IPL 2026: 42 ಪಂದ್ಯಗಳ ನಂತರ ಸನ್‌ರೈಸರ್ಸ್ ತಂಡಕ್ಕೆ ಅಂಬ್ರಿಶ್ ಆಗಮನ
ಐಪಿಎಲ್ 2026 ರಲ್ಲಿ ಸೋಲು ಗೆಲುವಿನ ಸಮಾನ ರುಚಿ ನೋಡಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ, ಖಾಯಂ ನಾಯಕ ಪ್ಯಾಟ್ ಕಮ್ಮಿನ್ಸ್ ಬಂದ ಬಳಿಕ ಸತತ ಎರಡು ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದ ಅಲೆಯಲ್ಲಿ ಬೀಗುತ್ತಿದೆ. ಈ ನಡುವೆ ಈ ತಂಡಕ್ಕೆ ಹೊಸ ಆಟಗಾರನ ಆಗಮನವಾಗಿದೆ. ಆ ಆಟಗಾರನ ಹೆಸರು ಆರ್‌ಎಸ್ ಅಂಬ್ರಿಶ್. ವಾಸ್ತವವಾಗಿ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ, ವೇಗಿ ಶಿವಂ ಮಾವಿ ಬದಲಿಗೆ ಆರ್‌ಎಸ್ ಅಂಬ್ರಿಶ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಅಂಬ್ರಿಶ್ ಒಬ್ಬ ಆಲ್‌ರೌಂಡರ್ ಆಗಿದ್ದು, ಬಲಗೈ ಮಧ್ಯಮ…