All posts by nagaraj11081993

ಧ್ರುವ, ಪುನೀತ್, ಪ್ರೇಮ್ ಬಗ್ಗೆ ಅಸಭ್ಯವಾಗಿ ಮಾತಾಡಿದ್ದಕ್ಕೆ ಕಾರಣ ತಿಳಿಸಿದ ಕನಕಪುರ ಶ್ರೀನಿವಾಸ್ – Kannada News | Kanakapura Srinivas talks about his Viral video on Puneeth Rajkumar Dhruva Sarja

ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರ ಇತ್ತೀಚೆಗೆ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ್ದ ವಿಡಿಯೋ ವೈರಲ್ ಆಗಿತ್ತು. ಪುನೀತ್ ರಾಜ್​ಕುಮಾರ್ (Puneeth Rajkumar), ನಿರ್ದೇಶಕರಾದ ಎ.ಪಿ. ಅರ್ಜುನ್, ಜೋಗಿ ಪ್ರೇಮ್, ನಟ ಧ್ರುವ ಸರ್ಜಾ (Dhruva Sarja) ಬಗ್ಗೆ ಅವರು ಅಸಭ್ಯವಾಗಿ ಮಾತನಾಡಿದ್ದರು. ಅದಕ್ಕೆ ಈಗ ಅವರು ಸ್ಪಷ್ಟನೆ ನೀಡಿದ್ದಾರೆ. ಮಾತಿನ ಭರದಲ್ಲಿ ನೀಡಿದ ಹೇಳಿಕೆಗೆ ಅವರು ಕ್ಷಮೆ ಕೇಳಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಎದುರಲ್ಲಿ ಶ್ರೀನಿವಾಸ್ ಅವರು ಕ್ಷಮೆ ಕೇಳಿದ್ದಾರೆ. ‘ಕಾಟನ್​ಪೇಟೆ ಗೇಟ್ ಸಿನಿಮಾ ಬಿಡುಗಡೆಗೆ ನನಗೆ ಹಣದ ಅವಶ್ಯಕತೆ ಇತ್ತು. 2 ವರ್ಷದಿಂದ ಸಿನಿಮಾ ಬಿಡುಗಡೆ ಆಗಿಲ್ಲ. ಆ ದುಃಖದಿಂದ ನಾನು ಹಾಗೆ ಮಾತನಾಡಿದೆ. ನನ್ನ ಮಾತನ್ನು ನಾನು ವಾಪಸ್ ತೆಗೆದುಕೊಳ್ಳುತ್ತೇನೆ. ದಯವಿಟ್ಟು ಕ್ಷಮಿಸಿ’ ಎಂದು ಕನಕಪುರ ಶ್ರೀನಿವಾಸ್ (Kanakapura Srinivas) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IND vs NED T20 WC Live Score: ಶಿವಂ ದುಬೆ ಅರ್ಧಶತಕ – Kannada News | India vs Netherlands T20 World Cup 2026 Live Cricket Score IND vs NED Group A Today Match, highlights latest news in Kannada

  • 18 Feb 2026 08:26 PM (IST)

    India vs Netherlands Live Score: ಸೂರ್ಯ ಔಟ್

    ಸೂರ್ಯಕುಮಾರ್ ಯಾದವ್ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಜೀವದಾನದ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು. 27 ಎಸೆತಗಳಲ್ಲಿ 34 ರನ್ ಗಳಿಸಿ ಔಟಾದರು.

  • 18 Feb 2026 08:25 PM (IST)

    India vs Netherlands Live Score: 100 ರನ್ ಪೂರ್ಣ

    ನೆದರ್ಲ್ಯಾಂಡ್ಸ್ ವಿರುದ್ಧ ಭಾರತದ ಸ್ಕೋರ್ 100 ರನ್ ದಾಟಿದೆ. 13ನೇ ಓವರ್ ನಲ್ಲಿ ಭಾರತ 100 ರನ್ ಗಳ ಗಡಿ ದಾಟಿದೆ. ಸೂರ್ಯಕುಮಾರ್ ಯಾದವ್ ಮತ್ತು ಶಿವಂ ದುಬೆ ಪ್ರಸ್ತುತ ಮೈದಾನದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 18 Feb 2026 07:55 PM (IST)

    India vs Netherlands Live Score: ಭಾರತದ ಅಗ್ರ ಕ್ರಮಾಂಕ ಕುಸಿತ

    ಭಾರತದ ಅಗ್ರ ಬ್ಯಾಟ್ಸ್‌ಮನ್‌ಗಳು ನೆದರ್ಲ್ಯಾಂಡ್ಸ್ ವಿರುದ್ಧ ಬೇಗನೇ ಔಟಾದರು. ಭಾರತವು 10 ಓವರ್‌ಗಳಲ್ಲಿ ಅಭಿಷೇಕ್, ಇಶಾನ್ ಮತ್ತು ತಿಲಕ್ ಅವರ ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಮಧ್ಯೆ, ಸೂರ್ಯಕುಮಾರ್ ಯಾದವ್ 13 ರನ್‌ಗಳಲ್ಲಿದ್ದಾಗ ಅವರಿಗೆ ಜೀವದಾನ ನೀಡಲಾಯಿತು.

  • 18 Feb 2026 07:38 PM (IST)

    Ind vs Ned Live: ಪವರ್‌ಪ್ಲೇನಲ್ಲಿ ಆರಂಭಿಕರು ಔಟ್

    ಪವರ್‌ಪ್ಲೇ ಒಳಗೆ ಭಾರತದ ಇಬ್ಬರೂ ಆರಂಭಿಕರು ಡಗೌಟ್‌ಗೆ ಮರಳಿದರು. ಅಭಿಷೇಕ್ ಶರ್ಮಾ ಒಂದೇ ಒಂದು ರನ್ ಗಳಿಸದೆ ಔಟಾದರೆ, ಇಶಾನ್ ಕಿಶನ್ 7 ಎಸೆತಗಳಲ್ಲಿ 18 ರನ್ ಗಳಿಸಿದರು. ಇಬ್ಬರನ್ನೂ ಆರ್ಯನ್ ದತ್ ಔಟ್ ಮಾಡಿದರು.

  • 18 Feb 2026 07:12 PM (IST)

    Ind vs Ned Live: ಸತತ ಮೂರನೇ ಪಂದ್ಯದಲ್ಲೂ ಸೊನ್ನೆ ಸುತ್ತಿದ ಅಭಿಷೇಕ್

    2026 ರ ಟಿ20 ವಿಶ್ವಕಪ್‌ನಲ್ಲಿ ಸತತ ಮೂರನೇ ಪಂದ್ಯದಲ್ಲೂ ಅಭಿಷೇಕ್ ಶರ್ಮಾ ಶೂನ್ಯಕ್ಕೆ ಔಟಾದರು. ನೆದರ್ಲ್ಯಾಂಡ್ಸ್ ವಿರುದ್ಧವೂ ಅವರು ರನ್ ಗಳಿಸುವಲ್ಲಿ ವಿಫಲರಾದರು. ಮೂರು ಎಸೆತಗಳನ್ನು ಎದುರಿಸಿದ ನಂತರ ಅವರು ಶೂನ್ಯಕ್ಕೆ ಔಟಾದರು.

  • 18 Feb 2026 07:01 PM (IST)

    Ind vs Ned Live: ನೆದರ್ಲ್ಯಾಂಡ್ಸ್ ತಂಡ

    ಮೈಕೆಲ್ ಲೆವಿಟ್, ಮ್ಯಾಕ್ಸ್ ಒ’ಡೌಡ್, ಬಾಸ್ ಡಿ ಲೇಡೆ, ಕಾಲಿನ್ ಅಕರ್ಮನ್, ಸ್ಕಾಟ್ ಎಡ್ವರ್ಡ್ಸ್ (ನಾಯಕ), ಜ್ಯಾಕ್ ಲಿಯಾನ್-ಕ್ಯಾಚೆಟ್, ನೋಹ್ ಕ್ರೂಸ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಲೋಗನ್ ವ್ಯಾನ್ ಬೀಕ್, ಆರ್ಯನ್ ದತ್, ಕೈಲ್ ಕ್ಲೈನ್.

  • 18 Feb 2026 07:00 PM (IST)

    India vs Netherlands Live: ಭಾರತ ತಂಡ

    ಇಶಾನ್ ಕಿಶನ್, ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ.

  • 18 Feb 2026 06:35 PM (IST)

    India vs Netherlands Live: ಟಾಸ್ ಗೆದ್ದ ಭಾರತ

    ನೆದರ್ಲ್ಯಾಂಡ್ಸ್ ವಿರುದ್ದ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಸೂರ್ಯ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.

  • Source link

    IND vs NED: ಸತತ ಮೂರನೇ ಪಂದ್ಯದಲ್ಲೂ ಸೊನ್ನೆ ಸುತ್ತಿದ ಅಭಿಷೇಕ್ ಶರ್ಮಾ – Kannada News | Abhishek Sharma’s T20 WC Nightmare: Three Consecutive Ducks and Unwanted Record

    ಅಭಿಷೇಕ್ ಶರ್ಮಾ ಅವರ ಈ ಡಗೌಟ್ ಸರಣಿ ಟಿ20 ವಿಶ್ವಕಪ್​ಗೆ ಮಾತ್ರ ಸೀಮಿತವಾಗಿಲ್ಲ. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅವರು ಎರಡು ಬಾರಿ ಶೂನ್ಯಕ್ಕೆ ಔಟಾಗಿದ್ದರು. ಇದರರ್ಥ ಕಳೆದ ಏಳು ಇನ್ನಿಂಗ್ಸ್‌ಗಳಲ್ಲಿ ಅಭಿಷೇಕ್ ಐದು ಬಾರಿ ಸೊನ್ನೆಗೆ ಔಟಾಗಿದ್ದಾರೆ. ಇದು ಹೀಗೆ ಮುಂದುವರಿದರೆ, ಇದು ಟೀಂ ಇಂಡಿಯಾವನ್ನು ಸಂಕಷ್ಟಕ್ಕೆ ಸಿಲುಕಿಸುವುದಲ್ಲದೆ, ಅಭಿಷೇಕ್‌ಗೆ ಸಮಸ್ಯೆಗಳನ್ನು ಸೃಷ್ಟಿಸುತ್ತದೆ.

    Source link

    ಕೋಪ ಜಾಸ್ತಿ ಮಾಡಿಕೊಳ್ಳುವವರಲ್ಲಿ ಹೃದಯಾಘಾತದ ಅಪಾಯ ಹೆಚ್ಚಾಗಿರುತ್ತದೆಯೇ? ಏನನ್ನುತ್ತೆ ಸಂಶೋಧನೆ – Kannada News | Link Between Anger and Cardiovascular Disease

    ಹೃದಯಾಘಾತವಾಗುವುದಕ್ಕೆ ಹಲವು ಕಾರಣಗಳಿರಬಹುದು. ಆದರೆ ಪದೇ ಪದೇ ಕೋಪಗೊಳ್ಳುವುದು ಹೃದಯದ ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು ಎಂಬುದು ನಿಮಗೆ ತಿಳಿದಿದೆಯೇ… ಹೌದು, ಅಮೆರಿಕದ ಪ್ರತಿಷ್ಠಿತ ಸಂಸ್ಥೆಯಾದ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಸಂಶೋಧನೆಯು, ತಕ್ಷಣ ಕೋಪ (Anger) ಮಾಡಿಕೊಂಡು ಕೂಗಾಡಿದ ನಂತರದ ಎರಡು ಗಂಟೆಗಳಲ್ಲಿ ಹೃದಯಾಘಾತದ (Heart Attack) ಅಪಾಯವು ಸುಮಾರು 5 ಪಟ್ಟು ಹೆಚ್ಚಾಗಿರುತ್ತದೆ ಎಂಬುದನ್ನು ಕಂಡುಹಿಡಿದಿದೆ. ಅಷ್ಟೇ ಅಲ್ಲ, ಯುರೋಪಿಯನ್ ಹಾರ್ಟ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಒಬ್ಬ ವ್ಯಕ್ತಿ ಆಗಾಗ ಮತ್ತು ಅತಿಯಾಗಿ ಸಿಟ್ಟು ಮಾಡಿಕೊಳ್ಳುವುದು ಆತನ ಹೃದಯಕ್ಕೆ ಹೆಚ್ಚು ಅಪಾಯಕಾರಿ ಎಂದಿದೆ. ಕೋಪಗೊಳ್ಳದ ಪುರುಷರಿಗೆ ಹೋಲಿಸಿದರೆ, ಕೋಪಗೊಳ್ಳುವವರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಇಲ್ಲದಿದ್ದರೂ ಸಹ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚು ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ. ಹಾಗಾದರೆ ಕೋಪ ಮತ್ತು ಹೃದಯಾಘಾತಕ್ಕೆ ಇರುವ ಸಂಬಂಧವೇನು, ಕೋಪ ಕಡಿಮೆ ಮಾಡಿಕೊಳ್ಳಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

    ಕೋಪ ಮತ್ತು ಹೃದಯಾಘಾತಕ್ಕಿರುವ ಸಂಬಂಧ?

    ಸಾಮಾನ್ಯವಾಗಿ ಕೋಪ ಮಾಡಿಕೊಂಡ ಸಮಯದಲ್ಲಿ, ಕ್ಯಾಟೆಕೊಲಮೈನ್ಸ್ ಎಂಬ ಒತ್ತಡದ ಹಾರ್ಮೋನ್ ದೇಹದಲ್ಲಿ ವೇಗವಾಗಿ ಹೆಚ್ಚಾಗುತ್ತದೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದ್ದು. ಇವು ದೇಹದಲ್ಲಿ ರಕ್ತದೊತ್ತಡವನ್ನು ತ್ವರಿತವಾಗಿ ಹೆಚ್ಚಿಸುವ ಹಾರ್ಮೋನುಗಳಾಗಿವೆ. ಒತ್ತಡವು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ರಕ್ತದೊತ್ತಡದ ಹೆಚ್ಚಳವು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಸಂಶೋಧನಾ ತಜ್ಞ ಡಾ. ಇಲಾನ್ ವಿಟ್ಸ್‌ಟೈನ್ ಅವರ ಪ್ರಕಾರ, ಕೋಪದ ಸಮಯದಲ್ಲಿ ಒತ್ತಡದ ಹಾರ್ಮೋನು ಒಮ್ಮೆಲೇ ಹೆಚ್ಚಾಗುವುದು ಹೃದಯಾಘಾತವನ್ನು ಪ್ರಚೋದಿಸಬಹುದು ಮತ್ತು ಹೃದಯಾಘಾತಕ್ಕೆ ಕಾರಣವಾಗಬಹುದು. ಅದರಲ್ಲಿಯೂ ಈ ರೀತಿಯ ಅಪಾಯ ಪುರುಷರಲ್ಲಿ ಹೆಚ್ಚು ಕಂಡುಬರುವುದನ್ನು ಗಮನಿಸಲಾಗಿದೆ.

    ಇದನ್ನೂ ಓದಿ: ಕೇವಲ ಈ 5 ಆರೋಗ್ಯಕರ ಅಭ್ಯಾಸ ಪಾಲಿಸುವ ಮೂಲಕ ಹೃದಯಾಘಾತವನ್ನು ತಡೆಯಬಹುದು

    ಜಾನ್ಸ್ ಹಾಪ್ಕಿನ್ಸ್ ಮೆಡಿಸಿನ್ ನಡೆಸಿದ ಸಂಶೋಧನೆ ಹೇಳುವ ಪ್ರಕಾರ, ಯಾವುದೇ ರೀತಿಯ ಗಂಭೀರ ಕಾಯಿಲೆ ಇಲ್ಲದಿದ್ದರೂ ಸಹ, ಆಗಾಗ ಕೋಪಗೊಳ್ಳುವವರಲ್ಲಿ ಹೃದಯಾಘಾತದ ಅಪಾಯ ಐದು ಪಟ್ಟು ಹೆಚ್ಚಾಗಿರುತ್ತದೆ. ಹಾಗಾಗಿ ಕೋಪ ಮಾಡಿಕೊಳ್ಳುವುದನ್ನು ಕಡಿಮೆ ಮಾಡಬೇಕು. ಅದು ನಿಮ್ಮನ್ನು ನಿಯಂತ್ರಿಸುವ ಮೊದಲು ನೀವೇ ಅದನ್ನು ನಿಯಂತ್ರಿಸುವುದು ಒಳ್ಳೆಯದು. ಕೋಪದಿಂದ ಆದಷ್ಟು ದೇಹವನ್ನು ರಕ್ಷಿಸಿಕೊಳ್ಳಲು ಮತ್ತು ಅದನ್ನು ಕಡಿಮೆ ಮಾಡಲು ಪ್ರತಿನಿತ್ಯ ಯೋಗ ಅಭ್ಯಾಸ ಮಾಡಿ, ಧ್ಯಾನ ಮಾಡಿ, ಕೋಪಗೊಂಡಾಗ ತಕ್ಷಣ ಪ್ರತಿಕ್ರಿಯಿಸಬೇಡಿ, ನಿಮಗೆ ಅಗತ್ಯವಿದ್ದರೆ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ.

    ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Source link

    ಹಂಸಲೇಖ ಮೆಚ್ಚಿದ ‘ವೀರ ಕಂಬಳ’ ಸಿನಿಮಾ ಟ್ರೇಲರ್ ಹೇಗಿದೆ? – Kannada News | Hamsalekha released Veera Kambala Kannada movie trailer ft Adithya and Prakash Raj

    ಫೆಬ್ರವರಿ 27ರಂದು ‘ವೀರ ಕಂಬಳ’ (Veera Kambala) ಸಿನಿಮಾ ಬಿಡುಗಡೆ ಆಗಲಿದೆ. ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಶೀರ್ಷಿಕೆಯೇ ಸೂಚಿಸುವಂತೆ ತುಳುನಾಡಿನ ಜನಜೀವನದೊಂದಿಗೆ ಹೊಸೆದುಕೊಂಡಿರುವ ಕಂಬಳದ ಕುರಿತು ಈ ಸಿನಿಮಾದಲ್ಲಿ ತೋರಿಸಲಾಗುತ್ತದೆ. ಒಟ್ಟಾರೆ ಸಿನಿಮಾ ಹೇಗಿರಬಹುದು ಎಂಬುದನ್ನು ತಿಳಿಸಲು ಈಗ ‘ವೀರ ಕಂಬಳ’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಹಿರಿಯ ಸಂಗೀತ ನಿರ್ದೇಶಕ, ಗೀತರಚನಕಾರ ಹಂಸಲೇಖ (Hamsalekha) ಅವರು ಟ್ರೇಲರ್ ಬಿಡುಗಡೆ ಮಾಡಿದ್ದಾರೆ.

    ‘ಬಾಬಾಸ್ ಬ್ಲೆಸಿಂಗ್ ಫಿಲ್ಮ್ಸ್’ ಮೂಲಕ ಡಾ. ವಿನಿತ ವಿಜಯ್ ಕುಮಾರ್ ರೆಡ್ಡಿ ಮತ್ತು ಅರುಣ್ ರೈ ತೊಡಾರ್ ಅವರು ‘ವೀರ ಕಂಬಳ’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ರಾಜೇಶ್ ಕುಡ್ಲ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಆದಿತ್ಯ, ಪ್ರಕಾಶ್ ರಾಜ್, ರವಿಶಂಕರ್ ಅವರು ಪ್ರಧಾನ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ರಾಧಿಕಾ ನಾರಾಯಣ್ ಅವರು ಒಂದು ವಿಶೇಷ ಪಾತ್ರ ಮಾಡಿದ್ದಾರೆ.

    ವಿಶೇಷ ಏನೆಂದರೆ, ‘ವೀರ ಕಂಬಳ’ ಸಿನಿಮಾ ಕನ್ನಡ ಮಾತ್ರವಲ್ಲದೇ ತುಳು ಭಾಷೆಯಲ್ಲೂ ರಿಲೀಸ್ ಆಗಲಿದೆ. ತುಳು ಆವೃತ್ತಿಗೆ ‘ಬಿರ್ದ್‌ದ ಕಂಬುಳ’ ಎಂದು ಶೀರ್ಷಿಕೆ ಇಡಲಾಗಿದೆ. ನವೀನ್ ಪಡೀಲ್, ಗೋಪಿನಾಥ್ ಭಟ್, ಭೋಜರಾಜ್ ವಾಮಂಜೂರು ಮುಂತಾದ ಪ್ರಸಿದ್ಧ ತುಳು ರಂಗಭೂಮಿ ಹಿನ್ನೆಲೆಯ ಕಲಾವಿದರು ಅಭಿನಯಿಸಿದ್ದಾರೆ. ವಿಜಯ್ ಕುಮಾರ್ ಕೊಡಿಯಾಲ್‌ಬೈಲ್ ಅವರು ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.

    ‘ವೀರ ಕಂಬಳ’ ಸಿನಿಮಾ ಟ್ರೇಲರ್:

    ಮಣಿಕಾಂತ್ ಕದ್ರಿ ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಆರ್. ಗಿರಿ ಅವರ ಛಾಯಾಗ್ರಹಣ, ಶ್ರೀನಿವಾಸ್ ಎಸ್. ಬಾಬು ಅವರ ಸಂಕಲನ, ಚಂದ್ರಶೇಖರ್ ಸುವರ್ಣ ಮುಲ್ಕಿ ಅವರ ಕಲಾ ನಿರ್ದೇಶನ, ಕಾಂತ ಅವರ ಪ್ರಸಾದನ ಮತ್ತು ಭಾಷಾ ಅವರ ವಸ್ತ್ರವಿನ್ಯಾಸ ಈ ಸಿನಿಮಾಗಿದೆ. ಕಂಬಳದ ಬಗ್ಗೆ ಆಸಕ್ತಿ ಇರುವ ಎಲ್ಲರಿಗೂ ಈ ಸಿನಿಮಾ ಮೇಲೆ ನಿರೀಕ್ಷೆ ಇದೆ.

    ಇದನ್ನೂ ಓದಿ: ‘ವೀರ ಕಂಬಳ’ ಸಿನಿಮಾದಲ್ಲಿ ವೀರೇಂದ್ರ ಹೆಗ್ಗಡೆ ನಟಿಸಿದ್ದು ಯಾಕೆ? ಇಲ್ಲಿದೆ ಕಾರಣ

    ಟ್ರೇಲರ್ ಬಿಡುಗಡೆ ವೇಳೆ ರಾಜೇಂದ್ರ ಸಿಂಗ್ ಬಾಬು ಅವರು ಮಾತನಾಡಿದರು. ಕಂಬಳದ ಸುತ್ತಾ ಮುಂಬೈ ಭೂಗತ ಜಗತ್ತಿನ ನಂಟಿರುವ ರೋಚಕ ಅಂಶಗಳೊಂದಿಗೆ ಈ ಕಥೆ ಸೃಷ್ಟಿಯಾಗಿದೆ ಎಂಬ ಸುಳಿವನ್ನು ಅವರು ನೀಡಿದರು. ಟ್ರೇಲರ್​​ನಲ್ಲಿ ಕೂಡ ಅದು ಕಾಣಿಸಿದೆ. ಈ ಸಿನಿಮಾಗಾಗಿ ರಾಜೇಂದ್ರ ಸಿಂಗ್ ಬಾಬು ಅವರು ಹಲವು ವರ್ಷಗಳ ಕಾಲ ಶ್ರಮಿಸಿದ್ದಾರೆ.

    ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

    Source link

    ಕುಡಿದ ನಶೆಯಲ್ಲಿ ಮಾಡಿದ ಎಡವಟ್ಟಿಗೆ ಸುಟ್ಟು ಕರಕಲಾದ ಬಸ್‌, ಒಂದೇ ಕಿಡಿಗೆ ಬಸ್ ಅವಸ್ಥೆ ನೋಡಿ – Kannada News | Drunk men sets fire To Private Bus In Bengaluru

    ಬೆಂಗಳೂರು, (ಫೆಬ್ರವರಿ 18): ಬೆಂಗಳೂರಿನಲ್ಲಿ ಖಾಸಗಿ ಬಸ್ ಹೊತ್ತಿ ಉರಿದಿದೆ. ಚಂದ್ರಲೇಔಟ್ ಬಿಎಂಟಿಸಿ ಡಿಪೋ ಬಳಿ ನಿಂತಿದ್ದ ಬಸ್ ಧಗಧಗಿಸಿದೆ. ಬೆಂಕಿಯಿಂದಾಗಿ ದಟ್ಟ ಹೊಗೆ ಆವರಿಸಿತ್ತು. ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಕುಡಿದ ನಶೆಯಲ್ಲಿ ಸಿಗರೇಟ್‌ ಹಚ್ಚಿ ಬಸ್‌ಗೆ ಬೆಂಕಿ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ.

    ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

    Source link

    ಪ್ರತೀ ದಿನ ಬೆಳಗ್ಗೆ ಪ್ರಾಣಾಯಾಮ ಮಾಡುವುದರಿಂದ ಏನು ಪ್ರಯೋಜನ? ಬಾಬಾ ರಾಮದೇವ್ ಅವರ ಟಿಪ್ಸ್ ಇಲ್ಲಿದೆ – Kannada News | Baba Ramdev explains health benefits from doing Pranayama regularly

    ಪ್ರಾಣಾಯಾಮವು ದೇಹ ಮತ್ತು ಮನಸ್ಸನ್ನು ಸಮತೋಲನಗೊಳಿಸಲು ಪರಿಣಾಮಕಾರಿ ಮಾರ್ಗವಾಗಿದೆ. ಇದು ಉಸಿರಾಟದ ಮೂಲಕ ದೇಹಕ್ಕೆ ಶಕ್ತಿ ಒದಗಿಸುತ್ತದೆ. ನಿಯಮಿತ ಪ್ರಾಣಾಯಾಮವು ಶ್ವಾಸಕೋಶಗಳನ್ನು ಬಲಪಡಿಸುತ್ತದೆ ಮತ್ತು ದೇಹಕ್ಕೆ ಸಾಕಷ್ಟು ಆಮ್ಲಜನಕವನ್ನು ಒದಗಿಸುತ್ತದೆ. ಇದರಿಂದ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯವಾಗುತ್ತದೆ. ಇಂದಿನ ವೇಗದ ಮತ್ತು ಒತ್ತಡದ ಜೀವನಶೈಲಿಯಲ್ಲಿ, ಆಯಾಸ, ಚಡಪಡಿಕೆ ಮತ್ತು ಮಾನಸಿಕ ಒತ್ತಡವು ಸಾಮಾನ್ಯವಾಗಿದೆ. ಪ್ರಾಣಾಯಾಮವು ಮನಸ್ಸನ್ನು ಶಾಂತಗೊಳಿಸಲು ಮತ್ತು ಏಕಾಗ್ರತೆ ಹೆಚ್ಚಿಸಲು ಸಹಾಯಕವಾಗಿದೆ ಎಂದು ಪರಿಗಣಿಸಲಾಗಿದೆ.

    ಪ್ರಾಣಾಯಾಮವು ದೇಹದ ಕ್ಷಮತೆಯನ್ನು ಸುಧಾರಿಸುತ್ತದೆ ಮತ್ತು ದಿನವಿಡೀ ನಿಮ್ಮನ್ನು ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ. ಯೋಗ ಗುರು ಬಾಬಾ ರಾಮದೇವ್ ಕೂಡ ಪ್ರತಿದಿನ ಬೆಳಿಗ್ಗೆ ಪ್ರಾಣಾಯಾಮ ಮಾಡಲು ಶಿಫಾರಸು ಮಾಡುತ್ತಾರೆ. ಅವರ ಪ್ರಕಾರ, ನಿಯಮಿತ ಅಭ್ಯಾಸವು ದೇಹದ ನ್ಯಾಚುರಲ್ ಇಮ್ಯೂನಿಟಿಯನ್ನು ಬಲಪಡಿಸಿ, ಅನೇಕ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸಬಲ್ಲುದು. ಈ ಸಂದರ್ಭದಲ್ಲಿ, ಬಾಬಾ ರಾಮದೇವ್ ಶಿಫಾರಸು ಮಾಡಿದ ಕೆಲವು ಪ್ರಾಣಾಯಾಮಗಳು ವಿಶೇಷವಾಗಿ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಅವುಗಳ ಬಗ್ಗೆ ಮಾಹಿತಿ ಇಲ್ಲಿದೆ.

    ಪ್ರತಿದಿನ ಬೆಳಿಗ್ಗೆ ಈ ಪ್ರಾಣಾಯಾಮಗಳನ್ನು ಮಾಡಿ

    ಕಪಾಲಭಾತಿ ಪ್ರಾಣಾಯಾಮ

    ಬಾಬಾ ರಾಮದೇವ್ ವಿವರಿಸುವಂತೆ ಈ ಕಪಾಲಭಾತಿ ಪ್ರಾಣಾಯಾಮವು ತ್ವರಿತ ಉಸಿರಾಟ ಕ್ರಮವನ್ನು ಒಳಗೊಂಡಿರುತ್ತದೆ. ಇದು ಜೀರ್ಣಾಂಗ ವ್ಯವಸ್ಥೆ ಬಲಪಡಿಸಲು, ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಮತ್ತು ದೇಹವನ್ನು ಒಳಗಿನಿಂದ ಸಕ್ರಿಯವಾಗಿಡಲು ಸಹಾಯ ಮಾಡುತ್ತದೆ.

    ಇದನ್ನೂ ಓದಿ: ಜೇನುತುಪ್ಪದ ಪ್ರಯೋಜನಗಳೇನು, ಪತಂಜಲಿ ಜೇನುತುಪ್ಪದ ಶುದ್ಧತೆ ಎಷ್ಟು? ಇಲ್ಲಿದೆ ಮಾಹಿತಿ

    ಅನುಲೋಮ-ವಿಲೋಮ ಪ್ರಾಣಾಯಾಮ

    ಈ ಅಭ್ಯಾಸವು ಎರಡೂ ಮೂಗಿನ ಹೊಳ್ಳೆಗಳ ಮೂಲಕ ಪರ್ಯಾಯವಾಗಿ ಉಸಿರನ್ನು ಒಳಗೆಳೆದುಕೊಳ್ಳುವುದು ಮತ್ತು ಹೊರಹಾಕುವುದನ್ನು ಒಳಗೊಂಡಿರುತ್ತದೆ. ಇದು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ದೇಹದಲ್ಲಿ ಶಕ್ತಿಯ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

    ಭಸ್ತ್ರಿಕಾ ಪ್ರಾಣಾಯಾಮ

    ಈ ಪ್ರಾಣಾಯಾಮವು ತ್ವರಿತವಾಗಿ ಉಸಿರು ಒಳಗೆಳೆದುಕೊಳ್ಳುವುದು ಮತ್ತು ಹೊರಹಾಕುವ ಕ್ರಮ ಹೊಂದಿದೆ. ಭಸ್ತ್ರಿಕಾ ಪ್ರಾಣಾಯಾಮದಿಂದ ಶ್ವಾಸಕೋಶ ಬಲಗೊಳ್ಳುತ್ತದೆ, ಮತ್ತು ದೇಹಕ್ಕೆ ಆಮ್ಲಜನಕದ ಪೂರೈಕೆ ಸುಧಾರಿಸುತ್ತದೆ.

    ಭ್ರಮರಿ ಪ್ರಾಣಾಯಾಮ

    ಭಮರಿ ಪ್ರಾಣಾಯಾಮದಲ್ಲಿ ದೀರ್ಘವಾಗಿ ಉಸಿರು ಒಳಗೆಳೆದುಕೊಳ್ಳಬೇಕು. ಎರಡೂ ಕಿವಿಗಳನ್ನು ಕೈ ಬೆರಳಿನಿಂದ ಮುಚ್ಚಿ, ಬಾಯಿಯನ್ನೂ ಮುಚ್ಚಿ, ಜೇನ್ನೊಣದ ರೀತಿಯಲ್ಲಿ ಶಬ್ದ ಮಾಡುತ್ತಾ ಮೂಗಿನಿಂದ ಉಸಿರು ಹೊರಹಾಕಬೇಕು. ಇದು ಒತ್ತಡವನ್ನು ಕಡಿಮೆ ಮಾಡಲು ಮತ್ತು ಮಾನಸಿಕ ಶಾಂತಿಯನ್ನು ಸಾಧಿಸಲು ಪ್ರಯೋಜನಕಾರಿ ಎಂದು ನಂಬಲಾಗಿದೆ.

    ಪ್ರಾಣಾಯಾಮದಿಂದ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತದೆ?

    ಬೆಳಗ್ಗೆ ನಿಯಮಿತವಾಗಿ ಪ್ರಾಣಾಯಾಮ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಬಲಗೊಳ್ಳುತ್ತದೆ ಮತ್ತು ದೇಹವು ಅನಾರೋಗ್ಯದ ವಿರುದ್ಧ ಹೋರಾಡಲು ಹೆಚ್ಚು ಸಮರ್ಥವಾಗುತ್ತದೆ. ಇದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ, ಇದರಿಂದಾಗಿ ಉತ್ತಮ ಮಾನಸಿಕ ಆರೋಗ್ಯಕ್ಕೆ ಕಾರಣವಾಗುತ್ತದೆ.

    ಪ್ರಾಣಾಯಾಮವನ್ನು ಅಭ್ಯಾಸ ಮಾಡುವವರು ದಿನವಿಡೀ ಚೆನ್ನಾಗಿ ನಿದ್ರಿಸುತ್ತಾರೆ ಮತ್ತು ಹೆಚ್ಚು ಚೈತನ್ಯಶೀಲರಾಗಿರುತ್ತಾರೆ. ಇದಲ್ಲದೆ, ಜೀರ್ಣಕ್ರಿಯೆ, ಉಸಿರಾಟದ ತೊಂದರೆಗಳು ಮತ್ತು ಆಯಾಸದಲ್ಲಿ ಸುಧಾರಣೆಗಳನ್ನು ಕಾಣಬಹುದು.

    ಇದನ್ನೂ ಓದಿ: ಪತಂಜಲಿ ಲೋಹಾಸವ ಸಿರಪ್; ಏನಿದು, ಯಾಕಾಗಿ ಬೇಕು, ಇದು ಹೇಗೆ ಕೆಲಸ ಮಾಡುತ್ತೆ? ಇಲ್ಲಿದೆ ವಿವರ

    ಇದು ಉತ್ತಮ ಆರೋಗ್ಯಕ್ಕೂ ಮುಖ್ಯ

    ಪ್ರಾಣಾಯಾಮದ ಜೊತೆಗೆ, ಸಮತೋಲಿತ ಆಹಾರವು ಉತ್ತಮ ಆರೋಗ್ಯಕ್ಕೆ ಅತ್ಯಗತ್ಯ. ಪ್ರತಿದಿನ ಸಾಕಷ್ಟು ನೀರು ಕುಡಿಯಿರಿ ಮತ್ತು ಸಮಯಕ್ಕೆ ಸರಿಯಾಗಿ ಊಟ ಮಾಡಿ. ನಿಯಮಿತ ದೈಹಿಕ ಚಟುವಟಿಕೆ ಮತ್ತು ಸಾಕಷ್ಟು ನಿದ್ರೆಯನ್ನು ನಿಮ್ಮ ದಿನಚರಿಯಲ್ಲಿ ಸೇರಿಸಿಕೊಳ್ಳಿ.

    ನಿಮ್ಮ ಮೊಬೈಲ್ ಫೋನ್ ಮತ್ತು ಸ್ಕ್ರೀನ್ ಸಮಯವನ್ನು ಮಿತಿಗೊಳಿಸಿ ಮತ್ತು ನಿಮಗಾಗಿ ಸ್ವಲ್ಪ ಸಮಯ ತೆಗೆದುಕೊಳ್ಳಿ. ಈ ಅಭ್ಯಾಸಗಳ ಜೊತೆಗೆ ಪ್ರಾಣಾಯಾಮವನ್ನು ಅಭ್ಯಾಸ ಮಾಡುವುದರಿಂದ ದೇಹ ಮತ್ತು ಮನಸ್ಸು ಎರಡನ್ನೂ ಆರೋಗ್ಯಕರವಾಗಿರುತ್ತದೆ.

    ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

    Source link

    ಮಕ್ಕಳು ಮೊಬೈಲ್ ಅಡಿಕ್ಷನ್ ಆಗಿರುವ ಲಕ್ಷಣಗಳು ಹೇಗಿರುತ್ತೆ? ಅದ್ರಿಂದ ಆಚೆ ತರೋದು ಹೇಗೆ? – Kannada News | How To identity children addiction to mobile, here Is details

    ಊಟ ಮಾಡಿಲ್ಲಾ ಅಂದ್ರು ಮೊಬೈಲ್​, ಹಠ ಮಾಡಿದ್ರು ಮೊಬೈಲ್​, ಮಲಗೋದಕ್ಕೂ ಮೊಬೈಲ್​, ಕೈ ಕಟ್ಟಿ ಕೂರೋದಕ್ಕೂ ಮೊಬೈಲ್​. ಹೀಗೆ ಪೋಷಕರು​​ ಮಕ್ಕಳಿಗೆ ಮೊಬೈಲ್​ ಕೊಟ್ಟು ಕೊಟ್ಟು ಇವತ್ತು ಮೊಬೈಲ್​ ಅಡಿಕ್ಷನ್​ ಮಕ್ಕಳಲ್ಲಿ ಹೆಚ್ಚಾಗಿದೆ. ಪೋಷಕರ ಮೊಬೈಲ್ ಗೀಳು ಮಕ್ಕಳ ಮೇಲೆ ಕೂಡ ಪರಿಣಾಮ ಬೀರುತ್ತಿದೆ. ಎಷ್ಟರ ಮಟ್ಟಿಗೆ ಅಂದ್ರೆ ಮಗುಗೆ ಊಟ ಮಾಡಿಸೋದ್ರಿಂದ ಮಲಗಿಸೋವರೆಗೂ ಎಲ್ಲದಕ್ಕೂ ಮಕ್ಕಳ ಕೈನಲ್ಲಿ ಮೊಬೈಲ್​ ಕೊಟ್ಟು ಬಿಡ್ತಾರೆ ಪೋಷಕರು. ಇದೀಗ ಮಾಡಿದ್ದೋಣ ಮರಾಯ ಅನ್ನೋ ಹಾಗೆ ಮಕ್ಕಳ ಮೊಬೈಲ್​ ಅಡಿಕ್ಷನ್ (mobile addiction) ಪೋಷಕರಿಗೆ ಗೋಳು ಕೊಡುತ್ತಿದೆ. ಇನ್ನು ಮಕ್ಕಳನ್ನು ಮೊಬೈಲ್ ಅಡಿಕ್ಷನ್​​ನಿಂದ ಪೋಷಕರು ಏನು ಮಾಡಬೇಕು ಎನ್ನುವುದನ್ನು ಡಾಕ್ಟರ್ ಸೌಜನ್ಯ ಮಾಹಿತಿ ನೀಡಿದ್ದಾರೆ ತಿಳಿದುಕೊಳ್ಳಿ.

    ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

    Source link

    ಎಐ ಶೃಂಗಸಭೆಯಲ್ಲಿ ಚೀನಾದ ರೋಬೋಟ್ ಪ್ರದರ್ಶನ; ವಿವಾದಕ್ಕೆ ಕ್ಷಮೆ ಯಾಚಿಸಿದ ಗಾಲ್ಗೋಟಿಯಾಸ್ ವಿವಿ – Kannada News | Galgotias University apologises after Chinese robodog row at AI Summit

    ನವದೆಹಲಿ, ಫೆಬ್ರವರಿ 18: ಭಾರತದ AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ (AI Summit) ಚೀನಾದ ಬ್ರಾಂಡ್ ರೋಬೋಡಾಗ್ (Robodog) ಅನ್ನು ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯ ಪ್ರದರ್ಶಿಸಿತ್ತು. ಅದು ಭಾರತೀಯ ರೋಬೋಟ್ ಅಲ್ಲ ಎಂಬ ವಿವಾದ ಶುರುವಾಗುತ್ತಿದ್ದಂತೆ ವಿಶ್ವವಿದ್ಯಾಲಯದ ಮಳಿಗೆಯನ್ನು ತೆರವುಗೊಳಿಸಲಾಗಿತ್ತು. ಒರಿಯನ್ ಎಂಬ ಹೆಸರಿನಲ್ಲಿ ಪ್ರದರ್ಶಿಸಲಾಗಿದ್ದ ರೋಬೋಡಾಗ್ ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯದ ಆವಿಷ್ಕಾರವಲ್ಲ, ಅದು ಚೀನಾದ ರೋಬೋಟ್ ಎಂದು ವಿವಾದ ಸೃಷ್ಟಿಯಾಗಿತ್ತು.

    “ಇತ್ತೀಚಿನ ಎಐ ಶೃಂಗಸಭೆಯಲ್ಲಿ ಸೃಷ್ಟಿಯಾದ ಗೊಂದಲಕ್ಕಾಗಿ ನಾವು ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯದಿಂದ ಕ್ಷಮೆಯಾಚಿಸಲು ಬಯಸುತ್ತೇವೆ. ಪೆವಿಲಿಯನ್ ಅನ್ನು ನಿರ್ವಹಿಸುತ್ತಿದ್ದ ನಮ್ಮ ಪ್ರತಿನಿಧಿಗಳಲ್ಲಿ ಒಬ್ಬರಿಗೆ ಸರಿಯಾದ ಮಾಹಿತಿ ಇರಲಿಲ್ಲ. ಉತ್ಪನ್ನದ ತಾಂತ್ರಿಕ ಮೂಲದ ಬಗ್ಗೆ ಅವರಿಗೆ ತಿಳಿದಿರಲಿಲ್ಲ. ಅವರು ತಪ್ಪಾಗಿ ಮಾಹಿತಿ ನೀಡಿದ್ದಾರೆ. ಸಂಘಟಕರ ಭಾವನೆಯನ್ನು ಅರ್ಥಮಾಡಿಕೊಂಡು ನಾವು ಆವರಣವನ್ನು ಖಾಲಿ ಮಾಡಿದ್ದೇವೆ” ಎಂದು ವಿಶ್ವವಿದ್ಯಾಲಯವು ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

    ದೆಹಲಿಯಲ್ಲಿ ನಡೆಯುತ್ತಿರುವ AI ಶೃಂಗಸಭೆಯಲ್ಲಿ ಚೀನಾದಲ್ಲಿ ನಿರ್ಮಿತ ರೋಬೋಟಿಕ್ ನಾಯಿಯನ್ನು ಪ್ರದರ್ಶಿಸಿದ ವಿವಾದದ ನಡುವೆ, ಗ್ಯಾಲ್ಗೋಟಿಯಾಸ್ ವಿಶ್ವವಿದ್ಯಾಲಯವು ಕ್ಷಮೆಯಾಚಿಸಿದೆ. ಈ ವಿವಾದದ ನಂತರ, AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿನ ತನ್ನ ಸ್ಟಾಲ್ ಅನ್ನು ಖಾಲಿ ಮಾಡಲು ಗಾಲ್ಗೋಟಿಯಾಸ್‌ಗೆ ಸೂಚಿಸಲಾಯಿತು. ಇದಲ್ಲದೆ, ಯಾವುದೇ ಪ್ರದರ್ಶಕರು ತಮ್ಮದಲ್ಲದ ವಸ್ತುಗಳನ್ನು ಪ್ರದರ್ಶಿಸುವುದನ್ನು ಸರ್ಕಾರ ಒಪ್ಪುವುದಿಲ್ಲ ಎಂದು ಐಟಿ ಕಾರ್ಯದರ್ಶಿ ಎಸ್ ಕೃಷ್ಣನ್ ಹೇಳಿದರು.

    ವಿಶ್ವವಿದ್ಯಾಲಯದ ಸಂವಹನ ಪ್ರಾಧ್ಯಾಪಕಿ ನೇಹಾ ಸಿಂಗ್ ಮಂಗಳವಾರ ಡಿಡಿ ನ್ಯೂಸ್‌ಗೆ ಓರಿಯನ್ ಎಂಬ ರೋಬೋಟಿಕ್ ನಾಯಿಯನ್ನು ತೋರಿಸಿ, ಇದನ್ನು “ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯದ ಶ್ರೇಷ್ಠತಾ ಕೇಂದ್ರವು ಅಭಿವೃದ್ಧಿಪಡಿಸಿದೆ” ಎಂದು ಹೇಳಿದ ನಂತರ ವಿವಾದ ಭುಗಿಲೆದ್ದಿತು. ಈ ರೋಬೋಟ್ ವಾಸ್ತವವಾಗಿ ಯುನಿಟ್ರೀ ಗೋ2 ಆಗಿದ್ದು, ಇದನ್ನು ಚೀನಾದ ಯುನಿಟ್ರೀ ರೊಬೊಟಿಕ್ಸ್ ತಯಾರಿಸಿದೆ. ಇದನ್ನು ಪ್ರಪಂಚದಾದ್ಯಂತ ಸಂಶೋಧನೆ ಮತ್ತು ಶಿಕ್ಷಣದಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ.

    “ನಾವು ಈ ರೋಬೋಡಾಗ್ ಅನ್ನು ನಿರ್ಮಿಸಿಲ್ಲ ಅಥವಾ ಹಾಗೆ ಮಾಡಿದ್ದೇವೆ ಎಂದು ಹೇಳಿಕೊಂಡಿಲ್ಲ. ನಮ್ಮ ಸಿಬ್ಬಂದಿ ತಪ್ಪಾಗಿ ಮಾಹಿತಿ ನೀಡಿದ್ದಾರೆ” ಎಂದು ವಿಶ್ವವಿದ್ಯಾಲಯದ ವಕ್ತಾರರು ತಿಳಿಸಿದ್ದಾರೆ.

    ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Source link

    ಅದ್ಧೂರಿಯಾಗಿದೆ ರಶ್ಮಿಕಾ-ವಿಜಯ್ ಲಗ್ನ ಪತ್ರಿಕೆ: ಆಮಂತ್ರಣ ಪತ್ರಿಕೆಯ ಒಳಗೆ ಏನೇನಿದೆ? – Kannada News | What are there inside Rashmika Mandanna and Vijay Deverakonda wedding invitation box

    ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ತೆಲುಗಿನ ನಟ ವಿಜಯ್ ದೇವರಕೊಂಡ ತಮ್ಮ ಬಹುವರ್ಷಗಳ ಪ್ರೀತಿಯನ್ನು ದಾಂಪತ್ಯಕ್ಕೆ ಬಡ್ತಿ ನೀಡುತ್ತಿದ್ದಾರೆ. ಈ ಜೋಡಿ ಫೆಬ್ರವರಿ 26 ರಂದು ಅದ್ಧೂರಿಯಾಗಿ ವಿವಾಹ ಆಗಲಿದ್ದು, ಮದುವೆ ಆಮಂತ್ರಣ ಪತ್ರಿಕೆಗಳನ್ನು ನೀಡಿ ಗಣ್ಯರನ್ನು ಮದುವೆಗೆ ಆಹ್ವಾನಿಸುತ್ತಿದ್ದಾರೆ. ಈ ಜೋಡಿ ರಾಜಸ್ಥಾನದಲ್ಲಿ ಅದ್ಧೂರಿಯಾಗಿ ವಿವಾಹ ಆಗಲಿದ್ದು, ಇವರ ಮದುವೆ ಆಮಂತ್ರಣ ಪತ್ರಿಕೆ ಸಹ ಬಲು ಅದ್ಧೂರಿಯಾಗಿದೆ.

    ರಶ್ಮಿಕಾ ಮಂದಣ್ಣ ಮತ್ತು ವಿಜಯ್ ಅವರು ಆಮಂತ್ರಣ ಪತ್ರಿಕೆ ಬಾಕ್ಸ್ ಮಾದರಿಯಲ್ಲಿದ್ದು, ಬಾಕ್ಸ್​​ನಲ್ಲಿ ಆಮಂತ್ರಣ ಪತ್ರಿಕೆಯ ಜೊತೆಗೆ ಹಲವು ವಸ್ತುಗಳನ್ನು ಇಡಲಾಗಿದೆ. ರಶ್ಮಿಕಾ ತಮ್ಮ ನ್ಯಾಷನಲ್ ಕ್ರಶ್ ಹೆಸರಿನ ಸುಗಂಧ ದ್ರವ್ಯ ಬ್ರ್ಯಾಂಡ್ ಹೊಂದಿದ್ದು, ಅದನ್ನು ಆಮಂತ್ರಣ ಪತ್ರಿಕೆಯ ಜೊತೆಗೆ ಇರಿಸಿದ್ದಾ. ಜೊತೆಗೆ ಹ್ಯಾಂಡ್ ಲೋಷನ್ ಮತ್ತು ಫುಟ್ ಕ್ರೀಮ್​​ಗಳು ಸಹ ಆಮಂತ್ರಣ ಪತ್ರಿಕೆಯ ಬಾಕ್ಸ್​​ನಲ್ಲಿವೆ. ಇನ್ನು ವಿಜಯ್ ದೇವರಕೊಂಡ ‘ರೌಡಿ’ ಹೆಸರಿನ ಪ್ಯಾಷನ್ ಬ್​ರ್ಯಾಂಡ್ ಹೊಂದಿರುವುದು ಗೊತ್ತೇ ಇದೆ. ಅವರು ತಮ್ಮ ಬ್ರ್ಯಾಂಡಿನ ಟಿ-ಶರ್ಟ್ ಬಾಕ್ಸ್​​ನಲ್ಲಿ ಇರಿಸಿದ್ದಾರೆ.

    ಆಮಂತ್ರಣ ಪತ್ರಿಕೆ ಬಾಕ್ಸ್​​ನಲ್ಲಿ ಪ್ರೀಮಿಯಮ್ ಬ್ರ್ಯಾಂಡಿನ ಒಣ ಹಣ್ಣುಗಳ ಪಾಕೆಟ್ ಅನ್ನು ಸಹ ಇರಿಸಲಾಗಿದೆ. ಇವೆಲ್ಲವನ್ನೂ ಸುಂದರವಾಗಿ ಪ್ರೆಸೆಂಟೆಬಲ್ ರೀತಿಯಲ್ಲಿ ಪ್ಯಾಕ್ ಮಾಡಲಾಗಿದೆ. ಇವುಗಳ ಜೊತೆಗೆ ಹಾಳೆಯೊಂದರಲ್ಲಿ ಸರಳದ ಆಮಂತ್ರಣ ಪತ್ರಿಕೆ ಇದ್ದು, ಅದರಲ್ಲಿ ಮದುವೆಯ ದಿನಾಂಕ, ಬಳಿಕ ರಿಸೆಪ್ಷನ್ ದಿನಾಂಕವನ್ನು ನಮೂದಿಸಲಾಗಿದೆ. ಮದುವೆ ಫೆಬ್ರವರಿ 26 ಕ್ಕೆ ನಡೆಯಲಿದ್ದು, ಮದುವೆ ಕಾರ್ಯಕ್ರಮದಲ್ಲಿ ಕುಟುಂಬ ಸದಸ್ಯರು ಮತ್ತು ಅತ್ಯಾಪ್ತ ಸ್ನೇಹಿತರಷ್ಟೆ ಭಾಗಿ ಆಗಲಿದ್ದಾರೆ. ಬಳಿಕ ಮಾರ್ಚ್ 04 ರಂದು ಹೈದರಾಬಾದ್​​ನ ತಾಜ್ ಕೃಷ್ಣನಲ್ಲಿ ಅದ್ಧೂರಿ ರಿಸೆಪ್ಷನ್ ಆಯೋಜಿಸಿದ್ದು, ಈ ಕಾರ್ಯಕ್ರಮದಲ್ಲಿ ಟಾಲಿವುಡ್ ಮತ್ತು ಬಾಲಿವುಡ್​ನ ಸೆಲೆಬ್ರಿಟಿಗಳು ಭಾಗಿ ಆಗಲಿದ್ದಾರೆ.

    ಇದನ್ನೂ ಓದಿ:‘ಛಾವ’ ಸಿನಿಮಾಗೆ ಒಂದು ವರ್ಷ: ನೆನಪಿನ ಪುಟ ತೆರೆದ ರಶ್ಮಿಕಾ ಮಂದಣ್ಣ

    ಅದಾದ ಕೆಲವು ದಿನಗಳ ಬಳಿಕ ಹೈದರಾಬಾದ್​ ಮತ್ತು ಮುಂಬೈಗಳಲ್ಲಿ ಮಾಧ್ಯಮದವರು ಫೋಟೊಗ್ರಾಫರ್​​ಗಳಿಗಾಗಿ ವಿಶೇಷ ಔತಣಕೂಟವನ್ನು ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರುಗಳು ಆಯೋಜಿಸಿದ್ದಾರೆ.

    ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಕಳೆದ ಕೆಲವಾರು ವರ್ಷಗಳಿಂದಲೂ ಪರಸ್ಪರ ಪ್ರೀತಿಯಲ್ಲಿದ್ದರು. ಇಬ್ಬರೂ ಒಟ್ಟಿಗೆ ‘ಗೀತ ಗೋವಿಂದಂ’ ಸಿನಿಮಾನಲ್ಲಿ ನಟಿಸಿದ್ದರು. ಆ ಸಿನಿಮಾ 2018 ರಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿತ್ತು. ಆಗ ಇಬ್ಬರು ಗೆಳೆಯರಾಗಿದ್ದರು, ಆದರೆ ಬಳಿಕ ಆ ಗೆಳೆತನ ಪ್ರೀತಿಗೆ ತಿರುಗಿತು. ಕಳೆದ ಕೆಲ ವರ್ಷಗಳಿಂದ ಇಬ್ಬರೂ ಲಿವಿನ್ ರಿಲೇಷನ್​​ನಲ್ಲಿದ್ದರು ಎನ್ನಲಾಗಿತ್ತು. ಇದೀಗ ಕೊನೆಗೂ ಇಬ್ಬರೂ ಮದುವೆ ಆಗುತ್ತಿದ್ದಾರೆ.

    ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

    Published On – 6:55 pm, Wed, 18 February 26

    Source link