Category Archives: Blog

Your blog category

ಮೈದಾನದಲ್ಲಿ ಕಿರಿಕ್… ಆಟಗಾರನ ಮೇಲೆ ಕೈ ಮಾಡಿದ ವೈಭವ್ ಸೂರ್ಯವಂಶಿ..! – Kannada News | Vaibhav sooryavanshi fight with sri lanka Players

ಶ್ರೀಲಂಕಾದ ದಂಬುಲಾದಲ್ಲಿ ನಡೆದ ಟ್ರೈ-ನೇಷನ್ ‘ಎ’ ಸರಣಿಯ 4ನೇ ಪಂದ್ಯವು ಹೈ-ಡ್ರಾಮಾಗೆ ಸಾಕ್ಷಿಯಾಗಿದೆ. ಭಾರತ ಎ ಮತ್ತು ಶ್ರೀಲಂಕಾ ಎ ನಡುವಣ ಏಕದಿನ ಪಂದವು ಮೊದಲಿಗೆ ಟೈನಲ್ಲಿ ಅಂತ್ಯಗೊಂಡಿತು. ಆ ಬಳಿಕ ನಡೆದ ಸೂಪರ್ ಓವರ್​ನಲ್ಲಿ ಟೀಮ್ ಇಂಡಿಯಾವನ್ನು ಸೋಲಿಸುವಲ್ಲಿ ಶ್ರೀಲಂಕಾ ಯಶಸ್ವಿಯಾಗಿದೆ. ಈ ಸೋಲಿನ ಬೆನ್ನಲ್ಲೇ ಆಟಗಾರರು ಪರಸ್ಪರ ಕಿತ್ತಾಡಿಕೊಂಡಿದ್ದಾರೆ.

ಈ ಮ್ಯಾಚ್​ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ‘ಎ’ ತಂಡ ಸೂರ್ಯಂಶ್ ಶೆಡ್ಗೆ (72) ಅವರ ಅರ್ಧಶತಕದ ನೆರವೇರಿಕೆಯಿಂದ 265 ರನ್ ಗಳಿಸಿತ್ತು. ಶ್ರೀಲಂಕಾ ತಂಡವೂ ಸರಿಯಾಗಿ 265 ರನ್ ಗಳಿಸಿದ್ದರಿಂದ ಪಂದ್ಯ ಟೈ ಆಗಿ, ಸೂಪರ್ ಓವರ್ ಆಡಲಾಯಿತು.

  • ಸೂಪರ್ ಓವರ್‌ನಲ್ಲಿ ಶ್ರೀಲಂಕಾ 16 ರನ್ ಬಾರಿಸಿ ಭಾರತಕ್ಕೆ 17 ರನ್ ಗುರಿ ನೀಡಿತು.
  • 17 ರನ್​ಗಳ ಗುರಿ ಪಡೆದ ಟೀಮ್ ಇಂಡಿಯಾ ಪರ ವೈಭವ್ ಸೂರ್ಯವಂಶಿ ಹಾಗೂ ಸೂರ್ಯಂಶ್ ಶೆಡ್ಗೆ ಕಣಕ್ಕಿಳಿದಿದ್ದರು.

ಸೂಪರ್ ಓವರ್​ನ ಮೊದಲ 4 ಎಸೆತಗಳಲ್ಲಿ ಟೀಮ್ ಇಂಡಿಯಾ ಕಲೆಹಾಕಿದ್ದು 5 ರನ್​ಗಳು ಮಾತ್ರ. ಅದರಂತೆ ಕೊನೆಯ 2 ಎಸೆತಗಳಲ್ಲಿ ಭಾರತ ತಂಡಕ್ಕೆ 12 ರನ್​ಗಳು ಬೇಕಿದ್ದವು. 5ನೇ ಎಸೆತದಲ್ಲಿ ವೈಭವ್ ಸೂರ್ಯವಂಶಿ ಫೋರ್ ಬಾರಿಸಿದರು.

ಆದರೆ  ಶ್ರೀಲಂಕಾದ 19 ವರ್ಷದ ಮಿಸ್ಟರಿ ಸ್ಲಿಂಗರ್  ಕುಗಥಾಸ್ ಮಥುಲನ್ ಎಸೆದ ಕೊನೆಯ ಎಸೆತವನ್ನು ಕನೆಕ್ಟ್ ಮಾಡಲು ವೈಭವ್ ವಿಫಲರಾದರು. ಈ ಮೂಲಕ ಟೀಮ್ ಇಂಡಿಯಾ  7 ರನ್​ಗಳಿಂದ ಸೋಲೊಪ್ಪಿಕೊಂಡಿದೆ.

ಕೆರಳಿದ ವೈಭವ್ ಸೂರ್ಯವಂಶಿ!

ಸೂಪರ್ ಓವರ್​ನಲ್ಲಿ 7 ರನ್​ಗಳಿಂದ ಗೆಲ್ಲುತ್ತಿದ್ದಂತೆ​ ಶ್ರೀಲಂಕಾ ಆಟಗಾರರು ಅತಿಯಾದ ಸಂಭ್ರಮಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು. ಈ ವೇಳೆ ಶ್ರೀಲಂಕಾದ ಆಟಗಾರ ವಿಶೇನ್ ಹಾಲಂಬಾಗೆ, ನಿರಾಸೆಯಿಂದ ಪೆವಿಲಿಯನ್‌ಗೆ ಮರಳುತ್ತಿದ್ದ ವೈಭವ್ ಸೂರ್ಯವಂಶಿಯವರನ್ನು ನೋಡಿ ಅದೇನೋ ಹೇಳಿದ್ದಾರೆ.

ಈ ಮಾತಿನಿಂದ ಕೆರಳಿದ 15 ವರ್ಷದ ವೈಭವ್ ಸೂರ್ಯವಂಶಿ, ನೇರವಾಗಿ ಹಾಲಂಬಾಗೆ ಅವರತ್ತ ಧಾವಿಸಿ ಮಾತಿನ ಚಕಮಕಿ ನಡೆಸಿದರು. ಈ ವಾಗ್ವಾದದ ನಡುವೆ ವೈಭವ್, ಲಂಕಾ ಆಟಗಾರನ ಎದೆಗೆ ಜೋರಾಗಿ ಕೈಯಿಂದ ತಳ್ಳಿದ್ದಾರೆ.

ಆಟಗಾರರ ನಡುವಣ ಈ ಜಗಳದಿಂದಾಗಿ ಮೈದಾನದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಯಿತು. ತಕ್ಷಣವೇ ಶ್ರೀಲಂಕಾದ ಹಿರಿಯ ವಿಕೆಟ್‌ಕೀಪರ್ ನಿರೋಷನ್ ಡಿಕ್ವೆಲ್ಲಾ ಮತ್ತು ಕೆಲ ಆಟಗಾರರು ಮಧ್ಯಪ್ರವೇಶಿಸಿ ಜಗಳವನ್ನು ತಡೆದರು. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ವೈಭವ್ ಸೂರ್ಯವಂಶಿ ನಡೆಗೆ ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.

ಸದ್ಯ ಶ್ರೀಲಂಕಾ ಎ ವಿರುದ್ಧ ಸೋತಿರುವ ಭಾರ ಎ ತಂಡವು ತನ್ನ ಮುಂದಿನ ಪಂದ್ಯವನ್ನು ಅಫ್ಘಾನಿಸ್ತಾನ್ ಎ ವಿರುದ್ಧ ಆಡಲಿದೆ. ಈ ಮ್ಯಾಚ್​ನಲ್ಲಿ ಗೆದ್ದರೆ ಮಾತ್ರ ಟೀಮ್ ಇಂಡಿಯಾ ತ್ರಿಕೋನ ಸರಣಿಯಲ್ಲಿ ಫೈನಲ್​ ಆಡಬಹುದು.

Source link

ಮಕ್ಕಳ ಸುರಕ್ಷತೆ ಕಡೆಗೆ ಬ್ರಿಟನ್ ಮಹಾ ಹೆಜ್ಜೆ: 16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬಳಕೆ ನಿಷೇಧ – Kannada News | UK Bans Social Media for Under 16s: Protecting Children’s Mental Health Online

ಲಂಡನ್, ಜೂನ್ 16: ಮಕ್ಕಳ ಮಾನಸಿಕ ಆರೋಗ್ಯ(Mental Health)ವನ್ನು ಕಾಪಾಡುತ್ತಾ ಶಿಕ್ಷಣ ಮತ್ತು ಬಾಲ್ಯವನ್ನು ಮೊಬೈಲ್ ಚಟದಿಂದ ರಕ್ಷಿಸಲು ಬ್ರಿಟನ್ ಸರ್ಕಾರವು 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸಿದೆ. ಆಸ್ಟ್ರೇಲಿಯಾ ಮತ್ತು ಫ್ರಾನ್ಸ್​ ದೇಶಗಳು ಕೂಡ ಇದೇ ಹಾದಿಯಲ್ಲಿ ಮುನ್ನಡೆಯುತ್ತಿವೆ.

ಸಾಮಾಜಿಕ ಮಾಧ್ಯಮಗಳ ಅತಿಯಾದ ವ್ಯಸನವು ಮಕ್ಕಳ ಮಾನಸಿಕ ಆರೋಗ್ಯ, ನಿದ್ರೆ, ಶಿಕ್ಷಣ, ಆಟ ಮತ್ತು ಕುಟುಂಬ ಜೀವನದ ಮೇಲೆ ತೀವ್ರ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಆದ್ದರಿಂದ ಮಕ್ಕಳಿಗೆ ಅವರ ಮುಗ್ಧ ಬಾಲ್ಯವನ್ನು ಮರಳಿ ನೀಡುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.

ಈ ನಿರ್ಧಾರಕ್ಕೆ ಜಗತ್ತಿನ ಪ್ರಭಾವಿ ತಂತ್ರಜ್ಞಾನ ಕಂಪನಿಗಳಿಂದ ವಿರೋಧ ವ್ಯಕ್ತವಾಗಬಹುದು. ಆದರೆ, ಯಾವುದೇ ವಾಣಿಜ್ಯ ಲಾಭಕ್ಕಿಂತ ಮಕ್ಕಳ ಸುರಕ್ಷತೆಯೇ ನಮಗೆ ಮುಖ್ಯ ಎಂದು ಪ್ರಧಾನಿ ಕೀರ್ ಸ್ಟಾರ್ಮರ್ ಸ್ಪಷ್ಟಪಡಿಸಿದ್ದಾರೆ.

ಕೇವಲ ಬ್ರಿಟನ್ ಮಾತ್ರವಲ್ಲದೆ, ಈಗಾಗಲೇ ಆಸ್ಟ್ರೇಲಿಯಾ 16 ವರ್ಷದೊಳಗಿನ ಮಕ್ಕಳಿಗೆ ನಿಷೇಧ ಹೇರಿದೆ. ಫ್ರಾನ್ಸ್ 15 ವರ್ಷದೊಳಗಿನ ಮಕ್ಕಳಿಗೆ ಕಠಿಣ ಕಾನೂನು ತರುತ್ತಿದೆ ಹಾಗೂ ಜಪಾನ್, ಸ್ಪೇನ್ ಮತ್ತು ಡೆನ್ಮಾರ್ಕ್ ದೇಶಗಳು ಕೂಡ ಅಪ್ರಾಪ್ತ ವಯಸ್ಕರ ಸಾಮಾಜಿಕ ಮಾಧ್ಯಮ ಬಳಕೆಯನ್ನು ಬಿಗಿಗೊಳಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ.

ಮತ್ತಷ್ಟು ಓದಿ: ಮೊಬೈಲ್​ನಲ್ಲಿ ಗೇಮ್ ಆಡದಂತೆ ತಂದೆ ತಡೆದಿದ್ದಕ್ಕೆ ಮನೆಬಿಟ್ಟು ಹೋದ ಮೂವರು ಮಕ್ಕಳು

ಬ್ರಿಟನ್‌ನ ಪ್ರಸಿದ್ಧ ‘ದಿ ಗಾರ್ಡಿಯನ್’ ಪತ್ರಿಕೆಯ ವರದಿಯ ಪ್ರಕಾರ, ಈ ಪ್ರಸ್ತಾವಿತ ವಯೋಮಿತಿ ನಿಷೇಧವು ಮಕ್ಕಳ ನೆಚ್ಚಿನ ಅಪ್ಲಿಕೇಶನ್‌ಗಳಾದ ಟಿಕ್‌ಟಾಕ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್, ಥ್ರೆಡ್ಸ್, ಎಕ್ಸ್ (ಟ್ವಿಟರ್), ಯೂಟ್ಯೂಬ್, ಸ್ನ್ಯಾಪ್‌ಚಾಟ್ ಮತ್ತು ರೆಡ್ಡಿಟ್ ಸೇರಿದಂತೆ ಬಹುತೇಕ ಎಲ್ಲಾ ಪ್ರಮುಖ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಗೆ ಅನ್ವಯಿಸಲಿದೆ. ಮಕ್ಕಳ ಭಾವನಾತ್ಮಕ ಆರೋಗ್ಯದ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಧಾನಿ ಸ್ಪಷ್ಟಪಡಿಸಿದ್ದಾರೆ.

ಈ ಕಠಿಣ ನಿರ್ಧಾರದ ಬಗ್ಗೆ ಯೂಟ್ಯೂಬ್ ಮತ್ತು ಸ್ನ್ಯಾಪ್‌ಚಾಟ್ ಸೇರಿದಂತೆ ಪ್ರಮುಖ ತಂತ್ರಜ್ಞಾನ ಕಂಪನಿಗಳು ಕಳವಳ ವ್ಯಕ್ತಪಡಿಸಿವೆ. ವಯಸ್ಸಿನ ಪರಿಶೀಲನೆ ಮತ್ತು ಪೋಷಕರ ನಿಯಂತ್ರಣವನ್ನು ಬಲಪಡಿಸುವುದು ನಿಷೇಧಕ್ಕಿಂತ ಉತ್ತಮ ಎಂದು ಕಂಪನಿಗಳು ವಾದಿಸಿವೆ. ಆದರೆ, ತಂತ್ರಜ್ಞಾನ ಕಂಪನಿಗಳ ವಿರೋಧವನ್ನು ಎದುರಿಸಲು ಸರ್ಕಾರ ಸಿದ್ಧವಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.

ಆನ್‌ಲೈನ್‌ನಲ್ಲಿ ಮಕ್ಕಳನ್ನು ರಕ್ಷಿಸುವ ಈ ಕಠಿಣ ನಿಯಮವು ಇತ್ತೀಚಿನ ಜಾಗತಿಕ ಟ್ರೆಂಡ್ ಆಗಿದೆ. ಈಗಾಗಲೇ ಆಸ್ಟ್ರೇಲಿಯಾ, ಕೆನಡಾ, ಬ್ರೆಜಿಲ್ ಮತ್ತು ಇಂಡೋನೇಷ್ಯಾ ದೇಶಗಳು ಇಂತಹ ವಯೋಮಿತಿ ನಿರ್ಬಂಧಗಳನ್ನು ಜಾರಿಗೆ ತಂದಿದ್ದು, ಫ್ರಾನ್ಸ್ ಮತ್ತು ಸ್ಪೇನ್ ದೇಶಗಳು ಕೂಡ ಇದರ ಪರಿಶೀಲನೆಯಲ್ಲಿವೆ.

ಬ್ರಿಟನ್ ಸರ್ಕಾರದ ಈ ಪ್ರಸ್ತಾವನೆಗೆ ಅಲ್ಲಿನ ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ಸಿಕ್ಕಿದ್ದು, ಬರೋಬ್ಬರಿ 1.16 ಲಕ್ಷಕ್ಕೂ ಹೆಚ್ಚು ಜನ ನಿಷೇಧದ ಪರವಾಗಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ನಾವು ದೇಶದ ಕುಟುಂಬಗಳ ಪರವಾಗಿ ನಿಲ್ಲಬೇಕೇ ಹೊರತು, ಡಿಜಿಟಲ್ ವ್ಯವಸ್ಥೆಯ ಪರವಾಗಿ ಅಲ್ಲ ಎಂದು ಪ್ರಧಾನಿ ಸ್ಟಾರ್ಮರ್ ಖಡಕ್ ಆಗಿ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕಾಲಿವುಡ್ ಸ್ಟಾರ್ ನಟನ ಚಿತ್ರಕ್ಕೆ ಕನ್ನಡದ ನಟಿ ಸಂಯುಕ್ತಾ ಹೆಗಡೆ ಎಂಟ್ರಿ – Kannada News | Samyuktha Hegde Joins Chiyaan Vikram’s ‘Chiyaan 63’ A Rising Pan India Star

ಕನ್ನಡ ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, ಈಗ ಪರಭಾಷೆಗಳಲ್ಲೂ ಧೂಳೆಬ್ಬಿಸುತ್ತಿರುವ ನಟಿ ಸಂಯುಕ್ತಾ ಹೆಗಡೆ ಅವರ ಖಾತೆಗೆ ಮತ್ತೊಂದು ದೊಡ್ಡ ಸಿನಿಮಾ ಸೇರ್ಪಡೆಯಾಗಿದೆ. ಕಾಲಿವುಡ್ ಸೂಪರ್ ಸ್ಟಾರ್ ಚಿಯಾನ್ ವಿಕ್ರಮ್ ನಟನೆಯ, ಆನಂದ್ ಶಂಕರ್ ನಿರ್ದೇಶನದ ಬಹುನಿರೀಕ್ಷಿತ ‘ಚಿಯಾನ್ 63’ ಚಿತ್ರಕ್ಕೆ ಸಂಯುಕ್ತಾ ಆಯ್ಕೆಯಾಗಿದ್ದಾರೆ. ಈ ಹಿಂದೆ ವಿಕ್ರಮ್ ಹಾಗೂ ಆನಂದ್ ಅವರು ‘ಇರು ಮುಗನ್’ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಇದಾದ ಹತ್ತು ವರ್ಷಗಳ ಬಳಿಕ ಈ ಜೋಡಿ ಮತ್ತೆ ಒಂದಾಗುತ್ತಿದೆ. ಈ ಬಿಗ್ ಪ್ರಾಜೆಕ್ಟ್‌ನಲ್ಲಿ ಸಂಯುಕ್ತಾ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ವಿಶೇಷ.

ರಕ್ಷಿತ್ ಶೆಟ್ಟಿ ನಟನೆಯ ಹಾಗೂ ರಿಷಬ್ ಶೆಟ್ಟಿ ನಿರ್ದೇಶನದ ಹಿಟ್ ಚಿತ್ರ ‘ಕಿರಿಕ್ ಪಾರ್ಟಿ’ ಮೂಲಕ ಸಂಯುಕ್ತಾ ಹೆಗಡೆ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ತಮ್ಮ ಮೊದಲ ಸಿನಿಮಾದಲ್ಲೇ ಪ್ರೇಕ್ಷಕರ ಮನಗೆದ್ದ ಇವರು, ಚಿತ್ರದಲ್ಲಿನ ಆರ್ಯ ಪಾತ್ರದ ಮೂಲಕ ರಾತ್ರೋರಾತ್ರಿ ಸ್ಟಾರ್ ಪಟ್ಟ ತಂದುಕೊಂಡರು. ಈ ಚಿತ್ರದ ಯಶಸ್ಸಿನ ಬೆನ್ನಲ್ಲೇ ಇದರ ತೆಲುಗು ರಿಮೇಕ್ ‘ಕಿರಾಕ್ ಪಾರ್ಟಿ’ ಮೂಲಕ ಅವರು ಟಾಲಿವುಡ್‌ಗೂ ಎಂಟ್ರಿ ಕೊಟ್ಟರು.

ಕನ್ನಡದ ನಂತರ ತಮಿಳು ಚಿತ್ರರಂಗದಲ್ಲೂ ಸಕ್ರಿಯರಾದರು. ‘ಕೋಮಾಲಿ’ ಮತ್ತು ‘ಮನ್ಮಥ ಲೀಲೆ’ ಚಿತ್ರಗಳಲ್ಲಿನ ತಮ್ಮ ನಟನೆಯ ಮೂಲಕ ಕಾಲಿವುಡ್ ಪ್ರೇಕ್ಷಕರಿಗೆ ಹತ್ತಿರವಾದರು. ಕೇವಲ ಗ್ಲಾಮರ್ ಮಾತ್ರವಲ್ಲದೆ ವಿಭಿನ್ನ ಪಾತ್ರಗಳ ಮೂಲಕ ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಮಾರುಕಟ್ಟೆ ಸೃಷ್ಟಿಸಿಕೊಂಡ ಈ ಕರಾವಳಿ ಬೆಡಗಿ, ಇತ್ತೀಚೆಗೆ ಬಾಲಿವುಡ್ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟು ಅಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ. ಕನ್ನಡ ಬಿಗ್ ಬಾಸ್ ಅಲ್ಲೂ ಸಂಯುಕ್ತಾ ಕಾಣಿಸಿಕೊಂಡಿದ್ದರು. ಸಹ ಸ್ಪರ್ಧಿ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸಬೇಕಾಯಿತು. ಬಿಗ್ ಬಾಸ್ ಮನೆಯ ಕಟ್ಟುನಿಟ್ಟಿನ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಅವರನ್ನು ಶೋನಿಂದ ಅರ್ಧಕ್ಕೇ ಎಲಿಮಿನೇಟ್ ಮಾಡಿ ಹೊರಗೆ ಕಳುಹಿಸಲಾಗಿತ್ತು.

ಇದನ್ನೂ ಓದಿ: ಸತತ ಸೋಲಿನ ಬಳಿಕ ಸಂಭಾವನೆಯನ್ನು ಗಣನೀಯವಾಗಿ ಇಳಿಸಿಕೊಂಡ ವಿಕ್ರಮ್

ಈಗ ಸಂಯುಕ್ತಾಗೆ ದೊಡ್ಡ ಆಫರ್​ ಸಿಕ್ಕಿದೆ. ಈ ಸಿನಿಮಾ ಕಂಪ್ಲೀಟ್ ಫ್ಯಾಮಿಲಿ ಆ್ಯಕ್ಷನ್ ಎಂಟರ್‌ಟೈನರ್ ಆಗಿ ಮೂಡಿಬರುತ್ತಿದೆ. ಈ ಚಿತ್ರದಲ್ಲಿ ಕೇವಲ ವಿಕ್ರಮ್ ಅಷ್ಟೇ ಅಲ್ಲದೆ ಹಿರಿಯ ನಟಿ ಊರ್ವಶಿ, ಎಂ.ಎಸ್. ಭಾಸ್ಕರ್ ಮತ್ತು ರಿಯಾ ಶಿಬು ಸೇರಿದಂತೆ ಒಂದು ದೊಡ್ಡ ತಾರಾಬಳಗವೇ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕರ್ನಾಟಕದಲ್ಲಿ ಶೇ 21 ರಷ್ಟು ಮುಂಗಾರು ಮಳೆ ಕೊರತೆ: ಪ್ರಮುಖ ಡ್ಯಾಂಗಳಲ್ಲಿ ತಳ ಸೇರಿದ ನೀರು – Kannada News | Karnataka Suffer 21 percent Monsoon Rain Deficit; Water Levels in 14 Major Reservoirs Drop to 23 percent of Capacity

ಬೆಂಗಳೂರಿನಲ್ಲಿ ಭಾನುವಾರ ಸುರಿದ ಮಳೆImage Credit source: tv9

ಬೆಂಗಳೂರು, ಜೂನ್ 16: ರಾಜ್ಯದಲ್ಲಿ ಈ ವರ್ಷ ಮುಂಗಾರು (Monsoon Rain) ಆರಂಭದಲ್ಲೇ ಆತಂಕ ಮೂಡಿಸಿದೆ. ಜೂನ್ 1 ರಿಂದ ಜೂನ್ 15 ರವರೆಗಿನ ಅವಧಿಯಲ್ಲಿ ಕರ್ನಾಟಕ ಒಟ್ಟಾರೆ ಶೇಕಡಾ 21 ರಷ್ಟು ಮಳೆ ಕೊರತೆಯನ್ನು ಎದುರಿಸಿದೆ. ಅದರಲ್ಲೂ ವಿಶೇಷವಾಗಿ, ಹೆಚ್ಚು ಮಳೆಯಾಗುವ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಕ್ರಮವಾಗಿ ಶೇ 41 ಮತ್ತು ಶೇ 36 ರಷ್ಟು ಮಳೆ ಅಭಾವ ಸೃಷ್ಟಿಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಖ್ಯಾಂಶಗಳು

  • ಕರಾವಳಿ, ಮಲೆನಾಡಿನಲ್ಲಿ ತೀವ್ರ ಮಳೆ ಕೊರತೆ
  • ಬರಿದಾಗುತ್ತಿರುವ ಪ್ರಮುಖ ಡ್ಯಾಂಗಳು
  • ಕುಡಿಯುವ ನೀರಿಗೆ ಮೊದಲ ಆದ್ಯತೆ ಎಂದ ಸರ್ಕಾರ

ಜೂನ್ 4 ರಂದು ರಾಜ್ಯಕ್ಕೆ ಮುಂಗಾರು ಪ್ರವೇಶಿಸಿತ್ತಾದರೂ, ಜೂನ್ 15 ರವರೆಗೆ ದಾಖಲಾಗಬೇಕಿದ್ದ 85.5 ಮಿಮೀ ವಾಡಿಕೆ ಮಳೆಯ ಬದಲಿಗೆ ಕೇವಲ 67 ಮಿಮೀ ಮಳೆಯಾಗಿದೆ. ಎಲ್ ನಿನೋ ಪರಿಣಾಮದಿಂದಾಗಿ ಈ ಬಾರಿ ಮುಂಗಾರು ಮಾರುತಗಳು ಅತ್ಯಂತ ದುರ್ಬಲವಾಗಿವೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ಮುಖ್ಯಸ್ಥ ಎನ್. ಪುವಿಯರಸನ್ ತಿಳಿಸಿದ್ದಾರೆ.

ಸದ್ಯಕ್ಕೆ ಅರಬ್ಬಿ ಸಮುದ್ರದಲ್ಲಿ ಯಾವುದೇ ವಾಯುಭಾರ ಕುಸಿತದ ಮುನ್ಸೂಚನೆ ಇಲ್ಲದಿರುವುದರಿಂದ ಕರಾವಳಿ ತೀರ ಒಣಹವೆಯಿಂದ ಕೂಡಿದೆ. ಇದರ ಜೊತೆಗೆ ರಾಜ್ಯದ ಶೇ 82 ರಷ್ಟು ಭಾಗದಲ್ಲಿ 30 ರಿಂದ 36 ಡಿಗ್ರಿ ಸೆಲ್ಶಿಯಸ್ ತಾಪಮಾನವಿದ್ದರೆ, ಕಲಬುರಗಿ, ಕೊಪ್ಪಳ, ಬಳ್ಳಾರಿ, ಬೆಳಗಾವಿ, ವಿಜಯಪುರ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಶಿಯಸ್​ನಿಂದ 40.5 ಡಿಗ್ರಿ ಸೆಲ್ಶಿಯಸ್ ವರೆಗೆ ದಾಖಲಾಗುತ್ತಿದ್ದು, ಬೇಸಿಗೆಯ ವಾತಾವರಣ ಮುಂದುವರಿದಿದೆ.

ಜಲಾಶಯಗಳು ಖಾಲಿ ಖಾಲಿ

ಕೆಆರ್​ಎಸ್ ಡ್ಯಾಂ ಬ್ಯಾಕ್​ವಾಟರ್ ಪ್ರದೇಶದಲ್ಲಿ ನೀರು ಕಡಿಮೆಯಾಗಿರುವುದು

ಮಳೆಯ ಕೊರತೆ ಮತ್ತು ತೀವ್ರ ಶಾಖದಿಂದಾಗಿ ರಾಜ್ಯದ 14 ಪ್ರಮುಖ ಜಲಾಶಯಗಳ ನೀರು ವೇಗವಾಗಿ ಖಾಲಿಯಾಗುತ್ತಿದೆ. ಒಟ್ಟು 896 ಟಿಎಂಸಿ ಸಂಗ್ರಹ ಸಾಮರ್ಥ್ಯದ ಈ ಜಲಾಶಯಗಳಲ್ಲಿ ಪ್ರಸ್ತುತ ಕೇವಲ 206 ಟಿಎಂಸಿ (ಶೇ. 23) ನೀರು ಮಾತ್ರ ಉಳಿದಿದೆ. ಕಾವೇರಿ ಕೊಳ್ಳದ 4 ಜಲಾಶಯಗಳಲ್ಲಿ ಕೇವಲ 34 ಟಿಎಂಸಿ ನೀರಿದ್ದರೆ (ಕಳೆದ ವರ್ಷ 77 ಟಿಎಂಸಿ ಇತ್ತು), ಕೃಷ್ಣಾ ಕೊಳ್ಳದ 6 ಜಲಾಶಯಗಳಲ್ಲಿ ಒಟ್ಟು 423 ಟಿಎಂಸಿ ಸಂಗ್ರಹ ಸಾಮರ್ಥ್ಯ ಇದ್ದು, ಕೇವಲ 94 ಟಿಎಂಸಿ ನೀರಿದೆ.

ಇದನ್ನೂ ಓದಿ: ಕರ್ನಾಟಕ ಸೇರಿ ದೇಶಾದ್ಯಂತ ಮುಂಗಾರು ಕೊರತೆ: 200 ಜಿಲ್ಲೆಗಳಲ್ಲಿ ಮಳೆಯ ತೀವ್ರ ಅಭಾವ

ಜಲಾಶಯಗಳಿಗೆ ನೀರಿನ ಒಳಹರಿವು ಗಣನೀಯವಾಗಿ ಕಡಿಮೆಯಾಗಿದೆ. ಸದ್ಯಕ್ಕೆ ಲಭ್ಯವಿರುವ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಮೀಸಲಿಡಲು ಆದ್ಯತೆ ನೀಡಲಾಗುವುದು. ಜುಲೈ ಮೊದಲ ವಾರದಲ್ಲಿ ಜಲಾಶಯಗಳ ಮಟ್ಟವನ್ನು ಪರಿಶೀಲಿಸಿ ಬರ ಪರಿಸ್ಥಿತಿಯ ಘೋಷಣೆಯ ಬಗ್ಗೆ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ ವಿಭಾಗ) ಕಮಿಷನರ್ ಮನೋಜ್ ಕುಮಾರ್ ಮೀನಾ ಮಾಹಿತಿ ನೀಡಿದ್ದಾರೆ. ಕೃಷಿ ಸೇರಿದಂತೆ ಎಲ್ಲಾ ಇಲಾಖೆಗಳಿಗೆ ಮುನ್ನೆಚ್ಚರಿಕೆ ತುರ್ತು ಯೋಜನೆಗಳನ್ನು ಪಾಲಿಸಲು ಸೂಚಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಧಾನಿ ಮೋದಿಗೆ ಸ್ಲೋವಾಕಿಯಾದ ಅತ್ಯುನ್ನತ ‘ಆರ್ಡರ್ ಆಫ್ ದಿ ವೈಟ್ ಡಬಲ್ ಕ್ರಾಸ್’ ಗೌರವ – Kannada News | PM Modi Awarded Slovakia’s Highest Honor, ‘Order of the White Double Cross’, Boosting India Ties

ಬ್ರಾಟಿಸ್ಲಾವಾ, ಜೂನ್ 16: ಯುರೋಪ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ(Narendra Modi)ಯವರಿಗೆ ಮತ್ತೊಂದು ಅಂತಾರಾಷ್ಟ್ರೀಯ ಗೌರವ ಲಭಿಸಿದೆ, ನಾರ್ವೆ ಮತ್ತು ಸ್ವೀಡನ್ ದೇಶಗಳ ಬಳಿಕ ಈಗ ಸ್ಲೋವಾಕಿಯಾ ಸರ್ಕಾರವು ಪ್ರಧಾನಿ ಮೋದಿಯವರಿಗೆ ತನ್ನ ದೇಶದ ಅತ್ಯುನ್ನತ ರಾಷ್ಟ್ರೀಯ ನಾಗರಿಕ ಗೌರವವಾದ ‘ಆರ್ಡರ್ ಆಫ್ ದಿ ವೈಟ್ ಡಬಲ್ ಕ್ರಾಸ್ ‘ ಪ್ರಶಸ್ತಿ ನೀಡಿ ಗೌರವಿಸಿದೆ.

ಸ್ಲೋವಾಕಿಯಾದ ಅಧ್ಯಕ್ಷ ಪೀಟರ್ ಪೆಲ್ಲೆಗ್ರಿನ್ ಅವರು ಪ್ರಧಾನಿಯವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಜಾಗತಿಕ ಮಟ್ಟದಲ್ಲಿ ವಿವಿಧ ದೇಶಗಳು ಪ್ರಧಾನಿ ಮೋದಿಯವರಿಗೆ ನೀಡಿದ 33ನೇ ಅತ್ಯುನ್ನತ ಗೌರವ ಇದಾಗಿದೆ.

ಪ್ರಧಾನಿ ಮೋದಿ ಪೋಸ್ಟ್

ಏನಿದು ಪ್ರತಿಷ್ಠಿತ ಪ್ರಶಸ್ತಿ, ಪ್ರಧಾನಿಗೆ ಏಕೆ ಸಿಕ್ಕಿದೆ?
‘ಆರ್ಡರ್ ಆಫ್ ದಿ ವೈಟ್ ಡಬಲ್ ಕ್ರಾಸ್’ ಎಂಬುದು ಸ್ಲೋವಾಕಿಯಾ ಗಣರಾಜ್ಯದ ಅತ್ಯುನ್ನತ ಪ್ರಶಸ್ತಿಯಾಗಿದೆ. ಭಾರತ ಮತ್ತು ಸ್ಲೋವಾಕಿಯಾ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವಲ್ಲಿ, ಜಾಗತಿಕ ಮಟ್ಟದಲ್ಲಿ ಸಹಕಾರ ಮತ್ತು ಅಂತಾರಾಷ್ಟ್ರೀಯ ರಾಜತಾಂತ್ರಿಕತೆಯನ್ನು ಹೆಚ್ಚಿಸುವಲ್ಲಿ ಪ್ರಧಾನಿ ಮೋದಿ ಅವರು ನೀಡಿದ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ ಈ ಗೌರವವನ್ನು ನೀಡಲಾಗಿದೆ.

ಇದು 140 ಕೋಟಿ ಭಾರತೀಯರಿಗೆ ಸಂದ ಗೌರವ: ಪ್ರಧಾನಿ ಮೋದಿ
ಪ್ರಶಸ್ತಿ ಸ್ವೀಕರಿಸಿದ ನಂತರ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡ ಪ್ರಧಾನಿ ಮೋದಿ, ಸ್ಲೋವಾಕಿಯಾದ ಸರ್ಕಾರ ಮತ್ತು ಜನರಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದಿರುವುದು ನನಗೆ ಸಂದ ದೊಡ್ಡ ಗೌರವ. ಇದು ಭಾರತದ 1.4 ಶತಕೋಟಿ (140 ಕೋಟಿ) ಜನರಿಗೆ ಸಂದ ಗೌರವವಾಗಿದೆ. ಈ ಪ್ರಶಸ್ತಿಯನ್ನು ಭಾರತ ಮತ್ತು ಸ್ಲೋವಾಕಿಯಾ ನಡುವಿನ ಸ್ನೇಹಕ್ಕೆ ಅರ್ಪಿಸುತ್ತೇನೆ ಎಂದು ಅವರು ಬರೆದಿದ್ದಾರೆ.

ಮತ್ತಷ್ಟು ಓದಿ: ಅಮೆರಿಕ-ಇರಾನ್ ಶಾಂತಿ ಒಪ್ಪಂದಕ್ಕೆ ಭಾರತದ ಸ್ವಾಗತ; ಪಶ್ಚಿಮ ಏಷ್ಯಾದಲ್ಲಿ ಶಾಂತಿಗೆ ಕರೆ ನೀಡಿದ ಮೋದಿ

ಇತಿಹಾಸ ಸೃಷ್ಟಿಸಿದ ಭೇಟಿ: 11 ಪ್ರಮುಖ ಒಪ್ಪಂದಗಳಿಗೆ ಸಹಿ
ಸ್ಲೋವಾಕಿಯಾ ದೇಶಕ್ಕೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ನರೇಂದ್ರ ಮೋದಿ ಪಾತ್ರರಾಗಿದ್ದಾರೆ. ಭೇಟಿಯ ವೇಳೆ ಪ್ರಧಾನಿ ಮೋದಿ ಮತ್ತು ಸ್ಲೋವಾಕಿಯಾದ ಪ್ರಧಾನಿ ರಾಬರ್ಟ್ ಫಿಕೊ ಅವರು ನಡೆಸಿದ ದೀರ್ಘ ಮಾತುಕತೆ ಅತ್ಯಂತ ಯಶಸ್ವಿಯಾಗಿದೆ. ಉಭಯ ದೇಶಗಳು ತಮ್ಮ ಸಂಬಂಧವನ್ನು ಸಮಗ್ರ ಪಾಲುದಾರಿಕೆಯ ಮಟ್ಟಕ್ಕೆ ಏರಿಸಲು ನಿರ್ಧರಿಸಲಾಗಿದೆ.

ವಲಸೆ, ಡಿಜಿಟಲ್ ತಂತ್ರಜ್ಞಾನ ಮತ್ತು ರಕ್ಷಣೆಯಂತಹ ಪ್ರಮುಖ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರವನ್ನು ಹೆಚ್ಚಿಸಲು ಎರಡೂ ದೇಶಗಳು 11 ಒಪ್ಪಂದಗಳಿಗೆ ಸಹಿ ಹಾಕಿವೆ. ಭಾರತ ಮತ್ತು ಐರೋಪ್ಯ ಒಕ್ಕೂಟ (EU) ನಡುವಿನ ಮುಕ್ತ ವ್ಯಾಪಾರ ಒಪ್ಪಂದವನ್ನು ತ್ವರಿತವಾಗಿ ಜಾರಿಗೆ ತರಲು ಉಭಯ ನಾಯಕರು ಒಪ್ಪಿಕೊಂಡಿದ್ದಾರೆ. ಇದು ಮುಂದಿನ ದಿನಗಳಲ್ಲಿ ಭಾರತ ಮತ್ತು ಯುರೋಪ್ ನಡುವಿನ ಆರ್ಥಿಕ ಹಾಗೂ ರಕ್ಷಣಾ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸೋಲುವ ಪಂದ್ಯವನ್ನು ಟೈ ಮಾಡಿ, ಆಮೇಲೆ ಸೋತ ಟೀಮ್ ಇಂಡಿಯಾ – Kannada News | Sri Lanka A vs India A, 4th Match Highlights

ಭಾರತ ಎ ವಿರುದ್ಧದ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ಎ ತಂಡ ಜಯ ಸಾಧಿಸಿದೆ. ದಂಬುಲ್ಲಾದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ಸಹನ್ ಅರಾಚ್ಚಿ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 49.2 ಓವರ್​ಗಳಲ್ಲಿ 265 ರನ್​ಗಳಿಸಿ ಆಲೌಟ್ ಆಗಿತ್ತು.

266 ರನ್​​ಗಳ ಗುರಿ ಪಡೆದ ಶ್ರೀಲಂಕಾ ಎ ತಂಡವು 49 ಓವರ್​ಗಳ ಮುಕ್ತಾಯದ ವೇಳೆಗೆ ಕಲೆಹಾಕಿದ್ದು ಬರೋಬ್ಬರಿ 261 ರನ್​ಗಳು. ಅದರಂತೆ ಕೊನೆಯ ಓವರ್​ನಲ್ಲಿ ಕೇವಲ 5 ರನ್​ಗಳ ಗುರಿ ಪಡೆದಿದ್ದರು.

ಆದರೆ ಟೀಮ್ ಇಂಡಿಯಾ ಪರ 50ನೇ ಓವರ್​ ಎಸೆದ ಅರ್ಷದ್ ಖಾನ್ ಮೊದಲ ಎಸೆತದಲ್ಲಿ ಯಾವುದೇ ರನ್ ನೀಡಿರಲಿಲ್ಲ. 2ನೇ ಎಸೆತದಲ್ಲಿ ಸಮರವಿಕ್ರಮ (93) ರನ್ನು ಬೌಲ್ಡ್ ಮಾಡಿದರು. 3ನೇ ಎಸೆತದಲ್ಲಿ ಒಂದು ರನ್ ನೀಡಿದರು. 4ನೇ ಎಸೆತದಲ್ಲಿ 1 ರನ್​ ಕಲೆಹಾಕಿದರು. 5ನೇ ಎಸೆತದಲ್ಲಿ ಮತ್ತೊಂದು ರನ್​ ನೀಡಿದರು. ಅದರಂತೆ ಕೊನೆಯ ಎಸೆತದಲ್ಲಿ  2 ರನ್ ಬೇಕಿತ್ತು. ಈ ವೇಳೆ ಕೇವಲ ಒಂದು ರನ್ ಮಾತ್ರ ನೀಡುವ ಮೂಲಕ ಅರ್ಷದ್ ಖಾನ್ ಪಂದ್ಯವನ್ನು ಟೈನಲ್ಲಿ ಅಂತ್ಯಗೊಳಿಸಿದರು.

– ಭಾರತ ಎ- 265 (49.2)
– ಶ್ರೀಲಂಕಾ- 265/9 (50)

ಸೂಪರ್ ಓವರ್​:

ಮ್ಯಾಚ್ ಟೈ ಆಗಿದ್ದ ಕಾರಣ ಫಲಿತಾಂಶಕ್ಕಾಗಿ ಸೂಪರ್ ಓವರ್ ಆಡಿಸಲಾಯಿತು. ಟೀಮ್ ಇಂಡಿಯಾ ಪರ ಸೂಪರ್ ಓವರ್ ಎಸೆದ ಅರ್ಷದ್ ಖಾನ್ ನೀಡಿದ್ದು ಬರೋಬ್ಬರಿ 16 ರನ್​ಗಳು.

17 ರನ್​ಗಳ ಗುರಿ ಬೆನ್ನತ್ತಲು ಬಂದ ಸೂರ್ಯಾಂಶ್ ಶೆಡ್ಗೆ ಹಾಗೂ ವೈಭವ್ ಸೂರ್ಯವಂಶಿ ಜೊತೆಗೂಡಿ 6 ಎಸೆತಗಳಲ್ಲಿ ಕಲೆಹಾಕಿದ್ದು ಕೇವಲ 9 ರನ್​ ಮಾತ್ರ. ಈ ಮೂಲಕ ಶ್ರೀಲಂಕಾ ತಂಡವು 7 ರನ್​ಗಳ ಸೂಪರ್ ಜಯ ಸಾಧಿಸಿದೆ.

ಶ್ರೀಲಂಕಾ ಎ ಪ್ಲೇಯಿಂಗ್ 11: ನಿರೋಷನ್ ಡಿಕ್ವೆಲ್ಲಾ (ವಿಕೆಟ್ ಕೀಪರ್) , ಅವಿಷ್ಕಾ ಫೆರ್ನಾಂಡೊ , ವಿಷೇನ್ ಹಾಲಂಬಗೆ , ಸದೀರ ಸಮರವಿಕ್ರಮ , ಅಹಾನ್ ವಿಕ್ರಮಸಿಂಘೆ , ಸಹನ್ ಅರಚ್ಚಿಗೆ (ನಾಯಕ) , ವನುಜಾ ಸಹನ್ , ವಿಜಯಕಾಂತ್ ವಿಯಸ್ಕಾಂತ್ , ಕುಗಥಾಸ್ ಮಥುಲನ್ , ಮೊಹಮ್ಮದ್ ಶಿರಾಜ್ , ಚಾಮಿಕಾ ಗುಣಶೇಖರ.

ಭಾರತ ಎ ಪ್ಲೇಯಿಂಗ್ 11: ಪ್ರಭ್​ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್ ), ವೈಭವ್ ಸೂರ್ಯವಂಶಿ , ರುತುರಾಜ್ ಗಾಯಕ್ವಾಡ್ , ತಿಲಕ್ ವರ್ಮಾ (ನಾಯಕ) , ಆಯುಷ್ ಬದೋನಿ , ಸೂರ್ಯಾಂಶ್ ಶೆಡ್ಗೆ , ನಿಶಾಂತ್ ಸಿಂಧು , ಅನುಕೂಲ್ ರಾಯ್ , ಅರ್ಷದ್ ಖಾನ್ , ವಿಪ್ರಾಜ್ ನಿಗಮ್ , ಯಶ್ ಠಾಕೂರ್.

 

Source link

Karnataka Weather Forecast: ಬೆಂಗಳೂರು ಸೇರಿ ಕರಾವಳಿ, ದಕ್ಷಿಣ ಒಳನಾಡಲ್ಲಿ 2 ದಿನ ಭಾರಿ ಮಳೆ ನಿರೀಕ್ಷೆ – Kannada News | Karnataka Weather Forecast: Bengaluru, Coastal And South Interior Areas To Witness 2 Days Of Heavy Rainfall

ಬೆಂಗಳೂರು, ಜೂನ್​​ 16: ರಾಜ್ಯ ರಾಜಧಾನಿ ಬೆಂಗಳೂರಿಗೆ ಮುಂದಿನ ಎರಡು ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ನಗರದಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗುಡುಗು-ಮಿಂಚಿನೊಂದಿಗೆ ವರುಣಾರ್ಭಟ ಇರುವ ಬಗ್ಗೆ ಅಂದಾಜಿಸಲಾಗಿದ್ದು, ಮುಂಗಾರು ಚುರುಕುಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಭಾಗಗಳಲ್ಲಿ ಇಂದು ಯೆಲ್ಲೋ ಅಲರ್ಟ್ ನೀಡಲಾಗಿದೆ.

ಕರಾವಳಿ, ದಕ್ಷಿಣ ಒಳನಾಡಲ್ಲಿ ಭಾರೀ ಮಳೆ ನಿರೀಕ್ಷೆ

ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಬುಧವಾರ ಮತ್ತು ಗುರುವಾರ ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಅವಧಿಯಲ್ಲಿ ಬಹುತೇಕ ಕಡೆ ಸಾಧಾರಣದಿಂದ ಮಧ್ಯಮ ಪ್ರಮಾಣದ ಮಳೆಯಾಗಲಿದೆ. ದಕ್ಷಿಣ ಒಳನಾಡು ಕರ್ನಾಟಕದಲ್ಲಿಯೂ ಗುರುವಾರದವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು IMD ಎಚ್ಚರಿಕೆ ನೀಡಿದೆ. ಕೊಡಗು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಬುಧವಾರದವರೆಗೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಮಂತ್ರಾಲಯದಲ್ಲಿ ವರುಣನ ಅಬ್ಬರಕ್ಕೆ ಭಕ್ತರು ಕಂಗಾಲು; ರಸ್ತೆಗಳಲ್ಲಿ ನೀರು ತುಂಬಿ ಸಂಚಾರಕ್ಕೂ ಪರದಾಟ

ಹಲವೆಡೆ ಸುರಿಯದ ನಿರೀಕ್ಷಿತ ಮಳೆ

ಇತ್ತೀಚಿನ ಎರಡು ವಾರಗಳಿಂದ ಕರ್ನಾಟಕದ ಹಲವು ಜಿಲ್ಲೆಗಳಿಗೆ IMD ಕೆಂಪು, ಕಿತ್ತಳೆ ಹಾಗೂ ಹಳದಿ ಎಚ್ಚರಿಕೆಗಳನ್ನು ನೀಡುತ್ತಿದ್ದರೂ, ಅನೇಕ ಪ್ರದೇಶಗಳಲ್ಲಿ ನಿರೀಕ್ಷಿತ ಪ್ರಮಾಣದ ಮಳೆ ಸುರಿದಿಲ್ಲ. ಕೆಲವು ಕಡೆಗಳಲ್ಲಿ ಮಳೆಯೇ ಆಗಿಲ್ಲ. ಈ ಕುರಿತು ಪ್ರತಿಕ್ರಿಯಿಸಿರುವ ತಜ್ಞರು, ಹವಾಮಾನ ಮಾದರಿಗಳು (Weather Models) ಸುಮಾರು 3 ರಿಂದ 4 ಕಿ.ಮೀ ಎತ್ತರದಲ್ಲಿ ಬಲವಾದ ವಾಯು ಚಲನೆಗಳಿರುವುದನ್ನು ತೋರಿಸುತ್ತಿವೆ. ಸಾಮಾನ್ಯವಾಗಿ ಇಂತಹ ಪರಿಸ್ಥಿತಿಗಳು ಭಾರೀ ಮಳೆಗೆ ಕಾರಣವಾಗುತ್ತವೆ. ಆದರೆ ಅರಬ್ಬಿ ಸಮುದ್ರದಿಂದ ಬರುತ್ತಿರುವ ಗಾಳಿಯಲ್ಲಿ ಸಾಕಷ್ಟು ತೇವಾಂಶ ಇಲ್ಲದ ಕಾರಣ ನಿರೀಕ್ಷಿತ ಪ್ರಮಾಣದ ಮಳೆ ಬೀಳುತ್ತಿಲ್ಲ ಎಂದು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ವಾರಣಾಸಿ’ ಬಗ್ಗೆ ಬಾಲಿವುಡ್ ಮಂದಿಯ ಅಪಪ್ರಚಾರ; ಸಿನಿಮಾ ಮೂಲಕವೇ ಉತ್ತರಿಸುತ್ತಾರೆ ರಾಜಮೌಳಿ – Kannada News | Rajamouli Mahesh Babu’s ‘Varanasi’: Debunking Budget Rumors and Global Vision

ಟಾಲಿವುಡ್ ನಟ ಮಹೇಶ್ ಬಾಬು ಮತ್ತು ನಿರ್ದೇಶಕ ರಾಜಮೌಳಿ ಕಾಂಬಿನೇಷನ್‌ನ ಮುಂಬರುವ ಸಿನಿಮಾ ‘ವಾರಣಾಸಿ’ (Varanasi) ಸದ್ಯ ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಹೆಚ್ಚು ನಿರೀಕ್ಷೆ ಮೂಡಿಸಿರುವ ಚಿತ್ರ. ಚಿತ್ರತಂಡ ಸದ್ದಿಲ್ಲದೆ ತನ್ನ ಕೆಲಸದಲ್ಲಿ ಬ್ಯುಸಿಯಾಗಿದ್ದರೆ, ಸಿನಿಮಾ ರಂಗದಲ್ಲಿಮಾತ್ರ ಈ ಚಿತ್ರದ ಬಜೆಟ್ ಬಗ್ಗೆ ಇಲ್ಲಸಲ್ಲದ ವದಂತಿಗಳು ಹರಿದಾಡುತ್ತಿವೆ. ಅಲ್ಲದೆ, ಒಟಿಟಿ ಡೀಲ್​​ಗೆ ಬೇಡಿಕೆ ಇಲ್ಲ ಎಂದು ಬಾಲಿವುಡ್ ಮಂದಿ ಹೇಳುತ್ತಿದ್ದಾರೆ. ಆದರೆ, ಈ ಗೇಮ್ ರಾಜಮೌಳಿಗಿಂತ ಬೇರೆಯವರಿಗೆ ಚೆನ್ನಾಗಿ ಗೊತ್ತಿಲ್ಲ ಎಂದು ಅನೇಕರು ಹೇಳುತ್ತಿದ್ದಾರೆ.

‘ವಾರಣಾಸಿ’ ಚಿತ್ರದ ಬಜೆಟ್ ಅಂದುಕೊಂಡಿದ್ದಕ್ಕಿಂತ ಹೆಚ್ಚಾಗಿದೆ ಮತ್ತು ಬಜೆಟ್ ಕಂಟ್ರೋಲ್ ಮಾಡಲು ರಾಜಮೌಳಿ ಕಷ್ಟಪಡುತ್ತಿದ್ದಾರೆ ಎಂದೆಲ್ಲಾ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಇಂತಹ ಗೇಮ್‌ಗಳನ್ನು ರಾಜಮೌಳಿ ಸಾಕಷ್ಟು ನೋಡಿದ್ದಾರೆ ಮತ್ತು ಅವರಿಗೆ ಈ ಮಾರುಕಟ್ಟೆಯ ಪಲ್ಸ್ ಚೆನ್ನಾಗಿ ಗೊತ್ತಿದೆ ಎಂಬುದು ಅನೇಕರ ಅಭಿಪ್ರಾಯ. ರಾಜಮೌಳಿ ಅವರ ಸಿನಿಮಾಗಳಿಗೆ ಬಜೆಟ್ ಎಷ್ಟೇ ಆದರೂ, ಚಿತ್ರೀಕರಣದ ಒಂದು ಫ್ರೇಮ್ ಕೂಡ ರಿಲೀಸ್ ಆಗುವ ಮುನ್ನವೇ ಅವರ ಹೆಸರೊಂದಕ್ಕೇ ಕೋಟಿ ಕೋಟಿ ಬಿಸಿನೆಸ್ ಆಗುತ್ತದೆ. ಥಿಯೇಟ್ರಿಕಲ್ ರೈಟ್ಸ್, ಸ್ಯಾಟಲೈಟ್ ಡೀಲ್ಸ್, ಮತ್ತು ಆಡಿಯೋ ಹಕ್ಕುಗಳು ದಾಖಲೆ ಬೆಲೆಗೆ ಮಾರಾಟವಾಗುತ್ತವೆ.

‘ವಾರಣಾಸಿ’ ಚಿತ್ರದ ಟೀಸರ್ ಈಗಾಗಲೇ ಹುಟ್ಟುಹಾಕಿರುವ ಹೈಪ್ ನೋಡಿದರೆ, ಬಜೆಟ್ ಎಂಬುದು ಈ ಚಿತ್ರದ ಯಶಸ್ಸಿಗೆ ಯಾವುದೇ ಅಡ್ಡಿ ಉಂಟುಮಾಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ನಿರ್ಮಾಪಕರನ್ನು ಹೇಗೆ ಸೇಫ್ ಝೋನ್‌ನಲ್ಲಿ ಇಡಬೇಕು ಮತ್ತು ಹಾಕಿದ ಬಂಡವಾಳವನ್ನು ಹೇಗೆ ಲಾಭದೊಂದಿಗೆ ವಾಪಸ್ ತರಬೇಕು ಎಂಬ ಲೆಕ್ಕಾಚಾರ ರಾಜಮೌಳಿಗೆ ಚೆನ್ನಾಗಿ ಗೊತ್ತಿದೆ ಎಂದು ಅನೇಕರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ‘ವಾರಣಾಸಿ’ ಸಿನಿಮಾಗೆ ಲೀಕ್ ಕಾಟ; ಭದ್ರತೆ ಹೆಚ್ಚಿಸಿದ ನಿರ್ದೇಶಕ ರಾಜಮೌಳಿ

ಪ್ರಸ್ತುತ ಒಟಿಟಿ ಮಾರುಕಟ್ಟೆಯಲ್ಲಿ ಸಣ್ಣಮಟ್ಟದ ಕುಸಿತ ಇರಬಹುದು. ರಾಜಮೌಳಿ ಸಿನಿಮಾಗೆ ದೊಡ್ಡ ಮೊತ್ತ ಕೊಡಲು ಕೆಲವರು ರೆಡಿ ಇಲ್ಲದೆ ಇರಬಹುದು. ಆದರೆ ‘ವಾರಣಾಸಿ’ ಕೇವಲ ಭಾರತೀಯ ಮಾರುಕಟ್ಟೆಯನ್ನು ನಂಬಿ ಮಾಡುತ್ತಿರುವ ಸಿನಿಮಾವಲ್ಲ. ಇದು ವೆಸ್ಟರ್ನ್ ಮತ್ತು ಏಷ್ಯನ್ ಮಾರುಕಟ್ಟೆಗಳನ್ನು ಗುರಿಯಾಗಿಸಿಕೊಂಡು ಜಾಗತಿಕ ಮಟ್ಟದಲ್ಲಿ ಸಿದ್ಧವಾಗುತ್ತಿರುವ ಸಿನಿಮಾ. ಹಾಗಾಗಿ, ಸಿನಿಮಾ ರಿಲೀಸ್ ಆಗುವ ಮುನ್ನವೇ ಪ್ರಿ-ರಿಲೀಸ್ ಬಿಸಿನೆಸ್ ಮೂಲಕವೇ ಹೂಡಿಕೆ ಮಾಡಿದ ಹಣ ನಿರ್ಮಾಪಕರ ಕೈ ಸೇರುವುದು ಗ್ಯಾರಂಟಿ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕರ್ನಾಟಕ ಸೇರಿ ದೇಶಾದ್ಯಂತ ಮುಂಗಾರು ಕೊರತೆ: 200 ಜಿಲ್ಲೆಗಳಲ್ಲಿ ಮಳೆಯ ತೀವ್ರ ಅಭಾವ – Kannada News | Monsoon Deficit 2026: IMD Reports 32 Percent Rain Shortage in India, Farmers fear in Karnataka

ಬೆಂಗಳೂರು, ಜೂನ್ 16: ದೇಶಾದ್ಯಂತ ತಡವಾಗಿ ಪ್ರವೇಶಿಸಿದ ನೈಋತ್ಯ ಮುಂಗಾರು (Monsoon Rain) ಆರಂಭದಲ್ಲೇ ತೀವ್ರ ಹಿನ್ನಡೆ ಅನುಭವಿಸಿದೆ. ಎಲ್ ನಿನೋ (El Nino) ಮಾರಕ ಪರಿಣಾಮದಿಂದಾಗಿ ದೇಶದ ಸುಮಾರು 200 ಜಿಲ್ಲೆಗಳಲ್ಲಿ ಮಳೆಯ ತೀವ್ರ ಅಭಾವ ಸೃಷ್ಟಿಯಾಗಿದೆ. ಜೂನ್ 1 ರಿಂದ ಜೂನ್ 15 ರವರೆಗಿನ ಅವಧಿಯಲ್ಲಿ ದೇಶದ ಶೇಕಡಾ 65 ರಷ್ಟು ಭಾಗದಲ್ಲಿ ಭಾರಿ ಮಳೆ ಕೊರತೆಯಾಗಿದ್ದು, ಒಟ್ಟಾರೆ ಶೇಕಡಾ 32 ರಷ್ಟು ಇಳಿಕೆ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಆಘಾತಕಾರಿ ಮಾಹಿತಿ ನೀಡಿದೆ.

  • ದೇಶದ 200 ಜಿಲ್ಲೆಗಳಲ್ಲಿ ಮಳೆ ಅಭಾವ
  • ಕೃಷ್ಣಾ ನದಿ ಪಾತ್ರದ ಕೃಷಿ ನೀರು ಬಂದ್
  • ಬಿತ್ತನೆ ಕಾರ್ಯವಾಗದೆ ಕಂಗಾಲಾದ ಅನ್ನದಾತರು

ಹವಾಮಾನ ಇಲಾಖೆಯ ವರದಿಯ ಪ್ರಕಾರ, ಮಧ್ಯ ಭಾರತದಲ್ಲಿ ಶೇ 57 ಹಾಗೂ ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಶೇ 41 ರಷ್ಟು ಮಳೆ ಕೊರತೆಯಾಗಿದೆ. ದಕ್ಷಿಣ ಭಾರತದ ಕರ್ನಾಟಕ, ಕೇರಳ ಸೇರಿದಂತೆ ಪ್ರಮುಖ ರಾಜ್ಯಗಳಲ್ಲಿ ಶೇ 9 ರಷ್ಟು ಒಣ ಹವಾಮಾನ ವರದಿಯಾಗಿದೆ. ಅತಿ ಕಡಿಮೆ ಮಳೆಯಾದ ರಾಜ್ಯಗಳ ಪೈಕಿ ಗುಜರಾತ್ (ಶೇ 75 ಕೊರತೆ) ಮೊದಲ ಸ್ಥಾನದಲ್ಲಿದ್ದರೆ, ಮಹಾರಾಷ್ಟ್ರದಲ್ಲಿ ಶೇ 69 ರಷ್ಟು ಮಳೆ ಅಭಾವ ಕಂಡುಬಂದಿದೆ.

ಕರ್ನಾಟಕ ಗಡಿ ಭಾಗದಲ್ಲಿ ಕೃಷಿಗೆ ಕೃಷ್ಣಾ ನೀರು ಬಂದ್

ಜೈಪುರ ಮತ್ತು ಕೊಲ್ಹಾಪುರ ಭಾಗಗಳಲ್ಲಿ ಪರಿಸ್ಥಿತಿ ಕೈಮೀರಿದ್ದು, ಕೊಯ್ನಾ ಜಲಾಶಯದಿಂದ ಕರ್ನಾಟಕ ಗಡಿಯ ರಾಜಾಪುರ ಬ್ಯಾರೇಜ್‌ವರೆಗಿನ ಕೃಷ್ಣಾ ನದಿ ಪಾತ್ರದಲ್ಲಿ ಕೃಷಿಗಾಗಿ ನೀರು ಪೂರೈಸುವುದನ್ನು ಅಧಿಕಾರಿಗಳು ಸಂಪೂರ್ಣ ನಿಷೇಧಿಸಿದ್ದು, ಕೇವಲ ಕುಡಿಯುವ ನೀರಿಗೆ ಮಾತ್ರ ಆದ್ಯತೆ ನೀಡುತ್ತಿದ್ದಾರೆ.

ಕರ್ನಾಟಕದಲ್ಲಿ ಮುಂಗಾರು ಕುಂಠಿತ: ಬಿತ್ತನೆ ಸ್ಥಗಿತ

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂಗಾರು ಚುರುಕುಗೊಳ್ಳದ ಕಾರಣ ಬಿತ್ತನೆ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದೆ. ಬೀದರ್ ಜಿಲ್ಲೆಯಲ್ಲಿ ಕೇವಲ ಶೇಕಡಾ 5 ರಷ್ಟು ಮಳೆಯಾಗಿದ್ದು, ಶುಂಠಿ ನಾಟಿ ಮಾಡಿದ್ದ ರೈತರು ಬಾವಿ, ಬೋರ್‌ವೆಲ್‌ಗಳ ಅಂತರ್ಜಲ ಕುಸಿತದಿಂದಾಗಿ ಬೆಳೆ ಉಳಿಸಿಕೊಳ್ಳಲು ಹನಿ ನೀರಾವರಿ ಮೊರೆ ಹೋಗಿದ್ದಾರೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ಇತ್ತ ದಾವಣಗೆರೆಯಲ್ಲೂ ಸಾಲ ಸೂಲ ಮಾಡಿ ಭೂಮಿ ಹದಗೊಳಿಸಿದ ರೈತರು ಮಳೆ ಬಾರದೆ ಕಂಗಾಲಾಗಿದ್ದಾರೆ. ತುಂಗಭದ್ರಾ ನದಿಯಲ್ಲೂ ನೀರಿನ ಮಟ್ಟ ತಳ ತಲುಪಿದ್ದು, ಕುಡಿಯುವ ನೀರಿಗೂ ಹಾಹಾಕಾರ ಆರಂಭವಾಗಿದೆ.

ಇದನ್ನೂ ಓದಿ: ಬೆಂಗಳೂರು ಸೇರಿ ಕರಾವಳಿ, ದಕ್ಷಿಣ ಒಳನಾಡಲ್ಲಿ 2 ದಿನ ಭಾರಿ ಮಳೆ ನಿರೀಕ್ಷೆ

ಮತ್ತೊಂದೆಡೆ, ಜಾಗತಿಕ ಸಂಘರ್ಷದ ಹಿನ್ನೆಲೆಯಲ್ಲಿ ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯ ಹಾಗೂ ಮಳೆ ಕೊರತೆಯಿಂದ ರೈತರ ಆದಾಯ ಕುಂಠಿತಗೊಳ್ಳುತ್ತಿರುವ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳವಳ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗರುಡ ಪುರಾಣದ ಪ್ರಕಾರ ಊಟ ಎಲ್ಲಿ ಮಾಡಬೇಕು, ಎಲ್ಲಿ ಮಾಡಬಾರದು? ಫಲಗಳೇನು? ಇಲ್ಲಿದೆ ವಿವರ – Kannada News | Garuda Purana Food Rules: Dr Basavaraja Guruji Explains Where to Eat and Places to Avoid as Per Shastra

ನಮ್ಮ ದೈನಂದಿನ ಜೀವನದಲ್ಲಿ ಊಟವು ಕೇವಲ ದೇಹದ ಪೋಷಣೆಯಲ್ಲದೆ, ಒಂದು ಯಜ್ಞವೂ ಆಗಿದೆ. ಗರುಡ ಪುರಾಣವು ಊಟದ ಮಹತ್ವ ಮತ್ತು ಎಲ್ಲಿ ಊಟ ಮಾಡಬೇಕು, ಎಲ್ಲಿ ಮಾಡಬಾರದು ಎಂಬುದರ ಕುರಿತು ಮಹತ್ವದ ವಿಚಾರಗಳನ್ನು ತಿಳಿಸುತ್ತದೆ ಎಂದಿದ್ದಾರೆ ಖ್ಯಾತ ಜ್ಯೋತಿಷಿ ಹಾಗೂ ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ. ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಆ ಬಗ್ಗೆ ವಿವರಣೆ ನೀಡಿರುವ ಅವರು, ಸಾಮಾನ್ಯವಾಗಿ ದೇವಾಲಯಗಳಲ್ಲಿ ಊಟ ಮಾಡಿದಾಗ ಅದನ್ನು ಪ್ರಸಾದ ಎಂದು ಭಾವಿಸಿ ಭಗವಂತನ ಕೃಪೆ ಲಭಿಸುತ್ತದೆ ಎಂದು ನಂಬಲಾಗುತ್ತದೆ. ಆದರೆ, ಗರುಡ ಪುರಾಣದ ಪ್ರಕಾರ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಊಟ ಮಾಡುವುದನ್ನು ನಿಷೇಧಿಸಲಾಗಿದೆ ಎಂದಿದ್ದಾರೆ.

ದುಷ್ಟರು, ಅನ್ಯಾಯದಿಂದ ಹಣ ಗಳಿಸಿದವರು, ವಿಪರೀತ ಬಡ್ಡಿ ವಸೂಲಿ ಮಾಡುವವರು, ದುರಹಂಕಾರಿಗಳು, ಹಾಗೆಯೇ ಹೆಂಡತಿ, ಮಕ್ಕಳನ್ನು, ವೃದ್ಧರನ್ನು ಅಥವಾ ಪಶುಪಕ್ಷಿಗಳನ್ನು ಹಿಂಸಿಸುವವರ ಮನೆಯಲ್ಲಿ ಊಟ ಮಾಡಬಾರದು. ಇಂತಹ ಸ್ಥಳಗಳಲ್ಲಿ ಸೇವಿಸಿದ ಆಹಾರವು ನಮ್ಮ ವಂಶಕ್ಕೆ ತೊಂದರೆಯನ್ನು ತರಬಹುದು ಎಂದು ಶಾಸ್ತ್ರಗಳು ಹೇಳುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ, ಪ್ರಾಮಾಣಿಕವಾಗಿ ದುಡಿದು ಊಟ ಮಾಡುವ ಶ್ರಮಜೀವಿಗಳ ಮನೆಯಲ್ಲಿ ಒಂದು ತುತ್ತು ಅನ್ನ ಸೇವಿಸುವುದು ಪುಣ್ಯಕರ. ಅಲ್ಲಿ ಭಗವಂತನ ಆವಾಸವಿರುತ್ತದೆ ಮತ್ತು ನಮಗೆ ಒಳ್ಳೆಯದಾಗುತ್ತದೆ. ನಮ್ಮ ಪಂಚಭೂತಗಳು ಮತ್ತು ಸಪ್ತಚಕ್ರಗಳು ಆಹಾರವನ್ನು ಸ್ವೀಕರಿಸಲು, ಆ ಆಹಾರವು ಶುದ್ಧವಾಗಿರಬೇಕು. ಊಟ ಮಾಡುವಾಗ ಅದನ್ನು ಭಗವಂತನಿಗೆ ಅರ್ಪಿಸಿ ಸ್ವೀಕರಿಸಬೇಕು. ಈ ನಿಯಮಗಳು ನಂಬಿಕೆಯ ಆಧಾರದ ಮೇಲೆ ನಮ್ಮ ಜೀವನಕ್ಕೆ ಸಕಾರಾತ್ಮಕ ಶಕ್ತಿಯನ್ನು ತರಲು ಸಹಕಾರಿ ಎಂದು ಅವರು ಹೇಳಿದ್ದಾರೆ.

Source link