ಎಲ್ಲಿಗೆ ಬಂತು ಮೈಸೂರು ಕಿದ್ವಾಯಿ ಪೆರಿಫೆರಲ್ ಕ್ಯಾನ್ಸರ್ ಸೆಂಟರ್ ಕಾಮಗಾರಿ? ಉದ್ಘಾಟನೆ ಯಾವಾಗ? – Kannada News | Mysuru Kidwai Peripheral Cancer Center Nears Completion by Year End
ಕಿದ್ವಾಯಿ ಪೆರಿಫೆರಲ್ ಕ್ಯಾನ್ಸರ್ ಸೆಂಟರ್ ಕಟ್ಟಡ ಮೈಸೂರು, ಮಾರ್ಚ್ 02: ಇದುವರೆಗೆ ಚಿಕಿತ್ಸೆಗಾಗಿ ಬೆಂಗಳೂರಿಗೆ ತೆರಳಬೇಕಾಗಿದ್ದ ಮೈಸೂರು ಭಾಗದ ರೋಗಿಗಳಿಗೆ ಶೀಘ್ರವೇ ದೂರ ಪ್ರಯಾಣದ ತಲೆಬಿಸಿ ತಪ್ಪಲಿದ್ದು, ಬಹುಕಾಲದಿಂದ ನಿರೀಕ್ಷೆಯಲ್ಲಿದ್ದ ಕಿದ್ವಾಯಿ ಪೆರಿಫೆರಲ್ ಕ್ಯಾನ್ಸರ್ ಸೆಂಟರ್ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಈ ವರ್ಷದ ಅಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಮೊದಲ ಹಂತದಲ್ಲಿ ರೇಡಿಯೇಷನ್ ಆಂಕಾಲಜಿ, ಮೆಡಿಕಲ್ ಆಂಕಾಲಜಿ ಮತ್ತು ಸರ್ಜಿಕಲ್ ಆಂಕಾಲಜಿ ವಿಭಾಗಗಳು ಪ್ರಾರಂಭವಾಗಲಿದ್ದು, ಮುಂದಿನ ದಿನಗಳಲ್ಲಿ ಸೇವೆಯ ವಿಸ್ತರಣೆ ನಡೆಯಲಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್…