All posts by nagaraj11081993

Video: ತಿಂದು ಬಿಸಾಡಿದ್ದ ತಟ್ಟೆಗಳಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ – Kannada News | UPSC Aspirant Seen Collecting Leftover Food From Discarded Plates, Video Goes Viral

ನವದೆಹಲಿ, ಫೆಬ್ರವರಿ 20: ಯುಪಿಎಸ್​​ಸಿ ಆಕಾಂಕ್ಷಿಯೊಬ್ಬರು ತಿಂದು ಬಿಸಾಡಿದ್ದ ತಟ್ಟೆಗಳಲ್ಲಿದ್ದ ಆಹಾರ ಪದಾರ್ಥಗಳನ್ನು ಒಟ್ಟು ಮಾಡುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಅವರು ಬುಲಂದ್​ಶೆಹರ್​ನ ವಿದ್ಯಾರ್ಥಿ ಅಶುತೋಷ್. ಈ ವಿಡಿಯೋವನ್ನು ಮೊಬೈಲ್ ಅಂಗಡಿ ಮಾಲೀಕ ಉಪಲಕ್ಷ್ ಮಾಡಿದ್ದು, ಆ ಸಮಯದಲ್ಲಿ ಈ ವ್ಯಕ್ತಿಗೆ ಹುಚ್ಚಿರಬೇಕು, ಸೂಟು ಬೂಟು ಧರಿಸಿ ವಿದ್ಯಾವಂತನಂತೆ ಕಾಣುತ್ತಿದ್ದಾರೆ ಆದರೆ ಯಾಕೆ ತಿಂದು ಬಿಸಾಡಿದ ತಟ್ಟೆಗಳನ್ನು ಮುಟ್ಟುತ್ತಿದ್ದಾರೆ, ಅದರಲ್ಲಿರುವ ಆಹಾರವನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ತುಂಬಾ ತಲೆ ಕೆಡಿಸಿಕೊಂಡಿದ್ದರಂತೆ.

ಆದರೆ ಅಶುತೋಶ್ ಆಲೋಚನೆ ಎಲ್ಲರನ್ನು ನಿಬ್ಬೆರಗಾಗಿಸಿತ್ತು, ಎಲ್ಲೂ ಪ್ರಚಾರ ಮಾಡದೆ, ಸಾಮಾಜಿಕ ಕಾರ್ಯದಲ್ಲಿ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂಬುದು ಅರಿವಾಗಿತ್ತು. ಆ ತಟ್ಟೆಯಲ್ಲಿ ಬಿಟ್ಟಿದ್ದ ಆಹಾರವನ್ನು ಬೀದಿ ನಾಯಿಗಳು ಹಾಗೂ ಬೀದಿ ಬದಿ ಇರುವ ಹಸುಗಳಿಗೆ ಕೊಡಲು ಅವರು ತೆಗೆದುಕೊಂಡು ಹೋಗುತ್ತಿದ್ದರು. ಆಹಾರವನ್ನು ವ್ಯರ್ಥ ಮಾಡುವುದು ಸುಲಭ, ಆದರೆ ನಿಜವಾದ ಮಾನವೀಯತೆ ಆ ತ್ಯಾಜ್ಯವನ್ನು ಜೀವಸೆಲೆಯಾಗಿ ಮರುಬಳಕೆ ಮಾಡುವಲ್ಲಿದೆ ಎಂದು ‘ದಿ ಬೆಟರ್ ಇಂಡಿಯಾ’ ಎಂಬ ಎಕ್ಸ್​ ಅಕೌಂಟ್​ನಿಂದ ಈ ಪೋಸ್ಟ್​ ಮಾಡಲಾಗಿದೆ. ಈ ವಿಡಿಯೋವನ್ನು ನಾರ್ತ್​ ಕ್ಯಾಂಪಸ್ ಬಾಯ್ಸ್ ಎನ್ನುವ ಇನ್​ಸ್ಟಾಗ್ರಾಂ ಅಕೌಂಟ್​ನಿಂದ ಪಡೆಯಲಾಗಿದೆ ಎಂದು ಬರೆಯಲಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Horoscope Today 20 February​: ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಫೆಬ್ರವರಿ 20, ಶುಕ್ರವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ,ಉತ್ತರಾಯಣ, ಉತ್ತರಾಯಣ, ಪಾಲ್ಗುಣ ಮಾಸ, ಶಿಶಿರ ಋತು, ಶುಕ್ಲ ಪಕ್ಷದ ತದಿಗೆ, ಉತ್ತರ ಭಾದ್ರ ನಕ್ಷತ್ರ, ಸಾಧ್ಯ ಯೋಗ ಮತ್ತು ಗರಜೆ ಕರಣ ಇರತಕ್ಕಂತಹ ಈ ದಿನದಂದು ರಾಹುಕಾಲವು ಬೆಳಗ್ಗೆ 11:04 ರಿಂದ ಮಧ್ಯಾಹ್ನ 12:32 ರ ತನಕ ಇರುತ್ತದೆ. ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ ಮತ್ತು ಶುಭಕಾಲವು ಮಧ್ಯಾಹ್ನ 1:35 ರಿಂದ 2:53 ರ ತನಕವಿದೆ. ಇದು ಮಹಾಲಕ್ಷ್ಮಿಯ ಅನುಗ್ರಹವನ್ನು ಪಡೆಯಲು ಶುಭಕರವಾದ ಶುಕ್ರವಾರವಾಗಿದೆ.

ಈ ದಿನದಂದು ಹೊರನಾಡು ಅನ್ನಪೂರ್ಣೇಶ್ವರಿ ರಥೋತ್ಸವ, ವಿಶ್ವ ಸಾಮಾಜಿಕ ನ್ಯಾಯದ ದಿನ, ಹಾಗೂ ಪಾಂಡವಪುರ, ಚಿನಕುರುಳಿ ಸಿದ್ದಲಿಂಗೇಶ್ವರ ಸ್ವಾಮಿಗಳ ರಥೋತ್ಸವವೂ ನಡೆಯಲಿದೆ. ರವಿ ಕುಂಭ ರಾಶಿಯಲ್ಲಿ ಮತ್ತು ಚಂದ್ರ ಮೀನ ರಾಶಿಯಲ್ಲಿ ಸಂಚಾರ ಮಾಡಲಿದ್ದಾರೆ ಎಂದು ಬಸವರಾಜ್ ಗುರೂಜಿ ಹೇಳಿದ್ದಾರೆ.

 

Source link

ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು; ಕರ್ನಾಟಕವೇ ನಂಬರ್​​ 1 – Kannada News | Indian Hotel Industry Exposed: 70,000 Crore Tax Evasion Uncovered in IT Raids

ಬೆಂಗಳೂರು, ಫೆಬ್ರವರಿ 20: ದೇಶಾದ್ಯಂತ ಹೋಟೆಲ್ ಉದ್ಯಮದಿಂದ ಬರೋಬ್ಬರಿ 70 ಸಾವಿರ ಕೋಟಿ ರೂಪಾಯಿಗಳ ಭಾರಿ ತೆರಿಗೆ ವಂಚನೆ ಬಹಿರಂಗವಾಗಿದೆ. ಆದಾಯ ತೆರಿಗೆ (ಐಟಿ) ಇಲಾಖೆ ನಡೆಸಿದ ದಾಳಿಗಳಲ್ಲಿ ಈ ಬೃಹತ್ ಅಕ್ರಮ ವಹಿವಾಟು ಪತ್ತೆಯಾಗಿದೆ. ಹೋಟೆಲ್ ಮಾಲೀಕರು 2019ರಿಂದ 2026ರವರೆಗಿನ ಬಿಲ್ಲಿಂಗ್ ಡೇಟಾದಲ್ಲಿ ಗ್ರಾಹಕರಿಂದ ಪಡೆದ ಹಣದ ವಿವರಗಳನ್ನು ಅಳಿಸಿಹಾಕಿ, ಕಡಿಮೆ ಆದಾಯವನ್ನು ತೋರಿಸುವ ಮೂಲಕ ತೆರಿಗೆ ತಪ್ಪಿಸುತ್ತಿದ್ದರು. ಐಟಿ ಅಧಿಕಾರಿಗಳು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮತ್ತು ಫೋರೆನ್ಸಿಕ್ ತಪಾಸಣೆಯ ಮೂಲಕ ಈ ವಂಚನೆಯನ್ನು ಪತ್ತೆಹಚ್ಚಿದ್ದಾರೆ. ಹೈದರಾಬಾದ್‌ನ ಐಟಿ ಡಿಜಿಟಲ್ ಲ್ಯಾಬ್‌ನಲ್ಲಿ ನಡೆಸಿದ ತಪಾಸಣೆಯಿಂದ ಈ ಸ್ಫೋಟಕ ಮಾಹಿತಿ ಬಯಲಾಗಿದೆ. ತೆರಿಗೆ ವಂಚನೆ ಪಟ್ಟಿಯಲ್ಲಿ ಕರ್ನಾಟಕ ರಾಜ್ಯ ಮೊದಲ ಸ್ಥಾನದಲ್ಲಿದ್ದು, 2,000 ಕೋಟಿಗೂ ಹೆಚ್ಚು ಮೌಲ್ಯದ ಡೇಟಾ ಇಲ್ಲಿ ಡಿಲೀಟ್ ಮಾಡಲಾಗಿದೆ. ತೆಲಂಗಾಣದಲ್ಲಿ 1,500 ಕೋಟಿ ರೂ. ಮತ್ತು ತಮಿಳುನಾಡಿನಲ್ಲಿ 1,200 ಕೋಟಿ ರೂ. ಮೌಲ್ಯದ ಡೇಟಾ ಅಳಿಸಲಾಗಿದೆ. ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲೂ ಭಾರಿ ವಂಚನೆ ನಡೆದಿದೆ. ದೇಶದ ಒಂದು ಲಕ್ಷಕ್ಕೂ ಹೆಚ್ಚು ಹೋಟೆಲ್‌ಗಳಲ್ಲಿ ಈ ರೀತಿಯ ಬಿಲ್ಲಿಂಗ್ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಊಟ ಸರಿ ಇಲ್ದಿದ್ಮೇಲೂ ಹೋಟೆಲ್​​ಗೆ ಏಕೆ ಬರ್ಬೇಕು?’; ರವಿಚಂದ್ರನ್ ಹೇಳಿಕೆ ಪ್ರಶ್ನೆ ಮಾಡಿದ ನೆಟ್ಟಿಗರು – Kannada News | Ravichandran’s Cinema Support Call Sparks Netizen Debate on Kannada Film Quality

ನಟ, ನಿರ್ಮಾಪಕ ರವಿಚಂದ್ರನ (Ravichandran) ಅವರು ಚಿತ್ರರಂಗದ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ. ಚಿತ್ರರಂಗ ಮೇಲಕ್ಕೆ ಬರಬೇಕು ಎಂಬುದು ಅವರ ಆಸೆ. ಈ ಕಾರಣಕ್ಕೆ ಇತ್ತೀಚೆಗೆ ಅವರು ಮಾತನಾಡಿದ್ದರು. 100 ರೂಪಾಯಿ ಕೊಟ್ಟು ಕನ್ನಡ ಸಿನಿಮಾ ನೋಡಿ ಏನಾಗಲ್ಲಎಂದು ಅವರು ಹೇಳಿದ್ದರು. ಈ ಹೇಳಿಕೆ ಬಗ್ಗೆ ಚರ್ಚೆ ಶುರುವಾಗಿದೆ. ‘ಹೋಟೆಲ್​​ನಲ್ಲಿ ಊಟ ಸರಿ ಇಲ್ಲ ಎಂದು ಗೊತ್ತಿದ್ದ ಮೇಲೂ ಜನರು ಏಕೆ ಅಲ್ಲಿಗೆ ಹೋಗಬೇಕು’ ಎಂಬ ಪ್ರಶ್ನೆಯನ್ನು ಕೆಲವರು ಎತ್ತಿದ್ದಾರೆ.

ಸತೀಶ್ ನೀನಾಸಂ ನಟನೆಯ ‘ದಿ ರೈಸ್ ಆಫ್ ಅಶೋಕ’ ಸಿನಿಮಾದ ಟ್ರೇಲರ್ ಲಾಂಚ್ ಈವೆಂಟ್ ಇತ್ತೀಚೆಗೆ ನಡೆದಿದೆ. ಇದರಲ್ಲಿ ಮಾತನಾಡಿದ ರವಿಚಂದ್ರನ್ ಅವರು, ‘ಜನರು ಹೆಚ್ಚೆಚ್ಚು ಥಿಯೇಟರ್​​ಗೆ ಹೋಗಬೇಕು. 100 ರೂಪಾಯಿ ಕೊಟ್ಟು ಸಿನಿಮಾ ನೋಡಲ್ವಾ? ಸಿನಿಮಾ ಚೆನ್ನಾಗಿಲ್ಲ ಎಂದರೂ 100 ರೂಪಾಯಿ ಕಳೆಯಿರಿ ತೊಂದರೆ ಇಲ್ಲ. ಒಂದಷ್ಟು ಸಿನಿಮಾ ಗೆಲ್ಲಿಸಿ, ಗಂಟೇನು ಹೋಗಲ್ಲ’ ಎಂದು ಅವರು ಹೇಳಿದ್ದರು.

ರವಿಚಂದ್ರನ್ ಹೇಳಿಕೆ ಬಗ್ಗೆ ಚರ್ಚೆ ಶುರುವಾಗಿದೆ. ಯಾವುದೇ ಥಿಯೇಟರ್​​ನಲ್ಲಿ ಈಗ 100 ರೂಪಾಯಿಗೆ ಸಿನಿಮಾ ಟಿಕೆಟ್ ಸಿಗೋದಿಲ್ಲ. 150-200 ರೂಪಾಯಿ ಟಿಕೆಟ್ ದರ ನಿಗದಿ ಮಾಡಲಾಗುತ್ತಿದೆ. ಕುಟುಂಬ ಇದ್ದಾಗ ಒಬ್ಬನೇ ಸಿನಿಮಾಗೆ ತೆರಳೋಕೆ ಸಾಧ್ಯವಿಲ್ಲ. ಇಡೀ ಕುಟುಂಬ ತೆರಳಿತು ಎಂದರೆ ಏನಿಲ್ಲ ಎಂದರೂ ಸಾವಿರ ರೂಪಾಯಿ ಖರ್ಚಾಗುತ್ತದೆ. ಜೊತೆಗೆ ಒಂದಷ್ಟು ಸಮಯ ವ್ಯರ್ಥವಾಗುತ್ತದೆ. ಇಷ್ಟೆಲ್ಲ ಮಾಡಿ ಮನರಂಜನೆ ಸಿಕ್ಕರೆ ಓಕೆ. ಸಿನಿಮಾ ಚೆನ್ನಾಗಿಲ್ಲದೆ, ಮತ್ತಷ್ಟು ಫ್ರಸ್ಟ್ರೇಟ್ ಆದರೆ ಕೊಟ್ಟ ಹಣ ವ್ಯರ್ಥ.

ಇದನ್ನೂ ಓದಿ: ‘ಯಾವನು ಕೇಳಿದ ನಿಮ್ಮ ಕಮೆಂಟ್?’; ರವಿಚಂದ್ರನ್ ಗರಂ ಆಗಿದ್ದು ಯಾರ ಬಗ್ಗೆ?

ಇನ್ನು, ಕನ್ನಡದಲ್ಲಿ ವರ್ಷಕ್ಕೆ 200 ಸಿನಿಮಾಗಳು ಬರುತ್ತವೆ. 200 ಚಿತ್ರಗಳ ಪೈಕಿ 100 ಸಿನಿಮಾ ಗೆಲ್ಲಿಸ್ತೀನಿ ಎಂದು ಹೋದರು, 1 ಲಕ್ಷ ರೂಪಾಯಿ ಅದಕ್ಕೆ ಖರ್ಚಾಗುತ್ತದೆ. ಮಧ್ಯಮ ವರ್ಗದವರ ದುಡಿಮೆಯೇ ಕಡಿಮೆ. ಹೀಗಿರುವಾಗ ಒಂದು ಲಕ್ಷ ರೂಪಾಯಿ ಹಣವನ್ನು ಸಿನಿಮಾಗೆ ಸುರಿಯೋಕೆ ಸಾಧ್ಯವೇ ಎಂಬುದು ಜನಸಾಮಾನ್ಯರ ಪ್ರಶ್ನೆ. ಬರುವ ಬಹುತೇಕ ಸಿನಿಮಾಗಳ ಕಥೆ, ನಿರೂಪಣೆ, ನಿರ್ದೇಶನ ಚೆನ್ನಾಗಿರೋದಿಲ್ಲ. ಎಲ್ಲೋ ಅಲ್ಲೋ, ಇಲ್ಲೋ ಒಂದು ಒಳ್ಳೆಯ ಸಿನಿಮಾ ಬಂದಾಗ ಜನರು ಅದನ್ನು ಗೆಲ್ಲಿಸಿದ್ದಾರೆ. ‘ಸು ಫ್ರಮ್ ಸೋ’, ‘ಶಾಖಾಹಾರಿ’ ಸಿನಿಮಾಗಳು ಇದಕ್ಕೆ ಉತ್ತಮ ಉದಾಹರಣೆ.

‘ಹೋಟೆಲಿನಲ್ಲಿ ಊಟ ಚೆನ್ನಾಗಿಲ್ಲ, ಹೋಟೆಲ್ ಮಾಲೀಕರ ಧೋರಣೆ ಸರಿಯಿಲ್ಲ ಎಂದರೆ ಎಷ್ಟೇ ಹೊಟ್ಟೆ ಹಸಿಸಿದಿದ್ದರೂ ಜನ ಅಲ್ಲಿಗೆ ಹೋಗುವುದಿಲ್ಲ. ನಮ್ಮ ಅಡುಗೆ ಇರುವುದೇ ಹೀಗೆ ಸುಮ್ಮನೆ ಬಂದು ತಿಂದು ನಮ್ಮನ್ನು ಬೆಂಬಲಿಸಿ ಅಂದರೆ ಯಾರು ತಾನೇ ಬೆಂಬಲಿಸಲು ಸಾಧ್ಯ’ ಎಂದು ಅಮರನಾಥ್ ಶಿವಶಂಕರ್ ಎಂಬುವವರು ಪ್ರಶ್ನೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಶಿವಾಜಿ ಭಾವಚಿತ್ರ ಮೆರವಣಿಗೆ ವೇಳೆ ಕಲ್ಲು, ಚಪ್ಪಲಿ ತೂರಾಟ: ಬಾಗಲಕೋಟೆ ಉದ್ವಿಗ್ನ – Kannada News | Bagalkote Stone Pelting: Shivaji Procession Attack Spurs Tension, Curfew Imposed

ಶಿವಾಜಿ ಭಾವಚಿತ್ರ ಮೆರವಣಿಗೆ ವೇಳೆ ಕಲ್ಲು, ಚಪ್ಪಲಿ ತೂರಾಟImage Credit source: Tv9 Kannada

ಬಾಗಲಕೋಟೆ, ಫೆಬ್ರವರಿ 20: ಶಿವಾಜಿ ಭಾವಚಿತ್ರ ಮೆರವಣಿಗೆ ವೇಳೆ ದುಷ್ಕರ್ಮಿಗಳು ಕಲ್ಲು, ಚಪ್ಪಲಿ ತೂರಾಟ ನಡೆಸಿರುವ ಘಟನೆ ಬಾಗಲಕೋಟೆಯ ಕಿಲ್ಲಾ ಓಣಿಯಲ್ಲಿ ನಡೆದಿದೆ. ಘಟನೆಯಲ್ಲಿ ಪೊಲೀಸ್​​ ಸಿಬ್ಬಂದಿ ಸೇರಿ ಓರ್ವ ಸಾರ್ವಜನಿಕರಿಗೆ ಗಾಯವಾಗಿರುವ ಮಾಹಿತಿ ಇದ್ದು, ಕಲ್ಲು ತೂರಾಟ ಹಿನ್ನೆಲೆ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಘಟನೆ ನಡೆದ ಮರು ಕ್ಷಣವೇ ಜನರನ್ನು ಚದುರಿಸಿ ಪೊಲೀಸರು ಪರಿಸ್ಥಿತಿ ತಿಳಿಗೊಳಿಸುವ ಯತ್ನ ಮಾಡಿದ್ದು, ಮುಂಜಾಗೃತಾ ಕ್ರಮವಾಗಿ ಪಂಕಾ ಮಸೀದಿ ಮತ್ತು ಕೊತ್ತಲೇಶ್ವರ ದೇಗುಲ ಬಳಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಯಾವುದೇ ಅನಾಹುತ ನಡೆಯದಂತೆ ನೋಡಿಕೊಳ್ಳಲು ಪೊಲೀಸ್​​ ಸಿಬ್ಬಂದಿ ಸ್ಥಳದಲ್ಲಿಯೇ ಬೀಡುಬಿಟ್ಟಿದ್ದಾರೆ.

ಕಲ್ಲು ತೂರಾಟದ ಹಿನ್ನೆಲೆ ಹಿಂದೂ ಕಾರ್ಯಕರ್ತ ಪ್ರಕಾಶ್ ಅರಕೇರಿ ಎಂಬುವರ ತಲೆಗೆ ಗಾಯವಾಗಿದ್ದು, ಅವರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಬಗ್ಗೆ ಟಿವಿ9ಗೆ ಪ್ರತಿಕ್ರಿಯಿಸಿರುವ ಬಾಗಲಕೋಟೆ ಎಸ್ಪಿ ಸಿದ್ಧಾರ್ಥ್,​​ ಶಿವಾಜಿ ಜಯಂತಿ ಮೆರವಣಿಗೆ ಮಸೀದಿ ಬಳಿ ಬಂದಾಗ ಎರಡು ಕಲ್ಲು ಬಂದು ಬಿದ್ದಿವೆ. ಸದ್ಯ ಪರಿಸ್ಥಿತಿ ತಿಳಿಯಾಗಿದ್ದು, ನಾವು ವಿಡಿಯೋಗಳನ್ನು ಪರಿಶೀಲನೆ ಮಾಡುತ್ತಿದ್ದೇವೆ. ಬಾಗಲಕೋಟೆಯಲ್ಲಿ ಹೆಚ್ಚಿನ ಭದ್ರತೆ ‌ಕಲ್ಪಿಸಲಾಗಿದ್ದು,ಆರೋಪಿಗಳನ್ನ ಬಂಧಿಸಲಾಗುತ್ತದೆ. ಸದ್ಯಕ್ಕೆ ನಗರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಆಕಸ್ಮಿಕವಾಗಿ ಕಾರಂಜಾ ಡ್ಯಾಂನ ಕಾಲುವೆಗೆ ಬಿದ್ದು ತಂದೆ-ಮಗ ಸಾವು

ತಳ್ಳು ಗಾಡಿಗಳಿಗೆ ಬೆಂಕಿ

ಕಲ್ಲು ತೂರಾಟದ ವೇಳೆ ತರಕಾರಿ ಮಾರುಕಟ್ಟೆಯ ಮೂರು ತಳ್ಳುಗಾಡಿಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆಯೂ ನಡೆದಿದೆ. ಎಚ್ಚೆತ್ತ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ, ಕೂಡಲೇ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿರುವ ವ್ಯಾಪಾರಿ ಜನ್ನತಬಿ ದೊಡ್ಡಮನಿ ಎಂಬ ಮಹಿಳೆ, ನಮ್ಮ ತಳ್ಳುಗಾಡಿ ಸುಟ್ಟಿದ್ದಾರೆ. ಅದರಲ್ಲಿ ಚಿಲ್ಲರೆ ಹಣ ಇದ್ವು,ತಕ್ಕಡಿ ಇದ್ದವು‌ ಎಲ್ಲ ಸುಟ್ಟಿವೆ. ಹೀಗೆ ಮಾಡಿದರೆ ಹೇಗೆ‌ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬಾಗಲಕೋಟೆ ಬಂದ್​​ ಎಚ್ಚರಿಕೆ

ಇನ್ನು ಘಟನೆ ಖಂಡಿಸಿ ಯುವಕರು ರಸ್ತೆಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದು, ಕಲ್ಲೆಸೆದವರ ಬಂಧಿಸಬೇಕು ಮತ್ತು ಐಜಿಪಿ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದ ಪ್ರಸಂಗ ನಡೆದಿದೆ. ಯುವಕರನ್ನು ಮನವೊಲಿಸಿ ಪೊಲೀಸರು ಕಳುಹಿಸಿದ್ದರೂ ಆರೋಪಿಗಳನ್ನು ಅರೆಸ್ಟ್​​ ಮಾಡಿದಿದ್ದಲ್ಲಿ ಬಾಗಲಕೋಟೆ ಬಂದ್​​ಗೆ ಕರೆ ನೀಡುತ್ತೇವೆ ಎಂದು ಹಿಂದೂ ಕಾರ್ಯಕರ್ತರು ಎಚ್ಚರಿಸಿದ್ದಾರೆ.

ನಿಷೇಧಾಜ್ಞೆ ಜಾರಿ

ಕಲ್ಲು, ಚಪ್ಪಲಿ ತೂರಾಟ ಹಿನ್ನೆಲೆ ನಿನ್ನೆ ಮಧ್ಯರಾತ್ರಿಯಿಂದ ಇಂದು ಮಧ್ಯರಾತ್ರಿವರೆಗೆ ಹಳೆ ಬಾಗಲಕೋಟೆ, ನವನಗರ, ವಿದ್ಯಾಗಿರಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಬಾಗಲಕೋಟೆ ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ್ ಈ ಬಗ್ಗೆ ಆದೇಶಿಸಿದ್ದು, ಸಾರ್ವಜನಿಕ ಸ್ಥಳದಲ್ಲಿ 4 ಕ್ಕಿಂತ ಹೆಚ್ಚು ಜನ ಸೇರಿ‌ ತಿರುಗಾಡುವಂತಿಲ್ಲ.ಅಪಾಯಕಾರಿ ಶಸ್ತ್ರಾಸ್ತ್ರ ಹಿಡಿದು ಓಡಾಡುವುದು, ಸುರಕ್ಷತೆಗೆ ಧಕ್ಕೆ ತರುವಂತ ಯಾವುದೇ ಚಟುವಟಿಕೆ ಮತ್ತು ಅನುಮತಿ ಇಲ್ಲದೆ ಯಾವುದೇ ಸಭೆ ಸಮಾರಂಭ ನಡೆಸುವುದು, ಧರಣಿ ನಡೆಸುವುದನ್ನು ನಿಷೇಧಿಸಲಾಗಿರೋದಾಗಿ ಆದೇಶದಲ್ಲಿ ತಿಳಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ತನ್ನವರಿಂದಲೇ ದುಃಖ ಪಡೆಯಬೇಕಾಗುವುದು – Kannada News | Horoscope 20 Friday 2026; Dina Rashi Bhavishya Today, Checkout the details here

ಮೇಷ ರಾಶಿ:

ಒಂದೇ ಕೆಲಸವನ್ನು ನಿರಂತರ ಮಾಡಿ ಶಿಸ್ತನ್ನು ರೂಢಿಸಿಕೊಳ್ಳುವಿರಿ. ದೊಡ್ಡ ಕನಸನ್ನು ಇಟ್ಟುಕೊಳ್ಳುವುದು ಸೂಕ್ತವಾಗಬಹುದು. ಧಾರ್ಮಿಕ ಕಾರ್ಯದಲ್ಲಿ ಶ್ರದ್ಧೆ ಇರುವುದು. ಆಹಾರದಿಂದ ಆರೋಗ್ಯ ಕೆಡುವುದು. ನಿಮಗೆ ಬೇಕಾದ ವಸ್ತುವೇ ಆದರೂ ಯಾರು ಕೇಳಿದರೂ ಕೊಡುವಿರಿ. ದೂರದ ಬಂಧುವಿನ ಭೇಟಿಯಾಗಿ ಪರಿಚಯ ಮಾಡಿಕೊಳ್ಳುವಿರಿ. ಸಂಗಾತಿಯ ಮಾತನ್ನು ನಿರ್ಲಕ್ಷಿಸಿದ್ದು ಬೇಸರಕ್ಕೆ ಕಾರಣವಾಗಬಹುದು.

ವೃಷಭ ರಾಶಿ:

ಪ್ರೀತಿಯ ವಿಷಯದಲ್ಲಿ ಪರಿಚಿತರ ಜೊತೆ ಚರ್ಚಿಸುವಿರಿ. ರಾಜಕೀಯ ವ್ಯಕ್ತಿಗಳಿಂದ ನಿಮಗೆ ಸ್ವಲ್ಪಮಟ್ಟಿನ ಲಾಭವಾಗುವುದು. ನಿತ್ಯಕರ್ಮದಲ್ಲಿ ವ್ಯತ್ಯಾಸವಾದ ಕಾರಣ ಎಲ್ಲವೂ ವೇಗವಾಗಿ ಮಾಡಬೇಕಾದೀತು. ಕೆಲವು ವಿಚಾರಗಳನ್ನು ನಿರ್ಲಕ್ಷ್ಯಿಸದಿದ್ದರೆ ದೊಡ್ಡದಾಗಬಹುದು. ಇನ್ನೊಬ್ಬರ ವಸ್ತುವನ್ನು ನೀವು ಇಟ್ಟುಕೊಳ್ಳಲಿದ್ದೀರಿ. ವಿದೇಶದಲ್ಲಿ ಇರುವವರಿಗೆ ಆರೋಗ್ಯವು ಕೆಡಬಹುದು. ವ್ಯಾಪಾರಸ್ಥರು ಲಾಭವನ್ನು ಗಳಿಸುವತ್ತ ಯೋಜನೆ ರೂಪಿಸಿಕೊಳ್ಳುವುದು.

ಮಿಥುನ ರಾಶಿ:

ಪರರ ಸ್ವತ್ತನ್ನು ಯಾವುದಾದರೂ ರೀತಿಯಲ್ಲಿ ಪಡೆಯುವ ಯೋಚನೆ ಬರಬಹುದು. ಕಾರ್ಯದ ನಿರುತ್ಸಾಹವನ್ನು ನಿಮ್ಮದೇ ಆದ ವಿಧಾನದಿಂದ ಸರಿ ಮಾಡಿಕೊಳ್ಳುವಿರಿ. ಇಂದಿನ ಕನಸು ನಿಮಗೆ ಭೀತಿಯನ್ನು ತಂದೀತು. ಕಳೆದುಕೊಂಡ ಸಂಬಂಧವನ್ನು ಮತ್ತೆ ಕೂಡಿಸಿಕೊಳ್ಳಲು ಪ್ರಯತ್ನಶೀಲರಾಗುವಿರಿ. ಹೂಡಿಕೆಯನ್ನು ಮಾಡಲು ಎಲ್ಲರಿಂದ ಮಾಹಿತಿಯನ್ನು ಸಂಗ್ರಹಿಸುವಿರಿ. ಭವಿಷ್ಯದ ಬಗ್ಗೆ ಏನೇನೋ ಕಲ್ಪನೆಯನ್ನು ಇಟ್ಟುಕೊಂಡು ಹತಾಶೆ.

ಕರ್ಕಾಟಕ ರಾಶಿ:

ನಿಮ್ಮ ಬಗ್ಗೆ ನೀವೇ ಪ್ರಶಂಸೆ ಮಾಡಿಕೊಳ್ಳುವಿರಿ. ಹೊಸ ಯೋಜನೆಗಳು ನಿಮ್ಮ ತಲೆಯಲ್ಲಿ ಓಡುತ್ತಿದ್ದು ಅದನ್ನು ಕಾರ್ಯರೂಪಕ್ಕೆ ತರಲು ನೋಡುವಿರಿ. ನಿಮ್ಮ ವೈಯಕ್ತಿಕ ಕಾರ್ಯದಲ್ಲಿ ಹೆಚ್ಚು ತೊಡಗಿಕೊಳ್ಳುವಿರಿ. ನೀವು ನಿರೀಕ್ಷಿಸಿದ ಹಣವು ಬಾರದೇ ಹೋಗಬಹುದು. ಪೂರ್ಣಪ್ರಮಾಣದ ಕೃಷಿಯಲ್ಲಿ ತೊಡಗುವ ಆಸಕ್ತಿ ಉಂಟಾಗಬಹುದು. ರಮಣೀಯ ಸ್ಥಳಕ್ಕೆ ಸಂಗಾತಿಯ ಜೊತೆ ಹೋಗಲಿದ್ದೀರಿ. ಒಂದೇ ರೀತಿ ಜೀವನ ಶೈಲಿಯಿಂದ ಆಚೆ ಬರುವುದು ನಿಮಗೆ ಮುಖ್ಯವಾದೀತು.

ಸಿಂಹ ರಾಶಿ:

ತಿಳಿವಳಿಕೆ ಇಲ್ಲದೇ ಮಾತನಾಡಿ ಅಪಹಾಸ್ಯಕ್ಕೆ ಸಿಲುಕುವಿರಿ. ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಭಾವಿಸಿ ಸುಮ್ಮನಿರುವುದು ಉತ್ತಮ. ಸಂಗಾತಿಯು ಸಾಲವನ್ನು ಮಾಡಲು ಪ್ರಚೋದನೆ ಕೊಡಬಹುದು. ಕತ್ತಲೆಯಲ್ಲಿ ಗುದ್ದಾಟ ಮಾಡಿ ಆಯಾಸ ಮಾಡಿಕೊಳ್ಳುವಿರಿ. ನಿಮ್ಮ ಬಗ್ಗೆ ಇರುವ ಕಾಳಜಿಗೆ ನೀವು ಮನಸೋಲುವಿರಿ. ಮನೆಯ ಕೆಲಸಲ್ಲಿ ಸಮಯವು ಹೋಗಿದ್ದೇ ಗೊತ್ತಾಗದು. ಇಂದಿನ ಕಾರ್ಯ ಬೆಟ್ಟವನ್ನು ಬಗೆದು ಇಲಿಯ ತನ್ನ ಹಿಡಿದಂತೆ ಆಗಬಹುದು.

ಕನ್ಯಾ ರಾಶಿ:

ವೃತ್ತಿಯಲ್ಲಿ ಅನಿರೀಕ್ಷಿತ ಒತ್ತಡಗಳು ಬರಲಿದ್ದು ಇಂದಿನ ಕಾರ್ಯವನ್ನು ಹಾಳುಮಡುವುದು. ಸ್ತ್ರೀಯರು ಕೆಲವರ ಬಗ್ಗೆ ಇರುವ ಪೂರ್ವಾಗ್ರಹವನ್ನು ಕಳೆದುಕೊಳ್ಳುವರು. ಸಪಕ್ವವಾದ ಮನಸ್ಸಿಗೆ ಏನು ಹೇಳಿದರೂ ಪ್ರಯೋಜನವಾಗದು. ಪ್ರೀತಿಯು ನಿಮಗಾಗದವರ ಮೂಲಕ ಎಲ್ಲರಿಗೂ ತಿಳಿಯುವುದು. ಇಂದು ನೀವು ನಂಬಿದ ಅದೃಷ್ಟವು ಕೈ ಕೊಡಬಹುದು. ಕೃಷಿಕರ ವಸ್ತುಗಳು ಕಾಣೆಯಾಗಬಹುದು. ನಿಮಗೆ ಸಿಗಬೇಕಾದ ಹಣವು ಸಿಗದೇ ಇರುವುದರಿಂದ ಬೇಸರ ಬೇಡ.

ತುಲಾ ರಾಶಿ:

ಅಂಗಳವನ್ನೇ ಹಾರಲಾರದವನು ಆಕಾಶವನ್ನು ಹಾರಿಯಾನು ಎಂದು ನಿಮ್ಮನ್ನು ಲೇವಡಿ ಮಾಡಬಹುದು. ಎಷ್ಟೇ ಸೌಕರ್ಯವಿದ್ದರೂ ಇನ್ನಷ್ಟು ಬೇಕೆನಿಸಬಹುದು. ಅತಿಥಿಗಳ ಆಗಮನದಿಂದ ನಿಮ್ಮ ಯೋಜನೆಗಳು ಅಸ್ತವ್ಯಸ್ತ. ಕಠೋರ ಮಾತುಗಳು ನಿಮ್ಮರಿಗೆ ಇಷ್ಟವಾಗದು. ನಿಮ್ಮ ಬಗ್ಗೆ ಸಲ್ಲದ್ದನ್ನು ಹೇಳಬಹುದು. ಇದು ನಿಮಗೆ ಸಾಧನೆಗೆ ಪ್ರೇರಣೆಯೂ ಆಗಬಹುದು. ಹತ್ತಾರೂ ಆಲೋಚನೆಗಳು ಒಂದಾದಮೇಲೆ ಒಂದರಂತೆ ಬಂದು ನಿಮ್ಮ ದಿನಚರಿಯನ್ನು ಹಾಳು ಮಾಡಬಹುದು.

ವೃಶ್ಚಿಕ ರಾಶಿ:

ಯಾವುದನ್ನೂ ವ್ಯರ್ಥ ಎಂದು ಭಾವಿಸದೇ ಸಕಾರಾತ್ಮಕವಾಗಿ ಇರಿ. ಏಕಕಾಲದಲ್ಲಿ ಅನೇಕ ವಿಚಾರಗಳ ಚಿಂತನೆಯನ್ನು ನಡೆಸುವಿರಿ. ಸಂಬಂಧಗಳನ್ನು ಬೆಳೆಸಿಕೊಳ್ಳುವ ಇಚ್ಛೆ ಇದ್ದರೂ ಮುನ್ನುಗ್ಗಲು ಮನಸ್ಸು ಇರದು. ಸಾಲದಿಂದ ಮುಕ್ತನಾಗಲು ನೀವು ಮಾಡುವ ಕಾರ್ಯ ವಿಫಲವಾಗುಬುದು. ಭೂಮಿಯ ಬಗ್ಗೆ ಆಸಕ್ತಿಯು ಕಡಿಮೆಯಾಗಲಿದೆ. ಕಛೇರಿಯಲ್ಲಿ ನಿಮ್ಮದಾದ ಅಸ್ತಿತ್ವವನ್ನು ಹೆಚ್ಚಿಸಿಕೊಳ್ಳುವಿರಿ. ಕೆಲವು ಸಂದರ್ಭಗಳು ನಿಮ್ಮ ಪರೀಕ್ಷೆಗಾಗಿ ಬರಲಿದ್ದು ಅದನ್ನು ಎದುರಿಸುವುದು ನಿಮ್ಮ ಮೇಲಿದೆ.

ಧನು ರಾಶಿ:

ನಿಮ್ಮ ಎಲ್ಲಾ ಶ್ರಮದಾಯಕ ಯೋಜನೆ ಮತ್ತು ಸಂಘಟನೆಯು ಅಂತಿಮವಾಗಿ ಫಲವನ್ನು ನೀಡಲಿದೆ. ದೈಹಿಕ ಕ್ರೀಡೆ ಹಾಗೂ ಚಟುವಟಿಕೆಗಳಲ್ಲಿ ಜಯ. ವಿಶೇಷವಾಗಿ ಇಂದು ನಿಮ್ಮ ಸಂಗಾತಿಯೊಂದಿಗೆ ಸ್ವಲ್ಪ ಸಮಯ ಕಳೆಯಿರಿ. ಒಬ್ಬರಾದರೂ ತಾಳ್ಮೆಯಿಂದ ಇರಬೇಕಾದೀತು. ಅನ್ಯರು ನೆನಪಿಟ್ಟುಕೊಳ್ಳುವ ಯಾವುದಾದರೂ ಕಾರ್ಯವನ್ನು ಮಾಡುವಿರಿ. ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎನ್ನುವಂತೆ ನಿಮ್ಮ ಬಹಳ ದಿನದ ಕೂಡಿಟ್ಟ ಹಣವು ಕ್ಷಣಾರ್ಧದಲ್ಲಿ ಖಾಲಿಯಾಗಲಿದ್ದು ನಿಮಗೆ ಬೇಸರ ತರಿಸೀತು.

ಮಕರ ರಾಶಿ:

ವೃತ್ತಿ ಜೀವನದಲ್ಲಿ ಗೌರವವನ್ನು ಮತ್ತು ಇರುವುದಕ್ಕಿಂತ ಹೆಚ್ಚಿನ ಸ್ಥಾನವನ್ನು ಪಡೆಯಬೇಕು ಎನಿಸುವುದು. ಅನಗತ್ಯ ಖರ್ಚಿಗೆ ಇಂದು ಹಲವು ಹಾದಿಗಳು ನಿಮ್ಮ ಕಣ್ಣಿಗೆ ಬೀಳಬಹುದು. ಆರ್ಥಿಕ ವ್ಯವಸ್ಥೆಯು ಎತ್ತು ಏರಿಗೆ ಕೋಣ ನೀರಿಗೆ ಎನ್ನುವ ಸ್ಥಿತಿಯು ಬರಬಹುದು. ಗೃಹನಿರ್ಮಾಣವು ನಿಮಗೆ ಅನಿವಾರ್ಯವಾದೀತು. ಬಾಡಿಗೆ ಮನೆಯ ಕಿರಿಕಿರಿಯು ನಿಮಗೆ ಸಾಕಾಗಿ ಹೋಗುವುದು. ಮುನ್ನೋಟ ಸರಿಯಾಗಿದ್ದರೆ ಎಲ್ಲವೂ ನಿಮಗೆ ಜೊತೆಗಾವುದು.

ಕುಂಭ ರಾಶಿ:

ಪರಿಚಿತರ ನಡುವೆ ಆದ ಕಲಹವು ವಿಪರೀತಕ್ಕೆ ಹೋಗುವುದು. ನಿಮ್ಮ ಸುತ್ತಲಿನ ಜನರು ತಮ್ಮದೇ ಮಿತಿಯಲ್ಲಿ ಇರುವರು. ಅದಕ್ಕಾಗಿ ಅವರ ಜೊತೆ ಮನಸೋ ಇಚ್ಛೆ ವರ್ತಿಸುವುದು ಬೇಡ. ಅವರಿಗೆ ತಮ್ಮಷ್ಟಕ್ಕೆ ನಿರ್ಧಾರ ಕೈಗೊಳ್ಳುವ ಅವಕಾಶ ನೀಡಿ. ಗ್ರಾಹಕರಿಂದ ಮೆಚ್ಚುಗೆ ಸಿಗಲಿದೆ. ಆಕಸ್ಮಿಕವಾಗಿ ನೀವು ಅಶುಭ ಸಮಾಚಾರವನ್ನು ಕೇಳಬೇಕಾಗುವುದು. ನಿಮ್ಮ ಸುತ್ತಲೂ ನಡೆಯುವುದನ್ನು ಹತ್ತಿರದಿಂದ ಗಮನಿಸಿ, ನೀವು ನಿಮ್ಮನ್ನು ಸರಿಯಾಗಿ ಕಂಡುಕೊಳ್ಳಿ.

ಮೀನ ರಾಶಿ:

ಧಾರ್ಮಿಕ ಕಾರ್ಯವನ್ನು ದೊಡ್ಡ ಮಟ್ಟದಲ್ಲಿ ಮಾಡುವ ಯೋಜನೆಯನ್ನು ಅನೇಕರ ಜೊತೆಗೂಡಿ ಚರ್ಚಿಸುವಿರಿ. ನೀವು ಇನ್ನೊಬ್ಬರ ಅಹಂಕಾರವನ್ನು ಹೆಚ್ಚಿಸಲು ಹೋಗುವುದು ಬೇಡ. ಅತ್ಯಂತ ಮುಖ್ಯವೆಂದು ಪರಿಗಣಿಸುವ ವಿಷಯಗಳಲ್ಲಿ ನಿಮ್ಮ ಪ್ರಯತ್ನಗಳನ್ನು ಮುಂದುವರೆಸಿ. ಅಪರಿಚಿತ ಸ್ತ್ರೀಯನ್ನು ಕಂಡು ಮೋಹಗೊಳ್ಳುವಿರಿ. ಇಂದು ನಿಮ್ಮ ಪ್ರಯತ್ನದಲ್ಲಿ ಯಶಸ್ಸು ನಿರೀಕ್ಷಿಸಬಹುದು. ಸಂಗಾತಿಗೆ ಬೇಕಾದ ಸಹಕಾರವನ್ನು ಖುಷಿಯಿಂದ ಮಾಡುವಿರಿ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಫಾಲ್ಗುಣ, ಸೌರ ಮಾಸ : ಕುಂಭ, ಮಹಾನಕ್ಷತ್ರ : ಶತಭಿಷಾ, ವಾರ : ಶುಕ್ರ, ಪಕ್ಷ : ಶುಕ್ಲ, ತಿಥಿ : ತೃತೀಯಾ, ನಿತ್ಯನಕ್ಷತ್ರ : ಉತ್ತರಾಭಾದ್ರ, ಯೋಗ : ಸಾಧ್ಯ, ಕರಣ : ಗರಜ, ಸೂರ್ಯೋದಯ – 06 – 47 am, ಸೂರ್ಯಾಸ್ತ – 06 – 29 pm, ಇಂದಿನ ಶುಭಾಶುಭ ಕಾಲ : ರಾಹು 11:10 – 12:38, ಯಮಗಂಡ ಕಾಲ 15:34 – 17:02, ಗುಳಿಕ ಕಾಲ 08:15 – 09:43

-ಲೋಹಿತ ಹೆಬ್ಬಾರ್ – 8762924271 (what’s app only)

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 20ರ ದಿನಭವಿಷ್ಯ

ನಿಮ್ಮ ಮನೆಯ ಬಳಿ ಇರುವಂಥ ದೇವಿ ದೇವಸ್ಥಾನಕ್ಕೆ ತೆರಳಿ, ಅಲ್ಲಿ ನಿಮ್ಮಿಂದ ಸಾಧ್ಯವಾಗುವಂಥ ಸೇವೆಯನ್ನು ಮಾಡಿಬನ್ನಿ. ಇದರಿಂದ ನಿಮ್ಮ ಮೇಲೆ ಬಂದಂಥ ವೃಥಾ ಆರೋಪಗಳು ದೂರವಾಗುತ್ತವೆ. ಹಾಗೂ ಕೈ ತಪ್ಪಿಹೋಗಬಹುದು ಎಂದುಕೊಂಡಿದ್ದ ಅವಕಾಶಗಳು, ಪ್ರಾಜೆಕ್ಟ್ ಗಳು ದೊರೆಯಲಿವೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ಅತ್ಯಂತ ಕ್ರಿಯಾಶೀಲವಾದ ದಿನ ಇದಾಗಿರುತ್ತದೆ. ಉದ್ಯೋಗಕ್ಕೆ ರಜೆಯ ದಿನವಾಗಿದ್ದರೂ ನಿಮ್ಮ ಮನಸ್ಸು ಮುಂದಿನ ಗುರಿಗಳ ಬಗ್ಗೆ ಯೋಚಿಸುತ್ತಾ ಇರಲಿದೆ. ಕೌಟುಂಬಿಕವಾಗಿ ಸಂಭ್ರಮದ ಸಮಯವನ್ನು ಕಳೆಯಲಿದ್ದೀರಿ. ಮನೆಯ ಹಿರಿಯರೊಂದಿಗೆ ಹಳೆಯ ನೆನಪುಗಳನ್ನು ಮೆಲುಕು ಹಾಕುವಿರಿ. ನಿಮ್ಮ ವ್ಯಕ್ತಿತ್ವದಲ್ಲಿ ಹೊಸ ಆಕರ್ಷಣೆ ಹಾಗೂ ಬದಲಾವಣೆ ಕಂಡುಬರಲಿದ್ದು, ಸಾಮಾಜಿಕವಾಗಿ ನಿಮ್ಮ ಗೌರವ ಹೆಚ್ಚಲಿದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಆರ್ಥಿಕವಾಗಿ ಹಳೆಯ ಹೂಡಿಕೆಗಳಿಂದ ಸಣ್ಣ ಪ್ರಮಾಣದ ಲಾಭ ನಿರೀಕ್ಷೆ ಮಾಡಬಹುದು. ಮನೆಯ ಜವಾಬ್ದಾರಿಗಳನ್ನು ಹಂಚಿಕೊಳ್ಳುವ ಮೂಲಕ ಸಂಗಾತಿಯ ಮನ ಗೆಲ್ಲುವಿರಿ. ಮಕ್ಕಳೊಂದಿಗೆ ಸಮಯ ಕಳೆಯುವುದು ನಿಮಗೆ ಮಾನಸಿಕ ಒತ್ತಡದಿಂದ ಮುಕ್ತಿ ನೀಡಲಿದೆ. ಸಂಬಂಧಗಳ ವಿಚಾರದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರಗಳು ಭವಿಷ್ಯದಲ್ಲಿ ದೊಡ್ಡ ಬದಲಾವಣೆ ತರಲಿವೆ. ಅತಿಯಾದ ಕೆಲಸದ ಒತ್ತಡ ಮೈ ಮೇಲೆ ಹಾಕಿಕೊಳ್ಳಬೇಡಿ, ವಿಶ್ರಾಂತಿಗೂ ಸಮಯವನ್ನು ಮೀಸಲಿಡಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಭಾವನಾತ್ಮಕವಾಗಿ ಸಮತೋಲನದಿಂದ ಕೂಡಿರುವ ದಿನ ಇದಾಗಿರಲಿದೆ. ಮನಸ್ಸು ಶಾಂತವಾಗಿದ್ದು, ಸೃಜನಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಇಷ್ಟಪಡುವಿರಿ. ಮನೆಯಲ್ಲಿ ಶಾಂತಿ ಮತ್ತು ಸೌಹಾರ್ದತೆಯ ವಾತಾವರಣ ಇರುತ್ತದೆ. ನಿಮ್ಮ ಮೃದುವಾದ ಹಾಗೂ ಮನವೊಲಿಸುವ ರೀತಿಯ ಮಾತುಗಳು ಕೌಟುಂಬಿಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಸಹಾಯ ಮಾಡಲಿವೆ. ಸಂಗಾತಿಯಿಂದ ಅನಿರೀಕ್ಷಿತ ಬೆಂಬಲ- ಪ್ರೀತಿ ದೊರೆಯಲಿದೆ.

ಲೇಖನ- ಸ್ವಾತಿ ಎನ್.ಕೆ.

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 20ರ ದಿನಭವಿಷ್ಯ

ಕುಂಕುಮವನ್ನು ನೀರಿಗೆ ಹಾಕಿ, ಅದನ್ನು ಒಂದು ತಟ್ಟೆಯಲ್ಲಿ ಹಾಕಿ, ಅದರಲ್ಲಿ ಒಂದು ನಾಣ್ಯವನ್ನು ಇಟ್ಟುಕೊಂಡು ನೀವು ವಾಸಿಸುವಂಥ ಮನೆಗೆ ಸಂಜೆಯ ಹೊತ್ತಿಗೆ ನಿವಾಳಿಸಿ, ಮನೆಯಿಂದ ಹೊರಗೆ ಹಾಕಿ. ಇದರಿಂದ ಸಾಮರಸ್ಯ ಮೂಡುತ್ತದೆ ಹಾಗೂ ದೃಷ್ಟಿ ದೋಷದ ನಿವಾರಣೆ ಆಗುತ್ತದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಸಮಾಜದಲ್ಲಿ ನಿಮ್ಮ ವ್ಯಕ್ತಿತ್ವಕ್ಕೆ ಮನ್ನಣೆ ಸಿಗಲಿದೆ. ನಿಮ್ಮಲ್ಲಿ ಕೆಲವರಿಗೆ ಗೌರವ- ಸನ್ಮಾನಗಳು ಆಗಬಹುದು. ಸಂಬಂಧಿಕರು ನಿಮ್ಮನ್ನು ಭೇಟಿ ಆಗುವದರಿಂದ ಮನೆಯಲ್ಲಿ ಸಂಭ್ರಮದ ವಾತಾವರಣವಿರುತ್ತದೆ. ಮಕ್ಕಳ ಶಿಕ್ಷಣ ಮತ್ತು ಭವಿಷ್ಯದ ಬಗ್ಗೆ ಮಹತ್ವದ ಯೋಜನೆ ರೂಪಿಸುವಿರಿ. ನಿಮ್ಮ ನೇರ ನಡೆ- ನುಡಿ ಎಲ್ಲರಿಗೂ ಇಷ್ಟವಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ, ದೈಹಿಕ ವ್ಯಾಯಾಮ ಮರೆಯಬೇಡಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಜ್ಞಾನ ವೃದ್ಧಿಯಾಗುವ ದಿನ. ಅಂದರೆ ಈ ದಿನ ಸಮಯವನ್ನು ಸ್ವಲ್ಪವೂ ವ್ಯರ್ಥ ಮಾಡದೆ ಏನಾದರೂ ಹೊಸ ವಿಷಯ ಕಲಿಯಲು ಪ್ರಯತ್ನಿಸುವಿರಿ. ಮನೆಯಲ್ಲಿ ಧಾರ್ಮಿಕ ಅಥವಾ ಆಧ್ಯಾತ್ಮಿಕ ಕಾರ್ಯಕ್ರಮಗಳ ಬಗ್ಗೆ ಚರ್ಚೆ ಆಗಬಹುದು. ಹಿರಿಯರ ಮಾರ್ಗದರ್ಶನದಿಂದ ನಿಮ್ಮ ಜೀವನದ ಗೊಂದಲಗಳು ದೂರವಾಗಲಿವೆ. ಆರ್ಥಿಕವಾಗಿ ಸ್ಥಿತಿ ಸುಧಾರಿಸಲಿದ್ದು, ಸ್ಥಗಿತ ಆಗಿದ್ದ ಹಣಕಾಸಿನ ವ್ಯವಹಾರಗಳು ಚೇತರಿಕೆ ಕಾಣಲಿವೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಪ್ರವಾಸದ ಯೋಜನೆಗಳಿದ್ದರೆ ಅವು ಕಾರ್ಯಗತವಾಗಲಿವೆ. ಹಣಕಾಸಿನ ವಿಚಾರದಲ್ಲಿ ತೃಪ್ತಿದಾಯಕ ವಾತಾವರಣವಿರುತ್ತದೆ. ಕಲೆ ಅಥವಾ ಸಾಹಿತ್ಯದ ಮೇಲೆ ಒಲವು ಹೆಚ್ಚಾಗಲಿದೆ. ಆರೋಗ್ಯದ ದೃಷ್ಟಿಯಿಂದ ಲಘು ಆಹಾರ ಸೇವನೆ ಮಾಡುವುದು ಉತ್ತಮ. ನಿಮ್ಮ ಆಪ್ತ ಸ್ನೇಹಿತರ ಭೇಟಿಯಿಂದ ಮನಸ್ಸಿಗೆ ಹೊಸ ಚೈತನ್ಯ ಸಿಗಲಿದೆ. ಸಣ್ಣಪುಟ್ಟ ಏರುಪೇರಾದಂಥ ವಿಷಯಗಳಿಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ದಿನವನ್ನು ಆನಂದಿಸಿ.

ಲೇಖನ- ಸ್ವಾತಿ ಎನ್.ಕೆ.

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 20ರ ದಿನಭವಿಷ್ಯ

ಐವತ್ತೊಂದು ಬಾರಿ ಓಂ ನಮೋ ನಾರಾಯಣಾಯ ಹಾಗೂ ನೂರಾ ಹದಿನಾರು ಬಾರಿ ಶ್ರೀರಾಮ ಜಯರಾಮ ಜಯ ಜಯ ರಾಮ ಎಂಬುದನ್ನು ಒಂದು ಪುಸ್ತಕದಲ್ಲಿ ಬರೆಯಿರಿ. ಇದರಿಂದ ಯಾರಿಗೆ ಆತ್ಮವಿಶ್ವಾಸ ಕುಂದುತ್ತಾ ಬರುತ್ತಿದೆ, ಅಂಥವರಿಗೆ ಚೇತರಿಕೆ ಕಾಣುತ್ತದೆ. ವ್ಯಾಪಾರ- ವ್ಯವಹಾರದಲ್ಲಿ ಯಶಸ್ಸಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಸಂತೋಷದ ಸುದ್ದಿ ಬರುವುದರಿಂದ ಅಥವಾ ನಿಮ್ಮದೇ ಸ್ವಭಾವದ ಕಾರಣಕ್ಕಾಗಿ ಅತ್ಯಂತ ಲವಲವಿಕೆಯ ದಿನ ಇದಾಗಿರುತ್ತದೆ. ಹಳೆಯ ಸ್ನೇಹಿತರೊಂದಿಗೆ ಮಾತುಕತೆ ನಡೆಸುವಿರಿ ಅಥವಾ ಅವರನ್ನು ಭೇಟಿ ಮಾಡುವಿರಿ. ನಿಮ್ಮ ಹಾಸ್ಯಪ್ರವೃತ್ತಿ ಮನೆಯಲ್ಲಿನ ವಾತಾವರಣವನ್ನು ಹಗುರಗೊಳಿಸಲಿದೆ. ವ್ಯಾಪಾರಸ್ಥರಿಗೆ ಕೆಲವು ಲಾಭದಾಯಕ ವ್ಯವಹಾರಗಳ ಬಗ್ಗೆ ಮಾತುಕತೆ ನಡೆಯುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಆರ್ಥಿಕ ವಿಚಾರದಲ್ಲಿ ಇಂದು ಸ್ವಲ್ಪ ಎಚ್ಚರಿಕೆಯಿಂದ ಇರಿ, ಅನಗತ್ಯ ವೆಚ್ಚಗಳು ಬಜೆಟ್ ಏರುಪೇರು ಮಾಡಬಹುದು. ಇತರರ ವೈಯಕ್ತಿಕ ವಿಚಾರಗಳಲ್ಲಿ ತಲೆಹಾಕಬೇಡಿ, ಅದು ನಿಮ್ಮ ನೆಮ್ಮದಿ ಕೆಡಿಸಬಹುದು. ಹಳೆಯ ಹವ್ಯಾಸಗಳನ್ನು ಪುನರಾರಂಭಿಸಲು ಇದು ಸಕಾಲ. ಸಂಗಾತಿಯೊಂದಿಗೆ ಸಣ್ಣಪುಟ್ಟ ವಾದಗಳು ಬರಬಹುದು, ತಾಳ್ಮೆಯಿಂದ ವರ್ತಿಸಿ. ಹೊಸ ವಸ್ತುಗಳನ್ನು ಖರೀದಿಸುವ ಆಸೆ ಉಂಟಾಗಲಿದೆ. ದಿನದ ಕೊನೆಗೆ ಮಾನಸಿಕ ತೃಪ್ತಿ ಸಿಗುವಂತಹ ಕೆಲಸ ಮಾಡುವಿರಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಹಲವು ಅನಿರೀಕ್ಷಿತ ಘಟನೆಗಳು ಈ ದಿನ ನಡೆಯಲಿವೆ. ಬಿಡುವಾಗಿ ಇರೋಣ ಅಥವಾ ವಿಶ್ರಾಂತಿ ಪಡೆಯೋಣ ಎಂದು ನೀವು ಅಂದುಕೊಂಡರೂ ಹಠಾತ್ ಪ್ರಯಾಣ ಅಥವಾ ಅತಿಥಿಗಳ ಆಗಮನ ಆಗಬಹುದು. ಮನೆಯಲ್ಲಿ ಕೆಲವು ತಾಂತ್ರಿಕ ಬದಲಾವಣೆ ಅಥವಾ ದುರಸ್ತಿ ಕೆಲಸಗಳಲ್ಲಿ ಮಗ್ನರಾಗುವಿರಿ. ನಿಮ್ಮ ಶಿಸ್ತುಬದ್ಧ ಜೀವನಶೈಲಿಯಿಂದ ಕುಟುಂಬದ ಕೆಲಸಗಳನ್ನು ಸುಲಭವಾಗಿ ಮುಗಿಸುವಿರಿ.

ಲೇಖನ- ಸ್ವಾತಿ ಎನ್.ಕೆ.

Source link

ಮಾನಸಿಕ ಒತ್ತಡ, ಆತಂಕ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ? – Kannada News | Govt launches KIRAN, a 24×7 helpline for people to seek mental health counselling

ಇತ್ತೀಚೆಗೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲಿ ಬ್ಯುಸಿನೆಸ್ ಮ್ಯಾನ್, ವಿದ್ಯಾರ್ಥಿಗಳು, ಗೃಹಿಣಿಯರು, ಹೀಗೆ ಹಲವರು ಒಂದಲ್ಲ ಒಂದು ಕಾರಣಕ್ಕೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮನುಷ್ಯನ ಜೀವನದಲ್ಲಿ ದೈಹಿಕ ಆರೋಗ್ಯ ಎಷ್ಟು ಮುಖ್ಯನೋ ಅದಕ್ಕಿಂತ ಹೆಚ್ಚಿನ ಮಹತ್ವ ಮಾನಸಿಕ ಆರೋಗ್ಯಕ್ಕೆ ಇದೆ. ಹೌದು…ಇಂದಿನ ಲೈಫ್​ ಸ್ಟೈಲ್, ಆಫೀಸ್​​ ಒತ್ತಡ, ಕೌಟುಂಬಿಕ ಸಮಸ್ಯೆಗಳು, ಆರ್ಥಿಕ ಸಂಕಷ್ಟಗಳು ಮತ್ತು ಸಾಮಾಜಿಕ ಒತ್ತಡ ಹೀಗೆ ಹಲವು ಆತಂಕ, ಖಿನ್ನತೆ ಮತ್ತು ನಿರಾಸೆಯಂತಹ ಮಾನಸಿಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಇನ್ನು ತಪ್ಪು ಕಲ್ಪನೆಗಳಿಂದ ತಮ್ಮ ಸಮಸ್ಯೆಗಳನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳಲು ಹೆದರುತ್ತಾರೆ. ಹೀಗಾಗಿ ಮಾನಸಿಕ ಒತ್ತಡ, ಆತಂಕ, ಖಿನ್ನತೆ ದೂರ ಮಾಡಲು ಕಿರಣ್ ಇದ್ದಾನೆ. ಏನಿದು ಕಿರಣ್ ಸಹಾಯವಾಣಿ? ಹೇಗೆ ಕರೆ ಮಾಡಿ ತಮ್ಮ ಸಮಸ್ಯೆಗೆ ಮುಕ್ತಿ ಪಡೆದುಕೊಳ್ಳಬಹುದು ಎನ್ನುವ ವಿವರ ಇಲ್ಲಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link