All posts by nagaraj11081993

IND vs NZ: ಅಭಿಷೇಕ್ ಅಬ್ಬರಕ್ಕೆ ಮೊದಲ ಓವರ್​ನಲ್ಲೇ ಆಕಾರ ಕಳೆದುಕೊಂಡ ಚೆಂಡು – Kannada News | Abhishek Sharma’s Power Six Forces Ball Change in IND vs NZ T20 Final

ಭಾರತ ಮತ್ತು ನ್ಯೂಜಿಲೆಂಡ್ (India vs New Zealand) ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಕೊನೆಯ ಮತ್ತು ಐದನೇ ಪಂದ್ಯ ತಿರುವನಂತಪುರಂನ ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಅದರಂತೆ ಭಾರತದ ಪರ ಇನ್ನಿಂಗ್ಸ್ ಆರಂಭಿಸಿದ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ (Abhishek Sharma) ಆರಂಭದಿಂದಲೇ ಹೊಡಿಬಡಿ ಆಟಕ್ಕೆ ಮುಂದಾದರು. ಅದರಲ್ಲೂ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಲು ಯತ್ನಿಸುವ ಅಭಿಷೇಕ್ ಈ ಪಂದ್ಯದ ಮೊದಲೆರಡು ಎಸೆತಗಳಲ್ಲಿ ರನ್ ಬಾರಿಸಲಿಲ್ಲ. ಆದರೆ ಮೂರನೇ ಎಸೆತದಲ್ಲಿ ಭರ್ಜರಿ ಸಿಕ್ಸರ್ ಬಾರಿಸುವಲ್ಲಿ ಯಶಸ್ವಿಯಾದರು. ಜಾಕೋಬ್ ಡಫಿ ಎಸೆದ ಈ ಎಸೆತವನ್ನು ಸಿಕ್ಸರ್​ಗಟ್ಟುವ ಮೂಲಕ ಅಭಿಷೇಕ್ ತಮ್ಮ ಖಾತೆ ತೆರೆದರು. ಆದರೆ ಅಭಿಯ ಈ ಪವರ್​ಫುಲ್​ ಶಾಟ್​ನಿಂದಾಗಿ ಅಂಪೈರ್​ಗಳು ಮೊದಲ ಓವರ್​ನಲ್ಲೇ ಚೆಂಡನ್ನು ಬದಲಿಸಬೇಕಾಯಿತು.

ಚೆಂಡಿನ ಆಕಾರವೇ ಬದಲಾಯ್ತು

ಅಭಿಷೇಕ್ ಶರ್ಮಾ ಈ ಸರಣಿಯಲ್ಲಿ ಮತ್ತೊಮ್ಮೆ ಸಿಕ್ಸರ್ ಬಾರಿಸುವ ಮೂಲಕ ತಮ್ಮ ಖಾತೆಯನ್ನು ತೆರೆದರು. ಜಾಕೋಬ್ ಡಫಿ ಮೂರನೇ ಎಸೆತವನ್ನು ಅಭಿಷೇಕ್ ಕವರ್ಸ್​ ದಿಕ್ಕಿನಲ್ಲಿ ಆಡುವ ಮೂಲಕ ಭರ್ಜರಿ ಸಿಕ್ಸರ್ ಬಾರಿಸಿದರು. ಇತ್ತ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಕೂಡ ಹುಚ್ಚೆದು ಕುಣಿಯಲಾರಂಭಿಸಿದರು. ಆದರೆ ಈ ಅದ್ಭುತ ಸಿಕ್ಸರ್ ನಂತರ ಚೆಂಡನ್ನು ಬದಲಿಸಬೇಕಾಯಿತು. ಏಕೆಂದರೆ ಅಭಿಷೇಕ್ ತೋಳ್ಬಲಕ್ಕೆ ಸಿಲುಕಿದ ಚೆಂಡು ತನ್ನ ಆಕಾರವನ್ನು ಕಳೆದುಕೊಂಡಿತ್ತು. ವಾಸ್ತವವಾಗಿ ಅಭಿ ಬಾರಿಸಿದ ಚೆಂಡು ಬೌಂಡರಿಯಿಂದಾಚೆಗಿನ ಕಾಂಕ್ರೀಟ್ ಅಥವಾ ಗಟ್ಟಿಯಾದ ಮೇಲ್ಮೈಗೆ ಬಡಿದು ಅದರ ಆಕಾರವನ್ನು ಕಳೆದುಕೊಂಡಿತ್ತು. ಹೀಗಾಗಿ ಚೆಂಡನ್ನು ಪರೀಕ್ಷಿಸಿದ ಅಂಪೈರ್‌ಗಳು ಚೆಂಡನ್ನು ಬದಲಿಸುವ ನಿರ್ಧಾರಕ್ಕೆ ಬಂದರು.

IND vs NZ: ಗುರುವಿಗೆ ತಕ್ಕ ಶಿಷ್ಯ; 2ನೇ ಅತಿ ವೇಗದ ಅರ್ಧಶತಕ ಬಾರಿಸಿದ ಅಭಿಷೇಕ್

30 ರನ್​ಗಳಿಗೆ ಅಭಿ ಇನ್ನಿಂಗ್ಸ್ ಅಂತ್ಯ

ನಿಯಮಗಳ ಪ್ರಕಾರ, ಪಂದ್ಯದಲ್ಲಿ ಬಳಸುವ ಚೆಂಡಿನ ಆಕಾರ ಬದಲಾದರೆ, ಅದನ್ನು ಬದಲಾಯಿಸಬೇಕು. ಅದರಂತೆ ಅಂಪೈರ್‌ಗಳು ತಕ್ಷಣ ಹೊಸ ಚೆಂಡನ್ನು ತರಲು ನಿರ್ಧರಿಸಿದರು, ಇದರಿಂದಾಗಿ ಆಟವನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಲಾಯಿತು. ಪಂದ್ಯದ ಆರಂಭಿಕ ಓವರ್‌ನಲ್ಲಿ ಈ ಘಟನೆ ಸಂಭವಿಸಿದರಿಂದ ಅಭಿಮಾನಿಗಳು ಅಚ್ಚರಿಗೊಂಡರು. ಆ ಬಳಿಕ ತಮ್ಮ ಸ್ಫೋಟಕ ಇನ್ನಿಂಗ್ಸ್ ಮುಂದುವರಿಸಿದ ಅಭಿಷೇಕ್ ಶರ್ಮಾ ಮೊದಲ ಓವರ್‌ನಲ್ಲಿ ಒಂದು ಸಿಕ್ಸ್ ಮತ್ತು ಎರಡು ಬೌಂಡರಿಗಳನ್ನು ಒಳಗೊಂಡಂತೆ 14 ರನ್ ಗಳಿಸಿದರು. ಆದಾಗ್ಯೂ ಅವರಿಗೆ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಅಭಿ 16 ಎಸೆತಗಳಲ್ಲಿ 14 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 30 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಐಪಿಎಸ್ ಅಧಿಕಾರಿಗಳಿಗೆ ಹೊಸ ನಿಯಮ; ಕೇಂದ್ರದಲ್ಲಿ ಐಜಿಯಾಗಲು ಎರಡು ವರ್ಷ ಕೇಂದ್ರೀಯ ಸೇವೆ ಕಡ್ಡಾಯ – Kannada News | MHA mandates two year Central stint as SP or DIG for IPS officers aiming IG rank

ನವದೆಹಲಿ, ಜನವರಿ 31: ಐಪಿಎಸ್ ಅಧಿಕಾರಿಗಳು ಕೇಂದ್ರದಲ್ಲಿ ಐಜಿ ಮಟ್ಟದ ಅಧಿಕಾರಿಯಾಗಲು ಕನಿಷ್ಠ ಎರಡು ವರ್ಷ ಎಸ್​ಪಿ ಅಥವಾ ಡಿಐಜಿ ಮಟ್ಟದಲ್ಲಿ ಕೇಂದ್ರೀಯ ಸೇವೆ ಪೂರ್ಣಗೊಳಿಸುವುದು (central deputation) ಕಡ್ಡಾಯ. ಹೀಗೊಂದು ಹೊಸ ನಿಯಮವನ್ನು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ (Ministry of Home Affairs) ಮಾಡಿದೆ. ಜನವರಿ 28ರಂದು ಹೊರಡಿಸಲಾದ ಈ ಮಾರ್ಗಸೂಚಿ ಪ್ರಕಾರ 2011, ಹಾಗೂ ನಂತರದ ಬ್ಯಾಚ್ ಅಧಿಕಾರಿಗಳಿಗೆ ಹೊಸ ನಿಯಮ ಅನ್ವಯ ಆಗುತ್ತದೆ.

ರಾಷ್ಟ್ರಮಟ್ಟದ ಜವಾಬ್ದಾರಿ ನಿಭಾಯಿಸಬಲ್ಲಂತಹ ಅಧಿಕಾರಿಗಳ ಸಮೂಹ ನಿರ್ಮಿಸುವುದು ಸರ್ಕಾರದ ಉದ್ದೇಶ ಎನ್ನಲಾಗಿದೆ. ಹೊಸ ನಿಯಮದಿಂದ ಅಧಿಕಾರಿಗಳು ಹಿರಿಯ ನಾಯಕತ್ವದ ಪಾತ್ರಕ್ಕೆ ಬೇಕಾದ ಕೇಂದ್ರೀಯ ಅನುಭವವನ್ನು ಪಡೆಯಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ರವಿದಾಸ್ ಜಯಂತಿ: ಬಾಂಬ್ ಬೆದರಿಕೆ ನಡುವೆ ಇಂದು ಪ್ರಧಾನಿ ಮೋದಿ ಪಂಜಾಬ್ ಭೇಟಿ; ಅದಂಪುರ್ ಏರ್ಪೋರ್ಟ್​ಗೆ ಗುರು ರವಿದಾಸ್ ಹೆಸರು

ಕೇಂದ್ರ ಮಟ್ಟದಲ್ಲಿ ಅನುಭವ ಇಲ್ಲದ ಐಪಿಎಸ್ ಅಧಿಕಾರಿಗಳು ಪೊಲೀಸ್ ಮಹಾನಿರ್ದೇಶಕ ಅಥವಾ ಐಜಿ ಮಟ್ಟದ ಹುದ್ದೆ ಏರುತ್ತಿದ್ದರು. ಇದರಿಂದ ಕೇಂದ್ರೀಯ ಮಟ್ಟದಲ್ಲಿ ಪೊಲೀಸ್ ವ್ಯವಸ್ಥೆ, ಗುಪ್ತಚರ ಮತ್ತು ಭದ್ರತೆಯನ್ನು ನಿಭಾಯಿಸಲು ಕಷ್ಟವಾಗುತ್ತಿರುವ ಕಾರಣ ಈ ಸುಧಾರಣಾ ಕ್ರಮ ಜಾರಿಗೆ ತರಲಾಗಿದೆ.

ಐಪಿಎಸ್ ಅಧಿಕಾರಿಗಳು ಸಿಎಪಿಎಫ್ ಮತ್ತಿತರ ಕೇಂದ್ರೀಯ ಹುದ್ದೆಗಳಲ್ಲಿ ಅನುಭವ ಹೊಂದಿದ ನಂತರ ಐಜಿಯಾಗಬೇಕಾಗುತ್ತದೆ.

ಇದನ್ನೂ ಓದಿ: ಸುನೇತ್ರಾ ಪವಾರ್ ಉಪಮುಖ್ಯಮಂತ್ರಿಯಾಗಿ ಅಧಿಕಾರ; ಮಹಾರಾಷ್ಟ್ರಕ್ಕೆ ಮೊತ್ತಮೊದಲ ಮಹಿಳಾ ಡಿಸಿಎಂ

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಹೊರಡಿಸಿರುವ ಈ ಅಧಿಸೂಚನೆಯು ಎಲ್ಲಾ ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಕಳುಹಿಸಲಾಗಿದೆ. ಕೇಂದ್ರಾಡಳಿತ ಪ್ರದೇಶಗಳ ಅಧೀನ ಕಾರ್ಯದರ್ಶಿಗಳಿಗೂ ಕಳುಹಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಜಮೀನು ವಿಚಾರಕ್ಕೆ ದಾಯಾದಿ ಕಲಹ: ಹಿಂಬದಿಯಿಂದ ಚಾಕು ಇರಿದು ಬರ್ಬರವಾಗಿ ವ್ಯಕ್ತಿಯ ಕೊಲೆ – Kannada News | Kalaburagi Land Dispute: Family Feud Ends in Brutal Stabbing Murder

ಕಲಬುರಗಿ, ಜನವರಿ 31: ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ದಾಯಾದಿ ಕಲಹ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಹಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಬಸವರಾಜ್ ತಳವಾರ ಮೃತ ದುರ್ದೈವಿಯಾಗಿದ್ದು, ಮೃತನ ದೊಡ್ಡಪ್ಪನ ಮಗ ಗೂಳೇಶ್​​ ಎಂಬವನೇ ಕೊಲೆ ಆರೋಪಿಯಾಗಿದ್ದಾನೆ. ಘಟನೆ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದು, ಗೂಳೆಶ್​​ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಸಿಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದ ಬಸವರಾಜ್ ಹೆಂಡತಿ ಜೊತೆ ಊಟ ಮಾಡಿ ಕೂತಿದ್ದರು. ಈ ವೇಳೆ ಸ್ನೇಹಿತರಿಂದ ಕರೆ ಬಂದ ಹಿನ್ನೆಲೆ ಮನೆಯಿಂದ ಆಚೆ ಬಂದು ಅಂಗಡಿಯ ಬಳಿ ಗೆಳೆಯರ ಜೊತೆ ಬಸವರಾಜ್​​ ಮಾತಾಡಿಕೊಂಡಿದ್ದರು. ಈ ವೇಳೆ ಅಲ್ಲಿಗೆ ಬಂದ ಗೂಳೇಶ್,​​​​ ಅನ್ನ ಇಲ್ಲದಿದ್ರು ದೊಡ್ಡ ದೊಡ್ಡ ಮಾತು ಹೇಳ್ತೀಯಾ? ಜಮೀನು ಮಾರಾಟ ವಿಚಾರದಲ್ಲಿ ಎಂಟ್ರಿ ಕೊಡ್ತೀಯಾ? ಅಂತಾ ಬೈಯೋದಕ್ಕೆ ಶುರು ಮಾಡಿದ್ದಾನೆ‌. ಬಸವರಾಜ್ ಮೇಲಿನ ಕೋಪಕ್ಕೆ ಆತನ ಸ್ನೇಹಿತನ ಜೊತೆಯೂ ಗಲಾಟೆ ತೆಗೆದು ಹಲ್ಲೆ ಮಾಡಿದ್ದಾನೆ. ಹೀಗಾಗಿ ತಕ್ಷಣ ಅಲ್ಲಿದ್ದವರು ಬಸವರಾಜ್​​ಗೆ ಮನೆಗ ಹೋಗುವಂತೆ ಹೇಳಿದ್ದಾರೆ. ಅವರು ಕೂಡ ಮನೆಯತ್ತ ಹೆಜ್ಜೆ ಹಾಕಿದ್ದು, ಈ ವೇಳೆ ಹಿಂದಿನಿಂದ ಬಂದ ಆರೋಪಿ ಚಾಕುವಿನಿಂದ ಎರಡ್ಮೂರು ಬಾರಿ ಬಸವರಾಜ್​​ಗೆ ಇರಿದಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಸವರಾಜ್ ತನ್ನ ಸಹೋದರ ಮತ್ತು ಚಿಕ್ಕಪ್ಪಂದಿರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ‌. ತಕ್ಷಣ ಸ್ಥಳಕ್ಕೆ ಬಂದವರೆ ಆತನನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಯತ್ನಿಸಿದರೂ ಅಷ್ಟರಲ್ಲಾಗಲೇ ಬಸವರಾಜ್ ಉಸಿರು ಚೆಲ್ಲಿದ್ದರು.

ಇದನ್ನೂ ಓದಿ: ತನ್ನ ತಂದೆ-ತಾಯಿ, ಸಹೋದರಿಯನ್ನು ಕೊಂದ ಯುವಕ; ಮಿಸ್ಸಿಂಗ್ ಕೇಸ್ ಕೊಡಲು ಹೋಗಿ ಸತ್ಯ ಕಕ್ಕಿದ ಭೂಪ!

ಇನ್ನು ಕೊಲೆಯಾದ ಬಸವರಾಜ್ ಮತ್ತು ಗೂಳೇಶ್ ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳು. ಬಸವರಾಜ್ ತಂದೆ-ತಾಯಿ ಮೃತರಾದ ಬಳಿಕ ಬಸವರಾಜ್ ಸಹೋದರರನ್ನ ಗೂಳೇಶ್ ತಂದೆ-ತಾಯಿಯೇ ಸಾಕಿದ್ದು, ಮದುವೆಯನ್ನೂ ಮಾಡಿದ್ದರು. ಆದ್ರೆ ಮದುವೆ ಖರ್ಚು ಅದು ಇದು ಅಂತಾ ಸಾಕಷ್ಟು ಸಾಲ ಆಗಿದೆ. ಹೀಗಾಗಿ ಬಸವರಾಜ್ ಪಾಲಿನ ಜಮೀನು ನಾವೇ ಖರಿದಿ ಮಾಡಿ ಸಾಲ ತೀರಿಸುತ್ತೇವೆ ಎಂದು ಗೂಳೇಶ್​​ ಕುಟುಂಬ ಹೇಳಿತ್ತು. ಬಸವರಾಜ್ ಪತ್ನಿ ಸ್ವಲ್ಪ ಓದು ಬರಹ ಗೊತ್ತಿದ್ದವರಾಗಿದ್ದು, ಇವರು ಮೋಸ ಮಾಡಿ ನಮ್ಮ ಜಮೀನು ಲಪಟಾಯಿಸೋದಕ್ಕೆ ಮುಂದಾಗಿದ್ದಾರೆ ಅಂತಾ ಗಂಡನಿಗೆ ಹೇಳಿದ್ದರು. ಹೀಗಾಗಿ ಮನೆಯಿಂದ ಆಚೆ ಬಂದು ಇವರು ವಾಸ ಮಾಡುತ್ತಿದ್ದರು. ಇದ್ರಿಂದ ಕೆರಳಿ ಕೆಂಡವಾಗಿ ಬಸವರಾಜ್ ಮೇಲೆ ಹಲ್ಲೆ ಮಾಡಿ ಗೂಳೇಶ್​​ ಒಮ್ಮೆ ಪೊಲೀಸ್ ಠಾಣೆಯ ಮೆಟ್ಟಿಲೇರಿ ಬಂದಿದ್ದ. ಅದಾದ ಬಳಿಕವೂ ಪದೇ ಪದೇ ಬಸವರಾಜ್ ಜೊತೆ ಗಲಾಟೆ ಮಾಡ್ತಿದ್ದ. ಕೆಲ ತಿಂಗಳ ಹಿಂದೆ ಈ ಗೂಳೇಶ್​​ನ ಮತ್ತೊಬ್ಬ ಚಿಕ್ಕಪ್ಪ ಕೂಡ ಜಮೀನು ಮಾರಾಟ ಮಾಡೋದಕ್ಕೆ ಮುಂದಾಗಿದ್ದರು. ಆ ಜಮೀನನ್ನು ಕಡಿಮೆದರಲ್ಲಿ ಖರೀದಿಸಲು ಆರೋಪಿಯ ಕುಟುಂಬ ನಿರ್ಧರಿಸಿತ್ತು. ಆದರೆ ಅದಾಗಲೇ ಅವರು ಬೇರೆಯವರಿಗೆ ಜಮೀನು ಮಾರಲು ಒಪ್ಪಿ ಮುಂಗಡ ಹಣವನ್ನೂ ಪಡೆದಿದ್ದರು. ಚಿಕ್ಕಪ್ಪನ ಬೆಂಬಲಕ್ಕೆ ಬಸವರಾಜ್​​​​ ಕೂಡ ನಿಂತಿದ್ದರು. ಈ ವಿಚಾರವಾಗಿಯೂ  ಗೂಳೇಶ್​​ಗೆ ಸಿಟ್ಟಿತ್ತು ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಈ ವಾರ ಒಟಿಟಿಗೆ ಬಂದಿವೆ ಭರ್ಜರಿ ಸಿನಿಮಾಗಳು: ನೀವೂ ನೋಡಿ – Kannada News | OTT Release this week from January 25 to January 31

ಬಾಕ್ಸ್ ಆಫೀಸ್​​ನಲ್ಲಿ ಹಲವು ಹೊಸ ದಾಖಲೆಗಳನ್ನೇ ಬರೆದಿರುವ 2025ರ ಬ್ಲಾಕ್ ಬಸ್ಟರ್ ಸಿನಿಮಾ ‘ಧುರಂಧರ್’ ಈ ವಾರ ಒಟಿಟಿಗೆ ಬಂದಿದೆ. ನೆಟ್​​ಫ್ಲಿಕ್ಸ್​​ನಲ್ಲಿ ಸಿನಿಮಾ ಈಗಾಗಲೇ ಬಿಡುಗಡೆ ಆಗಿದ್ದು, ಚಿತ್ರಮಂದಿರಗಳ ರೀತಿಯೇ ಭರ್ಜರಿಯಾಗಿಯೇ ಸದ್ದು ಮಾಡುತ್ತಿದೆ.

Source link

‘ಉತ್ತರಕಾಂಡ’ ಸಿನಿಮಾ ನಿಂತಿದ್ದು ಏಕೆ? ಮುಂದೇನು? ಡಾಲಿ ಧನಂಜಯ್ ಉತ್ತರ – Kannada News | Is Uttarakaanda movie stopped Daali Dhanajay gave answer

ಡಾಲಿ ಧನಂಜಯ್ (Daali Dhananjay) ಸಿನಿಮಾ ವೃತ್ತಿ ಜೀವನದಲ್ಲಿ ‘ರತ್ನನ್ ಪ್ರಪಂಚ’ ಒಂದು ಅಪರೂಪದ ಮತ್ತು ಅತ್ಯುತ್ತಮ ಸಿನಿಮಾ ಸಹ ಹೌದು. ಆ ಸಿನಿಮಾವನ್ನು ರೋಹಿತ್ ಪದಕಿ ನಿರ್ದೇಶನ ಮಾಡಿದ್ದರು. ಆ ಸಿನಿಮಾದ ಅದ್ಭುತ ಯಶಸ್ಸಿನ ಬಳಿಕ ರೋಹಿತ್ ಪದಕಿ ಡಾಲಿ ಧನಂಜಯ್ ಕಾಂಬಿನೇಷನ್​​ನಲ್ಲಿ ‘ಉತ್ತರಕಾಂಡ’ ಸಿನಿಮಾ ಘೋಷಣೆಯಾಯ್ತು. ಸಿನಿಮಾದ ಟೀಸರ್ ಸಹ ಬಿಡುಗಡೆ ಆಗಿ ಸಖತ್ ನಿರೀಕ್ಷೆ ಹುಟ್ಟಿಸಿತ್ತು. ಅದೇ ಸಿನಿಮಾನಲ್ಲಿ ಶಿವರಾಜ್ ಕುಮಾರ್, ರಮ್ಯಾ ಅವರುಗಳು ಸಹ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಹಠಾತ್ತಾಗಿ ಸಿನಿಮಾದ ಸುದ್ದಿಯೇ ಇಲ್ಲದಾಗಿದೆ?

ನಿನ್ನೆ ನಟ ಡಾಲಿ ಧನಂಜಯ್ ಅವರು ಸುದ್ದಿಗೋಷ್ಠಿಯೊಂದನ್ನು ಕರೆದಿದ್ದರು. ಈ ವೇಳೆ ‘ಉತ್ತರಕಾಂಡ’ ಸಿನಿಮಾ ನಿಂತೇ ಹೋಯ್ತೆ?’ ಎಂಬ ಪ್ರಶ್ನೆ ಡಾಲಿಗೆ ಎದುರಾಯ್ತು, ಪ್ರಶ್ನೆಗೆ ಉತ್ತರಿಸಿದ ಧನಂಜಯ್, ‘ಉತ್ತರಕಾಂಡ ಸದ್ಯಕ್ಕೆ ಆಗಿಲ್ಲ, ನಿಂತಿದೆ. ಬೇರೆ ಬೇರೆ ಕಾರಣಕ್ಕೆ ಕೆಲವು ಪ್ರಾಜೆಕ್ಟ್​​ಗಳು ನಿಧಾನ ಆಗುತ್ತಾ ಹೋಗುತ್ತವೆ. ಆದರೆ ಅದನ್ನು ಹಾಗೆ ಬಿಡುವುದಿಲ್ಲ ಖಂಡಿತ ಮಾಡುತ್ತೀವಿ, ಪೂರ್ತಿ ಮಾಡಿ ಜನರ ಎದುರು ತೆಗೆದುಕೊಂಡು ಹೋಗುತ್ತೇವೆ. ಶಿವಣ್ಣ ಜೊತೆಗೂ ಮಾತನಾಡಿದ್ದೇನೆ’ ಎಂದಿದ್ದಾರೆ ಡಾಲಿ.

ಇದನ್ನೂ ಓದಿ:ತಂದೆ ಆಗುತ್ತಿದ್ದಾರೆ ಡಾಲಿ ಧನಂಜಯ್: ಸಿಹಿ ಸುದ್ದಿ ಹಂಚಿಕೊಂಡ ನಟ

ಮುಂದುವರೆದು, ‘ಉತ್ತರಕಾಂಡ’ ಸಿನಿಮಾದ ಚಿತ್ರಕತೆ ಕೆಲಸ ಸದ್ಯಕ್ಕೆ ಚಾಲ್ತಿಯಲ್ಲಿದೆ. ಸಿನಿಮಾ ತಡ ಆಗಿದ್ದರಿಂದ ಮೊದಲಿನ ಚಿತ್ರಕತೆಗೆ ಸಾಕಷ್ಟು ಬದಲಾವಣೆ, ಇನ್ನಷ್ಟು ಹರಿತಗೊಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಸಿನಿಮಾವನ್ನು ಬಹಳ ದೊಡ್ಡದಾಗಿ, ಭಿನ್ನವಾಗಿ ತೆರೆಗೆ ತರುವ ಯೋಚನೆ ನಮಗೆ ಇದೆ. ಎಲ್ಲೇ ಹೋದರು ‘ಉತ್ತರಕಾಂಡ’ ಸಿನಿಮಾದ ಬಗ್ಗೆಯೇ ಕೇಳುತ್ತಾರೆ. ಹಾಗಾಗಿ ಸದ್ಯಕ್ಕೆ ನನ್ನ ಸಿನಿಮಾಗಳ ಚಿತ್ರೀಕರಣವನ್ನು ಮುಗಿಸಿ ‘ಉತ್ತರಕಾಂಡ’ ಸಿನಿಮಾ ಶುರು ಮಾಡುತ್ತೀವಿ’ ಎಂದು ಭರವಸೆ ನೀಡಿದ್ದಾರೆ.

ಡಾಲಿ ಧನಂಜಯ್ ಅವರು ನಾಯಕನಾಗಿ ನಟಿಸಿದ ಕನ್ನಡ ಸಿನಿಮಾ ಒಂದು ಬಿಡುಗಡೆ ಆಗಿ ಸುಮಾರು ಎರಡು ವರ್ಷಗಳಾಗುತ್ತಾ ಬಂತು. ಇದೀಗ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ‘ಹಲಗಲಿ’, ‘ಜಿಂಗೊ’ ಮತ್ತು ‘ಅಣ್ಣ ಫ್ರಂ ಮೆಕ್ಸಿಕೊ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘ಜೆಸಿ’, ‘ಹೆಗ್ಗಣ ಮುದ್ದು’ ಇನ್ನೂ ಕೆಲ ಸಿನಿಮಾಗಳ ನಿರ್ಮಾಣ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 6:01 pm, Sat, 31 January 26

Source link

IND vs NZ: ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾದಲ್ಲಿ 2 ಬದಲಾವಣೆ – Kannada News | India vs New Zealand 5th T20: Thiruvananthapuram Finale; IND Batting First, Full Playing XIs

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿ ಅಂತಿಮ ಹಂತವನ್ನು ತಲುಪಿದೆ. ಮೊದಲ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ ಈಗಾಗಲೇ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಆದರೆ ಕಿವೀಸ್ ತಂಡವು ನಾಲ್ಕನೇ ಟಿ20ಯಲ್ಲಿ ಭಾರತವನ್ನು 50 ರನ್‌ಗಳಿಂದ ಸೋಲಿಸಿತ್ತು. ಇದೀಗ ಕೊನೆಯ ಪಂದ್ಯವನ್ನು ಗೆಲ್ಲುವ ಮೂಲಕ ಸೋಲಿನ ಅಂತರವನ್ನು ಕಡಿಮೆ ಮಾಡಲು ನೋಡುತ್ತಿದೆ. ಸರಣಿಯ ಅಂತಿಮ ಮತ್ತು ಐದನೇ ಪಂದ್ಯವು ಈಗ ತಿರುವನಂತಪುರದ ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯವು ಟಿ20 ವಿಶ್ವಕಪ್‌ಗೆ ಮುನ್ನ ಟೀಂ ಇಂಡಿಯಾದ ಕೊನೆಯ ಪಂದ್ಯವಾಗಿದೆ.

ಟಾಸ್ ಗೆದ್ದ ಟೀಂ ಇಂಡಿಯಾ

ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಟಾಸ್ ಜೊತೆಗೆ ಉಭಯ ತಂಡಗಳ ಪ್ಲೇಯಿಂಗ್ 11 ಕೂಡ ಹೊರಬಿದ್ದಿದೆ. ಅದರಂತೆ ಟೀಂ ಇಂಡಿಯಾದಲ್ಲಿ 2 ಬದಲಾವಣೆಗಳನ್ನು ಮಾಡಲಾಗಿದ್ದು, ಅಕ್ಷರ್ ಪಟೇಲ್ ಮತ್ತು ಇಶಾನ್ ಕಿಶನ್ ತಂಡಕ್ಕೆ ಮರಳಿದ್ದಾರೆ. ವರುಣ್ ಚಕ್ರವರ್ತಿ ಕೂಡ ಆಡಲಿದ್ದಾರೆ. ನ್ಯೂಜಿಲೆಂಡ್ ಕಳೆದ ಪಂದ್ಯಕ್ಕೆ ಹೋಲಿಸಿದರೆ ಈ ಪಂದ್ಯಕ್ಕೆ ನಾಲ್ಕು ಬದಲಾವಣೆಗಳನ್ನು ಮಾಡಿದೆ. ಡೆವೊನ್ ಕಾನ್ವೇ ಬದಲಿಗೆ ಫಿನ್ ಅಲೆನ್, ಜಾಕೋಬ್ ಡಫಿ ಬದಲಿಗೆ ಮಾರ್ಕ್ ಚಾಪ್ಮನ್ ಮತ್ತು ಮ್ಯಾಟ್ ಹೆನ್ರಿ ಬದಲಿಗೆ ಲಾಕಿ ಫರ್ಗುಸನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಕೈಲ್ ಜೇಮಿಸನ್ ಕೂಡ ಈ ಪಂದ್ಯದಲ್ಲಿ ಆಡಲಿದ್ದಾರೆ.

ಉಭಯ ತಂಡಗಳು

ಭಾರತ ತಂಡ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಸರ್ ಪಟೇಲ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ.

ನ್ಯೂಜಿಲೆಂಡ್ ತಂಡ: ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ಫಿನ್ ಅಲೆನ್, ರಚಿನ್ ರವೀಂದ್ರ, ಗ್ಲೆನ್ ಫಿಲಿಪ್ಸ್, ಡ್ಯಾರಿಲ್ ಮಿಚೆಲ್, ಬೆವನ್ ಜಾಕೋಬ್ಸ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಕೈಲ್ ಜೇಮಿಸನ್, ಇಶ್ ಸೋಧಿ, ಲಾಕಿ ಫರ್ಗುಸನ್, ಜಾಕೋಬ್ ಡಫಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:46 pm, Sat, 31 January 26

Source link

ಸಿಜೆ ರಾಯ್ ಕೇಸ್​​ ಸಂಬಂಧ ಎಸ್​ಐಟಿ ರಚನೆ: ಯಾರ ನೇತೃತ್ವದಲ್ಲಿ ತನಿಖೆ? ಇಲ್ಲಿದೆ ಮಾಹಿತಿ – Kannada News | CJ Roy Death Case: Bengaluru Police Commissioner Orders SIT Probe

ಬೆಂಗಳೂರು, ಜನವರಿ 31: ಸಿಜೆ ರಾಯ್ ಆತ್ಮಹತ್ಯೆ ಪ್ರಕರಣದ ಸತ್ಯಾಸತ್ಯತೆ ಬಗ್ಗೆ ತನಿಖೆಗಾಗಿ ವಿಶೇಷ ತನಿಖಾ ದಳ (ಎಸ್ಐಟಿ) ರಚಿಸಿ ಆದೇಶಿಸಲಾಗಿದೆ. ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರ ಆದೇಶದ ಮೇರೆಗೆ ಜಂಟಿ ಪೊಲೀಸ್ ಆಯುಕ್ತ ವಂಶಿ ಕೃಷ್ಣ ನೇತೃತ್ವದಲ್ಲಿ ಈ ತಂಡ ಕಾರ್ಯನಿರ್ವಹಿಸಲಿದೆ. ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್,  ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್,  ಹಲಸೂರು ಗೇಟ್ ಎಸಿಪಿ ಸುಧೀರ್, ಸಿಸಿಆರ್​ಬಿ ಎಸಿಪಿ ರಾಮಚಂದ್ರ, ಅಶೋಕನಗರ ಠಾಣೆ ಇನ್ಸ್​ಪೆಕ್ಟರ್ ರವಿ ಕೂಡ ಈ ಎಸ್ಐಟಿ ತಂಡದಲ್ಲಿದ್ದಾರೆ. ಆತ್ಮಹತ್ಯೆಗೆ ಐಟಿ ರೈಡ್ ಒತ್ತಡವೇ ಕಾರಣ ಎಂಬ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ, ಎಸ್ಐಟಿ ಈ ಕುರಿತು ಸಮಗ್ರ ತನಿಖೆ ನಡೆಸಲಿದೆ. ಅವರ ಮೊಬೈಲ್ ಫೋನ್ ಪರಿಶೀಲಿಸಿ, ಹಣಕಾಸು ವ್ಯವಹಾರಗಳು ಸೇರಿದಂತೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಯಲಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸಿಜೆ ರಾಯ್ ಕೇಸ್​​ ಸಂಬಂಧ ಎಸ್​ಐಟಿ ರಚನೆ: ಯಾರ ನೇತೃತ್ವದಲ್ಲಿ ತನಿಖೆ? ಇಲ್ಲಿದೆ ಮಾಹಿತಿ

ಬೆಂಗಳೂರು, ಜನವರಿ 31: ಸಿಜೆ ರಾಯ್ ಆತ್ಮಹತ್ಯೆ ಪ್ರಕರಣದ ಸತ್ಯಾಸತ್ಯತೆ ಬಗ್ಗೆ ತನಿಖೆಗಾಗಿ ವಿಶೇಷ ತನಿಖಾ ದಳ (ಎಸ್ಐಟಿ) ರಚಿಸಿ ಆದೇಶಿಸಲಾಗಿದೆ. ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರ ಆದೇಶದ ಮೇರೆಗೆ ಜಂಟಿ ಪೊಲೀಸ್ ಆಯುಕ್ತ ವಂಶಿ ಕೃಷ್ಣ ನೇತೃತ್ವದಲ್ಲಿ ಈ ತಂಡ ಕಾರ್ಯನಿರ್ವಹಿಸಲಿದೆ. ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್,  ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್,  ಹಲಸೂರು ಗೇಟ್ ಎಸಿಪಿ ಸುಧೀರ್, ಸಿಸಿಆರ್​ಬಿ ಎಸಿಪಿ ರಾಮಚಂದ್ರ, ಅಶೋಕನಗರ ಠಾಣೆ ಇನ್ಸ್​ಪೆಕ್ಟರ್ ರವಿ ಕೂಡ ಈ ಎಸ್ಐಟಿ ತಂಡದಲ್ಲಿದ್ದಾರೆ. ಆತ್ಮಹತ್ಯೆಗೆ ಐಟಿ ರೈಡ್ ಒತ್ತಡವೇ ಕಾರಣ ಎಂಬ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ, ಎಸ್ಐಟಿ ಈ ಕುರಿತು ಸಮಗ್ರ ತನಿಖೆ ನಡೆಸಲಿದೆ. ಅವರ ಮೊಬೈಲ್ ಫೋನ್ ಪರಿಶೀಲಿಸಿ, ಹಣಕಾಸು ವ್ಯವಹಾರಗಳು ಸೇರಿದಂತೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಯಲಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕೇಂದ್ರದ ವಿರುದ್ಧ ಸುಳ್ಳು ಜಾಹೀರಾತು ಆರೋಪ: ಸಚಿವ ಪ್ರಿಯಾಂಕ್​​ ಖರ್ಗೆ ವಿರುದ್ಧ ಮಂಡ್ಯ ಬಿಜೆಪಿ ದೂರು – Kannada News | Mandya BJP Alleges Misuse of Public Funds for Political Ads by RDPR Dept, Violating SC Guidelines

ಮಂಡ್ಯ, ಜನವರಿ 31: ಸಾರ್ವಜನಿಕರ ತೆರಿಗೆ ಹಣದಲ್ಲಿ ಕೇಂದ್ರ ಸರ್ಕಾರದ ಯೋಜನೆಯ ಬಗ್ಗೆ ಸುಳ್ಳು ಸುದ್ದಿ ಪ್ರಕಟಣೆ ನೀಡಿರುವುದಾಗಿ ಆರೋಪಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಇಲಾಖೆಯ ಮುಖ್ಯ ಕಾರ್ಯದರ್ಶಿ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮಂಡ್ಯ ಜಿಲ್ಲಾ ಬಿಜೆಪಿ ದೂರು ನೀಡಿದೆ. ಸುಪ್ರೀಂಕೋರ್ಟ್‌ನ ಮಾರ್ಗಸೂಚಿಗಳ ಪ್ರಕಾರ ಸರ್ಕಾರಿ ಜಾಹೀರಾತುಗಳು ರಾಜಕೀಯ ಪ್ರೇರಿತವಾಗಿರಬಾರದು ಎಂದಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ವಿಬಿ ಜಿ ರಾಮ್ ಜಿ ಯೋಜನೆ ಬಗ್ಗೆ ಪತ್ರಿಕೆಗಳಿಗೆ ನೀಡಿರುವ ಜಾಹೀರಾತು ರಾಜಕೀಯ ಪಕ್ಷಪಾತದಿಂದ ಕೂಡಿದೆ. ತೆರಿಗೆದಾರರ ಹಣವನ್ನು ಕೇಂದ್ರದ ಕಾಯ್ದೆಯ ವಿರುದ್ಧ ಅಪಪ್ರಚಾರ ಮಾಡಲು ಬಳಸುವುದು ಸಾರ್ವಜನಿಕ ಹಣದ ದುರುಪಯೋಗ ಎಂದು ಬಿಜೆಪಿ ಆರೋಪಿಸಿದೆ.

ಅಲ್ಲದೆ, ಜಾಹೀರಾತಿನಲ್ಲಿ ಮಹಾತ್ಮ ಗಾಂಧೀಜಿಯವರ ವ್ಯಂಗ್ಯಚಿತ್ರವನ್ನು ಬಳಸಿ ಕೇಂದ್ರದ ಯೋಜನೆಯನ್ನು ಟೀಕಿಸಿರುವುದು ಗಾಂಧೀಜಿಯವರಿಗೆ ಮಾಡಿದ ಅವಮಾನ. ಜಾಹೀರಾತು ಕೇವಲ ರಾಜಕೀಯ ಟೀಕೆಯಾಗಿದ್ದರೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ಬರಬಹುದು, ಆದರೆ ಸಾರ್ವಜನಿಕ ಹಣ ಬಳಸಿರುವುದರಿಂದ ಅದು ಸುಪ್ರೀಂಕೋರ್ಟ್‌ನ 2015ರ ಮಾರ್ಗಸೂಚಿಗಳ ಗಂಭೀರ ಉಲ್ಲಂಘನೆಯಾಗಿದೆ. ಸರ್ಕಾರಿ ಜಾಹೀರಾತುಗಳು ಕೇವಲ ಮಾಹಿತಿಯುಕ್ತವಾಗಿರಬೇಕು. ಯಾವುದೇ ರಾಜಕೀಯ ಪಕ್ಷದ ಹಿತಾಸಕ್ತಿ ಉತ್ತೇಜಿಸಲು ಅಥವಾ ವಿರೋಧ ಪಕ್ಷದ ವಿರುದ್ಧ ನಕಾರಾತ್ಮಕ ಚಿತ್ರಣ ನೀಡಲು ಸಾರ್ವಜನಿಕ ಹಣ ಬಳಸುವಂತಿಲ್ಲ.ರಾಜಕೀಯ ಟೀಕೆಗಳಿಗಾಗಿ ಸರ್ಕಾರಿ ಇಲಾಖೆಯ ಹೆಸರಿನಲ್ಲಿ ಜಾಹೀರಾತು ನೀಡುವುದು ಸಂವಿಧಾನದ 14ನೇ ವಿಧಿ ಮತ್ತು 21ನೇ ವಿಧಿಯ ಉಲ್ಲಂಘನೆ ಎಂದು ಕೋರ್ಟ್ ತಿಳಿಸಿದೆ. ಪ್ರಜಾಪ್ರಭುತ್ವದಲ್ಲಿ ಯಾವುದೇ ವಿಷಯದ ಬಗ್ಗೆ ಟೀಕೆ ಮಾಡಲು ಅಥವಾ ಭಿನ್ನಾಭಿಪ್ರಾಯ ವ್ಯಕ್ತಪಡಿಸಲು ಅವಕಾಶವಿದೆ. ಆದರೆ, ಸರ್ಕಾರಿ ಯಂತ್ರವನ್ನು ಬಳಸಿ ಜನರ ದಾರಿ ತಪ್ಪಿಸುವಂತಹ ಅಥವಾ ಸುಳ್ಳು ಮಾಹಿತಿ ನೀಡುವಂತಹ ಅಪಪ್ರಚಾರ ಮಾಡುವುದು ಸಂವಿಧಾನದ ಆಶಯಗಳಿಗೆ ವಿರುದ್ಧ ಎಂದು ಬಿಜೆಪಿ ದೂರಿದೆ.

ಇದನ್ನೂ ಓದಿ: ಜಾಹೀರಾತು ಜಟಾಪಟಿಗೆ ತಿರುಗಿದ ನರೇಗಾ ಯುದ್ಧ; ಅಧಿವೇಶನದಲ್ಲೂ ‘ಗಾಂಧಿ Vs ಸಂಘಪ್ಪ’ ಸಮರ!

ಕೇಂದ್ರದ ಕಾನೂನಿನ ಬಗ್ಗೆ ತನ್ನ ಅಸಮ್ಮತಿಯನ್ನು ವ್ಯಕ್ತಪಡಿಸಬಹುದು ಅಥವಾ ಕೋರ್ಟ್‌ನಲ್ಲಿ ಸವಾಲು ಹಾಕಬಹುದು. ಆದರೆ, ಅಧಿಕೃತವಾಗಿ ಆ ಕಾನೂನನ್ನು ಜಾರಿಗೆ ತರುವಲ್ಲಿ ಅಡ್ಡಿಪಡಿಸುವುದು ಅಥವಾ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನೀಡುವುದು ಸಾಂವಿಧಾನಿಕವಾಗಿ ತಪ್ಪು. ಹಾಗಾಗಿ ಸಾರ್ವಜನಿಕರ ತೆರಿಗೆ ಹಣವನ್ನು ದುರುಪಯೋಗ ಪಡಿಸಿಕೊಂಡು ಜಾಹೀರಾತು ನೀಡಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಇಲಾಖೆ ಮುಖ್ಯಕಾರ್ಯದರ್ಶಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಂಡ್ಯ ಜಿಲ್ಲಾ ಬಿಜೆಪಿ ಆಗ್ರಹಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ರವಿದಾಸ್ ಜಯಂತಿ: ಬಾಂಬ್ ಬೆದರಿಕೆ ನಡುವೆ ಇಂದು ಪ್ರಧಾನಿ ಮೋದಿ ಪಂಜಾಬ್ ಭೇಟಿ; ಅದಂಪುರ್ ಏರ್ಪೋರ್ಟ್​ಗೆ ಗುರು ರವಿದಾಸ್ ಹೆಸರು – Kannada News | PM Narendra Modi Punjab visit on Feb 1st on occasion of Sant Ravidas Jayanti

ನವದೆಹಲಿ, ಜನವರಿ 31: ಸಂತ ಗುರು ರವಿದಾಸ್ ಅವರ 649ನೇ ಜಯಂತಿ ಆಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನಾಳೆ ಭಾನುವಾರ (ಫೆ. 1) ಪಂಜಾಬ್​ಗೆ ಭೇಟಿ ನೀಡಲಿದ್ದಾರೆ. ಭಾನುವಾರ ಮಧ್ಯಾಹ್ನ 3:45ಕ್ಕೆ ಪಂಜಾಬ್​ಗೆ ತೆರಳಲಿರುವ ಪಿಎಂ, ಜಲಂಧರ್ ಜಿಲ್ಲೆಯಲ್ಲಿನ ದೇರಾ ಸಖಚಂದ್ ಬಲ್ಲನ್​ಗೆ ಭೇಟಿ ನೀಡಲಿ್ದಾರೆ. ಅಲ್ಲಿ ಸಂತ ಗುರು ರವಿದಾಸ್ ಗೌರವಾರ್ಥ ನಡೆಯುವ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ನರೇಂದ್ರ ಮೋದಿ ಅವರು ದೇರಾ ಸಖಚಂದ್ ಬಲ್ಲನ್ ಮಂದಿರಕ್ಕೆ ತೆರಳಿ ಸಂತ ಗುರು ರವಿದಾಸ್ ಅವರ ಮೂರ್ತಿಗೆ ಪುಷ್ಪಾರ್ಚಣೆ ಮಾಡಲಿದ್ದಾರೆ. ದೇರಾ ಸಖಚಂದ್ ಬಲ್ಲನ್​ನ ಎರಡನೇ ಗದ್ದಿ ನಶೀನ್ (ಪೀಠಾಧಿಪತಿ) ಆದ ಸಂತ ಸರ್ವಣ ದಾಸ್ ಅವರಿಗೂ ಪುಷ್ಪಾರ್ಚಣೆ ಮಾಡಲಿದ್ದಾರೆ. ಪರಿಕ್ರಮ ಆಚರಣೆ ಹಾಗೂ ಆರ್ದಾಸ್ ಕಾರ್ಯಕ್ರಮದಲ್ಲೂ ಮೋದಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: ಸುನೇತ್ರಾ ಪವಾರ್ ಉಪಮುಖ್ಯಮಂತ್ರಿಯಾಗಿ ಅಧಿಕಾರ; ಮಹಾರಾಷ್ಟ್ರಕ್ಕೆ ಮೊತ್ತಮೊದಲ ಮಹಿಳಾ ಡಿಸಿಎಂ ಈಕೆ

ಅದಂಪುರ್ ಏರ್​ಪೋರ್ಟ್​ಗೆ ರವಿದಾಸ್ ಹೆಸರು

ಪ್ರಧಾನಿಗಳು ಇದೇ ವೇಳೆ ಅದಂಪುರ್​ನಲ್ಲಿರುವ ವಿಮಾನ ನಿಲ್ದಾಣಕ್ಕೆ ಶ್ರೀ ಗುರು ರವಿದಾಸ್​ಜಿ ಏರ್ಪೋರ್ಟ್ ಎಂದು ಹೊಸ ಹೆಸರು ಇಡಲಿದ್ದಾರೆ.

ಹಾಗೆಯೇ, ಪಂಜಾಬ್​ನ ಲೂಧಿಯಾನದಲ್ಲಿರುವ ಹಲ್ವಾರ ಏರ್ಪೋರ್ಟ್​ನಲ್ಲಿ ಹೊಸದಾಗಿ ನಿರ್ಮಿಸಲಾದ ಟರ್ಮಿನಲ್ ಕಟ್ಟಡದ ಉದ್ಘಾಟೆಯನ್ನೂ ಪ್ರಧಾನಿಗಳು ಮಾಡಲಿದ್ದಾರೆ. ಇದೇ ಪ್ರದೇಶದಲ್ಲಿ ಭಾರತೀಯ ವಾಯುಪಡೆಯ ಸ್ಟೇಷನ್ ಇರುವುದರಿಂದ ಹಲ್ವಾರ ಏರ್ಪೋರ್ಟ್ ಆಯಕಟ್ಟಿನ ಜಾಗವೆಂದು ಪರಿಗಣಿತವಾಗಿದೆ.

ವಾಯುಪಡೆಯ ಉಪಸ್ಥಿತಿ ಒಂದೇ ಕಾರಣಕ್ಕೆ ಹಲ್ವಾರ ಏರ್ಪೋರ್ಟ್ ಪ್ರಾಮುಖ್ಯತೆ ಪಡೆದಿಲ್ಲ. ಲೂಧಿಯಾನ ಹಾಗೂ ಅದರ ಸುತ್ತಲಿನ ಕೈಗಾರಿಕಾ ಪ್ರದೇಶಗಳಿಗೆ ಈ ಏರ್ಪೋರ್ಟ್ ಉತ್ತಮ ಸಂಪರ್ಕ ಕಲ್ಪಿಸುತ್ತದೆ. ಹಲ್ವಾರ ಏರ್ಪೋರ್ಟ್​ನಲ್ಲಿ ರನ್​ವೇ ದೊಡ್ಡದು ಮಾಡಿರುವುದು ಸೇರಿದಂತೆ ಇನ್​ಫ್ರಾಸ್ಟ್ರಕ್ಚರ್ ಅನ್ನು ಉತ್ತಮಗೊಳಿಸಲಾಗಿದೆ.

ಇದನ್ನೂ ಓದಿ: “ಮಹಾ ರಾಜಕೀಯ”ದಲ್ಲಿ ಮಹತ್ವ ಬೆಳವಣಿಗೆ: ಫೆ.8ಕ್ಕೆ ಅಜಿತ್ ಪವಾರ್ ಕೊನೆಯ ಆಸೆ ಈಡೇರಲಿದೆ?

ಜಲಂಧರ್​ನಲ್ಲಿ ಬಾಂಬ್ ಬೆದರಿಕೆ

ರವಿದಾಸ್ ಜಯಂತಿ ಸಲುವಾಗಿ ಪ್ರಧಾನಿ ಮೋದಿ ಭೇಟಿ ನೀಡಲಿರುವ ಸುದ್ದಿ ಜೊತೆ ಜೊತೆಗೆ ಬಾಂಬ್ ಬೆದರಿಕೆಗಳೂ ಬಂದಿವೆ. ಜಲಂಧರ್​ನ ಕೇಂಬ್ರಿಡ್ಜ್ ಸ್ಕೂಲ್​ಗೆ ಬಾಂಬ್ ಬೆದರಿಕೆಯ ಇಮೇಲ್ ಬಂದಿದೆ. ಬಿಲ್ಲಿ ಹಾಲ್ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಈ ಇಮೇಲ್ ಕಳುಹಿಸಿದ್ದು, ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಮೂರ್ನಾಲ್ಕು ಶಾಲೆಗಳಲ್ಲಿ ಬಾಂಬ್ ಸ್ಫೋಟ ಮಾಡಲಾಗುವುದು ಎಂದ ಹೆದರಿಸಿದ್ದಾನೆ. ಆದರೆ, ಪೊಲೀಸರು ಕೇಂಬ್ರಿಡ್ಜ್ ಶಾಲೆಗೆ ತೆರಳಿ ಎಲ್ಲೆಡೆ ಶೋಧ ನಡೆಸಿದ್ದಾರೆ. ಯಾವುದೇ ಬಾಂಬ್ ಪತ್ತೆಯಾಗಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link