All posts by nagaraj11081993

ಪುಣೆ ನಿಲ್ದಾಣಕ್ಕೆ ಬರುವಾಗ ಹಳಿ ತಪ್ಪಿದ ಮುಂಬೈ-ಸೋಲಾಪುರ ವಂದೇ ಭಾರತ್ ರೈಲು – Kannada News | Mumbai Solapur Vande Bharat Express train derails while entering Pune station

ಪುಣೆ, ಏಪ್ರಿಲ್ 27: ಮಹಾರಾಷ್ಟ್ರದ ಪುಣೆ ರೈಲು ನಿಲ್ದಾಣವನ್ನು ಪ್ರವೇಶಿಸುವಾಗ ವಂದೇ ಭಾರತ್ ಎಕ್ಸ್‌ಪ್ರೆಸ್‌ನ (Vande Bharat Express) ಒಂದು ಬೋಗಿ ಹಳಿ ತಪ್ಪಿತು. ಇಂದು ಸಂಜೆ 7.30ರ ಸುಮಾರಿಗೆ ನಿಲ್ದಾಣ ಪ್ರವೇಶಿಸುವಾಗ ರೈಲಿನ ನಾಲ್ಕನೇ ಬೋಗಿಯ ಒಂದು ಟ್ರಾಲಿ ಡೈಮಂಡ್ ಕ್ರಾಸಿಂಗ್‌ನಲ್ಲಿ ಹಳಿ ತಪ್ಪಿತು ಎಂದು ಕೇಂದ್ರ ರೈಲ್ವೆ ಇಲಾಖೆ ತಿಳಿಸಿದೆ. ಈ ಘಟನೆಯಲ್ಲಿ ಯಾವುದೇ ಸಾವು ಅಥವಾ ಗಾಯಗಳಾಗಿಲ್ಲ. ರೈಲು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ನಿಂದ ಹೊರಟು ಮಹಾರಾಷ್ಟ್ರದ ಸೋಲಾಪುರಕ್ಕೆ ಹೋಗಬೇಕಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗುದ್ದಲಿ ಪೂಜೆಗೆ ಪ್ರಾಮಾಣಿಕರು ಸಿಗಲಿಲ್ವಾ? ಯಡಿಯೂರಪ್ಪೋತ್ಸವ ಬಗ್ಗೆ ಯತ್ನಾಳ್ ವ್ಯಂಗ್ಯ – Kannada News | Basangouda Patil Yatnal sparks on former CM Yediyurappa’s Conference

ವಿಜಯಪುರ, ಏಪ್ರಿಲ್​ 27: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಅರ್ಧ ಶತಮಾನದ ಸುದೀರ್ಘ ರಾಜಕೀಯ ಜೀವನವನ್ನು ಸ್ಮರಿಸುವ ನಿಟ್ಟಿನಲ್ಲಿ ಮೇ 9 ರಂದು ಚಿತ್ರದುರ್ಗದಲ್ಲಿ ಅಭಿಮಾನೋತ್ಸವ ಹಮ್ಮಿಕೊಳ್ಳಲಾಗಿದ್ದು, ಭಾನುವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸಮಾರಂಭಕ್ಕೆ ಗುದ್ದಲಿ ಪೂಜೆ ಮಾಡಿದ್ದಾರೆ. ಸದ್ಯ ಈ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಉಚ್ಚಾಟಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್, ​ಅಪ್ಪನ ಸಮಾರಂಭಕ್ಕೆ ಮಗ ಗುದ್ದಲಿ ಪೂಜೆ ಮಾಡಿದ್ದಾನೆ. ಬೇರೆ ಪ್ರಾಮಾಣಿಕರು ಸಿಗಲಿಲ್ಲವಾ ಇವರಿಗೆ ಎಂದು ವಾಗ್ದಾಳಿ ಮಾಡಿದ್ದಾರೆ. ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮುಂದುವರಿಸದಿದ್ದರೆ, ಸಿಎಂ ಅಭ್ಯರ್ಥಿ ಮಾಡದಿದ್ದರೆ ಲಿಂಗಾಯತರು ಬಿಜೆಪಿ ಬಿಡ್ತಾರೆಂಬ ಸಂದೇಶ ರವಾನಿಸಲು ಯಡಿಯೂರಪ್ಪೋತ್ಸವ ಮಾಡುತ್ತಿದ್ದಾರೆ ಎಂದು ಯತ್ನಾಳ್ ವ್ಯಂಗ್ಯವಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಕೆಡಿ ಸಿನಿಮಾ ಸುದ್ದಿಗೋಷ್ಠಿ: ಎಷ್ಟೇ ಕೇಳಿದರೂ ಆ ವಿಷಯ ಬಾಯಿ ಬಿಡಲಿಲ್ಲ ಕಿಚ್ಚ ಸುದೀಪ್ – Kannada News | Kichcha Sudeep did not reveal anything about his role in KD Movie

ನಟ ಕಿಚ್ಚ ಸುದೀಪ್ ಅವರು ‘ಕೆಡಿ’ (KD) ಸಿನಿಮಾದಲ್ಲಿ ಕಾಲ ಭೈರವ ಎಂಬ ಅತಿಥಿ ಪಾತ್ರ ಮಾಡಿದ್ದಾರೆ. ಹಾಗಾಗಿ ಈ ಸಿನಿಮಾಗೆ ಸ್ಟಾರ್ ಮೆರುಗು ಹೆಚ್ಚಿದೆ. ಆ ಪಾತ್ರದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಎಲ್ಲರಿಗೂ ಆಸಕ್ತಿ ಇದೆ. ಇಂದು (ಏಪ್ರಿಲ್ 27) ನಡೆದ ಸುದ್ದಿಗೋಷ್ಠಿಯಲ್ಲಿ ಈ ಪಾತ್ರದ ಬಗ್ಗೆ ಪ್ರಶ್ನೆ ಎದುರಾಯಿತು. ಆದರೆ ಕಿಚ್ಚ ಸುದೀಪ್ ಅವರು ಯಾವುದೇ ಗುಟ್ಟು ಬಿಟ್ಟುಕೊಡಲಿಲ್ಲ. ‘ನನಗೆ ಪಾತ್ರದ ಬಗ್ಗೆ ಗೊತ್ತಿಲ್ಲ. ಪ್ರಮಾಣಿಕವಾಗಿ ಹೇಳುತ್ತೇನೆ. ಪ್ರೇಮ್ ಕರೆದಿದ್ದಕ್ಕೆ ಪಾತ್ರ ಮಾಡಿದ್ದೇನೆ. ನಾನು ಅತಿಥಿ ಪಾತ್ರ ಮಾಡಿದಾಗ ಆ ಸಿನಿಮಾದ ಹೀರೋ ಪಾತ್ರಕ್ಕೆ ತೊಂದರೆ ಮಾಡಬಾರದು. ಅಷ್ಟು ಮಾತ್ರ ಕಾಳಜಿ ವಹಿಸುತ್ತೇನೆ. ಮೂರು ದಿನದ ಶೂಟಿಂಗ್ ಬಗ್ಗೆ ಕೇಳಿದರೆ ಮಾತ್ರ ಹೇಳುತ್ತೇನೆ. ಅದನ್ನು ಹೊರತುಪಡಿಸಿ ಬೇರೆ ಏನೂ ನನಗೆ ಗೊತ್ತಿಲ್ಲ’ ಎಂದು ಕಿಚ್ಚ ಸುದೀಪ್ (Kichcha Sudeep) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರು: ಪ್ರತಿಷ್ಠಿತ ಕಂಪೆನಿ ಉದ್ಯೋಗಿ ಪೂಜಾ ದತ್ತ ಅನುಮಾನಾಸ್ಪದ ಸಾವು; ಆಡುಗೋಡಿ ಮನೆಯಲ್ಲಿ ಅರೆಕೊಳೆತ ಬೆತ್ತಲೆ ದೇಹ ಪತ್ತೆ! – Kannada News | Bengaluru: 34 year old Woman Found Dead in Adugodi Home; Murder Suspected

ಬೆಂಗಳೂರು, ಏ.27: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಭೀಕರ ಘಟನೆ ಬೆಳಕಿಗೆ ಬಂದಿದೆ. ಪ್ರತಿಷ್ಠಿತ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ 34 ವರ್ಷದ ಯುವತಿಯೊಬ್ಬಳ ಮೃತದೇಹ, ಆಕೆಯ ಆಡುಗೋಡಿ (Adugodi) ವ್ಯಾಪ್ತಿಯ ಬಾಡಿಗೆ ಮನೆಯಲ್ಲಿ ಅತ್ಯಂತ ಕರುಣಾಜನಕ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮೃತ ಯುವತಿಯನ್ನು ಪೂಜಾ ದತ್ತ (34) ಎಂದು ಗುರುತಿಸಲಾಗಿದೆ. ಪೂಜಾ ದತ್ತ ಅವರು ಮೂಲತಃ ಜಾರ್ಖಂಡ್‌ನ ಧನಬಾದ್ ಸಮೀಪದ ಹಿರಾಪುರ ನಿವಾಸಿಯಾಗಿದ್ದರು. ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಪೂಜಾ ಅವರ ಬಾಡಿಗೆ ಮನೆಯಲ್ಲಿ ಘಟನೆ ನಡೆದಿದೆ.

ಮನೆಯಿಂದ ಭಾರಿ ದುರ್ನಾತ ಬರುತ್ತಿದ್ದ ಹಿನ್ನೆಲೆಯಲ್ಲಿ ಅನುಮಾನಗೊಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಬಾಗಿಲು ಮುರಿದು ನೋಡಿದಾಗ ಭೀಕರ ದೃಶ್ಯ ಕಣ್ಣಿಗೆ ಬಿದ್ದಿದೆ. ಪೂಜಾ ದತ್ತ ಅವರ ಮೃತದೇಹ ಸಂಪೂರ್ಣವಾಗಿ ಬೆತ್ತಲೆ ಸ್ಥಿತಿಯಲ್ಲಿ ಮತ್ತು ಅರೆಕೊಳೆತ ಸ್ಥಿತಿಯಲ್ಲಿತ್ತು. ಮೃತದೇಹ ಸಂಪೂರ್ಣ ಕೊಳೆತು ಹೋಗಿದ್ದರಿಂದ ಸಾವು ಸಂಭವಿಸಿ ಕನಿಷ್ಠ 2-3 ದಿನಗಳು ಕಳೆದಿರಬಹುದು ಎಂದು ಶಂಕಿಸಲಾಗಿದೆ.

ಇದನ್ನೂ ಓದಿ: ನೈಜ ಕ್ರೈಂಗೆ ಎಫ್‌ಐಆರ್ ಮಾಡಲ್ಲ, 2 ವರ್ಷಗಳ ಹಳೆಯ ಹಸು ನಾಪತ್ತೆ ಕೇಸ್‌ಗೆ ತರಾತುರಿ ಮಾಡ್ತೀರಾ? ಪೊಲೀಸರಿಗೆ ಹೈಕೋರ್ಟ್ ತರಾಟೆ

ಬೆತ್ತಲೆ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿರುವುದು ಮತ್ತು ಮೃತದೇಹ ಕೊಳೆತ ಸ್ಥಿತಿಯಲ್ಲಿರುವುದು ಸಾವಿನ ಕುರಿತು ಭಾರಿ ಅನುಮಾನಗಳನ್ನು ಮೂಡಿಸಿದೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆಡುಗೋಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಪೋಸ್ಟ್‌ಮಾರ್ಟಂಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪೂಜಾ ಅವರ ಫೋನ್ ಕರೆಗಳು ಮತ್ತು ಸ್ನೇಹಿತರನ್ನು ವಿಚಾರಣೆ ನಡೆಸುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗಂಡನ ತಂಗಿಯನ್ನೇ ಆತನ ಎರಡನೇ ಹೆಂಡತಿಯೆಂದ ಪತ್ನಿ; ವಿಚ್ಛೇದನಕ್ಕಾಗಿ ಎಷ್ಟೆಲ್ಲ ನಾಟಕ! – Kannada News | Gwalior woman said Husbands Sister as his Second Wife to get divorce crime news in kannada

ಗ್ವಾಲಿಯರ್, ಏಪ್ರಿಲ್ 27: ಭಾರತೀಯ ನ್ಯಾಯಾಲಯಗಳನ್ನು ತಲುಪುವ ವಿಚ್ಛೇದನ (Divorce) ಅರ್ಜಿಗಳು ಹೆಚ್ಚಾಗಿ ಕೌಟುಂಬಿಕ ಹಿಂಸೆ, ವರದಕ್ಷಿಣೆ ಸಂಬಂಧಿತ ಕಿರುಕುಳ ಅಥವಾ ದೀರ್ಘಕಾಲದ ವೈವಾಹಿಕ ಕಲಹದ ಆರೋಪಗಳನ್ನು ಒಳಗೊಂಡಿರುತ್ತವೆ. ಆದರೆ, ಮಧ್ಯಪ್ರದೇಶದ ವಿಚ್ಛೇದನ ಪ್ರಕರಣವೊಂದು ವಿಚಿತ್ರವಾದ ಕಾರಣದಿಂದ ಸುದ್ದಿಯಲ್ಲಿದೆ. ಮಹಿಳೆಯೊಬ್ಬಳು ತನ್ನ ಗಂಡನಿಂದ ವಿಚ್ಛೇದನ ಪಡೆಯಲು ಆತನಿಗೆ 2ನೇ ಮದುವೆಯಾಗಿದೆ ಎಂದು ಸುಳ್ಳು ಹೇಳಿದ್ದಳು. ಅದಕ್ಕೆ ಕೋರ್ಟ್ ಸಾಕ್ಷಿ ಕೇಳಿದಾಗ ಗಂಡನ ತಂಗಿಯನ್ನೇ ಆತನ 2ನೇ ಹೆಂಡತಿ ಎಂದು ಸುಳ್ಳು ಹೇಳಿದ್ದಳು.

2021ರಲ್ಲಿ ಮಹಿಳೆ ತನ್ನ ಪತಿ ಮರುಮದುವೆಯಾಗಿದ್ದಾರೆ ಎಂದು ಹೇಳಿಕೊಂಡು ಆಕೆ ವಿವಾಹ ವಿಚ್ಛೇದನ ಕೋರಿದ್ದಳು. ಇದಕ್ಕೆ ಸಾಕ್ಷಿಯಾಗಿ ಆಕೆ ಪತಿಯ ಸಹೋದರಿ ಮತ್ತು ಇತರ ಸಂಬಂಧಿಕರೊಂದಿಗೆ ನಿಂತಿರುವ ಕುಟುಂಬದ ಫೋಟೋವನ್ನು ನೀಡಿದ್ದರು. ಅದರಲ್ಲಿ ಆಕೆಯ ಗಂಡನ ಪಕ್ಕ ನಿಂತಿದ್ದ ಆತನ ತಂಗಿಯನ್ನೇ ಆತನ ಎರಡನೇ ಹೆಂಡತಿ ಎಂದು ಕೋರ್ಟ್​ಗೆ ನಂಬಿಸಿ ಸಾಕ್ಷಿ ನೀಡಿದ್ದಳು. ಈ ವಿಷಯ ಭಾರೀ ವಿವಾದಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ವಿಚ್ಛೇದನ ನೀಡಿದ್ದಕ್ಕೆ ಪತ್ನಿಯನ್ನು ಅಟ್ಟಾಡಿಸಿಕೊಂಡು ಹೋಗಿ ಆಸಿಡ್ ಹಾಕಿದ ಪತಿ; ಭಯಾನಕ ವಿಡಿಯೋ ವೈರಲ್

ಏಪ್ರಿಲ್ ಮೊದಲ ವಾರದಲ್ಲಿ ಪತಿಗೆ ವಿಚ್ಛೇದನದ ಆದೇಶದ ಬಗ್ಗೆ ತಿಳಿದಾಗ ಈ ವಿಷಯ ಬೆಳಕಿಗೆ ಬಂದಿತು. ನ್ಯಾಯಾಲಯದ ದಾಖಲೆಗಳನ್ನು ಪರಿಶೀಲಿಸಿದ ನಂತರ ಆಕೆ ತಪ್ಪು ಸಾಕ್ಷಿ ನೀಡಿ, ವಂಚನೆ ಮಾಡಿದ್ದು ಗೊತ್ತಾಯಿತು. ಅವರು ಈಗ ಗ್ವಾಲಿಯರ್ ಹೈಕೋರ್ಟ್‌ನಲ್ಲಿ ಈ ವಿಚ್ಛೇದನದ ತೀರ್ಪನ್ನು ಪ್ರಶ್ನಿಸಿದ್ದಾರೆ. ನ್ಯಾಯಾಲಯವನ್ನು ದಾರಿ ತಪ್ಪಿಸುವ ಮೂಲಕ ತಮ್ಮ ಪತ್ನಿ ಮೋಸದಿಂದ ತೀರ್ಪು ಪಡೆದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಹೈಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಲಿದೆ.

ಜಗಳದಿಂದಾಗಿ 2015 ರಿಂದಲೇ ಆ ಮಹಿಳೆ ತನ್ನ ಪತಿಯಿಂದ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದಳು. ದೀರ್ಘಕಾಲದ ಬೇರ್ಪಡುವಿಕೆಯ ಹೊರತಾಗಿಯೂ ಪತಿಗೆ ವಿಚ್ಛೇದನಕ್ಕೆ ಒಪ್ಪಿಗೆ ನೀಡಲು ಇಷ್ಟವಿರಲಿಲ್ಲ. ಆದರೆ ಹೆಂಡತಿ ಮದುವೆಯನ್ನು ವಿಚ್ಛೇದನ ಪಡೆಯಲು ದೃಢನಿಶ್ಚಯದಲ್ಲಿದ್ದಳು. ಹೀಗಾಗಿ, ಸುಳ್ಳು ಸಾಕ್ಷಿ ನೀಡಿ ವಿಚ್ಛೇದನ ಪಡೆಯಲು ನಿರ್ಧರಿಸಿದಳು. ಅದಕ್ಕಾಗಿ 2021 ಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದಳು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೆಎಎಸ್​​​ ಕಟ್ಟಡ ಉದ್ಘಾಟಿಸಿದ ಸಿಎಂ, ಡಿಸಿಎಂ: ಆದಷ್ಟು ಬೇಗ ಪ್ರಮೋಷನ್ ಎಂದ ಸಿದ್ದರಾಮಯ್ಯ – Kannada News | KAS Officers to Be Promoted Soon: CM Siddaramaiah says at KAS Building Inauguration

ಬೆಂಗಳೂರು, ಏಪ್ರಿಲ್​ 27: ನಗರದ ಇನ್ಫೆಂಟ್ರಿ ರಸ್ತೆಯಲ್ಲಿ ನಿರ್ಮಿಸಲಾಗಿರುವ KAS ಅಧಿಕಾರಿಗಳ ಸಂಘದ ನವೀಕೃತ ಕಟ್ಟಡವನ್ನು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​​ ಒಟ್ಟಿಗೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೆಎಎಸ್ ಅಧಿಕಾರಿಗಳಿಗೆ ಪ್ರಮೋಷನ್ ಸಂಬಂಧ 2 ಸಭೆಯಾಗಿದೆ. ಆದಷ್ಟು ಬೇಗ ಪ್ರಮೋಷನ್ ಆಗುತ್ತದೆ ಎಂದರು. ಶೇ. 33% ಅಧಿಕಾರಿಗಳನ್ನು ಸಿಇಒಗಳಾಗಿ ಬಡ್ತಿ ನೀಡುವ ಭರವಸೆ ನೀಡಿದ್ದಾರೆ. ಸಮಸ್ಯೆ ಹೇಳಿಕೊಂಡು ಜನ ನಿಮ್ಮ ಬಳಿ ಬರ್ತಾರೆ, ಸಮಾಧಾನದಿಂದ ಕೇಳಿ ಕೆಲಸ ಮಾಡಿದರೆ ರಾಜ್ಯಕ್ಕೂ ಕೀರ್ತಿ ಬರುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

DC vs RCB: ಡೆಲ್ಲಿ ವಿರುದ್ಧದ ಸೇಡಿನ ಸಮರವನ್ನು ಗೆದ್ದು ಬೀಗಿದ ಆರ್​ಸಿಬಿ – Kannada News | RCB Crushes DC in IPL 2026: Delhi Capitals All Out for 75, Bengaluru Wins Revenge Match

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಐಪಿಎಲ್ 2026 ರ 39ನೇ ಪಂದ್ಯ ದೆಹಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಿತು. ಇದು ಈ ಆವೃತ್ತಿಯಲ್ಲಿ ಎರಡು ತಂಡಗಳ ಎರಡನೇ ಮುಖಾಮುಖಿ ಇದಾಗಿತ್ತು. ಮೊದಲ ಮುಖಾಮುಖಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಆರ್​ಸಿಬಿ ವಿರುದ್ಧ ಗೆಲುವು ಸಾಧಿಸಿತ್ತು. ಹೀಗಾಗಿ ಈ ಪಂದ್ಯ ಆರ್​ಸಿಬಿ ಪಾಲಿಗೆ ಸೇಡಿನ ಸಮರವಾಗಿತ್ತು. ಈ ಸೇಡಿನ ಸಮರದಲ್ಲಿ ಡೆಲ್ಲಿ ತಂಡವನ್ನು ಅವರ ನೆಲದಲ್ಲಿ ಹೀನಾಯವಾಗಿ ಮಣಿಸಿದ ಆರ್​ಸಿಬಿ ತನ್ನ ಹಳೆಯ ಸೋಲಿಗೆ ಸೇಡು ತೀರಿಸಿಕೊಳ್ಳುವ ಜೊತೆಗೆ ಲೀಗ್​ನಲ್ಲಿ ತನ್ನ 6ನೇ ಗೆಲುವನ್ನು ದಾಖಲಿಸಿತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ತಂಡ ಕೇವಲ 75 ರನ್​ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಆರ್​ಸಿಬಿ ಕೇವಲ 1 ವಿಕೆಟ್ ಕಳೆದುಕೊಂಡು ಪಂದ್ಯವನ್ನು ಏಕಪಕ್ಷೀಯವಾಗಿ ಗೆದ್ದುಕೊಂಡಿತು.

Published On – 9:58 pm, Mon, 27 April 26

Source link

IPL 2026: ಮುಂಬೈ ತಂಡಕ್ಕೆ ಆಘಾತ; ಸ್ಟಾರ್ ಆಲ್‌ರೌಂಡರ್ ಐಪಿಎಲ್‌ನಿಂದಲೇ ಔಟ್..! – Kannada News | IPL 2026: MI’s Playoff Hopes Dented as Mitchell Santner Ruled Out, Keshav Maharaj Joins

2026 ರ ಐಪಿಎಲ್‌ನಲ್ಲಿ (IPL2026) ಸತತ ಸೋಲುಗಳಿಂದ ಕಂಗೆಟ್ಟಿರುವ ಐದು ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್ (Mumbai Indians) ತಂಡ ಇದುವರೆಗೆ ಆಡಿರುವ 7 ಪಂದ್ಯಗಳಲ್ಲಿ 5 ರಲ್ಲಿ ಸೋತು ಪಾಯಿಂಟ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಮುಂದಿನ ಸುತ್ತಿಗೆ ಅರ್ಹತೆ ಪಡೆಯಬೇಕೆಂದರೆ ಮುಂಬೈ ತಂಡ ಉಳಿದ ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ. ಇದು ತಂಡವನ್ನು ಒತ್ತಡಕ್ಕೆ ಸಿಲುಕಿಸಿದರೆ, ಇದೀಗ ಇದರ ನಡುವೆ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಎಡ ಭುಜದ ಗಾಯದಿಂದಾಗಿ ನ್ಯೂಜಿಲೆಂಡ್ ಸ್ಪಿನ್ ಆಲ್‌ರೌಂಡರ್ ಮಿಚೆಲ್ ಸ್ಯಾಂಟ್ನರ್ (Mitchell Santner) ಇಡೀ ಐಪಿಎಲ್​ನಿಂದ ಹೊರಗುಳಿದಿದ್ದಾರೆ.

ಮಿಚೆಲ್ ಸ್ಯಾಂಟ್ನರ್ ಐಪಿಎಲ್​ನಿಂದ ಔಟ್

ವಾಸ್ತವವಾಗಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಸ್ಯಾಂಟ್ನರ್ ಬೌಂಡರಿಯ ಬಳಿ ಕ್ಯಾಚ್ ಹಿಡಿಯಲು ಪ್ರಯತ್ನಿಸುವಾಗ ಗಾಯಕ್ಕೆ ತುತ್ತಾಗಿದ್ದರು. ಇದರಿಂದಾಗಿ ಅವರು ಮೈದಾನ ತೊರೆದು ಡಗೌಟ್ ಸೇರಿಕೊಂಡಿದ್ದರು. ಅಂದಿನಿಂದ ಸ್ಯಾಂಟ್ನರ್ ಗಾಯದ ಬಗ್ಗೆ ಆತಂಕ ಮನೆ ಮಾಡಿತ್ತು. ಇದೀಗ ಅದರಂತೆ ಸ್ಯಾಂಟ್ನರ್ ಗಾಯ ಗಂಭೀರವಾಗಿದ್ದು, ಅವರೀಗ ಐಪಿಎಲ್​ನಿಂದ ಹೊರಬಿದ್ದಿದ್ದಾರೆ. ಹೀಗಾಗಿ ಮುಂಬೈ ಫ್ರಾಂಚೈಸಿ ಸ್ಯಾಂಟ್ನರ್ ಬದಲಿಯಾಗಿ ದಕ್ಷಿಣ ಆಫ್ರಿಕಾದ ಅನುಭವಿ ಎಡಗೈ ಸ್ಪಿನ್ನರ್ ಕೇಶವ್ ಮಹಾರಾಜ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಮಿಚೆಲ್ ಸ್ಯಾಂಟ್ನರ್ ಮುಂಬೈ ಇಂಡಿಯನ್ಸ್‌ನ ಸ್ಪಿನ್ ಬೌಲಿಂಗ್‌ ವಿಭಾಗದ ಪ್ರಮುಖ ಅಸ್ತ್ರವಾಗಿದ್ದರು. ವಾಂಖೆಡೆ ಕ್ರೀಡಾಂಗಣದಲ್ಲಿ ಸಿಎಸ್‌ಕೆ ವಿರುದ್ಧದ ಪಂದ್ಯದ ಸಮಯದಲ್ಲಿ, ಕ್ಯಾಚ್ ಹಿಡಿಯಲು ಪ್ರಯತ್ನಿಸುವಾಗ ಸ್ಯಾಂಟ್ನರ್ ಭುಜಕ್ಕೆ ಗಾಯ ಮಾಡಿಕೊಂಡಿದ್ದರು. ಪರಿಣಾಮವಾಗಿ, ಮುಂಬೈ ಇಂಡಿಯನ್ಸ್ ಶಾರ್ದೂಲ್ ಠಾಕೂರ್ ಅವರನ್ನು ಕನ್ಕ್ಯುಶನ್ ಬದಲಿ ಆಟಗಾರನಾಗಿ ಆಡಿಸಿತ್ತು.

ಬದಲಿಯಾಗಿ ಬಂದ ಮಹಾರಾಜ್

ಏತನ್ಮಧ್ಯೆ, ತಂಡವು ಈಗ ಅವರ ಬದಲಿಯಾಗಿ ದಕ್ಷಿಣ ಆಫ್ರಿಕಾದ ಅನುಭವಿ ಎಡಗೈ ಸ್ಪಿನ್ನರ್ ಕೇಶವ್ ಮಹಾರಾಜ್ ಅವರನ್ನು 75 ಲಕ್ಷ ರೂ. ಗೆ ತಂಡಕ್ಕೆ ಸೇರಿಸಿಕೊಂಡಿದೆ. ಕೇಶವ್ ಮಹಾರಾಜ್​ಗೆ ಐಪಿಎಲ್‌ನಲ್ಲಿ ಆಡಿದ ಹೆಚ್ಚಿನ ಅನುಭವವಿಲ್ಲ. 2024 ರಲ್ಲಿ ರಾಜಸ್ಥಾನ್ ಪರ ಆಡಿದ್ದ ಮಹಾರಾಜ್​ಗೆ ಕೇವಲ ಎರಡು ಪಂದ್ಯಗಳನ್ನು ಆಡುವ ಅವಕಾಶ ಸಿಕ್ಕಿತ್ತು. ಈ ಬಾರಿಯ ಹರಾಜಿನಲ್ಲಿ ಅವರನ್ನು ಯಾವ ತಂಡವೂ ಖರೀದಿಸಿರಲಿಲ್ಲ. ಇದೀಗ ಸ್ಯಾಂಟ್ನರ್ ಗಾಯದಿಂದಾಗಿ ಮಹಾರಾಜ್​ಗೆ ಮುಂಬೈ ಪರ ಆಡುವ ಅವಕಾಶ ಸಿಕ್ಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಂಜಾವೂರಿನ ಬೃಹದೀಶ್ವರ ದೇವಾಲಯದ ರಥೋತ್ಸವ; ಬೀದಿ-ಬೀದಿಗಳಲ್ಲಿ ಓಂ ನಮಃ ಶಿವಾಯ ಘೋಷಣೆ – Kannada News | Thousands of devotees participated in chariot procession at Thanjavur Big temple

ತಂಜಾವೂರು, ಏಪ್ರಿಲ್ 27: ವಿಶ್ವಪ್ರಸಿದ್ಧ ತಂಜಾವೂರು ಬೃಹದೀಶ್ವರ ದೇವಸ್ಥಾನದಲ್ಲಿ ರಥೋತ್ಸವ ನಡೆದಿದೆ. ಧ್ವಜಾರೋಹಣದೊಂದಿಗೆ ಚಿತ್ತಿರೈ ಉತ್ಸವ ಪ್ರಾರಂಭವಾಯಿತು. 18 ದಿನಗಳ ಉತ್ಸವದಲ್ಲಿ ಪ್ರತಿದಿನ ಕಲೈ ನೃತ್ಯ ಪ್ರದರ್ಶನಗಳು ಮತ್ತು ಸ್ವಾಮಿಗಳ ವೇದಿಕೆ ಉಲಾ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು. ಇಂದು ಬೆಳಿಗ್ಗೆ ತಂಜಾವೂರು ಬೃಹದೀಶ್ವರ ದೇವಸ್ಥಾನದ ತಿರುಥೆರೋಟ್ಟಂ ನಡೆಯಿತು. ಇದಕ್ಕೂ ಮೊದಲು, ದೇವಾಲಯದಲ್ಲಿ ಸ್ವಾಮಿಗೆ ವಿಶೇಷ ಅಭಿಷೇಕ ಮತ್ತು ದೀಪಾರಾಧನೆಯನ್ನು ಸಲ್ಲಿಸಲಾಯಿತು ಮತ್ತು ಪೂಜೆಗಳನ್ನು ಮಾಡಲಾಯಿತು. ತಂಜಾವೂರಿನ ಬೀದಿಗಳಲ್ಲಿ ರಥದ ಮೆರವಣಿಗೆ ನಡೆಯಿತು. ಈ ರಥವು 13 ಹಂತಗಳನ್ನು ಹೊಂದಿದ್ದು, ಸುಮಾರು 19 ಅಡಿ ಎತ್ತರ, 15 ಅಡಿ ಅಗಲ ಮತ್ತು 43 ಟನ್ ತೂಕವಿದೆ. ಈ ರಥವನ್ನು 35 ಅಡಿ ಎತ್ತರಕ್ಕೆ ಅಲಂಕರಿಸಲಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

SSLC ಫಲಿತಾಂಶದಲ್ಲಿ ಮತ್ತೊಂದು ಎಡವಟ್ಟು: ಕೇವಲ 12 ಅಂಕ ನಮೂದು; ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ – Kannada News | Koppal SSLC Mark Entry Error: Student Attempts Suicide After Only 12 Marks Recorded

SSLC ಮೌಲ್ಯಮಾಪಕರಿಂದ ಎಡವಟ್ಟುImage Credit source: tv9 kannada

ಕೊಪ್ಪಳ, ಏಪ್ರಿಲ್​​ 27: ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾದ ಎಸ್​​​ಎಸ್​ಎಲ್​​ಸಿ (SSLC) ಪರೀಕ್ಷೆಯ ಫಲಿತಾಂಶ ಇತ್ತೀಚೆಗೆ ಪ್ರಕಟವಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ತೇರ್ಗಡೆಯಲ್ಲಿ ದಾಖಲೆಯ ರಿಸಲ್ಟ್​ ಬಂದಿದೆ. ಆದರೆ ಮೌಲ್ಯಮಾಪಕರಿಂದ ಉಂಟಾಗಿರುವಂತಹ ಕೆಲ ಎಡವಟ್ಟುಗಳು ದಿನೇದಿನೆ ಬೆಳಕಿಗೆ ಬರುತ್ತಿವೆ. ಇದೀಗ ಜಿಲ್ಲೆಯಲ್ಲೂ ಶಿಕ್ಷಣ ಇಲಾಖೆಯ ಎಡವಟ್ಟು ಒಂದು ಬೆಳಕಿಗೆ ಬಂದಿದ್ದು, ಅದರಿಂದ ಆಘಾತಗೊಂಡ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ನಡೆದಿದೆ.

ಕೊಪ್ಪಳ ತಾಲೂಕಿನ ಕಾತರಕಿ ಗುಡ್ಲಾನೂರ ಗ್ರಾಮದ ನಿವಾಸಿ ಸಂಜನಾ ಮಡಿವಾಳರ ಎಸ್​​​ಎಸ್​ಎಲ್​​ಸಿ ಪರೀಕ್ಷೆ ಬರೆದಿದ್ದಳು. ಆದರೆ ಫಲಿತಾಂಶದಂದು ಆಘಾತವೊಂದು ಎದುರಾಗಿತ್ತು. ಎಲ್ಲಾ ವಿಷಯಗಳಲ್ಲಿ ಉತ್ತಮ ಅಂಕ ಪಡೆದುಕೊಂಡಿದ್ದ ಸಂಜನಾ, ಕನ್ನಡ ವಿಷಯದಲ್ಲಿ ಅಂಕಪಟ್ಟಿಯಲ್ಲಿ ಕೇವಲ 12 ಅಂಕಗಳು ಎಂದು ನಮೂದಾಗಿತ್ತು. ಆದರೆ ಉತ್ತರ ಪತ್ರಿಕೆಯ ಫೋಟೋ ಪ್ರತಿ ತರೆಸಿಕೊಂಡು ಪರಿಶೀಲನೆ ಮಾಡಿದಾಗ 71 ಅಂಕ ಪಡೆದುಕೊಂಡಿರುವುದು ಗೊತ್ತಾಗಿದ್ದು, ಸದ್ಯ ಸಂಜನಾ ನಿಟ್ಟುಸಿರು ಬಿಟ್ಟಿದ್ದಾಳೆ.

ಆತ್ಮಹತ್ಯೆಗೆ ಯತ್ನ

ಹೆಚ್ಚು ಅಂಕ ನಿರೀಕ್ಷಿಸಿದ್ದ ಸಂಜನಾ, ಅಂಕಪಟ್ಟಿಯಲ್ಲಿ ಫೇಲ್ ಆಗಿರುವುದನ್ನು ಕಂಡು ತೀವ್ರ ಮಾನಸಿಕ ಆಘಾತಕ್ಕೊಳಗಾಗಿದ್ದಳು. ಇದೇ ಕಾರಣಕ್ಕೆ ದುಡುಕಿನ ನಿರ್ಧಾರಕ್ಕೆ ಮುಂದಾಗಿದ್ದಳು. ಶಿಕ್ಷಣ ಇಲಾಖೆಯ ಎಡವಟ್ಟಿನಿಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಆದರೆ, ಪೋಷಕರ ಸಮಯಪ್ರಜ್ಞೆಯಿಂದಾಗಿ ದೊಡ್ಡ ಅನಾಹುತವೊಂದು ತಪ್ಪಿದ್ದು, ವಿದ್ಯಾರ್ಥಿನಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಇದನ್ನೂ ಓದಿ: SSLC ಫಲಿತಾಂಶದ ವೇಳೆ ಮೌಲ್ಯಮಾಪಕರಿಂದ ಭಾರಿ ಯಡವಟ್ಟು: 92ರ ಬದಲು ವಿದ್ಯಾರ್ಥಿಗೆ ಬಂದಿದ್ದು 48 ಅಂಕ!

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ವಿದ್ಯಾರ್ಥಿನಿ ಸಂಜನಾ, ಕಷ್ಟಪಟ್ಟು ಓದಿ ಉತ್ತಮ ಅಂಕ ಗಳಿಸಿದ್ದರೂ, ಇಲಾಖೆಯವರ ನಿರ್ಲಕ್ಷ್ಯದಿಂದಾಗಿ ಸ್ನೇಹಿತರ ಮುಂದೆ ಮತ್ತು ಹೆತ್ತವರಿಗೆ ಅವಮಾನ ಅನುಭವಿಸಬೇಕಾಯಿತು ಎಂದು ಅಳಲು ತೋಡಿಕೊಂಡಿದ್ದಾಳೆ.

ತಪ್ಪಿಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಸಂಜನಾ ತಂದೆ

ಇನ್ನು ಈ ಬಗ್ಗೆ ಸಂಜನಾ ತಂದೆ ಮಂಜುನಾಥ್​ ಮಡಿವಾಳರ ಮಾತನಾಡಿದ್ದು, ತಪ್ಪಿಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ನನ್ನ ಮಗಳೊಂದಿಗೆ ಆದ ಘಟನೆ ಬೇರೆ ಮಕ್ಕಳೊಂದಿಗೆ ಆಗಬಾರದು. ಶಿಕ್ಷಣ ಇಲಾಖೆ ಎಡವಟ್ಟಿನಿಂದ ನನ್ನ ಮಗಳನ್ನು ಕಳೆದುಕೊಳ್ಳುತ್ತಿದ್ದೆ. ಹೀಗಾಗಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು ಎಂದು ಮಂಜುನಾಥ್ ಅವರು ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link