Category Archives: Blog

Your blog category

420ರ ಸ್ಟ್ರೈಕ್​ ರೇಟ್​ನಲ್ಲಿ ಅಬ್ಬರಿಸಿ ಪಂದ್ಯ ಗೆಲ್ಲಿಸಿದ ಜೇಸನ್ ಹೋಲ್ಡರ್ – Kannada News | Jason Holder’s Blazing 420 Strike Rate Powers Thrilling Run Chase Victory

ವೆಸ್ಟ್ ಇಂಡೀಸ್ ತಂಡವು ಕೊನೆಗೂ ಟಿ20 ಸರಣಿ ಗೆದ್ದುಕೊಂಡಿದೆ. ಅದು ಸಹ ಒಂದು ವರ್ಷಗಳ ಬಳಿಕ. ಅಂದರೆ ಕಳೆದುಕೊಂದು ವರ್ಷದಿಂದ ವಿಂಡೀಸ್ ಪಾಲಿಗೆ ಮರೀಚಿಕೆಯಾಗಿದ್ದ ಟಿ20 ಸರಣಿ ಗೆಲುವು ಕೊನೆಗೂ 2-1 ಅಂತರದಿಂದ ದಕ್ಕಿದೆ. ಜಮೈಕಾದ ಸೆಬೀನಾ ಪಾರ್ಕ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದ್ದವು.

ಈ ಮ್ಯಾಚ್​ನಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡ 20 ಓವರ್​ಗಳಲ್ಲಿ 169 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 53 ರನ್​ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಸಂಷ್ಟಕ್ಕೆ ಸಿಲುಕಿತ್ತು.

ಈ ಹಂತದಲ್ಲಿ ಕಣಕ್ಕಿಳಿದ ಶೆರ್ಫೇನ್ ರದರ್​ಫೋರ್ಡ್​ ಹಾಗೂ ರೋವ್​ಮನ್ ಪೊವೆಲ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಇದರ ನಡುವೆ 33 ರನ್​ ಬಾರಿಸಿ ಪೊವೆಲ್ ವಿಕೆಟ್ ಒಪ್ಪಿಸಿದರು. ಇದಾಗ್ಯೂ ಕೊನೆಯ 12 ಎಸೆತಗಳಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ 29 ರನ್​ಗಳ ಅವಶ್ಯಕತೆಯಿತ್ತು.

ಈ ವೇಳೆ ಕ್ರೀಸ್​ಗೆ ಆಗಮಿಸಿದ ಜೇಸನ್ ಹೋಲ್ಡರ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ದುಷ್ಮಂತ ಚಮೀರಾ ಎಸೆದ 19ನೇ ಓವರ್​ಗಳಲ್ಲಿ 6 ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಹೋಲ್ಡರ್ 20 ರನ್​ ಚಚ್ಚಿದರು. ಈ ಮೂಲಕ ಇಡೀ ಪಂದ್ಯದ ಚಿತ್ರಣ ಬದಲಿಸಿದರು.

ಅದರಂತೆ ಅಂತಿಮ ಓವರ್​ನಲ್ಲಿ 6 ರನ್​ಗಳ ಗುರಿ ಪಡೆದ ವೆಸ್ಟ್ ಇಂಡೀಸ್ ತಂಡವು 19.4 ಓವರ್​ಗಳಲ್ಲಿ 170 ರನ್​ ಬಾರಿಸುವ ಮೂಲಕ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

420ರ ಸ್ಟ್ರೈಕ್​ ರೇಟ್​:

ಈ ಪಂದ್ಯದಲ್ಲಿ ಜೇಸನ್ ಹೋಲ್ಡರ್ ಎದುರಿಸಿದ್ದು ಕೇವಲ 5 ಎಸೆತಗಳನ್ನು ಮಾತ್ರ. ಈ ಐದು ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್​ಗಳೊಂದಿಗೆ 21 ರನ್ ಬಾರಿಸಿದ್ದರು. ಅಂದರೆ ಬರೋಬ್ಬರಿ 420 ಸ್ಟ್ರೈಕ್ ರೇಟ್​​ನಲ್ಲಿ ಬ್ಯಾಟ್ ಬೀಸಿ ವೆಸ್ಟ್ ಇಂಡೀಸ್ ತಂಡಕ್ಕೆ ಗೆಲುವು ತಂದು ಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಇದನ್ನೂ ಓದಿ: ತಾಂತ್ರಿಕ ದೌರ್ಬಲ್ಯ ಬಹಿರಂಗ? ಮತ್ತೆ ವಿಫಲನಾದ ವೈಭವ್ ಸೂರ್ಯವಂಶಿ..!

ಶ್ರೀಲಂಕಾ ಕಾಯುವಿಕೆ ಮುಂದುವರಿಕೆ:

ಈ ಸೋಲಿನೊಂದಿಗೆ ಕೆರಿಬಿಯನ್ ದ್ವೀಪದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿ ಗೆಲ್ಲುವ ಶ್ರೀಲಂಕಾ ತಂಡದ ಅತೀ ದೊಡ್ಡ ಕನಸು ಮುಂದುವರೆದಿದೆ. ಅಂದರೆ ವೆಸ್ಟ್ ಇಂಡೀಸ್ ನೆಲದಲ್ಲಿ ವಿಂಡೀಸ್ ಪಡೆಯ ವಿರುದ್ಧ ಶ್ರೀಲಂಕಾ ತಂಡ ಈವರೆಗೆ ಒಂದೇ ಒಂದು ಟಿ20 ಸರಣಿ ಗೆದ್ದಿಲ್ಲ. ಈ ಬಾರಿ ಗೆಲ್ಲುವ ಉತ್ತಮ ಅವಕಾಶವಿತ್ತು. ಆದರೆ 19ನೇ ಓವರ್​ನಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿ ಜೇಸನ್ ಹೋಲ್ಡರ್ ಶ್ರೀಲಂಕಾ ತಂಡದ ಕನಸನ್ನು ಭಗ್ನಗೊಳಿಸಿದ್ದಾರೆ.

Source link

ಸತತ ಸೋಲಿನ ಬಳಿಕ ಸಂಭಾವನೆಯನ್ನು ಗಣನೀಯವಾಗಿ ಇಳಿಸಿಕೊಂಡ ವಿಕ್ರಮ್

ತಮಿಳು ಚಿತ್ರರಂಗದ ವರ್ಸಟೈಲ್ ನಟ ‘ಚಿಯಾನ್’ ವಿಕ್ರಮ್ ತಮ್ಮ ಮುಂದಿನ ಬಹುನಿರೀಕ್ಷಿತ ಚಿತ್ರ ‘ಚಿಯಾನ್ 63’ ಸಿನಿಮಾಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ಸತತವಾಗಿ ಸಿನಿಮಾ ಫ್ಲಾಪ್ ಆಗುತ್ತಿರುವುದರಿಂದ ಅವರಿಗೆ ದೊಡ್ಡ ಮಟ್ಟದಲ್ಲಿ ಸಂಭಾವನೆ ಕೊಡಲು ಯಾರೊಬ್ಬರೂ ಒಪ್ಪಿಕೊಳ್ಳುತ್ತಿಲ್ಲ. ಹೀಗಾಗಿ ಅವರು ಸಂಭಾವನೆ ಕಡಿತ ಮಾಡಿಕೊಂಡಿದ್ದಾರೆ. ಹೊಸ ಚಿತ್ರಕ್ಕಾಗಿ ವಿಕ್ರಮ್ ಅವರು ಸುಮಾರು 20 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ವರದಿ ಆಗಿದೆ. ಇದು ವಿಕ್ರಮ್ ಹಿಂದಿನ ಸಿನಿಮಾಗಳ ಸಂಭಾವನೆಗೆ ಹೋಲಿಸಿದರೆ ತುಂಬಾನೇ ಕಡಿಮೆ ಆದಂತೆ ಆಗಿದೆ.

ಸದ್ಯದ ಮಾರುಕಟ್ಟೆಯ ಏರಿಳಿತ ಹಾಗೂ ಟ್ರೆಂಡ್ ಅನ್ನು ಗಮನದಲ್ಲಿಟ್ಟುಕೊಂಡು ವಿಕ್ರಮ್ ತಮ್ಮ ಸಂಭಾವನೆಯನ್ನು ಕಡಿಮೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆದರೆ, ಇದಕ್ಕೆ ಪ್ರತಿಯಾಗಿ ಸಿನಿಮಾದ ಲಾಭದಲ್ಲಿ ಒಂದು ಪಾಲನ್ನು ಅವರು ಪಡೆಯಲಿದ್ದಾರಂತೆ. ಇದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಹಾಗಂತ ಸಿನಿಮಾ ಫ್ಲಾಪ್ ಆದರೆ, ಅವರಿಗೆ ತೊಂದರೆ ಕಟ್ಟಿಟ್ಟ ಬುತ್ತಿ. ಆದಾಗ್ಯೂ, ಈ ಬಗ್ಗೆ ಇನ್ನು ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.

ಇತ್ತೀಚೆಗಷ್ಟೇ ‘ಚಿಯಾನ್ 63’ ಚಿತ್ರದ ಸಣ್ಣ ಝಲಕ್ ತೋರಿಸೋ ವಿಡಿಯೋ ಬಿಡುಗಡೆಯಾಗಿ ಧೂಳೆಬ್ಬಿಸಿತ್ತು. ‘ಫಸ್ಟ್ ಫ್ಲೇಮ್’ ಹೆಸರಿನ ಈ ಟೀಸರ್‌ನಲ್ಲಿ ರಗಡ್ ಸೆಟಪ್ ಮಧ್ಯೆ ವಿಕ್ರಮ್ ಅವರ ಮಾಸ್ ಎಂಟ್ರಿ ಮತ್ತು ಸಂತೋಷ್ ನಾರಾಯಣನ್ ಅವರ ಹಿನ್ನೆಲೆ ಸಂಗೀತ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿತ್ತು. ಇದೊಂದು ಪಕ್ಕಾ ಆಕ್ಷನ್ ಸಿನಿಮಾವಾಗಲಿದ್ದು, ಶೀಘ್ರದಲ್ಲೇ ಶೂಟಿಂಗ್ ಆರಂಭವಾಗಲಿದೆ.

‘ಸರ್ವಂ ಮಾಯಾ’ ಖ್ಯಾತಿಯ ನಟಿ ರಿಯಾ ಶಿಬು ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇವರೊಂದಿಗೆ ಹಿರಿಯ ಕಲಾವಿದರಾದ ಎಂ.ಎಸ್. ಭಾಸ್ಕರ್ ಮತ್ತು ಊರ್ವಶಿ ಮುಖ್ಯ ಪಾತ್ರಗಳಲ್ಲಿದ್ದಾರೆ. ಚಿತ್ರದ ರಿಲೀಸ್ ಡೇಟ್ ಇನ್ನು ಫೈನಲ್ ಆಗಿಲ್ಲ. ಈ ಚಿತ್ರ 2026ರ ಕೊನೆಯಲ್ಲಿ ಅಥವಾ 2027ರ ಆರಂಭದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

ಇದನ್ನೂ ಓದಿ: 60ನೇ ವಯಸ್ಸಿನಲ್ಲೂ ಎಷ್ಟು ಯಂಗ್ ಆಗಿ ಕಾಣ್ತಾರೆ ನೋಡಿ ವಿಕ್ರಮ್

ಈ ಹಿಂದೆ ವಿಕ್ರಮ್ ಅವರು ಹೊಸ ನಿರ್ದೇಶಕ ಬೋಡಿ ರಾಜ್‌ಕುಮಾರ್ ಜೊತೆ ‘ಶಾಂತಿ ಟಾಕೀಸ್’ ಬ್ಯಾನರ್ ಅಡಿಯಲ್ಲಿ ಒಂದು ಆಕ್ಷನ್ ಥ್ರಿಲ್ಲರ್ ಸಿನಿಮಾ ಮಾಡುವುದಾಗಿ ಅನೌನ್ಸ್ ಮಾಡಿದ್ದರು. ಆದರೆ ಆ ಚಿತ್ರದ ಬಗ್ಗೆ ಸದ್ಯಕ್ಕೆ ಯಾವುದೇ ಹೊಸ ಅಪ್ಡೇಟ್ ಸಿಕ್ಕಿಲ್ಲ. ಇನ್ನು ನಿರ್ದೇಶಕ ಮಡೋನ್ ಅಶ್ವಿನ್ ಜೊತೆ ವಿಕ್ರಮ್ ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು, ಆದರೆ ಸದ್ಯದ ಮಾಹಿತಿ ಪ್ರಕಾರ ಆ ಪ್ರಾಜೆಕ್ಟ್ ಡ್ರಾಪ್ ಆಗಿದೆ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗೃಹಲಕ್ಷ್ಮಿ ಬೆನ್ನಲ್ಲೇ ಗೃಹಜ್ಯೋತಿ ಪರಿಷ್ಕರಣೆಗೆ ತಯಾರಿ: ಅನರ್ಹರಿಗೆ ಭರ್ಜರಿ ಶಾಕ್​​ ಕೊಡಲು ಸರ್ಕಾರದ ಸಿದ್ಧತೆ – Kannada News | After Gruhalakshmi, Karnataka Government Set to Revamp Gruha Jyothi Scheme

ಗೃಹಲಕ್ಷ್ಮಿ ಬೆನ್ನಲ್ಲೇ ಗೃಹಜ್ಯೋತಿ ಪರಿಷ್ಕರಣೆಗೆ ತಯಾರಿImage Credit source: DK Shivakumar X Account

ಬೆಂಗಳೂರು, ಜೂನ್​​ 15: ಗ್ಯಾರಂಟಿ ಯೋಜನೆಗಳ ದುರ್ಬಳಕೆ ತಡೆಯಲು ಮೇಜರ್​​ ಸರ್ಜರಿಗೆ ಮುಂದಾಗಿರುವ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಬೆನ್ನಲ್ಲೇ ಮನೆಗೆ 200 ಯೂನಿಟ್​ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ ಪರಿಷ್ಕರಣೆಗೂ ಮುಂದಾಗಿದೆ. 2 ದಿನಗಳಲ್ಲಿ ಸರ್ಕಾರದಿಂದ ಈ ಬಗ್ಗೆ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದ್ದು, ಪರಿಷ್ಕರಣೆ ವಿಚಾರವಾಗಿ ಇಲಾಖೆಗೆ ನಿಖರ ಮಾನದಂಡ ಪ್ರಕಟವಾಗಬಹುದೆಂದು ನಿರೀಕ್ಷಿಸಲಾಗಿದೆ.

ಗೃಹಜ್ಯೋತಿ ಯೊಜನೆಯಡಿ ರಾಜ್ಯದ 1.70 ಕೋಟಿ ಕುಟುಂಬಗಳು ಉಚಿತ ವಿದ್ಯುತ್ ಪಡೆಯುತ್ತಿವೆ. ಮಹತ್ವಾಕಾಂಕ್ಷಿ ಈ ಯೋಜನೆಗೆ ಪ್ರತಿ ತಿಂಗಳು 440 ಕೋಟಿ ರೂಪಾಯಿ ಹಣವನ್ನು ಸರ್ಕಾರ ವೆಚ್ಚ ಮಾಡುತ್ತಿದೆ. ಆದರೆ ಹಲವರು ಗೃಹಬಳಕೆ ಹೆಸರಿನಲ್ಲಿ‌ ವಾಣಿಜ್ಯ ಬಳಕೆಗೂ ಫ್ರೀ ವಿದ್ಯುತ್ ಬಳಕೆ ಮಾಡುತ್ತಿರುವ ಮಾಹಿತಿ ಸಿಕ್ಕಿದೆ. ಹೀಗಾಗಿ ಪ್ರಾಪರ್ಟಿ, ಮಳಿಗೆಗಳಿಗೆ ಫ್ರೀ ವಿದ್ಯುತ್ ‌ಪಡೆದವರಿಗೆ ಬಿಸಿ ಮುಟ್ಟಿಸಲು ಸಿದ್ಧತೆ ನಡೆದಿದ್ದು, ಉಚಿತ ವಿದ್ಯುತ್ ಪಡೆಯುತ್ತಿರುವ ಹೊರ ರಾಜ್ಯದ ಜನರಿಗೂ ಶಾಕ್ ಕೊಡಲು ತಯಾರಿ ನಡೆದಿದೆ.ಆಧಾರ್, ಇ-ಕೆವೈಸಿ, ಮೊಬೈಲ್​ ನಂಬರ್ ಮೂಲಕ ಮರುಪರಿಶೀಲನೆ ನಡೆಯಲಿದ್ದು, ಸೇವಾ ಸಿಂಧು ಪೋರ್ಟಲ್​ನಲ್ಲಿ ಇದಕ್ಕೆ ಅವಕಾಶ ನೀಡುವ ಸಾಧ್ಯತೆ ಇದೆ.

ಇದನ್ನೂ ಓದಿ: ಗೃಹಲಕ್ಷ್ಮಿಯರಿಗೆ ಭರ್ಜರಿ ಶಾಕ್​​ ಕೊಟ್ಟ ಸರ್ಕಾರ; ರಾಜ್ಯಾದ್ಯಂತ ಒಟ್ಟು 3.89 ಲಕ್ಷ ಫಲಾನುಭವಿಗಳಿಗೆ ಕೊಕ್​​

‘ವೋಟ್ ಇದ್ದವರಿಗೆ ಮಾತ್ರ ಗ್ಯಾರಂಟಿ ಯೋಜನೆ’

ಇನ್ನು ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಮಾಹಿತಿ ನೀಡಿರುವ ಸಿಎಂ ಡಿ.ಕೆ. ಶಿವಕುಮಾರ್​​, ವೋಟ್ ಇದ್ದವರಿಗೆ ಮಾತ್ರ ಗ್ಯಾರಂಟಿ ಯೋಜನೆ ಕೊಡುತ್ತೇವೆ ಎಂದಿದ್ದಾರೆ. ಈ ಹಿಂದೆ ತರಾತುರಿಯಲ್ಲಿ ಯಾರದ್ದೋ ನಂಬರ್ ಕೊಟ್ಟಿದ್ದಾರೆ. ಹೀಗಾಗಿ ಗೃಹಲಕ್ಷ್ಮಿ ಹಣ ಯಾರದ್ದೋ ಅಕೌಂಟ್​ಗೆ ಹೋಗ್ತಿದೆ. ಅದರ ಬದಲು ಫಲಾನುಭವಿಗಳ ಖಾತೆಗೇ ಹಣ ಸಂದಾಯವಾಗಬೇಕು. ನಾವು ಕರ್ನಾಟಕದವರಿಗೆ ಮಾತ್ರ ಗ್ಯಾರಂಟಿಗಳನ್ನು ಕೋಡೋದು ಎಂದವರು ಸ್ಪಷ್ಟವಾಗಿ ತಿಳಿಸಿದ್ದಾರೆ.

‘ಬಿಜೆಪಿಯವರು ಅಭಿಯಾನ ಮಾಡಲಿ’

ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಆಕ್ಷೇಪ ತೆಗೆದಿರುವ ಚಿಪಕ್ಷ ಬಿಜೆಪಿಗರಿಗೆ ಗೃಹ ಸಚಿವ ಪ್ರಿಯಾಂಕ್​​ ಖರ್ಗೆ ಕೌಂಟರ್​​ ಕೊಟ್ಟಿದ್ದು, ಬಿಜೆಪಿ ತಮ್ಮ ಕಾರ್ಯಕರ್ತರಿಗೆ ಗ್ಯಾರಂಟಿ ಬೇಡ ಅಂತಾ ಅಭಿಯಾನ ಮಾಡಲಿ. ಅವರಿಗೆ ಗ್ಯಾರಂಟಿ ಬೇಡ ಅಂದ್ರೆ ಬೇಡ, ಬೇರೆಯವರು ಪಡೀತಾರೆ. ಆದರೆ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ. ಅರ್ಹರಿಗೆ ಗ್ಯಾರಂಟಿ ಸಿಗಬೇಕೆಂದು ಪರಿಷ್ಕರಣೆ ಮಾಡಲಾಗ್ತಿದೆ ಎಂದವರು ಹೇಳಿದ್ದಾರೆ.

ವರದಿ: ಲಕ್ಷ್ಮೀನರಸಿಂಹ, ಟಿವಿ9 ಕನ್ನಡ

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಪಾಕಿಸ್ತಾನದಲ್ಲಿ ವಾಯುಸೇನೆಯ ತರಬೇತಿ ವಿಮಾನ ಪತನ: ಇಬ್ಬರು ಪೈಲಟ್‌ಗಳ ದುರ್ಮರಣ, ಮೂವರಿಗೆ ಗಾಯ – Kannada News | Tragedy in Khyber Pakhtunkhwa as Air Force Training Jet Goes Down During Flight

ಇಸ್ಲಾಮಾಬಾದ್, ಜೂನ್ 15: ಪಾಕಿಸ್ತಾನದ ಖೈಬರ್ ಪಖ್ತೂನ್ಖ್ವಾ ಪ್ರಾಂತ್ಯದ ಮರ್ದಾನ್ ಜಿಲ್ಲೆಯ ಕಟ್ಲಂಗ್ ಪ್ರದೇಶದಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ಪಾಕಿಸ್ತಾನ ವಾಯುಸೇನೆಗೆ (PAF) ಸೇರಿದ ತರಬೇತಿ ವಿಮಾನವೊಂದು (Trainer Aircraft) ಹಾರಾಟದ ವೇಳೆ ಇದ್ದಕ್ಕಿದ್ದಂತೆ ತಾಂತ್ರಿಕ ದೋಷದಿಂದಾಗಿ ಅಪಘಾತಕ್ಕೀಡಾಗಿದೆ.
ಈ ದುರದೃಷ್ಟಕರ ಘಟನೆಯಲ್ಲಿ ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

ವಿಡಿಯೋ

ಯಾವುದೇ ದೇಶದ ವಾಯುಸೇನೆಗಾಗಲಿ ಇಂತಹ ತರಬೇತಿ ವಿಮಾನಗಳ ಅಪಘಾತಗಳು ತೀವ್ರ ಆಘಾತವನ್ನು ಉಂಟುಮಾಡುತ್ತವೆ. ಅಮೂಲ್ಯವಾದ ಮಾನವ ಜೀವಗಳು ಮತ್ತು ರಕ್ಷಣಾ ಆಸ್ತಿಯ ನಷ್ಟವು ಯಾವಾಗಲೂ ಅತ್ಯಂತ ಗಂಭೀರ ಹಾಗೂ ಕಳವಳಕಾರಿ ವಿಷಯವಾಗಿದೆ. ಪ್ರಸ್ತುತ ಅಪಘಾತಕ್ಕೆ ನಿಖರವಾದ ಕಾರಣವನ್ನು ತಿಳಿಯಲು ಅಲ್ಲಿನ ರಕ್ಷಣಾ ಇಲಾಖೆ ತನಿಖೆಗೆ ಆದೇಶಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕರ್ನಾಟಕ ಕರಾವಳಿಯ ಸೌಂದರ್ಯಕ್ಕೆ ಮನಸೋತ ಆನಂದ್ ಮಹೀಂದ್ರಾ! ಶರಾವತಿ ಹಿನ್ನೀರಿನ ಸೌಂದರ್ಯ ಬಣ್ಣಿಸಿ ಪೋಸ್ಟ್ – Kannada News | Anand Mahindra Praises Honnavar Backwaters and Sharavathi Mangroves as Karnataka’s Hidden Gem

ಶರಾವತಿ ನದಿ ಹಿನ್ನೀರು ಸೌಂದರ್ಯ (ಚಿತ್ರ ಕೃಪೆ: ಆನಂದ್ ಮಹೀಂದ್ರಾ ಎಕ್ಸ್ ಹ್ಯಾಂಡಲ್)Image Credit source: @anandmahindra

ಬೆಂಗಳೂರು, ಜೂನ್ 15: ಭಾರತದ ಪ್ರಮುಖ ಪ್ರವಾಸಿ ತಾಣಗಳ ಪೈಕಿ ಅಷ್ಟಾಗಿ ಪರಿಚಿತವಲ್ಲದ, ಆದರೆ ಅದ್ಭುತ ಪ್ರಕೃತಿ ಸೌಂದರ್ಯ ಹೊಂದಿರುವ ರಹಸ್ಯ ತಾಣಗಳ ಹುಡುಕಾಟದಲ್ಲಿದ್ದೇನೆ ಎಂದಿರುವ ಖ್ಯಾತ ಉದ್ಯಮಿ, ಮಹೀಂದ್ರಾ ಸಮೂಹದ ಅಧ್ಯಕ್ಷ ಆನಂದ್ ಮಹೀಂದ್ರಾ (Anand Mahindra) ಕಣ್ಣು ಈಗ ಕರ್ನಾಟಕದ ಕರಾವಳಿಯ ಮೇಲಿದೆ. ಉತ್ತರ ಕನ್ನಡ (Uttara Kannada) ಜಿಲ್ಲೆಯ ಹೊನ್ನಾವರದ ಮನಮೋಹಕ ಹಿನ್ನೀರು (Backwaters) ಮತ್ತು ಶರಾವತಿ ನದಿಯ ಸೌಂದರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಅವರು, ಇದು ಕೇರಳದ ಹಿನ್ನೀರಿನಷ್ಟೇ ಪ್ರಚಾರಕ್ಕೆ ಅರ್ಹವಾದ ಅದ್ಭುತ ಜಾಗ ಎಂದು ಬಣ್ಣಿಸಿದ್ದಾರೆ.

  • ಹೊನ್ನಾವರ ಸೌಂದರ್ಯಕ್ಕೆ ಆನಂದ್ ಮಹೀಂದ್ರಾ ಫಿದಾ.
  • ಕೇರಳ ಹಿನ್ನೀರಿಗೆ ಹೊನ್ನಾವರ ಸಮಾನ ಎಂದ ಉದ್ಯಮಿ.
  • ಕಾಂಡ್ಲಾ ವನಗಳ ಪರಿಸರ ಮಹತ್ವಕ್ಕೆ ಶ್ಲಾಘನೆ.

ಆನಂದ್ ಮಹೀಂದ್ರಾ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹೊನ್ನಾವರದ ಸುಂದರ ಚಿತ್ರಗಳನ್ನು ಹಂಚಿಕೊಳ್ಳುತ್ತಾ, ‘ನಾವು ಯಾವಾಗಲೂ ಕೇರಳದ ಹಿನ್ನೀರನ್ನು ಸಂಭ್ರಮಿಸುತ್ತೇವೆ. ಆದರೆ ಕರ್ನಾಟಕದ ಕರಾವಳಿಯಲ್ಲಿ ಕೇರಳಕ್ಕೆ ಸರಿಸಾಟಿಯಾಗಿ ಗಮನ ಸೆಳೆಯಲು ಅರ್ಹವಾದ ಒಂದು ರಹಸ್ಯ ರತ್ನವಿದೆ. ಜೋಗ್ ಫಾಲ್ಸ್‌ನಲ್ಲಿ ಭೋರ್ಗರೆದು ಹರಿಯುವ ಅದೇ ಶರಾವತಿ ನದಿ, ಕೊನೆಗೆ ಹೊನ್ನಾವರದಲ್ಲಿ ಅತ್ಯಂತ ಶಾಂತವಾಗಿ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಹೊನ್ನಾವರ ಒಂದು ಮಾಂತ್ರಿಕ ಭೂದೃಶ್ಯವಾಗಿದೆ ಎಂಬುದಂತೂ ಸ್ಪಷ್ಟ’ ಎಂದು ಬರೆದುಕೊಂಡಿದ್ದಾರೆ.

ಪರಿಸರ ರಕ್ಷಕ ಕಾಂಡ್ಲಾ ವನಗಳ ಮಹತ್ವ

ಕೇವಲ ಪ್ರಕೃತಿ ಸೌಂದರ್ಯ ಮಾತ್ರವಲ್ಲದೆ, ಹೊನ್ನಾವರದ ಪರಿಸರ ವ್ಯವಸ್ಥೆಯ ಬಗ್ಗೆಯೂ ಮಹೀಂದ್ರಾ ಮಾತನಾಡಿದ್ದಾರೆ. ‘ಇಲ್ಲಿನ ಕಾಂಡ್ಲಾ ವನಗಳು (Mangrove forests), ಅಂಕುಡೊಂಕಾದ ಜಲಮಾರ್ಗಗಳು ಮತ್ತು ಕನ್ನಡಿಯಂತೆ ಹೊಳೆಯುವ ಹಿನ್ನೀರು ಅದ್ಭುತವಾಗಿದೆ. ಪ್ರಕೃತಿಯ ಅತ್ಯಂತ ಪರಿಣಾಮಕಾರಿ ಕರಾವಳಿ ರಕ್ಷಕರಲ್ಲಿ ಕಾಂಡ್ಲಾ ವನಗಳು ಸಹ ಸೇರಿವೆ. ಹೀಗಾಗಿ ಹೊನ್ನಾವರದ ಸೌಂದರ್ಯಕ್ಕೆ ಅದರ ಪರಿಸರ ಪ್ರಾಮುಖ್ಯತೆಯೂ ಸಮನಾಗಿ ಹೊಂದಿಕೆಯಾಗುತ್ತದೆ’ ಎಂದು ಅವರು ಉಲ್ಲೇಖಿಸಿದ್ದಾರೆ.

ಆನಂದ್ ಮಹೀಂದ್ರಾ ಎಕ್ಸ್ ಸಂದೇಶ

ಆನಂದ್ ಮಹೀಂದ್ರಾರ ಈ ಪೋಸ್ಟ್‌ಗೆ ಎಕ್ಸ್ ಬಳಕೆದಾರರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಪೋಸ್ಟ್‌ಗೆ ಉತ್ತರಿಸಿದ ವ್ಯಕ್ತಿಯೊಬ್ಬರು, ‘ಇದು ತುಂಬಾ ಸತ್ಯ, ನಾನು ಒಂದೆರಡು ವರ್ಷಗಳ ಹಿಂದೆ ಶರಾವತಿ ಮತ್ತು ಹೊನ್ನಾವರಕ್ಕೆ ಭೇಟಿ ನೀಡಿದ್ದೆ. ಅಲ್ಲಿನ ಸೌಂದರ್ಯಕ್ಕೆ ನಾನು ಬೆರಗಾಗಿದ್ದೆ! ನಾನು ಅಲ್ಲಿ ತೆಗೆದ ಈ ಚಿತ್ರ ಯಾವಾಗಲೂ ನನ್ನ ನೆನಪಿನಲ್ಲಿ ಉಳಿಯುತ್ತದೆ’ ಎಂದು ತಾವು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದ ಹೊನ್ನಾವರದ ಸುಂದರ ದೃಶ್ಯವೊಂದನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಶಿರಸಿ: 36 ವರ್ಷಗಳ ಬಳಿಕ 400 ಕೋಟಿ ರೂ. ಮೌಲ್ಯದ 379 ಎಕರೆ ಅರಣ್ಯ ಭೂಮಿ ವಶಕ್ಕೆ ಪಡೆಯಲು ಇಲಾಖೆ ಸಜ್ಜು

ಆನಂದ್ ಮಹೀಂದ್ರಾ ಅವರ ಈ ಪೋಸ್ಟ್‌ನಿಂದಾಗಿ ಕರ್ನಾಟಕದ ಕರಾವಳಿ ಪ್ರವಾಸೋದ್ಯಮ ಮತ್ತು ಹೊನ್ನಾವರದ ಕಾಂಡ್ಲಾ ವನಗಳಿಗೆ ಮತ್ತಷ್ಟು ಪ್ರಚಾರ ಸಿಕ್ಕಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸರ್ವಿಸ್ ರಸ್ತೆ ಕಳಪೆ ಕಾಮಗಾರಿ ಪ್ರಶ್ನಿಸಿದವರ ವಿರುದ್ಧ ಅಶ್ಲೀಲ ಪದ ಬಳಸಿದ ಕಾಂಗ್ರೆಸ್​​ ಸಂಸದ ಇ. ತುಕಾರಾಂ – Kannada News | Controversy Sparks as Bellary MP E Tukaram Allegedly Abuses Locals Questioning Poor Quality Service Road Work

ಕಳಪೆ ಕಾಮಗಾರಿ ಪ್ರಶ್ನಿಸಿದವರ ವಿರುದ್ಧ ಅಶ್ಲೀಲ ಪದ ಬಳಸಿದ ಕಾಂಗ್ರೆಸ್​​ ಸಂಸದ
Image Credit source: Tv9 Kannada

ಬಳ್ಳಾರಿ, ಜೂನ್​​ 15: ನಿರ್ಮಾಣಗೊಂಡ ಕೆಲವೇ ದಿನದಲ್ಲೇ ಸರ್ವಿಸ್ ರಸ್ತೆ ಕುಸಿದ ಹಿನ್ನೆಲೆ ಪರಿಶೀಲನೆಗಾಗಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಬಳ್ಳಾರಿ ಸಂಸದ ಇ. ತುಕಾರಾಂ ಸ್ಥಳೀಯ ನಿವಾಸಿಗಳ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿರುವ ಘಟನೆ ನಡೆದಿದೆ. ಕಳಪೆ ಕಾಮಗಾರಿಗೆ ಬಗ್ಗೆ ಸಂಸದರನ್ನು ಸ್ಥಳೀಯರು ಪ್ರಶ್ನೆ ಮಾಡಿದ ವೇಳೆ ತುಕಾರಾಂ ಗರಂ ಆಗಿದ್ದು, ತುಕಾರಾಂ ನಿಂದನೆ ಮಾಡಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮುಖ್ಯಾಂಶಗಳು

  • ನಿರ್ಮಾಣಗೊಂಡ ಕೆಲವೇ ದಿನದಲ್ಲೇ ಸರ್ವಿಸ್ ರಸ್ತೆ ಕುಸಿತ
  • ಕಳಪೆ ಕಾಮಗಾರಿ ಬಗ್ಗೆ ಕೇಳಿದ್ದಕ್ಕೆ ಸಂಸದ ತುಕಾರಾಂ ಗರಂ
  • ಸ್ಥಳೀಯರ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿರುವ ಆರೋಪ

ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಡಣಾಪುರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 50ರ ಮೇಲ್ಸೆತುವೆ ನಿರ್ಮಾಣದ ಕಾಮಗಾರಿ ನಡೆಯುತ್ತಿದ್ದು, ಕೆಲ ದಿನಗಳ ಹಿಂದೆ ಟ್ರಕ್ ನಿಂತಿದ್ದಾಗ ಸರ್ವಿಸ್ ರಸ್ತೆ ಕುಸಿದುಬಿದ್ದಿತ್ತು. ರಸ್ತೆ ನಿರ್ಮಾಣಗೊಂಡು ಕೇವಲ 10 ದಿನಗಳಲ್ಲಿಯೇ ಘಟನೆ ನಡೆದಿದ್ದ ಕಾರಣ ಕಳಪೆ ಕಾಮಗಾರಿಯಿಂದಲೇ ಈರೀತಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದರು. 2 ತಿಂಗಳ ಹಿಂದೆಯಷ್ಟೇ ಕಾಮಗಾರಿಗೆ ಸಂಸದ ತುಕಾರಾಂ ಭೂಮಿ ಪೂಜೆ ನೆರವೇರಿಸಿದ್ದು, 33 ಕೋಟಿ ವೆಚ್ಚದಲ್ಲಿ ಮೆಲ್ಸೇತುವೆ, ಸರ್ವಿಸ್ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.

ಇದನ್ನೂ ಓದಿ: 6 ಸಾವಿರ ಕೊಟ್ರೆ ಒಂದು ವಿಷಯ ಪಾಸ್​​; ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಮತ್ತೊಂದು ಕಳ್ಳಾಟ ಬಯಲು

ಹಣ ಉಳಿಸಲು ರಸ್ತೆ ನಿರ್ಮಾಣದ ವೇಳೆ ಮಣ್ಣು ಹಾಕದೇ ಪ್ಲೈಯಶ್ ಹಾಕಿ ರಸ್ತೆ ನಿರ್ಮಾಣ ಮಾಡಲಾಗಿದೆ. ಹೀಗಾಗಿಯೇ ರಸ್ತೆ ನಿರ್ಮಿಸಿ ಕೆಲ ದಿನಗಳು ಕಳೆಯುವುದರ ಒಳಗೆ ಅದು ಕುಸಿಯುತ್ತಿದೆ. ಜನರ ಹಣವನ್ನು ಈ ರೀತು ದುರ್ಬಳಕ್ಕೆ ಮಾಡುತ್ತಿರುವ ಕಂಪನಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸುಪ್ರೀಂ ಮೆಟ್ಟಿಲೇರಿದ ಅಯೋಧ್ಯೆ ರಾಮ ಮಂದಿರದ ದೇಣಿಗೆಯಲ್ಲಿ ಅಕ್ರಮ ಪ್ರಕರಣ, ಯುಪಿ ಸರ್ಕಾರದಿಂದ ‘ಎಸ್‌ಐಟಿ’ ರಚನೆ – Kannada News | Ayodhya Ram Mandir Donation Scam: SC Petition Filed, UP Govt Forms SIT for Probe

ಲಕ್ನೋ, ಜೂನ್ 15: ಅಯೋಧ್ಯೆ(Ayodhya)ಯ ಶ್ರೀರಾಮ ಜನ್ಮಭೂಮಿ ದೇವಸ್ಥಾಬದ ದೇಣಿಗೆ ನಿರ್ವಹಣೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಆರೋಪ ಈಗ ಸುಪ್ರೀಂಕೋರ್ಟ್​ ಮೆಟ್ಟಿಲೇರಿದೆ. ಸಾರ್ವಜನಿಕರ ವಿಶ್ವಾಸವನ್ನು ಕಾಪಾಡಲು ಈ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಡೆಸಿದೆ.

ಇದೇ ವೇಳೆ, ಪ್ರಕರಣದ ಪಾರದರ್ಶಕತೆ ಮತ್ತು ಸತ್ಯಾಸತ್ಯತೆಯನ್ನು ಬಯಲಿಗೆಳೆಯಲು ಉತ್ತರ ಪ್ರದೇಶ ಸರ್ಕಾರವು ಈಗಾಗಲೇ ಉನ್ನತ ಮಟ್ಟದ ವಿಶೇಷ ತನಿಖಾ ತಂಡವನ್ನು (SIT) ರಚಿಸುವ ಮೂಲಕ ತ್ವರಿತ ಕ್ರಮ ಕೈಗೊಂಡಿದೆ. ವಕೀಲ ಅನೂಪ್ ಅವಸ್ಥಿ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಅಯೋಧ್ಯೆ ಮಂದಿರದ ದೇಣಿಗೆಗೆ ಸಂಬಂಧಿಸಿದ ಆರೋಪಗಳನ್ನು ನ್ಯಾಯಾಲಯವೇ ನೇರವಾಗಿ ಪರಿಶೀಲಿಸಬೇಕು ಮತ್ತು ಸ್ವತಂತ್ರ ತನಿಖೆಗೆ ಆದೇಶಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರಿಗೆ ಮನವಿ ಮಾಡಿದ್ದಾರೆ.

ಈ ಮನವಿಗೆ ಸ್ಪಂದಿಸಿದ ಸಿಜೆಐ ಸೂರ್ಯ ಕಾಂತ್ ಅವರು, ನ್ಯಾಯಾಲಯದಲ್ಲಿ ಇಂತಹ ವಿಷಯಗಳ ಬಗ್ಗೆ ಕೇವಲ ಮೌಖಿಕವಾಗಿ ಹೇಳುವ ಬದಲು ಅಧಿಕೃತವಾಗಿ ಲಿಖಿತ ಟಿಪ್ಪಣಿಗಳನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ. ಆ ಟಿಪ್ಪಣಿಗಳನ್ನು ಪರಿಶೀಲಿಸಿದ ನಂತರ ಯಾವುದು ಪ್ರಸ್ತುತ ಎಂಬುದನ್ನು ನಿರ್ಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಯುಪಿ ಸರ್ಕಾರದಿಂದ ಮೂವರ ಸದಸ್ಯರ ‘SIT’ ತಂಡ ರಚನೆ
ದೇಣಿಗೆ ಪೆಟ್ಟಿಗೆಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ವದಂತಿಗಳಿಗೆ ಬ್ರೇಕ್ ಹಾಕಲು ಮತ್ತು ಸತ್ಯವನ್ನು ಜನರೆದುರು ತರಲು ‘ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್’ ಸ್ವತಃ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ನಿಷ್ಪಕ್ಷಪಾತ ತನಿಖೆಗಾಗಿ ವಿನಂತಿಸಿತ್ತು. ಟ್ರಸ್ಟ್‌ನ ಕೋರಿಕೆಯ ಮೇರೆಗೆ ಮುಖ್ಯಮಂತ್ರಿಗಳು ಮೂವರು ಉನ್ನತ ಅಧಿಕಾರಿಗಳ ವಿಶೇಷ ತನಿಖಾ ತಂಡವನ್ನು (SIT) ರಚಿಸಿದ್ದಾರೆ.

ಮತ್ತಷ್ಟು ಓದಿ: Video: ಅಯೋಧ್ಯೆಯಲ್ಲಿ ಬಂದೂಕು ತೋರಿಸಿ ಆಭರಣದಂಗಡಿ ದೋಚಿದ ಬುರ್ಖಾಧಾರಿ ಮಹಿಳೆ

ವಿಜಯ್ ವಿಶ್ವಾಸ್ ಪಂತ್: ಹಿರಿಯ ಐಎಎಸ್ (IAS) ಅಧಿಕಾರಿ ಹಾಗೂ ಲಕ್ನೋ ವಿಭಾಗೀಯ ಆಯುಕ್ತರು.

ಕಿರಣ್ ಎಸ್: ಹಿರಿಯ ಐಪಿಎಸ್ (IPS) ಅಧಿಕಾರಿ ಹಾಗೂ ಪೊಲೀಸ್ ಮಹಾನಿರ್ದೇಶಕರು.

ನೀಲ್ ರತನ್: ಹಣಕಾಸು ಇಲಾಖೆಯ ವಿಶೇಷ ಕಾರ್ಯದರ್ಶಿಗಳು.

ಈ ತಂಡವು ಇಡೀ ಪ್ರಕರಣವನ್ನು ಕೂಲಂಕಷವಾಗಿ ತನಿಖೆ ಮಾಡಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಿದೆ.

ಕೇವಲ ನಿರ್ಮಾಣ ಕಾರ್ಯಕ್ಕೆ ನನ್ನ ಪಾತ್ರ ಸೀಮಿತ: ನೃಪೇಂದ್ರ ಮಿಶ್ರಾ
ದೇಣಿಗೆ ವಿಷಯದ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ರಾಮ ಮಂದಿರ ನಿರ್ಮಾಣ ಸಮಿತಿಯ ಮುಖ್ಯಸ್ಥ ನೃಪೇಂದ್ರ ಮಿಶ್ರಾ ಅವರು ಸ್ಪಷ್ಟನೆ ನೀಡಿದ್ದಾರೆ. ನನ್ನ ಜವಾಬ್ದಾರಿಯು ಕೇವಲ ಮಂದಿರದ ನಿರ್ಮಾಣ ಕಾರ್ಯಗಳ ಮೇಲ್ವಿಚಾರಣೆಗೆ ಮಾತ್ರ ಸೀಮಿತವಾಗಿದೆ. ಆ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಲು ನಾನು ಅಯೋಧ್ಯೆಗೆ ಬಂದಿದ್ದೇನೆ, ಹಣಕಾಸಿನ ವಿಷಯಗಳಿಗೂ ನನಗೂ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ವಿಷಯದ ಬಗ್ಗೆ ರಾಜಕೀಯ ವಲಯದಲ್ಲೂ ಚರ್ಚೆಗಳು ಆರಂಭವಾಗಿವೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದರೆ, ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರು ವಿರೋಧ ಪಕ್ಷಗಳು ವದಂತಿಗಳನ್ನು ಹರಡುತ್ತಿವೆ ಎಂದು ಪ್ರತ್ಯುತ್ತರ ನೀಡಿದ್ದಾರೆ. ಸದ್ಯಕ್ಕೆ ಸರ್ಕಾರದ ಎಸ್‌ಐಟಿ (SIT) ತನಿಖೆಯು ಆರಂಭವಾಗಿರುವುದರಿಂದ ಶೀಘ್ರದಲ್ಲೇ ವದಂತಿಗಳಿಗೆ ತೆರೆ ಬೀಳಲಿದ್ದು, ಪಾರದರ್ಶಕತೆ ಹೊರಬರಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಇರಾನ್-ಅಮೆರಿಕ ಒಪ್ಪಂದದ ಎಫೆಕ್ಟ್; ತೈಲ ಬೆಲೆ ಇಳಿಕೆ; ರೂಪಾಯಿಗೆ ಜೀವ; ಚಿನ್ನ, ಷೇರುಗಳ ಜಿಗಿತ – Kannada News | Hormuz Peace Deal: Crude Oil Drops, Indian Stocks Soar – Global Market Impact

ಭಾರತೀಯ ಷೇರು ಮಾರುಕಟ್ಟೆImage Credit source: Shutterstock

ನವದೆಹಲಿ, ಜೂನ್ 15: ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಜಗತ್ತಿನ ಶಾಂತಿ ಮತ್ತು ಆರ್ಥಿಕತೆಗೆ ಧಕ್ಕೆ ಹಾರ್ಮುಜ್ ಜಲಸಂಧಿ (Strait of Hormuz) ಸಂಘರ್ಷ ಕೊನೆಗೂ ಅಂತ್ಯಗೊಳ್ಳುತ್ತಿದೆ. ಇರಾನ್ ಮತ್ತು ಅಮೆರಿಕ ನಡುವೆ ಶಾಂತಿ ಒಪ್ಪಂದ (Iran-US peace deal) ಏರ್ಪಡುತ್ತಿದೆ. ಒಪ್ಪಂದಕ್ಕೆ ಸಹಿ ಹಾಕಲು ಎರಡೂ ದೇಶಗಳು ಒಪ್ಪಿವೆ. ಇದು ಜಾಗತಿಕ ಮಾರುಕಟ್ಟೆಗಳಿಗೆ ಸಿಹಿ ತಂದಿರುವ ಬೆಳವಣಿಗೆ. ಅದರಲ್ಲೂ ಭಾರತದಂತಹ ದೇಶಗಳಿಗೆ ತುಸು ನೆಮ್ಮದಿ ತರುವ ಸುದ್ದಿ. ಪಶ್ಚಿಮ ಏಷ್ಯಾದಲ್ಲಿ ಭೌಗೋಳಿಕ ಉದ್ವಿಗ್ನತೆ ಕಡಿಮೆಯಾಗಿರುವುದು ಹೂಡಿಕೆದಾರರಲ್ಲಿ ಹೊಸ ಭರವಸೆ ಮೂಡಿಸಿದೆ.

ಕಚ್ಚಾ ತೈಲ (Crude Oil) ಬೆಲೆಯಲ್ಲಿ ಭಾರಿ ಕುಸಿತ

ಜಾಗತಿಕ ತೈಲ ಪೂರೈಕೆಗೆ ಎದುರಾಗಿದ್ದ ಆತಂಕ ದೂರವಾಗಿರುವುದರಿಂದ ಕಚ್ಚಾ ತೈಲ ಬೆಲೆ ತೀವ್ರವಾಗಿ ಕುಸಿದಿದೆ. ಅಮೆರಿಕದ ಕಚ್ಚಾ ತೈಲ ಬೆಲೆಯು ಶೇ. 4.3 ರಷ್ಟು ಕುಸಿದು ಬ್ಯಾರೆಲ್‌ಗೆ $81.23 ತಲುಪಿದೆ. ವಿಶ್ವದ ಒಟ್ಟು ತೈಲ ಬಳಕೆಯ ಸುಮಾರು ಐದನೇ ಒಂದು ಭಾಗ ಹಾರ್ಮುಜ್ ಜಲಸಂಧಿಯ ಮೂಲಕವೇ ಸಾಗುವುದರಿಂದ, ಇಲ್ಲಿನ ದಿಗ್ಬಂಧನ ತೆರವಾಗಿರುವುದು ಮಾರುಕಟ್ಟೆಗೆ ನಿರಾಳತೆ ತಂದಿದೆ.

ಭಾರತವು ತನ್ನ ಕಚ್ಚಾ ತೈಲದ ಅಗತ್ಯತೆಯ ಶೇಕಡಾ 85 ಕ್ಕಿಂತ ಹೆಚ್ಚಿನ ಭಾಗವನ್ನು ಆಮದು ಮಾಡಿಕೊಳ್ಳುತ್ತದೆ. ತೈಲ ಬೆಲೆ ಇಳಿಕೆಯಿಂದ ದೇಶದ ಹಣದುಬ್ಬರ ನಿಯಂತ್ರಣಕ್ಕೆ ಬರಲಿದ್ದು, ಆಮದು ವೆಚ್ಚ ಹಾಗೂ ಚಾಲ್ತಿ ಖಾತೆ ಕೊರತೆ (CAD) ಕಡಿಮೆಯಾಗಲಿದೆ.

ಇದನ್ನೂ ಓದಿ: ಭಾರತೀಯ ಪ್ರತಿಭೆ ಮತ್ತು ಐರೋಪ್ಯ ಪರಿಣಿತಿಗೆ ಸೇತುವಾಗಿರುವ ಭಾರತ್ ಇನ್ನೋವೇಟ್ಸ್: ಪ್ರಧಾನಿ ಮೋದಿ

ಸೆನ್ಸೆಕ್ಸ್ ಮತ್ತು ನಿಫ್ಟಿ ಭರ್ಜರಿ ಜಿಗಿತ

ಏಷ್ಯಾದಲ್ಲಿ ಶಾಂತಿ ನೆಲೆಸುವ ಮುನ್ಸೂಚನೆ ಸಿಗುತ್ತಿದ್ದಂತೆ ಭಾರತೀಯ ಷೇರು ಮಾರುಕಟ್ಟೆಗಳು ಸೋಮವಾರ ಭರ್ಜರಿ ಲಾಭದೊಂದಿಗೆ ವಹಿವಾಟು ಆರಂಭಿಸಿದವು. ಆರಂಭಿಕ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್ 1,144 ಅಂಕಗಳ (ಶೇ 1.51) ಏರಿಕೆ ಕಂಡು 76,672 ಕ್ಕೆ ತಲುಪಿದರೆ, ಎನ್‌ಎಸ್‌ಇ ನಿಫ್ಟಿ 351 ಅಂಕಗಳ (ಶೇ 1.49) ಜಿಗಿತದೊಂದಿಗೆ 23,974 ರ ಮಟ್ಟ ಮುಟ್ಟಿತು. ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ ಷೇರುಗಳು ಮಾರುಕಟ್ಟೆಯನ್ನು ಮುನ್ನಡೆಸಿದವು. ಮಾರುಕಟ್ಟೆಯ ಏರಿಳಿತವನ್ನು ಅಳೆಯುವ ಇಂಡಿಯಾ ವಿಐಎಕ್ಸ್ (India VIX) ಕುಸಿದಿದ್ದು, ಹೂಡಿಕೆದಾರರ ಆತಂಕ ದೂರವಾಗಿರುವುದನ್ನು ಇದು ತೋರಿಸುತ್ತದೆ.

ಬಲಗೊಂಡ ಭಾರತೀಯ ರೂಪಾಯಿ

ಕಚ್ಚಾ ತೈಲದ ಬೆಲೆ ಇಳಿಕೆಯ ನೇರ ಸಕಾರಾತ್ಮಕ ಪರಿಣಾಮ ರೂಪಾಯಿಯ ಮೇಲಾಗಿದೆ. ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯವು 53 ಪೈಸೆ ಬಲಗೊಂಡು 94.65 ಮಟ್ಟದಲ್ಲಿ ವಹಿವಾಟು ಆರಂಭಿಸಿತು (ಹಿಂದಿನ ಶುಕ್ರವಾರದ ಮುಕ್ತಾಯದ ಮೌಲ್ಯ 95.18 ಆಗಿತ್ತು). ತೈಲ ಬೆಲೆ ಕಡಿಮೆಯಾದಾಗ ಭಾರತೀಯ ತೈಲ ಕಂಪನಿಗಳಿಂದ ಡಾಲರ್ ಬೇಡಿಕೆ ತಗ್ಗುತ್ತದೆ. ಇದರಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ಮತ್ತೆ ಭಾರತೀಯ ಮಾರುಕಟ್ಟೆಗೆ ಮರಳುವ ನಿರೀಕ್ಷೆಯಿದೆ.

ಶೇ 2 ಕ್ಕಿಂತ ಹೆಚ್ಚು ಜಿಗಿದ ಚಿನ್ನದ ಬೆಲೆ

ಭೌಗೋಳಿಕ ಉದ್ವಿಗ್ನತೆ ಕಡಿಮೆಯಾಗಿದ್ದರೂ ಚಿನ್ನದ ಬೆಲೆ ಮಾತ್ರ ತೈಲಕ್ಕೆ ತದ್ವಿರುದ್ಧವಾಗಿ ತೇಜಿ ಕಂಡಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಗೋಲ್ಡ್ ಶೇಕಡಾ 2.5 ರಷ್ಟು ಏರಿಕೆಯಾಗಿ ಔನ್ಸ್‌ಗೆ $4,322.87 ತಲುಪಿದೆ. ತೈಲ ಬೆಲೆ ಕುಸಿತದಿಂದಾಗಿ ಜಾಗತಿಕವಾಗಿ ಹಣದುಬ್ಬರ ನಿಯಂತ್ರಣಕ್ಕೆ ಬಂದು, ಮುಂಬರುವ ದಿನಗಳಲ್ಲಿ ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿದರಗಳನ್ನು ಕಡಿತಗೊಳಿಸಬಹುದು ಎಂಬ ನಿರೀಕ್ಷೆಯಿಂದ ಹೂಡಿಕೆದಾರರು ಚಿನ್ನದ ಕಡೆಗೆ ಒಲವು ತೋರುತ್ತಿದ್ದಾರೆ. ಜೊತೆಗೆ ವಿವಿಧ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ದೊಡ್ಡ ಪ್ರಮಾಣದಲ್ಲಿ ಚಿನ್ನವನ್ನು ಖರೀದಿಸುತ್ತಿರುವುದು ಸಹ ಇದರ ಬೆಲೆ ಏರಿಕೆಗೆ ಕಾರಣವಾಗಿದೆ.

ಇದನ್ನೂ ಓದಿ: ಮೋದಿ 5 ದಿನಗಳ ಐರೋಪ್ಯ ಪ್ರವಾಸದಲ್ಲಿ ‘ಭಾರತ್ ಇನ್ನೋವೇಟ್ಸ್’; ಹೂಡಿಕೆದಾರರೊಂದಿಗೆ ಪ್ರಧಾನಿ ಸಂವಾದ

$65,000 ಗಡಿ ದಾಟಿದ ಬಿಟ್‌ಕಾಯಿನ್

ಜಾಗತಿಕ ಮಾರುಕಟ್ಟೆಗಳಲ್ಲಿ ಹೂಡಿಕೆದಾರರು ರಿಸ್ಕ್ ತೆಗೆದುಕೊಳ್ಳಲು (Risk Appetite) ಮುಂದಾಗಿರುವುದು ಕ್ರಿಪ್ಟೋಕರೆನ್ಸಿ ಮಾರುಕಟ್ಟೆಗೆ ಪೂರಕವಾಗಿದೆ. ವಿಶ್ವದ ಅತಿ ದೊಡ್ಡ ಕ್ರಿಪ್ಟೋಕರೆನ್ಸಿ ಬಿಟ್‌ಕಾಯಿನ್ ಶೇಕಡಾ 2 ಕ್ಕಿಂತ ಹೆಚ್ಚು ಲಾಭ ಗಳಿಸಿ $65,783 ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಇದರ ಒಟ್ಟು ಮಾರುಕಟ್ಟೆ ಮೌಲ್ಯ ಸುಮಾರು $1.3 ಟ್ರಿಲಿಯನ್ ತಲುಪಿದೆ.

ಜಾಗತಿಕ ಮಾರುಕಟ್ಟೆಗಳಲ್ಲಿ ಹರ್ಷ

ಈ ಶಾಂತಿ ಒಪ್ಪಂದವನ್ನು ಇಡೀ ವಿಶ್ವದ ಮಾರುಕಟ್ಟೆಗಳು ಸ್ವಾಗತಿಸಿವೆ. ಜಪಾನ್‌ನ ನಿಕೈ (Nikkei) ಮತ್ತು ದಕ್ಷಿಣ ಕೊರಿಯಾದ ಕೋಸ್ಪಿ (Kospi) ಸೂಚ್ಯಂಕಗಳು ತಲಾ ಶೇಕಡಾ 4 ಕ್ಕಿಂತ ಹೆಚ್ಚು ಜಿಗಿತ ಕಂಡರೆ, ಆಸ್ಟ್ರೇಲಿಯಾದ ಎಎಸ್‌ಎಕ್ಸ್ 200 ಶೇ 1.4 ರಷ್ಟು ಏರಿಕೆ ಕಂಡಿದೆ. ಪ್ರಸ್ತುತ ಹೂಡಿಕೆದಾರರು ಮುಂದಿನ 60 ದಿನಗಳ ಬೆಳವಣಿಗೆಯನ್ನು ಗಮನಿಸುತ್ತಿದ್ದಾರೆ, ಏಕೆಂದರೆ ಇರಾನ್ ಅಧಿಕಾರಿಗಳ ಪ್ರಕಾರ ಔಪಚಾರಿಕ ಅಂತಿಮ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಮುಂದಿನ 60 ದಿನಗಳ ಕಾಲ ಮಾತುಕತೆಗಳು ಮುಂದುವರಿಯಲಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಕರುಪ್ಪು’ ಚಿತ್ರ ಥಿಯೇಟರ್​​​ನಲ್ಲಿ ಹಿಟ್​, ಒಟಿಟಿಯಲ್ಲಿ ಫ್ಲಾಪ್ – Kannada News | Karuppu Movie: Theater Hit, OTT Flop? Suriya Trisha Film’s Unexpected Fate Explained

ಸೂರ್ಯ ಹಾಗೂ ತ್ರಿಷಾ ನಟನೆಯ ‘ಕರುಪ್ಪು’ ಸಿನಿಮಾ (Karuppu Movie) ಥಿಯೇಟರ್​​​ನಲ್ಲಿ ರಿಲೀಸ್ ಆಗಿ ಬರೋಬ್ಬರಿ 300 ಕೋಟಿ ರೂಪಾಯಿ ಬಾಚಿಕೊಂಡಿತು. ರಿಲೀಸ್ ಆದ ಒಂದೇ ತಿಂಗಳಿಗೆ ಸಿನಿಮಾ ಒಟಿಟಿಗೆ ಕಾಲಿಟ್ಟಿದೆ. ಈ ಚಿತ್ರ ಥಿಯೇಟರ್​​ನಲ್ಲಿ ಹಿಟ್ ಆಗಿತ್ತು ನಿಜ, ಆದರೆ, ಒಟಿಟಿಯಲ್ಲಿ ಈ ಚಿತ್ರ ಫ್ಲಾಪ್ ಆಗಿದೆ. ಈ ಚಿತ್ರವನ್ನು ಒಟಿಟಿಯಲ್ಲಿ ನೋಡಿದ ಅನೇಕರು ಚಿತ್ರದ ಬಗ್ಗೆ ಅಪಸ್ವರ ತೆಗೆದಿದ್ದಾರೆ.

ಕರುಪ್ಪು ಚಿತ್ರವನ್ನು ಆರ್​​ಜೆ ಬಾಲಾಜಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರೇ ವಿಲನ್ ಪಾತ್ರ ಕೂಡ ಮಾಡಿದ್ದಾರೆ. ಈ ಸಿನಿಮಾ ನೋಡಿದ ಫ್ಯಾನ್ಸ್ ಹಾಡಿ ಹೊಗಳಿದ್ದರು. ಬಾಯ್ಮಾತಿನ ಪ್ರಚಾರದಿಂದ ಸಿನಿಮಾ 300 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಆದರೆ, ಒಟಿಟಿಗೆ ಬರುತ್ತಿದ್ದಂತೆ ಜನರು ಚಿತ್ರವನ್ನು ತೆಗಳುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ.

‘ಕರುಪ್ಪು’ ಸಿನಿಮಾದಲ್ಲಿ ಸೂರ್ಯ ಪಾತ್ರ ಕಾಣಿಸಿಕೊಳ್ಳೋದು ಕೇವಲ 30 ನಿಮಿಷ ಮಾತ್ರ. ಇದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಇನ್ನು, ಚಿತ್ರಕ್ಕೆ ಸಿಕ್ಕ ಸಾಯಿ ಅಭಯಂಕರ್ ಮ್ಯೂಸಿಕ್ ಅದ್ಭುತವಾಗಿದೆ. ಇಡೀ ಚಿತ್ರವನ್ನು ಮೇಲಕ್ಕೆ ಎತ್ತೋದು ಅವರ ಮ್ಯೂಸಿಕ್. ಇದು ಚಿತ್ರಮಂದಿರಗಳಲ್ಲಿ ಒಳ್ಳೆಯ ಫೀಲ್ ಕೊಟ್ಟಿದೆ ನಿಜ. ಆದರೆ, ಒಟಿಟಿಯಲ್ಲಿ ಥಿಯೇಟರ್​ ಫೀಲ್ ಸಿಗಲು ಸಾಧ್ಯವಿಲ್ಲ. ಹೀಗಾಗಿ, ಜನರಿಗೆ ಸಿನಿಮಾ ಇಷ್ಟ ಆಗಿಲ್ಲ.

ಇದನ್ನೂ ಓದಿ: ‘ಕರುಪ್ಪು’ ಸಿನಿಮಾಕ್ಕೆ ಹೀಗಿತ್ತು ನಟ ಸೂರ್ಯ ತಯಾರಿ: ವಿಡಿಯೋ

ಇನ್ನು, ಸೂರ್ಯ ಹಾಗೂ ತ್ರಿಷಾ ಅವರನ್ನು ಹೆಚ್ಚು ಹೊತ್ತು ತೋರಿಸಿಲ್ಲ ಎಂಬ ಬೇಸರವೂ ಅಭಿಮಾನಿಗಳಿಗೆ ಕಾಡುತ್ತಾ ಇದೆ. ಈ ಎಲ್ಲಾ ಕಾರಣದಿಂದ ‘ಕರುಪ್ಪು’ ಸಿನಿಮಾ ಒಟಿಟಿಯಲ್ಲಿ ಫ್ಲಾಪ್ ಆಗುವ ಲಕ್ಷಣ ಗೋಚರವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ನನ್ನ ಜೀವನದ ತಪ್ಪು ನಿರ್ಧಾರವಿದು; ಗುರುಗ್ರಾಮದಿಂದ ಬೆಂಗಳೂರಿಗೆ ಸ್ಥಳಾಂತರಗೊಂಡ ಮಹಿಳೆ ಹೀಗೆಂದಿದ್ದೇಕೆ? – Kannada News | Bengaluru: Woman expresses regret over her decision to come to Bengaluru, says she made a big mistake

ಬೆಂಗಳೂರು, ಜೂನ್ 14: ಕೆಲಸದ ಕಾರಣಕ್ಕೆ ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗೋದು ಅನಿರ್ವಾಯ. ಆದರೆ ಈ ರೀತಿಯ ನಿರ್ಧಾರಗಳು ಕೆಲವೊಮ್ಮೆ ಪಶ್ಚಾತಾಪ ಭಾವನೆಯನ್ನು ಉಂಟು ಮಾಡಬಹುದು. ಗುರುಗ್ರಾಮದಿಂದ ಬೆಂಗಳೂರಿಗೆ (Bengaluru) ಸ್ಥಳಾಂತರಗೊಂಡ ಮಹಿಳೆಗೂ ಅದೇ ರೀತಿಯಾಗಿದೆ. ಇದಕ್ಕೆ ಕಾರಣವಾಗಿದ್ದು ಬೆಂಗಳೂರಿನ ಬಾಡಿಗೆ ದರ. ಹೌದು, ಈ ದಂಪತಿ ಬೆಂಗಳೂರಿನಲ್ಲಿ ಬಾಡಿಗೆ ದರ 52,000 ರೂ ಇರುವ ಫ್ಲಾಟ್‌ಗೆ ಸ್ಥಳಾಂತರಗೊಂಡಿದ್ದು, ಅವರು ಮಾಡಿದ ಪೋಸ್ಟ್ ಸದ್ಯ ಆನ್ಲೈನ್ ನಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.

ಪಾರುಲ್‌ ಅಸೀಮ್‌ (@parul___aseem) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಗುರುಗ್ರಾಮದಿಂದ ಬೆಂಗಳೂರಿಗೆ ಸ್ಥಳಾಂತರಗೊಂಡ ದಂಪತಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನಲ್ಲಿ ನೀವು ಬೆಂಗಳೂರಿಗೆ ಸ್ಥಳಾಂತರಗೊಳ್ಳುತ್ತಿದ್ದರೆ , ಕೇವಲ ಫೇಮಸ್ ಆಗಿರುವ ಪ್ರದೇಶಗಳಿಗೆ ಮಾತ್ರ ಬಲಿಯಾಗಬೇಡಿ. ನಾವು ಆ ತಪ್ಪನ್ನು ಮಾಡಿದ್ದೇವೆ… ಹೆಚ್ಚಿನ ಬಾಡಿಗೆ, ಹೆಚ್ಚಿನ ಠೇವಣಿ ಪಾವತಿಸಿದ್ದೇವೆ. ಆದರೆ ಬಹುತೇಕ ಯಾವುದೇ ಸೌಲಭ್ಯಗಳನ್ನು ಪಡೆಯಲಿಲ್ಲ. ಆದರೆ ನಾವು ಸ್ಥಳಾಂತರಗೊಂಡ ನಂತರ ಇದುನಮಗೆ ಅರಿವಾಯಿತು. ನೀವು ನಿಜವಾಗಿಯೂ ಬಜೆಟ್ ಸ್ನೇಹಿ ಸ್ಥಳಗಳಲ್ಲಿ ಉತ್ತಮವಾಗಿ ಬದುಕಬಹುದು ಎಂದು ಬರೆದುಕೊಂಡಿದ್ದಾರೆ.

ವೈರಲ್‌ ವಿಡಿಯೋ ಇಲ್ಲಿದೆ

ಬೆಂಗಳೂರಿನಲ್ಲಿ ಅತ್ಯುತ್ತಮ ಬಜೆಟ್ ಸ್ನೇಹಿ ಪ್ರದೇಶಗಳು ಇವು. ಯಲಹಂಕ – ಶಾಂತಿಯುತ, ವಿಶಾಲವಾದ ಮನೆಗಳು ಹಾಗೂ ಕುಟುಂಬಗಳಿಗೆ ಉತ್ತಮವಾಗಿದೆ. ಎಲೆಕ್ಟ್ರಾನಿಕ್ ಸಿಟಿ – ಕೈಗೆಟುಕುವ ಹಾಗೂ ಐಟಿ ಜನರಿಗೆ ಉತ್ತಮ. ಕನಕಪುರ ರಸ್ತೆ – ವೇಗವಾಗಿ ಬೆಳೆಯುತ್ತಿದೆ. ಸರ್ಜಾಪುರ ಹೊರವಲಯ – ಸರ್ಜಾಪುರಕ್ಕಿಂತ ಉತ್ತಮ ಡೀಲ್‌ಗಳು. ವೈಟ್‌ಫೀಲ್ಡ್ ಹೊರವಲಯ – ಹೆಚ್ಚು ಸ್ಥಳಾವಕಾಶ, ಕಡಿಮೆ ಬಾಡಿಗೆಗೆ ಮನೆ ಸಿಗುತ್ತದೆ ಎಂದಿದ್ದಾರೆ. ನಿಮ್ಮ ಕೆಲಸವು ಹೈಬ್ರಿಡ್ ರಿಮೋಟ್ ಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದರೆ, ‘ಪ್ರೈಮ್’ ಸ್ಥಳಗಳಿಗೆ ಹೆಚ್ಚು ಪಾವತಿಸುವುದನ್ನು ತಪ್ಪಿಸಿ. ಬದಲಿಗೆ ಉತ್ತಮ ಜೀವನಶೈಲಿಗಾಗಿ ಆ ಹಣವನ್ನು ಬಳಸಿ ಎಂದು ಪ್ರೋ ಟಿಪ್ ನೀಡಿದ್ದಾರೆ.

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಬೆಂಗಳೂರನ್ನು ದೂರುವುದು ಸರಿಯಲ್ಲ. ಇಲ್ಲಿನ ಎಲ್ಲಾ ಸ್ಥಳಗಳು ದುಬಾರಿಯಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಸ್ಥಳಾಂತರಗೊಂಡ ಬಳಿಕ ದೂರುವುದು ಸರಿಯಲ್ಲ, ಹೊಂದಿಕೊಂಡು ಹೋಗಬೇಕು ಅಷ್ಟೇ ಎಂದಿದ್ದಾರೆ.

ಇದನ್ನೂ ಓದಿ: ಹೆತ್ತವರಿಗೆ ತಾನು ಕೆಲಸ ಮಾಡುವ ಬೆಂಗಳೂರಿನ ಮೈಕ್ರೋಸಾಫ್ಟ್ ಆಫೀಸ್ ತೋರಿಸಿದ ಉದ್ಯೋಗಿ

ಇನ್ನೊಬ್ಬರು, ಸೌಕರ್ಯಗಳು ಮತ್ತು ಸ್ಥಳವನ್ನು ಪರಿಶೀಲಿಸಿದ ನಂತರ ನೀವು ಇಲ್ಲಿಗೆ ಬಂದಿದ್ದೀರಾ ಅಥವಾ ಇಲ್ಲವೇ? ಬುದ್ಧಿವಂತಿಕೆಯಿಂದ ವಲಯವನ್ನು ಆರಿಸಿ… ಪ್ರತಿಯೊಂದು ಪ್ರದೇಶದಂತೆಯೇ, ಹೆಚ್ ಎಸ್ ಆರ್ ನ ಪ್ರತಿಯೊಂದು ಭಾಗವು ಐಷಾರಾಮಿಯಾಗಿಲ್ಲ. ಹೆಚ್ಚು ಬ್ರೌಸ್ ಮಾಡಿ ಮತ್ತು ಸುತ್ತಾಡಿ. ಹೆಚ್ ಎಸ್ ಆರ್ ನ ಉತ್ತಮ ವಲಯಗಳು ಎಲ್ಲವನ್ನೂ ಹೊಂದಿವೆ. ನೀವು ನಿಮ್ಮಷ್ಟಕ್ಕೆ ನೋಡಬೇಕು ಮತ್ತು ದಲ್ಲಾಳಿಗಳನ್ನು ಅವಲಂಬಿಸಬಾರದು ಎಂದು ಸಲಹೆ ನೀಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:47 am, Mon, 15 June 26

Source link