ಆಟೋ ಸೀಟ್ ವಿಚಾರಕ್ಕೆ ಮಾರಾಮಾರಿ: ಕುಸಿದು ಬಿದ್ದಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವು – Kannada News | Padarayanapura: Auto Seat Fight Turns Fatal, Man Dies from Assault Injuries
ಬೆಂಗಳೂರು, ಮೇ 04: ಆಟೋ ಸೀಟ್ ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ಹೋಗಿ ತೀವ್ರ ಹಲ್ಲೆಗೊಳಗಾಗಿದ್ದ ಚಾಲಕ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಬೆಂಗಳೂರಿನ (Bengaluru) ಪಾದರಾಯನಪುರದಲ್ಲಿ ನಡೆದಿದೆ. ಮೃತನನ್ನು ಪರಿಚಿತನಿಂದ ಹಲ್ಲೆಗೊಳಗಾಗಿದ್ದ ಮುಬಾರಕ್ (26) ಎಂದು ಗುರುತಿಸಲಾಗಿದೆ. ಆರೋಪಿಯನ್ನು ತಬ್ರೇಜ್ (46) ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ, ಮೇ 1ರಂದು ಮುಬಾರಕ್ ತನ್ನ ಆಟೋ ಸೀಟ್ ತೆಗೆದುಕೊಂಡಿದ್ದಾನೆ ಎಂದು ತಬ್ರೇಜ್ ಮೇಲೆ ಆರೋಪಿಸಿದ್ದ. ಇದೇ ವಿಚಾರವಾಗಿ ಬೆಳಗ್ಗೆ 10ಗಂಟೆ ಸುಮಾರಿಗೆ ಇಬ್ಬರ ನಡುವೆ…