ಬಾಗಲಕೋಟೆ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವ: ಗೋಲ್ಡ್ ಮೆಡಲ್ ಪಡೆದ ರೈತ ಕುಟುಂಬದ ವಿದ್ಯಾರ್ಥಿನಿ – Kannada News | Bagalkot Universitys First Convocation Celebrates Gold Medalists: Farmers Daughters Shine
ಬಾಗಲಕೋಟೆ, ಏಪ್ರಿಲ್ 24: ಇಲ್ಲಿನ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿಯರು ಚಿನ್ನದ ಪದಕಗಳನ್ನು ಗಳಿಸಿ ಗಮನ ಸೆಳೆದಿದ್ದಾರೆ. ಈ ಐತಿಹಾಸಿಕ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಪ್ರಮಾಣಪತ್ರಗಳನ್ನು ವಿತರಿಸಲಾಗಿದ್ದು, ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಭಾಗವಹಿಸಿದ್ದರು. ಎಂಎಸ್ಸಿ ಭೌತಶಾಸ್ತ್ರದಲ್ಲಿ 8.9 ಸಿಜಿಪಿಎ ಗಳಿಸಿರುವ ಸನ್ಮತಿ ಜಿನಪ್ಪ ಕುಪ್ಪಿ ಅವರು ಬಸವೇಶ್ವರ ಬಾಗಲಕೋಟ್ ಕಾಲೇಜಿನಿಂದ ವಿಶ್ವವಿದ್ಯಾಲಯದ ಮೊದಲ ಭೌತಶಾಸ್ತ್ರ ಗೋಲ್ಡ್ ಮೆಡಲ್ ವಿಜೇತರಾಗಿದ್ದಾರೆ. ರೈತ ಕುಟುಂಬದಿಂದ ಬಂದಿರುವ ಸನ್ಮತಿ, ತಮ್ಮ ಈ ಸಾಧನೆಯು ತಮ್ಮ ಹಲವು ವರ್ಷಗಳ…