ ಹಲವು ನಗರಗಳಲ್ಲಿ ಹಂಚಿಕೆಯಾಗಿರುವ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಶಂಕಿತನ ಮೊಬೈಲ್ ಮತ್ತು ಲಾಪ್ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಾಟ್ಸಾಪ್ ಸಂದೇಶಗಳ ಮೂಲಕ ಪತ್ರಿಕೆ ಸೋರಿಕೆಯಾಗಿರುವ ದತ್ತಾಂಶಗಳನ್ನು ಸಿಬಿಐ ಸಂಗ್ರಹಿಸುತ್ತಿದೆ. ಈಗಾಗಲೇ ಪರೀಕ್ಷೆಯನ್ನು ರದ್ದುಗೊಳಿಸಲಾಗಿದ್ದು, ಈ ಹೊಸ ನಂಟಿನಿಂದಾಗಿ ಇನ್ನಷ್ಟು ದೊಡ್ಡ ವ್ಯಕ್ತಿಗಳು ಸಿಬಿಐ ಬಲೆಗೆ ಬೀಳುವ ಸಾಧ್ಯತೆಯಿದೆ.

ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಜಯಪುರ: ಬೀದಿನಾಯಿಗಳ ಹಾವಳಿ ಬೆನ್ನಲ್ಲೇ ದುಷ್ಕರ್ಮಿಗಳಿಂದ ವಿಷಪ್ರಾಶನ; 6 ಶ್ವಾನಗಳು ಸಾವು – Kannada News | Vijayapura Stray Dog Menace Sparks Outrage After Miscreants Poison 6 Dogs

ವಿಜಯಪುರ, ಮೇ 12: ನಗರದಲ್ಲಿ ಬೀದಿನಾಯಿಗಳ (street dogs) ಹಾವಳಿ ಮುಂದುವರಿದಿರುವ ಬೆನ್ನಲ್ಲೇ ದುಷ್ಕರ್ಮಿಗಳು ಬೀದಿನಾಯಿಗಳಿಗೆ ವಿಷಾಹಾರ ನೀಡಿದ್ದು, ಆರು ಬೀದಿನಾಯಿಗಳು ನರಳಿ ನರಳಿ ಪ್ರಾಣಬಿಟ್ಟಿರುವ (death) ಆತಂಕಕಾರಿ ಘಟನೆ ಶಾಂತಿ ನಗರದಲ್ಲಿ ನಡೆದಿದೆ. ಎರಡು ನಾಯಿಗಳ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಶಾಂತಿ ನಗರದಲ್ಲಿ ಈವರೆಗೆ ನಾಯಿಗಳ ದಾಳಿ ಪ್ರಕರಣ ವರದಿಯಾಗದಿದ್ದರೂ ವಿಷಾಹಾರ ನೀಡಿರುವುದು ಮಾತ್ರ ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ವಿಷ ಹಾಕಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಗಿದೆ.

ಮುಖ್ಯಾಂಶಗಳು

  • ವಿಜಯಪುರದಲ್ಲಿ ಬೀದಿನಾಯಿಗಳಿಗೆ ವಿಷಾಹಾರ
  • ಅಪರಿಚಿತರ ಅಮಾನವೀಯ ಕೃತ್ಯಕ್ಕೆ ಪ್ರಾಣಿಪ್ರಿಯರು ಆಕ್ರೋಶ
  • ಶ್ವಾನಪಾಲನಾ ಕೇಂದ್ರ ನಿರ್ಮಾಣಕ್ಕೆ ಆಗ್ರಹ

ಮೂರು ವರ್ಷದ ಬಾಲಕನ ಮೇಲೆ ಬೀದಿನಾಯಿ ದಾಳಿ

ಮೇ 6ರಂದು ರಾಜಕುಮಾರ ಲೇಔಟ್​​ನಲ್ಲಿ ಮೂರು ವರ್ಷದ ಬಾಲಕನ ಮೇಲೆ ಬೀದಿನಾಯಿ ದಾಳಿ ಮಾಡಿತ್ತು. ಕಚ್ಚಿಕೊಂಡು ಎಳೆದುಕೊಂಡು ಹೋಗಿದ್ದ ಶ್ವಾನದಿಂದ ಸ್ಥಳೀಯರು ಬಾಲಕನನ್ನು ರಕ್ಷಣೆ ಮಾಡಿದ್ದರು. ಸದ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಸಾವು ಬದುಕಿನ ಮಧ್ಯೆ ಬಾಲಕ ಹೋರಾಡುತ್ತಿದ್ದಾನೆ.

ಇದನ್ನೂ ಓದಿ: ವಿಜಯಪುರದಲ್ಲಿ 3 ವರ್ಷದ ಮಗುವಿನ ಮೇಲೆ ಬೀದಿನಾಯಿ ದಾಳಿ: ಕುಟುಂಬಸ್ಥರಿಗೆ ಆಘಾತ ತಂದ ಘಟನೆ

ಈ ನಡುವೆ ಇಂದು ಶಾಂತಿ ನಗರದಲ್ಲಿ ಬೀದಿನಾಯಿಗಳಿಗೆ ವಿಷಪ್ರಾಶನ ಮಾಡಲಾಗಿದೆ. ಅಪರಿಚಿತರಿಂದ ಬೀದಿ ನಾಯಿಗಳಿಗೆ ವಿಷಾಹಾರ ನೀಡಲಾಗಿದ್ದು, 6 ಬೀದಿನಾಯಿಗಳು ಪ್ರಾಣ ಬಿಟ್ಟಿವೆ. ಈ ಶಾಂತಿ ನಗರದಲ್ಲಿ ಸಾರ್ವಜನಿಕರಿಗೆ, ಮಕ್ಕಳಿಗೆ ಯಾವುದೇ ಬೀದಿನಾಯಿಗಳು ಕಚ್ಚಿಲ್ಲ, ದಾಳಿ ಮಾಡಿಲ್ಲ, ಆದರೂ ವಿಷ ಹಾಕಿರುವುದಕ್ಕೆ ಪ್ರಾಣಿ ಪ್ರಿಯರು ತೀವ್ರ ಅಸಮಾಧಾನ ಹೊರ ಹಾಕಿದ್ಧಾರೆ.

ಅಸ್ವಸ್ಥ ನಾಯಿಗಳನ್ನ ಕಸದ ವಾಹನದಲ್ಲಿ ಹಾಕಿದ ಆರೋಪ

ಇನ್ನು ಕಳೆದ ಕೆಲ ದಿನಗಳ ಹಿಂದೆ ಯಾರೋ ಅಪರಚಿತರು ಬೀದಿನಾಯಿಗಳಿಗೆ ವಿಷ ಹಾಕಿ ಹೋಗಿದ್ದರಂತೆ. ಆಗ 2 ಬೀದಿನಾಯಿಗಳು ಅಸುನೀಗಿದ್ದವು. ನಿನ್ನೆ ರಾತ್ರಿ ಮತ್ತೆ ಬೀದಿನಾಯಿಗಳಿಗೆ ವಿಷಾಹಾರ ನೀಡಲಾಗಿದೆ. ಆ ಮೂಲಕ 6 ಬೀದಿನಾಯಿಗಳನ್ನು ವಿಷಾಹಾರ ಹಾಕಿ ಕೊಲ್ಲಲಾಗಿದೆ. ವಿಷಹಾರ ತಿಂದ ಕೆಲ ಬೀದಿನಾಯಿಗಳು ತೀವ್ರ ಅಸ್ವಸ್ಥವಾಗಿದ್ದವು. ಆದರೆ ಅಸ್ವಸ್ಥಗೊಂಡ ಬೀದಿನಾಯಿಗಳನ್ನು ಪಾಲಿಕೆಯವರು, ಪಶುಸಂಗೋಪನೆ ಇಲಾಖೆ ಸಿಬ್ಬಂದಿ, ಪಶು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವ ಬದಲು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಕಸದ ವಾಹನದಲ್ಲಿ ಎಸೆದಿದ್ದಾರೆ. ಇದು ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ. ಜೀವಂತವಿರುವ ಬೀದಿನಾಯಿಯನ್ನು ನಿರ್ದಯವಾಗಿ ಕಸದ ವಾಹನದಲ್ಲಿ ಹಾಕಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಅಪಾರ್ಟ್​ಮೆಂಟ್ ನಿವಾಸಿಗಳಿಗೆ ಬೀದಿ ನಾಯಿಗಳ ಕಾಟ: ಮಕ್ಕಳು, ವೃದ್ಧರ ಮೇಲೆ ಮನಸೋ ಇಚ್ಛೆ ದಾಳಿ

ಬೀದಿನಾಯಿಗಳ ನಿಯಂತ್ರಣ, ಸಾಗಾಟ, ಪಾಲನೆಗೆ ಸುಪ್ರೀಂ ಕೋರ್ಟ್ ನಿಯಮಗಳ ಪ್ರಕಾರ ಮಾಡಬೇಕಿದೆ. ಆದರೆ ಪಾಲಿಕೆ ಸಿಬ್ಬಂದಿ ಹಾಗೂ ಸಂಬಂಧಿಸಿದ ಇಲಾಖೆ ಸಿಬ್ಬಂದಿ ಸುಪ್ರೀಂ ಕೋರ್ಟ್ ಸೂಚನೆಗಳನ್ನು ಪಾಲಿಸುತ್ತಿಲ್ಲ. ಬೀದಿನಾಯಿಗಳಿಗೆ ವಿಷ ಹಾಕಿದವರ ಮೇಲೆ ಕಾನೂನು ಕ್ರಮತೆಗೆದುಕೊಳ್ಳಬೇಕೆಂದು ಒತ್ತಾಯಿಸಲಾಗಿದೆ.

ಶ್ವಾನಪಾಲನಾ ಕೇಂದ್ರಕ್ಕೆ 2ಕೋಟಿ ರೂ ಅನುದಾನ 

ಒಂದೆಡೆ ಬೀದಿನಾಯಿಗಳು ದಾಳಿ ಮಾಡುತ್ತಿದ್ದರೆ, ಮತ್ತೊಂದೆಡೆ ಮಾನವೀಯತೆ ಮರೆತು ಬೀದಿನಾಯಿಗಳಿಗೆ ವಿಷಾಹಾರ ಹಾಕಿ ಕೊಲ್ಲಲಾಗುತ್ತಿದೆ. ಹೀಗಾಗಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಶ್ವಾನ ಪಾಲನಾ ಕೇಂದ್ರ ನಿರ್ಮಾಣ ಮಾಡಬೇಕಿದೆ. ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಶ್ವಾನಪಾಲನಾ ಕೇಂದ್ರಕ್ಕೆ 2ಕೋಟಿ ರೂ ಅನುದಾನ ಮಂಜೂರು ಮಾಡಿದ್ದಾರೆ. ನಿರ್ಮಾಣ ಕಾಮಗಾರಿ ಆದಷ್ಟು ಬೇಗ ಮುಗಿಸಿ ಬೀದಿನಾಯಿಗಳಿಗೆ ಆಶ್ರಯ ನೀಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಗದಗದ ಸರ್ಕಾರಿ ಕಚೇರಿಗೆ ಕತ್ತಲೆ ಭಾಗ್ಯ: ಸಾರ್ವಜನಿಕರು, ಸಿಬ್ಬಂದಿ ಮೊಬೈಲ್​​ ಟಾರ್ಚೇ ಇಲ್ಲಿ ಬೆಳಕು! – Kannada News | Electricity Cut Over Rupees 3,000 Dues, Gadag Government Office Left in Darkness for 8 Months

ದಗದ ಸರ್ಕಾರಿ ಕಚೇರಿಗೆ ಕತ್ತಲೆ ಭಾಗ್ಯ

ಗದಗ, ಮೇ 12: ಗೃಹ ಜ್ಯೋತಿ ಯೋಜನೆಯಡಿ ಮನೆಗಳಿಗೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ, ಇದರಿಂದ ಲಕ್ಷಾಂತರ ಬಡ ಕುಟುಂಬಗಳಿಗೆ ಅನುಕೂಲವಾಗಿದೆ ಎಂದು ರಾಜ್ಯ ಸರ್ಕಾರವೇನೋ ಗರ್ವದಿಂದ ಹೇಳಿಕೊಳ್ಳುತ್ತಿದೆ. ಆದರೆ ಇದೇ ಸರ್ಕಾರದ ಅಡಿಯಲ್ಲಿ ಬರುವ ಗದಗದ ಕಚೇರಿಯೊಂದು ಒಂದೆರಡಲ್ಲ ಬರೋಬ್ಬರಿ 8 ತಿಂಗಳಿನಿಂದ ಕತ್ತಲೆ ಭಾಗ್ಯದಲ್ಲಿದೆ. ಬಿಲ್​​ ಪಾವತಿಸದೇ ಇರುವ ಕಾರಣ ವಿದ್ಯುತ್​​ ಸಂಪರ್ಕ ಕಡಿತಗೊಳಿಸಲಾಗಿದ್ದು, ಸಾರ್ವಜನಿಕರು ಹಾಗೂ ಸಿಬ್ಬಂದಿ ಮೊಬೈಲ್ ಟಾರ್ಚ್ ಬೆಳಕಿನಲ್ಲಿಯೇ ದಿನನಿತ್ಯದ ವ್ಯವಹಾರ ನಿರ್ವಹಿಸಬೇಕಾದ ಸ್ಥಿತಿ ಇದೆ.

ಬಿಲ್ ಪಾವತಿಸದ ಹಿನ್ನೆಲೆ  ಲಕ್ಷ್ಮೇಶ್ವರದ ಭೂದಾಖಲೆ ಮತ್ತು ನಗರ ಸರ್ವೇ ಕಚೇರಿಯ ವಿದ್ಯುತ್ ಸಂಪರ್ಕವನ್ನು ಹೆಸ್ಕಾಂ ಕಡಿತಗೊಳಿಸಿದೆ. ಅಧಿಕಾರಿಗಳ ಪ್ರಕಾರ, ಸುಮಾರು 3,000 ವಿದ್ಯುತ್ ಬಿಲ್ ಬಾಕಿಯಿದೆ. ಹೆಸರು ಬಹಿರಂಗಪಡಿಸದ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿದ್ದು, ಸುಮಾರು ಎಂಟು ತಿಂಗಳ ಹಿಂದೆ ಕಡಿತಗೊಂಡಿರುವ ವಿದ್ಯುತ್​​ ಸಂಪರ್ಕ ಇನ್ನೂ ಮರಳಿ ಬಂದಿಲ್ಲ. ಆಗಿನಿಂದ ಸಿಬ್ಬಂದಿ ಹಾಗೂ ಸಾರ್ವಜನಿಕರು ಕತ್ತಲೆಯಲ್ಲೇ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಗದಗ ಜಿಲ್ಲೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿರುವ ಲಕ್ಷ್ಮೇಶ್ವರ ಈಗ ತಾಲೂಕು ಕೇಂದ್ರವಾಗಿದ್ದರೂ, ಭೂದಾಖಲೆ ಕಚೇರಿಯಲ್ಲಿ ಮೂಲ ಸೌಲಭ್ಯಗಳ ಕೊರತೆ ತಾಂಡವವಾಡುತ್ತಿದೆ ಎಂಬ ಆರೋಪವೂ ಸ್ಥಳೀಯರಿಂದ ಕೇಳಿಬಂದಿದೆ.

ಇದನ್ನೂ ಓದಿ: ಮುಸುಕುದಾರಿ ಗ್ಯಾಂಗ್​​​​​​ನ​​​ ಹೆಡೆಮುರಿ ಕಟ್ಟಿದ ಖಾಕಿ; 1.26 ಕೋಟಿ ರೂ ಮೌಲ್ಯದ ಚಿನ್ನಾಭರಣ ವಶಕ್ಕೆ

ಕಚೇರಿಯ ಸಂಪೂರ್ಣ ಕೆಲಸವನ್ನು ಕೇವಲ ಇಬ್ಬರು ಸಿಬ್ಬಂದಿ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದ್ದು, ಜಮೀನು ಹಾಗೂ ಆಸ್ತಿ ಅಳತೆ, ಗಡಿ ಗುರುತು, ನಕ್ಷೆ ತಯಾರಿ, ಹಳೆಯ ಸರ್ವೇ ದಾಖಲೆಗಳ ನಿರ್ವಹಣೆ, ಸರ್ವೇ ನಂಬರ್ ಮತ್ತು ಆಸ್ತಿ ಕಾರ್ಡ್ ವಿತರಣೆ, ನಗರ ಪ್ರದೇಶಗಳ ಖಾಸಗಿ ಹಾಗೂ ಸರ್ಕಾರಿ ಜಮೀನುಗಳ ಅಳತೆ ಸೇರಿದಂತೆ ಹಲವು ಪ್ರಮುಖ ಕಾರ್ಯಗಳು ಈ ಕಚೇರಿಯಲ್ಲಿ ನಡೆಯುತ್ತವೆ. ಸರ್ಕಾರ ಭೂ ದಾಖಲೆ ಹಾಗೂ ಸರ್ವೇ ನಕ್ಷೆಗಳ ಡಿಜಿಟಲೀಕರಣದ ಬಗ್ಗೆ ಹೇಳುತ್ತಿದ್ದರೂ, ಕಚೇರಿಯಲ್ಲಿ ಇನ್ನೂ ಕೈಬರಹದ ನಕ್ಷೆಗಳನ್ನೇ ನೀಡಲಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಕಚೇರಿಯಲ್ಲಿ ಕಂಪ್ಯೂಟರ್ ಅಥವಾ ಸಮರ್ಪಕ ಡಿಜಿಟಲ್ ಸೌಲಭ್ಯಗಳೇ ಇಲ್ಲದ ಕಾರಣ ಸಿಬ್ಬಂದಿ ತಮ್ಮ ವೈಯಕ್ತಿಕ ಮೊಬೈಲ್‌ಗಳ ಮೂಲಕ ಅರ್ಜಿಗಳನ್ನು ಪರಿಶೀಲಿಸಿ, ನಕ್ಷೆ ಹಾಗೂ ಸರ್ವೇ ಮಾಹಿತಿಗಳನ್ನು ನೋಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಆರೋಪಿಸಲಾಗಿದೆ. ಸ್ಥಳೀಯರು ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ವಿದ್ಯುತ್ ಸಮಸ್ಯೆಯನ್ನು ತಕ್ಷಣ ಪರಿಷ್ಕರಿಸಿ ತಾಲೂಕಿನ ಜನರಿಗೆ ಉತ್ತಮ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ ಎಂದು ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:03 pm, Tue, 12 May 26

Source link

ಮದುವೆ ಆಗಿ ನಾಲ್ಕೇ ವರ್ಷಕ್ಕೆ ಖ್ಯಾತ ನಟಿ ಮೌನಿ ರಾಯ್ ಸಂಸಾರದಲ್ಲಿ ಬಿರುಕು – Kannada News | Mouni Roy and Suraj Nambiar unfollow each other on Instagram Divorce rumours viral

ಖ್ಯಾತ ಬಾಲಿವುಡ್ ನಟಿ ಮೌನಿ ರಾಯ್ (Mouni Roy) ಮತ್ತು ಉದ್ಯಮಿ ಸೂರಜ್ ನಂಬಿಯಾರ್ (Suraj Nambiar) ಪರಸ್ಪರ ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. ಸದಾ ಕಾಲ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಈ ದಂಪತಿ, ತಮ್ಮ ಪ್ರವಾಸ ಮತ್ತು ಸಂತೋಷದ ಕ್ಷಣಗಳ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಆದರೆ ಈಗ ದಿಢೀರನೆ ಅನ್‌ಫಾಲೋ ಮಾಡಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಮೌನಿ ಮತ್ತು ಸೂರಜ್ ಇಬ್ಬರೂ ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬರನ್ನೊಬ್ಬರು ಫಾಲೋ ಮಾಡುತ್ತಿಲ್ಲ. ಸೂರಜ್ ಅವರು ತಮ್ಮ ಪ್ರೊಫೈಲ್‌ನಿಂದ ಮದುವೆಯ ಕೆಲವು ಫೋಟೋಗಳನ್ನು ತೆಗೆದುಹಾಕಿದ್ದಾರೆ ಎನ್ನಲಾಗಿದೆ. ಆದರೆ ಮೌನಿ ರಾಯ್ ಅವರ ಪ್ರೊಫೈಲ್‌ನಲ್ಲಿ ಇಂದಿಗೂ ಮದುವೆಯ ಚಿತ್ರಗಳು ಲಭ್ಯವಿವೆ. ಮೂಲಗಳ ಪ್ರಕಾರ, ಇಬ್ಬರೂ ಸದ್ಯ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸೂರಜ್ ನಂಬಿಯಾರ್ ಮೂಲತಃ ಬೆಂಗಳೂರಿನ ಜೈನ್ ಕುಟುಂಬಕ್ಕೆ ಸೇರಿದವರು. ದುಬೈನಲ್ಲಿ ಹೂಡಿಕೆ ಬ್ಯಾಂಕರ್ ಮತ್ತು ಉದ್ಯಮಿಯಾಗಿ ನೆಲೆಸಿರುವ ಸೂರಜ್ ಮತ್ತು ಮೌನಿ 2022ರ ಜನವರಿಯಲ್ಲಿ ಗೋವಾದಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದರು. ಮಲಯಾಳಿ ಮತ್ತು ಬಂಗಾಳಿ ಸಂಪ್ರದಾಯದಂತೆ ಇವರ ಮದುವೆ ನಡೆದಿತ್ತು. ಅನೇಕ ಸೆಲೆಬ್ರಿಟಿಗಳು ಆ ಮದುವೆಗೆ ಸಾಕ್ಷಿಯಾಗಿದ್ದರು.

ಈ ಎಲ್ಲ ವದಂತಿಗಳ ಬಗ್ಗೆ ಮೌನಿ ರಾಯ್ ಆಗಲಿ ಅಥವಾ ಸೂರಜ್ ಆಗಲಿ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಮೌನಿ ರಾಯ್ ಅವರು ಸದ್ಯ ವರುಣ್ ಧವನ್ ಜೊತೆ ಅಭಿನಯಿಸಿದ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಚಿತ್ರದ ಬಿಡುಗಡೆಯ ತಯಾರಿಯಲ್ಲಿದ್ದಾರೆ.

ಇದನ್ನೂ ಓದಿ: ಅತಿಥಿಯಾಗಿ ಕರೆದು ಕಿರುಕುಳ ನೀಡಿದ ಅಂಕಲ್ಸ್: ನಟಿ ಮೌನಿ ರಾಯ್​ಗೆ ಕೆಟ್ಟ ಅನುಭವ

ಅಭಿಮಾನಿಗಳು ಮಾತ್ರ ‘ಇಷ್ಟು ಸುಂದರವಾದ ಜೋಡಿ ಬೇರೆಯಾಗಬಾರದು’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಇದು ಕೇವಲ ಸಣ್ಣ ಮುನಿಸೋ ಅಥವಾ ನಿಜವಾದ ವಿಚ್ಛೇದನವೋ ಎಂಬುದು ಕಾಲವೇ ಉತ್ತರಿಸಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪ್ರಧಾನಿ ಮೋದಿ ನೀಡಿದ ‘ಮಿತವ್ಯಯ ಮಂತ್ರ’ದ ಹಿಂದಿನ ಲೆಕ್ಕಾಚಾರವೇನು? 23 ಲಕ್ಷ ಕೋಟಿ ರೂ. ಉಳಿತಾಯಕ್ಕೆ ಸಜ್ಜಾಗುತ್ತಿದೆ ಭಾರತ! – Kannada News | Indias Forex Challenge: Modis Plan to Curb Gold, Fuel Imports

ದೆಹಲಿ, ಮೇ.12: ದೇಶದ ಆರ್ಥಿಕತೆಯನ್ನು ಬಲಿಷ್ಠಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಜನತೆಗೆ ನೀಡಿರುವ ಆರ್ಥಿಕ ಶಿಸ್ತಿನ ಕರೆ ಕೇವಲ ಸಲಹೆಯಲ್ಲ, ಅದು 23 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಉಳಿತಾಯದ ಮಾಸ್ಟರ್ ಪ್ಲಾನ್. ಜಾಗತಿಕ ಯುದ್ಧ ಮತ್ತು ಅನಿಶ್ಚಿತತೆಯ ನಡುವೆ ಭಾರತದ ವಿದೇಶಿ ವಿನಿಮಯ ಸಂಗ್ರಹವನ್ನು ರಕ್ಷಿಸಲು ಪ್ರಧಾನಿ ಈ ನಿರ್ಧಾರಕ್ಕೆ ಬಂದಿದ್ದಾರೆ.

ಆರ್‌ಬಿಐ ದತ್ತಾಂಶದಂತೆ, ಫೆಬ್ರವರಿಯಲ್ಲಿ 728 ಶತಕೋಟಿ ಡಾಲರ್ ಇದ್ದ ವಿದೇಶಿ ವಿನಿಮಯ ಸಂಗ್ರಹವು ಏಪ್ರಿಲ್ ವೇಳೆಗೆ 691 ಶತಕೋಟಿ ಡಾಲರ್ಗೆ ಕುಸಿದಿದೆ. ರಫ್ತಿಗಿಂತ ಆಮದು ಹೆಚ್ಚಾಗುತ್ತಿರುವುದು (Current Account Deficit – CAD) ಇದಕ್ಕೆ ಮುಖ್ಯ ಕಾರಣ. 2026ರ ವೇಳೆಗೆ ಈ ಕೊರತೆಯು 8.05 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಬಹುದು ಎಂದು ಐಎಂಎಫ್ ಎಚ್ಚರಿಸಿದೆ. ಇದನ್ನು ತಡೆಯಲು ಮೋದಿ ಅವರು ಮೂರು ಪ್ರಮುಖ ವಲಯಗಳ ಮೇಲೆ ಕಣ್ಣಿಟ್ಟಿದ್ದಾರೆ.

ಇಲ್ಲಿದೆ ನೋಡಿ ಸಂಪೂರ್ಣ ವಿಡಿಯೋ


ಭಾರತವು ವಿಶ್ವದ 2ನೇ ಅತಿದೊಡ್ಡ ಚಿನ್ನದ ಆಮದುದಾರ ರಾಷ್ಟ್ರ. 2026ರಲ್ಲಿ 6.75 ಲಕ್ಷ ಕೋಟಿ ರೂ. ಮೌಲ್ಯದ ಚಿನ್ನ ಆಮದು ಮಾಡಿಕೊಳ್ಳಲಾಗಿದೆ. ಚಿನ್ನ ಖರೀದಿಸಲು ಡಾಲರ್ ಬಳಸುವುದರಿಂದ ರೂಪಾಯಿ ಮೌಲ್ಯ ಕುಸಿಯುತ್ತದೆ. ಚಿನ್ನದ ಖರೀದಿ ಕಡಿಮೆ ಮಾಡಿದರೆ 2 ರಿಂದ 3 ಲಕ್ಷ ಕೋಟಿ ರೂ. ಉಳಿತಾಯ ಸಾಧ್ಯ. ಭೌತಿಕ ಚಿನ್ನದ ಬದಲು ಸಾವರಿನ್ ಗೋಲ್ಡ್ ಬಾಂಡ್ (SGB) ಕಡೆಗೆ ಜನರನ್ನು ಸೆಳೆಯುವುದು ಸರ್ಕಾರದ ಉದ್ದೇಶ.

ಇದನ್ನೂ ಓದಿ: ಆನ್​​ಲೈನ್​​ ತರಗತಿಗೆ ಅಪಸ್ವರ: ಪ್ರಧಾನಿ ಮೋದಿ ಹೇಳಿಕೆಗೆ ಖಾಸಗಿ ಶಾಲಾ ಒಕ್ಕೂಟದಿಂದ ಆಕ್ಷೇಪ

ಭಾರತವು ವಾರ್ಷಿಕವಾಗಿ 17 ಲಕ್ಷ ಕೋಟಿ ರೂ. ಮೌಲ್ಯದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಪಶ್ಚಿಮ ಏಷ್ಯಾದ ಯುದ್ಧಗಳಿಂದಾಗಿ ತೈಲ ಬೆಲೆ ಏರುತ್ತಿರುವುದು ಆರ್ಥಿಕತೆಗೆ ಹೊರೆಯಾಗಿದೆ. ವರ್ಕ್ ಫ್ರಮ್ ಹೋಮ್, ಸಾರ್ವಜನಿಕ ಸಾರಿಗೆ ಬಳಕೆ ಮತ್ತು ಇಂಧನ ಮಿತಬಳಕೆಯ ಮೂಲಕ ಡಾಲರ್ ಹೊರಹರಿವನ್ನು ತಗ್ಗಿಸುವುದು. ಕಳೆದ ವರ್ಷ 1.83 ಲಕ್ಷ ಕೋಟಿ ರೂ. ಮೌಲ್ಯದ ಎಣ್ಣೆ ಆಮದು ಮಾಡಿಕೊಳ್ಳಲಾಗಿದೆ. ಇದರ ಮಿತಬಳಕೆಯಿಂದ ಆರ್ಥಿಕ ಮತ್ತು ದೈಹಿಕ ಆರೋಗ್ಯ ಎರಡೂ ಸುಧಾರಿಸುತ್ತದೆ. 1.34 ಲಕ್ಷ ಕೋಟಿ ರೂ. ಮೌಲ್ಯದ ರಸಗೊಬ್ಬರ ಆಮದನ್ನು ಸಾವಯವ ಕೃಷಿಯ ಮೂಲಕ ಕಡಿಮೆ ಮಾಡಲು ಪ್ರಧಾನಿ ಕರೆ ನೀಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:38 pm, Tue, 12 May 26

Source link

ಲಾರೆನ್ಸ್ ಬಿಷ್ಣೋಯಿ ಕುರಿತ ಡಾಕ್ಯುಸೀರೀಸ್, ಹೈಕೋರ್ಟ್ ಮಹತ್ವದ ಆದೇಶ – Kannada News | Docuseries about criminal Lawrence Bishnoi HC gives order

ಹಲವು ಕೊಲೆ, ಸುಲಿಗೆ, ಬೆದರಿಕೆ ಇನ್ನೂ ಹತ್ತು ಹಲವು ಪ್ರಕರಣಗಳಲ್ಲಿ ಆರೋಪಿ ಮತ್ತು ಕೆಲ ಪ್ರಕರಣಗಳಲ್ಲಿ ಅಪರಾಧಿ ಸಹ ಆಗಿರುವ ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಜೀವನವನ್ನು ಆಧರಿಸಿದ ಸಾಕ್ಷ್ಯಚಿತ್ರ (Docuseries) ಬಿಡುಗಡೆ ಕುರಿತಂತೆ ಪಂಜಾಬ್ ಮತ್ತು ಹರಿಯಾಣ ನ್ಯಾಯಾಲಯ ಆದೇಶವೊಂದನ್ನು ನೀಡಿದೆ. ‘ಲಾರೆನ್ಸ್ ಆಫ್ ಪಂಜಾಬ್’ (Lawrence of Punjab) ಡಾಕ್ಯು ಸೀರೀಸ್ ಕಳೆದ ತಿಂಗಳು ಬಿಡುಗಡೆ ಆಗಬೇಕಿತ್ತು. ಆದರೆ ಖುದ್ದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಂಸ್ಥೆ ಹಾಗೂ ಪಂಜಾಬ್ ಪೊಲೀಸರು ಈ ಡಾಕ್ಯು ಸೀರೀಸ್ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿ ಇದರ ಬಿಡುಗಡೆ ತಡೆದಿದ್ದರು. ಆದರೆ ಈಗ ಹೈಕೋರ್ಟ್, ಡಾಕ್ಯು ಸೀರೀಸ್ ಬಿಡುಗಡೆಗೆ ಅನುಮತಿ ನೀಡಿದೆ.

ಜೀ ಎಂಟರ್ಟೈನ್​​ಮೆಂಟ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಸಾಕ್ಷ್ಯಚಿತ್ರ ಬಿಡುಗಡೆಗೆ ಅನುಮತಿ ನೀಡಿದೆ, ಆದರೆ ಎರಡು ಮುಖ್ಯ ಬದಲಾವಣೆಗಳನ್ನು ಮಾಡಲು ಹೇಳಿದೆ. ಡಾಕ್ಯು ಸರಣಿಯ ಹೆಸರಿನಿಂದ ಲಾರೆನ್ಸ್ ಬಿಷ್ಣೋಯಿ ಮತ್ತು ಪಂಜಾಬ್ ಹೆಸರನ್ನು ತೆಗೆಯುವಂತೆ ನ್ಯಾಯಾಲಯವು ಆದೇಶಿಸಿದೆ. ಶೀರ್ಷಿಕೆಯು ಒಂದು ನಿರ್ದಿಷ್ಟ ರಾಜ್ಯದ (ಪಂಜಾಬ್) ಹೆಸರನ್ನು ಬಳಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಾಲಯವು, ಈ ಶೀರ್ಷಿಕೆಯು ರಾಜ್ಯದ ಇಮೇಜ್‌ಗೆ ಧಕ್ಕೆ ತರಬಹುದು ಮತ್ತು ಗ್ಯಾಂಗ್‌ಸ್ಟರ್ ಹೆಸರನ್ನು ಶೀರ್ಷಿಕೆಯಲ್ಲಿ ಬಳಸುವುದು ಸೂಕ್ತವಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Zee5 ಪರ ವಕೀಲರು ನ್ಯಾಯಾಲಯದ ಈ ಸಲಹೆಯನ್ನು ಒಪ್ಪಿಕೊಂಡಿದ್ದು, ಶೀರ್ಷಿಕೆಯನ್ನು ಬದಲಾಯಿಸಲು ಸಮ್ಮತಿಸಿದ್ದಾರೆ. ಈ ಸರಣಿಯು ಅಪರಾಧ ಜಗತ್ತಿನ ಕರಾಳ ಮುಖವನ್ನು ತೋರಿಸುವ ಉದ್ದೇಶ ಹೊಂದಿದೆಯೇ ಹೊರತು, ಅಪರಾಧಿಯನ್ನು ವೈಭವೀಕರಿಸುವ ಉದ್ದೇಶ ಹೊಂದಿಲ್ಲ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ:ಕೊಲೆಗಾರನಿಗೆ ನಾಯಕನ ಪಟ್ಟ: ‘ಲಾರೆನ್ಸ್ ಆಫ್ ಪಂಜಾಬ್’ ಸಾಕ್ಷ್ಯಚಿತ್ರ ನಿಷೇಧ

ಸಿಧು ಮೂಸೆವಾಲಾ ಹತ್ಯೆ ಪ್ರಕರಣ ಸೇರಿದಂತೆ ಹಲವು ಗಂಭೀರ ಪ್ರಕರಣಗಳಲ್ಲಿ ಆರೋಪಿಯಾಗಿರುವ ಲಾರೆನ್ಸ್ ಬಿಷ್ಣೋಯ್ ಸದ್ಯ ಜೈಲಿನಲ್ಲಿದ್ದಾನೆ. ಇಂತಹ ವಿವಾದಿತ ವ್ಯಕ್ತಿಯ ಕುರಿತಾದ ಸರಣಿಯು ಬಿಡುಗಡೆಗೆ ಮುನ್ನವೇ ಈ ಕಾನೂನು ಸಂಘರ್ಷಕ್ಕೆ ಒಳಗಾಗಿದ್ದು, ಈಗ ನ್ಯಾಯಾಲಯದ ಸೂಚನೆಯಂತೆ ಹೆಸರನ್ನು ಬದಲಾಯಿಸಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ.

‘ಲಾರೆನ್ಸ್ ಆಫ್ ಬಿಷ್ಣೋಯಿ’ ಡಾಕ್ಯು ಸೀರೀಸ್ ಏಪ್ರಿಲ್ 27ರಂದು ಬಿಡುಗಡೆ ಆಗಬೇಕಿತ್ತು. ಈಗಾಗಲೇ ಬಿಡುಗಡೆ ಆಗಿರುವ ಟ್ರೈಲರ್​​ನಲ್ಲಿ ತೋರಿಸಿರುವಂತೆ ಕೆಲವು ಪೊಲೀಸ್ ಅಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು ಪಂಜಾಬ್​ನ ಭೂತಕ ಗ್ಯಾಂಗ್​​ಗಳು ಹಾಗೂ ಲಾರೆನ್ಸ್ ಬಿಷ್ಣೋಯಿ ಬಗ್ಗೆ ಮಾತನಾಡಿದ್ದಾರೆ. ಬಿಷ್ಣೋಯಿಯನ್ನು ಅದ್ಧೂರಿ ಹಿನ್ನೆಲೆ ಸಂಗೀತದೊಂದಿಗೆ ‘ಹೀರೋ’ ರೀತಿ ತೋರಿಸಿರುವ ದೃಶ್ಯಗಳು ಸಹ ಟ್ರೈಲರ್​​ನಲ್ಲಿವೆ. ಆದರೆ ಈಗ ನ್ಯಾಯಾಲಯ ಅನುಮತಿ ನೀಡಿರುವ ಕಾರಣ ಡಾಕ್ಯು ಸರಣಿ ಜೀ5 ನಲ್ಲಿ ಶೀಘ್ರವೇ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link