Category Archives: Blog

Your blog category

Daily Devotional: 2026ರಲ್ಲಿ ಎದುರಾಗುವ ಆಕಸ್ಮಿಕ ಕಷ್ಟಗಳಿಂದ ಪಾರಾಗುವ ವಿಧಾನ

ಬೆಂಗಳೂರು, ಜನವರಿ 01: 2026ರಲ್ಲಿ ಗೋಚಾರ ಗ್ರಹಗಳ ಪ್ರಭಾವ, ನಕಾರಾತ್ಮಕ ಶಕ್ತಿಗಳು, ಪಾಪ ಹಾಗೂ ಕರ್ಮಫಲಗಳಿಂದ ಉಂಟಾಗಬಹುದಾದ ಕಷ್ಟಗಳು, ಅನಿರೀಕ್ಷಿತ ಅಪಘಾತಗಳು, ಅನಾರೋಗ್ಯ, ಆರ್ಥಿಕ ನಷ್ಟ ಮತ್ತು ಆಸ್ತಿ ಕಲಹಗಳಂತಹ ಸಮಸ್ಯೆಗಳಿಂದ ಪಾರಾಗಲು ಪ್ರಾಚೀನ ತಂತ್ರವೊಂದನ್ನು ತಿಳಿಸಲಾಗಿದೆ. ವರ್ಷದ ಪ್ರಾರಂಭದಲ್ಲಿಯೇ ಈ ತಂತ್ರವನ್ನು ಅನುಸರಿಸುವುದರಿಂದ ಶುಭ ಫಲಿತಾಂಶಗಳು ದೊರೆಯುತ್ತವೆ.

ಈ ವಿಧಾನವು ಸೂರ್ಯ ಭಗವಾನ್‌ನ ಆರಾಧನೆಯನ್ನು ಒಳಗೊಂಡಿದೆ. ಭಾನುವಾರದ ದಿನ ಸೂರ್ಯೋದಯದ ಸಮಯದಲ್ಲಿ ಸ್ನಾನ ಮಾಡಿ ಶುಚಿರ್ಭೂತರಾಗಿ, 12 ಕರಿಮೆಣಸು, 12 ಬೇವಿನ ಎಲೆಗಳು ಮತ್ತು 12 ಅಕ್ಕಿ ಕಾಳುಗಳನ್ನು ಸಂಗ್ರಹಿಸಿಕೊಳ್ಳಿ. ಇವುಗಳನ್ನು ಚೆನ್ನಾಗಿ ಜಜ್ಜಿ ಅಥವಾ ಕುಟ್ಟಿ ಒಂದು ಸಣ್ಣ ಉಂಡೆಯನ್ನಾಗಿ ಮಾಡಿ, ಅದಕ್ಕೆ ಸ್ವಲ್ಪ ಗಂಗಾಜಲವನ್ನು ಸೇರಿಸಿ. ಈ ಉಂಡೆಯನ್ನು ಕೈಯಲ್ಲಿ ಹಿಡಿದುಕೊಂಡು ಸೂರ್ಯನಿಗೆ ಪ್ರಸಾದ ರೂಪದಲ್ಲಿ ಅರ್ಪಿಸಿ. ನಂತರ ಸೂರ್ಯನಿಗೆ ಅರ್ಘ್ಯವನ್ನು ನೀಡಿ, ಓಂ ನಮೋ ಸೂರ್ಯನಾರಾಯಣಾಯ ನಮಃ ಮಂತ್ರವನ್ನು ಜಪಿಸುತ್ತಾ ಮೂರು ಬಾರಿ ಆತ್ಮಾಪ್ರದಕ್ಷಿಣೆಯನ್ನು ಮಾಡಿ. ಈ ತಂತ್ರವನ್ನು ನಿರಂತರ ನಾಲ್ಕು ದಿನಗಳ ಕಾಲ ಪುನರಾವರ್ತಿಸಿ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

 

Source link

Horoscope Today 02 January: ಇಂದು ಈ ರಾಶಿಯವರ ಎಲ್ಲಾ ಕೆಲಸ ಕಾರ್ಯಗಳಲ್ಲಿ ಯಶಸ್ಸು – Kannada News | Daily Horoscope for January 2nd​ 2025: Dr. Basavaraj Gurujis Predictions for Zodiac Signs

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜನವರಿ 2, ಶುಕ್ರವಾರ ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯಣ, ಪುಷ್ಯಮಾಸ, ಹೇಮಂತ ಋತು, ಶುಕ್ಲಪಕ್ಷದ ಚತುರ್ದಶಿ, ಮೃಗಶಿರಾ ನಕ್ಷತ್ರವಿರುವ ಈ ಶುಭ ದಿನದ ಗ್ರಹಗಳ ಸಂಚಾರವನ್ನು ಆಧರಿಸಿ ಅವರು ಪ್ರತಿಯೊಂದು ರಾಶಿಯ ಮೇಲಿನ ಪ್ರಭಾವಗಳನ್ನು ವಿವರಿಸಿದ್ದಾರೆ.

ಈ ದಿನ ಮೇಷ ರಾಶಿಯವರಿಗೆ ಆರು ಗ್ರಹಗಳ ಶುಭ ಫಲಗಳಿದ್ದು, ಆರ್ಥಿಕ ಸುಧಾರಣೆ, ಹೊಸ ವಾಹನ ಯೋಗ, ಹಾಗೂ ಪೂರ್ವಿಕರ ಆಸ್ತಿ ವಿವಾದ ಇತ್ಯರ್ಥವಾಗಲಿದೆ. ವೃಷಭ ರಾಶಿಯವರಿಗೆ ಆರ್ಥಿಕ ಲಾಭ, ಆರೋಗ್ಯದಲ್ಲಿ ಚೇತರಿಕೆ, ಸಾಲ ಮಂಜೂರಿಯಾಗುವ ಯೋಗವಿದೆ. ಮಿಥುನ ರಾಶಿಯವರಿಗೆ ವೃತ್ತಿಯಲ್ಲಿ ಬದಲಾವಣೆ, ಸಮಸ್ಯೆಗಳಿಗೆ ಪರಿಹಾರ, ಹಾಗೂ ಮಹಿಳೆಯರಿಗೆ ಆಭರಣ ಯೋಗವಿದೆ. ಕಟಕ ರಾಶಿಯವರಿಗೆ ಆಕಸ್ಮಿಕ ಕಾರ್ಯಸಿದ್ಧಿ, ಆರ್ಥಿಕ ಪ್ರಗತಿ, ಹಾಗೂ ಋಣಬಾಧೆ ತೀರಿಸಿಕೊಳ್ಳುವ ಸಾಧ್ಯತೆಗಳಿವೆ. ಪ್ರತಿ ರಾಶಿಯ ಅದೃಷ್ಟ ಬಣ್ಣ, ಅದೃಷ್ಟ ಸಂಖ್ಯೆ ಹಾಗೂ ಜಪಿಸಬೇಕಾದ ಮಂತ್ರಗಳ ಕುರಿತು ಮಾಹಿತಿ ನೀಡಲಾಗಿದ್ದು, ಇದು ದಿನದ ಶುಭ ಫಲಗಳನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಡಾ. ಬಸವರಾಜ ಗುರೂಜಿ ಹಾರೈಸಿದ್ದಾರೆ.

Source link

ರೆಡ್ಡಿಗಳ ಸಂಘರ್ಷಕ್ಕೆ ಗಣಿ ನಾಡು ಉದ್ವಿಗ್ನ, ಕಾಂಗ್ರೆಸ್ ಕಾರ್ಯಕರ್ತ ಸಾವು: ಅಸಲಿಗೆ ಬಳ್ಳಾರಿಯಲ್ಲಿ ಆಗಿದ್ದೇನು? ಇಲ್ಲಿದೆ ವಿವರ – Kannada News | Ballari Clash: Congress Worker Killed in Violent Banner Dispute Between Bharat Reddy and Janardhana Reddy Supporters

ಬಳ್ಳಾರಿಯ ಅವಂಬಾವಿಯಲ್ಲಿ ಬಿಗಿ ಬಂದೋಬಸ್ತ್

ಬಳ್ಳಾರಿ, ಜನವರಿ 2: ಬ್ಯಾನರ್ ಕಟ್ಟುವ ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಕಾಂಗ್ರೆಸ್ (Congress) ಕಾರ್ಯಕರ್ತ ಗುಂಡೇಟಿಗೆ ಬಲಿಯಾದ ದಾರುಣ ಘಟನೆ ಬಳ್ಳಾರಿಯಲ್ಲಿ (Ballari) ಶಾಸಕ ಜನಾರ್ದನ ರೆಡ್ಡಿ (Janardhana Reddy) ಮನೆ ಎದುರು ನಡೆದಿದೆ. ಜನವರಿ 3ರಂದು ವಾಲ್ಮೀಕಿ ಪುತ್ತಳಿ ಅನಾವರಣ ಕಾರ್ಯಕ್ರಮದ ಹಿನ್ನೆಲೆ ಬಳ್ಳಾರಿ ನಗರದಾದ್ಯಂತ ಬ್ಯಾನರ್‌ಗಳನ್ನು ಅಳವಡಿಸಲಾಗುತ್ತಿದೆ. ಅದೇ ರೀತಿ, ಅವಂಬಾವಿಯ ಜನಾರ್ದನ ರೆಡ್ಡಿ ಅವರ ನಿವಾಸದೆದುರು ಬ್ಯಾನರ್ ಅಳವಡಿಸುವುದನ್ನು ಅವರ ಬೆಂಬಲಿಗರು ವಿರೋಧಿಸಿದ್ದಾರೆ. ಈ ವೇಳೆ ಜನಾರ್ದನ ರೆಡ್ಡಿ ಹಾಗೂ ಶಾಸಕಭರತ್‌ ರೆಡ್ಡಿ ಬೆಂಬಲಿಗರ ನಡುವೆ ಭೀಕರ ಸಂಘರ್ಷವೇ ನಡೆದುಹೋಗಿದೆ. ಈ ಸಂಘರ್ಷದ ನಡುವೆ ಅಚಾನಕ್ಕಾಗಿ ಸಿಡಿದ ಗುಂಡಿಗೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತಪಟ್ಟಿದ್ದಾರೆ.

ಕಾಂಗ್ರೆಸ್ಸಿಗರು ಜನಾರ್ದನ ರೆಡ್ಡಿ ಬೆಂಬಲಿಗರ ವಿರುದ್ಧ ಬೊಟ್ಟು ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ಗಲಭೆ ನಿಯಂತ್ರಿಸಲು ಪೊಲೀಸರು ಕೂಡ ಏರ್​ ಫೈಯರ್ ಮಾಡಿದ್ದಾರೆ.

ಅಸಲಿಗೆ ಜನಾರ್ದನ ರೆಡ್ಡಿ ನಿವಾಸದ ಎದುರು ನಡೆದಿದ್ದೇನು?

ಶಾಸಕ ಭರತ್ ರೆಡ್ಡಿ ಬೆಂಬಲಿಗರು ಜನಾರ್ದನ ರೆಡ್ಡಿ ನಿವಾಸದೆದುರು ಬ್ಯಾನರ್ ಕಟ್ಟುತ್ತಿದ್ದಂತೆ ಗಲಾಟೆಯಾಗಿದೆ. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಕಟ್ಟಿದ್ದ ಬ್ಯಾನರ್​ ಅನ್ನು ಬಿಜೆಪಿಗರು ಹರಿದು ಆಕ್ರೋಶ ಹೊರಹಾಕಿದ್ದಾರೆ. ವಿಷಯ ಗೊತ್ತಾದ ಕೂಡಲೇ ಸ್ಥಳಕ್ಕೆ ಬಿಜೆಪಿ ನಾಯಕ ಶ್ರೀರಾಮುಲು ಧಾವಿಸಿದ್ದಾರೆ. ಈ ವೇಳೆ ತಳ್ಳಾಟ ನೂಕಾಟ ಜೋರಾಗಿದೆ. ಗಲಾಟೆ ತೀವ್ರವಾಗುತ್ತಿದ್ದಂತೆ ಶಾಸಕ ಭರತ್ ರೆಡ್ಡಿ ಆಪ್ತ ಸತೀಶ್​ ರೆಡ್ಡಿ ಖಾಸಗಿ ಗನ್​​ ಮ್ಯಾನ್​​ಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಸಂಘರ್ಷ ಜೋರಾಗುತ್ತಿದ್ದಂತೆಯೇ, ಎರಡೂ ಕಡೆಯ ಬೆಂಬಲಿಗರು ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ. ಈ ವಿಚಾರ ಗೊತ್ತಾದ ಕೂಡಲೇ ಶಾಸಕ ನಾರಾ ಭರತ್ ರೆಡ್ಡಿ ಘಟನಾ ಸ್ಥಳಕ್ಕೆ ತೆರಳಲು ಸಿದ್ಧರಾಗಿದ್ದಾರೆ. ಈ ಮಾಹಿತಿ ತಿಳಿದ ಜನಾರ್ದನ ರೆಡ್ಡಿ ಬೆಂಬಲಿಗರು, ಕೈಯಲ್ಲಿ ದೊಣ್ಣೆ ಹಿಡಿದು ನಿಂತಿದ್ದಾರೆ.

ಪರಿಸ್ಥಿತಿ ಕೈ ಮೀರಿ ಹೋಗುತ್ತಿರುವುದನ್ನು ಗಮನಿಸಿದ ಪೊಲೀಸರು ಮೊದಲು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಲು ಯತ್ನಿಸಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದಾಗ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಗಲಭೆಯ ನಡುವೆ ಗುಂಡೊಂದು ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಎಂಬವರಿಗೆ ತಗುಲಿದ್ದು, ಗಾಯಗೊಂಡ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಾಸಕ ಭರತ್ ರೆಡ್ಡಿ ಬೆಂಬಲಿಗ, ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಅಸುನೀಗಿದ್ದಾರೆ.

ನನ್ನ ಹತ್ಯೆಗೆ ಸಂಚು: ಜನಾರ್ದನ ರೆಡ್ಡಿ ಆರೋಪ

ಘಟನೆ ವೇಳೆ ಸಿಡಿದ ಗುಂಡನ್ನು ಶಾಸಕ ಜನಾರ್ದನರೆಡ್ಡಿ ಪ್ರದರ್ಶಿಸಿದ್ದಾರೆ. ಇದು ನನ್ನ ಹತ್ಯೆಗೆ ನಡೆದ ಸಂಚು ಎಂದು ಆರೋಪಿಸಿದ್ದಾರೆ. ಇದಕ್ಕೆ ತಿರುಗೇಟು ಕೊಟ್ಟ ಶಾಸಕ ಭರತ್ ​​ರೆಡ್ಡಿ, ನನ್ನ ಮುಂದೆ ಇಂಥಾ ಚಿಲ್ಲರೆ ರಾಜಕೀಯ ನಡೆಯಲ್ಲ. ಜನಾರ್ದನರೆಡ್ಡಿ ಹತ್ಯೆಗೆ ಸಂಚು ಮಾಡುವ ಅಗತ್ಯ ನನಗಿಲ್ಲ. ಜನಾರ್ದನ ರೆಡ್ಡಿ ಏನು ದೊಡ್ಡ ಪಾಳೆಗಾರನಾ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ನನ್ನನ್ನು ಮುಗಿಸಲೆಂದೇ ಫೈರಿಂಗ್ ಮಾಡಿದ್ದಾರೆ; ಜನಾರ್ದನ ರೆಡ್ಡಿ ಆರೋಪ

ಘಟನೆ ಬಗ್ಗೆ ಗೃಹಸಚಿವ ಡಾ. ಜಿ ಪರಮೇಶ್ವರ್ ಶಾಸಕ ಭರತ್​ ರೆಡ್ಡಿಯಿಂದ ಮಾಹಿತಿ ಪಡೆದು ಕೊಂಡಿದ್ದಾರೆ. ಇನ್ನು ಪರಿಸ್ಥಿತಿ ಸುಧಾರಿಸದ ಹಿನ್ನೆಲೆ ಘಟನಾ ಸ್ಥಳದ 200 ಮೀ. ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಿ ತಹಶೀಲ್ದಾರ್​ ಆದೇಶ ಹೊರಡಿಸಿದ್ದಾರೆ. ಜನಾರ್ದನ ರೆಡ್ಡಿ ಬಂಧಿಸುವಂತೆ ಅವರ ನಿವಾದೆದುದುರೇ ಶಾಸಕ ಭರತ್ ರೆಡ್ಡಿ ಠಿಕಾಣಿ ಹೂಡಿದ್ದರೆ, ಇತ್ತ ಶ್ರೀರಾಮುಲು ರೆಡ್ಡಿ ನಿವಾಸದಲ್ಲೇ ಉಳಿದುಕೊಂಡಿದ್ದಾರೆ.

ಜನಾರ್ದನ ರೆಡ್ಡಿ, ಶ್ರೀರಾಮುಲು ಸೇರಿ 11 ಮಂದಿ ವಿರುದ್ಧ ಎಫ್​ಐಆರ್

ಘಟನೆ ಸಂಬಂಧ ಶಾಸಕ ಜನಾರ್ದನರೆಡ್ಡಿ, ಮಾಜಿ ಸಚಿವ ಶ್ರೀರಾಮುಲು, ಮಾಜಿ ಶಾಸಕ ಸೋಮಶೇಖರ್ ರೆಡ್ಡಿ, ಅಲಿಖಾನ್​​​, ದಮ್ಮೂರ ಶೇಖರ್ ಸೇರಿ 11 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Horoscope Today 02 January: ಇಂದು ಈ ರಾಶಿಯವರ ಮೇಲೆ ಸಕಾರಣದಿಂದ ಒತ್ತಡ ಹೇರುವರು – Kannada News | Horoscope Today in Kannada on 02 January Thursday; Dina Bhavishya Tithi Panchanga Details here

ಮೇಷ ರಾಶಿ:

ಅಪವಾದದ ಸಾಧ್ಯತೆ ಇರುವುದರಿಂದ ಮಾತಿನಲ್ಲಿ ಮೌನ ಪಾಲಿಸಿ. ಕೆಲಸಗಳಲ್ಲಿ ಆಸಕ್ತಿ ಕಡಿಮೆಯಾಗಬಹುದು. ಹಣ ಹಾಗೂ ವಸ್ತು ನಷ್ಟದ ಸೂಚನೆ. ವಾಹನದ ದುರಸ್ತಿ ಕಾರ್ಯಗಳಿಗೆ ಖರ್ಚು. ಮಕ್ಕಳ ವರ್ತನೆಗಳು ನಿಮಗೆ ಕಷ್ಟಕೊಡಬಹುದು. ಸ್ನೇಹಸಂಬಂಧ ಗಟ್ಟಿಮಾಡಿಕೊಳ್ಳಲು ಇಷ್ಟವಾಗುವುದು. ಮಕ್ಕಳ ವಿವಾಹದ ಬಗ್ಗೆ ಒಂದೊಂದೇ ಚಿಂತೆ ಆರಂಭವಾಗುವುದು. ಇಂದಿನ ನಿಮ್ಮ ಅಜಾಗರೂಕತೆಯಿಂದ ಹಣವನ್ನು ಕಳೆದುಕೊಳ್ಳುವಿರಿ. ಅನಿವಾರ್ಯ ಕಾರಣದಿಂದ ನೀವು ಅಧಿಕಾರವನ್ನು ವಹಿಸಿಕೊಳ್ಳಬೇಕಾಗಬಹುದು. ದುಃಸ್ವಪ್ನದಿಂದ ಭಯಗೊಳ್ಳುವಿರಿ. ದೂರಪ್ರಯಾಣದಿಂದ ಆಯಾಸ. ಬೋಧನೆ, ಮಾರ್ಗದರ್ಶನದಲ್ಲಿ ಜನರ ವಿಶ್ವಾಸ ಸಿಗುತ್ತದೆ. ಆದಾಯ ಹಂಚಿಕೆಯಲ್ಲಿ ನ್ಯಾಯ ಮತ್ತು ಸಹನೆ ಅಗತ್ಯ. ಆಸಕ್ತಿಯು ಇಲ್ಲದಿದ್ದರೂ ಒತ್ತಾಯಕ್ಕೆ ಧಾರ್ಮಿಕ ಕಾರ್ಯಗಳಲ್ಲಿ ತೊಡಗುವಿರಿ. ಆಪತ್ತಿನಲ್ಲಿ ಇರುವ ನಿಮಗೆ ಸ್ನೇಹಿತರ ಸಣ್ಣ ಸಹಾಯವೂ ನಿಮಗೆ ಧೈರ್ಯ ತಂದುಕೊಡುವುದು. ಪ್ರೀತಿಯಲ್ಲಿ ನಿಮಗೆ ಸೋಲಾಗಬಹುದು. ಮನೋರಂಜನೆಯಿಂದ ಒತ್ತಡ ಕಡಿಮೆಯಗುವುದು.

ವೃಷಭ ರಾಶಿ:

ಮಾನಸಿಕ ಅಶಾಂತಿ ಹಾಗೂ ಅನಾಸಕ್ತಿ ಇಂದು ಕಾಡಬಹುದು. ವಾಗ್ವಾದ ತಪ್ಪಿಸಿದರೆ ಸಮಸ್ಯೆ ಕಡಿಮೆ. ಹಣ ವ್ಯಯ ಹೆಚ್ಚಾಗುವ ಸೂಚನೆ. ವಸ್ತು ನಷ್ಟವನ್ನು ತಪ್ಪಿಸಲು ಎಚ್ಚರಿಕೆ ಅಗತ್ಯ. ಬಹಳ ಶ್ರಮದಿಂದ ಭೂಮಿಯ ಮಾರಟವನ್ನು ಮಾಡುವಿರಿ. ವೃತ್ತಿಯಿಂದ ನೀವು ವಿದೇಶ ಪ್ರಯಾಣವನ್ನು ಮಾಡಬೇಕಾಗಬಹುದು. ಬಂಧುಗಳು ನಿಮ್ಮ ಬಳಿ ಬಂದು ನೋವನ್ನು ಹೇಳಿಕೊಳ್ಳುವರು. ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗಲು ಮನೆಯಿಂದ ಒಪ್ಪಿಗೆಯನ್ನು ನಿರಾಕರಿಸಬಹುದು. ಇಂದು ನೀವು ಕೋಪವನ್ನು ಮಾಡಿಕೊಳ್ಳಲು ಕಾರಣವೇ ಬೇಕಾಗದು. ನೌಕರರಿಂದ ನಿಮಗೆ ಸರಿಯಾದ ಪ್ರತಿಕ್ರಿಯೆ ಸಿಗದು. ದೂರಪ್ರಯಾಣ ಆಯಾಸ, ಲಘು ವಿಶ್ರಾಂತಿಯಿಂದ ದೂರ. ಬೋಧನೆ, ಸಲಹೆಯಿಂದ ಗೌರವ ಹಾಗೂ ತೃಪ್ತಿಯೂ ಆಗುವುದು. ನಿಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶಗಳು ಸಿಗುವುದು. ಎಲ್ಲ ಸಂದರ್ಭಗಳೂ ಆಸ್ವಾದನೀಯವಾಗಿ ಇರುವಂತೆ ಮಾಡುವಿರಿ. ಇಂದು ನೀವು ಮಕ್ಕಳಲ್ಲಿ ಸ್ಪರ್ಧೆಯ ಮನೋಭಾವವನ್ನು ಹೆಚ್ಚಿಸುವಿರಿ.

ಮಿಥುನ ರಾಶಿ:

ಕೆಲಸದ ಒತ್ತಡದಿಂದ ಮನಸ್ಸು ಬೇಸರಗೊಳ್ಳಬಹುದು. ಮಾತಿನ ತಪ್ಪಿನಿಂದ ಅಪವಾದ ಸಂಭವಿಸಬಹುದು. ಹಣ ಹಾಗೂ ವಸ್ತು ನಷ್ಟದ ಸಾಧ್ಯತೆ ಇದೆ. ದುರಸ್ತಿ ಕಾರ್ಯಗಳು ಅನಿವಾರ್ಯ. ದೂರಪ್ರಯಾಣ ಆಯಾಸ ನೀಡುತ್ತದೆ. ಉತ್ತಮ ವಿಶ್ವಾಸಿಗಳನ್ನು ಕಳೆದುಕೊಳ್ಳುವಿರಿ. ಸಂಗಾತಿಯ ಜೊತೆ ಬಹಳ ಸಂಯೋಷದ ಕ್ಷಣವನ್ನು ಕಳೆಯುವಿರಿ. ಉದ್ಯೋಗದ‌ ಸ್ಥಳದಲ್ಲಿ ಉಂಟಾದ ಪಕ್ಷಪಾತದಿಂದ ದ್ವೇಷಭಾವವು ಉಂಟಾಗಬಹುದು. ಕಲಾವಿದರು ಅವಕಾಶವನ್ನು ಹುಡುಕಿಕೊಂಡು ಹೋಗಬೇಕಾಗಬಹುದು. ಸಾಲದ ವಿಚಾರವಾಗಿ ಕುಟುಂಬದ ಜೊತೆ ಬಿಸಿ ಚರ್ಚೆಯಾಗಬಹುದು. ಆಸ್ತಿಯ ಹಂಚಿಕೆಯಲ್ಲಿ ನಿಮಗೆ ಸಮಾಧಾನ ಇರದು. ಬೋಧನೆ ಅಥವಾ ಮಾರ್ಗದರ್ಶನದಿಂದ ಸಾಮಾಜಿಕ ಮಾನ್ಯತೆ ಸಾಧ್ಯ. ಆದಾಯ ಹಂಚಿಕೆಯಲ್ಲಿ ಜಾಗ್ರತೆ ಮತ್ತು ನ್ಯಾಯ ಮುಖ್ಯ. ಶತ್ರುಗಳು ನಿಮ್ಮ ಸ್ಥಿತಿಯನ್ನು ಕಂಡು ಸಂತೋಷಪಡಬಹುದು. ಯೋಜನೆಯನ್ನು ಯಾರಿಗೂ ಹೇಳದೇ ನಿಮ್ಮಷ್ಟಕ್ಕೇ ಮಾಡಿ. ಸ್ವಯಂ ಕೃತ ಅಪರಾಧವೇ ನಿಮಗೆ ಮುಳುವಾಗಬಹುದು. ಆಕಸ್ಮಿಕವಾಗಿ ಬರುವ ಲಾಭದ ನಿರೀಕ್ಷೆಯಲ್ಲಿ ನೀವು ಇರುವಿರಿ.

ಕರ್ಕಾಟಕ ರಾಶಿ:

ಇಂದು ವಾಗ್ವಾದಗಳಿಂದ ದೂರವಿರುವುದು ಒಳಿತು. ಕೆಲಸಗಳಲ್ಲಿ ಆಸಕ್ತಿ ಕಡಿಮೆಯಾಗಬಹುದು. ಹಣ ವ್ಯವಹಾರದಲ್ಲಿ ನಷ್ಟದ ಸೂಚನೆ. ಹೂಡಿಕೆಯಿಂದ ಸ್ವಲ್ಪ ನಷ್ಟವಾದಂತೆ ಕಾಣಬಹುದು. ಕಛೇರಿಯಲ್ಲಿ ಯಾರದೋ ತಪ್ಪಿಗೆ ನೀವು ತಲೆ ತಗ್ಗಿಸಬೇಕಾಗಬಹುದು. ಪ್ರಾಣಿಗಳ ಮೇಲೆ ಪ್ರೀತಿ ತೋರಿಸುವಿರಿ. ನಿಮ್ಮ ಕಾರ್ಯದಲ್ಲಿ ನಿಮಗೆ ತಪ್ಪು ಕಾಣಿಸುವುದು. ಹೊಗಳಿಕೆಯಿಂದ ನಿಮಗೆ ಸಂಕೋಚ ಉಂಟಾಗಬಹುದು. ನಿಮ್ಮ ಬಯಕೆಗಳಿಗೆ ಇನ್ಮೊಬ್ಬರು ಪ್ರೇರಣೆ ಆಗಬಹುದು. ಪ್ರೀತಿಯ ಕಾರಣಕ್ಕೆ ಮನಸ್ಸಿನ ಚಾಂಚಲ್ಯವನ್ನು ನಿಯಂತ್ರಿಸುವುದು ಕಷ್ಟವಾದೀತು. ನಿಮ್ಮ ಅಮೂಲ್ಯ ವಸ್ತುಗಳ ರಕ್ಷಣೆಯ ಬಗ್ಗೆ ಎಚ್ಚರಿಕೆ ಇರಲಿ. ದೂರಪ್ರಯಾಣ ವಿಳಂಬ ತರಬಹುದು. ದುರಸ್ತಿ ವೆಚ್ಚಗಳು ಎದುರಾಗುತ್ತವೆ. ಬೋಧನೆಯ ಸಲಹೆಗಳಿಂದ ಲಾಭ. ನಿಮ್ಮ ಮಾತು ಇನ್ನೊಬ್ಬರಿಗೆ ನೋವನ್ನು ಕೊಡಬಹುದು. ಕೋಪವನ್ನು ಬಲವಂತವಾಗಿ ತಡೆಯುವಿರಿ. ನಿಮ್ಮ ಒಳ ಮನಸ್ಸು ಹೇಳುವುದನ್ನು ಕೇಳಿಸಿಕೊಂಡರೆ ಒಳ್ಳೆಯದು.

ಸಿಂಹ ರಾಶಿ:

ಅನಾಸಕ್ತಿ ಹಾಗೂ ಒಳಗೊಳ್ಳುವ ಒತ್ತಡ ಕಾಣಿಸಬಹುದು. ಮಾತಿನ ಕಠಿಣತೆ ಅಪವಾದಕ್ಕೆ ಕಾರಣವಾಗಬಹುದು. ಹಣಕಾಸಿನಲ್ಲಿ ಎಚ್ಚರಿಕೆ ವಹಿಸಿ. ವಸ್ತು ನಷ್ಟದ ಸಾಧ್ಯತೆ. ಮನೆಯ ತುರ್ತು ಕಾರ್ಯಗಳನ್ನು ಮಾಡಲು ಆಗದು. ಅನಿವಾರ್ಯವಿದ್ದರೂ ಧನವ್ಯಯದ ಕಾರಣ ಖರೀದಿಯನ್ನು ಮುಂದೂಡುವಿರಿ. ಸಾಮಾಜಿಕ‌ ಗೌರವವನ್ನು ಪಡೆಯಲು ಆಸೆ ಇರುವುದು. ತಾಯಿಯ ಪ್ರೀತಿಯಿಂದ ವಂಚಿತರಾಗಬಹುದು. ವಾಹನದಿಂದ ನಿಮಗೆ ಆದಾಯ ಸಿಗುವುದು. ಉದ್ಯೋಗದ ಕಾರಣಕ್ಕೆ ದೂರದ ಊರಿಗೆ ಹೋಗಬೇಕಾಗಬಹುದು. ಪ್ರಯಾಣದ ಮುಂಜಾಗ್ರತೆಯ ಕ್ರಮವಿರಲಿ‌. ಗೊತ್ತಿಲ್ಲದ ಪ್ರದೇಶಕ್ಕೆ ಒಂಟಿಯಾಗಿ ಹೋಗಬೇಕಾಗಬಹುದು. ದುರಸ್ತಿ ಕಾರ್ಯಗಳಿಗೆ ಸಮಯ, ಹಣ ವ್ಯಯ. ದೂರಪ್ರಯಾಣದಿಂದ ಆಯಾಸ ಅಧಿಕ. ಬೋಧನೆ ಹಾಗೂ ಅನುಭವದ ಹಂಚಿಕೆಯಿಂದ ಗೌರವ ಸಿಗುತ್ತದೆ. ದಾಂಪತ್ಯದಲ್ಲಿನ ಒಡಕು ಎಲ್ಲರಿಗೂ ಗೊತ್ತಾಗುವ ಮೊದಲೇ ಸರಿ ಮಾಡಿಕೊಳ್ಳಿ. ಮಕ್ಕಳಿಲ್ಲದೇ ಬೇಸರವಾಗಲಿದೆ. ಏಕಾಂಗಿಯಾಗಿ ಇರುವುದು ಕಷ್ಟವಾಗುವುದು. ಅಚಾನಕ್ ತಿರುಗಾಟ ಮಾಡಬೇಕಾಗುವುದು.

ಕನ್ಯಾ ರಾಶಿ:

ಇಂದು ಹಣ ಹಾಗೂ ವಸ್ತು ನಷ್ಟದ ಸೂಚನೆ ಇದೆ. ಅನಾವಶ್ಯಕ ವಾಗ್ವಾದ ತಪ್ಪಿಸಿ. ಅಪವಾದದಿಂದ ಮಾನಸಿಕ ಒತ್ತಡ ಸಾಧ್ಯ. ದುರಸ್ತಿ ಕಾರ್ಯಗಳು ಹೆಚ್ಚಾಗಬಹುದು. ದೂರಪ್ರಯಾಣ ನಿರಾಸೆ ತರಬಹುದು. ನಿಮ್ಮ ಅಂದುಕೊಂಡ ಕಾರ್ಯವು ವೇಗವನ್ನು ಪಡೆಯದೇ ಇರಲು ಹಿತಶತ್ರುಗಳೇ ಕಾರಣವಾಗುವರು. ಮೃದುಸ್ವಭಾವದಿಂದ ಉಪಯೋಗವಾಗದು. ನಿಮ್ಮನ್ನು ಎದುರಿಗೆ ಮಾತ್ರ ಹೊಗಳುವರು. ಅಜಾಗರೂಕತೆಯಿಂದ‌ ಬಿದ್ದು ಗಾಯ ಮಾಡಿಕೊಳ್ಳಬಹುದು. ಕೈಗೊಂಡ ಕಾರ್ಯಗಳಲ್ಲಿ ಪೂರ್ಣ ಜಯವು ಪ್ರಾಪ್ತವಾಗುವುದು. ಪ್ರಾಮಾಣಿಕತೆಗೆ ಸಿಕ್ಕ ಪ್ರಶಂಸೆಯಿಂದ ಇನ್ನಷ್ಟು ಉತ್ಸಾಹ ಇರುವುದು. ಬೋಧನೆ ಅಥವಾ ಮಾರ್ಗದರ್ಶನದಲ್ಲಿ ಯಶಸ್ಸು. ಯಾವ ಹಂಚಿಕೆಯಲ್ಲೂ ಸಮನ್ವಯ ಹಾಗೂ ವಿವೇಕ ಅಗತ್ಯ. ನಿಮ್ಮ ಮಾತುಗಳು ಹಾಸ್ಯದಿಂದ ಕೂಡಿರಲಿದೆ. ಹಠದ ಸ್ವಭಾವದಿಂದ ಸುಲಭವಾಗಿ ಸಿಗುವುದನ್ನು ಕಳೆದುಕೊಳ್ಳುವಿರಿ. ವ್ಯಾಪಾರದ ನಷ್ಟವನ್ನು ಹೇಗಾದರೂ ತೂಗಿಸಿಕೊಳ್ಳುವಿರಿ. ಹಣಕಾಸಿನ ವಿಚಾರಕ್ಕೆ ಅಪವಾದ ಬರಬಹುದು.

ತುಲಾ ರಾಶಿ:

ಕೆಲಸದ ಮೇಲಿನ ಗಮನ ಕಡಿಮೆಯಾಗುವ ಸಾಧ್ಯತೆ. ಮಾತಿನ ಸಂಘರ್ಷ ತಪ್ಪಿಸಿ. ಹಣಕಾಸು ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ. ದೂರಪ್ರಯಾಣದಿಂದ ದೇಹಾಯಾಸ. ದುರಸ್ತಿ ಕೆಲಸಗಳು ತಲೆನೋವು ತರಬಹುದು. ಪೂರ್ವಾಪರ ಯೋಚನೆ ಇಲ್ಲದೇ ಒಂದು ಕೆಟ್ಟ ನಿರ್ಧಾರವನ್ನು ತೆಗೆಸುಕೊಳ್ಳುವಿರಿ. ಮಕ್ಕಳ ವಿಷಯದಲ್ಲಿ ನಿರ್ಲಕ್ಷ್ಯ ಬೇಡ. ತಾಯಿ ಆರೋಗ್ಯದಲ್ಲಿ ವ್ಯತ್ಯಾಸವು ಕಾಣಿಸಿಕೊಳ್ಳಬಹುದು. ನಿಮಗೆ ಇಷ್ಟವಾಗದ ಕಾರ್ಯವನ್ನು ಮಾಡಬೇಕಾಗಬಹುದು. ಉದ್ಯೋಗವನ್ನು ನಿರೀಕ್ಷಿತ ಹಂತಕ್ಕೆ ಕೊಂಡೊಯ್ಯಲು ಅಧಿಕ ಶ್ರಮಿಸುವಿರಿ. ವಾತ‌ದೋಷದಿಂದ ನಿಮಗೆ ಕಷ್ಟವಾಗುವುದು. ನಿಮಗೆ ಕೊಟ್ಟ ಜವಾಬ್ದಾರಿಯು ಹಸ್ತಾಂತರ ಆಗಬಹುದು. ಬೋಧನೆ ಹಾಗೂ ಸಲಹೆಗಳಿಂದ ಉತ್ತಮ ಹೆಸರು. ಹಣಕಾಸಿನ ಹಂಚಿಕೆಯಲ್ಲಿ ಲೆಕ್ಕಾಚಾರ ಸ್ಪಷ್ಟವಾಗಿರಲಿ. ಅಧ್ಯಾತ್ಮದಲ್ಲಿ ಮನಸ್ಸು ಹೆಚ್ಚಿರುವುದು. ವಿವಾಹವನ್ನು ತಿರಸ್ಕರಿಸುವಿರಿ. ನಿಮ್ಮನ್ನು ಚುಚ್ಚುವ ಹಾಗೆ ನಿಮ್ಮವರು ಮಾತನಾಡುವರು. ಸಂಗಾತಿಯ ಜೊತೆ ನಿಮಗಾದ ಸುಖ ಹಾಗೂ ದುಃಖವನ್ನು ಹಂಚಿಕೊಳ್ಳುವಿರಿ. ಅಮೂಲ್ಯ ವಸ್ತುಗಳ ಸಂಪಾದನೆ ನಿಮ್ಮ ಕನಸಾಗಲಿದೆ.

ವೃಶ್ಚಿಕ ರಾಶಿ:

ಅಪವಾದ ಅಥವಾ ತಪ್ಪು ಮಾತುಗಳಿಂದ ಬೇಸರ ಸಾಧ್ಯ. ವಾಗ್ವಾದಗಳಿಂದ ದೂರವಿರಿ. ಆರ್ಥಿಕವಾಗಿ ಅಚಾತುರ್ಯದಿಂದ ನಷ್ಟ ಸಂಭವಿಸಬಹುದು. ವಸ್ತುಗಳ ಬಗ್ಗೆ ಎಚ್ಚರಿಕೆ ಅಗತ್ಯ. ದುರಸ್ತಿ ವೆಚ್ಚ ಊಹೆಗಿಂತ ಅತಿಯಾಗಬಹುದು. ಅಪರಿಚಿತರ ಜೊತೆ ಸಲುಗೆ ಬೆಳೆಯಬಹುದು. ಯಾರ ಬಗ್ಗೆಯೂ ಹಗುರಾದ ಮಾತುಗಳನ್ನು ಆಡುವುದು ಬೇಡ. ನಿಮ್ಮದಲ್ಲದ ವಸ್ತುವನ್ನು ಬಳಸಿಕೊಂಡು ಹಾಳು ಮಾಡುವಿರಿ.‌ ಹಳೆಯ ಪ್ರೇಮವು ಬೆಳಕಿಗೆ ಬಂದು ಮುಜುಗರ ಉಂಟಾದೀತು. ಉದ್ಯೋಗದಲ್ಲಿ ಒತ್ತಡ ಸ್ವೀಕರಿಸುವುದು ಅಭ್ಯಾಸವಾಗಿ ಹೋಗುವುದು. ಯಾವುದೇ ಪ್ರಭಾವಕ್ಕೆ ಸಿಕ್ಕಿ ನಿಮ್ಮನ್ನು ಬದಲಿಸಿಕೊಳ್ಳಬೇಕಾಗಬಹುದು. ಬೋಧನೆ, ಮಾರ್ಗದರ್ಶನದಿಂದ ಗೌರವ ಹೆಚ್ಚುತ್ತದೆ. ಆದಾಯ ಹಂಚಿಕೆಯಲ್ಲಿ ನ್ಯಾಯ ಹಾಗೂ ಸಮಾಧಾನ ಇರಲಿ. ಆಸ್ತಿಯನ್ನು ಉಳಿಸಿಕೊಳ್ಳುವುದೇ ತಲೆನೋವಾಗಬಹುದು. ಮನೆಯಿಂದ ದೂರವಿದ್ದವರು ಹತ್ತಿರವಾಗಬೇಕು ಎನಿಸಬಹುದು. ಅಧಿಕಾರಿಗಳು ನಿಮಗೆ ತೊಂದರೆ ಕೊಡಬಹುದು. ಯಾರನ್ನೋ ಹಿಮ್ಮೆಟ್ಟಿಸುವ ಆಸ್ತೆಯಿಂದ ಕೆಲಸ ಮಾಡುವಿರಿ.

ಧನು ರಾಶಿ:

ಇಂದು ಮನಸ್ಸಿಗೆ ಅಶಾಂತಿ. ಕೆಲಸಗಳಲ್ಲಿ ಆಸಕ್ತಿ ಕಡಿಮೆಯಾಗಬಹುದು. ದೂರಪ್ರಯಾಣದಿಂದ ಲಾಭಕ್ಕಿಂತ ತೊಂದರೆ. ವಸ್ತು ಅಥವಾ ಹಣ ನಷ್ಟದ ಭೀತಿ ಇದೆ. ದುರಸ್ತಿ ಕಾರ್ಯಗಳಿಗೆ ಹಣ ಖರ್ಚಾಗಬಹುದು. ವೃತ್ತಿಯಲ್ಲಿ ನೀವು ತುಂಬಾ ನಿಧಾನದಿಂದ‌ ಕೆಲಸ ಮಾಡುವಿರಿ. ದೂರ ಬಂಧುಗಳ‌ ಭೇಟಿಯಿಂದ ವಿವಾಹ ನಿಶ್ಚಯವಾಗಬಹುದುದು. ಪ್ರೇಮವು ಹೊಸ ತಿರುವನ್ನು ಪಡೆಯಬಹುದು. ಮನಸ್ಸು ಕೆಡಿಸಿಕೊಂಡು ಏನೂ ಮಾಡಲಾಗದು.‌ ಶಾಂತವಾಗಿ, ಸಮಾಧಾನ ಚಿತ್ತದಿಂದ ಮುಂದುವರಿಯಿರಿ. ವಸ್ತುಗಳನ್ನು ಕಳೆದುಹೋಗಿದ್ದು ವಿಳಂಬವಾಗಿ ಬೆಳಕಿಗೆ ಬಂದೀತು. ಹಿರಿಯ ಮಾತನ್ನು ಅಸಡ್ಡೆ ಮಾಡುವಿರಿ. ಬೋಧನೆ ಅಥವಾ ಅನುಭವ ಹಂಚಿಕೆಯಿಂದ ಗೌರವ. ಆಸ್ತಿಯ ಹಂಚಿಕೆಯಲ್ಲಿ ಕುಟುಂಬದ ಸಲಹೆ ಉಪಯುಕ್ತ. ಭವಿಷ್ಯದ ಅನೇಕ‌ ದ್ವಂದ್ವಗಳು ಇರಬಹುದು. ಸಂಗಾತಿಯ ಜೊತೆ ಮುನಿಸು ಕಡಿಮೆ ಮಾಡಿಕೊಳ್ಳಿ. ಪ್ರೇಮಕ್ಕಾಗಿ ಹೆಚ್ಚು ಖರ್ಚನ್ನು ಮಾಡಬೇಕಾದೀತು. ಹಿತಶತ್ರುಗಳ ಬಗ್ಗೆ ನಿಮ್ಮ ಊಹೆಯು ಸುಳ್ಳಾಗಬಹುದು.

ಮಕರ ರಾಶಿ:

ಮಾನಸಿಕ ಚಂಚಲತೆ ಹಾಗೂ ಅನಾಸಕ್ತಿ ಕಾಣಿಸಬಹುದು. ವಾಗ್ವಾದ ತಪ್ಪಿಸಿದರೆ ನೆಮ್ಮದಿ. ಹಣ ವ್ಯವಹಾರದಲ್ಲಿ ನಷ್ಟದ ಸೂಚನೆ ಇರುವುದರಿಂದ ಜಾಗೃತಿ ಅಗತ್ಯ. ದುರಸ್ತಿ ವೆಚ್ಚಗಳು ಹೆಚ್ಚಾಗಬಹುದು. ಕಛೇರಿಯಲ್ಲಿ ನಿಮಗೆ ತಪ್ಪಿತಸ್ಥ ಭಾವವು ಬರಬಹುದು. ‌ಸರ್ಕಾರಿ ಕೆಲಸಕ್ಕಾಗಿ ಹಣವನ್ನು ಕೊಡುವಿರಿ. ಯಾರಿಗೂ ಎತ್ತರದ ದನಿಯನ್ನು ಮಾಡುವುದು ಬೇಡ. ನಿಮ್ಮ ಬಗ್ಗೆ ತಪ್ಪು ಕಲ್ಪನೆಯು ಬರಬಹುದು. ಅನಾರೋಗ್ಯವನ್ನು ಬಹಳವಾಗಿ ನಿರ್ಲಕ್ಷಿಸುವಿರಿ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕಷ್ಟವಾದೀತು. ಆದರೂ ಮಾತಿಗೆ ತಪ್ಪಲಾರಿರಿ.‌ ಹಣದಲ್ಲಿ ಮೋಸವಾಗಬಹುದು. ಉನ್ನತ ಹುದ್ದೆಗೆ ಹೋಗಲು ಅವಕಾಶವಿದ್ದರೂ ನಿಮಗೆ ನಾನಾ ಕಾರಣಗಳಿಂದ ಬೇಡವೆನಿಸುವುದು. ದೂರಪ್ರಯಾಣದಿಂದ ಆಯಾಸ. ಬೋಧನೆ, ಸಲಹೆಗಳಿಂದ ಜನರ ಒಪ್ಪಿಗೆ ಸಿಗುತ್ತದೆ. ಲಾಭದ ಹಂಚಿಕೆಯಲ್ಲಿ ಸಮತೋಲನ ಕಾಯ್ದುಕೊಳ್ಳಿ. ಪ್ರಾಮಾಣಿಕತೆಯಿಂದ‌ ನಿಮಗೇ ಕಷ್ಟವಾಗುವುದು. ಶತ್ರುಗಳನ್ನು ಸೋಲಿಸುವುದಕ್ಕಿಂತ ಶತ್ರುಗಳೇ ಇಲ್ಲದಂತೆ ಮಾಡಿಕೊಳ್ಳುವಿರಿ.

ಕುಂಭ ರಾಶಿ:

ಮಾತಿನ ತಪ್ಪಿನಿಂದ ಅಪವಾದ ಸಂಭವಿಸಬಹುದು. ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ. ವಸ್ತುಗಳ ಸಂರಕ್ಷಣೆಗೆ ಗಮನ ಕೊಡಿ. ದುರಸ್ತಿ ಕೆಲಸಗಳು ವಿಳಂಬ ತರಬಹುದು. ದೂರಪ್ರಯಾಣ ಅನಿವಾರ್ಯವಾದರೂ ಲಾಭ ಕಡಿಮೆ. ಬೇಸರವನ್ನು ಯಾರ ಬಳಿಯಾದರೂ ಹೇಳಿಕೊಳ್ಳಬೇಕೆನಿಸದು. ಏನನ್ನಾದರೂ ಬಳಸುವ ಮೊದಲು ಪರೀಕ್ಷಿಸಿಕೊಳ್ಳಿ. ಮಕ್ಕಳಲ್ಲಿ ಬದಲಾವಣೆಯನ್ನು ನೀವು ಕಾಣಬಹುದು. ಮೃದುವಾದ ಮಾತನ್ನು ನೀವು ಅಭ್ಯಾಸ ಮಾಡಿಕೊಳ್ಳಬೇಕಾದೀತು. ನಿಮ್ಮ‌ ಕಾರ್ಯದಲ್ಲಿ ಮಗ್ನರಾಗಿ ಎಲ್ಲರನ್ನೂ ಮರೆಯುವಿರಿ. ಬಂಧುಗಳ ಜೊತೆ ದೂರ ಪ್ರಯಾಣವನ್ನು ಮಾಡಲಿದ್ದೀರಿ. ಬೋಧನೆ ಅಥವಾ ಮಾರ್ಗದರ್ಶನ ಕಾರ್ಯದಲ್ಲಿ ಮಾನ್ಯತೆ ದೊರೆಯುತ್ತದೆ. ಆದಾಯ ಹಂಚಿಕೆಯಲ್ಲಿ ಪಾರದರ್ಶಕತೆ ಮುಖ್ಯ. ಕೆಲವು ಸಂಬಂಧಗಳು‌ ಮತ್ತಷ್ಟು ಹತ್ತಿರವಾಗಬಹುದು. ಕುಲಕ್ಕೆ ಯೋಗ್ಯವಾದ ಕಾರ್ಯವನ್ನು ಮಾಡಿದ್ದಕ್ಕೆ ಪ್ರಶಂಸೆಯು ಸಿಗುವುದು. ವಿದ್ಯಾಭ್ಯಾಸಕ್ಕೆ ಪ್ರೇರಣೆ ಸಿಗಬಹುದು. ಆಪ್ತರೆಂದು ಮಾತಿನಲ್ಲಿ ಹಿಡಿತವಿಲ್ಲದೇ ಏನನ್ನಾದರೂ ಹೇಳುವಿರಿ.

ಮೀನ ರಾಶಿ:

ಇಂದು ವಾಗ್ವಾದಗಳಿಂದ ದೂರವಿರುವುದು ಒಳಿತು. ಕೆಲಸಗಳಲ್ಲಿ ಅನಾಸಕ್ತಿ ಕಂಡರೂ ಜವಾಬ್ದಾರಿ ತಪ್ಪಿಸಬೇಡಿ. ದೂರಪ್ರಯಾಣ ಆಯಾಸ ನೀಡಬಹುದು. ವಸ್ತು ಅಥವಾ ಹಣ ನಷ್ಟದ ಸಾಧ್ಯತೆ ಇದೆ. ಸಹೋದರರ ಜೊತೆ ಆಪ್ತ ಸಮಾಲೋಚನೆ ಮಾಡುವಿರಿ. ಸಾಮಾಜಿಕ ಕೆಲಸದಲ್ಲಿ ಇರುವಷ್ಟು ಶ್ರದ್ಧೆ ಮನೆಯ ಕೆಲಸದಲ್ಲಿ ಬರದೇ ಇರಬಹುದು.‌ ಕೆಲವನ್ನು ಮರೆತು ಮುಂದೆ ಸಾಗುವುದು ನಿಮಗೆ ಉತ್ತಮ. ನಿಮ್ಮ‌ ಬಳಿಯ‌ ಹಣವನ್ನು ಕೇಳಿಕೊಂಡು ಬರಬಹುದು. ಹೊಸ ಉದ್ಯೋಗಕ್ಕೆ ವಿವರಗಳನ್ನು ಕೇಳಿ ಪಡೆಯುವಿರಿ. ನಿಮ್ಮ ಮಕ್ಕಳಿಗೆ ಬೇಕಾದ ವಸ್ತುಗಳನ್ನು ಕೊಡಿಸಿ ಸಂತೋಷಿಸುವಿರಿ. ದುರಸ್ತಿ ಸಂಬಂಧಿತ ವೆಚ್ಚಗಳು ಎದುರಾಗಬಹುದು. ಬೋಧನೆ, ಸಲಹೆಗಳಿಂದ ಗೌರವ ಸಿಗುತ್ತದೆ. ಆದಾಯ ಹಂಚಿಕೆಯಲ್ಲಿ ಆತುರ ಬೇಡ, ವಿವೇಕದಿಂದ ನಿರ್ಧಾರ ಮಾಡಿ. ಕೆಲವರ ನಂಬಿಕಗೆ ಘಾಸಿಯನ್ನು ಉಂಟುಮಾಡುವಿರಿ. ಗೃಹ ಬಳಕೆಯ ವಸ್ತುಗಳು ಹೆಚ್ಚು ಮಾರಾಟವಾಗುವುವು. ಭವಿಷ್ಯದ ನಾಳೆಯ ಕುರಿತು ಅತಿಯಾದ ಯೋಚನೆ ಬೇಕಾಗಿಲ್ಲ.‌ ಖುಷಿಯಿಂದ ಸ್ವೀಕರಿಸಿ ಎಲ್ಲವನ್ನೂ.

ಜನವರಿ 02​​ 2026ರ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಧನು, ಮಹಾನಕ್ಷತ್ರ : ಶ್ರವಣ, ವಾರ : ಶುಕ್ರ, ಪಕ್ಷ : ಶುಕ್ಲ, ತಿಥಿ : ತ್ರಯೋದಶೀ ನಿತ್ಯನಕ್ಷತ್ರ : ರೋಹಿಣೀ ಯೋಗ : ವಿಷ್ಕಂಭ, ಕರಣ : ತೈತಿಲ, ಸೂರ್ಯೋದಯ – 06 – 50 am, ಸೂರ್ಯಾಸ್ತ – 06 – 06 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 11:04 – 12:28, ಯಮಗಂಡ ಕಾಲ 15:17 – 16:42, ಗುಳಿಕ ಕಾಲ 15:39 – 09:39

-ಲೋಹಿತ ಹೆಬ್ಬಾರ್ – 8762924271 (what’s app only)

Source link

ಬಳ್ಳಾರಿಯಲ್ಲಿ ಬ್ಯಾನರ್​ ಗಲಾಟೆ: ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್; ಕಾಂಗ್ರೆಸ್​​ ಕಾರ್ಯಕರ್ತ ಸಾವು – Kannada News | Ballari Banner Row Turns Violent: Congress Activist Shot Dead Amid Clashes infront Janardhan Reddy House

ಬಳ್ಳಾರಿ, ಜನವರಿ 01: ನಗರದಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಗಲಾಟೆ ನಡೆದಿದೆ. ಈ ವೇಳೆ ಶಾಸಕ ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್ ನಡೆದಿದೆ. ಈ ವೇಳೆ ಕಾಂಗ್ರೆಸ್​ ಕಾರ್ಯಕರ್ತ ಬಲಿ ಆಗಿದ್ದಾರೆ. ಫೈರಿಂಗ್​​ನಲ್ಲಿ ಕಾರ್ಯಕರ್ತ ರಾಜಶೇಖರ್ ಸಾವನ್ನಪ್ಪಿದ್ದಾರೆ.​​ ಸದ್ಯ  ರಾಜಶೇಖರ್ ಮೃತದೇಹವನ್ನು ಬಳ್ಳಾರಿ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಘಟನೆ ಕುರಿತು ಗೃಹಸಚಿವ ಪರಮೇಶ್ವರ್​​​ ಶಾಸಕ ನಾರಾ ಭರತ್ ರೆಡ್ಡಿ ಮತ್ತು ಪೊಲೀಸ್​ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ನನ್ನನ್ನು ಮುಗಿಸಲೆಂದೇ ಫೈರಿಂಗ್ ಮಾಡಿದ್ದಾರೆ; ಜನಾರ್ದನ ರೆಡ್ಡಿ ಆರೋಪ – Kannada News | Bellary MLA Janardhan Reddy reaction after Firing in front of his House

ಬಳ್ಳಾರಿ, ಜನವರಿ 1: ಬ್ಯಾನರ್ ಕಟ್ಟುವ ವಿಚಾರಕ್ಕೆ ಬಳ್ಳಾರಿಯಲ್ಲಿ 2 ಗುಂಪುಗಳ ನಡುವೆ ಗಲಾಟೆ ನಡೆದಿದೆ. ಶಾಸಕ ಜನಾರ್ದನ ರೆಡ್ಡಿ (Janardhan Reddy) ಮನೆ ಮುಂದೆ ಘಟನೆ ನಡೆದಿದ್ದು, ಈ ಬಗ್ಗೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ. ಬಳ್ಳಾರಿ‌ ನಗರದ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ನಾರಾ ಭರತ್ ರೆಡ್ಡಿಯ ತಂದೆ ಸೂರ್ಯನಾರಾಯಣ ರೆಡ್ಡಿ ಈ ದಾಳಿ ಮಾಡಿಸಿದ್ದಾರೆ. ಭರತ್ ​​ರೆಡ್ಡಿ ಅಪ್ತ ಸತೀಶ್ ರೆಡ್ಡಿಯಿಂದ ನನ್ನ ಹತ್ಯೆಗೆ ಸಂಚು ರೂಪಿಸಲಾಗಿದೆ. ನನ್ನನ್ನು ಫಿನಿಶ್ ಮಾಡಲೆಂದೇ ಈ ದಾಳಿ ನಡೆಸಿದ್ದಾರೆ. ಬ್ಯಾನರ್ ಗಲಾಟೆ ನೆಪದಲ್ಲಿ ನಮ್ಮ ಮನೆ ಬಳಿ ಗುಂಡಿನ ದಾಳಿ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.

ಗಂಗಾವತಿಯಿಂದ ಕಾರಿನಲ್ಲಿ ಬಂದು ಇಳಿಯುತ್ತಿದ್ದಂತೆ ಸತೀಶ್ ​ರೆಡ್ಡಿಯ ಗನ್​ಮ್ಯಾನ್​ಗಳು ಗುಂಡಿನ‌ ದಾಳಿ ನಡೆಸಿದರು. ಗನ್​ಮ್ಯಾನ್​ಗಳು 4 ಸುತ್ತು ಗುಂಡು ಹಾರಿಸಿದ್ದಾರೆ ಎಂದ ಜನಾರ್ದನ ರೆಡ್ಡಿ ಫೈರ್ ಮಾಡಿದ ಬುಲೆಟ್ ಪ್ರದರ್ಶಿಸಿದ್ದಾರೆ. ವಾಲ್ಮೀಕಿ ಪುತ್ಥಳಿ ಪ್ರತಿಷ್ಠಾಪನೆ ಹೆಸರಲ್ಲಿ ಬೆಂಕಿ ಹಚ್ಚುವ ಕೆಲಸವಾಗುತ್ತಿದೆ. ಕೊಲೆಗಡುಕರನ್ನು ಹಿಂದಿಟ್ಟುಕೊಂಡು ದಬ್ಬಾಳಿಕೆ ನಡೆಸ್ತಿದ್ದಾರೆ ಎಂದು ಶಾಸಕ ನಾರಾ ಭರತ್ ರೆಡ್ಡಿ ವಿರುದ್ಧ ಜನಾರ್ದನ ರೆಡ್ಡಿ ಕಿಡಿ ಕಾರಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಲ್ಲಿದ್ರೆ ಆನಂದ, ಮನೆಗೋದ್ರೆ ಗೋವಿಂದ: ಗಿಲ್ಲಿಯ ಬಿಗ್​ಬಾಸ್ ರ್ಯಾಪ್ ಸಾಂಗ್ – Kannada News | Bigg Boss Kannada house welcomes new year in style

ಗಿಲ್ಲಿ ನಟ (Gilli Nata) ಒಳ್ಳೆಯ ಆಶು ಕವಿ. ನಿಂತಲ್ಲೇ ಪದಗಳನ್ನು ಜೋಡಿಸಿ ಹಾಸ್ಯ ಕವಿತೆ ಕಟ್ಟಿಬಿಡುತ್ತಾರೆ. ಈ ಹಿಂದೆಯೂ ಸಹ ಬಿಗ್​​ಬಾಸ್ ಮನೆಯಲ್ಲಿ ತಮ್ಮ ಸ್ಪಾಂಟೇನಿಯಸ್ ಹಾಸ್ಯ, ಆಶು ಕವಿತೆಯಿಂದ ಗಮನ ಸೆಳೆದಿದ್ದಾರೆ. ವೀಕೆಂಡ್​​ನಲ್ಲಿ ಸುದೀಪ್ ಅವರು ಕೇಳಿದ ಪ್ರಶ್ನೆಗೆ ಮನೆ ಸದಸ್ಯರ ಬಗ್ಗೆ ‘ಡಮಾಲ್ ಡಿಮಿಲ್ ಢಕ್ಕ’ ಎಂದು ಅಲ್ಲಿಯೇ ಹಾಡು ಕಟ್ಟಿ ಹಾಡಿದ್ದರು. ಗಿಲ್ಲಿಯ ಈ ಪ್ರತಿಭೆ ಸುದೀಪ್ ಅವರಿಗೂ ಇಷ್ಟವಾಗಿತ್ತು. ಇದೀಗ ಬಿಗ್​​ಬಾಸ್ ಮನೆಯಲ್ಲಿ ಹೊಸ ವರ್ಷಾಚರಣೆ ಆಚರಣೆ ಮಾಡಲಾಗಿದ್ದು, ಹೊಸ ವರ್ಷಕ್ಕೆ ಗಿಲ್ಲಿ ಅವರು ಬಿಗ್​​ಬಾಸ್ ಮನೆ ಬಗ್ಗೆಯೇ ರ್ಯಾಪ್ ಹಾಡೊಂದನ್ನು ಹಾಡಿದ್ದಾರೆ.

‘ಇಲ್ಲಿದ್ರೆ ಆನಂದ್, ಮನೆಗೋದ್ರೆ ಗೋವಿಂದ’ ಎಂಬ ರ್ಯಾಪ್ ಹಾಡನ್ನು ಗಿಲ್ಲಿ ಹಾಡಿ ರಂಜಿಸಿದರು. ಅಶ್ವಿನಿ, ಧ್ರುವಂತ್ ಸೇರಿದಂತೆ ಮನೆ ಮಂದಿ ಬಗ್ಗೆ ಧನಾತ್ಮಕ ಅಂಶಗಳನ್ನು ಗಿಲ್ಲಿ ತಮ್ಮ ಹಾಡಿನಲ್ಲಿ ಸೇರಿಸಿದ್ದರು. ಧ್ರುವಂತ್ ಅವರಿಗೆ ಭಕ್ತಿಯೇ ಶಕ್ತಿ ಎಂದು, ಅಶ್ವಿನಿ ಅವರ ಅಡುಗೆ ಸೂಪರ್ ಎಂದು, ರಘು ಅವರಿಗೆ ಮಗುವಿನ ಮನಸ್ಸೆಂದು, ರಾಶಿಕಾ ಬಹಳ ಹಾಟ್ ಎಂದು ಹೀಗೆ ಒಬ್ಬೊಬ್ಬರ ಬಗ್ಗೆ ಒಂದೊಂದು ಅಂಶಗಳನ್ನು ಹಾಡಿನಲ್ಲಿ ಸೇರಿಸಿದ್ದರು ಗಿಲ್ಲಿ.

ಇದನ್ನೂ ಓದಿ:ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆ: ಕ್ಯಾಪ್ಟನ್ ಗಿಲ್ಲಿ ನಟ ಯಾರ ಪರ?

ಅಸಲಿಗೆ ಎಲ್ಲರ ಬಗ್ಗೆ ತಮಾಷೆ ಹಾಡು ಬರೆಯಲು ಗಿಲ್ಲಿ ಮುಂದಾಗಿದ್ದರು. ಆದರೆ ಧ್ರುವಂತ್, ಹಾಗೆ ಹೀಗಳೆದು ಬರೆಯುವಂತಿದ್ದರೆ ನನ್ನ ಹೆಸರು ತೆಗೆದುಬಿಡು ಎಂದರು. ಇದೇ ವಿಷಯಕ್ಕೆ ಗಿಲ್ಲಿ ಮತ್ತು ಧ್ರುವಂತ್ ನಡುವೆ ಜಗಳವೂ ನಡೆದು ಹೋಯ್ತು, ಗಿಲ್ಲಿ ತಮ್ಮನ್ನು ತಾವು ಮೊಟ್ಟೆ ಕಳ್ಳನೆಂದು ಸಹ ಬರೆದುಕೊಂಡಿದ್ದರು. ಆದರೆ ಧ್ರುವಂತ್​​ಗೆ ತಮಾಷೆಯನ್ನು ಸಹಿಸಿಕೊಳ್ಳಲಾಗಲಿಲ್ಲ, ಕೊನೆಗೆ ರಘು ಮತ್ತು ಧನುಶ್ ಒತ್ತಾಯದ ಮೇರೆಗೆ ಹಾಡಿನ ಸ್ವರೂಪವನ್ನೇ ಬದಲಾಯಿಸಿದರು ಗಿಲ್ಲಿ.

ಬಿಗ್​​ಬಾಸ್ ಮನೆಯಲ್ಲಿ ಹೊಸ ವರ್ಷಾಚರಣೆ ಸಖತ್ ಆಗಿತ್ತು. ಗಿಲ್ಲಿಯ ರ್ಯಾಪ್ ಹಾಡಿನ ಬಳಿಕ ಮನೆಯ ಮಹಿಳಾ ಸದಸ್ಯರೆಲ್ಲ ಸೇರಿಕೊಂಡು ಬಿಗ್​ಬಾಸ್ ಥೀಮ್ ಹಾಡಿಗೆ ಡ್ಯಾನ್ಸ್ ಮಾಡಿ ರಂಜಿಸಿದರು. ಬಳಿಕ ಮನೆಯ ಪುರುಷ ಸದಸ್ಯರೆಲ್ಲ ಮಹಿಳೆಯರು ಧರಿಸುವ ಹೈ ಹೀಲ್ಸ್ ಧರಿಸಿ ರ್ಯಾಂಪ್ ವಾಕ್ ಮಾಡಿದರು. ಇದು ಮಜವಾಗಿತ್ತು. ಬಿಗ್​​ಬಾಸ್, ಹೊಸ ವರ್ಷದ ಪ್ರಯುಕ್ತ ಮನೆಯ ಸದಸ್ಯರಿಗೆಲ್ಲ ರುಚಿಯಾದ ಊಟ ಕಳಿಸಿದ್ದರು. ಊಟವೆಲ್ಲ ಆದ ಮೇಲೆ ಪಟಾಕಿಗಳನ್ನು ಹೊಡೆದು ಮನೆ ಸದಸ್ಯರು ಸಂಭ್ರಮಿಸಿದರು. ಬಳಿಕ ಕೆಲವು ಹಾಡುಗಳನ್ನು ಹಾಕಿ ಪಾರ್ಟಿ ರೀತಿಯ ವಾತಾವರಣವನ್ನು ಅನ್ನು ಬಿಗ್​​ಬಾಸ್ ಮನೆಯಲ್ಲೇ ಸೃಷ್ಟಿಸಲಾಯ್ತು. ಸ್ಪರ್ಧಿಗಳೆಲ್ಲ ಹಾಡುತ್ತಾ, ಕುಣಿಯುತ್ತಾ ಹೊಸ ವರ್ಷವನ್ನು ಸ್ವಾಗತಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿಂದ ಕನ್ಯಾಕುಮಾರಿಗೆ 702 ಕಿ.ಮೀ ಸೈಕಲ್ ತುಳಿದ ಶಾಸಕ ಸುರೇಶ್ ಕುಮಾರ್; ಮೋದಿಯಿಂದ ಭಾರೀ ಮೆಚ್ಚುಗೆ – Kannada News | PM Modi lauds Karnataka BJP MLA Suresh Kumars 702 km cycle ride from Bengaluru to Kanniyakumari

ಬೆಂಗಳೂರು, ಜನವರಿ 1: ಬೆಂಗಳೂರಿನಿಂದ ಕನ್ಯಾಕುಮಾರಿಯವರೆಗೆ 702 ಕಿ.ಮೀ ಸೈಕಲ್ ಸವಾರಿ ಮಾಡಿದ ಬಿಜೆಪಿ ಶಾಸಕ ಸುರೇಶ್ ಕುಮಾರ್ (Suresh Kumar) ಅವರನ್ನು ಪ್ರಧಾನಿ ಮೋದಿ (PM Modi) ಶ್ಲಾಘಿಸಿದ್ದಾರೆ. “ಬೆಂಗಳೂರಿನಿಂದ ಕನ್ಯಾಕುಮಾರಿಯವರೆಗೆ ಸೈಕಲ್ ಸವಾರಿ ಕೈಗೊಂಡ ಎಸ್. ಸುರೇಶ್ ಕುಮಾರ್ ಅವರ ಸಾಧನೆ ಶ್ಲಾಘನೀಯ ಮತ್ತು ಸ್ಫೂರ್ತಿದಾಯಕವಾಗಿದೆ. ಆರೋಗ್ಯದ ಸಮಸ್ಯೆಗಳನ್ನು ಮೆಟ್ಟಿ ನಿಂತು ಅವರು ಈ ಸಾಧನೆ ಮಾಡಿರುವುದು ಅವರ ದೃಢ ನಿರ್ಧಾರ ಮತ್ತು ಅಚಲ ಮನೋಭಾವವನ್ನು ಎತ್ತಿ ತೋರಿಸುತ್ತದೆ. ಇದು ಫಿಟ್ನೆಸ್ ಕುರಿತು ಪ್ರಮುಖ ಸಂದೇಶವನ್ನೂ ನೀಡುತ್ತದೆ. ಅವರೊಂದಿಗೆ ಮಾತನಾಡಿ, ಅವರ ಈ ಪ್ರಯತ್ನಕ್ಕೆ ಅಭಿನಂದನೆ ಸಲ್ಲಿಸಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಎಕ್ಸ್​​ನಲ್ಲಿ ಪೋಸ್ಟ್ ಮಾಡಿದ್ದಾರೆ.

70 ವರ್ಷದ ರಾಜಾಜಿನಗರದ ಶಾಸಕ ಸುರೇಶ್ ಕುಮಾರ್ ಇತ್ತೀಚೆಗೆ ತಿಂಗಳುಗಟ್ಟಲೆ ಅನಾರೋಗ್ಯಕ್ಕೆ ಒಳಗಾಗಿದ್ದರು. ಅಪರೂಪದ ನರವೈಜ್ಞಾನಿಕ ಕಾಯಿಲೆಯಿಂದ ಚೇತರಿಸಿಕೊಂಡಿದ್ದ ಅವರು ವಿಶ್ರಾಂತಿಯಲ್ಲಿದ್ದರು. ಆದರೂ 5 ದಿನಗಳ ಕಾಲ ಈ ಸವಾಲಿನ 702 ಕಿ.ಮೀ ಪ್ರಯಾಣವನ್ನು ಸೈಕಲ್​ನಲ್ಲೇ ಪೂರ್ಣಗೊಳಿಸಿದ್ದಾರೆ.

ಇದನ್ನೂ ಓದಿ: New Year 2026: ಹೊಸ ವರ್ಷದ ಶುಭಾಶಯ ತಿಳಿಸಿ, ಶಾಂತಿ, ಆರೋಗ್ಯ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದ ಪ್ರಧಾನಿ ಮೋದಿ

ರಾಜಾಜಿನಗರದ ಬಿಜೆಪಿ ಶಾಸಕ ಸುರೇಶ್ ಕುಮಾರ್, ಪ್ರಧಾನಿ ಮೋದಿಯವರೇ ಕರೆ ಮಾಡಿ ಅಭಿನಂದಿಸಿದ್ದಕ್ಕೆ ತಮ್ಮ ಸಂತೋಷ ವ್ಯಕ್ತಪಡಿಸಿದ್ದಾರೆ. “ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದ ನಾನು 51 ವರ್ಷಗಳ ನಂತರ ನನ್ನ ಸೈಕ್ಲಿಂಗ್ ಸ್ನೇಹಿತರೊಂದಿಗೆ ಬೆಂಗಳೂರಿನಿಂದ ಕನ್ಯಾಕುಮಾರಿಗೆ ಸೈಕಲ್ ಪ್ರಯಾಣ ಮಾಡಿದ್ದೇನೆ. ಕನ್ಯಾಕುಮಾರಿಗೆ ಇದು ನನ್ನ ಎರಡನೇ ಸೈಕ್ಲಿಂಗ್ ಎಂದು ತಿಳಿದು ಪ್ರಧಾನಿ ಮೋದಿ ಸಂತೋಷಪಟ್ಟರು. 2025ರಲ್ಲಿ ನಮ್ಮ ತಂಡ 8,000 ಕಿ.ಮೀ ದೂರದಷ್ಟು ಸೈಕ್ಲಿಂಗ್ ಮಾಡಿರುವ ಮಾಹಿತಿ ಪಡೆದು ತಮ್ಮ ಅಚ್ಚರಿ ಮತ್ತು ಸಂತಸ ಎರಡನ್ನೂ ವ್ಯಕ್ತಪಡಿಸಿದರು. ಅದರಲ್ಲೂ ತೀವ್ರ ಅನಾರೋಗ್ಯದ ನಂತರ ನಾನು ಈ ಕಾರ್ಯ ಕೈಗೊಂಡ ಬಗ್ಗೆ ಪ್ರಧಾನ ಮಂತ್ರಿಗಳು ನನ್ನ ಬೆನ್ನು ತಟ್ಟಿದ್ದು ನನ್ನ ಸುಕೃತ” ಎಂದು ಸುರೇಶ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.

ಮಾಜಿ ಸಚಿವರೂ ಆಗಿರುವ ಸುರೇಶ್ ಕುಮಾರ್ ಅವರು “ರಾಜಾಜಿನಗರ ಪೆಡಲ್ ಪವರ್’ ಬ್ಯಾನರ್ ಅಡಿಯಲ್ಲಿ ಯುವಕರೊಂದಿಗೆ 5 ದಿನಗಳ, 702 ಕಿಮೀ ಸೈಕಲ್ ಸವಾರಿಯನ್ನು ಮಾಡಿದ್ದಾರೆ.

ಬೆಂಗಳೂರಿನ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:47 pm, Thu, 1 January 26

Source link

ಅಶ್ವಿನಿಯ ಫಿನಾಲೆಗೆ ಕರೆದೊಯ್ಯುವ ಜವಾಬ್ದಾರಿ ಧನುಶ್​​​ಗೆ ವಹಿಸಿದ ಗಿಲ್ಲಿ – Kannada News | Bigg Boss Kannada: Gilli loose against Ashwini

ಅಶ್ವಿನಿ ಮತ್ತು ಗಿಲ್ಲಿ ಬಿಗ್​​ಬಾಸ್ (Bigg Boss) ಮನೆಯ ಟಾಮ್ ಆಂಡ್ ಜೆರ್ರಿ. ಬಿಗ್​​ಬಾಸ್ ಪ್ರಾರಂಭವಾದಾಗಿನಿಂದ ಇನ್ನೇನು ಮುಗಿಯುವ ಸಮಯ ಬಂದರೂ ಈ ಇಬ್ಬರ ವೈರತ್ವದಲ್ಲಿ ಬದಲಾವಣೆಯೇ ಆಗಿಲ್ಲ. ಮೊದಲ ವಾರದಂತೆಯೇ ಈಗಲೂ ಸಹ ಕಿತ್ತಾಡುತ್ತಾರೆ. ಆದರೆ ಈ ವಾರ ಗಿಲ್ಲಿ ನಟ ಮತ್ತು ಅಶ್ವಿನಿ ಅವರುಗಳು ಮನೆಯ ರಾಜ ಮತ್ತು ರಾಣಿ ಆಗಿದ್ದರು. ಇಬ್ಬರೂ ಒಟ್ಟಿಗೆ ಟಾಸ್ಕ್​​ನ ಉಸ್ತುವಾರಿ ನೋಡಿಕೊಳ್ಳಬೇಕಿತ್ತು. ಈ ಸಂದರ್ಭದಲ್ಲಿ ಹಲವು ಬಾರಿ ಗಿಲ್ಲಿ ಮತ್ತು ಅಶ್ವಿನಿ ಪರಸ್ಪರ ಜಗಳ ಆಡಿದರು, ಕಿತ್ತಾಡಿದರು. ಇದೀಗ ಪರಸ್ಪರ ಎದುರಾಳಿಗಳಾಗಿ ಆಟ ಆಡಬೇಕಾಗಿ ಬಂತು. ಆಟದಲ್ಲಿ ಅಶ್ವಿನಿ ಗೆದ್ದರೆ, ಗಿಲ್ಲಿ ಸೋತರು.

ವಾರವೆಲ್ಲ ಉಸ್ತುವಾರಿ ನಿಭಾಯಿಸಿದ ಅಶ್ವಿನಿ ಮತ್ತು ಗಿಲ್ಲಿ ಅವರಿಗೆ ಕ್ಯಾಪ್ಟನ್ ರೇಸಿಗೆ ಅವಕಾಶವನ್ನು ಬಿಗ್​ಬಾಸ್ ಕೊಟ್ಟರು. ಅದಾಗಲೇ ರೇಸಿನಲ್ಲಿದ್ದ ರಾಶಿಕಾ ಮತ್ತು ಧನುಶ್ ಅವರಿಗೆ ಜೋಡಿ ಆಗಿ ಆಡುವ ಅವಕಾಶ ನೀಡಲಾಯ್ತು. ಅದರಂತೆ ಅಶ್ವಿನಿ ಮತ್ತು ಧನುಶ್ ಒಟ್ಟಿಗೆ ಮತ್ತು ರಾಶಿಕಾ ಮತ್ತು ಗಿಲ್ಲಿ ಒಟ್ಟಿಗೆ ಆಡಿದರು. ಈ ಆಟದಲ್ಲಿ ಧನುಶ್ ಮತ್ತು ಅಶ್ವಿನಿ ಒಳ್ಳೆಯ ಆಟವಾಡಿ ಗೆದ್ದರು. ಆಟ ಮುಗಿಯುವ ಮುನ್ನವೇ ಗಿಲ್ಲಿ, ಅಶ್ವಿನಿ ಬಗ್ಗೆ ಗೇಲಿ ಮಾಡಲು ಪ್ರಾರಂಭ ಮಾಡಿದ್ದರು. ಆದರೆ ಕೊನೆಯಲ್ಲಿ ಅಶ್ವಿನಿಯೇ ಆಟ ಗೆದ್ದು ಕ್ಯಾಪ್ಟೆನ್ಸಿ ರೇಸಿನ ಫೈನಲ್​​ಗೆ ಎಂಟ್ರಿ ಕೊಟ್ಟರು.

ಆದರೆ ಆಟ ಮುಗಿದ ಮೇಲೆ ಅಂದರೆ ಸೋತ ಮೇಲೆ ಗಿಲ್ಲಿ, ಪ್ರತಿ ಬಾರಿಯಂತೆ ಮಾತಿನ ಮೂಲಕ ಗೆದ್ದವರನ್ನು ಕುಗ್ಗಿಸುವ ಯತ್ನ ಮಾಡಲು ಆರಂಭಿಸಿದರು. ವಿಶೇಷವಾಗಿ ಅಶ್ವಿನಿ ಬಗ್ಗೆ ಮಾತನಾಡಿದ ಗಿಲ್ಲಿ, ‘ನಿಮಗೆ ಯಾರಾದರೂ ಒಬ್ಬರ ಸಹಾಯ ಇಲ್ಲದೆ ಏನನ್ನೂ ಮಾಡಲು ಆಗಲ್ಲ. ಈಗಲೂ ಸಹ ಇನ್ನೊಬ್ಬರ ಸಹಾಯದಿಂದ (ಧನುಶ್) ಕ್ಯಾಪ್ಟೆನ್ಸಿ ರೇಸಿಗೆ ಬಂದಿದ್ದೀರಿ’ ಎಂದು ಹೀಗಳೆಯಲು ಆರಂಭಿಸಿದರು. ಅಶ್ವಿನಿ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಲಿಲ್ಲ.

ಇದನ್ನೂ ಓದಿ:ಬಿಗ್​​ಬಾಸ್ ಮನೆಯಲ್ಲಿ ಸ್ಪಂದನಾ-ರಾಶಿಕಾ ಕುಸ್ತಿ: ವಿಡಿಯೋ

ಕೊನೆಗೆ ಗಿಲ್ಲಿ, ‘ಇಷ್ಟು ದಿನ ಈ ಮನೆಯಲ್ಲಿ ಅಶ್ವಿನಿ ಅವರು ನನ್ನಿಂದ ಇಲ್ಲಿಯವರೆಗೆ ಬಂದರು, ಇನ್ನು ಮುಂದೆ ಧನುಶ್ ನೀನೇ ಇವರನ್ನು ಮುಂದೆ ಕರೆದುಕೊಂಡು ಹೋಗಬೇಕು. ನೀನೇ ಅಶ್ವಿನಿ ಅವರನ್ನು ಫಿನಾಲೆ ವರೆಗೆ ಕರೆದುಕೊಂಡು ಹೋಗಬೇಕು, ನನ್ನಿಂದ ಇನ್ನು ಮುಂದೆ ಆಗುವುದಿಲ್ಲ’ ಎಂದರು. ಇದೀಗ ಧನುಶ್ ಮತ್ತು ಅಶ್ವಿನಿ ನಡುವೆ ಕ್ಯಾಪ್ಟೆನ್ಸಿಗೆ ಸ್ಪರ್ಧೆ ನಡೆಯಲಿದೆ. ಯಾರು ಗೆಲ್ಲಲಿದ್ದಾರೆಯೋ ಅವರು ಫಿನಾಲೆ ವಾರಕ್ಕೆ ನೇರವಾಗಿ ಎಂಟ್ರಿ ಕೊಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

VHT 2025-26: ಒಂದೇ ಪಂದ್ಯದಲ್ಲಿ ಐದು ಶತಕಗಳು; ಐತಿಹಾಸಿಕ ದಾಖಲೆ ಸೃಷ್ಟಿ

Source link