ಸಾವಿನ ಕದ ತಟ್ಟಿ ಮರಳಿ ಬಂದ ರಾಣಾ ದಗ್ಗುಬಾಟಿ: ಆಗಿದ್ದೇನು? – Kannada News | Rana Daggubati said he returned movie advances due to his health issue
‘ಬಾಹುಬಲಿ’ (Bahubali) ಸಿನಿಮಾದ ವಿಲನ್ ಬಲ್ಲಾಳದೇವ ಯಾರಿಗೆ ನೆನಪಿಲ್ಲ. ಪಾತ್ರದಲ್ಲಿ ನಟಿಸಿದ್ದ ರಾಣಾ ದಗ್ಗುಬಾಟಿ, ಆ ಪಾತ್ರಕ್ಕಾಗಿ ಭಾರಿ ರಿಸ್ಕ್ ತೆಗೆದುಕೊಂಡಿದ್ದರು. ಪ್ರಭಾಸ್ಗಿಂತಲೂ ಹುರಿಗಟ್ಟಿದ ದೇಹವನ್ನು ‘ಬಾಹುಬಲಿ’ ಸಿನಿಮಾಕ್ಕಾಗಿ ತಯಾರು ಮಾಡಿಕೊಂಡಿದ್ದರು ರಾಣಾ ದಗ್ಗುಬಾಟಿ. ‘ಬಾಹುಬಲಿ’ ಬಳಿಕ ಹಲವು ಮಾಸ್ ಸಿನಿಮಾ ಆಫರ್ಗಳು ರಾಣಾ ದಗ್ಗುಬಾಟಿಗೆ ಬಂದಿದ್ದವು. ಆದರೆ ರಾಣಾ ಯಾವ ಸಿನಿಮಾನಲ್ಲಿಯೂ ನಟಿಸಲಿಲ್ಲ, ಬದಲಿಗೆ ತೆಗೆದುಕೊಂಡಿದ್ದ ಅಡ್ವಾನ್ಸ್ ಹಣವನ್ನು ಸಹ ವಾಪಸ್ ಮಾಡಿಬಿಟ್ಟರು. ಅದೇಕೆ ಎಂಬುದನ್ನು ಇದೀಗ ಅವರು ಬಾಯ್ಬಿಟ್ಟಿದ್ದಾರೆ. ರಾಣಾ ದಗ್ಗುಬಾಟಿ ಅವರಿಗೆ ‘ಬಾಹುಬಲಿ’…