All posts by nagaraj11081993

‘ಕನ್ನಡ ಚಿತ್ರವನ್ನು ಹೃದಯದಲ್ಲಿ ಹೊತ್ತು ನಡೆಯುತ್ತೇನೆ’; ವಿಶೇಷ ಪ್ರತಿಜ್ಞೆ ಮಾಡಿದ ಸುದೀಪ್ – Kannada News | Kiccha Sudeep Completes 30 Years in Cinema: A Journey of Gratitude and Success

ಕಿಚ್ಚ ಸುದೀಪ್ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟರಲ್ಲಿ ಒಬ್ಬರು. ಅವರು ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ‘ಮ್ಯಾಕ್ಸ್’ ಹಾಗೂ ‘ಮಾರ್ಕ್’ ಮೂಲಕ 2024 ಹಾಗೂ 2025ರಲ್ಲಿ ಅಭಿಮಾನಿಗಳನ್ನು ರಂಜಿಸಿದರು. ಸುದೀಪ್ ಅವರ ಸಿನಿ ಪಯಣಕ್ಕೆ ಇದೀಗ 30 ವರ್ಷ ವರ್ಷ. ಮೂರು ದಶಕಗಳ ಯಶಸ್ಸಿನ ಜರ್ನಿಯಲ್ಲಿ ಭಾಗಿಯಾದ ಎಲ್ಲರಿಗೂ ಅವರು ಧನ್ಯವಾದ ತಿಳಿಸಿದ್ದಾರೆ.

‘ಬ್ರಹ್ಮ’ ಸುದೀಪ್ ನಟನೆಯ ಮೊದಲ ಸಿನಿಮಾ. ಈ ಸಿನಿಮಾದಲ್ಲಿ ಅಂಬರೀಷ್ ಅವರು ನಟಿಸಿದ್ದರು. ಆದರೆ, ಈ ಚಿತ್ರ ರಿಲೀಸ್ ಆಗಲೇ ಇಲ್ಲ. ಸುದೀಪ್ ಈ ಚಿತ್ರಕ್ಕಾಗಿ ಕ್ಯಾಮೆರಾ ಎದುರುಸಿದ ದಿನವನ್ನು ಚಿತ್ರರಂಗದಲ್ಲಿ ಮೊದಲ ದಿನ ಎಂದು ಪರಿಗಣಿಸಿದ್ದಾರೆ. ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು ಇಂದಿಗೆ (ಜನವರಿ 31) 30 ವರ್ಷಗಳು ಕಳೆದಿವೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ.

‘ಮೂವತ್ತು ವರ್ಷಗಳ ಸಾರ್ಥಕ ಪಯಣ’ ಎಂದು ಸುದೀಪ್ ಪತ್ರ ಆರಂಭಿಸಿದ್ದಾರೆ. ‘ಚಿತ್ರರಂಗದಲ್ಲಿ 3 ದಶಕಗಳನ್ನು ಪೂರೈಸಿ ನಿಂತಿರುವ ಈ ಕ್ಷಣದಲ್ಲಿ ನನ್ನ ಹೃದಯ ತುಂಬಿ ಬಂದಿದೆ. ಅಂದು ಕನಸುಗಳು, ಅನುಮಾನಗಳು ಮತ್ತು ಅಪಾರ ಭರವಸೆ ಹೊತ್ತಿದ್ದ ಒಬ್ಬ ಹುಡುಗ ನಾನು. ಅಂದಿನ ಸ್ಥಿತಿಗೂ, ಇಂದು ಬೆಳೆದಿರುವ ರೀತಿ ಊಹಿಸಿದ್ದಕ್ಕಿಂತ ದೊಡ್ಡದಾಗಿದೆ. ಇದಕ್ಕೆ ಕಾರಣ ನೀವು’ ಎಂದು ಸುದೀಪ್ ಧನ್ಯವಾದ ಹೇಳಿದ್ದಾರೆ. ಅದೇ ರೀತಿ ವೃತ್ತಿ ಜೀವನದಲ್ಲಿ ಯಾರ ಪಾತ್ರ ಯಾವ ರೀತಿ ಇದೆ ಎಂಬುದನ್ನು ವಿವರಿಸಿದ್ದಾರೆ ಸುದೀಪ್.

  1. ಅಭಿಮಾನಿಗಳು: ನನ್ನ ಶಕ್ತಿ, ನೀವೇ ನನ್ನ ಪ್ರೇರಣೆ. ನಾನು ಪ್ರತಿದಿನ ಕೆಲಸಕ್ಕೆ ಬರಲು ನೀವೇ ಕಾರಣ.
  2. ನಿರ್ದೇಶಕರು ಮತ್ತು ಬರಹಗಾರರು: ನಿಮ್ಮ ಕಥೆಗಳಿಗೆ ನಾನು ಸರಿ ಹೊಂದುತ್ತೇನೆ ಎಂದು ನಂಬಿ ಜವಾಬ್ದಾರಿ ನೀಡಿದ್ದಕ್ಕಾಗಿ, ನನ್ನನ್ನು ಹುರಿದುಂಬಿಸಿದ್ದಕ್ಕಾಗಿ ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಮೇಲೆ ಭರವಸೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು.
  3. ನಿರ್ಮಾಪಕರು: ನಿಮ್ಮ ಧೈರ್ಯ ಮತ್ತು ನಂಬಿಕೆ ನನ್ನ ಕನಸುಗಳನ್ನು ನನಸಾಗಿಸಿವೆ.
  4. ಸಹ ಕಲಾವಿದರು ಮತ್ತು ತಂತ್ರಜ್ಞರು: ಸಿನಿಮಾ ಎಂಬುದು ಸಂಘಟಿತ ಕೆಲಸ. ಲೈಟ್ ಬಾಯ್ ಇಂದ ಕ್ಯಾಮೆರಾಮನ್‌ಗಳವರೆಗೆ, ಕಲಾ ತಂಡದಿಂದ ಕಾಸ್ಟ್ಯೂಮ್ ಡಿಸೈನರ್​​ವರೆಗೆ, ಸ್ಪಾಟ್ ಬಾಯ್ಸ್‌ನಿಂದ ಹಿಡಿದು ಎಡಿಟರ್‌ಗಳವರೆಗೆ, ನಿಮ್ಮ ತೆರೆಯ ಹಿಂದಿನ ಶ್ರಮವೇ ಎಲ್ಲದಕ್ಕೂ ಕಾರಣ.
  5. ಮಾಧ್ಯಮ: ನೀವು ನನ್ನ ಧ್ವನಿಯನ್ನು ಜನರಿಗೆ ತಲುಪಿಸಿದ್ದೀರಿ. ನನ್ನನ್ನು ಪ್ರಶ್ನಿಸಿದ್ದೀರಿ, ನನ್ನ ಯಶಸ್ಸನ್ನು ಸಂಭ್ರಮಿಸಿದ್ದೀರಿ ಮತ್ತು ನಾನು ಬೆಳೆಯಲು ಸಹಾಯ ಮಾಡಿದ್ದೀರಿ.
  6. ಕನ್ನಡ ಚಿತ್ರರಂಗ: ನೀವು ನನಗೆ ಗುರುತು, ಹೆಮ್ಮೆ. ಚಿತ್ರರಂಗ ನನಗೆ ನೆಲೆ ನೀಡಿದೆ. ನಾನು ಸದಾ ಕನ್ನಡ ಚಿತ್ರವನ್ನು ನನ್ನ ಹೃದಯದಲ್ಲಿ ಹೊತ್ತು ನಡೆಯುತ್ತೇನೆ.
  7. ನನ್ನ ಕುಟುಂಬ ಹಾಗೂ ಸ್ನೇಹಿತರು: ಈ ಎಲ್ಲಾ ಏರಿಳಿತಗಳ ನಡುವೆ ನನ್ನನ್ನು ಸಾಮಾನ್ಯ ಮನುಷ್ಯನನ್ನಾಗಿ ನೀವು ನೋಡಿದ್ದೀರಿ. ನಾನು ಹೇಗಿದ್ದೇನೋ ಹಾಗೆ ಸ್ವೀಕರಿಸಿದ್ದಕ್ಕೆ ಧನ್ಯವಾದ.

‘ಈ 30 ವರ್ಷಗಳು ನನಗೆ ಒಂದು ಪಾಠ ಕಲಿಸಿದ್ದರೆ ಅದು ‘ಮಾನವೀಯತೆ’. ಪ್ರತಿಯೊಂದು ಗೆಲುವೂ ನಮಗೆ ದಕ್ಕಿದ ಪ್ರಸಾದ. ನಾನು ಇನ್ನೂ ಕಠಿಣವಾಗಿ ಶ್ರಮಿಸುತ್ತೇನೆ, ಕಲೆಯನ್ನು ಗೌರವಿಸುತ್ತೇನೆ ಮತ್ತು ಸಿನಿಮಾ ನನಗೆ ನೀಡಿದ್ದನ್ನು ಮರಳಿ ನೀಡುತ್ತೇನೆ ಎಂದು ಭರವಸೆ ನೀಡುತ್ತೇನೆ. ಕೈಮುಗಿದು, ಕೃತಜ್ಞತಾ ಭಾವದೊಂದಿಗೆ, ನಿಮ್ಮೆಲ್ಲರಿಗೂ ನನ್ನ ಹೃದಯಾಂತರಾಳದ ಧನ್ಯವಾದಗಳು’ ಎಂದು ಸುದೀಪ್ ಪತ್ರ ಪೂರ್ಣಗೊಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 3:11 pm, Sat, 31 January 26

Source link

ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಸಂಸದ ಸುನೀಲ್​​ ಬೋಸ್​ ಫುಲ್​​ ಗರಂ: ಕಾರಣ ಏನು ಗೊತ್ತಾ? – Kannada News | MP Sunil Bose Confronts Bannur MCO for Disregarding MLA and Distributing Laptops

ಮೈಸೂರು, ಜನವರಿ 31: ಟಿ.ನರಸೀಪುರ ತಾಲೂಕಿನ ಬನ್ನೂರು ಪುರಸಭೆ ಮುಖ್ಯಾಧಿಕಾರಿಯನ್ನು ಸಂಸದ ಸುನೀಲ್​​ ಬೋಸ್​ ತರಾಟೆಗೆ ಪಡೆದ ಘಟನೆ ನಡೆದಿದೆ. ಶಾಸಕರ ಗಮನಕ್ಕೆ ತರದೆ ಲ್ಯಾಪ್​ಟಾಪ್​, ತಳ್ಳೋಗಾಡಿಯನ್ನು ಅಧಿಕಾರಿ ವಿತರಿಸಿರುವ ಕಾರಣ ಪುರಸಭೆ ಮುಖ್ಯಾಧಿಕಾರಿ ಹೇಮಂತ್​​ ವಿರುದ್ಧ ಸಂಸದ ಸುನೀಲ್ ಬೋಸ್ ಗರಂ ಆಗಿದ್ದಾರೆ. ನೀನು ಪುರಸಭೆ ಮುಖ್ಯಾಧಿಕಾರಿನಾ? ಗುಮಾಸ್ತನ​ ರೀತಿ ಮಾತಾಡ್ತೀಯಾ?ನೀನೇನು ದನ ಮೇಯಿಸ್ತೀಯಾ, ಎಷ್ಟು ಸಲ ಹೇಳೋದು ನಿನಗೆ? ನಮ್ಮ ಅನುಮತಿ ಇಲ್ಲದೆ ಲ್ಯಾಪ್​ಟಾಪ್​, ತಳ್ಳೋಗಾಡಿ ಹೇಗೆ ಕೊಟ್ಟೆ? ಶಾಸಕರ ಗಮನಕ್ಕೆ ತರಬೇಕು ತಾನೇ? ಯಾಕೆ ವಿತರಣೆ ಮಾಡಿದ್ದೀಯಾ ಎಂದು ಏರು ಧ್ವನಿಯಲ್ಲೇ ಅಧಿಕಾರಿಯನ್ನು ಸಂಸದರು ತರಾಟೆಗೆ ಪಡೆದಿದ್ದಾರೆ. ಘಟನೆಯ ವಿಡಿಯೋ ವೈರಲ್​​ ಆಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಶೂನಿಂದ ಬರುವ ಕೆಟ್ಟ ವಾಸನೆಯನ್ನು ತೊಡೆದು ಹಾಕಲು ಈ ಸಿಂಪಲ್‌ ಟಿಪ್ಸ್‌ ಪಾಲಿಸಿ – Kannada News | Follow these simple tips to get rid of bad shoe odor

ತುಂಬಾನೇ ಸ್ಟೈಲಿಶ್‌ ಲುಕ್‌ ನೀಡುತ್ತೆ ಎಂಬ ಕಾರಣದಿಂದಾಗಿ ಇತ್ತೀಚಿನ ದಿನಗಳಲ್ಲಿ ಬಹುತೇಕ ಹೆಚ್ಚಿನವರು ಶೂಗಳನ್ನು ಧರಿಸಲು ಇಷ್ಟಪಡುತ್ತಾರೆ. ಕೆಲವೊಮ್ಮೆ ಬೆವರಿನ ಕಾರಣದಿಂದಾಗಿ ಸಾಕ್ಸ್‌ ಮಾತ್ರವಲ್ಲ ಶೂಗಳಿಂದಲೂ ಸಹ ಕೆಟ್ಟ ವಾಸನೆ (bad odor) ಬರುತ್ತದೆ. ಈ ದುರ್ವಾಸನೆ ಖಂಡಿತವಾಗಿಯೂ ಮುಜುಗರವನ್ನು ಉಂಟುಮಾಡುತ್ತದೆ. ನೀವು ಕೂಡ ಇದೇ ರೀತಿಯ ಸಮಸ್ಯೆಯನ್ನು ಎದುರಿಸಿದ್ದೀರಾ, ಎಷ್ಟೇ ಕ್ಲೀನ್‌ ಆಗಿ ಇಟ್ಟರೂ ಸಹ ಶೂಗಳಿಂದ ಬರುವ ದುರ್ವಾಸನೆಯನ್ನು ಹೋಗಲಾಡಿಸಲು ಸಾಧ್ಯವಿಲ್ಲ ಎಂಬ ಚಿಂತೆಯಲ್ಲಿದ್ದೀರಾ? ಹಾಗಿದ್ರೆ ಈ ಸರಳ ಸಲಹೆಗಳನ್ನು ಪಾಲಿಸುವ ಮೂಲಕ ಶೂನಿಂದ ಬರುವ ಕೆಟ್ಟ ವಾಸನೆಯನ್ನು ತೊಡೆದುಹಾಕಿ. ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಶೂನಿಂದ ಬರುವ ದುರ್ವಾಸನೆಯನ್ನು ಹೋಗಲಾಡಿಸುವುದೇಗೆ?

ಬಿಸಿಲಿನಲ್ಲಿ ಇರಿಸಿ: ಶೂಗಳ ವಾಸನೆಯನ್ನು ತೆಗೆದುಹಾಕಲು ಸುಲಭವಾದ ಮಾರ್ಗವೆಂದರೆ ಅವುಗಳನ್ನು ಸ್ವಲ್ಪ ಸಮಯದವರೆಗೆ ಬಿಸಿಲಿನಲ್ಲಿ ಇಡುವುದು. ಶೂಗಳಲ್ಲಿನ ತೇವಾಂಶ ಮತ್ತು ಬೆವರು ಬ್ಯಾಕ್ಟೀರಿಯಾ ಬೆಳೆಯಲು ಕಾರಣವಾಗುತ್ತದೆ, ಇದು ಕೆಟ್ಟ ವಾಸನೆ ಉಂಟಾಗಲು ಬಹು ಮುಖ್ಯ ಕಾರಣವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಶೂಗಳನ್ನು ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಇಡಿ. ಇದು ತೇವಾಂಶವನ್ನು ತೆಗೆದುಹಾಕುತ್ತದೆ, ಶೂಗಳಲ್ಲಿ ಸಂಗ್ರಹವಾಗುವ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ ಜೊತೆಗೆ ಇದು ವಾಸನೆಯನ್ನು ಕಡಿಮೆ ಮಾಡುತ್ತದೆ.

ಅಡಿಗೆ ಸೋಡಾ: ಅಡಿಗೆ ಸೋಡಾ ನೈಸರ್ಗಿಕ ವಾಸನೆ ನಿವಾರಕವಾಗಿದ್ದು, ಅದು ತೇವಾಂಶ ಮತ್ತು ವಾಸನೆಯನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಹಾಗಾಗಿ ನೀವು ರಾತ್ರಿ ಮಲಗುವ ಮುನ್ನ ನಿಮ್ಮ ಶೂಗಳ ಒಳಗೆ ಒಂದು ಟೀಚಮಚ ಅಡಿಗೆ ಸೋಡಾವನ್ನು ಸಿಂಪಡಿಸಿ ಮರುದಿನ ಬೆಳಿಗ್ಗೆ ಅವುಗಳನ್ನು ಸ್ವಚ್ಛಗೊಳಿಸಿ. ಈ ಪ್ರಕ್ರಿಯೆಯು ಶೂಗಳ ವಾಸನೆಯನ್ನು ಬಲು ಸುಲಭವಾಗಿ  ತೆಗೆದುಹಾಕಲು ಸಹಾಯ ಮಾಡುತ್ತದೆ.

ಟೀ ಬ್ಯಾಗ್‌ಗಳು: ಟೀ ಬ್ಯಾಗ್‌ಗಳಲ್ಲಿರುವ ಟ್ಯಾನಿನ್‌ಗಳು ಬ್ಯಾಕ್ಟೀರಿಯಾವನ್ನು ತೊಡೆದುಹಾಕಲು ಸಹಾಯ ಮಾಡುತ್ತವೆ. ಟ್ಯಾನಿನ್‌ಗಳು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವ ನೈಸರ್ಗಿಕ ಸಂಯುಕ್ತವಾಗಿದೆ. ಹಾಗಾಗಿರುವಾಗ ನೀವು ಶೂಗಳ ಒಳಗೆ ಈ ಟೀ ಬ್ಯಾಗ್‌ಗಳನ್ನು ಇಡಿ. ಇದು ಯಾವುದೇ ಕೆಟ್ಟ ವಾಸನೆಯನ್ನು ಹೋಗಲಾಡಿಸುತ್ತದೆ.

ಇದನ್ನೂ ಓದಿ: ಕೊಳೆಯಾದ ದಿಂಬುಗಳನ್ನು ತೊಳೆಯದೆ ಕ್ಷಣಾರ್ಧದಲ್ಲಿ ಸ್ವಚ್ಛಗೊಳಿಸಲು ಸರಳ ಸಲಹೆ ಪಾಲಿಸಿ

ವಿನೆಗರ್: ಬಿಳಿ ವಿನೆಗರ್ ಸಹಾಯದಿಂದ ನೀವು ಶೂಗಳ ವಾಸನೆಯನ್ನು ತೆಗೆದುಹಾಕಬಹುದು. ಇದಕ್ಕಾಗಿ, ಸ್ವಲ್ಪ ಬಿಳಿ ವಿನೆಗರ್ ಮತ್ತು ಸ್ವಲ್ಪ ನೀರನ್ನು ಸ್ಪ್ರೇ ಬಾಟಲಿಯಲ್ಲಿ ಬೆರೆಸಿ. ಶೂಗಳ ಒಳಭಾಗಕ್ಕೆ ಸಿಂಪಡಿಸಿ. ಬಿಳಿ ವಿನೆಗರ್ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಇದು ವಾಸನೆಯನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

ನಿಂಬೆ ಅಥವಾ ಕಿತ್ತಳೆ ಸಿಪ್ಪೆ: ಶೂಗಳಿಂದ ವಾಸನೆಯನ್ನು ತೆಗೆದುಹಾಕಲು, ರಾತ್ರಿ ಮಲಗುವ ಮುನ್ನ ನಿಂಬೆ ಅಥವಾ ಕಿತ್ತಳೆ ಸಿಪ್ಪೆಗಳನ್ನು ಅವುಗಳ ಒಳಗೆ ಇರಿಸಿ. ಮರುದಿನ ಬೆಳಿಗ್ಗೆ ಸಿಪ್ಪೆಗಳನ್ನು ತೆಗೆಯಿರಿ.  ಈ ಸುಲಭ ತಂತ್ರ ನಿಮ್ಮ ಶೂಗಳಲ್ಲಿನ ವಾಸನೆಯು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:14 pm, Sat, 31 January 26

Source link

ಬೈಕ್​​ ಟ್ಯಾಕ್ಸಿ: ಹೈಕೋರ್ಟ್​​ ಆದೇಶದ ವಿರುದ್ಧ ಸುಪ್ರೀಂಗೆ SLP ಸಲ್ಲಿಸುತ್ತಾ ರಾಜ್ಯ ಸರ್ಕಾರ? – Kannada News | Karnataka Bike Taxi Battle: Private Transport Unions Urge Govt to Appeal Against HC Order in Supreme Court

ಬೈಕ್​​ ಟ್ಯಾಕ್ಸಿಗೆ ಮತ್ತೆ ಸಂಕಷ್ಟ?

ಬೆಂಗಳೂರು, ಜನವರಿ 31: ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿಗೆ ಹೈಕೋರ್ಟ್ ಅನುಮತಿ ಹಿನ್ನೆಲೆ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್​​ಗೆ SLP ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ರಾಜ್ಯ ಖಾಸಗಿ ಸಾರಿಗೆ ಒಕ್ಕೂಟ ಮನವಿ ಮಾಡಿದೆ. ಈ ಕುರಿತು ಮಾತನಾಡಿರುವ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಅಧ್ಯಕ್ಷ ನಟರಾಜ ಶರ್ಮಾ, ಬೈಕ್ ಟ್ಯಾಕ್ಸಿಯವರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯನವರಿಗೆ ರಾಹುಲ್ ಪತ್ರ ಬರೆದು, ಬೈಕ್ ಟ್ಯಾಕ್ಸಿಯವರಿಗೆ ಅನುಕೂಲ ಮಾಡಿಕೊಡಿ ಎಂದು ಹೇಳಿದ್ದಾರೆ. ಹೀಗಾಗಿ ನಮಗೆ ಭಯ ಆಗುತ್ತಿದ್ದು, ಹೋರಾಟಕ್ಕೂ ಹಿನ್ನೆಡೆ ಆಗಬಹುದು. ನಮ್ಮ ಮನವಿ ಸ್ವೀಕರಿಸಿ SLP ಸಲ್ಲಿಸಲು ಸಿಎಂ ಮುಂದಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇನ್ನು ಬೈಕ್ ಟ್ಯಾಕ್ಸಿ ಸುರಕ್ಷತೆಯ ಬಗ್ಗೆ ನಿಮ್ಹಾನ್ಸ್ ವೈದ್ಯರು ಹಾಗೂ ಪೊಲೀಸ್ ಇಲಾಖೆ ಕೂಡ ಆತಂಕ ವ್ಯಕ್ತಪಡಿಸಿದೆ ಎನ್ನಲಾಗಿದ್ದು, ಬೈಕ್​​ ಟ್ಯಾಕ್ಸಿಗಳ ಕಾರ್ಯಾಚರಣೆಯಿಂದ ಸಾರ್ವಜನಿಕ ಸುರಕ್ಷಿತಗೆ ಅಪಾಯ ಆಗಬಹುದು. ಅಪಘಾತ ಪ್ರಮಾಣ ಹೆಚ್ಚಳದ ಸಾಧ್ಯತೆಯ ಜೊತೆಗೆ ಪ್ರಯಾಣಿಕರಿಗೆ ಜೀವ ಭದ್ರತೆ ಇರಲ್ಲ. ಇನ್ನು ಆಟೋ, ಟ್ಯಾಕ್ಸಿ ಮತ್ತು ಬಸ್​​ಗಳಿಗೂ ಇವು ಹೊಡೆತ ನೀಡಲಿವೆ ಎಂಬ ಅಭಿಪ್ರಾಯಗಳು ಕೇಳಿಬಂದಿವೆ. ಅಲ್ಲದೆ 2022ರಲ್ಲಿ ICRA ಅಂಕಿ ಅಂಶಗಳ ಪ್ರಕಾರವೂ ಬೈಕ್​​ ಅಪಘಾತಗಳೇ ಹೆಚ್ಚು ನಡೆದಿರೋದು ಸಾಭೀತಾಗಿದೆ.

ಇದನ್ನೂ ಓದಿ: ಕೊನೆಗೂ ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಗ್ರೀನ್ ಸಿಗ್ನಲ್ ನೀಡಿದ ಹೈಕೋರ್ಟ್

ಅಪಘಾತಗಳ ಅಂಕಿ-ಅಂಶ
ಬೈಕ್​​ ಶೇ.40
ಕಾರು, ಟ್ಯಾಕ್ಸಿ, ವ್ಯಾನ್ ಶೇ.17
ಪಾದಚಾರಿಗಳಿಂದ ಶೇ.17
ಆಟೋ ರಿಕ್ಷಾ ಶೇ.4
ಟ್ರಕ್, ಲಾರಿ ಶೇ.9
ಬಸ್ ಶೇ.3
ಸೈಕಲ್ ಶೇ.2
ಇತರೆ ಶೇ.7

ಬೈಕ್ ಟ್ಯಾಕ್ಸಿ ಸಂಸ್ಥೆಗಳು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್ ಬೈಕ್ ಟ್ಯಾಕ್ಸಿಗಳಿಗೆ ಲೈಸೆನ್ಸ್ ನೀಡುವುದನ್ನು ಸರ್ಕಾರ ನಿರಾಕರಿಸುವಂತಿಲ್ಲ ಎಂದು ಸ್ಪಷ್ಟಪಡಿಸಿತ್ತು.ಬೈಕ್ ಟ್ಯಾಕ್ಸಿ ಅಗ್ರಿಗೇಟರ್‌ಗಳು ಅನುಮತಿ ಕೋರಿ ಅರ್ಜಿ ಸಲ್ಲಿಸಿದರೆ, ಆ ಅರ್ಜಿಗಳನ್ನು ಪರಿಗಣಿಸಿ ಪರವಾನಗಿ ನೀಡಬೇಕು ಎಂದು ಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಈ ಬಗ್ಗೆ ಆದೇಶಿಸಿದ್ದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರನ್ನೊಳಗೊಂಡ ವಿಭಾಗೀಯ ಪೀಠ , ಬೈಕ್ ಟ್ಯಾಕ್ಸಿ ಸೇವೆಗಳು ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಒಂದು ಭಾಗವಾಗಿದ್ದು, ಕಾನೂನು ಚೌಕಟ್ಟಿನೊಳಗೆ ಅವುಗಳನ್ನು ನಿರ್ಬಂಧಿಸುವಂತಿಲ್ಲ ಎಂದು ಅಭಿಪ್ರಾಯಪಟ್ಟಿತ್ತು.

ವರದಿ: ಅರುಣ್​​ ಕುಮಾರ್​​, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:15 pm, Sat, 31 January 26

Source link

CJ Roy Death Case: ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್? – Kannada News | CJ Roy Death Case: Hawala Allegations and Political Ambitions Under Investigation

ಬೆಂಗಳೂರು, ಜನವರಿ 31: ಸಿ.ಜೆ. ರಾಯ್ ಅವರ ಸಾವಿನ ಸುತ್ತ ಹಲವು ಪ್ರಶ್ನೆಗಳು ಮೂಡಿವೆ. ವಿಶೇಷವಾಗಿ, ಅವರು ಅಂತರರಾಷ್ಟ್ರೀಯ ಹವಾಲಾ ಮಾಫಿಯಾದಲ್ಲಿ ಭಾಗಿಯಾಗಿದ್ದರೇ ಮತ್ತು ಮುಂಬರುವ ಕೇರಳ ಚುನಾವಣೆಗಳಿಗೆ ವಿದೇಶದಿಂದ ಹವಾಲಾ ಮೂಲಕ ಹಣವನ್ನು ರಾಜಕೀಯ ಪಕ್ಷಗಳಿಗೆ ವರ್ಗಾಯಿಸಿದ್ದರೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಕೇಂದ್ರ ತನಿಖಾ ಸಂಸ್ಥೆಗಳಾದ ಇಡಿ, ಐಟಿ ಮತ್ತು ರೆವೆನ್ಯೂ ಇಂಟೆಲಿಜೆನ್ಸ್ ಕಳೆದ ಆರು ತಿಂಗಳಿಂದ ರಾಯ್ ಅವರ ಹಣಕಾಸು ವ್ಯವಹಾರಗಳ ಮೇಲೆ ನಿರಂತರವಾಗಿ ಕಣ್ಗಾವಲು ಇರಿಸಿದ್ದವು.

ರಾಯ್ ಅವರು ರಾಜಕೀಯ ಪ್ರವೇಶ ಮಾಡುವ ಯೋಜನೆಯನ್ನು ಹೊಂದಿದ್ದರು ಮತ್ತು ಹವಾಲಾ ಹಣವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಸಿದ್ಧತೆ ನಡೆಸಿದ್ದರು ಎಂಬ ಅನುಮಾನಗಳೂ ಕೇಳಿಬಂದಿವೆ. ಅಧಿಕಾರಿಗಳಿಗೆ ಲಭ್ಯವಾಗಿರುವ ದಾಖಲೆಗಳು ಮತ್ತು ರಾಯ್ ಅವರ ಮೊಬೈಲ್ ಚಾಟ್‌ಗಳು ಈ ಎಲ್ಲಾ ಅಂಶಗಳನ್ನು ಬಹಿರಂಗಪಡಿಸುವ ನಿರೀಕ್ಷೆಯಿದೆ. ಜೈಲು ಶಿಕ್ಷೆಯ ಭಯ ಅಥವಾ ಅವ್ಯವಹಾರಗಳು ಬಹಿರಂಗಗೊಳ್ಳುವ ಆತಂಕ ಅವರ ಸಾವಿಗೆ ಕಾರಣವಾಗಿರಬಹುದು ಎಂದು ಊಹಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

ತುಮಕೂರು: ಲಂಚ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಪಿಎಸ್‌ಐ – Kannada News | Tumakuru Rural PSI Caught Red Handed by Lokayukta While Accepting Bribe Inside Police Station

ತುಮಕೂರು, ಜನವರಿ 31: ಭ್ರಷ್ಟಾಚಾರ ವಿರುದ್ಧ ಲೋಕಾಯುಕ್ತ ಅಧಿಕಾರಿಗಳ ಚುರುಕಿನ ಕಾರ್ಯಾಚರಣೆ ಮುಂದುವರಿದಿದ್ದು, ತುಮಕೂರು (Tumakur) ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಚೇತನ ಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಒಂದು ಪ್ರಕರಣದಲ್ಲಿ ವಶಪಡಿಸಿಕೊಂಡಿದ್ದ ಕಾರನ್ನು ವಾಪಸ್ ನೀಡುವ ನೆಪದಲ್ಲಿ ಪಿಎಸ್‌ಐ ಚೇತನ ಕುಮಾರ್ 1 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿಬಂದಿದೆ. ಮೊದಲ ಹಂತವಾಗಿ 40 ಸಾವಿರ ರೂ. ಲಂಚ ಸ್ವೀಕರಿಸುವ ವೇಳೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲೇ ಲೋಕಾಯುಕ್ತ ಅಧಿಕಾರಿಗಳು ರೆಡ್‌ಹ್ಯಾಂಡ್ ಆಗಿ ಅವರನ್ನು ಬಂಧಿಸಿದ್ದಾರೆ.

ಲಂಚ ಸ್ವೀಕರಿಸುತ್ತಿದ್ದ ಕ್ಷಣದಲ್ಲೇ ದಾಳಿ ನಡೆಸಿದ ಲೋಕಾಯುಕ್ತ ತಂಡ, ಪಿಎಸ್‌ಐ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದೆ. ಸರ್ಕಾರಿ ಕಚೇರಿಯಲ್ಲೇ ಲಂಚ ಸ್ವೀಕಾರ ನಡೆದಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರಿನ ಕೆಪಿ ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗೋವಿಂದರಾಜು ಕೂಡ ಶುಕ್ರವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು. ಚೀಟಿ ವ್ಯವಹಾರ ಸಂಬಂಧಿತ ಪ್ರಕರಣದಲ್ಲಿ ವ್ಯಕ್ತಿಯನ್ನು ಕೇಸ್‌ನಲ್ಲಿ ಸಿಲುಕಿಸುವುದಾಗಿ ಬೆದರಿಸಿ ಒಟ್ಟು 5 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಅವರ ಮೇಲಿದ್ದು, ಮೈಸೂರು ರಸ್ತೆಯ ಸಿಐಆರ್ ಗ್ರೌಂಡ್ ಬಳಿ 4 ಲಕ್ಷ ರೂ. ಲಂಚ ಪಡೆಯುವಾಗ ಅವರನ್ನು ಬಂಧಿಸಲಾಗಿತ್ತು.

ಪೊಲೀಸ್ ಇಲಾಖೆಯಲ್ಲೇ ಹೆಚ್ಚುತ್ತಿರುವ ಭ್ರಷ್ಟಾಚಾರ

ಸತತವಾಗಿ ಪೊಲೀಸ್ ಅಧಿಕಾರಿಗಳೇ ಲೋಕಾಯುಕ್ತ ಬಲೆಗೆ ಬೀಳುತ್ತಿರುವ ಘಟನೆಗಳು ಪೊಲೀಸ್ ಇಲಾಖೆಯ ಪಾರದರ್ಶಕತೆ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಸಾರ್ವಜನಿಕರ ವಿಶ್ವಾಸ ಕಾಪಾಡಬೇಕಾದ ಅಧಿಕಾರಿಗಳೇ ಲಂಚದ ದಂಧೆಯಲ್ಲಿ ತೊಡಗಿರುವುದು ಆತಂಕಕಾರಿ ಬೆಳವಣಿಗೆ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಇದನ್ನೂ ಓದಿ: ಲಂಚ ಪಡೆಯುತ್ತಾ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬಿದ್ದ ಇನ್ಸ್‌ಪೆಕ್ಟರ್!

ಲೋಕಾಯುಕ್ತ ಪೊಲೀಸರು ತುಮಕೂರು ಗ್ರಾಮಾಂತರ ಪಿಎಸ್‌ಐ ಚೇತನ ಕುಮಾರ್ ವಿರುದ್ಧ ಕಾನೂನು ಕ್ರಮ ಮುಂದುವರಿಸಿದ್ದು, ತನಿಖೆ ಬಳಿಕ ಹೆಚ್ಚಿನ ಮಾಹಿತಿ ದೊರೆಯಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಜಯಪುರ ಸರ್ಕಾರಿ ಉರ್ದು ಶಾಲೆಯಲ್ಲಿ ಕೆಮಿಕಲ್ ಸ್ಫೋಟ: 7ನೇ ತರಗತಿ ವಿದ್ಯಾರ್ಥಿಗೆ ಗಂಭೀರ ಗಾಯ – Kannada News | Devanahalli School Chemical Explosion: Student Injured, Safety Concerns Rise

ವಿಜಯಪುರ ಸರ್ಕಾರಿ ಉರ್ದು ಶಾಲೆಯಲ್ಲಿ ಕೆಮಿಕಲ್ ಸ್ಫೋಟ: 7ನೇ ತರಗತಿ ವಿದ್ಯಾರ್ಥಿಗೆ ಗಂಭೀರ ಗಾಯ

ಬೆಂಗಳೂರು ಗ್ರಾಮಾಂತರ, ಜನವರಿ 31: ಜಿಲ್ಲೆಯ (Bengaluru Rural) ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಸರ್ಕಾರಿ ಉರ್ದು ಶಾಲೆಯಲ್ಲಿ ಇಂದು (ಶನಿವಾರ) ಮಧ್ಯಾಹ್ನ ಕೆಮಿಕಲ್ ಸ್ಫೋಟ ಸಂಭವಿಸಿ, ಏಳನೇ ತರಗತಿಯೊಬ್ಬ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿವೆ. ಪಟ್ಟಣದ ಜಿಲ್ಲಾ ಗ್ರಂಥಾಲಯದ ಮುಂಭಾಗದಲ್ಲಿರುವ ಈ ಶಾಲೆಯಲ್ಲಿ ಘಟನೆ ನಡೆದಿದ್ದು, ಕ್ಷಣಕಾಲ ಶಾಲಾ ವಾತಾವರಣದಲ್ಲಿ ಆತಂಕ ಸೃಷ್ಟಿಯಾಗಿದೆ.

ಕಾರ್ಬನ್ ಕೆಮಿಕಲ್ ನೀರಿಗೆ ಮಿಕ್ಸ್ ಮಾಡಿದ್ದ ವಿದ್ಯಾರ್ಥಿ

ಏಳನೇ ತರಗತಿ ವಿದ್ಯಾರ್ಥಿಯೊಬ್ಬ ಕಾರ್ಬನ್ ಕೆಮಿಕಲ್ ಅನ್ನು ಶಾಲೆಗೆ ತಂದು, ಶೌಚಾಲಯದಲ್ಲಿ ಒಂದು ಜಗ್​ ನೀರಿಗೆ ಹಾಕಿ ಪ್ರಯೋಗ ನಡೆಸಲು ಯತ್ನಿಸಿದ್ದಾನೆ. ಈ ವೇಳೆ ಅಚಾನಕವಾಗಿ ಜಗ್ ಸ್ಫೋಟಗೊಂಡಿದ್ದು, ಅದರ ಪರಿಣಾಮವಾಗಿ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿವೆ. ಸ್ಫೋಟದ ತೀವ್ರತೆಗೆ ವಿದ್ಯಾರ್ಥಿಯ ಬಟ್ಟೆಗಳು ಸುಟ್ಟುಹೋಗಿದ್ದು, ಸ್ಥಳದಲ್ಲಿದ್ದವರು ತಕ್ಷಣವೇ ಆತನ ಬಟ್ಟೆಗಳನ್ನು ತೆಗೆದು, ಪ್ರಾಥಮಿಕ ನೆರವು ನೀಡಿ ದೇವನಹಳ್ಳಿಯ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ವಿದ್ಯಾರ್ಥಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ ಬೀದರ್​ನಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟ! ಶಾಲೆಗೆ ತೆರಳುತ್ತಿದ್ದ ಮಕ್ಕಳಿಗೆ ಗಂಭೀರ ಗಾಯ

ಸ್ಫೋಟ ಸಂಭವಿಸಿದ ತಕ್ಷಣ ಶಾಲೆಯಲ್ಲಿದ್ದ ಇತರೆ ವಿದ್ಯಾರ್ಥಿಗಳು ಭಯಭೀತರಾಗಿದ್ದು, ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಮಾಹಿತಿ ಪಡೆದ ವಿಜಯಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಮಿಕಲ್ ಶಾಲೆಗೆ ಹೇಗೆ ತರಲಾಯಿತು ಎಂಬಿನ್ನಿತರ ವಿಷಯದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಘಟನೆ ಶಾಲಾ ಆವರಣದಲ್ಲಿ ಭದ್ರತೆ ಮತ್ತು ಮೇಲ್ವಿಚಾರಣೆ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ, ನಡು ರಸ್ತೆಯಲ್ಲಿ ಹಿಗ್ಗಾಮುಗ್ಗಾ ಥಳಿಸಿದ ಪತಿ – Kannada News | Trichy Incident: Political Leader, Woman Attacked; Husband Suspects Illicit Affair

ತಮಿಳುನಾಡಿನ ತಿರುಚ್ಚಿಯಲ್ಲಿ (Trichy) ನಡೆದ ಘಟನೆ ರಾಜ್ಯ ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಪಕ್ಷವೊಂದರ ಪ್ರಮುಖ ನಾಯಕನೊಬ್ಬ ಮಹಿಳೆಯೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಆ ಮಹಿಳೆಯ ಪತಿ ತನ್ನ ಸಹಚರರೊಂದಿಗೆ ಕಾರನ್ನು ಅಡ್ಡಗಟ್ಟಿದ್ದಾನೆ. ಮಹಿಳೆಯ ಪತಿ ಮತ್ತು ಅವನ ತಂಡವು ಕಾರ್ ನಲ್ಲಿದ್ದ ಪಕ್ಷದ ನಾಯಕ ಮತ್ತು ಮಹಿಳೆಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದೆ. ಅಷ್ಟೇ ಅಲ್ಲದೆ, ಆವೇಶದಲ್ಲಿ ಕಾರನ್ನು ಸಂಪೂರ್ಣವಾಗಿ ಜಖಂಗೊಳಿಸಿದ್ದಾರೆ. ಅಕ್ರಮ ಸಂಬಂಧದ ಶಂಕೆಯಿಂದ ಈ ದಾಳಿ ಮಾಡಿದ್ದಾನೆ. ನ್ನ ಪತ್ನಿ ಆ ನಾಯಕನೊಂದಿಗೆ ಸಂಬಂಧ ಹೊಂದಿದ್ದಾಳೆ ಎಂಬ ದ್ವೇಷದಿಂದ ಪತಿಯು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಗಲಾಟೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಶಾಂತಿ ಭಂಗ ಮಾಡಿದ್ದಕ್ಕಾಗಿ ಮತ್ತು ಹಲ್ಲೆ ನಡೆಸಿದ್ದಕ್ಕಾಗಿ ಮಹಿಳೆಯ ಪತಿ ಮತ್ತು ಅವನ ಸಹಚರರ ಮೇಲೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ – Kannada News | Bullet Pierced the Heart: Doctor Reveals Postmortem Details in CJ Roy Death Case

ಬೆಂಗಳೂರು, ಜನವರಿ 31: ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೌರಿಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದೆ. ಈ ಬಗ್ಗೆ ಬೌರಿಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಎಂಎನ್ ಅರವಿಂದ್ ‘ಟಿವಿ9’ ಜತೆ ಮಾತನಾಡಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಬುಲೆಟ್ ಎದೆಯ ಎಡಭಾಗಕ್ಕೆ ಹೊಕ್ಕಿದೆ. ಅದು ದೇಹದಿಂದ ಹೊರಹೋಗದೆ ಒಳಗೆ ಉಳಿದಿದೆ. 6.35 ಮಿಲಿಮೀಟರ್ ಗಾತ್ರದ ಬುಲೆಟ್ ಹೃದಯ, ಶ್ವಾಸಕೋಶದ ಕೆಳಭಾಗ ಮತ್ತು ಡಯಾಫ್ರಮ್‌ಗೆ ಹಾನಿ ಮಾಡಿದೆ. ಹಾಗೆಯೇ, ಹೊಟ್ಟೆಯ ಒಂದು ಭಾಗಕ್ಕೂ ತಗುಲಿ ಡಯಾಫ್ರಮ್​ಗೆ ಭಾರಿ ಹಾನಿಯಾಗಿದೆ. ಬುಲೆಟ್ ಹಿಂದಿನ ಪಕ್ಕೆಲುಬುಗಳವರೆಗೆ ತಲುಪಿತ್ತು. ಸಿಜೆ ರಾಯ್ ಸಾವು ಗುಂಡಿನ ಗಾಯದಿಂದಲೇ ಆಗಿದೆ ಎಂದು ಅವರು ತಿಳಿಸಿದ್ದಾರೆ.

ಮೃತದೇಹದಿಂದ ಡಿಎನ್‌ಎ ಪರೀಕ್ಷೆಗಾಗಿ ರಕ್ತದ ಮಾದರಿ ಮತ್ತು ಗುಂಡು ಹಾರಿದ ಬಗ್ಗೆ ಬೆರಳಚ್ಚು ಪರೀಕ್ಷೆಗಾಗಿ ಕೈ ಮತ್ತು ಬೆರಳಿನ ಮಾದರಿಗಳನ್ನು ಸಂಗ್ರಹಿಸಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ ಎಂದು ಡಾ. ಅರವಿಂದ್ ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಜೆಟ್ ಟೀಮ್; ಇಗೋ ಇವರೇ ಮುಂಗಡ ಪತ್ರದ ರೂವಾರಿಗಳು

Source link