All posts by nagaraj11081993

RR vs DC: ಡೆಲ್ಲಿ ವಿರುದ್ಧ ನಡೆಯದ ರಾಜಸ್ಥಾನ್ ಆರಂಭಿಕರ ಅಬ್ಬರ – Kannada News | IPL 2026: Yashasvi Jaiswal, Vaibhav Sooryavanshi Fail as RR Openers Struggle vs DC in Match 43

ಐಪಿಎಲ್ 2026 ರ 43 ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪರಸ್ಪರ ಮುಖಾಮುಖಿಯಾಗಿದ್ದವು. ಇದು ರಾಜಸ್ಥಾನಕ್ಕೆ ಹತ್ತನೇ ಪಂದ್ಯ ಮತ್ತು ದೆಹಲಿಗೆ ಒಂಬತ್ತನೇ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ಮೊದಲು ಬ್ಯಾಟಿಂಗ್‌ ಮಾಡಲು ನಿರ್ಧರಿಸಿತು. ಅದರಂತೆ ರಾಜಸ್ಥಾನ್ ಪರ ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಹಾಗೂ ವೈಭವ್ ಸೂರ್ಯವಂಶಿ ಮೇಲೆ ಎಂದಿನಂತೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಈ ಪಂದ್ಯದಲ್ಲಿ ಪರಿಣಾಮಕಾರಿ ಇನ್ನಿಂಗ್ಸ್ ಆಡುವಲ್ಲಿ ಇವರಿಬ್ಬರು ವಿಫಲರಾದರು.

ಈ ಆವೃತ್ತಿಯಲ್ಲಿ ಯಶಸ್ವಿ ಜೈಸ್ವಾಲ್ ಹಾಗೂ ವೈಭವ್ ಸೂರ್ಯವಂಶಿ ಜೋಡಿ ರಾಜಸ್ಥಾನ್ ತಂಡಕ್ಕೆ ಭಾಗಶಃ ಪಂದ್ಯಗಳಲ್ಲಿ ಉತ್ತಮ ಆರಂಭ ಒದಗಿಸಿಕೊಟ್ಟಿದೆ. ಇದರ ಪರಿಣಾಮವಾಗಿ ರಾಜಸ್ಥಾನ್ ಕೂಡ ಈ ಎಲ್ಲಾ ಭಾಗಶಃ ಪಂದ್ಯಗಳನ್ನು ಗೆದ್ದುಕೊಂಡಿದೆ. ಅಂದರೆ ಇವರಿಬ್ಬರು ಮಿಂಚಿದರೆ ರಾಜಸ್ಥಾನ್ ತಂಡಕ್ಕೆ ಗೆಲುವು ಖಚಿತವಂತ್ತಾಗಿದೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಇವರಿಬ್ಬರಿಗೆ ಒಂದಂಕಿ ದಾಟಿ ಹೋಗಲು ಸಾಧ್ಯವಾಗಲಿಲ್ಲ.

ರಾಜಸ್ಥಾನ್ ಪರ ಇನ್ನಿಂಗ್ಸ್ ಆರಂಭಿಸಿದ ಜೈಸ್ವಾಲ್, ಅನುಭವಿ ಮಿಚೆಲ್ ಸ್ಟಾರ್ಕ್​ ಬೌಲ್ ಮಾಡಿದ ಮೊದಲ ಓವರ್​ನ ಮೊದಲ ಎಸೆತವನ್ನೇ ಭರ್ಜರಿ ಸಿಕ್ಸರ್ ಬಾರಿಸಿದರು. ಆ ನಂತರದ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ಮೂರನೇ ಎಸೆತವನ್ನು ಸ್ಟಾರ್ಕ್​ ಫುಲ್ ಟಾಸ್ ಬೌಲ್ ಮಾಡಿದರು. ಈ ಎಸೆತದಲ್ಲಿ ಬಿಗ್ ಶಾಟ್ ಆಡಲು ಯತ್ನಿಸಿದ ಜೈಸ್ವಾಲ್, ಸ್ಟಾರ್ಕ್​ಗೆ ಕ್ಯಾಚ್ ನೀಡಿ ಔಟಾದರು.

ಇನ್ನಿಂಗ್ಸ್​ನ ಎರಡನೇ ಓವರ್​ನಲ್ಲಿ ಸ್ಟ್ರೈಕ್​ಗೆ ಬಂದ ವೈಭವ್ ಸೂರ್ಯವಂಶಿ, ಕೈಲ್ ಜೇಮಿಸನ್ ಬೌಲ್ ಮಾಡಿದ ಎರಡನೇ ಎಸೆತವನ್ನು ಸೀದಾ ಬೌಂಡರಿಗಟ್ಟಿದರು. ಆದರೆ ನಂತರದ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆದರು. ಅಂದರೆ ಇವರಿಬ್ಬರ ವಿಕೆಟ್​ ಕೇವಲ 12 ರನ್​ಗಳಿಗೆ ಪತನವಾಯಿತು. ಜೈಸ್ವಾಲ್ 6 ರನ್ ಬಾರಿಸಿ ಔಟಾದರೆ, ವೈಭವ್ ಇನ್ನಿಂಗ್ಸ್ ಕೇವಲ 4 ರನ್​ಗಳಿಗೆ ಅಂತ್ಯವಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನ ಆರ್‌ವಿ ರಸ್ತೆ-ಸಿಲ್ಕ್ ಬೋರ್ಡ್ ನಡುವಿನ ಡಬಲ್‌ ಡೆಕ್ಕರ್‌ ಫ್ಲೈಓವರ್‌ ಹೇಗಿದೆ ನೋಡಿ – Kannada News | DCM dk shivakumar inaugurates double decker flyover between rv road and central silk board

ಬೆಂಗಳೂರು, (ಮೇ 01): ಬೆಂಗಳೂರಿನಲ್ಲಿಂದು ಆರ್‌.ವಿ. ರಸ್ತೆ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ನಡುವಿನ ಡಬಲ್‌ ಡೆಕ್ಕರ್‌ ಫ್ಲೈಓವರ್‌ನಲ್ಲಿ (Bengaluru’s double-decker flyover) ವಾಹನ ಸಂಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಶುಕ್ರವಾರ ಚಾಲನೆ ನೀಡಿದರು.

ಸಿಲ್ಕ್‌ ಬೋರ್ಡ್‌ ಜಂಕ್ಷನ್‌ನ ಟ್ರಾಫಿಕ್‌ ಸಮಸ್ಯೆಗೆ ಕಡಿವಾಣ ಹಾಕಲು ಹಾಗೂ ಬೆಂಗಳೂರು ದಕ್ಷಿಣ ಭಾಗದ ಪ್ರಮುಖ ಪ್ರದೇಶಗಳಿಗೆ ಓಡಾಡಲು ಈ ಫ್ಲೈಓವರ್‌ ಅನುಕೂಲವಾಗಲಿದೆ. ಇನ್ನು ಬನಶಂಕರಿ ಜಂಕ್ಷನ್‌ನಲ್ಲಿ ಪಾದಚಾರಿಗಳ ಸೈವಾಕ್ ನಿರ್ಮಾಣಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಶಂಕುಸ್ಥಾಪನೆ ನೆರವೇರಿಸಿದರು. ಪಾದಚಾರಿಗಳಿಗೆ ಹಾಗೂ ವಾಹನ ಸಂಚಾರಕ್ಕೆ ಅನುಕೂಲವಾಗಲಿ ಎಂದು ಈ ಸ್ಕೈವಾಕ್‌ ನಿರ್ಮಿಸಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಇರಾನ್​ ಯುದ್ಧಭೂಮಿಯಲ್ಲಿ ಟಿವಿ9; ಟೆಹ್ರಾನ್​ನಿಂದ ನೈಜ ಚಿತ್ರಣ ನೀಡಿದ ವರದಿಗಾರ್ತಿ – Kannada News | TV9 becomes first Indian channel to reach Iran for Ground Reporting from Tehran

ಟೆಹ್ರಾನ್, ಮೇ 1: ಇರಾನ್​ನಲ್ಲಿ ಇನ್ನೂ ಯುದ್ಧದ ಭೀತಿ ಕಡಿಮೆಯಾಗಿಲ್ಲ. ಇರಾನ್​ನಲ್ಲಿನ (Iran War) ಪರಿಸ್ಥಿತಿ ಈಗ ಹೇಗಿದೆ ಎಂಬುದನ್ನು ತಿಳಿಯಲು ಟಿವಿ9 ತಂಡ ಟೆಹ್ರಾನ್​ಗೆ ತೆರಳಿದೆ. ಈ ಮೂಲಕ ಇರಾನ್​ನಿಂದ ನೇರ ವರದಿ ಮಾಡುತ್ತಿರುವ ಮೊದಲ ಭಾರತೀಯ ಚಾನೆಲ್ ಎಂಬ ಹೆಗ್ಗಳಿಕೆಗೆ ಟಿವಿ9 ಪಾತ್ರವಾಗಿದೆ. ಟಿವಿ9 ವರದಿಗಾರ್ತಿ ಸುಮೈರಾ ಖಾನ್ ಇರಾಕ್ ಮೂಲಕ ಟೆಹ್ರಾನ್‌ಗೆ ಆಗಮಿಸಿ ಇರಾನ್​ನಿಂದಲೇ ವರದಿ ಮಾಡುತ್ತಿದ್ದಾರೆ. ರಸ್ತೆ ಮತ್ತು ಕಾಲ್ನಡಿಗೆಯ ಮೂಲಕ ಪ್ರಯಾಣಿಸಿದ ಅವರು ಫ್ರೀಡಂ ಸ್ಕ್ವೇರ್ ಬಳಿಯಿಂದ ಅಲ್ಲಿನ ಪರಿಸ್ಥಿತಿಯ ಬಗ್ಗೆ ವರದಿ ಮಾಡಿದ್ದಾರೆ.

ಟಿವಿ9 ಭಾರತ್‌ವರ್ಷ್ ವರದಿಗಾರ್ತಿ ಸುಮೈರಾ ಖಾನ್ ಟೆಹ್ರಾನ್‌ನಿಂದ ವರದಿ ಮಾಡುತ್ತಿದ್ದಾರೆ. ಸುಮೈರಾ ಫ್ರೀಡಂ ಸ್ಕ್ವೇರ್‌ನಿಂದ ಟೆಹ್ರಾನ್‌ನಲ್ಲಿನ ವಿನಾಶ ಮತ್ತು ನೆಲದ ಪರಿಸ್ಥಿತಿಗಳ ಚಿತ್ರಣವನ್ನು ಹಂಚಿಕೊಂಡಿದ್ದಾರೆ. ಟೆಹ್ರಾನ್‌ಗೆ ಅವರ ಪ್ರಯಾಣ ಸುಲಭವಾಗಿರಲಿಲ್ಲ. ಅವರು ಮೊದಲು ವಿಮಾನದ ಮೂಲಕ ಇರಾಕ್‌ಗೆ ಪ್ರಯಾಣ ಬೆಳೆಸಿದರು. ನಂತರ ಬಾಗ್ದಾದ್‌ನಿಂದ ಸುದೀರ್ಘವಾದ ಕಾರು ಪ್ರಯಾಣ ಮಾಡಿದರು. ನಂತರ ಸ್ವಲ್ಪ ದೂರ ನಡೆಯಬೇಕಾಯಿತು. ಅನೇಕ ತೊಂದರೆಗಳು ಮತ್ತು ಸವಾಲುಗಳ ಹೊರತಾಗಿಯೂ, ಸುಮೈರಾ ಖಾನ್ ಟೆಹ್ರಾನ್ ತಲುಪಿದರು.

ಸುಮೈರಾ ಅವರು ಫ್ರೀಡಂ ಸ್ಕ್ವೇರ್ ಹಲವಾರು ದಾಳಿಗಳನ್ನು ಕಂಡಿದ್ದರೂ ತಕ್ಷಣ ಅದನ್ನು ಇರಾನ್ ಮರು ನಿರ್ಮಿಸಿದೆ. ದಾಳಿಗಳು ಹೋಟೆಲ್‌ಗಳು ಮತ್ತು ಕಟ್ಟಡಗಳ ಗಾಜಿನ ಕಿಟಕಿಗಳನ್ನು ಸಹ ಹಾನಿಗೊಳಿಸಿವೆ. ಈಗಾಗಲೇ ಅವುಗಳನ್ನು ದುರಸ್ತಿ ಮಾಡಲಾಗಿದೆ. ಟೆಹ್ರಾನ್‌ನಲ್ಲಿ ಸಾಮಾನ್ಯ ಜೀವನ ಎಂದಿನಂತೆ ಮುಂದುವರೆದಿದೆ ಎಂದು ಸುಮೈರಾ ವಿವರಿಸಿದರು. ಸುಮೈರಾ ಇಂಕಿಲಾಬ್ ಬೀದಿಯಲ್ಲಿರುವ ಅಯತೊಲ್ಲಾ ಅಲಿ ಖಮೇನಿ ಅವರ ಫೋಟೋವನ್ನು ಕೂಡ ತೋರಿಸಿದರು. ಈ ಫೋಟೋ ಇರಾನಿನ ಜನರ ಚೈತನ್ಯವನ್ನು ಪ್ರತಿನಿಧಿಸುವುದರಿಂದ ಬಹಳ ಮುಖ್ಯವಾಗಿದೆ. ಅಮೆರಿಕದೊಂದಿಗಿನ ಯುದ್ಧದ ನಡುವೆ ಇರಾನ್ ಬಲವಾಗಿ ನಿಂತಿದೆ ಎಂದು ಈ ಚಿತ್ರ ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಅವನ ಮರ್ಯಾದೆ ತೆಗೆಯದೇ ಬಿಡಲ್ಲ: ನಿರ್ಮಾಪಕನ ವಿರುದ್ಧ ಕಿಡಿಕಾರಿದ ಬಿಗ್ ಬಾಸ್ ಹಂಸಾ – Kannada News | Bigg Boss Kannada fame Hamsa talks about Vasudeva Kutumba Serial producer payment due

‘ವಸುದೇವ ಕುಟುಂಬ’ (Vasudeva Kutumba) ಧಾರಾವಾಹಿ ತಂಡದ ಕಿರಿಕ್ ಬೀದಿಗೆ ಬಂದಿದೆ. ನಿರ್ಮಾಪಕ ಅನಿಲ್ ವಿರುದ್ಧ ಕಲಾವಿದರು ಮತ್ತು ತಂತ್ರಜ್ಞರು ತಿರುಗಿ ಬಿದ್ದಿದ್ದಾರೆ. ತಿಂಗಳುಗಳಿಂದ ಕೆಲಸ ಮಾಡಿದ್ದಕ್ಕೆ ಸಂಬಳ ನೀಡಿಲ್ಲ ಎಂದು ಆರೋಪಿಸಲಾಗಿದೆ. ‘ಬಿಗ್ ಬಾಸ್ ಕನ್ನಡ’ ಖ್ಯಾತಿಯ ನಟಿ ಹಂಸಾ ಅವರು ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ್ದಾರೆ. ‘ನಾನು ಆ ಧಾರಾವಾಹಿಯಿಂದ ಹೊರಗೆ ಬಂದೆ. ನಮಗೆ ಗೌರವ ಇಲ್ಲದ ಜಾಗದಲ್ಲಿ ನಾನು ಕೆಲಸ ಮಾಡಲ್ಲ. ಸಂಬಳ ಕೊಟ್ಟಿಲ್ಲ ಎಂಬ ಕಾರಣಕ್ಕೆ ನಾವು ಬಿಟ್ಟು ಬಂದಿದ್ದೇವೆ. ಅನಿಲ್ ಟಿಆರ್​ಪಿ ಫ್ರಾಡ್ ಮಾಡಿದ್ದಾನೆ. ಇಂಥ ಒಬ್ಬ ನಿರ್ಮಾಪಕನಿಂದ ಇನ್ನುಳಿದವರಿಗೂ ಕೆಟ್ಟ ಹೆಸರು. ನನಗೆ 3 ಲಕ್ಷ ರೂಪಾಯಿ ಬರಬೇಕಿದೆ. ನನಗೆ ಆ ಹಣ ಬರದಿದ್ದರೂ ಪರವಾಗಿಲ್ಲ. ಅವನ ಮಾನ ಮರ್ಯಾದೆ ತೆಗೆಯದೇ ಬಿಡಲ್ಲ. ಇನ್ನೊಮ್ಮೆ ಅವನು ಯಾರಿಗೂ ಮೋಸ ಮಾಡಬಾರದು. 10 ವರ್ಷ ಆದರೂ ಪರವಾಗಿಲ್ಲ. ಕಾನೂನಿನ ಮೂಲಕ ಹೋರಾಟ ಮಾಡುತ್ತೇವೆ’ ಎಂದು ಹಂಸಾ (Hamsa) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IPL 2026: ಆರ್​​ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಲಕ್ನೋ ತಂಡಕ್ಕೆ ಡೇಂಜರಸ್ ಬ್ಯಾಟರ್​​ ಆಗಮನ – Kannada News | IPL 2026: Josh Inglis Joins LSG! Can He Revive Lucknow’s Poor Performance?

ವಾಸ್ತವವಾಗಿ ಆಸ್ಟ್ರೇಲಿಯಾದ ಸ್ಫೋಟಕ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೋಶ್ ಇಂಗ್ಲಿಸ್ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ವಾಸ್ತವವಾಗಿ ಇಂಗ್ಲಿಸ್ ಐಪಿಎಲ್ ಹರಾಜಿಗೂ ಮುನ್ನ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಹೀಗಾಗಿ ಅವರು ಐಪಿಎಲ್​ಗೆ ತಮ್ಮ ಲಭ್ಯತೆಯ ಬಗ್ಗೆ ಮೊದಲೇ ತಿಳಿಸಿದ್ದರು. ಅದರಂತೆ ಇಂಗ್ಲಿಸ್ ಈಗ ಲಕ್ನೋ ತಂಡವನ್ನು ಸೇರಿಕೊಂಡಿದ್ದು, ಮೇ 4 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.

Source link

ಹಿಡಕಲ್ ಜಲಾಶಯದಲ್ಲಿ ಮುಳುಗಿ ಹೋಗಿದ್ದ ದೇಗುಲ ಗೋಚರ, ಹೇಗಿದೆ ನೋಡಿ – Kannada News | Oldest Vithal temple appearing In belagavi Hidkal Dam after Water Empty for Summer

ಬೆಳಗಾವಿ, (ಮೇ 01): ಒಂದೆಡೆ ಬೇಸಿಗೆ ಬಿಸಿಲು ಜನರ ನೆತ್ತಿ ಸುಡುತ್ತಿದ್ದರೆ, ಮತ್ತೊಂದೆಡೆ ಬೆಳಗಾವಿ ಜಿಲ್ಲೆಯಲ್ಲಿ ಭೀಕರ ಬರದ ಸ್ಥಿತಿ ಎದುರಾಗಿದೆ. ಹೌದು…ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹುಣ್ಣೂರ ಬಳಿ ಇರುವ 51ಟಿಎಂಸಿ ಸಾಮರ್ಥ್ಯದ ಹಿಡಕಲ್ ಜಲಾಶಯ (Hidkal Dam) ಬಹುತೇಕ ಖಾಲಿಯಾಗಿದೆ. ಇದರ ಪರಿಣಾಮ ಡ್ಯಾಂ ಹಿನ್ನೀರಿನಲ್ಲಿ ಮುಳುಗಿದ್ದ ದೇವಸ್ಥಾನ ಗೋಚರವಾಗಿದೆ. ವಿಠ್ಠಲ ದೇವಸ್ಥಾನ 1978ರಿಂದ ನೀರಲ್ಲೇ ಮುಳುಗಿ ಹೋಗಿದೆ. ಆದ್ರೆ, 2022ರಲ್ಲಿ ಜಲಾಶಯದಲ್ಲಿ ನೀರು ಖಾಲಿಯಾಗಿದ್ದಾಗ ವಿಠ್ಠಲ ಭಕ್ತರಿಗೆ ದರ್ಶನ ನೀಡಿದ್ದ. ಗುತ್ತಿ ಮಣ್ಣನಿಂದ ನಿರ್ಮಿಸಿರುವ ದೇವರ ಮೂರ್ತಿ ನಿರಂತರವಾಗಿ ನೀರಲ್ಲಿದ್ದರೂ ಸಹ ಎನೂ ಆಗಿಲ್ಲ. ಈ ಬಾರಿ ಸಹ ಅತೀ ಹೆಚ್ಚು ಬಿಸಿಲು ಹಿನ್ನೆಲೆಯಲ್ಲಿ ಡ್ಯಾಂನಲ್ಲಿ ನೀರು ಖಾಲಿಯಾಗಿದ್ದು, ಸಂಪೂರ್ಣವಾಗಿ ದೇವಸ್ಥಾನ ಓಪನ್ ಆಗುವ ಸಾಧ್ಯತೆಗಳಿವೆ. ಈ ಕುರಿತು ನಮ್ಮ ಪ್ರತಿನಿಧಿ ಸ್ಥಳದಿಂದ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IPL 2026: 42 ಪಂದ್ಯಗಳ ನಂತರ ಸನ್‌ರೈಸರ್ಸ್ ತಂಡಕ್ಕೆ ಅಂಬ್ರಿಶ್ ಆಗಮನ

Source link

RR vs DC IPL 2026 Live Score: ಟಾಸ್ ಗೆದ್ದ ರಾಜಸ್ಥಾನ್ ಬ್ಯಾಟಿಂಗ್ ಆಯ್ಕೆ – Kannada News | Rajasthan Royals vs Delhi Capitals IPL 2026 Live Cricket Score RR vs DC Match on 1st May latest news in Kannada

  • 01 May 2026 07:14 PM (IST)

    RR vs DC IPL 2026: ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ XI

    ಕೆಎಲ್ ರಾಹುಲ್ (ವಾಕ್), ಪಾತುಮ್ ನಿಸ್ಸಾಂಕ, ನಿತೀಶ್ ರಾಣಾ, ಸಮೀರ್ ರಿಜ್ವಿ, ಟ್ರಿಸ್ಟಾನ್ ಸ್ಟಬ್ಸ್, ಅಕ್ಸರ್ ಪಟೇಲ್ (ನಾಯಕ), ಅಶುತೋಷ್ ಶರ್ಮಾ, ಕೈಲ್ ಜೇಮಿಸನ್, ಮಿಚೆಲ್ ಸ್ಟಾರ್ಕ್, ಕುಲ್ದೀಪ್ ಯಾದವ್, ಟಿ ನಟರಾಜನ್.

  • 01 May 2026 07:13 PM (IST)

    RR vs DC IPL 2026: ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ XI

    ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರಿಯಾನ್ ಪರಾಗ್ (ನಾಯಕ), ಡೊನೊವನ್ ಫೆರೇರಾ, ರವೀಂದ್ರ ಜಡೇಜಾ, ಶುಭಂ ದುಬೆ, ಜೋಫ್ರಾ ಆರ್ಚರ್, ರವಿ ಬಿಷ್ಣೋಯ್, ನಾಂದ್ರೆ ಬರ್ಗರ್, ಬ್ರಿಜೇಶ್ ಶರ್ಮಾ.

  • 01 May 2026 07:02 PM (IST)

    RR vs DC IPL 2026: ಟಾಸ್ ಗೆದ್ದ ರಾಜಸ್ಥಾನ್

    ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

  • Source link

    ‘ಕನಸಲ್ಲೂ ಊಹಿಸಿರಲಿಲ್ಲ’; ಸೂರ್ಯವಂಶಿಯನ್ನು ಹಾಡಿ ಹೊಗಳಿದ ಕೆಎಲ್ ರಾಹುಲ್ – Kannada News | KL Rahul Praises IPL Star Vaibhav Suryavanshi, Aims to Match MS Dhoni’s Trophies

    15 ವರ್ಷದ ವೈಭವ್ ಸೂರ್ಯವಂಶಿ (Vaibhav Sooryavanshi) ಕ್ರಿಕೆಟ್ ಲೋಕದಲ್ಲಿ ಎಬ್ಬಿಸಿರುವ ಸುನಾಮಿ ಭಾರತ ಕ್ರಿಕೆಟ್​ನ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. ಅಂಡರ್19 ತಂಡದಲ್ಲಿ ಅಬ್ಬರಿಸಿ ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದ ವೈಭವ್ ಸೂರ್ಯವಂಶಿ ಇದೀಗ 2026 ರ ಐಪಿಎಲ್​ನಲ್ಲಿ (IPL 2026) ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಹೃದಯಗಳನ್ನು ಗೆದ್ದಿದ್ದಾರೆ. ತಮ್ಮ ಅಬ್ಬರದ ಬ್ಯಾಟಿಂಗ್‌ ಮೂಲಕ ಇಲ್ಲಿಯವರೆಗೆ 400 ರನ್ ಗಳಿಸಿದ್ದಾರೆ. ಇಲ್ಲಿಯವರೆಗೆ 37 ಸಿಕ್ಸರ್​ಗಳನ್ನು ಹೊಡೆದಿರುವ ಸೂರ್ಯವಂಶಿ ಇದೀಗ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಆರ್ಭಟಿಸಲು ಸಜ್ಜಾಗಿದ್ದಾರೆ. ವಾಸ್ತವವಾಗಿ ಐಪಿಎಲ್ 2026 ರ 43ನೇ ಪಂದ್ಯ ರಾಜಸ್ಥಾನ್ ರಾಯಲ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವೆ ನಡೆಯಲಿದೆ. ಈ ಪಂದ್ಯಕ್ಕೂ ಮೊದಲು ಸೂರ್ಯವಂಶಿ ಬಗ್ಗೆ ಮಹತ್ವದ ಸಂಗತಿಯನ್ನು ಹಂಚಿಕೊಂಡಿರುವ ದೆಹಲಿ ವಿಕೆಟ್ ಕೀಪರ್ ಕೆಎಲ್ ರಾಹುಲ್ (KL Rahul), ವೈಭವ್ ಐಪಿಎಲ್‌ನಲ್ಲಿ ಎರಡು ಶತಕಗಳನ್ನು ಗಳಿಸುವ ಮೂಲಕ ಇಂತಹ ಸಾಧನೆ ಮಾಡುತ್ತಾರೆ ಎಂದು ನಾನು ಕನಸಿನಲ್ಲಿಯೂ ಊಹಿಸಿರಲಿಲ್ಲ ಎಂದಿದ್ದಾರೆ.

    ಸೂರ್ಯವಂಶಿಯನ್ನು ಹೊಗಳಿದ ರಾಹುಲ್

    ವೈಭವ್ ಸೂರ್ಯವಂಶಿ ಹೊಸ ಯುಗದ ಕ್ರಿಕೆಟಿಗ ಮತ್ತು ಅವರು ಮಾಡುತ್ತಿರುವುದು ಅದ್ಭುತವಾಗಿದೆ ಎಂದಿರುವ ಕೆ.ಎಲ್. ರಾಹುಲ್, ‘ವೈಭವ್ ಸೂರ್ಯವಂಶಿ ವಿಶ್ವ ಕ್ರಿಕೆಟ್ ಅನ್ನು ಬಿರುಗಾಳಿಯಂತೆ ತೆಗೆದುಕೊಂಡಿದ್ದಾರೆ. 15 ನೇ ವಯಸ್ಸಿನಲ್ಲಿ ಎರಡು ಶತಕಗಳನ್ನು ಬಾರಿಸುವುದನ್ನು ನಾನು ಕನಸು ಕೂಡ ಕಂಡಿಲ್ಲ. ವೈಭವ್ ಜೊತೆ ಆಯುಷ್ ಮ್ಹಾತ್ರೆ ಕೂಡ ಉತ್ತಮ ಪ್ರದರ್ಶನ ನೀಡಿದ್ದಾರೆ ಮತ್ತು ಚೆನ್ನೈ ತಂಡವು ವೇಗವಾಗಿ ರನ್ ಗಳಿಸಲು ಸಹಾಯ ಮಾಡಿದ್ದಾರೆ. ಭಾರತದಲ್ಲಿ ಉದಯೋನ್ಮುಖ ಪ್ರತಿಭೆಗಳ ಸಂಖ್ಯೆ ಆಶ್ಚರ್ಯಕರವಾಗಿದೆ. ನಾಲ್ಕೈದು ವರ್ಷಗಳ ಹಿಂದೆ, ನಮಗೆ ಸಿಕ್ಸ್-ಹಿಟ್ಟಿಂಗ್ ಆಟಗಾರರ ಕೊರತೆಯಿದೆ ಎಂಬ ಕಳವಳವಿತ್ತು. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನ ಬ್ಯಾಟಿಂಗ್‌ನಿಂದ ಎಲ್ಲರೂ ಆಶ್ಚರ್ಯಚಕಿತರಾಗಿದ್ದರು, ಆದರೆ ಇಂದು ಭಾರತೀಯ ಆಟಗಾರರು ಮುಂಚೂಣಿಯಲ್ಲಿದ್ದಾರೆ. ಇದೆಲ್ಲವೂ ಐಪಿಎಲ್‌ನಿಂದಾಗಿ. ಈ ನಿರ್ಭೀತ ಆಟಗಾರರು ಟಿ20 ಆಡುವ ವಿಧಾನವನ್ನು ಬದಲಾಯಿಸುತ್ತಿದ್ದಾರೆ ಎಂದಿದ್ದಾರೆ.

    IPL 2026: ಒಂದು ಫೋಟೋಗೆ 100 ರೂ. ಕೇಳಿದ ವೈಭವ್; ವಿಡಿಯೋ ವೈರಲ್

    ಧೋನಿಗೆ ಸರಿಸಾಟಿಯಾಗಬೇಕು- ರಾಹುಲ್

    ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಕೆ.ಎಲ್. ರಾಹುಲ್, ‘ವೈಯಕ್ತಿಕ ಮೈಲಿಗಲ್ಲುಗಳಲ್ಲಿ ಅರ್ಥವಿಲ್ಲ. ಧೋನಿಯ ಐದು ಐಪಿಎಲ್ ಪ್ರಶಸ್ತಿಗಳನ್ನು ಸರಿಗಟ್ಟಲು ಬಯಸುತ್ತೇನೆ. ನಾನು ರನ್‌ಗಳ ಬದಲು, ಟ್ರೋಫಿಗಳನ್ನು ಗೆಲ್ಲುವುದರ ಬಗ್ಗೆ ಹೆಚ್ಚಿನ ಗಮನ ಹರಿಸುತ್ತೇನೆ. ಇದರ ಜೊತೆಗೆ ವೈಯಕ್ತಿಕ ಸಾಧನೆಗಳು ಕೂಡ ನಾನು ಸರಿಯಾದ ಹಾದಿಯಲ್ಲಿದ್ದೇನೆ ಎಂಬ ವಿಶ್ವಾಸವನ್ನು ನೀಡುತ್ತವೆ. ಆದರೆ ನನಗೆ ಸಂತೋಷವನ್ನುಂಟುಮಾಡುವುದು ಎಂ.ಎಸ್. ಧೋನಿ ಗೆದ್ದಷ್ಟು ಟ್ರೋಫಿಗಳನ್ನು ಗೆಲ್ಲುವುದು ಎಂದಿದ್ದಾರೆ.

    ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Source link

    ಜೂ.4ಕ್ಕೆ ‘ಪೆದ್ದಿ’ ರಿಲೀಸ್; ‘ಟಾಕ್ಸಿಕ್’ ಬಿಟ್ಟುಕೊಟ್ಟ ದಿನಾಂಕದಲ್ಲಿ ರಾಮ್ ಚರಣ್ ಸಿನಿಮಾ ತೆರೆಗೆ – Kannada News | Ram Charan Peddi movie new release date confirmed June 4 instead of Toxic

    ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮೆಗಾ ಪವರ್ ಸ್ಟಾರ್ ರಾಮ್ ಚರಣ್ (Ram Charan) ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಪೆದ್ದಿ’ (Peddi) ಬಿಡುಗಡೆಗೆ ದಿನಾಂಕ ನಿಗದಿ ಆಗಿದೆ. ಈ ಹಿಂದೆ ಮೂರು ಬಾರಿ ಮುಂದೂಡಲ್ಪಟ್ಟಿದ್ದ ಈ ಸಿನಿಮಾ, ಕೊನೆಗೂ ಈ ವರ್ಷ ಜೂನ್ 4ರಂದು ಅದ್ದೂರಿಯಾಗಿ ತೆರೆಗೆ ಬರಲಿದೆ. ಐಪಿಎಲ್ ಪಂದ್ಯಗಳು ಮುಗಿದ ತಕ್ಷಣವೇ ಈ ಸಿನಿಮಾ ಬಿಡುಗಡೆ ಆಗುತ್ತಿರುವುದು ಅಭಿಮಾನಿಗಳಲ್ಲಿ ಹೊಸ ಸಂಚಲನ ಮೂಡಿಸಿದೆ. ಈ ಮೊದಲು ಜೂನ್ 4ರಂದು ಯಶ್ ನಟನೆಯ ‘ಟಾಕ್ಸಿಕ್’ (Toxic) ಸಿನಿಮಾ ಬಿಡುಗಡೆ ಆಗುವುದಾಗಿ ತಿಳಿಸಿತ್ತು. ಆದರೆ ಪ್ಲ್ಯಾನ್ ಬದಲಾಯಿತು.

    ಬುಚ್ಚಿ ಬಾಬು ಸನಾ ನಿರ್ದೇಶನದ ಈ ಚಿತ್ರದಲ್ಲಿ ರಾಮ್ ಚರಣ್‌ಗೆ ಜೋಡಿಯಾಗಿ ಬಾಲಿವುಡ್ ನಟಿ ಜಾನ್ವಿ ಕಪೂರ್ ನಟಿಸುತ್ತಿದ್ದಾರೆ. ವಿಶೇಷವೆಂದರೆ, ಶಿವರಾಜ್‌ಕುಮಾರ್ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದು ಸ್ಯಾಂಡಲ್‌ವುಡ್ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಜಗಪತಿ ಬಾಬು ಮತ್ತು ದಿವ್ಯೇಂದು ಶರ್ಮಾ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ.

    ಈಗಾಗಲೇ ಈ ಚಿತ್ರದ ‘ಚಿಕಿರಿ ಚಿಕಿರಿ’ ಹಾಡು ಬಿಡುಗಡೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ. ಎ.ಆರ್. ರೆಹಮಾನ್ ಸಂಗೀತ ನೀಡಿರುವ ಈ ಹಾಡು ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ಸುಮಾರು 200 ಮಿಲಿಯನ್‌ಗಿಂತಲೂ ಅಧಿಕ ವೀಕ್ಷಣೆಗಳನ್ನು ಪಡೆದಿದೆ. ಇತ್ತೀಚೆಗೆ ಬಿಡುಗಡೆಯಾದ ಪೆದ್ದಿ ಪೆಹಲ್ವಾನ್ ಲುಕ್‌ನಲ್ಲಿ ರಾಮ್ ಚರಣ್ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

    ‘ಪೆದ್ದಿ’ ಸಿನಿಮಾ ಏಪ್ರಿಲ್ 30ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿ ಇದ್ದ ಕಾರಣ ಮತ್ತು ತಾಂತ್ರಿಕವಾಗಿ ಗುಣಮಟ್ಟವನ್ನು ಕಾಪಾಡುವ ಉದ್ದೇಶದಿಂದ ಚಿತ್ರತಂಡ ಬಿಡುಗಡೆಯನ್ನು ಜೂನ್ ತಿಂಗಳಿಗೆ ಮುಂದೂಡಿತ್ತು. ಈಗ ಜೂನ್ 4ಕ್ಕೆ ದಿನಾಂಕ ಅಂತಿಮಗೊಳಿಸುವ ಮೂಲಕ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದೆ.

    ಇದನ್ನೂ ಓದಿ: ರಾಮ್ ಚರಣ್ ಮತ್ತು ನಾನಿ ಸಿನಿಮಾಗಳಿಗೆ ಲೀಕ್ ಸಂಕಷ್ಟ: ಆತಂಕದಲ್ಲಿ ‘ಪೆದ್ದಿ’, ‘ದಿ ಪ್ಯಾರಡೈಸ್’

    ‘ವೃದ್ಧಿ ಸಿನಿಮಾಸ್’ ಮತ್ತು ‘ಮೈತ್ರಿ ಮೂವಿ ಮೇಕರ್ಸ್’ ಜಂಟಿಯಾಗಿ ಈ ಬಿಗ್ ಬಜೆಟ್ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಪೆದ್ದಿ’ ಅಬ್ಬರಿಸಲು ಸಜ್ಜಾಗಿದೆ. ರಾಮ್ ಚರಣ್ ಅಭಿಮಾನಿಗಳು ಈ ಸಿನಿಮಾಗಾಗಿ ಕಾದಿದ್ದಾರೆ.

    ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

    Source link