Category Archives: Blog

Your blog category

ಬಾಂಗ್ಲಾದೇಶ್ ಆಟಗಾರನಿಗೆ ಬೈಕ್ ಗಿಫ್ಟ್ ನೀಡಿದ ಕೂಪರ್ ಕೊನೊಲಿ! – Kannada News | Cooper Connolly Gifts Award E Bike to Cramped Litton Das

ಕ್ರಿಕೆಟ್ ಮೈದಾನದಲ್ಲಿ ಕೇವಲ ರನ್‌ಗಳು ಮತ್ತು ವಿಕೆಟ್‌ಗಳು ಮಾತ್ರವಲ್ಲ, ಅದರಾಚೆಗಿನ ಮಾನವೀಯತೆ ಮತ್ತು ಕ್ರೀಡಾ ಸ್ಫೂರ್ತಿಯೂ ಅಭಿಮಾನಿಗಳ ಹೃದಯ ಗೆಲ್ಲುತ್ತದೆ. ಇದಕ್ಕೆ ಸಾಕ್ಷಿ ಬಾಂಗ್ಲಾದೇಶ್ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿ. ಏಕೆಂದರೆ ಆಸ್ಟ್ರೇಲಿಯಾದ ಯುವ ಆರಂಭಿಕ ಆಟಗಾರ ಕೂಪರ್ ಕೊನೊಲಿ ತಮ್ಮ ಅದ್ಭುತ ಆಟ ಹಾಗೂ ಅದಕ್ಕಿಂತ ಮಿಗಿಲಾದ ಔದಾರ್ಯದ ಮೂಲಕ ಇಡೀ ಕ್ರಿಕೆಟ್ ಲೋಕದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸೂಪರ್ ಕೊನೊಲಿ:

ಮೀರ್‌ಪುರದಲ್ಲಿ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ್ ವಿರುದ್ಧ ಆಸ್ಟ್ರೇಲಿಯಾ ತಂಡ ರೋಚಕ ಜಯ ಸಾಧಿಸಿತು. ಈ ಸರಣಿಯ ಮೊದಲೆರಡು ಪಂದ್ಯಗಳನ್ನು ಸೋತಿದ್ದ ಆಸೀಸ್ ತಂಡಕ್ಕೆ ಕೊನೆಯ ಮ್ಯಾಚ್​ನಲ್ಲಿ ಬಾಂಗ್ಲಾದೇಶ್ 275 ರನ್​ಗಳ ಗುರಿ ನೀಡಿದ್ದರು.

ಈ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡಕ್ಕೆ ಕೂಪರ್ ಕೊನೊಲಿ ಉತ್ತಮ ಆರಂಭ ಒದಗಿಸಿದ್ದರು. ಅಲ್ಲದೆ ಜವಾಬ್ದಾರಿಯುತ ಇನಿಂಗ್ಸ್​ ಆಡಿದ ಕೊನೊಲಿ 134 ಎಸೆತಗಳಲ್ಲಿ 149 ರನ್‌ಗಳ ಭರ್ಜರಿ ಶತಕ ಸಿಡಿಸಿ ಆಸ್ಟ್ರೇಲಿಯಾ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಅಂತಿಮವಾಗಿ ಆಸ್ಟ್ರೇಲಿಯಾ ತಂಡ 49.3 ಓವರ್​ಗಳಲ್ಲಿ 277 ರನ್​ ಗಳಿಸಿ 1 ವಿಕೆಟ್​ನ ರೋಚಕ ಜಯ ಸಾಧಿಸಿತು.

ಈ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಕಾರಣ ಕೂಪರ್ ಕೊನೊಲಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿಯಿತು. ಆದರೆ ಈ ಪ್ರಶಸ್ತಿಯನ್ನು ಕೊನೊಲಿ ಬಾಂಗ್ಲಾದೇಶ್ ಆಟಗಾರನಿಗೆ ನೀಡಿದ್ದಾರೆ.

ಮೈದಾನದಲ್ಲಿ ಕಾಡಿದ ದೈಹಿಕ ಬಳಲಿಕೆ:

ಮೀರ್‌ಪುರದ ತೀವ್ರ ಶಾಖ ಮತ್ತು ಹವಾವೇಗದ ನಡುವೆ ಸುದೀರ್ಘ ಬ್ಯಾಟಿಂಗ್ ಮಾಡಿದ ಕೂಪರ್ ಕೊನೊಲಿ ತೀವ್ರವಾದ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಮತ್ತೊಂದೆಡೆ, ಬಾಂಗ್ಲಾದೇಶದ ಅನುಭವಿ ಬ್ಯಾಟರ್ ಲಿಟ್ಟನ್ ದಾಸ್ ಕೂಡ ಬ್ಯಾಟಿಂಗ್ ವೇಳೆ ಇದೇ ರೀತಿಯ ತೀವ್ರ ದೈಹಿಕ ಬಳಲಿಕೆಯಿಂದ ಬಳಲುತ್ತಿದ್ದರು. ಇದಾಗ್ಯೂ ಬ್ಯಾಟಿಂಗ್ ಮುಂದುವರೆಸಿದ್ದ ದಾಸ್ 78 ಎಸೆತಗಳಲ್ಲಿ ಅಜೇಯ 58 ರನ್ ಬಾರಿಸಿದ್ದರು.

ಇನ್ನು ಬ್ಯಾಟಿಂಗ್ ಮುಗಿದ ನಂತರ ಲಿಟ್ಟನ್ ದಾಸ್‌ಗೆ ಸರಿಯಾಗಿ ನಡೆಯಲೂ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಅವರು ವಿಕೆಟ್ ಕೀಪಿಂಗ್ ಮಾಡಿರಲಿಲ್ಲ. ಲಿಟ್ಟನ್ ದಾಸ್ ಬದಲಿಗೆ ನೂರುಲ್ ಹಸನ್ ಗ್ಲೌಸ್ ತೊಟ್ಟು ಕಣಕ್ಕಿಳಿದಿದ್ದರು.

ಕರಗಿದ ಕೂಪರ್ ಮನಸ್ಸು:

ಈ ಮ್ಯಾಚ್​ನಲ್ಲಿ ಪಂದ್ಯ ಪುರುಷ ಪ್ರಶಸ್ತಿ ಗೆದ್ದ ಕೂಪರ್ ಕೊನೊಲಿಗೆ  ಪ್ರಾಯೋಜಕರಿಂದ ಒಂದು ಹೊಚ್ಚ ಹೊಸ ‘Vmoto’ ಇ-ಬೈಕ್ ಅನ್ನು ಉಡುಗೊರೆಯಾಗಿ ನೀಡಲಾಯಿತು. ಆದರೆ, ಪ್ರಶಸ್ತಿ ಪ್ರದಾನ ಸಮಾರಂಭ ಮುಗಿದ ತಕ್ಷಣ, ಕೊನೊಲಿ, ಆ ಬೈಕ್​ನ ಕೀಲಿಯನ್ನು ನೇರವಾಗಿ ಬಾಂಗ್ಲಾದೇಶದ ಲಿಟ್ಟನ್ ದಾಸ್ ಕೈಗಿಟ್ಟರು. ಈ ಮೂಲಕ ತನಗೆ ಸಿಕ್ಕ ಇ-ಬೈಕ್ ಅನ್ನು ಆಸ್ಟ್ರೇಲಿಯನ್ ಆಟಗಾರ ಲಿಟ್ಟನ್ ದಾಸ್​ಗೆ ಉಡುಗೊರೆಯಾಗಿ ನೀಡಿದ್ದಾರೆ.

ಇದನ್ನೂ ಓದಿ: 420ರ ಸ್ಟ್ರೈಕ್​ ರೇಟ್​ನಲ್ಲಿ ಅಬ್ಬರಿಸಿ ಪಂದ್ಯ ಗೆಲ್ಲಿಸಿದ ಜೇಸನ್ ಹೋಲ್ಡರ್

ಇದೀಗ ಕೂಪರ್ ಕೊನೊಲಿಯ ಈ ಹೃದಯಸ್ಪರ್ಶಿ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, “ಕ್ರಿಕೆಟ್ ಅನ್ನು ಜೆಂಟಲ್‌ಮನ್ ಗೇಮ್ ಎಂದು ಕರೆಯುವುದಕ್ಕೆ ಇಂತಹ ಆಟಗಾರರೇ ಕಾರಣ” ಎಂದು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.

Source link

ತಾನೊಂದು ಬಗೆದರೆ, ದೈವವೊಂದು ಬಗೆಯಿತು: ರೀಲ್ಸ್ ಮಾಡಲು ಹೋಗಿ ಸಮುದ್ರಪಾಲಾದ ಯುವಕ – Kannada News | Kumta Beach Tragedy: Youth Drowns at Kadle Beach While Filming Reel

ಕಾರವಾರ, ಜೂನ್​ 15: ರೀಲ್ಸ್ (Reels) ಮಾಡಲು ಹೋಗಿ ಓರ್ವ ಯುವಕ ಸಮುದ್ರಪಾಲಾಗಿರುವಂತಹ (death) ಘಟನೆ ಉತ್ತರ ಕನ್ನಡ ಜಿಲ್ಲೆಯ (uttara kannada) ಕುಮಟಾ ತಾಲೂಕಿನ ಕಡ್ಲೆ ಕಡಲ ತೀರದಲ್ಲಿ ನಡೆದಿದೆ. ಮಹಾರಾಷ್ಟ್ರದ ಪುಣೆ ಮೂಲದ ಜೀವನ್ ಭಟ್ಟರಾಯಿ(26) ನೀರುಪಾಲಾದ ಯುವಕ. ಕರಾವಳಿ ಕಾವಲುಪಡೆ ಮತ್ತು ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆದಿದೆ. ಸದ್ಯ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಖ್ಯಾಂಶಗಳು

  • ಕಡ್ಲೆ ಬೀಚ್‌ನಲ್ಲಿ ರೀಲ್ಸ್ ವಿಡಿಯೋ ಮಾಡುವಾಗ ಯುವಕ ಸಮುದ್ರಪಾಲು
  • ಕರಾವಳಿ ಕಾವಲುಪಡೆ, ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯ
  • ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ನಡೆದಿದ್ದೇನು?

ಜೀವನ್​ ಭಟ್ಟರಾಯಿ ತನ್ನ ಐದು ಜನ ಸ್ನೇಹಿತರೊಂದಿಗೆ ಕುಮಟಾ ಭಾಗಕ್ಕೆ ಪ್ರವಾಸ ಬಂದಿದ್ದ. ಖಾಸಗಿ ರೆಸಾರ್ಟ್​ನಲ್ಲಿ ಮೂರು ದಿನದಿಂದ ತಂಗಿದ್ದರು. ರೀಲ್ಸ್ ಮಾಡಲು ಸ್ನೇಹಿತರು ಸಮುದ್ರಕ್ಕಿಳಿದಿದ್ದಾರೆ. ರೀಲ್ಸ್ ಮಾಡಿ ಸ್ನೇಹಿತರು ಹಿಂತಿರುಗಿದ್ದಾರೆ. ಆದರೆ ಜೀವನ್ ಸಮುದ್ರದಲ್ಲಿ​​ ಆಟವಾಡುತ್ತಿದ್ದ. ಆತ ಬರುತ್ತಾನೆ ಅಂತ ಸ್ನೇಹಿತರು ಮುಂದೆ ಹೋಗಿದ್ದಾರೆ. ಆದರೆ ಅಷ್ಟರಲ್ಲಿ ಜೀವನ್​​ ಸಮುದ್ರದ ಅಲೆಗೆ ಕೊಚ್ಚಿ ಹೋಗಿದ್ದಾನೆ. ಸದ್ಯ ಸ್ಥಳಕ್ಕೆ ಪಿಎಸ್​ಐ ಖಾದರ್ ಬಾಷಾ ಭೇಟಿ ನೀಡಿ ಪರಿಶೀಲನೆ‌ ಮಾಡಿದ್ದಾರೆ.

ಶಾರ್ಟ್​ ಸರ್ಕ್ಯೂಟ್​ನಿಂದ ಗುಡಿಸಲಿಗೆ ಬೆಂಕಿ ತಗುಲಿ ವೃದ್ಧ ಸಾವು

ಶಾರ್ಟ್​ ಸರ್ಕ್ಯೂಟ್​ನಿಂದ ಗುಡಿಸಲಿಗೆ ಬೆಂಕಿ ತಗುಲಿ ವೃದ್ಧ ಸಾವನ್ನಪ್ಪಿರುವಂತಹ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಶೃಂಗಾರಬಾಗು ತಾಂಡಾದಲ್ಲಿ ನಡೆದಿದೆ. ರೆಕ್ಯಾನಾಯ್ಕ್ (65) ಮೃತ ವ್ಯಕ್ತಿ. ಬಸವಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಧರ್ಮಸ್ಥಳ ಪ್ರವಾಸ ಮುಗಿಸಿ ಬರುವಾಗ ದುರಂತ: ಹೇಮಾವತಿ ಹಿನ್ನೀರಿನಲ್ಲಿ ಮೂವರು ಯುವಕರು ಜಲಸಮಾಧಿ

ಇಂದು ಬೆಳಗ್ಗೆ ಶಾರ್ಟ್​ ಸರ್ಕ್ಯೂಟ್​ನಿಂದ ಗುಡಿಸಲಿಗೆ ಬೆಂಕಿ ತಗುಲಿದೆ. ಈ ವೇಳೆ ರೆಕ್ಯಾನಾಯ್ಕ್ ಗುಡಿಸಲಿನಲ್ಲೇ ಮಲಗಿದ್ದರು. ಸುಟ್ಟಗಾಯಗಳಿಂದ ನರಳಾಡುತ್ತಿದ್ದ ರೆಕ್ಯಾನಾಯ್ಕ್​​ನನ್ನು ಬಸವಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಜಿಬಿಎ ಕಸದ ವಾಹನ ಹರಿದು ವ್ಯಕ್ತಿ ಸಾವು

ಜಿಬಿಎ ಕಸದ ವಾಹನ ಹರಿದು ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರಿನ ಮೈಸೂರು ರಸ್ತೆಯ ಸಿರ್ಸಿ ಸರ್ಕಲ್ ಬಳಿ ನಡೆದಿದೆ. ಆಯತಪ್ಪಿ ಬೈಕ್​ನಿಂದ ಕೆಳಗೆ ಬಿದಿದ್ದ 35 ವರ್ಷದ ವ್ಯಕ್ತಿ ಮೇಲೆ ಜಿಬಿಎ ಕಸದ ಲಾರಿ ಹರಿದಿದ್ದು, ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಸವಾರ ತಮಿಳುನಾಡು ನೋಂದಣಿ ಸಂಖ್ಯೆಯ ಬೈಕ್‌ ಚಲಾಯಿಸುತ್ತಿದ್ದರು. ಸ್ಥಳಕ್ಕೆ ಚಾಮರಾಜಪೇಟೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Video: ಫ್ರಿಡ್ಜ್‌ನಲ್ಲಿದ್ದ ಮೊಸರನ್ನು ಕದ್ದು ತಿಂದ ಪುಟಾಣಿ, ವೈರಲ್‌ ಆಯ್ತು ದೃಶ್ಯ – Kannada News | A little girl put her mouth on a packet of yogurt in the fridge

ಈಗಿನ ಕಾಲದ ಮಕ್ಕಳು ಪುಟಾಣಿಗಳು (little kids) ತುಂಬಾನೇ ಜಾಣರು. ಅಷ್ಟೇ ತುಂಟರು ಕೂಡ. ಅಷ್ಟೇ ಅಲ್ಲ, ಹೆತ್ತವರ ಮಾತನ್ನು ಕೇಳುವುದೇ ಇಲ್ಲ, ಮಕ್ಕಳ ಮುಂದೆ ಏನಾದರೂ ಹೇಳಿದರೆ ಸಾಕು, ಪ್ರಶ್ನೆಯ ಮೇಲೆ ಪ್ರಶ್ನೆ ಕೇಳುತ್ತಾರೆ. ಎಲ್ಲರನ್ನು ಯಾಮಾರಿಸಿ ಬಿಡುತ್ತಾರೆ. ಇದೀಗ ಪುಟಾಣಿಯೊಂದು ಹೀಗೆಯೇ ಮಾಡಿದೆ. ಫ್ರಿಡ್ಜ್ ನಲ್ಲಿಟ್ಟಿದ್ದ ಮೊಸರಿನ ಪ್ಯಾಕೆಟ್ ಗೆ ಬಾಯಿ ಹಾಕಿದೆ. ಆ ಬಳಿಕ ಮುಗ್ಧತೆಯ ನೋಟ ಬೀರಿದೆ. ಈ ವಿಡಿಯೋ ನೋಡಿ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.

ಅಮೇಜಿಂಗ್ ಆರ್ಟ್ (Amazing_art) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಪುಟ್ಟ ಹುಡುಗಿಯ ತುಂಟಾಟವನ್ನು ಕಾಣಬಹುದು. ಈ ಪುಟ್ಟ ಹುಡುಗಿಯೊಬ್ಬಳು ಯಾರಿಗೂ ಗೊತ್ತಾಗದಂತೆ ಫ್ರಿಡ್ಜ್ ನಲ್ಲಿಟ್ಟಿದ್ದ ಮೊಸರಿನ ಪ್ಯಾಕೆಟ್ ಗೆ ಬಾಯಿ ಹಾಕಿದೆ. ಮೊಸರನ್ನು ತಿನ್ನುವಿದರಲ್ಲಿ ಬ್ಯುಸಿಯಾಗಿರುವುದನ್ನು ಕಾಣಬಹುದು. ಈ ದೃಶ್ಯವನ್ನು ಅಲ್ಲೇ ಇದ್ದವರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಮೆಲ್ಲನೆ ಹಿಂದೆ ತಿರುಗಿ ನೋಡುತ್ತಾ ಮುಗ್ಧಯಂತೆ ಕ್ಯಾಮೆರಾಗೆ ಪೋಸ್ ಕೊಟ್ಟಿದೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಗೋಲ್ಗಪ್ಪಾ ವಿಭಿನ್ನವಾಗಿ ತಿನ್ಬಹುದೆಂದು ತೋರಿಸಿಕೊಟ್ಟ ಪುಟಾಣಿ

ಈ ವಿಡಿಯೋ ಅರವತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಮಹಾ ಕಳ್ಳಿ ಎಂದರೆ ಮತ್ತೊಬ್ಬರು ತುಂಬಾನೇ ಮುದ್ದಾಗಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಮ್ಮ ಮನೆಯಲ್ಲಿರುವ ಪುಟಾಣಿ ಹೀಗೆಯೇ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

5 ತಿಂಗಳಲ್ಲಿ 3 ಮದುವೆಯಾಗಿ ವಂಚಿಸಿದ ಕಿಲಾಡಿ ಮಹಿಳೆ, ದೇವಸ್ಥಾನಕ್ಕೆ ಹೋದ್ರೆ ವಾಪಸ್ ಬರ್ತಿರ್ಲಿಲ್ಲ – Kannada News | Himachal Marriage Fraud: Woman Cheats 3 Men in 5 Months, Police Issue Warning

ಹಮೀರ್​ಪುರ, ಜೂನ್ 15: ಐದು ತಿಂಗಳಲ್ಲಿ ಮೂರು ಮದುವೆ(Marriage)ಯಾಗಿ ಮಹಿಳೆಯೊಬ್ಬಳು ಪರಾರಿಯಾಗಿರುವ ಘಟನೆ ಹಿಮಾಚಲ ಪ್ರದೇಶದ ಹಮೀರ್​ಪುರದಲ್ಲಿ ನಡೆದಿದೆ. ಶೀತಲ್ ಎಂಬ ಮಹಿಳೆ ಕೇವಲ ಐದು ತಿಂಗಳೊಳಗೆ ಮೂವರು ವ್ಯಕ್ತಿಗಳನ್ನು ಮದುವೆಯಾಗಿ, ಸುಳ್ಳು ನೆಪಗಳನ್ನು ಹೇಳಿ ಪರಾರಿಯಾಗಿದ್ದಾಳೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ, ಸಾರ್ವಜನಿಕರ ಹಿತದೃಷ್ಟಿಯಿಂದ ಪೊಲೀಸರು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.

ಸಂತ್ರಸ್ತ ಕುಟುಂಬಗಳು ನೀಡಿದ ಅಧಿಕೃತ ದೂರಿನ ಮೇರೆಗೆ ಸಂಬಂಧಿತ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ಪ್ರಕರಣ ದಾಖಲಾಗಿದ್ದು, ಇಡೀ ಜಾಲವನ್ನು ಪತ್ತೆಹಚ್ಚಲು ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದಾರೆ. ಮಹಿಳೆಯು ಜನವರಿಯಲ್ಲಿ ಬಿಲಾಸ್‌ಪುರದ ಜೆಜ್ವಿನ್, ಫೆಬ್ರವರಿಯಲ್ಲಿ ಹಮೀರ್‌ಪುರದ ಗಲೋಡ್ ಮತ್ತು ಮೇ ತಿಂಗಳಲ್ಲಿ ಬಲ್ಹಸಿನಾ ಪ್ರದೇಶದಲ್ಲಿ ಮದುವೆಯಾಗಿದ್ದಳು. ಮದುವೆಯಾದ ಕೆಲವೇ ದಿನಗಳಲ್ಲಿ ದೇವಸ್ಥಾನಕ್ಕೆ ಹೋಗುವ ನೆಪ ಅಥವಾ ಸಂಬಂಧಿಕರ ಮರಣದ ಸುಳ್ಳು ಕಾರಣ ನೀಡಿ ಈಕೆ ನಾಪತ್ತೆಯಾಗುತ್ತಿದ್ದಳು.

ಎಲ್ಲಾ ಮೂರು ಘಟನೆಗಳಲ್ಲೂ ಒಂದೇ ರೀತಿಯ ಮಾದರಿ ಇರುವುದರಿಂದ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಪ್ರಕರಣದ ಬೆನ್ನಲ್ಲೇ, ಸಾರ್ವಜನಿಕರನ್ನು ವಂಚಕರಿಂದ ರಕ್ಷಿಸಲು ಪೊಲೀಸ್ ಇಲಾಖೆಯು ವಿಶೇಷ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಮತ್ತಷ್ಟು ಓದಿ: ಮದುವೆ ಆಗೋದಾಗಿ ನಂಬಿಸಿ ಯುವಕನಿಗೆ 35 ಲಕ್ಷ ರೂ ವಂಚಿಸಿದ ಯುವತಿ

ಮದುವೆಗಳನ್ನು ಏರ್ಪಡಿಸುವ ಮುನ್ನ ವಧು ಅಥವಾ ವರನ ಕುಟುಂಬದ ಹಿನ್ನೆಲೆಯನ್ನು ಸ್ಥಳೀಯ ಮಟ್ಟದಲ್ಲಿ ಸಂಪೂರ್ಣವಾಗಿ ತನಿಖೆ ಮಾಡಿಕೊಳ್ಳಬೇಕು.ಮದುವೆಯ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳ ನಡವಳಿಕೆ ಅಥವಾ ಯಾವುದೇ ದಾಖಲೆಗಳ ಬಗ್ಗೆ ಸಣ್ಣ ಅನುಮಾನ ಬಂದರೂ ತಕ್ಷಣವೇ ಸ್ಥಳೀಯ ಆಡಳಿತ ಅಥವಾ ಪೊಲೀಸರಿಗೆ ವರದಿ ಮಾಡಲು ತಿಳಿಸಲಾಗಿದೆ.

ಈ ಘಟನೆಯು ಸಮಾಜದಲ್ಲಿ ಒಂದು ಹೊಸ ಧನಾತ್ಮಕ ಜಾಗೃತಿಗೆ ಕಾರಣವಾಗಿದೆ. ಹಮೀರ್‌ಪುರ ಮತ್ತು ಬಿಲಾಸ್‌ಪುರ ಜಿಲ್ಲೆಗಳ ಜನರು ಈಗ ಮದುವೆಗಳನ್ನು ನಿಶ್ಚಯಿಸುವ ಮುನ್ನ ವಂಚನೆಗೆ ಒಳಗಾಗದಂತೆ ತಡೆಯಲು ಸ್ಥಳೀಯ ಅಧಿಕಾರಿಗಳು ಹಾಗೂ ಪಂಚಾಯತ್ ಮಟ್ಟದಲ್ಲಿ ಆಗಾಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಇದು ಮುಂಬರುವ ದಿನಗಳಲ್ಲಿ ಇಂತಹ ವಂಚಕ ಗ್ಯಾಂಗ್‌ಗಳ ಆಟಕ್ಕೆ ಶಾಶ್ವತ ಬ್ರೇಕ್ ಹಾಕಲು ನೆರವಾಗಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

IND A vs SL A: ಶ್ರೀಲಂಕಾ ತಂಡಕ್ಕೆ ಸ್ಪರ್ಧಾತ್ಮಕ ಗುರಿ ನೀಡಿದ ಟೀಮ್ ಇಂಡಿಯಾ – Kannada News | Sri Lanka A vs India A: Team India All Out For 265 Runs

ಭಾರತ, ಶ್ರೀಲಂಕಾ, ಅಫ್ಘಾನಿಸ್ತಾನ್ ಎ ತಂಡಗಳ ನಡುವಣ ತ್ರಿಕೋನ ಸರಣಿಯ 4ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಎ ತಂಡವು 265 ರನ್​​ಗಳಿಸಿದೆ.  ದಂಬುಲ್ಲಾದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಎ ತಂಡದ ನಾಯಕ ಸಹನ್ ಅರಾಚ್ಚಿ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಆರಂಭಿಕ ಆಘಾತಕ್ಕೆ ಒಳಗಾಗಿತ್ತು.

ಆರಂಭಿಕರಾದ ವೈಭವ್ ಸೂರ್ಯವಂಶಿ (21) ಹಾಗೂ ಪ್ರಭ್​ಸಿಮ್ರಾನ್ ಸಿಂಗ್ (11) ಬೇಗನೆ ಔಟಾಗಿದ್ದರು. ಈ ಹಂತದಲ್ಲಿ ಜೊತೆಗೂಡಿದ ರುತುರಾಜ್ ಗಾಯಕ್ವಾಡ್ (37) ಹಾಗೂ ತಿಲಕ್ ವರ್ಮಾ (23) ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.

ಆದರೆ ಆ ಬಳಿಕ ಬಂದ ಆಯುಷ್ ಬದೋನಿ ಕೇವಲ 15 ರನ್​ಗಳಿಸಿ ಔಟಾದರೆ, ನಿಶಾಂತ್ ಸಿಂಧು 6 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಈ ವೇಳೆ ಕಣಕ್ಕಿಳಿದ ಸೂರ್ಯಾಂಶ್ ಶೆಡ್ಗೆ 66 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 3 ಫೋರ್​ಗಳೊಂದಿಗೆ 77 ರನ್ ಬಾರಿಸಿದರು.

ಮತ್ತೊಂದೆಡೆ ಉತ್ತಮ ಸಾಥ್ ನೀಡಿದ ವಿಪ್ರಾಜ್ ನಿಗಮ್ 49 ಎಸೆತಗಳಲ್ಲಿ 6 ಫೋರ್​ಗಳೊಂದಿಗೆ 51 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ ಭಾರತ ಎ ತಂಡ 49.2 ಓವರ್​ಗಳಲ್ಲಿ 265 ರನ್​ ಬಾರಿಸಿ ಆಲೌಟ್ ಆಗಿದೆ.

ಇದೀಗ 266 ರನ್​ಗಳ ಗುರಿ ಬೆನ್ನತ್ತಲಾರಂಭಿಸಿರುವ ಶ್ರೀಲಂಕಾ ತಂಡವು 5 ಓವರ್​ಗಳ ಮುಕ್ತಾಯದ ವೇಳೆಗೆ ಯಾವುದೇ ವಿಕೆಟ್ ನಷ್ಟವಿಲ್ಲದೆ 45 ರನ್ ಕಲೆಹಾಕಿದೆ.

ಶ್ರೀಲಂಕಾ ಎ ಪ್ಲೇಯಿಂಗ್ 11: ನಿರೋಷನ್ ಡಿಕ್ವೆಲ್ಲಾ (ವಿಕೆಟ್ ಕೀಪರ್) , ಅವಿಷ್ಕಾ ಫೆರ್ನಾಂಡೊ , ವಿಷೇನ್ ಹಾಲಂಬಗೆ , ಸದೀರ ಸಮರವಿಕ್ರಮ , ಅಹಾನ್ ವಿಕ್ರಮಸಿಂಘೆ , ಸಹನ್ ಅರಚ್ಚಿಗೆ (ನಾಯಕ) , ವನುಜಾ ಸಹನ್ , ವಿಜಯಕಾಂತ್ ವಿಯಸ್ಕಾಂತ್ , ಕುಗಥಾಸ್ ಮಥುಲನ್ , ಮೊಹಮ್ಮದ್ ಶಿರಾಜ್ , ಚಾಮಿಕಾ ಗುಣಶೇಖರ.

ಇದನ್ನೂ ಓದಿ: ಮೊದಲ ಪಂದ್ಯದಲ್ಲೇ 7 ಗೋಲು ಬಾರಿಸಿ ವಿಶ್ವ ದಾಖಲೆ ಬರೆದ ಜರ್ಮನಿ!

ಭಾರತ ಎ ಪ್ಲೇಯಿಂಗ್ 11: ಪ್ರಭ್​ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್ ), ವೈಭವ್ ಸೂರ್ಯವಂಶಿ , ರುತುರಾಜ್ ಗಾಯಕ್ವಾಡ್ , ತಿಲಕ್ ವರ್ಮಾ (ನಾಯಕ) , ಆಯುಷ್ ಬದೋನಿ , ಸೂರ್ಯಾಂಶ್ ಶೆಡ್ಗೆ , ನಿಶಾಂತ್ ಸಿಂಧು , ಅನುಕೂಲ್ ರಾಯ್ , ಅರ್ಷದ್ ಖಾನ್ , ವಿಪ್ರಾಜ್ ನಿಗಮ್ , ಯಶ್ ಠಾಕೂರ್.

Source link

ಆತ್ಮಹತ್ಯೆ ಮಾಡಿಕೊಂಡ ಸಂಚಿತಾ ಉಗಾಲೆ; ಸಾವಿಗೂ ಮುನ್ನ ರೀಲ್ಸ್ ಮಾಡಿದ್ದ ಕಿರುತೆರೆ ನಟಿ – Kannada News | Sanchita Ugale, ‘Kumkum Bhagya’ Actress, ends her life at the age of 30; Hindi TV Serial Industry Shocked

ಹಿಂದಿ ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಕುಂಕುಮ್ ಭಾಗ್ಯ’ ಖ್ಯಾತಿಯ ಯುವ ನಟಿ ಸಂಚಿತಾ ಉಗಾಳೆ ಮುಂಬೈನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಕೇವಲ 30 ವರ್ಷ ವಯಸ್ಸಾಗಿತ್ತು. ಭಾನುವಾರ (ಜೂನ್ 14) ಸಂಜೆ ಮುಂಬೈ ಸಮೀಪದ ನಲಸೋಪಾರಾದಲ್ಲಿ ಅವರು ತಮ್ಮ ಜೀವ ಕೊನೆ ಮಾಡಿಕೊಂಡಿದ್ದು, ಬೆಡ್‌ರೂಮ್‌ನಲ್ಲಿ ಅವರ ಶವ ಸಿಕ್ಕಿದೆ. ಸೋಮವಾರ ಈ ವಿಷಯ ಅಧಿಕೃತವಾಗಿ ಬೆಳಕಿಗೆ ಬಂದಿದೆ. ಈ ಸುದ್ದಿ ಕಿರುತೆರೆ ಲೋಕಕ್ಕೆ ಭಾರಿ ಆಘಾತವನ್ನು ನೀಡಿದೆ.

ಪೊಲೀಸ್ ಮೂಲಗಳ ಪ್ರಕಾರ, ಘಟನೆ ನಡೆದ ಸಮಯದಲ್ಲಿ ಸಂಚಿತಾ ಮನೆಯಲ್ಲಿ ಒಬ್ಬರೇ ಇದ್ದರು ಎನ್ನಲಾಗಿದೆ. ಇದರಿಂದ ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಸುಲಭವಾಯಿತು. ಕುಟುಂಬಸ್ಥರು ಮನೆಗೆ ಬಂದಾಗ ಈ ದಾರುಣ ಘಟನೆ ಬೆಳಕಿಗೆ ಬಂದಿದ್ದು, ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅವರು ಅದಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಸದ್ಯಕ್ಕೆ ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಸಂಚಿತಾ ಆತ್ಮಹತ್ಯೆ ಮಾಡಿಕೊಳ್ಳುವ ಕೇಲವೇ ಗಂಟೆಗಳ ಮುನ್ನವಷ್ಟೇ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಅಲ್ಲಿ ರೀಲ್ಸ್ ಒಂದನ್ನು ಹಂಚಿಕೊಂಡಿದ್ದರು. ವಿಡಿಯೋದಲ್ಲಿ ಅತ್ಯಂತ ಖುಷಿಯಾಗಿ ನಗುತ್ತಾ ಕಾಣಿಸಿಕೊಂಡಿದ್ದ ನಟಿ, ಇದ್ದಕ್ಕಿದ್ದಂತೆ ಇಂತಹ ನಿರ್ಧಾರ ಕೈಗೊಂಡಿರುವುದನ್ನು ಕಂಡು ಅಭಿಮಾನಿಗಳು ಮತ್ತು ಆಕೆಯ ಸಹ-ಕಲಾವಿದರು ತೀವ್ರ ಆಶ್ಚರ್ಯ ಹಾಗೂ ಕಣ್ಣೀರು ಹಾಕುತ್ತಿದ್ದಾರೆ.

ಕಿರುತೆರೆಯಿಂದ ಬೆಳ್ಳಿಪರದೆಯವರೆಗೆ ಸಂಚಿತಾ ಜರ್ನಿ

ಬಹಳ ಸಣ್ಣ ಕುಟುಂಬದಿಂದ ಬಂದು ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಸಂಚಿತಾ ತೀವ್ರ ಹೋರಾಟ ನಡೆಸಿದ್ದರು. ಜೀ ಟಿವಿಯ ಸೂಪರ್ ಹಿಟ್ ಶೋ ‘ಕುಂಕುಮ್ ಭಾಗ್ಯ’ದಲ್ಲಿ ದಿಯಾ ಟಂಡನ್ ಪಾತ್ರದ ಮೂಲಕ ಅವರು ಭಾರಿ ಜನಪ್ರಿಯತೆ ಗಳಿಸಿದ್ದರು. ಇದರೊಂದಿಗೆ ‘ವಾಗ್ಲೆ ಕಿ ದುನಿಯಾ’ ಮತ್ತು ನಾಯಕಿಯಾಗಿ ‘ದಿಲ್ವಾಲಿ ದುಲ್ಹಾ ಲೇ ಜಾಯೇಗಿ’ ಧಾರಾವಾಹಿಗಳಲ್ಲಿ ನಟಿಸಿದ್ದರು.ಕೇವಲ ಕಿರುತೆರೆ ಅಷ್ಟೇ ಅಲ್ಲದೆ, ಮನೋಜ್ ಬಾಜಪೇಯಿ ಅವರ ‘ಸೈಲೆನ್ಸ್ 2’, ವಿಕ್ಕಿ ಕೌಶಲ್ ಅವರ ಮುಂಬರಲಿರುವ ಐತಿಹಾಸಿಕ ಸಿನಿಮಾ ‘ಛಾವಾ’ದಲ್ಲೂ ಅವರು ನಟಿಸಿದ್ದರು.

ಇದನ್ನೂ ಓದಿ: ಹೊಸ ಸೀರಿಯಲ್ ಮೂಲಕ ಕಿರುತೆರೆಗೆ ಕವಿತಾ ಗೌಡ ಕಂಬ್ಯಾಕ್?

ಕಳೆದ ವರ್ಷವಷ್ಟೇ ನೀಡಿದ್ದ ಸಂದರ್ಶನದಲ್ಲಿ, ದಿನಕ್ಕೆ 17-18 ಗಂಟೆಗಳ ಶೂಟಿಂಗ್ ಇರುವುದರಿಂದ ವೈಯಕ್ತಿಕ ಜೀವನ ಮತ್ತು ಆರೋಗ್ಯದ ಕಡೆ ಗಮನ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಸಂಚಿತಾ ಹೇಳಿಕೊಂಡಿದ್ದರು. ಸದ್ಯ ಅವರ ಸಾವಿಗೆ ನಿಖರ ಕಾರಣ ಏನೆಂಬುದು ತನಿಖೆಯಿಂದಷ್ಟೇ ತಿಳಿಯಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ತಾಯಿಯಿಂದ ಬೇರ್ಪಟ್ಟು ಗ್ರಾಮಕ್ಕೆ ಬಂದ ಮರಿಯಾನೆ: ಕಬ್ಬು, ಬಾಳೆಹಣ್ಣು ನೀಡಿದ ಗ್ರಾಮಸ್ಥರು!

ಬೆಂಗಳೂರು, ಜೂನ್ 15: ತಾಯಿಯಿಂದ ಬೇರ್ಪಟ್ಟ ಮರಿಯಾನೆಯೊಂದು ಆಹಾರ ಅರಸಿಕೊಂಡು ಕರ್ನಾಟಕ-ತಮಿಳುನಾಡು ಗಡಿಭಾಗದ ಡೊಂಕರೆಕೋಟೆ ಸಮೀಪದ ಗ್ರಾಮವೊಂದಕ್ಕೆ ಬಂದಿದೆ. ಇದನ್ನು ಗಮನಿಸಿದ ಸ್ಥಳೀಯ ಗ್ರಾಮಸ್ಥರು, ಅದರ ಹಸಿವನ್ನು ನೀಗಿಸಲು ಮುಂದಾಗಿದ್ದಾರೆ. ಮಾನವೀಯತೆ ಮೆರೆದ ಗ್ರಾಮಸ್ಥರು ಮರಿಯಾನೆಗೆ ಕಬ್ಬು ಮತ್ತು ಬಾಳೆಹಣ್ಣು ನೀಡಿ ಉಪಚರಿಸಿದ್ದಾರೆ. ಗ್ರಾಮಸ್ಥರ ಆರೈಕೆಯಿಂದ ಹಸಿವು ನೀಗಿಸಿಕೊಂಡ ಮರಿಯಾನೆ ಸ್ವಲ್ಪ ಸಮಯದ ನಂತರ ಆ ಪ್ರದೇಶದಲ್ಲಿಯೇ ಉಳಿದುಕೊಂಡಿತ್ತು. ಈ ಬಗ್ಗೆ ಮಾಹಿತಿ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ದಾವಿಸಿದ್ದಾರೆ. ಮರಿಯಾನೆ ಸದ್ಯ ಸುರಕ್ಷಿತವಾಗಿದ್ದು, ಅದನ್ನು ಮರಳಿ ತಾಯಿಯೊಂದಿಗೆ ಸೇರಿಸಲು ಅರಣ್ಯ ಇಲಾಖೆ ಸತತ ಪ್ರಯತ್ನ ನಡೆಸುತ್ತಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ತಮಿಳುನಾಡು ಸಿಎಂ ವಿಜಯ್ ವಿಚ್ಛೇದನ ಪ್ರಕರಣ: ಆಗಸ್ಟ್ 7ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್ – Kannada News | Tamil Nadu CM Vijay wife Sangeetha Sornalingam Divorce case hearing Adjourned to August 7

ತಮಿಳುನಾಡು ಮುಖ್ಯಮಂತ್ರಿ, ಖ್ಯಾತ ನಟ ದಳಪತಿ ವಿಜಯ್ (Tamil Nadu CM Vijay) ಮತ್ತು ಅವರ ಪತ್ನಿ ಸಂಗೀತಾ ಸ್ವರ್ಣಲಿಂಗಂ ನಡುವಿನ ವಿಚ್ಛೇದನ (Divorce) ಪ್ರಕರಣದ ವಿಚಾರಣೆಯನ್ನು ಚೆಂಗಲ್ಪಟ್ಟು ಮಹಿಳಾ ನ್ಯಾಯಾಲಯವು ಆಗಸ್ಟ್ 7ಕ್ಕೆ ಮುಂದೂಡಿದೆ. ಜೂನ್ 15ರ ಸೋಮವಾರದಂದು ನಡೆದ ವಿಚಾರಣೆಗೆ ಕೋರ್ಟ್ ಸೂಚನೆಯಂತೆ ವಿಜಯ್ ಮತ್ತು ಸಂಗೀತಾ (Sangeetha Sornalingam) ಖುದ್ದಾಗಿ ಹಾಜರಾಗಿದ್ದರು. ಬೆಳಿಗ್ಗೆ 10.30ರ ಸುಮಾರಿಗೆ ಆರಂಭವಾದ ವಿಚಾರಣೆಯಲ್ಲಿ ದಂಪತಿ ಉಪಸ್ಥಿತರಿದ್ದರಾದರೂ, ಯಾವುದೇ ಪ್ರಮುಖ ನಿರ್ಧಾರ ಅಥವಾ ಸಂಧಾನ ಸೂತ್ರಗಳು ಮೂಡಿಬರದೆ ಸೆಷನ್ ಮುಕ್ತಾಯಗೊಂಡಿತು. ತಮ್ಮ 27 ವರ್ಷಗಳ ದಾಂಪತ್ಯ ಜೀವನಕ್ಕೆ ಅಧಿಕೃತವಾಗಿ ತೆರೆ ಎಳೆಯಲು ಸಂಗೀತಾ ಅವರು ವಿಚ್ಛೇದನ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ವಿಜಯ್ ಮತ್ತು ಸಂಗೀತಾ 1998ರಲ್ಲಿ ಯುಕೆನಲ್ಲಿ ಕಾನೂನುಬದ್ಧವಾಗಿ ವಿವಾಹ ನೋಂದಣಿ ಮಾಡಿಕೊಂಡಿದ್ದರು. ನಂತರ 1999ರಲ್ಲಿ ಚೆನ್ನೈನಲ್ಲಿ ಸಾಂಪ್ರದಾಯಿಕವಾಗಿ ವಿವಾಹವಾಗಿದ್ದರು. ಆದರೆ ಈಗ ‘1954ರ ವಿಶೇಷ ವಿವಾಹ ಕಾಯ್ದೆ’ಯಡಿ ಸಂಗೀತಾ ಅವರು ವಿಜಯ್ ವಿರುದ್ಧ ವಿವಾಹೇತರ ಸಂಬಂಧ ಮತ್ತು ಮಾನಸಿಕ ಕ್ರೌರ್ಯದ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ.

ಅರ್ಜಿಯಲ್ಲಿ ಉಲ್ಲೇಖಿಸಿರುವಂತೆ, 2021ರ ಏಪ್ರಿಲ್‌ನಲ್ಲಿ ವಿಜಯ್ ಅವರು ಸಹ ನಟಿಯೊಬ್ಬರ ಜೊತೆ ಸಂಬಂಧ ಹೊಂದಿರುವುದು ಸಂಗೀತಾ ಅವರಿಗೆ ತಿಳಿದುಬಂದಿತ್ತು. ಅರ್ಜಿಯಲ್ಲಿ ನಟಿಯ ಹೆಸರನ್ನು ಬಹಿರಂಗಪಡಿಸದಿದ್ದರೂ, ಚಿತ್ರರಂಗ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ತ್ರಿಶಾ ಕೃಷ್ಣನ್ ಜೊತೆ ವಿಜಯ್ ಹೆಸರು ವ್ಯಾಪಕವಾಗಿ ಕೇಳಿಬರುತ್ತಿದೆ. ಆ ಸಂಬಂಧವನ್ನು ಕೊನೆಗೊಳಿಸುವುದಾಗಿ ವಿಜಯ್ ಭರವಸೆ ನೀಡಿದ್ದರಾದರೂ, ಅದನ್ನು ಮುಂದುವರಿಸಿದ್ದರು ಎಂದು ಸಂಗೀತಾ ಆರೋಪಿಸಿದ್ದಾರೆ. ಅಲ್ಲದೆ, ಆ ನಟಿ ಸೋಷಿಯಲ್ ಮೀಡಿಯಾದಲ್ಲಿ ಇಬ್ಬರೂ ಜೊತೆಯಾಗಿ ಇರುವ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾಗ ವಿಜಯ್ ಯಾವುದೇ ಆಕ್ಷೇಪ ಎತ್ತುತ್ತಿರಲಿಲ್ಲ. ಇದು ತಮಗೆ ಮತ್ತು ತಮ್ಮ ಮಕ್ಕಳಿಗೆ ತೀವ್ರ ಮುಜುಗರ ಹಾಗೂ ಮಾನಸಿಕ ಹಿಂಸೆ ನೀಡಿದೆ ಎಂದು ಸಂಗೀತಾ ಅರ್ಜಿಯಲ್ಲಿ ದೂರಿದ್ದಾರೆ.

2024ರ ಆಗಸ್ಟ್‌ನಿಂದ 2025ರ ಫೆಬ್ರವರಿ ನಡುವೆ ಲೀಗಲ್ ನೋಟಿಸ್‌ಗಳು ಮತ್ತು ವೈಯಕ್ತಿಕ ಮಾತುಕತೆಗಳ ಮೂಲಕ ಸಂಬಂಧವನ್ನು ಸರಿಪಡಿಸಲು ಸಂಗೀತಾ ಪ್ರಯತ್ನಿಸಿದ್ದರು. ಆದರೆ 2025ರ ನವೆಂಬರ್ 9ರಂದು ನಡೆದ ಕೊನೆಯ ಭೇಟಿಯೂ ವಿಫಲವಾಯಿತು. ಈ ಹಿನ್ನೆಲೆಯಲ್ಲಿ ಇಬ್ಬರ ನಡುವಿನ ದಾಂಪತ್ಯ ಸಂಬಂಧ ಸಂಪೂರ್ಣವಾಗಿ ಹದಗೆಟ್ಟಿದ್ದು, ಕೇವಲ ಕಾಗದದ ಮೇಲಷ್ಟೇ ಉಳಿದಿದೆ ಎಂದು ಅವರು ಕೋರ್ಟ್‌ಗೆ ತಿಳಿಸಿದ್ದಾರೆ.

ಇದನ್ನೂ ಓದಿ: 600 ಕೋಟಿ ರೂಪಾಯಿ ಒಡೆಯ ದಳಪತಿ ವಿಜಯ್; ಡಿವೋರ್ಸ್ ಆದರೆ ಸಂಗೀತಾಗೆ ಸಿಗೋದೆಷ್ಟು?

ಇದಕ್ಕೂ ಮುನ್ನ ಏಪ್ರಿಲ್ 20ರಂದು ನಡೆದಿದ್ದ ಮೊದಲ ವಿಚಾರಣೆಗೆ ವಿಜಯ್ ಮತ್ತು ಸಂಗೀತಾ ಇಬ್ಬರೂ ಗೈರಾಗಿದ್ದರು. ಕೇವಲ ಅವರ ಪರ ವಕೀಲರು ಮಾತ್ರ ಹಾಜರಾಗಿದ್ದರು. ಸೆಲೆಬ್ರಿಟಿಗಳಾಗಿರುವುದರಿಂದ ಭದ್ರತೆ ಸಮಸ್ಯೆಗಳನ್ನು ಉಲ್ಲೇಖಿಸಿ ಆನ್‌ಲೈನ್ ಮೂಲಕ ಹಾಜರಾಗಲು ಇಬ್ಬರ ಪರ ವಕೀಲರು ಅನುಮತಿ ಕೋರಿದ್ದರು. ಆದರೆ ನ್ಯಾಯಾಲಯವು ಈ ಮನವಿಯನ್ನು ತಿರಸ್ಕರಿಸಿ, ಜೂನ್ 15ರ ವಿಚಾರಣೆಗೆ ಇಬ್ಬರೂ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಿರಬೇಕು ಎಂದು ಖಡಕ್ ಆದೇಶ ನೀಡಿತ್ತು. ಅದರಂತೆ ಸೋಮವಾರ ಇಬ್ಬರೂ ಕೋರ್ಟ್‌ಗೆ ಬಂದಿದ್ದರು. ಮುಂದಿನ ವಿಚಾರಣೆ ಆಗಸ್ಟ್ 7ರಂದು ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹಳೆಯ ಕಾರಿಗೆ ಇ20 ಪೆಟ್ರೋಲ್ ಹಾಕಿಸಿದ್ರೆ ಇನ್ಷೂರೆನ್ಸ್ ಸಿಗಲ್ಲವಾ? ವಿಮಾ ಕಂಪನಿ ಹೇಳಿದ್ದಿದು – Kannada News | E20 Fuel in Old Cars: Risk Your Insurance Claim & Engine Damage Warning for Non Compatible Vehicles

ನವದೆಹಲಿ, ಜೂನ್ 15: ಹಳೆಯ ಕಾರುಗಳಲ್ಲಿ E20 ಇಂಧನವನ್ನು (80% ಪೆಟ್ರೋಲ್ ಮತ್ತು 20% ಎಥೆನಾಲ್ ಮಿಶ್ರಣ) ಬಳಸುವುದು ನಿಮ್ಮ ವಾಹನ ವಿಮಾ ಕ್ಲೈಮ್‌ (Insurance Claim) ತಿರಸ್ಕೃತವಾಗಲು ಕಾರಣವಾಗಬಹುದು ಎಂದು ಇನ್ಷೂರೆನ್ಸ್ ಕಂಪನಿಯಾದ ಐಸಿಐಸಿಐ ಲೊಂಬಾರ್ಡ್ (ICICI Lombard) ಎಚ್ಚರಿಸಿದೆ. ಏಪ್ರಿಲ್ 2023ಕ್ಕಿಂತ ಮುಂಚೆ ತಯಾರಾದ ಮತ್ತು E20 ಇಂಧನಕ್ಕೆ ಹೊಂದಿಕೆಯಾಗದ (non-compatible) ವಾಹನಗಳಲ್ಲಿ ಈ ಇಂಧನವನ್ನು ಬಳಸಿದರೆ, ವಿಮಾ ಕಂಪನಿಗಳು ಇಂಜಿನ್ ಹಾನಿಗೆ ಸಂಬಂಧಿಸಿದ ಕ್ಲೈಮ್‌ಗಳನ್ನು ತಿರಸ್ಕರಿಸಬಹುದು ಎಂದು ಈ ಸಂಸ್ಥೆ ತಿಳಿಸಿದೆ.

ವಾಹನ ತಯಾರಕರು ಸೂಚಿಸದ ಇಂಧನವನ್ನು ಬಳಸುವುದು ‘ಅಸಮರ್ಪಕ ಬಳಕೆ’ (improper use) ಅಥವಾ ‘ಅಜಾಗರೂಕತೆ’ (negligence) ಎಂದು ಪರಿಗಣಿಸಲ್ಪಡುತ್ತದೆ. ಈ ಕಾರಣದಿಂದಾಗಿ ಕ್ಲೈಮ್‌ಗಳನ್ನು ವಿಮಾ ಕಂಪನಿಗಳು ತಿರಸ್ಕರಿಸಬಹುದು ಎಂದು ಈ ಇನ್ಷೂರೆನ್ಸ್ ಕಂಪನಿ ಮಾಹಿತಿ ನೀಡಿದೆ.

ಇದನ್ನೂ ಓದಿ: ಇರಾನ್-ಅಮೆರಿಕ ಒಪ್ಪಂದದ ಎಫೆಕ್ಟ್; ತೈಲ ಬೆಲೆ ಇಳಿಕೆ; ರೂಪಾಯಿಗೆ ಜೀವ; ಚಿನ್ನ, ಷೇರುಗಳ ಜಿಗಿತ

ಎಥೆನಾಲ್‌ನಿಂದಾಗುವ ಹಾನಿಗಳೇನು?

ಎಥೆನಾಲ್ ತುಕ್ಕು ಹಿಡಿಸುವ (corrosive) ಗುಣವನ್ನು ಹೊಂದಿದೆ. E20 ಬಳಕೆಗೆ ವಿನ್ಯಾಸಗೊಳಿಸದ ವಾಹನಗಳಲ್ಲಿ ಇದು ರಬ್ಬರ್ ಸೀಲ್‌ಗಳನ್ನು ಹಾನಿಗೊಳಿಸಬಹುದು, ಇಂಧನ ಪೈಪ್‌ಗಳಿಗೆ ತೊಂದರೆ ಉಂಟುಮಾಡಬಹುದು, ಮತ್ತು ಕಾಲಕ್ರಮೇಣ ಇಂಜಿನ್ ಭಾಗಗಳನ್ನು ಸವೆಯುವಂತೆ ಮಾಡಬಹುದು ಎನ್ನಲಾಗಿದೆ. ಈ ಹಾನಿ ತಕ್ಷಣಕ್ಕೆ ಕಾಣಿಸದಿದ್ದರೂ, ದೀರ್ಘಾವಧಿಯಲ್ಲಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ.

ಸರ್ಕಾರವು E20 ಇಂಧನ ಬಳಕೆಯಿಂದ ವಿಮಾ ಪಾಲಿಸಿ ರದ್ದಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರೂ, ಇಂಧನ ಬಳಕೆಯಿಂದ ಉಂಟಾದ ಪ್ರತಿಯೊಂದು ಹಾನಿಗೂ ವಿಮೆ ಸಿಗುತ್ತದೆ ಎಂದಲ್ಲ. ಸ್ಟ್ಯಾಂಡರ್ಡ್ ವಿಮಾ ಪಾಲಿಸಿಗಳಲ್ಲಿ ಇಂತಹ ‘ಪರಿಣಾಮಕಾರಿ ಹಾನಿಗಳನ್ನು’ (consequential damage – ಕಾಲಕ್ರಮೇಣ ಉಂಟಾಗುವ ಹಾನಿ) ಸಾಮಾನ್ಯವಾಗಿ ಒಳಗೊಂಡಿರುವುದಿಲ್ಲ. ನಿಮ್ಮ ಕಾರು E20 ಹೊಂದಾಣಿಕೆಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಕೈಪಿಡಿಯನ್ನು (Manual) ಪರಿಶೀಲಿಸಿ ಅಥವಾ ಡೀಲರ್ ಬಳಿ ವಿಚಾರಿಸಿ ಎಂದು ಕಂಪನಿ ಸಲಹೆ ನೀಡಿದೆ.

ಇದನ್ನೂ ಓದಿ: ಭಾರತೀಯ ಪ್ರತಿಭೆ ಮತ್ತು ಐರೋಪ್ಯ ಪರಿಣಿತಿಗೆ ಸೇತುವಾಗಿರುವ ಭಾರತ್ ಇನ್ನೋವೇಟ್ಸ್: ಪ್ರಧಾನಿ ಮೋದಿ

E20 ಇಂಧನದ ಬಗ್ಗೆ ಕಾರು ಮಾಲಕರ ಅಸಮಾಧಾನ

ಭಾರತೀಯ ಆಟೋಮೊಬೈಲ್ ಉದ್ಯಮವು ಏಪ್ರಿಲ್ 2023 ರಿಂದ E20 ಹೊಂದಾಣಿಕೆಯ ವಾಹನಗಳನ್ನು ಮಾರಾಟ ಮಾಡಲು ಪ್ರಾರಂಭಿಸಿತು. ಅದಕ್ಕೂ ಮುಂಚಿನ ಹೆಚ್ಚಿನ ವಾಹನಗಳು ಇದಕ್ಕೆ ಹೊಂದಿಕೆಯಾಗುವುದಿಲ್ಲ. ಅನೇಕ ಕಾರು ಮಾಲೀಕರು, ವಿಶೇಷವಾಗಿ ಯುರೋಪಿಯನ್ ಬ್ರ್ಯಾಂಡ್‌ನ ಕಾರುಗಳನ್ನು ಹೊಂದಿರುವವರು, E20 ಬಳಕೆಯಿಂದ ತಮ್ಮ ಇಂಜಿನ್ ಮತ್ತು ಎಲೆಕ್ಟ್ರಾನಿಕ್ ಭಾಗಗಳಲ್ಲಿ ಸಮಸ್ಯೆಗಳು ಉಂಟಾಗುತ್ತಿವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ದೂರು ನೀಡುತ್ತಿದ್ದಾರೆ.

ನಿಮ್ಮ ವಾಹನವು E20 ಇಂಧನಕ್ಕೆ ತಯಾರಿಸಲ್ಪಟ್ಟಿಲ್ಲದಿದ್ದರೆ, ಅದನ್ನು ಬಳಸುವಾಗ ಎಚ್ಚರಿಕೆ ವಹಿಸಿ. ಏಕೆಂದರೆ ಇದರಿಂದ ಉಂಟಾಗುವ ಹಾನಿಗೆ ವಿಮಾ ರಕ್ಷಣೆ ಸಿಗುವುದು ಕಷ್ಟವಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

420ರ ಸ್ಟ್ರೈಕ್​ ರೇಟ್​ನಲ್ಲಿ ಅಬ್ಬರಿಸಿ ಪಂದ್ಯ ಗೆಲ್ಲಿಸಿದ ಜೇಸನ್ ಹೋಲ್ಡರ್ – Kannada News | Jason Holder’s Blazing 420 Strike Rate Powers Thrilling Run Chase Victory

ವೆಸ್ಟ್ ಇಂಡೀಸ್ ತಂಡವು ಕೊನೆಗೂ ಟಿ20 ಸರಣಿ ಗೆದ್ದುಕೊಂಡಿದೆ. ಅದು ಸಹ ಒಂದು ವರ್ಷಗಳ ಬಳಿಕ. ಅಂದರೆ ಕಳೆದುಕೊಂದು ವರ್ಷದಿಂದ ವಿಂಡೀಸ್ ಪಾಲಿಗೆ ಮರೀಚಿಕೆಯಾಗಿದ್ದ ಟಿ20 ಸರಣಿ ಗೆಲುವು ಕೊನೆಗೂ 2-1 ಅಂತರದಿಂದ ದಕ್ಕಿದೆ. ಜಮೈಕಾದ ಸೆಬೀನಾ ಪಾರ್ಕ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದ್ದವು.

ಈ ಮ್ಯಾಚ್​ನಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡ 20 ಓವರ್​ಗಳಲ್ಲಿ 169 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 53 ರನ್​ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಸಂಷ್ಟಕ್ಕೆ ಸಿಲುಕಿತ್ತು.

ಈ ಹಂತದಲ್ಲಿ ಕಣಕ್ಕಿಳಿದ ಶೆರ್ಫೇನ್ ರದರ್​ಫೋರ್ಡ್​ ಹಾಗೂ ರೋವ್​ಮನ್ ಪೊವೆಲ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಇದರ ನಡುವೆ 33 ರನ್​ ಬಾರಿಸಿ ಪೊವೆಲ್ ವಿಕೆಟ್ ಒಪ್ಪಿಸಿದರು. ಇದಾಗ್ಯೂ ಕೊನೆಯ 12 ಎಸೆತಗಳಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ 29 ರನ್​ಗಳ ಅವಶ್ಯಕತೆಯಿತ್ತು.

ಈ ವೇಳೆ ಕ್ರೀಸ್​ಗೆ ಆಗಮಿಸಿದ ಜೇಸನ್ ಹೋಲ್ಡರ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ದುಷ್ಮಂತ ಚಮೀರಾ ಎಸೆದ 19ನೇ ಓವರ್​ಗಳಲ್ಲಿ 6 ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಹೋಲ್ಡರ್ 20 ರನ್​ ಚಚ್ಚಿದರು. ಈ ಮೂಲಕ ಇಡೀ ಪಂದ್ಯದ ಚಿತ್ರಣ ಬದಲಿಸಿದರು.

ಅದರಂತೆ ಅಂತಿಮ ಓವರ್​ನಲ್ಲಿ 6 ರನ್​ಗಳ ಗುರಿ ಪಡೆದ ವೆಸ್ಟ್ ಇಂಡೀಸ್ ತಂಡವು 19.4 ಓವರ್​ಗಳಲ್ಲಿ 170 ರನ್​ ಬಾರಿಸುವ ಮೂಲಕ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

420ರ ಸ್ಟ್ರೈಕ್​ ರೇಟ್​:

ಈ ಪಂದ್ಯದಲ್ಲಿ ಜೇಸನ್ ಹೋಲ್ಡರ್ ಎದುರಿಸಿದ್ದು ಕೇವಲ 5 ಎಸೆತಗಳನ್ನು ಮಾತ್ರ. ಈ ಐದು ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್​ಗಳೊಂದಿಗೆ 21 ರನ್ ಬಾರಿಸಿದ್ದರು. ಅಂದರೆ ಬರೋಬ್ಬರಿ 420 ಸ್ಟ್ರೈಕ್ ರೇಟ್​​ನಲ್ಲಿ ಬ್ಯಾಟ್ ಬೀಸಿ ವೆಸ್ಟ್ ಇಂಡೀಸ್ ತಂಡಕ್ಕೆ ಗೆಲುವು ತಂದು ಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಇದನ್ನೂ ಓದಿ: ತಾಂತ್ರಿಕ ದೌರ್ಬಲ್ಯ ಬಹಿರಂಗ? ಮತ್ತೆ ವಿಫಲನಾದ ವೈಭವ್ ಸೂರ್ಯವಂಶಿ..!

ಶ್ರೀಲಂಕಾ ಕಾಯುವಿಕೆ ಮುಂದುವರಿಕೆ:

ಈ ಸೋಲಿನೊಂದಿಗೆ ಕೆರಿಬಿಯನ್ ದ್ವೀಪದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿ ಗೆಲ್ಲುವ ಶ್ರೀಲಂಕಾ ತಂಡದ ಅತೀ ದೊಡ್ಡ ಕನಸು ಮುಂದುವರೆದಿದೆ. ಅಂದರೆ ವೆಸ್ಟ್ ಇಂಡೀಸ್ ನೆಲದಲ್ಲಿ ವಿಂಡೀಸ್ ಪಡೆಯ ವಿರುದ್ಧ ಶ್ರೀಲಂಕಾ ತಂಡ ಈವರೆಗೆ ಒಂದೇ ಒಂದು ಟಿ20 ಸರಣಿ ಗೆದ್ದಿಲ್ಲ. ಈ ಬಾರಿ ಗೆಲ್ಲುವ ಉತ್ತಮ ಅವಕಾಶವಿತ್ತು. ಆದರೆ 19ನೇ ಓವರ್​ನಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿ ಜೇಸನ್ ಹೋಲ್ಡರ್ ಶ್ರೀಲಂಕಾ ತಂಡದ ಕನಸನ್ನು ಭಗ್ನಗೊಳಿಸಿದ್ದಾರೆ.

Source link