ಪಶ್ಚಿಮ ಬಂಗಾಳದ ಈ ಒಂದು ಕ್ಷೇತ್ರಕ್ಕೆ ಮಾತ್ರ ಫಲಿತಾಂಶ ನಾಳೆ ಇಲ್ಲ; ಮೇ 21ಕ್ಕೆ ಮರುಮತದಾನ, ಮೇ 24ಕ್ಕೆ ಮತ ಎಣಿಕೆ – Kannada News | West Bengal Election Results: Falta Constituency Vote Count Delayed Due to Re polling
ಕೋಲ್ಕತಾ, ಮೇ 3: ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಮ್ ಮತ್ತು ಪುದುಚೆರಿಯ ವಿಧಾನಸಭಾ ಚುನಾವಣೆಗಳ ಫಲಿತಾಂಶ ನಾಳೆ ಸೋಮವಾರ (ಮೇ 4) ಪ್ರಕಟವಾಗಲಿದೆ. ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಸಖತ್ ಜಿದ್ದಾಜಿದ್ದಿ ನಡೆಯಿತು. ಹಲವೆಡೆ ಹಿಂಸಾಚಾರಗಳಾದವು. ಹಲವು ಬೂತ್ಗಳಲ್ಲಿ ಮರುಮತದಾನ ಕೂಡ ಮಾಡಲಾಗಿದೆ. ಆದರೂ ಕೂಡ ಮೇ 4ರಂದು ಪಶ್ಚಿಮ ಬಂಗಾಳದ ಎಲ್ಲಾ ಕ್ಷೇತ್ರಗಳಿಗೂ ಫಲಿತಾಂಶ ಪ್ರಕಟವಾಗುತ್ತಿಲ್ಲ. ಒಂದು ಕ್ಷೇತ್ರದ ಫಲಿತಾಂಶ ಬಾಕಿ ಉಳಿಯಲಿದೆ. ಸೌತ್ 24 ಪರಗಣ ಜಿಲ್ಲೆಯಲ್ಲಿರುವ ಫಾಲ್ಟಾ ವಿಧಾನಸಭಾ ಕ್ಷೇತ್ರದ ಎಲ್ಲಾ…