Category Archives: Blog

Your blog category

ಟೀಂ ಇಂಡಿಯಾ ಸೇರಲು ವೈಭವ್ ಸೂರ್ಯವಂಶಿ ರೆಡಿ; ಉಡೀಸ್ ಆಗಲಿದೆ ಸಚಿನ್ ದಾಖಲೆ – Kannada News | Vaibhav Sooryavanshi: IPL Sensation Eyes Team India, Poised to Break Sachin’s Record

ವೈಭವ್ ಸೂರ್ಯವಂಶಿ (Vaibhav Sooryavanshi) ಅವರು ಐಪಿಎಲ್​​ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡುತ್ತಿದ್ದು, ಅದ್ಭುತ ಪರ್ಫಾರ್ಮೆನ್ಸ್ ನೀಡುತ್ತಿದ್ದಾರೆ. ಕೇವಲ 15ನೇ ವಯಸ್ಸಿಗೆ ಅವರು ಹಲವು ದಾಖಲೆಗಳನ್ನು ಬರೆಯುತ್ತಿದ್ದಾರೆ. ಅವರು ಆಡಿದ ಐದು ಪಂದ್ಯಗಳಿಂದ 200 ರನ್ ಪೇರಿಸಿದ್ದು, 263 ಸ್ಟ್ರೈಕ್ ರೇಟ್ ಕಾಪಾಡಿಕೊಂಡಿದ್ದಾರೆ. ಜಸ್​​ಪ್ರೀತ್ ಬುಮ್ರಾ ಹಾಗೂ ಜೋಶ್ ಹೇಜಲ್​ವುಡ್​ಗೆ ಸಿಕ್ಸ್ ಬಾರಿಸಿ ಗಮನ ಸೆಳೆದಿದ್ದಾರೆ. ಈಗ ಅವರು ಟೀಂ ಇಂಡಿಯಾ ಪರ ಆಡಲು ರೆಡಿ ಆಗಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್ 37 ವರ್ಷಗಳ ಹಿಂದೆ ಬರೆದ ದಾಖಲೆ ಅಳಿಸಿ ಹಾಕಲಿದ್ದಾರೆ.

ಇಂಡಿಯನ್​ ಎಕ್ಸ್​​ಪ್ರೆಸ್ ವರದಿ ಪ್ರಕಾರ ವೈಭವ್ ಸೂರ್ಯವಂಶಿ ಅವರು ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಮೂಲಕ ಅವರು ಟೀಂ ಇಂಡಿಯಾ ಪರ ಆಡಲಿದ್ದಾರೆ. ಜೂನ್ 26 ಹಾಗೂ 28ರಂದು ಐರ್ಲೆಂಡ್​​ ಅಲ್ಲಿ ಟಿ20 ಪಂದ್ಯಗಳು ನಡೆಯಲಿವೆ. ಇದಕ್ಕೆ ವೈಭವ್ ಹೆಸರನ್ನು ಶಾರ್ಟ್​​ಲಿಸ್ಟ್ ಮಾಡಲಾಗಿದೆಯಂತೆ. ಈ ಪಂದ್ಯದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶ ಬಿಸಿಸಿಐಗೆ ಇದೆ.

ಜುಲೈ 23-26ರವರೆಗೆ ಜಿಂಬ್ವಾಬ್ವೆಯಲ್ಲಿ ನಡೆಯುವ ಟಿ20 ಸರಣಿಗೂ ವೈಭವ್ ಹೆಸರನ್ನು ಆಯ್ಕೆ ಮಾಡುವ ಇರಾದೆಯನ್ನು ಆಯ್ಕೆ ಸಮಿತಿ ಹೊಂದಿದೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅವರ ಪರ್ಫಾರ್ಮೆನ್ಸ್ ನೋಡಿ ಮುಂದಿನ ನಿರ್ಧಾರಕ್ಕೆ ಬರುವ ಆಲೋಚನೆಯಲ್ಲಿ ತಂಡ ಇದೆ.

ಇದನ್ನೂ ಓದಿ: ವೈಭವ್ ಸೂರ್ಯವಂಶಿಗೆ ವಿಶೇಷ ಗಿಫ್ಟ್ ನೀಡಿದ ವಿರಾಟ್ ಕೊಹ್ಲಿ

ಸಚಿನ್ ತೆಂಡೂಲ್ಕರ್ ಅವರು ಟೀಂ ಇಂಡಿಯಾಗೆ ಆಡಿದಾಗ ಅವರ ವಯಸ್ಸು 16 ವರ್ಷದ 2005 ದಿನ ಆಗಿತ್ತು. ಜೂನ್​ 26ರಂದು ಅಂತಾರಾಷ್ಟ್ರೀಯ ಪಂದ್ಯ ಆಡಿದರೆ ವೈಭವ್​ ಅವರು ಕೇವಲ 15 ವರ್ಷ 91 ದಿನಕ್ಕೆ ಟೀಂ ಇಂಡಿಯಾ ಪರ ಆಡಿದಂತೆ ಆಗಲಿದೆ. ಈ ಮೂಲಕ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿಯಲಿದ್ದಾರೆ. ಶಫಾಲಿ ವರ್ಮ ಅವರು 15 ವರ್ಷ 240ಕ್ಕೆ ದಿನಕ್ಕೆ ಟೀಂ ಇಂಡಿಯಾ ಪರ ಆಡಿದ್ದರು. ಈಗ ಈ ದಾಖಲೆಯನ್ನು ಕೂಡ ವೈಭವ್ ಮುರಿಯಲಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 10:41 am, Tue, 14 April 26

Source link

CBSE Class 10 Results 2026: ಇಂದೇ ಪ್ರಕಟವಾಗಲಿದೆ ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ; ವೀಕ್ಷಿಸಲು ಈ ಲಿಂಕ್​ ಬಳಸಿ – Kannada News | CBSE Class 10 Results 2026: Expected Date, How to Check Online and DigiLocker Access

ನವದೆಹಲಿ: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (CBSE) 10ನೇ ತರಗತಿಯ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಲು ಸಕಲ ಸಿದ್ಧತೆ ನಡೆಸಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಏಪ್ರಿಲ್ 14 ಅಥವಾ 15ರ ಒಳಗಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಾಗುವ ನಿರೀಕ್ಷೆಯಿದೆ. ಈ ವರ್ಷದ ಪರೀಕ್ಷೆ ಬರೆದ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಫಲಿತಾಂಶದ ಕುರಿತಾದ ಸಂಪೂರ್ಣ ವಿವರ ಇಲ್ಲಿದೆ.

ಶೀಘ್ರದಲ್ಲೇ ಫಲಿತಾಂಶ ಪ್ರಕಟ:

ಸಿಬಿಎಸ್ಇ ಈ ಬಾರಿ ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ ಮಾಡಿಕೊಂಡಿದೆ. ಸಾಮಾನ್ಯವಾಗಿ ಮೇ ತಿಂಗಳಲ್ಲಿ ಪ್ರಕಟವಾಗುತ್ತಿದ್ದ ಫಲಿತಾಂಶವನ್ನು ಈ ಬಾರಿ ಏಪ್ರಿಲ್ ಮಧ್ಯಭಾಗದಲ್ಲೇ ಬಿಡುಗಡೆ ಮಾಡಲು ಮಂಡಳಿ ನಿರ್ಧರಿಸಿದೆ. ಮೇ 15ರಿಂದ ಜೂನ್ 1ರವರೆಗೆ ಎರಡನೇ ಹಂತದ (Improvement) ಪರೀಕ್ಷೆಗಳು ನಡೆಯಲಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಫಲಿತಾಂಶ ವೀಕ್ಷಿಸುವುದು ಹೇಗೆ?

ವಿದ್ಯಾರ್ಥಿಗಳು ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸುವ ಮೂಲಕ ತಮ್ಮ ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು:

  • ವೆಬ್‌ಸೈಟ್‌ಗೆ ಭೇಟಿ ನೀಡಿ: ಸಿಬಿಎಸ್ಇ ಅಧಿಕೃತ ವೆಬ್‌ಸೈಟ್ results.cbse.nic.in ಅಥವಾ cbse.gov.in ಗೆ ಲಾಗ್ ಇನ್ ಆಗಿ.
  • ಲಿಂಕ್ ಕ್ಲಿಕ್ ಮಾಡಿ: ಮುಖಪುಟದಲ್ಲಿ ಕಾಣುವ ‘Secondary School Examination (Class X) Results 2026’ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ವಿವರಗಳನ್ನು ಭರ್ತಿ ಮಾಡಿ: ನಿಮ್ಮ ರೋಲ್ ನಂಬರ್ (Roll Number), ಸ್ಕೂಲ್ ನಂಬರ್ (School Number) ಮತ್ತು ಅಡ್ಮಿಟ್ ಕಾರ್ಡ್ ಐಡಿ (Admit Card ID) ಅನ್ನು ನಿಖರವಾಗಿ ನಮೂದಿಸಿ.
  • ಸಬ್ಮಿಟ್ ನೀಡಿ: ವಿವರಗಳನ್ನು ಸಲ್ಲಿಸಿದ ತಕ್ಷಣ ನಿಮ್ಮ ಅಂಕಪಟ್ಟಿ ಪರದೆಯ ಮೇಲೆ ಮೂಡುತ್ತದೆ.
  • ಡೌನ್‌ಲೋಡ್: ಭವಿಷ್ಯದ ಬಳಕೆಗಾಗಿ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ಡಿಜಿಲಾಕರ್ (DigiLocker) ಮೂಲಕ ಅಂಕಪಟ್ಟಿ:

ಸಿಬಿಎಸ್ಇ ವಿದ್ಯಾರ್ಥಿಗಳಿಗೆ ಡಿಜಿಟಲ್ ಅಂಕಪಟ್ಟಿಗಳನ್ನು ಪಡೆಯಲು ಡಿಜಿಲಾಕರ್ ಸುಲಭವಾದ ಮಾರ್ಗವಾಗಿದೆ. ವಿದ್ಯಾರ್ಥಿಗಳು ತಮ್ಮ ‘APAAR ID’ ಅಥವಾ ಶಾಲೆಯಿಂದ ನೀಡಲಾದ ಆಕ್ಸೆಸ್ ಕೋಡ್ (Six-digit PIN) ಬಳಸಿ ಡಿಜಿಲಾಕರ್ ಅಪ್ಲಿಕೇಶನ್‌ನಲ್ಲಿ ತಮ್ಮ ಮೂಲ ಅಂಕಪಟ್ಟಿ ಮತ್ತು ಪ್ರಮಾಣಪತ್ರಗಳನ್ನು ಸುರಕ್ಷಿತವಾಗಿ ಪಡೆಯಬಹುದು.

ತೇರ್ಗಡೆ ಅಂಕಗಳು ಮತ್ತು ಸುಧಾರಣಾ ಪರೀಕ್ಷೆ:

ಪ್ರತಿಯೊಂದು ವಿಷಯದಲ್ಲಿ ತೇರ್ಗಡೆಯಾಗಲು ವಿದ್ಯಾರ್ಥಿಗಳು ಕನಿಷ್ಠ ಶೇ.33 ಅಂಕಗಳನ್ನು ಗಳಿಸಬೇಕು. ಫಲಿತಾಂಶ ಪ್ರಕಟವಾದ ನಂತರ, ಯಾವುದಾದರೂ ವಿಷಯದಲ್ಲಿ ಅಂಕ ಕಡಿಮೆ ಬಂದಿದ್ದರೆ ಅಥವಾ ತೃಪ್ತಿ ಇಲ್ಲದಿದ್ದರೆ, ವಿದ್ಯಾರ್ಥಿಗಳು ಮೇ 15 ರಿಂದ ನಡೆಯಲಿರುವ ಪರೀಕ್ಷೆಯಲ್ಲಿ ಗರಿಷ್ಠ 3 ವಿಷಯಗಳಿಗೆ ಹಾಜರಾಗಲು ಅವಕಾಶವಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:41 am, Tue, 14 April 26

Source link

ಮನೆಯಲ್ಲಿ ಗರ್ಭಿಣಿ ಹೆಂಡತಿಗೆ ಬೇರೆ ಜಾತಿ ಎಂದು ಕಿರುಕುಳ: ಹೆತ್ತವರ ಮೇಲೆ ದೂರು ನೀಡಿದ ಮಗ – Kannada News | Inter Caste Marriage Harassment: Nelamangala Couple Faces Threats, Police Complaint

ನೆಲಮಂಗಲ, ಏ.14: ಪ್ರೀತಿಸಿ ಮದುವೆಯಾದ ಜೋಡಿಗೆ ಜಾತಿಯ ಹೆಸರಿನಲ್ಲಿ ಕಿರುಕುಳ ನೀಡಿ, ಕೊಲೆ ಬೆದರಿಕೆ ಹಾಕಿರುವ ಅಮಾನವೀಯ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್‌ನಲ್ಲಿ ಬೆಳಕಿಗೆ ಬಂದಿದೆ. ಸದ್ಯ 6 ತಿಂಗಳ ಗರ್ಭಿಣಿಯಾಗಿರುವ ಸೊಸೆಗೆ ಸ್ವಂತ ಅತ್ತೆ-ಮಾವನೇ ಜಾತಿ ನಿಂದನೆ ಮಾಡಿ ಜೀವಬೆದರಿಕೆ ಹಾಕಿದ್ದು, ಈ ಸಂಬಂಧ ದಂಪತಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಹೆತ್ತವರ ಮೇಲೆ ಸ್ವತಃ ಮಗನೇ ದೂರು ನೀಡಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ನೆಲಮಂಗಲದ ಸುಭಾಷ್ ನಗರದ ನಿವಾಸಿಗಳಾದ ಅಭಿಷೇಕ್ ಮತ್ತು ವಿದ್ಯಾಶ್ರೀ ಕಳೆದ ಎರಡು ವರ್ಷಗಳ ಹಿಂದೆ ಕೆಲಸ ಮಾಡುವ ಸ್ಥಳದಲ್ಲಿ ಪರಿಚಯವಾಗಿ ಪ್ರೀತಿಸುತ್ತಿದ್ದರು. ಇವರ ಪ್ರೀತಿಗೆ ಮನೆಯವರ ವಿರೋಧವಿದ್ದರೂ, ಎಂಟು ತಿಂಗಳ ಹಿಂದೆ ಈ ಜೋಡಿ ಕರಿ ಕಾಟೇರಮ್ಮ ದೇವಾಲಯದಲ್ಲಿ ಸರಳವಾಗಿ ಮದುವೆಯಾಗಿದ್ದರು.

ವಿದ್ಯಾಶ್ರೀ ಬೇರೆ ಜಾತಿಯವರು ಎಂಬ ಕಾರಣಕ್ಕೆ ಮದುವೆಯಾದ ದಿನದಿಂದಲೂ ಅಭಿಷೇಕ್ ಪೋಷಕರಾದ ಮುನಿಶಂಕರಯ್ಯ ಮತ್ತು ಆನಂದಮ್ಮ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದೀಗ ವಿದ್ಯಾಶ್ರೀ 6 ತಿಂಗಳ ಗರ್ಭಿಣಿಯಾಗಿದ್ದು, ಇಂತಹ ಸಂದರ್ಭದಲ್ಲೂ ಆಕೆಯನ್ನು ಮನೆಗೆ ಸೇರಿಸಿಕೊಳ್ಳದೆ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: “ನನ್ನನ್ನ ಯಾಕೆ ಮದುವೆಯಾಗಲ್ಲ?”: ನಡುರಸ್ತೆಯಲ್ಲೇ ಯುವತಿಯನ್ನು ಬೆದರಿಸಿದ ಮುಸ್ತಫಾ ಖಾದ್ರಿ; ವಿಡಿಯೋ ವೈರಲ್

ತಮ್ಮ ಪ್ರೀತಿಯ ಸಂಕೇತವಾಗಿ ಮಗು ಬರಲಿರುವ ಈ ಸುಸಂದರ್ಭದಲ್ಲಿ ಪತ್ನಿಯ ರಕ್ಷಣೆಗಾಗಿ ಪತಿ ಅಭಿಷೇಕ್ ಸಾಹಸಕ್ಕೆ ಮುಂದಾಗಿದ್ದಾರೆ. ಸ್ವಂತ ತಂದೆ-ತಾಯಿ ವಿರುದ್ಧವೇ ಅವರು ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಈ ಸಂಬಂಧ ಎನ್‌ಸಿಆರ್ (NCR) ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾಗಲಕೋಟೆ: ರಸ್ತೆ ಬದಿಯ ಹಳ್ಳಕ್ಕೆ ನುಗ್ಗಿದ ಸ್ಲೀಪರ್ ಬಸ್, ಪ್ರಯಾಣಿಕರು ಜಸ್ಟ್ ಮಿಸ್ – Kannada News | Bagalkote Bus Accident: Sleeper Bus Plunges into Roadside Ditch Near Ambedkar Statue; Passengers Safe

ಬಾಗಲಕೋಟೆ, ಏಪ್ರಿಲ್ 14: ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮವಾಗಿ ಖಾಸಗಿ ಸ್ಲೀಪರ್ ಬಸ್ಸೊಂದು ರಸ್ತೆ ಬದಿಯ ಹಳ್ಳಕ್ಕೆ ನುಗ್ಗಿದ ಘಟನೆ ಹಳೆ ಬಾಗಲಕೋಟೆ ನಗರದ ಅಂಬೇಡ್ಕರ್ ಮೂರ್ತಿ ಬಳಿ ನಡೆದಿದೆ. ಈ ಬಸ್ ಬೆಳಿಗ್ಗೆ ಬೆಂಗಳೂರಿನಿಂದ ಬಾಗಲಕೋಟೆಗೆ ಆಗಮಿಸುತ್ತಿತ್ತು. ಅದೃಷ್ಟವಶಾತ್, ಭಾರಿ ಅನಾಹುತ ತಪ್ಪಿದೆ. ಬಸ್ಸಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಸುಮಾರು ಐದರಿಂದ ಆರು ಜನ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಗಾಯಾಳುಗಳಿಗೆ ವೈದ್ಯಕೀಯ ನೆರವು ನೀಡಲಾಗುತ್ತಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಅಪಘಾತದ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಟಾಕ್ಸಿಕ್​’ ಚಿತ್ರಕ್ಕಾಗಿ ಫುಲ್ ಎಗ್ಸೈಟ್ ಆದ ತಾರಾ ಸುತಾರಿಯಾ

‘ಟಾಕ್ಸಿಕ್’ ಸಿನಿಮಾದಲ್ಲಿ ಬಾಲಿವುಡ್ ನಟಿ ತಾರಾ ಸುತಾರಿಯಾ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ‘ಟಾಕ್ಸಿಕ್’  ಬಗ್ಗೆ ಸಖತ್ ಎಗ್ಸೈಟ್ ಆಗಿದ್ದಾರೆ. ಈ ವಿಷಯವನ್ನು ಅವರು ಫರ್ಹಾನ್ ಅಖ್ತರ್ ಜೊತೆ ಹಂಚಿಕೊಂಡಿದ್ದಾರೆ. ಇದರಿಂದ ಫ್ಯಾನ್ಸ್ ಕೂಡ ಖುಷಿ ಆಗಿದ್ದಾರೆ. ‘ಟಾಕ್ಸಿಕ್’ ಸಿನಿಮಾ ಬಗ್ಗೆ ಅನೇಕರಿಗೆ ಅನುಮಾನ ಇದೆ. ಆದರೆ, ಈ ಅನುಮಾನವನ್ನು ತಾರಾ ಸುತಾರಿಯಾ ದೂರ ಮಾಡಿದ್ದಾರೆ.  ಅಲ್ಲದೆ, ಸಿನಿಮಾ ಜೂನ್ 4ರಂದೇ ರಿಲೀಸ್ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ಪತ್ನಿಯ ಕೊಂದು ಸೆಪ್ಟಿಕ್ ಟ್ಯಾಂಕ್‌ಗೆ ಎಸೆದ ಪತಿ, ಅಪ್ಪ ಮಾಡಿದ್ದನ್ನ ಕಣ್ಣಾರೆ ಕಂಡು ಸತ್ಯ ಬಿಚ್ಚಿಟ್ಟ 4 ವರ್ಷದ ಮಗ – Kannada News | Odisha Murder: Husband Kills Wife, Dumps Body in Septic Tank; 4 year Old Son Reveals Truth

ಒಡಿಶಾ, ಏಪ್ರಿಲ್ 14: ಕುಡಿತದ ಅಮಲು ಮತ್ತು ಅನಗತ್ಯ ಸಂಶಯ ಒಂದು ಸಂಸಾರವನ್ನು ಹೇಗೆ ಬೀದಿಪಾಲು ಮಾಡುತ್ತದೆ ಎಂಬುದಕ್ಕೆ ಒಡಿಶಾದ ಬೋರ್ಗಾನ್ ಗ್ರಾಮದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಹೆಂಡತಿಯ ನಡತೆಯ ಮೇಲೆ ಸಂಶಯಪಟ್ಟ ವ್ಯಕ್ತಿಯೊಬ್ಬ ಆಕೆಯನ್ನು ಬರ್ಬರವಾಗಿ ಕೊಲೆ(Murder) ಮಾಡಿ, ಶವವನ್ನು ಮನೆಯ ಸೆಪ್ಟಿಕ್ ಟ್ಯಾಂಕ್‌ಗೆ ಎಸೆದಿದ್ದಾನೆ. ಆದರೆ, ತಾನು ಮಾಡಿದ್ದನ್ನು ಯಾರಿಗೂ ತಿಳಿಯದಂತೆ ಬಚ್ಚಿಡಬಹುದು ಅಂದುಕೊಂಡಿದ್ದ ಹಂತಕನಿಗೆ ತನ್ನ 4 ವರ್ಷದ ಮಗನೇ ಸಾಕ್ಷಿಯಾಗುತ್ತಾನೆ ಎಂದು ತಿಳಿದಿರಲಿಲ್ಲ.

ಸಂಭ್ರಮದ ಬೆನ್ನಲ್ಲೇ ಸಂಭವಿಸಿದ ದುರಂತ
ಬೋರ್ಗಾನ್ ಗ್ರಾಮದ ಸುಬಾಶ್ ಗೊಂಡ್ ಮತ್ತು ಮನೈ ಗೊಂಡ್ ದಂಪತಿ ಏಪ್ರಿಲ್ 11 ರಂದು ತಮ್ಮ ಮಕ್ಕಳೊಂದಿಗೆ ಸಂಬಂಧಿಕರೊಬ್ಬರ ಮದುವೆ ಕಾರ್ಯಕ್ರಮಕ್ಕೆ ಹೋಗಿ ಮನೆಗೆ ಮರಳಿದ್ದರು. ಮದುವೆಯ ಸಂಭ್ರಮ ಮುಗಿಸಿ ಬಂದ ಪತಿ ಸುಬಾಶ್ ಕುಡಿದ ಮತ್ತಿನಲ್ಲಿದ್ದ. ಮನೆಗೆ ಬಂದ ನಂತರ ಪತ್ನಿಯ ಚಾರಿತ್ರ್ಯದ ಬಗ್ಗೆ ಸಂಶಯ ವ್ಯಕ್ತಪಡಿಸಿ ಜಗಳ ಆರಂಭಿಸಿದ. ವಾಗ್ವಾದ ತಾರಕಕ್ಕೇರಿ ಸುಬಾಶ್ ಪತ್ನಿಯ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಈ ಭೀಕರ ಹಲ್ಲೆಯಿಂದಾಗಿ ಮನೈ ಗೊಂಡ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

ಪತ್ನಿ ಸತ್ತಿದ್ದಾಳೆ ಎಂದು ತಿಳಿದ ತಕ್ಷಣ ಗಾಬರಿಗೊಂಡ ಸುಬಾಶ್, ಪೊಲೀಸರಿಂದ ತಪ್ಪಿಸಿಕೊಳ್ಳಲು ಸಂಚು ರೂಪಿಸಿದ. ಮೃತದೇಹವನ್ನು ಯಾರಿಗೂ ಕಾಣದಂತೆ ಮನೆಯ ಸೆಪ್ಟಿಕ್ ಟ್ಯಾಂಕ್‌ಗೆ ಎಸೆದು ಏನೂ ಅರಿಯದವನಂತೆ ನಾಟಕವಾಡಿದ್ದಾನೆ. ಮನೆಯಲ್ಲಿ ತಾಯಿ ಕಾಣದಿದ್ದಾಗ ನೆರೆಹೊರೆಯವರು ವಿಚಾರಿಸಿದಾಗ ಆತ ಸುಳ್ಳು ಹೇಳಿ ದಾರಿ ತಪ್ಪಿಸಲು ಯತ್ನಿಸಿದ್ದಾನೆ.

ಮತ್ತಷ್ಟು ಓದಿ: ಅನೈತಿಕ ಸಂಬಂಧಕ್ಕೆ ಅಡ್ಡಿ: ಪ್ರಿಯಕರನ ಜೊತೆ ಸೇರಿ ಪತಿಗೇ ಚಟ್ಟ ಕಟ್ಟಿದ ಪತ್ನಿ; ಕೊಲೆ ಬಳಿಕ ಅಮಾಯಕಳಂತೆ ನಾಟಕ

ಅಪ್ಪನ ಕ್ರೌರ್ಯ ಬಿಚ್ಚಿಟ್ಟ ಮಗ
ತಂದೆ ತನ್ನ ತಾಯಿಯನ್ನು ಹೊಡೆದದ್ದು ಮತ್ತು ಆಕೆಯ ದೇಹವನ್ನು ಗುಂಡಿಗೆ ಎಸೆದದ್ದನ್ನು 4 ವರ್ಷದ ಮಗ ಕಣ್ಣಾರೆ ಕಂಡಿದ್ದ. ಮುಗ್ದ ಮಗುವಿಗೆ ತನ್ನ ತಾಯಿ ಮತ್ತೆ ಬರುವುದಿಲ್ಲ ಎಂಬ ಅರಿವಿಲ್ಲದಿದ್ದರೂ, ಅಪ್ಪ ಮಾಡಿದ ಕೃತ್ಯವನ್ನು ಸಂಬಂಧಿಕರಿಗೆ ವಿವರಿಸಿದ್ದಾನೆ. ಮಗುವಿನ ಮಾತು ಕೇಳಿ ಬೆಚ್ಚಿಬಿದ್ದ ಗ್ರಾಮಸ್ಥರು ಸುಬಾಶ್​ನನ್ನು ಹಿಡಿದು ವಿಚಾರಿಸಿದಾಗ ಮೊದಲು ಆತ ಮೊಂಡಾಟ ಮಾಡಿದರೂ, ಗ್ರಾಮಸ್ಥರ ಒತ್ತಡಕ್ಕೆ ಮಣಿದು ಅಂತಿಮವಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ಪೊಲೀಸ್ ತನಿಖೆ
ತಕ್ಷಣ ಸ್ಥಳಕ್ಕೆ ಧಾವಿಸಿದ ನಬರಂಗ್‌ಪುರ ಪೊಲೀಸರು ಸೆಪ್ಟಿಕ್ ಟ್ಯಾಂಕ್‌ನಲ್ಲಿದ್ದ ಮನೈ ಗೊಂಡ್ ಅವರ ಶವವನ್ನು ಹೊರತೆಗೆದಿದ್ದಾರೆ. ಆರೋಪಿ ಸುಬಾಸ್‌ನನ್ನು ವಶಕ್ಕೆ ಪಡೆಯಲಾಗಿದ್ದು, ಘಟನೆ ನಡೆದ ಸಮಯದಲ್ಲಿ ಪತ್ನಿ ಕೂಡ ಮದ್ಯದ ಅಮಲಿನಲ್ಲಿದ್ದ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ತನ್ನ ತಂದೆಯೇ ತಾಯಿಯನ್ನು ಕೊಂದು ಟ್ಯಾಂಕ್‌ಗೆ ಹಾಕಿದ್ದಾನೆ ಎಂದು ಆ ಕಂದಮ್ಮ ಹೇಳುತ್ತಿದ್ದರೆ ಸಂಬಂಧಿಕರ ಕಣ್ಣಾಲಿಗಳು ತೇವವಾಗಿದ್ದವು. ತಾಯಿ ಸಾವನ್ನಪ್ಪಿ, ತಂದೆ ಜೈಲು ಪಾಲಾಗಿ ಈಗ ಆ ಪುಟ್ಟ ಮಕ್ಕಳು ಅನಾಥರಾಗಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Spiritual Tips: ಮನೆಯಲ್ಲಿ ಊಟದ ನಂತರ ನಮ್ಮ ತಟ್ಟೆಯನ್ನು ನಾವೇ ತೊಳೆಯಬೇಕು ಯಾಕೆ ಗೊತ್ತಾ? – Kannada News | The Spiritual and Scientific Benefits of Clearing Your Own Plate After Meals

ಊಟದ ನಂತರ ತಮ್ಮ ತಟ್ಟೆಯನ್ನು ನಾವೇ ಏಕೆ ತೆಗೆಯಬೇಕು ಎಂಬುದರ ಬಗ್ಗೆ ಖ್ಯಾತ ಜ್ಯೋತಿಷಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಆಹಾರ ಸೇವನೆಯನ್ನು ಅನ್ನಯಜ್ಞ ಎಂದು ಕರೆಯಲಾಗುತ್ತದೆ. ಈ ಯಜ್ಞದ ಪ್ರಾರಂಭದಿಂದ ಮುಕ್ತಾಯದವರೆಗೆ ವಿನಯ, ವಿಧೇಯತೆ, ಭಕ್ತಿ ಮತ್ತು ಕೃತಜ್ಞತಾ ಭಾವ ಇರಬೇಕು. ಮನೆಯಲ್ಲಿ ತಾಯಿ, ಶ್ರೀಮತಿ, ಅಕ್ಕ, ತಂಗಿಯರು ಅಥವಾ ಬೇರೆಯವರು ಆಹಾರ ತಯಾರಿಸಿರಬಹುದು, ಅಥವಾ ನೀವೇ ತಯಾರಿಸಿರಬಹುದು. ಅನ್ನವು ಪರಬ್ರಹ್ಮ ಸ್ವರೂಪ ಎಂದು ಪರಿಗಣಿಸಲಾಗುತ್ತದೆ. ಶಾಸ್ತ್ರದ ದೃಷ್ಟಿಯಿಂದ, ಊಟದ ನಂತರ ತಮ್ಮ ತಟ್ಟೆಯನ್ನು ನಾವೇ ತೆಗೆದರೆ, ಅವರಿಗೆ ಎಂದಿಗೂ ಆಹಾರದ ಕೊರತೆ ಬರುವುದಿಲ್ಲ. ಅನ್ನಪೂರ್ಣೇಶ್ವರಿಗೆ, ಅನ್ನದಾತೆಗೆ ಮತ್ತು ಆಹಾರ ತಯಾರಿಸಿದ ಎಲ್ಲರಿಗೂ ಕೃತಜ್ಞತೆ ಮತ್ತು ಗೌರವ ಸಲ್ಲಿಸಿದಂತಾಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ನಾವು ಭುಜಿಸಿದ ತಕ್ಷಣ ಆ ಆಹಾರ ಅಂಜಲು ಅಂದರೆ ಎಂಜಲು ಆಗುತ್ತದೆ. ಎಂಜಲು ಅನ್ನವನ್ನು ಬೇರೆಯವರು ತೆಗೆದುಕೊಂಡು ಹೋದಾಗ, ನಮ್ಮ ಅದೃಷ್ಟ ಕಡಿಮೆಯಾಗುತ್ತದೆ ಎಂಬ ನಂಬಿಕೆಯಿದೆ. ಆದರೆ ಅತಿಥಿಗಳು ಮನೆಗೆ ಬಂದಾಗ, ಅವರ ತಟ್ಟೆಯನ್ನು ಅವರ ಕೈಯಲ್ಲಿ ತೆಗೆಸಬಾರದು. ಅತಿಥಿ ದೇವೋಭವ ಎಂಬ ಭಾವನೆಯಿಂದ ಅವರ ಸೇವೆಯನ್ನು ನಾವು ಮಾಡಬೇಕು. ಇದು ನಮ್ಮ ಕರ್ತವ್ಯ. ಮನೆಯಲ್ಲಿ ಊಟವಾದ ನಂತರ, ತಟ್ಟೆಯಲ್ಲಿ ಒಂದು ಅಗಳೂ ಉಳಿಯದಂತೆ ಅದನ್ನು ಶುದ್ಧಿ ಮಾಡಬೇಕು. ತಟ್ಟೆಯಲ್ಲಿನ ಉಳಿದ ಆಹಾರವನ್ನು ಡಸ್ಟ್‌ಬಿನ್‌ಗೆ ಹಾಕಿ, ಸಾಧ್ಯವಾದರೆ ತಟ್ಟೆಯನ್ನು ತೊಳೆದು ಅಥವಾ ಕನಿಷ್ಠ ಸ್ವಚ್ಛ ಸ್ಥಳದಲ್ಲಿ ಇಟ್ಟು ಬರಬೇಕು. ಈ ಅಭ್ಯಾಸದಿಂದ ಅದೃಷ್ಟ ಕೂಡಿ ಬರುತ್ತದೆ. ಶಿಸ್ತು, ನಮ್ರತೆ ಮತ್ತು ಸಹನೆ ಬೆಳೆಯುತ್ತದೆ. ಮನಸ್ಸಿನಲ್ಲಿ ಕೃತಜ್ಞತಾ ಭಾವ ಮೂಡುತ್ತದೆ ಮತ್ತು ಕುಟುಂಬದ ಬಾಂಧವ್ಯಗಳು ಉತ್ತಮಗೊಳ್ಳುತ್ತವೆ.

ಜ್ಯೋತಿಷ್ಯದ ಪ್ರಕಾರ, ಅನ್ನವು ಶುಕ್ರನಿಗೆ ಮತ್ತು ಅಕ್ಕಿ ಚಂದ್ರನಿಗೆ ಕಾರಕತ್ವವನ್ನು ಹೊಂದಿದೆ. ಈ ಪದ್ಧತಿಯನ್ನು ವ್ಯವಸ್ಥಿತವಾಗಿ ನಡೆಸಿಕೊಂಡರೆ ಆರ್ಥಿಕ ಸಮೃದ್ಧಿ ಉಂಟಾಗುತ್ತದೆ. ಅಲಕ್ಷ್ಮಿ ದೂರವಾಗಿ ನಕಾರಾತ್ಮಕ ಶಕ್ತಿಗಳು ಮನೆ ಬಿಟ್ಟು ಹೋಗುತ್ತವೆ ಮತ್ತು ಮನೆಯಲ್ಲಿ ಅನ್ಯೋನ್ಯತೆ ಹೆಚ್ಚುತ್ತದೆ. ತಟ್ಟೆಯಲ್ಲೇ ಕೈ ತೊಳೆಯುವುದನ್ನು ತಪ್ಪಿಸಿ, ತಟ್ಟೆಯನ್ನು ಬೇರೆಡೆ ಇಟ್ಟು ಕೈ ತೊಳೆಯುವುದು ಉತ್ತಮ. ಯಾವುದೇ ಕಾರಣಕ್ಕೂ ಅನ್ನವನ್ನು ತಟ್ಟೆಯಲ್ಲಿ ಬಿಡಬಾರದು, ಎಷ್ಟು ಬೇಕೋ ಅಷ್ಟನ್ನೇ ಇಡಿಸಿಕೊಳ್ಳಬೇಕು. ಊಟದ ನಂತರ ಕೈ ತೊಳೆದು ತಟ್ಟೆಯನ್ನು ಹಾಗೆಯೇ ಎರಡರಿಂದ ಮೂರು ನಿಮಿಷಗಳ ಕಾಲ ಬಿಟ್ಟರೆ ಅಲಕ್ಷ್ಮಿ ಅಥವಾ ದರಿದ್ರ ಲಕ್ಷ್ಮಿಯ ಕಂಟಕಗಳು ತಿಂಡವರಿಗೆ ವರ್ಗಾವಣೆಯಾಗುತ್ತವೆ ಎಂಬ ನಂಬಿಕೆಯಿದೆ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಇದು ಶಿಸ್ತು ಮತ್ತು ನಿಯಮಬದ್ಧ ಸಂಪ್ರದಾಯವಾಗಿದೆ. ರಾತ್ರಿಯಿಡೀ ಊಟದ ತಟ್ಟೆಯನ್ನು ಸಿಂಕ್‌ನಲ್ಲಿ ಬಿಡಬಾರದು, ರಾತ್ರಿಯೇ ಅದನ್ನು ಶುದ್ಧಿ ಮಾಡಿಡಬೇಕು ಎಂದು ಶಾಸ್ತ್ರ ಹೇಳುತ್ತದೆ. ಆದಾಗ್ಯೂ, ಈ ನಿಯಮಗಳು ಕೆಲವು ಸಂದರ್ಭಗಳಿಗೆ ಅನ್ವಯಿಸುವುದಿಲ್ಲ. ಉದಾಹರಣೆಗೆ, ವಿವಾಹಗಳಲ್ಲಿ ಅಥವಾ ಹೋಟೆಲ್‌ಗಳಲ್ಲಿ ಅತಿಥಿಯಾಗಿ ಹೋದಾಗ ತಟ್ಟೆಯನ್ನು ತೆಗೆಯುವುದು ಮುಜುಗರವನ್ನುಂಟು ಮಾಡಬಹುದು, ಅಲ್ಲಿ ಅದು ಸೇವಾ ಸಿಬ್ಬಂದಿಯ ಜವಾಬ್ದಾರಿಯಾಗಿರುತ್ತದೆ. ಈ ಸಂಪ್ರದಾಯ ಕೇವಲ ಮನೆಗಳಲ್ಲಿ ಮಾತ್ರ ಅನ್ವಯಿಸುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

“ನನ್ನನ್ನ ಯಾಕೆ ಮದುವೆಯಾಗಲ್ಲ?”: ನಡುರಸ್ತೆಯಲ್ಲೇ ಯುವತಿಯನ್ನು ಬೆದರಿಸಿದ ಮುಸ್ತಫಾ ಖಾದ್ರಿ; ವಿಡಿಯೋ ವೈರಲ್ – Kannada News | Mustafa Qadri’s Love Jihad Scam: New Koppal Video Shows Blackmail Plot

ಕೊಪ್ಪಳ, ಏ.14: ಜಿಲ್ಲೆಯಲ್ಲಿ ಭಾರೀ ಸಂಚಲನ ಮೂಡಿಸಿರುವ ಮುಸ್ತಫಾ ಖಾದ್ರಿ ಲವ್ ಜಿಹಾದ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಮತ್ತೊಂದು ಹೊಸ ವಿಡಿಯೋ ವೈರಲ್ ಆಗಿದ್ದು, ಆರೋಪಿಯ ಅಸಲಿ ಮುಖವಾಡ ಕಳಚಿದೆ. ಯುವತಿಯೊಬ್ಬಳನ್ನು ಬಲವಂತವಾಗಿ ಪ್ರೀತಿಸುವಂತೆ ಮತ್ತು ಮದುವೆಯಾಗುವಂತೆ ಮುಸ್ತಫಾ ಪೀಡಿಸುತ್ತಿರುವುದು ಈ ವಿಡಿಯೋದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಮುಸ್ತಫಾ ಖಾದ್ರಿ ಬೈಕ್ ಮೇಲೆ ಕುಳಿತು ಯುವತಿಯ ಜೊತೆ ಜಗಳವಾಡುತ್ತಿದ್ದಾನೆ. “ಇಷ್ಟು ದಿನ ಮಾತಾಡಿದ್ದು, ಲವ್ ಮಾಡಿದ್ದೇನು? ಈಗ ಯಾಕೆ ನನ್ನನ್ನ ಲವ್ ಮಾಡಲ್ಲ, ಮದುವೆಯಾಗಲ್ಲ ಅಂತೀಯಾ?” ಎಂದು ಪ್ರಶ್ನಿಸುತ್ತಾ ರಂಪಾಟ ಮಾಡಿದ್ದಾನೆ. ಅಷ್ಟೇ ಅಲ್ಲದೆ, “ನೀನು ಮತ್ತೊಬ್ಬ ಹುಡುಗನ ಜೊತೆ ಯಾಕೆ ಮಾತಾಡ್ತೀಯಾ?” ಎಂದು ಯುವತಿಯ ವೈಯಕ್ತಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡಿದ್ದಾನೆ.ಮುಸ್ತಫಾನ ಕಿರುಕುಳಕ್ಕೆ ಬಗ್ಗದ ಯುವತಿ, “ನಿನ್ನ ಬಗ್ಗೆ ನನಗೆ ಈಗ ಪೂರ್ತಿ ಅರ್ಥವಾಗಿದೆ, ಹಾಗಾಗಿ ನಿನ್ನನ್ನು ಲವ್ ಮಾಡಲು ಸಾಧ್ಯವಿಲ್ಲ” ಎಂದು ನೇರವಾಗಿ ಹೇಳಿದ್ದಾಳೆ. ಅಲ್ಲದೆ, “ನನ್ನನ್ನು ಪ್ರಶ್ನಿಸಲು ನಿನಗೆ ಯಾವುದೇ ಹಕ್ಕಿಲ್ಲ (Rights)” ಎಂದು ಮುಸ್ತಫಾನಿಗೆ ತಕ್ಕ ಪ್ರತ್ಯುತ್ತರ ನೀಡಿದ್ದಾಳೆ.

ಇದನ್ನೂ ಓದಿ: ಲವ್ ಜಿಹಾದ್ ಪ್ರಕರಣ: 9000 ವಿಡಿಯೋ, ಫೋಟೋ ಪತ್ತೆಯಾದ್ರೂ ಅರೆಸ್ಟ್ ಇಲ್ಲವೇಕೆ? ಪೊಲೀಸರಿಗೆ ಕಾಂಗ್ರೆಸ್​ ಶಾಸಕರಿಂದ ಒತ್ತಡ ಆರೋಪ

ಇಲ್ಲಿದೆ ನೋಡಿ ವಿಡಿಯೋ:

ಜಗಳವಾಡುವ ಸಂದರ್ಭದಲ್ಲೇ ಮುಸ್ತಫಾ ತನ್ನ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದಾನೆ. “ಈ ವಿಡಿಯೋ ಮುಂದೆ ಬೇಕಾಗುತ್ತೆ, ಮಾತಾಡು” ಎಂದು ಹೇಳಿರುವುದು ಆತ ಯುವತಿಯನ್ನು ಬ್ಲಾಕ್‌ಮೇಲ್ ಮಾಡಲು ಮೊದಲೇ ಸಂಚು ರೂಪಿಸಿದ್ದನೇ ಎಂಬ ಅನುಮಾನವನ್ನು ಬಲಪಡಿಸಿದೆ. ಈಗಾಗಲೇ ಸಾವಿರಾರು ವಿಡಿಯೋಗಳು ಈತನ ಮೊಬೈಲ್‌ನಲ್ಲಿ ಪತ್ತೆಯಾಗಿದ್ದು, ಪೊಲೀಸರು ಇಷ್ಟೆಲ್ಲಾ ಸಾಕ್ಷ್ಯಗಳಿದ್ದರೂ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪರಪ್ಪನ ಅಗ್ರಹಾರದಲ್ಲಿ ಹೈಡ್ರಾಮಾ: ಜೈಲಧಿಕಾರಿಗಳ ಮೇಲೆ ಕೈದಿಗಳಿಂದ ಹಲ್ಲೆಗೆ ಯತ್ನ, ಲಘು ಲಾಠಿ ಪ್ರಹಾರ! – Kannada News | High Drama at Parappana Agrahara Jail: Inmates Attempt Attack on Officials; Staff Resort to Lathi Charge During Raid

ಬೆಂಗಳೂರು, ಏಪ್ರಿಲ್ 14: ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಮತ್ತು ಜೈಲು ಸಿಬ್ಬಂದಿ ನಡುವೆ ಸಂಘರ್ಷ ನಡೆದಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಮಾರ್ಚ್ 29ರ ತಡರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜೈಲಿನಿಂದಲೇ ವಿಡಿಯೋ ಮಾಡಿ ಹೊರಬಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಅಧೀಕ್ಷಕ ಕರ್ಣ ಕ್ಷತ್ರಿ ನೇತೃತ್ವದಲ್ಲಿ ವಿಚಾರಣಾ ಬಂಧಿಗಳ ವಿಭಾಗದ ಟವರ್-1ರಲ್ಲಿ ತಪಾಸಣೆ ನಡೆಸಲಾಗುತ್ತಿತ್ತು. ಈ ವೇಳೆ ತಪಾಸಣೆಗೆ ಅಡ್ಡಿಪಡಿಸಿದ ಕೈದಿಗಳಾದ ಇನಾಕ್ ಜಾಯ್, ವೋಕು ಆರೆಂಜಿ ಸೇರಿದಂತೆ ಇತರರು ಅಧಿಕಾರಿಗಳ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸಿಬ್ಬಂದಿ ಕೈದಿಗಳನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಕಾರ್ಯಾಚರಣೆ ವೇಳೆ ಬ್ಯಾರಕ್‌ಗಳಲ್ಲಿ ಅಡಗಿಸಿಟ್ಟಿದ್ದ 10ಕ್ಕೂ ಹೆಚ್ಚು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಗಲಾಟೆ ಮಾಡಿದ ಕೈದಿಗಳ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲವ್ ಜಿಹಾದ್ ಪ್ರಕರಣ: 9000 ವಿಡಿಯೋ, ಫೋಟೋ ಪತ್ತೆಯಾದ್ರೂ ಅರೆಸ್ಟ್ ಇಲ್ಲವೇಕೆ? ಪೊಲೀಸರಿಗೆ ಕಾಂಗ್ರೆಸ್​ ಶಾಸಕರಿಂದ ಒತ್ತಡ ಆರೋಪ – Kannada News | Musthafa Khadri Love Jihad: Police Face Heat Over Evidence, Political Pressure in Koppal

ಕೊಪ್ಪಳ, ಏ.14: ಜಿಲ್ಲೆಯಲ್ಲಿ ಬೆಳಕಿಗೆ ಬಂದಿರುವ ಮುಸ್ತಫಾ ಖಾದ್ರಿ ಎಂಬಾತನ ಲವ್ ಜಿಹಾದ್ ಆರೋಪ ಪ್ರಕರಣ ಈಗ ಹೊಸ ತಿರುವು ಪಡೆದಿದೆ. ಆರೋಪಿಯ ಮೊಬೈಲ್‌ನಲ್ಲಿ ಸಾವಿರಾರು ಅಶ್ಲೀಲ ವಿಡಿಯೋಗಳು ಮತ್ತು ಅಕ್ರಮ ಚಟುವಟಿಕೆಗಳ ಸಾಕ್ಷ್ಯಗಳಿದ್ದರೂ ಪೊಲೀಸರು ಆತನನ್ನು ಬಂಧಿಸಲು ಹಿಂಜರಿಯುತ್ತಿರುವುದು ಸಾರ್ವಜನಿಕರಲ್ಲಿ ಮತ್ತು ರಾಜಕೀಯ ವಲಯದಲ್ಲಿ ಹಲವು ಅನುಮಾನಗಳನ್ನು ಮೂಡಿಸಿದೆ.

ಬಂಧಿತನಾಗದ ಆರೋಪಿ ಮುಸ್ತಫಾ ಖಾದ್ರಿಯ ಮೊಬೈಲ್‌ನಲ್ಲಿ ಸುಮಾರು 9,000ಕ್ಕೂ ಅಧಿಕ ಅಶ್ಲೀಲ ವಿಡಿಯೋಗಳು ಮತ್ತು 7,000ಕ್ಕೂ ಅಧಿಕ ಫೋಟೋಗಳು ಪತ್ತೆಯಾಗಿವೆ ಎಂದು ಹೇಳಲಾಗಿದೆ. ಇದಲ್ಲದೆ, ಈತ ರಾಜಾರೋಷವಾಗಿ ಹುಕ್ಕಾ ಮತ್ತು ಗಾಂಜಾ ಸೇವಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದರೂ, ಪೊಲೀಸರು ಕೇವಲ ನೋಟಿಸ್ ನೀಡಿ ವಿಚಾರಣೆ ನಡೆಸುತ್ತೇವೆ ಎಂದು ಕಾಲಹರಣ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಬಿಜೆಪಿ ಮುಖಂಡ ಬಸವರಾಜ್ ಕ್ಯಾವಟರ್, “ಈ ಲವ್ ಜಿಹಾದ್ ಪ್ರಕರಣದ ಹಿಂದೆ ಕಾಂಗ್ರೆಸ್ ಸರ್ಕಾರದ ಕೈವಾಡವಿದೆ. ಜಿಲ್ಲೆಯ ಪ್ರಭಾವಿ ಶಾಸಕರು ಮತ್ತು ಸಂಸದರ ಒತ್ತಡಕ್ಕೆ ಮಣಿದು ಪೊಲೀಸರು ಆರೋಪಿಯನ್ನು ಬಂಧಿಸುತ್ತಿಲ್ಲ” ಎಂದು ದೂರಿದ್ದಾರೆ. ಇಷ್ಟೊಂದು ಸಾಕ್ಷ್ಯಗಳಿದ್ದರೂ ಕ್ರಮ ಕೈಗೊಳ್ಳದ ಪೊಲೀಸರ ನಿರ್ಲಕ್ಷ್ಯದ ವಿರುದ್ಧ ಅವರು ಕಿಡಿ ಕಾರಿದ್ದಾರೆ.

ಇದನ್ನೂ ಓದಿ: ತಾನೇ ಈ ಮಗುವಿನ ತಂದೆ ಹೌದೋ ಅಲ್ಲವೋ ಎಂಬ ಅನುಮಾನ, 6 ವರ್ಷದ ಮಗನನ್ನು ಕೊಂದು ಶವವ ನದಿಗೆಸೆದ ತಂದೆ

ದೂರು ದಾಖಲಾಗಿ ಎರಡು ದಿನಗಳಾದರೂ ಬಂಧನವಾಗದಿರುವುದು ಪ್ರಕರಣಕ್ಕೆ ಮತ್ತಷ್ಟು ಗಹನತೆ ತಂದಿದೆ. ಪೊಲೀಸರು ಈ ಪ್ರಕರಣವನ್ನು ಹಳ್ಳ ಹಿಡಿಸುತ್ತಿದ್ದಾರೆಯೇ ಅಥವಾ ಪ್ರಭಾವಿಗಳ ಒತ್ತಡಕ್ಕೆ ಮಣಿದಿದ್ದಾರೆಯೇ ಎಂಬುದು ಸದ್ಯದ ಪ್ರಶ್ನೆಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link