All posts by nagaraj11081993

ಸರ್ಕಾರದಿಂದ 140 ಕೋಟಿ ರೂ ಬಾಕಿ: ಕೋಲಾರ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಉಚಿತ ಸೇವೆಗಳು ಸ್ಥಗಿತ – Kannada News | Kolar District Hospital Scans Crisis: Free CT, MRI Halted Over 140 Cr Dues to Krishna

ಸರ್ಕಾರಿ ಜಿಲ್ಲಾಸ್ಪತ್ರೆImage Credit source: tv9 kannada

ಕೋಲಾರ​, ಫೆಬ್ರವರಿ 18: ಕೋಲಾರ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಇಷ್ಟು ದಿನ ಆ ಎಲ್ಲಾ ಸ್ಕ್ಯಾನಿಂಗ್​ ಸೇವೆಗಳು (Scanning services) ಬಡ ರೋಗಿಗಳಿಗೆ ಉಚಿತವಾಗಿ ಸಿಗುತ್ತಿತ್ತು. ಆದರೆ ಸರ್ಕಾರದಿಂದ ಕೊಡಬೇಕಿದ್ದ ಹಣ ಬಾಕಿ ಉಳಿಸಿಕೊಂಡ ಹಿನ್ನೆಲೆ ಆ ಎಲ್ಲಾ ಸ್ಕ್ಯಾನಿಂಗ್ ಸೇವೆಗಳನ್ನು ಸ್ಥಗಿತಗೊಳಸಲಾಗಿದೆ. ಪರಿಣಾಮ ರೋಗಿಗಳು ಹಾಗೂ ಅವರ ಸಂಬಂಧಿಕರು ಅಕ್ರೋಶ ವ್ಯಕ್ತಪಡಿಸಿದದ್ದು, ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಗೊಂದಲದ ವಾತಾರವರಣ ನಿರ್ಮಾಣವಾಗಿತ್ತು.

ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಇಷ್ಟು ದಿನ ಸಿಟಿ ಹಾಗೂ ಎಂ.ಆರ್.ಐ ಸ್ಕ್ಯಾನಿಂಗ್​ಯನ್ನ ಉಚಿತವಾಗಿ ಮಾಡಲಾಗುತ್ತಿತ್ತು. ಆದರೆ ಇಂದು ಏಕಾಏಕಿ ಸ್ಕ್ಯಾನಿಂಗ್ ಘಟಕದ ಸಿಬ್ಬಂದಿ ಹಣ ಕೊಟ್ಟರೆ ಮಾತ್ರ ಸ್ಕ್ಯಾನಿಂಗ್ ಮಾಡಲಾಗುತ್ತದೆ, ಉಚಿತ ಸ್ಕ್ಯಾನಿಂಗ್ ಇಲ್ಲಾ ಎಂದಿದ್ದಾರೆ. ಇದರಿಂದ ರೋಗಿಗಳು ಹಾಗೂ ಅವರ ಸಂಬಂಧಿಕರು ತಮ್ಮ ಆಕ್ರೊಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಅವ್ಯವಸ್ಥೆ ಆಗರವಾದ ಗದಗ ಜಿಮ್ಸ್ ಆಸ್ಪತ್ರೆ: ಫ್ಯಾನ್​, ಎಸಿ ಇಲ್ಲದೆ ಹಸುಗೂಸು, ಬಾಣಂತಿಯರು ನರಳಾಟ

ನಾವೆಲ್ಲಾ ಬಡವರು ಅಷ್ಟೊಂದು ಹಣ ಇಲ್ಲಾ ಅಂತಲೇ ನಾವೆಲ್ಲಾ ಸರ್ಕಾರಿ ಆಸ್ಪತ್ರೆಗೆ ಬಂದಿರುವುದು. ಇಷ್ಟು ದಿನ ಉಚಿತವಾಗಿ ಮಾಡುತ್ತಿದ್ದ ಸ್ಕ್ಯಾನಿಂಗ್​ಗೆ ಇವಾಗ ಏಕೆ ಹಣ ಕೊಡಬೇಕು, ನಮ್ಮ ಬಳಿ ಹಣವಿಲ್ಲ ಎಂದು ಆಕ್ರೊಶ ಹೊರಹಾಕಿದ್ದಾರೆ. ಈ ವೇಳೆ ಸ್ಕ್ಯಾನಿಂಗ್ ಘಟಕದ ಸಿಬ್ಬಂದಿ ಹಾಗೂ ರೋಗಿಗಳ ಸಂಬಂಧಿಕರ ನಡುವೆ ಮಾತಿನ ಚಕಮಕಿ ನಡೆಯಿತು. ಕೆಲಕಾಲ ಜಿಲ್ಲಾಸ್ಪತ್ರೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಜಿಲ್ಲಾಸ್ಪತ್ರೆಗೆ ಸ್ಕ್ಯಾನಿಂಗ್​ಗಾಗಿ ದೂರುದ ಊರುಗಳಿಂದ ಬಂದಿದ್ದ ಬಡರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಸರ್ಕಾರ ಕೂಡಲೇ ಉಚಿತ ಸ್ಕ್ಯಾನಿಂಗ್​ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರ ಹಣ ಬಾಕಿ ಉಳಿಸಿಕೊಂಡರೆ ನಾವು ಬದುಕುವುದು ಹೇಗೆ

ಕೋಲಾರ ಜಿಲ್ಲಾಸ್ಪತ್ರೆಯ ಸ್ಕ್ಯಾನಿಂಗ್ ಹಾಗೂ ಸಿಟಿ ಘಟಕವಷ್ಟೇ ಅಲ್ಲದೆ ಇಲ್ಲಿನ ಹೊರಗುತ್ತಿಗೆ ಸಿಬ್ಬಂದಿ ಕೂಡ ಕಳೆದ ನಾಲ್ಕು ತಿಂಗಳಿಂದ ವೇತನ ನೀಡಿಲ್ಲವೆಂದು ಆಸ್ಪತ್ರೆಯ ಎದುರು ಪ್ರತಿಭಟನೆ ಮಾಡುತ್ತಿದ್ದಾರೆ. ನಾವು ಹಣಕ್ಕಾಗಿಯೇ ಕೆಲಸ ಮಾಡುತ್ತಿದ್ದೇವೆ. ಸರ್ಕಾರ ಹೀಗೆ ಹಣ ಬಾಕಿ ಉಳಿಸಿಕೊಂಡರೆ ನಾವು ಬದುಕುವುದು ಹೇಗೆ ಎಂದು ಆಸ್ಪತ್ರೆ ಎದುರು ಕಣ್ಣೀರಿಡುತ್ತಿದ್ದಾರೆ. ಈಬೆನ್ನಲ್ಲೇ  ಸ್ಕ್ಯಾನಿಂಗ್ ಘಟಕ ಕೂಡ ಸ್ಥಗಿತವಾಗಿದೆ.

ಇನ್ನು ಇದಕ್ಕೆ ಕಾರಣ ನೋಡುವುದಾದರೆ​ ಸರ್ಕಾರ ಕ್ರಸ್ನಾ ಡಯಾಗ್ನೋಸ್ಟಿಕ್​ ಕಂಪನಿಯವರಿಗೆ ಸ್ಕ್ಯಾನಿಂಗ್​ ಘಟಕವನ್ನ ಹೊರಗುತ್ತಿಗೆ ನೀಡಿದೆ. ಹಾಗಾಗಿ ಕಳೆದ ಹಲವು ವರ್ಷಗಳಿಂದ ಇದೇ ಕ್ರಸ್ನಾ ಕಂಪನಿಯವರೇ ಸ್ಕ್ಯಾನಿಂಗ್ ಘಟಕವನ್ನು ನಿರ್ವಹಣೆ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಸರ್ಕಾರ ಕಳೆದ ಮೂರು-ನಾಲ್ಕು ವರ್ಷಗಳಿಂದ ಕ್ರಸ್ನಾ ಕಂಪನಿಗೆ ನೀಡಬೇಕಿದ್ದ ಹಣವನ್ನು ನೀಡದೆ ಕೋಲಾರ ಜಿಲ್ಲಾಸ್ಪತ್ರೆಯೊಂದರಲ್ಲೇ ಸುಮಾರು 140 ಕೋಟಿ ರೂ ಅಷ್ಟು ಹಣ ಬಾಕಿ ಉಳಿಸಿಕೊಂಡಿದ್ದು, ಸರ್ಕಾರಕ್ಕೆ ಈವರೆಗೆ ಹಲವು ಬಾರಿ ಮನವಿ ಮಾಡಿದರೂ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಇದರಿಂದ ಕ್ರಸ್ನಾ ಡಯಾಗ್ನೋಸ್ಟಿಕ್​ ಕಂಪನಿಯವರು ಸೇವೆಗಳನ್ನು ಸ್ಥಗಿತಗೊಳಿಸಿದ್ದಾರೆ.

ಸರ್ಕಾರ ಬಾಕಿ ಹಣ ನೀಡಿದರೆ ಸ್ಕ್ಯಾನಿಂಗ್ ಎಂದ ರಾಹುಲ್

ಒಂದು ವೇಳೆ ಹಣ ಕೊಟ್ಟರೆ ಸ್ಕ್ಯಾನಿಂಗ್ ಮಾಡಿ ಎಂದು ಇಲ್ಲಿನ ಸಿಬ್ಬಂದಿಗೆ ತಿಳಿಸಿರುವ ಹಿನ್ನೆಲೆ ಸ್ಕ್ಯಾನಿಂಗ್ ಸೇವೆಗಳನ್ನು ಸ್ಥಗಿತಗೊಳಿಸಿ, ಹಣ ಕೊಟ್ಟವರಿಗೆ ಸ್ಕ್ಯಾನಿಂಗ್ ಮಾಡುವುದಾಗಿ ತಿಳಿಸಿದ್ದಾರೆ. ಕೂಡಲೇ ಸರ್ಕಾರ ನಮ್ಮ ಬಾಕಿ ಹಣ ನೀಡಿದರೆ ನಾವು ಸ್ಕ್ಯಾನಿಂಗ್​ ಸೇವೆಗಳನ್ನು ಎಂದಿನಂತೆ ಮುಂದುವರೆಸುತ್ತೇವೆ ಅನ್ನೋದು ಕ್ರಸ್ನಾ ಸಂಸ್ಥೆಯ ಮುಖ್ಯಸ್ಥ ರಾಹುಲ್ ಮಾತು.

ಇದನ್ನೂ ಓದಿ: ಕೋಲಾರದಲ್ಲಿ ಜೀರೋ ಹೆಸರಿನಲ್ಲಿ ಭೂ ಹಗರಣ: ವಾರಸುದಾರರಿಲ್ಲದ ಭೂಮಿ ಲಪಟಾಯಿಸಿದ ಪ್ರಭಾವಿಗಳು

ಒಟ್ಟಾರೆ ಸರ್ಕಾರದ ಬಳಿ ಹಣ ಇಲ್ಲವೋ ಅಥವಾ ಸರ್ಕಾರದ ನಿರ್ಲಕ್ಷವೋ ಗೊತ್ತಿಲ್ಲ ಸರ್ಕಾರ ಸ್ಕ್ಯಾನಿಂಗ್ ಸೇರಿದಂತೆ ವಿವಿಧ ಸೇವೆಗಳನ್ನು ಹೊರಗುತ್ತಿಗೆಯವರಿಗೆ ಕೊಟ್ಟು ಅವರಿಗೆ ನೀಡಬೇಕಾದ ಹಣ ನೀಡದೆ ಬಾಕಿ ಉಳಿಸಿಕೊಂಡಿರುವ ಪರಿಣಾಮ ಇಂದು ಕೋಲಾರ ಜಿಲ್ಲಾಸ್ಪತ್ರೆ ಗೊಂದಲದ ಗೂಡಾಗಿ ಕಂಡುಬಂದಿದ್ದಂತು ಸುಳ್ಳಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಋತುಚಕ್ರದ ಸಮಯದಲ್ಲಿ ಈ ಆಹಾರಗಳನ್ನು ಕಡ್ಡಾಯವಾಗಿ ಸೇವಿಸಬೇಕು! – Kannada News | Eating Right for Period Pain Relief

ಋತುಚಕ್ರ (Periods) ಅಥವಾ ಮುಟ್ಟಿನ ಸಮಯದಲ್ಲಿ ಆಹಾರದ ಬಗ್ಗೆ ವಿಶೇಷ ಗಮನ ಹರಿಸುವುದು ಬಹಳ ಮುಖ್ಯವಾಗುತ್ತದೆ. ಈ ಸಮಯದಲ್ಲಿ, ದೇಹದಲ್ಲಾಗುವ ಹಾರ್ಮೋನುಗಳ ಬದಲಾವಣೆ, ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಈ ಸಮಯದಲ್ಲಿ ಮಹಿಳೆಯರು ನೋವು, ಹೊಟ್ಟೆ ಸೆಳೆತ, ಆಯಾಸ, ದೌರ್ಬಲ್ಯ ಮತ್ತು ಮನಸ್ಥಿತಿಯಲ್ಲಿ ಬದಲಾವಣೆಗಳಂತಹ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಕೆಲವರಿಗೆ ತಲೆನೋವು ಅಥವಾ ಬೆನ್ನುನೋವು ಕೂಡ ಕಾಡಬಹುದು. ಹಾಗಾಗಿ ಇಂತಹ ಸಮಯದಲ್ಲಿ ಸರಿಯಾದ ಆರೈಕೆ ಮತ್ತು ಸಮತೋಲಿತ ಆಹಾರ ಸೇವನೆ ಮಾಡುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಇಲ್ಲವಾದಲ್ಲಿ ದೌರ್ಬಲ್ಯ ಮತ್ತು ಕಿರಿಕಿರಿ ಹೆಚ್ಚಾಗಬಹುದು. ಆದ್ದರಿಂದ, ದೇಹದ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ಪೌಷ್ಟಿಕ ಮತ್ತು ಸಮತೋಲಿತ ಆಹಾರವನ್ನು ಸೇವಿಸುವುದು ಬಹಳ ಒಳ್ಳೆಯದು. ಹಾಗಾದರೆ ಮುಟ್ಟಿನ ಸಮಯದಲ್ಲಿ ಯಾವ ರೀತಿಯ ಆಹಾರಗಳು ದೇಹಕ್ಕೆ ಒಳ್ಳೆಯದು ಮತ್ತು ಹೇಗೆ ಪ್ರಯೋಜನಕಾರಿ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಪಿರಿಯಡ್ಸ್ ಸಮಯದಲ್ಲಿ ಸೇವಿಸಬೇಕಾದ ಆಹಾರಗಳು:

ಋತುಚಕ್ರದ ಸಮಯದಲ್ಲಿ ಕಬ್ಬಿಣಾಂಶಯುಕ್ತ ಆಹಾರವನ್ನು ಸೇವಿಸುವುದು ಪ್ರಯೋಜನಕಾರಿಯಾಗಿದೆ ಏಕೆಂದರೆ ದೇಹದಿಂದ ರಕ್ತದ ಹೊರಹೋಗುವುದರಿಂದ ಸೊಪ್ಪು, ತರಕಾರಿ, ದಾಳಿಂಬೆ, ಬೀಟ್ರೂಟ್ ಮತ್ತು ಬೆಳೆ ಉತ್ತಮ ಆಯ್ಕೆಗಳಾಗಿವೆ. ಹಾಲು, ಮೊಸರು, ಬಾದಾಮಿ ಮತ್ತು ಎಳ್ಳಿನಂತಹ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿರುವ ಆಹಾರಗಳು ನೋವು ಮತ್ತು ಸೆಳೆತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬಾಳೆಹಣ್ಣು ಮತ್ತು ಓಟ್ಸ್ ನಂತಹ ಆಹಾರಗಳು ದೇಹಕ್ಕೆ ಶಕ್ತಿಯನ್ನು ನೀಡುತ್ತವೆ. ಶುಂಠಿ ಮತ್ತು ಅರಿಶಿನ ಬೆರೆಸಿದ ಹಾಲು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದೇಹವನ್ನು ಹೈಡ್ರೀಕರಿಸಲು ಮತ್ತು ಊತವನ್ನು ಕಡಿಮೆ ಮಾಡಲು ಸಾಕಷ್ಟು ನೀರು ಕುಡಿಯುವುದು ಕೂಡ ಬಹಳ ಮುಖ್ಯವಾಗುತ್ತದೆ. ಜೊತೆಗೆ ಸೂಪ್‌ ಮತ್ತು ಮನೆಯಲ್ಲಿ ತಯಾರಿಸಿದ ಆಹಾರ ಸೇವನೆ ಮಾಡುವುದು ದೇಹಕ್ಕೆ ಒಳ್ಳೆಯದು.

ಇದನ್ನೂ ಓದಿ: ಹೆರಿಗೆಯ ನಂತರ ಮುಟ್ಟು ವಿಳಂಬವಾಗುವುದು ಅಪಾಯಕಾರಿಯೇ? ಯಾವಾಗ ವೈದ್ಯರ ಸಲಹೆ ಪಡೆಯಬೇಕು?

ಮುಟ್ಟಿನ ಸಮಯದಲ್ಲಿ ಯಾವ ರೀತಿಯ ಆಹಾರಗಳ ಸೇವನೆ ಮಾಡಬಾರದು?

ಋತುಚಕ್ರದ ಸಮಯದಲ್ಲಿ, ಅತಿಯಾದ ಉಪ್ಪು, ಕರಿದ ಮತ್ತು ಮಸಾಲೆಯುಕ್ತ ಆಹಾರಗಳ ಸೇವನೆ ಮಾಡುವುದನ್ನು ತಪ್ಪಿಸಬೇಕು. ಏಕೆಂದರೆ ಅವು ಊತ ಮತ್ತು ಹೊಟ್ಟೆ ನೋವನ್ನು ಹೆಚ್ಚಿಸಬಹುದು. ಕಾಫಿ ಮತ್ತು ತಂಪು ಪಾನೀಯಗಳಂತಹ ಹೆಚ್ಚಿನ ಕೆಫೀನ್ ವಸ್ತುಗಳು ಆತಂಕ ಮತ್ತು ಚಡಪಡಿಕೆಯನ್ನು ಹೆಚ್ಚಿಸಬಹುದು. ಹೆಚ್ಚು ಸಕ್ಕರೆ ಸೇವಿಸುವುದರಿಂದ ಮನಸ್ಥಿತಿ ಬದಲಾವಣೆ ಮತ್ತು ಆಯಾಸವೂ ಹೆಚ್ಚಾಗುತ್ತದೆ. ಸಂಸ್ಕರಿಸಿದ ಆಹಾರಗಳು ಮತ್ತು ಪ್ಯಾಕ್ ಮಾಡಿದ ತಿಂಡಿಗಳ ಸೇವನೆ ಕೂಡ ಒಳ್ಳೆಯದಲ್ಲ. ಹಾಗಾಗಿ ಈ ರೀತಿಯ ಆಹಾರಗಳಿಂದ ಆದಷ್ಟು ದೂರವಿರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

PAK vs NAM: ಭಾರತದೊಂದಿಗೆ ಸೂಪರ್ 8 ಸುತ್ತಿಗೆ ಎಂಟ್ರಿಕೊಟ್ಟ ಪಾಕಿಸ್ತಾನ – Kannada News | Pakistan Qualifies for T20 World Cup Super 8: Namibia Crushed, Farhan Century Shines

2026 ರ ಟಿ20 ವಿಶ್ವಕಪ್​ನ (T20 World Cup 2026) ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ನಮೀಬಿಯಾವನ್ನು ಎದುರಿಸಿದ್ದ ಪಾಕಿಸ್ತಾನ (Pakistan vs Namibia) ಭಾರಿ ಅಂತರದಲ್ಲಿ ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ. ವಾಸ್ತವವಾಗಿ ಭಾರತದ ವಿರುದ್ಧದ ಪಂದ್ಯವನ್ನು ಸೋತು, ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬೀಳುವ ಆತಂಕದಲ್ಲಿದ್ದ ಪಾಕ್ ಪಡೆ, ಸೂಪರ್ 8 ಸುತ್ತಿಗೆ ಅರ್ಹತೆ ಪಡೆಯಬೇಕೆಂದರೆ ನಮೀಬಿಯಾ ವಿರುದ್ಧದ ಮಾಡು-ಅಥವಾ-ಮಡಿ ಪಂದ್ಯವನ್ನು ಗೆಲ್ಲಲೇಬೇಕಿತ್ತು. ಅದರಂತೆ ಕೊಲಂಬೊದಲ್ಲಿ ನಡೆದ ಈ ಪಂದ್ಯದಲ್ಲಿ ನಮೀಬಿಯಾವನ್ನು 102 ರನ್‌ಗಳಿಂದ ಸೋಲಿಸುವ ಮೂಲಕ ಪಾಕಿಸ್ತಾನ ಸೂಪರ್ 8 ಸುತ್ತಿಗೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು. ಸೂಪರ್ 8 ತಲುಪಿದ ಕೊನೆಯ ತಂಡವಾಗಿರುವ ಪಾಕ್ ತಂಡ, ಭಾರತದ ವಿರುದ್ಧ ಮತ್ತೊಂದು ಪಂದ್ಯದ ಭರವಸೆಯನ್ನು ಹುಟ್ಟುಹಾಕಿದೆ.

ನಮೀಬಿಯಾಕ್ಕೆ 102 ರನ್‌ಗಳ ಸೋಲು

ಕೊಲಂಬೊ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ, ನಮೀಬಿಯಾಗೆ 200 ರನ್‌ಗಳ ಗುರಿಯನ್ನು ನೀಡಿತು. ತಂಡದ ಪರ ಸಾಹಿಬ್‌ಜಾದಾ ಫರ್ಹಾನ್ 58 ಎಸೆತಗಳಲ್ಲಿ ಅಜೇಯ 100 ರನ್ ಗಳಿಸಿ ತಂಡವನ್ನು 199 ರನ್‌ಗಳಿಗೆ ಕೊಂಡೊಯ್ದರು. ಇದಕ್ಕೆ ಪ್ರತಿಯಾಗಿ ಗುರಿ ಬೆನ್ನಟ್ಟಿದ ನಮೀಬಿಯಾ ಉಸ್ಮಾನ್ ತಾರಿಕ್ ದಾಳಿಗೆ ತತ್ತರಿಸಿ 100 ರನ್‌ಗಳನ್ನು ಕಲೆಹಾಕಲು ಸಾಧ್ಯವಾಗದೆ 97 ರನ್​ಗಳಿಗೆ ಆಲೌಟ್ ಆಯಿತು. ಹೀಗಾಗಿ, ಪಾಕಿಸ್ತಾನವು ನಿರ್ಣಾಯಕ ಪಂದ್ಯದಲ್ಲಿ ಬೃಹತ್ ಗೆಲುವು ಸಾಧಿಸಿ ಸೂಪರ್ 8 ಸುತ್ತಿನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು.

ಸೂಪರ್-8 ತಲುಪಿದ 8 ತಂಡಗಳಿವು

ನಮೀಬಿಯಾ ವಿರುದ್ಧದ ಗೆಲುವಿನೊಂದಿಗೆ, ಪಾಕಿಸ್ತಾನ ಈಗ ಸೂಪರ್ 8 ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ. ಇದರೊಂದಿಗೆ, ಸೂಪರ್ 8 ಸುತ್ತಿನಲ್ಲಿ ಯಾವ್ಯಾವ ತಂಡಗಳು ಕಾಣಿಸಿಕೊಳ್ಳಲಿವೆ ಎಂಬುದು ಖಚಿತವಾಗಿದೆ. ಗುಂಪು 1 ರಲ್ಲಿ ಭಾರತ, ಜಿಂಬಾಬ್ವೆ, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ಸೇರಿದ್ದರೆ, ಗುಂಪು 2 ರಲ್ಲಿ ಪಾಕಿಸ್ತಾನ, ನ್ಯೂಜಿಲೆಂಡ್, ಇಂಗ್ಲೆಂಡ್ ಮತ್ತು ಶ್ರೀಲಂಕಾ ತಂಡಗಳು ಸೇರಿವೆ. ಪ್ರತಿ ತಂಡವು ತನ್ನ ಗುಂಪಿನಲ್ಲಿರುವ ಇತರ ಮೂರು ತಂಡಗಳ ವಿರುದ್ಧ ತಲಾ ಒಂದೊಂದು ಪಂದ್ಯವನ್ನು ಆಡುತ್ತದೆ. ಅಂತಿಮವಾಗಿ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ಎರಡು ತಂಡಗಳು ಸೆಮಿಫೈನಲ್​ಗೆ ಎಂಟ್ರಿಕೊಡಲಿವೆ.

IND vs NED: ಕೊನೆಯ ಲೀಗ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 2 ಬದಲಾವಣೆ

ಸೆಮಿಫೈನಲ್‌ನಲ್ಲಿ ಭಾರತ- ಪಾಕ್ ಮುಖಾಮುಖಿ

ಮೇಲೆ ಹೇಳಿದಂತೆ ಸೂಪರ್ 8 ಹಂತದಲ್ಲಿ, ಪ್ರತಿ ತಂಡವು ತನ್ನ ಗುಂಪಿನಲ್ಲಿರುವ ಪ್ರತಿಯೊಂದು ತಂಡದ ವಿರುದ್ಧ ಒಂದು ಪಂದ್ಯವನ್ನು ಆಡುತ್ತದೆ. ಇದರರ್ಥ ಈ ಸುತ್ತಿನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯ ನಡೆಯುವುದಿಲ್ಲ. ಆದರೆ ಉಭಯ ತಂಡಗಳು ಸೆಮಿಫೈನಲ್‌ನಲ್ಲಿ ಪರಸ್ಪರ ಮುಖಾಮುಖಿಯಾಗಬಹುದು. ಭಾರತವು ಗ್ರೂಪ್ 1 ರಲ್ಲಿ ಅಗ್ರಸ್ಥಾನ ಪಡೆದು, ಇತ್ತ ಪಾಕಿಸ್ತಾನ ಗ್ರೂಪ್ 2 ರಲ್ಲಿ ಎರಡನೇ ಸ್ಥಾನ ಪಡೆದು ಸೆಮಿಫೈನಲ್‌ಗೆ ಮುನ್ನಡೆದರೆ ಉಭಯ ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗಲಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

50 ಎಕರೆ ಸವಾಲು ಹಾಕಿದ ಬಿಜೆಪಿ ಮಾಜಿ ಶಾಸಕರಿಗೆ ವಿಡಿಯೋ ಬಿಡ್ಲಾ ಎಂದ ಸಚಿವ ತಂಗಡಗಿ – Kannada News | Minister shivaraj tangadagi Hits back with video at BJP Ex MLA Basavaraj dhadesugur

ಕೊಪ್ಪಳ, (ಫೆಬ್ರವರಿ 18): ಬಿಜೆಪಿ ಮಾಜಿ ಶಾಸಕ ಬಸವರಾಜ್ ಬಸವರಾಜ ದಡೇಸುಗೂರು ಹಾಗೂ ಸಚಿವ ಶಿವರಾಜ್ ತಂಗಡಗಿ ನಡುವೆ ವಾಕ್ಸಮರ ಜೋರಾಗಿದೆ. ನಾನು ರಕ್ತದಲ್ಲಿ ಬರೆದುಕೊಡ್ತೀನಿ ಈ ಬಾರಿ ತಂಗಡಗಿ ಸೋಲುತ್ತಾನೆ. ಇದಕ್ಕೆ 50 ಎಕರೆ ಜಮೀನು ಕೊಡುತ್ತೇನೆ. ಅಕಸ್ಮಾತ್ ನಾನು ಗೆದ್ರೆ ತಂಗಡಗಿ 50 ಎಕರೆ ಜಮೀನು ಕೊಡಬೇಕು ಎಂದು ಬಸವರಾಜ ದಡೇಸುಗೂರು ಸವಾಲು ಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಶಿವರಾಜ್ ತಂಗಡಗಿ, ನಿನ್ನ ಹತ್ರ ಏನೂ ಇಲ್ಲ ಅಂತಿದ್ದಿ. ಐವತ್ತು ಎಕರೆ ಜಮೀನು ಹೇಗೆ ಬಂತು? ನೂರು ಎಕರೆ ಜಮೀನು ಹೇಗೆ ಬಂತು? ನನ್ನ ಬಗ್ಗೆ ಮಾತಾಡೋ ಮುನ್ನ ನಿನ್ನ ಇತಿಹಾಸ ತಿಳಿದುಕೋ ಪುಣ್ಯಾತ್ಮ. ದೇವದಾಸಿಯರಿಗೆ ಚಪ್ಪಲಿಯಿಂದ ಹೊಡೆದಿದ್ದು ಯಾರು? ಶಿವರಾಜ್ ತಂಗಡಗಿ ಏನೂ ಅಂತಾ ಕ್ಷೇತ್ರದ ಜನರಿಗೆ ಗೊತ್ತಿದೆ. ನಿನ್ನೆ ವಿಡಿಯೋ ಅದನ್ನು ಬಿಡ್ಲಾ ಎಂದು ತಿರುಗೇಟು ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಲುಷಿತ ನೀರಿನಿಂದ ಉಂಟಾಗುವ ಕಾಯಿಲೆಗಳ ಪೈಕಿ ದೇಶದಲ್ಲಿಯೇ ಕರ್ನಾಟಕ ನಂಬರ್​ 1: ಆತಂಕಕಾರಿ ಮಾಹಿತಿ ಬಹಿರಂಗ – Kannada News | Karnataka Ranks First in Water Borne Diseases; Typhoid and Diarrhoea Cases Surge in Bengaluru

ಬೆಂಗಳೂರು, ಫೆಬ್ರವರಿ 18: ಕಲುಷಿತ ನೀರಿನಿಂದ ಉಂಟಾಗುವ ಕಾಯಿಲೆಗಳ ಪೈಕಿ ದೇಶದಲ್ಲಿಯೇ ಕರ್ನಾಟಕ ನಂಬರ್​ 1 ಸ್ಥಾನದಲ್ಲಿದೆ ಎಂಬ ಆತಂಕಕಾರಿ ವಿಚಾರ ಬಹಿರಂಗಗೊಂಡಿದೆ. ಅತಿ ಹೆಚ್ಚು ಟೈಫಾಯ್ಡ್ ಹಾಗೂ ಅತಿಸಾರ ಕೇಸ್​​ಗಳು ರಾಜ್ಯದಲ್ಲಿ ದಾಖಲಾಗುತ್ತಿವೆ. ಟೈಫಾಯ್ಡ್ ಪೈಕಿ ಮೂರನೇ ಸ್ಥಾನ ಮತ್ತು ಅತಿಸಾರ ಪ್ರಕರಣಗಳಲಲ್ಲಿ 5ನೇ ನಂಬರ್​ನ ಕರ್ನಾಟಕ ಪಡೆದಿದ್ದು, ‌ಹಳ್ಳಿಗಳಿಗೆ ಹೋಲಿಸಿದ್ರೆ ಬೆಂಗಳೂರಿನಲ್ಲೇ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ ಎಂಬ ಮಾಹಿತಿಯನ್ನು ಕೇಂದ್ರ ಆರೋಗ್ಯ ಸಚಿವಾಲಯದ ವರದಿ ತಿಳಿಸಿದೆ.

ಯಾವ ವರ್ಷದಲ್ಲಿ ಎಷ್ಟು ಪ್ರಕರಣ?

ವರ್ಷ ಅತಿಸಾರ ಕೇಸ್​ ಟೈಫಾಯ್ಡ್ ಕೇಸ್​
2025 1.8 ಲಕ್ಷ 39,348
2024 1.8 ಲಕ್ಷ 45,641
2023 1.4 ಲಕ್ಷ 42,096
2022 1.3 ಲಕ್ಷ 28232

ಇದನ್ನೂ ಓದಿ: ಪೋಷಕರಿಗೆ ದೊಡ್ಡ ಸವಾಲಾದ ಮಕ್ಕಳ ಮೊಬೈಲ್ ಅಡಿಕ್ಷನ್; ನಿಮ್ಹಾನ್ಸ್ ಮೊರೆ ಹೋದ ಹೆತ್ತವರು

ಅಕ್ಯುಟ್‌ ಡಯಾರಿಯಲ್‌ ಡಿಸೀಸ್‌ ಲಕ್ಷಣಗಳು ಏನು?

  • ಭೇದಿ
  • ವಾಕರಿಕೆ ಜೊತೆಗೆ ವಾಂತಿ
  • ಕಿಬ್ಬೊಟ್ಟೆಯ ಸೆಳೆತ
  • ಹೊಟ್ಟೆನೋವು
  • ಜ್ವರ ಮತ್ತಿತರೆ ಲಕ್ಷಣ

ಮಕ್ಕಳು ಮತ್ತು ಹಿರಿಯರಲ್ಲೇ ಅಧಿಕ

2021ರಿಂದ 2025ರ ತನಕ ಕರ್ನಾಟಕದಲ್ಲಿ ಅತಿಹೆಚ್ಚು ಟೈಫಾಯ್ಡ್ ಹಾಗೂ ಅತಿಸಾರ ಖಾಯಿಲೆಗಳು ಪತ್ತೆಯಾಗಿದ್ದು, ರಾಜಧಾನಿಯಲ್ಲಿ ಕಲುಷಿತ ನೀರಿನ ಕಾರಣ ಪ್ರತಿ ದಿನ ಟೈಫಾಯ್ಡ್ ಹಾಗೂ ಅತಿಸಾರ ಕೇಸ್​​ಗಳು ಮೇಲಿಂದ ಮೆಲೆ ವರದಿಯಾಗ್ತಿವೆ. ಈ ನಡುವೆ ಬೇಸಿಗೆಯಲ್ಲಿ ಪ್ರಕರಣಗಳು ಮತ್ತಷ್ಟು ಹೆಚ್ಚಳ ಆಗುವ ಆತಂಕ ಕೂಡ ಇದ್ದು, ಪ್ರತಿ ದಿನ ಕನಿಷ್ಠ 10 ಪ್ರಕರಣಗಳು ವರದಿಯಾಗುತ್ತಿರುವ ಬಗ್ಗೆ ಮಾಹಿತಿ ಇದೆ. ಟ್ಯಾಂಕರ್ ವಾಟರ್, ಡ್ರೈನೇಜ್ ಮಿಶ್ರಿತ ನೀರು, ಪ್ಯಾಕೇಡ್ಜ್ ವಾಟರ್, ಪೈಪ್ ಲೈನ್​​ಗಳ ಕಲುಷಿತ ನೀರಿನಿಂದ ಅತಿಸಾರ ಪ್ರಕರಣಗಳು ದ್ವಿಗುಣಗೊಂಡಿವೆ. ಇದರಿಂದ ವಾಂತಿ, ಭೇದಿಯಂತ ಆರೋಗ್ಯ ಸಮಸ್ಯೆ ಕಾಣಿಸಿಕೊಂಡು ಆಸ್ಪತ್ರೆಯತ್ತ ಮುಖ ಮಾಡುತ್ತಿರುವ ಜನ ಸಂಖ್ಯೆ ಹೆಚ್ಚಳವಾಗಿದೆ.‌ ಮಕ್ಕಳು ಮತ್ತು ಹಿರಿಯರಲ್ಲೇ ಈ ಸಮಸ್ಯೆ ಅಧಿಕವಾಗಿದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

IND vs NED: ಕೊನೆಯ ಲೀಗ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 2 ಬದಲಾವಣೆ – Kannada News | India vs Netherlands: T20 World Cup 2026 Last League Match, Team Changes Announced

2026 ರ ಟಿ20 ವಿಶ್ವಕಪ್​ನಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿರುವ ಟೀಂ ಇಂಡಿಯಾ ಇದೀಗ ತನ್ನ ಕೊನೆಯ ಲೀಗ್ ಪಂದ್ಯವನ್ನು ನೆದರ್ಲ್ಯಾಂಡ್ಸ್ ವಿರುದ್ಧ ಆಡುತ್ತಿದೆ. ಇದುವರೆಗೆ ಆಡಿದ ಮೂರು ಪಂದ್ಯಗಳಲ್ಲಿ ಭಾರತ ಅದ್ಭುತ ಗೆಲುವುಗಳನ್ನು ದಾಖಲಿಸಿದೆ. ಮೊದಲ ಪಂದ್ಯದಲ್ಲಿ ಯುಎಸ್ಎ ಮತ್ತು ಎರಡನೇ ಪಂದ್ಯದಲ್ಲಿ ನಮೀಬಿಯಾವನ್ನು ಸೋಲಿಸಿದ ಭಾರತ ತಂಡವು ಮೂರನೇ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭರ್ಜರಿ ಜಯ ಸಾಧಿಸಿ ಸೂಪರ್ -8 ಹಂತಕ್ಕೆ ಟಿಕೆಟ್ ಖಚಿತ ಪಡಿಸಿಕೊಂಡಿತ್ತು. ಇದೀಗ ಸೂಪರ್ -8 ಸುತ್ತಿಗೂ ಮುನ್ನ ನೆದರ್ಲ್ಯಾಂಡ್ಸ್ ವಿರುದ್ಧ ಗುಂಪು ಹಂತದ ಕೊನೆಯ ಪಂದ್ಯವನ್ನು ಆಡುತ್ತಿರುವ ಸೂರ್ಯಕುಮಾರ್ ಪಡೆ, ಮುಂದಿನ ಸುತ್ತಿಗೆ ತಯಾರಿಯಾಗಿ ಈ ಪಂದ್ಯವನ್ನು ನೋಡುತ್ತಿದೆ.

ಟಾಸ್ ಗೆದ್ದ ಭಾರತ

ಈ ವಿಶ್ವಕಪ್​ನಲ್ಲಿ ಇದೇ ಮೊದಲ ಬಾರಿಗೆ ಟಾಸ್ ಗೆದ್ದ ಸೂರ್ಯಕುಮಾರ್ ಯಾದವ್, ನೆದರ್ಲ್ಯಾಂಡ್ಸ್ ವಿರುದ್ಧ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಆ ಬಳಿಕ ತಂಡದ ಆಡುವ ಹನ್ನೊಂದರ ಬಳಗದ ಬಗ್ಗೆ ಮಾಹಿತಿ ನೀಡಿದ ನಾಯಕ ಸೂರ್ಯಕುಮಾರ್ ಯಾದವ್ ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡಿರುವುದಾಗಿ ಘೋಷಿಸಿದರು. ಅದರಂತೆ ಕುಲ್ದೀಪ್ ಯಾದವ್ ಬದಲಿಗೆ ಅರ್ಶ್ದೀಪ್ ಸಿಂಗ್ ತಂಡಕ್ಕೆ ಮರಳಿದ್ದು, ಅಕ್ಷರ್ ಪಟೇಲ್ ಬದಲಿಗೆ ವಾಷಿಂಗ್ಟನ್ ಸುಂದರ್ ಆಡುತ್ತಿದ್ದಾರೆ.

ಉಭಯ ತಂಡಗಳು

ಭಾರತ ತಂಡ: ಇಶಾನ್ ಕಿಶನ್, ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ.

ನೆದರ್ಲ್ಯಾಂಡ್ಸ್: ಮೈಕೆಲ್ ಲೆವಿಟ್, ಮ್ಯಾಕ್ಸ್ ಒ’ಡೌಡ್, ಬಾಸ್ ಡಿ ಲೇಡೆ, ಕಾಲಿನ್ ಅಕರ್ಮನ್, ಸ್ಕಾಟ್ ಎಡ್ವರ್ಡ್ಸ್ (ನಾಯಕ), ಜ್ಯಾಕ್ ಲಿಯಾನ್-ಕ್ಯಾಚೆಟ್, ನೋಹ್ ಕ್ರೂಸ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಲೋಗನ್ ವ್ಯಾನ್ ಬೀಕ್, ಆರ್ಯನ್ ದತ್, ಕೈಲ್ ಕ್ಲೈನ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಐನಿಂದ ಭಯ ಬೇಡ; ನಾವು ಊಹಿಸಿಕೊಳ್ಳಲೂ ಸಾಧ್ಯವಿಲ್ಲದಂತಹ ಉದ್ಯೋಗಗಳು ಸೃಷ್ಟಿಯಾಗುತ್ತವೆ, ನೋಡ್ತಿರಿ: ವಿಶಾಲ್ ಸಿಕ್ಕಾ – Kannada News | Vishal Sikka says AI can create jobs we can’t imagine just now

ನವದೆಹಲಿ, ಫೆಬ್ರುವರಿ 18: ಕೃತಕ ಬುದ್ಧಿಮತ್ತೆ ಬೆಳೆದಂತೆ ಮನುಷ್ಯರಿಗೆ ಮಾಡೋಕೆ ಕೆಲಸಗಳೇ ಇಲ್ಲದಂತಾಗುತ್ತದೆ ಎಂದು ಅದೆಷ್ಟೋ ಜನರು ಹೆದರಿಸುತ್ತಿದ್ದಾರೆ. ಯಾವ ಸೆಕ್ಟರ್ ಅನ್ನೂ ಎಐ ಬಿಡೋದಿಲ್ಲ. ಎಲ್ಲರೂ ಕೂಡ ಬಾಧಿತರಾಗುವವರೇ ಎನ್ನುತ್ತಿದ್ದಾರೆ. ಆದರೆ, ಭಾರತೀಯ ಉದ್ಯಮಿ ಡಾ. ವಿಶಾಲ್ ಸಿಕ್ಕಾ (Vishal Sikka) ಅವರು ಎಐನಿಂದ ತೀರಾ ಭಯಪಡುವ ಅವಶ್ಯಕತೆ ಇಲ್ಲ ಎಂದು ಸಮಾಧಾನ ಹೇಳಿದ್ದಾರೆ.

ವಿಯಾನ್​ಎಐ ಸಿಸ್ಟಮ್ಸ್​ನ (Vianai Systems) ಸ್ಥಾಪಕ ಸಿಇಒ ಆದ ವಿಶಾಲ್ ಸಿಕ್ಕಾ ಅವರು ಎಐನಿಂದ ಹೊಸ ಸಾಧ್ಯತೆಗಳು ಮತ್ತು ಉದ್ಯೋಗಗಳು ತೆರೆದುಕೊಳ್ಳುತ್ತವೆ ಎಂದಿದ್ದಾರೆ.

ಇದನ್ನೂ ಓದಿ: ಭಾರತ-ಅಮೆರಿಕ ಕನೆಕ್ಟ್ ಸೇರಿದಂತೆ ವಿವಿಧ ಎಐ ಯೋಜನೆಗಳನ್ನು ತೆರೆದಿಟ್ಟ ಗೂಗಲ್ ಸಿಇಒ ಸುಂದರ್ ಪಿಚೈ

‘ನಿನ್ನೆ ನಾವು ಮಾಡುತ್ತಿದ್ದ ಕೆಲಸವನ್ನು ಎಐ ಮಾಡಬಲ್ಲುದು ಎಂದು ನಾವೆಲ್ಲಾ ಹೆದರಿದ್ದೇವೆ. ಆದರೆ, ಎಐನಿಂದ ಸಾಧ್ಯವಾಗುವ ಹೊಸ ಅಪ್ಲಿಕೇಶನ್​ಗಳನ್ನು ಕಾಣಲು ನಮಗೆ ಆಗುತ್ತಿಲ್ಲ’ ಎಂದು ವಿಶಾಲ್ ಸಿಕ್ಕಾ ಅಭಿಪ್ರಾಯಪಟ್ಟಿದ್ಧಾರೆ. ಅಂದರೆ, ಎಐ ತಂತ್ರಜ್ಞಾನದಿಂದ ಹೊಸ ಉದ್ಯೋಗ ಸಾಧ್ಯತೆಗಳನ್ನು ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ಅವರ ಅನಿಸಿಕೆ. ಹಾಗೆಯೇ, ಐತಿಹಾಸಿಕವಾಗಿ ಹೊಸ ತಂತ್ರಜ್ಞಾನಗಳು ಬಂದಾಗೆಲ್ಲಾ ಅವುಗಳ ನಿಜವಾದ ಉಪಯೋಗ ಶುರುವಾಗುವ ಮುನ್ನ ಅಪಾಯಕಾರಿ ಎನಿಸುತ್ತವೆ ಎಂಬುದನ್ನು ಒತ್ತಿ ಹೇಳಿದ್ದಾರೆ.

‘ಟಿವಿ ಬಂದಾಗ ಜನರು ಪರದೆ ಮೇಲೆ ಕಾಗದ ತುಂಡಿನಲ್ಲಿ ಬರೆದಿದ್ದನ್ನು ಓದುತ್ತಿದ್ದರು. ಹೊಸ ತಂತ್ರಜ್ಞಾನ ಬಂದಾಗ ಮೊದಮೊದಲು ಹಳೆಯ ಮಾದರಿಯಂತೆ ಕೆಲಸವನ್ನು ಮಾಡಲು ಯತ್ನಿಸುತ್ತೇವೆ. ಹೊಸ ಮಾಧ್ಯಮವನ್ನು ಹೊಸದಾಗಿ ಹೇಗೆ ಉಪಯೋಗಿಸಿಕೊಳ್ಳಬಹುದು ಎಂಬುದನ್ನು ಊಹಿಸಿಕೊಳ್ಳಲು ಆಗುವುದಿಲ್ಲ’ ಎಂದು ವಿಯಾನ್​ಎಐ ಸಿಸ್ಟಮ್ಸ್​ನ ಸಿಇಒ ವಿವರಿಸಿದ್ದಾರೆ.

ಇದನ್ನೂ ಓದಿ: ಭಾರತ್​ಜೆನ್ ಎಐನಿಂದ ಸ್ಕೈಏರ್​ವರೆಗೂ ದೆಹಲಿ ಶೃಂಗಸಭೆಯಲ್ಲಿ ಭಾರತೀಯರ ಎಐ ಶಕ್ತಿ ಪ್ರದರ್ಶನ

ಅವರ ಪ್ರಕಾರ ಎಐ ಸದ್ಯ ಈ ಹಂತದಲ್ಲಿದೆ. ನಾಳೆಯ ಉದ್ಯಮಗಳ ಸಾಧ್ಯತೆಯನ್ನು ಕಾಣುವ ಬದಲು ನಿನ್ನೆಯ ಕೆಲಸವನ್ನು ಅನುಕರಿಸಲಾಗುತ್ತಿದೆ.

ಭಾರತವು ಲಾರ್ಜ್ ಲ್ಯಾಂಗ್ವೇಜ್ ಮಾಡಲ್​ಗಳನ್ನು ನಿರ್ಮಿಸುವುದಕ್ಕೆ ಮಾತ್ರವೇ ಗಮನ ಕೊಡಬಾರದು. ನೂರು ಕೋಟಿ ಜನರು ಎಐ ಅನ್ನು ಸಮರ್ಪಕವಾಗಿ ಬಳಸಲು ಸಾಧ್ಯವಾಗುವಂತೆ ಮಾಡುವುದು ಮುಖ್ಯ. ಜನರಿಗೆ ಎಐನ ಸಾಮರ್ಥ್ಯ ಮತ್ತು ಮಿತಿಗಳು ಗೊತ್ತಾದರೆ ಹೊಸ ಅಪ್ಲಿಕೇಶನ್​ಗಳನ್ನು ನಿರ್ಮಿಸಬಹುದು ಎಂದು ವಿಶಾಲ್ ಸಿಕ್ಕಾ ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

200ಕ್ಕೂ ಹೆಚ್ಚು ಪ್ರಾಣಿಗಳಿಗೆ ಕ್ವಾರಂಟೈನ್: ಬಿಂಕದಟ್ಟಿ ಮೃಗಾಲಯದಲ್ಲಿ ಆಗಿದ್ದೇನು? – Kannada News | Gadag: Some Animals at Binkadakatti Zoo Quarantined After Nilgai Death from Hemorrhagic Septicemia

ಬಿಂಕದಕಟ್ಟಿ ಮೃಗಾಲಯImage Credit source: karnatakaexplore.com

ಗದಗ, ಫೆಬ್ರವರಿ 18: ಬಿಂಕದಕಟ್ಟಿ ಮೃಗಾಲಯ (binkadakatti zoo) ಉತ್ತರ ಕರ್ನಾಟಕದ ಪ್ರಮುಖ ಮೃಗಾಲಯ. ಈ ಮೃಗಾಲಯದಲ್ಲಿ ಪ್ರಾಣಿಗಳಿಗೆ ರೋಗದ ಭೀತಿ ಎದುರಾಗಿದೆ‌‌. ಮಾರಣಾಂತಿಕ ಗಳಲೆ ರೋಗದಿಂದ ನೀಲಗಾಯ್ ಸಾವನ್ನಪ್ಪಿದ ಬಳಿಕ ಮತ್ತಷ್ಟು ಆತಂಕ ಮನೆ ಮಾಡಿದೆ. ಹೀಗಾಗಿ ಸಸ್ಯಹಾರಿ ಪ್ರಾಣಿಗಳನ್ನು ಕ್ವಾರಂಟೈನ್ ಮಾಡಲಾಗಿದ್ದು, ಪ್ರಾಣಿಗಳ ಮೇಲೆ ನಿಗಾವಹಿಸಲಾಗಿದೆ. ಮೃಗಾಲಯ ವೀಕ್ಷಣೆಗೆ ನಿರ್ಬಂಧ ಹೇರಲಾಗಿದ್ದು, ಪ್ರವಾಸಿಗರಿಗೆ ಭಾರೀ ನಿರಾಸೆ ಉಂಟಾಗಿದೆ.

ಕ್ವಾರಂಟೈನ್ ಅಂದರೆ ಥಟ್ ಅಂತ ನೆನಪಾಗುವುದು ಕೊರೊನಾ ಎಮರ್ಜೆನ್ಸಿ. ಕೊರೊನಾ ಹೆಮ್ಮಾರಿಗೆ ಅಂದು ಜನರನ್ನು‌ ಕ್ವಾರಂಟೈನ್​ಗೆ ಒಳಪಡಿಸಲಾಗಿತ್ತು. ಆದರೆ ಇದೀಗ ಪ್ರಾಣಿಗಳನ್ನು ಕ್ವಾರಂಟೈನ್​ನಲ್ಲಿ ಇಡಲಾಗಿದೆ. ಉತ್ತರ ಕರ್ನಾಟಕದ ಪ್ರಮುಖ ಪ್ರಾಣಿ ಸಂಗ್ರಹಾಲಯವಾಗಿರುವ ಗದಗಿನ ಬಿಂಕದಕಟ್ಟಿ ಮೃಗಾಲಯದಲ್ಲಿ ಸಸ್ಯಹಾರಿ ಪ್ರಾಣಿಗಳಿಗೆ ಗಂಭೀರ ರೋಗದ ಆತಂಕ ಎದುರಾಗಿದೆ.

ಇದನ್ನೂ ಓದಿ: ಮೈಸೂರು ಪ್ರವಾಸಿಗರಿಗೆ ದುಃಖದ ಸುದ್ದಿ: ಇನ್ಮುಂದೆ ಸಿಗಲ್ಲ ಜಿರಾಫೆ ‘ಯುವರಾಜ’

ಫೆಬ್ರವರಿ 3ರಂದು ಮೃಗಾಲಯದಲ್ಲಿದ್ದ ನೀಲಗಾಯ್ ಪ್ರಾಣಿ ಸಾವನ್ನಪ್ಪಿದೆ. ಮರಣೋತ್ತರ ಪರೀಕ್ಷೆ ಬಳಿಕ ಅದು ಹೆಮರಾಜಿಕ್ ಸೆಪ್ಟಿಸೆಮಿಯಾ (ಗಳಲೆ) ಸೋಂಕಿನಿಂದ ಮೃತಪಟ್ಟಿರುವುದು ದೃಢಪಟ್ಟಿದೆ. ಈ ರೋಗವು ನೀಲಗಾಯ್ ಸೇರಿದಂತೆ ಸಸ್ಯಹಾರಿ ಪ್ರಾಣಿಗಳಲ್ಲಿ ವೇಗವಾಗಿ ಹರಡುವ ಹಾಗೂ ಪ್ರಾಣ ತೆಗೆಯುವ ಸ್ವರೂಪ ಹೊಂದಿರುವುದರಿಂದ ಮೃಗಾಲಯದ ಆಡಳಿತ ಮತ್ತು ಅರಣ್ಯ ಇಲಾಖೆ ತೀವ್ರ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ರೋಗದ ಭೀತಿ ಹಿನ್ನೆಲೆ ಮೃಗಾಲಯದಲ್ಲಿರುವ 200ಕ್ಕೂ ಹೆಚ್ಚು ಸಸ್ಯಹಾರಿ ಪ್ರಾಣಿಗಳನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಇನ್ನು ನೀಲಗಾಯ್, ಕೃಷ್ಣಮೃಗ, ಜಿಂಕೆ ಹಾಗೂ ಕಡವೆ ಇರುವ ಸುತ್ತಲೂ ಹಸಿರು ಪರದೆ ಅಳವಡಿಸಿ ಕ್ವಾರಂಟೈನ್ ವಲಯ ನಿರ್ಮಿಸಲಾಗಿದ್ದು, ಈ ವಿಭಾಗಗಳ ವೀಕ್ಷಣೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಮೃಗಾಲಯದಲ್ಲಿರುವ 37 ನೀಲಗಾಯ್‌ಗಳ ಮೇಲೆ ವಿಶೇಷ ನಿಗಾವಹಿಸಲಾಗಿದ್ದು, ನಾಲ್ವರು ಪ್ರಾಣಿ ಪಾಲಕರು ಸಸ್ಯಹಾರಿ ಪ್ರಾಣಿಗಳ ಆರೋಗ್ಯ ಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದಾರೆ.

ಮೃಗಾಲಯ ಆರ್​ಎಫ್​ಓ ಸ್ನೇಹಾ ಕೊಪ್ಪಳ ಹೇಳಿದ್ದಿಷ್ಟು

ಇದೇ ರೋಗದಿಂದ ಇತ್ತೀಚೆಗೆ ಬೆಳಗಾವಿ ಮೃಗಾಲಯದಲ್ಲಿಯೂ ಕೃಷ್ಣಮೃಗಗಳು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ, ಗದಗ ಮೃಗಾಲಯದಲ್ಲೂ ಹೆಚ್ಚುವರಿ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಸೋಂಕು ಹರಡದಂತೆ 21 ದಿನಗಳ ಕಾಲ ಸಸ್ಯಹಾರಿ ಪ್ರಾಣಿಗಳ ಮೇಲೆ ತೀವ್ರ ನಿಗಾವಹಿಸಲು ತೀರ್ಮಾನಿಸಲಾಗಿದೆ. ಸಸ್ಯಹಾರಿ ಪ್ರಾಣಿಗಳನ್ನು ಹೊರತುಪಡಿಸಿ ಮೃಗಾಲಯದ ಉಳಿದ ಭಾಗದಲ್ಲಿ ಸಾರ್ವಜನಿಕರಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ ಎಂದು ಮೃಗಾಲಯ ಆರ್​ಎಫ್​ಓ ಸ್ನೇಹಾ ಕೊಪ್ಪಳ ಹೇಳಿದ್ದಾರೆ.

ಇದನ್ನೂ ಓದಿ: ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಮುಂದುವರಿದ ಸಾವಿನ ಸರಣಿ: ಮೃತ ಕೃಷ್ಣಮೃಗಗಳ ಸಂಖ್ಯೆ 29ಕ್ಕೆ ಏರಿಕೆ

ಒಟ್ಟಿನಲ್ಲಿ ಸೋಂಕು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವವರೆಗೆ ಅಗತ್ಯ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಾಣಿಗಳ ಆರೋಗ್ಯ ರಕ್ಷಣೆಗೆ ಅರಣ್ಯ ಇಲಾಖೆ ಮುಂದಾಗಿದೆ. ಡೇಂಜರ್ ಕಾಯಿಲೆಯಾದ ಗಳಲೆ ರೋಗ ಸಾಕಷ್ಟು ಆತಂಕ್ಕೆ ಕಾರಣವಾಗಿದೆ. ಹೀಗಾಗಿ ಸಸ್ಯಹಾರಿ ವೀಕ್ಷಣೆ ಮಾಡಲು ಬರುವ ಪ್ರವಾಸಿಗರು ಹಾಗೂ ಪ್ರಾಣಿ ಪ್ರಿಯರಿಗೆ ನಿರಾಸೆಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸಾವಿನ ಕದ ತಟ್ಟಿ ಮರಳಿ ಬಂದ ರಾಣಾ ದಗ್ಗುಬಾಟಿ: ಆಗಿದ್ದೇನು? – Kannada News | Rana Daggubati said he returned movie advances due to his health issue

ಬಾಹುಬಲಿ’ (Bahubali) ಸಿನಿಮಾದ ವಿಲನ್ ಬಲ್ಲಾಳದೇವ ಯಾರಿಗೆ ನೆನಪಿಲ್ಲ. ಪಾತ್ರದಲ್ಲಿ ನಟಿಸಿದ್ದ ರಾಣಾ ದಗ್ಗುಬಾಟಿ, ಆ ಪಾತ್ರಕ್ಕಾಗಿ ಭಾರಿ ರಿಸ್ಕ್ ತೆಗೆದುಕೊಂಡಿದ್ದರು. ಪ್ರಭಾಸ್​​ಗಿಂತಲೂ ಹುರಿಗಟ್ಟಿದ ದೇಹವನ್ನು ‘ಬಾಹುಬಲಿ’ ಸಿನಿಮಾಕ್ಕಾಗಿ ತಯಾರು ಮಾಡಿಕೊಂಡಿದ್ದರು ರಾಣಾ ದಗ್ಗುಬಾಟಿ. ‘ಬಾಹುಬಲಿ’ ಬಳಿಕ ಹಲವು ಮಾಸ್ ಸಿನಿಮಾ ಆಫರ್​​ಗಳು ರಾಣಾ ದಗ್ಗುಬಾಟಿಗೆ ಬಂದಿದ್ದವು. ಆದರೆ ರಾಣಾ ಯಾವ ಸಿನಿಮಾನಲ್ಲಿಯೂ ನಟಿಸಲಿಲ್ಲ, ಬದಲಿಗೆ ತೆಗೆದುಕೊಂಡಿದ್ದ ಅಡ್ವಾನ್ಸ್ ಹಣವನ್ನು ಸಹ ವಾಪಸ್ ಮಾಡಿಬಿಟ್ಟರು. ಅದೇಕೆ ಎಂಬುದನ್ನು ಇದೀಗ ಅವರು ಬಾಯ್ಬಿಟ್ಟಿದ್ದಾರೆ.

ರಾಣಾ ದಗ್​ಗುಬಾಟಿ ಅವರಿಗೆ ‘ಬಾಹುಬಲಿ’ ಸಿನಿಮಾದ ಬಳಿಕ ಗಂಭೀರ ಆರೋಗ್ಯ ಸಮಸ್ಯೆ ಎದುರಾಗಿತ್ತು. ಈ ಬಗ್ಗೆ ಅವರು ನಟಿ ರೆಹಾ ಚಕ್ರವರ್ತಿ ಅವರ ಪಾಡ್​​ಕಾಸ್ಟ್​​ನಲ್ಲಿ ಮಾತನಾಡಿದ್ದಾರೆ. ಕಿಡ್ನಿಗೆ ಸಂಬಂಧಿಸಿದ ಸಮಸ್ಯೆ ಹಾಗೂ ಹೃದಯಕ್ಕೆ ಸಂಬಂಧಿಸಿದ ಅನಾರೋಗ್ಯಗಳಿಂದ ಅವರು ಬಳಲಿದರು. ಶಸ್ತ್ರಚಿಕಿತ್ಸೆಗಾಗಿ ಅಮೆರಿಕಕ್ಕೆ ಹೋಗಿದ್ದ ರಾಣಾ ದಗ್ಗುಬಾಟಿ, ಶಸ್ತ್ರಚಿಕಿತ್ಸೆ ಬಳಿಕ ಸಂಪೂರ್ಣ ಸಣ್ಣಗಾಗಿ ಬಿಟ್ಟಿದ್ದರು. ಅವರೇ ಹೇಳಿರುವಂತೆ ಹೋಗುವಾಗ ಹೇಗಿದ್ದರೊ ಅದರ ಅರ್ಧದಷ್ಟಾಗಿಬಿಟ್ಟಿದ್ದರಂತೆ.

‘ಬಾಹುಬಲಿ’ ಬಳಿಕ ಕೆಲವಾರು ಸಿನಿಮಾಗಳನ್ನು ರಾಣಾ ದಗ್ಗುಬಾಟಿ ಒಪ್ಪಿಕೊಂಡಿದ್ದರಂತೆ. ಬಾಕ್ಸರ್ ಒಬ್ಬನ ಬಗೆಗಿನ ಸಿನಿಮಾ ಇನ್ನೂ ಕೆಲ ಸಿನಿಮಾಗಳನ್ನು ಒಪ್ಪಿಕೊಂಡಿದ್ದರಂತೆ. ಆದರೆ ನಾನು ಆ ಹಾಟ್ ಬಾಡಿ ಹೊಂದಿರುವ ನಟ ಅಲ್ಲ ಎಂದು ಎಲ್ಲ ಅಡ್ವಾನ್ಸ್ ಅನ್ನು ಮರಳಿಸಿಬಿಟ್ಟರಂತೆ. ಒಮ್ಮೆ ಅವರು ಅಮೆರಿಕದಲ್ಲಿದ್ದಾಗ ಅವರ ಗೆಳೆಯ ನಟ ವರುಣ್ ತೇಜ್ ಬಂದಿದ್ದರಂತೆ. ಅವರನ್ನು ನೋಡಿ ರಾಣಾ ದಗ್ಗುಬಾಟಿಗೆ ಅವರ ಹಳೆಯ ದಿನಗಳು ನೆನಪಾದವಂತೆ.

ಇದನ್ನೂ ಓದಿ:ರಿಷಬ್ ಶೆಟ್ಟಿ ಜೊತೆ ನಟಿಸಲಿರುವ ‘ಬಾಹುಬಲಿ’ಯ ‘ಸಹೋದರ’

ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆ, ವಿಶ್ರಾಂತಿಗಳನ್ನು ಮುಗಿಸಿ ಮರಳುವಾಗ ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿಯೊಬ್ಬ ಬಲ್ಲಾಳದೇವ ಎಂದ ಕರೆದಾಗ ರಾಣಾಗೆ ಬಹಳ ಮುಜುಗರವಾಯ್ತಂತೆ. ಏಕೆಂದರೆ ಅವರು ಸಂಪೂರ್ಣವಾಗಿ ಇಳಿದು ಹೋಗಿದ್ದರು. ಪಾಡ್​​ಕಾಸ್ಟ್​​ನಲ್ಲಿ ರಾಣಾ ಹೇಳಿಕೊಂಡಿರುವಂತೆ ಈಗ ಅವರ ಮುಖ್ಯ ಗೋಲ್ ಇರುವುದು ಬದುಕುವುದಕ್ಕೆ ಮಾತ್ರವೇ ಅಂತೆ. ಯಾವ ಬಾಡಿ ಬಿಲ್ಡಿಂಗ್ ಇನ್ನಿತರೆಗಳಲ್ಲಿ ತೊಡಗಿಕೊಳ್ಳುವುದಿಲ್ಲ ಎಂದು ರಾಣಾ ಹೇಳಿದ್ದಾರೆ.

ರಾಣಾ ಈಗಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರಾದರೂ ಮಾಸ್ ರೀತಿಯ ಪಾತ್ರಗಳು, ಬಾಡಿ ಬಿಲ್ಡಿಂಗ್ ಅವಶ್ಯಕತೆ ಇರುವ ಪಾತ್ರಗಳಲ್ಲಿ ನಟಿಸುತ್ತಿಲ್ಲ. ಸಿನಿಮಾ ನಟನೆಗಿಂತಲೂ ಸಿನಿಮಾ ನಿರ್ಮಾಣದಲ್ಲಿ ದಗ್ಗುಬಾಟಿ ತಮ್ಮನ್ನು ಹೆಚ್ಚು ತೊಡಗಿಸಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅಪಾರ್ಟ್ಮೆಂಟ್​ನಲ್ಲಿ ಪತ್ನಿನ ಹತ್ಯೆಗೈದ ಪತಿ: ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಜಂಟಿ ಪೊಲೀಸ್ ಆಯುಕ್ತ – Kannada News | Ramesh banoth Talks about Nageshwar Kills His Wife In Bengaluru

ಬೆಂಗಳೂರು, (ಫೆಬ್ರವರಿ 18): ನಿವೃತ್ತ ಇಸ್ರೋ (ISRO) ಉದ್ಯೋಗಿಯೊಬ್ಬರು ಪತ್ನಿಯನ್ನೇ(Wife) ಕೊಲೆ ಮಾಡಿದ ಘಟನೆ ಬೆಂಗಳೂರು (Bengaluru) ಹೊರವಲಯದ ಅವಲಹಳ್ಳಿ ಬಳಿಯ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಾಗೇಶ್ವರ್‌ ರಾವ್‌ (75), ನಾನು ಸತ್ತರೆ ನಿನ್ನ ನೋಡಿಕೊಳ್ಳುವವರು ಯಾರು ಎಂದು ಪತ್ನಿ ಸಂಧ್ಯಾಳನ್ನು ಟವಲ್‌ನಿಂದ ಕತ್ತು ಬಿಗಿದು ಕೊಲೆ ಮಾಡಿದ್ದಾನೆ. ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಾಗೇಶ್ವರ್‌ ರಾವ್‌ ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನ ಮಾಡಿದ್ದರು. ತಾನು ಆತ್ಮಹತ್ಯೆ ಮಾಡಿದರೆ ಪತ್ನಿ ಒಂಟಿಯಾಗುತ್ತಾಳೆ. ಆಕೆಯನ್ನು ನೋಡಿಕೊಳ್ಳಲು ಯಾರು ಇರುವುದಿಲ್ಲ ಎಂದು ತೀರ್ಮಾನಿಸಿ ಪತ್ನಿಯನ್ನು ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಇನ್ನು ಈ ಬಗ್ಗೆ ಪೂರ್ವ ವಲಯ ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಪ್ರತಿಕ್ರಿಯಿಸಿದ್ದು, ಸಂಧ್ಯಾಶ್ರೀ ಅವರ ಮನೆಯ ಅಡುಗೆ ಮನೆಯಲ್ಲಿ ಇದ್ದಾಗ ಕೃತ್ಯ ನಡೆಸಲಾಗಿದೆ. ಇಂದು (ಫೆಬ್ರವರಿ 18) ಬೆಳಗ್ಗೆ ಹತ್ತು ಘಂಟೆ ಸಮಯದಲ್ಲಿ ಈ ಘಟನೆ ನಡೆದಿದೆ.ನಾಗೇಶ್ವರ ರಾವ್ ಅವರು ಟವಲ್ ಬಳಸಿ ಹಿಂದಿನಿಂದ ಹೋಗಿ ಕೊಲೆ ಮಾಡಿದ್ದಾರೆ. ಕೊಲೆ ಬಳಿಕ ಅದೇ ಅಪಾರ್ಟ್ಮೆಂಟ್ ನಲ್ಲಿ ವಾಸ ಮಾಡುವ ಒರ್ವರಿಗೆ ಕರೆ ಮಾಡಿ ಪತ್ನಿಯನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದಾರೆ. ಬಳಿಕ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ನಂತರ ಅಪಾರ್ಟ್ಮೆಂಟ್ ನಲ್ಲಿ ಇರುವ ವೈದ್ಯರೂ ಪರಿಶೀಲನೆ ನಡೆಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಮಾಹಿತಿ ಅನ್ವಯ ಕೇಸ್ ದಾಖಲು ಮಾಡಿ ನಾಗಲೇಶ್ವರ ರಾವ್ ಅವರನ್ನ ಬಂಧನ ಮಾಡಲಾಗಿದೆ. ಆರೋಪಿ ವಿಚಾರಣೆ ವೇಳೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಆರೋಪಿತ ಸಹ ಮಾನಸಿಕ ಅಸ್ವಸ್ಥತೆ ಇರುವಂತೆ ಕಂಡು ಬರುತ್ತಿದೆ. ಸದ್ಯ ತನಿಖೆ ಮುಂದುವರೆಸಲಾಗಿದ್ದು, ಕೃತ್ಯಕ್ಕೆ ನಿಖರವಾದ ಕಾರಣ ಪತ್ತೆಯಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ನಾನು ಸತ್ತರೆ ನಿನ್ನ ಯಾರು ನೋಡಿಕೊಳ್ಳುತ್ತಾರೆ: ಪತ್ನಿಯನ್ನ ಕೊಂದ ಇಸ್ರೋ ನಿವೃತ್ತ ನೌಕರ

Source link