ಗಂಡನ ಕೊಲೆಗೆ ಸಾಕ್ಷಿಯಾಗಿದ್ದ ಮಹಿಳೆಯ ಉಸಿರನ್ನೇ ನಿಲ್ಲಿಸಿದ ಪಾಪಿಗಳು – Kannada News | A Witness Silenced, Delhi Woman Shot Dead Two Years After Husband’s Killing
ನವದೆಹಲಿ, ಜನವರಿ 11: ದೆಹಲಿಯಲ್ಲಿ ಬೆಳ್ಳಂಬೆಳಗ್ಗೆ ರಸ್ತೆಯಲ್ಲೇ ಮಹಿಳೆಯೊಬ್ಬಳನ್ನು ಗುಂಡಿಕ್ಕಿ ಹತ್ಯೆ(Murder)) ಮಾಡಲಾಗಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ. ದೆಹಲಿಯ ಶಾಲಿಮಾರ್ ಬಾಗ್ನಲ್ಲಿ 44ವರ್ಷದ ಮಹಿಳೆಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. 2023ರಲ್ಲಿ ಆ ಮಹಿಳೆಯ ಪತಿಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಅದಕ್ಕೆ ಆ ಮಹಿಳೆಯೇ ಸಾಕ್ಷಿಯಾಗಿದ್ದರು, ಇದೀಗ ಸಾಕ್ಷ್ಯ ನಾಶ ಮಾಡಲು ಆರೋಪಿಗಳು ಆಕೆಯನ್ನೂ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಮೃತರನ್ನು ಶಾಲಿಮಾರ್ ಬಾಗ್ ನಿವಾಸಿ ರಚನಾ ಯಾದವ್, ಪೊಲೀಸರ ಪ್ರಕಾರ, ಅವರ ತಲೆಗೆ ಗುಂಡು ಹಾರಿಸಿದ ಪರಿಣಾಮ ಸ್ಥಳದಲ್ಲೇ…