ಮಧ್ಯಪ್ರಾಚ್ಯ ಯುದ್ಧಕ್ಕೆ ಗಡಗಡ ನಡುಗಿದ ಪಾಕಿಸ್ತಾನದ ಷೇರುಪೇಟೆ; ಒಂದೇ ದಿನ 15,000 ಅಂಕಗಳು ಪತನ; ಶೇ. 9ರಷ್ಟು ಸಂಪತ್ತು ನಷ್ಟ – Kannada News | Middle east crisis effect, Pakistan stock market down by 9pc in a single session
ಇಸ್ಲಾಮಾಬಾದ್, ಮಾರ್ಚ್ 2: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವು ಜಾಗತಿಕವಾಗಿ ಎಲ್ಲಾ ಷೇರು ಮಾರುಕಟ್ಟೆಗಳನ್ನು ಅಲುಗಾಡಿಸುತ್ತಿದೆ. ಭಾರತದ ಸೆನ್ಸೆಕ್ಸ್, ನಿಫ್ಟಿ ಸೂಚ್ಯಂಕಗಳು ತತ್ತರಿಸಿವೆ. ಶೇ. 1-2ರಷ್ಟು ಕುಸಿತ ಕಂಡಿವೆ. ಆದರೆ, ಪಾಕಿಸ್ತಾನದ ಷೇರು ಮಾರುಕಟ್ಟೆ (Pakistan Stock Market) ಅತಿ ಹೆಚ್ಚು ಕರಡಿ ಕುಣಿತ ಕಂಡಿದೆ. ಇಂದು ಸೋಮವಾರದ ವಹಿವಾಟಿನಲ್ಲಿ ಪಾಕಿಸ್ತಾನ ಷೇರು ವಿನಿಮಯ ಕೇಂದ್ರದ ಕೆಎಸ್ಇ-100 ಇಂಡೆಕ್ಸ್ (KSE-100 index) ಶೇ. 9ರಷ್ಟು ಕುಸಿತ ಕಂಡಿದೆ., ಕೆಎಸ್ಇ-30 ಇಂಡೆಕ್ಸ್ ಕೂಡ ಕೆಳಗಿನ ಸರ್ಕ್ಯುಟ್ ಮಿತಿ ಮುಟ್ಟಿದೆ. ಪಾಕಿಸ್ತಾನದ…