Category Archives: Blog

Your blog category

ಚಳಿಗಾಲದಲ್ಲಿ ಐಸ್ ಕ್ರೀಮ್ ತಿಂದ್ರೆ ನಿಜವಾಗಿಯೂ ನೆಗಡಿ, ಕೆಮ್ಮು ಬರುತ್ತಾ? ಇಲ್ಲಿದೆ ತಜ್ಞರು ನೀಡಿದ ಅಚ್ಚರಿ ಮಾಹಿತಿ – Kannada News | Eating Ice Cream in Cold Weather: What Experts Say

ಹೊರಗೆ ಎಷ್ಟೇ ಚಳಿ (Winter) ಇರಲಿ ಐಸ್ ಕ್ರೀಮ್ ಪಾರ್ಲರ್ ಗಳಲ್ಲಿ ಜನ ಕಡಿಮೆಯಾಗುವುದಿಲ್ಲ. ಕೆಲವರಿಗೆ ಐಸ್ ಕ್ರೀಮ್ ತಿನ್ನುವುದಕ್ಕೆ ಸಮಯವಿರುವುದಿಲ್ಲ. ಯಾವಾಗ ಕೊಟ್ಟರು ಖುಷಿಯಿಂದ ತಿನ್ನುತ್ತಾರೆ. ಆದರೆ, ಮನೆಯಲ್ಲಿ ಹಿರಿಯರು ಮಾತ್ರ ಚಳಿಗಾಲದಲ್ಲಿ ಐಸ್ ಕ್ರೀಮ್ ತಿನ್ನುವುದರಿಂದ ನೆಗಡಿ ಮತ್ತು ಕೆಮ್ಮು ಬರುತ್ತೆ ತಿನ್ನಬೇಡಿ ಎಂದು ಎಚ್ಚರಿಸುತ್ತಲೇ ಇರುತ್ತಾರೆ. ಹಾಗಾದರೆ, ಇದು ಎಷ್ಟು ನಿಜ! ಚಳಿಗಾಲದಲ್ಲಿ ತಣ್ಣನೆಯ ಆಹಾರ ಸೇವನೆ ಮಾಡುವುದರಿಂದ ನಿಜವಾಗಿಯೂ ಆರೋಗ್ಯ ಹಾಳಾಗುತ್ತದೆಯೇ… ಈ ಕುರಿತಂತೆ ತಜ್ಞರು ನೀಡಿದ ಮಾಹಿತಿ ಇಲ್ಲಿದೆ.

ಐಸ್ ಕ್ರೀಮ್ ತಿನ್ನುವುದರಿಂದ ನೆಗಡಿಯಾಗುತ್ತದೆಯೇ?

ತಜ್ಞರ ಪ್ರಕಾರ, ಐಸ್ ಕ್ರೀಮ್ ತಿನ್ನುವುದರಿಂದ ನೇರವಾಗಿ ನೆಗಡಿಯಾಗುವುದಿಲ್ಲ. ಸಾಮಾನ್ಯವಾಗಿ ಶೀತ ಮತ್ತು ಜ್ವರ ವೈರಸ್ ಅಥವಾ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ, ಶೀತ ತಾಪಮಾನದಿಂದಲ್ಲ. ತಣ್ಣನೆಯ ಆಹಾರ ಹೊಟ್ಟೆಗೆ ಹೋದಾಗ, ನಮ್ಮ ದೇಹದ ಆಂತರಿಕ ವ್ಯವಸ್ಥೆಯು ಅದನ್ನು ತಕ್ಷಣವೇ ಬೆಚ್ಚಗಾಗಿಸಲು ಪ್ರಯತ್ನಿಸುತ್ತದೆ. ಆದ್ದರಿಂದ, ದೇಹದ ಉಷ್ಣತೆ ಹಠಾತ್ತನೆ ಕಡಿಮೆಯಾಗುವುದಿಲ್ಲ. ಅದಲ್ಲದೆ ಐಸ್ ಕ್ರೀಮ್ ತಿನ್ನುವುದರಿಂದ ಒತ್ತಡ ಕಡಿಮೆಯಾಗಿ ಮನಸ್ಸು ರಿಲ್ಯಾಕ್ಸ್ ಆಗುತ್ತೆ. ಅದಕ್ಕಾಗಿಯೇ ಅನೇಕರು ಚಳಿಗಾಲದಲ್ಲಿಯೂ ಸಹ ಐಸ್ ಕ್ರೀಮ್ ತಿನ್ನಲು ಇಷ್ಟಪಡುತ್ತಾರೆ.

ಐಸ್ ಕ್ರೀಮ್ ಯಾರಿಗೆ ಒಳ್ಳೆಯದಲ್ಲ?

ಆರೋಗ್ಯವಂತರು ಐಸ್ ಕ್ರೀಮ್ ತಿನ್ನುವುದರಿಂದ ಹೆಚ್ಚಿನ ತೊಂದರೆಯಾಗುವುದಿಲ್ಲ, ಆದರೆ ಕೆಲವು ಆರೋಗ್ಯ ಸಮಸ್ಯೆಗಳಿರುವವರು ಇದರಿಂದ ದೂರವಿರುವುದೇ ಉತ್ತಮ.

ಗಂಟಲಿನ ಸಮಸ್ಯೆ: ಈಗಾಗಲೇ ಗಂಟಲು ನೋವು ಇರುವವರಿಗೆ, ತಣ್ಣನೆಯ ಐಸ್ ಕ್ರೀಮ್ ಆ ಅಸ್ವಸ್ಥತೆಯನ್ನು ಇನ್ನಷ್ಟು ಹದಗೆಡಿಸಬಹುದು.

ಅಸ್ತಮಾ, ಕೆಮ್ಮು ಇರುವವರು: ಉಸಿರಾಟದ ತೊಂದರೆ ಅಥವಾ ಆಗಾಗ ಕೆಮ್ಮು ಇರುವವರಿಗೆ ಒಳ್ಳೆಯದಲ್ಲ.

ತೇವಾಂಶದ ಕೊರತೆ: ಚಳಿಗಾಲದಲ್ಲಿ, ಗಾಳಿಯಲ್ಲಿ ಕಡಿಮೆ ಆರ್ದ್ರತೆ ಇರುತ್ತದೆ. ಐಸ್ ಕ್ರೀಮ್ ತಿನ್ನುವುದರಿಂದ ಗಂಟಲು ಮತ್ತಷ್ಟು ಒಣಗಬಹುದು, ಇದು ವೈರಲ್ ಸೋಂಕುಗಳಿಗೆ ಕಾರಣವಾಗಬಹುದು.

ಇದನ್ನೂ ಓದಿ: ಈ ಆರೋಗ್ಯ ಸಮಸ್ಯೆ ಇರುವವರು ಚಳಿಗಾಲದಲ್ಲಿ ಅಪ್ಪಿತಪ್ಪಿಯೂ ವಾಕಿಂಗ್ ಹೋಗಬಾರದು!

ಐಸ್ ಕ್ರೀಮ್ ತಿನ್ನುವಾಗ ಅನುಸರಿಸಬೇಕಾದ ಸಲಹೆಗಳು:

  • ವಾರಕ್ಕೆ ಒಂದು ಅಥವಾ ಎರಡು ಬಾರಿ ಐಸ್ ಕ್ರೀಮ್ ತಿನ್ನಬಹುದು. ಅದಕ್ಕಿಂತ ಹೆಚ್ಚು ಬಾರಿ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ.
  • ಐಸ್ ಕ್ರೀಮ್ ಅನ್ನು ಒಮ್ಮೆಗೆ ನುಂಗುವ ಬದಲು, ನಿಧಾನವಾಗಿ ತಿನ್ನುವುದು ಒಳ್ಳೆಯದು.
  • ಐಸ್ ಕ್ರೀಮ್ ತಿಂದ ನಂತರ, ಒಂದು ಲೋಟ ಉಗುರು ಬೆಚ್ಚಗಿನ ನೀರು ಅಥವಾ ಹಾಲು ಕುಡಿಯುವುದರಿಂದ ಗಂಟಲು ಸಾಮಾನ್ಯ ಸ್ಥಿತಿಗೆ ಮರಳುತ್ತದೆ.
  • ನಿಮಗೆ ಸ್ವಲ್ಪ ಶೀತ ಇದ್ದರೂ, ಆ ಸಮಯದಲ್ಲಿ ಐಸ್ ಕ್ರೀಮ್ ನಿಂದ ದೂರವಿರುವುದು ಉತ್ತಮ.

ಒಟ್ಟಾರೆಯಾಗಿ, ಚಳಿಗಾಲದಲ್ಲಿ ಆರೋಗ್ಯವಂತರಿಗೆ, ಐಸ್ ಕ್ರೀಮ್ ತಿನ್ನುವುದು ಸುರಕ್ಷಿತ. ಆದರೆ ಆರೋಗ್ಯ ತಜ್ಞರು ಹೇಳುವ ಪ್ರಕಾರ ಇದನ್ನು ಮಿತವಾಗಿ ಸೇವಿಸಬೇಕು. ಏನಾದರೂ ಅತಿಯಾಗಿ ಸೇವಿಸಿದರೆ ಇದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪತ್ನಿ ಮೇಲೆ ಪತ್ನಿಯಿಂದಲೇ ಡೆಡ್ಲಿ ಅಟ್ಯಾಕ್​: ಕೊಡಲಿ ಏಟಿಗೆ ಪ್ರಾಣಬಿಟ್ಟ ಮಹಿಳೆ – Kannada News | Husband Murders Wife by Attacking Her With Axe in Hospete, Vijayanagara

ವಿಜಯನಗರ, ಜನವರಿ 01: ಕೌಟುಂಬಿಕ ಕಲಹ ಹಿನ್ನೆಲೆ ಪತ್ನಿಯನ್ನ ಪತಿಯೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ 76 ವೆಂಕಟಾಪುರ ಗ್ರಾಮದಲ್ಲಿ ನಡೆದಿದೆ. ಝಾನ್ಸಿ (32) ಮೃತ ಮಹಿಳೆಯಾಗಿದ್ದು, ಘಟನೆ ಬಳಿಕ ಎಸ್ಕೇಪ್​​ ಆಗಿದ್ದ ಆಕೆಯ ಪತಿ ಸೆಲ್ವಕುಮಾರ್​​ನನ್ನು ಪೊಲೀಸರು ಬಂಧಿಸಿದ್ದಾರೆ. ದಂಪತಿಗೆ ಮಕ್ಕಳಿಲ್ಲದೆ ಇರುವುದು ಮತ್ತು ಪತ್ನಿ ಮೇಲೆ ಪತಿಗೆ ಅನುಮಾನವೇ ಕೌಟುಂಬಿಕ ಕಲಹಕ್ಕೆ ಕಾರಣ ಎನ್ನಲಾಗಿದೆ.

ಹದಿಮೂರು ವರ್ಷಗಳ ಹಿಂದೆ ಕುಟುಂಬಸ್ಥರ ಒಪ್ಪಿಗೆಯಂತೆ ಸೆಲ್ವಕುಮಾರ ಮತ್ತು ಝಾನ್ಸಿ ಮದುವೆ ನಡೆದಿತ್ತು. ಆ ಬಳಿಕ 7 ವರ್ಷಗಳ ವರೆಗೆ ಸಂಸಾರವೂ ಚೆನ್ನಾಗಿತ್ತು. ಆದರೆ ಮಕ್ಕಳಾಗದ ಕೊರಗು ದಂಪತಿಯನ್ನು ಕಾಡುತ್ತಿತ್ತು. ಕಂಡ ಕಂಡ ಹಾಸ್ಪಿಟಲ್, ದೇವಸ್ಥಾನ ಸುತ್ತಿದರೂ ಸಂತಾನ ಭಾಗ್ಯ ಮಾತ್ರ ಸಿಕ್ಕಿರಲಿಲ್ಲ. ದಿನ ಕಳೆದಂತೆ ಇದೇ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳವೂ ನಡೆಯುತ್ತಿತ್ತು. ಅಲ್ಲದೆ ಪತ್ನಿ ಝಾನ್ಸಿ ಮೇಲೆ ಸೆಲ್ವಕುಮಾರ ಅನುಮಾನ ಕೂಡ ಪಡಲು ಆರಂಭಿಸಿದ್ದ. ಹೀಗಾಗಿ ಪತಿ ಜೊತೆ ಗಲಾಟೆ ಮಾಡಿಕೊಂಡು ಝಾನ್ಸಿ ತವರುಮನೆ ವೆಂಕಟಾಪುರಕ್ಕೆ ಬಂದಿದ್ದಳು. ಕಳೆದ ಮೂರು ದಿನಗಳ ಹಿಂದೆ ಸೆಲ್ವಕುಮಾರ ವೆಂಕಟಾಪುರಕ್ಕೆ ಬಂದು ತನ್ನ ಪತ್ನಿ ಬಳಿ ಮನೆಗೆ ಬರುವಂತೆ ಕೇಳಿದ್ದ. ಆದರೆ ಆಕೆ ತಾನು ಬರೋದಿಲ್ಲ ಅಂತಾ ಹೇಳಿದ್ದಳಂತೆ. ಇದೇ ವಿಚಾರಕ್ಕೆ ಮತ್ತೆ ಗಲಾಟೆಯಾಗಿದ್ದು, ಕುಟುಂಬಸ್ಥರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಯಾಗಿತ್ತು.

ಇದನ್ನೂ ಓದಿ: ಆಸ್ತಿಗಾಗಿ ಅಣ್ಣನಿಂದಲೇ ತಮ್ಮನ ಕೊಲೆ; ಮರ್ಡರ್​​ ರಹಸ್ಯ ಬಿಚ್ಚಿಟ್ಟಿದ್ದು ಹೆತ್ತಮ್ಮ!

ಬಳಿಕ ಮತ್ತೆ ಪತ್ನಿಯನ್ನು ಮನೆಗೆ ಕರೆದುಕೊಂಡು ಹೋಗಲು ಸೆಲ್ವಕುಮಾರ್​​ ಬಂದಿದ್ದಾನೆ. ಈ ವೇಳೆಯೂ ಆಕೆಗೆ ಒಪ್ಪದ ಕಾರಣ ಮಾತಿಗೆ ಮಾತು ಬೆಳೆದಿದೆ. ಜಗಳ ವಿಕೋಪಕ್ಕೆ ಹೋಗಿ ತನ್ನ ಕೈಲಿದ್ದ ಕೊಡಲಿಯಿಂದ ಸೆಲ್ವಕುಮಾರ್​​ ಝಾನ್ಸಿ ಮೇಲೆ ದಾಳಿ ಮಾಡಿದ್ದಾನೆ. ಕುತ್ತಿಗೆ ಮತ್ತು ಹೊಟ್ಟೆ ಭಾಗವನ್ನು ಕಡಿದಿದ್ದಾನೆ. ಪರಿಣಾಮ ಝಾನ್ಸಿ ಮೃತಪಟ್ಟಿದ್ದು, ಸ್ಥಳದಿಂದ ಸೆಲ್ವಕುಮಾರ್​​ ಎಸ್ಕೇಪ್​​ ಆಗಿದ್ದ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಮಗಳನ್ನು ಕೊಂದ ಪಾಪಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಝಾನ್ಸಿ ಕುಟುಂಬ ಆಗ್ರಹಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಜನವರಿ ತಿಂಗಳಲ್ಲಿ 8 ಪಂದ್ಯಗಳನ್ನಾಡಲಿದೆ ಟೀಂ ಇಂಡಿಯಾ; ಇಲ್ಲಿದೆ ವೇಳಾಪಟ್ಟಿ – Kannada News | Team India Jan 2026 Schedule: NZ Series & World Cup Challenges Ahead

2025 ರ ವರ್ಷವನ್ನು ಸಿಹಿ-ಕಹಿಯೊಂದಿಗೆ ಮುಗಿಸಿರುವ ಟೀಂ ಇಂಡಿಯಾಗೆ (Team India) 2026 ರಲ್ಲಿ ಸಾಲು ಸಾಲು ಸವಾಲುಗಳು ಎದುರಾಗಲಿವೆ. ಅದರಲ್ಲಿ ಪ್ರಮುಖವಾಗಿ ಫೆಬ್ರವರಿ ತಿಂಗಳಲ್ಲಿ ಆರಂಭವಾಗಲಿರುವ ಟಿ20 ವಿಶ್ವಕಪ್ (T20 World Cup 2026). ಟಿ20 ಮಾದರಿಯಲ್ಲಿ ಹಾಲಿ ಚಾಂಪಿಯನ್ ಆಗಿರುವ ಟೀಂ ಇಂಡಿಯಾ ತನ್ನ ಪಟ್ಟವನ್ನು ಉಳಿಸಿಕೊಳ್ಳುವ ಒತ್ತಡದಲ್ಲಿದೆ. ಇದು ಮಾತ್ರವಲ್ಲದೆ 2027 ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಕೂಡ ಟೀಂ ಇಂಡಿಯಾಗೆ ಬಹಳ ಮುಖ್ಯವಾಗಿದೆ. ಏಕೆಂದರೆ 2023 ರಲ್ಲಿ ನಡೆದಿದ್ದ ವಿಶ್ವಕಪ್​ ಫೈನಲ್​ನಲ್ಲಿ ಸೋತಿದ್ದ ಭಾರತ ತಂಡ, ಚಾಂಪಿಯನ್‌ ಪಟ್ಟವನ್ನು ಅಲಂಕರಿಸುವ ಇರಾದೆಯಲಿದೆ. ಈ ಮೂಲಕ ಭಾರತದ ಇಬ್ಬರು ದಿಗ್ಗಜರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಗೆಲುವಿನ ವಿದಾಯ ಹೇಳಲು ಬಯಸುತ್ತಿದೆ.

ಜನವರಿ ತಿಂಗಳಲ್ಲಿ 8 ಪಂದ್ಯ

ಈ ಎರಡು ಐಸಿಸಿ ಟೂರ್ನಿಗಳಿಗೆ ಇನ್ನು ಸಮಯ ಉಳಿದಿದೆ. ಆದರೆ ಅದಕ್ಕೂ ಮುನ್ನ ಅಂದರೆ ಜನವರಿ ತಿಂಗಳಲ್ಲಿ ಟೀಂ ಇಂಡಿಯಾದ ವೇಳಾಪಟ್ಟಿ ಹೇಗಿದೆ? ಯಾವ ಯಾವ ತಂಡದ ವಿರುದ್ಧ ಯಾವ ಮಾದರಿಯ ಸರಣಿಯನ್ನು ಆಡಲಿದೆ ಎಂಬುದನ್ನು ನೋಡುವುದಾದರೆ.. ಜನವರಿ ತಿಂಗಳಲ್ಲಿ ಭಾರತ ತಂಡ ಬರೋಬ್ಬರಿ 8 ಪಂದ್ಯಗಳನ್ನು ಆಡಲಿದೆ. ಅಂದರೆ ಈ ತಿಂಗಳಲ್ಲಿ ಅಭಿಮಾನಿಗಳಿಗೆ ಮನರಂಜನೆಯ ರಸದೌತಣವೇ ಸಿಗಲಿದೆ.

ಟೀಂ ಇಂಡಿಯಾದ ಈ ವರ್ಷದ ವೇಳಾಪಟ್ಟಿ ಏಕದಿನ ಸರಣಿಯೊಂದಿಗೆ ಆರಂಭವಾಗಲಿದೆ. ಕಳೆದ ಡಿಸೆಂಬರ್​ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು ಗೆಲುವಿನೊಂದಿಗೆ ಅಂತ್ಯಗೊಳಿಸಿದ್ದ ಭಾರತ ತಂಡ, ಇದೀಗ ಈ ವರ್ಷವನ್ನು ಸರಣಿ ಗೆಲುವಿನೊಂದಿಗೆ ಆರಂಭಿಸಲು ನೋಡುತ್ತಿದೆ. ಅದರಂತೆ ಗಿಲ್ ಪಡೆಗೆ ಎದುರಾಗುತ್ತಿರುವ ಮೊದಲ ತಂಡವೆಂದರೆ ಅದು ನ್ಯೂಜಿಲೆಂಡ್‌. ಭಾರತ ಹಾಗೂ ನ್ಯೂಜಿಲೆಂಡ್‌ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.

ಏಕದಿನ ಸರಣಿಯ ವೇಳಾಪಟ್ಟಿ

  • ಮೊದಲ ಏಕದಿನ ಪಂದ್ಯ; ಜನವರಿ 11, ಬರೋಡಾ
  • ಎರಡನೇ ಏಕದಿನ ಪಂದ್ಯ; ಜನವರಿ 14, ರಾಜ್​ಕೋಟ್
  • ಮೂರನೇ ಏಕದಿನ ಪಂದ್ಯ; ಜನವರಿ 18, ಇಂದೋರ್.

ವಾಸ್ತವವಾಗಿ ಈ ಸರಣಿಗೆ ಇನ್ನು ತಂಡವನ್ನು ಪ್ರಕಟಿಸಲಾಗಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಬಿಸಿಸಿಐ ಶುಭ್​ಮನ್​ ಗಿಲ್ ನಾಯಕತ್ವದ ತಂಡವನ್ನು ಪ್ರಕಟಿಸಲಿದೆ. ಈ ತಂಡದಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಆಡುವುದರಿಂದ ಅಭಿಮಾನಿಗಳು ಇವರಿಬ್ಬರ ಮೇಲೆ ಸಾಕಷ್ಟು ನಿರೀಕ್ಷೆಗನ್ನು ಇಟ್ಟಿದ್ದಾರೆ.

ಟಿ20 ಸರಣಿ

ಏಕದಿನ ಸರಣಿ ಮುಗಿದ ಬಳಿಕ ಉಭಯ ತಂಡಗಳ ನಡುವೆ ಐದು ಪಂದ್ಯಗಳ ಟಿ20 ಸರಣಿಯೂ ನಡೆಯಲಿದೆ. ಈ ಸರಣಿ ಮುಗಿದ ಬಳಿಕ ಟಿ20 ವಿಶ್ವಕಪ್ ಆರಂಭವಾಗುವುದರಿಂದ ವಿಶ್ವಕಪ್ ತಯಾರಿ ದೃಷ್ಟಿಯಿಂದ ಟೀಂ ಇಂಡಿಯಾಕ್ಕೆ ಈ ಸರಣಿ ನಿರ್ಣಾಯಕವಾಗಿದೆ. ಅಲ್ಲದೆ ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ನಾಯಕ ಸೂರ್ಯಕುಮಾರ್ ಯಾದವ್ ಈ ಸರಣಿಯಲ್ಲಿ ಶತಾಯಗತಾಯವಾಗಿ ತಮ್ಮ ಹಳೆಯ ಫಾರ್ಮ್​ ಕಂಡುಕೊಳ್ಳಬೇಕಿದೆ.

ಟಿ20 ಸರಣಿ ವೇಳಾಪಟ್ಟಿ

  • ಮೊದಲ ಟಿ20 ಪಂದ್ಯ: ಜನವರಿ 21, ನಾಗ್ಪುರ
  • 2ನೇ ಟಿ20 ಪಂದ್ಯ: ಜನವರಿ 23, ರಾಯ್ಪುರ
  • 3ನೇ ಟಿ20 ಪಂದ್ಯ: ಜನವರಿ 25, ಗುವಾಹಟಿ
  • 4ನೇ ಟಿ20 ಪಂದ್ಯ: ಜನವರಿ 28, ವಿಶಾಖಪಟ್ಟಣ
  • 5ನೇ ಟಿ20 ಪಂದ್ಯ: ಜನವರಿ 31, ತಿರುವನಂತಪುರ

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

PAN-Aadhaar Link: ಆಧಾರ್ ಜೊತೆ ಪಾನ್ ಲಿಂಕ್ ಮಾಡಲು ಡೆಡ್​ಲೈನ್ ಮುಗೀತು? ಮತ್ತೆ ಲಿಂಕ್ ಮಾಡಬಹುದಾ? ಮುಂದೇನಾಗಬಹುದು? – Kannada News | December 31 Deadline Over: What happens if PAN not linked with Aadhaar

ನವದೆಹಲಿ, ಜನವರಿ 1: ಆಧಾರ್ ನಂಬರ್ ಜೊತೆ ಪ್ಯಾನ್ ಲಿಂಕ್ ಆಗಿರಬೇಕೆಂದು ಆದಾಯ ತೆರಿಗೆ ಇಲಾಖೆ (Income Tax) ಫರ್ಮಾನು ಹೊರಡಿಸಿ ವರ್ಷಗಳೇ ಆಯಿತು. ಹಲವು ಬಾರಿ ವಾಯಿದೆಗಳು ವಿಸ್ತರಣೆಯಾಗುತ್ತಾ ಬಂದು ಡಿಸೆಂಬರ್ 31ರ ಕೊನೆಯ ಗಡುವು ಕೂಡ ಮುಕ್ತಾಯವಾಗಿದೆ. ಈ ಡೆಡ್​ಲೈನ್ ಮತ್ತೆ ವಿಸ್ತರಣೆ ಮಾಡುವ ಸಾಧ್ಯತೆ ಇಲ್ಲ. ಅಂಥ ಯಾವ ನೋಟಿಫಿಕೇಶನ್ ಸದ್ಯಕ್ಕೆ ಇಲಾಖೆಯಿಂದ ಬಂದಿಲ್ಲ. ಈಗ ಆಧಾರ್​ಗೆ ಲಿಂಕ್ ಆಗದೇ ಇರುವ ಪ್ಯಾನ್ ಹೊಂದಿರುವವರು ಏನು ಮಾಡಬೇಕು? ಅವರಿಗೆ ಏನು ಸಮಸ್ಯೆಯಾಗಬಹುದು? ಇಲ್ಲಿದೆ ಡೀಟೇಲ್ಸ್.

ಆಧಾರ್ ಜೊತೆ ಪ್ಯಾನ್ ಲಿಂಕ್ ಆಗದಿದ್ದರೆ ಏನಾಗುತ್ತೆ?

ವ್ಯಕ್ತಿ ಮತ್ತು ಸಂಸ್ಥೆಗಳ ಹಣಕಾಸು ವಹಿವಾಟುಗಳನ್ನು ಟ್ರ್ಯಾಕ್ ಮಾಡಲೆಂದು ಐಟಿ ಇಲಾಖೆ ಪ್ಯಾನ್ ಅನ್ನು ನೀಡುತ್ತದೆ. ಒಬ್ಬರೇ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್​ಗಳನ್ನು ಬಳಸುವುದನ್ನು ತಪ್ಪಿಸಲು ಆಧಾರ್ ಜೊತೆ ಪ್ಯಾನ್ ಲಿಂಕ್ ಮಾಡುವ ಕ್ರಮ ಜಾರಿಗೆ ತಂದಿತು. ಈಗ ಆಧಾರ್​ಗೆ ಲಿಂಕ್ ಆಗದ ಪ್ಯಾನ್ ಅನ್ನು ಇನಾಪರೇಟಿವ್ ಎಂದು ಪರಿಗಣಿಸಲಾಗುತ್ತದೆ. ಅಂದರೆ, ನಿಷ್ಕ್ರಿಯ ಪ್ಯಾನ್ ಆಗಿರುತ್ತದೆ. ಈ ಪ್ಯಾನ್ ಇದ್ದೂ ಇಲ್ಲದಂತೆ ಆಗುತ್ತದೆ.

  • ಹೊಸ ಬ್ಯಾಂಕ್ ಅಕೌಂಟ್ ತೆರೆಯಲು ಆಗುವುದಿಲ್ಲ
  • ಡೀಮ್ಯಾಟ್ ಅಕೌಂಟ್ ತೆರೆಯಲು ಆಗುವುದಿಲ್ಲ.
  • ಹೆಚ್ಚಿನ ಮೊತ್ತದ ಹಣಕಾಸು ವಹಿವಾಟು ಸಾಧ್ಯವಾಗುವುದಿಲ್ಲ
  • ಸಾಲ ಪಡೆಯಲು ಆಗುವುದಿಲ್ಲ
  • ಐಟಿ ರಿಟರ್ನ್ಸ್ ಸಲ್ಲಿಸಲು ಆಗುವುದಿಲ್ಲ
  • ರೀಫಂಡ್ ಸಿಗುವುದಿಲ್ಲ
  • ಎರಡು ಪಟ್ಟು ಹೆಚ್ಚು ಟಿಡಿಎಸ್ ಕಡಿತ ಆಗುತ್ತದೆ.

ಇದನ್ನೂ ಓದಿ: ಗೆಜೆಟ್ ಮೂಲಕ ಹೆಸರು ಬದಲಾಯಿಸುವುದು ಹೇಗೆ?; ಇಲ್ಲಿದೆ 3 ಹಂತಗಳ ನಾಮ ಬದಲಾವಣೆ ಪ್ರಕ್ರಿಯೆ

ಪ್ಯಾನ್ ಮತ್ತು ಆಧಾರ್ ಅನ್ನು ಈಗಲೂ ಲಿಂಕ್ ಮಾಡಬಹುದಾ?

ಆಧಾರ್ ಜೊತೆ ಪ್ಯಾನ್ ಅನ್ನು ಈಗಲೂ ಕೂಡ ಲಿಂಕ್ ಮಾಡಬಹುದು. ಲೇಟ್ ಲಿಂಕಿಂಗ್ ಫೀ ಪಾವತಿಸಿ, ಲಿಂಕ್ ಮಾಡಲು ಸಾಧ್ಯ. ಯಶಸ್ವಿಯಾಗಿ ಲಿಂಕ್ ಆದ ಬಳಿಕ ಪ್ಯಾನ್ ಮತ್ತೆ ಸಕ್ರಿಯಗೊಳ್ಳುತ್ತದೆ. ಆದರೆ, ಪ್ಯಾನ್ ಸಕ್ರಿಯ ಆಗುವವರೆಗೂ ಅದು ಇನಾಪರೇಟಿವ್ ಸ್ಥಿತಿಯಲ್ಲೇ ಮುಂದುವರಿಯುತ್ತದೆ ಎಂಬುದು ಗಮನಿಸಬೇಕಾದ ಸಂಗತಿ.

ಪ್ಯಾನ್ ಆಧಾರ್ ಲಿಂಕ್ ಆಗಿದೆಯಾ ಎಂದು ಖಚಿತಪಡಿಸಿಕೊಳ್ಳುವುದು ಹೇಗೆ?

  • ಇನ್ಕಮ್ ಟ್ಯಾಕ್ಸ್ ವಿಭಾಗದ ಇಫೈಲಿಂಗ್ ಪೋರ್ಟಲ್​ಗೆ ಹೋಗಿ:
  • ಮುಖ್ಯಪುಟದಲ್ಲಿ ‘ಕ್ವಿಕ್ ಲಿಂಕ್ಸ್’ ಸೆಕ್ಷನ್​ನಲ್ಲಿ ‘ಲಿಂಕ್ ಆಧಾರ್ ಸ್ಟೇಟಸ್’ ಕ್ಲಿಕ್ ಮಾಡಿ.
  • ನಿಮ್ಮ ಪ್ಯಾನ್ ಮತ್ತು ಆಧಾರ್ ನಂಬರ್ ನಮೂದಿಸಿ.
  • ‘ವೀವ್ ಲಿಂಕ್ ಆಧಾರ್ ಸ್ಟೇಟಸ್’ ಕ್ಲಿಕ್ ಮಾಡಿ.

ಈಗ ನಿಮ್ಮ ಪ್ಯಾನ್ ನಂಬರ್ ಆಧಾರ್ ಜೊತೆ ಲಿಂಕ್ ಆಗಿದೆಯಾ ಇಲ್ಲವಾ ಎಂಬುದನ್ನು ತಿಳಿಯಬಹುದು.

ಇದನ್ನೂ ಓದಿ: ಪೋಸ್ಟ್ ಆಫೀಸ್ ಸ್ಮಾಲ್ ಸೇವಿಂಗ್ ಸ್ಕೀಮ್​ಗಳ ಬಡ್ಡಿದರದಲ್ಲಿ ಇಳಿಕೆ ಇಲ್ಲ; ಇಲ್ಲಿದೆ ಜನವರಿ-ಮಾರ್ಚ್ ಕ್ವಾರ್ಟರ್​ನ ಬಡ್ಡಿದರಗಳ ಪಟ್ಟಿ

ಎಸ್ಸೆಮ್ಮೆಸ್ ಮೂಲಕ ತಿಳಿಯರಿ…

ಹಾಗೆಯೇ, ಎಸ್ಸೆಮ್ಮೆಸ್ ಮೂಲಕ ಇನ್ನೂ ಸುಲಭವಾಗಿ ಸ್ಟೇಟಸ್ ತಿಳಿಯಬಹುದು. ನಿಮ್ಮ ಮೊಬೈಲ್ ನಂಬರ್​ನಿಂದ UIDPAN <aadhaar number> <PAN Number> ಅನ್ನು ಬರೆದು ಈ ಮೆಸೇಜ್ ಅನ್ನು 567678 ಅಥವಾ 56161 ನಂಬರ್​ಗೆ ಕಳುಹಿಸಿ.

ಮೆಸೇಜ್​ನ ಉದಾಹರಣೆ: ‘UIDPAN 123456789012 ABCED1875E’

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಟಿ20 ಯಲ್ಲಿ ಟೆಸ್ಟ್ ಆಡಿ ಅರ್ಧಶತಕ ಬಾರಿಸಿದ ಬಾಬರ್ ಆಝಂ – Kannada News | Babar Azam’s BBL Brilliance: Unbeaten Half Century Seals Sydney Sixers Victory

ಕಳೆದ ವರ್ಷವನ್ನು ಫಾರ್ಮ್​ ಕಂಡುಕೊಳ್ಳುವುದರಲ್ಲೇ ಕಳೆದ ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಆಝಂ ಈ ಹೊಸ ವರ್ಷವನ್ನು ಭರ್ಜರಿಯಾಗಿ ಆರಂಭಿಸಿದ್ದಾರೆ. ಪ್ರಸ್ತುತ ಬಿಗ್ ಬ್ಯಾಷ್ ಲೀಗ್​ನಲ್ಲಿ ಆಡುತ್ತಿರುವ ಬಾಬರ್ ಆಝಂ ಅಜೇಯ ಅರ್ಧಶತಕ ಸಿಡಿಸುವುದರೊಂದಿಗೆ ತಂಡಕ್ಕೆ ಗೆಲುವು ಕೂಡ ತಂದುಕೊಟ್ಟಿದ್ದಾರೆ. ಈ ಲೀಗ್​ನಲ್ಲಿ ಸಿಡ್ನಿ ಸಿಕ್ಸರ್ಸ್‌ ತಂಡದ ಪರ ಆಡುತ್ತಿರುವ ಬಾಬರ್ ಮೆಲ್ಬೋರ್ನ್ ರೆನೆಗೇಡ್ಸ್ ತಂಡದ ವಿರುದ್ಧ ಅರ್ಧಶತಕದ ಇನ್ನಿಂಗ್ಸ್ ಆಡಿದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮೆಲ್ಬೋರ್ನ್ ರೆನೆಗೇಡ್ಸ್ ತಂಡವು 20 ಓವರ್‌ಗಳಲ್ಲಿ 165 ರನ್‌ಗಳ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಸಿಡ್ನಿ ತಂಡ ಇನ್ನು ಐದು ಎಸೆತಗಳು ಬಾಕಿ ಇರುವಾಗಲೇ ಜಯದ ನಗೆ ಬೀರಿತು. ಸಿಡ್ನಿ ಸಿಕ್ಸರ್ಸ್ ಪರ ಈ ರನ್ ಚೇಸ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ ಬಾಬರ್ ಆರಂಭದಿಂದ ಅಂತ್ಯದವರೆಗೆ ಒಂದು ತುದಿಯಲ್ಲಿ ನಿಂತು ತಂಡಕ್ಕೆ ಜಯ ತಂದುಕೊಡುವಲ್ಲಿ ಯಶಸ್ವಿಯಾದರು.

ಈ ಪಂದ್ಯದಲ್ಲಿ ಅಜೇಯರಾಗಿ ಉಳಿದ ಬಾಬರ್ ನಿಧಾನಗತಿಯ ಇನ್ನಿಂಗ್ಸ್ ಆಡಿದರಾದರೂ 46 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ 58 ರನ್ ಗಳಿಸಿದರು. 41 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಬಾಬರ್​ಗೆ ಇದು ಪ್ರಸ್ತುತ ಬಿಗ್ ಬ್ಯಾಷ್ ಲೀಗ್​ನಲ್ಲಿ ಎರಡನೇ ಅರ್ಧಶತಕವಾಗಿದೆ. 2025-26ರ ಬಿಗ್ ಬ್ಯಾಷ್ ಲೀಗ್‌ನಲ್ಲಿ ಇದುವರೆಗೆ 5 ಪಂದ್ಯಗಳನ್ನಾಡಿರುವ ಬಾಬರ್ 128 ರನ್ ಗಳಿಸಿದ್ದಾರೆ. ಎರಡು ಪಂದ್ಯಗಳಲ್ಲಿ ತಲಾ 58 ರನ್‌ಗಳ ಎರಡೂ ಇನ್ನಿಂಗ್ಸ್‌ಗಳನ್ನು ಹೊರತುಪಡಿಸಿದರೆ, ಬಾಬರ್ ಉಳಿದ 3 ಇನ್ನಿಂಗ್ಸ್‌ಗಳಲ್ಲಿ ಕೇವಲ 13 ರನ್ ಗಳಿಸಿದ್ದಾರೆ.

Source link

ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ – Kannada News | Congress leader Nana Patole compares Rahul Gandhi with Lord Sri Ram

ನವದೆಹಲಿ, ಜನವರಿ 1: ಕಾಂಗ್ರೆಸ್ ನಾಯಕ ನಾನಾ ಪಟೋಲೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ್ದಾರೆ. ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮ ಮಂದಿರ (Ram Temple) ಉದ್ಘಾಟನೆಯಾದಾಗಿನಿಂದ ಇದುವರೆಗೂ ರಾಹುಲ್ ಗಾಂಧಿ ಅಲ್ಲಿಗೆ ಭೇಟಿ ನೀಡದಿರುವ ಬಗ್ಗೆ ಪ್ರಶ್ನೆಗಳಿಗೆ ಉತ್ತರಿಸುವಾಗ ನಾನಾ ಪಟೋಲೆ ಈ ಹೇಳಿಕೆ ನೀಡಿದ್ದಾರೆ. “ರಾಹುಲ್ ಗಾಂಧಿ ರಾಮ ಮಾಡಿದ್ದ ಕೆಲಸವನ್ನು ಮಾಡುತ್ತಿದ್ದಾರೆ. ರಾಮನು ತುಳಿತಕ್ಕೊಳಗಾದ ಜನರ ಮತ್ತು ವಂಚಿತರ ನ್ಯಾಯದ ಪರವಾಗಿ ನಿಂತಿದ್ದ. ಈಗ ರಾಹುಲ್ ಗಾಂಧಿ ರಾಮನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.

“ರಾಹುಲ್ ಗಾಂಧಿ ಅಯೋಧ್ಯೆಗೆ ಹೋದಾಗ ಅವರು ರಾಮಲಲ್ಲಾನ ದರ್ಶನ ಪಡೆಯುತ್ತಾರೆ. ರಾಜೀವ್ ಗಾಂಧಿ ದೇಶದ ಪ್ರಧಾನಿಯಾಗಿದ್ದಾಗ ಅವರು ರಾಮಲಲ್ಲಾ ದೇವಾಲಯದ ದ್ವಾರಗಳನ್ನು ತೆರೆದು ಭೂಮಿ ಪೂಜೆ ನೆರವೇರಿಸಿದರು. ನಮಗೆ ನಮ್ಮ ದೇವರ ಮೇಲೆ ನಂಬಿಕೆ ಮತ್ತು ಭಕ್ತಿ ಇದೆ. ನಾವು ಕೂಡ ದೇವರಿಗೆ ತಲೆ ಬಾಗುತ್ತೇವೆ” ಎಂದು ನಾನಾ ಪಟೋಲೆ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಧುರಂಧರ್’ ಸಿನಿಮಾದಿಂದ ಎರಡು ಸಂಭಾಷಣೆ ತೆಗೆಸಿದ ಸರ್ಕಾರ: ಯಾವುದದು? – Kannada News | I and B ministry orders edits to Dhurandhar removes two words

ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್’ ಸಿನಿಮಾ ಭರ್ಜರಿ ಗಳಿಕೆ ಮಾಡುತ್ತಿದೆ. ಬಿಡುಗಡೆ ಆದ ಕೆಲವೇ ದಿನಗಳಲ್ಲಿ ಈ ಸಿನಿಮಾ 1000 ಕೋಟಿ ಗಳಿಕೆ ದಾಟಿದೆ. ಸಿನಿಮಾವನ್ನು ಮುಗಿಬಿದ್ದು ಜನ ವೀಕ್ಷಿಸುತ್ತಿದ್ದಾರೆ. ಭಾರತೀಯ ಸೈನಿಕನೊಬ್ಬ ಗೂಢಚಾರಿಯಾಗಿ ಪಾಕಿಸ್ತಾನಕ್ಕೆ ಹೋಗಿ ಅಲ್ಲಿಂದ ಭಾರತೀಯ ಸೇನೆಗೆ ಮಾಹಿತಿ ರವಾನೆ ಮಾಡುವ ಕತೆಯನ್ನು ‘ಧುರಂಧರ್’ ಸಿನಿಮಾ ಒಳಗೊಂಡಿದೆ. ಕೆಲವು ನಿಜ ಘಟನೆಗಳಿಂದ ಸ್ಪೂರ್ತಿ ಪಡೆದು ಈ ಸಿನಿಮಾ ಮಾಡಲಾಗಿದೆ. ಸಿನಿಮಾನಲ್ಲಿ ಕೆಲ ನಿಜ ವ್ಯಕ್ತಿಗಳ ಪಾತ್ರಗಳು, ಸ್ಥಳಗಳು ಸಹ ಇವೆ. ಆದರೆ ಇದೀಗ ಭಾರತೀಯ ಸರ್ಕಾರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯವು ‘ಧುರಂಧರ್’ ಸಿನಿಮಾದ ಎರಡು ಸಂಭಾಷಣೆ ಅಥವಾ ಹೆಸರನ್ನು ತೆಗೆಸಿದ್ದು, ಒಂದು ಸಂಭಾಷಣೆಯನ್ನು ಬದಲಾಯಿಸಲು ಸೂಚಿಸಿದೆ.

ಎಲ್ಲ ಚಿತ್ರಮಂದಿರಗಳಿಗೆ ವಿತರಕರು ಮತ್ತು ನಿರ್ಮಾಪಕರು ಮೇಲ್ ಮಾಡಿದ್ದು, ‘ಧುರಂಧರ್’ ಸಿನಿಮಾದ ಹೊಸ ಆವೃತ್ತಿಯನ್ನು ಕ್ಯೂಬ್ ಮೂಲಕ ಡೌನ್​​ಲೋಡ್ ಮಾಡಿಕೊಂಡು ಹೊಸ ಆವೃತ್ತಿಯನ್ನೇ ಪ್ರದರ್ಶನ ಮಾಡಬೇಕು ಎಂದು ಮನವಿ ಮಾಡಿದ್ದು, ಮಾಹಿತಿ ಮತ್ತು ಪ್ರಸಾರ ಇಲಾಖೆಯ ಸೂಚನೆಯ ಮೇರೆಗೆ ಸಿನಿಮಾದ ಸಂಭಾಷಣೆಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ ಎಂದು ಸಹ ಮೇಲ್​​ನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:ದೈವಕ್ಕೆ ಅವಮಾನ: ಬಾಲಿವುಡ್ ನಟ ರಣ್ವೀರ್ ಸಿಂಗ್ ವಿರುದ್ಧ ದೂರು ದಾಖಲು

‘ಧುರಂಧರ್’ ಸಿನಿಮಾನಲ್ಲಿ ಎರಡು ಹೆಸರನ್ನು ತೆಗೆಯಲಾಗಿದ್ದು, ಒಂದು ಸಂಭಾಷಣೆಯನ್ನು ಬದಲಾಯಿಸಲಾಗಿದೆ. ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯದ ಸೂಚನೆಯಂತೆ ಸಿನಿಮಾ ತಂಡ ಈ ಬದಲಾವಣೆಯನ್ನು ಮಾಡಿದೆ. ಅಳಿಸಲಾಗಿರುವ ಎರಡು ಪದಗಳಲ್ಲಿ ‘ಬಲೂಚ್’ ಸಹ ಒಂದಾಗಿದೆ. ಪಾಕಿಸ್ತಾನದ ಬಲೂಚಿಸ್ಥಾನವನ್ನು ಸಿನಿಮಾನಲ್ಲಿ ಬಲೂಚ್ ಎಂದು ಕರೆಯಲಾಗಿದೆ. ಇದರ ಜೊತೆಗೆ ಮತ್ತೊಂದು ಹೆಸರನ್ನು ಸಹ ಅಳಿಸಲಾಗಿದೆ ಅಥವಾ ಬೀಪ್ ಮಾಡಲಾಗಿದೆ. ‘ಧುರಂಧರ್’ ಸಿನಿಮಾದ ಈ ಬದಲಾದ ಆವೃತ್ತಿಯು ಜನವರಿ 1 ರಿಂದಲೇ ಪ್ರಸಾರ ಆಗಲಿದೆ.

‘ಧುರಂಧರ್’ ಸಿನಿಮಾ ಈ ವರ್ಷ ಭಾರತದ ಭಾರಿ ದೊಡ್ಡ ಯಶಸ್ವಿ ಸಿನಿಮಾ ಎನಿಸಿಕೊಂಡಿದೆ. ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಈಗಾಗಲೇ 1200 ಕೋಟಿಗೂ ಹೆಚ್ಚು ಮೊತ್ತವನ್ನು ಗಳಿಕೆ ಮಾಡಿದೆ. ಸಿನಿಮಾನಲ್ಲಿ ರಣ್​ವೀರ್ ಸಿಂಗ್, ಅಕ್ಷಯ್ ಖನ್ನ, ಆರ್ ಮಾಧವನ್, ಸಂಜಯ್ ದತ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾದ ನಾಯಕಿ ಪಾತ್ರದಲ್ಲಿ ಸಾರಾ ಅರ್ಜುನ್ ನಟಿಸಿದ್ದಾರೆ. ಸಿನಿಮಾವನ್ನು ಆದಿತ್ಯ ಧಾರ್ ಅವರು ನಿರ್ದೇಶನ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಈ ಆರೋಗ್ಯ ಸಮಸ್ಯೆ ಇರುವವರು ಚಳಿಗಾಲದಲ್ಲಿ ಅಪ್ಪಿತಪ್ಪಿಯೂ ವಾಕಿಂಗ್ ಹೋಗಬಾರದು! – Kannada News | Protect Your Heart: Avoid Early Morning Walks in Winter

ದಿನದಿಂದ ದಿನಕ್ಕೆ ಚಳಿ ಹೆಚ್ಚಾಗುತ್ತಲೇ ಇದೆ. ಹಾಗಾಗಿ ಈ ಋತುವಿನಲ್ಲಿ ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸುವುದು ಅನಿವಾರ್ಯವಾಗುತ್ತದೆ. ಸ್ವಲ್ಪ ನಿರ್ಲಕ್ಷ್ಯ ಮಾಡಿದರೂ ಕೂಡ ಜೀವಕ್ಕೆ ಅಪಾಯ ಉಂಟುಮಾಡಬಹುದು. ಅದಲ್ಲದೆ ಚಳಿಗಾಲದಲ್ಲಿ ಬೆಳಗಿನ ನಡಿಗೆ ಮಾಡುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಹಲವರು ಅಂದುಕೊಳ್ಳುತ್ತಾರೆ. ಆದರೆ ಈ ಅಭ್ಯಾಸ ಹೃದಯಾಘಾತದ ಅಪಾಯವನ್ನು ಹೆಚ್ಚಿಸಬಹುದು ಎಂದರೆ ನಂಬುತ್ತೀರಾ.. ಹೌದು, ಮಾಲಿನ್ಯ, ಮಂಜು ಮತ್ತು ಚಳಿ ಹೆಚ್ಚಾಗಿ ಇರುವ ಪ್ರದೇಶಗಳಲ್ಲಿ ಬೆಳಿಗ್ಗೆ ವಾಕಿಂಗ್ (Walk) ಹೋಗುವುದು ಅತ್ಯಂತ ಅಪಾಯಕಾರಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಯಾರು ಬೆಳಿಗ್ಗೆ ಎದ್ದು ವಾಕಿಂಗ್ ಹೋಗಬಾರದು, ಈ ಅಭ್ಯಾಸ ಯಾರಿಗೆ ಒಳ್ಳೆಯದಲ್ಲ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ದೆಹಲಿಯ ರಾಜೀವ್ ಗಾಂಧಿ ಆಸ್ಪತ್ರೆಯ ಹೃದ್ರೋಗ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಅಜಿತ್ ಜೈನ್ ಮತ್ತು ಡಾ. ಬನ್ಸಾಲ್ ನೀಡಿರುವ ಮಾಹಿತಿ ಅನುಸಾರ, ದೇಹವು ತನ್ನನ್ನು ತಾನು ಬೆಚ್ಚಗಿಡಲು ಪ್ರಯತ್ನಿಸಿದಾಗ, ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ರಕ್ತವನ್ನು ಪಂಪ್ ಮಾಡಲು ಹೃದಯದ ಮೇಲೆ ಹೆಚ್ಚುವರಿ ಒತ್ತಡವನ್ನುಂಟು ಮಾಡುತ್ತದೆ. ಅಂತಹ ಪರಿಸ್ಥಿತಿಗಳಲ್ಲಿ, ಹೃದಯಾಘಾತದ ಸಾಧ್ಯತೆಗಳು ಗಮನಾರ್ಹವಾಗಿ ಹೆಚ್ಚಿರುತ್ತವೆ. ಹಾಗಾಗಿ ಹೃದ್ರೋಗಿಗಳು, ಅಧಿಕ ರಕ್ತದೊತ್ತಡ ಇರುವವರು, ವೃದ್ಧರು ಬೆಳಿಗ್ಗೆ ಎದ್ದು ವಾಕಿಂಗ್ ಹೋಗುವುದನ್ನು ಆದಷ್ಟು ತಪ್ಪಿಸಬೇಕು.

ವಾಕಿಂಗ್ ಮಾಡುವುದನ್ನು ನಿಲ್ಲಿಸಬೇಕೇ?

ವೈದ್ಯರ ಸಲಹೆಯ ಪ್ರಕಾರ ಅಪಾಯದ ಗುಂಪಿನಲ್ಲಿಲ್ಲದವರು ಅಂದರೆ ಮೇಲೆ ಹೇಳಿರುವ ಸಮಸ್ಯೆ ಇಲ್ಲದವರು ವಾಕಿಂಗ್ ಮಾಡಬಹುದು, ಆದರೆ ಕೆಲವು ಮುನ್ನೆಚ್ಚರಿಕೆಗಳು ಅಗತ್ಯ.

ಸಮಯವನ್ನು ಬದಲಾಯಿಸಿ: ಬೆಳಿಗ್ಗೆ 6- 7 ಗಂಟೆಗೆ ನಡುವೆ ನಡೆಯುವ ಬದಲು, ಸೂರ್ಯ ಉದಯಿಸಿದ ನಂತರ ಅಥವಾ ಸಂಜೆ ಹೊತ್ತು ವಾಕಿಂಗ್ ಹೋಗುವುದು ಉತ್ತಮ.

ಬಟ್ಟೆಗಳು: ನಿಮ್ಮ ತಲೆ, ಕಿವಿ ಮತ್ತು ಎದೆ ಮುಚ್ಚುವ ಬೆಚ್ಚಗಿನ ಉಣ್ಣೆಯ ಬಟ್ಟೆಗಳನ್ನು ಧರಿಸಿ.

ವೇಗ ಹೆಚ್ಚಿಸಬೇಡಿ: ಹಠಾತ್ತನೆ ನಡೆಯುವುದು ಅಥವಾ ವೇಗವಾಗಿ ಜಾಗಿಂಗ್ ಮಾಡುವುದನ್ನು ತಪ್ಪಿಸಿ.

ಒಳಾಂಗಣ ನಡಿಗೆ: ನೀವಿರುವ ಪ್ರದೇಶದಲ್ಲಿ ಮಾಲಿನ್ಯ ಹೆಚ್ಚಿದ್ದರೆ, ಒಳಾಂಗಣ ನಡಿಗೆ ಮಾಡುವುದು ಬಹಳ ಉತ್ತಮ.

ಇದನ್ನೂ ಓದಿ: ದಿನಕ್ಕೆ 10,000 ಹೆಜ್ಜೆ ನಡೆಯುವವರು ಈ ವಿಷಯ ತಿಳಿದುಕೊಳ್ಳಲೇಬೇಕು!

ನಡೆಯುವಾಗ ಈ ಲಕ್ಷಣಗಳು ಕಾಣಿಸಿಕೊಂಡರೆ ಎಂದಿಗೂ ನಿರ್ಲಕ್ಷಿಸಬೇಡಿ:

  • ಉಸಿರಾಟದ ತೊಂದರೆ.
  • ಹಠಾತ್ತನೆ ತೀವ್ರವಾದ ಎದೆ ನೋವು.
  • ಅತಿಯಾಗಿ ಬೆವರು ಬರುವುದು.
  • ತಲೆತಿರುಗುವಿಕೆ ಅಥವಾ ತಲೆ ತಿರುಗುತ್ತಿರುವಂತೆ ಭಾಸವಾಗುವುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನಮ್ಮ ಮೇಲೆ ಕೃಪೆ ತೋರಿ’: ಮಂತ್ರಾಲಯದ ರಾಯರಿಗೆ ವಿಚಿತ್ರ ಪತ್ರ ಬರೆದ ಉದ್ಯೋಗಾಕಾಂಕ್ಷಿಗಳು – Kannada News | Job Seekers Write Unusual Letter to Mantralaya Raghavendra Swamy Seeking Recruitment to Vacant Posts

ಧಾರವಾಡ, ಜನವರಿ 01: ರಾಜ್ಯದಲ್ಲಿ ಹಲವು ವರ್ಷಗಳಿಂದ ಯಾವುದೇ ಸರ್ಕಾರಿ ನೇಮಕಾತಿಗಳು ಆಗಿಲ್ಲ. ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡದಲ್ಲಿ ಇತ್ತೀಚೆಗೆ ಬೃಹತ್​ ಪ್ರತಿಭಟನೆ ಕೂಡ ಮಾಡಲಾಯಿತು. ಆದರೂ ಯಾವುದೇ ಪ್ರಯೋಜವಾಗಿಲ್ಲ. ಹೀಗಾಗಿ ಉದ್ಯೋಗಾಕಾಂಕ್ಷಿಗಳು (Job seekers) ಇದೀಗ ರಾಯರ ಮೊರೆ ಹೋಗಿದ್ದಾರೆ. ನಮ್ಮ ಮೇಲೆ ಕೃಪೆ ತೋರುವಂತೆ ವಿಚಿತ್ರ ಪತ್ರವೊಂದನ್ನು ಬರೆಯುವ ಮೂಲಕ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮೀಜಿ (mantralaya raghavendra swamy)  ಮುಂದೆ ತಮ್ಮ ಬೇಡಿಕೆ ಇಟ್ಟಿದ್ದಾರೆ.

ರಾಯರ ಮೊರೆಹೋದ ಉದ್ಯೋಗಾಕಾಂಕ್ಷಿಗಳು 

ರಾಜ್ಯದಲ್ಲಿ ಆಡಳಿತ ಸುಧಾರಣೆ ಸೇರಿದಂತೆ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ನಿರುದ್ಯೋಗಿ ದೈಹಿಕ ಶಿಕ್ಷಕರ ಸಂಘ ರಾಯರಿಗೆ ಮನವಿ ಪತ್ರ ಸಲ್ಲಿಸಿದೆ. ಸರ್ಕಾರ ಸಂಪೂರ್ಣ ಆಡಳಿತ ಸುಧಾರಣೆಯಲ್ಲಿ ವಿಫಲವಾಗಿದೆ. ಹಲವು ವರ್ಷಗಳಿಂದ ಯಾವುದೇ ನೇಮಕಾತಿ ಆಗಿಲ್ಲ. ಹಲವು ಹೋರಾಟ ಮಾಡಿದರೂ ಸಮಸ್ಯೆ ಬಗೆ ಹರಿದಿಲ್ಲ. ಹೀಗಾಗಿ ಖಾಲಿ ಇರುವ ಎಲ್ಲ ದೈಹಿಕ ಶಿಕ್ಷಕರ ಹುದ್ದೆಗಳನ್ನ ಭರ್ತಿ ಮಾಡಿಸುವಂತೆ ರಾಯರ ಮುಂದೆ ವಿಚಿತ್ರ ಬೇಡಿಕೆ ಇಡಲಾಗಿದೆ.

ರಾಯರಿಗೆ ಬರೆದ ಪತ್ರದಲ್ಲೇನಿದೆ?

ಶ್ರೀ ಗುರು ರಾಘವೇಂದ್ರ ಸ್ವಾಮೀಜಿಗಳು ಭಕ್ತರ ಆರಾಧ್ಯ ದೈವ ಆದ ತಾವು ಕರ್ನಾಟಕ ರಾಜ್ಯದಲ್ಲಿ ಆಡಳಿತಮಟ್ಟ ಎಲ್ಲಿಗೆ ಬಂದು ತಲುಪಿದೆ ತಮಗೆ ತಿಳಿದಿದೆ ಇದನ್ನು ಬಗೆಹರಿಸಿ. ತಾವುಗಳು ರಾಜ್ಯದಲ್ಲಿ ಸುಮಾರು ವರ್ಷದಿಂದ ನೇಮಕಾತಿ ನಡೆದಿಲ್ಲ. ನಿರುದ್ಯೋಗಿಗಳು ಸುಮಾರು ಹೋರಾಟ ಮಾಡಿ ಬೇಸತ್ತು ಹೋಗಿದ್ದೇವೆ. ಇದಕ್ಕೆ ಬೇಗ ಕಡಿವಾಣ ಹಾಕಿ ತಮ್ಮ ದಿವ್ಯ ದೃಷ್ಟಿಯಿಂದ. ನಿರುದ್ಯೋಗ ಸಮಸ್ಯೆ ಹೋಗಲಾಡಿಸಿ ಉದ್ಯೋಗ ಭಾಗ್ಯ ದೊರಕಲಿ ದೇವ ಹಾಗೂ ನಾವು ದೈಹಿಕ ಶಿಕ್ಷಣ ಶಿಕ್ಷಕರು.

ಇದನ್ನೂ ಓದಿ: ಬೆಂಗಳೂರು ಬನಶಂಕರಿ ದೇವಸ್ಥಾನ ಹುಂಡಿ ಎಣಿಕೆ: ‘ನನ್ನ ತಾಯಿ ಕಡೆಯಿಂದ ಬರುವ ಆಸ್ತಿ ನನಗೆ ಬರಲೆಂದು ಕರುಣಿಸು’ ಎಂದು ದೇವಿಗೆ ಪತ್ರ

ನೇಮಕಾತಿ ನಡೆಯದೆ ಸುಮಾರು ದಶಮಾನ ಕಳೆದು ಹೋಗಿವೆ. ಮಕ್ಕಳು, ಆರೋಗ್ಯ ಸಮಸ್ಯೆ ಮತ್ತು ದೈಹಿಕ ಶಿಕ್ಷಣ ಪದವಿ ಪಡೆದು ನಿರುದ್ಯೋಗ ಸಮಸ್ಯೆಯಿಂದ ಸಂಸಾರಗಳು ಬೀದಿಗೆ ಬರುತ್ತಿವೆ. ಕಾರಣ ಕರ್ನಾಟಕ ಸರ್ಕಾರಕ್ಕೆ ಬುದ್ಧಿ ಕಲಿಸಿ, ಬೇಗ ನೇಮಕಾತಿ ಪ್ರಾರಂಭವಾಗಬೇಕೆಂದು ಭಕ್ತಿಪೂರಕ ಕೇಳಿಕೊಳ್ಳುತ್ತಿದ್ದೇವೆ. ಭಕ್ತಿಪೂರಕ ನಮಸ್ಕಾರಗಳೊಂದಿಗೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 6:49 pm, Thu, 1 January 26

Source link

ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್ – Kannada News | Kichcha Sudeep said he will be in weekend episode of Bigg Boss

ಬಿಗ್​​ಬಾಸ್​ ಕನ್ನಡ 12 (Bigg Boss Kannada) ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಬಿಗ್​​ಬಾಸ್ ಶೋ 96 ದಿನಗಳನ್ನು ಪೂರೈಸಿದೆ. ಆದರೆ ಸುದೀಪ್ ಅವರು ಕಳೆದ ವಾರ ಸುದೀಪ್ ಅವರು ವೀಕೆಂಡ್ ಶೋ ನಡೆಸಿಕೊಡಲು ಬಂದಿಲ್ಲ. ‘ಮಾರ್ಕ್’ ಸಿನಿಮಾದ ಬಿಡುಗಡೆ ಮತ್ತು ಪ್ರಚಾರದಲ್ಲಿ ಸುದೀಪ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬೆಂಗಳೂರು, ಮೈಸೂರು ಇನ್ನೂ ಕೆಲವೆಡೆಗೆ ತೆರಳಿ ಅಭಿಮಾನಿಗಳೊಟ್ಟಿಗೆ ‘ಮಾರ್ಕ್’ ಸಿನಿಮಾ ನೋಡುತ್ತಿದ್ದಾರೆ. ಮೈಸೂರಿನಲ್ಲಿ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದ ಸುದೀಪ್ ಅವರು ಬಿಗ್​​ಬಾಸ್​​ ಬಗ್ಗೆ ಸಹ ಮಾತನಾಡಿದ್ದು, ಈ ವೀಕೆಂಡ್ ಎಪಿಸೋಡ್​​ನಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ ಮಾತ್ರವಲ್ಲದೆ ಈ ವಾರ ಏನು ಮಾಡ್ತೀನಿ ನೋಡ್ತಿರಿ ಎಂದು ಕುತೂಹಲ ಸಹ ಕೆರಳಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link