Category Archives: Blog

Your blog category

ಕ್ಯಾಂಡಿ ಪ್ಯಾಕೆಟ್​ಗಳಲ್ಲಿ ಬ್ಯಾಂಕಾಕ್​ನಿಂದ ಬರುತ್ತಿತ್ತು ಡ್ರಗ್ಸ್! ಬೆಂಗಳೂರು ಏರ್​ಪೋರ್ಟಲ್ಲಿ ಇಬ್ಬರ ಬಂಧನ

ಬೆಂಗಳೂರು, ಫೆಬ್ರವರಿ 12: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIAB) ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಪ್ರತ್ಯೇಕ ಪ್ರಕರಣಗಳಲ್ಲಿ 3 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮೊದಲ ಪ್ರಕರಣದಲ್ಲಿ ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಬಂದಿದ್ದ ಪ್ರಯಾಣಿಕನ ಲಗೇಜ್ ಪರಿಶೀಲನೆ ನಡೆಸಿದ ವೇಳೆ 9.7 ಕೆಜಿ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿದೆ. ಈ ಗಾಂಜಾದ ಅಂದಾಜು ಮೌಲ್ಯ ಸುಮಾರು 3.39 ಕೋಟಿ ರೂಪಾಯಿ ಎನ್ನಲಾಗಿದೆ. ತಕ್ಷಣವೇ ಪ್ರಯಾಣಿಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಕೂಡ ಬ್ಯಾಂಕಾಕ್‌ನಿಂದ ಬಂದಿದ್ದ ಪ್ರಯಾಣಿಕ ಅಕ್ರಮವಾಗಿ ಕ್ಯಾಂಡಿ ಪ್ಯಾಕೆಟ್‌ಗಳಲ್ಲಿ ಮಾದಕ ವಸ್ತು ಸಾಗಿಸುತ್ತಿದ್ದುದನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಈ ವೇಳೆ ಸುಮಾರು 1.7 ಕೆಜಿ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದ್ದು, ಅದರ ಮೌಲ್ಯ ಸುಮಾರು 4.7 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿರಾಟ್ ಕೊಹ್ಲಿಯ ದಾಖಲೆ ಮುರಿದ ಗುರ್ಬಾಝ್ – Kannada News | Rahmanullah gurbaz breaks Virat Kohli’s record

T20 World Cup 2026: ಟಿ20 ವಿಶ್ವಕಪ್‌ನ 13ನೇ ಪಂದ್ಯದಲ್ಲಿ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿದ ಅಫ್ಘಾನಿಸ್ತಾನ್ ಬ್ಯಾಟರ್ ರಹಮಾನುಲ್ಲಾ ಗುರ್ಬಾಝ್ (Rahmanullah Gurbaz) ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಈ ದಾಖಲೆಯೊಂದಿಗೆ ವಿರಾಟ್ ಕೊಹ್ಲಿಯನ್ನು (Virat Kohli) ಹಿಂದಿಕ್ಕಿದ್ದಾರೆ.

Source link

ಮಾದಕವಸ್ತು ಮುಕ್ತ ಮೈಸೂರು: 3 ಕಡೆ ದೊಡ್ಡ​​ ಕಾರ್ಯಾಚರಣೆ ನಡೆಸಿದ ಪೊಲೀಸರು, 5 ಜನರ ಬಂಧನ – Kannada News | Anti Drug Drive in Mysore: CCB Nabs 5 in Major Raids, Launches ‘Vimukthi’ Hotline

ಡ್ರಗ್ಸ್​​​ ಕಾರ್ಯಚರಣೆಯಲ್ಲಿ ಬಂಧನವಾದ ಆರೋಪಿಗಳು

ಮೈಸೂರು, ಫೆ.12: ಮೈಸೂರು ನಗರದಲ್ಲಿ ಮಾದಕ ವಸ್ತುಗಳ ಜಾಲದ ವಿರುದ್ಧ ಸಿಸಿಬಿ (CCB) ಮತ್ತು ಮಂಡಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಒಟ್ಟು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಾದಕವಸ್ತು ಮುಕ್ತ ಮೈಸೂರಿಗಾಗಿ ಪೊಲೀಸರು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಒಟ್ಟು ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ. ಮೊದಲ ಪ್ರಕರಣದಲ್ಲಿ ಮೊಹಮ್ಮದ್ ಕರೀಂ ಮತ್ತು ನಿಷಾದ್ ಪಾಷಾ ಎಂಬ ಇಬ್ಬರನ್ನು ಬಂಧಿಸಿದ್ದಾರೆ. ಮೊಹಮ್ಮದ್ ಕರೀಂ ಮೇಲೆ ಈಗಾಗಲೇ 5 ಎನ್‌ಡಿಪಿಎಸ್ (NDPS) ಪ್ರಕರಣಗಳು ಹಾಗೂ ನಿಷಾದ್ ಪಾಷಾ ಮೇಲೆ 5 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಇವರಿಂದ 3.14 ಗ್ರಾಂ ಎಂಡಿಎಂಎ (MDMA) ಸಿಂಥೆಟಿಕ್ ಡ್ರಗ್ಸ್​​​ಗಳನ್ನು ವಶಪಡಿಸಿಲಾಗಿದೆ. ಇನ್ನು ಮಹಾರಾಷ್ಟ್ರದ ಮಾದಕವಸ್ತು ನಿಯಂತ್ರಣಾ ತಂಡಗಳು ಅಥವಾ ಪೊಲೀಸರು ಕರ್ನಾಟಕದಲ್ಲಿ ಕಾರ್ಯಾಚರಣೆ ನಡೆಸಿ ಡ್ರಗ್ಸ್ ಪತ್ತೆ ಹಚ್ಚಿದ ನಂತರ ರಾಜ್ಯದಲ್ಲಿ ಹಲವು ಕಡೆ ಪೋಲಿಸರು ಡ್ರಗ್ಸ್​​​ ಕಾರ್ಯಚರಣೆ ನಡೆಸಿದ್ದರು.

ಇನ್ನು ಎರಡನೇ ಪ್ರಕರಣದಲ್ಲಿ ಸಂಜಯ್ ಮತ್ತು ರಾಜ್‌ಕುಮಾರ್ ಎಂಬುವವರನ್ನು ಬಂಧಿಸಲಾಗಿದೆ. ಇವರಿಂದ ಒಟ್ಟು 585 ಗ್ರಾಂ ಗಾಂಜಾ ವಶ ಮಾಡಲಾಗಿದೆ. ಇದರ ಜತೆಗೆ ಗಾಂಜಾ ಸಾಗಾಟಕ್ಕೆ ಬಳಸುತ್ತಿದ್ದ ಟಿವಿಎಸ್ (TVS) ಬೈಕ್ ವಶಕ್ಕೆ ಪಡೆಯಲಾಗಿದೆ. ಮೂರನೇ ಪ್ರಕರಣದಲ್ಲಿ ಮೊಹಮ್ಮದ್ ಅಫಾಕ್ ಎಂಬುವವನ್ನು ಬಂಧಿಸಲಾಗಿದೆ. ಈತ ರಾಜೀವ್ ನಗರದ ನಿವಾಸಿಯಾಗಿದ್ದು, ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಮೈಸೂರು ಪೊಲೀಸರು ಡ್ರಗ್ಸ್ ಹಾವಳಿಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ‘ವಿಮುಕ್ತಿ’ ಹೆಸರಿನಲ್ಲಿ ವಿಶೇಷ ಸಹಾಯವಾಣಿಯನ್ನು (8277948080) ಆರಂಭಿಸಿದ್ದಾರೆ.

ಇದನ್ನೂ ಓದಿ: ಅಕ್ರಮವಾಗಿ ಕೇರಳ ಲಾಟರಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ ಮೈಸೂರು ಪೊಲೀಸರು

ನಿಮ್ಮ ಸುತ್ತಮುತ್ತ ಡ್ರಗ್ಸ್ ಮಾರಾಟ, ಸೇವನೆ ಅಥವಾ ಸಾಗಾಟದ ಬಗ್ಗೆ ಮಾಹಿತಿ ಇದ್ದರೆ ತಕ್ಷಣ ಈ ಸಂಖ್ಯೆಗೆ ಕರೆ ಮಾಡಲು ಪೊಲೀಸರು ಕೋರಿದ್ದಾರೆ. ಮಾಹಿತಿ ನೀಡುವವರ ವಿವರಗಳನ್ನು ರಹಸ್ಯವಾಗಿಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಮೈಸೂರು ನಗರದಾದ್ಯಂತ ಡ್ರಗ್ಸ್ ಪೆಡ್ಲರ್‌ಗಳ ಮೇಲೆ ಪೊಲೀಸರು ತೀವ್ರ ಕಣ್ಗಾವಲು ಇರಿಸಿದ್ದಾರೆ. ಕಾಲೇಜುಗಳು ಮತ್ತು ಹಾಸ್ಟೆಲ್‌ಗಳ ಸುತ್ತಮುತ್ತ ಗಸ್ತನ್ನು ಹೆಚ್ಚಿಸಲಾಗಿದ್ದು, ಡ್ರಗ್ಸ್ ಚಟುವಟಿಕೆಯಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ರಾಜ್ಯದಲ್ಲಿ ಡ್ರಗ್ಸ್​ ಕಾರ್ಯಚರಣೆ:

ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಕಳೆದ 24 ಗಂಟೆಗಳಲ್ಲಿ ನಡೆಸಿದ ದಾಳಿಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲೆಸಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆಫ್ರಿಕನ್ ಮೂಲದ ಪ್ರಜೆಗಳನ್ನು ಬಂಧಿಸಲಾಗಿದೆ. ಡಾರ್ಕ್ ವೆಬ್ (Dark Web) ಮೂಲಕ ಡ್ರಗ್ಸ್ ತರಿಸಿಕೊಂಡು, ಕೊರಿಯರ್ ಮೂಲಕ ಗ್ರಾಹಕರಿಗೆ ತಲುಪಿಸುತ್ತಿದ್ದ ಜಾಲವನ್ನು ಪತ್ತೆಹಚ್ಚಲಾಗಿದೆ. ಮೈಸೂರು ಪೊಲೀಸರು ಕೇವಲ ದಾಳಿ ಮಾಡುವುದಲ್ಲದೆ, ಸಾರ್ವಜನಿಕರ ಸಹಭಾಗಿತ್ವದೊಂದಿಗೆ ‘ವಿಮುಕ್ತಿ’ ಎಂಬ ಅಭಿಯಾನ ಆರಂಭಿಸಿದ್ದಾರೆ. ಕರಾವಳಿ ಜಿಲ್ಲೆಗಳಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಡ್ರಗ್ಸ್ ಮಾರುತ್ತಿದ್ದ ಜಾಲಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಹೀಗಾಗಿ ಇತ್ತೀಚೆಗೆ ಮಂಗಳೂರಿನಲ್ಲಿ ಪೊಲೀಸರು ಖಾಸಗಿ ಹಾಸ್ಟೆಲ್‌ಗಳ ಮೇಲೆ ದಿಢೀರ್ ದಾಳಿ ನಡೆಸಿ ತಪಾಸಣೆ ನಡೆಸುತ್ತಿದ್ದರು. ಇನ್ನು ಗಡಿ ಜಿಲ್ಲೆಯಾದ ಬೆಳಗಾವಿಯಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮಹಾರಾಷ್ಟ್ರದಿಂದ ರಾಜ್ಯಕ್ಕೆ ಸಾಗಣೆಯಾಗುತ್ತಿದ್ದ ಮಾದಕ ದ್ರವ್ಯಗಳನ್ನು ಗಡಿಯಲ್ಲಿಯೇ ಜಪ್ತಿ ಮಾಡಲಾಗುತ್ತಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನನ್ನ ತಂದೆ ಈಗ ಮೊದಲಿನಂತೆ ಇಲ್ಲ; ಅರ್ಜುನ್ ಸರ್ಜಾ ಬಗ್ಗೆ ಮಗಳು ಐಶ್ವರ್ಯಾ ಮಾತು – Kannada News | My Father Is Changed A lot Says Aishwarya Arjun Sarja

ಅರ್ಜುನ್ ಸರ್ಜಾ ಅವರು ಮಗಳು ಐಶ್ವರ್ಯಾ ಮೇಲೆ ಸಾಕಷ್ಟು ಪ್ರೀತಿ ಇಟ್ಟುಕೊಂಡಿದ್ದಾರೆ. ಐಶ್ವರ್ಯಾ ನಟನೆಯ ‘ಸೀತಾ ಪಯಣ’ ರಿಲೀಸ್​​ಗೆ ರೆಡಿ ಇದೆ. ಈ ಚಿತ್ರದ ಬಗ್ಗೆ ಮಾತನಾಡುವಾಗ ಐಶ್ವರ್ಯಾ ಅವರು ತಂದೆ ಅರ್ಜುನ್ ಸರ್ಜಾ ಬಗ್ಗೆ ಮಾತನಾಡಿದ್ದಾರೆ. ‘ನನ್ನ ತಂದೆ ಮೊದಲು ತುಂಬಾನೇ ಸ್ಟ್ರಿಕ್ಟ್ ಆಗಿದ್ದರು. ಆದರೆ, ಈಗ ಅವರು ಮೊದಲಿನಂತೆ ಇಲ್ಲ. ಅವರ ಬಳಿ ಈಗ ಏನು ಬೇಕಾದರೂ ಮಾತನಾಡಬಹುದು’ ಎಂದಿದ್ದಾರೆ.

 

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಭಾರತೀಯರು ಒತ್ತಡದಲ್ಲಿದ್ದಾರೆ, ಅದಕ್ಕೆ ನನ್ನ ಬಗ್ಗೆ ಮಾತಾಡ್ತಿದ್ದಾರೆ! – Kannada News | Indian batters in under extra pressure: Usman Tariq

ಪಾಕಿಸ್ತಾನ್ ಸ್ಪಿನ್ನರ್ ಉಸ್ಮಾನ್ ತಾರಿಖ್ ಸಖತ್ ಸುದ್ದಿಯಲ್ಲಿದ್ದಾರೆ. ಹೀಗೆ ಸುದ್ದಿಯಾಗಲು ಮುಖ್ಯ ಕಾರಣ ಅವರ ಬೌಲಿಂಗ್ ಶೈಲಿ. ವಿಭಿನ್ನ ಶೈಲಿಯಲ್ಲಿ ಚೆಂಡೆಸೆಯುವ ಆಕ್ಷನ್ ಹೊಂದಿರುವ ಉಸ್ಮಾನ್ ಅವರ ಬಗ್ಗೆ ಚರ್ಚೆಗಳು ಮುಂದುವರೆದಿದೆ. ಇದರ ನಡುವೆ ಭಾರತೀಯ ಕ್ರಿಕೆಟಿಗರಾದ ಆಕಾಶ್ ಚೋಪ್ರಾ, ಶ್ರೀವಾಸ್ತವ್ ಗೋಸ್ವಾಮಿ ಉಸ್ಮಾನ್ ತಾರಿಖ್ ಅವರ ಆಕ್ಷನ್ ಬಗ್ಗೆ ಪ್ರಶ್ನೆಗಳೆತ್ತಿದ್ದರು. ಇದೀಗ ಈ ಪ್ರಶ್ನೆಗೆ ಪಾಕ್ ಸ್ಪಿನ್ನರ್ ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಉಸ್ಮಾನ್ ತಾರಿಖ್, ಭಾರತೀಯರು ನನ್ನ ಬೌಲಿಂಗ್ ಆಕ್ಷನ್ ಬಗ್ಗೆ ಏನು ಹೇಳುತ್ತಾರೆ ಎಂಬುದು ನನಗೆ ಮುಖ್ಯವಲ್ಲ. ಅದನ್ನೆಲ್ಲಾ ನಾ ಕ್ಯಾರೇ ಮಾಡಲ್ಲ. ಅವರು ನನ್ನ ಬಗ್ಗೆ ಮಾತನಾಡುತ್ತಿದ್ದಾರೆ ಎಂದರೆ ಅವರು ಒತ್ತಡದಲ್ಲಿದ್ದಾರೆ ಎಂದರ್ಥ ಅಷ್ಟೇ ಎಂದಿದ್ದಾರೆ.

ಉಸ್ಮಾನ್ ತಾರಿಖ್ ಅವರ ವಿಶಿಷ್ಟ ಬೌಲಿಂಗ್ ಶೈಲಿಯನ್ನು (ಬೌಲಿಂಗ್ ಮಾಡುವಾಗ ಮಧ್ಯದಲ್ಲಿ ಸ್ವಲ್ಪ ಹೊತ್ತು ನಿಲ್ಲುವುದು) ಭಾರತದ ಮಾಜಿ ಕ್ರಿಕೆಟಿಗರು ಮತ್ತು ಅಭಿಮಾನಿಗಳು ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, “ಭಾರತೀಯ ಬ್ಯಾಟರ್‌ಗಳು ಒತ್ತಡದಲ್ಲಿದ್ದಾರೆ, ಅದಕ್ಕಾಗಿಯೇ ಅವರು ನನ್ನ ಬೌಲಿಂಗ್ ಬಗ್ಗೆ ಮಾತನಾಡುತ್ತಿದ್ದಾರೆ” ಎಂದು ತಿರುಗೇಟು ನೀಡಿದ್ದಾರೆ.

ಇದೇ ವೇಳೆ ತನ್ನ ಬೌಲಿಂಗ್ ಆ್ಯಕ್ಷನ್ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳಿಗೆ ಸ್ಪಷನೆ ನೀಡಿರುವ ಅವರು, ಈ ಹಿಂದೆಯೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಹಾಗೂ ಐಸಿಸಿ ನನ್ನ ಬೌಲಿಂಗ್ ಟೆಸ್ಟ್​ ನಡೆಸಿ ಕ್ಲೀನ್ ಚಿಟ್ ನೀಡಿದೆ. ಹೀಗಾಗಿ ಈ ಆರೋಪಗಳಿಗೆ ಯಾವುದೇ ಅರ್ಥವಿಲ್ಲ.

ಇದೀಗ ಭಾರತೀಯರು ನನ್ನ ಬೌಲಿಂಗ್ ಆ್ಯಕ್ಷನ್ ಟೀಕಿಸುತ್ತಿರುವುದು ಅವರು ಒತ್ತಡದಲ್ಲಿರುವ ಕಾರಣ. ಫೆಬ್ರವರಿ 15 ರಂದು ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗಲಿದೆ. ಈ ಪಂದ್ಯಕ್ಕೂ ಮುನ್ನವೇ ಭಾರತೀಯ ಬ್ಯಾಟರ್​ಗಳು ಒತ್ತಡದಲ್ಲಿದ್ದಾರೆ. ಅದಕ್ಕಾಗಿಯೇ ಅವರು ನನ್ನ ಬೌಲಿಂಗ್ ಬಗ್ಗೆ ಚರ್ಚಿಸುತ್ತಿದ್ದಾರೆ ಎಂದು ಉಸ್ಮಾನ್ ತಾರಿಖ್ ಹೇಳಿದ್ದಾರೆ.

ಇನ್ನು ಉಸ್ಮಾನ್ ತಾರಿಖ್ ಅವರ ಬೌಲಿಂಗ್ ಆ್ಯಕ್ಷನ್ ಬಗ್ಗೆ ಮೊದಲಿಗೆ ಪ್ರಶ್ನೆಗಳನ್ನೆತ್ತಿದ್ದು ಆಸ್ಟ್ರೇಲಿಯಾದ ಕ್ಯಾಮರೋನ್ ಗ್ರೀನ್. ಪಾಕ್ ವಿರುದ್ಧದ ಟಿ20 ಸರಣಿಯ 2ನೇ ಪಂದ್ಯದಲ್ಲಿ ತಾರಿಖ್ ಎಸೆತದಲ್ಲಿ ಔಟಾದ ಬಳಿಕ ಗ್ರೀನ್ ಅವರ ಬೌಲಿಂಗ್ ಆ್ಯಕ್ಷನ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು.

ಇದನ್ನೂ ಓದಿ: ಪಾಕ್ ಸ್ಪಿನ್ನರ್​ನ ಬೌಲಿಂಗ್ ಆ್ಯಕ್ಷನ್ ಕಾನೂನು ಬದ್ಧವೇ? ಅಂಪೈರ್ ಹೇಳಿದ್ದೇನು?

ಇದೀಗ ಟಿ20 ವಿಶ್ವಕಪ್​ನಲ್ಲೂ ಪೋಝ್ ಎಸೆತಗಳ ಮೂಲಕ ಉಸ್ಮಾನ್ ತಾರಿಖ್ ಬ್ಯಾಟರ್​ಗಳನ್ನು ಕಾಡುತ್ತಿದ್ದಾರೆ. ಹೀಗಾಗಿಯೇ ಇದೀಗ ಪಾಕಿಸ್ತಾನ್ ಸ್ಪಿನ್ನರ್​ನ ಬೌಲಿಂಗ್ ಆ್ಯಕ್ಷನ್ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಇದಾಗ್ಯೂ ತನ್ನ ಬೌಲಿಂಗ್​ಗೆ ಐಸಿಸಿ ಕಡೆಯಿಂದಲೇ ಕ್ಲೀನ್ ಚಿಟ್ ಸಿಕ್ಕಿದ್ದು, ಹೀಗಾಗಿ ಈ ಬಗ್ಗೆ ಚರ್ಚಿಸುವುದರಲ್ಲಿ ಅರ್ಥವಿಲ್ಲ ಎಂದು ಉಸ್ಮಾನ್ ತಾರಿಖ್ ಸ್ಪಷ್ಪಪಡಿಸಿದ್ದಾರೆ.

Published On – 8:58 am, Thu, 12 February 26

Source link

Pulwama Day 2026: ಫೆಬ್ರವರಿ 14ರಂದು ಪುಲ್ವಾಮಾ ದಿನ, 40 ಸೈನಿಕರ ಬಲಿದಾನದ ಸ್ಮರಣೆ, ಉಗ್ರ ದಾಳಿ ನಡೆದಿದ್ಹೇಗೆ? – Kannada News | Pulwama Day 2026: Remembering 40 Martyrs, How the Terror Attack Unfolded and India Responded

ಶ್ರೀನಗರ, ಫೆಬ್ರವರಿ 12: ಪುಲ್ವಾಮಾ ದಾಳಿ(Pulwama Attack) ನಡೆದು 7 ವರ್ಷಗಳು ಕಳೆದಿವೆ. ಫೆಬ್ರವರಿ 14, 2019 ದೇಶವು ಎಂದಿಗೂ ಮರೆಯದ ದಿನ ಅದು. ಪುಲ್ವಾಮಾ ಭಯೋತ್ಪಾದಕ ದಾಳಿಯಾಗಿ 7 ವರ್ಷಗಳು ಕಳೆದಿರಬಹುದು, ಆದರೆ ದುಃಖ ಮತ್ತು ನೋವು ಜನರ ಮನಸ್ಸಿನಲ್ಲಿ ಇನ್ನು ಹಸಿಯಾಗಿದೆ.

ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಮ್ಮುವಿನಿಂದ ಶ್ರೀನಗರಕ್ಕೆ ಕೇಂದ್ರ ಪೊಲೀಸ್ ಪಡೆ(ಸಿಆರ್​ಪಿಎಫ್) ಪ್ರಯಾಣಿಸುತ್ತಿತ್ತು. ಅವಂತಿಪೋರಾ ಗೋರಿಪೋರಾ ಬಳಿ ಬೆಂಗಾವಲು ಪಡೆಯ ಬಸ್​​ಗಳ ಪಕ್ಕದಲ್ಲಿಯೇ ವಾಹನವೊಂದು ಹಾದು ಹೋಗುತ್ತಿತ್ತು. ಸೇನಾ ಸಿಬ್ಬಂದಿ ಪದೇ ಪದೇ ಆ ಕಾರು ಚಾಲಕನಿಗೆ ತಮ್ಮ ವಾಹನದಿಂದ ದೂರ ಇರುವಂತೆ ಹೇಳುತ್ತಿದ್ದರು. ಆದರೆ ಚಾಲಕ ಅದನ್ನು ನಿರ್ಲಕ್ಷಿಸುತ್ತಿದ್ದ. ಸೈನಿಕರು ಅರ್ಥ ಮಾಡಿಕೊಳ್ಳುವ ಮುನ್ನವೇ ಕಾರು ಬೆಂಗಾವಲು ಪಡೆಯ ಬಸ್​​ಗೆ ಡಿಕ್ಕಿ ಹೊಡೆದು, ಬೃಹತ್ ಸ್ಫೋಟ ಸಂಭವಿಸಿತ್ತು. 40 ಸೈನಿಕರ ದೇಹ ನೋಡನೋಡುತ್ತಲೇ ಛಿದ್ರ ಛಿದ್ರವಾಗಿತ್ತು.

ಈ ದಾಳಿ ಹೇಗೆ ನಡೆಯಿತು, ಭಾರತ ನಂತರ ಯಾವ ಕ್ರಮ ಕೈಗೊಂಡಿತು ಮತ್ತು ಭಾರತೀಯ ಸೈನಿಕರು ಪಾಕಿಸ್ತಾನದಲ್ಲಿ ಕುಳಿತಿದ್ದ ಜೈಶ್ ಭಯೋತ್ಪಾದಕರನ್ನು ಹೇಗೆ ಆಯ್ದುಕೊಡಿದ್ದು ಇತರೆ ವಿಚಾರಗಳ ಬಗ್ಗೆ ಇಲ್ಲಿದೆ ಮಾಹಿತಿ.
ಸ್ಫೋಟದ ಶಬ್ದವು ಎಷ್ಟು ವಿನಾಶಕಾರಿಯಾಗಿತ್ತೆಂದರೆ, ಅದರ ಶಬ್ದವು ಹಲವಾರು ಕಿಲೋಮೀಟರ್‌ಗಳವರೆಗೆ ಕೇಳಿಬಂದಿತ್ತು.  ಪುಲ್ವಾಮಾ ಸುತ್ತಮುತ್ತಲಿನ ಪ್ರದೇಶವು ಬೆಂಕಿ ಮತ್ತು ಹೊಗೆಯಿಂದ ಆವೃತವಾಗಿತ್ತು. ದಾಳಿಯಲ್ಲಿ ನಲವತ್ತು ಸೈನಿಕರು ಹುತಾತ್ಮರಾಗಿದ್ದರು.

ಜೈಶ್-ಎ-ಮೊಹಮ್ಮದ್ ಹೊಣೆ ಹೊತ್ತುಕೊಂಡಿತ್ತು
ಅವಂತಿಪೋರಾದಲ್ಲಿ ನಡೆದ ದಾಳಿಯ ಹೊಣೆಯನ್ನು ಜೈಶ್-ಎ-ಮೊಹಮ್ಮದ್ ಹೊತ್ತುಕೊಂಡಿತ್ತು. ಸ್ಫೋಟ ಎಷ್ಟು ಪ್ರಬಲವಾಗಿತ್ತೆಂದರೆ ಹಲವಾರು ಬಸ್‌ಗಳು ತೀವ್ರವಾಗಿ ಹಾನಿಗೊಳಗಾದವು. ಈ ದಾಳಿಯು ದೇಶವನ್ನೇ ಬೆಚ್ಚಿಬೀಳಿಸಿತ್ತು. ಈ ಭಯೋತ್ಪಾದನಾ ಕೃತ್ಯವು ಭಾರತೀಯರ ಕಣ್ಣಲ್ಲಿ ನೀರು ತರಿಸಿತ್ತು.

ಮತ್ತಷ್ಟು ಓದಿ: Pulwama Attack: ಫೆಬ್ರವರಿ 14 ಭಾರತೀಯರಿಗೆ ಕರಾಳ ದಿನ, ಈ ಉಗ್ರರ ದಾಳಿಗೆ ಭಾರತ ಪ್ರತ್ಯುತ್ತರ ಹೇಗೆ ನೀಡಿತ್ತು? ಇಲ್ಲಿದೆ ಮಾಹಿತಿ

ಸರ್ಜಿಕಲ್ ಸ್ಟ್ರೈಕ್ ಮತ್ತು ಪಾಕಿಸ್ತಾನಕ್ಕೆ ಪಾಠ
ಪುಲ್ವಾಮಾ ಭಯೋತ್ಪಾದಕ ದಾಳಿಯ ನಿಖರವಾಗಿ 12 ದಿನಗಳ ನಂತರ, ಫೆಬ್ರವರಿ 25 ರ ತಡರಾತ್ರಿ ಭಾರತ ಪಾಕಿಸ್ತಾನದ ಬಾಲಕೋಟ್‌ನಲ್ಲಿ ವೈಮಾನಿಕ ದಾಳಿ ನಡೆಸಿತು. ಈ ದಾಳಿಯಲ್ಲಿ, ಸೇನೆಯು ಸುಮಾರು 300 ಪಾಕಿಸ್ತಾನಿ ಭಯೋತ್ಪಾದಕರನ್ನು ಕೊಂದಿತು. ಸರ್ಕಾರದ ಹೇಳಿಕೆಗಳ ಪ್ರಕಾರ, 2,000 ವಾಯುಪಡೆಯ ವಿಮಾನಗಳು ಈ ಪ್ರದೇಶದ ಭಯೋತ್ಪಾದಕ ಶಿಬಿರಗಳ ಮೇಲೆ ಸುಮಾರು 1,000 ಕಿಲೋಗ್ರಾಂಗಳಷ್ಟು ಬಾಂಬ್‌ಗಳನ್ನು ಹಾಕಿದವು. ಪಾಕಿಸ್ತಾನಕ್ಕೆ ಈ ಕಾರ್ಯಾಚರಣೆಯ ಬಗ್ಗೆ ತಿಳಿದಿರಲಿಲ್ಲ. ಈ ದಾಳಿಯನ್ನು ಬಾಲಕೋಟ್ ವೈಮಾನಿಕ ದಾಳಿ ಎಂದು ಕರೆಯಲಾಯಿತು.

ವಿಂಗ್ ಕಮಾಂಡರ್ ಅಭಿನಂದನ್
ಈ ಕಾರ್ಯಾಚರಣೆಯ ಸಮಯದಲ್ಲಿ, ಭಾರತದ ಮಿಗ್ -21 ಬೈಸನ್ ಯುದ್ಧ ವಿಮಾನವು ಪಾಕಿಸ್ತಾನದ ಎಫ್ -16 ಯುದ್ಧ ವಿಮಾನವನ್ನು ಹೊಡೆದುರುಳಿಸಿತು. ಈ ಬಾಲಕೋಟ್ ವೈಮಾನಿಕ ದಾಳಿಯಲ್ಲಿ, ಭಾರತದ ಮಿಗ್ -21 ಯುದ್ಧ ವಿಮಾನವು ಹಾನಿಗೊಳಗಾಗಿ ಪಾಕಿಸ್ತಾನಕ್ಕೆ ಅಪ್ಪಳಿಸಿತ್ತು. ಮತ್ತು ವಿಮಾನದಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರನ್ನು ಪಾಕಿಸ್ತಾನಿ ಸೇನೆ ವಶಪಡಿಸಿಕೊಂಡಿತು. ಆದಾಗ್ಯೂ, ಅಭಿನಂದನ್ ವರ್ತಮಾನ್ ಅವರನ್ನು ಮಾರ್ಚ್ 1, 2019 ರಂದು ಪಾಕಿಸ್ತಾನ ಬಿಡುಗಡೆ ಮಾಡಿತು ಮತ್ತು ಭಾರತ ಸರ್ಕಾರವು ಅವರಿಗೆ ‘ವೀರ್ ಚಕ್ರ’ ನೀಡಿ ಗೌರವಿಸಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಐದೇ 5 ಎಸೆತಗಳಲ್ಲಿ ವಿಶ್ವ ದಾಖಲೆ ಬರೆದ ಮೈಕೆಲ್ ಲೀಸ್ಕ್ – Kannada News | Michael Leask Creates New world record Wtih Highest strike rate

ಟಿ20 ವಿಶ್ವಕಪ್​​​ನ ಸ್ಕಾಟ್ಲೆಂಡ್ ತಂಡದ ಮೈಕೆಲ್ ಲೀಸ್ಕ್ (Michael Leask) ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಅದು ಕೂಡ ಕೇವಲ 5 ಎಸೆತಗಳಲ್ಲಿ ಎಂಬುದು ವಿಶೇಷ. ಅಂದರೆ ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತ್ಯುತ್ತಮ ಸ್ಟ್ರೈಕ್ ರೇಟ್​​ನಲ್ಲಿ ರನ್​​ಗಳಿಸಿ ಬ್ಯಾಟರ್ ಎಂಬ ದಾಖಲೆ ಲೀಸ್ಕ್​ ಪಾಲಾಗಿದೆ.

Source link

Video: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾಧ್ಯಮದ ಮುಂದೆ ಪ್ರತಿಕ್ರಿಯೆ ನೀಡುವಾಗ ಡಿಸ್ಟರ್ಬ್​ ಮಾಡಿದ ರಾಹುಲ್ ಗಾಂಧಿ – Kannada News | Awkward Moment Outside Parliament as Pralhad Joshi Walks Away After Rahul Gandhi Joins In

ನವದೆಹಲಿ, ಫೆಬ್ರವರಿ 12: ಸಂಸತ್ತಿನ ಮುಂಭಾಗ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಅಶ್ವಿನಿ ವೈಷ್ಣವ್ ಮಾಧ್ಯಮದ ಮುಂದೆ ಪ್ರತಿಕ್ರಿಯೆ ನೀಡುವಾಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಧ್ಯೆ ಬಂದು ತೊಂದರೆ ಕೊಟ್ಟಿರುವ ವಿಡಿಯೋ ವೈರಲ್ ಆಗಿದೆ. ಇಬ್ಬರು ನಾಯಕರು ಮಾಧ್ಯಮದವರೊಂದಿಗೆ ಮಾತನಾಡುತ್ತಿರುವ ಸಮಯದಲ್ಲಿ ರಾಹುಲ್ ಗಾಂಧಿ  ಸಚಿವರ ಪಕ್ಕ ಬಂದು ನಿಂತಿದ್ದರು.

ಕೂಡಲೇ ಇರುಸು ಮುರುಸು ಉಂಟಾಗಿ ಸಚಿವರು ಅಲ್ಲಿಂದ ಹೋಗಿದ್ದಾರೆ. ವಿರೋಧ ಪಕ್ಷದ ನಾಯಕನಿಂದ ಇಂಥಾ ವರ್ತನೆ ನಿರೀಕ್ಷಿಸಲಿರಲಿಲ್ಲ ಎಂದು ಬಿಜೆಪಿ ಫೇಸ್​​ಬುಕ್​​ನಲ್ಲಿ ವಿಡಿಯೋವನ್ನು ಹಂಚಿಕೊಂಡಿದೆ. ಸ್ವಲ್ಪ ಕಾಂಗ್ರೆಸ್‌ ತ್ಯಜಿಸಿ ಬಿಜೆಪಿ ಸೇರಿದ್ದಾರೆ ಎಂಬ ಏಕೈಕ ಕಾರಣಕ್ಕೆ ಸಂಸದ ರವನೀತ್‌ ಸಿಂಗ್‌ ಬಿಟ್ಟು ಅವರನ್ನು, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಗದ್ದಾರ್‌ (ದ್ರೋಹಿ) ಎಂದು ಕರೆಯುವ ಮೂಲಕ ತೀವ್ರ ವಿವಾದ ಸೃಷ್ಟಿಸಿದ್ದರು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮಹಾ ತಿರುವು; ವಕೀಲ ವೃತ್ತಿಗೆ ಗುಡ್ ಬೈ ಹೇಳುವ ಶಪಥ ಮಾಡಿದ ಭಾರ್ಗವಿ – Kannada News | Bhargavi LLB: Shocking Twist! Bhargavi Quits Law? Colors Kannada Serial Latest Update

ಕಲರ್ಸ್‌ ಕನ್ನಡ (Colors Kannada) ವಾಹಿನಿಯಲ್ಲಿ ಹೊಸ ಹೊಸ ಧಾರಾವಾಹಿಗಳು ಪ್ರಸಾರ ಕಾಣುತ್ತಾ ಇರುತ್ತವೆ. ಈಗ ಈ ಧಾರಾವಾಹಿ ರೋಚಕ ಘಟ್ಟ ತಲುಪಿದೆ. ಈ ಧಾರಾವಾಹಿ ಪ್ರಮುಖ ಹಾಗೂ ರೋಚಕ ಘಟ್ಟ ತಲುಪಿದೆ. ಈಗ ಧಾರಾವಾಹಿಯ ಕಥೆಯೇ ಬದಲಾಗುವ ಹಂತ ತಲುಪಿದೆ. ವಕೀಲೆಯಾಗಿ ಅನ್ಯಾಯದ ವಿರುದ್ಧ ಸಿಡಿದೇಳುತ್ತಿದ್ದ ಭಾರ್ಗವಿ ಈಗ ಬದಲಾಗುತ್ತಿದ್ದಾರೆ. ಇದು ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ಪ್ರಭಾವಿ ವಕೀಲ ಜೆಪಿ ಪಾಟೀಲ್‌ನಿಂದ ಭಾರ್ಗವಿ ತಂದೆ ರವೀಂದ್ರ ಭಟ್ಕಳ್‌ ವಕೀಲ ವೃತ್ತಿಯಿಂದ ದೂರ ಆಗಿದ್ದರು. ಈಗ ಮತ್ತೆ ಅದೇ ಕೋರ್ಟ್‌ಗೆ ಅವರನ್ನು ಕರೆತರುವ ದಿಟ್ಟ ಗುರಿ ಹೊಂದಿದ್ದಳು ಭಾರ್ಗವಿ. ಆ ಕನಸು ಈಡೇರಿತ್ತು. ಆದರೆ, ಆದರೆ, ಇದೀಗ ಆ ದೊಡ್ಡ ಗೆಲುವನ್ನು ಸಂಭ್ರಮಿಸೋಕೆ ಅವಳ ಜೊತೆಗೆ ಅಪ್ಪನೇ ಇಲ್ಲ.

ಇದುವರೆಗೆ ಕಥೆಯಲ್ಲಿ ಭಾಗರ್ವಿ ಧೈರ್ಯದ ಸಂಕೇತ ಆಗಿದ್ದಳು. ವೀಕ್ಷಕರಲ್ಲೂ ಅವಳನ್ನು ನೋಡಿ ಒಂದು ಧೈರ್ಯ ಬಂದಿತ್ತು. ಆದರೆ, ಭೀಕರ ರಸ್ತೆ ಅಪಘಾತದಲ್ಲಿ ತಂದೆ ರವೀಂದ್ರ ಭಟ್ಕಳ್ ಅವರ ಅಕಾಲಿಕ ಸಾವು ಅವಳನ್ನು ಕಂಗಾಲಾಗಿಸಿದೆ. ಈ ಸಾವು ಕೇವಲ ಅಪಘಾತವೋ ಅಥವಾ ಭಾರ್ಗವಿಯ ವೈರಿಗಳ ಕುತಂತ್ರವೋ ಎನ್ನುವ ಪ್ರಶ್ನೆ ಮೂಡಿದೆ.

ತಂದೆಯ ಸಾವಿನಿಂದ ಕಂಗಾಲಾಗಿರುವ ತಾಯಿ, ಅಪ್ಪನ ಸಾವಿಗೆ ಕಾರಣವಾದ ಈ ಲಾಯರ್‌ ಕೆಲಸ ಬಿಡುವಂತೆ ಭಾರ್ಗವಿಗೆ ಸೂಚಿಸಿದ್ದಾಳೆ. ತಾಯಿ ನೋವಿಗೆ ಸ್ಪಂದಿಸಿ ಅಪ್ಪನ ಚಿತೆಯ ಮುಂದೆಯೇ ಕಠಿಣ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾಳೆ. ಅಮ್ಮನೇ ಹೇಳುವವರೆಗೂ ವಕೀಲ ವೃತ್ತಿ ಮಾಡಲ್ಲ ಎಂದಿದ್ದಾಳೆ. ಈ ಮೂಲಕ ಭಾರ್ಗವಿ ತನ್ನ ವೃತ್ತಿಜೀವನಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾಳೆ.

ಇದನ್ನೂ ಓದಿ: ಕಲರ್ಸ್​ ಕನ್ನಡದ ಹೊಸ ಧಾರಾವಾಹಿಗೆ ನಾಯಕಿ ಆದ ಸಂಜನಾ ಬುರ್ಲಿ

ಲಾಯರ್ ವೃತ್ತಿ ಬಿಟ್ಟ ಭಾರ್ಗವಿ ಹೇಗೆ ಜೀವನ ಮಾಡುತ್ತಾಳೆ? ಈ ಟ್ವಿಸ್ಟ್​​ನಿಂದ ಧಾರಾವಾಹಿ ಹೇಗೆ ಸಾಗುತ್ತದೆ ಎಂಬಿತ್ಯಾದಿ ಪ್ರಶ್ನೆ ಮೂಡಿದೆ. ಕಥೆ ಇಲ್ಲಿಗೆ ಮುಗಿಯಿತೇ ಅಥವಾ ಇದು ಹೊಸ ಅಧ್ಯಾಯದ ಆರಂಭವೇ ಎನ್ನುವ ಕುತೂಹಲ ವೀಕ್ಷಕರಲ್ಲಿ ಮೂಡಿದೆ. ಸೋಮವಾರದಿಂದ ಶುಕ್ರವಾರದ ವರೆಗೆ ಬದಲಾದ ಸಮಯದಲ್ಲಿ ರಾತ್ರಿ 9:30ಕ್ಕೆ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಭಾರ್ಗವಿ ಎಲ್​ಎಲ್ಬಿ ಪ್ರಸಾರ ಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:29 am, Thu, 12 February 26

Source link

ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸಕ್ಕೆ ಪಕ್ಷದಲ್ಲೇ ಅಸಮಾಧಾನ: ವರದಿ ಕೇಳಿದ ಹೈಕಮಾಂಡ್ – Kannada News | Congress MLAs Foreign Tour Row: High Command Seeks Report Over Australia–New Zealand Visit Controversy in Karnataka

ಶಾಸಕರ ವಿದೇಶ ಪ್ರವಾಸ: ವರದಿ ಕೇಳಿದ ಹೈಕಮಾಂಡ್Image Credit source: TV9 Network

ಬೆಂಗಳೂರು, ಫೆಬ್ರವರಿ 12: ಕರ್ನಾಟಕ ರಾಜಕಾರಣದಲ್ಲಿ ಕಾಂಗ್ರೆಸ್ (Congress) ಶಾಸಕರ ವಿದೇಶ ಪ್ರವಾಸ (Foriegn Trip) ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಶಾಸಕರ ಫಾರಿನ್ ಟ್ರಿಪ್​ಗೆ ಪಕ್ಷದೊಳಗೇ ಅಸಮಾಧಾನದ ಧ್ವನಿ ಕೇಳಿಬರುತ್ತಿದೆ. ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್‌ಗೆ ಯೋಜಿಸಲಾದ ಈ ಪ್ರವಾಸದ ಉದ್ದೇಶವೇನು ಎಂಬುದರ ಬಗ್ಗೆಯೇ ಸ್ಪಷ್ಟತೆ ಇಲ್ಲ ಎನ್ನಲಾಗಿದೆ. ಇದು ಹೈಕಮಾಂಡ್‌ ಮಟ್ಟದಲ್ಲಿ ಗಮನ ಸೆಳೆದಿದೆ. ವಿದೇಶ ಪ್ರವಾಸದ ವಿಚಾರ ಬಹಿರಂಗವಾದ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ನಾಯಕರಿಂದ ಮಾಹಿತಿ ಕೇಳಿದೆ ಎಂದು ಮೂಲಗಳು ತಿಳಿಸಿವೆ.

ಪಶುಸಂಗೋಪನಾ ಇಲಾಖೆಯ ಅಧ್ಯಯನ ಪ್ರವಾಸದ ಹೆಸರಿನಲ್ಲಿ ಕೆಲವು ಶಾಸಕರು ವಿದೇಶಕ್ಕೆ ತೆರಳಲು ಸಿದ್ಧರಾಗಿರುವುದು ದೃಢಪಟ್ಟಿದೆ. ಯಾವೆಲ್ಲ ಶಾಸಕರು ವಿದೇಶ ಪ್ರವಾಸ ಕೈಗೊಳ್ಳುತ್ತಾರೆ ಎಂಬುದೂ ಬಹಿರಂಗವಾಗಿದೆ. ಆದರೆ, ಆರಂಭದಲ್ಲಿ ಇದು ಸರ್ಕಾರಿ ಪ್ರವಾಸ ಎಂದು ಹೇಳಲಾಗಿತ್ತು. ನಂತರ ಖಾಸಗಿ ಪ್ರವಾಸವಾಗಿ ಬದಲಾಗುತ್ತಿದೆಯೇ ಎಂಬ ಅನುಮಾನಗಳು ಪಕ್ಷದೊಳಗೇ ಮೂಡಿವೆ. ಹೀಗಾಗಿ, ಕಾಂಗ್ರೆಸ್ ನಾಯಕರು ಪ್ರವಾಸದ ಕುರಿತು ಸಂಪೂರ್ಣ ವರದಿ ಸಲ್ಲಿಸಬೇಕೆಂದು ಹೈಕಮಾಂಡ್ ಸೂಚನೆ ನೀಡಿರುವುದಾಗಿ ತಿಳಿದುಬಂದಿದೆ.

ಪವರ್ ಪಾಲಿಟಿಕ್ಸ್ ಹೊತ್ತಲ್ಲಿ ಟೂರ್ ಪಾಲಿಟಿಕ್ಸ್

ರಾಜ್ಯದಲ್ಲಿ ಜನಸಾಮಾನ್ಯರ ಸಮಸ್ಯೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಶಾಸಕರ ವಿದೇಶಿ ಪ್ರವಾಸ ಅಗತ್ಯವಿತ್ತೇ ಎಂಬ ಪ್ರಶ್ನೆ ಕೂಡ ಪಕ್ಷದೊಳಗೆ ಚರ್ಚೆಗೆ ಕಾರಣವಾಗಿದೆ. ‘ಪವರ್ ಪಾಲಿಟಿಕ್ಸ್ ನಡೆಯುತ್ತಿರುವ ಹೊತ್ತಿನಲ್ಲಿ ಟೂರ್ ಪಾಲಿಟಿಕ್ಸ್ ಬೇಕಿತ್ತಾ?’ ಎಂಬ ಅಸಮಾಧಾನ ಕೆಲ ನಾಯಕರಿಂದ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ. ಅಧ್ಯಯನ ಪ್ರವಾಸವೇ ಆಗಿದ್ದರೆ ಸರ್ಕಾರದಿಂದ ಅಧಿಕೃತ ಅನುಮತಿ ಪಡೆದಿದ್ದೀರಾ ಎಂದು ಹೈಕಮಾಂಡ್ ಪ್ರಶ್ನಿಸಿದೆ ಎನ್ನಲಾಗಿದೆ.

ಇದೊಂದೆಡೆ, ಇದು ಸಂಪೂರ್ಣವಾಗಿ ಅಧ್ಯಯನ ಪ್ರವಾಸ ಎಂದು ಕೆಲವು ಶಾಸಕರು ಸ್ಪಷ್ಟಪಡಿಸಿದರೆ, ಇನ್ನೂ ಕೆಲವರು ಪ್ರವಾಸದ ಉದ್ದೇಶದ ಬಗ್ಗೆ ಗೊಂದಲಮಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಪ್ರವಾಸಕ್ಕೆ ಸರ್ಕಾರದಿಂದ ಎನ್‌ಒಸಿ ನೀಡಲು ಸಿಎಂ ಕಚೇರಿ ಮುಂದಾಗಿತ್ತು ಎಂಬ ಮಾತುಗಳೂ ಕೇಳಿಬರುತ್ತಿವೆ. ಅಲ್ಲದೆ ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ ಕೌನ್ಸಲೇಟ್‌ಗಳಿಗೆ ವೀಸಾ ಪ್ರಕ್ರಿಯೆಗಾಗಿ ಸರ್ಕಾರದಿಂದ ಪತ್ರ ರವಾನೆಯಾಗಿದೆ ಎಂಬ ಮಾಹಿತಿ ಕೂಡ ಹರಿದಾಡುತ್ತಿದೆ.

ಇದನ್ನೂ ಓದಿ: ನಾಯಕತ್ವ ಜಂಜಾಟದ ನಡುವೆ ಸದ್ದು ಮಾಡಿದ ಶಾಸಕರ ಫಾರಿನ್ ಟ್ರಪ್: ಈ ಪ್ರವಾಸದ ಹಿಂದಿನ ಗುಟ್ಟೇನು?

ಒಟ್ಟಿನಲ್ಲಿ ಕಾಂಗ್ರೆಸ್ ಶಾಸಕರ ವಿದೇಶಿ ಪ್ರವಾಸ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದ್ದು, ಅಧ್ಯಯನ ಪ್ರವಾಸವೇ ಅಥವಾ ಖಾಸಗಿ ಪ್ರವಾಸವೇ ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗಬೇಕಿದೆ. ಈ ನಡುವೆ ಹೈಕಮಾಂಡ್ ಸಂಪೂರ್ಣ ವರದಿ ಕೇಳಿರುವುದು ಪ್ರಕರಣಕ್ಕೆ ಮತ್ತಷ್ಟು ಟ್ವಿಸ್ಟ್ ಕೊಟ್ಟಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link