Category Archives: Blog

Your blog category

KKR vs RR: ರಿಂಕುಗೆ ಜೀವದಾನ ನೀಡಿ ಸೋತ ರಾಜಸ್ಥಾನ್; ಕೆಕೆಆರ್​ಗೆ ಮೊದಲ ಜಯ – Kannada News | IPL 2026: KKR Secures First Win vs RR at Eden Gardens, Ends Losing Streak

ಐಪಿಎಲ್ 2026 ರ 28ನೇ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್​ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ನಡೆಯಿತು. ಕೋಲ್ಕತ್ತಾ ಈಡನ್ ಗಾರ್ಡನ್ ಮೈದಾನದಲ್ಲಿ ಅಂದರೆ ಕೆಕೆಆರ್​ ತಂಡದ ತವರು ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಿದ ಕೆಕೆಆರ್​ ಈ ಆವೃತ್ತಿಯಲ್ಲಿ ಕೊನೆಗೂ ತನ್ನ ಗೆಲುವಿನ ಖಾತೆ ತೆರೆಯಿತು. ಮೊದಲ 6 ಪಂದ್ಯಗಳಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲದೆ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಕೆಕೆಆರ್ ಈ ಪಂದ್ಯದ ಗೆಲುವಿನೊಂದಿಗೆ ಒಂದು ಸ್ಥಾನ ಮೇಲೇರಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್ 156 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಕೆಕೆಆರ್​ ಕೊನೆಯ ಓವರ್​ನಲ್ಲಿ ಗೆಲುವು ದಾಖಲಿಸಿತು. ಕೆಕೆಆರ್​ನ ಈ ಗೆಲುವಿನಲ್ಲಿ ರಾಜಸ್ಥಾನ್ ತಂಡದ ಕಳಪೆ ಫಿಲ್ಡಿಂಗ್ ಕೂಡ ಪ್ರಮುಖ ಪಾತ್ರವಹಿಸಿತು.

Published On – 7:19 pm, Sun, 19 April 26

Source link

ತಳ್ಳು ತಳ್ಳು ಐಸ್ಸಾ.. ಇನ್ನು ಸ್ವಲ್ಪ ತಳ್ಳಣ್ಣ; ನಡು ರಸ್ತೆಯಲ್ಲೇ ಕೆಟ್ಟು ನಿಂತ KSRTC ಬಸ್ – Kannada News | KSRTC Bus Breaks Down In Middle Of The Road AT Chikmagaluru, video Goes viral

ಚಿಕ್ಕಮಗಳೂರು, (ಏಪ್ರಿಲ್ 19): ಇತ್ತೀಚೆಗೆ ಸರ್ಕಾರಿ ಬಸ್​​ಗಳು ಎಲ್ಲೊಂದರಲ್ಲಿ ಕೆಟ್ಟು ನಿಲ್ಲುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ ಚಿಕ್ಕಮಗಳೂರಿನಲ್ಲೂ ಸಹ KSRTC ಬಸ್ ರಸ್ತೆ ಮಧ್ಯೆ ಕೆಟ್ಟು ನಿಂತಿರುವ ಘಟನೆ ನಡೆದಿದೆ. ಚಿಕ್ಕಮಗಳೂರು (Chikmagaluru) KSRTC ಬಸ್ ನಿಲ್ದಾಣದಿಂದ ಕಳಸಾಪುರಕ್ಕೆ ತೆರಳುತ್ತಿದ್ದ ಬಸ್, ಏಕಾಏಕಿ ಚಿಕ್ಕಮಗಳೂರು ನಗರದ NMC ಸಿಗ್ನಲ್ ಬಳಿ ಕೆಂಟು ನಿಂತಿದೆ. ಇದರಿಂದ ಪ್ರಯಾಣಿಕರು ಬಸ್ ತಳ್ಳಿ ತಳ್ಳಿ ಸುಸ್ತಾದರು. ಕೊನೆಗೆ ಒಂದಿಷ್ಟು ಸ್ಥಳೀಯರು ಕೈಜೋಡಿಸಿದ್ದರಿಂದ ಬಸ್ ಡಿಪೋ ಸೇರಿತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

KKR vs RR: ಜುರೇಲ್ ಸ್ಟಂಪಿಂಗ್​ಗೆ ಸ್ಟನ್ ಆದ ಕ್ರೀಡಾಂಗಣ; ವಿಡಿಯೋ – Kannada News | IPL 2026: Dhruv Jurel’s Lightning Stumping Sends Cameron Green Packing in KKR vs RR Thriller

ಐಪಿಎಲ್ 2026 ರ 28ನೇ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್​ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್ 156 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಕೆಕೆಆರ್​ ಕೂಡ ಕಳಪೆ ಆರಂಭ ಪಡೆಯಿತು. ಆರಂಭಿಕರಿಬ್ಬರು ಖಾತೆ ತೆರೆಯದೆ ಔಟಾದರು. ಹೀಗಾಗಿ ಕಳೆದ ಪಂದ್ಯದಲ್ಲಿ ಸ್ಫೋಟಕ ಇನ್ನಿಂಗ್ಸ್ ಆಡಿದ್ದ ಕ್ಯಾಮರೂನ್ ಗ್ರೀನ್ ಮೇಲೆ ಜವಾಬ್ದಾರಿ ಹೆಚ್ಚಿತ್ತು. ಅದರಂತೆ ಗ್ರೀನ್ ಕೂಡ ಉತ್ತಮ ಆರಂಭ ಪಡೆದರು. ಆದರೆ ವಿಕೆಟ್‌ಕೀಪರ್‌ ಧೃವ್ ಜುರೇಲ್ ಅವರ ಮಿಂಚಿನ ಸ್ಟಂಪಿಂಗ್​ಗೆ ಗ್ರೀನ್ ಪೆವಿಲಿಯನ್ ಸೇರಿಕೊಳ್ಳಬೇಕಾಯಿತು.

ಕೆಕೆಆರ್ ಇನ್ನಿಂಗ್ಸ್‌ನ ಐದನೇ ಓವರ್‌ನಲ್ಲಿ ರವಿ ಬಿಷ್ಣೋಯ್ ಬೌಲಿಂಗ್ ಮಾಡುತ್ತಿದ್ದರು. ಆ ಓವರ್‌ನ ನಾಲ್ಕನೇ ಎಸೆತದಲ್ಲಿ, ಗ್ರೀನ್ ಫಾರ್ವರ್ಡ್ ಶಾಟ್ ಆಡಲಿದ್ದಾರೆ ಎಂಬುದನ್ನು ಗಮನಿಸಿದ ಬಿಷ್ಣೋಯ್, ಗೂಗ್ಲಿ ಬೌಲಿಂಗ್ ಮಾಡಿದರು. ಇತ್ತ ಬ್ಯಾಟ್ಸ್‌ಮನ್, ವಿಕೆಟ್‌ಕೀಪರ್‌ ಧ್ರುವ್ ಜುರೆಲ್ ಅವರ ಕಣ್ಣ ಮುಂದೆ ಇದ್ದ ಕಾರಣ, ಚೆಂಡು ಯಾವ ದಿಕ್ಕನ್ನು ಹೋಗುತ್ತಿದೆ ಎಂದು ಅವರಿಗೆ ಅರ್ಥವಾಗಲಿಲ್ಲ.

ಆದಾಗ್ಯೂ ಜುರೆಲ್ ಎಡಕ್ಕೆ ಡೈವ್ ಮಾಡಿ, ಚೆಂಡನ್ನು ಹಿಡಿದು, ಒಂದು ಕೈಯಿಂದ ಅದನ್ನು ಸ್ಟಂಪ್‌ಗೆ ಹೊಡೆದರು. ಜುರೆಲ್ ಅವರ ಮಿಂಚಿನ ವೇಗದ ವಿಕೆಟ್ ಕೀಪಿಂಗ್ ಕೌಶಲ್ಯಕ್ಕೆ ಇಡೀ ಮೈದಾನವೇ ದಂಗಾಯಿತು. ಇತ್ತ ಜುರೆಲ್ ಚುರುಕುತನಕ್ಕೆ ಬಲಿಯಾದ ಗ್ರೀನ್ 13 ಎಸೆತಗಳಲ್ಲಿ 27 ರನ್‌ಗಳಿಸಿ ಔಟಾದರು.

Source link

BEL Apprentice Recruitment 2026: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್​​ನಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ – Kannada News | BEL Apprentice Recruitment 2026: Machilipatnam Walk in for Graduates and Diploma Holders

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ತನ್ನ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಮಚಲಿಪಟ್ನಂ ಘಟಕದಲ್ಲಿ ಖಾಲಿ ಇರುವ ವಿವಿಧ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ತಾಂತ್ರಿಕ ಮತ್ತು ಸಾಮಾನ್ಯ ಪದವಿ ಪಡೆದ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದ್ದು, ಸರ್ಕಾರಿ ಸ್ವಾಮ್ಯದ ಪ್ರತಿಷ್ಠಿತ ಸಂಸ್ಥೆಯಲ್ಲಿ ವೃತ್ತಿಜೀವನವನ್ನು ಆರಂಭಿಸಲು ಇದು ಸುಸಂದರ್ಭವಾಗಿದೆ.

ಹುದ್ದೆಗಳ ವಿವರ ಮತ್ತು ಅರ್ಹತೆ:

ಈ ನೇಮಕಾತಿಯಡಿ ವಿವಿಧ ಶೈಕ್ಷಣಿಕ ಹಿನ್ನೆಲೆಯುಳ್ಳ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ. ಹುದ್ದೆಯ ಆಧಾರದ ಮೇಲೆ ಮಾಸಿಕ ವೇತನವನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ:

  • ಪದವೀಧರ ಅಪ್ರೆಂಟಿಸ್‌ಗಳು (BE/B.Tech): ಇಂಜಿನಿಯರಿಂಗ್ ಪದವೀಧರರು ಈ ಹುದ್ದೆಗೆ ಅರ್ಹರಾಗಿದ್ದು, ಆಯ್ಕೆಯಾದವರಿಗೆ ಪ್ರತಿ ತಿಂಗಳು ರೂ. 17,500/- ಸ್ಟೈಫಂಡ್ ನೀಡಲಾಗುತ್ತದೆ.
  • ಸಾಮಾನ್ಯ ಪದವೀಧರ ಅಪ್ರೆಂಟಿಸ್‌ಗಳು (B.Sc): ಬಿ.ಎಸ್ಸಿ ಪದವಿ ಪಡೆದ ಅಭ್ಯರ್ಥಿಗಳಿಗೆ ಅವಕಾಶವಿದ್ದು, ಇವರಿಗೆ ಮಾಸಿಕ ರೂ. 12,500/- ನೀಡಲಾಗುತ್ತದೆ.
  • ತಂತ್ರಜ್ಞ (ಡಿಪ್ಲೊಮಾ) ಅಪ್ರೆಂಟಿಸ್‌ಗಳು: ಸಂಬಂಧಿತ ವಿಭಾಗದಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಬಹುದು. ಇವರಿಗೆ ಸಂಸ್ಥೆಯ ನಿಯಮದಂತೆ ವೇತನ ನಿಗದಿಯಾಗಲಿದೆ.

ಆಯ್ಕೆ ವಿಧಾನ ಮತ್ತು ವಯೋಮಿತಿ:

ಅಭ್ಯರ್ಥಿಗಳ ಆಯ್ಕೆಯನ್ನು ಪ್ರಮುಖವಾಗಿ ಲಿಖಿತ ಪರೀಕ್ಷೆಯ ಮೂಲಕ ನಡೆಸಲಾಗುತ್ತದೆ. ವಯೋಮಿತಿಗೆ ಸಂಬಂಧಿಸಿದಂತೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನ ಅಧಿಕೃತ ನಿಯಮಗಳ ಅನ್ವಯ ಸಡಿಲಿಕೆ ಇರಲಿದೆ. ಇದು ಕೇವಲ ತರಬೇತಿ ಅವಧಿಯಾಗಿದ್ದು, ಅಭ್ಯರ್ಥಿಗಳ ಸಾಮರ್ಥ್ಯ ಮತ್ತು ಶಿಸ್ತಿನ ಆಧಾರದ ಮೇಲೆ ಭವಿಷ್ಯದ ವೃತ್ತಿಜೀವನಕ್ಕೆ ಈ ಅನುಭವ ಸಹಕಾರಿಯಾಗಲಿದೆ.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ಅರ್ಜಿ ಸಲ್ಲಿಸುವ ವಿಧಾನ ಮತ್ತು ಸಂದರ್ಶನದ ವಿವರ:

ಆಸಕ್ತ ಅಭ್ಯರ್ಥಿಗಳು ಯಾವುದೇ ಆನ್‌ಲೈನ್ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಬದಲಾಗಿ, ಅಗತ್ಯ ದಾಖಲೆಗಳೊಂದಿಗೆ ನೇರವಾಗಿ ವಾಕ್-ಇನ್-ಇಂಟರ್ವ್ಯೂ (ನೇರ ಸಂದರ್ಶನ) ಗೆ ಹಾಜರಾಗಬೇಕಾಗುತ್ತದೆ.

ಸಂದರ್ಶನ ನಡೆಯುವ ಸ್ಥಳ: ಲೇಡಿ ಆಂಪ್ಥಿಲ್ ಸರ್ಕಾರಿ ಜೂನಿಯರ್ ಕಾಲೇಜು, ರಾಮನಾಯ್ಡುಪೇಟ, ಮಚಲಿಪಟ್ನಂ – 521001.

ಪ್ರಮುಖ ದಿನಾಂಕ:

ಸಂದರ್ಶನವು ಏಪ್ರಿಲ್ 28, 2026 ರಂದು ನಡೆಯಲಿದೆ. ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಅಂಕಪಟ್ಟಿಗಳು, ಗುರುತಿನ ಚೀಟಿ ಮತ್ತು ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋಗಳೊಂದಿಗೆ ನಿಗದಿತ ಸಮಯಕ್ಕೆ ಹಾಜರಿರಬೇಕು.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಂಗಾಳ ಚುನಾವಣಾ ಕಣದಲ್ಲಿ ಮೋದಿ ‘ಝಲ್​ಮುರಿ’ ಸವಿ; ಝಾರ್​ಗ್ರಾಮ್​ನಲ್ಲಿ ಜನಸಾಮಾನ್ಯರಂತೆ ಮಿಂಚಿದ ಪ್ರಧಾನಿ – Kannada News | At West Bengal Jhargram, PM Narendra Modi makes surprise visit to taste Jhalmuri at local shop

ಪಶ್ಚಿಮ ಬಂಗಾಳದಲ್ಲಿ ಝರ್ಮುರಿ ಅಂಗಡಿಯಲ್ಲಿ ನರೇಂದ್ರ ಮೋದಿImage Credit source: Narendra Modi’s X account

ಝಾರ್​ಗ್ರಾಮ್, (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಭಾನುವಾರ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಬಿರುಸಿನ ಪ್ರಚಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ಝಾರ್​ಗ್ರಾಮ್​ನಲ್ಲಿ (Jhargram) ಜನಸಾಮಾನ್ಯರ ಜೊತೆ ಬೆರೆತು ಸ್ಥಳೀಯ ಸಂಸ್ಕೃತಿಯ ಭಾಗವಾದರು. ಬೆಳಿಗ್ಗೆಯಿಂದಲೇ ಬರ್ಜೋರಾ ಮತ್ತು ಬಲರಾಮ್‌ಪುರಗಳಲ್ಲಿ ಬೃಹತ್ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ, ಮಧ್ಯಾಹ್ನದ ವೇಳೆಗೆ ಬುಡಕಟ್ಟು ಪ್ರಾಬಲ್ಯದ ಜಾರ್ಗ್ರಾಮ್ ತಲುಪಿದರು. ಅಲ್ಲಿನ ಸಮಾವೇಶದ ನಂತರ, ಹೆಲಿಪ್ಯಾಡ್ ಕಡೆಗೆ ಸಾಗುವ ದಾರಿಯಲ್ಲಿ ಪ್ರಧಾನಿಯವರು ಹಠಾತ್ ಆಗಿ ತಮ್ಮ ಬೆಂಗಾವಲು ಪಡೆಯನ್ನು ನಿಲ್ಲಿಸಲು ಸೂಚಿಸಿದರು.

ಬಂಗಾಳಿ ರುಚಿಗೆ ಮನಸೋತ ಮೋದಿ

ರಸ್ತೆಯ ಬದಿಯಲ್ಲಿ ಸ್ಥಳೀಯ ವ್ಯಾಪಾರಿಯೊಬ್ಬರು ಸಿದ್ಧಪಡಿಸುತ್ತಿದ್ದ ಬಂಗಾಳದ ಪ್ರಸಿದ್ಧ ತಿಂಡಿ ‘ಝಲ್ ಮುರಿ’ (Jhalmuri) ಪ್ರಧಾನಿಯವರ ಗಮನ ಸೆಳೆಯಿತು. ಕಾರಿನಿಂದ ಇಳಿದ ಮೋದಿ ಅವರು ನೇರವಾಗಿ ವ್ಯಾಪಾರಿಯ ಬಳಿಗೆ ತೆರಳಿ, ಅಲ್ಲಿಯೇ ತಯಾರಾದ ಬಿಸಿಬಿಸಿ ಮತ್ತು ಖಾರವಾದ ಝಲ್ ಮುರಿಯನ್ನು ಸವಿದರು.

ಇದನ್ನೂ ಓದಿ: ವಿಪಕ್ಷಗಳು ಮಹಿಳೆಯರ ಹಕ್ಕು ಕಸಿದುಕೊಂಡು ಸಂಭ್ರಮಿಸಿದ್ದು ವಿಪರ್ಯಾಸ; ಪ್ರಧಾನಿ ಮೋದಿ ವಾಗ್ದಾಳಿ

ಕಡಲೆಕಾಯಿ, ಸಾಸಿವೆ ಎಣ್ಣೆ, ಈರುಳ್ಳಿ ಮತ್ತು ವಿಶೇಷ ಮಸಾಲೆಯಿಂದ ಕೂಡಿದ ಈ ತಿಂಡಿಯನ್ನು ಸವಿಯುತ್ತಾ, ಪ್ರಧಾನಿಯವರು ಸ್ಥಳೀಯ ಜನರೊಂದಿಗೆ ಕೆಲ ಕಾಲ ಮಾತನಾಡಿದರು.

ದೇಶದ ಪ್ರಧಾನಿಯೇ ರಸ್ತೆ ಬದಿಯ ತಿಂಡಿಯನ್ನು ಸವಿಯುತ್ತಿರುವುದನ್ನು ಕಂಡ ಸ್ಥಳೀಯರು ಆಶ್ಚರ್ಯ ಮತ್ತು ಸಂತೋಷ ವ್ಯಕ್ತಪಡಿಸಿದರು. ಅನೇಕರು ಈ ಕ್ಷಣವನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದರು.

ಈ ಕುರಿತು ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡ ಪ್ರಧಾನಿ, “ಬಂಗಾಳದ ರುಚಿ ಯಾವಾಗಲೂ ವಿಶಿಷ್ಟವಾದುದು. ಜಾರ್ಗ್ರಾಮ್‌ನ ಝಲ್ ಮುರಿ ಅತ್ಯಂತ ಸ್ವಾದಿಷ್ಟವಾಗಿತ್ತು ಮತ್ತು ಇದು ನನ್ನ ಸುದೀರ್ಘ ದಿನದ ಪ್ರಚಾರಕ್ಕೆ ಹೊಸ ಚೈತನ್ಯ ನೀಡಿತು,” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಮಹಿಳಾ ಮೀಸಲಾತಿಗೆ ವಿರೋಧಿಸಿದ್ದಕ್ಕೆ ವಿಪಕ್ಷ ಬೆಲೆ ತೆರಬೇಕಾಗುತ್ತದೆ; ಪಿಎಂ ಮೋದಿ ವಾಗ್ದಾಳಿ

ಝಾರ್​ಗ್ರಾಮ್ ಮತ್ತು ಸುತ್ತಮುತ್ತಲಿನ ಬುಡಕಟ್ಟು ಪ್ರದೇಶಗಳಲ್ಲಿ ಜನರೊಂದಿಗೆ ಭಾವನಾತ್ಮಕ ಸಂಬಂಧ ಬೆಳೆಸಲು ಪ್ರಧಾನಿಯವರ ಈ ಸರಳ ನಡವಳಿಕೆ ಸಹಾಯ ಮಾಡಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ, ಬಂಗಾಳದ ರಾಜಕೀಯ ಸಮರದಲ್ಲಿ ಮೋದಿ ಸವಿದ ‘ಝಲ್ ಮುರಿ’ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಪ್ರಧಾನಿಗಳ ಎಕ್ಸ್  ಪೋಸ್ಟ್

ಪಶ್ಚಿಮ ಬಂಗಾಳದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಏಪ್ರಿಲ್ 23 ಮತ್ತು ಏಪ್ರಿಲ್ 29ರಂದು ಮತದಾನ ನಡೆಯಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸರಣಿ ಸ್ಫೋಟ; ಸಾವಿನ ಸಂಖ್ಯೆ 16ಕ್ಕೆ ಏರಿಕೆ – Kannada News | Tamil Nadu Virudhu Nagar cracker factor series blast, several die and many injured

ವಿರುದುನಗರ: ತಮಿಳುನಾಡಿನ ಪಟಾಕಿ ತಯಾರಿಕಾ ಹಬ್ ಎಂದೇ ಕರೆಯಲ್ಪಡುವ ವಿರುದುನಗರ ಜಿಲ್ಲೆಯಲ್ಲಿ ಇಂದು ಭಾನುವಾರ ಸರಣಿ ಸ್ಫೋಟ (cracker blast) ಸಂಭವಿಸಿದೆ. ಈ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಕಟ್ಟನಾರ್‌ಪಟ್ಟಿ (Kattanarpatti) ಎಂಬ ಗ್ರಾಮದಲ್ಲಿ ಈ ಘೋರ ದುರಂತ ಸಂಭವಿಸಿದೆ.

ಪಟಾಕಿ ಘಟಕದ ಒಳಗಿನ ರಾಸಾಯನಿಕ ಕೊಠಡಿಯಲ್ಲಿ ಕಾಣಿಸಿಕೊಂಡ ಬೆಂಕಿ ನಂತರ ಕಾರ್ಖಾನೆಯ ಇತರ ಭಾಗಗಳಿಗೆ ವ್ಯಾಪಿಸಿ, ನಾಲ್ಕೈದು ಭಾರಿ ಸ್ಫೋಟಗಳು ಸಂಭವಿಸಿವೆ. ಸ್ಫೋಟದ ತೀವ್ರತೆಗೆ ಕಾರ್ಖಾನೆಯ 10ಕ್ಕೂ ಹೆಚ್ಚು ಕೊಠಡಿಗಳು ಸಂಪೂರ್ಣವಾಗಿ ಧ್ವಂಸವಾಗಿವೆ.

ಘಟನೆಯಲ್ಲಿ ಇದುವರೆಗೆ 16 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಸುಮಾರು 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಶಿವಕಾಶಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ನೋಯ್ಡಾ ಹಿಂಸಾಚಾರದ ಮಾಸ್ಟರ್​ಮೈಂಡ್ ಆದಿತ್ಯ ಆನಂದ್ ಅರೆಸ್ಟ್​

ಅಗ್ನಿಶಾಮಕ ದಳದ ಹಲವಾರು ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತಂದಿವೆ. ಅವಶೇಷಗಳಡಿ ಯಾರಾದರೂ ಸಿಲುಕಿದ್ದಾರೆಯೇ ಎಂದು ಪತ್ತೆ ಹಚ್ಚಲು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಮುಖ್ಯಮಂತ್ರಿಗಳ ಸಾಂತ್ವನ ಮತ್ತು ಪರಿಹಾರ

ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಅವರು ಘಟನೆಗೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

“ವಿರುದುನಗರ ಜಿಲ್ಲೆಯ ಕಟ್ಟನಾರ್‌ಪಟ್ಟಿಯ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದ ವಾರ್ತೆ ಕೇಳಿ ನನಗೆ ಅತೀವ ದುಃಖವಾಗಿದೆ. ಮೃತರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪಗಳು,” ಎಂದು ಅವರು ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿದ್ದಾರೆ.

ತಕ್ಷಣವೇ ರಕ್ಷಣಾ ಕಾರ್ಯದ ಉಸ್ತುವಾರಿ ವಹಿಸಿಕೊಳ್ಳಲು ಸಚಿವರಾದ ಕೆ.ಕೆ.ಎಸ್.ಎಸ್.ಆರ್ ರಾಮಚಂದ್ರನ್ ಮತ್ತು ತಂಗಂ ತೆನ್ನರಸು ಅವರನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಮೃತರ ಕುಟುಂಬಗಳಿಗೆ ತಲಾ 3 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 1 ಲಕ್ಷ ರೂಪಾಯಿ ತಕ್ಷಣದ ಪರಿಹಾರವನ್ನು ಸರ್ಕಾರ ಘೋಷಿಸಿದೆ.

ಇದನ್ನೂ ಓದಿ: ನೇಪಾಳದಲ್ಲಿ ಮಿತಿ ಮೀರಿದ ಹಿಂಸಾಚಾರ; ಪ್ರತಿಭಟನಾಕಾರರಿಂದ ಮಾಜಿ ಪ್ರಧಾನಿಯ ಪತ್ನಿಯ ಸಜೀವ ದಹನ!

ಕಳೆದ ವಾರವಷ್ಟೇ (ಏಪ್ರಿಲ್ 13) ವಿರುದುನಗರ ಜಿಲ್ಲೆಯ ಸಾತ್ತೂರು ಸಮೀಪದ ಮತ್ತೊಂದು ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿತ್ತು. ಒಂದು ವಾರದ ಅಂತರದಲ್ಲಿ ಎರಡನೇ ದೊಡ್ಡ ದುರಂತ ಸಂಭವಿಸಿರುವುದು ಸ್ಥಳೀಯ ಕಾರ್ಮಿಕರಲ್ಲಿ ಮತ್ತು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಸುರಕ್ಷತಾ ನಿಯಮಗಳ ಉಲ್ಲಂಘನೆಯೇ ಈ ಅವಘಡಗಳಿಗೆ ಪ್ರಮುಖ ಕಾರಣ ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Shankha: ಮನೆಯಲ್ಲಿ ಶಂಖ ಇಡುವ ಮುನ್ನ ಈ ನಿಯಮ ತಿಳಿದುಕೊಳ್ಳಿ – Kannada News | Shankha in Sanatana Dharma: Benefits and Rules for Placing Sacred Conch at Home

ಸನಾತನ ಧರ್ಮದಲ್ಲಿ ಶಂಖವನ್ನು ಅತ್ಯಂತ ಪವಿತ್ರ ಮತ್ತು ಮಂಗಳಕರ ವಸ್ತುವೆಂದು ಪೂಜಿಸಲಾಗುತ್ತದೆ. ಪುರಾಣಗಳ ಪ್ರಕಾರ, ಸಮುದ್ರ ಮಂಥನದ ಸಮಯದಲ್ಲಿ ಉದ್ಭವಿಸಿದ 14 ರತ್ನಗಳಲ್ಲಿ ಶಂಖವೂ ಒಂದು. ಇದು ಸಕಾರಾತ್ಮಕ ಶಕ್ತಿಯ ಮೂಲವಾಗಿದ್ದು, ಲಕ್ಷ್ಮಿ ದೇವಿಗೆ ಅತ್ಯಂತ ಪ್ರಿಯವಾದುದಾಗಿದೆ. ಶತಮಾನಗಳಿಂದಲೂ ಪೂಜೆ, ಪುನಸ್ಕಾರ ಮತ್ತು ಆರತಿಗಳ ಸಮಯದಲ್ಲಿ ಶಂಖದ ಬಳಕೆ ಅವಿಭಾಜ್ಯ ಅಂಗವಾಗಿದೆ. ಮನೆಯಲ್ಲಿ ಶಂಖವಿದ್ದರೆ ನಕಾರಾತ್ಮಕ ಶಕ್ತಿಗಳು ದೂರವಾಗಿ, ಸುಖ-ಸಮೃದ್ಧಿ ನೆಲೆಸುತ್ತದೆ ಎಂಬ ಬಲವಾದ ನಂಬಿಕೆಯಿದೆ. ಆದರೆ, ಅದರ ಪೂರ್ಣ ಫಲ ಪಡೆಯಲು ಕೆಲವು ಶಾಸ್ತ್ರೋಕ್ತ ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ.

ಸ್ಥಾಪನೆಗೆ ಸರಿಯಾದ ದಿಕ್ಕು ಮತ್ತು ವಿಧಾನ:

ವಾಸ್ತು ಶಾಸ್ತ್ರದ ಪ್ರಕಾರ, ಶಂಖವನ್ನು ಮನೆಯ ದೇವರ ಕೋಣೆಯಲ್ಲಿ ಅಥವಾ ಪ್ರಾರ್ಥನಾ ಸ್ಥಳದಲ್ಲಿ ಇಡುವುದು ಅತ್ಯಂತ ಸೂಕ್ತ. ಇದನ್ನು ಯಾವಾಗಲೂ ಈಶಾನ್ಯ, ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇರಿಸಬೇಕು. ಈ ದಿಕ್ಕುಗಳು ದೈವಿಕ ಶಕ್ತಿಗೆ ಪೂರಕವಾಗಿದ್ದು, ಇಲ್ಲಿ ಶಂಖವನ್ನು ಪ್ರತಿಷ್ಠಾಪಿಸುವುದರಿಂದ ಮನೆಯಲ್ಲಿ ಧನಾತ್ಮಕ ಕಂಪನಗಳು ಹೆಚ್ಚಾಗುತ್ತವೆ. ಶಂಖವನ್ನು ಇರಿಸುವಾಗ ಅದನ್ನು ನೇರವಾಗಿ ನೆಲದ ಮೇಲೆ ಇಡದೆ, ಒಂದು ಸ್ವಚ್ಛವಾದ ರೇಷ್ಮೆ ಬಟ್ಟೆ ಅಥವಾ ಪೀಠದ ಮೇಲೆ ಇರಿಸುವುದು ಶಾಸ್ತ್ರಸಮ್ಮತವಾದ ಕ್ರಮವಾಗಿದೆ.

ಪಾಲಿಸಬೇಕಾದ ಪ್ರಮುಖ ನಿಯಮಗಳು:

ಶಂಖವನ್ನು ಕೇವಲ ಅಲಂಕಾರಿಕ ವಸ್ತುವಾಗಿ ಬಳಸದೆ, ಭಕ್ತಿಪೂರ್ವಕವಾಗಿ ಆರಾಧಿಸಬೇಕು. ಪೂಜೆಯಲ್ಲಿ ಮುಖ್ಯವಾಗಿ ಎರಡು ರೀತಿಯ ಶಂಖಗಳಿರುತ್ತವೆ: ಬಲಮುರಿ ಮತ್ತು ಎಡಮುರಿ. ಬಲಮುರಿ ಶಂಖವನ್ನು ಸಾಕ್ಷಾತ್ ಲಕ್ಷ್ಮಿ ದೇವಿಯ ಸ್ವರೂಪವೆಂದು ಪರಿಗಣಿಸಿ ಕೇವಲ ಪೂಜೆಗೆ ಮಾತ್ರ ಬಳಸಲಾಗುತ್ತದೆ. ಎಡಮುರಿ ಶಂಖವನ್ನು ಮಂಗಳಕರ ಶಬ್ದಕ್ಕಾಗಿ ಊದಲು ಬಳಸಲಾಗುತ್ತದೆ. ಗಮನಿಸಬೇಕಾದ ಮುಖ್ಯ ವಿಷಯವೆಂದರೆ, ಪೂಜೆಯ ನೀರು ತುಂಬಲು ಮತ್ತು ಊದಲು ಒಂದೇ ಶಂಖವನ್ನು ಬಳಸಬಾರದು; ಇವೆರಡಕ್ಕೂ ಪ್ರತ್ಯೇಕ ಶಂಖಗಳಿರುವುದು ಶ್ರೇಯಸ್ಕರ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ತಪ್ಪಿಸಬೇಕಾದ ಅಂಶಗಳು ಮತ್ತು ಎಚ್ಚರಿಕೆ:

ಶಂಖದ ವಿಚಾರದಲ್ಲಿ ಮಾಡುವ ಸಣ್ಣ ತಪ್ಪುಗಳು ಅಶುಭ ಫಲ ನೀಡಬಹುದು. ಶಂಖವನ್ನು ಎಂದಿಗೂ ಅಶುದ್ಧ ಅಥವಾ ಕೊಳಕು ಸ್ಥಳಗಳಲ್ಲಿ ಇರಿಸಬಾರದು. ಸೂರ್ಯಾಸ್ತದ ನಂತರ ಅಥವಾ ರಾತ್ರಿಯ ಸಮಯದಲ್ಲಿ ಶಂಖ ಊದುವುದನ್ನು ನಿಷೇಧಿಸಲಾಗಿದೆ; ಇದನ್ನು ಕೇವಲ ಮುಂಜಾನೆ ಮತ್ತು ಸಂಜೆಯ ಪೂಜೆಯ ಸಮಯದಲ್ಲಿ ಮಾತ್ರ ಬಳಸಬೇಕು. ಒಂದು ವೇಳೆ ಶಂಖವು ಭಿನ್ನವಾಗಿದ್ದರೆ ಅಥವಾ ಒಡೆದಿದ್ದರೆ ಅಂತಹ ಶಂಖವನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು, ಏಕೆಂದರೆ ಅದು ನಕಾರಾತ್ಮಕತೆಯನ್ನು ಆಕರ್ಷಿಸುತ್ತದೆ ಎಂದು ಹೇಳಲಾಗುತ್ತದೆ.

ಶಂಖದಿಂದಾಗುವ ಅದ್ಭುತ ಪ್ರಯೋಜನಗಳು:

ಮನೆಯಲ್ಲಿ ನಿಯಮಬದ್ಧವಾಗಿ ಶಂಖವನ್ನು ಇಟ್ಟು ಪೂಜಿಸುವುದರಿಂದ ವಾತಾವರಣವು ಶುದ್ಧೀಕರಣಗೊಳ್ಳುತ್ತದೆ. ಶಂಖದ ಧ್ವನಿಯು ಪರಿಸರದಲ್ಲಿರುವ ಕ್ರಿಮಿಕೀಟಗಳನ್ನು ನಾಶಪಡಿಸುವುದಲ್ಲದೆ, ಮಾನಸಿಕ ಶಾಂತಿಯನ್ನು ನೀಡುತ್ತದೆ. ಇದು ಮನೆಯ ಸದಸ್ಯರಲ್ಲಿ ಸಕಾರಾತ್ಮಕ ಚಿಂತನೆಯನ್ನು ಮೂಡಿಸಿ, ಆರ್ಥಿಕ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತದೆ. ಧಾರ್ಮಿಕ ಮತ್ತು ವೈಜ್ಞಾನಿಕ ದೃಷ್ಟಿಕೋನ ಎರಡರಲ್ಲೂ ಶಂಖದ ಉಪಸ್ಥಿತಿಯು ಮನೆಗೆ ಒಂದು ದೈವಿಕ ಕಳೆಯನ್ನು ತರುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಡುಗೆ ಮನೆಯಿಂದ ಇರುವೆಗಳನ್ನು ತೊಡೆದುಹಾಕಲು ಈ ಮನೆಮದ್ದುಗಳು ಸಖತ್‌ ಪ್ರಯೋಜನಕಾರಿ – Kannada News | These home remedies are helpful in getting rid of ants from the kitchen

ಸೊಳ್ಳೆ, ಜಿರಳೆ, ಇಲಿಗಳ ಕಾಟ ಇರಿವಂತೆ ಬಹುತೇಕ ಹೆಚ್ಚಿನ ಮನೆಗಳಲ್ಲಿ ಇರುವೆಗಳ  (ants) ಕಾಟ ಕೂಡ ಇದ್ದೇ ಇರುತ್ತದೆ. ಅದರಲ್ಲೂ ಈ ಬೇಸಿಗೆಯ ಸಮಯದಲ್ಲಿ ಇರುವೆಗಳ ಓಡಾಟ ತೀರಾ ಹೆಚ್ಚಿರುತ್ತವೆ. ಇವು ಆರೋಗ್ಯಕ್ಕೆ ಅಂತಹ ಹೇಳಿಕೊಳ್ಳುವಂತಹ ಹಾನಿ ಮಾಡದೇ ಇದ್ದರೂ ಸಹ, ಮನೆಯೊಳಗೆ ಸೇರಿಕೊಂಡರೆ ಸಿಕ್ಕಾಪಟ್ಟೆ ಕಿರಿಕಿರಿಯನ್ನು ಉಂಟು ಮಾಡುತ್ತವೆ. ಆದ್ದರಿಂದ ಇವುಗಳನ್ನು ತೊಡೆದುಹಾಕಲು ಅನೇಕರು ಮಾರುಕಟ್ಟೆಯಲ್ಲಿ ಸಿಗುವಂತಹ ರಾಸಾಯನಿಕಯುಕ್ತ ವಸ್ತುಗಳನ್ನು ಬಳಕೆ ಮಾಡುತ್ತಾರೆ. ಆದರೆ ಈ ಉತ್ಪನ್ನಗಳು ಆರೋಗ್ಯಕ್ಕೆ ಹಾನಿ ಮಾಡುವ ಸಾಧ್ಯತೆ ಇರುತ್ತದೆ. ಹೀಗಿರುವಾಗ ಇರುವೆಗಳ ಕಾಟದಿಂದ ಮುಕ್ತಿ ಪಡೆಯಲು ಈ ಕೆಲವೊಂದು ಮನೆಮದ್ದುಗಳನ್ನು ಬಳಸುವುದು ಸೂಕ್ತ.

ಇರುವೆಗಳ ಕಾಟದಿಂದ ಮುಕ್ತಿ ಪಡೆಯಲು ಈ ಮನೆಮದ್ದುಗಳ ಸಹಕಾರಿ:

ವಿನೆಗರ್‌ ಸ್ಪ್ರೇ:  ಇರುವೆಗಳನ್ನು ತೊಡೆದು ಹಾಕಲು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಪರಿಹಾರವೆಂದರೆ ವಿನೆಗರ್ ಸ್ಪ್ರೇ. ನೀರು ಮತ್ತು ಬಿಳಿ ವಿನೆಗರ್ ಅನ್ನು ಸಮಾನ ಪ್ರಮಾಣದಲ್ಲಿ ಬೆರೆಸಿ ತಯಾರಿಸಿದ ದ್ರಾವಣವು ಇರುವೆಗಳನ್ನು ತಕ್ಷಣವೇ ಹಿಮ್ಮೆಟ್ಟಿಸುವಲ್ಲಿ ಪರಿಣಾಮಕಾರಿಯಾಗಿದೆ. ಇರುವೆಗಳಿರುವ ಜಾಗಕ್ಕೆ ವಿನೆಗರ್‌ ಸ್ಪ್ರೇ ಸಿಂಪಡಿಸಿ. ಹೆಚ್ಚುವರಿಯಾಗಿ, ಮನೆಯನ್ನು ಒರೆಸುವಾಗ ನೀರಿಗೆ ಸ್ವಲ್ಪ ವಿನೆಗರ್ ಸೇರಿಸುವುದರಿಂದ ಇರುವೆಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ವಿನೆಗರ್‌ನ ಬಲವಾದ ವಾಸನೆಯು ಇರುವೆಗಳ ಇಷ್ಟವಾಗುವುದಿಲ್ಲ. ಅವು ಅಲ್ಲಿಂದ ಓಡಿ ಹೋಗುತ್ತವೆ.

ಕರಿಮೆಣಸು: ಇರುವೆಗಳನ್ನು ಹಿಮ್ಮೆಟ್ಟಿಸಲು ಕರಿಮೆಣಸು ಕೂಡ ಒಂದು ಅತ್ಯುತ್ತಮ ಮನೆಮದ್ದು. ಇರುವೆಗಳು ಕಟುವಾದ ಮತ್ತು ಬಲವಾದ ವಾಸನೆಗಳಿಂದ ಆದಷ್ಟು ದೂರ ಓಡುತ್ತವೆ.  ಹೀರುವಾಗ ಅಡುಗೆಮನೆಯಲ್ಲಿ ಅಥವಾ ಮನೆಯ ಯಾವುದೇ ಮೂಲೆಯಲ್ಲಿ ಇರುವೆಗಳ ಹಿಂಡು ಇದ್ದರೆ, ಅಲ್ಲಿ ಕರಿಮೆಣಸಿನ ಪುಡಿಯನ್ನು ಸಿಂಪಡಿಸಿ.  ಇದರಿಂದ ಪರಿಣಾಮಕಾರಿಯಾಗಿ ಇರುವೆಗಳನ್ನು ತೊಡೆದುಹಾಕಬಹುದು.

ದಾಲ್ಚಿನ್ನಿ: ದಾಲ್ಚಿನ್ನಿ ಇರುವೆಗಳನ್ನು ಹಿಮ್ಮೆಟ್ಟಿಸಲು ಪರಿಣಾಮಕಾರಿ ಮಾರ್ಗವೆಂದು ಪರಿಗಣಿಸಲಾಗಿದೆ. ಇರುವೆಗಳು ಇದರ ಬಲವಾದ ವಾಸನೆಯನ್ನು ಇಷ್ಟಪಡುವುದಿಲ್ಲ. ಹಾಗಾಗಿ ಇರುವೆಗಳು ಹೆಚ್ಚು ಕಾಣಿಸಿಕೊಳ್ಳುವ ಸ್ಥಳದಲ್ಲಿ ದಾಲ್ಚಿನ್ನಿ ಪುಡಿಯನ್ನು ಸಿಂಪಡಿಸಿ.  ಇಲ್ಲದಿದ್ದರೆ ಸಣ್ಣ ಹತ್ತಿಯ ತುಂಡುಗಳನ್ನು ದಾಲ್ಚಿನ್ನಿ ಎಣ್ಣೆಯಲ್ಲಿ ಅದ್ದಿ ಇರುವೆಗಳು ಓಡಾಡುವ ಪ್ರದೇಶಗಳಲ್ಲಿ ಇಡಬಹುದು. ಈ ಮನೆಮದ್ದು ಇರುವೆಗಳ ಕಾಟದಿಂದ ಮುಕ್ತಿ ಪಡೆಯಲು ತುಂಬಾ ಪರಿಣಾಮಕಾರಿ.

ಇದನ್ನೂ ಓದಿ: ಉರಿ ಬಿಸಿಲಿಗೆ ಮನೆಯಿಂದ ಹೊರಗೆ ಹೋಗುವಾಗ ಅಗತ್ಯವಾಗಿ ವಸ್ತುಗಳನ್ನು ನಿಮ್ಮೊಂದಿಗೆ ಒಯ್ಯಿರಿ

ನಿಂಬೆ ರಸ: ಬೇಸಿಗೆಯಲ್ಲಿ ಅಡುಗೆಮನೆಯಲ್ಲಿ ಅತಿಯಾಗಿ ಕಾಣಿಸಿಕೊಳ್ಳುವ ಇರುವೆಗಳನ್ನು ತೊಡೆದುಹಾಕಲು ನಿಂಬೆ ರಸವು ಅತ್ಯಂತ ಪರಿಣಾಮಕಾರಿ ಪರಿಹಾರಗಳಲ್ಲಿ ಒಂದಾಗಿದೆ. ನಿಂಬೆಹಣ್ಣಿನಲ್ಲಿರುವ ನೈಸರ್ಗಿಕ ಆಮ್ಲೀಯ ಗುಣಗಳು ಇರುವೆಗಳ ವಾಸನೆಯ ಪ್ರಜ್ಞೆಯನ್ನು ದುರ್ಬಲಗೊಳಿಸುತ್ತವೆ, ಅವು ಮತ್ತೆ ಆ ಕಡೆ ಬರದಂತೆ ತಡೆಯುತ್ತವೆ. ಇರುವೆಗಳು ಹೆಚ್ಚಾಗಿ ಬರುವ ಪ್ರದೇಶಗಳಲ್ಲಿ ನಿಂಬೆ ರಸವನ್ನು ಸಿಂಪಡಿಸಿ. ಇದಲ್ಲದೆ, ನಿಂಬೆ ಸಿಪ್ಪೆಗಳನ್ನು ಅಡುಗೆಮನೆಯ ಕ್ಯಾಬಿನೆಟ್‌ಗಳು, ಬಾಗಿಲುಗಳು ಅಥವಾ ಕಿಟಕಿಗಳ ಬಳಿ ಇಡುವುದರಿಂದ ಇರುವೆಗಳನ್ನು ದೂರವಿಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯೂಥ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹತ್ಯೆ ಹಿಂದೆ ಕೈ ನಾಯಕ ಕೈವಾಡ! – Kannada News | Anjuman islam trust President ismail tamatagar Name In Youth Congress Leader fairoz Murder at Dharwad

ಧಾರವಾಡ, (ಏಪ್ರಿಲ್ 19) : ಹಾಸ್ಮಿ ನಗರದಲ್ಲಿ ಏಪ್ರಿಲ್ 10ರ ರಾತ್ರಿ ನಡೆದಿದ್ದ ಹತ್ಯೆ ಇಡೀ ಧಾರವಾಡ (Dharwad) ಜಿಲ್ಲೆಯನ್ನೇ ಬೆಚ್ಚಿಬಿಳಿಸಿತ್ತು.ಇದೇ ಏಪ್ರಿಲ್ 24 ರಂದು ಹಸೆಮಣೆ ಏರಬೇಕಿದ್ದ ಯೂಥ್ ಕಾಂಗ್ರೆಸ್ (Youth Congress Leader) ರಾಜ್ಯ ಪ್ರಧಾನ ಕಾರ್ಯದರ್ಶಿ ಫೈರೋಜ್ ನನ್ನು (fairoz Murder Case) ಮನೆಗೆ ನುಗ್ಗಿ ಹತ್ಯೆ ಮಾಡಲಾಗಿತ್ತು. ಘಟನೆ ಸಂಬಂಧ ಪೊಲೀಸರು ಈಗಾಗಲೇ ಕೊಲೆಯಾದ 36 ಗಂಟೆಯಲ್ಲಿ 9 ಜನ ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ನಂತರ ತನಿಖೆ ಮುಂದುವರೆಸಿದ ಪೊಲೀಸರಿಗೆ ಕೊಲೆಯ ಹಿಂದೆ ಹಲವು ಕೈಗಳ ಪಾತ್ರವಿರುದುವು ದೃಢವಾಗಿದ್ದು, ಕೆಲವರನ್ನು ಕರಸಿ ವಿಚಾರಣೆ ನಡೆಸಿದ ಪೊಲೀಸರು ಮತ್ತೆ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ಆದ್ರೆ, ಇದೀಗ ಈ ಕೊಲೆ ಹಿಂದೆ ಕಾಂಗ್ರೆಸ್ ಮುಖಂಡನ ಕೈವಾಡ ಶಂಕೆ ವ್ಯಕ್ತವಾಗಿದೆ. ಹೌದು… ಕೈ ಮುಖಂಡ ಹಾಗೂ ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಇಸ್ಲಾಯಿಲ್ ತಮಟಗಾರ್ ( (ismail tamatgar) ಹೆಸರೂ ಕೇಳಿ ಬಂದಿದ್ದು, ಈತನ ಬಂಧನಕ್ಕೆ ಪೊಲೀಸರು ತಂಡಗಳು ಬಲೆ ಬೀಸಿವೆ.

ಕೊಲೆ ಪ್ರಕರಣದಲ್ಲಿ ಇಸ್ಮಾಯಿಲ್ ತಮಟಗಾರ್ ಪಾತ್ರವೂ ಇದೆ ಅನ್ನೋದಕ್ಕೆ ಹಲವಾರು ಆಡಿಯೋಗಳು ಸಾಕ್ಷಿಯಾಗಿವೆ ಎಂದು ಫೈರೋಜ್ ಕುಟುಂಬಸ್ಥರು ಆರೋಪಿಸಿದ್ದರು. ಅಲ್ಲದೇ ನೇರವಾಗಿ ಈ ಕೊಲೆಯ ಹಿಂದೆ ತಮಟಗಾರ್ ಇದ್ದಾನೆ ಅಂತಾನೂ ಹೇಳಿದ್ದರು. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿರೋ ಪೊಲೀಸರು ಇಸ್ಮಾಯಿಲ್ ತಮಟಗಾರ್ ಗಾಗಿ ತಲಾಶ್ ನಡೆಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಯುವ ಮುಖಂಡನ ಹತ್ಯೆ: 24 ಗಂಟೆಯೊಳಗೇ ಹಂತಕರು ಅರೆಸ್ಟ್, ಕೊಲೆ ರಹಸ್ಯ ಬಯಲು

ಪ್ರಮುಖ ಆರೋಪಿ ವಿದೇಶಕ್ಕೆ ಪರಾರಿ?

ಈ ಪ್ರಕರಣ ಸಂಬಂಧ ಪೊಲೀಸರು, ಕೆಲವರನ್ನು ಕರಸಿ ವಿಚಾರಣೆ ನಡೆಸಿದ ಪೊಲೀಸರು ಮತ್ತೆ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ಮೈನುದ್ದೀನ್, ಸಾಗರ್, ಅಲ್ಲಾವುದ್ದೀನ್ ಎಂಬುವರನ್ನ ಬಂಧಿಸಿದ್ದಾರೆ. ಇನ್ನು ಇದೀಗ ಈ ಪ್ರಕರಣದಲ್ಲಿ ಕೈ ಮುಖಂಡ ಹಾಗೂ ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಇಸ್ಲಾಯಿಲ್ ತಮಟಗಾರ್ ನ ಹೆಸರೂ ಕೇಳಿ ಬಂದಿದ್ದು, ಆತನ ಬಂಧನಕ್ಕೆ ಪೊಲೀಸರು ಸರ್ಚ್ ವಾರೆಂಟ್ ಹೊರಡಿಸಿದ್ದಾರೆ. ಆದ್ರೆ, ಇಸ್ಲಾಯಿಲ್ ತಮಟಗಾರ್ ವಿಶೇಶಕ್ಕೆ ಪರಾರಿಯಾಗಿವ ಶಂಕೆ ವ್ಯಕ್ತವಾಗಿದೆ.

ಇಸ್ಮಾಯಿಲ್ ಮನೆ ಹಾಗೂ ಅಂಜುಮನ್ ಸಂಸ್ಥೆಗೆ ಸರ್ಚ್ ವಾರಂಟ್ ನೀಡಿದ್ದಾರೆ. ಸದ್ಯ ನೆರೆಯ ಗೋವಾ, ಹೈದ್ರಾಬಾದ್, ಮುಂಬೈನಲ್ಲಿ ಇಸ್ಮಾಯಿಲ್ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆದರೆ ಮನೆಗೆ ಸರ್ಚ್ ವಾರಂಟ್ ನೀಡುತ್ತಿದ್ದಂತೆಯೇ ಇಸ್ಮಾಯಿಲ್ ತಮಟಗಾರ್ ವಿದೇಶಕ್ಕೆ ಹಾರಿರುವ ಅನುಮಾನ ಮೂಡಿದೆ. ಸದ್ಯ ಪೊಲೀಸರು ವಿದೇಶಕ್ಕೂ ಒಂದು ತಂಡ ಕಳುಹಿಸಿ ಇಸ್ಮಾಯಿಲ್ ನನ್ನು ಬಂಧಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ಫೈರೋಜ್ ಕೊಲೆ ಪ್ರಕರಣದ ತನಿಖೆ ಮುಂದುವರೆಸಿದಂತೆ ಆರೋಪಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಪೊಲೀಸರು ಪ್ರಕರಣದ ಪ್ರಮುಖ ಆರೋಪಿಗಾಗಿ ನಾಲ್ಕು ತಂಡ ರಚಿಸಿ ಹುಡುಕಾಟ ನಡೆಸಿದ್ದಾರೆ. ‌ಪ್ರಮುಖ ಆರೋಪಿ ಇಸ್ಮಾಯಿಲ್ ತಮಟಗಾರ್ ಬಂಧನದ ಬಳಿಕ ಕೊಲೆಯ ರಹಸ್ಯ ಬಯಲಾಗಬಹುದು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮೈಸೂರು: ಕಾವೇರಿ ನದಿಯಲ್ಲಿ 6 ಜನ‌ ಜಲಸಮಾಧಿ; ದರ್ಗಾಕ್ಕೆ ಬಂದವರು ದುರಂತ ಅಂತ್ಯ

ಮೈಸೂರು, ಏಪ್ರಿಲ್​ 19: ಕಾವೇರಿ ನದಿಯಲ್ಲಿ ಮುಳುಗಿ 6 ಜನ‌ ದುರ್ಮರಣ ಹೊಂದಿರುವಂತಹ ಘಟನೆ ಜಿಲ್ಲೆ K.R.ನಗರದ ಅರ್ಕೇಶ್ವರ ದೇಗುಲದ ಬಳಿ ನಡೆದಿದೆ. ಉರೂಸ್​ ಹಿನ್ನೆಲೆ 8 ಜನರ ತಂಡ ದರ್ಗಾಕ್ಕೆ ಬಂದಿದ್ದು, ಈ ವೇಳೆ ನದಿಗೆ ಈಜಲು ತೆರಳಿದ್ದಾಗ ದುರ್ಘಟನೆ ಸಂಭವಿಸಿದೆ. ಸ್ಥಳೀಯರು ಇಬ್ಬರನ್ನು ರಕ್ಷಿಸಿದ್ದು, ಉಳಿದ 6 ಜನ ನೀರುಪಾಲಾಗಿದ್ದಾರೆ. ಸ್ಥಳಕ್ಕೆ ಕೆ.ಆರ್.ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಾಸಿನ್(23), ಫಾತಿಮ್(30), ಹುಮಾಯೂನ್(7), ನೇಹಾನ್(19), ಅಲೀಂ(13) ಸೇರಿ 6 ಜನ ಸಾವನ್ನಪ್ಪಿದ್ದಾರೆ.

ಮತ್ತಷ್ಟು ಮಾಹಿತಿ ಅಪ್​​ಡೇಟ್ ಆಗಲಿದೆ.

Source link