Headlines

nagaraj11081993

ಹುಬ್ಬಳ್ಳಿ: ರೈತರಿಗೆ ಭೂ ಪರಿಹಾರ ನೀಡದ ಹಿನ್ನೆಲೆ ರೈಲ್ವೆ ಇಲಾಖೆ ಕಚೇರಿ ಜಪ್ತಿ – Kannada News | Railway Department’s Deputy Chief Engineer’s Office Seized for Failing to Pay Farmers’ Compensation

ರೈಲ್ವೆ ಇಲಾಖೆ ಕಚೇರಿ ಜಪ್ತಿImage Credit source: Tv9 Kannada ಹುಬ್ಬಳ್ಳಿ, ಫೆಬ್ರವರಿ 23: ರೈತರಿಗೆ ಭೂ ಪರಿಹಾರ ನೀಡದ ಹಿನ್ನೆಲೆ ನ್ಯಾಯಾಲಯದ ಆದೇಶದ ಅನ್ವಯ ಹುಬ್ಬಳ್ಳಿ ನಗರದಲ್ಲಿರುವ ರೈಲ್ವೆ ಇಲಾಖೆಯ ಡೆಪ್ಯೂಟಿ ಚೀಫ್​ ಎಂಜಿನಿಯರ್ ಕಚೇರಿಯಲ್ಲಿನ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ನೈರುತ್ಯ ರೈಲ್ವೆ ವಿಭಾಗಕ್ಕೆ ಸೇರಿದ ಕಚೇರಿಯಲ್ಲಿನ ಟೇಬಲ್, ಕಂಪ್ಯೂಟರ್ ಸೇರಿ ಅನೇಕ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ. 2017ರಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ರೈಲು ನಿಲ್ದಾಣಕ್ಕೆಂದು ಇಲಾಖೆ 16 ರೈತರಿಂದ ‌ 12.5 ಎಕರೆ ಭೂಮಿಯನ್ನು…

Read More

ಕೂಡಲೇ ಇರಾನ್ ಬಿಟ್ಟು ಹೊರಡಿ; ಅಮೆರಿಕದ ದಾಳಿಯ ಭೀತಿಯ ಬೆನ್ನಲ್ಲೇ ಭಾರತೀಯರಿಗೆ ಸರ್ಕಾರದಿಂದ ಹೊಸ ಸಲಹೆ – Kannada News | Leave Iran by all available means India issues fresh advisory for indian Citizens amid US strike fears

ನವದೆಹಲಿ, ಫೆಬ್ರವರಿ 23: ಭಾರತ ಸರ್ಕಾರ ಮತ್ತೊಮ್ಮೆ ಇರಾನ್‌ನಲ್ಲಿರುವ ತನ್ನ ನಾಗರಿಕರಿಗೆ ಸಾಧ್ಯವಾದಷ್ಟು ಬೇಗ ದೇಶ ಬಿಟ್ಟು ಹೊರಡಿ ಎಂದು ಸಲಹೆ ನೀಡಿದೆ. ಫೆಬ್ರವರಿ 23ರಂದು ಬಿಡುಗಡೆ ಮಾಡಿದ ಹೊಸ ಸಲಹೆಯಲ್ಲಿ ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾರತೀಯರು ಮನೆಗೆ ಮರಳಲು ವಾಣಿಜ್ಯ ವಿಮಾನಗಳು ಸೇರಿದಂತೆ ಲಭ್ಯವಿರುವ ಯಾವ ಸಾರಿಗೆಯನ್ನು ಬೇಕಾದರೂ ಬಳಸುವಂತೆ ಮನವಿ ಮಾಡಿದೆ. ಇರಾನ್​​ನಲ್ಲಿ (Iran) ಉದ್ವಿಗ್ನತೆ ಹೆಚ್ಚುತ್ತಿರುವುದರಿಂದ ಸಂಘರ್ಷದ ಭಯ ಹೆಚ್ಚುತ್ತಿರುವ ಕಾರಣದಿಂದ ಅಮೆರಿಕದ ಈ ಎಚ್ಚರಿಕೆ ಬಂದಿದೆ. 2026ರ ಜನವರಿ 5ರಂದು…

Read More

ಧುರಂಧರ್ 2 Vs ಟಾಕ್ಸಿಕ್: 10 ಕೋಟಿ ಮಂದಿ ಚಿತ್ರಮಂದಿರಕ್ಕೆ ಬರುವ ನಿರೀಕ್ಷೆ – Kannada News | Toxic and Dhurandhar 2 likely to witness combined total 10 Cr footfalls

20226ರ ಎರಡು ಬಹುನಿರೀಕ್ಷಿತ ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗುತ್ತಿರುವುದರ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ‘ಟಾಕ್ಸಿಕ್’ ಮತ್ತು ‘ಧುರಂಧರ್ 2’ (Dhurandhar 2) ಸಿನಿಮಾಗಳು ಮಾರ್ಚ್ 19ರಂದು ರಿಲೀಸ್ ಆಗಲಿವೆ. ಈ ಸಿನಿಮಾಗಳ ಕ್ಲ್ಯಾಶ್ ಬಗ್ಗೆ ಬಾಕ್ಸ್ ಆಫೀಸ್ ಪಂಡಿತರು ಹಲವು ರೀತಿ ಅಭಿಪ್ರಾಯಗಳನ್ನು ನೀಡುತ್ತಿದ್ದಾರೆ. ಇಂಥ ಕ್ಲ್ಯಾಶ್ ಉತ್ತಮವಲ್ಲ ಎಂದು ಬಹುತೇಕರು ಹೇಳುತ್ತಿದ್ದಾರೆ. ಅಚ್ಚರಿ ಎಂದರೆ, ‘ಧುರಂಧರ್ 2’ ಮತ್ತು ‘ಟಾಕ್ಸಿಕ್’ (Toxic) ಒಟ್ಟು ಸೇರಿ ಬರೋಬ್ಬರಿ 10 ಕೋಟಿ ಪ್ರೇಕ್ಷಕರನ್ನು ಸೆಳೆದುಕೊಳ್ಳಲಿವೆ ಎಂದು…

Read More

Luxury homes: ಐಷಾರಾಮಿ ಮನೆಗಳಲ್ಲಿ ಬೆಂಗಳೂರು, ಮುಂಬೈ ಅನ್ನು ಹಿಂದಿಕ್ಕಿದೆ ಗುರುಗ್ರಾಮ – Kannada News | Ultra Luxury homes, Gurugram pips Mumbai to become India’s largest market

ನವದೆಹಲಿ, ಫೆಬ್ರುವರಿ 23: ಹತ್ತು ಕೋಟಿ ರೂಗೂ ಅಧಿಕ ಮೌಲ್ಯದ ಅತಿ ಐಷಾರಾಮಿ ಮನೆಗಳಿಗೆ (Ultra-luxury homes) ದೇಶದಲ್ಲೇ ಅತಿದೊಡ್ಡ ಮಾರುಕಟ್ಟೆ ಎಂದರೆ ಬೆಂಗಳೂರು, ಮುಂಬೈ, ದೆಹಲಿ ಮುಂತಾದ ನಗರಗಳ ಹೆಸರು ಮೊದಲು ಎದುರಾಗುತ್ತದೆ. ಆದರೆ, 2025ರಲ್ಲಿ ಅಲ್ಟ್ರಾ ಲಕ್ಷುರಿ ಮನೆಗಳಿಗೆ ದೇಶದಲ್ಲೇ ಅತಿದೊಡ್ಡ ಮಾರುಕಟ್ಟೆ ಎನಿಸಿದ್ದು ಗುರುಗ್ರಾಮ್ ಅಂತೆ. ಇಂಡಿಯಾ ಸೋತೆಬೈಸ್ ಇಂಟರ್ನ್ಯಾಷನಲ್ ರಿಯಾಲ್ಟಿ ಹಾಗೂ ಸಿಆರ್​ಇ ಮ್ಯಾಟ್ರಿಕ್ಸ್​ನ ಇತ್ತೀಚಿನ ಹೈ ಎಂಡ್ ಲಕ್ಸುರಿ ಹೌಸಿಂಗ್ ರಿಪೋರ್ಟ್ ಪ್ರಕಾರ 10 ಕೋಟಿ ರೂಗೂ ಅಧಿಕ ಮೌಲ್ಯದ…

Read More

ಗೃಹಣಿಯರೇ… ಪಾತ್ರೆ ತೊಳೆಯುವ ಸ್ಪಾಂಜ್‌ಗಳನ್ನು ಎಷ್ಟು ಬಾರಿ ಬದಲಾಯಿಸಬೇಕು ತಿಳ್ಕೊಳ್ಳಿ – Kannada News | What happens if you use dishwashing sponge for a long time?

ಪ್ರತಿಯೊಬ್ಬರೂ ಅಡುಗೆ ಮನೆಯ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಾರೆ. ಪಾತ್ರೆ ತೊಳೆಯುವುದರಿಂದ ಹಿಡಿದು ಗ್ಯಾಸ್‌ ಸ್ಟೌವ್‌ ಕ್ಲೀನ್‌ ಮಾಡುವುದರವರೆಗೆ ಪ್ರತಿಯೊಂದರ ಸ್ವಚ್ಛತೆಯ ಬಗ್ಗೆಯೂ ಕಾಳಜಿ ವಹಿಸುತ್ತಾರೆ. ಆದ್ರೆ ಪಾತ್ರೆ ತೊಳೆಯಲು ಬಳಸುವ ಸ್ಪಾಂಜ್‌ಗಳ (sponges) ಬಗ್ಗೆ ಯಾರೂ ಸಹ ಗಮನಹರಿಸುವುದಿಲ್ಲ. ಒಂದೇ ಸ್ಪಾಂಜ್‌ ಅನ್ನು ತಿಂಗಳಾನುಗಟ್ಟಲೆ ಬಳಸುತ್ತಿರುತ್ತಾರೆ. ಈ ಒಂದು ಸಣ್ಣ ತಪ್ಪು ಸಹ ಕಾಯಿಲೆ ಹರಡಲು ಕಾರಣವಾಗಬಹುದು. ಹಾಗಿದ್ರೆ ಪಾತ್ರೆ ತೊಳೆಯಲು ಹೆಚ್ಚು ಸಮಯ ಒಂದೇ ಸ್ಪಾಂಜ್‌ ಅನ್ನು ಬಳಸುವುದರಿಂದ ಆರೋಗ್ಯದ ಮೇಲೆ ಏನೆಲ್ಲಾ…

Read More

ಬೆಂಗಳೂರಿನಲ್ಲಿ ಮತ್ತೊಂದು ದರೋಡೆ: ಅಧಿಕಾರಿಗಳ ಸೋಗಿನಲ್ಲಿ ಬಂದು ಲಕ್ಷಾಂತರ ರೂ ಹೊತ್ತೊಯ್ದರು – Kannada News | Devanahalli Robbery: 9 Arrested for 24 Lakh Fraud Posing as Fake Anti Corruption Officials

ದೇವನಹಳ್ಳಿ ಪೊಲೀಸ್ ಠಾಣೆImage Credit source: tv9 kannada ದೇವನಹಳ್ಳಿ, ಫೆಬ್ರವರಿ 23: ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಭ್ರಷ್ಟಾಚಾರ ನಿಗ್ರಹ ದಳ‌ ಅಧಿಕಾರಿಗಳ ಸೋಗಿನಲ್ಲಿ ಎಂಟ್ರಿಕೊಟ್ಟು 24 ಲಕ್ಷ ರೂ ಹಣವನ್ನ ದೋಚಿ (Robbery) ಎಸ್ಕೇಪ್ ಆಗಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹೊರವಲಯದ ಪ್ರಸನ್ನಹಳ್ಳಿ ರಸ್ತೆಯಲ್ಲಿ ನಡೆದಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿದಂತೆ 12 ಜನರ ಪೈಕಿ 09 ಆರೋಪಿಗಳನ್ನ ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಕೃಷ್ಣಕುಮಾರ್, ವೇಣುಗೋಪಾಲ್, ಸಂಪಂಗಿ ರಾಮ, ಅಹಮದ್, ನಾರಾಯಣಸ್ವಾಮಿ, ವೆಂಕಟೇಶ,…

Read More

ಮಣ್ಣು ತುಂಬಿದ ಬುಟ್ಟಿ ಹೊತ್ತ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ವಿಡಿಯೋ ನೋಡಿ – Kannada News | Siddaramaiah And DK Shivakumar inaugurates MGNREGA Bachao Sangram at Chikkaballapur

ಚಿಕ್ಕಬಳ್ಳಾಪುರ, (ಫೆಬ್ರವರಿ 23): ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ಅಗಲಗುರ್ಕಿ ಬಳಿ ಕಾಂಗ್ರೆಸ್​​ನ ಮನ್​ರೇಗಾ ಬಚಾವ್​ ಆಂದೋಲನ ಸಮಾವೇಶ ನಡೆಯುತ್ತಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ತಮ್ಮ ತಲೆ ಮೇಲೆ ಮಣ್ಣಿನ ಬುಟ್ಟಿ ಹೊತ್ತು ಸಮಾವೇಶಕ್ಕೆ ಚಾಲನೆ ನೀಡಿದ್ದಾರೆ. ಕಾಂಗ್ರೆಸ್ ನಾಯಕರು ವೇದಿಕೆ ಮೇಲೆನೆ ಮಣ್ಣನ್ನು ತೋಡಿ ಪುಟ್ಟಿಗೆ ಹಾಕಿದ್ದು, ಇದನ್ನು ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ತಲೆಗೆ ಟವೆಲ್ ಸುತ್ತಿಕೊಂಡು ಮಣ್ಣಿನ ಪುಟ್ಟಿ ಹೊತ್ತು ಕೇಂದ್ರ ಸರ್ಕಾರಕ್ಕೆ ಟಾಂಗ್ ಕೊಟ್ಟಿದ್ದಾರೆ. ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್…

Read More

‘ನೀನು ಯಾವ ಕಾರಣಕ್ಕೂ ತಾಯಿ ಆಗಬಾರದು’: ಯುವತಿ ಖಾಸಗಿ ಅಂಗಕ್ಕೆ ಸ್ಯಾನಿಟೈಸರ್ ಸುರಿದು ಬೆಂಕಿ ಹಚ್ಚಿದ ಯುವಕ – Kannada News | Gurugram: Student Brutally Attacked in Live in Relationship; Warning for Urban Couples

ಗುರುಗ್ರಾಮ, ಫೆ.23: ಹೆಣ್ಣು ಮತ್ತು ಗಂಡಿನ ಸಂಬಂಧ ದೈಹಿಕ ಸಂಬಂಧದಲ್ಲಿ ಮುಗಿಯುದಾದರೆ, ಆ ಸಂಬಂಧಗಳಿಗೆ ಬೆಲೆಯೇ ಇರುವುದಿಲ್ಲ. ದೆಹಲಿ, ಬೆಂಗಳೂರುನಂತಹ ಮಹಾನಗರಗಳಲ್ಲಿ ಯುವಕ-ಯುವತಿಯರು ಮನಸ್ಸಿನ ಸಂಬಂಧಕ್ಕಿಂತ ದೈಹಿಕ ಸಂಬಂಧಕ್ಕೆ ಬೆಲೆ ನೀಡುತ್ತಾರೆ ಎಂಬುದನ್ನು ಅನೇಕ ಘಟನೆಗಳು ವಿವರಿಸಿದೆ. ಅದಕ್ಕೆ ಸಾಕ್ಷಿ ಕೂಡ ಇದೆ. ಲಿವ್ ಇನ್ ರಿಲೇಶನ್​ಶಿಪ್​​​ ಮೂಲಕ ಗೆಳತನ ಬೆಳಸಿಕೊಂಡು ದೈಹಿಕ ಸಂಪರ್ಕದ ನಂತರ ಇಬ್ಬರ ನಡುವೆಯೂ ಹೊಂದಾಣಿಕೆಯೇ ಇರುವುದಿಲ್ಲ. ಕೊನೆಗೆ ಒಬ್ಬರ ಮೇಲೆ ಇನ್ನೊಬ್ಬ ದೂರಿಕೊಂಡ ಸಂದೇಹ ಪಡುತ್ತ, ಅಂತಿಮವಾಗಿ ಕೊಲೆಯಲ್ಲಿ ಅಂತ್ಯವಾಗುತ್ತದೆ. ಇದೀಗ…

Read More

ನೀಲಿ ಬಣ್ಣಕ್ಕೆ ತಿರುಗುವ ಈ ಅಣಬೆ ತಿನ್ನುವ ಮುನ್ನ ಜೋಕೆ: ಯಾಮಾರಿದ್ರೆ ಭ್ರಮೆ ಹುಟ್ಟಿಸುತ್ತೆ ಎಚ್ಚರ! – Kannada News | Think Twice Before Eating This Blue Staining Mushroom: It Can Induce Hallucinations

ಬೆಂಗಳೂರು, ಫೆಬ್ರವರಿ 23: ಲ್ಯಾನ್ಮಾವೋ ಏಷ್ಯಾಟಿಕಾ ಎಂಬ ಕುತೂಹಲಕಾರಿ ಅಣಬೆಯು ಚೀನಾದ ಯುನಾನ್ ಪ್ರಾಂತ್ಯದಲ್ಲಿ ಕಂಡುಬರುತ್ತದೆ. ಇದನ್ನು ಸರಿಯಾಗಿ ಬೇಯಿಸದೆ ಸೇವಿಸಿದರೆ ವಿಚಿತ್ರ ಭ್ರಮೆಗಳಿಗೆ ಒಳಗಾಗುವ ಸಾಧ್ಯತೆಯಿದೆ. ಈ ಅಣಬೆಯನ್ನು “ಜಿಯಾನ್ ಶೋ ಕ್ವಿಂಗ್” ಎಂದೂ ಕರೆಯುತ್ತಾರೆ. ಇದರರ್ಥ ಮುಟ್ಟಿದಾಗ ನೀಲಿ ಬಣ್ಣಕ್ಕೆ ತಿರುಗುವುದು. ಆಕ್ಸಿಡೀಕರಣ ಪ್ರಕ್ರಿಯೆಯಿಂದಾಗಿ ಕತ್ತರಿಸಿದಾಗ ಅಥವಾ ಒತ್ತಿದಾಗ ಇದು ಗಾಢ ನೀಲಿ ಬಣ್ಣಕ್ಕೆ ಇದು ತಿರುಗುತ್ತದೆ. ಲ್ಯಾನ್ಮಾವೋ ಏಷ್ಯಾಟಿಕಾ ತಿಂದವರು ತಮ್ಮ ಸುತ್ತಮುತ್ತಲಿನ ಜನರನ್ನು ಪುಟ್ಟ ಪುಟ್ಟದಾಗಿ ಕಾಣುವ “ಲಿಟಲ್ ಪೀಪಲ್ ಹ್ಯಾಲುಸಿನೇಷನ್”…

Read More

ಕೆಂಪುಕೋಟೆಗೆ ಬಂತು ಖಲಿಸ್ತಾನಿ ಉಗ್ರರಿಂದ ಬಾಂಬ್ ಬೆದರಿಕೆ – Kannada News | Security Heightened in Delhi After Threat Call Targets Red Fort, Assembly

ನವದೆಹಲಿ, ಫೆಬ್ರವರಿ 23: ಕೆಂಪುಕೋಟೆ, ದೆಹಲಿ ಸಚಿವಾಲಯ ಹಾಗೂ ದೆಹಲಿ ವಿಧಾನಸಭೆಯಲ್ಲಿ ಬಾಂಬ್(Bomb) ಇಡುವುದಾಗಿ ಖಲಿಸ್ತಾನಿ ಉಗ್ರರು ಬೆದರಿಕೆ ಹಾಕಿದ್ದಾರೆ. ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿದೆ. ದೆಹಲಿ ಪೊಲೀಸರು ಕೂಡಲೇ ಪ್ರತಿಕ್ರಿಯಿಸಿದ್ದು, ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಸಚಿವಾಲಯದಲ್ಲಿ ಸಂಪೂರ್ಣ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಈ ಇಮೇಲ್ ಖಲಿಸ್ತಾನಿ ಗುಂಪಿನ ಹೆಸರಿನಲ್ಲಿ ಬಂದಿದೆ ಎಂದು ವರದಿಯಾಗಿದೆ. ಬೆದರಿಕೆಯ ಮೂಲವನ್ನು ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ. ಕೆಂಪು ಕೋಟೆ ಪ್ರದೇಶದ ಬಳಿ ಭಯೋತ್ಪಾದಕ ಬೆದರಿಕೆ ಇದೆ ಎಂಬ ಗುಪ್ತಚರ ವರದಿಗಳ…

Read More