All posts by nagaraj11081993

ದೇಶವೇ ನಾಚಿಕೆ ಪಡುವಂತಾಗಿದೆ; ಎಐ ಶೃಂಗಸಭೆಯಲ್ಲಿ ಕಾಂಗ್ರೆಸ್ ಪ್ರತಿಭಟನೆಗೆ ವಿರೋಧ ಪಕ್ಷದ ನಾಯಕರ ಟೀಕೆ – Kannada News | No one should demean our country Opposition leaders slam Youth Congress protest at AI Impact Summit

ನವದೆಹಲಿ, ಫೆಬ್ರವರಿ 21: ನವದೆಹಲಿಯಲ್ಲಿ ನಡೆದ ಎಐ ಇಂಪ್ಯಾಕ್ಟ್ ಶೃಂಗಸಭೆ 2026ರ (AI Impact Summit) ಸಂದರ್ಭದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಟಾಪ್‌ಲೆಸ್ ಪ್ರತಿಭಟನೆ ನಡೆಸಿದ ನಂತರ ರಾಜಕೀಯ ವಿವಾದ ಭುಗಿಲೆದ್ದಿದೆ. ಇಡೀ ಜಗತ್ತಿನ ನಾಯಕರು ಆಗಮಿಸಿದ್ದ ಕೃತಕ ಬುದ್ಧಿಮತ್ತೆ (ಎಐ) ಮೇಲೆ ಕೇಂದ್ರೀಕರಿಸಿದ ಅಂತಾರಾಷ್ಟ್ರೀಯ ಸಭೆಯಲ್ಲಿ ಕಾಂಗ್ರೆಸ್​ ನಾಯಕರ ಇಂತಹ ವರ್ತನೆ ಸೂಕ್ತವಲ್ಲ ಎಂದು ಹಲವಾರು ವಿಪಕ್ಷ ನಾಯಕರು ಟೀಕಿಸಿದ್ದಾರೆ.

ಭಾರತ ಮತ್ತು ವಿದೇಶಗಳಿಂದ ಪ್ರಮುಖ ಪ್ರತಿನಿಧಿಗಳು ಭಾಗವಹಿಸಿದ್ದ ಎಐ ಶೃಂಗಸಭೆಯು ಹೊಸ ತಂತ್ರಜ್ಞಾನಗಳಲ್ಲಿ ಭಾರತದ ಬೆಳೆಯುತ್ತಿರುವ ಸ್ಥಾನಮಾನವನ್ನು ಪ್ರದರ್ಶಿಸುವ ಉದ್ದೇಶವನ್ನು ಹೊಂದಿತ್ತು. ಆದರೆ, ಕಾಂಗ್ರೆಸ್ ನಡೆಸಿದ ಪ್ರತಿಭಟನೆಯಿಂದಾಗಿ ದೇಶದ ಇಮೇಜ್ ಹಾಳಾಗಿದೆ. ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಲು ಅದು ಸೂಕ್ತವಾದ ವೇದಿಕೆಯಾಗಿರಲಿಲ್ಲ ಎಂದು ಹಲವು ವಿರೋಧ ಪಕ್ಷದ ನಾಯಕರು ಟೀಕಿಸಿದ್ದಾರೆ.

“ನಿನ್ನೆ ನಡೆದ AI ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್ ನಮ್ಮೆಲ್ಲರನ್ನೂ ತಲೆ ತಗ್ಗುವಂತೆ ಮಾಡಿತು. ನಮ್ಮ ರಾಜಕೀಯ ಎಲ್ಲಿಗೆ ಹೋಗುತ್ತಿದೆ! ಯಾರೂ ನಮ್ಮ ದೇಶವನ್ನು ಎಂದಿಗೂ ಕೀಳಾಗಿ ನೋಡಬಾರದು. ನಮ್ಮ ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ನಾವು ಯಾವಾಗಲೂ ಜಗತ್ತಿಗೆ ಒಗ್ಗಟ್ಟಿನ ಮುಖವನ್ನು ತೋರಿಸಬೇಕು” ಎಂದು ವೈಎಸ್​ಆರ್​ ಕಾಂಗ್ರೆಸ್ ಪಕ್ಷದ ನಾಯಕ ವೈ.ಎಸ್. ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ.

ಇದನ್ನೂ ಓದಿ: ದೇಶವೇ ತಲೆತಗ್ಗಿಸುವ ಕೆಲಸ; ಎಐ ಶೃಂಗಸಭೆಯಲ್ಲಿ ಯೂತ್ ಕಾಂಗ್ರೆಸ್ ಪ್ರತಿಭಟನೆಗೆ ಬಿಜೆಪಿ ಆಕ್ರೋಶ

ಈ ಘಟನೆಯನ್ನು ಅತ್ಯಂತ ಆಕ್ಷೇಪಾರ್ಹ ಎಂದು ಕರೆದ ಬಿಎಸ್​ಪಿ ನಾಯಕಿ ಮಾಯಾವತಿ, “ನವದೆಹಲಿಯಲ್ಲಿ ನಡೆದ AI ಇಂಪ್ಯಾಕ್ಟ್ ಶೃಂಗಸಭೆಗೆ ಭಾರತ ಮತ್ತು ವಿದೇಶಗಳಿಂದ ಅನೇಕ ಪ್ರಮುಖ ವ್ಯಕ್ತಿಗಳನ್ನು ಆಹ್ವಾನಿಸಲಾಗಿತ್ತು. ಇದು ಅಂತಾರಾಷ್ಟ್ರೀಯ ಗಮನ ಸೆಳೆದಿತ್ತು. ಕಾಂಗ್ರೆಸ್ ಯುವ ಕಾರ್ಯಕರ್ತರು ಈ ವೇಳೆ ಶೃಂಗಸಭೆಯ ಆವರಣದೊಳಗೆ ಅರೆನಗ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿರುವುದು ಅತ್ಯಂತ ಅಸಭ್ಯ ಮತ್ತು ಖಂಡನೀಯ. ಈ ಶೃಂಗಸಭೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿಲ್ಲದಿದ್ದರೆ ವಿಷಯ ವಿಭಿನ್ನವಾಗಿರುತ್ತಿತ್ತು. ಆದರೆ, ಅಂತಾರಾಷ್ಟ್ರೀಯ ಶೃಂಗಸಭೆಯ ಸಮಯದಲ್ಲಿ ಇಂತಹ ನಡವಳಿಕೆಯು ಕಳವಳಕಾರಿ ವಿಷಯವಾಗಿದೆ. ಇದು ದೇಶದ ಘನತೆ ಮತ್ತು ಇಮೇಜ್‌ಗೆ ಹಾನಿಯಾಗದಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ” ಎಂದು ಹೇಳಿದ್ದಾರೆ.

“ಯುವ ಕಾಂಗ್ರೆಸ್ ಸದಸ್ಯರು AI ಇಂಪ್ಯಾಕ್ಟ್ ಶೃಂಗಸಭೆಯನ್ನು ರಾಜಕೀಯ ನಾಟಕಗಳಿಗೆ ಬಳಸಿಕೊಳ್ಳುತ್ತಿರುವುದು ಶೋಚನೀಯ. ಪ್ರತಿಭಟನೆಗಳಿಗೆ ಇಂತಹ ಜಾಗತಿಕ ವೇದಿಕೆಯನ್ನು ಬಳಸುವುದರಿಂದ ನಮ್ಮ ಮಹಾನ್ ರಾಷ್ಟ್ರ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟದಾಗಿ ಬಿಂಬಿತವಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಅಭಿಪ್ರಾಯ ವ್ಯತ್ಯಾಸ ಸಹಜವಾದರೂ ಎಲ್ಲಿ ಮತ್ತು ಹೇಗೆ ಪ್ರತಿಭಟಿಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ರಾಜಕೀಯ ಭಿನ್ನಾಭಿಪ್ರಾಯಕ್ಕೆ ಒಂದು ಸಮಯ ಮತ್ತು ಸ್ಥಳ ಎಂಬುದು ಇರುತ್ತದೆ. ಅಂತಾರಾಷ್ಟ್ರೀಯ ಶೃಂಗಸಭೆಯನ್ನು ಇದಕ್ಕಾಗಿ ಬಳಸಿಕೊಳ್ಳುವುದು ಖಂಡಿತವಾಗಿಯೂ ಸರಿಯಲ್ಲ” ಎಂದು ಬಿಆರ್‌ಎಸ್ ಹಿರಿಯ ನಾಯಕ ಕೆ.ಟಿ. ರಾಮರಾವ್ ಹೇಳಿದ್ದಾರೆ.

ಇದನ್ನೂ ಓದಿ: ಎಐ ಶೃಂಗಸಭೆಯಲ್ಲಿ ಕಾಂಗ್ರೆಸ್​​ನಿಂದ ಅರೆಬೆತ್ತಲೆ ಪ್ರತಿಭಟನೆ; ಬಂಧಿತ 4 ಆರೋಪಿಗಳು 5 ದಿನ ಪೊಲೀಸ್ ವಶಕ್ಕೆ

“ನಿನ್ನೆ ನಡೆದ AI ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ನಿಂದ ಉಂಟಾದ ಅಡಚಣೆಯಿಂದ ನಾನು ಆಘಾತಕ್ಕೊಳಗಾಗಿದ್ದೇನೆ ಮತ್ತು ನಿರಾಶೆಗೊಂಡಿದ್ದೇನೆ. ಈ ಜಾಗತಿಕ ವೇದಿಕೆಯು AI ಸೂಪರ್ ಪವರ್ ಆಗಿ ಭಾರತದ ಬೆಳೆಯುತ್ತಿರುವ ನಾಯಕತ್ವವನ್ನು ಪ್ರದರ್ಶಿಸಲು ಉದ್ದೇಶಿಸಲಾಗಿತ್ತು. ಭಾರತವು ಇದಕ್ಕಿಂತ ಉತ್ತಮವಾದುದಕ್ಕೆ ಅರ್ಹವಾಗಿದೆ. ನಾವು ಕ್ಷುಲ್ಲಕ ರಾಜಕೀಯವನ್ನು ಮೀರಿ ನಾವೀನ್ಯತೆ ಮತ್ತು ಶ್ರೇಷ್ಠತೆಯ ಮೂಲಕ ರಾಷ್ಟ್ರ ನಿರ್ಮಾಣದತ್ತ ಗಮನಹರಿಸೋಣ” ಎಂದು ಸಚಿವ ನಾರಾ ಲೋಕೇಶ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಧಾನಿ ಉದ್ಘಾಟಿಸಿದ ಹೆಲಿಕಾಪ್ಟರ್ ಘಟಕಕ್ಕೆ ವಿದ್ಯುತ್ ಕಟ್ ಮಾಡಿ ಎಂದ ಕೊತ್ತೂರು ಶಾಸಕ! – Kannada News | Kolar MLA Rages: Vehmagal Helicopter Unit Inauguration Sparks Local Disregard Controversy

ಕೋಲಾರ, ಫೆಬ್ರವರಿ 21: ಮಂಗಳವಾರ (ಫೆ.17) ಪ್ರಧಾನಿ ನರೇಂದ್ರ ಮೋದಿಯವರಿಂದ ದೇಶದ ಮೊದಲ ಮಿನಿ ಹೆಲಿಕಾಪ್ಟರ್ ಜೋಡಣಾ ಘಟಕ ಉದ್ಘಾಟಿಸಲ್ಪಟ್ಟಿತು. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ನಿವಾಸಿಗಳನ್ನು ನಿರ್ಲಕ್ಷ್ಯ ಮಾಡಿರುವುದಾಗಿ ಜಿಲ್ಲೆಯ ವೇಮಗಲ್ ಪಟ್ಟಣ ಪಂಚಾಯತ್ ಸಭೆಯಲ್ಲಿ ಕೈಗಾರಿಕೆಗಳ ವಿರುದ್ಧ ಶಾಸಕ ಕೊತ್ತೂರು ಮಂಜುನಾಥ್ ಕಿಡಿಕಾರಿದ್ದಾರೆ.  ಅಲ್ಲದೆ  ಘಟಕಕ್ಕೆ ವಿದ್ಯುತ್ ಪೂರೈಕೆ ನಿಲ್ಲಿಸಬೇಕೆಂದು ಹೇಳಿರುವ ಅವರ ಹೇಳಿಕೆಗಳಿಂದ ವಿವಾದಗಳೆದ್ದಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಹೆಲಿಕಾಪ್ಟರ್ ಘಟಕದ ಉದ್ಘಾಟನಾ ಕಾರ್ಯಕ್ರಮಕ್ಕೆ ವೇಮಗಲ್ ಪಟ್ಟಣ ಪಂಚಾಯತ್ ಅಧ್ಯಕ್ಷರನ್ನು ಆಹ್ವಾನಿಸದೇ ಕಡಗಣನೆ ಮಾಡಲಾಗಿದೆ ಎಂದು ದೂರಿದ ಶಾಸಕ, ಕೈಗಾರಿಕಾ ಪ್ರದೇಶಕ್ಕೆ ಪ್ರತ್ಯೇಕ ವಿದ್ಯುತ್ ಪೀಡರ್ ವ್ಯವಸ್ಥೆ ಮಾಡದೇ, ವೇಮಗಲ್‌ನಿಂದಲೇ ವಿದ್ಯುತ್ ಪೂರೈಕೆ ಮಾಡುತ್ತಿರುವುದರಿಂದ ಸ್ಥಳೀಯರಿಗೆ ತೊಂದರೆ ಉಂಟಾಗಿದೆ ಎಂದಿದ್ದಾರೆ. ಇದೇ ರೀತಿಯಲ್ಲಿ ಮುಂದುವರಿದರೆ ಕೈಗಾರಿಕೆಗಳಿಗೆ ನೀಡುತ್ತಿರುವ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವಂತೆ ಎಚ್ಚರಿಸಿದ್ದಾರೆ. ಸ್ಥಳೀಯ ಯುವಕರಿಗೆ ಕೇವಲ ತಳಮಟ್ಟದ ಕೆಲಸಗಳನ್ನು ನೀಡಿ, ಹೊರಗಿನವರಿಗೆ ಅಧಿಕಾರಿಗಳ ಹುದ್ದೆ ನೀಡುತ್ತಿರುವುದನ್ನೂ ಅವರು ಟೀಕಿಸಿದ್ದಾರೆ. ಈಗ ಅವರ ಈ ಎಲ್ಲಾ ಹೇಳಿಕೆಗಳಿಗೆ ವಿರೋಧ ವ್ಯಕ್ತವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

‘ಹೌಸ್ ಆಫ್ ಡ್ರಾಗನ್’ ಸೀಸನ್ 3 ಟೀಸರ್ ರಿಲೀಸ್: ಈ ಬಾರಿ ಇನ್ನೂ ರೋಚಕ – Kannada News | House of the Dragon season 3 teaser released, web series releasing in June

ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಹಾಲಿವುಡ್‌ನ ದೈತ್ಯ ವೆಬ್ ಸರಣಿ ‘ಹೌಸ್ ಆಫ್ ದಿ ಡ್ರ್ಯಾಗನ್’ (House Of the Dragon) ಈಗ ತನ್ನ ಮೂರನೇ ಸೀಸನ್‌ನೊಂದಿಗೆ ಮರಳಲು ಸಜ್ಜಾಗಿದೆ. ಈ ಸರಣಿಯ ಬಗ್ಗೆ ಹೆಚ್ಚು ಗೊತ್ತಿಲ್ಲದವರಿಗಾಗಿ ಹೇಳಬೇಕೆಂದರೆ, ಇದು ಜಗತ್ತಿನ ನಂಬರ್ 1 ವೆಬ್ ಸರಣಿಯಾದ ‘ಗೇಮ್ ಆಫ್ ಥ್ರೋನ್ಸ್’ ಸರಣಿಯ ಪ್ರೀಕ್ವೆಲ್ ಆಗಿದ್ದು, ‘ಗೇಮ್ ಆಫ್ ಥ್ರೋನ್ಸ್’ ಕತೆ ನಡೆಯುವ ಸುಮಾರು 200 ವರ್ಷಗಳ ಹಿಂದೆ ನಡೆದ ಕಥೆ ಆಗಿದೆ. ರಾಜಮನೆತನದ ಆಂತರಿಕ ಕಲಹ, ಬೆಂಕಿ ಉಗುಳುವ ದೈತ್ಯ ಡ್ರ್ಯಾಗನ್‌ಗಳು ಮತ್ತು ಅಧಿಕಾರದ ಹಪಾಹಪಿಯೇ ಈ ಸರಣಿಯ ಜೀವಾಳ. ಇದೀಗ ಈ ವೆಬ್ ಸರಣಿಯ ಮೂರನೇ ಸೀಸನ್​​ನ ಟ್ರೈಲರ್ ಬಿಡುಗಡೆ ಆಗಿದ್ದು, ಬಿಡುಗಡೆ ದಿನಾಂಕದ ಘೋಷಣೆಯೂ ಆಗಿದೆ.

‘ಹೌಸ್ ಆಫ್ ದಿ ಡ್ರ್ಯಾಗನ್ಸ್’ ವೆಬ್ ಸರಣಿ ಪ್ರಮುಖವಾಗಿ ‘ಟಾರ್ಗೇರಿಯನ್’ ರಾಜವಂಶದ ಸುತ್ತ ಸುತ್ತುತ್ತದೆ. ಈ ಮನೆತನದವರಿಗೆ ಡ್ರ್ಯಾಗನ್‌ಗಳನ್ನು ನಿಯಂತ್ರಿಸುವ ವಿಶೇಷ ಶಕ್ತಿ ಇರುತ್ತದೆ. ಹಾಗಾಗಿ ಏಳು ಕಿಂಗ್​​ಡಮ್​​​ಗಳಿಗೆ ಅವರೇ ಅಧಿಪತಿಗಳಾಗಿರುತ್ತಾರೆ. ಆದರೆ ಅದೇ ಕುಟುಂಬದ ಕೆಲವರ ನಡುವೆ ಅಧಿಕಾರಕ್ಕಾಗಿ, ಸಿಂಹಾಸನಕ್ಕಾಗಿ ಯುದ್ಧ ಶುರುವಾಗಿದೆ. ಈ ಯುದ್ಧದಲ್ಲಿ ತಂತ್ರ, ಕುತಂತ್ರ, ನಂಬಿಕೆ ದ್ರೋಹ ಎಲ್ಲವೂ ಇವೆ. ಅವೆಲ್ಲವುಗಳ ಕತೆಯನ್ನು ಈ ‘ಹೌಸ್ ಆಫ್​ ದಿ ಡ್ರ್ಯಾಗನ್ಸ್’ ಒಳಗೊಂಡಿದೆ.

ಇದೀಗ ಮೂರನೇ ಸೀಸನ್ ಟೀಸರ್ ಬಿಡುಗಡೆಯಾಗಿದ್ದು, ಇದರಲ್ಲಿ ರಾಣಿ ರೇನಿರಾ ಟಾರ್ಗೇರಿಯನ್ ತನ್ನ ಅಧಿಕಾರವನ್ನು ಮರಳಿ ಪಡೆಯಲು ದೃಢನಿಶ್ಚಯ ಮಾಡಿದಂತೆ ತೋರುತ್ತಿದೆ. ತನ್ನ ಮಗನ ಸಾವು ಮತ್ತು ತನಗಾದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳಲು ರೇನಿರಾ ಈಗ ಯುದ್ಧಭೂಮಿಗೆ ಧುಮುಕಿದ್ದಾಳೆ. ಟೀಸರ್‌ನಲ್ಲಿ ಕಂಡುಬರುವ ದೃಶ್ಯಗಳು ಯುದ್ಧವು ಎಷ್ಟು ಭೀಕರವಾಗಿರಲಿದೆ ಎಂಬುದರ ಮುನ್ಸೂಚನೆ ನೀಡುತ್ತಿವೆ. ಮಗ-ತಾಯಿಯ ನಡುವೆ, ಪತಿ-ಪತ್ನಿಯ ನಡುವೆಯೇ ಅಪನಂಬಿಕೆ, ಕಿತ್ತಾಟಗಳು ಶುರುವಾಗಿರುವ ಸೂಚನೆಯನ್ನು ಟೀಸರ್ ನೀಡುತ್ತಿದೆ.

ಇದನ್ನೂ ಓದಿ:ಪ್ರಿಯಾಂಕಾ ಚೋಪ್ರಾರನ್ನು ಮಹಾನ್ ವ್ಯಕ್ತಿಗೆ ಹೋಲಿಸಿದ ಹಾಲಿವುಡ್ ಸ್ಟಾರ್ ವಿನ್ ಡೀಸೆಲ್

‘ಗೇಮ್ ಆಫ್ ಥ್ರೋನ್ಸ್’ನ ಮತ್ತೊಂದು ಪ್ರೀಕ್ವೆಲ್ ಆಗಿರುವ ‘ನೈಟ್ ಆಫ್ ದಿ ಸೆವೆನ್ ಕಿಂಗ್ಡಮ್ಸ್’ ಈಗಾಗಲೇ ಜಿಯೋ ಹಾಟ್​​ಸ್ಟಾರ್​​ನಲ್ಲಿ ಪ್ರಸಾರ ಆಗುತ್ತಿದೆ. ಇದು ಈ ಸರಣಿಯ ಮೊದಲ ಸೀಸನ್ ಆಗಿದೆ. ಅದು ಮುಗಿದ ಬಳಿಕ ‘ಹೌಸ್ ಆಫ್ ದಿ ಡ್ರ್ಯಾಗನ್ಸ್’ ಮೂರನೇ ಸೀಸನ್ ಪ್ರಸಾರ ಆಗಲಿದೆ. ಇದೀಗ ಬಿಡುಗಡೆ ಆಗಿರುವ ಟೀಸರ್​​ನಲ್ಲಿ ನಿರ್ದಿಷ್ಟ ಬಿಡುಗಡೆ ದಿನಾಂಕ ಘೋಷಿಸಿಲ್ಲವಾದರೂ, ಜೂನ್ ತಿಂಗಳಲ್ಲಿ ಬಿಡುಗಡೆ ಆಗಲಿದೆ ಎಂದು ತಿಳಿಸಲಾಗಿದೆ. ಕಳೆರಡು ಸೀಸನ್​​ಗಳಿಗಿಂತಲೂ ಅದ್ಧೂರಿಯಾಗಿ ಮೂರನೇ ಸೀಸನ್ ಇರುವುದು ಟೀಸರ್​​ ನಿಂದ ಖಾತ್ರಿ ಆಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 3:41 pm, Sat, 21 February 26

Source link

ISRO VSSC Internship 2026: ISRO ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ಇಂಟರ್ನ್‌ಶಿಪ್​​​ಗೆ ಅರ್ಜಿ ಆಹ್ವಾನ – Kannada News | ISRO VSSC Internship 2026: Apply Now for Space Research Opportunities!

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಆಶ್ರಯದಲ್ಲಿರುವ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ(VSSC) ವಿದ್ಯಾರ್ಥಿಗಳಿಗೆ ಮಹತ್ವದ ಅವಕಾಶವನ್ನು ತಂದಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ವಿವಿಧ ಇಂಟರ್ನ್‌ಶಿಪ್ ಕಾರ್ಯಕ್ರಮಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಬಿಟೆಕ್, ಬಿಇ, ಎಂಟೆಕ್, ಎಂಇ, ಎಂಎಸ್ಸಿ, ಇಂಟಿಗ್ರೇಟೆಡ್ ಎಂಎಸ್ಸಿ/ಎಂಟೆಕ್, ಬಿಎಸ್-ಎಂಎಸ್ ಮತ್ತು ಪಿಎಚ್‌ಡಿ ಸೇರಿದಂತೆ ವಿವಿಧ ಪದವಿ ಹಾಗೂ ಸ್ನಾತಕೋತ್ತರ ಕಾರ್ಯಕ್ರಮಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಈ ಇಂಟರ್ನ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದು.

ಅರ್ಹತೆ ಮತ್ತು ಅಂಕಗಳ ಮಾನದಂಡ:

ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ತಮ್ಮ ಸೆಮಿಸ್ಟರ್ ಪರೀಕ್ಷೆಗಳಲ್ಲಿ ಕನಿಷ್ಠ ಶೇ.60 ಅಂಕಗಳನ್ನು ಅಥವಾ 10 ಅಂಕಗಳ ಪ್ರಮಾಣದಲ್ಲಿ 6.32 ಸಿಜಿಪಿಎ ಗಳಿಸಿರಬೇಕು. ಪಿಎಚ್‌ಡಿ ವಿದ್ಯಾರ್ಥಿಗಳು ತಮ್ಮ ಕೋರ್ಸ್‌ವರ್ಕ್ ಅನ್ನು ಪೂರ್ಣಗೊಳಿಸಿರಬೇಕು.

ಅರ್ಜಿ ಸಲ್ಲಿಸುವ ವಿಧಾನ:

ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳು ವಿಎಸ್‌ಎಸ್‌ಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಖಾತೆಯನ್ನು ಸೃಷ್ಟಿಸಿ ಅರ್ಜಿ ಸಲ್ಲಿಸಬೇಕು. ಅರ್ಜಿಗಳನ್ನು ಮಾರ್ಚ್ 16 ರವರೆಗೆ ಸ್ವೀಕರಿಸಲಾಗುತ್ತದೆ. ಇಂಟರ್ನ್‌ಶಿಪ್ ಅವಧಿ ಕನಿಷ್ಠ 21 ದಿನಗಳಿಂದ ಗರಿಷ್ಠ 45 ದಿನಗಳವರೆಗೆ ಇರಲಿದೆ. ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಆಯ್ಕೆ ಅವರ ಅಂಕಗಳ ಆಧಾರದ ಮೇಲೆ ನಡೆಯಲಿದೆ. ಯಾವುದೇ ಲಿಖಿತ ಪರೀಕ್ಷೆ ಇಲ್ಲ.

ನೀಡಲಾಗುವ ಕೋರ್ಸ್‌ಗಳು:

ಈ ಇಂಟರ್ನ್‌ಶಿಪ್ ಕಾರ್ಯಕ್ರಮದ ಅಡಿಯಲ್ಲಿ ಏರೋನಾಟಿಕಲ್, ಏರೋಸ್ಪೇಸ್, ಅಪ್ಲೈಡ್ ಎಲೆಕ್ಟ್ರಾನಿಕ್ಸ್ ಮತ್ತು ಇನ್ಸ್ಟ್ರುಮೆಂಟೇಶನ್, ಕೆಮಿಕಲ್, ಸಿವಿಲ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್, ಮೆಕ್ಯಾನಿಕಲ್, ಮೆಟಲರ್ಜಿಕಲ್ ಮತ್ತು ಮೆಟೀರಿಯಲ್ಸ್, ಪಾಲಿಮರ್ ಸೈನ್ಸ್, ಪ್ರೊಡಕ್ಷನ್ ಎಂಜಿನಿಯರಿಂಗ್ ಹಾಗೂ ಎಂಜಿನಿಯರಿಂಗ್ ಭೌತಶಾಸ್ತ್ರದಲ್ಲಿ ಬಿಇ/ಬಿಟೆಕ್ ಕೋರ್ಸ್‌ಗಳು ಲಭ್ಯವಿವೆ.

ಇದನ್ನೂ ಓದಿ: ನಿರುದ್ಯೋಗಿಗಳಿಗೆ ಗುಡ್​ನ್ಯೂಸ್​​; ನಿಮ್ಮದೇ ಜಿಲ್ಲೆಯ ಆಧಾರ್ ಕೇಂದ್ರಗಳಲ್ಲಿ ಉದ್ಯೋಗವಕಾಶ

ಇದಲ್ಲದೆ, ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರದಲ್ಲಿ ಬಿಎಸ್-ಎಂಎಸ್, ಬಿಎಸ್ಸಿ, ಇಂಟಿಗ್ರೇಟೆಡ್ ಎಂಎಸ್ಸಿ, ಎಂಟೆಕ್, ಎಂಇ, ವಾತಾವರಣ ವಿಜ್ಞಾನ, ಹವಾಮಾನಶಾಸ್ತ್ರ, ಸಾಗರಶಾಸ್ತ್ರ, ಬಾಹ್ಯಾಕಾಶ ಭೌತಶಾಸ್ತ್ರ, ಬಾಹ್ಯಾಕಾಶ ವಿಜ್ಞಾನ, ತಂತ್ರಜ್ಞಾನ, ಡೇಟಾ ಅನಾಲಿಟಿಕ್ಸ್, ಡೇಟಾ ಸೈನ್ಸ್ ಹಾಗೂ ಪಿಎಚ್‌ಡಿ ಕಾರ್ಯಕ್ರಮಗಳಿಗೂ ಅವಕಾಶ ನೀಡಲಾಗಿದೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ವೃತ್ತಿಜೀವನದ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ ಇದು ಅಮೂಲ್ಯ ಅವಕಾಶ. ಹೆಚ್ಚಿನ ಮಾಹಿತಿಗಾಗಿ ವಿಎಸ್‌ಎಸ್‌ಸಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ಮಾರ್ಗಸೂಚಿಗಳನ್ನು ಗಮನವಿಟ್ಟು ಓದಿ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರೇಯಸಿಯನ್ನು ಮದುವೆಯಾಗಲು ಕರೆದೊಯ್ಯುತ್ತಿದ್ದ ವೇಳೆ ಕಾರು ಪಲ್ಟಿ; ದಾರಿ ಮಧ್ಯೆ ಯುವಕನನ್ನು ಬಿಟ್ಟು ಯುವತಿ ಪರಾರಿ – Kannada News | Bengaluru Elopement Tragedy: Car Crash Injures Groom, Bride Flees Hirekeru

ಹಾವೇರಿ, ಫೆ.21: ಪ್ರೀತಿಸಿದ ಹುಡುಗಿಯನ್ನ ಕೈಹಿಡಿಯಲು ಬೆಂಗಳೂರಿನಿಂದ ಬಾಡಿಗೆ ಕಾರು ಮಾಡಿಕೊಂಡು ಬಂದಿದ್ದ ಯುವಕನ ಮದುವೆ ಕನಸು ರಸ್ತೆ ಮಧ್ಯೆಯೇ ನುಚ್ಚುನೂರಾಗಿದೆ. ಕಾರು ಪಲ್ಟಿಯಾಗಿ ಪ್ರಿಯಕರ ಸೇರಿ ಮೂವರು ಆಸ್ಪತ್ರೆ ಪಾಲಾಗಿದ್ದರೆ, ಯುವತಿ ಮಾತ್ರ ಅಲ್ಲಿಂದ ಪರಾರಿಯಾಗಿ ಬೆಂಗಳೂರು ಸೇರಿಕೊಂಡ ಘಟನೆ ಹಿರೇಕೆರೂರು ತಾಲೂಕಿನ ಚೆನ್ನಹಳ್ಳಿ ತಾಂಡಾ ಬಳಿ ನಡೆದಿದೆ. ಗಾಯಾಳು ಯುವಕ ಇರ್ಫಾನ್ ಮತ್ತು ಹಿರೇಕೆರೂರು ಮೂಲದ ಯುವತಿ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಯೇ ಅವರಿಬ್ಬರ ನಡುವೆ ಪರಿಚಯವಾಗಿ, ಪ್ರೀತಿ ಅಂಕುರಿಸಿತ್ತು. ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು.

ಯುವತಿ ಇತ್ತೀಚೆಗೆ ಜಾತ್ರೆಗಾಗಿ ಹಿರೇಕೆರೂರಿನ ತನ್ನೂರಿಗೆ ಬಂದಿದ್ದಳು. ಆಕೆಯನ್ನು ಅಲ್ಲಿಂದ ಕರೆದುಕೊಂಡು ಹೋಗಿ ಮದುವೆಯಾಗಲು ಇರ್ಫಾನ್ ಪ್ಲಾನ್ ಮಾಡಿದ್ದ. ಇದಕ್ಕಾಗಿ ತನ್ನ ಸ್ನೇಹಿತರಾದ ಚಂದ್ರು ಮತ್ತು ಗುರುರಾಜ್ ಅವರ ಜೊತೆ ಬಾಡಿಗೆ ಕಾರಿನಲ್ಲಿ ಊರಿಗೆ ಬಂದಿದ್ದ ಇರ್ಫಾನ್, ಯುವತಿಯನ್ನು ಕರೆದುಕೊಂಡು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದ.

ಇದನ್ನೂ ಓದಿ: ಕದ್ದ ಚಿನ್ನವನ್ನು ಗೋಲ್ಡ್ ಲೋನ್ ಕಂಪನಿಗೆ ಮಾರುವ ವೇಳೆ ರೆಡ್​​​ ಹ್ಯಾಂಡ್​​​ ಆಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಮಹಿಳೆ

ಯುವತಿಯ ಪೋಷಕರು ಬೆನ್ನಟ್ಟಬಹುದು ಎಂಬ ಭಯದಲ್ಲಿ ಯುವಕರು ವೇಗವಾಗಿ ಕಾರು ಚಲಾಯಿಸುತ್ತಿದ್ದರು ಎನ್ನಲಾಗಿದೆ. ಚನ್ನಹಳ್ಳಿ ತಾಂಡಾ ಬಳಿ ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅಪಘಾತದ ಭೀಕರತೆಗೆ ಕಾರು ಸಂಪೂರ್ಣ ನುಜ್ಜುನುಜ್ಜಾಗಿದ್ದು, ಇರ್ಫಾನ್ ಹಾಗೂ ಆತನ ಇಬ್ಬರು ಸ್ನೇಹಿತರಿಗೆ ಗಂಭೀರ ಗಾಯಗಳಾಗಿವೆ. ಕಾರಿನ ಹಿಂಬದಿಯ ಸೀಟಿನಲ್ಲಿದ್ದ ಯುವತಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಅಪಘಾತವಾಗುತ್ತಿದ್ದಂತೆ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ. ಈ ವೇಳೆ ಜನರ ಗುಂಪು ಸೇರುವುದನ್ನು ಕಂಡು ಮರ್ಯಾದೆಗೆ ಅಂಜಿ, ಯುವತಿ ತನ್ನ ಪ್ರಿಯಕರನನ್ನು ಅಲ್ಲಿಯೇ ಬಿಟ್ಟು ಅವರಿವರ ಬಳಿ ಲಿಫ್ಟ್ ಕೇಳಿ ಬೆಂಗಳೂರು ಬಸ್ ಹತ್ತಿ ಮನೆ ಸೇರಿದ್ದಾಳೆ. ಸದ್ಯ ಗಾಯಾಳು ಯುವಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿಚಿತ್ರ ಪ್ರೇಮ ಪ್ರಕರಣ ಹಿರೇಕೆರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವರದಿ : ಅಣ್ಣಪ್ಪ ಬಾರ್ಕಿ 

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಟಾಕ್ಸಿಕ್’ನಲ್ಲಿ ಯಶ್ ಪಾತ್ರದ ಹೆಸರು ಟಿಕೆಟ್; ಮಾಸ್ಟರ್ ಪ್ಲ್ಯಾನ್ ಮಾಡಿದ ರಾಕಿಂಗ್ ಸ್ಟಾರ್ – Kannada News | Toxic Teaser Controversy: Yash’s Dual Role anda Why Heroines Are Missing – A Marketing Ploy?

‘ಟಾಕ್ಸಿಕ್’ ಟೀಸರ್ (Toxic Teaser) ಸದ್ಯ ಹಲ್​ಚಲ್ ಸೃಷ್ಟಿ ಮಾಡುತ್ತಿದೆ. ಈ ಟೀಸರ್​​ನಲ್ಲಿ ಯಶ್ ಮಾತ್ರ ಕಾಣಿಸಿದ್ದಾರೆ. ಯಶ್ ಅವರ ದ್ವಿಪಾತ್ರ ಸಾಕಷ್ಟು ಗಮನ ಸೆಳೆದಿದೆ. ಟೀಸರ್​​ನಲ್ಲಿ ಯಶ್ ಮಾತ್ರ ಕಾಣಿಸಿಕೊಂಡಿದ್ದು ಏಕೆ ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ನಯನಾತಾರ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ ಅಂಥವರು ನಟಿಸಿದ್ದಾರೆ. ಆದರೆ, ಇವರನ್ನು ಟೀಸರ್​ ಅಲ್ಲಿ ತೋರಿಸಿಯೇ ಇಲ್ಲ ಎಂಬ ಟೀಕೆ ವ್ಯಕ್ತವಾಗಿದೆ. ಆದರೆ, ಇದರ ಹಿಂದೆ ಮಾಸ್ಟರ್​ ಪ್ಲ್ಯಾನ್ ಇದೆ ಎಂದು ವರದಿ ಆಗಿದೆ.

ಯಶ್ ಜನ್ಮದಿನಕ್ಕೆ ರಿಲೀಸ್ ಆದ ‘ಟಾಕ್ಸಿಕ್’ ಟೀಸರ್​ ಅಲ್ಲಿ ಬೋಲ್ಡ್ ದೃಶ್ಯಗಳು ಇದ್ದವು. ಈ ಕಾರಣಕ್ಕೆ ಅವರು ಟೀಕೆ ಎದುರಿಸಿದರು. ರಿಲೀಸ್ ಆದ ಎರಡನೇ ಟೀಸರ್​ ಅಲ್ಲಿಯೂ ಬೋಲ್ಡ್ ದೃಶ್ಯಗಳು ಇವೆ. ಈ ವಿಷಯದಲ್ಲಿ ಟೀಕೆ ಎದುರಿಸುತ್ತಿದ್ದಾರೆ. ಎಲ್ಲಕಿಂತ ಮುಖ್ಯವಾಗಿ ಟೀಸರ್​​ನಲ್ಲಿ ಯಶ್​ಗೆ ಮಾತ್ರ ಆದ್ಯತೆ ನೀಡಲಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಒಂದು ಪಾತ್ರದ ಹೆಸರು ರಾಯ ಆದರೆ, ಮತ್ತೊಂದು ಪಾತ್ರದ ಹೆಸರು ರಾಯ. ಈ ಪಾತ್ರ ರಿಲೀಸ್ ಆಗಿ ಗಮನ ಸೆಳೆದಿದೆ. ಹೀರೋಯಿಗಳನ್ನು ಟೀಸರ್ ಅಲ್ಲಿ ತೋರಿಸದೇ ಇರಲು ಕೆಲವರು ಬೇರೆ ರೀತಿಯಲ್ಲಿ ಹೇಳುತ್ತಿದ್ದಾರೆ. .

ಸಾಮಾನ್ಯವಾಗಿ ದೊಡ್ಡ ಬಜೆಟ್ ಸಿನಿಮಾಗಳು ರಿಲೀಸ್ ಆಗುತ್ತವೆ ಎಂದಾಗ ಟೀಸರ್ ಹಾಗೂ ಸಿನಿಮಾದಲ್ಲಿ ಬಹುತೇಕ ಎಲ್ಲ ವಿಷಯಗಳನ್ನು ತೋರಿಸಲಾಗುತ್ತದೆ. ಸಿನಿಮಾದಲ್ಲಿ ಯಾವ ಕಲಾವಿದರ ಪಾತ್ರ ಯಾವ ರೀತಿ ಇದೆ? ಸಿನಿಮಾ ಎಳೆ ಏನು ಎಂಬುದನ್ನು ತಿಳಿಸಲಾಗುತ್ತದೆ. ಆದರೆ, ‘ಟಾಕ್ಸಿಕ್’ ಟೀಸರ್​ನಲ್ಲಿ ಪ್ರಮುಖವಾಗಿ ತೋರಿಸಿದ್ದು, ಯಶ್ ದ್ವಿಪಾತ್ರದ ಕಥೆ ಮಾತ್ರ. ಇದಕ್ಕೆ ಯಶ್ ಅವರ ಪ್ಲ್ಯಾನ್ ಕಾರಣವಂತೆ.

ಇದನ್ನೂ ಓದಿ: ಮುಂಬೈ ಬೀದಿಗಳಲ್ಲಿ ಯಶ್ ಮುಖ ಮುಚ್ಚಿಕೊಂಡು ಓಡಾಡಿದ್ದಕ್ಕೆ ‘ಟಾಕ್ಸಿಕ್ ಟೀಸರ್​​ನಲ್ಲಿ ಸಿಕ್ತು ಉತ್ತರ

ಎಲ್ಲಾ ಸಿನಿಮಾಗಳ ರೀತಿಯಲ್ಲಿ ಟೀಸರ್ ಇರಬಾರದು ಎಂದು ಯಶ್ ನಿರ್ಧರಿಸಿದ್ದರು. ನಯನತಾರಾ, ಕಿಯಾರಾ ಅಡ್ವಾಣಿ ಮಾಡಿರೋ ಪಾತ್ರಗಳ ಬಗ್ಗೆ ಕುತೂಹಲ ಇದೆ. ಟ್ರೇಲರ್​ವರೆಗೂ ಈ ಕುತೂಹಲ ಸಾಗಬೇಕು ಎಂಬುದು ಯಶ್ ಪ್ಲ್ಯಾನ್ ಹೀಗಾಗಿ, ಟ್ರೇಲರ್ ರಿಲೀಸ್ ಆಗುವವರೆಗೂ ಕಾಯಬೇಕಾದ ಅನಿವಾರ್ಯತೆ ಅಭಿಮಾನಿಗಳಿಗೆ ಇದೆ.
ಈಗಿನ ಯುಗದಲ್ಲಿ ನೆಗೆಟಿವೋ ಅಥವಾ ಪಾಸಿಟಿವೋ ಚರ್ಚೆ ಆದರೆ ಸಾಕು ಎಂದು ಅನೇಕರು ಭಾವಿಸುತ್ತಾರೆ. ಯಶ್ ಕೂಡ ಇದೇ ರೀತಿಯ ಪ್ಲ್ಯಾನ್ ಮಾಡಿದರೇ ಎಂಬ ಪ್ರಶ್ನೆ ಮೂಡಿದೆ. ‘ಟಾಕ್ಸಿಕ್’ ಮೊದಲ ಟೀಸರ್​ ಅಲ್ಲಿ ಬೋಲ್ಡ್ ದೃಶ್ಯದ ಕಾರಣಕ್ಕೆ ಚರ್ಚೆ ಆಯಿತು. ಈ ಬಾರಿ ಹೀರೋಯಿನ್​​ಗಳ ಪರಿಚಯಿಸಿಲ್ಲ ಎಂಬ ಕಾರಣಕ್ಕೆ ಟೀಕೆ ವ್ಯಕ್ತವಾಗುತ್ತಿದೆ. ಒಟ್ಟಿನಲ್ಲಿ ಸಿನಿಮಾ ಬಗ್ಗೆ ಚರ್ಚೆಯಂತೂ ಇದ್ದೇ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಎಐ ಶೃಂಗಸಭೆಯಲ್ಲಿ ಕಾಂಗ್ರೆಸ್​​ನಿಂದ ಅರೆಬೆತ್ತಲೆ ಪ್ರತಿಭಟನೆ; ಬಂಧಿತ 4 ಆರೋಪಿಗಳು 5 ದಿನ ಪೊಲೀಸ್ ವಶಕ್ಕೆ – Kannada News | AI Summit protest Patiala House Court sends 4 Indian Youth Congress workers to police custody for 5 days

ನವದೆಹಲಿ, ಫೆಬ್ರವರಿ 21: ದೆಹಲಿಯಲ್ಲಿ ನಡೆದ ಎಐ ಇಂಪ್ಯಾಕ್ಟ್ ಶೃಂಗಸಭೆಯ (AI Impact Summit) ಸಭಾಂಗಣದೊಳಗೆ ಶರ್ಟ್ ಬಿಚ್ಚಿ, ಮೋದಿ-ಟ್ರಂಪ್ ಫೋಟೋ ಇದ್ದ ಟಿ-ಶರ್ಟ್ ಹಿಡಿದುಕೊಂಡು, ಅಮೆರಿಕದ ಜೊತೆಗಿನ ವ್ಯಾಪಾರ ಒಪ್ಪಂದದ ವಿರುದ್ಧ ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿದ ಯುವ ಕಾಂಗ್ರೆಸ್ ಕಾರ್ಯರ್ತರನ್ನು ಬಂಧಿಸಲಾಗಿತ್ತು. ಬಂಧಿತರಲ್ಲಿ ನಾಲ್ವರನ್ನು ಇಂದು ಪಟಿಯಾಲ ಹೌಸ್ ನ್ಯಾಯಾಲಯದೆದುರು ಹಾಜರುಪಡಿಸಲಾಗಿತ್ತು. ಆ ನಾಲ್ವರನ್ನೂ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ಆರೋಪಿಗಳ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

ನೇಪಾಳದ ಜೆನ್‌ಝಡ್ ಪ್ರತಿಭಟನೆಯಿಂದ ಪ್ರೇರಿತರಾದ ಕಾಂಗ್ರೆಸ್ ಕಾರ್ಯಕರ್ತರು ಎಐ ಶೃಂಗಸಭೆಯಲ್ಲಿ ಗಲಭೆ ಸೃಷ್ಟಿಸಲು ಪಿತೂರಿ ನಡೆಸಿದ್ದರು ಎಂದು ಪೊಲೀಸ್ ತನಿಖೆ ವೇಳೆ ಬಯಲಾಗಿದೆ. “ಪ್ರಧಾನಿ ಮೋದಿ ರಾಜಿ ಮಾಡಿಕೊಂಡಿದ್ದಾರೆ” ಎಂಬ ಸ್ಲೋಗನ್ ಹೊಂದಿರುವ ಟಿ-ಶರ್ಟ್‌ಗಳನ್ನು ಹೈಯಲ್ಲಿ ಹಿಡಿದು ಬೀಸುವ ಮೂಲಕ ಯುವ ಕಾಂಗ್ರೆಸ್ ಕಾರ್ಯಕರ್ತರು ಮೆರವಣಿಗೆ ನಡೆಸಿ, ಅಲ್ಲಿ ಸೇರಿದ್ದ ಸಾವಿರಾರು ಜನರ ಗಮನ ಸೆಳೆದಿದ್ದರು. ಜಾಗತಿಕ ನಾಯಕರು ಭಾಗವಹಿಸಿದ್ದ ಈ ಶೃಂಗಸಭೆಯಲ್ಲಿ ಈ ರೀತಿಯ ಅಸಭ್ಯ ವರ್ತನೆ ತೋರಿದ್ದರಿಂದ ಕೇಂದ್ರ ಸರ್ಕಾರಕ್ಕೆ ತೀವ್ರ ಮುಜುಗರ ಉಂಟಾಗಿತ್ತು.

ಇದನ್ನೂ ಓದಿ: ಎಐ ಶೃಂಗಸಭೆಯಲ್ಲಿ ಶರ್ಟ್ ತೆಗೆದು ಘೋಷಣೆ ಕೂಗಿದ ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ

ಈ ಕಾಂಗ್ರೆಸ್ ಪ್ರತಿಭಟನಾಕಾರರು ನೇಪಾಳದ ಜೆನ್‌ಝಡ್ ಪ್ರತಿಭಟನೆಯಿಂದ ಪ್ರೇರಿತರಾಗಿದ್ದಾರೆ. ಶೃಂಗಸಭೆಯಲ್ಲಿ ಅದೇ ರೀತಿಯ ಚಳವಳಿಯನ್ನು ನಡೆಸಲು ಬಯಸಿದ್ದರು. ಹೀಗಾಗಿ, ಬಂಧಿತ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು 5 ದಿನಗಳ ಕಸ್ಟಡಿಗೆ ನೀಡುವಂತೆ ದೆಹಲಿ ಪೊಲೀಸರು ನ್ಯಾಯಾಲಯದ ಮುಂದೆ ಕೋರಿದ್ದರು. ದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲೆತಗ್ಗಿಸುವಂತೆ ಮಾಡಲು ಸಂಚು ರೂಪಿಸಲಾಗುತ್ತಿದೆ ಎಂದು ಪೊಲೀಸರು ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ತಿಳಿಸಿದ್ದರು. ಇದಾದ ಬಳಿಕ ನ್ಯಾಯಾಲಯವು ಆರೋಪಿಗಳನ್ನು 5 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ.

“ಪ್ರತಿಭಟನೆ ಶಾಂತಿಯುತವಾಗಿತ್ತು. ಯಾವುದೇ ವೀಡಿಯೊಗಳಲ್ಲಿ ಹಿಂಸಾಚಾರ ಕಂಡುಬಂದಿಲ್ಲ. ಅವರೆಲ್ಲರೂ ಪದವೀಧರರು, ಸುಶಿಕ್ಷಿತರು. ರಾಜಕೀಯ ಪ್ರೇರಣೆಯಿಂದ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಆರೋಪಿಯ ಪರ ವಕೀಲರು ವಾದ ಮಂಡಿಸಿದ್ದರು.

ಇದನ್ನೂ ಓದಿ: ದೆಹಲಿಯ ಎಐ ಶೃಂಗಸಭೆಯಲ್ಲಿ ಹೈಡ್ರಾಮಾ; ಶರ್ಟ್ ಬಿಚ್ಚಿ ಮೋದಿ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

“ಆರೋಪಿಗಳು ರಾಷ್ಟ್ರವಿರೋಧಿ ಘೋಷಣೆಗಳನ್ನು ಕೂಗಿದರು. ಪ್ರಧಾನಿ ವಿರುದ್ಧ ಸಂದೇಶಗಳನ್ನು ಹೊಂದಿರುವ ಟಿ- ಶರ್ಟ್‌ಗಳನ್ನು ಧರಿಸಿದ್ದರು” ಎಂದು ಸರ್ಕಾರಿ ವಕೀಲರು ವಾದಿಸಿದರು.

ಭಾರತ್ ಮಂಟಪದಲ್ಲಿ ನಡೆದ AI ಶೃಂಗಸಭೆಯ ಸಂದರ್ಭದಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಬಂಧಿಸಲಾದ ನಾಲ್ವರು ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಇಂದು ಬೆಳಿಗ್ಗೆ ಪಟಿಯಾಲ ಹೌಸ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಬಂಧಿತ ವ್ಯಕ್ತಿಗಳನ್ನು ಕೃಷ್ಣ ಹರಿ, ಕುಂದನ್ ಯಾದವ್, ಅಜಯ್ ಕುಮಾರ್ ಮತ್ತು ನರಸಿಂಹ ಯಾದವ್ ಎಂದು ಗುರುತಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:22 pm, Sat, 21 February 26

Source link

ಗದಗ: 11 ಲಕ್ಷ ರೂ ಲಂಚಕ್ಕೆ ಬೇಡಿಕೆ; ಗುತ್ತಿಗೆದಾರನಿಂದ ಲಂಚ ಪಡೆಯುವಾಗ ಲೋಕಾ ಬಲೆಗೆ ಬಿದ್ದ ಬಿಜೆಪಿ ಶಾಸಕ – Kannada News | Gadag: BJP MLA Chandru Lamani Lokayukta Trap: Caught Taking Lakhs Bribe

ಬಿಜೆಪಿ ಶಾಸಕ ಚಂದ್ರು ಲಮಾಣಿImage Credit source: tv9 kannada

ಗದಗ, ಫೆಬ್ರವರಿ 21: ಗುತ್ತಿಗೆದಾರನಿಂದ ಲಂಚ ಪಡೆಯುವಾಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ ಬಿದ್ದಿರುವಂತಹ ಘಟನೆ ನಡೆದಿದೆ. 11 ಲಕ್ಷ ರೂ ಲಂಚ ಬೇಡಿಕೆ ಇಡಲಾಗಿದ್ದು, ಮುಂಗಡವಾಗಿ 5 ಲಕ್ಷ ರೂ ಕಮಿಷನ್ ಪಡೆಯುವಾಗ ಶಾಸಕ ಸೇರಿದಂತೆ ಪಿಎಗಳಾದ ಮಂಜುನಾಥ್ ಮತ್ತು ಗುರು ಸಿಕ್ಕಿಬಿದ್ದಿದ್ದು, ಮೂವರನ್ನು ವಶಕ್ಕೆ ಪಡೆದು ಲೋಕಯುಕ್ತ ಪೊಲೀಸರಿಂದ ವಿಚಾರಣೆ ಮಾಡಲಾಗುತ್ತಿದೆ.

ಮತ್ತಷ್ಟು ಮಾಹಿತಿ ಅಪ್​ಡೇಟ್​ ಆಗಲಿದೆ.

Source link

‘ಸೀತಾಪಯಣ’ಕ್ಕೆ ಸಿಕ್ಕ ಪ್ರತಿಕ್ರಿಯೆಗೆ ಧನ್ಯವಾದ ಹೇಳಿದ ಉಪೇಂದ್ರ ಅಣ್ಣನ ಮಗ – Kannada News | Niranjan thanked for response getting for Seetha Payanam movie

ಅರ್ಜುನ್ ಸರ್ಜಾ (Arjun Sarja) ನಿರ್ದೇಶಿಸಿ, ನಿರ್ಮಾಣ ಮಾಡಿರುವ ‘ಸೀತಾಪಯಣ’ ಸಿನಿಮಾ ಕಳೆದ ವಾರವಷ್ಟೆ ಬಿಡುಗಡೆ ಆಗಿದೆ. ಸಿನಿಮಾನಲ್ಲಿ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾ ನಾಯಕಿ, ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ನಾಯಕ. ಕನ್ನಡ ಮಾತ್ರವಲ್ಲದೆ ತೆಲುಗು ಮತ್ತು ತಮಿಳು ಭಾಷೆಗಳಲ್ಲಿಯೂ ಈ ಪ್ರೇಮಕಥಾ ಸಿನಿಮಾ ಬಿಡುಗಡೆ ಆಗಿದೆ. ಸಿನಿಮಾದ ಪ್ರೀಮಿಯರ್ ಶೋ ಅನ್ನು ಇತ್ತೀಚೆಗಷ್ಟೆ ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಶಿವಣ್ಣ ಸಹ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ತಮ್ಮ ಸಿನಿಮಾಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಬಗ್ಗೆ ಖುಷಿಯಾಗಿರುವ ನಿರಂಜನ್, ಎಲ್ಲರಿಗೂ ಧನ್ಯವಾದ ಹೇಳಿದರು. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಿಷಬ್ ತೆಲುಗು ಸಿನಿಮಾಗೆ ಕರ್ನಾಟಕದಲ್ಲಿ ಮುಹೂರ್ತ; ಇದಕ್ಕಿದೆ ವಿಶೇಷ ಕಾರಣ – Kannada News | Rishab Shetty’s ‘Jai Hanuman’ Muhurtha in Hampi: Kantara’ Star’s Next Big Role

ರಿಷಬ್ ಶೆಟ್ಟಿ (Rishab Shetty) ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಕೂಡ ಹೇಳಿದ್ದರು. ಈ ಚಿತ್ರದ ಬಳಿಕ ಅವರು ಒಂದು ದೀರ್ಘ ಗ್ಯಾಪ್ ತೆಗೆದುಕೊಂಡರು. ಕುಟುಂಬದ ಜೊತೆ ಸಮಯ ಕಳೆದರು. ಈಗ ಅವರು ಮತ್ತೆ ಸಿನಿಮಾ ಕೆಲಸಕ್ಕೆ ಮರಳಿದ್ದಾರೆ. ‘ಹನುಮಾನ್ 2’ ಚಿತ್ರದ ಶೂಟ್​​ನಲ್ಲಿ ಅವರು ಬ್ಯುಸಿ ಆಗಲಿದ್ದಾರೆ. ಈ ಚಿತ್ರಕ್ಕೆ ಕರ್ನಾಟಕದಲ್ಲೇ ಮುಹೂರ್ತ ನಡೆಯಲಿದೆ ಎಂಬುದು ವಿಶೇಷ.

‘ಹನುಮಾನ್’ ಸಿನಿಮಾ 2024ರಲ್ಲಿ ರಿಲೀಸ್ ಆಯಿತು. ಈ ಚಿತ್ರ ಸೂಪರ್ ಹಿಟ್ ಆಯಿತು. ಪ್ರಶಾಂತ್ ವರ್ಮ ಅವರು ಇದನ್ನು ನಿರ್ದೇಶನ ಮಾಡಿದ್ದರು. ಈಗ ಈ ಚಿತ್ರದ ಸೀಕ್ವೆಲ್​​ ‘ಜೈ ಹನುಮಾನ್’ ಸಿನಿಮಾಗೆ ಅವರೇ ನಿರ್ದೇಶನ ಮಾಡಲು ರೆಡಿ ಆಗಿದ್ದಾರೆ. ಈ ಸಿನಿಮಾ ಇದೇ ವರ್ಷ ತೆರೆಗೆ ತರುವ ನಿರೀಕ್ಷೆ ಇದೆ. ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಕೂಡ ನಟಿಸುತ್ತಿದ್ದಾರೆ. ಈ ಚಿತ್ರದ ಮುಹೂರ್ತ ಭಾನುವಾರ (ಫೆಬ್ರವರಿ 22) ನಡೆಯಲಿದೆ.

ಹಂಪಿಯ ಅಂಜನಾದ್ರಿ ಬೆಟ್ಟದಲ್ಲಿ ‘ಜೈ ಹನುಮಾನ್’ ಸಿನಿಮಾದ ಮುಹೂರ್ತ ನಡೆಯಲಿದೆ. ಇದು ತೆಲುಗು ಸಿನಿಮಾ ಆದರೂ, ಕರ್ನಾಟಕದಲ್ಲಿ ಮುಹೂರ್ತ ನಡೆಯಲು ಕಾರಣವೂ ಇದೆ. ಹನುಮ ಹುಟ್ಟಿದ್ದು, ಹಂಪಿಯಲ್ಲಿ ಎಂಬುದು ಪುರಾಣದಲ್ಲಿ ಇದೆ. ಈ ಕಾರಣದಿಂದ ಈ ಜಾಗವನ್ನು ಮುಹೂರ್ತಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಸಿನಿಮಾನ ತೆಲುಗಿನಲ್ಲಿ ‘ಪುಷ್ಪ’ದಂತಹ ಚಿತ್ರಗಳನ್ನು ನೀಡಿದ ಮೈತ್ರಿ ಮೂವೀ ಮೇಕರ್ಸ್ ಚಿತ್ರವನ್ನು ನಿರ್ಮಿಸುತ್ತಿದೆ.

ಇದನ್ನೂ ಓದಿ: ರಿಷಬ್ ಶೆಟ್ಟಿಗಾಗಿ ಪ್ರಭಾಸ್ ಸಿನಿಮಾ ಕೈಬಿಟ್ಟರೆ ಯುವ ನಿರ್ದೇಶಕ

ರಿಷಬ್ ಶೆಟ್ಟಿ ಹಾಗೂ ತಂಡ ಈಗಾಗಲೇ ಹಂಪಿ ತಲುಪಿದೆ. ರಿಷಬ್ ಅವರನ್ನು ಹನುಮಂತನ ಲುಕ್​ನಲ್ಲಿ ನೋಡಲು ಅಭಿಮಾನಿಗಳೂ ಕಾತುರದಿಂದ ಕಾಯುತ್ತಿದ್ದಾರೆ. ‘ಕಾಂತಾರ’ ಹಿಟ್ ಆದ ಬಳಿಕ ರಿಷಬ್ ಅವರನ್ನು ಇದೇ ಮಾದರಿಯ ಪಾತ್ರಗಳು ಅರಸಿ ಬರುತ್ತಿವೆ ಅನ್ನೋದು ವಿಶೇಷ. ಅವರು ಖುಷಿ ಖುಷಿಯಿಂದಲೇ ಈ ರೀತಿಯ ಪಾತ್ರಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ಅವರ ಸಿನಿಮಾ ಆಯ್ಕೆ ಬಗ್ಗೆ ಅವರ ಅಭಿಮಾನಿಗಳಿಗೂ ಖುಷಿ ಇದೆ. ‘ಜೈ ಹನುಮಾನ್’ ಮಾತ್ರವಲ್ಲದೆ, ಶಿವಾಜಿ ಕುರಿತ ಸಿನಿಮಾದಲ್ಲೂ ರಿಷಬ್ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link