ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬಾಂಗ್ಲಾದೇಶ; ಟ್ಯಾರಿಫ್ ಶೇ. 19ಕ್ಕೆ ಇಳಿಕೆ – Kannada News | US reduces tariffs on Bangladesh to 19pc, after both countries sign for trade deal
ಅಮೆರಿಕ ಬಾಂಗ್ಲಾದೇಶ ವ್ಯಾಪಾರ ಒಪ್ಪಂದ ಢಾಕಾ, ಫೆಬ್ರುವರಿ 10: ಅಮೆರಿಕ ಮತ್ತು ಬಾಂಗ್ಲಾದೇಶ ಮಧ್ಯೆ ವ್ಯಾಪಾರ ಒಪ್ಪಂದ (US Bangladesh trade deal) ಏರ್ಪಟ್ಟಿದೆ. ಎರಡೂ ದೇಶಗಳು ಒಪ್ಪಂದಕ್ಕೆ ಸಹಿಹಾಕಿವೆ. ಅದರ ಪ್ರಕಾರ, ಬಾಂಗ್ಲಾದೇಶಕ್ಕೆ ವಿಧಿಸುವ ಟ್ಯಾರಿಫ್ ಅನ್ನು ಅಮೆರಿಕ ಶೇ. 19ಕ್ಕೆ ಇಳಿಸಲಿದೆ. ಅಮೆರಿಕದ ಸಾಮಗ್ರಿಗಳಿಂದ ತಯಾರಾದ ಕೆಲ ಜವಳಿ ಮತ್ತು ಉಡುಪುಗಳ ಮೇಲೆ ಅಮೆರಿಕ ಟ್ಯಾರಿಫ್ನಿಂದ ಪೂರ್ಣ ವಿನಾಯಿತಿ ಕೊಡಲಿದೆ. ಇದಕ್ಕೆ ಬದಲಾಗಿ, ಅಮೆರಿಕದ ಹೆಚ್ಚಿನ ಉತ್ಪನ್ನಗಳಿಗೆ ಬಾಂಗ್ಲಾದೇಶದ ಮಾರುಕಟ್ಟೆಗೆ ಮುಕ್ತ ಪ್ರವೇಶ ಸಿಗಲಿದೆ….