Category Archives: Blog

Your blog category

ಅಚ್ಚರಿ ಎನಿಸಿದರೂ ಸತ್ಯ… ಒಂದು ಸಿಕ್ಸ್​​ಗಾಗಿ 11.3 ಓವರ್​ ಆಡಿದ RCB

Source link

ಕರ್ನಾಟಕ ಹವಾಮಾನ ವರದಿ: ಕರಾವಳಿಯಲ್ಲಿ ಹೆಚ್ಚಾಯ್ತು ತಾಪಮಾನ; ಉಡುಪಿ, ಉತ್ತರ ಕನ್ನಡದಲ್ಲಿಂದು ಹೀಟ್ ವೇವ್ ಅಲರ್ಟ್​!

ಬೆಂಗಳೂರು, ಏಪ್ರಿಲ್ 11: ಬೆಂಗಳೂರು ಸೇರಿದಂತೆ ಇಂದು ಹಲವು ಜಿಲ್ಲೆಗಳಲ್ಲಿ(Weather Forecast)  ಶುಷ್ಕ ವಾತಾವರಣವಿರಲಿದ್ದು, ಕೆಲ ಜಿಲ್ಲೆಗಳಲ್ಲಿ ಇಂದೂ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿಯಲ್ಲಿ ನಿನ್ನೆಯವರೆಗೆ ಸಾಧಾರಣ ಮಳೆಯಾಗುವ ಮುನ್ಸೂಚನೆಯಿತ್ತು ಆದರೆ ಇಂದು ತಾಪಮಾನ ಹೆಚ್ಚಳದ ಸಾಧ್ಯತೆಯಿದ್ದು, ಹೀಟ್ ವೇವ್ ಅಲರ್ಟ್​ ನೀಡಲಾಗಿದೆ. ಇನ್ನುಳಿದಂತೆ ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ.

ಎಲ್ಲೆಲ್ಲಿ ಹೀಟ್​ ವೇವ್, ಒಣ ಹವೆ?

ಕರಾವಳಿಯಲ್ಲಿಂದು 35 ಡಿಗ್ರಿಗಿಂತಲೂ ಹೆಚ್ಚಿನ ತಾಪಮಾನವಿರಲಿದ್ದು, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ನೀಡಲಾಗಿದೆ. ಉಳಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಣ ಹವೆಯಿರಲಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿಯೂ ಶುಷ್ಕ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಚಾಮರಾಜನಗರ, ಮೈಸೂರು, ಮಂಡ್ಯ, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಉಳಿದೆಡೆ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ.

ಉಷ್ಣಾಘಾತದಿಂದ ರಕ್ಷಣೆ ಹೇಗೆ?

ಉಷ್ಣ ಅಲೆ ಹಾಗೂ ಉಷ್ಣಾಘಾತದಿಂದ (ಹೀಟ್ ಸ್ಟ್ರೋಕ್) ರಕ್ಷಿಸಿಕೊಳ್ಳಲು ಆರೋಗ್ಯ ಇಲಾಖೆ ಕೆಲವು ಸಲಹೆ ಸೂಚನೆಗಳನ್ನು ನೀಡಿದೆ. ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ಸೂರ್ಯನ ಬೆಳಕಿಗೆ ನೇರ ಮೈಯೊಡ್ಡುವುದನ್ನು ಆದಷ್ಟು ತಪ್ಪಿಸಿ. ನಿಯಮಿತವಾಗಿ ನೀರು ಕುಡಿಯಿರಿ. ಎಳನೀರು, ಮಜ್ಜಿಗೆ ಅಥವಾ ಮನೆಯಲ್ಲಿ ತಯಾರಿಸಿದ ಹಣ್ಣಿನ ರಸಗಳನ್ನು ಸೇವಿಸಿ. ತಿಳಿ ಬಣ್ಣದ, ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ. ಹೊರಗೆ ಹೋಗುವಾಗ ಛತ್ರಿ ಅಥವಾ ಟೋಪಿಯನ್ನು ಬಳಸಿ. ಕೆಫೀನ್ (ಕಾಫಿ/ಟೀ) ಮತ್ತು ಹೆಚ್ಚಿನ ಸಕ್ಕರೆಯುಕ್ತ ಪಾನೀಯಗಳ ಸೇವನೆ ಕಡಿಮೆ ಮಾಡಿ, ಇವು ದೇಹವನ್ನು ನಿರ್ಜಲೀಕರಣಗೊಳಿಸುತ್ತವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ರಾಕಾ’ ಸಿನಿಮಾ: ದೀಪಿಕಾ ಪಡುಕೋಣೆಗೆ ಹೀರೋಗೆ ಸರಿಸಮಾನವಾಗಿ ಸಂಭಾವನೆ ಸಿಕ್ಕಿತೇ?

ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ಇತ್ತೀಚೆಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಕೈಬಿಟ್ಟರು. ಇದರಲ್ಲಿ ಸೀಕ್ವೆಲ್ ಕೂಡ ಇತ್ತು ಅನ್ನೋದು ಅಚ್ಚರಿಯ ಸಂಗತಿ. ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ನಟಿಸಿದ್ದ ದೀಪಿಕಾ, ಸೀಕ್ವೆಲ್​ ಮಾಡದೆ ಸಿನಿಮಾದಿಂದ ಹೊರ ನಡೆದರು. ಈಗ ದೀಪಿಕಾ ಪಡುಕೋಣೆ ಅವರು ‘ರಾಕಾ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ದೀಪಿಕಾ ಪಡುಕೋಣೆ ಪಡೆದುಕೊಳ್ಳುತ್ತಿರುವ ಸಂಭಾವನೆ ಕುರಿತು ಚರ್ಚೆ ಆಗುತ್ತಿದೆ.

ದೀಪಿಕಾ ಪಡುಕೋಣೆ ಅವರು ಸದಾ ಸಮಾನತೆಯ ಬಗ್ಗೆ ಮಾತನಾಡುತ್ತಾರೆ. ಹೀರೋಗೆ ಸಿಕ್ಕಷ್ಟೇ ಸಂಭಾವನೆ ತಮಗೂ ಸಿಗಬೇಕು ಎಂದು ಅವರು ಬಯಸುತ್ತಾರೆ. ಇದನ್ನು ಅನೇಕ ಕಡೆಗಳಲ್ಲಿ ವಾದಿಸಿದ್ದಾರೆ ಕೂಡ. ಇನ್ನು, 8 ಗಂಟೆ ಮಾತ್ರ ಸಿನಿಮಾದಲ್ಲಿ ನಟಿಸೋದಾಗಿ ಹೇಳಿದ್ದಾರೆ. ಈ ಎಲ್ಲಾ ಕಾರಣದಿಂದ ದೀಪಿಕಾ ಅವರನ್ನು ಅನೇಕ ಸಿನಿಮಾಗಳಿಗೆ ಆಯ್ಕೆ ಮಾಡಲು ಸಾಧ್ಯವಾಗುತ್ತಿಲ್ಲ. ಆದಾಗ್ಯೂ ಅವರು ‘ರಾಕಾ’ ಚಿತ್ರಕ್ಕೆ ನಾಯಕಿ ಆಗಿದ್ದಾರೆ.

ಅಲ್ಲು ಅರ್ಜುನ್ ನಟನೆಯ, ಅಟ್ಲಿ ನಿರ್ದೇಶನದ ‘ರಾಕಾ’ ಸಿನಿಮಾಗಾಗಿ ಅಲ್ಲು ಅರ್ಜುನ್ ಅವರು ಬರೋಬ್ಬರಿ 175 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಇದರ ಜೊತೆಗೆ ಅವರಿಗೆ ಸಿನಿಮಾದ ಲಾಭದಲ್ಲೂ ಪಾಲಿದೆ ಎನ್ನಲಾಗುತ್ತಿದೆ. ಆದರೆ, ದೀಪಿಕಾಗೆ ಅಲ್ಲು ಅರ್ಜುನ್​ಗೆ ಸರಿಯಾಗಿ ಸಂಭಾವನೆ ನೀಡಿಲ್ಲ. ಅವರಿಗೆ 25 ಕೋಟಿ ರೂಪಾಯಿ ಮಾತ್ರ ನೀಡಲಾಗಿದೆ.

ಉಳಿದ ಹೀರೋಯಿನ್​​ಗಳಿಗೆ ಹೋಲಿಕೆ ಮಾಡಿದರೆ ದೀಪಿಕಾಗೆ ಸಿಕ್ಕ ಸಂಭಾವನೆ ತುಂಬಾನೇ ದೊಡ್ಡದು. ಆದರೆ, ಅಲ್ಲು ಅರ್ಜುನ್ ಜೊತೆ ಹೋಲಿಕೆ ಮಾಡಿದರೆ ಇಬ್ಬರ ಸಂಭಾವನೆಯಲ್ಲಿ ಅಜಗಜಾಂತರ ವ್​ಯತ್ಯಾಸ ಇದೆ. ಈ ಬಗ್ಗೆ ಚರ್ಚೆ ನಡೆಯುತ್ತಿದೆ.

ಇದನ್ನೂ ಓದಿ: ಪತಿಯ ಸಿನಿಮಾ ದೊಡ್ಡ ಸಕಸ್ಸ್ ಕಂಡರೂ ತುಟಿಪಿಟಿಕ್ ಎನ್ನದ ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ ಅವರು ಮಗು ಜನಿಸಿದ ಬಳಿಕ ಸಿನಿಮಾ ಶೂಟಿಂಗ್​ ಮಾಡಲು ಸಾಕಷ್ಟು ಕಂಡೀಷನ್ ಹಾಕುತ್ತಿದ್ದಾರೆ. ಈ ಕಂಡೀಷನ್​​ಗೆ ಒಪ್ಪಿಕೊಳ್ಳಲು ಎಲ್ಲರೂ ರೆಡಿ ಇರೋದಿಲ್ಲ. ದೀಪಿಕಾ ಪಡುಕೋಣೆ ಷರತ್ತುಗಳನ್ನು ಅಟ್ಲಿ ತಂಡ ಒಪ್ಪಿಕೊಂಡಿದೆ. ಅವರ ಪಾತ್ರ ಹೇಗಿದೆ ಎಂಬ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Horoscope Today: ಇಂದು ಈ ರಾಶಿಯವರಿಗೆ ವಾಹನ ಖರೀದಿ ಯೋಗ!

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಏಪ್ರಿಲ್ 11, ಶನಿವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಕೃಷ್ಣ ಪಕ್ಷ, ನವಮಿ ತಿಥಿಯಾಗಿದೆ. ಇಂದು ಡಾ. ಬಸವರಾಜ ಗುರೂಜಿಯವರು ಪ್ರತಿ ರಾಶಿಯವರಿಗೂ ಆರೋಗ್ಯ, ಆರ್ಥಿಕ ಸ್ಥಿತಿ, ಉದ್ಯೋಗ, ವ್ಯಾಪಾರ, ಕುಟುಂಬ ಮತ್ತು ವೈಯಕ್ತಿಕ ಸಂಬಂಧಗಳ ಕುರಿತು ವಿವರವಾದ ಸಲಹೆಗಳನ್ನು ನೀಡಿದ್ದಾರೆ.

 

 

 

 

Source link

Daily Devotional: ನೀವು ಈ ಜಾಗಗಳಲ್ಲಿ ಎಡಗಾಲು ಮುಂದಕ್ಕಿಟ್ಟು ಒಳ ಹೋಗಬಹುದು!

ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಎಲ್ಲೆಲ್ಲಿ ಎಡಗಾಲು ಇಟ್ಟು ಒಳಗೆ ಹೋಗಬೇಕು ಎಂದು ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ದೇಹದ ಬಲಭಾಗವನ್ನು ಸೂರ್ಯ ಭಾಗ ಎಂದೂ, ಎಡಭಾಗವನ್ನು ಚಂದ್ರ ಭಾಗ ಎಂದೂ ಕರೆಯಲಾಗುತ್ತದೆ. ಬಲಗಾಲು ಇಡುವುದು ಅಭಿವೃದ್ಧಿ ಮತ್ತು ಶುಭ ಚಿಹ್ನೆ ಎಂದು ನಂಬಲಾಗುತ್ತದೆ. ದೇವಾಲಯಗಳು, ಮಠಮಾನ್ಯಗಳು, ಸಂಬಂಧಿಕರ ಮನೆಗಳು, ಆಸ್ಪತ್ರೆಗಳು ಹಾಗೂ ರೋಗಿಗಳನ್ನು ನೋಡಲು ಹೋದಾಗ ಬಲಗಾಲು ಇಟ್ಟು ಹೋಗುವುದು ಶುಭಫಲ ನೀಡುತ್ತದೆ. ಆದರೆ, ಶತ್ರುಗಳ ಮನೆ ಅಥವಾ ಸಮಾಜ ಘಾತಕರ ಸ್ಥಳಗಳಿಗೆ ಪ್ರವೇಶಿಸುವಾಗ ಎಡಗಾಲು ಇಡಲು ಶಾಸ್ತ್ರ ಹೇಳುತ್ತದೆ. ಇದಕ್ಕೆ ಹನುಮಂತನು ಸೀತಾನ್ವೇಷಣೆಗಾಗಿ ಲಂಕಾ ನಗರವನ್ನು ಪ್ರವೇಶಿಸುವಾಗ ಎಡಗಾಲು ಇಟ್ಟಿದ್ದು ನಿದರ್ಶನವಾಗಿದೆ ಎಂದು ಗುರೂಜಿ ಹೇಳಿದ್ದಾರೆ.

 

 

 

Source link

ಬೆಂಗಳೂರಲ್ಲಿ ಎಲ್‌ಪಿಜಿ ಹಾಹಾಕಾರ: ಆಟೋ ಚಾಲಕರ ಬೆನ್ನಲ್ಲೇ ಇನ್ಶೂರೆನ್ಸ್ ಏಜೆಂಟರೂ ಕಂಗಾಲು! ಯಾಕೆ ಗೊತ್ತಾ?

ಬೆಂಗಳೂರು, ಏಪ್ರಿಲ್ 11: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bangalore) ಎಲ್‌ಪಿಜಿ (LPG) ಸಿಗದೆ ಆಟೋ ಚಾಲಕರು ಬೀದಿಗೆ ಬೀಳುವಂತಾಗಿದೆ. ಇರಾನ್, ಇಸ್ರೇಲ್, ಅಮೆರಿಕ ಯುದ್ಧದ ಪರಿಣಾಮವಾಗಿ ಉಂಟಾಗಿರುವ ಗ್ಯಾಸ್ ಅಭಾವವು ಈಗ ವಿಮಾ ಏಜೆಂಟ್‌ಗಳ (Insurance Agents) ನಿದ್ದೆಗೆಡಿಸಿದೆ. ಗ್ಯಾಸ್ ಇಲ್ಲದೆ ಬಾಡಿಗೆ ಸಿಗುತ್ತಿಲ್ಲ, ಬಾಡಿಗೆ ಇಲ್ಲದೆ ಇನ್ಶೂರೆನ್ಸ್ ಕಟ್ಟಲು ಹಣವಿಲ್ಲ ಎಂಬ ಸ್ಥಿತಿಗೆ ಚಾಲಕರು ಬಂದು ತಲುಪಿದ್ದಾರೆ.

ದೇಶದಲ್ಲೇ ಅತಿ ಹೆಚ್ಚು ಎಲ್‌ಪಿಜಿ ಆಟೋ ಬೆಂಗಳೂರಿನಲ್ಲಿ!

ದೇಶದಲ್ಲೇ ಅತಿ ಹೆಚ್ಚು ಎಲ್‌ಪಿಜಿ ಆಟೋಗಳನ್ನು ಬಳಸುವ ನಗರ ಬೆಂಗಳೂರು. ಆದರೆ ಕಳೆದ ಕೆಲವು ದಿನಗಳಿಂದ ಗ್ಯಾಸ್ ಬಂಕ್‌ಗಳ ಮುಂದೆ ಆಟೋಗಳ ಕಿಲೋಮೀಟರ್ ಉದ್ದದ ಸಾಲು ಕಂಡುಬರುತ್ತಿದೆ. ಎಲ್‌ಪಿಜಿ ಸಿಗದೆ ಚಾಲಕರು ದಿನಪೂರ್ತಿ ಬಂಕ್‌ಗಳ ಮುಂದೆಯೇ ಕಳೆಯುವಂತಾಗಿದ್ದು, ಸರಿಯಾದ ಬಾಡಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಈ ಆರ್ಥಿಕ ಸಂಕಷ್ಟದ ಸರಪಳಿ ಈಗ ಇನ್ಶೂರೆನ್ಸ್ ಕಂಪನಿಗಳಿಗೂ ತಟ್ಟಿದೆ.

ಲ್ಯಾಪ್ಸ್ ಆಗುತ್ತಿದೆ ಇನ್ಶೂರೆನ್ಸ್

ಸಾಮಾನ್ಯವಾಗಿ ಪ್ರತಿ ತಿಂಗಳು ಸಾವಿರಾರು ಆಟೋ ಚಾಲಕರು ತಮ್ಮ ವಾಹನದ ವಿಮೆಯನ್ನು ನವೀಕರಿಸುತ್ತಿದ್ದರು (Renew). ಆದರೆ ಈಗ ಬಾಡಿಗೆ ಇಲ್ಲದೆ ತಿನ್ನಲು ಹಣವಿಲ್ಲದಂತಾಗಿದ್ದು, ಇನ್ಶೂರೆನ್ಸ್ ಕಟ್ಟಲು ಚಾಲಕರು ಹಿಂದೇಟು ಹಾಕುತ್ತಿದ್ದಾರೆ. ವಿಮಾ ಏಜೆಂಟರು ಕರೆ ಮಾಡಿದರೆ, ‘ಊಟಕ್ಕೇ ದುಡ್ಡಿಲ್ಲ, ಇನ್ಶೂರೆನ್ಸ್ ಎಲ್ಲಿಂದ ಕಟ್ಟೋದು?’ ಎಂಬ ಉತ್ತರ ಚಾಲಕರಿಂದ ಬರುತ್ತಿದೆ. ಇದರಿಂದಾಗಿ ವಿಮಾ ಕಂಪನಿಗಳಿಗೆ ಮತ್ತು ಏಜೆಂಟ್‌ಗಳಿಗೆ ದೊಡ್ಡ ಮಟ್ಟದ ಹೊಡೆತ ಬಿದ್ದಿದೆ. ಸಾವಿರಾರು ಆಟೋಗಳ ಇನ್ಶೂರೆನ್ಸ್ ಈಗ ಲ್ಯಾಪ್ಸ್ ಆಗುತ್ತಿದೆ ಎಂದು ಮೇಘನಾ ಇಂಟರ್ನ್ಯಾಷನಲ್ ಮಾಲೀಕ ವಸಂತ್ ರಾಜ್ ಅಳಲು ತೋಡಿಕೊಂಡಿದ್ದಾರೆ.

ಜೀವಕ್ಕೂ ಅಪಾಯ

ದುಡ್ಡಿದ್ದರೆ ಇನ್ಶೂರೆನ್ಸ್, ಇಲ್ಲದಿದ್ದರೆ ಇಲ್ಲ ಎಂಬ ಸ್ಥಿತಿಗೆ ಆಟೋ ಚಾಲಕರು ಬಂದಿದ್ದಾರೆ. ಆದರೆ ಇನ್ಶೂರೆನ್ಸ್ ಇಲ್ಲದೆ ಆಟೋ ಓಡಿಸುವಾಗ ಸಣ್ಣ ಪುಟ್ಟ ಅಪಘಾತಗಳಾದರೂ ಅದರ ಸಂಪೂರ್ಣ ಹೊಣೆಯನ್ನು ಚಾಲಕರೇ ಹೊರಬೇಕಾಗುತ್ತದೆ. ವಿಮೆಯ ಯಾವುದೇ ಸೌಲಭ್ಯಗಳು ಅವರಿಗೆ ದೊರೆಯುವುದಿಲ್ಲ.

ಇದನ್ನೂ ಓದಿ: ವಾಹನ ಸವಾರರೇ ಗಮನಿಸಿ: ಪೀಣ್ಯ ಫ್ಲೈಓವರ್ 5 ದಿನ ಬಂದ್, ಪರ್ಯಾಯ ಮಾರ್ಗಗಳ ವಿವರ ಇಲ್ಲಿದೆ!

ಎಲ್‌ಪಿಜಿ ಸಮಸ್ಯೆಯಿಂದಾಗಿ ಚಾಲಕರು ತಮ್ಮ ಜೀವನಕ್ಕೆ ಮಾತ್ರವಲ್ಲದೆ, ಜೀವಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ವರದಿ: ಅರುಣ್ ಕುಮಾರ್, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಜನ ನಾಯಗನ್’ ಲೀಕ್ ಬಗ್ಗೆ ಪ್ರಶ್ನೆ ಮಾಡಿದರೆ ಉತ್ತರಿಸದೆ ಹೋದ ದಳಪತಿ ವಿಜಯ್

‘ಜನ ನಾಯಗನ್’ ಸಿನಿಮಾ (Jana Nayagan) ಬಗ್ಗೆ ಸೃಷ್ಟಿ ಆದ ವಿವಾದಗಳು ಒಂದೆರಡಲ್ಲ. ಪ್ರತಿ ಹಂತದಲ್ಲೂ ಚಿತ್ರಕ್ಕೆ ಹಿನ್ನಡೆಗಳು ಆಗುತ್ತಲೇ ಬರುತ್ತಿದ್ದವು. ಈಗ ಸಿನಿಮಾಗೆ ದೊಡ್ಡ ಹೊಡೆತ ಸಿಕ್ಕಿದೆ. ಚಿತ್ರದ ಪ್ರಮುಖ ದೃಶ್ಯಗಳೇ ಲೀಕ್ ಆಗಿವೆ. ಈ ಮೂಲಕ ನೂರಾರು ಕೋಟಿ ರೂಪಾಯಿ ಸುರಿದು ಸಿನಿಮಾ ಮಾಡಿದ ನಿರ್ಮಾಪಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ವಿಷಯವನ್ನು ಅನೇಕ ಸ್ಟಾರ್​​ಗಳು ಖಂಡನೆ ಮಾಡಿದ್ದಾರೆ. ಆದರೆ, ವಿಜಯ್ ಮಾತ್ರ ಈ ವಿಷಯದಲ್ಲಿ ಮೌನ ತಾಳಿದ್ದಾರೆ.

‘ಜನ ನಾಯಗನ್’ ಸಿನಿಮಾ ಲೀಕ್ ವಿಷಯವನ್ನು ತೆಲುಗಿನ ನಟ ಚಿರಂಜೀವಿ, ನಟಿ ಖುಷ್ಬೂ ಸುಂದರ್ ಹೀಗೆ ಅನೇಕರು ಖಂಡನೆ ಮಾಡಿದ್ದಾರೆ. ಕೆವಿಎನ್ ಹೋರಾಟದಲ್ಲಿ ನಾವಿದ್ದೇವೆ ಎಂದಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಅನೇಕರು ಒತ್ತಾಯಿಸಿದ್ದಾರೆ. ಕೆವಿಎನ್ ಕೂಡ ಈ ಬಗ್ಗೆ ಎಚ್ಚರಿಕೆ ನೀಡಿದೆ. ಆದರೆ, ವಿಜಯ್ ಈ ವಿಷಯದಲ್ಲಿ ಮಾತನಾಡುತ್ತಿಲ್ಲ.

ದಳಪತಿ ವಿಜಯ್ ಅವರು ‘ಜನ ನಾಯಗನ್’ ಚಿತ್ರದ ಹೀರೋ. ಸಿನಿಮಾ ಲೀಕ್ ವಿಷಯ ಅವರಿಗೆ ದೊಡ್ಡ ಚಿಂತೆ ತಂದಿದೆ. ಮುಂದೇನು ಎನ್ನುವ ಪ್ರಶ್ನೆ ಹುಟ್ಟುಹಾಕಿದೆ. ಇದರ ಜೊತೆಗೆ ಚುನಾವಣೆ ಪ್ರಚಾರ ಮಾಡುವ ಕೆಲಸವನ್ನು ಅವರು ಮುಂದುವರಿಸಲೇಬೇಕಿದೆ. ಅವರು ಕೊನೆಯ ಪಕ್ಷ ಒಂದು ಟ್ವೀಟ್​ ಆದರೂ ಮಾಡಬಹುದಿತ್ತು ಎಂದು ಫ್ಯಾನ್ಸ್ ಬಯಸಿದ್ದರು. ಅವರು ಮಾಧ್ಯಮದವರು ಪ್ರಶ್ನೆ ಮಾಡಿದಾಗ ಉತ್ತರಿಸಬೇಕು ಎಂದಿದ್ದರು. ಆದರೆ, ಯಾವುದನ್ನೂ ಅವರು ಮಾಡಿಲ್ಲ.

ಇದನ್ನೂ ಓದಿ: ‘ಜನ ನಾಯಗನ್’ ಸಿನಿಮಾ ಲೀಕ್, ದಿಟ್ಟ ಹೆಜ್ಜೆಗೆ ಮುಂದಾದ ಕೆವಿಎನ್?

ವಿಜಯ್ ಅವರು ಏಪ್ರಿಲ್ 10ರಂದು ಚೆನ್ನೈಗೆ ಬಂದಿದ್ದಾರೆ. ಶಿವಗಂಗಾ ಜಿಲ್ಲೆಯ ಕರೈಕುಡಿಯಲ್ಲಿ ಚುನಾವಣೆ ಪ್ರಚಾರ ಮಾಡಿ ಅವರು ಮರಳಿದ್ದಾರೆ. ಆಗ ಅವರಿಗೆ ‘ಜನ ನಾಯಗನ್ ಸಿನಿಮಾ ಸೋರಿಕೆ ಬಗ್ಗೆ ಮಾತನಾಡಿ’ ಎಂದು ಕೇಳಲಾಯಿತು. ಆದರೆ, ಇದಕ್ಕೆ ವಿಜಯ್ ಉತ್ತರಿಸುವ ಮನಸ್ಸು ಮಾಡಿಲ್ಲ. ಬದಲಿಗೆ ಅವರು ನೇರವಾಗಿ ನಡೆದು ಹೋದರು. ಅವರು ಈ ಬಗ್ಗೆ ಉತ್ತರಿಸಬೇಕಿತ್ತು ಎಂದು ಫ್ಯಾನ್ಸ್ ಹೇಳಿದ್ದಾರೆ.

‘ಜನ ನಾಯಗನ್’ ಸಿನಿಮಾಗೆ ಇನ್ನೂ ಸೆನ್ಸಾರ್ ಪ್ರಮಾಣಪತ್ರ ಸಿಕ್ಕಿಲ್ಲ. ಇದು ಚಿತ್ರ ಮುಂದಕ್ಕೆ ಹೋಗಲು ಪ್ರಮುಖ ಕಾರಣ.ಚುನಾವಣೆ ಮುಗಿದ ಬಳಿಕ ಸಿನಿಮಾ ರಿಲೀಸ್ ಆಗಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಾಹನ ಸವಾರರೇ ಗಮನಿಸಿ: ಪೀಣ್ಯ ಫ್ಲೈಓವರ್ 5 ದಿನ ಬಂದ್, ಪರ್ಯಾಯ ಮಾರ್ಗಗಳ ವಿವರ ಇಲ್ಲಿದೆ!

ಬೆಂಗಳೂರು, ಏಪ್ರಿಲ್ 11: ಪೀಣ್ಯ ಎಲಿವೇಟೆಡ್ ಫ್ಲೈಓವರ್‌ನ (Peenya Elevated Flyover) ಕೇಬಲ್ ದುರಸ್ತಿ ಕಾರ್ಯ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಈಗ ಅಂತಿಮ ಹಂತದ ಲೋಡ್ ಟೆಸ್ಟಿಂಗ್ ಪ್ರಕ್ರಿಯೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮೇಲ್ಸೇತುವೆಯನ್ನು ಏಪ್ರಿಲ್ 13ರಿಂದ ಐದು ದಿನಗಳ ಕಾಲ ಸಂಪೂರ್ಣವಾಗಿ ಬಂದ್ ಮಾಡಲಾಗುವುದು ಎಂದು ಪೀಣ್ಯ ಸಂಚಾರಿ ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಈ ಐದು ದಿನಗಳ ಕಾಲ ವಾಹನ ಸವಾರರಿಗೆ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸೂಚನೆ ನೀಡಿದ್ದಾರೆ.

ಪೀಣ್ಯ ಫ್ಲೈಓವರ್‌ ಬಂದ್ ಆಗುವ ಅವಧಿ

ಏಪ್ರಿಲ್ 13ರ ಬೆಳಗ್ಗೆ 5 ಗಂಟೆಯಿಂದ ಆರಂಭಗೊಂಡು, ಏಪ್ರಿಲ್ 17ರ ಬೆಳಗ್ಗೆ 11 ಗಂಟೆಯವರೆಗೆ ಫ್ಲೈಓವರ್ ಮೇಲೆ ಯಾವುದೇ ವಾಹನ ಸಂಚಾರಕ್ಕೆ ಅವಕಾಶವಿರುವುದಿಲ್ಲ.

ಪೀಣ್ಯ ಫ್ಲೈಓವರ್‌ ಬಂದ್:  ಪರ್ಯಾಯ ಮಾರ್ಗಗಳು

ವಾಹನ ಸವಾರರಿಗೆ ತೊಂದರೆಯಾಗದಂತೆ ಪೊಲೀಸರು ಬದಲಿ ಮಾರ್ಗಗಳನ್ನು ಸೂಚಿಸಿದ್ದಾರೆ. ಅವುಗಳು ಹೀಗಿವೆ;

  • ನೆಲಮಂಗಲದಿಂದ ಬೆಂಗಳೂರು ಕಡೆಗೆ ಬರುವ ವಾಹನಗಳು ಕೆನ್ನಮೆಟಲ್ ವಿಡಿಯಾ ಹತ್ತಿರ ಫ್ಲೈಓವರ್ ಕೆಳಭಾಗದ ಎನ್‌ಹೆಚ್-4 ಮತ್ತು ಸರ್ವಿಸ್ ರಸ್ತೆ ಮೂಲಕ 8ನೇ ಮೈಲಿ, ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್, ಎಸ್‌ಆರ್‌ಎಸ್ (SRS) ಜಂಕ್ಷನ್ ಮತ್ತು ಗೊರಗುಂಟೆಪಾಳ್ಯ ಮೂಲಕ ಸಂಚರಿಸಬೇಕು.
  • ಸಿಎಂಟಿಐನಿಂದ ನೆಲಮಂಗಲ ಕಡೆಗೆ ಹೋಗುವ ವಾಹನಗಳು ಫ್ಲೈಓವರ್ ಕೆಳಭಾಗದ ಎನ್‌ಹೆಚ್‌-4 ಮತ್ತು ಸರ್ವಿಸ್ ರಸ್ತೆ ಮೂಲಕ ಎಸ್‌ಆರ್‌ಎಸ್ ಜಂಕ್ಷನ್, ಪೀಣ್ಯ ಠಾಣೆ ಜಂಕ್ಷನ್, ಜಾಲಹಳ್ಳಿ ಕ್ರಾಸ್, ದಾಸರಹಳ್ಳಿ, 8ನೇ ಮೈಲಿ ಮತ್ತು ಪಾರ್ಲೆ ಜಿ ಟೋಲ್ ಮೂಲಕ ಸಾಗಬೇಕು.

ಇದನ್ನೂ ಓದಿ: ಜೋಂಬಿ ಡ್ರಗ್ಸ್ ಕೇಸ್​​: ವಿಡಿಯೋ ಹಂಚಿಕೊಂಡ ನಟ ಸೇರಿ ಹಲವರಿಗೆ ಸಂಕಷ್ಟ

ರಸ್ತೆ ಸುರಕ್ಷತೆ ಮತ್ತು ಸುಗಮ ಸಂಚಾರದ ಹಿತದೃಷ್ಟಿಯಿಂದ ಸಾರ್ವಜನಿಕರು ಈ ಬದಲಾವಣೆಗಳನ್ನು ಗಮನಿಸಿ ಪೊಲೀಸರೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿನ ಭವಿಷ್ಯ: ಇಂದು ಈ ರಾಶಿಯವರ ವಿಶೇಷ ಕೌಶಲ ಬೆಳಕಿಗೆ ಬರಲಿದೆ

ಮೇಷ ರಾಶಿ:

ದುಡುಕಿ ಏನನ್ನಾದರೂ ಮಾಡಿಕೊಳ್ಳುವಿರಿ. ಪತ್ನಿಯ ಜೊತೆ ಸುಖದಿಂದ ಕಾಲವನ್ನು ಕಳೆಯುವಿರಿ. ಸಂಬಂಧಿಕರ ಆಗಮನವಾಗಲಿದೆ. ಕೃಷಿಯ ಚಟುವಟಿಕೆಯಲ್ಲಿ ಅಸಕ್ತಿಯಿಂದ ಪಾಲ್ಗೊಳ್ಳುವಿರಿ. ಅಪರಿಚಿತರ ಜೊತೆ ಅಧಿಕ ಒಡನಾಟ. ಬೇಸರದಲ್ಲಿ ದಿನದ ಮುಕ್ತಾಯ. ಸಮಯೋಚಿತ ಮಾತುಗಳಿಂದ ಪ್ರಶಂಸೆಯು ಸಿಗಬಹುದು. ಬೆಂಕಿಯ ಸ್ಥಳದಲ್ಲಿ ಎಚ್ಚರಿಕೆಯಿಂದ ಕೆಲಸವನ್ನು ಮಾಡಿ. ಇಂದಿನ ನಿಮ್ಮ ಸಮಯದ ವ್ಯತ್ಯಾಸದಿಂದ ಕೆಲವು ಕಾರ್ಯಗಳು ಬದಲಾವಣೆ ಆಗಬಹುದು.

ವೃಷಭ ರಾಶಿ:

ಇಂದು ವ್ಯಾವಹಾರಿಕವಾಗಿ ಮನಶ್ಚಾಂಚಲ್ಯ ನಿಮ್ಮನ್ನು ಅನೇಕ ವಿಧವಾಗಿ ಕಾಡಬಹುದು.‌ ನಿರಂತರ ಶ್ರಮಕ್ಕೆ ಫಲವಿರುತ್ತದೆ. ಕರ್ತವ್ಯದ ದೃಷ್ಟಯಿಂದ ಮಾಡಿ. ಫಲಾಪೇಕ್ಷೆಯು ಇದ್ದರೆ ಹತಾಶೆಯು ಖಂಡಿತಾ ಇರುವುದು. ಅಧಿಕಾರಿಗಳಿಂದ ನಿಮ್ಮ‌ ಕಾರ್ಯದ ಪ್ರಗತಿ ಪರಿಶೀಲನೆ. ಇನ್ನೊಬ್ಬರ ಬಗ್ಗೆ ಮಾಡುವ ತಮಾಷೆಯು ನಿಮ್ಮ ತಲೆನೋವಾದೀತು. ಸಮಯದ ಹೊಂದಾಣಿಕೆಯಲ್ಲಿ ನೀವು ಸೋಲಬಹುದು. ನೀವು ಮೊದಲೇ ನಿರ್ಧರಿಸಿರುವ ಕೆಲಸಗಳನ್ನು ಪೂರ್ಣ ಮಾಡಲು ಸಮಯವು ಸಿಗದೇ ಹೋದೀತು.

ಮಿಥುನ ರಾಶಿ:

ಇಂದು ಅನ್ಯರ ಕಾರಣದಿಂದ ವಿಮಾನ ಸಂಚಾರ ಯೋಗ. ಹಿರಿಯರಿಗೆ ನಿಮ್ಮ ಕೈಲಾದ ಮತ್ತು ಅವರಿಗೆ ಅವಶ್ಯಕವಾದ ಕಾರ್ಯಗಳನ್ನು ಮಾಡಿಕೊಡಿ. ಸಂಗಾತಿಯೊಂದಿಗೆ ಸುತ್ತಾಟ ನಡೆಸುವಿರಿ. ನಿಮ್ಮ ವಿವಾಹದ ಮಾತುಕತೆಗಳು ನಿಮಗೆ ಖುಷಿ ಕೊಡಬಹುದು. ಆಯುಧದಿಂದ ಗಾಯವನ್ನು ಮಾಡಿಕೊಂಡು ನೋವಾಗುವುದು. ಅಂತರ್ಜಾಲದಲ್ಲಿ ಅಧಿಕ ಸಮಯ ಕಳೆಯುವಿರಿ.‌ ಇಂದು ನಿಮಗೆ ಸೌಂದರ್ಯದ ಬಗ್ಗೆ ಹೆಚ್ಚು ಆಸಕ್ತಿ ಇರಲಿದ್ದು ಅದಕ್ಕೆ ಸಮಯವು ಹೆಚ್ಚು ಹೋಗುವುದು.

ಕರ್ಕಾಟಕ ರಾಶಿ:

ದೃಢವಾದ ಮನಸ್ಸಿದ್ದರೆ ಅನಾರೋಗ್ಯದಿಂದಲೂ ಚೇತರಿಕಯನ್ನು ಕಂಡುಕೊಳ್ಳಬಹುದಾಗಿದೆ. ದೈವಾನುಗ್ರಹವಿಲ್ಲವೆಂದು ದೇವಾಲಯಕ್ಕೆ ಹೋಗುವುದನ್ನು ನಿಲ್ಲಿಸುವುದು ಬೇಡ. ಇಂದಿನ ಸತ್ಕಾರ್ಯವೆಡ ನಿಮಗೆ ಉತ್ತಮವಾದ ಫಲವನ್ನು ಕೊಡುವುದು. ಸಂಗಾತಿಯ ಪ್ರೀತಿಯು ನಿಮಗೆ ಬೇಸರವನ್ನು ಕೊಡಬಹುದು. ಕಳೆದುಕೊಂಡದ್ದನ್ನು ಪಡೆಯಬೇಕು ಎಂಬ ಛಲವು ನಿಮ್ಮಲ್ಲಿ ಇರುವುದು. ಮನಸ್ತಾಪವನ್ನು ಮನಸ್ಸಿನೊಳಗೇ ಇಟ್ಟುಕೊಳ್ಳುವಿರಿ.

ಸಿಂಹ ರಾಶಿ:

ಸಹೋದರನ ಹಾಗೂ ತಂದೆಯ ಸಹಾಯ ನಿಮಗೆ ಸಿಗಲಿದೆ. ಪ್ರತಿಭೆಯ ಅನಾವರಣಕ್ಕೆ ಸುಕಾಲ. ಸಂಪತ್ತು ಉಳಿಸಿಕೊಳ್ಳಲು ಯತ್ನಿಸಿದಷ್ಟೂ ಅಪ್ರಯಾಸವಾಗಿ ಖರ್ಚಾಗುವುದು. ನಿಮ್ಮ ಆರಾಮದ ದಿನಚರಿಯಲ್ಲಿಯೂ ನಿಮಗೆ ಇಂದು ಕಿರಿಕಿರಿ ಆಗುವುದು. ಇನ್ನೊಬ್ಬರ ಮಾತುಗಳನ್ನು ಕೇಳುವ ಸಹನೆಯು ಬೇಕು. ಭೂಮಿಯನ್ನು ಮಾರಾಟಮಾಡುವ ಸ್ಥಿತಿಯು ಬರಬಹುದು. ಉತ್ಸಾಹದಿಂದ ನೀವು ಇಂದಿನ ಕಾರ್ಯವನ್ನು ಮಾಡುತ್ತಿದ್ದರೂ ದಿನದ ಕೊನೆಗೆ ಸಲ್ಲದ ಮಾತುಗಳನ್ನು ಕೇಳುವಿರಿ.

ಕನ್ಯಾ ರಾಶಿ:

ಬೇಡದ ವಸ್ತುಗಳಿಗೆ ಹೊಸ ರೂಪವನ್ನು ಕೊಡುವಿರಿ. ಉದ್ಯಮದಲ್ಲಿ ಏನಾದರೂ ಏರಿಳಿತಗಳು ಆಗಬಹುದು. ಒಂಟಿಯಾಗಿರುವುದನ್ನು ಯಾರಾದರೂ ತಪ್ಪಿಸಬಹುದು.‌ ಆಪ್ತರ ಜೊತೆ‌ ಮನಸ್ಸು ಬಿಚ್ಚಿ ಮಾತನಾಡಿ. ಇಷ್ಟವಾಗುವ ಸ್ಥಳಗಳಿಗೆ ಇಷ್ಟವಾದವರನ್ನು ಕರೆದುಕೊಂಡು ಹೋಗಿ. ಕೆಲಸದ‌ ಸ್ಥಳದಲ್ಲಿ ಒತ್ತಡದ ವಾತಾವರಣವಿರಬಹುದು. ಇಂದು ಬಿಟ್ಟು ಹೋದ ಆಪ್ತರ ಬಗ್ಗೆ ಹೆಚ್ಚು ಆಲೋಚನೆ ಬರಬಹುದು. ಬರುವ ಒತ್ತಡವನ್ನು ನೀವು ಯಾವುದಾದರೂ ವಿಧಾನದ ಮೂಲಕ ಸರಿ ಮಾಡಿಕೊಳ್ಳುವಿರಿ.

ತುಲಾ ರಾಶಿ:

ಮನೆಯವರ ಜೊತೆ ಖುಷಿಯಿಂದ ಕಾಲಕಳೆಯುವಿರಿ. ಎತ್ತರದ ಪ್ರದೇಶಗಳನ್ನು ಏರುವ ಸಾಹಸಕ್ಕೆ ಹೋಗಬೇಡಿ‌. ಯಾರಿಗಾದರೂ ಯಾವ ಕೆಲಸಕ್ಕಾದರೂ ನಿಮ್ಮ ಕಡೆಯಿಂದ ಅದಕ್ಕೆ ನ್ಯಾಯ ಸಿಗುವಂತೆ ಇರಲಿ. ಅನ್ಯ ಮನಸ್ಕರಾಗಿ ಇರುವುದು ಬೇಡ. ಧರ್ಮದ‌ ಕಾರ್ಯಗಳ ಆಸಕ್ತಿಯು ಕಡಿಮೆಯಾಗಬಹುದು. ಮಕ್ಕಳಿಂದ ಯಾವುದಾದರೂ ರೀತಿಯಲ್ಲಿ ನೋವನ್ನು ಪಡೆಯಬೇಕಾದೀತು. ನೀವು ಸಂಗಾತಿಯ ಮನೋಭಾವವನ್ನು ಅರ್ಥಮಾಡಿಕೊಳ್ಳದೇ ಅವರ ಜೊತೆ ಜಗಳವಾಡುವಿರಿ. ಆದಾಯದ ಗುಟ್ಟನ್ನು ಎಷ್ಟೇ ಒತ್ತಾಯ ಮಾಡಿದರೂ ಹೇಳಲಾರಿರಿ.

ವೃಶ್ಚಿಕ ರಾಶಿ:

ಕೆಟ್ಟ ಆಲೋಚನೆಗಳು ನಿಮ್ಮ ಮನಸ್ಸನ್ನು ಹಾಳು ಮಾಡಬಹುದು. ವ್ಯವಹಾರದಲ್ಲಿ ಬರುವ ಸಮಸ್ಯೆಯನ್ನು ಮೊದಲೇ ಯೋಚಿಸಿ ಅದಕ್ಕೆ ಬೇಕಾದ ಸಿದ್ಧತೆಯಲ್ಲಿ ಮಾಡಿ. ನಿರೋದ್ಯೋಗ ಸಮಸ್ಯೆಯಿಂದ ಮಾನಸಿಕ ಹಿಂಸೆಯಾಗಬಹುದು. ಭೂವ್ಯವಹಾರದಲ್ಲಿ ಲಾಭವನ್ನು ಪಡೆಯಲು ಅನ್ಯ ಮಾರ್ಗವನ್ನು ಆಶ್ರಯಿಸುವಿರಿ. ಇಂದು ಕಛೇರಿಯನ್ನು ಮಹಿಳೆಯರು ನಿರ್ವಹಣೆ ಮಾಡಬೇಕಾಗುವುದು. ನೂತನ ವಸ್ತುಗಳನ್ನು ಖರೀದಿಸಲಿದ್ಸೀರಿ. ಮಾಡದ ಕಾರ್ಯಕ್ಕೆ ಅಪವಾದ ಬರುವುದು.

ಧನು ರಾಶಿ:

ಹಠದ ಸ್ವಭಾವವೇ ನಿಮಗೆ ಮುಳುವಾಗಬಹುದು. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಿ ವಿವಾದಗಳೂ ತಾರಕಕ್ಕೆ ಹೋಗಬಹುದು. ಮುಂದಿನ ಕಾರ್ಯದಲ್ಲಿ ಆಗುವ ಖರ್ಚುಗಳ ಬಗ್ಗೆ ತಲೆಕೆಡಿಕೊಳ್ಳಬಹುದು. ಎಲ್ಲರ ಮೇಲೂ ನಂಬಿಕೆ ಇಟ್ಟುಕೊಳ್ಳುವುದು ಸಾಧ್ಯವಾಗದು. ವಿದೇಶದಲ್ಲಿ ವಿದ್ಯಾಭ್ಯಾಸಕ್ಕೆ ವಿಘ್ನ ಬರಬಹುದು. ಯಾರಾದರೂ ನಿಮ್ಮನ್ನು ಚೇಡಿಸಬಹುದು. ಸ್ನೇಹಿತರಿಗೆ ನಿಮ್ಮದಾದ ಕೆಲವು ಆಯ್ಕೆಗಳನ್ನು ಹೇಳಿ. ಧಾರ್ಮಿಕ ಆಚರಣೆಯು ನಿಮ್ಮ ಮನಸ್ಸಿಗೆ ಹಿತವೆನಿಸುವುದು.‌

ಮಕರ ರಾಶಿ:

ನಿಮ್ಮ ವೇಗಕ್ಕೆ ಸಕಾಲದಲ್ಲಿ ಆಗುವ ಕಾರ್ಯಗಳೂ ತುಂಬ ದೀರ್ಘವೆನಿಸುತ್ತದೆ. ವ್ಯವಹಾರದಲ್ಲಿ ಎಚ್ಚರವಿರಲಿ. ಒಮ್ಮುಖ ನಿರ್ಧಾರಗಳನ್ನು ಮಾಡುವುದನ್ನು ಬಿಡಿ. ಹೊಸ ಶತ್ರುಗಳನ್ನು ನಿರ್ಮಿಸಿಕೊಳ್ಳಬೇಡಿ. ಆರಕ್ಕೇರದ ಮೂರಕ್ಕಿಳಿಯದ ಉದ್ಯಮದ ದಿನವಿಂದು ನಿಮಗೆ. ನಿಮ್ಮ ಸ್ವಭಾವವನ್ನು ತಿದ್ದಿಕೊಳ್ಳಬೇಕಾಗುವುದು. ಯಾರೇ ನಿಮ್ಮನ್ನು ನೆಚ್ಚಿವದರೂ ಅದು ಸ್ವಲ್ಪ ಕಾಲ ಮಾತ್ರ. ದುಸ್ಸ್ವಭಾವವನ್ನು ಹೆಚ್ಚಿಸಿಕೊಳ್ಳುವಿರಿ. ಹಿತಶತ್ರುಗಳು ಲಾಭವನ್ನು ತಪ್ಪಿಸುವರು.

ಕುಂಭ ರಾಶಿ:

ದೂರದಲ್ಲಿರುವ ನಿಮಗೆ ಸಂಗಾತಿಯ ಸಂಗ ಸಿಗುವ ಸಾಧ್ಯತೆ ಇದೆ. ನಟನೆಯಲ್ಲಿ ಆಸಕ್ತಿಯಿರುವವರಿಗೆ ಅವಕಾಶಗಳು ಲಭ್ಯವಾಗುತ್ತವೆ. ಆಲಸ್ಯದಿಂದ ಸಿಗುವ ಸಂಪತ್ತು ವ್ಯರ್ಥವಾಗುತ್ತದೆ. ವಿದ್ಯಾರ್ಥಿಗಳು ಓದಿನ ಕಡೆಗೆ ಗಮನಹರಿಸಬೇಕು. ಸುಮ್ಮನೇ ಎಲ್ಲಗಾದರೂ ಹೋಗಬೇಕು ಎಂದು ಅನ್ನಿಸುವುದು. ಆಪ್ತರೇ ನಿಮ್ಮ ಬಗ್ಗೆ ಹಗುರಾಗಿ ಮಾತನಾಡಬಹುದು. ಧನಲಾಭವಾದರೂ ಮನಸ್ಸಿನಲ್ಲಿ ನೆಮ್ಮದಿ ಕೊರತೆ ಕಾಣುವುದು. ಭೂಮಿಯ ವ್ಯವಹಾರವನ್ನು ಮಾಡಲು ನಿಮಗೆ ಒತ್ತಡ ಬರಬಹುದು.

ಮೀನ ರಾಶಿ:

ಇಂದು ಬೇಡದ ವಿಚಾರಕ್ಕೆ ಸಂಗಾತಿಯೊಂದಿಗೆ ಕಲಹವಾಗಲಿದೆ. ಜಾಗರೂಕರಾಗಿ ಕಾಲಿಡಿ. ಭೋಗವಸ್ತುಗಳನ್ನು ಅನವಶ್ಯಕವಾಗಿ ಖರೀದಿಸುವಿರಿ. ನಿಮ್ಮ ಇಷ್ಟದವರು ನಿಮ್ಮ ಭೇಟಿಯಾಗಬಹುದು. ಕಲಾವಿದರಿಗೆ ಹೆಚ್ಚಿನ ಸ್ಥಾನಗಳು ಸಿಗಬಹುದು. ನಂಬಿಕೆಯನ್ನು ಕಳೆದುಕೊಳ್ಳಬೇಕಾದ ದಿನವೂ ಇದಾಗಿರುತ್ತದೆ‌. ಶತ್ರುಗಳು ನಿಮಗೆ ಹೆಚ್ಚು ತೊಂದರೆಯನ್ನು ಕೊಡಬಹುದು. ಬಂಧುಗಳ ಜೊತೆ ವಿವಾದವು ಏರ್ಪಡಲಿದ್ದು ನಿಮ್ಮ ಬಗ್ಗೆ ನಕಾರಾತ್ಮಕ ಅಭಿಪ್ರಾಯವೂ ಬರಬಹುದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ಚೈತ್ರ, ಸೌರ ಮಾಸ : ಮೀನ, ಮಹಾನಕ್ಷತ್ರ : ರೇವತೀ, ವಾರ : ಶನಿ, ಪಕ್ಷ : ಕೃಷ್ಣ, ತಿಥಿ : ನವಮೀ, ನಿತ್ಯನಕ್ಷತ್ರ : ಶ್ರವಣಾ, ಯೋಗ : ಶಿವ, ಕರಣ : ಬವ, ಸೂರ್ಯೋದಯ – 06 – 14 am, ಸೂರ್ಯಾಸ್ತ – 06 – 36 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:20 – 10:53, ಯಮಗಂಡ ಕಾಲ 13:58 – 15:31, ಗುಳಿಕ ಕಾಲ 06:15 – 07:47

-ಲೋಹಿತ ಹೆಬ್ಬಾರ್ – 8762924271 (what’s app only)

Source link

RR vs RCB: ವೈಭವ್- ಜುರೇಲ್ ಆಟಕ್ಕೆ ಸೋತ ಆರ್​ಸಿಬಿ

ಐಪಿಎಲ್ 2026 ರ 16 ನೇ ಪಂದ್ಯ ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 201 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ 18 ಓವರ್​ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು ಜಯದ ನಗೆಬೀರಿತು. ರಾಜಸ್ಥಾನದ ಈ ಗೆಲುವಿನಲ್ಲಿ ವೈಭವ್ ಸೂರ್ಯವಂಶಿ ಹಾಗೂ ಧೃವ್ ಜುರೇಲ್ ಅವರ ಅರ್ಧಶತಕ ಪ್ರಮುಖ ಪಾತ್ರವಹಿಸಿತು. ಈ ಗೆಲುವಿನೊಂದಿಗೆ ರಾಜಸ್ಥಾನ್ ಸತತ 4ನೇ ಗೆಲುವು ದಾಖಲಿಸಿದರೆ, ಇತ್ತ ಆರ್​ಸಿಬಿ ಈ ಆವೃತ್ತಿಯ ಮೊದಲ ಸೋಲು ಎದುರಿಸಿದೆ.

Source link