All posts by nagaraj11081993

ನಾನು ಸ್ಟಾರ್ ಆಗಲು ಸಲ್ಮಾನ್ ಖಾನ್ ತಂದೆ ಕಾರಣ ಎಂದಿದ್ದ ಶಾರುಖ್ – Kannada News | Shah Rukh Khan once said I am who I am because of Salim Khan

ಶಾರುಖ್ ಖಾನ್ (Shah Rukh Khan) ಈಗ ಬಾಲಿವುಡ್​ನ ಸೂಪರ್ ಸ್ಟಾರ್ ನಟ. ಕಳೆದ ಕೆಲವ ವರ್ಷಗಳಲ್ಲಿ ಸಲ್ಮಾನ್ ಖಾನ್ ಮತ್ತು ಆಮಿರ್ ಖಾನ್ ಅವರುಗಳನ್ನು ಸಹ ಹಿಂದಿಕ್ಕಿ ನಂಬರ್ 1 ಎನಿಸಿಕೊಂಡಿದ್ದಾರೆ. ಸಲ್ಮಾನ್ ಮತ್ತು ಆಮಿರ್ ಅವರಂತೆ ಚಿತ್ರರಂಗದ ಹಿನ್ನೆಲೆ ಇಲ್ಲದೆ ಕೇವಲ ಪ್ರತಿಭೆಯ ಆಧಾರದ ಮೇಲೆ ಅವಕಾಶ ಗಿಟ್ಟಿಸಿಕೊಂಡು ಸ್ಟಾರ್ ಆಗಿ ಬೆಳೆದವರು ಶಾರುಖ್ ಖಾನ್. ಆದರೆ ಹಿಂದೆ ಸಂದರ್ಶನವೊಂದರಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್ ಅವರ ತಂದೆಯನ್ನು ಕೊಂಡಾಡಿದ್ದರು. ಯಾವ ಮಟ್ಟಿಗೆಂದರೆ, ‘ನಾನು ಇಂದು ಏನಾಗಿದ್ದೇನೊ ಅದಕ್ಕೆ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಕಾರಣ’ ಎಂದಿದ್ದರು. ಇಂದು ಆಸ್ಪತ್ರೆಯಲ್ಲಿ ಮಲಗಿರುವ ಸಲೀಂ ಖಾನ್, ಶಾರುಖ್ ಖಾನ್​​ಗೆ ಮಾಡಿದ್ದ ಸಹಾಯ ಎಂಥಹದ್ದು?

ಶಾರುಖ್ ಖಾನ್ ಮೂಲತಃ ದೆಹಲಿಯವರು. ಅವರು ನಟನಾಗಲೆಂದೇ ಮುಂಬೈಗೆ ಬಂದರು ಅದೂ ಬಹಳ ಸಣ್ಣ ವಯಸ್ಸಿನಲ್ಲಿ. ಕೇವಲ 15ನೇ ವಯಸ್ಸಿಗೆ ತಂದೆಯನ್ನು ಕಳೆದುಕೊಂಡಿದ್ದ ಶಾರುಖ್ ಖಾನ್​​ 19ರ ವಯಸ್ಸಿನಲ್ಲೇ ಮುಂಬೈಗೆ ಬಂದಿದ್ದರು. ಕುಟುಂಬವನ್ನು ಬಿಟ್ಟು ಬಂದಿದ್ದ ಶಾರುಖ್ ಖಾನ್​​ ಅವರಿಗೆ ಕುಟುಂಬ ಎಂದು ದೊರೆತಿದ್ದು ಸಲ್ಮಾನ್ ಖಾನ್ ಅವರ ಕುಟುಂಬ. ಅವರೇ ಹೇಳಿಕೊಂಡಿದ್ದಂತೆ ಶಾರುಖ್ ಖಾನ್ ಅವರು ಸಲೀಂ ಖಾನ್ ಅವರ ಮನೆಯಲ್ಲಿ ಹಲವು ಸಮಯ ನೆಲೆಸಿದ್ದರಂತೆ. ಸಲೀಂ ಖಾನ್ ಅವರು ನನ್ನ ವೃತ್ತಿ ಜೀವನದ ಆರಂಭದ ಸಮಯದಲ್ಲಿ ಸಾಕಷ್ಟು ಸಹಾಯ ಮಾಡಿದ್ದರು ಎಂದು ಅವರು ನೆನಪು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ತಮ್ಮದೇ ಹಳೆ ಸೂಪರ್ ಹಿಟ್ ಸಿನಿಮಾದ ಸೀಕ್ವೆಲ್​​ನಲ್ಲಿ ನಟಿಸಲಿದ್ದಾರೆ ಶಾರುಖ್ ಖಾನ್

ಇತ್ತೀಚೆಗೆ ಸಹ ಸಂದರ್ಶನವೊಂದರಲ್ಲಿ, ‘ಸಿನಿಮಾ ಹಿನ್ನೆಲೆ ಇಲ್ಲದ ಕುಟುಂಬದವನು ಎಂದು ನನಗೆ ಹೇಳಬೇಡಿ, ನಾನು ಸಲ್ಮಾನ್ ಖಾನ್ ಕುಟುಂಬದ ಸದಸ್ಯ’ ಎಂದಿದ್ದರು. ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ವೃತ್ತಿಯಲ್ಲಿ ಪ್ರತಿಸ್ಪರ್ಧಿಗಳಾಗಿದ್ದರೂ ಸಹ ಅತ್ಯುತ್ತಮ ಗೆಳೆಯರಾಗಿದ್ದರು. ಆಮಿರ್ ಖಾನ್ ಸಹ ಇವರ ಆತ್ಮೀಯ ಗೆಳೆಯರೇ ಆಗಿದ್ದರು. ಅದರೆ ಕತ್ರಿನಾ ಕೈಫ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸಲ್ಮಾನ್ ಮತ್ತು ಶಾರುಖ್ ಖಾನ್ ಪರಸ್ಪರ ಜಗಳ ಮಾಡಿಕೊಂಡು ದೂರಾಗಿದ್ದರು. ಆದರೆ ಬಳಿಕ ಇಬ್ಬರೂ ಮತ್ತೆ ಮುನಿಸು ಮರೆತು ಒಂದಾದರು. ಶಾರುಖ್ ಖಾನ್ ಪುತ್ರ ಡ್ರಗ್ಸ್ ಕೇಸಿನಲ್ಲಿ ಬಂಧನಕ್ಕೆ ಒಳಗಾದಾಗ ಸಲ್ಮಾನ್ ಖಾನ್ ಖುದ್ದು ಶಾರುಖ್ ಖಾನ್ ಮನೆಗೆ ಭೇಟಿ ನೀಡಿ, ಸಂಕಷ್ಟದ ಸಮಯದಲ್ಲಿ ಗೆಳೆಯನ ಜೊತೆಗೆ ನಿಂತಿದ್ದರು.

ಶಾರುಖ್ ಖಾನ್, ತಂದೆಯಂತೆ ಕಂಡಿದ್ದ ಸಲೀಂ ಖಾನ್ ಅವರು ಇದೀಗ ಆಸ್ಪತ್ರೆಯಲ್ಲಿದ್ದಾರೆ. ಸಲೀಂ ಖಾನ್ ಅವರಿಗೆ ಮೆದುಳಿನಲ್ಲಿ ರಕ್ತಸ್ರಾವ ಆಗಿದೆ ಎನ್ನಲಾಗಿದ್ದು, ಸಣ್ಣ ಶಸ್ತ್ರಚಿಕಿತ್ಸೆ ಸಹ ಮಾಡಲಾಗಿದೆಯಂತೆ. ಇತ್ತೀಚೆಗಿನ ವರದಿಗಳ ಪ್ರಕಾರ, ಸಲೀಂ ಖಾನ್ ಅವರು ಸುಧಾರಿಸಿಕೊಳ್ಳುತ್ತಿದ್ದು, ಶೀಘ್ರವೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಾಜಮೌಳಿಯ ‘ವಾರಣಾಸಿ’ ಸಿನಿಮಾನಲ್ಲಿ ಸುದೀಪ್ ನಟನೆ? – Kannada News | Sudeep may act in SS Rajamouli’s Varanasi movie: Report

ಎಸ್​​ಎಸ್ ರಾಜಮೌಳಿ (SS Rajamouli) ಪ್ರಸ್ತುತ ಭಾರತ ಚಿತ್ರರಂಗದ ನಂಬರ್ 1 ನಿರ್ದೇಶಕ. ಭಾರಿ ಬಜೆಟ್​ನ ‘ವಾರಣಾಸಿ’ ಸಿನಿಮಾವನ್ನು ಅವರು ನಿರ್ದೇಶಿಸುತ್ತಿದ್ದಾರೆ. ಹಾಲಿವುಡ್ ಲೆವೆಲ್​​ನಲ್ಲಿ ನಿರ್ಮಾಣ ಆಗುತ್ತಿರುವ ಈ ಸಿನಿಮಾವನ್ನು ಭಾರತ ಮಾತ್ರವಲ್ಲದೆ ಹಾಲಿವುಡ್ ಮಾರುಕಟ್ಟೆಯನ್ನೂ ಸಹ ಗಮನದಲ್ಲಿರಿಸಿಕೊಂಡೇ ನಿರ್ಮಾಣ ಮಾಡಲಾಗುತ್ತಿದೆ. ಸಿನಿಮಾನಲ್ಲಿ ಮಹೇಶ್ ಬಾಬು ನಾಯಕ, ಪ್ರಿಯಾಂಕಾ ಚೋಪ್ರಾ ನಾಯಕಿ, ಪೃಥ್ವಿರಾಜ್ ಸುಕುಮಾರ್ ವಿಲನ್. ಇವರ ಜೊತೆಗೆ ಇನ್ನೂ ಕೆಲವು ಬೇರೆ ಬೇರೆ ಕಲಾವಿದರು ನಟಿಸುತ್ತಿದ್ದಾರೆ. ಆದರೆ ಇದೇ ಸಿನಿಮಾನಲ್ಲಿ ಕನ್ನಡದ ಸ್ಟಾರ್ ನಟ ಸುದೀಪ್ ಸಹ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಪಿಂಕ್​​ವಿಲ್ಲಾ ಸೌಥ್ ಮಾಡಿರುವ ವರದಿಯಂತೆ, ಸುದೀಪ್ ಅವರು ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಸಿನಿಮಾನಲ್ಲಿ ಪ್ರಮುಖವಾದ ಪಾತ್ರವೊಂದರಲ್ಲಿ ನಟಿಸಲಿದ್ದಾರೆ. ಈ ಹಿಂದೆ ರಾಜಮೌಳಿ ನಿರ್ದೇಶನದ ‘ಈಗ’ ಮತ್ತು ‘ಬಾಹುಬಲಿ: ದಿ ಬಿಗಿನಿಂಗ್’ ಸಿನಿಮಾಗಳಲ್ಲಿ ಸುದೀಪ್ ನಟಿಸಿದ್ದು, ಎರಡೂ ಸಿನಿಮಾಗಳಲ್ಲಿ ಅತ್ಯದ್ಭುತ ಪ್ರದರ್ಶನವನ್ನು ಸುದೀಪ್ ನೀಡಿದ್ದರು. ಇದೀಗ ಮೂರನೇ ಬಾರಿಗೆ ರಾಜಮೌಳಿ ಜೊತೆಗೆ ಸುದೀಪ್ ಜೊತೆ ಆಗುತ್ತಿದ್ದಾರೆ. ‘ವಾರಣಾಸಿ’ ಸಿನಿಮಾನಲ್ಲಿ ಸುದೀಪ್ ಅವರ ಪಾತ್ರವು, ಸಿನಿಮಾದ ಕತೆಗೆ ಮಹತ್ತರವಾದ ತಿರುವು ನೀಡುವ ಪಾತ್ರವಾಗಿರುತ್ತದೆ ಎನ್ನಲಾಗುತ್ತಿದೆ.

ಸ್ವತಃ ರಾಜಮೌಳಿ ಅವರೇ ಈ ಹಿಂದೆ ಹಲವು ಬಾರಿ ಹೇಳಿಕೊಂಡಿರುವಂತೆ ಸುದೀಪ್, ಅವರ ನೆಚ್ಚಿನ ನಟ. ‘ಈಗ’ ಸಿನಿಮಾದ ಸುದೀಪ್ ನಟನೆ ರಾಜಮೌಳಿಗೆ ಅಚ್ಚುಮೆಚ್ಚಂತೆ, ‘ನನ್ನ ಸಿನಿಮಾಗಳಲ್ಲಿ ನನಗೆ ನಾಯಕನಿಗಿಂತಲೂ ವಿಲನ್ ಇಷ್ಟ, ಅದರಲ್ಲೂ ನನ್ನ ಸಿನಿಮಾಗಳಲ್ಲಿ ನನ್ನ ಮೆಚ್ಚಿನ ವಿಲನ್ ಸುದೀಪ್’ ಎಂದು ಈ ಹಿಂದೆ ಅವರು ಹೇಳಿಕೊಂಡಿದ್ದರು. ಇದೇ ಕಾರಣಕ್ಕೆ ಸುದೀಪ್ ಅವರನ್ನು ‘ಬಾಹುಬಲಿ’ ಸಿನಿಮಾದ ಅರೇಬಿಯಾದ ಕತ್ತಿಗಳ ವ್ಯಾಪಾರಿ ಅಸ್ಲಂ ಖಾನ್ ಪಾತ್ರಕ್ಕೆ ಹಾಕಿಕೊಂಡಿದ್ದರು. ಒಳ್ಳೆಯ ಫೈಟ್ ಸಹ ಆ ಸಿನಿಮಾನಲ್ಲಿ ಸುದೀಪ್ ಅವರಿಗೆ ಇತ್ತು.

ಇದನ್ನೂ ಓದಿ:‘ವಾರಣಾಸಿ’ ಚಿತ್ರಕ್ಕಾಗಿ ಅತ್ಯಂತ ವೇಗದಲ್ಲಿ ಕೆಲಸ ಮಾಡುತ್ತಿದ್ದಾರೆ ರಾಜಮೌಳಿ

ರಾಜಮೌಳಿ ಅವರ ಈ ವರೆಗಿನ ಸಿನಿಮಾಗಳಲ್ಲಿಯೇ ಅತ್ಯಂತ ನಿರೀಕ್ಷಿತ ಮತ್ತು ಅತ್ಯಂತ ದುಬಾರಿ ಸಿನಿಮಾ ಆಗಿರುವ ‘ವಾರಣಾಸಿ’ಯಲ್ಲೂ ಸುದೀಪ್ ಅವರಿಗೆ ವಿಶೇಷ ಪಾತ್ರವೊಂದನ್ನು ರಾಜಮೌಳಿ ನೀಡುತ್ತಿದ್ದು, ಆ ಪಾತ್ರ ಹೇಗಿರಲಿದೆ ಎಂಬ ಕುತೂಹಲ ಸಹಜವಾಗಿಯೇ ಇದೆ. ಸುದೀಪ್ ಅವರು ‘ವಾರಣಾಸಿ’ ಸಿನಿಮಾನಲ್ಲಿ ನಟಿಸಲಿರುವ ಸುದ್ದಿ ಖಾತ್ರಿ ಆಗಿಲ್ಲ. ಆದರೆ ಆದಷ್ಟು ಬೇಗ ಸುದ್ದಿಯನ್ನು ಚಿತ್ರತಂಡವೇ ಹಂಚಿಕೊಳ್ಳಲಿದೆ ಎನ್ನಲಾಗುತ್ತಿದೆ.

‘ವಾರಣಾಸಿ’ ಸಿನಿಮಾವು ಮುಂದಿನ ವರ್ಷ ಏಪ್ರಿಲ್ 07 ರಂದು ಬಿಡುಗಡೆ ಆಗಲಿದೆ. ಸಿನಿಮಾದ ಅರ್ಧಕ್ಕೂ ಹೆಚ್ಚು ಭಾಗದ ಚಿತ್ರೀಕರಣವನ್ನು ರಾಜಮೌಳಿ ಮುಗಿಸಿದ್ದಾರೆ. ಈ ಸಿನಿಮಾಕ್ಕೆ ಸುಮಾರು 1000 ಕೋಟಿ ಬಜೆಟ್ ಹೂಡಲಾಗಿದ್ದು, ಸಿನಿಮಾವನ್ನು ಪಿವಿಆರ್ ಕ್ಯಾಮೆರಾಗಳನ್ನು ಬಳಸಿ ಚಿತ್ರೀಕರಿಸಿರುವುದು ವಿಶೇಷ. ಸಿನಿಮಾಕ್ಕಾಗಿ ಕೆಲವು ಹಾಲಿವುಡ್ ಸಂಸ್ಥೆಗಳು ಸಹ ಕೆಲಸ ಮಾಡಿವೆ. ಸಿನಿಮಾಕ್ಕೆ ಆಸ್ಕರ್ ವಿಜೇತ ಎಂಎಂ ಕೀರವಾಣಿ ಅವರು ಸಂಗೀತ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 6:46 pm, Thu, 19 February 26

Source link

ಮಂಗಳೂರಿನಲ್ಲಿ ಘೋರ ದುರಂತ: ಬಾಲ್ ಎಂದು ಬಾಂಬ್​​​​​ನಿಂದ ಬೌಲಿಂಗ್: ಬ್ಯಾಟ್​ನಿಂದ ಹೊಡೆದಾಗ ಬ್ಲಾಸ್ಟ್ – Kannada News | Mangaluru: Ball Shaped Object Explodes After Boy Hits It With Bat, Injured

ಸ್ಫೋಟಗೊಂಡ ವಸ್ತು, ಬಾಲಕನ ಕಾಲಿಗೆ ಗಾಯ

ಮಂಗಳೂರು, ಫೆಬ್ರವರಿ 19: ಚೆಂಡಿನ ಆಕಾರದ ವಸ್ತು ಸ್ಫೋಟಗೊಂಡು (explosion) ಓರ್ವ ಬಾಲಕನಿಗೆ ಗಾಯವಾಗಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ‌ ಬಂದಾರು ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಅಭೀಶ್​ ಎಂಬ ಬಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿದೆ. ಆಟ ಆಡುತ್ತಿದ್ದ ವೇಳೆ ಪತ್ತೆ ಚೆಂಡಿನಾಕಾರದ ವಸ್ತು ಪತ್ತೆಯಾಗಿದೆ. ಬಾಲ್​ ಅಂದುಕೊಂಡು ಬ್ಯಾಟ್​ನಿಂದ ಹೊಡೆದಾಗ ಬ್ಲಾಸ್ಟ್ ಆಗಿದೆ. ಸದ್ಯ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಮತ್ತಷ್ಟು ಮಾಹಿತಿ ಅಪ್​ಡೇಟ್​ ಆಗಲಿದೆ.

Source link

Chanakya Niti: ಈ ಕೆಲವು ಸಂದರ್ಭಗಳಲ್ಲಿ ಮೌನವಾಗಿರುವುದೇ ಉತ್ತಮ – Kannada News | Chanakya Niti: It is better to remain silent than to speak in these situations

ಆಚಾರ್ಯ ಚಾಣಕ್ಯರು (Acharya Chanakya) ರಾಜಕೀಯ ವಿಷಯಗಳು ಮಾತ್ರವಲ್ಲ ಜೀವನಕ್ಕೆ ಸಂಬಂಧಿಸಿದ ಸಾಕಷ್ಟು ವಿಚಾರಗಳ ಬಗ್ಗೆ ತಮ್ಮ ನೀತಿಶಾಸ್ತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ. ಯಶಸ್ಸು, ಶ್ರೀಮಂತಿಕೆ ಗಳಿಸಲು ಏನು ಮಾಡಬೇಕು ದಾಂಪತ್ಯ ಜೀವನ ಚೆನ್ನಾಗಿರಬೇಕೆಂದರೆ ಪತಿಪತ್ನಿಯರು ಹೇಗಿರಬೇಕು ಎಂಬುದರ ಬಗ್ಗೆ ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆ. ಅದೇ ರೀತಿ ಅವರು ಜೀವನದಲ್ಲಿ ಎದುರಾಗುವಂತಹ ಅನಗತ್ಯ ಸಂಕಷ್ಟಗಳನ್ನು ತಪ್ಪಿಸಲು ಒಂದಷ್ಟು ಸಂದರ್ಭಗಳಲ್ಲಿ ಮಾತನಾಡದೇ ಮೌನವಾಗಿರಬೇಕು ಎಂದು ಎಚ್ಚರಿಕೆಯ ಸಂದೇಶವನ್ನೂ ನೀಡಿದ್ದಾರೆ. ಹಾಗಿದ್ರೆ ಯಾವೆಲ್ಲಾ ಸಂದರ್ಭಗಳಲ್ಲಿ ಮೌನವಾಗಿರಬೇಕು ಎಂಬುದನ್ನು ತಿಳಿದುಕೊಳ್ಳಿ.

ಈ ಸಂದರ್ಭಗಳಲ್ಲಿ ಮೌನವಾಗಿರುವುದೇ ಉತ್ತಮ:

ಯಾರೂ ನಿಮ್ಮ ಮಾತನ್ನು ಕೇಳಲು ಸಿದ್ಧರಿಲ್ಲದಿದ್ದಾಗ: ಚಾಣಕ್ಯರು ಹೇಳುವಂತೆ ನಿಮ್ಮ ಮಾತನ್ನು ಕೇಳದವರ ಬಳಿ ನೀವು ಮಾತನಾಡುವುದು ಅಥವಾ ಅವರಿಗೆ  ನೀಡುವುದು ನಿಷ್ಪ್ರಯೋಜಕ. ನಿಮ್ಮ ಮಾತುಗಳಿಗೆ ಬೆಲೆ ಇಲ್ಲದಿರುವಲ್ಲಿ ನೀವು ಮೌನವಾಗಿರುವುದೇ ಉತ್ತಮ.

ನಿಮಗೆ ಸಂಪೂರ್ಣ ಮಾಹಿತಿ ಇಲ್ಲದಿದ್ದಾಗ: ಅಪೂರ್ಣ ಜ್ಞಾನ ಯಾವಾಗಲೂ ಅಪಾಯಕಾರಿ. ಒಂದು ವಿಷಯದ ಬಗ್ಗೆ ನಿಮಗೆ ಎಲ್ಲವೂ ತಿಳಿದಿಲ್ಲದಿದ್ದರೆ,  ಅದರ ಬಗ್ಗೆ ಮಾತನಾಡಲು ಹೋಗಬೇಡಿ, ಆ ಸಂದರ್ಭದಲ್ಲಿ ಮೌನವಾಗಿರುವುದೇ ಉತ್ತಮ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಈ ಸಂದರ್ಭಗಳಲ್ಲಿ ಮೌನವಾಗಿರುವುದರಿಂದ ನೀವು ನಗೆಪಾಟಲಿಗೆ ಗುರಿಯಾಗುವುದನ್ನು ತಪ್ಪಿಸಬಹುದು ಜೊತೆಗೆ ನಿಮಗೆ ಎದುರಾಗುವ ಅಪಾಯವನ್ನೂ ತಪ್ಪಿಸಬಹುದು.

ಕೋಪದಲ್ಲಿರುವಾಗ ಮೌನವಾಗಿರಿ: ಕೋಪದಲ್ಲಿ ಯಾವತ್ತೂ ಮಾತನಾಡಲು ಹೋಗಬಾರದು ಎಂದು ಚಾಣಕ್ಯರು ಒತ್ತಿ ಹೇಳಿದ್ದಾರೆ. ಕೋಪದಲ್ಲಿ ಮಾತನಾಡುವ ಮಾತುಗಳು ಸಂಬಂಧಗಳಲ್ಲಿ ಬಿರುಕು ಉಂಟುಮಾಡುತ್ತವೆ, ಇದರಿಂದ ಸುಂದರ ಸಂಬಂಧವೇ ಹಾಳಾಗುತ್ತದೆ. ಆದ್ದರಿಂದ ನೀವು ಕೋಪಗೊಂಡಾಗಲೆಲ್ಲಾ ತಕ್ಷಣ ಮೌನವಾಗಿರಿ. ಮೌನವು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ನಿಮ್ಮನ್ನು ರಕ್ಷಿಸುತ್ತದೆ.

ಇದನ್ನೂ ಓದಿ: ಯೌವನದಲ್ಲಿ ಕೆಲಸಗಳನ್ನು ಮಾಡಿದರೆ ವೃದ್ಧಾಪ್ಯವು ಸಂತೋಷದಿಂದಿರುವುದು

ಯಾರಾದರೂ ಯಾರ ಬಗ್ಗೆಯಾದರೂ ಗಾಸಿಪ್‌ ಮಾಡುವಾಗ: ಮೂರನೇ ವ್ಯಕ್ತಿಯೊಬ್ಬರು ನಿಮ್ಮ ಮುಂದೆ ಯಾರನ್ನಾದರೂ ಗಾಸಿಪ್ ಮಾಡುತ್ತಿದ್ದರೆ ಅಥವಾ ಆ ವ್ಯಕ್ತಿಯ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದರೆ, ಆ ಚರ್ಚೆಯಲ್ಲಿ ತೊಡಗಿಕೊಳ್ಳುವುದನ್ನು ತಪ್ಪಿಸಿ. ನಿಮ್ಮ ಈ ಮೌನವು ಭವಿಷ್ಯದಲ್ಲಿ ದೊಡ್ಡ ಘರ್ಷಣೆಗಳು ಮತ್ತು ವಿವಾದಗಳಿಂದ ನಿಮ್ಮನ್ನು ರಕ್ಷಿಸುತ್ತದೆ.

ನಿಮ್ಮ ಗುರಿಗಳು ಮತ್ತು ರಹಸ್ಯಗಳ ಬಗ್ಗೆ ಮಾತನಾಡಬೇಡಿ: ಆಚಾರ್ಯ ಚಾಣಕ್ಯರು ನಿಮ್ಮ ರಹಸ್ಯಗಳನ್ನು ಮತ್ತು ಯಶಸ್ಸಿನ ಹಾದಿಯನ್ನು ಎಂದಿಗೂ ಹಂಚಿಕೊಳ್ಳಬಾರದು, ಇದರ ಬಗ್ಗೆ ಮೌನವಾಗಿರುವುದು ಉತ್ತಮ ಎಂದು ಹೇಳಿದ್ದಾರೆ. ನಿಮ್ಮ ಗುರಿ ಸಾಧಿಸುವವರೆಗೆ ಮೌನವಾಗಿರಿ. ಏಕೆಂದರೆ ನಿಮ್ಮ ರಹಸ್ಯಗಳನ್ನು ಹಂಚಿಕೊಂಡರೆ ಕೆಲವರು ನಿಮ್ಮ ದಾರಿಗೆ ಅಡ್ಡಿಯುಂಟುಮಾಡುವ ಸಾಧ್ಯತೆ ಇರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮತ್ತೆ ಬರಲಿದೆ ‘ಅಮರನ್’ ಕಾಂಬಿನೇಷನ್; ‘ಸಿಯೋನ್’ ಚಿತ್ರಕ್ಕೆ ಕಮಲ್ ಬಂಡವಾಳ – Kannada News | Kamal Haasan and Sivakarthikeyan new movie title Seyon First Look released

ಕಮಲ್ ಹಾಸನ್ (Kamal Haasan) ಅವರು ಯಶಸ್ವಿ ನಿರ್ಮಾಪಕ ಕೂಡ ಹೌದು. ಬೇರೆ ಹೀರೋಗಳ ಸಿನಿಮಾಗಳಿಗೆ ಬಂಡವಾಳ ಹೂಡುವ ಮೂಲಕ ಅವರು ಉತ್ತಮ ಕಥೆಗಳನ್ನು ಪ್ರೇಕ್ಷಕರ ಎದುರು ತರುತ್ತಿದ್ದಾರೆ. ಈ ಮೊದಲು ಶಿವಕಾರ್ತಿಕೇಯನ್ (Sivakarthikeyan) ನಟನೆಯ ‘ಅಮರನ್’ ಸಿನಿಮಾವನ್ನು ಕಮಲ್ ಹಾಸನ್ ನಿರ್ಮಾಣ ಮಾಡಿದ್ದರು. ಈಗ ಮತ್ತೆ ಅವರು ಶಿವಕಾರ್ತಿಕೇಯನ್ ಜೊತೆ ಕೈ ಜೋಡಿಸಿದ್ದಾರೆ. ‘ಸಿಯೋನ್’ (Seyon) ಸಿನಿಮಾವನ್ನು ಕಮಲ್ ಹಾಸನ್ ಅವರು ನಿರ್ಮಾಣ ಮಾಡುತ್ತಿದ್ದಾರೆ.

ಶಿವಕಾರ್ತಿಕೇಯನ್ ನಟನೆ ಮತ್ತು ಕಮಲ್ ಹಾಸನ್ ನಿರ್ಮಾಣದ ಕಾಂಬಿನೇಷನ್​ನಲ್ಲಿ ಮೂಡಿಬಂದಿದ್ದ ‘ಅಮರನ್’ ಸಿನಿಮಾ ಹಿಟ್ ಆಗಿತ್ತು. ಈಗ ಅದೇ ಭರವಸೆಯಲ್ಲಿ ‘ಸಿಯೋನ್’ ಸಿನಿಮಾ ತಯಾರಾಗುತ್ತಿದೆ. ಈ ಸಿನಿಮಾದಲ್ಲಿ ಕೂಡ ಒಂದು ವಿಶೇಷವಾದ ಕಥಾವಸ್ತುವನ್ನು ಜನರಿಗೆ ಪರಿಚಯಿಸಲಾಗುತ್ತದೆ. ಚಿತ್ರದ ಮೊದಲ ಗ್ಲಿಂಪ್ಸ್ ಬಿಡುಗಡೆ ಆಗಿದ್ದು, ಅದರಲ್ಲಿ ಕಥೆಯ ಸುಳಿವು ಸಿಕ್ಕಿದೆ.

‘ರಾಜ್ ಕಮಲ್ ಇಂಟರ್ನ್ಯಾಷನಲ್’ ಮತ್ತು ‘ಟರ್ಮಿರಿಕ್ ಮೀಡಿಯಾ’ ಸಂಸ್ಥೆಗಳ ಮೂಲಕ ಕಮಲ್ ಹಾಸನ್ ಮತ್ತು ಆರ್. ಮಹೇಂದ್ರನ್ ಅವರು ‘ಸಿಯೋನ್’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ಅದ್ದೂರಿಯಾಗಿ ಮೂಡಿಬರುತ್ತಿದೆ. ಶಿವಕಾರ್ತಿಕೇಯನ್ ಅವರ ಹುಟ್ಟುಹಬ್ಬದ ವಿಶೇಷವಾಗಿ ಗ್ಲಿಂಪ್ಸ್ ಬಿಡುಗಡೆ ಮಾಡಲಾಗಿದೆ.

ಇದರಲ್ಲಿ ಶಿವಕಾರ್ತಿಕೇಯನ್ ಅವರ ಗೆಟಪ್ ಗಮನ ಸೆಳೆಯುತ್ತಿದೆ. ಹಣೆಯಲ್ಲಿ ವಿಭೂತಿ ಧರಿಸಿ, ಕೈಯಲ್ಲಿ ಕತ್ತಿ ಹಿಡಿದು ಮಾಸ್ ಅವತಾರದಲ್ಲಿ ಶಿವಕಾರ್ತಿಕೇಯನ್ ಅವರು ಕಾಣಿಸಿಕೊಂಡಿದ್ದಾರೆ. ಗ್ಲಿಂಪ್ಸ್ ನೋಡಿದ ಅಭಿಮಾನಿಗಳಿಗೆ ಈ ಸಿನಿಮಾ ಮೇಲೆ ನಿರೀಕ್ಷೆ ಮೂಡುವಂತಾಗಿದೆ. 2026ರ ಅಕ್ಟೋಬರ್ ತಿಂಗಳಲ್ಲಿ ‘ಸಿಯೋನ್’ ಸಿನಿಮಾ ಬಿಡುಗಡೆ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ.

ಇದನ್ನೂ ಓದಿ: ಸ್ಟಾರ್ ನಿರ್ದೇಶಕನ ಜೊತೆ ಕೈ ಜೋಡಿಸಲಿರುವ ಕಮಲ್ ಹಾಸನ್

ಶಿವಕಾರ್ತಿಕೇಯನ್ ನಿರ್ಮಾಣದ ‘ತಾಯ್ ಕಿಳವಿ’ ಸಿನಿಮಾಗೆ ನಿರ್ದೇಶನ ಮಾಡಿದ ಶಿವಕುಮಾರ್ ಮುರುಗೇಶನ್ ಅವರೇ ‘ಸಿಯೋನ್’ ಚಿತ್ರಕ್ಕೂ ಆಕ್ಷನ್-ಕಟ್ ಹೇಳುತ್ತಿದ್ದಾರೆ‌. ಸಂತೋಷ್ ನಾರಾಯಣ್ ಅವರ ಸಂಗೀತ ನಿರ್ದೇಶಕ ಈ ಚಿತ್ರಕ್ಕೆ ಇದೆ. ವಿವೇಕ್ ವಿಜಯಕುಮಾರ್ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಸ್ಯಾನ್ ಲೋಕೇಶ್ ಅವರು ಸಂಕಲನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಐರ್ಲೆಂಡ್​ನಲ್ಲಿ ಕನ್ನಡಿಗನ ನಿಗೂಢ ಸಾವು: ಮನೆಯಲ್ಲಿ ಶವ ಪತ್ತೆ – Kannada News | Mangaluru: Dakshina Kannada Youths Mysterious Death in Ireland

ಮಂಗಳೂರು, ಫೆಬ್ರವರಿ 19: ಕೆನಡಾದಲ್ಲಿ ಸಾಫ್ಟ್​​ವೇರ್ ಇಂಜಿನಿಯರ್​​​ ಆಗಿದ್ದ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ನಿವಾಸಿ ಚಂದನ್ ಕುಮಾರ್​​ ಕೆನಡಾದಲ್ಲಿ ಗುಂಡೇಟಿಗೆ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿದೆ. ಐರ್ಲೆಂಡ್​ನಲ್ಲಿ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಯುವಕ ನಿಗೂಢವಾಗಿ ಸಾವನ್ನಪ್ಪಿದ್ದು (death), ಇದೀಗ ಶವ ಪತ್ತೆ ಆಗಿದೆ. ಸಾಂಜೋ ಸುನೀಲ್(31) ಮೃತ ಯುವಕ. ಸದ್ಯ ಸುನೀಲ್ ಅನುಮಾನಾಸ್ಪದ ಸಾವಿನ ಬಗ್ಗೆ ಐರ್ಲೆಂಡ್ ಪೊಲೀಸರು ತನಿಖೆ ನಡೆಸಿದ್ದಾರೆ.

ನಡೆದಿದ್ದೇನು?

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಟ್ರುಪಾಡಿ ವಿಮಲಗಿರಿ ಸಾಂಜೋ ಸುನೀಲ್​​ ಐರ್ಲೆಂಡ್​ನ ಡಬ್ಲಿನ್​ನ ಫಿಂಗ್ಲಾಸ್​ನ ಚಾರ್ಲ್ಸ್​ಟೌನ್​ನಲ್ಲಿರುವ ಮನೆಯೊಂದರಲ್ಲಿ ವಾಸವಾಗಿದ್ದರು. ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಸುನೀಲ್ ಮೃತದೇಹ ಪತ್ತೆ ಆಗಿದೆ. ಪತ್ನಿ ಕೆಲಸಕ್ಕೆ ತೆರಳಿದ್ದ ವೇಳೆ ಘಟನೆ ನಡೆದಿದೆ. ಆತ್ಮಹತ್ಯೆ ಅಥವಾ ಬೇರೆ ಏನಾದರೂ ಆಗಿದೆಯಾ ಎಂದು ಸದ್ಯ ಐರ್ಲೆಂಡ್ ಪೊಲೀಸರು ತನಿಖೆ ನಡೆಸಿದ್ದಾರೆ.

ಇದನ್ನೂ ಓದಿ: ಕೆನಡಾದಲ್ಲಿ ಕನ್ನಡಿಗನ ಕಗ್ಗೊಲೆ! ಹತ್ತಾರು ಬಾರಿ ಗುಂಡು ಹಾರಿಸಿ ಕ್ರೌರ್ಯ

ವರ್ಷದ ಹಿಂದೆ ಕಡಬ ಮೂಲದ ಯುವತಿಯನ್ನ ಸಾಂಜೋ ಸುನೀಲ್ ವಿವಾಹವಾಗಿದ್ದರು. ಮೊದಲು ಇಸ್ರೇಲ್​ನಲ್ಲಿ ಕೆಲಸ ಮಾಡಿಕೊಂಡಿದ್ದ ಸುನೀಲ್, ಪತ್ನಿ ಐರ್ಲೆಂಡ್​ನಲ್ಲಿ ನರ್ಸ್ ಆಗಿ ಕೆಲಸ ಮಾಡಿಕೊಂಡಿದ್ದ ಹಿನ್ನೆಲೆ ಕೆಲವು ತಿಂಗಳ ಹಿಂದಷ್ಟೇ ಐರ್ಲೆಂಡ್​ಗೆ ತೆರಳಿ ವಾಸವಾಗಿದ್ದರು. ಸದ್ಯ ಸುನೀಲ್ ಅನುಮಾನಾಸ್ಪದ ಸಾವು ಸಾಕಷ್ಟು ಅನುಮಾನ ಹುಟ್ಟುಹಾಕಿದೆ.

ಕೆನಡಾದಲ್ಲಿ ಕನ್ನಡಿಗನ ಸಾವು

ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ನಿವಾಸಿ ಚಂದನ್ ಕುಮಾರ್, ಕೆನಡಾದಲ್ಲಿ ಸಾಫ್ಟ್​​ವೇರ್ ಇಂಜಿನಿಯರ್ ಆಗಿ ಬದುಕು ಕಟ್ಟಿಕೊಂಡಿದ್ದರು. 4 ಕನ್ನಡ ಪರ ಸಂಘಟನೆಗಳನ್ನ ಕಟ್ಟಿಕೊಂಡು ಕನ್ನಡಿಗರ ಧ್ವನಿ ಆಗಿದ್ದರು. ಆದರೆ ಕಳೆದ 10 ದಿನದ ಹಿಂದೆ ಆಗಂತುಕರು ಗುಂಡಿನ ದಾಳಿ ನಡೆಸಿ, ಚಂದನ್​ನ ಬರ್ಬರವಾಗಿ ಕೊಂದು ಹಾಕಿದ್ದರು.

ಇದನ್ನೂ ಓದಿ: ಕೆನಡಾದಲ್ಲಿ ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ

ಇನ್ನು ಕೆನಡಾದ ಟೊರಾಂಟೋ ಪೊಲೀಸರು ಚಂದನ್ ಹತ್ಯೆ ಕೇಸ್​ನ ತನಿಖೆ ನಡೆಸ್ತಿದ್ದಾರೆ. ಆದರೆ ಕೊಲೆಗೆ ಕಾರಣ ಏನು? ಕೊಂದಿದ್ದು ಯಾರು? ತನಿಖೆ ಎಲ್ಲಿವರೆಗೂ ಬಂತು ಅನ್ನೋ ಗುಟ್ಟು ಮಾತ್ರ ಬಿಟ್ಟುಕೊಟ್ಟಿಲ್ಲ. ಈ ಮಧ್ಯೆ ಇತ್ತೀಚೆಗೆ ಹುಟ್ಟೂರಲ್ಲಿ ಚಂದನ್ ಅಂತ್ಯಕ್ರಿಯೆ ನಡೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕ್ಯಾಚ್ ಹಿಡಿದು, ವಿಕೆಟ್ ಪಡೆದು ವಿಶ್ವ ದಾಖಲೆ ಬರೆದ ಶಮರ್ ಜೋಸೆಫ್ – Kannada News | Shamar Joseph Creates New World Record in T20 Cricket

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ. ಈ ದಾಖಲೆ ನಿರ್ಮಿಸಿರುವುದು ಮತ್ಯಾರೂ ಅಲ್ಲ, ವೆಸ್ಟ್ ಇಂಡೀಸ್ ವೇಗಿ ಶಮರ್ ಜೋಸೆಫ್ (Shamar Joseph). ಅದು ಕೂಡ ಕ್ಯಾಚ್ ಹಿಡಿದು, ವಿಕೆಟ್ ಪಡೆಯುವ ಮೂಲಕ ಎಂಬುದು ವಿಶೇಷ.

Source link

Apply Now: ಕ್ಲರ್ಕ್ ಮತ್ತು ಟೈಪಿಸ್ಟ್ ಹುದ್ದೆಗೆ ನೇಮಕಾತಿ; 10th ಪಾಸಾಗಿದ್ರೆ ಕೂಡಲೇ ಅರ್ಜಿ ಸಲ್ಲಿಸಿ – Kannada News | Lakshmeshwar Legal Services Committee Recruitment 2026: Clerk and Typist Jobs in Gadag

ಗದಗ ಜಿಲ್ಲೆಯ ಲಕ್ಷ್ಮೀಶ್ವರ ತಾಲೂಕು ಕಾನೂನು ಸೇವಾ ಸಮಿತಿಯು ಅಧಿಕೃತ ಅಧಿಸೂಚನೆಯ ಮೂಲಕ ಕ್ಲರ್ಕ್ ಮತ್ತು ಟೈಪಿಸ್ಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದಲ್ಲಿಡಿಯಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 21ರ ಮೊದಲು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸತಕ್ಕದ್ದು.

ಶೈಕ್ಷಣಿಕ ಅರ್ಹತೆ:

ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು 10 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು, ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದಿರಬೇಕು.

ಅರ್ಜಿ ಸಲ್ಲಿಸುವ ವಿಳಾಸ:

ಅರ್ಜಿಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ತಲುಪಿಸಬೇಕು:

ಸದಸ್ಯ ಕಾರ್ಯದರ್ಶಿಗಳು,

ತಾಲೂಕು ಕಾನೂನು ಸೇವೆಗಳ ಸಮಿತಿ,

ನ್ಯಾಯಾಲಯ ಸಂಕೀರ್ಣ, ಲಕ್ಷ್ಮೇಶ್ವರ,

ಗದಗ ಜಿಲ್ಲೆ – 582116.

ಇದನ್ನೂ ಓದಿ: ಕರ್ನಾಟಕದ ಹಾಲು ಒಕ್ಕೂಟದಲ್ಲಿ 194 ಹುದ್ದೆಗಳಿಗೆ ನೇಮಕಾತಿ; 10ರಿಂದ ಪದವೀಧರರವರೆಗೆ ಅರ್ಜಿ ಸಲ್ಲಿಸಲು ಅವಕಾಶ

ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲು ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
  • ಅಧಿಕೃತ ಲಿಂಕ್ ಅಥವಾ ಕಚೇರಿಯಿಂದ ಅರ್ಜಿ ನಮೂನೆಯನ್ನು ಪಡೆದು, ನಿಗದಿತ ಸರಿಯಾದ ಮಾಹಿತಿ ತುಂಬಿರಿ.
  • ಅಧಿಸೂಚನೆಯಲ್ಲಿ ಸೂಚಿಸಿದ್ದರೆ ಮಾತ್ರ ನಿಗದಿತ ಅರ್ಜಿ ಶುಲ್ಕವನ್ನು ಪಾವತಿಸಿ.
  • ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ನೋಂದಾಯಿತ ಅಂಚೆ (Registered Post) ಅಥವಾ ಸ್ಪೀಡ್ ಪೋಸ್ಟ್ ಮೂಲಕ ಮೇಲಿನ ವಿಳಾಸಕ್ಕೆ ಫೆಬ್ರವರಿ 21 ರ ಒಳಗಾಗಿ ತಲುಪಿಸಿ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಣ್ಣ ವಯಸ್ಸಿನಲ್ಲಿ ಬಿಪಿ ಬರುವುದಕ್ಕೆ ನಿಮ್ಮ ಈ ಅಭ್ಯಾಸಗಳೇ ಕಾರಣ! ಇಂದೇ ಬದಲಾಯಿಸಿಕೊಳ್ಳಿ – Kannada News | Rising Hypertension Cases Among Young Adults: Know the Reasons

ಇತ್ತೀಚಿನ ದಿನಗಳಲ್ಲಿ, ಯುವಜನರಲ್ಲಿ ಅಧಿಕ ರಕ್ತದೊತ್ತಡದ (High Blood Pressure) ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ರಕ್ತನಾಳಗಳಲ್ಲಿನ ರಕ್ತದೊತ್ತಡ ಸಾಮಾನ್ಯಕ್ಕಿಂತ ಹೆಚ್ಚಾಗುವ ಸ್ಥಿತಿ ಇದಾಗಿದ್ದು. ಇದು ನಿರಂತರವಾಗಿ 140/90 ಅಥವಾ ಅದಕ್ಕಿಂತ ಹೆಚ್ಚಾಗಿದ್ದರೆ, ಅದನ್ನು ಅಧಿಕ ರಕ್ತದೊತ್ತಡ ಎಂದು ಕರೆಯಲಾಗುತ್ತದೆ. ಆರಂಭದಲ್ಲಿ, ಇದರ ಸ್ಪಷ್ಟ ಲಕ್ಷಣಗಳು ಕಂಡುಬರುವುದಿಲ್ಲ. ಕೆಲವರಲ್ಲಿ ತಲೆನೋವು, ತಲೆತಿರುಗುವಿಕೆ, ಆಯಾಸ, ಉಸಿರಾಟದ ತೊಂದರೆ, ಎದೆಯಲ್ಲಿ ಭಾರ ಅಥವಾ ತ್ವರಿತ ಹೃದಯ ಬಡಿತದಂತಹ ಲಕ್ಷಣ ಕಂಡುಬರಬಹುದು. ಮೂಗಿನಿಂದ ರಕ್ತಸ್ರಾವ ಅಥವಾ ದೃಷ್ಟಿ ಮಂದವಾಗುವುದು ಸಹ ಈ ಆರೋಗ್ಯ ಸಮಸ್ಯೆಯ ಮನ್ಸೂಚನೆ ಆಗಿರಬಹುದು. ಇದನ್ನು ಸಮಯಕ್ಕೆ ಸರಿಯಾಗಿ ಗುರುತಿಸದಿದ್ದರೆ, ಅದು ಹೃದಯ, ಮೂತ್ರಪಿಂಡ ಮತ್ತು ಮೆದುಳಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆದ್ದರಿಂದ, ಯುವಜನತೆ ಈ ಬಗ್ಗೆ ಜಾಗೃತರಾಗಿರುವುದು ಬಹಳ ಮುಖ್ಯವಾಗುತ್ತದೆ. ಅದರ ಜೊತೆಗೆ ಅಧಿಕ ರಕ್ತದೊತ್ತಡದ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಕಾರಣವೇನು, ಇದನ್ನು ತಡೆಯುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ.

ಅಧಿಕ ರಕ್ತದೊತ್ತಡದ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಕಾರಣ:

ಲೇಡಿ ಹಾರ್ಡಿಂಗ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕ ಮತ್ತು ಮುಖ್ಯಸ್ಥರಾದ ಡಾ. ಎಲ್.ಎಚ್. ​​ಘೋಟೇಕರ್ ಹೇಳುವ ಪ್ರಕಾರ, ಯುವಜನತೆಯಲ್ಲಿ ಅಧಿಕ ರಕ್ತದೊತ್ತಡ ಹೆಚ್ಚಳಕ್ಕೆ ಹಲವಾರು ಕಾರಣಗಳಿದ್ದು, ಆಧುನಿಕ ಜೀವನಶೈಲಿ ಕೂಡ ಕಾರಣವೆಂದು ಪರಿಗಣಿಸಲಾಗುತ್ತದೆ. ವೇಗದ ಜೀವನದಲ್ಲಿ, ಮಾನಸಿಕ ಒತ್ತಡ ಗಮನಾರ್ಹವಾಗಿ ಹೆಚ್ಚಾಗಿದೆ. ತಡರಾತ್ರಿ ಎಚ್ಚರವಾಗಿರುವುದು, ಮೊಬೈಲ್ ಫೋನ್‌ ಮತ್ತು ಲ್ಯಾಪ್‌ಟಾಪ್‌ಗಳ ಅತಿಯಾದ ಬಳಕೆ, ದೈಹಿಕ ಚಟುವಟಿಕೆಯ ಕೊರತೆ ಮತ್ತು ಅನಿಯಮಿತ ದಿನಚರಿಯು ದೇಹದ ಸಮತೋಲನವನ್ನು ಅಡ್ಡಿಪಡಿಸುತ್ತದೆ.

ಫಾಸ್ಟ್ ಫುಡ್ ಮತ್ತು ಹೆಚ್ಚಿನ ಉಪ್ಪಿರುವ ಆಹಾರಗಳ ಸೇವನೆ ಕೂಡ ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತದೆ. ಇದರ ಜೊತೆಗೆ, ಧೂಮಪಾನ ಮತ್ತು ಮದ್ಯಪಾನದಂತಹ ಅಭ್ಯಾಸಗಳು ಈ ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತವೆ. ಅಷ್ಟೇಅಲ್ಲ, ಬೊಜ್ಜು ಮತ್ತು ತೂಕ ಹೆಚ್ಚಳ ಕೂಡ ಒಂದು ಪ್ರಮುಖ ಸಮಸ್ಯೆಯಾಗಿದೆ, ಅಲ್ಲದೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡದಿರುವುದು ಸಹ ಒಂದು ಕಾರಣವಾಗಿದೆ.

ಇದನ್ನೂ ಓದಿ: ಹೈಬಿಪಿ ಇರುವವರಿಗೆ ತಲೆಯ ಹಿಂಭಾಗದಲ್ಲಿ ನೋವು ಕಂಡುಬರುತ್ತದೆಯೇ?

ಅಧಿಕ ರಕ್ತದೊತ್ತಡವನ್ನು ತಡೆಯಲು ಸಲಹೆ:

ಸಾಮಾನ್ಯವಾಗಿ ಅಧಿಕ ರಕ್ತದೊತ್ತಡವನ್ನು ತಡೆಗಟ್ಟಲು, ಆರೋಗ್ಯಕರ ದಿನಚರಿಯನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ. ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ವ್ಯಾಯಾಮ ಮಾಡುವುದು, ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಮಿತಗೊಳಿಸುವುದು, ತಾಜಾ ಹಣ್ಣು, ತರಕಾರಿಗಳ ಸೇವನೆ ಮಾಡುವುದು, ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು, ಸರಿಯಾಗಿ ನಿದ್ರೆ ಮಾಡುವುದು, ಒತ್ತಡವನ್ನು ಕಡಿಮೆ ಮಾಡಲು ಯೋಗ ಮತ್ತು ಧ್ಯಾನವನ್ನು ಅಭ್ಯಾಸ ಮಾಡುವುದು ಇವೆಲ್ಲಾ ಅಧಿಕ ರಕ್ತದೊತ್ತಡವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

ಆಗಾಗ ತಲೆನೋವು, ತಲೆತಿರುಗುವಿಕೆ, ಉಸಿರಾಟದ ತೊಂದರೆ, ಎದೆ ನೋವು ಅಥವಾ ದೃಷ್ಟಿ ಮಂದವಾಗುವಂತಹ ಲಕ್ಷಣಗಳನ್ನು ಕಂಡುಬಂದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ. ಕುಟುಂಬದಲ್ಲಿ ಅಧಿಕ ರಕ್ತದೊತ್ತಡ ಅಥವಾ ಹೃದ್ರೋಗದ ಇತಿಹಾಸವಿದ್ದರೆ, ನಿಯಮಿತ ತಪಾಸಣೆ ಅಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸ್ಕೂಟಿಯಲ್ಲಿ ಹೋಗ್ತಿದ್ದ ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್ – Kannada News | A Hubballi Police Arrests To Accused For Flying Kiss To Young Women On Road

ಹುಬ್ಬಳ್ಳಿ, (ಫೆಬ್ರವರಿ 19): ಛೋಟಾ ಮುಂಬೈ ಹುಬ್ಬಳ್ಳಿಯಲ್ಲಿ (Hubballi) ಬೀದಿ ಕಾಮಣ್ಣರ ಹಾವಳಿ ಹೆಚ್ಚಾಗಿದೆ. ಸ್ಕೂಟಿಯಲ್ಲಿ ಹೋಗ್ತಿದ್ದ ಯುವತಿಯರಿಗೆ ಇಬ್ಬರು ಬೀದಿ ಕಾಮಣ್ಣರು ಪ್ಲೈಯಿಂಗ್ ಕಿಸ್ ಕೊಟ್ಟಿದ್ದಾರೆ. ಈ ದೃಶ್ಯವನ್ನು ಯುವತಿಯರು ತಮ್ಮ ಮೊಬೈಲ್​​ ನಲ್ಲಿ ಸೆರೆಹಿಡಿದಿದ್ದು, ಬಳಿಕ ದುರುಳರ ಅಸಭ್ಯ ವರ್ತನೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.ಸದ್ಯ ಈ ವಿಡಿಯೋvವನ್ನು ಗಮನಿಸಿದ ಹುಬ್ಬಳ್ಳಿ ಗೋಕುಲ ಠಾಣೆ ಪೊಲೀಸರು, ಯುವತಿಯರು ಯಾವುದೇ ದೂರು ನೀಡದೇ ಇದ್ದರೂ ಸಹ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಬಳಿಕ ಸ್ಕೂಟಿಯಲ್ಲಿನ ನಂಬರ್ ಪ್ಲೇಟ್ ನ್ನು ಪರಿಶೀಲಿಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿ ನಗರದ ಸಂದೇಶ್, ಸುರೇಶ ಎನ್ನುವರನ್ನು ಬಂಧಿಸಿದ್ದು, ಈ ಬಗ್ಗೆ ಹುಬ್ಬಳ್ಳಿ ಸಿಟಿ ಸ್ಪೆಷಲ್ ಬ್ರ್ಯಾಚ್ ಪಿಎಸ್ ಐ ರೂಪಾ ತಲೇವಾಡ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಪ್ಲೈಯಿಂಗ್ ಕಿಸ್ ನೀಡಿ ಅಸಭ್ಯವಾಗಿ ವರ್ತಿಸೋರನ್ನು ಬಂಧಿಸಿದ್ದೇವೆ. ಈ ರೀತಿವಾಗಿ ಮಹಿಳೆಯಯರು, ಮಕ್ಕಳ ಜೊತೆ ವರ್ತಿಸಿದ್ರೆ ಅವರ ವಿರುದ್ದ ಕಠೀಣ ಕ್ರಮ ಕೈಗೊಳ್ಳುವುದಾಗಿ ಖಡಕ್ ಎಚ್ಚರಿಕೆ ನೀಡಿದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link