ಸ್ವಿಜರ್ಲೆಂಡ್ನಲ್ಲಿ ಭಾರೀ ಹಿಮಪಾತ; 80 ಪ್ರಯಾಣಿಕರಿದ್ದ ರೈಲು ಹಳಿ ತಪ್ಪಿ ಹಲವರಿಗೆ ಗಾಯ – Kannada News | Several injured after avalanche derails train in Swiss Alps Carrying 80 Passengers
ನವದೆಹಲಿ, ಫೆಬ್ರವರಿ 16: ಸ್ವಿಸ್ ಆಲ್ಪ್ಸ್‌ನಲ್ಲಿ ಹಿಮಪಾತ (Avalanche) ಅಪ್ಪಳಿಸಿದ ನಂತರ ದಕ್ಷಿಣ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಇಂದು ಮುಂಜಾನೆ ರೈಲು ಹಳಿತಪ್ಪಿತು. ಈ ರೈಲಿನಲ್ಲಿ 80 ಜನರು ಪ್ರಯಾಣಿಸುತ್ತಿದ್ದರು. ಈ ಘಟನೆಯಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ. “ಹಿಮಪಾತದಿಂದಾಗಿ ಗೋಪೆನ್‌ಸ್ಟೈನ್ ಮತ್ತು ಬ್ರಿಗ್ ನಡುವೆ ರೈಲು ಸಂಚಾರಕ್ಕೆ ಅಡಚಣೆಯಾಗಿದೆ” ಎಂದು ಫೆಡರಲ್ ರೈಲು ಆಪರೇಟರ್ CFF ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಸ್ಥಳೀಯ ಸುದ್ದಿಗಳ ಪ್ರಕಾರ, ರಕ್ಷಣಾ ಕಾರ್ಯಾಚರಣೆ ಮುಂದುವರಿದಿರುವುದರಿಂದ ಸ್ಥಳೀಯ ಸಮಯ ಸಂಜೆ…