ಮೆಟ್ರೋ ಪ್ರಯಾಣಿಕರಿಗೆ ಶಾಕಿಂಗ್ ಸುದ್ದಿ: ಫೆಬ್ರವರಿಯಿಂದ ಟಿಕೆಟ್ ದರ ಹೆಚ್ಚಳ? – Kannada News | Bangalore Metro Fare Hike: Namma Metro Ticket Prices to Rise in Feb 2025?
ಬೆಂಗಳೂರು, ಜನವರಿ 12: ನೀವು ಮೆಟ್ರೋ ಪ್ರಿಯರಾ? ಪ್ರತಿನಿತ್ಯ ಅವುಗಳಲ್ಲೇ ಓಡಾಡ್ತೀರಾ? ಹಾಗಿದ್ರೆ ಹೆಚ್ಚಿನ ದರ ನೀಡಲು ಸಿದ್ಧರಾಗಿ. ಹೌದು, ಫೆಬ್ರವರಿಯಿಂದ ನಮ್ಮ ಮೆಟ್ರೋ ರೈಲುಗಳ ಪ್ರಯಾಣದರ ಏರಿಕೆ ಸಾಧ್ಯತೆ ಇದೆ. ಮೆಟ್ರೋ ಟಿಕೆಟ್ ದರವನ್ನು ಪ್ರತಿವರ್ಷ ಗರಿಷ್ಠ ಶೇ.5ರಷ್ಟು ಹೆಚ್ಚಿಸಲು ಫೇರ್ ಫಿಕ್ಸೇಶನ್ ಕಮಿಟಿ (FFC) ಶಿಫಾರಸ್ಸು ಮಾಡಿರುವ ಕಾರಣ, ದಿನನಿತ್ಯದ ಪ್ರಯಾಣಕ್ಕೆ ಮೆಟ್ರೋ ರೈಲು ಅವಲಂಬಿಸಿರುವವರಿಗೆ ಮತ್ತಷ್ಟು ಹೊರೆಯಾಗುವ ಸಾಧ್ಯತೆ ಇದೆ. 2025ರ ಫೆಬ್ರವರಿಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ದರಗಳನ್ನು…