ನವದೆಹಲಿ, ಏಪ್ರಿಲ್ 10: ಆನ್ಲೈನ್ ವಂಚನೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಡಿಜಿಟಲ್ ಪೇಮೆಂಟ್ ಸಿಸ್ಟಂನಲ್ಲಿ (Digital payment system) ಸರ್ಕಾರ ಒಂದಷ್ಟು ಮಾರ್ಪಾಡು ಮಾಡಲು ಹೊರಟಿದೆ. ಡಿಜಿಟಲ್ ಪೇಮೆಂಟ್ ಅನ್ನು ಹೆಚ್ಚು ಸುರಕ್ಷಿತವಾಗಿಸಲು ಅಧಿಕ ಮೌಲ್ಯದ ವಹಿವಾಟುಗಳಿಗೆ ಒಂದು ಗಂಟೆ ವಿಳಂಬ ಪಾವತಿ ವ್ಯವಸ್ಥೆ ತರುವ ಪ್ರಸ್ತಾಪವ ಆರ್ಬಿಐ ಮುಂದಿದೆ ಎಂದು ವರದಿಗಳು ಹೇಳುತ್ತಿವೆ. ಈ ಪ್ರಸ್ತಾಪದ ಪ್ರಕಾರ ಯುಪಿಐ ಮತ್ತು ಐಎಂಪಿಎಸ್ ಇತ್ಯಾದಿ ಮೂಲಕ ಮಾಡಲಾಗುವ 10,000 ರೂಗೂ ಅಧಿಕ ಮೊತ್ತದ ಪೇಮೆಂಟ್ಗಳು ರಿಯಲ್ ಟೈಮ್ನಲ್ಲಿ ಸಂದಾಯವಾಗುವುದಿಲ್ಲ.
ಗಮನಿಸಬೇಕಾದ ಸಂಗತಿ ಎಂದರೆ ಈ ನಿರ್ಬಂಧವು ವ್ಯಕ್ತಿಯಿಂದ ವ್ಯಕ್ತಿಗೆ ಮಾಡಲಾಗುವ ಪೇಮೆಂಟ್ಗೆ ಅನ್ವಯ ಆಗುತ್ತದೆ. ವರ್ತಕರಿಗೆ ಮಾಡಲಾಗುವ ಪೇಮೆಂಟ್ಗಳು ಮಾಮೂಲಿ ರೀತಿಯಲ್ಲಿ ರಿಯಲ್ಟೈಮ್ನಲ್ಲೇ ಆಗುತ್ತವೆ.
10,000 ರೂಗಿಂತ ಹೆಚ್ಚಿನ ಮೊತ್ತದ ಪೇಮೆಂಟ್ ಮಾಡಿದಾಗ ಒಂದು ಗಂಟೆಯ ಕೂಲಿಂಗ್ ಪೀರಿಯಡ್ ಜಾರಿಗೆ ಬರುತ್ತದೆ. ಈ ಸಂದರ್ಭದಲ್ಲಿ ಆ ಹಣವು ತತ್ಕ್ಷಣವೇ ವ್ಯಕ್ತಿಯ ಖಾತೆಗೆ ರವಾನೆಯಾಗುವುದಿಲ್ಲ. ಆನ್ಲೈನ್ನಲ್ಲಿ ಕೆಲವರು ಲಿಂಕ್ಗಳನ್ನು ಕಳುಹಿಸಿ ಅಕ್ರಮವಾಗಿ ಪೇಮೆಂಟ್ ಮಾಡಿಸಿಕೊಳ್ಳುತ್ತಿರುವ ಪ್ರಕರಣಗಳು ಹಲವು ಬೆಳಕಿಗೆ ಬರುತ್ತಿವೆ. ಹಾಗೆಯೇ, ಯುಪಿಐ ಗ್ರಾಹಕರು ತಪ್ಪಾಗಿ ಹಣ ಕಳುಹಿಸುವ ಸಾಧ್ಯತೆಗಳಿರುತ್ತವೆ. ಇದನ್ನು ತಪ್ಪಿಸಲು ಆರ್ಬಿಐ ಈ ರೀತಿಯ ಕ್ರಮ ತೆಗೆದುಕೊಂಡಿದೆ.
ಪರಿಚಿತ ವ್ಯಕ್ತಿಗಳ ವೈಟ್ಲಿಸ್ಟ್
ಆರ್ಬಿಐ ಬಳಿ ಇನ್ನೊಂದು ಪ್ರಸ್ತಾಪ ಇದೆ. ಹಣ ಕಳುಹಿಸಲಾಗುವ ವ್ಯಕ್ತಿಗಳು ಅಪರಿಚಿತರಾಗಿದ್ದರೆ ರಿಯಲ್ಟೈಮ್ನಲ್ಲಿ ಪೇಮೆಂಟ್ ಮಾಡುವುದು ಅಪಾಯ ಆಗಬಹುದು. ಆದರೆ, ಪರಿಚಿತರಾಗಿದ್ದರೆ? ಆರ್ಬಿಐ ಇದಕ್ಕೊಂದು ಪರಿಹಾರ ಹುಡುಕಿದೆ. ನೆಟ್ಬ್ಯಾಂಕಿಂಗ್ನಲ್ಲಿ ಇರಲಾಗುವಂತೆ ಪರಿಚಿತ ಅಥವಾ ಖಾತ್ರಿ ಇರುವ ವ್ಯಕ್ತಿಗಳಿಗೆ ಪೂರ್ವಾನುಮತಿ ಕೊಡಲು ವೈಟ್ಲಿಸ್ಟಿಂಗ್ನಂತಹ ವ್ಯವಸ್ಥೆ ಮಾಡುವುದು ಆರ್ಬಿಐನ ಉದ್ದೇಶವಾಗಿದೆ.
10,000ಕ್ಕೂ ಹೆಚ್ಚಿನ ಮೊತ್ತದ ಟ್ರಾನ್ಸಾಕ್ಷನ್ಗಳ ಮೇಲೆ ಆರ್ಬಿಐ ನಿರ್ಬಂಧ ಹಾಕಲು ಕಾರಣವಿದೆ. ಹೆಚ್ಚಿನ ಫ್ರಾಡ್ ಕೇಸ್ಗಳು ಈ ಮೊತ್ತದ ಟ್ರಾನ್ಸಾಕ್ಷನ್ಗಳಿಗೆ ಸಂಬಂಧಿಸಿದ್ದೇ ಆಗಿವೆ. ಈ ಫ್ರಾಡ್ಗಳಿಗೆ ಜನರು ಕಳೆದುಕೊಂಡಿರುವ ಒಟ್ಟೂ ಹಣದ ಶೇ. 98.5ರಷ್ಟು ಮೊತ್ತವು ಈ ಕೆಟಗರಿಯದ್ದಾಗಿದೆ. ಹೀಗಾಗಿ, ವ್ಯಕ್ತಿಯಿಂದ ವ್ಯಕ್ತಿಗೆ ಮಾಡಲಾಗುವ 10,000 ರೂಗೂ ಅಧಿಕ ಯುಪಿಐ, ಐಎಂಪಿಎಸ್ ಪೇಮೆಂಟ್ ನಿಯಮವನ್ನು ಆರ್ಬಿಐ ಬಿಗಿಗೊಳಿಸಲು ಮುಂದಾಗಿದೆ.
ಹಾವೇರಿ, ಏಪ್ರಿಲ್ 10: ಅತ್ತ ಮಧ್ಯ ಪ್ರಾಚ್ಯದಲ್ಲಿ ಕದನವಿರಾಮ ಘೋಷಣೆಯಾಗಿದ್ದರೂ, ಇತ್ತ ಕರುನಾಡಿನಲ್ಲಿ ಮಾತ್ರ ಇನ್ನೂ ಗ್ಯಾಸ್ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಸೌದೆ ಒಲೆಯಲ್ಲೇ ಅಡುಗೆ ಮಾಡಬೇಕಾದ ಪರಿಸ್ಥಿತಿ ಇದೆ. ಹೀಗಿರುವಾಗ ಅಡುಗೆ ಸಿಲಿಂಡರ್ಗಾಗಿ (Gas Cylinder)ಹಾವೇರಿಯಲ್ಲಿ ಗಲಾಟೆಯೇ (Fight) ನಡೆದಿದೆ. ಇ-ಕೆವೈಸಿ ಮಾಡಿಸಲು ಬಂದ ಗ್ರಾಹಕರ ಮೇಲೆ ಹಲ್ಲೆ HP ಗ್ಯಾಸ್ ಏಜೆನ್ಸಿ ಸಿಬ್ಬಂದಿ ಹಲ್ಲೆ ಮಾಡಿರುವಂತಹ ಘಟನೆ ನಗರದ ಹುಕ್ಕೇರಿಮಠದ ಎದುರಿರುವ HP ಗ್ಯಾಸ್ ಕಚೇರಿಯಲ್ಲಿ ನಡೆದಿದೆ.
ನಡೆದಿದ್ದೇನು?
ಬ್ಲಾಕ್ನಲ್ಲಿ ಸಿಲಿಂಡರ್ ಮಾರಾಟ ಮಾಡುತ್ತಿದ್ದಾರೆ, ನಮಗೆ ಸಿಲಿಂಡರ್ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಕನಕಾಪುರ ಗ್ರಾಮದ ಮಾಲತೇಶ್ ಗಾಜಿ ಮೇಲೆ ಮ್ಯಾನೇಜರ್ ಅಲೀಂ ಮತ್ತು ಗಣೇಶ ಸೇರಿ ನಾಲ್ವರಿಂದ ಹಲ್ಲೆ ಮಾಡಲಾಗಿದೆ. ಸದ್ಯ ಮ್ಯಾನೇಜರ್ ಅಲೀಂ ಮತ್ತು ಗಾಯಾಳು ಗ್ರಾಹಕ ಮಾಲತೇಶ್ರನ್ನ ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ನಾವು ಹಲ್ಲೆ ಮಾಡಿಲ್ಲ ಎಂದ ಸಿಬ್ಬಂದಿ
ಇನ್ನು ಹಲ್ಲೆ ಮಾಡಿದವರನ್ನು ಬಂಧಿಸುವಂತೆ ಗ್ರಾಹಕರು ಒತ್ತಾಯಿಸಿದ್ದಾರೆ. ಆದರೆ ನಾವು ಹಲ್ಲೆ ಮಾಡಿಲ್ಲ, ಅವರೇ ಹಲ್ಲೆ ಮಾಡಿ ನಮ್ಮ ಮೇಲೆ ದೂರು ನೀಡಲು ಮುಂದಾಗಿದ್ದಾರೆ ಎಂದು HP ಗ್ಯಾಸ್ ಏಜೆನ್ಸಿ ಸಿಬ್ಬಂದಿ ಹೇಳಿದ್ದಾರೆ. ಈ ವೇಳೆ ಸಿಸಿಟಿವಿ ಪರಿಶೀಲನೆ ಮಾಡುವಂತೆ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದರು.
HP ಗ್ಯಾಸ್ ಮ್ಯಾನೇಜರ್ ಅಲೀಂ ಹೇಳಿದ್ದಿಷ್ಟು
ಇನ್ನು ಈ ಬಗ್ಗೆ HP ಗ್ಯಾಸ್ ಮ್ಯಾನೇಜರ್ ಅಲೀಂ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಕಚೇರಿಯಲ್ಲಿ ಕ್ಯೂ ಇತ್ತು. ಗ್ರಾಹಕ ಕ್ಯೂ ಬಿಟ್ಟು ನಮ್ಮ ಬಳಿ ಬಂದು ಇ-ಕೆವೈಸಿ ಮಾಡಿ ಎಂದಿದ್ದಾರೆ. ಕಚೇರಿಯಲ್ಲಿ ಫ್ಯಾನ್ ಇಲ್ಲ, ಸಿಲಿಂಡರ್ ಇಲ್ಲ ಹೇಗೆ ಕ್ಯೂ ನಿಲ್ಲುವುದು ಅಂತಾ ಬಂದು ಜಗಳ ಮಾಡಿದ್ದಾರೆ. ನಮ್ಮ ಮೇಲೆ ಗ್ರಾಹಕನೇ ಹಲ್ಲೆ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಸದ್ಯ ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಇತ್ತ ಜಿಲ್ಲಾಸ್ಪತ್ರೆ ಮುಂದೆ ಕಚೇರಿಯ ಸಿಬ್ಬಂದಿ ಮತ್ತು ಗ್ರಾಹಕರ ಕಡೆಯ ಜನರು ಜಮಾವಣೆಗೊಂಡಿದ್ದಾರೆ. ದೂರು-ಪ್ರತಿದೂರು ಆಗುವ ಸಾಧ್ಯತೆ ಕೂಡ ಇದೆ.
ಮಥುರಾ, ಏಪ್ರಿಲ್ 10: ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ವೃಂದಾವನದ ಶೃಂಗಾರ್ ಘಾಟ್ ಬಳಿ ಯಮುನಾ ನದಿಯಲ್ಲಿ (Yamuna River) ಭಕ್ತರನ್ನು ಹೊತ್ತೊಯ್ಯುತ್ತಿದ್ದ ಬೋಟ್ ಮಗುಚಿದ ಪರಿಣಾಮವಾಗಿ 10 ಜನರು ಸಾವನ್ನಪ್ಪಿದ್ದು, ಹಲವಾರು ಜನರು ನಾಪತ್ತೆಯಾಗಿದ್ದಾರೆ. ಪಂಜಾಬ್‌ನ ಲುಧಿಯಾನದ ಸುಮಾರು 25 ಭಕ್ತರು ಪ್ರಯಾಣಿಸುತ್ತಿದ್ದ ಬೋಟ್ ಮಗುಚಿ ಬಿದ್ದಿದೆ. ಬಂಕೆ ಬಿಹಾರಿ ದೇವಸ್ಥಾನಕ್ಕೆ ಭೇಟಿ ನೀಡಲು ಈ ಭಕ್ತರು ಗಂಗಾ ನದಿಯ ಮೂಲಕ ಬೋಟ್ನಲ್ಲಿ ಸಾಗುತ್ತಿದ್ದರು.
ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದು, ಮಥುರಾ ಜಿಲ್ಲೆಯಲ್ಲಿ ನಡೆದ ದೋಣಿ ಅಪಘಾತದಲ್ಲಿ ಸಂಭವಿಸಿದ ಜೀವಹಾನಿ ಅತ್ಯಂತ ದುರಂತ ಮತ್ತು ಹೃದಯ ವಿದ್ರಾವಕವಾಗಿದೆ ಎಂದು ಹೇಳಿದ್ದಾರೆ. “ದುಃಖಿತ ಕುಟುಂಬಗಳಿಗೆ ನನ್ನ ಸಂತಾಪಗಳು. ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ಸ್ಥಳಕ್ಕೆ ತಲುಪಲು, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ನಡೆಸಲು ಮತ್ತು ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆ ನೀಡುವಂತೆ ಸೂಚನೆಗಳನ್ನು ನೀಡಲಾಗಿದೆ. ಗಾಯಾಳುಗಳು ಬೇಗನೆ ಚೇತರಿಸಿಕೊಳ್ಳಲಿ ಎಂದು ನಾನು ಭಗವಾನ್ ಶ್ರೀ ರಾಮನಲ್ಲಿ ಪ್ರಾರ್ಥಿಸುತ್ತೇನೆ” ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ತಮಿಳುನಾಡು ವಿಧಾನಸಭಾ ಚುನಾವಣೆಯ ಈ ಸಂದರ್ಭದಲ್ಲಿ ಭಾರಿ ಚರ್ಚೆಗೆ ಕಾರಣವಾಗಿರುವ ‘ಧುರಂಧರ್: ದಿ ರಿವೆಂಜ್’ (Dhurandhar: The Revenge) ಸಿನಿಮಾದ ಪ್ರದರ್ಶನಕ್ಕೆ ತಡೆ ನೀಡಲು ಮದ್ರಾಸ್ ಹೈಕೋರ್ಟ್ ನಿರಾಕರಿಸಿದೆ. ಚಿತ್ರದ ಪ್ರದರ್ಶನವನ್ನು ನಿಲ್ಲಿಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ನ್ಯಾಯಾಲಯವು ಆರಂಭಿಕ ಹಂತದಲ್ಲೇ ವಜಾಗೊಳಿಸುವ ಮೂಲಕ ಚಿತ್ರತಂಡಕ್ಕೆ ದೊಡ್ಡ ರಿಲೀಫ್ ನೀಡಿದೆ.
ನ್ಯಾಯಮೂರ್ತಿ ಸಂಜಯ್ ಎ. ಧರ್ಮಾಧಿಕಾರಿ ಮತ್ತು ನ್ಯಾಯಮೂರ್ತಿ ಜಿ. ಅರುಳ್ ಮುರುಗನ್ ಅವರನ್ನೊಳಗೊಂಡ ಪೀಠವು ಈ ಆದೇಶ ನೀಡಿದೆ. ತಮಿಳುನಾಡು ಚುನಾವಣಾ ಫಲಿತಾಂಶ ಪ್ರಕಟವಾಗುವವರೆಗೆ ಚಿತ್ರಮಂದಿರ ಹಾಗೂ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಚಿತ್ರದ ಪ್ರದರ್ಶನಕ್ಕೆ ತಡೆ ನೀಡಬೇಕು ಎಂಬ ಮಧ್ಯಂತರ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಲಿಲ್ಲ.
ಅರ್ಜಿದಾರರ ವಾದವೇನಿತ್ತು? ಮಧುರೈ ನಿವಾಸಿಯೊಬ್ಬರು ಸಲ್ಲಿಸಿದ್ದ ಈ ಅರ್ಜಿಯಲ್ಲಿ ಕೆಲವು ಪ್ರಮುಖ ಅಂಶಗಳನ್ನು ಉಲ್ಲೇಖಿಸಲಾಗಿತ್ತು. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ಇಂತಹ ರಾಜಕೀಯ ಪ್ರೇರಿತ ಚಿತ್ರಗಳ ಪ್ರದರ್ಶನವು ಮತದಾರರ ಮೇಲೆ ಪ್ರಭಾವ ಬೀರಬಹುದು. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಆಶಯಕ್ಕೆ ಈ ಚಿತ್ರದ ಪ್ರದರ್ಶನ ವಿರುದ್ಧವಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು.
ಆದರೆ, ಈ ವಾದಗಳನ್ನು ಒಪ್ಪದ ಹೈಕೋರ್ಟ್, ಚಿತ್ರದ ಪ್ರದರ್ಶನ ನಿಲ್ಲಿಸಲು ಯಾವುದೇ ಬಲವಾದ ಕಾರಣಗಳಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಇದರಿಂದಾಗಿ ತಮಿಳುನಾಡಿನಲ್ಲಿ ‘ಧುರಂಧರ್ 2’ ಸಿನಿಮಾ ಎಂದಿನಂತೆ ಪ್ರದರ್ಶನ ಮುಂದುವರಿಸಲಿದೆ. ಈ ಸಿನಿಮಾದಲ್ಲಿ ಬಿಜೆಪಿ ಪರವಾದ ಪ್ರೊಪಗಾಂಡ ಇದೆ ಎಂದು ಅನೇಕರು ಆರೋಪಿಸಿದ್ದಾರೆ.
ಆದಿತ್ಯ ಧರ್ ನಿರ್ದೇಶನದ ಮತ್ತು ರಣವೀರ್ ಸಿಂಗ್ ನಟನೆಯ ‘ಧುರಂಧರ್ 2’ ಸಿನಿಮಾ ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ. 2026ರ ಯಶಸ್ವಿ ಚಿತ್ರಗಳಲ್ಲಿ ಒಂದಾಗಿರುವ ಈ ಸಿನಿಮಾದ ಕಥಾವಸ್ತು ಸಾಕಷ್ಟು ಚರ್ಚೆಗೆ ಕಾರಣ ಆಗಿದೆ. ಅನೇಕ ಸೆಲೆಬ್ರಿಟಿಗಳು ಈ ಸಿನಿಮಾವನ್ನು ಹೊಗಳಿದ್ದಾರೆ. ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆ ನಡೆದಿದೆ.
ಬೆಂಗಳೂರು, ಏಪ್ರಿಲ್ 10: ರಾಜಧಾನಿ ಬೆಂಗಳೂರಿನ (Bengaluru) ಹಲವೆಡೆ ವರುಣ ಅಬ್ಬರಿಸಿದ್ದು, ಮೆಜೆಸ್ಟಿಕ್, ರಾಜಾಜಿನಗರ, ವಸಂತನಗರ, ಕಲಾಸಿಪಾಳ್ಯ, ಟೌನ್ಹಾಲ್, ವಿಜಯನಗರ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ. ಏಕಾಏಕಿ ಮಳೆ ಸುರಿದ ಹಿನ್ನೆಲೆಯಲ್ಲಿ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು ಮಂದಗತಿಯಲ್ಲಿ ವಾಹನಗಳು ಸಾಗಿವೆ. ರಾಜ್ಯದ ಹಲವೆಡೆ ಇನ್ನೂ ಕೆಲ ದಿನಗಳ ಕಾಲ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
— Karnataka State Natural Disaster Monitoring Centre (@KarnatakaSNDMC) April 10, 2026
ಇನ್ನು ಕರಾವಳಿ ಕರ್ನಾಟಕದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಮತ್ತು ಆರ್ದ್ರತೆ (Hot and Humid) ಹೆಚ್ಚಿರಲಿದೆ. ಹವಾಮಾನವು ಸಾಮಾನ್ಯವಾಗಿ ಒಣಗಿದ್ದರೂ, ಸೆಖೆಯ ಅನುಭವ ಹೆಚ್ಚಾಗಿರಲಿದೆ. ಹೀಗಾಗಿ ಏಪ್ರಿಲ್ 10ರಿಂದ 12ರ ವರೆಗೆ ಈ ಭಾಗದಲ್ಲಿ ಐಎಂಡಿ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಿದೆ.
ದಕ್ಷಿಣ ಒಳನಾಡು ಭಾಗದ ಬೆಂಗಳೂರು, ಮೈಸೂರು, ಕೊಡಗು ಮತ್ತು ಚಾಮರಾಜನಗರದ ಕೆಲವು ಭಾಗಗಳಲ್ಲಿ ಭಾಗಶಃ ಮೋಡದಿಂದ ಆಕಾಶ ಕೂಡಿರಲಿದ್ದು, ಸಂಜೆ ವೇಳೆಗೆ ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಬೆಳಗಾವಿ, ಕಲಬುರಗಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಸಂಪೂರ್ಣ ಒಣ ಹವಾಮಾನದ ಜೊತೆಗೆ ತಾಪಮಾನದಲ್ಲಿ ಏರಿಕೆ ಕಂಡುಬರಲಿದೆ. ಹಾಗೆಯೇ ಬೆಂಗಳೂರಿನಲ್ಲಿ ಹಗಲಿನ ವೇಳೆ ಬಿಸಿಲಿನ ವಾತಾವರಣ ಇರಲಿದ್ದು, ಸಂಜೆ ವೇಳೆಗೆ ಮೋಡ ಕವಿದ ವಾತಾವರಣ ಕಂಡುಬರಲಿದೆ. ನಗರದ ಗರಿಷ್ಠ ಉಷ್ಣಾಂಷ 35 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ಉಷ್ಣಾಂಷ 23 ಡಿಗ್ರಿ ಸೆಲ್ಸಿಯಸ್ ಇರಲಿದೆ. ಗಾಳಿಯ ವೇಗ ಗಂಟೆಗೆ 6-13 ಕಿಲೋ ಮೀಟರ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ತಾಪಮಾನ ಏರುತ್ತಿದ್ದಂತೆ, ಸೆಖೆಯಿಂದ ಪಾರಾಗಲು ಜನ ಐಸ್‌ಕ್ರೀಮ್ (Ice Cream) ಮೊರೆ ಹೋಗುತ್ತಿದ್ದಾರೆ. ಆದರೆ, ದೇಹಕ್ಕೆ ಕ್ಷಣಕಾಲ ತಂಪು ನೀಡುವ ಈ ಆಹಾರ ಗಮನಕ್ಕೆ ಬಾರದ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹೌದು, ಇದು ಕೆಲವರಿಗೆ ಆಶ್ಚರ್ಯ ಹುಟ್ಟಿಸಬಹುದು ಆದರೆ ಅದು ನಿಜ. ಬೇಸಿಗೆಯಲ್ಲಿ ಆಹಾರವು ಕಲುಷಿತಗೊಳ್ಳುವ ಅಪಾಯ ಹೆಚ್ಚಾಗಿರುವುದರಿಂದ ರೋಗಕಾರಕ ಸೂಕ್ಷ್ಮಜೀವಿಗಳ ಬೆಳವಣಿಗೆ ವೇಗವಾಗಿರುತ್ತದೆ. ಅದರಲ್ಲಿಯೂ ಫ್ರೋಜನ್ ಉತ್ಪನ್ನಗಳು ಸುರಕ್ಷಿತವಲ್ಲ. ಘನೀಕರಣವು ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆಯೇ ಹೊರತು ಎಲ್ಲಾ ಹಾನಿಕಾರಕ ಜೀವಿಗಳನ್ನು ನಾಶಪಡಿಸುವುದಿಲ್ಲ. ಹಾಗಾದರೆ ಐಸ್‌ಕ್ರೀಮ್ ಪದೇ ಪದೇ ತಿನ್ನುವುದರಿಂದ ಯಾವ ರೀತಿಯ ಸಮಸ್ಯೆಗಳನ್ನು ಉಂಟುಮಾಡುತ್ತದೆ, ಇದನ್ನು ತಡೆಗಟ್ಟಲು ಏನು ಮಾಡಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳಲು ಟಿವಿ9 ಕನ್ನಡ ರಾಮಯ್ಯ ಮೆಮೋರಿಯಲ್ ಹಾಸ್ಪಿಟಲ್‌ನ ಜನರಲ್ ಮೆಡಿಸಿನ್ ವಿಭಾಗದ ಕನ್ಸಲ್ಟೆಂಟ್ ಆದ ಡಾ. ಸಂದೀಪ್ ಎಸ್ ರೆಡ್ಡಿ (Sandeep S Reddy) ಅವರನ್ನು ಸಂಪರ್ಕಿಸಿದ್ದು ಅವರು ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಾರೆ.
ಡಾ. ಸಂದೀಪ್ ಎಸ್ ರೆಡ್ಡಿ ಅವರು ಹೇಳುವ ಪ್ರಕಾರ, ಸಾಲ್ಮೊನೆಲ್ಲಾ, ಲಿಸ್ಟೇರಿಯಾ, ಇ.ಕೋಲಿ ಮತ್ತು ಸ್ಟ್ಯಾಫಿಲೋಕೊಕಸ್ ಆರಿಯಸ್‌ನಂತಹ ರೋಗಕಾರಕಗಳು ಡೈರಿ ಮತ್ತು ಶೈತ್ಯೀಕರಿಸಿದ ಸಿಹಿಪದಾರ್ಥಗಳಿಗೆ ಸಂಬಂಧಿಸಿದ ಆಹಾರಗಳಲ್ಲಿ ಸೇರಿಕೊಂಡಿದ್ದು ಸೋಂಕು, ವಾಂತಿ, ಅತಿಸಾರ, ಹೊಟ್ಟೆ ನೋವು, ಜ್ವರ ಮತ್ತು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಮಕ್ಕಳು, ವಯಸ್ಸಾದವರು, ಗರ್ಭಿಣಿಯರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಇವು ಹೆಚ್ಚಾಗಿ ಕಂಡುಬರಬಹುದು. ಸೂಕ್ಷ್ಮಜೀವಿಗಳ ಅಪಾಯದ ಹೊರತಾಗಿ, ಐಸ್‌ಕ್ರೀಮ್‌ನಲ್ಲಿ ಸ್ಯಾಚುರೇಟೆಡ್ ಫ್ಯಾಟ್ ಮತ್ತು ಸಂಸ್ಕರಿಸಿದ ಸಕ್ಕರೆ ಅಧಿಕವಾಗಿರುತ್ತದೆ, ಇದು ಬೊಜ್ಜು, ಇನ್ಸುಲಿನ್ ಪ್ರತಿರೋಧ ಮತ್ತು ಹೃದಯದ ಮೇಲಿನ ಒತ್ತಡದ ಅಪಾಯವನ್ನು ಹೆಚ್ಚಿಸುತ್ತದೆ ಎಂದಿದ್ದಾರೆ.
ಅಪಾಯವನ್ನು ಕಡಿಮೆ ಮಾಡುವುದು ಹೇಗೆ?
ತಡೆಗಟ್ಟುವಿಕೆಯು ಸುರಕ್ಷಿತ ಉತ್ಪನ್ನಗಳ ಆಯ್ಕೆಯಿಂದ ಪ್ರಾರಂಭವಾಗಬೇಕು. ಸರಿಯಾದ ಶೈತ್ಯೀಕರಣವನ್ನು ನಿರ್ವಹಿಸುವ ವಿಶ್ವಾಸಾರ್ಹ ಮಳಿಗೆಗಳಿಂದ ಐಸ್‌ಕ್ರೀಮ್ ಖರೀದಿಸಿ. ಭಾಗಶಃ ಕರಗಿದ ಅಥವಾ ಮತ್ತೆ ಹೆಪ್ಪುಗಟ್ಟಿದಂತೆ ಕಾಣುವ ವಸ್ತುಗಳ ಸೇವನೆ ಮಾಡುವುದನ್ನು ತಪ್ಪಿಸಿ ಮತ್ತು ಸ್ವಚ್ಛ ಜಾಗದಲ್ಲಿ ತಯಾರಿಸಿದ ಉತ್ಪನ್ನಗಳಿಗೆ ಆದ್ಯತೆ ನೀಡಿ. ಕೈಗಳ ಸ್ವಚ್ಛತೆ, ಬಡಿಸುವ ಉಪಕರಣಗಳು ಸ್ವಚ್ಛವಾಗಿರುವುದು ಮತ್ತು ಯಂತ್ರಗಳ ಸರಿಯಾದ ನೈರ್ಮಲ್ಯವು ಮಾಲಿನ್ಯದ ಅಪಾಯವನ್ನು ಕಡಿಮೆ ಮಾಡಲು ಅತ್ಯಗತ್ಯ. ಮನೆಯಲ್ಲಿ, ಐಸ್‌ಕ್ರೀಮ್ ಅನ್ನು ಸರಿಯಾದ ಫ್ರೀಜರ್ ತಾಪಮಾನದಲ್ಲಿ ಸಂಗ್ರಹಿಸಬೇಕು ಮತ್ತು ಬಡಿಸುವ ಸಮಯದಲ್ಲಿ ದೀರ್ಘಕಾಲದವರೆಗೆ ಹೊರಗೆ ಇಡಬಾರದು. ಒಂದು ವೇಳೆ ಉತ್ಪನ್ನವು ಕರಗಿ ಮತ್ತೆ ಹೆಪ್ಪುಗಟ್ಟಿದ್ದರೆ, ಅದನ್ನು ಸೇವಿಸುವ ಬದಲು ಎಸೆಯುವುದು ಒಳ್ಳೆಯದು. ಬೇಸಿಗೆಯ ತಿಂಗಳುಗಳಲ್ಲಿ ಆಹಾರದಿಂದ ಹರಡುವ ಸೋಂಕುಗಳಿಗೆ ಸುಲಭವಾಗಿ ಒಳಗಾಗುವ ಮಕ್ಕಳ ಬಗ್ಗೆ ಪೋಷಕರು ಜಾಗರೂಕರಾಗಿರಬೇಕು.
ರೋಗಲಕ್ಷಣಗಳು ಪ್ರಾರಂಭವಾದಾಗ ಸ್ವಯಂ- ಮದ್ದನ್ನು ಮಾಡಬಾರದು. ನಿರಂತರ ವಾಂತಿ, ಅತಿಸಾರ, ಜ್ವರ, ಹೊಟ್ಟೆ ನೋವು, ಮಲದಲ್ಲಿ ರಕ್ತ ಅಥವಾ ನಿರ್ಜಲೀಕರಣದ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರ ಗಮನಕ್ಕೆ ತರಬೇಕು. ಚಿಕಿತ್ಸೆಯಲ್ಲಿ ವಿಳಂಬ ಮಾಡುವುದರಿಂದ ಗುಣಪಡಿಸಬಹುದಾದ ಸೋಂಕು ಉಲ್ಬಣಗೊಳ್ಳಬಹುದು, ವಿಶೇಷವಾಗಿ ಮಕ್ಕಳು ಮತ್ತು ವೃದ್ಧರಲ್ಲಿ ಇದು ಅಪಾಯಕಾರಿಯಾಗಬಹುದು. ಆರಂಭಿಕ ತಪಾಸಣೆಯು ವೈದ್ಯರಿಗೆ ಅದು ಆಹಾರದಲ್ಲಿ ಸೇರಿಕೊಂಡ ವಿಷವೋ (Food Poisoning), ವೈರಲ್ ಗ್ಯಾಸ್ಟ್ರೋಎಂಟರೈಟಿಸ್ ಆಗಿದೆಯೋ ಅಥವಾ ನಿರ್ದಿಷ್ಟ ಚಿಕಿತ್ಸೆಯ ಅಗತ್ಯವಿರುವ ಇತರ ಸ್ಥಿತಿಯೇ ಎಂದು ನಿರ್ಧರಿಸಲು ಸಹಾಯ ಮಾಡುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ, ಸಮಯೋಚಿತ ವೈದ್ಯಕೀಯ ಆರೈಕೆಯು ಗಂಭೀರ ಸಮಸ್ಯೆಗಳನ್ನು ಮತ್ತು ಅನಗತ್ಯ ಆಸ್ಪತ್ರೆ ದಾಖಲಾಗುವುದನ್ನು ತಡೆಯುತ್ತದೆ.
ಹೈದರಾಬಾದ್, ಏಪ್ರಿಲ್ 10: ತೆಲಂಗಾಣ ಸರ್ಕಾರವು (Telangana Government) ಈ ವರ್ಷ ಮಹಿಳೆಯರಿಗೆ ಉಚಿತ ಸೀರೆ ವಿತರಣಾ ಯೋಜನೆಯನ್ನು ಮುಂದುವರಿಸಲು ನಿರ್ಧರಿಸಿದೆ. ಈ ಬಾರಿ ಸೀರೆಗಳಿಗೆ ಹೊಸ ಬಣ್ಣ ಮತ್ತು ವಿನ್ಯಾಸವನ್ನು ಪರಿಚಯಿಸುತ್ತಿದೆ. ತೆಲಂಗಾಣ ಸರ್ಕಾರವು ಹಿಂದಿನ ಬಾರಿ ವಿತರಿಸಲಾದ ನೀಲಿ ಸೀರೆಗಳ ಬದಲು ಗಿಳಿ ಹಸಿರು ಸೀರೆಗೆ ಕೆಂಪು ಜರಿ ಇರುವ ಸೀರೆಗಳನ್ನು ನೀಡಲು ನಿರ್ಧರಿಸಿದೆ. ಈ ಯೋಜನೆಯಲ್ಲಿ ನವೀಕರಿಸಿದ ವಿನ್ಯಾಸಗಳನ್ನು ಪರಿಚಯಿಸಲು ಈ ಬದಲಾವಣೆಯನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತೆಲಂಗಾಣ ಸರ್ಕಾರ 450 ಕೋಟಿ ರೂ. ವೆಚ್ಚದಲ್ಲಿ 1 ಕೋಟಿ ಸೀರೆಗಳನ್ನು ಉತ್ಪಾದಿಸುವ ಆದೇಶವನ್ನು ಟೆಸ್ಕೊಗೆ ನೀಡಿದೆ. ಕಳೆದ ವರ್ಷ ಇಂದಿರಾ ಗಾಂಧಿಯವರ ಜನ್ಮ ದಿನಾಚರಣೆಯಂದು ನವೆಂಬರ್ 19ರಂದು ಸರ್ಕಾರ ಸುಮಾರು 86 ಲಕ್ಷ ಸೀರೆಗಳನ್ನು ವಿತರಿಸಿತ್ತು. ಪ್ರಸ್ತುತ ಸರ್ಕಾರ ಅಕ್ಟೋಬರ್ ವೇಳೆಗೆ ಸೀರೆಗಳ ಉತ್ಪಾದನೆಯನ್ನು ಪೂರ್ಣಗೊಳಿಸಲು ಮತ್ತು ಈ ವರ್ಷ ಅದೇ ದಿನಾಂಕದಂದು ಮತ್ತೆ ಸೀರೆಗಳನ್ನು ವಿತರಿಸಲು ನಿರ್ಧರಿಸಿದೆ.
ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಒಂದೇ ಬಣ್ಣವನ್ನು ಕಾಯ್ದುಕೊಳ್ಳುವ ಬದಲು ಪ್ರತಿ ವರ್ಷ ಬೇರೆ ಬೇರೆ ವಿನ್ಯಾಸ ಮತ್ತು ಬಣ್ಣದ ಸೀರೆಗಳನ್ನು ವಿತರಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ. ಇದರ ಆಧಾರದ ಮೇಲೆ ಈ ಬಾರಿ ಅಧಿಕಾರಿಗಳು ಗಿಳಿ ಹಸಿರು ಬಣ್ಣದ ಸೀರೆಯನ್ನು ನೀಡಲು ನಿರ್ಧರಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನವೆಂಬರ್ 19ರಂದು ಇಂದಿರಾ ಗಾಂಧಿ ಜಯಂತಿಯಂದು ಈ ಸೀರೆ ವಿತರಣಾ ಯೋಜನೆಯನ್ನು ತಂದಿತು. ಇದರ ಭಾಗವಾಗಿ, ಕಳೆದ ವರ್ಷ ರಾಜ್ಯದಲ್ಲಿ ಸುಮಾರು 86 ಲಕ್ಷ ಜನರಿಗೆ ಸೀರೆಗಳನ್ನು ವಿತರಿಸಲಾಯಿತು. ಗ್ರಾಮೀಣ ಮತ್ತು ನಗರ ಪ್ರದೇಶದ ಮಹಿಳೆಯರಿಗೆ ಸೀರೆಗಳನ್ನು ಏಕಕಾಲದಲ್ಲಿ ವಿತರಿಸಬೇಕು ಎಂದು ಸರ್ಕಾರ ಸೂಚಿಸಿದೆ. ಅಕ್ಟೋಬರ್ ವೇಳೆಗೆ ಸೀರೆಗಳ ಉತ್ಪಾದನೆಯನ್ನು ಪೂರ್ಣಗೊಳಿಸಿ ನವೆಂಬರ್‌ನಲ್ಲಿ ಇಂದಿರಾ ಗಾಂಧಿ ಜಯಂತಿಯಂದು ವಿತರಿಸಲು ಸರ್ಕಾರ ಆದೇಶಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಈ ಬಾರಿಯ ಐಪಿಎಲ್ನಲ್ಲಾದರೂ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಹಳೆಯ ಲಯಕ್ಕೆ ಮರಳುತ್ತದೆ ಎಂದು ಕಾದು ಕುಳಿತಿದ್ದ ಅಭಿಮಾನಿಗಳಿಗೆ ಮತ್ತದೆ ನಿರಾಸೆ ಎದುರಾಗಿದೆ. ಕಳೆದ ಆವೃತ್ತಿಯಂತೆಯೇ ಈ ಆವೃತ್ತಿಯಲ್ಲೂ ಸಿಎಸ್ಕೆ ತಂಡ ಸತತವಾಗಿ ಕಳಪೆ ಪ್ರದರ್ಶನ ನೀಡುತ್ತಿದೆ. ಇದರ ಜೊತೆಗೆ ತಂಡದ ಜೀವಾಳ ಎನಿಸಿಕೊಂಡಿರುವ ಎಂಎಸ್ ಧೋನಿ ಅವರ ಅಲಭ್ಯತೆಯೂ ತಂಡಕ್ಕೆ ಮತ್ತಷ್ಟು ಸಂಕಷ್ಟಗಳನ್ನು ತಂದೊಡ್ಡಿದೆ.
ಐಪಿಎಲ್ಗೆ ಭರ್ಜರಿ ತಯಾರಿ ಮಾಡಿಕೊಂಡಿದ್ದ ಧೋನಿ, ಮೊದಲ ಪಂದ್ಯದಿಂದಲೇ ಕಣಕ್ಕಿಳಿಯುವ ತವಕದಲ್ಲಿದ್ದರು. ಆದರೆ ಅಭ್ಯಾಸದ ವೇಳೆ ಗಾಯಕ್ಕೆ ತುತ್ತಾದ ಧೋನಿ ಇದುವರೆಗೂ ತಂಡವನ್ನು ಕೂಡಿಕೊಂಡಿಲ್ಲ. ಪ್ರಸ್ತುತ ರಿಹ್ಯಾಬ್ನಲ್ಲಿ ಚೇತರಿಸಿಕೊಳ್ಳುತ್ತಿರುವ ಧೋನಿ, ಮೊದಲ ಎರಡು ವಾರಗಳ ಐಪಿಎಲ್ಗೆ ಲಭ್ಯವಿರುವುದಿಲ್ಲ ಎಂದು ಫ್ರಾಂಚೈಸಿ ಘೋಷಿಸಿತ್ತು. ಈಗ, ಅವರ ಫಿಟ್ನೆಸ್ ಬಗ್ಗೆ ಹೊಸ ಅಪ್ಡೇಟ್ ಹೊರಬಿದ್ದಿದೆ.
ಮಾಧ್ಯಮ ವರದಿಗಳ ಪ್ರಕಾರ, ಧೋನಿ ಏಪ್ರಿಲ್ 11, 2026 ರಂದು ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ತವರು ಪಂದ್ಯವನ್ನು ಸಹ ತಪ್ಪಿಸಿಕೊಳ್ಳಲಿದ್ದಾರೆ. ಆದರೆ ಏಪ್ರಿಲ್ 14 ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಮುಂದಿನ ಪಂದ್ಯದಲ್ಲಿ ಅವರು ಕಣಕ್ಕಿಳಿಯಲಿದ್ದಾರೆ ಎಂದು ವರದಿಯಾಗಿದೆ. ಆದಾಗ್ಯೂ, ಈ ಬಗ್ಗೆ ಸಿಎಸ್ಕೆ ಆಡಳಿತ ಮಂಡಳಿ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.
ಮತ್ತೊಂದೆಡೆ, ಧೋನಿ ಅನುಪಸ್ಥಿತಿಯು ಸಿಎಸ್ಕೆ ತಂಡಕ್ಕೆ ದೊಡ್ಡ ಹೊಡೆತ ನೀಡಿದೆ. ಏಕೆಂದರೆ ತಂಡವು ಸತತ ಮೂರು ಪಂದ್ಯಗಳನ್ನು ಸೋತಿದ್ದು, ಮೊದಲ ಗೆಲುವಿಗಾಗಿ ಕಾಯುತ್ತಿದೆ. ಹೀಗಿರುವಾಗ ಧೋನಿ ಆದಷ್ಟು ಬೇಗ ತಂಡವನ್ನು ಕೂಡಿಕೊಳ್ಳುವುದು ಸಿಎಸ್ಕೆ ತಂಡಕ್ಕೆ ಬಲ ನೀಡುತ್ತದೆ. ಕೆಲವು ದಿನಗಳ ಹಿಂದೆ ಧೋನಿ ನೆಟ್ಸ್ನಲ್ಲಿ ಬ್ಯಾಟಿಂಗ್ ಅಭ್ಯಾಸ ಕೂಡ ಮಾಡಿದ್ದರು. ಆದರೆ ಅವರು ಇನ್ನೂ ಫಿಟ್ ಆಗದಿರುವುದು ಆಡಳಿತ ಮಂಡಳಿಯ ಕಳವಳ ಹೆಚ್ಚಿಸಿದೆ.
ಧೋನಿ ಜೊತೆಗೆ, ದಕ್ಷಿಣ ಆಫ್ರಿಕಾದ ಯುವ ಬ್ಯಾಟ್ಸ್ಮನ್ ಡೆವಾಲ್ಡ್ ಬ್ರೆವಿಸ್ ಗಾಯಗೊಂಡಿರುವುದು ಕೂಡ ಸಿಎಸ್ಕೆಗೆ ಮತ್ತೊಂದು ಹಿನ್ನಡೆಯಾಗಿದೆ. ಗಾಯದಿಂದಾಗಿ ಬ್ರೆವಿಸ್ ಮೊದಲ ಮೂರು ಪಂದ್ಯಗಳಿಂದ ಹೊರಗುಳಿದಿದ್ದರು. ಆದಾಗ್ಯೂ, ಅವರು ಚೇತರಿಸಿಕೊಂಡಿದ್ದು ಮುಂದಿನ ಪಂದ್ಯಕ್ಕೆ ಲಭ್ಯವಿರಬಹುದು. ಬ್ರೆವಿಸ್ ಇತ್ತೀಚೆಗೆ ಅಭಿಮಾನಿಗಳಿಗೆ ಸಂದೇಶ ಕಳುಹಿಸಿದ್ದು, ಏಪ್ರಿಲ್ 11 ರಂದು ಮೈದಾನಕ್ಕೆ ಮರಳುವುದಾಗಿ ಹೇಳಿದ್ದಾರೆ.
ನವದೆಹಲಿ, (ಏಪ್ರಿಲ್ 10): ಗ್ಯಾಸ್ ಸ್ಟೌ ಮಾದರಿಯಲ್ಲೇ ಜ್ವಾಲೆ ಹರಡುವ “ವಿದ್ಯುತ್ ಸ್ಟೌ” (Electric Stove) ಅನ್ನು ಪರಿಚಯಿಸಿ ಅದರ ಉತ್ಪಾದನೆಗೆ ಕೇಂದ್ರ ಸರ್ಕಾರ ಆದ್ಯತೆ ನೀಡುವ ಚಿಂತನೆ ಸಹ ನಡೆಸುತ್ತಿದ್ದು, ಎಎಲ್ಪಿಜೆ ಗ್ಯಾಸ್ (LPG) ಪರ್ಯಾಯವಾಗಿ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ (Pralhad Joshi) ಅವರ ಸಲಹೆಯಂತೆ ಕೇಂದ್ರ ಸರ್ಕಾರ ದೇಶದೆಲ್ಲೆಡೆ 50 ಲಕ್ಷ PNG ಸಂಪರ್ಕಕ್ಕೆ ಪ್ರಾಶಸ್ತ್ಯ ನೀಡಿದೆ. ಈ ಜ್ವಾಲೆ ಉತ್ಪಾದಿಸುವ ವಿದ್ಯುತ್ ಸ್ಟೌ ಪ್ರದರ್ಶಿಸಿ, ಗೃಹ ಬಳಕೆ ಮತ್ತು ವಾಣಿಜ್ಯ ಬಳಕೆಗೆ ಸೂಕ್ತವಾಗುವಂತೆ ವಿವಿಧ ಮಾದರಿಗಳಲ್ಲಿ ಈ ವಿನೂತನ ವಿದ್ಯುತ್ ಸ್ಟೌ ತಯಾರಿಸಿ ಪೂರೈಸಬೇಕಿದೆ ಎಂದು ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವರು ಆಗಿರುವ ಪ್ರಲ್ಹಾದ ಜೋಶಿ ಅವರು LPG ಇಲ್ಲದೆ ಜ್ವಾಲೆಯನ್ನು ಉತ್ಪಾದಿಸುವ ವಿನೂತನ ಮಾದರಿ, ತಂತ್ರಜ್ಞಾನದ “ವಿದ್ಯುತ್ ಸ್ಟೌ” ಅನ್ನು ಪರಿಚಯಿಸಿದ್ದಾರೆ. ಗ್ಯಾಸ್ ಸ್ಟೌ ರೀತಿಯೇ ಜ್ವಾಲೆ ಹರಡುವ ಈ ವಿದ್ಯುತ್ ಸ್ಟೌ ನೋಡಿ ಭಾರತದಲ್ಲಿ ಬೃಹತ್ ಪ್ರಮಾಣದಲ್ಲಿ ಇದರ ಉತ್ಪಾದನೆಗೆ ಸಿದ್ಧತೆ ನಡೆಸುವಂತೆ ಗಮನ ಸೆಳೆದಿದ್ದಾರೆ.
ಎಲ್‌ಪಿಜಿಯ ಅಗತ್ಯವಿಲ್ಲದೆ ಅನಿಲದಂತೆ ಉರಿಯುವ ಶುದ್ಧ ಇಂಧನ ಮೂಲವನ್ನು ಅರಸುತ್ತಿದ್ದ ಭಾರತಿಯರಿಗೆ ಇದೀಗ ಎಲ್ಪಿಜಿಯಂತೆ ಜ್ವಾಲೆ ಹರಡುವ ಈ ವಿದ್ಯುತ್ ಸ್ಟೌ ಅಡುಗೆ ಅನಿಲದ ಕೊರತೆ ನೀಗಿಸುವ ಆಶಾಭಾವನೆ ಮೂಡಿಸಿದೆ. ಹೋಟೆಲ್, ಬೇಕರಿ ಮುಂತಾದ ಆಹಾರೋದ್ಯಮಿಗಳಿಗೆ ಒಂದು ಪರ್ಯಾಯ ಇಂಧನ ಮೂಲದ ಒಲೆಯಾಗಿ ಕಾಣಿಸುತ್ತಿದೆ. ಎಲ್‌ಪಿಜಿ ಬಳಸದೆ ಜ್ವಾಲೆಯನ್ನು ಉತ್ಪಾದಿಸುವ ಈ ಸ್ಟೌವ್ ಅಂದುಕೊಂಡಂತೆ ಭಾರತದಲ್ಲೇ ದೊಡ್ಡ ಮಟ್ಟದಲ್ಲಿ ತಯಾರಾದರೆ ಪ್ರಧಾನಿ ನರೇಂದ್ರ ಮೋದಿ ಅವರ ‘ಆತ್ಮನಿರ್ಭರ ಭಾರತ’ ಸಾಕಾರಕ್ಕೆ ಮತ್ತೊಂದು ಗರಿ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಏನಿದರ ವಿಶೇಷತೆ?
ವಿದ್ಯುತ್ ಚಾಲಿತ ಈ ಸ್ಟೌವ್ ಅಲ್ಲಿ LPG ಇಲ್ಲದೆಯೇ ಗ್ಯಾಸ್ ಒಲೆಯಂತೆಯೇ ಜ್ವಾಲೆ ಉತ್ಪಾದನೆ ಆಗುತ್ತದೆ. ಹೆಚ್ಚು ಶಾಖವೂ ಇರುತ್ತದೆ. ಮಾತ್ರವಲ್ಲದೆ, ಕಾರ್ಬನ್ ಸಹ ಹೊರ ಸೂಸುವುದಿಲ್ಲ. ನಿಜವಾಗಿ ನಾನು ಸಹ ಈ ಹೊಸ ತಂತ್ರಜ್ಞಾನದಿಂದ ಪ್ರಭಾವಿತನಾಗಿದ್ದೇನೆ. ಭಾರತೀಯ ತಯಾರಕರು ಈ ನೂತನ ತಂತ್ರಜ್ಞಾನ ಅಳವಡಿಸಿಕೊಂಡು ಎಲ್ಪಿಜಿ ರಹಿತ, ವಿದ್ಯುತ್ ಜ್ವಾಲೆ ಹರಡುವ ನೂತನ ಒಲೆಯನ್ನು ದೇಶದೊಳಗೆ ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಬೇಕೆಂದು ಎಂದು ಪ್ರಲ್ಹಾದ ಜೋಶಿ ತಿಳಿಸಿದ್ದಾರೆ ಕರೆ ಕೊಟ್ಟಿದ್ದಾರೆ.
Yesterday, an Indian company demonstrated an imported stove that uses electricity to generate flame-like burners, similar to LPG, for cooking. I was truly impressed by this innovative technology and would like to see Indian manufacturers adopt and scale it domestically.
ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ ಜತೆ ಈ ಸ್ಟೌ ಸಂಯೋಜಿಸಿದರೆ ಎಲ್‌ಪಿಜಿ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಇದರಿಂದ ದೇಶಾದ್ಯಂತ ಒಂದು ಮಹತ್ತರ ಬದಲಾವಣೆ ತರಬಹುದು. ಇನ್ನು, Lpg ಗೆ ಪರ್ಯಾಯವಾಗಿ ದೇಶದಲ್ಲಿ ಮತ್ತೊಂದು ತಂತ್ರಜ್ಞಾನದ ಬಗ್ಗೆಯೂ ಚರ್ಚೆ ನಡೆದಿದೆ. LPG ಕೊರತೆ ಮತ್ತು ಬೆಲೆ ಏರಿಕೆ ಪರಿಣಾಮ ಹೈಡ್ರೋಜನ್ ಅಡುಗೆ ಘಟಕದ ಬಗ್ಗೆಯೂ ವ್ಯಾಪಕ ಚಿಂತನೆ ನಡೆದಿದೆ. ನೀರಿನಿಂದ ಅನಿಲ ಉತ್ಪಾದಿಸುವ ವಿಧಾನ ಇದಾಗಿದೆ ಎಂದು ಹೇಳಿದ್ದಾರೆ.
ಜಾಮನಗರ್, ಏಪ್ರಿಲ್ 10: ರಿಲಾಯನ್ಸ್ ಇಂಡಸ್ಟ್ರೀಸ್ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಅನಂತ್ ಅಂಬಾನಿ ಅವರು ವನತಾರಾ ಯೂನಿವರ್ಸಿಟಿಗೆ ಚಾಲನೆ ನೀಡಿದ್ದಾರೆ. ವನ್ಯಜೀವಿ ಸಂರಕ್ಷಣಾ ಸಂಸ್ಥೆಯಾದ ವನತಾರಾದಿಂದ ಶುರುವಾಗಿರುವ ಇದು ವಿಶ್ವದ ಮೊದಲ ಜಾಗತಿಕ ವನ್ಯಜೀವಿ ಮತ್ತು ಪಶುವೈದ್ಯಕೀಯ ವಿಶ್ವವಿದ್ಯಾಲಯವಾಗಿದೆ.
ವನ್ತಾರಾ ವಿಶ್ವವಿದ್ಯಾಲಯವು ಪ್ರಾಣಿ ಕಲ್ಯಾಣ, ವೈಜ್ಞಾನಿಕ ಪ್ರಗತಿ ಮತ್ತು ವನ್ಯಜೀವಿ ಸಂರಕ್ಷಣೆಯ ಭವಿಷ್ಯದಲ್ಲಿ ಬೇರೂರಿದೆ. ಪಶುವೈದ್ಯಕೀಯ ಔಷಧ, ಸಂರಕ್ಷಣೆ ಮತ್ತು ವನ್ಯಜೀವಿ ಆರೈಕೆಯಲ್ಲಿ ಭವಿಷ್ಯದ ನಾಯಕರನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಈ ಸಂಸ್ಥೆ ಹೊಂದಿದೆ. ಇದರ ಪಠ್ಯಕ್ರಮವು ಭಾರತದ ನಿರಂತರ ಜ್ಞಾನ ಸಂಪ್ರದಾಯಗಳನ್ನು ಬಳಸಿಕೊಂಡು ಉದ್ದೇಶ-ನೇತೃತ್ವದ ಮತ್ತು ಭವಿಷ್ಯವನ್ನು ಎದುರಿಸುವ ಶಿಕ್ಷಣ ಮಾದರಿಯನ್ನು ರೂಪಿಸುತ್ತದೆ.
“ಸಂರಕ್ಷಣೆಯ ಭವಿಷ್ಯವು ನಾವು ಮನಸ್ಸುಗಳು ಮತ್ತು ಸಂಸ್ಥೆಗಳನ್ನು ಸಹಾನುಭೂತಿ, ಜ್ಞಾನ ಮತ್ತು ಕೌಶಲ್ಯದಿಂದ ಜೀವನಕ್ಕೆ ಸೇವೆ ಸಲ್ಲಿಸಲು ಹೇಗೆ ಸಿದ್ಧಪಡಿಸುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ವನ್ತಾರಾ ವಿಶ್ವವಿದ್ಯಾಲಯವು ಸಂಕಷ್ಟದಲ್ಲಿರುವ ಪ್ರಾಣಿಗಳನ್ನು ವೀಕ್ಷಿಸುವ ಮತ್ತು ಅವುಗಳ ಆರೈಕೆಯಲ್ಲಿ ಹೆಚ್ಚಿನ ಸಾಮರ್ಥ್ಯದ ಅಗತ್ಯವನ್ನು ಗುರುತಿಸುವ ಆಳವಾದ ವೈಯಕ್ತಿಕ ಪ್ರಯಾಣದಿಂದ ರೂಪುಗೊಂಡಿದೆ. ಪ್ರಾಚೀನ ನಳಂದ ವಿಶ್ವವಿದ್ಯಾಲಯದ ನೀತಿ ಮತ್ತು “ನೋ ಭದ್ರಃ ಕ್ರತವೋ ಯಂತು ವಿಶ್ವತಃ” ಎಂಬ ಮನೋಭಾವದಿಂದ ಪ್ರೇರಿತರಾಗಿ, ವಿಶ್ವವಿದ್ಯಾಲಯವು ಪ್ರತಿ ಜೀವವನ್ನು ರಕ್ಷಿಸಲು ಬದ್ಧವಾಗಿರುವ ಹೊಸ ಪೀಳಿಗೆಯನ್ನು ಬೆಳೆಸಲು ಪ್ರಯತ್ನಿಸುತ್ತದೆ, ಅಂದರೆ ಎಲ್ಲಾ ದಿಕ್ಕುಗಳಿಂದಲೂ ಉದಾತ್ತ ಆಲೋಚನೆಗಳು ನಮಗೆ ಬರಲಿ” ಎಂದು ಅನಂತ್ ಅಂಬಾನಿ ಹೇಳಿದರು.
ಅಪ್ಪ ಮುಕೇಶ್ ಅಂಬಾನಿ ಜೊತೆ ಅನಂತ್ ಅಂಬಾನಿ
ಈ ನೀತಿಯನ್ನು ಆಚರಣೆಯ ಸಂದರ್ಭದಲ್ಲಿ ಪ್ರತಿಬಿಂಬಿಸುತ್ತಾ, ಎರಡು ಬಿಜೋಲಿಯಾ ಮರಳುಗಲ್ಲುಗಳನ್ನು ಅಡಿಪಾಯ ಸ್ಥಳದ ವಿನ್ಯಾಸದಲ್ಲಿ ಸೇರಿಸಲಾಯಿತು. ಪ್ರಾಚೀನ ವಿಂಧ್ಯ ರಚನೆಯಿಂದ, ಇಂದಿನ ಬಿಹಾರದಲ್ಲಿರುವ ಪ್ರಾಚೀನ ನಳಂದದೊಂದಿಗೆ ಸಂಬಂಧಿಸಿದ ಅದೇ ಭೌಗೋಳಿಕ ಅಡಿಪಾಯದಿಂದ ತೆಗೆದುಕೊಳ್ಳಲ್ಪಟ್ಟ ಈ ಕಲ್ಲುಗಳು ಭಾರತದ ಜ್ಞಾನ ಮತ್ತು ಕಲಿಕೆಯ ನಿರಂತರ ಪರಂಪರೆಯನ್ನು ಸಂಕೇತಿಸುತ್ತವೆ.
ಹಿಂದೂ ಸಂಪ್ರದಾಯಗಳಿಗೆ ಅನುಗುಣವಾಗಿ ನಡೆಸಲಾದ ಅಡಿಪಾಯ ಸಮಾರಂಭವು ಅನಂತ್ ಅಂಬಾನಿಯವರ ಶಿಕ್ಷಕರು ಮತ್ತು ಮಾರ್ಗದರ್ಶಕರು ಸೇರಿದಂತೆ ಶೈಕ್ಷಣಿಕ, ವಿಜ್ಞಾನ, ಸಂರಕ್ಷಣೆ ಮತ್ತು ಸಾರ್ವಜನಿಕ ಜೀವನದ ಪ್ರತಿನಿಧಿಗಳನ್ನು ಒಟ್ಟುಗೂಡಿಸಿತು. ಈ ಕಾರ್ಯಕ್ರಮದ ಕೇಂದ್ರ ಅಂಶವೆಂದರೆ ಅಡಿಪಾಯ ಹಾಕುವ ಸಾಂಕೇತಿಕ ಕ್ರಿಯೆಯಾಗಿ ಮಣ್ಣು, ನೀರು ಮತ್ತು ಕಲ್ಲುಗಳನ್ನು ಧಾರ್ಮಿಕವಾಗಿ ಇರಿಸುವುದು. ಭಾರತದಾದ್ಯಂತ ಜೀವವೈವಿಧ್ಯ-ಸಮೃದ್ಧ ಭೂದೃಶ್ಯಗಳಿಂದ ಸಂಗ್ರಹಿಸಲಾದ ಈ ಅಂಶಗಳನ್ನು ಬಳಸಿಕೊಂಡು, ಹುಲ್ಲುಗಾವಲುಗಳು, ಕಾಡುಗಳು, ಜೌಗು ಪ್ರದೇಶಗಳು, ಶುಷ್ಕ ಪರಿಸರ ವ್ಯವಸ್ಥೆಗಳು ಮತ್ತು ಹಿಮಾಲಯ ಮತ್ತು ದೇಶದ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಮತ್ತು ಮಧ್ಯ ಭಾಗಗಳಲ್ಲಿ ವ್ಯಾಪಿಸಿರುವ ಇತರ ಎತ್ತರದ ಆವಾಸಸ್ಥಾನಗಳಿಂದ ಸಂಗ್ರಹಿಸಲಾಗಿದೆ. ಇದು ಭಾರತದ ಪರಿಸರ ಶ್ರೀಮಂತಿಕೆ ಮತ್ತು ರಾಷ್ಟ್ರದ ನೈಸರ್ಗಿಕ ಪರಂಪರೆಯ ಅಡಿಪಾಯದ ಮೇಲೆ ವಿಶ್ವವಿದ್ಯಾಲಯವನ್ನು ನಿರ್ಮಿಸುವ ದೃಷ್ಟಿಕೋನವನ್ನು ಸಂಕೇತಿಸುತ್ತದೆ.
ವನ್ತಾರಾ ವಿಶ್ವವಿದ್ಯಾಲಯವು ನೈಜ-ಪ್ರಪಂಚದ ಸಂರಕ್ಷಣಾ ಅಭ್ಯಾಸಗಳಲ್ಲಿ ಬೇರೂರಿರುವ ಒಂದೇ ಶೈಕ್ಷಣಿಕ ಪರಿಸರ ವ್ಯವಸ್ಥೆಯೊಳಗೆ ವೈವಿಧ್ಯಮಯ ವಿಭಾಗಗಳನ್ನು ಒಂದುಗೂಡಿಸುತ್ತದೆ. ವಂಟಾರ ಅವರ ನೆಲದ ಪರಿಣತಿಯನ್ನು ಬಳಸಿಕೊಂಡು, ವಿಶ್ವವಿದ್ಯಾನಿಲಯವು ಕ್ಷೇತ್ರ ಜ್ಞಾನವನ್ನು ಶೈಕ್ಷಣಿಕ ಕಾರ್ಯಕ್ರಮಗಳು, ವೃತ್ತಿಪರ ತರಬೇತಿ ಮತ್ತು ಜಾಗತಿಕವಾಗಿ ಸಂಬಂಧಿತ ಚೌಕಟ್ಟುಗಳಾಗಿ ಭಾಷಾಂತರಿಸುತ್ತದೆ. ಸಹಾನುಭೂತಿ, ವಿಜ್ಞಾನ ಮತ್ತು ಸಂರಕ್ಷಣೆಯನ್ನು ಮಿಶ್ರಣ ಮಾಡುವ ಮೂಲಕ, ಇದು ವನ್ಯಜೀವಿ ಮತ್ತು ಪರಿಸರ ವ್ಯವಸ್ಥೆಯ ಆರೋಗ್ಯದಲ್ಲಿ ಸಂಕೀರ್ಣ ಮತ್ತು ವಿಕಸನಗೊಳ್ಳುತ್ತಿರುವ ಸವಾಲುಗಳನ್ನು ಎದುರಿಸಲು ವೃತ್ತಿಪರರನ್ನು ರೂಪಿಸುತ್ತದೆ.
ವನತಾರಾ ವಿವಿ ಉದ್ಘಾಟನೆ ಸಂದರ್ಭದಲ್ಲಿ…
ವಿಶ್ವವಿದ್ಯಾನಿಲಯವು ಪದವಿಪೂರ್ವ, ಸ್ನಾತಕೋತ್ತರ, ಫೆಲೋಶಿಪ್ ಮತ್ತು ವಿಭಾಗಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ನೀಡುತ್ತದೆ. ಇವುಗಳಲ್ಲಿ ವನ್ಯಜೀವಿ ಔಷಧ ಮತ್ತು ಶಸ್ತ್ರಚಿಕಿತ್ಸೆ, ಪೋಷಣೆ, ನಡವಳಿಕೆಯ ವಿಜ್ಞಾನಗಳು, ತಳಿಶಾಸ್ತ್ರ, ಸಾಂಕ್ರಾಮಿಕ ರೋಗಶಾಸ್ತ್ರ, ಒಂದು ಆರೋಗ್ಯ, ಸಂರಕ್ಷಣಾ ನೀತಿ ಮತ್ತು ನೈಸರ್ಗಿಕ ಪ್ರಾಣಿ ಆರೈಕೆ ಪರಿಸರ ವಿನ್ಯಾಸ ಸೇರಿವೆ. ವಂಟಾರಾದ ಕಾರ್ಯಾಚರಣೆಯ ಸಾಮರ್ಥ್ಯಗಳೊಂದಿಗೆ ಹೊಂದಿಕೊಂಡ ವಿಶೇಷ ಕಾಲೇಜುಗಳಾಗಿ ಸಂಘಟಿಸಲಾದ ಈ ವಿಶ್ವವಿದ್ಯಾನಿಲಯವು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅಂಚಿನಲ್ಲಿರುವ ಹಿನ್ನೆಲೆಯ ವಿದ್ಯಾರ್ಥಿಗಳನ್ನು ಬೆಂಬಲಿಸಲು ವಿದ್ಯಾರ್ಥಿವೇತನಗಳನ್ನು ಸಹ ನೀಡುತ್ತದೆ.
ವನತಾರಾ ವಿಶ್ವವಿದ್ಯಾಲಯವು ಮುಂದುವರಿದ ಶೈಕ್ಷಣಿಕ ಮತ್ತು ವೈದ್ಯಕೀಯ ಮೂಲಸೌಕರ್ಯ, ಅಂತರರಾಷ್ಟ್ರೀಯ ಸಹಯೋಗಗಳು ಮತ್ತು ವಸತಿ ಕ್ಯಾಂಪಸ್‌ನಿಂದ ಬೆಂಬಲಿತವಾಗಿದೆ. ಇದು ಪ್ರಾಣಿ ಕಲ್ಯಾಣ ಮತ್ತು ಮುಂದುವರಿದ ಸಂರಕ್ಷಣಾ ಅಭ್ಯಾಸವನ್ನು ಬಲಪಡಿಸಲು ಕ್ರಿಯಾ-ಆಧಾರಿತ ಸಂಶೋಧನೆಯ ಮೇಲೆ ಕೇಂದ್ರೀಕರಿಸುತ್ತದೆ. ಶೈಕ್ಷಣಿಕ ಮಾದರಿಯು ಸಿತು ಮತ್ತು ಎಕ್ಸ್ ಸಿತು ಸಂರಕ್ಷಣೆಯಲ್ಲಿ ಸಂಯೋಜಿಸುತ್ತದೆ, ನೈಸರ್ಗಿಕ ಆವಾಸಸ್ಥಾನಗಳನ್ನು ವೈಜ್ಞಾನಿಕ ಆರೈಕೆ ಮತ್ತು ದೀರ್ಘಕಾಲೀನ ವನ್ಯಜೀವಿ ಕಲ್ಯಾಣ ಮತ್ತು ನಿರ್ವಹಣೆಯೊಂದಿಗೆ ಸಂಪರ್ಕಿಸುತ್ತದೆ.
ವನತಾರಾ ವನ್ಯಜೀವಿ ವಿವಿಗೆ ಚಾಲನೆ
ಸಂರಕ್ಷಣೆಯ ಭವಿಷ್ಯವು ತರಗತಿ ಕೊಠಡಿಗಳು, ಪ್ರಯೋಗಾಲಯಗಳು ಮತ್ತು ಮಾನವ ಆತ್ಮಸಾಕ್ಷಿಯಲ್ಲಿ ಹಾಗೂ ಕಾಡುಗಳಲ್ಲಿ ನಿರ್ಮಿಸಲ್ಪಡುತ್ತದೆ ಎಂದು ಗುರುತಿಸಿ, ವಿಶ್ವವಿದ್ಯಾನಿಲಯವು ವನ್ಯಜೀವಿ ಪಶುವೈದ್ಯಕೀಯ ವಿಜ್ಞಾನ ಮತ್ತು ಸಂರಕ್ಷಣಾ ಶಿಕ್ಷಣವನ್ನು ಮುನ್ನಡೆಸುವ ಗುರಿಯನ್ನು ಹೊಂದಿದೆ. ಇದು ಏಕಕಾಲದಲ್ಲಿ ವನ್ಯಜೀವಿ ಆರೋಗ್ಯ, ಪ್ರಾಣಿಗಳ ಆರೈಕೆ ಪರಿಸರ ವಿನ್ಯಾಸ ಮತ್ತು ಸಂರಕ್ಷಣೆಯಲ್ಲಿ ಜ್ಞಾನ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸುತ್ತದೆ, ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆಗಾಗಿ ದೀರ್ಘಕಾಲೀನ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.
ಅಡಿಪಾಯ ಸಮಾರಂಭವು ಸಹಾನುಭೂತಿಯ ಸಂರಕ್ಷಣಾ ಶಿಕ್ಷಣವನ್ನು ಮುನ್ನಡೆಸಲು ವಿಶಾಲವಾದ ರಾಷ್ಟ್ರೀಯ ಪ್ರಯತ್ನದ ಆರಂಭವನ್ನು ಗುರುತಿಸಿತು. ಇದರಲ್ಲಿ ‘ವನ್ತಾರಾ ಯೂನಿವರ್ಸಿಟಿ ಫೌಂಡಿಂಗ್ ಫೆಲೋಸ್’ ಮತ್ತು ‘ಎವ್ರಿ ಲೈಫ್ ಮ್ಯಾಟರ್ಸ್’ ಸ್ಕಾಲರ್ಶಿಪ್ಗಳನ್ನು ಘೋಷಿಸಲಾಗಿದೆ. ಜೊತೆಗೆ ಜ್ಞಾನವನ್ನು ಪ್ರಗತಿಗೆ ಮಾತ್ರವಲ್ಲದೆ ರಕ್ಷಣೆಗಾಗಿಯೂ ಬಳಸುವ ಕರೆಯನ್ನು ಇದರಲ್ಲಿ ಒಳಗೊಂಡಿದೆ.
ಅನಂತ್ ಅಂಬಾನಿ
ಅದರ ಘೋಷಿತ ದೃಷ್ಟಿಕೋನದಲ್ಲಿ, ವನತಾರಾ ವಿಶ್ವವಿದ್ಯಾಲಯವು ಕೇವಲ ಶೈಕ್ಷಣಿಕ ವೇದಿಕೆ ಮಾತ್ರವೇ ಅಲ್ಲ, ಅದಕ್ಕೂ ಮಿಗಿಲಾದುದಾಗಿದೆ. ಇದು ವನ್ಯಜೀವಿಗಳಿಗೆ ಮೆಚ್ಚುಗೆ ಮಾತ್ರವಲ್ಲ, ವ್ಯವಸ್ಥೆ, ಜ್ಞಾನ, ನುರಿತ ಕೈಗಳು ಸಹ ಬೇಕಾಗುತ್ತವೆ ಎಂಬ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ.
ವನತಾರಾ ಬಗ್ಗೆ
ವನತಾರಾ ಗುಜರಾತಿನ ಜಾಮ್‌ನಗರದಲ್ಲಿ ವನ್ಯಜೀವಿ ರಕ್ಷಣೆ, ಪುನರ್ವಸತಿ, ಆರೋಗ್ಯ ರಕ್ಷಣೆ ಮತ್ತು ಸಂರಕ್ಷಣಾ ಕಾರ್ಯಗಳನ್ನು ಮಾಡುತ್ತಿದೆ. ಭಾರತದಲ್ಲಿ. ಅಡ್ವಾನ್ಸ್ಟ್ ವೆಟರಿನರಿ ಮೆಡಿಸಿನ್, ಆರೈಕೆ, ಅಪ್ಲೈಡ್ ಸೈನ್ಸ್ ಮತ್ತು ಸಂರಕ್ಷಣಾ ಯೋಜನೆಯನ್ನು ಪ್ರಮಾಣದಲ್ಲಿ ಸಂಯೋಜಿಸುವ ಮೂಲಕ, ವನತಾರಾವು ಎಲ್ಲಾ ಜಾತಿಯ ಪ್ರಾಣಿಗಳಿಗೆ ವಿಶೇಷ ಚಿಕಿತ್ಸೆ, ಚೇತರಿಕೆ ಮತ್ತು ದೀರ್ಘಕಾಲೀನ ಬೆಂಬಲವನ್ನು ನೀಡುತ್ತದೆ. ಸಂರಕ್ಷಣಾ ಸಂತಾನೋತ್ಪತ್ತಿ, ಜಾತಿಗಳ ಚೇತರಿಕೆ ಮತ್ತು ಭವಿಷ್ಯದ ಮರು-ಕಾಡು ಮಾರ್ಗಗಳಲ್ಲಿ ಹೆಚ್ಚುತ್ತಿರುವ ಪಾತ್ರದೊಂದಿಗೆ, ವಂಟಾರಾ ವನ್ಯಜೀವಿ ಆರೋಗ್ಯ ರಕ್ಷಣೆ, ಕನ್ಸರ್ವೇಶನ್ ಸೈನ್ಸ್ನಲ್ಲಿ ಶ್ರೇಷ್ಠತೆಯ ಅಂತರರಾಷ್ಟ್ರೀಯ ಕೇಂದ್ರವಾಗಿ ಹೊರಹೊಮ್ಮುತ್ತಿದೆ.