All posts by nagaraj11081993

SIR in Karnataka: ಕರ್ನಾಟಕ ಸೇರಿ 23 ರಾಜ್ಯಗಳಲ್ಲಿ ಏಪ್ರಿಲ್​ನಿಂದ ಎಸ್​ಐಆರ್​ ಆರಂಭ ಸಾಧ್ಯತೆ – Kannada News | SIR in 23 states including Karnataka, Maharashtra may start from April 2026

ನವದೆಹಲಿ, ಫೆಬ್ರವರಿ 19: ಭಾರತೀಯ ಚುನಾವಣಾ ಆಯೋಗವು (ECI) ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹಲವಾರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ (CEO) ಪತ್ರ ಬರೆದಿದ್ದು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಏಪ್ರಿಲ್ 2026ರಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಹೀಗಾಗಿ, SIRಗೆ ಸಂಬಂಧಿಸಿದ ಎಲ್ಲಾ ಸಿದ್ಧತೆಗಳನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಬೇಕೆಂದು ಚುನಾವಣಾ ಸಂಸ್ಥೆ ನಿರ್ದೇಶನ ನೀಡಿದೆ.

ಈ ಕೆಳಗಿನ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ವರ್ಷ ಏಪ್ರಿಲ್ ತಿಂಗಳಿನಿಂದ SIR ಪ್ರಾರಂಭವಾಗುವ ನಿರೀಕ್ಷೆಯಿದೆ. ಅವುಗಳೆಂದರೆ, ಕರ್ನಾಟಕ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಚಂಡೀಗಢ, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ಡಿಯು, ಜಾರ್ಖಂಡ್, ಲಡಾಖ್, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ಉತ್ತರಾಖಂಡ, ನಾಗಾಲ್ಯಾಂಡ್, ದೆಹಲಿ-ಎನ್​ಸಿಆರ್​, ಒಡಿಶಾ, ಪಂಜಾಬ್, ಸಿಕ್ಕಿಂ, ತ್ರಿಪುರ, ತೆಲಂಗಾಣ, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ.

ಇದನ್ನೂ ಓದಿ: ಎಸ್​ಐಆರ್ ಪ್ರಕ್ರಿಯೆಗೆಂದು ನೇಮಕಗೊಂಡಿರುವ ಬಿಎಲ್​ಒಗಳ ಸಾವಿನ ಬಗ್ಗೆ ಸುಪ್ರೀಂ ಕಳವಳ, ರಾಜ್ಯಗಳಿಗೆ ನಿರ್ದೇಶನ

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಚುನಾವಣಾ ಆಯೋಗವು 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR)ನ ಎರಡನೇ ಹಂತವನ್ನು ಕೈಗೊಳ್ಳುವುದಾಗಿ ಘೋಷಿಸಿತ್ತು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಛತ್ತೀಸ್‌ಗಢ, ಗೋವಾ, ಗುಜರಾತ್, ಕೇರಳ, ಲಕ್ಷದ್ವೀಪ, ಮಧ್ಯಪ್ರದೇಶ, ಪುದುಚೇರಿ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಕಳೆದ ವರ್ಷ SIR ನಡೆಸಲಾಗಿತ್ತು.

ಚುನಾವಣಾ ಸಂಸ್ಥೆಯ ಪ್ರಕಾರ, ಕೊನೆಯ SIR ಅನ್ನು 21 ವರ್ಷಗಳ ಹಿಂದೆ 2001-2004ರ ನಡುವೆ ನಡೆಸಲಾಗಿತ್ತು. ಆಗಾಗ ವಲಸೆ, ಡಬಲ್ ಮತದಾರರ ಗುರುತಿನ ಚೀಟಿಗಳು, ಮೃತಪಟ್ಟ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕದಿರುವುದು ಮತ್ತು ವಿದೇಶಿಯರನ್ನು ತಪ್ಪಾಗಿ ಪಟ್ಟಿಗೆ ಸೇರಿಸಿಕೊಳ್ಳುವುದನ್ನು ತಡೆಗಟ್ಟಲು ಎಸ್​ಐಆರ್​ ಪ್ರಕ್ರಿಯೆ ಅಗತ್ಯ ಎಂದು ಚುನಾವಣಾ ಆಯೋಗ ಹೇಳಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಎಸ್​ಐಆರ್​ಗೆ ಫೆ. 21ರವರೆಗೆ ಗಡುವು ವಿಸ್ತರಿಸಿದ ಸುಪ್ರೀಂ ಕೋರ್ಟ್

SIRಗೆ ಒಳಗಾಗುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮತದಾರರ ಪಟ್ಟಿಯನ್ನು ಸ್ಥಗಿತಗೊಳಿಸಲಾಗುತ್ತದೆ. EROಗಳು (ಪ್ರತಿ ವಿಧಾನಸಭಾ ಮತ್ತು ಸಂಸದೀಯ ಕ್ಷೇತ್ರಗಳಿಗೆ ಮತದಾರರ ಪಟ್ಟಿಯನ್ನು ತಯಾರಿಸಲು ಮತ್ತು ಪರಿಷ್ಕರಿಸಲು ಆಯೋಗದಿಂದ ನೇಮಿಸಲ್ಪಟ್ಟ ಅಧಿಕಾರಿಗಳು) ಈ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಪ್ರತಿಯೊಬ್ಬ ನೋಂದಾಯಿತ ಮತದಾರರಿಗೆ ವಿಶಿಷ್ಟ ಎಣಿಕೆ ನಮೂನೆಗಳನ್ನು ಮುದ್ರಿಸುತ್ತಾರೆ. ಎಣಿಕೆ ನಮೂನೆಗಳನ್ನು ಹೆಚ್ಚಾಗಿ ಹೆಸರು, ಮತಗಟ್ಟೆ, ಕ್ಷೇತ್ರ ಮತ್ತು ಹಳೆಯ ಫೋಟೋ ಸೇರಿದಂತೆ ಮೊದಲೇ ಭರ್ತಿ ಮಾಡಲಾಗುತ್ತದೆ. ಬೂತ್ ಮಟ್ಟದ ಅಧಿಕಾರಿಗಳು (BLO) ಈ ಪ್ರಕ್ರಿಯೆಯನ್ನು ನಡೆಸಲು ಪ್ರತಿ ಮನೆಗೆ 3 ಬಾರಿ ಭೇಟಿ ನೀಡುತ್ತಾರೆ. ಅವರು ಸೇರ್ಪಡೆಗಾಗಿ ಹೊಸ ಮತದಾರರಿಂದ ಫಾರ್ಮ್ 6 ಮತ್ತು ಘೋಷಣೆ ನಮೂನೆಗಳನ್ನು ಸಂಗ್ರಹಿಸುತ್ತಾರೆ. ಮತದಾರರು ಎಣಿಕೆ ನಮೂನೆಗಳನ್ನು ಭರ್ತಿ ಮಾಡಲು ಸಹಾಯ ಮಾಡುತ್ತಾರೆ. ಅದನ್ನು EROಗಳಿಗೆ ಸಲ್ಲಿಸುತ್ತಾರೆ. ಅವರು ಅಸ್ತಿತ್ವದಲ್ಲಿರುವ ಪ್ರತಿಯೊಬ್ಬ ಮತದಾರರಿಗೆ EFಗಳನ್ನು ವಿತರಿಸುವುದು ಮತ್ತು 2002-2004 ರಲ್ಲಿ ನಡೆದ ಕೊನೆಯ SIRನಲ್ಲಿ ತಮ್ಮ ಹೆಸರು ಅಥವಾ ಅವರ ಸಂಬಂಧಿಕರ ಹೆಸರಿನೊಂದಿಗೆ ಲಿಂಕ್ ಮಾಡಲು ಮತದಾರರಿಗೆ ಸಹಾಯ ಮಾಡುವಂತಹ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ದಿ ಕೇರಳ ಸ್ಟೋರಿ 2’ ಸಿನಿಮಾ ಬಿಡುಗಡೆಗೆ ತಡೆ ಕೋರಿ ಹೈಕೋರ್ಟ್​​ಗೆ ಅರ್ಜಿ: ನೋಟಿಸ್ ಜಾರಿ – Kannada News | The Kerala Story 2 controversy: HC issues notice to CBFC and movie team

‘ದಿ ಕೇರಳ ಸ್ಟೋರಿ 2’ (The Kerala Story 2) ಸಿನಿಮಾಗೆ ಸಂಬಂಧಿಸಿದ ವಿವಾದ ಹೆಚ್ಚಾಗುತ್ತಲೇ ಇದೆ. ಈ ಸಿನಿಮಾದಲ್ಲಿ ಕೋಮುವಾದದ ಅಂಶಗಳು ಇವೆ ಎಂಬ ಕಾರಣದಿಂದ ಹಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೇರಳದಲ್ಲಿ ಈ ಚಿತ್ರಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಸಿನಿಮಾ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಅದರ ಬೆನ್ನಲ್ಲೇ ಸಿನಿಮಾದ ಬಿಡುಗಡೆಗೆ ತಡೆ ಕೋರಿ ಕೇರಳ ಹೈಕೋರ್ಟ್​​ಗೆ (Kerala High Court) ಅರ್ಜಿ ಸಲ್ಲಿಸಲಾಗಿದೆ. ಇದರಿಂದ ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದೆ.

ಕಣ್ಣೂರಿನ ಶ್ರೀದೇವ್ ಎಂಬುವರು ‘ದಿ ಕೇರಳ ಸ್ಟೋರಿ 2’ ಸಿನಿಮಾ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಸಿನಿಮಾದಲ್ಲಿ ಕೋಮು ಗಲಭೆಗೆ ಕಾರಣ ಆಗುವಂತಹ ಅಂಶಗಳು ಇವೆ. ಇದರಿಂದಾಗಿ ಕಾನೂನು ಸುವ್ಯವಸ್ಥೆಗೆ ತೊಂದರೆ ಆಗಬಹುದು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೇ, ಈ ಸಿನಿಮಾಗೆ ಪ್ರಮಾಣಪತ್ರ ನೀಡಿರುವ ಸೆನ್ಸಾರ್ ಮಂಡಳಿಯ ನಿರ್ಧಾರವನ್ನು ಕೂಡ ಪ್ರಶ್ನಿಸಲಾಗಿದೆ.

ಕೇರಳದಲ್ಲಿ ಲವ್ ಜಿಹಾದ್ ಮೂಲಕ ಹಿಂದೂ ಯುವತಿಯರನ್ನು ಮತಾಂತರ ಮಾಡಲಾಗುತ್ತಿದೆ ಹಾಗೂ ಅವರಿಗೆ ಹಿಂಸೆ ನೀಡಲಾಗುತ್ತಿದೆ ಎಂಬುದನ್ನು ‘ದಿ ಕೇರಳ ಸ್ಟೋರಿ 2’ ಸಿನಿಮಾದ ಟ್ರೇಲರ್​​ನಲ್ಲಿ ತೋರಿಸಲಾಗಿದೆ. ಆದರೆ ಇದನ್ನು ಅನೇಕರು ವಿರೋಧಿಸಿದ್ದಾರೆ. ಅರ್ಜಿ ಸ್ವೀಕರಿಸಿರುವ ನ್ಯಾಯಾಲಯವು ಸೆನ್ಸಾರ್ ಮಂಡಳಿಗೆ ನೋಟಿಸ್ ನೀಡಿದೆ.

ಈ ಕುರಿತಂತೆ ಫೆಬ್ರವರಿ 24ರಂದು ವಿಚಾರಣೆ ನಡೆಯಲಿದೆ. ಆದರೆ ಫೆಬ್ರವರಿ 27ಕ್ಕೆ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧವಾಗಿದೆ. ಒಂದು ವೇಳೆ ಫೆ.24ರಂದು ವಿಚಾರಣೆಯಲ್ಲಿ ಚಿತ್ರತಂಡಕ್ಕೆ ಹಿನ್ನಡೆ ಆದರೆ ರಿಲೀಸ್​​ಗೆ ತೊಂದರೆ ಆಗಲಿದೆ. ಸದ್ಯ ಶುರು ಆಗಿರುವ ವಿವಾದದ ಬಗ್ಗೆ ಚಿತ್ರತಂಡದವರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ‘ದಿ ಕೇರಳ ಸ್ಟೋರಿ 2’ ಸಿನಿಮಾ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದ ಸಿಎಂ ಪಿಣರಾಯಿ ವಿಜಯನ್

ಕಾಮಾಕ್ಯ ನಾರಾಯಣ್ ಸಿಂಗ್ ಅವರು ‘ದಿ ಕೇರಳ ಸ್ಟೋರಿ 2’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ವಿಪುಲ್ ಅಮೃತ್​ಲಾಲ್ ಶಾ ಅವರು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅದಿತಿ ಭಾಟಿಯಾ, ಐಶ್ವರ್ಯಾ ಊಜಾ, ಉಲ್ಕಾ ಗುಪ್ತಾ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. 2023ರಲ್ಲಿ ತೆರೆಗೆ ಬಂದಿದ್ದ ‘ದಿ ಕೇರಳ ಸ್ಟೋರಿ’ ಸಿನಿಮಾದ ಸೀಕ್ವೆಲ್ ಆಗಿ ಈ ಚಿತ್ರ ಸಿದ್ಧವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಿನಲ್ಲಿ ಕೊನೆಗೂ ಕಸ ಸಮಸ್ಯೆಗೆ ಸಿಕ್ತು ಮುಕ್ತಿ: ಬಗೆರಿದಿದ್ಹೇಗೆ? – Kannada News | Bengaluru Garbage Crisis: Bellahalli Villagers End Protest as 90 Cr Funds Promised

ಬೆಂಗಳೂರು, ಫೆಬ್ರವರಿ 19: ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ ಕಸದ (Garbage) ಸಮಸ್ಯೆ ಇನ್ನೂ ಕೂಡ ಕಡಿಮೆಯಾಗಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಬೆಳ್ಳಳ್ಳಿ ಕ್ವಾರಿಯಲ್ಲಿ ಕಸದ ವಿಲೇವಾರಿಯಲ್ಲಿ ಸಾಲು ಕಟ್ಟಿ ನಿಂತಿರುವಂತಹ ಕಸದ ಲಾರಿಗಳು. ಈ ಬಗ್ಗೆ ನಿನ್ನೆ ಟಿವಿ9 ಸುದ್ದಿ ಬಿತ್ತರಿಸಿತ್ತು. ಇದರ ಬೆನ್ನಲ್ಲೇ ಅಧಿಕಾರಿಗಳು ಸಮಸ್ಯೆಯನ್ನು ಬಗೆ ಹರಿಸಿದ್ದಾರೆ. ಜೊತೆಗೆ 90 ಕೋಟಿ ರೂ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ.  ಹೀಗಾಗಿ ಎಂದಿನಂತೆ ಲಾರಿಗಳು ಕಸ ವಿಲೇವರಿಗೆ ಮುಂದಾಗಿವೆ.

ಬೆಂಗಳೂರಿನ ಕಸ ವಿಲೇವಾರಿ ಮಾಡುವ ಬೆಳ್ಳಳ್ಳಿ ಬಳಿಯ ಕ್ವಾರಿಗೆ ಕಸ ಡಂಪ್ ಮಾಡದಂತೆ ಬೆಳ್ಳಳ್ಳಿ ಗ್ರಾಮಸ್ಥರು ನಿರ್ಬಂಧಿಸಿದ್ದರು. ಕಸದ ಕ್ವಾರಿಗೆ ಸಂಪರ್ಕಿಸುವ ರಸ್ತೆಗೆ ಅಡ್ಡಲಾಗಿ ಟ್ರ್ಯಾಕ್ಟರ್ ನಿಲ್ಲಿಸಿ ಯಾವುದೇ ಕಸದ ಲಾರಿ ಡಂಪಿಂಗ್ ಯಾರ್ಡ್‌ಗೆ ಪ್ರವೇಶಿಸದಂತೆ ತಡೆದಿದ್ದರು. ಇನ್ನು ಸರಿ ಸುಮಾರು 100ಕ್ಕೂ ಹೆಚ್ಚು ಕಸದ ಲಾರಿಗಳು ಈ ರೋಡ್​ನಲ್ಲಿ ಸಾಲುಗಟ್ಟಿ ನಿಲ್ಲುತ್ತಿದ್ದವು. ಈ ಬಗ್ಗೆ ಟಿವಿ9 ಸುದ್ದಿ ಬಿತ್ತರಿಸಿದ ಬೆನ್ನಲ್ಲೇ ಅಧಿಕಾರಿಗಳು ಸಮಸ್ಯೆ ಬಗ್ಗೆ ಗಮನ ಹರಿಸಿ ಸ್ಥಳೀಯರನ್ನು ಮನವಲಿಸುವ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬಂದ್ ಆಗುತ್ತಾ ಕಸ ಸಂಗ್ರಹಣೆ? ಡಂಪಿಂಗ್‌ ಯಾರ್ಡ್‌ಗಳಲ್ಲಿ ಕಸದ ಲಾರಿಗಳಿಗೆ ದಿಗ್ಬಂಧನ

ಬೆಳ್ಳಳ್ಳಿ ಡಂಪಿಂಗ್ ಯಾರ್ಡ್‌ಗೆ ಕಸ ಡಂಪ್ ಮಾಡುವುದರಿಂದ ಅಲ್ಲಿನ ಗ್ರಾಮಸ್ಥರಿಗೆ ಆರೋಗ್ಯದ ಸಮಸ್ಯೆ ಸೇರಿದಂತೆ ಸಾಕಷ್ಟು ತೊಂದರೆ ಆಗುತ್ತಿತ್ತು. ಜೊತೆಗೆ ಓಡಾಡಲು ಸರಿಯಾದ ರಸ್ತೆ ಸಹ ಇಲ್ಲ, ಹೀಗಾಗಿ ಈ ಹಿಂದೆ ಅಂದರೆ ಸರಿಸುಮಾರು 7-8 ತಿಂಗಳ ಹಿಂದೆ ಕೂಡ ಪ್ರತಿಭಟನೆ ಮಾಡಿದ್ದ ಸಂದರ್ಭದಲ್ಲಿ ಗ್ರಾಮ ಅಭಿವೃದ್ಧಿ ಹಣ ಬಿಡುಗಡೆ ಮಾಡಲಾಗುತ್ತೆ ಎಂಬ ಭರವಸೆಯನ್ನ ಅಂದಿನ ಬಿಬಿಎಂಪಿ‌ ಅಧಿಕಾರಿಗಳು ನೀಡಿದ್ದರು. ನಿನ್ನೆ ಕಸದ ಕ್ವಾರಿಗೆ ಸಂಪರ್ಕಿಸುವ ರಸ್ತೆ ತಡೆದ ಬೆನ್ನಲ್ಲೇ ಘನ ತ್ಯಾಜ್ಯ ನಿರ್ವಹಣಾ ಘಟಕದ ಸಿಇಓ ಕರಿ ಗೌಡ 90 ಕೋಟಿ ರೂ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ಇದರ ಬೆನ್ನಲ್ಲೇ ಸ್ಥಳೀಯರು ಪ್ರತಿಭಟನೆಯನ್ನು ಕೈ ಬಿಟ್ಟಿದ್ದಾರೆ.

ರಾಜಕೀಯ ಗುದ್ದಾಟ

ಇನ್ನು ಬೆಂಗಳೂರಿನಲ್ಲಿ ಕಸದ ಡಂಪಿಂಗ್ ಸಮಸ್ಯೆ ಉದ್ಭವವಾಗುತ್ತಿದ್ದಂತೆ ಕಸದ ವಿಚಾರವಾಗಿ ರಾಜಕೀಯ ಕೂಡ ಜೋರಾಗಿತ್ತು. ಬಿಜೆಪಿ ನಾಯಕರು ಕಾಂಗ್ರೆಸ್ ಮೇಲೆ ಆಕ್ರೋಶ ಹೊರಹಾಕುತ್ತಿದ್ದು, ಬೆಂಗಳೂರಿನ ಕಸವನ್ನ ಎತ್ತುವ ಯೋಗ್ಯತೆಯೂ ಇವರಿಗಿಲ್ಲ. ಇನ್ನೆರಡು ದಿನ ಕಳೆದರೆ ಗಾರ್ಬೇಜ್ ಸಿಟಿ ಆಗಲಿದೆ. ಗುತ್ತಗೆದಾರರಿಗೂ ಹಣ ಬಿಡುಗಡೆ‌ ಮಾಡಿಲ್ಲ ಎಂದು ಟೀಕಿಸಿದ್ದಾರೆ. ಸದ್ಯ ಇದಕ್ಕೆಲ್ಲಾ ಇದೀಗ ತೆರೆಬಿದ್ದಂತಾಗಿದೆ.

ಒಟ್ಟಿನಲ್ಲಿ ದೊಡ್ಡಬಳ್ಳಾಪುರದಲ್ಲಿ ಕಸ ವಿಲೇವಾರಿಯನ್ನ ಮಾಡೋದಕ್ಕೆ ಅಲ್ಲಿನ ಸ್ಥಳೀಯ ಜನರು ವಿರೋಧಿಸಿದ್ದರು. ಮತ್ತೊಂದು ಕಡೆ ಬೆಳ್ಳಳ್ಳಿ ಕಸ ವಿಲೇವಾರಿ ಘಟಕದ ಗ್ರಾಮಸ್ಥರು ಪ್ರತಿಭಟನೆಗೆ ಮಣಿದ ಜಿಬಿಎ ಹಣ ಬಿಡುಗಡೆಗೆ ಮುಂದಾಗಿದ್ದು, ಇದೀಗ ಕಸದ ಸಮಸ್ಯೆಗೆ ಮುಕ್ತಿ ಸಿಕ್ಕಂತ್ತಾಗಿದೆ.

ವರದಿ: ಅರುಣ್ ಕುಮಾರ್ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬಿಜೆಪಿ ಕಾರ್ಯಕಾರಿಣಿ ಸಭೆ: ಸರ್ಕಾರದ ವಿರುದ್ಧ 6 ನಿರ್ಣಯ, ಜೆಡಿಎಸ್ ಮೈತ್ರಿ ಬಗ್ಗೆ ಮಹತ್ವದ ತೀರ್ಮಾನ – Kannada News | BJP Karnataka executive meeting Take 6 decision Against Congress Government, here Is details

ಬೆಂಗಳೂರು, (ಫೆಬ್ರವರಿ 19): ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ (bjp state executive meeting) ಇಂದು (ಫೆಬ್ರವರಿ 19) ಬೆಂಗಳೂರಿನ  ಅರಮನೆ ಮೈದಾನದಲ್ಲಿ ನಡೆಯಿತು.  ರಾಜ್ಯ ಸರ್ಕಾರದ ವಿರುದ್ದ ಸಂಘಟಿತ ಹೋರಾಟಕ್ಕೆ ಬಿಜೆಪಿ ಸಿದ್ದವಾಗಿದೆ.. ಜೊತೆಗೆ ಮುಂಬರುವ ಚುನಾವಣೆಗೂ ಸಿದ್ದಾವಾಗ್ತಿರುವ ರಾಜ್ಯ ನಾಯಕರಿಗೆ ಕೇಂದ್ರ ನಾಯಕರು ಸಲಹೆ ಸೂಚನೆಗಳನ್ನೂ ನೀಡಿದ್ದಾರೆ. ಹೌದು…ಕಾರ್ಯಕಾರಿಣಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಆರು ನಿರ್ಣಯಗಳನ್ನು ಮಂಡಿಸಲಾಗಿದ್ದು, ಪ್ರಮುಖವಾಗಿ ಜೆಡಿಎಸ್ ಜೊತೆಗಿನ ಮೈತ್ರಿ ವಿಚಾರದಲ್ಲಿ ಸಾರ್ವಜನಿಕ ಚರ್ಚೆ ಮಾಡದಂತೆ ಸೂಚನೆ ನೀಡಲಾಗಿದೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು (ಫೆಬ್ರವರಿ 19) ನಡೆದ ಕಾರ್ಯಕಾರಿಣಿಯನ್ನು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಉದ್ಘಾಟಿಸಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸಮಾರೋಪ ಭಾಷಣ ಮಾಡಿದರು. ಇದೇ ವೇಳೆ ರಾಜಕೀಯ ಜೀವನದಲ್ಲಿ ಐವತ್ತು ವರ್ಷಗಳನ್ನು ಪೂರೈಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕಾರ್ಯಕಾರಿಣಿಯಲ್ಲಿ ಸನ್ಮಾನಿಸಲಾಯಿತು. ಇನ್ನು ವಂದೇ ಮಾತರಂ ಗೀತೆಗೆ 150ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಕಾರ್ಯಕಾರಿಣಿಯಲ್ಲಿ 150 ಕಾರ್ಯಕರ್ತರಿಂದ ವಂದೇ ಮಾತರಂ ಗೀತೆ ಗಾಯನ ನಡೆಯಿತು‌.

ಇದನ್ನೂ ಓದಿ: BJP-JDS ಮೈತ್ರಿ ಗೊಂದಲಕ್ಕೆ ಶೀಘ್ರವೇ ಇತಿಶ್ರೀ: ಸಮನ್ವಯ ಸಭೆಗೆ ನಾಯಕರ ನಿರ್ಧಾರ

ಆರು ನಿರ್ಣಯ ಮಂಡನೆ

.ರ್ನಾಟಕ ಸ್ಥಳೀಯ ಸಂಸ್ಥೆಗಳು ಮತ್ತು ವಿಧಾನಸಭಾ ಉಪಚುನಾವಣೆಗಳ ಚಟುವಟಿಕೆಗಳು ಚುರುಕು‌ ಪಡೆಯುತ್ತಿರುವಂತೆಯೇ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಸಿದ್ದು, ಸಭೆಯಲ್ಲಿ ರಾಜ್ಯ ಸರ್ಕಾರದ ವಿರುದ್ ಆರು ನಿರ್ಣಯಗಳನ್ನು ಮಂಡಿಸಲಾಗಿದೆ. ಸರ್ಕಾರದ ವೈಫಲ್ಯ, ಅಬಕಾರಿ ಹಗರಣ, ಎಸ್‌ಸಿಎಸ್‌ಪಿ-ಟಿಎಸ್‌ಪಿ ಅನುದಾನ ದುರ್ಬಳಕೆ, ಒಳಮೀಸಲು ವರ್ಗೀಕರಣ ಅನ್ಯಾಯ, ಎ ಖಾತಾ, ಬಿ ಖಾತಾ ಮೂಲಕ ಭ್ರಷ್ಟಾಚಾರ, ಕಸದ ಅವ್ಯವಹಾರ ಸೇರಿ ಆರು ನಿರ್ಣಯಗಳನ್ನು ಮಂಡನೆ ಮಾಡಲಾಗಿದೆ.

 ಜೆಡಿಎಸ್ ಜೊತೆಗಿನ ಮೈತ್ರಿ ಬಗ್ಗೆ ಮಹತ್ವದ ಸೂಚನೆ

ಜೆಡಿಎಸ್ ಜೊತೆಗಿನ ಮೈತ್ರಿ ವಿಚಾರವನ್ನು ಸಮಾರೋಪದಲ್ಲಿ ಪ್ರಸ್ತಾಪಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ‌, ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ತಲೆಬಾಗಿ ಸಾರ್ವಜನಿಕ ಚರ್ಚೆಗೆ ಅವಕಾಶ ಕೊಡದಂತೆ ಸೂಚನೆ ನೀಡಿದರು. ಇದೇ ವೇಳೆ, ಕಾರ್ಯಕಾರಿಣಿ ಸಮಾರೋಪ ಭಾಷಣ ಮಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಅಮೆರಿಕಾ ಜೊತೆಗಿನ ವ್ಯಾಪಾರ ಒಪ್ಪಂದದ ಬಗ್ಗೆ ಮಾಹಿತಿ ನೀಡಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೇರಲು ಸಂಘಟನೆ ಮಾಡಬೇಕು ಎಂದು ಸೂಚಿಸಿದ್ದಾರೆ.

ಇನ್ನು ವಿಧಾನಪರಿಷತ್ ಪದವೀಧರ ಕ್ಷೇತ್ರಗಳ BJP ಅಭ್ಯರ್ಥಿಗಳು, ಶಿಕ್ಷಕರ ಕ್ಷೇತ್ರಗಳ BJP ಅಭ್ಯರ್ಥಿಗಳ ಪಟ್ಟಿ ಹಾಗೂ 2 ವಿಧಾನಸಭಾ ಕ್ಷೇತ್ರಗಳ ಬೈಲೆಕ್ಷನ್​​ಗೂ ಶೀಘ್ರವೇ ಅಭ್ಯರ್ಥಿಗಳ ಘೋಷಣೆ ಮಾಡುವಂತೆ ಹೈಕಮಾಂಡ್​ಗೆ ಮನವಿ ಮಾಡಲು ಸಭೆಯಲ್ಲಿ ನಿರ್ಧರಿಲಾಗಿದೆ.

ಇದೇ ವೇಳೆ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್‌ದಾಸ್ ಅಗರವಾಲ್ ಮಾತನಾಡಿ, ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಯಾರೂ ಬಹಿರಂಗವಾಗಿ ಮಾತಾಡಬಾರದು ಎಂದು ನಾಯಕರುಗಳೀಗೆ ಸೂಚಿಸಿದ್ದು, ಇದೇ ಫೆಬ್ರವರಿ 26ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಪ್ರಶಿಕ್ಷಣ ಶಿಬಿರ, ಜಿಲ್ಲಾ, ಮಂಡಲ ಮಟ್ಟದಲ್ಲಿ ಪಕ್ಷದ ಸಭೆಗಳು ಮತ್ತು ಸ್ಥಳೀಯ ಮಟ್ಟದ ಸಮಸ್ಯೆಗಳ ಬಗ್ಗೆ ಹೋರಾಟಕ್ಕೆ ಬಿಜೆಪಿ ಕೋರ್ ಕಮಿಟಿಯಲ್ಲಿ ತೀರ್ಮಾನ ಮಾಡಲಾಯ್ತು.

ಒಟ್ನಲ್ಲಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನ ಕಮಲ‌ಪಡೆಯ ನಾಯಕರು ಟಾರ್ಗೇಟ್ ಮಾಡಿಕೊಂಡಿದ್ದಾರೆ. ಜೊತೆಗೆ ಜೆಡಿಎಸ್ ಬಿಜೆಪಿಯಲ್ಲಿನ ಮೈತ್ರಿ ಅಪಸ್ವರದ ಬಗ್ಗೆ ಬ್ರೇಕ್ ಹಾಕುವುದಕ್ಕೂ ಕೇಂದ್ರ ಬಿಜೆಪಿ ನಾಯಕರು ಕಾರ್ಯಕಾರಿಣಿ ಸಭೆಯಲ್ಲಿ ಸೂಚನೆ ನೀಡಲಾಗಿದ್ದು ,ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹಸುಗಳಿಗೂ AI ಅನ್ವಯಿಸುವ ಬಗ್ಗೆ ಮೋದಿ ತುರ್ತು ನಿರ್ಧಾರ; ನಂದನ್ ನಿಲೇಕಣಿ ಬಣ್ಣನೆ – Kannada News | Nandan Nilekani explained how he was impressed with PM Modis idea of using AI to help cattle

ನವದೆಹಲಿ, ಫೆಬ್ರವರಿ 19: ದೆಹಲಿಯಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ (AI Impact Summit) ಸಿಇಒಗಳ ಸಭೆ ವೇಳೆ ಇನ್ಫೋಸಿಸ್‌ನ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. “ಭಾರತದಲ್ಲಿ AI ಬಳಕೆಯ ಬಗ್ಗೆ ನಾನು ಒಂದು ಉದಾಹರಣೆಯೊಂದಿಗೆ ಮಾತನಾಡಲು ಬಯಸುತ್ತೇನೆ. ಜನವರಿ 8ರಂದು ನಾನು ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ರೈತರಿಗೂ AI ಅನ್ವಯಿಸುವ ಬಗ್ಗೆ ಮಾತನಾಡಿದ್ದೆ. ಆಗ ಅವರು, ನಾವು ಎಐ ಅನ್ನು ಹಸುಗಳು ಮತ್ತು ಎಮ್ಮೆಗಳಿಗೆ ಏಕೆ ಅನ್ವಯಿಸಬಾರದು? ಹಸು ಅನಾರೋಗ್ಯದಿಂದ ಬಳಲುತ್ತಿದ್ದರೆ ಅದಕ್ಕೆ ಅದನ್ನು ನಮಗೆ ಹೇಳಲು ಸಾಧ್ಯವಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಎಐ ಮೂಲಕ ಸಮಸ್ಯೆಯನ್ನು ಕಂಡುಹಿಡಿಯಬಹುದಲ್ಲವೇ? ಎಂದು ಕೃಷಿ ಮತ್ತು ಡೈರಿಗೆ AI ಅನ್ವಯಿಸುವ ಬಗ್ಗೆ ಅವರು ನಮಗೆ ತಮ್ಮ ದೃಷ್ಟಿಕೋನವನ್ನು ನೀಡಿದರು. ಅದೇ ದಿನ, ಪಿಎಂಒ ಅಮುಲ್‌ನೊಂದಿಗೆ ನಮ್ಮ ಸಭೆ ನಡೆಸಿತು. ಅದಾದ 3 ವಾರಗಳಲ್ಲಿ, ಅರ್ಜಿಯನ್ನು ನೇರ ಪ್ರಸಾರ ಮಾಡಲಾಯಿತು. ಅಮುಲ್ 3.6 ಮಿಲಿಯನ್ ರೈತರು, ವರ್ಷಕ್ಕೆ 2 ಬಿಲಿಯನ್ ಹಾಲು ವಹಿವಾಟುಗಳು ಮತ್ತು 40 ಮಿಲಿಯನ್ ಜಾನುವಾರುಗಳನ್ನು ಹೊಂದಿರುವ ವಿಶ್ವದ ಅತಿದೊಡ್ಡ ಸಹಕಾರಿ ಸಂಸ್ಥೆಯಾಗಿದೆ. ಇದು ಭಾರತದಲ್ಲಿ AI ಪ್ರಸರಣದ ವೇಗದ ಕಾರ್ಯಗತಗೊಳಿಸುವಿಕೆಗೆ ಒಂದು ಉದಾಹರಣೆಯಾಗಿದೆ” ಎಂದಿದ್ದಾರೆ.

“2016ರ ಡಿಸೆಂಬರ್ 30ರಂದು ಪ್ರಧಾನಿಯವರು UPIನಲ್ಲಿ BHIM ಪಾವತಿ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದರು. ಅವರು ಆ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದಾಗ ಅದು ಇಷ್ಟರ ಮಟ್ಟಿಗೆ ಜನಪ್ರಿಯವಾಗಲಿದೆ, ದಿನನಿತ್ಯದ ವಹಿವಾಟಿನ ಭಾಗವಾಗಲಿದೆ ಎಂದು ಊಹೆ ಇರಲಿಲ್ಲ. ಇಂದು ನಾವು 500 ಮಿಲಿಯನ್ ಬಳಕೆದಾರರೊಂದಿಗೆ ತಿಂಗಳಿಗೆ 21 ಬಿಲಿಯನ್ ವಹಿವಾಟುಗಳನ್ನು ಹೊಂದಿದ್ದೇವೆ. ನಾವು ವಿಶ್ವದ ಅತಿದೊಡ್ಡ ಪಾವತಿ ವ್ಯವಸ್ಥೆಯನ್ನು ಹೊಂದಿದ್ದೇವೆ. ಅದೇ ರೀತಿ AI ಕೂಡ ಮುಂದಿನ ದಿನಗಳಲ್ಲಿ ದಿನನಿತ್ಯದ ಭಾಗವಾಗಲಿದೆ ಎಂಬ ವಿಶ್ವಾಸ ನನಗಿದೆ. ಭಾರತೀಯರು, ಸಾಮಾನ್ಯ ಜನರು, ರೈತರು, ಕಾರ್ಮಿಕರ ಪ್ರಯೋಜನಕ್ಕಾಗಿ AI ಅನ್ನು ಹೇಗೆ ಬಳಸಬಹುದು ಎಂಬ ಮೋದಿಯವರ ನಾಯಕತ್ವ ಮತ್ತು ದೃಷ್ಟಿಕೋನದಿಂದ ಎಐ ದೇಶಾದ್ಯಂತ ಅಳವಡಿಕೆಯಾಗಲಿದೆ ಎಂದು ನನಗೆ ಅನಿಸುತ್ತಿದೆ” ಎಂದು ನಂದನ್ ನಿಲೇಕಣಿ ಹೇಳಿದ್ದಾರೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್ – Kannada News | Kaatera director Tharun Sudhir wants to do another movie with Darshan

ನಟ ದರ್ಶನ್ ಜೊತೆ ನಿರ್ದೇಶಕ ತರುಣ್ ಸುಧೀರ್ ಅವರು ‘ಕಾಟೇರ’ ಸಿನಿಮಾ ಮಾಡಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಮತ್ತೆ ಅವರಿಬ್ಬರು ಜೊತೆಯಾಗಿ ಸಿನಿಮಾ ಮಾಡಲಿ ಎಂಬುದು ಅಭಿಮಾನಿಗಳ ಆಸೆ. ಆದರೆ ಸದ್ಯಕ್ಕೆ ದರ್ಶನ್ (Darshan) ಅವರು ಜೈಲಿನಲ್ಲಿ ಇದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅವರು ಮುಖ್ಯ ಆರೋಪಿ ಆಗಿದ್ದಾರೆ. ಆ ಕುರಿತು ತರುಣ್ ಸುದೀಪ್ ಮಾತನಾಡಿದ್ದಾರೆ. ‘ಆದಷ್ಟು ಬೇಗ ದರ್ಶನ್ ಅವರು ಹೊರಗೆ ಬರಲಿ. ಅವರ ಕಷ್ಟದ ದಿನಗಳೆಲ್ಲ ಕಳೆಯಲಿ ಅಂತ ನಾನು ಕಾಯುತ್ತಿದ್ದೇನೆ. ಮುಂದೆ ಖಂಡಿತವಾಗಿಯೂ ಅವರು ಸಿನಿಮಾ ಮಾಡುತ್ತಾರೆ. ಯಾವತ್ತು ಅವರು ನನ್ನನ್ನು ಕರೆದು, ಅವಕಾಶ ಕೊಟ್ಟು, ಸಿನಿಮಾ ಮಾಡೋಣ ಎನ್ನುತ್ತಾರೋ ಮರುದಿನವೇ ನಾನು ರೆಡಿ. ನಾವು ಸ್ಕ್ರಿಪ್ಟ್ ಕೂಡ ರೆಡಿ ಇಟ್ಟುಕೊಂಡಿರುತ್ತೇವೆ. ಆ ಕಾಲ ಬರಲಿ ಅಂತ ಕಾಯುತ್ತಿದ್ದೇವೆ’ ಎಂದು ತರುಣ್ ಸುಧೀರ್ (Tharun Sudhir) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ – Kannada News | Vijayapura babaladi sadashiva mutya prediction 2026 about rain monsoon And Politics

ವಿಜಯಪುರ (ಫೆಬ್ರವರಿ 19): ಪ್ರತಿ ವರ್ಷದಂತೆ ಈ ಬಾರಿಯೂ ವಿಜಯಪುರದ (Vijayapura) ಬಬಲಾದಿ ಸ್ವಾಮೀಜಿಯು ಭವಿಷ್ಯ (Babaladi Mutya Kalajnana Bhavishya) ನುದಿಡಿದ್ದಾರೆ. ಪ್ರತಿ ವರ್ಷ ಈ ಬಾರಿಯೂ ಶಿವರಾತ್ರಿ ಅಮವಾಸ್ಯೆ ಹಿಂದೆ ಮುಂದೆ ಬಬಲಾದಿ ಜಾತ್ರೆ ನಡೆಯುತ್ತಿದೆ. ಈ ವೇಳೆ ಹೊಳೆಬಬಲಾದಿ ಪೀಠಾಧಿಪತಿ ಸಿದ್ಧರಾಮಯ್ಯ ಹೊಳಿಮಠ ಸ್ವಾಮೀಜಿ ಭವಿಷ್ಯ ನುಡಿದಿದ್ದು, 2026ರ ಕಾಲಜ್ಞಾನ ಭವಿಷ್ಯ ಹೇಳಿದ್ದಾರೆ. 2026ನೇ ವರ್ಷವು ಏರಿಳಿತಗಳಿಂದ ಕೂಡಿದ ವರ್ಷವಾಗಲಿದೆ ಎಂದು ಬಬಲಾದಿ ಸದಾಶಿವ ಮುತ್ತಜ್ಜ ಕಾಲಜ್ಞಾನ ಹೇಳಿದ್ದಾರೆ. ರಾಜಕಾರಣದಲ್ಲಿ ಹೊಸ ತಿರುವು. ರೋಗ, ಯುದ್ಧ ಮತ್ತು ಪ್ರಕೃತಿ ವಿಕೋಪಗಳ ಎಚ್ಚರಿಕೆಯ ಜೊತೆಗೆ, ರೈತರಿಗೆ ಹಾಗೂ ದೇಶದ ಆರ್ಥಿಕತೆಗೆ ಲಾಭವಾಗುವ ಮಾತುಗಳು ಕೂಡ ಹೇಳಿದ್ದಾರೆ.

ರಾಜಕೀಯ ಮತ್ತು ರಕ್ಷಣಾ ವಲಯದ ಬಗ್ಗೆಯೂ ಸದಾಶಿವ ಮುತ್ತಜ್ಜ ಮಹತ್ವದ ಸೂಚನೆ ನೀಡಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಹೊಸ ತಿರುವುಗಳು ಉಂಟಾಗಲಿವೆ ಎಂದಿರುವುದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ನಡುವೆ ನಡೆಯುತ್ತಿರುವ ಕುರ್ಚಿ ಫೈಟ್‌ ತಾರ್ಕಿಕ ಅಂತ್ಯ ಕಾಣಲಿದ್ಯಾ ಎನ್ನುವ ಚರ್ಚೆ ಶುರುವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ದೇವನಹಳ್ಳಿ: 15 ದಿನದಿಂದ ವಿದ್ಯುತ್ ಇಲ್ಲದೆ ಜನ ಹೈರಾಣು; ಬೆಸ್ಕಾಂ ವಿರುದ್ಧ ಸಿಡಿದೆದ್ದ ಗ್ರಾಮಸ್ಥರು – Kannada News | Devanahalli: 15 Days Power Outage Ignites Villager Protest Against BESCOM Negligence

ಹಾಳಾದ ಟ್ರಾನ್ಸ್ಫಾರ್ಮರ್, ಕತ್ತಲಲ್ಲಿ ಅಡುಗೆ ಮಾಡುತ್ತಿರುವ ಮಹಿಳೆ

ದೇವನಹಳ್ಳಿ, ಫೆಬ್ರವರಿ 19: ಅದು ಜಿಲ್ಲಾ ಉಸ್ತುವಾರಿ ಸಚಿವ ಕೆಹೆಚ್ ಮುನಿಯಪ್ಪ ಅವರ ಸ್ವಕ್ಷೇತ್ರದ ಕುಗ್ರಾಮ. ದಲಿತರೇ ವಾಸಿಸುವ ಆ ಗ್ರಾಮದಲ್ಲಿ ಕಳೆದ 15 ದಿನಗಳ ಹಿಂದೆ ಟ್ರಾನ್ಸ್ಫಾರ್ಮರ್ ಸುಟ್ಟು‌ ಹೋಗಿದೆ. ಹೀಗಾಗಿ 15 ದಿನಗಳಿಂದ ವಿದ್ಯುತ್ (power outage)​​ ಇಲ್ಲಿದೆ ಕತ್ತಲಲ್ಲಿ ಜೀವನ ಕಳೆಯುವಂತಾಗಿದೆ. ಬೆಸ್ಕಾಂ (BESCOM)  ಕಚೇರಿಗೆ ಅಲೆದು ಅಲೆದು ಸುಸ್ತಾದ ಗ್ರಾಮಸ್ಥರು ಇದೀಗ ಕರೆಂಟ್ ನೀಡುವಂತೆ ಒತ್ತಾಯಿಸಿ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.

ಬೆಸ್ಕಾಂ ವಿರುದ್ಧ ಆಕ್ರೋಶ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಗೆಜ್ಜಿಕುಪ್ಪೆ ಗ್ರಾಮದಲ್ಲಿ ಸುಮಾರು 30 ಮನೆಗಳಿದ್ದು, 150ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ. ದಲಿತರೇ ವಾಸಿಸುವ ಈ ಕುಗ್ರಾಮದಲ್ಲಿ ಕಳೆದ 15 ದಿನಗಳ ಹಿಂದೆ ಟ್ರಾನ್ಸ್ಫಾರ್ಮರ್​ ಸುಟ್ಟುಹೋಗಿದೆ. ಅಂದಿನಿಂದ ಇಂದಿನವರೆಗೆ ರಾತ್ರಿ ಹೊತ್ತಲ್ಲಿ ಗ್ರಾಮದಲ್ಲಿ ಕರೆಂಟ್ ಇಲ್ಲದೆ ಜನ ಕಗ್ಗತ್ತಲಿನಲ್ಲಿ ಇದ್ದು ಹೈರಾಣಾಗಿದ್ದಾರೆ. ಜೊತೆಗೆ ಹಾವು, ಚೇಳುಗಳ ಭಯ ಸೇರಿದಂತೆ ಮತ್ತೊಂದೆಡೆ ಕಳ್ಳರ ಕಾಟ. ಕುರಿಗಳ ಕಳ್ಳತನ ಮಾಡುತ್ತಿದ್ದಾರೆ ಅಂತ ಜನ ಜಾಗರಣೆ ಮಾಡುವಂತಾಗಿದೆ. ವಿದ್ಯುತ್ ಸಮಸ್ಯೆ ಸರಿಪಡಿಸದ ಬೆಸ್ಕಾಂ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ತಾಯಿಯ ಫೋಟೋ ಶೂಟ್​​ ವೇಳೆ ಅವಘಡ: ನೀರಿಗೆ ಬಿದ್ದು ಕಣ್ಮುಚ್ಚಿದ 3 ವರ್ಷದ ಕಂದಮ್ಮ

ರಾಜ್ಯದಲ್ಲಿ ಗೃಹಜ್ಯೋತಿ ಜಾರಿಯಲ್ಲಿದ್ದು, ಈ ಗ್ರಾಮದಲ್ಲೂ ನಿರಂತರ 24 ಗಂಟೆಗಳ ಕಾಲ ವಿದ್ಯುತ್ ನೀಡಲಾಗುತ್ತಿತ್ತು. ಆದರೆ 25 ಕೆವಿ ಟ್ರಾನ್ಸ್ಫಾರ್ಮರ್ ಗ್ರಾಮದ 30 ಮನೆಗಳಿಗೆ ವಿದ್ಯುತ್​ ಒದಗಿಸಿದಲ್ಲದೆ ಕೆಲವರು ಬೋರ್ವೆಲ್​ಗೂ ಇದೇ ಟ್ರಾನ್ಸ್ಫಾರ್ಮರ್ ಬಳಸುತ್ತಿದ್ದಾರಂತೆ. ಹೀಗಾಗಿ ಟ್ರಾನ್ಸ್ಫಾರ್ಮರ್ ಸುಟ್ಟು‌ಹೋಗಿ 15 ದಿನಗಳಿಂದ ಕತ್ತಲಲ್ಲೇ ಜನ ವಾಸ ಮಾಡುವಂತಾಗಿದೆ. ಕೆಲ ಮನೆಯ ವಿದ್ಯಾರ್ಥಿಗಳು ಕರೆಂಟ್ ಇಲ್ಲದೆ ಊರನ್ನ ತೊರದಿದ್ದಾರಂತೆ.

ಇನ್ನು ಟ್ರಾನ್ಸ್ಫಾರ್ಮರ್ ಸರಿಪಡಿಸಿ ಗ್ರಾಮಕ್ಕೆ ಕರೆಂಟ್ ನೀಡುವಂತೆ ಬೆಸ್ಕಾಂ ಅಧಿಕಾರಿಗಳ ಬಳಿ ಅಲೆದು ಅಲೆದು ಸುಸ್ತಾದ ಜನ ಇಂದು‌ ಬೀದಿಗಿಳಿದು‌ ಪ್ರತಿಭಟನೆ ಮಾಡಿದ್ದಾರೆ. ಇನ್ನು ನಾಳೆ ಒಳಗೆ ಗ್ರಾಮಕ್ಕೆ ಕರೆಂಟ್ ಬಾರದೇ ಹೋದರೆ ವಿಜಯಪುರ ಬೆಸ್ಕಾಂ ಬಳಿ ಗ್ರಾಮಸ್ಥರಿಂದ ಅಡುಗೆ ಮಾಡಿ ಅಲ್ಲಿಯೇ ವಾಸ ಮಾಡುವ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಪೊಲೀಸರ ಭರ್ಜರಿ ಬೇಟೆ: 1.5 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ

ಒಟ್ಟಾರೆ ಗೆಜ್ಜಿಕುಪ್ಪೆ ಗ್ರಾಮದಲ್ಲಿ ಕಳೆದ 15 ದಿನಗಳಿಂದ ವಿದ್ಯುತ್ ಇಲ್ಲದೆ ಗ್ರಾಮದ ಜನ ಹೈರಾಣಾಗಿದ್ದು, ಬೆಸ್ಕಾಂ ಇಲಾಖೆ‌ ಅಧಿಕಾರಿಗಳು ಜಾಣ ನಿದ್ರೆಗೆ ಜಾರಿದ್ದಾರೆ. ಈ ನಿಟ್ಟಿನಲ್ಲಿ ಆದಷ್ಟು‌ ಬೇಗ ಬೆಸ್ಕಾಂ ಅಧಿಕಾರಿಗಳು ಟ್ರಾನ್ಸ್ಫಾರ್ಮರ್ ಅಳವಡಿಸಿ ಕಗ್ಗತ್ತಲಲ್ಲಿಂದ ಕೂಡಿರುವ ಗ್ರಾಮಕ್ಕೆ ಬೆಳಕು ನೀಡುವ ಕೆಲಸ ಮಾಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸಹಾಯ ಮಾಡಿದವರ ಹೆಸರು ಹೇಳಲ್ಲ: ಖಡಕ್ ಆಗಿ ತಿಳಿಸಿದ ರಾಜ್​ಪಾಲ್ ಯಾದವ್ – Kannada News | Rajpal Yadav does not want to reveal who helped in during jail

ಖ್ಯಾತ ಹಾಸ್ಯ ನಟ ರಾಜ್​ಪಾಲ್ ಯಾದವ್ (Rajpal Yadav) ಅವರು ಚೆಕ್ ಬೌನ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದರು. ಸದ್ಯಕ್ಕೆ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಅವರ ಮೇಲೆ ಬರೋಬ್ಬರಿ 9 ಕೋಟಿ ರೂಪಾಯಿ ಸಾಲ ಇದೆ. ರಾಜ್​ಪಾಲ್ ಯಾದವ್ ಅವರು ಜೈಲಿಗೆ ಹೋಗಿದ್ದಾಗ ಅನೇಕ ಸೆಲೆಬ್ರಿಟಿಗಳು ಹಣದ ನೆರವು ನೀಡಿದರು. ಅದರಿಂದಾಗಿ ಅವರು 1.5 ಕೋಟಿ ರೂಪಾಯಿ ಮರುಪಾವತಿ ಮಾಡಿ, ಜಾಮೀನು (Bail) ಪಡೆಯಲು ಸಾಧ್ಯವಾಯಿತು. ಆದರೆ ತಮಗೆ ಸಹಾಯ ಮಾಡಿದ ಸೆಲೆಬ್ರಿಟಿಗಳ ಹೆಸರನ್ನು ಬಹಿರಂಗಪಡಿಸಲು ರಾಜ್​ಪಾಲ್ ಯಾದವ್ ಅವರು ಹಿಂದೇಟು ಹಾಕಿದ್ದಾರೆ.

ವರದಿಗಳ ಪ್ರಕಾರ ಹಿಂದಿ ಚಿತ್ರರಂಗದ ಸೆಲೆಬ್ರಿಟಿಗಳಾದ ಸಲ್ಮಾನ್ ಖಾನ್, ಅಜಯ್ ದೇವಗನ್, ಸೋನು ಸೂದ್, ಮಿಕಾ ಸಿಂಗ್ ಮುಂತಾದವರು ರಾಜ್​ಪಾಲ್ ಯಾದವ್​ಗೆ ಸಹಾಯ ಮಾಡಿದ್ದಾರೆ. ಆದರೆ ಅವರ ಹೆಸರನ್ನು ರಾಜ್​ಪಾಲ್ ಯಾದವ್ ಬಹಿರಂಗಪಡಿಸಿಲ್ಲ. ಚಿತ್ರರಂಗದ ಸಹಾಯವನ್ನು ಸಾರ್ವಜನಿಕವಾಗಿ ಸಾಬೀತು ಮಾಡುವ ಅವಶ್ಯಕತೆ ಇಲ್ಲ ಎಂದು ರಾಜ್​ಪಾಲ್ ಯಾದವ್ ಹೇಳಿದ್ದಾರೆ.

‘2012ರಲ್ಲಿ ಈ ವಿಷಯ ಮೊದಲು ಮಾಧ್ಯಮಗಳಲ್ಲಿ ಬಂತು. ರಾಜ್​ಪಾಲ್ ಯಾದವ್ ಮೋಸಗಾರ ಅಂತ ಸುದ್ದಿ ಬರೆದರು. ಅಲ್ಲಿಂದ ಇಲ್ಲಿಯವರೆಗೆ ಪ್ರತಿ ವರ್ಷ ತಲಾ ಹತ್ತು ಸಿನಿಮಾಗಳಲ್ಲಿ ನಾನು ನಟಿಸಿದ್ದೇವೆ. ಒಂದು ವೇಳೆ ನಾನು ಮೋಸಗಾರ ಆಗಿದ್ದರೆ ಯಾಕೆ ಎಲ್ಲರೂ ನನ್ನ ಜೊತೆ ಕೆಲಸ ಮಾಡುತ್ತಿದ್ದರು? ಅವರೆಲ್ಲ ನನ್ನ ಜೊತೆ ಇದ್ದಾರೆ ಎಂಬುದನ್ನು ಸಾಬೀತು ಮಾಡಬೇಕಿಲ್ಲ. ಎಲ್ಲರೂ ನನ್ನ ಜೊತೆ ಇದ್ದಾರೆ ಎಂಬ ನಂಬಿಕೆ ನನಗಿದೆ’ ಎಂದಿದ್ದಾರೆ ರಾಜ್​ಪಾಲ್ ಯಾದವ್.

ಯಾರೆಲ್ಲ ಸಹಾಯ ಮಾಡಿದ್ದಾರೆ? ಎಷ್ಟು ಹಣವನ್ನು ನೀಡಲಾಗಿದೆ? ಈ ಯಾವುದೇ ಪ್ರಶ್ನೆಗಳಿಗೆ ರಾಜ್​ಪಾಲ್ ಯಾದವ್ ಅವರು ಉತ್ತರ ನೀಡಿಲ್ಲ. ‘ನನಗೆ ಎಲ್ಲರೂ ಮಾಡಿದ ಸಹಾಯವನ್ನು ನಾನು ಗೌರವಿಸುತ್ತೇನೆ. ಆದರೆ ನನಗೆ ಸಿಂಪಥಿ ಬೇಡ’ ಎಂದು ರಾಜ್​ಪಾಲ್ ಯಾದವ್ ಅವರು ಖಡಕ್ ಆಗಿ ಹೇಳಿದ್ದಾರೆ. ಮಾರ್ಚ್ 18ರ ತನಕ ಅವರಿಗೆ ಜಾಮೀನು ನೀಡಲಾಗಿದೆ.

ಇದನ್ನೂ ಓದಿ: ಇಂದಿನ ಹಲವು ಸ್ಟಾರ್​​ಗಳಿಗೆ ಅಂದು ಊಟ ಹಾಕಿ ಸಾಕಿದ್ದರು ರಾಜ್​ಪಾಲ್ ಯಾದವ್: ಈಗ ನೆರವಿಗೆ ಯಾರೂ ಇಲ್ಲ?

ಇತ್ತೀಚೆಗೆ ಜೈಲಿನ ಅನುಭವ ಹಂಚಿಕೊಂಡಿದ್ದ ರಾಜ್​ಪಾಲ್ ಯಾದವ್ ಅವರು, ‘ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣಗಳಲ್ಲಿ ಇರುವಂತೆ ಜೈಲಿನ ಒಳಗೆ ಧೂಮಪಾನ ಮಾಡಲು ಪ್ರತ್ಯೇಕವಾದ ಜಾಗ ಇರಬೇಕು. ಜೈಲುಗಳನ್ನು ಬದಲಾವಣೆಯ ಕೇಂದ್ರದ ರೀತಿ ಪರಿಗಣಿಸಬೇಕು. ತಮ್ಮನ್ನು ಬದಲಾಯಿಸಿಕೊಳ್ಳಲು ಖೈದಿಗಳಿಗೆ ಅವಕಾಶ ನೀಡಬೇಕು’ ಎಂದು ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದೆಹಲಿಯ ಎಐ ಶೃಂಗಸಭೆಯಲ್ಲಿ 8 ವರ್ಷದ ಬಾಲಕನಿಂದ ಮುಖ್ಯ ಭಾಷಣ; ಏನಿವನ ಸಾಧನೆ? – Kannada News | 8 Year Old boy Ranvir Sachdeva becomes Youngest Keynote Speaker At AI Impact Summit 2026

ನವದೆಹಲಿ, ಫೆಬ್ರವರಿ 19: ಭಾರತ ದೆಹಲಿಯಲ್ಲಿ ಆಯೋಜಿಸಿರುವ AI ಇಂಪ್ಯಾಕ್ಟ್ ಶೃಂಗಸಭೆ (AI Impact Summit) ಪ್ರತಿದಿನ ವಿಭಿನ್ನ ಕಾರಣಗಳಿಗಾಗಿ ಸುದ್ದಿಯಲ್ಲಿದೆ. ಜಾಗತಿಕ ನಾಯಕರು ಈ ಶೃಂಗಸಭೆಯಲ್ಲಿ ಭಾರತದ ಆವಿಷ್ಕಾರಗಳನ್ನು ಮತ್ತು ಎಐ ಅಳವಡಿಕೆಯಲ್ಲಿ ಭಾರತದ ಪ್ರಯೋಗಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಶೃಂಗಸಭೆಯ ಮತ್ತೊಂದು ಕುತೂಹಲಕಾರಿ ಅಂಶವೆಂದರೆ AI ಶೃಂಗಸಭೆಯಲ್ಲಿ ಅತ್ಯಂತ ಕಿರಿಯ ಮುಖ್ಯ ಭಾಷಣಕಾರನಾಗಿ 8 ವರ್ಷದ ಬಾಲಕ ರಣವೀರ್ ಸಚ್‌ದೇವ ಭಾವಹಿಸಿದ್ದಾನೆ. ಆತನನ್ನು ಬಾಲ ಪ್ರತಿಭೆ ಎಂದು ಪ್ರಶಂಸಿಸಲಾಗುತ್ತಿದೆ. ಈ ವರ್ಷದ AI ಶೃಂಗಸಭೆಯಲ್ಲಿ ರಣವೀರ್ ಅತ್ಯಂತ ಕಿರಿಯ ಮುಖ್ಯ ಭಾಷಣಕಾರನಾಗಿದ್ದು, ಭಾರತೀಯ AI ಮಾದರಿಯ ಬಗ್ಗೆ ಮಾತನಾಡಿರುವುದು ವಿಶೇಷ.

ಈ ಬಗ್ಗೆ ಮಾಹಿತಿ ನೀಡಿರುವ ರಣವೀರ್ ಸಚದೇವ್, “ಭಾರತದ AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ನಾನು ಅತ್ಯಂತ ಕಿರಿಯ ಮುಖ್ಯ ಭಾಷಣಕಾರನಾಗಿ ಭಾಗವಹಿಸಲು ಬಂದಿದ್ದೇನೆ. ಪ್ರಾಚೀನ ಭಾರತೀಯ ತತ್ವಶಾಸ್ತ್ರಗಳನ್ನು ಆಧುನಿಕ ತಂತ್ರಜ್ಞಾನಗಳ ಜೊತೆ ಹೇಗೆ ಲಿಂಕ್ ಮಾಡಬಹುದು ಎಂಬುದರ ಕುರಿತು ನಾನು ಮಾತನಾಡಿದ್ದೇನೆ. ಉಳಿದ ರಾಷ್ಟ್ರಗಳು AI ಅನ್ನು ಹೇಗೆ ನಿರ್ಮಿಸುತ್ತಿವೆ ಎಂಬುದರ ಕುರಿತು ಕೂಡ ನಾನು ಮಾತನಾಡಿದ್ದೇನೆ. ನಾನು ಇದೀಗ ಬಿಡುಗಡೆಯಾದ ಭಾರತೀಯ AI ಮಾದರಿಯ ನನ್ನ ಸ್ವಂತ ಬಳಕೆಯ ಕೇಸನ್ನು ಕೂಡ ಹಂಚಿಕೊಂಡಿದ್ದೇನೆ. ನಾನು ಭಾರತದ GDPಗೆ ಹೇಗೆ ಕೊಡುಗೆ ನೀಡುತ್ತಿದ್ದೇನೆ ಮತ್ತು ಅದರೊಂದಿಗೆ AI ಸಾಕ್ಷರತೆಯನ್ನು ಹೇಗೆ ಹೆಚ್ಚಿಸುತ್ತಿದ್ದೇನೆ ಎಂಬುದರ ಮಾಹಿತಿಯನ್ನು ಹಂಚಿಕೊಂಡಿದ್ದೇನೆ” ಎಂದು ವಿವರಿಸಿದ್ದಾನೆ.

ಇದನ್ನೂ ಓದಿ: Sarvam AI: ಗೂಗಲ್ ಜೆಮಿನಿ, ಚಾಟ್‌ಜಿಪಿಟಿ ಹಿಂದಿಕ್ಕಿದ ಬೆಂಗಳೂರಿನ ‘ಸರ್ವಂ AI’ನ ಸಹ ಸಂಸ್ಥಾಪಕ ಪ್ರತ್ಯೂಷ್ ಕುಮಾರ್ ಯಾರು?

ಅಂದಹಾಗೆ, ರಣವೀರ್ ಜಾಗತಿಕ ವೇದಿಕೆಯಲ್ಲಿ ಮಾತನಾಡುತ್ತಿರುವುದು ಇದೇ ಮೊದಲೇನಲ್ಲ. 2025ರಲ್ಲಿ ಸ್ವಿಜರ್ಲೆಂಡ್‌ನ ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆಯ AI ಫಾರ್ ಗುಡ್ ಗ್ಲೋಬಲ್ ಶೃಂಗಸಭೆಯಲ್ಲಿ ಆತನನ್ನು ಅತ್ಯಂತ ಕಿರಿಯ ಮುಖ್ಯ ಭಾಷಣಕಾರರಾಗಿ ಆಹ್ವಾನಿಸಲಾಗಿತ್ತು. ಆಗ ಆತನಿಗೆ ಕೇವಲ 7 ವರ್ಷವಾಗಿತ್ತು.

ಇಷ್ಟು ಚಿಕ್ಕ ವಯಸ್ಸಿನಲ್ಲಿಯೂ ಸಹ, ರಣವೀರ್ ಸಚ್​ದೇವ್ 180ಕ್ಕೂ ಹೆಚ್ಚು ದೇಶಗಳು, 53 ವಿಶ್ವಸಂಸ್ಥೆಯ ಪಾಲುದಾರ ಸಂಸ್ಥೆಗಳು ಮತ್ತು ಜಾಗತಿಕ AI ನಾಯಕರನ್ನು ವಿಶ್ವಾಸದಿಂದ ಉದ್ದೇಶಿಸಿ ಮಾತನಾಡಿದ್ದು ವಿಶೇಷವಾಗಿತ್ತು. “ಬದಲಾವಣೆಯ ಏಜೆಂಟ್‌ಗಳು: ಜನರೇಷನ್ AI ಫಾರ್ ಗುಡ್” ಎಂಬ ವಿಷಯ ಕುರಿತು ರಣವೀರ್ 20 ನಿಮಿಷಗಳ ಕಾಲ ಮಾತನಾಡಿದ್ದು ಭಾರೀ ಚರ್ಚೆಗೆ ಕಾರಣವಾಗಿದ್ದು, ಮೆಚ್ಚುಗೆಯೂ ವ್ಯಕ್ತವಾಗಿದೆ.

ಇದನ್ನೂ ಓದಿ: AI Professional Courses: AI ಕೌಶಲ್ಯ ಹೆಚ್ಚಿಸಲು ಗೂಗಲ್​​ನಿಂದ ಹೊಸ ವೃತ್ತಿಪರ ಪ್ರಮಾಣಪತ್ರ ಕಾರ್ಯಕ್ರಮ

ರಣವೀರ್ ಆಪಲ್ ಸಿಇಒ ಟಿಮ್ ಕುಕ್ ನಡೆಸಿದ ಅಧಿವೇಶನದಲ್ಲಿ ಅವರನ್ನು ಭೇಟಿಯಾಗಿದ್ದ. ಅಲ್ಲಿ ಆತನನ್ನು ನೋಡಿ ಕುಕ್ ಬಹಳ ಪ್ರಭಾವಿತರಾಗಿದ್ದರು. ಆಪಲ್ ಸಿಇಒ ಕ್ಯುಪರ್ಟಿನೊದಲ್ಲಿರುವ ಆಪಲ್ ಪ್ರಧಾನ ಕಚೇರಿಯಲ್ಲಿ ನಡೆಯಲಿರುವ ವರ್ಲ್ಡ್‌ವೈಡ್ ಡೆವಲಪರ್ ಕಾನ್ಫರೆನ್ಸ್ 2023ರಲ್ಲಿ ಭಾಗವಹಿಸಲು ರಣವೀರ್​​ಗೆ ವೈಯಕ್ತಿಕ ಆಹ್ವಾನವನ್ನು ನೀಡಿದ್ದರು ಎಂಬುದು ವಿಶೇಷ.

ರಣವೀರ್​​ನ ಹೆಸರನ್ನು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಪಟ್ಟಿ ಮಾಡಲಾಗಿದೆ. ಆತ ಏಷ್ಯಾದ ಅತ್ಯಂತ ಕಿರಿಯ TEDx ಭಾಷಣಕಾರ. AI ಫಾರ್ ಗುಡ್ ವೆಬ್‌ಸೈಟ್‌ನಲ್ಲಿ ಹೇಳಿರುವಂತೆ ರಣವೀರ್ ಪ್ರಸ್ತುತ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಯಂತ್ರ ಕಲಿಕೆ ಕೋರ್ಸ್ ಮಾಡುತ್ತಿದ್ದಾನೆ. ಆತ ಅಂತಾರಾಷ್ಟ್ರೀಯ ದೂರಸಂಪರ್ಕ ಒಕ್ಕೂಟದ ITU160 ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾನೆ. ರಣವೀರ್ “ಆರ್​ ಯು ಬಾರ್ನ್ ವಿಥ್ AI?” ಎಂಬ ಪುಸ್ತಕ ಕೂಡ ಬರೆದಿದ್ದಾನೆ. ಇದು ವಿಶ್ವಾದ್ಯಂತ Amazonನಲ್ಲಿ ಲಭ್ಯವಿದೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಈ ಪುಸ್ತಕಕ್ಕಾಗಿ ರಣವೀರ್​ನನ್ನು ವೈಯಕ್ತಿಕವಾಗಿ ಅಭಿನಂದಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link