All posts by nagaraj11081993

ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ವಿಜಯ್​ ದಿಟ್ಟ ಮಾತುಗಳು! – Kannada News | CM Vijay Sworn In: TVK Chief Takes Oath as 24th Chief Minister of Tamil Nadu

ಚೆನ್ನೈ, ಮೇ 10: ತಮಿಳುನಾಡು ರಾಜಕೀಯದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ದಶಕಗಳ ಕಾಲ ಆಳಿದ್ದ ದ್ರಾವಿಡ ಪಕ್ಷಗಳ ಭದ್ರಕೋಟೆಯನ್ನು ಭೇದಿಸಿದ ಟಿವಿಕೆ (TVK) ಮುಖ್ಯಸ್ಥ ದಳಪತಿ ವಿಜಯ್ ಇಂದು ತಮಿಳುನಾಡಿನ 24ನೇ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ್ದಾರೆ. ನೆಹರು ಕ್ರೀಡಾಂಗಣದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಪ್ರತಿಜ್ಞಾವಿಧಿ ಬೋಧಿಸಿದ್ದಾರೆ.

ಪ್ರಮಾಣವಚನಕ್ಕೂ ಮುನ್ನ ಭಾಷಣ ಮಾಡಿದ ವಿಜಯ್, ಇಂದು ನಾನು ಇಲ್ಲಿ ನಿಂತಿರುವುದು ಒಬ್ಬ ನಟನಾಗಿ ಅಲ್ಲ, ನಿಮ್ಮ ಮನೆಯ ಮಗನಾಗಿ. ಈ ಮಣ್ಣಿನ ಜನರ ಆಶೀರ್ವಾದದಿಂದ ನಾನು ಇಂದು ಈ ಜವಾಬ್ದಾರಿಯನ್ನು ಹೊರುತ್ತಿದ್ದೇನೆ. ನಮ್ಮ ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಇದು ಕೇವಲ ಒಂದು ಬದಲಾವಣೆಯಲ್ಲ, ಇದು ಹೊಸ ಪರ್ವದ ಆರಂಭ. ಭ್ರಷ್ಟಾಚಾರ ಮುಕ್ತ ಮತ್ತು ಪಾರದರ್ಶಕ ಆಡಳಿತ ನೀಡುವುದು ನನ್ನ ಮೊದಲ ಗುರಿ. ಜನಸಾಮಾನ್ಯರ ಒಂದು ರೂಪಾಯಿ ಕೂಡ ವ್ಯರ್ಥವಾಗದಂತೆ ನಾನು ನೋಡಿಕೊಳ್ಳುತ್ತೇನೆ. ತಮಿಳುನಾಡಿನ ಪ್ರತಿಯೊಬ್ಬ ನಾಗರಿಕನಿಗೂ ಸಾಮಾಜಿಕ ನ್ಯಾಯ ಸಿಗುವಂತೆ ಮಾಡುವುದೇ ನನ್ನ ಈ ಪಯಣದ ಉದ್ದೇಶ. ನಿಮ್ಮ ಪ್ರೀತಿ ಮತ್ತು ಬೆಂಬಲ ಹೀಗೆಯೇ ಇರಲಿ. ವಾಳಗ ತಮಿಳಗಂ (ತಮಿಳುನಾಡು ಬಾಳಲಿ)! ಎಂದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

Source link

Video: ತಮಿಳುನಾಡಿನ ನೂತನ ಮುಖ್ಯಮಂತ್ರಿಯಾದ ವಿಜಯ್​​ಗೆ ಶುಭ ಕೋರಿದ ಪ್ರಧಾನಿ ಮೋದಿ – Kannada News | Prime Minister Modi Congratulates C. Joseph Vijay on Becoming Tamil Nadu Chief Minister

ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಸಿ. ಜೋಸೆಫ್ ವಿಜಯ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಜಯ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಪ್ರಧಾನಿಯವರು ತಮ್ಮ ಎಕ್ಸ್ ಖಾತೆಯಲ್ಲಿ, ವಿಜಯ್ ಅವರ ಮುಂದಿನ ಅಧಿಕಾರವಧಿಗೆ ಶುಭ ಕೋರಿದ್ದಾರೆ. ವಿಜಯ್ ಅವರ ಮುಂದಿನ ಅಧಿಕಾರವಧಿಗೆ ಶುಭ ಕೋರಿರುವ ಮೋದಿ, ಜನರ ಜೀವನವನ್ನು ಸುಧಾರಿಸಲು ಕೇಂದ್ರ ಸರ್ಕಾರವು ತಮಿಳುನಾಡು ಸರ್ಕಾರದ ಜೊತೆಗೂಡಿ ಕೆಲಸ ಮಾಡುವುದನ್ನು ಮುಂದುವರಿಸಲಿದೆ ಎಂದು ತಿಳಿಸಿದ್ದಾರೆ. ತಮಿಳುನಾಡಿನ ಸಮಗ್ರ ಅಭಿವೃದ್ಧಿಗಾಗಿ ಒಟ್ಟಾಗಿ ಶ್ರಮಿಸುವ ಸಂಕಲ್ಪವನ್ನು ಅವರು ಒತ್ತಿ ಹೇಳಿದ್ದಾರೆ.

ಚುನಾವಣಾ ಫಲಿತಾಂಶಗಳು ಪ್ರಕಟವಾದಾಗಲೂ ಪ್ರಧಾನಿ ನರೇಂದ್ರ ಮೋದಿ ಅವರು ಟಿವಿಕೆ ಪಕ್ಷವು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದಕ್ಕೆ ಅಭಿನಂದನೆ ಸಲ್ಲಿಸಿದ್ದರು. ಇದೀಗ ಸಿ. ಜೋಸೆಫ್ ವಿಜಯ್ ಅವರು ಅಧಿಕಾರದ ಚುಕ್ಕಾಣಿ ಹಿಡಿದು ಮುಖ್ಯಮಂತ್ರಿ ಗದ್ದುಗೆ ಏರಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಶುಭಾಶಯ ಕೋರಿದ್ದಾರೆ.

ಇದನ್ನೂ ಓದಿ: ವಿಜಯ್ ಪ್ರಮಾಣವಚನ: ನಗುನಗುತ್ತಾ ಆಗಮಿಸಿದ ನಟಿ ತ್ರಿಶಾ ವಿಡಿಯೋ ವೈರಲ್

ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ: 

Source link

ಸಿ.ವಿ. ಶಿವಶಂಕರ್ ಕಲಾ ಪ್ರತಿಷ್ಠಾನದಿಂದ ಎರಡು ವಿಶೇಷ ಪ್ರಶಸ್ತಿ ಪ್ರದಾನ – Kannada News | CV Shivashankar Kala Prathishtana special award to Kaviraj and Sandeep Sunkad

‘ಸಿ.ವಿ. ಶಿವಶಂಕರ್ (CV Shivashankar) ಕಲಾ ಪ್ರತಿಷ್ಠಾನ’ದ ವತಿಯಿಂದ ಇತ್ತೀಚೆಗೆ ಎರಡು ವಿಶೇಷ ಪ್ರಶಸ್ತಿಗಳನ್ನು ಪ್ರದಾನಿಸಲಾಯಿತು. ಕವಿರಾಜ್ (Kaviraj) ಅವರಿಗೆ ‘ಭರವಸೆಯ ಬರಹಗಾರ’ ಪ್ರಶಸ್ತಿ ಮತ್ತು ಸಂದೀಪ್ ಸುಂಕದ್ ಅವರಿಗೆ ‘ನಿಷ್ಣಾತ ನಿರ್ದೇಶಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಡಾ. ಜಯಮಾಲಾ, ಹಿರಿಯ ನಟಿ ಡಾ. ಗಿರಿಜಾ ಲೋಕೇಶ್, ಹಿರಿಯ ರಾಜಕಾರಣಿ ಹಾಗೂ ಚಿತ್ರರಂಗದ ಕಾರ್ಯಕರ್ತ ಡಾ. ಮದನ್ ಪಟೇಲ್ ಮತ್ತು ಸದಾಶಿವ ಶೆಣೈ ಉಪಸ್ಥಿತರಿದ್ದರು.

ಈ ವೇಳೆ ನಿರ್ದೇಶಕ ವೆಂಕಟ್ ಭಾರದ್ವಾಜ್ ಅವರು ಮಾಡಿದರು. ಸಿ.ವಿ. ಶಿವಶಂಕರ್ ಕಲಾ ಪ್ರತಿಷ್ಠಾನದ ಉದ್ದೇಶ ಮತ್ತು ಧ್ಯೇಯವನ್ನು ಅವರು ವಿವರಿಸಿದರು. ತಮ್ಮ ಜೀವನಕಾಲದಲ್ಲಿ ಸಿ.ವಿ. ಶಿವಶಂಕರ್ ಅವರು ಹೊಸ ಪ್ರತಿಭೆಗಳಿಗೆ ಸದಾ ಪ್ರೋತ್ಸಾಹ ನೀಡುತ್ತಿದ್ದರು ಮತ್ತು ಕನ್ನಡ ಚಿತ್ರರಂಗಕ್ಕೆ ಅನೇಕ ಕಲಾವಿದರನ್ನು ಪರಿಚಯಿಸಿದ್ದರು ಎಂದು ಅವರು ತಿಳಿಸಿದರು. ಕನ್ನಡ ಭಾಷೆ ಮತ್ತು ಕನ್ನಡ ಚಿತ್ರರಂಗದ ಅಭಿವೃದ್ಧಿಯೇ ಶಿವಶಂಕರ್ ಅವರ ಜೀವನದ ಪ್ರಮುಖ ಧ್ಯೇಯವಾಗಿತ್ತು ಎಂದು ಹೇಳಿದರು.

ಸಿ.ವಿ. ಶಿವಶಂಕರ್ ಅವರ ಜೀವನ ಹಾಗೂ ಸಾಧನೆಗಳನ್ನು ಒಳಗೊಂಡ ಅಭಿಮಾನಿ ಪುಸ್ತಕವನ್ನು ಡಾ. ಜಯಮಾಲಾ ಮತ್ತು ವೇದಿಕೆಯಲ್ಲಿದ್ದ ಗಣ್ಯರು ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಪುಸ್ತಕದ ಲೇಖಕರಾದ ದಿವಂಗತ ಜಿ.ಜಿ. ನಾಗರಾಜ್ ಅವರ ಪತ್ನಿ ಕೃಷ್ಣವೇಣಿ ನಾಗರಾಜ್ ಹಾಗೂ ಪುಸ್ತಕದ ವಿನ್ಯಾಸಕರಾದ ಈಶ್ವರ್ ಬಡಿಗೇರ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಸದಾಶಿವ ಶೆಣೈ ಅವರು ಸಿ. ವಿ. ಶಿವಶಂಕರ್ ಅವರ ಜೀವನ ಹೋರಾಟವನ್ನು ಸ್ಮರಿಸಿದರು. ವಿಶೇಷವಾಗಿ ಕನ್ನಡ ಕುವರ ಚಿತ್ರದ ಕುರಿತು ಪ್ರಸ್ತಾಪಿಸಿ, ಆ ಚಿತ್ರವನ್ನು ಬಿಡುಗಡೆ ಮಾಡಲು ಶಿವಶಂಕರ್ ಅವರು 30 ವರ್ಷಗಳ ಕಾಲ ಹೋರಾಟ ನಡೆಸಿದರೂ ಅದು ಇನ್ನೂ ಬಿಡುಗಡೆಯಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಹಿರಿಯ ನಿರ್ದೇಶಕರ ಬಿಡುಗಡೆ ಆಗದ ಚಿತ್ರಗಳಿಗೆ ಅವಕಾಶ ಕಲ್ಪಿಸಬೇಕೆಂದು ಅವರು ಡಾ. ಜಯಮಾಲಾ ಅವರಿಗೆ ಮನವಿ ಮಾಡಿದರು.

ಇದನ್ನೂ ಓದಿ: ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಸಿ.ವಿ. ಶಿವಶಂಕರ್​ ಹೃದಯಾಘಾತದಿಂದ ನಿಧನ

ಜಯಮಾಲಾ ಅವರು ಮಾತನಾಡಿ, ಸಿ.ವಿ. ಶಿವಶಂಕರ್ ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು. ರಸ್ತೆ ನಾಮಕರಣದ ವಿಷಯವಾಗಿ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಭರವಸೆ ನೀಡಿದರು. ಜೊತೆಗೆ ಹಿರಿಯ ನಿರ್ದೇಶಕರ ಹಳೆಯ ಸಿನಿಮಾಗಳನ್ನು ಡಿಜಿಟೈಸ್ ಮಾಡಿ ಸಂರಕ್ಷಿಸುವ ಅಗತ್ಯತೆಯ ಕುರಿತು ಮಾತನಾಡಿ, ಕನ್ನಡ ಚಿತ್ರರಂಗದ ಇತಿಹಾಸ ಉಳಿಸಬೇಕಾದ ಮಹತ್ವವನ್ನು ಒತ್ತಿಹೇಳಿದರು.

ಗಿರಿಜಾ ಲೋಕೇಶ್ ಅವರು ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡು, 12ನೇ ವಯಸ್ಸಿನಲ್ಲಿ ಸಿ.ವಿ. ಶಿವಶಂಕರ್ ಅವರ ಬಳಿ ನೃತ್ಯ ಕಲಿತ ದಿನಗಳನ್ನು ಸ್ಮರಿಸಿದರು. ಅವರ ಪ್ರಾಮಾಣಿಕತೆ, ಸಮಯಪಾಲನೆ ಹಾಗೂ ಸರಳತೆಯನ್ನು ಕೊಂಡಾಡಿದರು. ಮದನ್ ಪಟೇಲ್ ಅವರು ಸಿ.ವಿ. ಶಿವಶಂಕರ್ ಅವರ ಹೆಸರಿನಲ್ಲಿ ರಸ್ತೆ ನಾಮಕರಣ ಮಾಡುವ ಪ್ರಸ್ತಾವನೆ ಕಳೆದ ಎರಡು ವರ್ಷಗಳಿಂದ ಬಾಕಿಯಿದ್ದು, ಅದನ್ನು ಶೀಘ್ರ ಜಾರಿಗೆ ತರಲು ಸರ್ಕಾರಕ್ಕೆ ಪತ್ರ ಬರೆಯುವಂತೆ ಡಾ. ಜಯಮಾಲಾ ಅವರಿಗೆ ಮನವಿ ಮಾಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಭಾರತವನ್ನು ಜಗತ್ತಿನ 3ನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಮಾಡಿದ ಮೋದಿ ಒಬ್ಬ ‘ನೈಜ ಯೋಗಿ’: ಶ್ರೀ ಶ್ರೀ ರವಿಶಂಕರ್ ಗುರೂಜಿ – Kannada News | Sri Sri Ravi Shankar Guruji’s 70th Birthday: Guruji Shares Message of Peace and Service in Presence of PM Modi

ಶ್ರೀ ಶ್ರೀ ರವಿಶಂಕರ್ ಗುರೂಜಿ ಭಾಷಣ

ಬೆಂಗಳೂರು, ಮೇ 10: ಬೆಂಗಳೂರಿನಲ್ಲಿ ನಡೆದ ಆರ್ಟ್ ಆಫ್ ಲಿವಿಂಗ್‌ನ 45ನೇ ವರ್ಷದ ಸಂಭ್ರಮಾಚರಣೆ ಹಾಗೂ ಹೊಸ ಧ್ಯಾನ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸ್ವತಃ ಪ್ರಧಾನಿಗಳೇ ಒಬ್ಬ ಯೋಗಿಯಾಗಿದ್ದು, ಅವರ 10 ವರ್ಷಗಳ ಆಡಳಿತದಲ್ಲಿ ಭಾರತವು ವಿಶ್ವಮಟ್ಟದಲ್ಲಿ ಹೊಸ ಎತ್ತರಕ್ಕೆ ಏರಿದೆ ಎಂದು ಅವರು ಬಣ್ಣಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿಶ್ವದ ನಾನಾ ಭಾಗಗಳಿಂದ ಭಕ್ತರು ಭಾಗಿಯಾಗಿದ್ದರು.

ಮುಖ್ಯಾಂಶಗಳು

  • ಭಾರತವನ್ನು ಆರ್ಥಿಕವಾಗಿ 3ನೇ ಸ್ಥಾನಕ್ಕೆ ತಂದ ಮೋದಿ ಒಬ್ಬ ನೈಜ ಯೋಗಿ ಎಂದ ಗುರೂಜಿ
  • ರಾಮಮಂದಿರ ನಿರ್ಮಾಣಕ್ಕೆ ಕರ್ನಾಟಕದ ಶಿಲೆ ಮತ್ತು ಶಿಲ್ಪಿಯ ಕೊಡುಗೆಯ ಬಗ್ಗೆ ಗುರೂಜಿ ಮಾತು
  • ಸ್ವಚ್ಛ ಭಾರತ ಮತ್ತು ಸುರಕ್ಷಿತ ದೇಶ ನಿರ್ಮಿಸಿದ ಪ್ರಧಾನಿ ಕಾರ್ಯವೈಖರಿಗೆ ಶ್ಲಾಘನೆ

ಸೇವಾ ಕಾರ್ಯಗಳಿಗೆ ಚಾಲನೆ

ತಮ್ಮ 70ನೇ ಜನ್ಮೋತ್ಸವದ ನಿಮಿತ್ತ ಆಶ್ರಮವು ಹಮ್ಮಿಕೊಂಡಿರುವ ನದಿ ಪುನಶ್ಚೇತನ, ನೈಸರ್ಗಿಕ ಕೃಷಿ ಮತ್ತು ಗ್ರಾಮೀಣ ಶಿಕ್ಷಣ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ನಮ್ಮ ಸಂಭ್ರಮವು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿದಾಗ ಮಾತ್ರ ಅದು ಸಾರ್ಥಕವಾಗುತ್ತದೆ. ಭಾರತದ ಹಳ್ಳಿಗಳು ಸಮೃದ್ಧವಾದರೆ ಇಡೀ ದೇಶ ಸುಭಿಕ್ಷವಾಗುತ್ತದೆ ಎಂದು ಅವರು ಹೇಳಿದರು.

ಮೋದಿಯವರ ಕಾರ್ಯವೈಖರಿಗೆ ಪ್ರಶಂಸೆ

ವೇದಿಕೆಯಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ಮಾತನಾಡಿದ ಗುರೂಜಿಯವರು, ಗಲೀಜು, ಬಡತನ ಮತ್ತು ಅವ್ಯವಸ್ಥೆಯಿಂದ ಕೂಡಿದ್ದ ದೇಶಕ್ಕೆ ಮೋದಿ ಅವರು ‘ಸ್ವಚ್ಛ ಭಾರತ’ ಅಭಿಯಾನದ ಮೂಲಕ ಹೊಸ ರೂಪ ನೀಡಿದ್ದಾರೆ. ಈ ಹಿಂದೆ ದೇಶದಲ್ಲಿದ್ದ ಭಯೋತ್ಪಾದನೆಯ ಆತಂಕ ದೂರವಾಗಿ, ದೇಶ ಸುರಕ್ಷಿತವಾಗಿದೆ ಎಂದು ಗುರೂಜಿ ಹೇಳಿದರು.

ಅಯೋಧ್ಯೆಯ ಭವ್ಯ ರಾಮ ಮಂದಿರದ ನಿರ್ಮಾಣವನ್ನು ಶ್ಲಾಘಿಸಿದ ಅವರು, ರಾಮಲಲ್ಲಾನ ಮೂರ್ತಿಯ ಕೆತ್ತನೆಗೆ ಬಳಸಿದ ಶಿಲೆ ಹಾಗೂ ಅದನ್ನು ಕೆತ್ತಿದ ಶಿಲ್ಪಿ (ಅರುಣ್ ಯೋಗಿರಾಜ್) ಇಬ್ಬರೂ ಕರ್ನಾಟಕದವರು ಎಂಬುದು ಹೆಮ್ಮೆಯ ವಿಷಯ ಎಂದರು. ಭಾರತವು ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದು, ಈ ಹಿಂದೆ 14ನೇ ಸ್ಥಾನದಲ್ಲಿದ್ದ ದೇಶ ಇಂದು 3ನೇ ಸ್ಥಾನಕ್ಕೆ ಏರಿದೆ ಎಂದು ಅವರು ಮೆಚ್ಚುಗೆ ಸೂಚಿಸಿದರು.

ಇದನ್ನೂ ಓದಿ PM Modi at Art of Living Live: ಆರ್ಟ್ ಆಫ್ ಲಿವಿಂಗ್​ನಲ್ಲಿ ಪ್ರಧಾನಿ ಮೋದಿ ಭಾಷಣ, ನೇರ ಪ್ರಸಾರ

ಯೋಗ ಮತ್ತು ಆಯುರ್ವೇದಕ್ಕೆ ಜಾಗತಿಕ ಮನ್ನಣೆ ದೊರಕಿಸಿಕೊಟ್ಟ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ. ಆಯುಷ್ ಸಚಿವಾಲಯದ ಸ್ಥಾಪನೆಯು ಆಯುರ್ವೇದದ ಪುನರುತ್ಥಾನಕ್ಕೆ ಕಾರಣವಾಗಿದೆ. ಈ ಹಿಂದೆ ದೇಶವನ್ನು ಕಾಡುತ್ತಿದ್ದ ಭಯೋತ್ಪಾದನೆಯ ಕರಿನೆರಳು ದೂರವಾಗಿದ್ದು, ಇಂದು ಜನತೆ ಸುರಕ್ಷಿತ ಭಾವನೆಯಲ್ಲಿದ್ದಾರೆ. ಕಾಶಿಯ ಅಭಿವೃದ್ಧಿಯು ಅದ್ಭುತವಾಗಿದ್ದು, ಕರ್ನಾಟಕದ ದಂಪತಿಗಳು ತಮ್ಮ ಕುಟುಂಬದೊಂದಿಗೆ ಅಲ್ಲಿಗೆ ಭೇಟಿ ನೀಡಬೇಕು ಎಂದು ಕರೆ ನೀಡಿದರು. ಕೊನೆಯಲ್ಲಿ, ನಮ್ಮವರಿಗೆ ನಾವು ಧನ್ಯವಾದಗಳನ್ನು ಹೇಳುವುದಿಲ್ಲ, ಏಕೆಂದರೆ ಧನ್ಯವಾದ ಹೇಳಿದರೆ ಅವರು ಪರಕೀಯರಾಗುತ್ತಾರೆ; ಮೋದಿ ಅವರು ನಮ್ಮವರು ಎಂದು ಭಾವುಕರಾಗಿ ನುಡಿದರು.

ಆಧ್ಯಾತ್ಮಿಕತೆಯೇ ಬದುಕಿನ ದಾರಿ

ತಮ್ಮ ಆಶೀರ್ವಚನದಲ್ಲಿ ಗುರೂಜಿಯವರು, ಮನುಷ್ಯನು ಬಾಹ್ಯ ಸುಖಗಳಿಗಿಂತ ಒಳಗಿನ ಶಾಂತಿಯನ್ನು ಕಂಡುಕೊಳ್ಳಬೇಕು ಎಂದು ತಿಳಿಸಿದರು. ಧ್ಯಾನ ಎಂಬುದು ಕೇವಲ ಕಣ್ಣು ಮುಚ್ಚಿ ಕುಳಿತುಕೊಳ್ಳುವುದಲ್ಲ, ಅದು ನಮ್ಮ ಆತ್ಮದೊಂದಿಗೆ ನಾವು ಅನುಸಂಧಾನ ಮಾಡುವ ಪ್ರಕ್ರಿಯೆ. ಜಗತ್ತು ಇಂದು ಯುದ್ಧ ಮತ್ತು ಆತಂಕಗಳ ಸುಳಿಯಲ್ಲಿದೆ, ಇಂತಹ ಸಮಯದಲ್ಲಿ ಪ್ರೀತಿ ಮತ್ತು ಕರುಣೆ ಮಾತ್ರ ನಮ್ಮನ್ನು ರಕ್ಷಿಸಬಲ್ಲವು ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧವೇ ತಿರುಗಿ ನಿಂತ ಆಸೀಸ್ ಆಟಗಾರರು! – Kannada News | Australia Cricket Turmoil: Stars Unhappy with New Contracts

ವಿಶ್ವ ಕ್ರಿಕೆಟ್‌ನ ಬಲಿಷ್ಠ ತಂಡಗಳಲ್ಲಿ ಒಂದಾದ ಆಸ್ಟ್ರೇಲಿಯಾ ತಂಡದಲ್ಲಿ ಈಗ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಮೈದಾನದಲ್ಲಿ ಎದುರಾಳಿಗಳನ್ನು ಮಣಿಸುವಲ್ಲಿ ಸಿದ್ಧಹಸ್ತರಿರುವ ಆಸೀಸ್ ತಾರೆಗಳು, ಇದೀಗ ತಮ್ಮದೇ ಕ್ರಿಕೆಟ್ ಮಂಡಳಿಯ ವಿರುದ್ಧ ಸಿಡಿದೆದ್ದಿದ್ದಾರೆ. ನಾಯಕ ಪ್ಯಾಟ್ ಕಮಿನ್ಸ್‌ಗೆ ನೀಡಲಾದ ಭಾರಿ ಮೊತ್ತದ ಒಪ್ಪಂದದ ಆಫರ್ ಮತ್ತು ಇತರ ಆಟಗಾರರ ನಡುವಿನ ವೇತನ ತಾರತಮ್ಯವು ಕ್ರಿಕೆಟ್ ಆಸ್ಟ್ರೇಲಿಯಾ (CA) ಮಂಡಳಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಸಂಘರ್ಷಕ್ಕೆ ಮುಖ್ಯ ಕಾರಣಗಳೇನು?

  • ವೇತನ ತಾರತಮ್ಯ: ವರದಿಗಳ ಪ್ರಕಾರ, ನಾಯಕ ಪ್ಯಾಟ್ ಕಮಿನ್ಸ್‌ಗೆ 2029ರವರೆಗೆ ಮೂರು ವರ್ಷಗಳ ಅವಧಿಗೆ ಸುಮಾರು 1.2 ಕೋಟಿ ಡಾಲರ್ (₹100 ಕೋಟಿಗೂ ಹೆಚ್ಚು) ಮೊತ್ತದ ಬೃಹತ್ ಒಪ್ಪಂದವನ್ನು ನೀಡಲಾಗಿದೆ. ಈ ದೊಡ್ಡ ಮೊತ್ತವು ತಂಡದ ಇತರ ಹಿರಿಯ ಆಟಗಾರರಾದ ಟ್ರಾವಿಸ್ ಹೆಡ್, ಜೋಶ್ ಹೇಝಲ್‌ವುಡ್ ಮತ್ತು ಮಿಚೆಲ್ ಸ್ಟಾರ್ಕ್ ಅವರಲ್ಲಿ ಅಸಮಾಧಾನ ಮೂಡಿಸಿದೆ. ಕಮಿನ್ಸ್ ಮತ್ತು ಇತರರ ನಡುವಿನ ಸಂಭಾವನೆಯ ಅಂತರವು ಆಟಗಾರರ ನಡುವೆ ಅಸಮಾಧಾನಕ್ಕೆ ದಾರಿಯಾಗಿದೆ.
  • ಬಿಬಿಎಲ್ (BBL) ಮತ್ತು ವಿದೇಶಿ ಲೀಗ್‌ಗಳ ಪ್ರಭಾವ: ಬಿಗ್ ಬ್ಯಾಷ್ ಲೀಗ್‌ನಲ್ಲಿ ಆಡುವ ವಿದೇಶಿ ಆಟಗಾರರಿಗೆ ನೀಡಲಾಗುವ ಸಂಭಾವನೆಯು ಆಸ್ಟ್ರೇಲಿಯಾದ ಸ್ಟಾರ್ ಆಟಗಾರರಿಗಿಂತ ಅಧಿಕವಾಗಿದೆ ಎನ್ನುವುದು ಆಟಗಾರರ ದೂರು. ಅಲ್ಲದೆ, ವಿದೇಶಿ ಲೀಗ್‌ಗಳಲ್ಲಿ (IPL, SA20, ILT20) ಸಿಗುವ ಭಾರಿ ಮೊತ್ತಕ್ಕೆ ಹೋಲಿಸಿದರೆ ಕ್ರಿಕೆಟ್ ಆಸ್ಟ್ರೇಲಿಯಾದ ಒಪ್ಪಂದವು ಲಾಭದಾಯಕವಾಗಿಲ್ಲ ಎಂದು ಆಟಗಾರರು ಅಸಮಾಧಾನ ಹೊರಹಾಕಿದ್ದಾರೆ.
  • ಖಾಸಗೀಕರಣದ ವೈಫಲ್ಯ: ಬಿಬಿಎಲ್ ಲೀಗ್‌ನಲ್ಲಿ ಖಾಸಗಿ ಹೂಡಿಕೆಯನ್ನು ತರುವ ಯೋಜನೆ ವಿಫಲವಾದದ್ದು ಆಟಗಾರರ ನಿರಾಸೆಗೆ ಕಾರಣವಾಗಿದೆ. ಇದರಿಂದಾಗಿ ಲೀಗ್‌ನ ಒಟ್ಟು ಆದಾಯ ಮತ್ತು ಆಟಗಾರರ ವೇತನ ಹೆಚ್ಚಾಗುವ ನಿರೀಕ್ಷೆ ಹುಸಿಯಾಗಿದೆ.
  • ಎನ್​ಒಸಿ ಪತ್ರ ಸಮಸ್ಯೆ: ಆಟಗಾರರು ವಿಶ್ವದಾದ್ಯಂತ ನಡೆಯುವ ವಿವಿಧ ಟಿ20 ಲೀಗ್‌ಗಳಲ್ಲಿ ಭಾಗವಹಿಸಲು ಹೆಚ್ಚಿನ ಸ್ವಾತಂತ್ರ್ಯ ಮತ್ತು ಸುಲಭವಾಗಿ NOC ಪಡೆಯಲು ಬಯಸುತ್ತಿದ್ದಾರೆ. ಆದರೆ ಕ್ರಿಕೆಟ್ ಮಂಡಳಿಯು ಇದಕ್ಕೆ ಕೆಲವು ನಿರ್ಬಂಧಗಳನ್ನು ವಿಧಿಸುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.

ಈ ಎಲ್ಲಾ ಕಾರಣಗಳಿಂದಾಗಿ ಆಸ್ಟ್ರೇಲಿಯಾ ತಂಡದ ಐವರು ಹಿರಿಯ ಆಟಗಾರರು 2026-27ರ ಕೇಂದ್ರ ಒಪ್ಪಂದಗಳಿಗೆ ಇನ್ನೂ ಸಹಿ ಮಾಡಿಲ್ಲ. ಈ ಹಿಂದೆ ಐಪಿಎಲ್ ಫ್ರಾಂಚೈಸಿಗಳು ಪ್ಯಾಟ್ ಕಮಿನ್ಸ್ ಮತ್ತು ಟ್ರಾವಿಸ್ ಹೆಡ್‌ಗೆ ವರ್ಷಕ್ಕೆ ಭಾರಿ ಮೊತ್ತದ ಆಫರ್ ನೀಡಿದ್ದರೂ ಅವರು ದೇಶಕ್ಕಾಗಿ ಆಡಲು ನಿರ್ಧರಿಸಿದ್ದರು. ಆದರೆ ಈಗಿನ ಆರ್ಥಿಕ ಅಸಮಾನತೆಯು ಆಟಗಾರರನ್ನು ಮರುಚಿಂತನೆ ಮಾಡುವಂತೆ ಮಾಡಿದೆ.

ಇದನ್ನೂ ಓದಿ: RCB ತಂಡಕ್ಕೆ ಸ್ಫೋಟಕ ದಾಂಡಿಗ ರಿಎಂಟ್ರಿ..!

ಒಟ್ಟಾರೆಯಾಗಿ ಹೇಳುವುದಾದರೆ, ಕ್ರಿಕೆಟ್ ಆಸ್ಟ್ರೇಲಿಯಾ ಈಗ ಕಠಿಣ ಹಾದಿಯಲ್ಲಿದೆ. ಫ್ರಾಂಚೈಸಿ ಕ್ರಿಕೆಟ್‌ನ ಆಕರ್ಷಣೆ ಮತ್ತು ಆರ್ಥಿಕ ಭದ್ರತೆಯ ನಡುವೆ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದು ಮಂಡಳಿಗೆ ದೊಡ್ಡ ಸವಾಲಾಗಿದೆ. ನಾಯಕ ಕಮಿನ್ಸ್ ಮತ್ತು ಇತರ ಸ್ಟಾರ್ ಆಟಗಾರರ ಈ ಅಸಮಾಧಾನವನ್ನು ಮಂಡಳಿಯು ಹೇಗೆ ಹಂತಹಂತವಾಗಿ ಬಗೆಹರಿಸಲಿದೆ ಎಂಬುದರ ಮೇಲೆ ಆಸೀಸ್ ಕ್ರಿಕೆಟ್‌ನ ಭವಿಷ್ಯ ನಿಂತಿದೆ ಎನ್ನಬಹುದು.

Source link

‘ರೌಡಿ ಜನಾರ್ದನ’ ವಿಜಯ್ ದೇವರಕೊಂಡ ಎದೆ ಮೇಲೆ ಕಾಲಿಟ್ಟ ನಟಿ ಕೀರ್ತಿ ಸುರೇಶ್ – Kannada News | Vijay Deverakonda Keerthy Suresh starrer Rowdy Janardhana poster goes viral

ಸೌತ್ ಸಿನಿಮಾರಂಗದ ಸ್ಟಾರ್ ನಟ ವಿಜಯ್ ದೇವರಕೊಂಡ (Vijay Deverakonda) ಅವರು ಮೇ 9ರಂದು ಹುಟ್ಟುಹಬ್ಬ ಆಚರಿಸಿಕೊಂಡರು. ಈ ಸಂಭ್ರಮದ ಅಂಗವಾಗಿ ಅವರ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ ‘ರೌಡಿ ಜನಾರ್ದನ’ (Rowdy Janardhana) ಚಿತ್ರತಂಡದಿಂದ ವಿಶೇಷ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ವಿಜಯ್ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದು, ಆ ಪೈಕಿ ‘ರೌಡಿ ಜನಾರ್ದನ’ ಸಿನಿಮಾ ಕೂಡ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಚಿತ್ರದಲ್ಲಿ ಕೀರ್ತಿ ಸುರೇಶ್ (Keerthy Suresh) ನಟಿಸುತ್ತಿದ್ದಾರೆ. ಹೊಸ ಪೋಸ್ಟರ್ ಗಮನ ಸೆಳೆಯುತ್ತಿದೆ.

ರವಿ ಕಿರಣ್ ಕೋಲಾ ನಿರ್ದೇಶನದ ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ಹಿಂದೆಂದೂ ಕಾಣದ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸುರಿಯುವ ಮಳೆಯಲ್ಲಿ ಕೈಯಲ್ಲಿ ಪಿಸ್ತೂಲ್ ಹಿಡಿದು ಕುಳಿತಿರುವ ವಿಜಯ್ ಅವರ ರಗಡ್ ಲುಕ್ ನೋಡಿದರೆ ಇದು ಪಕ್ಕಾ ಆ್ಯಕ್ಷನ್ ಸಿನಿಮಾ ಎಂಬುದನ್ನು ಸಾಬೀತುಪಡಿಸುತ್ತಿದೆ. ಜೊತೆಗೆ ರೊಮ್ಯಾನ್ಸ್ ಕೂಡ ಇರಲಿದೆ.

ಈಗ ಬಿಡುಗಡೆ ಆಗಿರುವ ಪೋಸ್ಟರ್‌ನಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ನಟಿ ಕೀರ್ತಿ ಸುರೇಶ್ ಅವರ ಭಂಗಿ. ವಿಜಯ್ ದೇವರಕೊಂಡ ಎದೆಯ ಮೇಲೆ ಕೀರ್ತಿ ಸುರೇಶ್ ಕಾಲು ಇಟ್ಟಿರುವ ದೃಶ್ಯವು ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ಇವರಿಬ್ಬರ ನಡುವೆ ವಿಭಿನ್ನವಾದ ಪ್ರೇಮಕಥೆ ಅಥವಾ ಭಾವನಾತ್ಮಕ ತಿರುವು ಇರಬಹುದು ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ.

ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಅಡಿಯಲ್ಲಿ ದಿಲ್ ರಾಜು ಮತ್ತು ಶಿರೀಶ್ ಈ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ. ಈ ಮಾಸ್ ಆ್ಯಕ್ಷನ್ ಸಿನಿಮಾ ಇದೇ ವರ್ಷದ ಡಿಸೆಂಬರ್‌ನಲ್ಲಿ ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಲಿದೆ. ವಿಜಯ್ ದೇವರಕೊಂಡ ಅವರ ಸರಣಿ ಸೋಲುಗಳ ನಂತರ ಈ ಸಿನಿಮಾ ಅವರಿಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಡಲಿದೆ ಎಂಬ ಭರವಸೆಯಲ್ಲಿ ಅಭಿಮಾನಿಗಳಿದ್ದಾರೆ.

ಇದನ್ನೂ ಓದಿ: ಮದುವೆ ಬಳಿಕ ‘ರಣಬಾಲಿ’ ಚಿತ್ರೀಕರಣಕ್ಕೆ ಬಂದ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ

ಸದ್ಯ ಬಿಡುಗಡೆಯಾಗಿರುವ ‘ರೌಡಿ ಜನಾರ್ದನ’ ಸಿನಿಮಾದ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಪೋಸ್ಟರ್ ಶೇರ್ ಮಾಡಿಕೊಂಡ ಅಭಿಮಾನಿಗಳು ವಿಜಯ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ. ಇದರಲ್ಲದೇ ‘ರಣಬಾಲಿ’ ಸಿನಿಮಾದ ಕೆಲಸಗಳಲ್ಲೂ ವಿಜಯ್ ದೇವರಕೊಂಡ ಅವರು ಬ್ಯುಸಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಜೋಸೆಫ್ ವಿಜಯ್ ಆಡಳಿತ ಆರಂಭ; ‘ಉಚಿತ ವಿದ್ಯುತ್’ ಯೋಜನೆಗೆ ಸಹಿ ಹಾಕಿದ ನೂತನ ಮುಖ್ಯಮಂತ್ರಿ – Kannada News | Tamil Nadu CM Vijay Major Announcements: Free Electricity, Womens Safety, and Drug Control Measures

ತಮಿಳುನಾಡು, ಮೇ 10: ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಜೋಸೆಫ್ ವಿಜಯ್ ಅವರು ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ ರಾಜ್ಯದ ಜನತೆಗೆ ಭರ್ಜರಿ ಕೊಡುಗೆಯೊಂದನ್ನು ಘೋಷಿಸಿದ್ದಾರೆ. ಗೃಹ ವಿದ್ಯುತ್ ಗ್ರಾಹಕರ ಹಿತದೃಷ್ಟಿಯಿಂದ ಎರಡು ತಿಂಗಳಿಗೆ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವ ಮಹತ್ವದ ಯೋಜನೆಗೆ ಚಾಲನೆ ನೀಡಲಾಗಿದ್ದು, ಸಾರ್ವಜನಿಕರ ಸಮ್ಮುಖದಲ್ಲೇ ಈ ಐತಿಹಾಸಿಕ ಆದೇಶಕ್ಕೆ ವಿಜಯ್ ಮೊದಲ ಸಹಿ ಹಾಕಿದ್ದಾರೆ. ಈ ಮೂಲಕ ತಮ್ಮ ಆಡಳಿತದ ಆರಂಭದಲ್ಲೇ ಜನಪರ ಕಲ್ಯಾಣ ಯೋಜನೆಗಳಿಗೆ ಆದ್ಯತೆ ನೀಡುವ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಇದನ್ನೂ ಓದಿ: ವಿಜಯ್ ಪ್ರಮಾಣವಚನ: ನಗುನಗುತ್ತಾ ಆಗಮಿಸಿದ ನಟಿ ತ್ರಿಶಾ ವಿಡಿಯೋ ವೈರಲ್

Source link

PM Modi at Art of Living Live: ಆರ್ಟ್ ಆಫ್ ಲಿವಿಂಗ್​ನಲ್ಲಿ ಪ್ರಧಾನಿ ಮೋದಿ ಭಾಷಣ, ನೇರ ಪ್ರಸಾರ – Kannada News | PM Modi in Bengaluru Live: Art of Living; Addresses Global Gathering on Sri Sri Ravi Shankar Gurudev’s 70th Birthday

ಬೆಂಗಳೂರು, ಮೇ 10: ಬೆಂಗಳೂರಿನ ಕನಕಪುರ ರಸ್ತೆಯ ಊದಿಪಾಳ್ಯ ಗ್ರಾಮದ ಬಳಿ ಇರುವ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ನಡೆಯುತ್ತಿರುವ ಶ್ರೀ ಶ್ರೀ ರವಿಶಂಕರ್ ಗುರೂಜಿ 70ನೇ ಜನ್ಮೋತ್ಸವ ಹಾಗೂ ಆಶ್ರಮದ 45ನೇ ವರ್ಷದ ಸಂಭ್ರಮಾಚರಣೆಯಲ್ಲಿ ಪ್ರಧಾನಿ ಮೋದಿ ಭಾಗಿಯಾಗಿದ್ದಾರೆ. ಗುರೂಜಿಯವರ ಜನ್ಮದಿನದ ಸವಿನೆನಪಿಗಾಗಿ ನಿರ್ಮಿಸಲಾದ ಭವ್ಯ ಹೊಸ ಧ್ಯಾನ ಮಂದಿರವನ್ನು ಉದ್ಘಾಟಿಸಿ ಪ್ರಧಾನಿ ಮೋದಿ ಮಾತನಾಡುತ್ತಿದ್ದು, ನೇರ ಪ್ರಸಾರ ಇಲ್ಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

PM Modi in Bengaluru: ಪ್ರಧಾನಿ ಮೋದಿಗೆ 13ಕೆಜಿ ತೂಕದ ಬೆಳ್ಳಿ ಪ್ರತಿಮೆ ನೀಡಿ ಸನ್ಮಾನಿಸಿದ ಬಿಜೆಪಿ ನಾಯಕರು – Kannada News | Leaders Honour PM Modi with Traditional Mysuru Gifts and Statue

ಬೆಂಗಳೂರು, ಮೇ 10: ಮೂರು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಜಯಭೇಟಿ ಭಾರಿಸಿದ ಬೆನ್ನಲ್ಲೆ ಪ್ರಧಾನಿ ನರೇಂದ್ರ ಮೋದಿಯವರು ಇಂದು (ಮೇ 10) ಕರ್ನಾಟಕಕ್ಕೆ ನೀಡಿದ್ದಾರೆ. ಬೆಂಗಳೂರಿನ ಎಚ್‌ಎಎಲ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯ ಬಿಜೆಪಿ ನಾಯಕರಿಂದ ಅದ್ಧೂರಿ ಸನ್ಮಾನ ನೆರವೇರಿತು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರಧಾನಿಯವರಿಗೆ 13 ಕೆಜಿ ತೂಕದ ಬೆಳ್ಳಿಯ ಪ್ರತಿಮೆಯನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಶಾಸಕರಾದ ಅಶ್ವತ್ಥ್ ನಾರಾಯಣ್, ಎಸ್.ಆರ್. ವಿಶ್ವನಾಥ್ ಸೇರಿದಂತೆ ಪ್ರಮುಖ ನಾಯಕರು ಉಪಸ್ಥಿತರಿದ್ದು, ಚುನಾವಣಾ ಯಶಸ್ಸನ್ನು ಸಂಭ್ರಮಿಸಿದರು.

ಇದನ್ನೂ ಓದಿ: ಬೆಂಗಳೂರಿನ ಹೆಚ್​ಎಎಲ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ, ನೇರ ಪ್ರಸಾರ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

RCB ತಂಡಕ್ಕೆ ಸ್ಫೋಟಕ ದಾಂಡಿಗ ರಿಎಂಟ್ರಿ..!

Source link