All posts by nagaraj11081993

ಆಸ್ತಿ, ಸಂತಾನ ಭಾಗ್ಯ ಎಲ್ಲವೂ ಸಿಗಲಿದೆ: ಈ ರಾಶಿಯಲ್ಲಿ ಮೂರು ಗ್ರಹಗಳ ಸಂಚಾರ – Kannada News | Leo Horoscope April 2026: Unlocking Prosperity and Overcoming Obstacles with Astrology

ಏಪ್ರಿಲ್ 2026ರಲ್ಲಿ ಸಿಂಹ ರಾಶಿಯವರಿಗೆ ಮಘಾ, ಪೂರ್ವಾಫಲ್ಗುಣೀ, ಉತ್ತರಾಫ್ಗುಣೀ 1ನೇ ಪಾದಗಳಲ್ಲಿ ಜನಿಸಿದವರಿಗೆ ಹೇಗಿರಲಿವೆ ಎಂಬುದನ್ನು ವಿಸ್ತಾರವಾಗಿ ತಿಳಿಯಬಹುದು. ರಾಶಿಯ ಅಧಿಪತಿ ಉಚ್ಚನಾದ ಕಾರಣ ವಿಶೇಷ ಅಂಶಗಳು ರಾಶಿಯವರದ್ದಾಗಲಿದೆ.

​ಶುಭ ಫಲ ನೀಡುವ ಗ್ರಹಗಳು :

ಗುರುವು ಮಿಥುನ ರಾಶಿಯಲ್ಲಿ ಸಂಚರಿಸುತ್ತಿರುವುದು ನಿಮಗೆ ಅತ್ಯಂತ ದೊಡ್ಡ ವರದಾನ. ಇದು “ಲಾಭ ಸ್ಥಾನವಾದ್ದರಿಂದ ನಿಮ್ಮ ಆದಾಯ ಹೆಚ್ಚಾಗಲಿದೆ. ಹಳೆಯ ಹೂಡಿಕೆಗಳಿಂದ ಲಾಭ ಸಿಗಲಿದೆ. ದೀರ್ಘಕಾಲದ ಕನಸುಗಳು ನನಸಾಗುವ ಸಮಯವಿದು. ಸಂತಾನ ಭಾಗ್ಯ ಅಥವಾ ಮಕ್ಕಳಿಂದ ಶುಭ ವಾರ್ತೆ ಕೇಳುವಿರಿ.

​ನಿಮ್ಮ ರಾಶ್ಯಾಧಿಪತಿಯಾದ ಸೂರ್ಯನು ಮೇಷದಲ್ಲಿ ಉಚ್ಚ ಸ್ಥಿತಿಯಲ್ಲಿ ಇರುವುದು ಅದ್ಭುತ ಫಲ ನೀಡುತ್ತದೆ. ಇದು ಪಿತೃಾರ್ಜಿತ ಆಸ್ತಿಯ ಲಾಭ, ತಂದೆಯ ಕಡೆಯಿಂದ ಸಹಕಾರ ಮತ್ತು ಸಮಾಜದಲ್ಲಿ ಗೌರವವನ್ನು ತಂದುಕೊಡುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದ್ದು, ಉನ್ನತ ಅಧಿಕಾರ ಪ್ರಾಪ್ತಿಯ ಯೋಗವಿದೆ.

​ಶುಕ್ರನು ವೃಷಭ ರಾಶಿಯಲ್ಲಿ ಸ್ವಕ್ಷೇತ್ರದಲ್ಲಿ ಇರುವುದರಿಂದ ವೃತ್ತಿ ಜೀವನದಲ್ಲಿ ಐಷಾರಾಮಿ ವಾತಾವರಣವಿರುತ್ತದೆ. ಕಲೆ, ಮಾಧ್ಯಮ ಅಥವಾ ವ್ಯಾಪಾರದಲ್ಲಿ ಇರುವವರಿಗೆ ದೊಡ್ಡ ಮಟ್ಟದ ಪ್ರಗತಿ ಕಂಡುಬರುತ್ತದೆ. ಕೆಲಸದ ಸ್ಥಳದಲ್ಲಿ ಸ್ತ್ರೀ ವರ್ಗದವರಿಂದ ಸಹಕಾರ ಸಿಗಲಿದೆ.

​ಅಶುಭ ಫಲ ನೀಡುವ ಗ್ರಹಗಳು

​ಸಿಂಹ ರಾಶಿಯವರಿಗೆ ಪ್ರಸ್ತುತ ಅಷ್ಟಮ ಶನಿ ದಶೆ ನಡೆಯುತ್ತಿದೆ. ಮೀನ ರಾಶಿಯಲ್ಲಿ ಶನಿಯೊಂದಿಗೆ ಕುಜ ಮತ್ತು ಬುಧ ಸೇರಿರುವುದು ಸಂಕೀರ್ಣ ಪರಿಸ್ಥಿತಿ ಸೃಷ್ಟಿಸುತ್ತದೆ.

​ವಾಹನ ಚಾಲನೆಯಲ್ಲಿ ಅತಿ ಹೆಚ್ಚು ಎಚ್ಚರಿಕೆ ಅಗತ್ಯ. ಬುಧನು ಅಷ್ಟಮದಲ್ಲಿ ಇರುವುದರಿಂದ ನಿಮ್ಮ ಮಾತು ತಪ್ಪಾಗಿ ಅರ್ಥೈಸಲ್ಪಡಬಹುದು. ರಕ್ತದೊತ್ತಡ ಅಥವಾ ಶಸ್ತ್ರಚಿಕಿತ್ಸೆಯಂತಹ ಸಾಧ್ಯತೆಗಳಿರುವುದರಿಂದ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.

​ರಾಹು-ಕೇತುಗಳ ಪ್ರಭಾವ: ಇವು ನಿಮ್ಮ ಜೀವನದ ಸ್ಥಿರತೆಯಲ್ಲಿ ಸಣ್ಣಪುಟ್ಟ ಗೊಂದಲಗಳನ್ನು ಉಂಟುಮಾಡಬಹುದು, ವಿಶೇಷವಾಗಿ ಹಣಕಾಸಿನ ವ್ಯವಹಾರಗಳಲ್ಲಿ ಅಪರಿಚಿತರನ್ನು ನಂಬಲೇಬೇಡಿ.

ವೃತ್ತಿ ಮತ್ತು ಆರ್ಥಿಕತೆ:

ಗುರುವು ಲಾಭ ಸ್ಥಾನದಲ್ಲಿ ಇರುವುದರಿಂದ ಆರ್ಥಿಕ ಪರಿಸ್ಥಿತಿ ಸದೃಢವಾಗಿರುತ್ತದೆ. ಆದರೆ, ಅಷ್ಟಮದಲ್ಲಿ ಶನಿ-ಕುಜರ ಸಂಯೋಗವಿರುವುದರಿಂದ ಶತ್ರುಗಳ ಕಾಟ ಅಥವಾ ಕೆಲಸದಲ್ಲಿ ಪಿತೂರಿಗಳು ನಡೆಯಬಹುದು. ನೀವು ಮಾಡುವ ಕೆಲಸದಲ್ಲಿ ಎಷ್ಟು ನಿಷ್ಠರಾಗಿದ್ದರೂ ಸಹ ಸಣ್ಣ ತಪ್ಪುಗಳನ್ನು ದೊಡ್ಡದು ಮಾಡಿ ತೋರಿಸುವ ಸಾಧ್ಯತೆ ಇರುತ್ತದೆ. ವ್ಯಾಪಾರಸ್ಥರು ಈ ತಿಂಗಳು ಹೊಸ ಪಾಲುದಾರಿಕೆಯನ್ನು ಮಾಡಿಕೊಳ್ಳದಿದ್ದರೆ ಒಳಿತು.

​ಕುಟುಂಬ ಮತ್ತು ದಾಂಪತ್ಯ:

ಭಾಗ್ಯದಲ್ಲಿ ಸೂರ್ಯನಿರುವುದರಿಂದ ಕುಟುಂಬದ ಹಿರಿಯರ ಬೆಂಬಲ ಸದಾ ನಿಮ್ಮ ಮೇಲಿರುತ್ತದೆ. ಮನೆಯಲ್ಲಿ ಶುಭ ಕಾರ್ಯಗಳು ಜರುಗುವ ಸಾಧ್ಯತೆ ಇದೆ. ಆದರೆ, ಶನಿಯ ದೃಷ್ಟಿಯಿಂದಾಗಿ ಸಂಗಾತಿಯೊಂದಿಗೆ ಸಣ್ಣಪುಟ್ಟ ವೈಮನಸ್ಸು ಉಂಟಾಗಬಹುದು. ಪರಸ್ಪರ ಸಂಶಯ ಮಾಡುವುದನ್ನು ಬಿಟ್ಟು ತಾಳ್ಮೆಯಿಂದ ವರ್ತಿಸುವುದು ಅಗತ್ಯ.

​ಶಿಕ್ಷಣ ಮತ್ತು ಆರೋಗ್ಯ:

ವಿದ್ಯಾರ್ಥಿಗಳಿಗೆ ಈ ತಿಂಗಳು ಹೆಚ್ಚಿನ ಶ್ರಮದ ಅಗತ್ಯವಿದೆ. ಬುಧನು ಅಷ್ಟಮದಲ್ಲಿ ಇರುವುದರಿಂದ ಏಕಾಗ್ರತೆಯ ಕೊರತೆ ಕಾಡಬಹುದು. ಆರೋಗ್ಯದ ವಿಷಯದಲ್ಲಿ ಉದರ ಸಂಬಂಧಿ (ಹೊಟ್ಟೆಯ) ಸಮಸ್ಯೆ ಅಥವಾ ಮೂಳೆ ನೋವು ಕಾಣಿಸಿಕೊಳ್ಳಬಹುದು. ಮಸಾಲೆಯುಕ್ತ ಆಹಾರದಿಂದ ದೂರವಿರುವುದು ಉತ್ತಮ.

​ಈ ತಿಂಗಳ ಅಶುಭ ಫಲಗಳನ್ನು ತಗ್ಗಿಸಲು ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆ ಮಾಡಿ ಅಥವಾ ಮಂಗಳವಾರ ಸುಬ್ರಹ್ಮಣ್ಯ ಭುಜಂಗ ಪಠಿಸಿ. ಪ್ರತಿದಿನ ಬೆಳಗ್ಗೆ ಸೂರ್ಯ ನಮಸ್ಕಾರ ಮತ್ತು ಆದಿತ್ಯ ಹೃದಯ ಸ್ತೋತ್ರ ಪಠಿಸಿ.

ಸಿಂಹ ರಾಶಿಯವರಿಗೆ ಈ ತಿಂಗಳು ಬರುವ ಲಾಭವನ್ನು ಅಷ್ಟಮ ಶನಿಯಿಂದ ರಕ್ಷಿಸಿಕೊಳ್ಳುವುದು ಮುಖ್ಯ ಉದ್ದೇಶವಾಗಿರಲಿ. ಹಣಕಾಸಿನ ವಿಷಯದಲ್ಲಿ ಜಯ ಸಿಕ್ಕರೂ, ಆರೋಗ್ಯ ಮತ್ತು ಸುರಕ್ಷತೆಯ ವಿಷಯದಲ್ಲಿ ಮೈಮರೆಯಬಾರದು.

– ಲೋಹಿತ ಹೆಬ್ಬಾರ್

Published On – 10:14 pm, Tue, 28 April 26

Source link

ಕಿಡ್ನಿಗೆ ಸಂಬಂಧಪಟ್ಟ ಸಮಸ್ಯೆ ಇರುವವರು ಎಳನೀರು ಕುಡಿಯುವುದು ಸುರಕ್ಷಿತವೇ? – Kannada News | High Potassium in Coconut Water: Warning for Kidney Patients

ಎಳನೀರು (Coconut Water) ಆರೋಗ್ಯಕ್ಕೆ ಅಮೃತವಿದ್ದಂತೆ. ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದ ವಿಚಾರ. ಅದರಲ್ಲಿಯೂ ಬೇಸಿಗೆಯಲ್ಲಿ ಇದಕ್ಕಿರುವ ಬೇಡಿಕೆ ಬೇರೆಯಾವುದಕ್ಕೂ ಇರುವುದಿಲ್ಲ. ಇದು ದೇಹದ ನೀರಿನ ಕೊರತೆಯನ್ನು ನೀಗಿಸುವುದಲ್ಲದೆ, ಸೋಡಿಯಂ ಮತ್ತು ಪೊಟ್ಯಾಸಿಯಂ ಸೇರಿದಂತೆ ಪ್ರಮುಖ ಖನಿಜಗಳನ್ನು ಒದಗಿಸುತ್ತದೆ. ಆದರೆ ಕೆಲವರಿಗೆ ಕಿಡ್ನಿಗೆ ಸಂಬಂಧ ಪಟ್ಟ ಸಮಸ್ಯೆ ಇರುವವರು ಸೇವನೆ ಮಾಡುವುದು ಸುರಕ್ಷಿತವೇ ಅಥವಾ ಅಲ್ಲವೇ ಎಂಬ ಅನುಮಾನವಿರುತ್ತದೆ. ಅಂತಹ ಗೊಂದಲಗಳಿಗೆ ಆರೋಗ್ಯ ತಜ್ಞರು ನೀಡಿರುವ ಸ್ಪಷ್ಟನೆ ಇಲ್ಲಿದೆ.

ತಜ್ಞರ ಪ್ರಕಾರ, ಎಳನೀರು ಸಾಮಾನ್ಯವಾಗಿ ಆರೋಗ್ಯಕರವಾಗಿದ್ದರೂ, ಕಿಡ್ನಿಗೆ ಸಂಬಂಧ ಪಟ್ಟ ಸಮಸ್ಯೆ ಇರುವ ಎಲ್ಲರಿಗೂ ಇದು ಸೂಕ್ತವಲ್ಲ. ರೋಗಿಯ ಕಿಡ್ನಿ ಸಮಸ್ಯೆಯ ಹಂತ, ಕ್ರಿಯಾಟಿನಿನ್ ಮತ್ತು ಪೊಟ್ಯಾಸಿಯಂ ಮಟ್ಟದ ಮೇಲೆ ಇದರ ಬಳಕೆ ನಿರ್ಧರಿಸಬೇಕು. ರಕ್ತದಲ್ಲಿ ಪೊಟ್ಯಾಸಿಯಂ ಪ್ರಮಾಣ ಹೆಚ್ಚಿರುವ ಕಿಡ್ನಿ ರೋಗಿಗಳು ಎಳನೀರು ಕುಡಿಯುವುದನ್ನು ತಪ್ಪಿಸಬೇಕು. ಇದರಿಂದ ಪೊಟ್ಯಾಸಿಯಂ ಇನ್ನಷ್ಟು ಹೆಚ್ಚಾಗಿ, ದೇಹದಲ್ಲಿ ಅಪಾಯಕಾರಿ ಸ್ಥಿತಿ ಉಂಟಾಗಬಹುದು. ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಿರುವವರು ಕೂಡ ಇದನ್ನು ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಅಗತ್ಯ.

ಯಾವಾಗ ಸುರಕ್ಷಿತ?

ಕಿಡ್ನಿ ಸಮಸ್ಯೆ ಗಂಭೀರವಾಗಿರದವರು ಮತ್ತು ಅವರ ಪೊಟ್ಯಾಸಿಯಂ ಹಾಗೂ ಕ್ರಿಯಾಟಿನಿನ್ ಮಟ್ಟಗಳು ಸಾಮಾನ್ಯವಾಗಿದ್ದರೆ, ಎಳನೀರು ಕುಡಿಯುವುದು ಪ್ರಯೋಜನಕಾರಿ. ಇದು ದೇಹವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಅಗತ್ಯ ಖನಿಜಗಳನ್ನು ಪೂರೈಸುತ್ತದೆ.

ಇದನ್ನೂ ಓದಿ: ಯಾವ ಕಾರಣಕ್ಕೂ ಈ ಆರೋಗ್ಯ ಸಮಸ್ಯೆ ಇರುವವರು ಎಳನೀರು ಕುಡಿಯಬಾರದು, ಅಧ್ಯಯನದಿಂದ ಆಘಾತಕಾರಿ ವರದಿ

ಕಿಡ್ನಿ ಆರೋಗ್ಯಕ್ಕೆ ಸಲಹೆಗಳು:

  • ದಿನಕ್ಕೆ 7– 8 ಗ್ಲಾಸ್ ನೀರು ಕುಡಿಯಿರಿ
  • ಉಪ್ಪಿನ ಸೇವನೆಯನ್ನು ನಿಯಂತ್ರಿಸಿ
  • ಫಾಸ್ಟ್ ಫುಡ್ ಸೇವನೆ ಮಾಡುವುದನ್ನು ತಪ್ಪಿಸಿ
  • ನಿಯಮಿತವಾಗಿ ವ್ಯಾಯಾಮ ಮಾಡಿ

ಒಟ್ಟಿನಲ್ಲಿ, ಕಿಡ್ನಿ ರೋಗಿಗಳು ತಮ್ಮ ಸ್ಥಿತಿಗೆ ಅನುಗುಣವಾಗಿ ವೈದ್ಯರ ಸಲಹೆಯೊಂದಿಗೆ ಮಾತ್ರ ಎಳನೀರನ್ನು ಕುಡಿಯುವುದು ಸುರಕ್ಷಿತ.

Source link

ರಾಯಚೂರು ಶೈಕ್ಷಣಿಕ ಕ್ರಾಂತಿ: SSLC ಫಲಿತಾಂಶದಲ್ಲಿ 32 ರಿಂದ 21ನೇ ಸ್ಥಾನಕ್ಕೆ ಜಿಗಿತ – Kannada News | SSLC Excellence: Raichur District Jumps Ranks, Felicitation for State Toppers

ರಾಯಚೂರು, ಏ.28: ಜಿಲ್ಲೆಯು ಇತ್ತೀಚೆಗೆ ಪ್ರಕಟವಾದ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಜಿಲ್ಲೆಯು ಹಿಂದಿನ 32ನೇ ಸ್ಥಾನದಿಂದ 21ನೇ ಸ್ಥಾನಕ್ಕೆ ಏರಿರುವುದು ಐತಿಹಾಸಿಕ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ. ಈ ಶೈಕ್ಷಣಿಕ ಸಾಧನೆಗಾಗಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಸುಖದೇವ್ ಸೇರಿದಂತೆ ಐವರು ಉನ್ನತ ರ್ಯಾಂಕ್ ಗಳಿಸಿದ ವಿದ್ಯಾರ್ಥಿಗಳನ್ನು ಜಿಲ್ಲಾಡಳಿತವು ಸನ್ಮಾನಿಸಿತು. ವಿದ್ಯಾರ್ಥಿಗಳು ತಮ್ಮ ಯಶಸ್ಸಿಗೆ ಪೋಷಕರು, ಶಿಕ್ಷಕರು ಮತ್ತು ಸಂಸ್ಥೆಗಳ ಬೆಂಬಲವನ್ನು ಶ್ಲಾಘಿಸಿದ್ದಾರೆ. ಎಂಡಿಆರ್ಎಸ್ ಅಡವಿಭಾವಿಯ ಪ್ರವೀಣ್ ಮತ್ತು ಬಿವಿಆರ್ ಶಾಲೆಯ ಸುಖದೇವ್ ಸೇರಿದಂತೆ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪ್ರಯಾಣದಲ್ಲಿ ಕಠಿಣ ಪರಿಶ್ರಮ ಮತ್ತು ಪರಿಕಲ್ಪನಾ ತಿಳುವಳಿಕೆಯ ಮಹತ್ವವನ್ನು ಒತ್ತಿ ಹೇಳಿದರು. ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಯೊಬ್ಬರು ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೂ ಸಂಸ್ಥೆಗಳ ಬೆಂಬಲದ ಬಗ್ಗೆ ಭರವಸೆ ನೀಡಿದರು. ಜಿಲ್ಲಾಧಿಕಾರಿಗಳ ನಿರಂತರ ಪ್ರಯತ್ನ ಮತ್ತು ಅಧಿಕಾರಿಗಳ ಮೇಲಿನ ಒತ್ತಡದಿಂದ ಈ ಫಲಿತಾಂಶ ಸಾಧ್ಯವಾಗಿದೆ ಎಂದು ವಿದ್ಯಾರ್ಥಿಗಳು ಅಭಿಪ್ರಾಯಪಟ್ಟರು. ಇದು ರಾಯಚೂರಿನ ಶೈಕ್ಷಣಿಕ ಭವಿಷ್ಯಕ್ಕೆ ಪ್ರೇರಣೆಯಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾಶಿ-ಪುಣೆ ಅಮೃತ್ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ – Kannada News | PM Modi Flagged Off New Amrit Bharat Trains Connecting Uttar Pradesh And Maharashtra

ನವದೆಹಲಿ, ಏಪ್ರಿಲ್ 28: ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ನಡುವಿನ ರೈಲು ಸಂಪರ್ಕಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು 2 ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಿದರು. ವಾರಾಣಸಿಯಿಂದ ಪುಣೆ (ಹಡಪ್ಸರ್) ಮತ್ತು ಅಯೋಧ್ಯೆಯಿಂದ ಮುಂಬೈ (ಲೋಕಮಾನ್ಯ ತಿಲಕ್ ಟರ್ಮಿನಸ್) ರೈಲುಗಳು ಸಂಚರಿಸಲಿವೆ. ಉತ್ತರ ಪ್ರದೇಶದಲ್ಲಿ ವಾರಾಣಸಿ ಮತ್ತು ಅಯೋಧ್ಯೆ ಪ್ರಮುಖ ಆಧ್ಯಾತ್ಮಿಕ ತಾಣಗಳಾಗಿರುವುದರಿಂದ ವಾರ್ಷಿಕವಾಗಿ ಲಕ್ಷಾಂತರ ಭಕ್ತರನ್ನು ಆಕರ್ಷಿಸುವುದರಿಂದ ಮತ್ತು ಮುಂಬೈ ಮತ್ತು ಪುಣೆಯಂತಹ ಮಹಾನಗರಗಳಿಗೆ ರೈಲು ಸಂಪರ್ಕವು ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿರೀಕ್ಷೆಯಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಬಲರಾಮನದ ದಿನಗಳು’ ಸಿನಿಮಾದಲ್ಲಿ ‘ಆ ದಿನಗಳು’ ಛಾಯೆ: ಟೀಸರ್ ಹೇಗಿದೆ ನೋಡಿ.. – Kannada News | Vinod Prabhakar starrer Balaramana Dinagalu Kannada movie teaser launch

ನಟ ವಿನೋದ್ ಪ್ರಭಾಕರ್ (Vinod Prabhakar) ಅವರು ‘ಬಲರಾಮನ ದಿನಗಳು’ ಸಿನಿಮಾದಲ್ಲಿ ನಟಿಸಿದ್ದು, ಈ ಚಿತ್ರದ ಬಗ್ಗೆ ಅವರ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಈ ಸಿನಿಮಾ ಹೇಗಿರಲಿದೆ ಎಂಬುದು ಈಗ ಟೀಸರ್ ಮೂಲಕ ಗೊತ್ತಾಗಿದೆ. ಈ ಮೊದಲು 2 ಹಾಡುಗಳ ಮೂಲಕ ಸುದ್ದಿಯಾಗಿದ್ದ ಈ ಚಿತ್ರತಂಡ ಈಗ ಟೀಸರ್ ಬಿಡುಗಡೆ ಮಾಡಿದೆ. 80ರ ದಶಕದ ಬೆಂಗಳೂರಿನ ಭೂತಕ ಲೋಕವನ್ನು ‘ಬಲರಾಮನ ದಿನಗಳು’ (Balaramana Dinagalu) ಸಿನಿಮಾದಲ್ಲಿ ತೋರಿಸಲಾಗುತ್ತಿದೆ. ಕೆ.ಎಂ. ಚೈತನ್ಯ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

ಆ್ಯಕ್ಷನ್ ಸಿನಿಮಾಗಳ ಮೂಲಕ ಹೆಸರಾದವರು ವಿನೋದ್ ಪ್ರಭಾಕರ್. ಆದರೂ ಅವರು ಒಂದೇ ಬಗೆಯ ಪಾತ್ರಕ್ಕೆ ಸೀಮಿತವಾಗಿಲ್ಲ. ‘ಬಲರಾಮನ ದಿನಗಳು’ ಸಿನಿಮಾದಲ್ಲಿ ಅವರ ಪಾತ್ರ ಬೇರೆ ರೀತಿ ಇದೆ. ಟೀಸರ್ ನೋಡಿದ ಬಳಿಕ ಅದು ಸ್ಪಷ್ಟವಾಗಿದೆ. ಸಿನಿಮಾದ ನಿರ್ಮಾಪಕಿ ಪದ್ಮಾವತಿ ಅವರೇ ಟೀಸರ್ ಬಿಡುಗಡೆ ಮಾಡಿದರು. ಸಿನಿಮಾ ನಿರ್ಮಾಣಕ್ಕೆ ಕುಟುಂಬದವರು ನೀಡಿದ ಸಹಕಾರಕ್ಕೆ ಅವರು ಧನ್ಯವಾದ ತಿಳಿಸಿದರು. ಈ ಚಿತ್ರದಲ್ಲಿ ಅವರೊಂದು ಪಾತ್ರವನ್ನೂ ಮಾಡಿದ್ದಾರೆ.

‘ಬಲರಾಮನ ದಿನಗಳು’ ಟೀಸರ್:

‘ಮಾದೇವ’ ಸಿನಿಮಾದ ಬಳಿಕ ವಿನೋದ್ ಪ್ರಭಾಕರ್ ಅವರು ‘ಬಲರಾಮನ ದಿನಗಳು’ ಚಿತ್ರದಲ್ಲಿ ನಟಿಸಿದ್ದಾರೆ. ‘ಮಾದೇವ’ ಚಿತ್ರಕ್ಕಿಂತಲೂ ದೊಡ್ಡ ಯಶಸ್ಸು ಈ ಸಿನಿಮಾಗೆ ಸಿಗಲಿದೆ ಎಂಬ ಭರವಸೆ ಅವರಿಗೆ ಇದೆ. ವಿನೋದ್ ಪ್ರಭಾಕರ್ ಜೊತೆ ಆಶಿಷ್ ವಿದ್ಯಾರ್ಥಿ, ಅತುಲ್ ಕುಲಕರ್ಣಿ, ರಮೇಶ್ ಇಂದಿರಾ, ಶರತ್ ಲೋಹಿತಾಶ್ವ, ವಿನಯ್ ಗೌಡ, ರಜತ್, ಡ್ರ್ಯಾಗನ್ ಮಂಜು, ಪ್ರತಾಪ್ ನಾರಾಯಣ್, ಅಶ್ವಿನ್ ಹಾಸನ್ ಮಂತಾದ ಕಲಾವಿದರು ನಟಿಸಿದ್ದಾರೆ. ಪ್ರಿಯಾ ಆನಂದ್ ಅವರು ಈ ಚಿತ್ರಕ್ಕೆ ನಾಯಕಿ.

‘ಆ ದಿನಗಳು’ ಖ್ಯಾತಿಯ ಕೆ.ಎಂ. ಚೈತನ್ಯ ಅವರು ‘ಬಲರಾಮನ ದಿನಗಳು’ ಚಿತ್ರಕ್ಕೆ ನಿರ್ದೇಶನ ಮಾಡಿರುವುದರಿಂದ ಟೀಸರ್​ನಲ್ಲಿ ಆ ಫ್ಲೇವರ್ ಕಾಣಿಸಿದೆ. ತಮ್ಮೊಂದಿಗೆ ಕೈ ಜೋಡಿಸಿದ ಸಹಾಯಕ ನಿರ್ದೇಶಕರ ತಂಡವನ್ನು ಅವರು ವೇದಿಕೆಗೆ ಕರೆದು ಪರಿಚಯ ಮಾಡಿಸಿದರು. ಹಾಡುಗಳನ್ನು ಬರೆದ ಕವಿರಾಜ್, ನಾಗಾರ್ಜುನ ಶರ್ಮ, ಪ್ರಮೋದ್ ಮರವಂತೆ ಕೂಡ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ: ವಿನೋದ್ ಪ್ರಭಾಕರ್ ನಟನೆಯ ‘ಬಲರಾಮನ ದಿನಗಳು’ಗೆ ಗೃಹ ಸಚಿವರ ಶುಭಾಶಯ

‘18 ವರ್ಷಗಳ ಹಿಂದೆ ‘ಆ ದಿನಗಳು’ ಸಿನಿಮಾ ಮಾಡಿದ್ದೆ. ಆ ಚಿತ್ರದ ರೀತಿಯೇ ಈ ಸಿನಿಮಾ ಮೂಡಿಬರಬೇಕು ಎಂಬ ಆಶಯ ನಿರ್ಮಾಪಕರಿಗೆ ಇತ್ತು. ಆಶಿಷ್ ವಿದ್ಯಾರ್ಥಿ, ಅತುಲ್ ಕುಲಕರ್ಣಿ ಈ ಸಿನಿಮಾದಲ್ಲಿ ಇರಲೇಬೇಕು ಅಂತ ಒತ್ತಾಯಿಸಿದ್ದೇ ನಿರ್ಮಾಪಕರು. ಅವರಿಂದಾಗಿ ಈ ಸಿನಿಮಾ ಉತ್ತಮವಾಗಿ ಮೂಡಿಬಂದಿದೆ’ ಎಂದು ಕೆ.ಎಂ. ಚೈತನ್ಯ ಅವರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹನಿಮೂನ್ ವೇಳೆ ಗಂಡ ರಾಜ ರಘುವಂಶಿಯನ್ನು ಕೊಂದಿದ್ದ ಸೋನಮ್ ರಘುವಂಶಿಗೆ ಸಿಕ್ಕೇ ಬಿಟ್ಟಿತು ಜಾಮೀನು – Kannada News | Raja Raghuvanshi murder accused Sonam Raghuvanshi gets Bail Meghalaya honeymoon case

ಮೇಘಾಲಯ, ಏಪ್ರಿಲ್ 28: ಶಿಲ್ಲಾಂಗ್‌ನ ನ್ಯಾಯಾಲಯವು ಇಂದು ರಾಜ ರಘುವಂಶಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸೋನಮ್ ರಘುವಂಶಿಗೆ (Sonam Raghuvanshi) ಜಾಮೀನು ನೀಡಿದೆ. ಇಂದೋರ್ ಮೂಲದ ಉದ್ಯಮಿ ರಾಜ ರಘುವಂಶಿ ಅವರನ್ನು ಮೇ 2025ರಲ್ಲಿ ಅವರ ಪತ್ನಿ ಸೋನಮ್ ಹಾಗೂ ಇತರೆ ಮೂವರು ಕೊಲೆ ಮಾಡಿದ್ದರು ಎಂದು ಆರೋಪಿಸಲಾಗಿದೆ. ಜಾಮೀನು ನೀಡುವಾಗ ಸೋನಮ್ ರಘುವಂಶಿ ಶಿಲ್ಲಾಂಗ್‌ನಿಂದ ಹೊರಹೋಗಬಾರದು. ಅವರ ಹಾಜರಾತಿಯನ್ನು ಗುರುತಿಸಲು ಪ್ರತಿದಿನ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ಸಹಿ ಹಾಕಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

ಇಂದೋರ್ ಉದ್ಯಮಿ ರಾಜ ರಘುವಂಶಿ ಅವರ ಕೊಲೆಯನ್ನು ಪ್ಲಾನ್ ಮಾಡಿ, ಆತನನ್ನು ಕೊಂದಿದ್ದಕ್ಕಾಗಿ ಸೋನಮ್ ಹಾಗೂ ಆಕೆಯ ಪ್ರೇಮಿ ರಾಜ್ ಕುಶ್ವಾಹ ಮತ್ತು ಇತರ ಮೂವರನ್ನು ಬಂಧಿಸಲಾಗಿದೆ. ಮೇ 20ರಂದು ದಂಪತಿ ತಮ್ಮ ಹನಿಮೂನ್‌ಗಾಗಿ ಗುವಾಹಟಿ ಮತ್ತು ಶಿಲ್ಲಾಂಗ್‌ಗೆ ಹೋಗಿದ್ದರು. ಆದರೆ ಮೇ 23ರಂದು ಅವರಿಬ್ಬರೂ ಕಾಣೆಯಾಗಿದ್ದರು. ಸುಮಾರು 10 ದಿನಗಳ ಹುಡುಕಾಟದ ನಂತರ, ಜೂನ್ 2ರಂದು ಮೇಘಾಲಯದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಸೊಹ್ರಾದಲ್ಲಿನ ಆಳವಾದ ಕಂದಕದಲ್ಲಿ ರಾಜ ರಘುವಂಶಿಯ ಶವ ಪತ್ತೆಯಾಗಿತ್ತು. ನಂತರ ಸೋನಮ್ ಘಾಜಿಪುರದಲ್ಲಿ ಪತ್ತೆಯಾಗಿದ್ದರು. ಇದು ದರೋಡೆಕೋರರ ಕೆಲಸ ಎಂದು ಆಕೆ ಪೊಲೀಸರನ್ನು ನಂಬಿಸಲು ಪ್ರಯತ್ನ ಮಾಡಿದ್ದರು. ಅದಕ್ಕೆ ತಕ್ಕಂತೆ ಪ್ಲಾನ್ ಮಾಡಲಾಗಿತ್ತು. ಆದರೆ, ಪೊಲೀಸರ ತನಿಖೆ ವೇಳೆ ಸೋನಮ್​ಳ ಸಂಚು ಬಯಲಾಗಿತ್ತು.

ಇದನ್ನೂ ಓದಿ: 10 ವರ್ಷಗಳ ಪ್ರೀತಿ, ಹತ್ತಾರು ಬಾರಿ ದೈಹಿಕ ಸಂಬಂಧ: ಈಗ ಮದುವೆ ಮಾತು ಬಂದಾಗ ಯುವಕನಿಂದ ಕೊಲೆ ಬೆದರಿಕೆ

ಸೋನಮ್ ಮತ್ತು ಇತರ ನಾಲ್ವರು ಆರೋಪಿಗಳಾದ ಸೋನಮ್​ಳ ಪ್ರೇಮಿ ರಾಜ್ ಕುಶ್ವಾಹ ಮತ್ತು ಸಹಚರರಾದ ಆಕಾಶ್ ರಜಪೂತ್, ವಿಶಾಲ್ ಸಿಂಗ್ ಚೌಹಾಣ್ ಮತ್ತು ಆನಂದ್ ಕುರ್ಮಿ ​​ಅವರನ್ನು ಬಂಧಿಸಲಾಗಿದ್ದು, ಈಗ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ರಾಜ್ ಕುಶ್ವಾಹ ಜೊತೆಗಿನ ಪ್ರೇಮ ಸಂಬಂಧ ಇಷ್ಟವಿಲ್ಲದ ಸೋನಮ್​ಳ ಕುಟುಂಬಸ್ಥರು ಆಕೆಯನ್ನು ರಾಜ ರಘುವಂಶಿಯೊಂದಿಗೆ ಮದುವೆ ಮಾಡಿದ್ದರು. ಹೀಗಾಗಿ, ಸೋನಮ್ ತನ್ನ ಗಂಡನನ್ನು ಕೊಲೆ ಮಾಡಲು ಪ್ರೇಮಿಯೊಂದಿಗೆ ಸಂಚು ಮಾಡಿದ್ದರು.

ಇದನ್ನೂ ಓದಿ: ಹೆಂಡತಿಯನ್ನು ಕೊಚ್ಚಿ ಕೊಲೆಗೈದು ಮಗುವಿನೊಂದಿಗೆ ಬಾವಿಗೆ ಹಾರಿದ ಗಂಡ; ಸ್ಥಳೀಯರಿಂದ ಮಗುವಿನ ರಕ್ಷಣೆ, ಲಕ್ಷ್ಮೀಪುತ್ರ ಸಾವು!

2025ರ ಈ ಪ್ರಕರಣದ ಟೈಮ್​​ಲೈನ್:

ಮೇ 11: ರಾಜ ರಘುವಂಶಿ ಇಂದೋರ್‌ನಲ್ಲಿ ಸೋನಮ್ ಅವರನ್ನು ವಿವಾಹವಾದರು.

ಮೇ 20: ದಂಪತಿ ತಮ್ಮ ಹನಿಮೂನ್‌ಗಾಗಿ ಶಿಲ್ಲಾಂಗ್ ತಲುಪಿದರು ಮತ್ತು ನಂತರ ಸೊಹ್ರಾಗೆ ತೆರಳಿದರು.

ಮೇ 23: ದಂಪತಿ ನೊಂಗ್ರಿಯಾಟ್ ಹೋಮ್ ಸ್ಟೇಯಿಂದ ಹೊರಬಂದರು. ಅಲ್ಲೇ ರಾಜ ಸಿಸಿಟಿವಿಯಲ್ಲಿ ಕೊನೆಯದಾಗಿ ಜೀವಂತವಾಗಿ ಕಾಣಿಸಿಕೊಂಡಿದ್ದು. ವೀ ಸಾವ್ಡಾಂಗ್ ಜಲಪಾತದ ಬಳಿ ಕೊಲೆ ಅವರನ್ನು ಕೊಲೆ ಮಾಡಲಾಗಿತ್ತು.

ಮೇ 26: ದಂಪತಿ ಕಾಣೆಯಾಗಿದ್ದಾರೆ ಎಂದು ವರದಿಯಾಗಿತ್ತು. ಅವರಿಗಾಗಿ ಶೋಧ ಕಾರ್ಯಾಚರಣೆ ಪ್ರಾರಂಭವಾಯಿತು.

ಮೇ 31: ಗೋಲ್ಡನ್ ಪೈನ್ಸ್ ಧಾಬಾ ಬಳಿ ಅವರು ತೆಗೆದುಕೊಂಡ ಹೋಗಿದ್ದ ಸ್ಕೂಟರ್ ಪತ್ತೆಯಾಗಿತ್ತು.

ಜೂನ್ 2: ಅರ್ಲಿಯಾಂಗ್ ರಿಯಾತ್ ಕುನೊಂಗ್ರಿಮ್‌ನಲ್ಲಿರುವ ಕಣಿವೆಯಲ್ಲಿ ರಾಜ ಅವರ ಛಿದ್ರಗೊಂಡ ಮೃತದೇಹ ಪತ್ತೆಯಾಗಿತ್ತು.

ಜೂನ್ 8-11: ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಸೋನಮ್, ರಾಜ್ ಕುಶ್ವಾಹ ಮತ್ತು ಮೂವರು ಹಲ್ಲೆಕೋರರನ್ನು ಎಸ್‌ಐಟಿ ಬಂಧಿಸಿತು.

ಜೂನ್ 22-25: ಸಾಕ್ಷ್ಯ ನಾಶಕ್ಕಾಗಿ ಮಧ್ಯಪ್ರದೇಶದಲ್ಲಿ ಜೇಮ್ಸ್, ತೋಮರ್ ಮತ್ತು ಅಹಿರ್ವಾರ್ ಅವರನ್ನು ಬಂಧಿಸಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸುಲ್ತಾನಗಂಜ್ ಪುರಸಭೆಯಲ್ಲಿ ಗುಂಡಿನ ದಾಳಿ; ಇಒ ಸಾವು, ಅಧ್ಯಕ್ಷರ ಸ್ಥಿತಿ ಗಂಭೀರ – Kannada News | Bihar Officer died Chairman injured after firing inside the Sultanganj Nagar Parishad office in Bhagalpur

ಭಾಗಲ್ಪುರ, ಏಪ್ರಿಲ್ 28: ಬಿಹಾರದ ಭಾಗಲ್ಪುರ ಜಿಲ್ಲೆಯಲ್ಲಿರುವ ಸುಲ್ತಾನಗಂಜ್ ಪುರಸಭೆ ಕಚೇರಿಯಲ್ಲಿ ಇಂದು ಹಗಲು ಹೊತ್ತಿನಲ್ಲಿಯೇ ಮನಬಂದಂತೆ ಗುಂಡು ಹಾರಿಸಿದ ಘಟನೆ ನಡೆದಿದೆ. ಈ ದಾಳಿಯಲ್ಲಿ ಪುರಸಭೆ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಭೂಷಣ್ ಕುಮಾರ್ ಸಾವನ್ನಪ್ಪಿದ್ದು, ಅಧ್ಯಕ್ಷ ರಾಜ್‌ಕುಮಾರ್ ಗುಡ್ಡು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಇಡೀ ಪ್ರದೇಶದಲ್ಲಿ ಆತಂಕ ಉಂಟುಮಾಡಿತು. ಬುಲೆಟ್ ಬೈಕ್​ಗಳಲ್ಲಿ ಬಂದ ಐವರು ದಾಳಿಕೋರರು ಯಾವುದೇ ಮುನ್ಸೂಚನೆ ನೀಡದೆ ಗುಂಡು (firing) ಹಾರಿಸಿದರು. ಸಿಇಒ ಮತ್ತು ಅಧ್ಯಕ್ಷರ ಮೇಲೆ ಗುಂಡು ಹಾರಿಸಲಾಯಿತು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ಪ್ರಕರಣದ ತನಿಖೆಗಾಗಿ ಹಲವಾರು ತಂಡಗಳನ್ನು ರಚಿಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು ಸೇರಿ 8 ಜಿಲ್ಲೆಗಳಲ್ಲಿ ಮುಂದಿನ 3 ದಿನ ಗುಡುಗು ಸಹಿತ ಭಾರಿ ಮಳೆ ಮುನ್ಸೂಚನೆ! – Kannada News | Karnataka Weather Update: IMD Issues Yellow Alert for South Interior Districts; Heavy Rain Forecasted for April 30 and May 1

ಬೆಂಗಳೂರು, ಏ.28: ರಾಜ್ಯದ ಅನೇಕ ಕಡೆ ಇಂದು (ಏ.28) ಹಲವು ಕಡೆ ಮಳೆಯಾಗಿದೆ. ಕೆಲವೊಂದು ಕಡೆ ಆಲಿಕಲ್ಲು ಮಳೆಯಾಗಿದೆ. ಇನ್ನು ಕೆಲವು ಭಾಗದಲ್ಲಿ ಬಿಸಿಲಿನ ಬಿಸಿ ಇತ್ತು. ಇದೀಗ ಈ ಬಿಸಿಲಿನ ಬಿಸಿಲಿನ ಬೇಗೆಯಿಂದ ಮುಕ್ತಿ ಸಿಗುವ ಮುನ್ಸೂಚನೆ ಸಿಕ್ಕಿದೆ. ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ವರದಿಯ ಪ್ರಕಾರ, ಏಪ್ರಿಲ್ ಅಂತ್ಯ ಹಾಗೂ ಮೇ ತಿಂಗಳ ಆರಂಭದಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಏಪ್ರಿಲ್ 30 ಮತ್ತು ಮೇ 1 ರಂದು ಮಳೆ ಅಬ್ಬರ ಹೆಚ್ಚಿರಲಿದೆ. ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ. ಸುಮಾರು 64.5mm ನಿಂದ 115.5mm ವರೆಗೆ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಹವಾಮಾನ ಇಲಾಖೆಯು ಈ ಭಾಗಗಳಿಗೆ #ಎಲ್ಲೋಅಲರ್ಟ್ (Yellow Alert) ನೀಡಿದೆ.

ಯಾವ ಜಿಲ್ಲೆಗಳಿಗೆ ಮಳೆ ಸಾಧ್ಯತೆ?

ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ಮತ್ತು ರಾಮನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಏಪ್ರಿಲ್ 29 ರಂದು ಕೆಲವು ಕಡೆ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.

ಏಪ್ರಿಲ್ 29 ರವರೆಗೆ ಬಿಸಿಲಿನ ತಾಪ ಹೆಚ್ಚಿದ್ದರೂ, ಏಪ್ರಿಲ್ 30 ರಿಂದ ಮಳೆಯ ಕಾರಣ ತಾಪಮಾನದಲ್ಲಿ ಗಣನೀಯ ಇಳಿಕೆಯಾಗಲಿದೆ. ಮೇ 1 ರ ವೇಳೆಗೆ ವಾತಾವರಣ ಸಾಕಷ್ಟು ತಂಪಾಗಲಿದೆ. ಮಳೆಯ ಮುನ್ಸೂಚನೆ ಇರುವುದರಿಂದ ಗಾಳಿಯಲ್ಲಿ ತೇವಾಂಶ ಹೆಚ್ಚಿರಲಿದೆ. ಇದರಿಂದ ಮಳೆಗೆ ಮುನ್ನ ಸೆಖೆ ಮತ್ತು ಮಳೆಯ ನಂತರ ತಂಪು ಅನುಭವವಾಗಲಿದೆ. ಗುಡುಗು ಸಹಿತ ಮಳೆಯಾಗುವ ಸಂದರ್ಭದಲ್ಲಿ ಗಾಳಿಯ ವೇಗ ಹೆಚ್ಚಿರಲಿದ್ದು, ಗಂಟೆಗೆ 30 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ.

ಇದನ್ನೂ ಓದಿ: ಇದು ರಾಷ್ಟ್ರೀಯ ಹೆದ್ದಾರಿಯೋ ಅಥವಾ ಕೆಸರು ಗದ್ದೆಯೋ? ಶಿರಸಿ-ಹಾವೇರಿ ರಸ್ತೆಯಲ್ಲಿ ನರಕಯಾತನೆ

ಇನ್ನು ಈ ವೇಳೆ ಸಾರ್ವಜನಿಕರಿಗೆ ಕೆಲವೊಂದು ಎಚ್ಚರಿಕೆ ಕ್ರಮಗಳನ್ನು ವಹಿಸಿಕೊಳ್ಳುವಂತೆ ಸಲಹೆಯನ್ನು ನೀಡಲಾಗಿದೆ. ಗುಡುಗು-ಮಿಂಚಿನ ಸಮಯದಲ್ಲಿ ಟಿವಿ, ಫ್ರಿಡ್ಜ್ ಅಂತಹ ವಿದ್ಯುತ್ ಉಪಕರಣಗಳ ಪ್ಲಗ್ ತೆಗೆಯಿರಿ. ಏಪ್ರಿಲ್ 30 ಮತ್ತು ಮೇ 1 ರಂದು ಭಾರಿ ಮಳೆಯಿಂದಾಗಿ ನಗರ ಪ್ರದೇಶಗಳಲ್ಲಿ (ವಿಶೇಷವಾಗಿ ಬೆಂಗಳೂರಿನಲ್ಲಿ) ರಸ್ತೆಗಳಲ್ಲಿ ನೀರು ನಿಲ್ಲುವ ಸಾಧ್ಯತೆ ಇದೆ, ಸಂಚಾರದ ವೇಳೆ ಜಾಗರೂಕರಾಗಿರಿ. ರೈತರು ಕೊಯ್ಲು ಮಾಡಿದ ಬೆಳೆಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಟ್ಟುಕೊಳ್ಳಲು ಇದು ಸೂಕ್ತ ಸಮಯ ಎಂದು ಹೇಳಿದ್ದಾರೆ.

ಬೆಂಗಳೂರು ನಗರದ ಹಲವೆಡೆ ಮಳೆ

ಪೀಣ್ಯ, ರಾಜಗೋಪಾಲನಗರ, ಮಾಗಡಿ ರಸ್ತೆಯಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ಬಿರು ಬಿಸಿಲಿನಿಂದ ಬಳಲಿದ್ದ ಬೆಂಗಳೂರು ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಪೀಣ್ಯಾ, ರಾಜಗೋಪಾಲನಗರ, ಮಾಗಡಿ ರೋಡ್ ಬಳಿ ಆಲಿಕಲ್ಲು ಸಹಿತ ಮಳೆಯಾಗಿದೆ.

ಬೆಂಗಳೂರು ಗ್ರಾಮಾಂತರ: ಸಿಡಿಲು ಬಡಿದು ಲಕ್ಷಾಂತರ ಮೌಲ್ಯದ ಹಸು ಸಾವು

ಸಿಡಿಲಿನ ಆರ್ಭಟಕ್ಕೆ ಮೂಕಪ್ರಾಣಿಗಳು ಬಲಿಯಾಗುತ್ತಿವೆ. ಸೋಂಪುರ ಹೋಬಳಿಯ ಮರಳಕುಂಟೆ ಗ್ರಾಮದಲ್ಲಿ ಮರಕ್ಕೆ ಕಟ್ಟಿದ್ದ ಹಸುವಿನ ಮೇಲೆ ಸಿಡಿಲು ಬಡಿದು, ಸ್ಥಳದಲ್ಲೇ ಮೃತಪಟ್ಟಿರುವ ಆಘಾತಕಾರಿ ಘಟನೆ ನಡೆದಿದೆ. ಮರಳಕುಂಟೆ ಗ್ರಾಮದ ನಿವಾಸಿ, ರೈತ ವೀರಣ್ಣ ಅವರಿಗೆ ಸೇರಿದ ಹಸು ಇದಾಗಿದೆ. ವೀರಣ್ಣ ಅವರು ಎಂದಿನಂತೆ ತಮ್ಮ ಮನೆಯ ಮುಂದಿನ ಹಲಸಿನ ಮರದ ಕೆಳಗೆ ಹಸುವನ್ನು ಕಟ್ಟಿದ್ದರು. ಈ ವೇಳೆ ನಗರದಾದ್ಯಂತ ಗುಡುಗು ಸಹಿತ ಭಾರಿ ಮಳೆ ಸುರಿಯುತ್ತಿತ್ತು. ತೀವ್ರವಾಗಿ ಸಂಭವಿಸಿದ ಸಿಡಿಲಿನ ಹೊಡೆತಕ್ಕೆ ಹಲಸಿನ ಮರದ ಕೆಳಗೆ ಆಶ್ರಯ ಪಡೆದಿದ್ದ ಹಸು ಬಲಿಯಾಗಿದೆ. ಮೃತಪಟ್ಟ ಹಸುವಿನ ಮೌಲ್ಯ ಸುಮಾರು 80 ಸಾವಿರದಿಂದ 1 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ತನ್ನ ಇಡೀ ಕುಟುಂಬಕ್ಕೆ ಆಸರೆಯಾಗಿದ್ದ ಹಸುವನ್ನು ಕಳೆದುಕೊಂಡ ರೈತ ವೀರಣ್ಣ ಇದೀಗ ಆತಂಕ ಮತ್ತು ಆಘಾತಕ್ಕೆ ಒಳಗಾಗಿದ್ದಾರೆ. ಘಟನೆ ನಡೆದ ಬೆನ್ನಲ್ಲೇ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಮರಳಕುಂಟೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಹಸುವನ್ನು ಪಶುವೈದ್ಯರು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು, ವರದಿ ಬಂದ ನಂತರ ರೈತರಿಗೆ ಸರ್ಕಾರದಿಂದ ಸಿಗಬೇಕಾದ ಪರಿಹಾರದ ಬಗ್ಗೆ ಮಾಹಿತಿ ಲಭ್ಯವಾಗಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ನಡೆದ ರಕ್ಷಣಾ ಕಾರ್ಯಾಚರಣೆಯ ಅಣಕು ಪ್ರದರ್ಶನ ಹೇಗಿತ್ತು ನೋಡಿ

ಬೆಂಗಳೂರು, ಏಪ್ರಿಲ್​​ 28: ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಬೆಂಗಳೂರಿನಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಡಿಜಿ ಕಚೇರಿ ಮೈದಾನದಲ್ಲಿ ಮಾಕ್​ಡ್ರಿಲ್ ನಡೆಸಲಾಗಿದೆ. ಅಣಕು ಪ್ರದರ್ಶನದಲ್ಲಿ ಅಗ್ನಿಶಾಮಕ ದಳ, ಗೃಹರಕ್ಷಕ ದಳ, ಸಿವಿಲ್ ಡಿಫೆನ್ಸ್​​ ಭಾಗಿಯಾಗಿದ್ದವು. ತುರ್ತು ಸಂದರ್ಭ ಅಥವಾ ಏರ್​ಸ್ಟ್ರೈಕ್ ಆದಾಗ ಪರಿಸ್ಥಿತಿ ಎದುರಿಸಲು ಯಾವ ರೀತಿ ಸನ್ನದ್ಧರಾಗಬೇಕೆಂದು ಮಾಹಿತಿ ನೀಡಲಾಯಿತು. ಏರ್​ಸ್ಟ್ರೈಕ್ ಸಂದರ್ಭದಲ್ಲಿ ಸೈರನ್ ಮೊಳಗಿದ ತಕ್ಷಣ ಮತ್ತು ರೆಡ್​ಅಲರ್ಟ್ ಸೈರನ್ ಮೊಳಗಿದ ಕೂಡಲೇ ಸುರಕ್ಷಿತ ಜಾಗಕ್ಕೆ ಜನರನ್ನು ಹೇಗೆ ಸ್ಥಳಾಂತರ ಮಾಡಬೇಕೆಂದು ತಿಳಿಸಿಕೊಡಲಾಯಿತು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Important Days In May 2026: ಮೇ ತಿಂಗಳ ಪ್ರಮುಖ ರಾಷ್ಟ್ರೀಯ-ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ – Kannada News | Important Days In May 2026: What are the important national and international days celebrated in the month of May

ಧಾರ್ಮಿಕ ಹಬ್ಬ, ಹರಿದಿನಗಳನ್ನು ಆಚರಿಸುವಂತೆ ಪ್ರತಿ ತಿಂಗಳು ಸಹ ಒಂದಷ್ಟು ಪ್ರಮುಖ ರಾಷ್ಟ್ರೀಯ ಅಂತಾರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಲಾಗುತ್ತದೆ. ಒಂದೊಂದು ಉದ್ದೇಶ, ಧ್ಯೇಯವಾಕ್ಯಗಳನ್ನು ಇಟ್ಟುಕೊಂಡು ಜನ ಜಾಗೃತಿಯನ್ನು ಮೂಡಿಸುವ ಸಲುವಾಗಿ ಈ ದಿನಾಚರಣೆಗಳನ್ನು ಆಚರಿಸಲಾಗುತ್ತದೆ. ಇನ್ನೇನೂ ವರ್ಷದ 5 ನೇ ತಿಂಗಳಾದ ಮೇ (May) ಆರಂಭವಾಗುತ್ತಿದ್ದು, ಈ ತಿಂಗಳಲ್ಲಿ ಯಾವೆಲ್ಲಾ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ ಎಂಬುದನ್ನು ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ.

ಮೇ ತಿಂಗಳಲ್ಲಿನ ರಾಷ್ಟ್ರೀಯ ಅಂತಾರಾಷ್ಟ್ರೀಯ ಕಾರ್ಯಕ್ರಮಗಳು:

  • ಮೇ 1 – ಕಾರ್ಮಿಕರ ದಿನ
  • ಮೇ 1 – ಬುದ್ಧ ಪೂರ್ಣಿಮೆ
  • ಮೇ 3 – ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ
  • ಮೇ 3 – ವಿಶ್ವ ನಗು ದಿನ
  • ಮೇ 4 – ಅಂತರರಾಷ್ಟ್ರೀಯ ಅಗ್ನಿಶಾಮಕ ದಳದವರ ದಿನ
  • ಮೇ 5 – ವಿಶ್ವ ಆಸ್ತಮಾ ದಿನ
  • ಮೇ 7 – ವಿಶ್ವ ಅಥ್ಲೆಟಿಕ್ಸ್ ದಿನ
  • ಮೇ 8 – ವಿಶ್ವ ರೆಡ್ ಕ್ರಾಸ್ ದಿನ
  • ಮೇ 8 – ವಿಶ್ವ ಥಲಸ್ಸೆಮಿಯಾ ದಿನ
  • ಮೇ 10 – ತಾಯಂದಿರ ದಿನ
  • ಮೇ 11 – ರಾಷ್ಟ್ರೀಯ ತಂತ್ರಜ್ಞಾನ ದಿನ
  • ಮೇ 12 – ಅಂತರರಾಷ್ಟ್ರೀಯ ದಾದಿಯರ ದಿನ
  • ಮೇ 15 – ಅಂತರರಾಷ್ಟ್ರೀಯ ಕುಟುಂಬಗಳ ದಿನ
  • ಮೇ 17 – ವಿಶ್ವ ಅಧಿಕ ರಕ್ತದೊತ್ತಡ ದಿನ
  • ಮೇ 17 – ವಿಶ್ವ ದೂರಸಂಪರ್ಕ ದಿನ
  • ಮೇ 17 – ಸಶಸ್ತ್ರ ಪಡೆಗಳ ದಿನ
  • ಮೇ 18 – ವಿಶ್ವ ಏಡ್ಸ್ ಲಸಿಕೆ ದಿನ
  • ಮೇ 18 – ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನ
  • ಮೇ 21 – ಅಂತರರಾಷ್ಟ್ರೀಯ ಚಹಾ ದಿನ
  • ಮೇ 21 – ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನ
  • ಮೇ 22 – ಅಂತರರಾಷ್ಟ್ರೀಯ ಜೈವಿಕ ವೈವಿಧ್ಯತೆ ದಿನ
  • ಮೇ 24 – ರಾಷ್ಟ್ರೀಯ ಸಹೋದರರ ದಿನ
  • ಮೇ 26 – ರಾಷ್ಟ್ರೀಯ ಸ್ಮಾರಕ ದಿನ
  • ಮೇ 28 – ಮುಟ್ಟಿನ ನೈರ್ಮಲ್ಯ ದಿನ
  • ಮೇ 31 – ವಿಶ್ವ ತಂಬಾಕು ರಹಿತ ದಿನ

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link